BEST TEACHERS AWARD-2019. ಉತ್ತಮ ಶಿಕ್ಷಕ ಪ್ರಶಸ್ತಿ-2019

.

.

ಪ್ರಸಕ್ತ ಸಾಲಿನ ರಾಜ್ಯ ಮಟ್ಟದ ‘ಉತ್ತಮ ಶಿಕ್ಷಕ’ ಪ್ರಶಸ್ತಿಗೆ 20 ಪ್ರಾಥಮಿಕ ಹಾಗೂ 11 ಪ್ರೌಢಶಾಲಾ ಶಿಕ್ಷಕರು ಸೇರಿದಂತೆ ಒಟ್ಟು 31 ಶಿಕ್ಷಕರು ಭಾಜನರಾಗಿದ್ದಾರೆ.

ಪ್ರಶಸ್ತಿಗೆ ಆಯ್ಕೆಯಾಗಿರುವ ಶಿಕ್ಷಕಿಯರಿಗೆ ‘ಮಾತೆ ಸಾವಿತ್ರಿ ಪುಲೆ’ ಅವರ ಹೆಸರಿನಲ್ಲಿ ಪ್ರಶಸ್ತಿ ನೀಡಲಾಗುತ್ತದೆ. ಸೆ.5ರಂದು ಅಂಬೇಡ್ಕರ್‌ ಭವನದಲ್ಲಿ ಹಮ್ಮಿಕೊಂಡಿರುವ ಶಿಕ್ಷಕರ ದಿನಾಚರಣೆ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ಮಾಡಿ ಗೌರವಿಸಲಾಗುತ್ತದೆ.

ಪ್ರಶಸ್ತಿ ಪುರಸ್ಕೃತರ ಪಟ್ಟಿ:

ಪ್ರಾಥಮಿಕ ಶಾಲಾ ವಿಭಾಗ:

ಆಶಾ ಹೆಗಡೆ ಮೇಳಕುಂದ, ಕಲಬುರಗಿ

ನಾಗಣ್ಣ ಹೆಬ್ಬಾಳು (ಕುಂಬಾರಕೊಪ್ಪಲು), ಮೈಸೂರು

ಸಾವಿತ್ರಮ್ಮ ಸಂಜೀವಿನಿ ನಗರ, ಬೆಂಗಳೂರು ಉತ್ತರ

ಸಂಶಿಯಾ ಹೂಡ್ಲಮನೆ, ಸಿದ್ದಾಪುರ ತಾಲೂಕು, ಶಿರಸಿ

ಡಿ.ಪದ್ಮ ಆಲೆಟ್ಟಿ, ಸುಳೈ ತಾಲೂಕು, ದ.ಕ

ಸೋಮಲಿಂಗಪ್ಪ ಮಹಾದೇವಪ್ಪ ಬೆಳಕವಾಡಿ, ಬೈಲಹೊಂಗಲ ತಾಲೂಕು, ಬೆಳಗಾವಿ

ಲಿಂಗರಾಜು ಬಿ.ಗೌಡಗೆರೆ, ಮಂಡ್ಯ

ಎಲ್‌.ಎನ್‌.ಉಮಾದೇವಿ ತಿಂಡ್ಲು, ಆನೇಕಲ್‌ ತಾಲೂಕು, ಬೆಂಗಳೂರು ದಕ್ಷಿಣ

ಎಸ್‌.ರತ್ನಕುಮಾರಿ ಸಮಟಗಾರು, ಹೊಸನಗರ ತಾಲೂಕು, ಶಿವಮೊಗ್ಗ

ನಿರ್ಮಲ ರಾಮಚಂದ್ರ ಪತ್ತಾರ ಶಿರಗುಪ್ಪಿ, ಬಾಗಲಕೋಟ

ಬಿ.ಉಷಾ ಬಿ.ಕ್ಯಾಂಪ್‌ ನಂ.2, ದಾವಣಗೆರೆ

ಕೆ.ಎಚ್‌.ಗೀತಾ ಯಲಗುಡಿಗೆ, ಚಿಕ್ಕಮಗಳೂರು

ನಾರಾಯಣ ಸಿದ್ದಯ್ಯನಪುರ, ಚಾಮರಾಜನಗರ

ಉಮೇಶ ಬಜಗೋಳಿ, ಕಾರ್ಕಳ ತಾಲೂಕು, ಉಡುಪಿ

ಮಲ್ಲೇಶಪ್ಪ ಅಡ್ಡೇದಾರ ವಡ್ಡರಹಟ್ಟಿ ಕ್ಯಾಂಪ್‌, ಗಂಗಾವತಿ ತಾಲೂಕು, ಕೊಪ್ಪಳ

ಜಯಸಿಂಗ್‌ಠಾಕೂರ್‌ ಎಕಲಾರ, ಔರಾದ್‌ ತಾಲೂಕು, ಬೀದರ್‌

ಕೆ.ರಮೇಶ್‌ ಚಿಲ್ಲಪ್ಪನಹಳ್ಳಿ, ಕೋಲಾರ

ಭೀಮಯ್ಯ ಎಂ.ಟಿ.ಪಲ್ಲಿ, ಯಾದಗಿರಿ

ರಾಜನಗೌಡ ಪತ್ತಾರ ಕೆಸರಟ್ಟಿ, ಲಿಂಗಸೂಗೂರು ತಾಲೂಕು, ರಾಯಚೂರು

ಮಲ್ಲಿಕಾರ್ಜುನ ಶಿವಲಿಂಗಪ್ಪ ಭೂಸಗೊಂಡ ಕನ್ನಡ ಮಾದರಿ ಪ್ರಾಥಮಿಕ ಶಾಲೆ, ತಿಕೋಟ, ವಿಜಯಪುರ

ಪ್ರಶಸ್ತಿ ಪುರಸ್ಕೃತರ ಪಟ್ಟಿ:

ಪ್ರೌಢಶಾಲಾ ವಿಭಾಗ

ದಾನಮ್ಮ ಚ.ಝಳಕಿ ವಂಟಮೂರಿ ಕಾಲೋನಿ, ಬೆಳಗಾವಿ

ಎನ್‌.ಕೃಷ್ಣಮೂರ್ತಿ ಕ್ಯಾಲಕೊಂಡ, ಶಿಗ್ಗಾಂವಿ ತಾಲೂಕು, ಹಾವೇರಿ

ಆರ್‌.ನಾರಾಯಣಸ್ವಾಮಿ ಬಾಶೆಟ್ಟಿಹಳ್ಳಿ, ದೊಡ್ಡಬಳ್ಳಾಪುರ ತಾಲೂಕು, ಬೆಂಗಳೂರು ಗ್ರಾಮಾಂತರ

ಶರಣಪ್ಪ ಕರಿಶೆಟ್ಟಿ ಕೊಳಬಾಳ, ಮಸ್ಕಿ ತಾಲೂಕು, ರಾಯಚೂರು

ಎಚ್‌.ಆರ್‌.ರೇಣುಕಯ್ಯ ಗೂಳೇ ಹರವಿ, ತುಮಕೂರು

ಶೇಕ್‌ ಆದಂ ಸಾಹೇಬ್‌ ಪಪೂಕಾ(ಪ್ರೌಢಶಾಲಾ ವಿಭಾಗ), ಕಾವಳ ಪಡೂರು, ವಗ್ಗ, ಬಂಟ್ವಾಳ ತಾಲೂಕು, ದಕ್ಷಿಣ ಕನ್ನಡ

ಹುನುಮಪ್ಪ ಗೋವಿಂದಪ್ಪ ಹುದ್ದಾರ ಕಟಗೇರಿ ವಿದ್ಯಾವರ್ಧಕ ಸಂಘದ ಶಾಲೆ, ಕಟಗೇರಿ, ಬಾದಾಮಿ ತಾಲೂಕು, ಬಾಗಲಕೋಟ

ಬಿ.ಆರ್‌.ರಾಜಶೇಖರ ಶ್ರೀ ಸಿದ್ದಗಂಗಾ ಪ್ರೌಢಶಾಲೆ, ಜಂಗಮಮಠ, ಶಿವನಗರ, ಬೆಂಗಳೂರು ಉತ್ತರ

ಮಂಜಪ್ಪ ವಿ.ಅಡಿವೇರ ಸರಕಾರಿ ಉರ್ದು ಪ್ರೌಢಶಾಲೆ, ಸದಾಶಿವನಗರ, ಹಳೇ ಹುಬ್ಬಳ್ಳಿ, ಧಾರವಾಡ

ಕವಿತಾ ದಿಗ್ಗಾವಿ ಎಂ.ಎನ್‌.ಎಂ ಬಾಲಕಿಯರ ಪಪೂಕಾ(ಪ್ರೌಢಶಾಲಾ ವಿಭಾಗ), ಗಂಗಾವತಿ, ಕೊಪ್ಪಳ

ಚನ್ನೇಗೌಡ ಶ್ರೀ ಗಂಗಾಧರೇಶ್ವರ ಬಾಲಕಿಯರ ಪ್ರೌಢಶಾಲೆ, ಮಾಗಡಿ, ರಾಮನಗರ

ರಾಜ್ಯಮಟ್ಟದಲ್ಲಿ ವಿಶೇಷ ಸಾಧನೆ ಮಾಡಿದವರಿಗೆ ಕೊಡಲಾಗುವ ಈ ಪ್ರಶಸ್ತಿ ಸಾಹಿತ್ಯ, ಪರಿಸರ, ಕಲೆ ಹೀಗೆ ವಿವಿಧ ಕ್ಷೇತ್ರದಲ್ಲಿ ತೊಡಗಿಸಿಕೊಂಡಿದ್ದಕ್ಕೆ ಲಭಿಸಿದೆ. ಈ ಸಾಧನೆ ಮಾಡುವುದಕ್ಕೆ ಮಕ್ಕಳೇ ಪ್ರೇರಣೆ. ಹಾಗಾಗಿ ಈ ಪ್ರಶಸ್ತಿ ಆ ಮಕ್ಕಳಿಗೆ ಸಲ್ಲಬೇಕು.

| ಲಿಂಗರಾಜ ರಾಮಾಪುರ, ಹುಬ್ಬಳ್ಳಿ, ವಿಶೇಷ ರಾಜ್ಯ ಶಿಕ್ಷಕ ಪ್ರಶಸ್ತಿ ವಿಜೇತರು

ಭಾಷೆ ಗೊತ್ತಿಲ್ಲದ ಕುಗ್ರಾಮದಲ್ಲಿ ಮಕ್ಕಳಿಗೆ ಅಕ್ಷರ ಕಲಿಸಿದ್ದನ್ನು ಸರ್ಕಾರ ಗುರುತಿಸಿ ಪ್ರೋತ್ಸಾಹಿಸಿದ್ದಕ್ಕೆ ಸಾರ್ಥಕ ಭಾವ ಮೂಡಿದೆ. ಆತ್ಮತೃಪ್ತಿಗೆ ಕೆಲಸ ಮಾಡಿದಾಗ ಲೋಕ ಗುರುತಿಸುತ್ತದೆ ಎನ್ನಲು ನನ್ನನ್ನು ರಾಜ್ಯಮಟ್ಟದ ಪ್ರಶಸ್ತಿಗೆ ಆಯ್ಕೆ ಮಾಡಿರುವುದೇ ಸಾಕ್ಷಿ.

| ಆಶಾ ಹೆಗಡೆ, ಸಹಿಪ್ರಾ ಶಾಲೆ, ಮೇಳಕುಂದ, ಕಲಬುರಗಿ

ಶೈಕ್ಷಣಿಕ ಅಭ್ಯುದಯ ಹಾಗೂ ಪರಿಸರ ಪ್ರೇಮ ಜತೆಗೆ ಆರೋಗ್ಯಕರ ಹವ್ಯಾಸಗಳು ನನ್ನನ್ನು ಈ ಹಂತಕ್ಕೆ ಬೆಳೆಸಿದ್ದು, ಗೌರವಯುತವಾಗಿ ಬಾಳಲು ಪ್ರೇರೇಪಿಸಿದೆ. ಪ್ರಶಸ್ತಿ ನನ್ನನ್ನು ಇನ್ನಷ್ಟು ಕ್ರಿಯಾಶೀಲಗೊಳಿಸಲು ಕಾರಣವಾಗಿದೆ, ರಾಜ್ಯಮಟ್ಟದ ಗೌರವ ಖುಷಿ ತಂದಿದೆ.

| ರಾಜನಗೌಡ ಪತ್ತಾರ, ಮುಖ್ಯಶಿಕ್ಷಕ, ಕೆಸರಟ್ಟಿ, ಲಿಂಗಸುಗೂರು

.

.

ಗುರು ಭಕ್ತಿ’ಗೀತೆಗಳು
ಶಿಕ್ಷಕರ ದಿನದ ವಿಶೇಷ

ಗುರುವನ್ನು ದೇವರಂತೆ ಕಾಣು ಎಂದರು ಹಿರಿಯರು. ಹಾಗಾಗಿಯೇ ಹಳೆ ತಲೆಮಾರಿನ ಗೀತೆಗಳು, ಪದ್ಯಗಳು ಭಕ್ತಿಗೀತೆಗಳಂತೆ ತೋರುತ್ತಿದ್ದವು. ಗುರುವಿನ ಕುರಿತಾದ ಕೆಲ ಸಿನಿಮಾಗೀತೆಗಳಂತೂ ಪ್ರತಿದಿನ ಬೆಳಿಗ್ಗೆ ಶಾಲೆಗಳಲ್ಲಿ ಹಾಡಿಸುವಷ್ಟರ ಮಟ್ಟಿಗೆ ಜನಪ್ರಿಯತೆ ಗಳಿಸಿದ್ದವು. ಹೊಸ ತಲೆಮಾರಿಗೆ ಸೇರಿದ, ಚಾಕಲೇಟ್‌ ಕೊಡಿಸುವ, ಆಟ ಆಡಿಸುವ, ಕಡಿಮೆ ಅಂಕ ಬಂದರೆ ಗದರದ ಮಿಸ್‌ ಕೂಡಾ ಗುರುಗಳ ಪ್ರತಿರೂಪವೇ. ಅವರೆಲ್ಲರ ಕುರಿತಾದ ಈ ಪದ್ಯ ಗೀತೆಗಳಿಗೆ ಶಿಕ್ಷಕರೇ ಚಿತ್ರ ಬರೆದಿರುವುದು ಮತ್ತೂಂದು ವಿಶೇಷ!

1. ಭಾಳ ಒಳ್ಳೇವ್ರು ನಮ್‌ ಮಿಸ್ಸು

ಭಾಳ ಒಳ್ಳೇವ್ರು ನಮ್‌ ಮಿಸ್ಸು
ಏನ್‌ ಹೇಳಿದ್ರೂ ಎಸ್ಸೆಸ್ಸು,
ನಗ್ತಾ ನಗ್ತಾ ಮಾತಾಡ್ತಾರೆ
ಸ್ಕೂಲಿಗೆಲ್ಲಾ ಫೇಮಸ್ಸು

ಜಾಣಮರಿ ಅಂತಾರೆ
ಚಾಕ್ಲೇಟಿದ್ರೆ ಕೊಡ್ತಾರೆ,
ಬೆನ್ನು ತಟ್ಟಿ ಕೆನ್ನೆ ಸವರಿ
ಬೆಣ್ಣೆ ಕಂದ ಅಂತಾರೆ !
ಆಟಕ್‌ ಬಾ ಅಂತಾರೆ
ಆಟದ್‌ ಸಾಮಾನ್‌ ಕೊಡ್ತಾರೆ,
ಗೊತ್ತಿಲ್ದಂಗೆ ಆಟದ್‌ ಜೊತೆ
ಪಾಠಾನೂ ಕಲಿಸ್ತಾರೆ!
ನಮೊjತೇನೇ ಆಡ್ತಾರೆ
ಕೈ ಕೈ ಹಿಡಿದು ಹಾಡ್ತಾರೆ,
ಕೋತಿ ಕರಡಿ ಕಥೆ ಹೇಳಿ
ಸಿಕ್ಕಾ ಪಟ್ಟೆ ನಗಿಸ್ತಾರೆ.

ನಮ್‌ ಸ್ಕೂಲಂಥ ಸ್ಕೂಲಿಲ್ಲ
ನಮ್‌ ಮಿಸ್ಸಂಥ ಮಿಸ್ಸಿಲ್ಲ.
ಅಮ್ಮನ್‌ ಹಾಗೇ ಅ ಅವ್ರುನೂ
ಬಿಟ್‌ ಬರಕ್ಕೇ ಮನಸ್ಸಿಲ್ಲ
– ಎನ್‌.ಎಸ್‌. ಲಕ್ಷ್ಮೀನಾರಾಯಣ ಭಟ್ಟ

2. ಸ್ವಾಮಿ ದೇವನೆ

ಸ್ವಾಮಿ ದೇವನೆ ಲೋಕಪಾಲನೆ ತೇ ನಮೋಸ್ತು ನಮೋಸ್ತುತೇ !
ಪ್ರಮೇದಿಂದಲೇ ನೋಡು ನಮ್ಮನು ತೇ ನಮೋಸ್ತು ನಮೋಸ್ತುತೇ!!
ಸ್ವಾಮಿ ದೇವನೆ
ದೇವ ದೇವನೆ ಹಸ್ತ ಪಾದಗಳಿಂದಲೂ ಮನದಿಂದಲೂ
ನಾವು ಮಾಡಿದ ಪಾಪವೆಲ್ಲವ ಹೋಗಲಾಡಿಸು ಬೇಗನೆ!!
ಸ್ವಾಮಿ ದೇವನೆ
ವಿಜಯ ವಿದ್ಯಾರಣ್ಯ ಕಟ್ಟಿದ ಚಾಮುಂಡಾಂಬೆಯ ನಾಡಿನ
ಮನೆಯ ಮಕ್ಕಳ ಐಕ್ಯಗಾನವ ಲಾಲಿಸಿ ಪರಿಪಾಲಿಸೈ
ಸ್ವಾಮಿ ದೇವನೆ
– ಸೋಸಲೆ ಅಯ್ನಾ ಶಾಸ್ತ್ರಿಗಳು

3. ತಾಯೆ ಶಾರದೆ
ತಾಯೆ ಶಾರದೆ ಲೋಕ ಪೂಜಿತೆ ಜ್ಞಾನ ದಾತೆ ನಮೋಸ್ತುತೇ.
ಪ್ರೇಮದಿಂದಲಿ ಸಲುಹು ಮಾತೇ ನೀಡು ಸನ್ಮತಿ ಸೌಖ್ಯ ದಾತೆ
ತಾಯೆ ಶಾರದೆ
ಅಂಧಕಾರವ ಓಡಿಸೂ, ಜ್ಞಾನ ಜ್ಯೋತಿಯ ಬೆಳಗಿಸು
ಹೃದಯ ಮಂದಿರದಲ್ಲಿ ನೆಲೆಸು ಚಿಂತೆಯಾ ಅಳಿಸು, ಶಾಂತಿಯ ಉಳಿಸು
ತಾಯೆ ಶಾರದೆ
ನಿನ್ನ ಮಡಿಲಿನ ಮಕ್ಕಳಮ್ಮ, ನಿನ್ನ ನಂಬಿದ ಕಂದರಮ್ಮ
ನಿನ್ನ ಕರುಣೆಯ ಬೆಳಗಲಮ್ಮ ಬಾಳನೂ ಬೆಳಗಮ್ಮಾ ನಮ್ಮ ಕೋರಿಕೆ ಆಲಿಸಮ್ಮಾ,
ತಾಯ ಶಾರದೆ
ಒಳ್ಳೆ ಮಾತುಗಳಾಡಿಸು, ಒಳ್ಳೆ ಕೆಲಸವ ಮಾಡಸು
ಒಳ್ಳೆಯ ದಾರಿಯ ನಮ್ಮ ನಡೆಸು, ವಿದ್ಯೆಯಾ ಕಲಿಸು ಆಸೆ ಪೂರೈಸು
ತಾಯಿ ಶಾರದೆ
-ಚಿ. ಉದಯಶಂಕರ್‌

4. ನಿನ್ನೊಲುಮೆ ನನಗಿರಲಿ ತಂದೆ..

ನಿನ್ನೊಲುಮೆ ನಮಗಿರಲಿ ತಂದೆ
ಕೈ ಹಿಡಿದು ನೀ ನಡೆಸು ಮುಂದೆ

ತಾನುರಿದು ಜಗಕೆಲ್ಲ ಜೂತಿಯನು ನೀಡುವ
ದೀಪದೊಳು ನೀ ಎನ್ನ ಅನಗೊಳಿಸು ತಂದೆ
ಕಾನನದ ಸುಮವೊಂದು ಸೌರಭ ತಾ ಸೂಸಿ
ಸಫ‌ಲತೆಯ ಪಡೆವಂತೆ ಮಾಡೆನ್ನ ತಂದೆ.
ಸರಿಯು ಸಂಪದ ಬೇಡ, ಯಾವ ವೈಭವ ಬೇಡ
ನಿನ್ನ ಕರುಣೆಯು ಒಂದೆ ಸಾಕೆನಗೆ ತಂದೆ

ನಿನ್ನ ಈ ಮಕ್ಕಳನು ಪ್ರೇಮದಲಿ ನೀ ನೋಡು
ಈ ಮನೆಯು ಎಂದೆಂದೂ ನಗುವಂತೆ ನೀ ಮಾಡು
ನಂಬಿದರೆ ಭಯವಿಲ್ಲ, ನಂಬದಿರೆ ಬಾಳಿಲ್ಲ ಅಂಬಿನೆ ನೀ ನಡೆಸು ಈ ಬಾಳ ನೌಕೆ
ಯಾವ ನೋವೇ ಬರಲಿ ಎದೆ ಗುಂದದಿರಲಿ, ಸತ್ಯ ಮಾರ್ಗವೆ ನಡೆವ ಶಕ್ತಿ ಕೊಡು ತಂದೆ
– ಆರ್‌.ಎನ್‌. ಜಯಗೋಪಾಲ್‌

ದ್ವಿತೀಯ ಪಿಯುಸಿ 2019 ರ ಫಲಿತಾಂಶ

*ಬ್ರೇಕಿಂಗ್ : ಪಿಯುಸಿ ಫಲಿತಾಂಶ ಪ್ರಕಟ, ಉಡುಪಿ ಫಸ್ಟ್, ಚಿತ್ರದುರ್ಗ ಲಾಸ್ಟ್, ಬಾಲಕಿಯರೇ ಬೆಸ್ಟ್..!

Monday, 15 Apr,2019.

ಬೆಂಗಳೂರು, ಏ.15-ಮಾರ್ಚ್ ತಿಂಗಳಲ್ಲಿ ನಡೆದ ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟಗೊಂಡಿದ್ದು, 61.73ರಷ್ಟು ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದು, ಎಂದಿನಂತೆ ಈ ವರ್ಷವೂ ಬಾಲಕಿಯರು ಮತ್ತು ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳು ಮೇಲುಗೈ ಸಾಧಿಸಿದ್ದಾರೆ.
ಜಿಲ್ಲಾವಾರು ಫಲಿತಾಂಶದಲ್ಲಿ ಉಡುಪಿ ಮೊದಲ ಸ್ಥಾನದಲ್ಲಿದ್ದರೆ, ಚಿತ್ರದುರ್ಗ ಕೊನೆ ಸ್ಥಾನದಲ್ಲಿದೆ. 2019ರ ಮಾರ್ಚ್ 1 ರಿಂದ 18ರವರೆಗೆ 1013 ಪರೀಕ್ಷಾ ಕೇಂದ್ರಗಳಲ್ಲಿ ದ್ವಿತೀಯ ಪಿಯುಸಿ ಪರೀಕ್ಷೆಗಳು ನಡೆದಿತ್ತು.

ಮಾ.25 ರಿಂದ ಏ.7ರವರೆಗೆ 54 ಮೌಲ್ಯ ಮಾಪನ ಕೇಂದ್ರಗಳಲ್ಲಿ 22,746 ಮೌಲ್ಯಮಾಪಕರು ಮೌಲ್ಯಮಾಪನ ನಡೆಸಿದ್ದರು. ಈ ಬಾರಿಯ ಪರೀಕ್ಷೆಗೆ 6,71,653 ವಿದ್ಯಾರ್ಥಿಗಳು ಹಾಜರಾಗಿದ್ದರು.
ಅವರಲ್ಲಿ 4,14,587 ವಿದ್ಯಾರ್ಥಿಗಳು ತೇರ್ಗಡೆ ಹೊಂದಿದ್ದಾರೆ. ಹೊಸಬರ ಪೈಕಿ 5,58,399 ವಿದ್ಯಾರ್ಥಿಗಳು ಹಾಜರಾಗಿ, 3,83,521 ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದು, ಶೇ.68.68ರಷ್ಟು ಫಲಿತಾಂಶ ಬಂದಿದೆ.

ಪುನರಾವರ್ತಿತ ವಿದ್ಯಾರ್ಥಿಗಳ ಪೈಕಿ 85,585 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು, 23,425 ವಿದ್ಯಾರ್ಥಿಗಳು ತೇರ್ಗಡೆ ಹೊಂದಿ ಶೇ.27.37 ರಷ್ಟು ಫಲಿತಾಂಶ ಬಂದಿದೆ.
ಖಾಸಗಿ ವಿದ್ಯಾರ್ಥಿಗಳ ಪೈಕಿ 27,669 ವಿದ್ಯಾರ್ಥಿಗಳು ಹಾಜರಾಗಿದ್ದು, 7,641 ವಿದ್ಯಾರ್ಥಿಗಳು ತೇರ್ಗಡೆಯಾಗಿ ಶೇ.27.62ರಷ್ಟು ಫಲಿತಾಂಶ ಬಂದಿದೆ. ಕಲಾ ವಿಭಾಗದಲ್ಲಿ 2,00,022 ವಿದ್ಯಾರ್ಥಿಗಳು ಹಾಜರಾಗಿದ್ದು, 1,01073 ವಿದ್ಯಾರ್ಥಿಗಳು ತೇರ್ಗಡೆಯಾಗಿ ಶೇ.50.53ರಷ್ಟು ಫಲಿತಾಂಶ ಬಂದಿದೆ.
ವಾಣಿಜ್ಯ ವಿಭಾಗದಲ್ಲಿ 2,53,865 ವಿದ್ಯಾರ್ಥಿಗಳು ಹಾಜರಾಗಿದ್ದು, 1,68,531 ವಿದ್ಯಾರ್ಥಿಗಳು ತೇರ್ಗಡೆಯಾಗಿ, ಶೇ.66.39ರಷ್ಟು ಫಳಿತಾಂಶ ಬಂದಿದೆ.
ವಿಜ್ಞಾನ ವಿಭಾಗದಲ್ಲಿ 2,17,766 ವಿದ್ಯಾರ್ಥಿಗಳು ಹಾಜರಾಗಿ 1,14,983 ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದು, ಶೇ.66.58ರಷ್ಟು ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ.

ಪ್ರತಿ ವರ್ಷದಂತೆ ಈ ಬಾರಿಯೂ ಬಾಲಕಿಯರೇ ಮೇಲುಗೈ ಸಾಧಿಸಿದ್ದು, ಪರೀಕ್ಷೆಗೆ ಹಾಜರಾದ 3,33,983 ವಿದ್ಯಾರ್ಥಿನಿಯರ ಪೈಕಿ 2,27,897 ವಿದ್ಯಾರ್ಥಿನಿಯರು ತೇರ್ಗಡೆಯಾಗಿ ಶೇ.68.24ರಷ್ಟು ಫಲಿತಾಂಶ ಗಳಿಸಿದ್ದಾರೆ.
ಬಾಲಕರು 3,37,668 ವಿದ್ಯಾರ್ಥಿಗಳು ಹಾಜರಾಗಿ, 1,86,691 ಮಂದಿ ಪಾಸಾಗಿದ್ದು, ಶೇ.55.29ರಷ್ಟು ಫಲಿತಾಂಶ ಬಂದಿದೆ. ನಗರ ಪ್ರದೇಶದಲ್ಲಿ 5,22,391 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿ 3,20,657 ವಿದ್ಯಾರ್ಥಿಗಳು ತೇರ್ಗಡೆಯಾಗಿ, ಶೇ.61.38ರಷ್ಟು ಮಂದಿ ಪಾಸಾಗಿದ್ದಾರೆ.
ಗ್ರಾಮೀಣ ಭಾಗದಲ್ಲಿ 1,49,262 ವಿದ್ಯಾರ್ಥಿಗಳು ಹಾಜರಾಗಿ 93,860 ವಿದ್ಯಾರ್ಥಿಗಳು ಪಾಸಾಗಿದ್ದು, ಶೇ.62.88ರಷ್ಟು ಮಂದಿ ತೇರ್ಗಡೆಯಾಗಿದ್ದಾರೆ. ನಗರ ಪ್ರದೇಶಕ್ಕಿಂತಲೂ ಗ್ರಾಮೀಣ ಪ್ರದೇಶ ವಿದ್ಯಾರ್ಥಿಗಳ ಉತ್ತೀರ್ಣದ ಪ್ರಮಾಣ ಶೇ.1.5ರಷ್ಟು ಹೆಚ್ಚಿದೆ.
ಸರ್ಕಾರಿ ಕಾಲೇಜಿನ ವಿದ್ಯಾರ್ಥಿಗಳು ಶೇ.60.80ರಷ್ಟು, ಅನುದಾನಿತ ಕಾಲೇಜಿನಲ್ಲಿ ಶೇ.65.37ರಷ್ಟು, ಅನುದಾನ ರಹಿತ ಕಾಲೇಜಿನಲ್ಲಿ ಶೇ.73.64ರಷ್ಟು, ವಿಭಜಿತ ಕಾಲೇಜಿನಲ್ಲಿ ಶೇ.72.46ರಷ್ಟು , ಕಾರ್ಪೊರೇಷನ್ ಕಾಲೇಜಿನಲ್ಲಿ ಶೇ.62.60ರಷ್ಟು ಫಲಿತಾಂಶ ಬಂದಿದೆ.

ಇನ್ನು ಜಾತಿವಾರು ಕೂಡ ಫಲಿತಾಂಶ ವರ್ಗೀಕರಣ ಮಾಡಲಾಗಿದ್ದು, ಪರಿಶಿಷ್ಟ ಜಾತಿಯ ವಿದ್ಯಾರ್ಥಿಗಳು ಶೇ.51.97ರಷ್ಟು , ಪರಿಶಿಷ್ಟ ಪಂಗಡದ ಶೇ.53.34ರಷ್ಟು, ಪ್ರವರ್ಗದಲ್ಲಿ ಶೇ.60.09ರಷ್ಟು , ಪ್ರವರ್ಗ 2ಎ ನಲ್ಲಿ ಶೇ.65.99ರಷ್ಟು, ಪ್ರವರ್ಗ 2ಬಿನಲ್ಲಿ ಶೇ.57.07ರಷ್ಟು , ಪ್ರವರ್ಗ 3ಎ ನಲ್ಲಿ ಶೇ.68.86ರಷ್ಟು , ಪ್ರವರ್ಗ 3 ಬಿ ನಲ್ಲಿ ಶೇ.65.03ರಷ್ಟು , ಸಾಮಾನ್ಯ ವರ್ಗದಲ್ಲಿ ಶೇ.68.01ರಷ್ಟು ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ.
ಕನ್ನಡ ಮಾಧ್ಯಮದಲ್ಲಿ ಶೇ.55.08ರಷ್ಟು, ಇಂಗ್ಲೀಷ್ ಮಾಧ್ಯಮದಲ್ಲಿ ಓದಿದವರು ಶೇ.66.90ರಷ್ಟು ಮಂದಿ ಪಾಸಾಗಿದ್ದಾರೆ. ಶೇ.85ಕ್ಕಿಂತಲೂ ಹೆಚ್ಚಿನ ಅಂಕ ಪಡೆದು 54,823 ಮಂದಿ ಡಿಸ್ಟಿಂಕ್ಷನ್ನಲ್ಲಿ ಪಾಸಾಗಿದ್ದರೆ, ಶೇ.60ಕ್ಕಿಂತ ಹೆಚ್ಚು ಅಂಕ ಪಡೆದು 2,27,301 ವಿದ್ಯಾರ್ಥಿಗಳು ಪ್ರಥಮ ದರ್ಜೆಯಲ್ಲಿ ಪಾಸಾಗಿದ್ದಾರೆ.
80,357 ಮಂದಿ ದ್ವಿತೀಯ ದರ್ಜೆಯಲ್ಲಿ ಪಾಸಾಗಿದ್ದು, ಶೇ.50ಕ್ಕಿಂತ ಕಡಿಮೆ ಅಂಕ ಪಡೆದು 52,106 ಮಂದಿ ತೃತೀಯ ದರ್ಜೆಯಲ್ಲಿ ಪಾಸಾಗಿದ್ದಾರೆ. ಕನ್ನಡ ವಿಷಯದಲ್ಲಿ 161, ಸಂಸ್ಕøತದಲ್ಲಿ 852, ಹಿಂದಿಯಲ್ಲಿ 35, ಐಚ್ಛಿಕ ಕನ್ನಡದಲ್ಲಿ 07, ಇತಿಹಾಸದಲ್ಲಿ 155, ಅರ್ಥಶಾಸ್ತ್ರದಲ್ಲಿ 303, ತರ್ಕಶಾಸ್ತ್ರದಲ್ಲಿ 23, ಭೂಗೋಳ ಶಾಸ್ತ್ರದಲ್ಲಿ 757, ಹಿಂದೂಸ್ತಾನಿ ಸಂಗೀತ ಮತ್ತು ಮಲಯಾಳಂನಲ್ಲಿ ತಲಾ ಒಬ್ಬರು, ವ್ಯವಹಾರ ಅಧ್ಯಯನದಲ್ಲಿ 955, ಸಮಾಜಶಾಸ್ತ್ರದಲ್ಲಿ 58, ರಾಜ್ಯಶಾಸ್ತ್ರದಲ್ಲಿ 117, ಉರ್ದುವಿನಲ್ಲಿ 02, ಲೆಕ್ಕಶಾಸ್ತ್ರದಲ್ಲಿ 1939, ಸಂಖ್ಯಾಶಾಸ್ತ್ರದಲ್ಲಿ 977, ಮನಃಶಾಸ್ತ್ರದಲ್ಲಿ 19, ಭೌತಶಾಸ್ತ್ರದಲ್ಲಿ 07, ರಸಾಯನ ಶಾಸ್ತ್ರದಲ್ಲಿ 754, ಗಣಿತ ಶಾಸ್ತ್ರದಲ್ಲಿ 2447, ಜೀವಶಾಸ್ತ್ರದಲ್ಲಿ 128, ಎಲೆಕ್ಟ್ರಾನಿಕ್ಸ್ನಲ್ಲಿ 93, ಗಣಕವಿಜ್ಞಾನದಲ್ಲಿ 1546, ಶಿಕ್ಷಣದಲ್ಲಿ 314, ಬೇಸಿಕ್ ಮ್ಯಾಥ್ಸ್ನಲ್ಲಿ 357 ಮಂದಿ ಶೇ.100ಕ್ಕೆ ನೂರರಷ್ಟು ಅಂಕಪಡೆದಿದ್ದಾರೆ.

*ಜಿಲ್ಲಾವಾರು ಫಲಿತಾಂಶ:

1) ಉಡುಪಿ ಶೇ.92.20

2) ದಕ್ಷಿಣಕನ್ನಡ ಶೇ.90.91

3) ಕೊಡಗು ಶೇ.83.31

4) ಉತ್ತರ ಕನ್ನಡ ಶೇ.79.59

5) ಚಿಕ್ಕಮಗಳೂರು ಶೇ.76.42

6) ಹಾಸನ ಶೇ.75.19

7) ಬಾಗಲಕೋಟೆ ಶೇ.74.26

8) ಬೆಂಗಳೂರು ದಕ್ಷಿಣ ಶೇ.74.25

9) ಶಿವಮೊಗ್ಗ ಶೇ.73.54

10) ಬೆಂಗಳೂರು ಗ್ರಾಮಾಂತರ ಶೇ.72.91

11) ಬೆಂಗಳೂರು ಉತ್ತರ ಶೇ.72.68

12) ಚಾಮರಾಜನಗರ ಶೇ.72.67

13) ಚಿಕ್ಕಬಳ್ಳಾಪುರ ಶೇ.70.11

14) ವಿಜಯಪುರ ಶೇ.68.55

15) ಮೈಸೂರು ಶೇ.68.55

16) ಹಾವೇರಿ ಶೇ.68.40

17) ತುಮಕೂರು ಶೇ.65.81

18) ಕೋಲಾರ ಶೇ.65.19

19) ಬಳ್ಳಾರಿ ಶೇ.64.87

20) ಕೊಪ್ಪಳ ಶೇ.63.15

21) ಮಂಡ್ಯ ಶೇ.63.08

22) ದಾವಣಗೆರೆ ಶೇ.62.53

23) ಧಾರವಾಡ ಶೇ.62.49

24) ರಾಮನಗರ ಶೇ.62.08

25) ಚಿಕ್ಕೋಡಿ ಶೇ.60.86

26) ಗದಗ ಶೇ.57.76

27) ರಾಯಚೂರು ಶೇ.56.73

28) ಬೆಳಗಾವಿ ಶೇ.56.18

29) ಕಲಬುರಗಿ ಶೇ.56.09

30) ಬೀದರ್ ಶೇ.55.78

31) ಯಾದಗಿರಿ ಶೇ.53.02

32) ಚಿತ್ರದುರ್ಗ ಶೇ.51.42.

ಇನ್ನು ವಿಕಲಚೇತನರ ಪೈಕಿ ದೃಷ್ಟಿಮಾಂದ್ಯರು 717 ಮಂದಿ, ಶ್ರವಣ ಮತ್ತು ವಾಕ್ ದೋಷವುಳ್ಳವರು 106 ಮಂದಿ, ಆರ್ಥೋ ಸಮಸ್ಯೆ ಇರುವವರು 250 ಮಂದಿ, ಡಿಸ್ಲೇಲೆಕ್ಷಿಯಾ ಸಮಸ್ಯೆ ಇರುವವರು 236 ಮಂದಿ ಉತ್ತೀರ್ಣರಾಗಿದ್ದಾರೆ.

18 ಸರ್ಕಾರಿ ಪದವಿ ಪೂರ್ವ ಕಾಲೇಜುಗಳು ಶೇ.100 ರಷ್ಟು ಫಲಿತಾಂಶ ಪಡೆದರೆ, 03 ಕಾಲೇಜುಗಳು ಶೂನ್ಯ ಫಲಿತಾಂಶ ಪಡೆದಿವೆ. ಅನುದಾನಿತ ಕಾಲೇಜುಗಳ ಪೈಕಿ ಒಂದು ಶೇ.100ರಷ್ಟು ಫಲಿತಾಂಶ ಪಡೆದರೆ ಮತ್ತೊಂದು ಶೂನ್ಯ ಫಲಿತಾಂಶ ಪಡೆದಿದೆ. ಅನುದಾನ ರಹಿತ 63 ಕಾಲೇಜುಗಳು ಶೇ.100ರಷ್ಟು ಫಲಿತಾಂಶ ಪಡೆದರೆ, 94 ಕಾಲೇಜುಗಳು ಶೂನ್ಯ ಫಲಿತಾಂಶ ಪಡೆದಿದೆ.
ವಿಭಜಿತ ಕಾಲೇಜುಗಳಲ್ಲಿ ಒಂದು ಕಾಲೇಜು ಮಾತ್ರ ಶೇ.100 ರಷ್ಟು ಫಲಿತಾಂಶ ಪಡೆದಿದೆ. ಒಟ್ಟು ರಾಜ್ಯದಲ್ಲಿ 9 ಕಾಲೇಜುಗಳು 100ರಷ್ಟು ಫಲಿತಾಂಶ ಪಡೆದಿದ್ದು, 98 ಕಾಲೇಜುಗಳು ಶೂನ್ಯ ಫಲಿತಾಂಶ ಪಡೆದಿವೆ.
ಫಲಿತಾಂಶ ಲಭ್ಯವಾಗುವ ವೆಬ್ ಸೈಟ್ ವಿಳಾಸ : http://pue.kar.nic.in / http://www.karresults.nic.in

***

ಪಂಕ್ಚರ್ ಹಾಕುತ್ತಲೇ ಪಿಯುಸಿ ಟಾಪರ್ ಆದ ಬಳ್ಳಾರಿಯ ಕುಸುಮ!

2nd PU Result 2019: ಕಷ್ಟಪಟ್ಟರೆ ಯಶಸ್ಸು ಖಂಡಿತ ಎನ್ನುವ ಮಾತಿಗೆ ದ್ವಿತೀಯ ಪಿಯುಸಿ ಕಲಾ ವಿಭಾಗದಲ್ಲಿ ಮೊದಲ ಸ್ಥಾನ ಗಳಿಸಿರುವ ಕುಸುಮಾ ಅತ್ಯುತ್ತಮ ಉದಾಹರಣೆ. ಪಂಕ್ಷರ್ ಅಂಗಡಿಯಲ್ಲಿ ತಂದೆಗೆ ಸಹಾಯ ಮಾಡುತ್ತಾ ಓದಿ ಕಲಾ ವಿಭಾಗಕ್ಕೆ ಮೊದಲ ಸ್ಥಾನ ಗಳಿಸಿದ್ದಾರೆ.

ಉತ್ತಮ ಶಿಕ್ಷಕರ ಪ್ರಶಸ್ತಿ- 2018.

.

ಕರ್ನಾಟಕದ ಮೂವರಿಗೆ ರಾಷ್ಟ್ರೀಯ ಶಿಕ್ಷಕ ಪ್ರಶಸ್ತಿ.

Published 26, Aug 2018,
ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯ ನೀಡುವ 2017ನೇ ಸಾಲಿನ ‘ರಾಷ್ಟ್ರೀಯ ಶಿಕ್ಷಕ ಪ್ರಶಸ್ತಿ’ ಘೋಷಿಸಿದೆ. ಒಟ್ಟಾರೆ ದೇಶಾದ್ಯಂತ 45 ಶಿಕ್ಷಕರಿಗೆ ಈ ಬಾರಿ ರಾಷ್ಟ್ರೀಯ ಶಿಕ್ಷಕ ಪ್ರಶಸ್ತಿ ಘೋಷಿಸಲಾಗಿದೆ. ರಾಜ್ಯದ ಮೂವರು ಶಿಕ್ಷಕರು ಆಯ್ಕೆಯಾಗಿದ್ದಾರೆ.

ಬೆಂಗಳೂರು : ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯ ನೀಡುವ 2017ನೇ ಸಾಲಿನ ‘ರಾಷ್ಟ್ರೀಯ ಶಿಕ್ಷಕ ಪ್ರಶಸ್ತಿ’ ಘೋಷಿಸಿದೆ. ರಾಜ್ಯದ ಮೂವರು ಶಿಕ್ಷಕರು ಆಯ್ಕೆಯಾಗಿದ್ದಾರೆ.

ಒಟ್ಟಾರೆ ದೇಶಾದ್ಯಂತ 45 ಶಿಕ್ಷಕರಿಗೆ ಈ ಬಾರಿ ರಾಷ್ಟ್ರೀಯ ಶಿಕ್ಷಕ ಪ್ರಶಸ್ತಿ ಘೋಷಿಸಲಾಗಿದೆ. ಬೆಂಗಳೂರು ಉತ್ತರ ವಿಭಾಗದ ಜಿಲ್ಲಾ ಉಪನಿರ್ದೇಶಕರ ಕಚೇರಿಗೆ ಇತ್ತೀಚೆಗೆ ವರ್ಗಾವಣೆಗೊಂಡಿರುವ ಶಿಕ್ಷಕಿ ಶೈಲಾ, ಶಿಢ್ಲಘಟ್ಟತಾಲೂಕಿನ ಚೀಮಂಗಲ ಸರ್ಕಾರಿ ಪ್ರೌಢಶಾಲೆ ಶಿಕ್ಷಕ ಡಾ.ಎಂ.ಶಿವಕುಮಾರ್‌ ಮತ್ತು ದೇವನಹಳ್ಳಿ ತಾಲೂಕಿನ ವಿಜಯಪುರ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಪ್ರೌಢಶಾಲಾ ವಿಭಾಗದ ದೈಹಿಕ ಶಿಕ್ಷಣ ಶಿಕ್ಷಕ ಡಾ.ಜಿ.ರಮೇಶಪ್ಪ ಆಯ್ಕೆಯಾಗಿದ್ದಾರೆ.

ಸೆ.5ರಂದು ದೆಹಲಿಯ ವಿಜ್ಞಾನಭವನದಲ್ಲಿ ನಡೆಯಲಿರುವ ಶಿಕ್ಷಕರ ದಿನಾಚರಣೆಯಲ್ಲಿ ಉಪರಾಷ್ಟ್ರಪತಿ ಪ್ರಶಸ್ತಿಗಳನ್ನು ಪ್ರದಾನ ಮಾಡಲಿದ್ದಾರೆ. ಪ್ರಶಸ್ತಿಯು . 50 ಸಾವಿರ ನಗದು, ಬೆಳ್ಳಿ ಪದಕ ಮತ್ತು ಪ್ರಮಾಣ ಪತ್ರವನ್ನು ಒಳಗೊಂಡಿರುತ್ತದೆ.

ಶೈಲಾ ಅವರಿಂದ ‘ಸರಳ ವಿಜ್ಞಾನ’

ಕಳೆದ 24 ವರ್ಷಗಳಿಂದ ಶೈಲಾ ಅವರು ವಿದ್ಯಾರ್ಥಿಗಳಿಗೆ ವಿಜ್ಞಾನ ವಿಷಯವನ್ನು ಸರಳವಾಗಿ ಕಲಿಯುವ ವಿಧಾನವನ್ನು ತಿಳಿಸಿಕೊಟ್ಟಿದ್ದಾರೆ. ಈ ಸಾಧನೆ ಪರಿಗಣಿಸಿ ಪ್ರಶಸ್ತಿ ನೀಡಲಾಗಿದೆ.

ಶಿವಕುಮಾರ್‌ ‘ಗಣಿತ ಆ್ಯಪ್‌’

ಕಳೆದ 14 ವರ್ಷಗಳಿಂದ ಸರ್ಕಾರಿ ಶಾಲಾ ಶಿಕ್ಷಕರಾಗಿ ಕಾರ್ಯ ನಿರ್ವಹಿಸುತ್ತಿರುವ ಡಾ.ಎಂ. ಶಿವಕುಮಾರ್‌, ಗಣಿತವನ್ನು ಸರಳವಾಗಿ ಅರ್ಥೈಸುವ ಸಲುವಾಗಿ ಹಲವಾರು ವಿಡಿಯೋ, ಮೊಬೈಲ್‌ ಆ್ಯಪ್‌ಗಳನ್ನು ರೂಪಿಸಿದ್ದಾರೆ. ಯೂಟ್ಯೂಬ್‌ ನಲ್ಲಿ ತಮ್ಮ ಹೆಸರಿನಲ್ಲಿ ಖಾತೆ ತೆಗೆದು ಗಣಿತದ ಲೆಕ್ಕಗಳನ್ನು ಸುಲಭ ರೀತಿಯಲ್ಲಿ ಬಿಡಿಸಿ ವಿದ್ಯಾರ್ಥಿಗಳು ಹೆಚ್ಚಿನ ಅಂಕಗಳಿಸುವಂತೆ ಮಾಡಿದ್ದಾರೆ.

ರಮೇಶಪ್ಪ ‘ಪಠ್ಯೇತರ ನೆರವು’

ಡಾ. ಜಿ. ರಮೇಶಪ್ಪ ಅವರು ಶಾಲಾ ಮಕ್ಕಳಿಗೆ ಕ್ರೀಡೆ, ಯೋಗ, ಏರೋಬಿಕ್ಸ್‌, ನೃತ್ಯ ಮುಂದಾದವುಗಳಲ್ಲಿ ಉನ್ನತ ಮಟ್ಟಕ್ಕೆ ಕರೆದೊಯ್ಯುವಲ್ಲಿ ಯಶಸ್ವಿಯಾಗಿದ್ದಾರೆ. ರಾಜ್ಯ ಸರ್ಕಾರ ಈ ಹಿಂದೆ ರಾಜ್ಯ ಅತ್ಯುತ್ತಮ ಪ್ರಶಸ್ತಿ ನೀಡಿ ಗೌರವಿಸಿದೆ.

****

ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಪಡೆದ ರಾಜ್ಯದ 4 ಶಿಕ್ಷಕರು: ಕನ್ನಡ ಶಿಕ್ಷಕರನ್ನು ಹಾಡಿ ಹೊಗಳಿದ ಪ್ರಧಾನಿ ಮೋದಿ

PM Modi Congratulates 4 Teachers from Karnataka for being conferred with National Teachers award

ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಪಡೆದ ರಾಜ್ಯದ 4 ಶಿಕ್ಷಕರು: ಕನ್ನಡ ಶಿಕ್ಷಕರನ್ನು ಹಾಡಿ ಹೊಗಳಿದ ಪ್ರಧಾನಿ ಮೋದಿ

ನವದೆಹಲಿ: ಅತ್ಯುತ್ತಮ ಶಿಕ್ಷಕ ಹೆಸರಿಗೆ ರಾಜ್ಯದ ನಾಲ್ವರು ಶಿಕ್ಷಕರು ಭಾಜನರಾಗಿದ್ದು, ರಾಷ್ಟ್ರೀಯ ಶಿಕ್ಷಕ ಪ್ರಶಸ್ತಿ ಪಡೆದ ಕನ್ನಡ ಶಿಕ್ಷಕರನ್ನು ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಮಂಗಳವಾರ ಕೊಂಡಾಡಿದ್ದಾರೆ.

ಬೆಂಗಳೂರು ಉತ್ತರ ವಿಭಾಗದ ಜಿಲ್ಲಾ ಉಪನಿರ್ದೇಶಕರ ಕಚೇರಿಗೆ ಇತ್ತೀಚೆಗೆ ವರ್ಗಾವಣೆಗೊಂಡಿರುವ ಶಿಕ್ಷಕಿ ಶೈಲಾ, ಶಿಡ್ಲಘಟ್ಟ ತಾಲೂಕಿನ ಚೀಮಂಗಲ ಸರ್ಕಾರಿ ಪ್ರೌಢಶಾಲೆ ಶಿಕ್ಷಕ ಡಾ.ಎಂ.ಶಿವಕುಮಾರ್ ಮತ್ತು ದೇವನಹಳ್ಳಿ ತಾಲೂಕಿನ ವಿಜಯಪುರ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಪ್ರೌಢ ಶಾಲಾ ವಿಭಾಗದ ದೈಹಿಕ ಶಿಕ್ಷಕ ಡಾ.ಜಿ.ರಮೇಶಪ್ಪ, ಬೆಂಗಳೂರಿನ ದೆಹಲಿ ಪಬ್ಲಿಕ್ ಶಾಲೆಯ ಮಂಜು ಬಾಲಸುಬ್ರಹ್ಮಣ್ಯಂ ಅವರು ರಾಷ್ಟ್ರೀಯ ಶಿಕ್ಷಕ ಪ್ರಶಸ್ತಿ ಪಡೆದುಕೊಂಡಿದ್ದಾರೆ.

ಈ ನಾಲ್ವರೂ ಶಿಕ್ಷಕರಿಗೂ ಶುಭಾಶಯಗಳನ್ನು ಕೋರಿರುವ ಫೋಟೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿರುವ ಪ್ರಧಾನಿ ಮೋದಿಯವರು ಶಿಕ್ಷಕರನ್ನು ಹೊಗಳಿದ್ದಾರೆ.

ತಂತ್ರಜ್ಞಾನವನ್ನು ಸಮರ್ಪಕವಾಗಿ ಬಳಸಿಕೊಂಡು ವಿದ್ಯಾರ್ಥಿಗಳಿಗೆ ಗಣಿತದ ಕ್ಲಿಷ್ಟ ಸಮಸ್ಯೆಯನ್ನೂ ಸುಲಭವಾಗಿ ಕಲಿಸುತ್ತಿರವ ಶಿವಕುಮಾರ್ ಅವರಿಗೆ ನನ್ನ ನಮನಗಳು. ಅವರು ತರಗತಿಯಲ್ಲಿ ಪಾಠ ಮಾಡುತ್ತಿರುವ ಸಾಕಷ್ಟು ವಿಡಿಯೋಗಳು ಇಂಟರ್ನೆಟ್’ನಲ್ಲೂ ಲಭ್ಯವಿದೆ. ಕರ್ನಾಟಕದ ಚಿಕ್ಕಬಳ್ಳಾಪುರದ ಶಿವಕುಮಾರ್ ಅವರಿಗೆ ಅಭಿನಂದನೆಗಳು ಎಂದು ಹೇಳಿದ್ದಾರೆ.ಬೆಂಗಳೂರಿನ ದೆಹಲಿ ಪಬ್ಲಿಕ್ ಶಾಲೆಯ ಮಂಜು ಬಾಲಸುಬ್ರಹ್ಮಣ್ಯಂ ಅವರು ಶಾಲೆಯಲ್ಲಿ ವಿವಿಧತೆಯನ್ನು ಮೂಡಿಸಲು ಶ್ರಮಿಸಿದವರು. ಅಂತೆಯೇ ದಿವ್ಯಾಂಗ ಮಕ್ಕಳನ್ನು ಮುಖ್ಯ ವಾಹಿನಿಗೆ ತರುವಲ್ಲಿಯೂ ಶ್ರಮಿಸುತ್ತಿದ್ದಾರೆ. ಇಂದು ಉತ್ತಮ ಶಿಕ್ಷಕಿ ಪ್ರಶಸ್ತಿ ಪಡೆಯುತ್ತಿರುವ ಅವರಿಗೆ ಅಭಿನಂದನೆಗಳು ಎಂದು ಶ್ಲಾಂಘಿಸಿದ್ದಾರೆ.

ಬೆಂಗಳೂರು ಉತ್ತರದಲ್ಲಿ ನಾವು ಕೆಲಸ ಮಾಡುತ್ತಿದ್ದ ಶಾಲೆಯ ಮೂಲಸೌಕರ್ಯ ಅಭಿವೃದ್ಧಿಗೆ ಸಾಕಷ್ಟು ಶ್ರಮಿಸಿದವರು ಶೈಲಾ. ಆರ್.ಎನ್. ಅವರ ನಿಸ್ವಾರ್ಥ ಸೇವೆಯಿಂದಾಗಿ ಸಾಕಷ್ಟು ಬಡ ಮಕ್ಕಳ ಬದುಕು ಧನಾತ್ಮಕವಾಗಿ ಬದಲಾಗಿದೆ. ಇಂತಹ ಶಿಕ್ಷಕರ ಬಗ್ಗೆ ನನಗೆ ಹೆಮ್ಮೆಯಿದೆ ಎಂದು ಕೊಂಡಾಡಿದ್ದಾರೆ.

ವಿದ್ಯಾರ್ಥಿಗಳು ಆರೋಗ್ಯವಂತರಾಗಿದ್ದರೆ, ದೃಢ ಆರೋಗ್ಯ ಪಡೆದರೆ ದೇಶವೂ ಸದೃಢವಾಗಿರುತ್ತದೆ. ಬೆಂಗಳೂರು ಗ್ರಾಮಾಂತರ ಶಾಲೆಯೊಂದರ ದೈಹಿಕ ಶಿಕ್ಷಕ ಡಾ.ರಮೇಶಪ್ಪ ಅವರು ಶಾಲೆಯಲ್ಲಿ ಯೋಗ ಮತ್ತು ಕ್ರೀಡೆಯನ್ನು ಮಕ್ಕಳಿಗೆ ಸಮರ್ಥವಾಗಿ ಕಲಿಸುತ್ತಿದ್ದಾರೆ. ದಿವ್ಯಾಂಗ ಮಕ್ಕಳ ಕಲ್ಯಾಣಕ್ಕೆ ಅವರ ಕೊಡುಗೆ ಅನನ್ಯ. ಅವರಿಗೆ ಅಭಿನಂದನೆ ಹಾಗೂ ಶುಭ ಹಾರೈಸುತ್ತೇನೆಂದು ತಿಳಿಸಿದ್ದಾರೆ.

****

ರಾಜ್ಯಮಟ್ಟದ ಉತ್ತಮ ಶಿಕ್ಷಕರ ಪ್ರಶಸ್ತಿ ಪ್ರಕಟ:

ಪ್ರಾಥಮಿಕ ಶಾಲಾ ವಿಭಾಗದ 20, ಪ್ರೌಢಶಾಲಾ ವಿಭಾಗದ 10 ಶಿಕ್ಷಕರಿಗೆ ಪ್ರಶಸ್ತಿ
Sep 04, 2018.
ಬೆಂಗಳೂರು: ಪ್ರಸಕ್ತ ಸಾಲಿನ ರಾಜ್ಯಮಟ್ಟದ ಉತ್ತಮ ಶಿಕ್ಷಕರ ಪ್ರಶಸ್ತಿಗಾಗಿ ಪ್ರಾಥಮಿಕ ಶಾಲಾ ವಿಭಾಗದ 20 ಶಿಕ್ಷಕರು ಮತ್ತು ಪ್ರೌಢಶಾಲಾ ವಿಭಾಗದ 10 ಶಿಕ್ಷಕರನ್ನು ಮತ್ತು ಪ್ರೌಢಶಾಲಾ ವಿಭಾಗದ ಒಬ್ಬ ವಿಶೇಷ ಶಿಕ್ಷಕರನ್ನುಆಯ್ಕೆ ಮಾಡಲಾಗಿದೆ.

ಪ್ರಾಥಮಿಕ ಶಾಲಾ ವಿಭಾಗದಲ್ಲಿ ಉಡುಪಿ ಜಿಲ್ಲೆಯ ಮಣಿಪಾಲದ ಸರಳೇಬೆಟ್ಟು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕಿ ಬಿ.ಬೇಬಿ, ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು ಉತ್ತರ ವಲಯದ ಸ.ಹಿ.ಪ್ರಾ.ಶಾಲೆಯ ಸಹ ಶಿಕ್ಷಕ ಶಂಕರ್‌, ಸೋಮವಾರಪೇಟೆಯ ಮುಳ್ಳೂರು ಸ.ಕಿ.ಪ್ರಾ.ಶಾಲೆಯ ಸಹ ಶಿಕ್ಷಕ ಸಿ.ಎಸ್‌.ಸತೀಶ್‌, ಮಾಲೂರಿನ ಪುರಲಕ್ಕೂರು ಸ.ಕಿ.ಪ್ರಾ.ಶಾಲೆಯ ಸಹ ಶಿಕ್ಷಕ ಎಂ.ರಮೇಶ್‌, ತಿಪಟೂರಿನ ಉಪ್ಪಿನಹಳ್ಳಿ ಸ.ಕಿ.ಪ್ರಾ. ಶಾಲೆಯ ಸಹ ಶಿಕ್ಷಕ ಜಿ.ಕೆ.ಶ್ರೀರಾಮಯ್ಯ, ಕಾರವಾರದ ಕದ್ರಾ ಸ.ಹಿ.ಪ್ರಾ.ಶಾಲೆಯ ಸಹ ಶಿಕ್ಷಕ ಜೈರಾಮ ಎಂ.ಭಟ್‌, ಲಿಂಗಸುಗೂರಿನ ಈಚನಾಳ ತಾಂಡದ ಸ.ಹಿ.ಪ್ರಾ.ಶಾಲೆಯ ಸಹ ಶಿಕ್ಷಕ ಹುಲ್ಲಪ್ಪ ಎಸ್‌.ವನಕಿಹಾಳ, ಶಿರಸಿ ಶೈಕ್ಷಣಿಕ ಜಿಲ್ಲೆ ಯಲ್ಲಾಪುರ ಹಿತ್ಲಳ್ಳಿ ಸ.ಹಿ.ಪ್ರಾ. ಶಾಲೆಯ ಪ್ರಭಾರ ಮುಖ್ಯಶಿಕ್ಷಕಿ ಯಮುನಾ ಪಿ.ನಾಯ್ಕ, ಗೋಕಾಕ್‌ನ ಸ.ಹಿ.ಪ್ರಾ.ಶಾಲೆಯ ಸಹ ಶಿಕ್ಷಕ ಸಂತೋಷ್‌ ಮಡಿವಾಳಪ್ಪ ತಡಸಲಿ, ಅರಸೀಕೆರೆಯ ಮಹಾದೇವರ ಹಳ್ಳಿಯ ಸ.ಹಿ.ಪ್ರಾ.ಶಾಲೆಯ ಬಡ್ತಿ ಮುಖ್ಯ ಶಿಕ್ಷಕಿ ಮಹಾಲಕ್ಷ್ಮಮ್ಮ, ಚಿಕ್ಕಮಗಳೂರಿನ ಗಾಂಧಿಗ್ರಾಮದ ಸ.ಕಿ.ಪ್ರಾ.ಶಾಲೆಯ ಸಹ ಶಿಕ್ಷಕ ಸಿ.ತಿಮ್ಮೇಶಪ್ಪ, ಹೊಳಲ್ಕೆರೆ ಸಿಂಗೇನಹಳ್ಳಿ ಸ.ಹಿ.ಪ್ರಾ.ಶಾಲೆಯ ಬಡ್ತಿ ಮುಖ್ಯ ಶಿಕ್ಷಕ ಜಿ.ರೇವಣ್ಣ, ಯಾದಗಿರಿಯ ಮುದಾಳದ ಸ.ಹಿ.ಪ್ರಾ.ಶಾಲೆಯ ಸಹ ಶಿಕ್ಷಕ ಬಾಬುಗಂಗು ಚವ್ಹಾಣ, ಗದಗದ ಸೋಮವಾರಪುರ ಸಣ್ಣತಾಂಡೆದ ಸ.ಹಿ.ಪ್ರಾ.ಶಾಲೆಯ ಮಲ್ಲೇಶ್‌ ಡಿ.ಹರಿವಾಣ, ಸೇಡಂನ ಇಟಕಾಲ ಸ.ಹಿ.ಪ್ರಾ. ಶಾಲೆಯ ಸಹ ಶಿಕ್ಷಕ ಟಿ.ನೀಲಪ್ಪ, ಬೆಂಗಳೂರು ಪೂರ್ಣಪುರದ ಸ.ಹಿ.ಪ್ರಾ.ಶಾಲೆಯ ಸಹ ಶಿಕ್ಷಕಿ ಪ್ರಸ್ಸಿಲ್ಲ ಶಾಂತ ಕುಮಾರಿ, ಕೊಪ್ಪಳದ ಹಲವಾಗಲಿ ಸ.ಹಿ.ಪ್ರಾ. ಶಾಲೆಯ ಸಹ ಶಿಕ್ಷಕ ವೆಂಕಟರೆಡ್ಡಿ ಬಸವರೆಡ್ಡಿ ಇಮ್ಮಡಿ, ಭದ್ರಾವತಿಯ ಸುಲ್ತಾನ ಮಟ್ಟಿ ಸ.ಕಿ.ಪ್ರಾ.ಶಾಲೆಯ ಸಹ ಶಿಕ್ಷಕ ಎಂ.ಆರ್‌.ರೇವಣಪ್ಪ, ಬಾಗಲಕೋಟೆಯ ಗುಂಡನಪೆರ್ಲೆ ಸ.ಕ್ರಿ.ಶಾಲೆಯ ಸಹ ಶಿಕ್ಷಕ ವೈ.ಆರ್‌. ಭೂತಾಳಿ, ಯರಗುಪ್ಪಿ ಸ.ಹಿ.ಪ್ರಾ.ಶಾಲೆಯ ಸಹ ಶಿಕ್ಷಕಿ ಶಾಂತವ್ವ ಹ.ಶಿವಣ್ಣನವರ ಆಯ್ಕೆಯಾಗಿದ್ದಾರೆ.

ಪ್ರೌಢಶಾಲಾ ವಿಭಾಗ: ಪ್ರೌಢಶಾಲಾ ವಿಭಾಗದಲ್ಲಿ ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ಆಯುರ್ವೇದ ಭೂಷಣ ಎಂ.ವಿ.ಶಾಸಿOಉ ಪ್ರೌಢಶಾಲೆಯ ಮುಖ್ಯಶಿಕ್ಷಕ ಪಿ. ಎನ್‌.ಪ್ರಕಾಶ್‌ ರಾವ್‌, ದ.ಕ.ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ನಡದ ಸರ್ಕಾರಿ ಪ್ರೌಢಶಾಲೆಯ ಸಹ ಶಿಕ್ಷಕ ಎಸ್‌.ಯಾಕೂಬ್‌, ತುಮಕೂರು ಸಿದಟಛಿಗಂಗಾ ಮಠದ ಎಸ್‌ಎಸ್‌ಆರ್‌ಎಚ್‌ಎಸ್‌ ಪ್ರೌಢಶಾಲೆಯ ಸಹ ಶಿಕ್ಷಕ ಶಿವಕುಮಾರ್‌, ಹಿರಿಯೂರು ಮದಕರಿನಾಯಕನ ಕೋಟೆಯ ಸರ್ಕಾರಿ ಪ್ರೌಢಶಾಲೆಯ ದೈಹಿಕ ಶಿಕ್ಷಣ ಶಿಕ್ಷಕ ಚಿದಾನಂದಸ್ವಾಮಿ, ಶಿರಸಿ ಗಣೇಶನಗರ ಸರ್ಕಾರಿ ಪ್ರೌಢಶಾಲೆಯ ಸಹ ಶಿಕ್ಷಕ ಕೃಷ್ಣಮೂರ್ತಿ ಎಲ್‌.ಭಟ್‌, ವಿರಾಜಪೇಟೆಯ ಎಸ್‌ಸಿಸಿ ಅಧಿಕಾರಿ ಕೆ.ಎನ್‌. ಮಂಜುನಾಥ್‌, ಬೆಂಗಳೂರು ಉತ್ತರ ದಾಸರಹಳ್ಳಿ ಅಗ್ರಹಾರದ ಸರ್ಕಾರಿ ಪ್ರೌಢಶಾಲೆಯ ದೈಹಿಕ ಶಿಕ್ಷಣ ಶಿಕ್ಷಕ ಎಸ್‌.ಎಸ್‌.ಬಿರಾದಾರ್‌, ನವಲಗುಂದದ ಕೊಂಡಿಕೊಪ್ಪ ಸರ್ಕಾರಿ ಪ್ರೌಢಶಾಲೆಯ ಸಹ ಶಿಕ್ಷಕ ಬಸವರಡ್ಡಿ ಅಡಿವೆಪ್ಪ ರಂಗಣ್ಣವರ, ಮಧುಗಿರಿಯ ಐ.ಡಿ.ಹಳ್ಳಿ ಪ್ರೌಢಶಾಲೆಯ ಸಹ ಶಿಕ್ಷಕ ರಂಗನಾಥಪ್ಪ ಮತ್ತು ಹೊಸಕೋಟೆಯ ಕಾರಿಗನೂರು ಸರ್ಕಾರಿ ಪ್ರೌಢಶಾಲೆಯ ಸಹ ಶಿಕ್ಷಕ ಬಿ.ಸೈಯದ್‌ ಆಯ್ಕೆಯಾಗಿದ್ದಾರೆ.

ವಿಶೇಷ ಶಿಕ್ಷಕರ ವಿಭಾಗದಲ್ಲಿ ಮೈಸೂರು ವರುಣದ ಸರ್ಕಾರಿ ಪ್ರೌಢಶಾಲೆಯ ಸಂಗೀತ ಶಿಕ್ಷಕಿ ಸೌಮ್ಯ ಜೈನ್‌ ಅವರಿಗೆ ಪ್ರಶಸ್ತಿ ಲಭಿಸಿದೆ.

ಕಲಾವಿದ ಶಿಕ್ಷಕ/ಶಿಕ್ಷಕಿಯರು

.

Skybird Mailarappa Budihal.

***

ಶ್ರೀಮತಿ ಶಾರದಾ ಸುಂಕಪ್ಪ. ಸ.ಶಿ. ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಚಲವಾದಿ ಓಣಿ ಗಂಗಾವತಿ. ಜಿ:ಕೊಪ್ಪಳ.ಇವರ ಕಲಾಕೃತಿಗಳು

.***

ರಾಜ್ಯ ಮಟ್ಟದ ನೌಕರರ ಸಹಪಠ್ಯ ಚಟುವಟಿಕೆಗಳ ಚಿತ್ರ ಕಲಾ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದ ಶ್ರೀ ಹನುಮೇಶ ಶಿಕ್ಷಕರು.

ಹಂಪಿಯ ಕಲ್ಲಿನ ರಥ

ರಾಜ್ಯ ಮಟ್ಟದ ಚಿತ್ರಕಲಾ ಸ್ಪಧೆ೯ಯಲ್ಲಿ ಪ್ರಥಮ ಸ್ಥಾನ ಪಡೆದ ಶ್ರೀ ಹನುಮೇಶ ಶಿಕ್ಷಕರನ್ನು ಶ್ರೀಮತಿ ಉಮಾದೇವಿ ಸೊನ್ನದ ಮೇಡಂ ಕ್ಷೇತ್ರಶಿಕ್ಷಣಾಧಿಕಾರಿಗಳು,ಗಂಗಾವತಿ. ಅಭಿನಂದಿಸುತ್ತಿರುವುದು.

2016-17ನೇ ಸಾಲಿನ ರಾಜ್ಯ ಮಟ್ಟದ ಪ್ರೌಢ ಶಾಲಾ ಶಿಕ್ಷಕರ ಸಹಪಠ್ಯ ಚಟುವಟಿಕೆಗಳ ಚಿತ್ರಕಲಾ ಸ್ಪಧೆ೯ಯಲ್ಲಿ ಶ್ರೀ ಹನುಮೆಶ ಚಿತ್ರಕಲಾ ಶಿಕ್ಷಕರು, ಶ್ರೀ ಕೊಟ್ಟೂರೇಶ್ವರ ಸಂ.ಪ.ಪೂ.ಕಾಲೇಜ್, ಗಂಗಾವತಿ. ಇವರು ಪ್ರಥಮ ಸ್ಥಾನವನ್ನು ಪಡೆದು ನಮ್ಮ ತಾಲೂಕಿಗೆ ಹಾಗೂ ಕೊಪ್ಪಳ ಜಿಲ್ಲೆಗೆ ಕೀತಿ೯ಯನ್ನು ತಂದಿದ್ದಾರೆ. ಅವರಿಗೆ ಗಂಗಾವತಿ ತಾಲೂಕು ಚಿತ್ರಕಲಾ ಶಿಕ್ಷಕರ ಸಂಘದ ಅಧ್ಯಕ್ಷರು ಹಾಗೂ ಎಲ್ಲಾ ಚಿತ್ರಕಲಾ ಶಿಕ್ಷಕರು ಅಭಿನಂದನೆಗಳನ್ನು ಸಲ್ಲಿಸುತ್ತೇವೆ.

– ಶಶಿಭೂಷಣ ಎಮ್.

****

ಉಪಯೋಗಿಸಿ ಬಿಸಾಕಿದ ಹಳೆ ಬ್ಲೇಡುಗಳಿಂದ ತಯಾರಿಸಿದ ತೇರು…
ಮಕ್ಕಳೊಡನೆ ಮಕ್ಕಳಾಗಿ ಬೆರೆವ ಕ್ಷಣಗಳು ಅದ್ಭುತ…
@ಪರಶುರಾಮ ಗಡ್ಡಿ.ಶಿಕ್ಷಕರು, HPS ಈಳಿಗಾನೂರು ಗಂಗಾವತಿ ತಾ.

image

image

PUC II ಫಲಿತಾಂಶ 2018.

ಗರ್ಲ್ ಪವರ್ ರಿಸಲ್ಟ್ ಸೂಪರ್
01.05.2018,
ಪಿಯು ಫಲಿತಾಂಶ ಶೇ.7.18 ಹೆಚ್ಚಳ, ಶೇ.59.56 ಮಂದಿ ಪಾಸ್

ಪ್ರಸಕ್ತ ವರ್ಷದ ದ್ವಿತೀಯ ಪಿಯುಸಿ ಫಲಿತಾಂಶ ಸೋಮವಾರ ಪ್ರಕಟವಾಗಿದ್ದು, ಶಿಕ್ಷಣ ಇಲಾಖೆಯ ಮಿಷನ್ -2018 ಯಶಸ್ಸಿನ ಕುರಿತು ವಿಜಯವಾಣಿ ಪ್ರಕಟಿಸಿದ್ದಂತೆ ಫಲಿತಾಂಶದ ಪ್ರಮಾಣ ಕಳೆದ ವರ್ಷಕ್ಕಿಂತ ಶೇ.7.18 ಏರಿಕೆಯಾಗಿದೆ. ಒಟ್ಟಾರೆ ಶೇ.59.56 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಎಂದಿನಂತೆ ಈ ಬಾರಿಯೂ ವಿದ್ಯಾರ್ಥಿನಿಯರೇ ಮೇಲುಗೈ ಸಾಧಿಸಿದ್ದಾರೆ. ಜಿಲ್ಲಾವಾರು ಫಲಿತಾಂಶದಲ್ಲಿ ದಕ್ಷಿಣ ಕನ್ನಡ ಮೊದಲ ಸ್ಥಾನ ಪಡೆದರೆ ಉಡುಪಿ, ಕೊಡಗು ಕ್ರಮವಾಗಿ 2 ಹಾಗೂ 3ನೇ ಸ್ಥಾನ ಪಡೆದಿವೆ. ಚಿಕ್ಕೋಡಿಯಲ್ಲಿ ಅತಿ ಕಡಿಮೆ ಫಲಿತಾಂಶ ದಾಖಲಾಗಿದೆ. ವಿಧಾನಸಭೆ ಚುನಾವಣೆ ನೀತಿ ಸಂಹಿತೆ ಕಾರಣ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವರ ಬದಲು ಪದವಿ ಪೂರ್ವ ಶಿಕ್ಷಣ ಇಲಾಖೆಯ ನಿರ್ದೇಶಕಿ ಸಿ.ಶಿಖಾ ಫಲಿತಾಂಶವನ್ನು ಪ್ರಕಟಿಸಿದರು.

ಶೈಕ್ಷಣಿಕ ವರ್ಷ ಪ್ರಾರಂಭದಲ್ಲೇ ಮಿಷನ್-2018 ಯೋಜನೆ ರೂಪಿಸಿ ಹಲವಾರು ಕಾರ್ಯಕ್ರಮಗಳನ್ನು ಜಾರಿಗೆ ತಂದ ಹಿನ್ನೆಲೆಯಲ್ಲಿ ಫಲಿತಾಂಶ ಹೆಚ್ಚಳವಾಗಿದೆ. ವಿದ್ಯಾರ್ಥಿಗಳು ಕೂಡ ಉತ್ತಮವಾಗಿ ಪರೀಕ್ಷೆ ಎದುರಿಸಿರುವುದರಿಂದ ಫಲಿತಾಂಶ ಹೆಚ್ಚಾಗಿದೆ.

| ಸಿ.ಶಿಖಾ, ಪದವಿಪೂರ್ವ ಶಿಕ್ಷಣ ಇಲಾಖೆ ನಿರ್ದೇಶಕಿ

ವೈದ್ಯಳಾಗುವ ಆಸೆಯಿಂದ ಎಕ್ಸೆಲ್ ಅಕಾಡೆಮಿಯಲ್ಲಿ ತರಬೇತಿ ಪಡೆಯುತ್ತಿದ್ದೇನೆ. ಇದಕ್ಕಾಗಿ ಪ್ರತಿ ದಿನ ಕನಿಷ್ಠ 8ರಿಂದ 9 ಗಂಟೆ ಅಭ್ಯಾಸ ಮಾಡುತ್ತಿದ್ದೆ. ಹಿಂದಿನ ವರ್ಷಗಳ ಪ್ರಶ್ನೆಪತ್ರಿಕೆಗಳನ್ನು ತಿರುವಿ ಹಾಕುತ್ತಿದ್ದೆ, ಅವಕ್ಕೆ ಉತ್ತರಿಸುತ್ತಿದ್ದೆ. ಮನೆಯಲ್ಲಿ ತುಂಬಾನೇ ಸಹಕಾರ ನೀಡಿದ್ದರಿಂದ ಹೆಚ್ಚು ಅಂಕ ಪಡೆಯಲು ಅನುಕೂಲವಾಯಿತು.

| ಕೃತಿ ಮುತ್ತಗಿ, ವಿವಿಎಸ್ ಸರ್ದಾರ್ ಪಾಟೀಲ್ ಪಿಯು ಕಾಲೇಜು ಬಸವೇಶ್ವರನಗರ

ಕೊಟ್ಟೂರಿನ ಇಂದು ಕಾಲೇಜ್ಗೆ 19 ರ‍್ಯಾಂಕ್

ಬಳ್ಳಾರಿ ಜಿಲ್ಲೆ ಕೊಟ್ಟೂರಿನ ಇಂದು ಕಾಲೇಜ್ನ ಸ್ವಾತಿ, ರಮೇಶ್, ಕಾವ್ಯಾಂಜಲಿ ಕಲಾವಿಭಾಗದಲ್ಲಿ ಪ್ರಥಮ, ದ್ವಿತೀಯ, ತೃತೀಯ ರ‍್ಯಾಂಕ್ ಪಡೆದರೆ 3 ಟಾಪರ್ಸ್ ಜತೆಗೆ ತಲಾ ಒಬ್ಬೊಬ್ಬರು 4, 5ನೇ ರ‍್ಯಾಂಕ್ , ನಾಲ್ವರು 6ನೇ ರ‍್ಯಾಂಕ್ , ಇಬ್ಬರು 7ನೇ ರ‍್ಯಾಂಕ್ , ಮೂವರು 8ನೇ, ಇಬ್ಬರು 9ನೇ ರ‍್ಯಾಂಕ್ , ಮೂವರು 10ನೇ ರ‍್ಯಾಂಕ್ ಪಡೆದಿದ್ದಾರೆ. ಇಂದು ಕಾಲೇಜಿನ 19 ವಿದ್ಯಾರ್ಥಿಗಳು ಅಗ್ರ -10 ರ‍್ಯಾಂಕ್ ಪಟ್ಟಿಯಲ್ಲಿರುವುದು ವಿಶೇಷ.

ಹುಡುಗಿಯರೇ ಮುಂದು ಹುಡುಗರದು ಯಥಾಸ್ಥಿತಿ

ಈ ಬಾರಿಯ ಪಿಯು ಫಲಿತಾಂಶದಲ್ಲಿ ಗ್ರಾಮೀಣಿಗರು, ಬಾಲಕಿಯರು ಮೇಲುಗೈ ಸಾಧಿಸಿದ್ದರೆ ಕನ್ನಡ ಮಾಧ್ಯಮದಲ್ಲಿ ಓದಿದ ವಿದ್ಯಾರ್ಥಿಗಳು ಮತ್ತೆ ಹಿಂದೆ ಬಿದ್ದಿದ್ದಾರೆ. ಈ ಮಧ್ಯೆ 100ಕ್ಕೆ 100ರಷ್ಟು ಫಲಿತಾಂಶ ಪಡೆದ ಕಾಲೇಜುಗಳ ಸಂಖ್ಯೆ ಹೆಚ್ಚಿದ್ದು, ಯಾವುದೇ ಅನುಕೂಲತೆ ಇಲ್ಲದೆ ಕಠಿಣ ಪರಿಶ್ರಮದಿಂದ ಓದಿದ ವಿದ್ಯಾರ್ಥಿಗಳು ಸಾಧನೆ ಮೆರೆದಿದ್ದಾರೆ. ತೇರ್ಗಡೆ ಹೊಂದಿದವರಲ್ಲಿ ವಿಜ್ಞಾನ ಶಾಖೆಯವರು ಹೆಚ್ಚು. ಮುಖ್ಯ ಪರೀಕ್ಷೆಯಲ್ಲಿ ಅನುತ್ತೀರ್ಣರಾದವರಿಗೆ ಜೂನ್ 8ರಿಂದ 20ರವರೆಗೆ ಸಪ್ಲಿಮೆಂಟರಿ ಪರೀಕ್ಷೆ ನಡೆಯಲಿದೆ.

ಬೆಂಗಳೂರಿನ ವಿವಿಎಸ್ ಸರ್ದಾರ್ ಪಟೇಲ್ ಪಿಯು ಕಾಲೇಜು ಮತ್ತು ಎಕ್ಸೆಲ್ ಅಕಾಡೆಮಿ ತರಬೇತಿ ಪಡೆಯುತ್ತಿರುವ ಕೃತಿ ಮುತ್ತಗಿ 597 ಅಂಕಗಳಿಸುವ ಮೂಲಕ ರಾಜ್ಯಕ್ಕೆ ಮೊದಲ ಸ್ಥಾನಗಳಿಸಿದ್ದಾರೆ. ಹಾಸನದ ಮಾಸ್ಟರ್ಸ್ ಪಿಯು ಕಾಲೇಜಿನ ಎಸ್.ಎಲ್.ಮೋಹನ್ (ವಿಜ್ಞಾನ), ದಕ್ಷಿಣ ಕನ್ನಡ ಜಿಲ್ಲೆಯ ಗೋವಿಂದ ದಾಸ ಪಿಯು ಕಾಲೇಜಿನ ಪಿ.ಅಂಕಿತಾ (ವಿಜ್ಞಾನ) ಬಳ್ಳಾರಿ ಜಿಲ್ಲೆಯ ಇಂದು ಸ್ವತಂತ್ರ ಪಿಯು ಕಾಲೇಜಿನ ಎಸ್.ಸ್ವಾತಿ (ಕಲಾ), ವಾಣಿಜ್ಯ ವಿಭಾಗದಲ್ಲಿ ಬೆಂಗಳೂರಿನ ವಿದ್ಯಾಮಂದಿರ ಸ್ವಾತಂತ್ರ್ಯ ಪಿಯು ಕಾಲೇಜಿನ ವರ್ಷಿಣಿ ಎಂ.ಭಟ್ ಹಾಗೂ ಬೆಂಗಳೂರಿನ ಎಎಸ್ಸಿ ಪಿಯು ಕಾಲೇಜಿನ ಎಸ್.ಆರ್. ಅಮೃತಾ ತಲಾ 595 ಅಂಕ ಪಡೆದು ರಾಜ್ಯಕ್ಕೆ ದ್ವಿತೀಯ ಸ್ಥಾನ ಹಂಚಿಕೊಂಡಿದ್ದಾರೆ. ವಾಣಿಜ್ಯದಲ್ಲಿ ಬೆಂಗಳೂರಿನ ಮೌಂಟ್ ಕಾರ್ಮಲ್ ಪಿಯು ಕಾಲೇಜಿನ ಆರ್.ಪೂರ್ವಿತಾ 594 ಅಂಕಗಳಿಸುವ ಮೂಲಕ ತೃತೀಯ ಸ್ಥಾನಗಳಿಸಿದ್ದಾರೆ.

68 ಕಾಲೇಜಲ್ಲಿ 100% ಫಲಿತಾಂಶ: ಈ ಬಾರಿ ಫಲಿತಾಂಶ ಹೆಚ್ಚಳವಾಗಿರುವುದರಿಂದ ಶೇ.100ಕ್ಕೆ ಶೇ.100 ಫಲಿತಾಂಶ ಪಡೆಯುವ ಕಾಲೇಜುಗಳ ಸಂಖ್ಯೆಯೂ ಹೆಚ್ಚಾಗಿದೆ. ಈ ವರ್ಷ 68 ಕಾಲೇಜುಗಳಿದ್ದು, ಕಳೆದ ವರ್ಷ 37 ಇದ್ದವು. ಶೂನ್ಯ ಫಲಿತಾಂಶ ಪಡೆದ ಕಾಲೇಜುಗಳ ಪಟ್ಟಿಯಲ್ಲಿ ಮೂರು ಸರ್ಕಾರಿ ಕಾಲೇಜುಗಳಿದ್ದು, ಈ ವರ್ಷ 118 ಕಾಲೇಜು ಶೂನ್ಯ ಫಲಿತಾಂಶ ಹೊಂದಿವೆ.

ಕನ್ನಡ ಮಾಧ್ಯಮ ಹಿಂದುಳಿಯಿತು: ಒಟ್ಟು ತೇರ್ಗಡೆ ಹೊಂದಿದ ವಿದ್ಯಾರ್ಥಿಗಳ ಶೇಕಡವಾರು ಫಲಿತಾಂಶದಲ್ಲಿ ಕನ್ನಡ ಮಾಧ್ಯಮ ವಿದ್ಯಾರ್ಥಿಗಳು ಈ ಬಾರಿಯೂ ಹಿಂದೆಯೇ ಇದ್ದಾರೆ. ಈ ವರ್ಷ ಕನ್ನಡ ಮಾಧ್ಯಮದ ಶೇ.51.46 ಮತ್ತು ಆಂಗ್ಲ ಮಾಧ್ಯಮದ ಶೇ.66.06 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಕಳೆದ ವರ್ಷ ಕನ್ನಡ ಮಾಧ್ಯಮ ಶೇ.40.68 ಹಾಗೂ ಆಂಗ್ಲ ಮಾಧ್ಯಮ ಶೇ.61.41 ಉತ್ತೀರ್ಣರಾಗಿದ್ದರು.

ಜೂನ್ನಲ್ಲಿ ಪೂರಕ ಪರೀಕ್ಷೆ: ಮುಖ್ಯ ಪರೀಕ್ಷೆಯಲ್ಲಿ ಅನುತ್ತೀರ್ಣರಾದವರಿಗೆ 2018ನೇ ಜೂನ್ನಲ್ಲಿ ದ್ವಿತೀಯ ಪಿಯು ಸಪ್ಲಿಮೆಂಟರಿ ಪರೀಕ್ಷೆ ಬರೆಯಲು ಅವಕಾಶ ಕಲ್ಪಿಸಲಾಗಿದೆ. ಇದು ಜೂನ್ 8ರಿಂದ 20ರವರೆಗೆ ನಡೆಯಲಿದೆ. ವಿದ್ಯಾರ್ಥಿಗಳು ಶುಲ್ಕ ಪಾವತಿಸಲು ಮೇ 15 ಕೊನೆಯ ದಿನ. ಕಾಲೇಜಿನವರು ಪರೀಕ್ಷಾ ಅರ್ಜಿಗಳನ್ನು ಮೂಲ ಚಲನ್ ಸಹಿತ ಜಿಲ್ಲಾ ಉಪನಿರ್ದೇಶಕರ ಕಚೇರಿಗೆ ಕಡ್ಡಾಯವಾಗಿ ಮೇ 17 ರೊಳಗೆ ಕಳುಹಿಸಬೇಕಿದೆ.

ಮರು ಮೌಲ್ಯಮಾಪನ

ಫಲಿತಾಂಶ ತೃಪ್ತಿಯಾಗದ ವಿದ್ಯಾರ್ಥಿಗಳಿಗೆ ಉತ್ತರ ಪತ್ರಿಕೆಯ ಸ್ಕ್ಯಾನಿಂಗ್ ಪ್ರತಿ ಪಡೆಯಲು, ಉತ್ತರ ಪತ್ರಿಕೆ ಮರು ಮೌಲ್ಯಮಾಪನಕ್ಕೆ ಹಾಗೂ ಅಂಕಗಳ ಮರುಏಣಿಕೆಗೆ ಅವಕಾಶ ಕಲ್ಪಿಸಲಾಗಿದೆ. ಉತ್ತರ ಪತ್ರಿಕೆಯ ಸ್ಕ್ಯಾನಿಂಗ್ ಪ್ರತಿಗಾಗಿ ಅರ್ಜಿ ಸ್ವೀಕರಿಸಲು ಕೊನೆಯ ದಿನ ಮೇ 7. ಸ್ಕ್ಯಾನಿಂಗ್ ಪ್ರತಿ ಪಡೆಯಲು ಶುಲ್ಕ ಪ್ರತಿ ವಿಷಯಕ್ಕೆ 530 ರೂ. ನಿಗದಿ ಪಡಿಸಿದೆ. ಮರುಮೌಲ್ಯಮಾಪನಕ್ಕೆ ಅರ್ಜಿ ಸ್ವೀಕರಿಸಲು ಕೊನೆಯ ದಿನ ಮೇ 14. ಮರು ಮೌಲ್ಯಮಾಪನದ ಶುಲ್ಕ ಪ್ರತಿ ವಿಷಯಕ್ಕೆ 1670 ರೂ. ನಿಗದಿ ಪಡಿಸಿದೆ. ಅಂಕಗಳ ಮರುಏಣಿಕೆಗಾಗಿ ಅರ್ಜಿ ಸ್ವೀಕರಿಸಲು ಮೇ 24 ಕೊನೆಯ ದಿನ. ಅಂಕಗಳ ಮರುಏಣಿಕೆಗೆ ಶುಲ್ಕ ಇರುವುದಿಲ್ಲ. ಮರು ಎಣಿಕೆ ಫಲಿತಾಂಶವನ್ನು ವೆಬ್ಸೈಟ್ನಲ್ಲಿ ಆಯಾ ದಿನವೇ ಪ್ರಕಟವಾಗಲಿದೆ. ಮರು ಮೌಲ್ಯಮಾಪನದಲ್ಲಿ ನಿಗದಿಪಡಿಸಿರುವ ಅಂಕಗಳಿಗಿಂತ ಹೆಚ್ಚಿನ ಅಂಕಗಳು ಅಥವಾ ಕಡಿಮೆ ಅಂಕಗಳು ಬಂದಲ್ಲಿ ಅಂಕಗಳೊಂದಿಗೆ ಫಲಿತಾಂಶವನ್ನು ಪರಿಷ್ಕರಿಸಿ ಪ್ರಕಟಿಸಲಾಗುವುದು. ಯಾವುದೇ ಕಾರಣಕ್ಕೂ ವಿದ್ಯಾರ್ಥಿಗಳಿಗೆ ಈ ಮೊದಲು ಪಡೆದ ಅಂಕಗಳನ್ನು ಮರು ಸ್ಥಾಪಿಸಲು ಅವಕಾಶವಿರುವುದಿಲ್ಲವೆಂದು ಇಲಾಖೆ ಸ್ಪಷ್ಟಪಡಿಸಿದೆ.

ಡ್ರೖೆವರ್ ಮಗಳು 4ನೇ ರ‍್ಯಾಂಕ್

ಕುಂದಾಪುರ: ತಂದೆ ಶಾಲಾ ಬಸ್ಚಾಲಕನಾಗಿ ದುಡಿಯುತ್ತಿರುವ ಶಾಲೆಯಲ್ಲೇ ಓದುತ್ತಿರುವ ವಿದ್ಯಾರ್ಥಿನಿಗೆ ವಿಜ್ಞಾನ ವಿಭಾಗದಲ್ಲಿ ರಾಜ್ಯಕ್ಕೆ ನಾಲ್ಕನೇ ಸ್ಥಾನ ಲಭಿಸಿದೆ.

ಕುಂದಾಪುರ ವೆಂಕಟ ರಮಣ ಪಿಯು ಕಾಲೇಜು ಪಿಸಿಎಂಸಿ ವಿದ್ಯಾರ್ಥಿನಿ ಸತ್ಯಶ್ರೀ ರಾವ್ 593 ಅಂಕ ಪಡೆದಿದ್ದಾರೆ. ಇಂಗ್ಲಿಷ್ನಲ್ಲಿ 93 ಅಂಕ, ಉಳಿದಿದ್ದರಲ್ಲಿ 100ರ ಸಾಧನೆ. ಅಂಕದಕಟ್ಟೆ ನಾಗೇಶ್ ರಾವ್-ಲಲಿತಾ ಎನ್.ರಾವ್ ದಂಪತಿಯ ಇಬ್ಬರು ಹೆಣ್ಣುಮಕ್ಕಳಲ್ಲಿ ಸತ್ಯಶ್ರೀ ಎರಡನೆಯವಳು. ಅಕ್ಕ ಶೈಲಶ್ರೀ ಕುಂದಾಪುರ ಭಂಡಾರ್ಕಾರ್ಸ್ ಕಾಲೇಜು ಬಿಎಸ್ಸಿ ವಿದ್ಯಾರ್ಥಿನಿ. ‘ದಿನಕ್ಕೆ ಮೂರು ಗಂಟೆ ಓದುತ್ತಿದ್ದೆ. ಓದಿನೊಟ್ಟಿಗೆ ತ್ರೋಬಾಲ್ ಹಾಗೂ ಡ್ಯಾನ್ಸ್ ಬಗ್ಗೆಯೂ ಗಮನ ಹರಿಸುತ್ತಿದ್ದೆ. ಮನೆಯಲ್ಲಿ ಓದಲು ಒತ್ತಡ ಹೇರುತ್ತಿರಲಿಲ್ಲ. ಫಲಿತಾಂಶ ಖುಷಿ ತಂದಿದೆ. ಇಂಜಿನಿಯರ್ ಆಗಬೇಕೆಂಬ ಕನಸಿದೆ’ ಎಂದು ಸತ್ಯಶ್ರೀ ಪ್ರತಿಕ್ರಿಯಿಸಿದ್ದಾರೆ.

ಬಡತನದಲ್ಲಿ ಅರಳಿದ ಪ್ರತಿಭೆ

ಪುತ್ತೂರು: ‘ತಂದೆ ಮರಣ ಹೊಂದಿದ ದಿನದಿಂದ ನನ್ನ ಶಿಕ್ಷಣಕ್ಕೆ ಬೆಳಕಾಗಿದ್ದೇ ತಾಯಿ. ಬೀಡಿ ಕಟ್ಟಿ ವಿದ್ಯಾರ್ಜನೆ ಮಾಡಿಸಿದ್ದಾರೆ!’ ಇದು ಪಿಯು ವಾಣಿಜ್ಯ ವಿಭಾಗದಲ್ಲಿ 592 ಅಂಕ ಪಡೆದ ಬಂಟ್ವಾಳದ ಸಜಿಪ ನಡು ದಿ.ರಾಘವ- ಶಶಿಕಲಾ ದಂಪತಿ ಪುತ್ರ, ಪುತ್ತೂರು ವಿವೇಕಾನಂದದ ಪಿಯು ಕಾಲೇಜು ವಿದ್ಯಾರ್ಥಿ ಶಶಾಂಕ್ ಮನದಾಳದ ಮಾತು. 2 ವರ್ಷ ಹಿಂದೆ ತಂದೆಯನ್ನು ಕಳೆದುಕೊಂಡಾಗ ಆರ್ಥಿಕ ಸ್ಥಿತಿ ಹದಗೆಟ್ಟಿತ್ತು. ತಾಯಿ ಬೆಂಬಲದಿಂದ ಓದು ಸಾಧ್ಯವಾಗಿದೆ ಎಂದಿದ್ದಾನೆ ಶಶಾಂಕ್.

ಟಾಕೀಸ್ ಟಿಕೆಟ್ ವಿತರಕನ ಮಗ ಟಾಪರ್

ಚಿತ್ರದುರ್ಗ: ಟಾಕೀಸ್ನಲ್ಲಿ ಟಿಕೆಟ್ ವಿತರಿಸುವ ಬಿ.ಟಿ.ಪರಶುರಾಂ ಅವರ ಮಗ ಪಿಯುಸಿಯಲ್ಲಿ ಚಿತ್ರದುರ್ಗಕ್ಕೆ ಟಾಪರ್ ಆಗಿ ಹೊರಹೊಮ್ಮಿದ್ದಾನೆ. ನಗರದ ಎಸ್ಆರ್ಎಸ್ ಪಿಯು ಕಾಲೇಜಿನ ವಿಜ್ಞಾನ ವಿಭಾಗದ ವಿದ್ಯಾರ್ಥಿ ಪಿ.ಬಿ.ರಿತಿನ್ 585 ಅಂಕಗಳಿಸಿ ಜಿಲ್ಲೆಗೆ ಕೀರ್ತಿ ತಂದಿದ್ದಾನೆ. ರಸಾಯನಶಾಸ್ತ್ರ ಹಾಗೂ ಜೀವಶಾಸ್ತ್ರದಲ್ಲಿ ನೂರಕ್ಕೆ ನೂರು, ಗಣಿತದಲ್ಲಿ 97, ಭೌತಶಾಸ್ತ್ರದಲ್ಲಿ 99, ಕನ್ನಡದಲ್ಲಿ 96, ಇಂಗ್ಲೀಷ್ನಲ್ಲಿ 94 ಅಂಕ ಗಳಿಸಿದ್ದಾನೆ. ಎಸ್ಎಸ್ಎಲ್ಸಿಯಲ್ಲಿ 623 ಅಂಕಗಳಿಸಿ ರಾಜ್ಯಕ್ಕೆ ಮೂರನೇ ಸ್ಥಾನಗಳಿಸಿದ್ದ. ‘ಏಕಾಗ್ರತೆಯಿಂದ ಪಾಠ ಕೇಳಿದರೆ ಉತ್ತಮ ಅಂಕ ಗಳಿಸಬಹುದು. ಇದೇ ನನ್ನ ಯಶಸ್ಸಿನ ಮಂತ್ರವಾಗಿದ್ದು, ಮುಂದೆ ಮೆಡಿಕಲ್ ಓದುವ ಆಸೆಯಿದೆ’ ಎನ್ನುತ್ತಾನೆ ರಿತಿನ್.

ಇಟ್ಟಿಗೆ ಭಟ್ಟಿ ಕಾರ್ವಿುಕನ ಮಗಳು ಸ್ವಾತಿ ಟಾಪರ್

ಬಳ್ಳಾರಿ/ಕೊಟ್ಟೂರು: ಕೊಟ್ಟೂರಿನ ಇಂದು ಪಿಯು ಕಾಲೇಜು ಪಿಯುಸಿ ದ್ವಿತೀಯ ವರ್ಷ ಕಲಾ ವಿಭಾಗದ ಫಲಿತಾಂಶದಲ್ಲಿ ಮತ್ತೆ ಮಿಂಚಿದೆ. ಇಂದು ಕಾಲೇಜಿನ ಮೂವರು ವಿದ್ಯಾರ್ಥಿಗಳು ಕಲಾ ವಿಭಾಗದಲ್ಲಿ ರಾಜ್ಯದ ಟಾಪರ್ಗಳಾಗಿ ಹೊರಹೊಮ್ಮಿದ್ದಾರೆ. ಮೂವರು ಟಾಪರ್ಗಳು ಬಡತನದ ಹಿನ್ನೆಲೆಯಿಂದ ಬಂದವರು ಎಂಬುದು ಗಮನಾರ್ಹ.

ಇಂದು ಕಾಲೇಜಿನ ಎಸ್.ಸ್ವಾತಿ 595 ಅಂಕಗಳೊಂದಿಗೆ ರಾಜ್ಯಕ್ಕೆ ಮೊದಲ ಸ್ಥಾನ ಪಡೆದಿದ್ದಾರೆ. 593 ಅಂಕಗಳೊಂದಿಗೆ ಎಸ್.ವಿ.ರಮೇಶ್ ಎರಡನೇ ಸ್ಥಾನ ಹಾಗೂ 588 ಅಂಕಗಳನ್ನು ಪಡೆದಿರುವ ಕಾವ್ಯಾಂಜಲಿ ಮೂರನೇ ಸ್ಥಾನ ಪಡೆದಿದ್ದಾರೆ.

ಕುಟುಂಬಕ್ಕೆ ನೆರವಾಗುತ್ತಿದ್ದ ಎಸ್.ಸ್ವಾತಿ: ಕಲಾ ವಿಭಾಗದ ಟಾಪರ್ ಎಸ್.ಸ್ವಾತಿ ಪಾಲಕರು ಅವಿದ್ಯಾವಂತರು. ತಂದೆ ಕೊಟ್ಯಪ್ಪ ಇಟ್ಟಿಗೆ ಭಟ್ಟಿ ಕಾರ್ವಿುಕ. ಕೊಟ್ಟೂರು ಹತ್ತಿರದ ರಾಂಪುರ ಗ್ರಾಮದ ಸ್ವಾತಿ ರಜೆ ಸಂದರ್ಭದಲ್ಲಿ ಹೂವು ಕಟ್ಟಿ ಕುಟುಂಬಕ್ಕೆ ನೆರವಾಗುತ್ತಿದ್ದಳು.

ರಾಜ್ಯಕ್ಕೆ ನಂ.1 ಆದ ಕೂಲಿಕಾರನ ಮಗಳು ಸ್ವಾತಿ ಯಶೋಗಾಥೆ

ಬಳ್ಳಾರಿ: ಹೆಚ್ಚು ಅಂಕಗಳು ಬರಬಹುದೆಂದು ಅಂದುಕೊಂಡಿದ್ದೆ, ಹೊರತು ರಾಜ್ಯಕ್ಕೆ ಪ್ರಥಮ ಸ್ಥಾನದ ನಿರೀಕ್ಷೆ ಮಾಡಿರಲಿಲ್ಲ. ಆದರೆ ನಾನು ರಾಜ್ಯಕ್ಕೇ ನಂ.1 ಎಂದು ಕಾಲೇಜಿನಿಂದ ವಿಷಯ ತಿಳಿದಾಗ ತುಂಬಾ ಖುಷಿಯಾಯ್ತು ಎಂದು ದ್ವಿತೀಯ ಪಿಯು ಕಲಾ ವಿಭಾಗದ ಟಾಪರ್‌‌ ಎಸ್. ಸ್ವಾತಿ ‘ಈನಾಡು ಇಂಡಿಯಾ ಕನ್ನಡ’ ಜೊತೆ ಸಂತಸ ಹಂಚಿಕೊಂಡಳು.

ಜಿಲ್ಲೆಯ ಕೊಟ್ಟೂರು ತಾಲೂಕಿನ ರಾಂಪುರ ಗ್ರಾಮದ ಕೂಲಿಕಾರರ ಮನೆಯ ಮಗಳು ಸ್ವಾತಿ. ದ್ವಿತೀಯ ಪಿಯು ಕಲಾ ವಿಭಾಗದಲ್ಲಿ 595 ಅಂಕ ಪಡೆದಿದ್ದಾರೆ.

ಸ್ವಾತಿ ಬಡತನದಲ್ಲಿಯೇ ಬೆಳೆದವಳು. ಮನೆಯಲ್ಲಿ ಕಷ್ಟವಿದ್ದರೂ ಎಸ್‍ಎಸ್‍ಎಲ್‍ಸಿ ನಂತರ ಓದಿಗೆ ವಿರಾಮ ಹೇಳದೇ ಸತತ ಪರಿಶ್ರಮದ ಫಲವಾಗಿ ರಾಜ್ಯಕ್ಕೆ ನಂ.1 ಸ್ಥಾನ ಪಡೆದಿದ್ದಾಳೆ. ಅಲ್ಲದೇ ಕಾಲೇಜಿಗೆ 4ನೇ ವರ್ಷದಲ್ಲಿಯೂ ಟಾಪ್ ಸ್ಥಾನ ಸಿಗಲು ಕಾರಣವಾಗಿದ್ದಾಳೆ. ಕೊಟ್ಟೂರಿನಿಂದ 8ಕಿಮೀ ದೂರದ ರಾಂಪುರ ಗ್ರಾಮದಿಂದ ಪ್ರತಿನಿತ್ಯ ಸಂಚರಿಸಿ ವಿದ್ಯಾಭ್ಯಾಸ ಮಾಡಿದವಳು. ಓದಿನ ನಡುವೆಯೂ ಮನೆಯಲ್ಲಿಯೇ ಹೂ ಕಟ್ಟಿ ದಿನಕ್ಕೆ 40ರೂ. ಸಂಪಾದಿಸಿ ತಂದೆ ತಾಯಿಗೆ ಆಸರೆಯಾದವಳು.

ತಂದೆ ಎಸ್.ಕೋಟೆಪ್ಪ ಇಟ್ಟಿಗೆ ಭಟ್ಟಿಯಲ್ಲಿ ಕೂಲಿಕಾರ, ತಾಯಿ ರತ್ನಮ್ಮ ಕೃಷಿ ಕೆಲಸಕ್ಕೆ ಹೋಗುತ್ತಾರೆ. ಇವರ ಕೂಲಿಯಿಂದ ಸಿಗುವ ಹಣವೇ ಜೀವನಕ್ಕೆ ಆಧಾರ. ಆರ್ಥಿಕವಾಗಿ ಕಷ್ಟವಿದ್ದರೂ ಹಿರಿಯ ಮಗಳು ಸ್ವಾತಿಗೆ ಶಿಕ್ಷಣ ಕೊಡಿಸಿದ್ದಾರೆ.

10ನೇ ತರಗತಿಯಲ್ಲಿ ಶೇಕಡಾ 86ರಷ್ಟು ಅಂಕ ಪಡೆದಿದ್ದ ಸ್ವಾತಿ ಪಿಯು ಓದುವ ಆಸೆಯನ್ನು ವ್ಯಕ್ತಪಡಿಸಿದಾಗ ಮಗಳಿಗೆ ನಿರಾಸೆ ಮಾಡದೆ ಹಣ ಹೊಂದಿಸಿ ಕೊಟ್ಟೂರಿನ ಇಂದು ಪಿಯು ಕಾಲೇಜಿನಲ್ಲಿ ಪ್ರವೇಶ ಪಡೆದಿದ್ದರು. ಪರೀಕ್ಷೆ ಹತ್ತಿರ ಬರುತ್ತಿದ್ದಂತೆ ಮಗಳು ಹೆಚ್ಚು ಊಟ ನಿದ್ದೆ ಮಾಡದೇ ಓದುತ್ತಿರುವುದು ಇವರಲ್ಲಿ ಆತಂಕ ಹುಟ್ಟಿಸಿತ್ತು. ಉನ್ನತ ಸ್ಥಾನದಲ್ಲಿ ತೇರ್ಗಡೆ ಹೊಂದುವ ಬಯಕೆ ಇತ್ತಾದರೂ ಮನದಲ್ಲಿದ್ದ ಆತಂಕದಿಂದ ಕೆಲವೊಮ್ಮೆ ಕಣ್ಣೀರು ಹಾಕುತ್ತಿದ್ದಳು ಎಂದು ತಾಯಿ ರತ್ನಮ್ಮ ಮಗಳ ಸಾಧನೆ ವರ್ಣಿಸಿದರು.

ಮೊದಲಿನಿಂದಲೂ ಚೆನ್ನಾಗಿ ಓದುತ್ತಿದ್ದ ಮಗಳಿಗೆ ನಿರಾಸೆ ಮಾಡಬಾರದೆಂದು ಕಷ್ಟವಿದ್ದರೂ ಓದಿಸಿದ್ದು ಈಗ ಸಾರ್ಥಕವಾಗಿದೆ ಎಂದು ತಂದೆ ಕೋಟೆಪ್ಪ ಹೇಳಿದರು.

ಶಿಕ್ಷಕಿ ಮಗ ರಮೇಶ್: ದ್ವಿತೀಯ ಸ್ಥಾನ ಪಡೆದಿರುವ ರಮೇಶ್ ಸಿರಗುಪ್ಪ ತಾಲೂಕಿನ ಹಾಗಲೂರು ಹೊಸಹಳ್ಳಿ ಗ್ರಾಮದವರು. ತಂದೆಗೆ ಒಂದು ಎಕರೆ ಕೃಷಿ ಜಮೀನಿದ್ದು, ತಾಯಿ ಅಂಗನವಾಡಿ ಶಿಕ್ಷಕಿಯಾಗಿದ್ದಾರೆ.

ಟೇಲರ್ ಮಗಳು ಕಾವ್ಯಾಂಜಲಿ: ಕಲಾ ವಿಭಾಗದ ಮೂರನೇ ಟಾಪರ್ ಕಾವ್ಯಾಂಜಲಿ ಕುರುಗೋಡು ತಾಲೂಕು ಬಾದನಹಟ್ಟಿ ಗ್ರಾಮದವರು. ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣವನ್ನು ಬಾದನಹಟ್ಟಿಯಲ್ಲಿ ಪೂರ್ಣಗೊಳಿಸಿರುವ ಕಾವ್ಯಾಂಜಲಿ ಕೊಟ್ಟೂರಿನಲ್ಲಿ ಬಿಸಿಎಂ ಹಾಸ್ಟೆಲ್ನಲ್ಲಿದ್ದು ಪಿಯುಸಿ ವಿದ್ಯಾಭ್ಯಾಸ ಮಾಡಿದ್ದಾರೆ. ತಂದೆ ಪರಮೇಶ್ ಹಾಗೂ ತಾಯಿ ಲಕ್ಷ್ಮಿ ವೃತ್ತಿಯಲ್ಲಿ ಟೇಲರ್ ಆಗಿದ್ದಾರೆ.

ಕೈಹಿಡಿದ ವಿದ್ಯಾರ್ಥಿ ಮಿತ್ರ

ಚಿತ್ರದುರ್ಗ: ಹೋಟೆಲ್ ನಡೆಸುತ್ತ ಜೀವನ ನಡೆಸುವ ದಂಪತಿಯ ಮಗಳಿಗೆ ವಿದ್ಯಾರ್ಥಿ ಮಿತ್ರ ಕೈ ಹಿಡಿದು ಸಾಧನೆ ಕಿರೀಟ ಮೂಡಿಸಿದೆ! ನಗರದ ಡಾನ್ಬಾಸ್ಕೋ ಪಿಯು ಕಾಲೇಜಿನ ಶ್ರೀವಿದ್ಯಾ ವಿಜ್ಞಾನ ವಿಭಾಗದಲ್ಲಿ 578 ಅಂಕ ಗಳಿಸಿದ್ದಾಳೆ. ‘ಕಾಲೇಜಿನ ಪಾಠ, ದಿನಕ್ಕೆ ಎರಡೂವರೆ ಗಂಟೆ ಮನೆಯಲ್ಲಿ ಅಭ್ಯಾಸದ ಜತೆಗೆ ನಿತ್ಯ ವಿಜಯವಾಣಿ ವಿದ್ಯಾರ್ಥಿ ಮಿತ್ರ ಓದುತ್ತಿದ್ದರಿಂದ ನನ್ನ ಸಾಧನೆ ಹಾದಿ ಸುಗಮವಾಯಿತು’ ಎಂದು ಶ್ರೀವಿದ್ಯಾ ಹರ್ಷದಿಂದ ಹೇಳಿದರು. ತಂದೆ ಮಹಾಬಲ, ತಾಯಿ ಭಾಗೀರಥಿ ಹೋಟೆಲ್ ನಡೆಸುತ್ತಿದ್ದಾರೆ.

ಬಡತನದಲ್ಲಿ ಸಿಹಿ ಸಾಧನೆ

ಧಾರವಾಡ: ಮನೆಯಲ್ಲಿ ಕಿತ್ತು ತಿನ್ನುವ ಬಡತನವಿದ್ದರೂ, ತಂದೆಯ ಶ್ರಮಕ್ಕೆ ಬೆಲೆಕೊಟ್ಟು ನಿಷ್ಠೆಯಿಂದ ಓದಿದ ಗರಗ ಗ್ರಾಮದ, ವೈ.ಬಿ. ಅಣ್ಣಿಗೇರಿ ಕಾಲೇಜಿನ ವಿದ್ಯಾರ್ಥಿ ಬಸವರಾಜ ಮಹಾದೇವ ಸವದತ್ತಿ ವಿಜ್ಞಾನ ವಿಭಾಗದಲ್ಲಿ ಶೇ.94.66 ಅಂಕ ಪಡೆದು ಸಾಧನೆ ಮಾಡಿದ್ದಾರೆ.

‘ಪಿಯು ದ್ವಿತೀಯ ಪರೀಕ್ಷೆಯಲ್ಲಿ ಹೆಚ್ಚಿನ ಅಂಕ ಪಡೆಯಲು ವಿದ್ಯಾರ್ಥಿ ಮಿತ್ರ ನೆರವಾಗಿದೆ. ವಿಜಯವಾಣಿ ಹೊರತರುತ್ತಿರುವ ವಿದ್ಯಾರ್ಥಿ ಮಿತ್ರ ಅನೇಕ ವಿದ್ಯಾರ್ಥಿಗಳಿಗೆ ಅನುಕೂಲವಾಗಿದೆ’ ಎಂದು ಬಸವರಾಜ ಅನಿಸಿಕೆ ಹಂಚಿಕೊಂಡಿದ್ದಾರೆ. ಮುಂದೆ ಏರೋನ್ಯಾಟಿಕ್ ಇಂಜಿನಿಯರಿಂಗ್ ಕಲಿಯುವ ಆಸೆ ಹೊಂದಿದ್ದಾರೆ.

ಕಾರ್ವಿುಕನ ಮಗನ ಸಾಧನೆ

ಬೀದರ್: ಕೃಷಿ ಕೂಲಿಕಾರ್ವಿುಕನ ಮಗ ದ್ವಿತೀಯ ಪಿಯುಸಿ ವಿಜ್ಞಾನದಲ್ಲಿ ಶೇ.96.5 ಅಂಕ ಗಳಿಸಿ ಪ್ರತಿಭೆ ಪ್ರದರ್ಶಿಸಿದ್ದಾನೆ. ಇಲ್ಲಿನ ಶಾಹೀನ್ ಪದವಿಪೂರ್ವ ವಿಜ್ಞಾನ ಕಾಲೇಜಿನ ಮಹೇಶ ರಾಜಪ್ಪ ಕೋಟೆ ಈ ಸಾಧನೆ ಮಾಡಿದ್ದು, ಕಾಲೇಜಿಗೆ ಟಾಪರ್ ಆಗಿ ಹೊರಹೊಮ್ಮಿದ್ದಾನೆ. ಔರಾದ್ ತಾಲೂಕಿನ ತೋರಣಾ ಗ್ರಾಮದ ಈತ 579 ಅಂಕ ಗಳಿಸಿದ್ದಾನೆ. ಮುಂದೆ ವೈದ್ಯನಾಗಿ ಸಮಾಜಸೇವೆ ಮಾಡಬೇಕೆಂಬ ಕನಸಿದೆ.

ಓದು ಹಾಗೂ ಇತರ ಚಟುವಟಿಕೆ ಗಳ ನಡುವೆ ಸಮತೋಲನ ಕಾಪಾಡಿಕೊಂಡಿದ್ದೆ. ವಿರಾಮದ ವೇಳೆಯಲ್ಲಿ ಅಡುಗೆ ಮಾಡುತ್ತಿದ್ದೆ, ಚಿತ್ರ ಬಿಡಿಸುತ್ತಿದ್ದೆ. ಮುಂದೆ ಸಿಎ ಮಾಡಬೇಕೆಂಬ ಹಂಬಲವಿದೆ. ಅದಕ್ಕಾಗಿ ಕೋಚಿಂಗ್ಗೂ ಹೋಗುತ್ತಿದ್ದೇನೆ.

| ವರ್ಷಿಣಿ ಎಂ.ಭಟ್ ವಿದ್ಯಾ ಮಂದಿರ ಪಿಯು ಕಾಲೇಜ್, ಮಲ್ಲೇಶ್ವರಂ ಬೆಂಗಳೂರು ವಾಣಿಜ್ಯ ವಿಭಾಗದಲ್ಲಿ ಪ್ರಥಮ

ಆಳ್ವಾಸ್ಗೆ ರ‍್ಯಾಂಕ್ ಗರಿ

ಮೂಡುಬಿದಿರೆ: ಗುಣಮಟ್ಟದ ಶಿಕ್ಷಣದ ಮೂಲಕ ಗುರುತಿಸಿಕೊಂಡಿ ರುವ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಆಳ್ವಾಸ್ ಪದವಿಪೂರ್ವ ಕಾಲೇಜು ಶೇ.98.95 ಫಲಿತಾಂಶದ ಮೂಲಕ ಸಾಧನೆ ಮೆರೆದಿದೆ.

ವಿಜ್ಞಾನ ಮತ್ತು ವಾಣಿಜ್ಯ ವಿಭಾಗದಲ್ಲಿ ಟಾಪ್ ಹತ್ತರ ಸ್ಥಾನದಲ್ಲಿ ಒಟ್ಟು 36 ಸ್ಥಾನಗಳನ್ನು ಆಳ್ವಾಸ್ ವಿದ್ಯಾರ್ಥಿಗಳು ಪಡೆಯುವ ಮೂಲಕ ರಾಜ್ಯದಲ್ಲೇ ಗರಿಷ್ಠ ಸ್ಥಾನ ಪಡೆದಿರುವ ಹೆಗ್ಗಳಿಕೆಗೆ ಪಾತ್ರವಾಗಿದೆ. ಆಳ್ವಾಸ್ನ ಒಟ್ಟು 5825 ಮಂದಿ ಪರೀಕ್ಷೆ ಬರೆದಿದ್ದು 5764 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ.

ಶುಭಾಂಕರ್ ಚೌಗಲೆ 594 ಅಂಕಗಳೊಂದಿಗೆ ದ್ವಿತೀಯ ಸ್ಥಾನ, ವಾಣಿಜ್ಯ ವಿಭಾಗದಲ್ಲಿ ಚೇತನ್ ಪೈ 593 ಅಂಕದೊಂದಿಗೆ ರಾಜ್ಯಕ್ಕೆ ತೃತೀಯ ಸ್ಥಾನ ಹಾಗೂ ಲಕ್ಷ್ಮಿನಾರಾಯಣ ರೆಡ್ಡಿ 592 ಅಂಕಗಳೊಂದಿಗೆ ಚತುರ್ಥ ಸ್ಥಾನ ಮತ್ತು ಭರತ್ ಗಜಾನನ ಹೆಗಡೆ ಹಾಗೂ ಪೃಥ್ವಿ ಗಣಪತಿ ಹೆಗಡೆ 591 ಅಂಕ ಗಳಿಸಿ ರಾಜ್ಯಕ್ಕೆ 5ನೇ ಸ್ಥಾನ ಪಡೆದಿದ್ದು, ವಾಣಿಜ್ಯ ವಿಭಾಗದಲ್ಲಿ ರಾಜ್ಯಮಟ್ಟದ ಮೊದಲ ಹತ್ತು ಸ್ಥಾನಗಳಲ್ಲಿ ಐದನ್ನು ಆಳ್ವಾಸ್ ಪಡೆದುಕೊಂಡಿದೆ.

ವಿಜ್ಞಾನ ವಿಭಾಗದಲ್ಲಿ ಮಿಲಿಷಾ ರೊಡ್ರಿಗಸ್ 593 ಅಂಕದೊಂದಿಗೆ ಚತುರ್ಥ ಸ್ಥಾನ ಹಾಗೂ ವರ್ಷಿಣಿ ಕೆ.ಎಸ್, ಹರೀಶ್ ಡಿ.ಜಿ, ಶ್ವೇತಾ ಹೆಗಡೆ ತಲಾ 592 ಅಂಕ ಗಳಿಸಿ ರಾಜ್ಯಕ್ಕೆ 5ನೇ ಸ್ಥಾನ ಪಡೆದುಕೊಂಡಿದ್ದಾರೆ.

ಮಹಾನುಭಾವರ ಜಯಂತಿಗಳು.

.

.ಶ್ರೀ ಕನಕದಾಸರು[ಮೂಲ ಹೆಸರು -ತಿಮ್ಮಪ್ಪನಾಯಕ] (1508-1606) ಕರ್ನಾಟಕದಲ್ಲಿ ೧೫-೧೬ ನೆಯ ಶತಮಾನಗಳಲ್ಲಿ ಜನಪ್ರಿಯವಾದ ಭಕ್ತಿ ಪಂಥದ ಮುಖ್ಯ ಹರಿದಾಸರಲ್ಲಿ ಒಬ್ಬರು. ದಾಸ ಪರಂಪರೆಯಲ್ಲಿ ಬರುವ 250ಕ್ಕೂ ಹೆಚ್ಚು ದಾಸರಲ್ಲಿ ಕನಕದಾಸರೊಬ್ಬರೇ ಶೂದ್ರದಾಸರು. ಹಾಗೆಯೇ ಕನ್ನಡ ಭಾಷೆಯ ಪ್ರಸಿದ್ಧ ಕೀರ್ತನಕಾರರು, ಮತ್ತು ಪುರಂದರದಾಸರೊ೦ದಿಗೆ ಕರ್ನಾಟಕ ಸಂಗೀತದ ಮೂಲಭೂತ ಸಿದ್ಧಾಂತಗಳಿಗೆ ಕಾಣಿಕೆಯನ್ನಿತ್ತವರು. ಕನಕದಾಸರು ಮತ್ತು ಪುರಂದರದಾಸರನ್ನು ಕರ್ನಾಟಕ ಕೀರ್ತನ ಸಾಹಿತ್ಯದ ಅಶ್ವಿನಿ ದೇವತೆಗಳೆಂದು ಬಣ್ಣಿಸಲಾಗಿದೆ. ಕನಕದಾಸರು ದಂಡನಾಯಕರಾಗಿದ್ದು ಯುದ್ದವೊಂದರಲ್ಲಿ ಸೋತ ಅವರಿಗೆ ಉಪರತಿ/ವೈರಾಗ್ಯ ಉಂಟಾಗಿ, ಹರಿಭಕ್ತರಾದರಂತೆ.

ಕನಕದಾಸರು

ಶ್ರೀ ಕನಕ ದಾಸರು
ಜನನ
ತಿಮ್ಮಪ್ಪ ನಾಯಕ
1487
ಬಾಡ, ಹಾವೇರಿ ಜಿಲ್ಲೆ,ಸಿಗ್ಗಾವಿ ತಾಲೂಕಿನ ಕರ್ನಾಟಕ ರಾಜ್ಯ, ಭಾರತ
ಮರಣ
1609
ಬಾಡ
ವೃತ್ತಿ
ಹರಿದಾಸರು, ಕೀರ್ತನಕಾರರು, ಕವಿ
ಪ್ರಕಾರ/ಶೈಲಿ
ಕೀರ್ತನೆ, ಉಗಾಭೋಗ, ಮುಂಡಿಗೆ, ಕಾವ್ಯ
ಜೀವನ
ಜನನ
ಕನಕದಾಸರು ಹಾವೇರಿ ಜಿಲ್ಲೆಯ ಶಿಗ್ಗಾಂವಿ ತಾಲೂಕಿನ ಬಾಡ ಗ್ರಾಮದಲ್ಲಿ 1509ರಲ್ಲಿ ಕುರುಬ ಜನಾಂಗಕ್ಕೆ ಸೇರಿದ ಬಚ್ಚಮ್ಮ ಮತ್ತು ಬೀರಪ್ಪನಾಯಕ ಎಂಬ ದಂಪತಿಗಳ ಮಗನಾಗಿ ಜನಿಸಿದರು. ಕನಕದಾಸರು ಬರಿ ಕುರುಬ ಜಾತಿಗೆ ಸೀಮಿತವಾದ ಭಕ್ತರಲ್ಲ ಎಲ್ಲಾ ಜಾತಿಗಳಿಗೆ ಬೇಕಾದವರು. 15-16 ನೆಯ ಶತಮಾನದಲ್ಲೇ ಜಾತಿ ವ್ಯವಸ್ಥೆಯ ಬಗ್ಗೆ ಸಮರ ಸಾರಿದ ಭಕ್ತ ಎಂದರೆ ಕನಕದಾಸರು ಎಂದರೆ ತಪ್ಪಾಗಲಾರದು. ಕನಕದಾಸರು ಅನೇಕ ತತ್ವ ಪದಗಳನ್ನು ರಚಿಸಿದ್ದಾರೆ.

ಐತಿಹ್ಯ
ಸುಮಾರು ಐದು ನೂರು ವರ್ಷಗಳ ಹಿಂದಿನ ಮಾತು. ವಿಜಯನಗರ ಸಾಮ್ರಾಜ್ಯದಲ್ಲಿದ್ದ ಬಂಕಾಪುರ ಪ್ರಾಂತದ ಮುಖ್ಯಪಟ್ಟಣದ ಹೆಸರು ಬಾಡ ಎಂದು. ವಿಜಯನಗರದಿಂದ ಗೋವಾಕ್ಕೆ ಹೋಗುವ ಹೆದ್ದಾರಿ. ಈ ಬಾಡದಿಂದಲೇ ಹಾಯ್ದು ಹೋಗುತ್ತಿತ್ತು. ಬಾಡ ಒಳ್ಳೇ ಆಯಕಟ್ಟಿನ ಸ್ಥಳ. ಈ ಬಂಕಾಪುರ ಪ್ರಾಂತಕ್ಕೆ ಡಣ್ಣಾಯಕ, ಬೀರಪ್ಪನಾಯಕ. (ಡಣ್ಣಾಯಕ ಎಂದರೆ ಆಯಕಟ್ಟಿನ ಸ್ಥಳದಲ್ಲಿ ಕಾದಿಟ್ಟ ಸೈನ್ಯದ ದಳಕ್ಕೆ ಸೇನಾಪತಿ ಎಂದು ನೇಮಿಸಲ್ಪಟ್ಟವನು) ಬೀರಪ್ಪನ ಹೆಂಡತಿ ಬಚ್ಚಮ್ಮ.

ಬೀರಪ್ಪನಾಯಕನಿಗೆ ತಿರುಪತಿ ತಿಮ್ಮಪ್ಪನಲ್ಲಿ ಬಹು ನಂಬಿಕೆ. ದಕ್ಷಿಣದಲ್ಲಿ ಸುಮಾರು ಒಂಬೈನೂರು ವರ್ಷಗಳ ಹಿಂದೆ ಶ್ರೀರಾಮಾನುಜಾಚಾರ್ಯರೆಂಬ ದೊಡ್ಡ ಗುರುಗಳು ಪ್ರಸಿದ್ಧರಾಗಿದ್ದರು. ಅವರು ಸ್ಥಾಪಿಸಿದ ಪಂಥಕ್ಕೆ ಶ್ರೀವೈಷ್ಣವ ಮತವೆಂದು ಹೆಸರು. ಡಣ್ಣಾಯಕ ಬೀರಪ್ಪನಾಯಕ ಮತ್ತು ಆತನ ಮಡದಿ ಬಚ್ಚಮ್ಮ ಇವರು ಶ್ರೀ ವೈಷ್ಣವ ಮತಕ್ಕೆ ಶರಣು ಹೋದ ಕುರುಬರು. ಅಂದಿನಿಂದ ಇವರು ಸಹ ತಿರುಪತಿ ವಂಕಟೇಶ್ವರ ಸ್ವಾಮಿಯನ್ನೇ ತಮ್ಮ ಆರಾಧ್ಯ ದೈವವನ್ನಾಗಿ ಮಾಡಿಕೊಂಡರು.

ಬೀರಪ್ಪ ನಾಯಕ ಮತ್ತು ಬಚ್ಚಮ್ಮರಿಗೆ ಅನೇಕ ದಿನಗಳಿಂದ ಒಂದು ಹಂಬಲವಿತ್ತು. ಅದೇನೆಂದರೆ, ತಮಗೆ ಒಬ್ಬ ಕುಲದೀಪಕನಾದ ಮಗ ಜನಿಸಬೇಕು ಎಂದು. “ವಂಶೋದ್ಧಾರಕನಾದ ಒಬ್ಬ ಮಗನನ್ನು ಕರುಣಿಸು” ಎಂದು ಈ ದಂಪತಿಗಳು ತಿರುಪತಿ ತಿಮ್ಮಪ್ಪನಿಗೆ ಹರಕೆ ಹೊತ್ತಿದ್ದರು. ಅವರ ಆಸೆ ಫಲಿಸಿತು. ಬೀರಪ್ಪ ನಾಯಕ ಮತ್ತು ಬಚ್ಚಮ್ಮರಿಗೆ ಒಬ್ಬ ಮಗ ಜನಿಸಿದ. ತಂದೆ ತಾಯಿಗಳಿಗೆ ಆನಂದವೋ ಆನಂದ. ತಿರುಪತಿ ತಿಮ್ಮಪ್ಪನ ಆಶೀರ್ವಾದ ಎಂದು ಅವರು ತಮ್ಮ ಮಗುವಿಗೆ “ತಿಮ್ಮಪ್ಪ” ಎಂದೇ ನಾಮಕರಣ ಮಾಡಿದರು. ತಿಮ್ಮಪ್ಪ ಜನಿಸಿದ ಕಾಲ ಇಂತದ್ದೇ ಎಂದು ತಿಳಿಯದು; ಹದಿನೈದನೇಯ ಶತಮಾನದ ಕೊನೆಯ ವರ್ಷಗಳಲ್ಲಿ ಹುಟ್ಟಿದರು ಎಂದು ಹೇಳಬಹುದು.

ತಿಮ್ಮಪ್ಪನಾಯಕ ಒಬ್ಬ ಸೇನಾಧಿಪತಿಯ ಮಗನಾಗಿ ಜನಿಸಿದನಷ್ಟೆ. ಬಾಲ್ಯದಲ್ಲಿಯೇ ಅಕ್ಷರಾಭ್ಯಾಸ, ವ್ಯಾಕರಣಗಳ ಜೊತೆಗೆ ಕತ್ತಿವರಸೆ, ಕುದುರೆ ಸವಾರಿಯನ್ನೂ ಕಲಿತ. ಕೆಲವು ವರ್ಷಗಳಲ್ಲಿ ಬೀರಪ್ಪನಾಯಕ ಮತ್ತು ಬಚ್ಚಮ್ಮ ತೀರಿಕೊಂಡರು. ತಂದೆಯ ಬಳಿಕ ತಿಮ್ಮಪ್ಪ ನಾಯಕ ತನ್ನ ಕಿರಿವಯಸ್ಸಿನಲ್ಲಿಯೇ ಬಂಕಾಪುರ ಪ್ರಾಂತಕ್ಕೆ ಡಣ್ಣಾಯಕನಾದ.

ಕನಕ ದಾಸರು ತಮ್ಮನ್ನು ತಾವೇ ಸಾವಿನ ದೇವತೆಯಾದ ಯಮನೆಂದು ತಮ್ಮ ಕೃತಿಗಳಲ್ಲಿ ಉಲ್ಲೇಖಿಸಿದ್ದಾರೆ.

ಸಾಧನೆ
ಕನಕದಾಸರು ಶ್ರೀ ವ್ಯಾಸರಾಯರ ಮೆಚ್ಚಿನ ಶಿಷ್ಯರು. ವ್ಯಾಸರಾಯದಿಂದ ಮಧ್ವ ತತ್ವಶಾಸ್ತ್ರವನ್ನು ಕಲಿತು ಒಪ್ಪಿಕೊಂಡ ಕನಕದಾಸರು ಉಡುಪಿ ಶ್ರೀ ಕೃಷ್ಣನ ಅನನ್ಯ ಭಕ್ತರು. ಕಾಗಿನೆಲೆಯ ಆದಿಕೇಶವನ ಭಕ್ತರಾದ ಕನಕದಾಸರು ಜಾತಿಪದ್ಧತಿಯ ತಾರತಮ್ಯಗಳನ್ನು ಅಲ್ಲಗಳೆದರು. ಇವರ ಕೀರ್ತನೆಗಳ ಅಂಕಿತ ಕಾಗಿನೆಲೆಯ ಆದಿಕೇಶವರಾಯ ಎಂಬುದು

ಕನಕ ದಾಸರ ಸಾಹಿತ್ಯ ರಚನೆ
ಕನಕದಾಸರು ಸಾಹಿತ್ಯದ ವಿವಿಧ ಪ್ರಕಾರಗಳಾದ ಕೀರ್ತನೆಗಳು, ಸುಳಾದಿಗಳು, ಉಗಾಭೋಗಗಳು ಕನ್ನಡ ಸಾಹಿತ್ಯ ಲೋಕಕ್ಕೆ ಅರ್ಪಿಸಿರುವುದಲ್ಲದೆ, ಸಂಗೀತ ಪ್ರಪಂಚಕ್ಕೆ ತನ್ನದೇ ಆದಂತಹ ಕೊಡುಗೆಯನ್ನು ಮುಂಡಿಗೆಗಳ ರೂಪದಲ್ಲಿ ನೀಡಿದ್ದಾರೆ. ಸುಮಾರು 316 ಕೀರ್ತನೆಗಳು ಹಾಗೂ ಇನ್ನಿತರ ಸಾಹಿತ್ಯ ಮಾತ್ರ ಲಭ್ಯವಾಗಿರುವುದನ್ನು ಕಾಣಬಹುದಾಗಿದೆ. ಅವರ ಐದು ಮುಖ್ಯ ಕಾವ್ಯಕೃತಿಗಳು ಇಂತಿವೆ:

ಮೋಹನತರಂಗಿಣಿ
ನಳಚರಿತ್ರೆ
ರಾಮಧಾನ್ಯ ಚರಿತೆ
ಹರಿಭಕ್ತಿಸಾರ
ನೃಸಿಂಹಸ್ತವ (ಉಪಲಬ್ದವಿಲ್ಲ)
ಮೋಹನತರಂಗಿಣಿ
ಮೋಹನತರಂಗಿಣಿಯು 42 ಸಂಧಿಗಳಿಂದ ಕೂಡಿದ್ದು ಸಾಂಗತ್ಯದಲ್ಲಿ ರಚಿತವಾಗಿರುವ 2798 ಪದ್ಯಗಳಿವೆ. ಮೋಹನತರಂಗಿಣಿಯಲ್ಲಿ ಕನಕದಾಸರು ಕೃಷ್ಣಚರಿತ್ರೆಯನ್ನು ಹೇಳುತ್ತಾ ತಮ್ಮ ಅಧಿರಾಜ ಕೃಷ್ಣದೇವರಾಯನನ್ನೇ ಕೃಷ್ಣನಿಗೆ ಹೋಲಿಸುತ್ತಾರೆ. ಅವರ ದ್ವಾರಕಾಪುರಿ ಸ್ವಯಂ ವಿಜಯನಗರವೇ ಆಗಿರುವುದು ಇತಿಹಾಸದಿಂದ ತಿಳಿದು ಬರುತ್ತದೆ. ಮೋಹನತರಂಗಿಣಿ ಅಥವಾ ಕೃಷ್ಣಚರಿತೆ ಎಂಬ ಈ ಕಾವ್ಯದಲ್ಲಿ ಕನಕದಾಸರ ಸಮಕಾಲೀನ ಜೀವನ ಚಿತ್ರಗಳು ಹಾಗೂ ಪೌರಾಣಿಕ ಕಥೆಗಳು ಅಚ್ಚಗನ್ನಡದಲ್ಲಿ ನಿರೂಪಿತವಾಗಿವೆ. ದಣ್ಣಾಯಕನಾಗಿ ಕನಕ ಆಗಾಗ್ಗೆ ರಾಜಧಾನಿ ವಿಜಯನಗರಕ್ಕೆ ಹೋಗಬೇಕಾಗಿತ್ತು. ವಿಜಯನಗರ ಸಾಮ್ರಾಜ್ಯದ ರಾಜವೈಭವ, ರಾಜಸಭೆ, ರಾಜಪರಿವಾರದ ಸರಸ ಸುಮ್ಮಾನ, ಶೃಂಗಾರ ಜೀವನ, ಜಲಕ್ರೀಡೆ, ಓಕುಳಿಯಾಟ, ನವರಾತ್ರಿ, ವಿಜಯನಗರದ ಪುರರಚನೆ, ಉದ್ಯಾನವನ, ಪ್ರಜೆಗಳ ವೇಷಭೂಷಣ, ರಾಜ್ಯದ ಯುದ್ಧ ವಿಧಾನ ಇತ್ಯಾದಿಗಳು ಅವನ ಮನಸೂರೆಗೊಂಡಿದ್ದವು. ಕವಿ ಮನಸಿನ ಕನಕ ತನ್ನ ಅನುಭವವನ್ನೆಲ್ಲ ಬರಹ ರೂಪಕ್ಕೆ ತಂದ. ಆ ಬರಹವೇ ಇಂದು ನಮಗೆ ಲಭ್ಯವಿರುವ ಮೋಹನತರಂಗಿಣಿ. ಕನಕನ ಯೌವನ ಕಾಲದಲ್ಲಿ ರಚಿತವಾದ ತರಂಗಿಣಿಯ ಒಡಲಲ್ಲಿ ಯುದ್ಧದ ವರ್ಣನೆಗಳು ಹೆಚ್ಚೆನ್ನಬಹುದು. ಏಕೆಂದರೆ ಕನಕ ಸ್ವತಃ ಕಲಿಯಾಗಿದ್ದವನೇ ತಾನೇ? ಹಂಪಿಯ ಪತನವನ್ನು (೧೫೬೫) ಸಹ ಕನಕ ನೋಡಿದ್ದರು. ಶಂಬರಾಸುರ ವಧೆ, ಬಾಣಾಸುರ ವಧೆ, ಹರಿಹರ ಯುದ್ಧ ಹೀಗೆ ವೀರರಸ, ರೌದ್ರರಸ ಕಾವ್ಯದಲ್ಲಿ ಮೇಳೈಸಿವೆ.

ಸೋಮಸೂರಿಯ ವೀಥಿಯ ಇಕ್ಕೆಗಳಲಿ
ಹೇಮ ನಿರ್ಮಿತ ಸೌಧದೋಳಿ
ರಮಣೀಯತೆವೆತ್ತ ಕಳಸದಂಗಡಿಯಿರ್ದುಂ
ವಾ ಮಹಾ ದ್ವಾರಕಾಪುರದೇ

ಓರಂತೆ ಮರಕಾಲರು ಹಡಗಿನ ವ್ಯವ
ಹಾರದಿ ಗಳಿಸಿದ ಹಣವ
ಭಾರ ಸಂಖ್ಯೆಯಲಿ ತೂಗುವರು ಬೇಡಿದರೆ ಕು
ಬೇರಂಗೆ ಕಡವ ಕೊಡುವರು

ನಳಚರಿತ್ರೆ
ನಳಚರಿತ್ರೆಯು 9 ಸಂಧಿಗಳಿಂದ ಕೂಡಿದ್ದು ಭಾಮಿನೀ ಷಟ್ಪದಿಯಲ್ಲಿ ರಚನೆಯಾಗಿರುವ 481 ಪದ್ಯಗಳಿವೆ. ಮಹಾಭಾರತದಂತಹ ರಾಷ್ಟ್ರ ಮಹಾಕಾವ್ಯಕ್ಕೆ ಪ್ರೇರಣೆಯಾದ ಉಜ್ವಲ ಆರ್ಯೇತರ ಪ್ರೇಮಕಥೆ ನಳ ದಮಯಂತಿಯರ ಕಥೆ. ೧೩ನೇ ಶತಮಾನದ ನಳ ಚಂಪೂವಿಗಿಂತ ಈ ನಳಚರಿತ್ರೆ ಹೃದಯಸ್ಪರ್ಶಿಯಾದ ಚಿತ್ರಣಗಳಿಂದ ಚಿರಂತನ ಪ್ರೇಮದ ಕಥನದಿಂದ ಅಶ್ಲೀಲತೆಯ ಸೋಂಕಿಲ್ಲದ ಶೃಂಗಾರ ವರ್ಣನೆಯಿಂದ ಶೋಭಿಸುತ್ತಾ ಇಂದಿಗೂ ಅತ್ಯಂತ ಜನಪ್ರಿಯವಾಗಿದೆ. ನಳ ಮತ್ತು ದಮಯಂತಿಯರು ಹಂಸದ ಮೂಲಕ ಪ್ರೇಮ ಸಂದೇಶಗಳನ್ನು ಕಳಿಸುವುದು, ಅವರ ಸಂತೋಷ-ಆಮೋದ-ಪ್ರವೋದ ನಂತರದ ಕಷ್ಟಕಾಲ ಹಾಗೂ ಅದರ ನಂತರದ ಪುನರ್ಮಿಲನ ಹೀಗೆ ಎಲ್ಲರಿಗೂ ಈ ಕಥೆ ಚಿರಪರಿಚಿತ. ಕಷ್ಟ ಕಾಲದಲ್ಲಿ ಕಾಡಿನಲ್ಲಿ ಮಲಗಿರುವಾಗ ದಮಯಂತಿಯನ್ನು ಕುರಿತು ನಳ: ಲಲಿತ ಹೇಮದ ತೂಗಮಂಚದ ಹೊಳೆವ ಮೇಲ್ವಾಸಿನಲಿ ಮಲಗು ಲಲನೆಗೀ ವಿಧಿ ಬಂದುದೇ ಹಾ! ಎನುತ ಬಿಸುಸುಯ್ದ (೫-೨) ಹೀಗೆ ನಳಚರಿತ್ರೆಯಲ್ಲಿ ಕರುಣರಸಕ್ಕೇ ಪ್ರಾಧಾನ್ಯತೆ ಇದೆ. ಇನ್ನು ನಳಚರಿತ್ರೆಯಲ್ಲಿನ ಶೃಂಗಾರರಸದ ಬಗ್ಗೆ ಹೇಳುವುದಾದರೆ ಅದು ಪ್ರೌಢಶೃಂಗಾರ ಎನ್ನಬಹುದೇನೋ? ಅಲ್ಲಿ ಮೋಹನ ತರಂಗಿಣಿಯಲ್ಲಿ ಅದು ಕಣ್ಣು ಕುಕ್ಕುವ ಶೃಂಗಾರ, ಆದರೂ ಅದು ಹುಳಿಮಾವಿನಂತೆ ಹಂಚಿ ತಿನ್ನಲಾಗದು. ಮುಕ್ತವಾಗಿ ಚರ್ಚಿಸಲಾಗದು. ನಳಚರಿತ್ರೆಯ ಶೃಂಗಾರವಾದರೆ ಮಲ್ಲಿಗೆ ಮಾವಿನ ಹಾಗೆ, ಮಧುರ ರುಚಿ, ಮಧುರ ಸುವಾಸನೆ.

ರಾಮಧಾನ್ಯಚರಿತೆ
ರಾಮಧಾನ್ಯಚರಿತ್ರೆ ಭಾಮಿನೀ ಷಟ್ಪದಿಯಲ್ಲಿ ರಚಿತವಾಗಿರುವ 156 ಪದ್ಯಗಳನ್ನು ಒಳಗೊಂಡಿದೆ. ಈ ಕೃತಿಯಲ್ಲಿ ಧನಿಕರ ಆಹಾರಧಾನ್ಯ ಅಕ್ಕಿ ಹಾಗೂ ಕೆಳವರ್ಗದವರ ಆಹಾರಧಾನ್ಯವೆಂದು ಪರಿಭಾವಿಸಲಾಗಿರುವ ರಾಗಿಯ ನಡುವಿನ ಸಂಭಾಷಣೆಯ ಮೂಲಕ ರಾಗಿ ಹೇಗೆ ತನ್ನ ಔನ್ನತ್ಯವನ್ನು ಸಾಬೀತು ಪಡಿಸುತ್ತದೆ ಹಾಗೂ ರಾಮಧಾನ್ಯವೆಂಬ ಹೆಸರು ಪಡೆಯುತ್ತದೆ ಎಂಬುದನ್ನು ನಿರೂಪಿಸಲಾಗಿದೆ. ಇದರಲ್ಲಿ ಯುದ್ಧದ ಸನ್ನಿವೇಶ ಇಲ್ಲವಾದರೂ ವೀರರಸದ ಮಾತುಗಳಿಗೇನೂ ಕೊರತೆಯಿಲ್ಲ. ನುಡಿಗೆ ಹೇಸದ ಭಂಡ ನಿನ್ನೊಳು ಕೊಡುವರೇ ಮಾರುತ್ತರವ ಕಡುಜಡವಲಾ, ನಿನ್ನೊಡನೆ ಮಾತೇಕೆ? ಹೆಣದ ಬಾಯಿಗೆ ತುತ್ತು ನೀನಹೆ ನಿನ್ನ ಜನ್ಮ ನಿರರ್ಥಕವಲಾ ಎಲವೂ ನೀನೆಲ್ಲಿಹೆಯೋ ನಿನ್ನಯ ಬಳಗವದು.. ಮುಂತಾದ ಮಾತುಗಳಲ್ಲಿ ಕನಕದಾಸರು ರಾಗಿಯ ನೆಪ ಹಿಡಿದು ತಮ್ಮದೇ ಆತ್ಮಕಥೆಯನ್ನು ಹೇಳುತ್ತಿರುವಂತೆ ತೋರುತ್ತದೆ. ಸಮಾಜದ ಮೇಲ್ವರ್ಗದವರ ಆಹಾರ ಧಾನ್ಯ ಭತ್ತ ಹಾಗೂ ಕೆಳವರ್ಗದವರ ಆಹಾರ ಧಾನ್ಯ ರಾಗಿಯ ನಡುವಿನ ಸಂಭಾಷಣೆಯನ್ನು ನಿರೂಪಿಸುವ ಕನಕದಾಸರ ಸೃಜನಶೀಲತೆ ಅತಿಶಯ. ಒಂದು ರೀತಿಯಲ್ಲಿ ರಾಮಧಾನ್ಯಚರಿತ್ರೆ ಇಂದಿನ ಬಂಡಾಯ ಸಾಹಿತ್ಯದ ಬೇರು, ನವ್ಯೋತ್ತರದ ಸೂರು ಎಂದರೆ ಬಹುಶ: ತಪ್ಪಾಗಲಾರದು.

ಹರಿಭಕ್ತಿಸಾರ
ಹರಿಭಕ್ತಿಸಾರ ೧೧೦ ಭಕ್ತಿಪದ್ಯಗಳಿರುವ ಗ್ರಂಥ. ಭಾಮಿನೀ ಷಟ್ಪದಿಯಲ್ಲಿ ಸರಳಗನ್ನಡದಲ್ಲಿ ರಚಿತವಾಗಿರುವ ಈ ಗ್ರಂಥ ಕನ್ನಡದ ಭಗವದ್ಗೀತೆಯಂತಿದೆ. ಒಟ್ಟಿನಲ್ಲಿ ಕನಕದಾಸರ ಎಲ್ಲ ಕಾವ್ಯಗಳೂ ಕವಿ ಸಹಜವಾದ ವರ್ಣನೆಗಳಿಂದಲೂ ಉಪಮೆಗಳಿಂದಲೂ ಶ್ರೀಮಂತವಾಗಿದ್ದು ಅವರ ಕಾವ್ಯ ಕೌಶಲಕ್ಕೆ ಎಲ್ಲರೂ ಬೆರಗಾಗುವಂತೆ ಮಾಡಿದೆಯೆಂದರೆ ಉತ್ಪ್ರೇಕ್ಷೆಯಲ್ಲ.

ಕೀರ್ತನೆಗಳು
ಕನಕದಾಸರು 316 ಕೀರ್ತನೆಗಳನ್ನು ರಚಿಸಿದ್ದಾರೆ. ಕನಕದಾಸರ ಭಕ್ತಿ ಪಾರಮ್ಯವನ್ನು ಅವರ ಕೀರ್ತನೆಗಳಲ್ಲಿ ಕಾಣಬಹುದು. ಶ್ರೀಹರಿಯನ್ನು ತಮ್ಮ ಧಣಿಯಾಗಿ, ಇನಿಯನಾಗಿ, ಅಣೋರಣೀಯನಾಗಿ, ಮಹತೋಮಹೀಮನಾಗಿ ಅವರು ಕಂಡಿದ್ದಾರೆ. ‘ಬಾ ರಂಗ ಎನ್ನ ಮನಕೆ ಎಂದು ಹೃದಯ ಸದನಕ್ಕೆ ‘ಎಂದು ಕರೆದು ನೆಲೆ ನಿಲ್ಲಿಸಿಕೊಂಡ ಅನುಭಾವ ಅವರದು. ಒಳಗಣ್ಣಿನಿಂದ ಅವನ ಕಂಡು- ‘ಕಂಡೆ ನಾ ತಂಡ ತಂಡ ಹಿಂಡು ದೈವ ಪ್ರಚಂಡ ರಿಪು ಗಂಡ ಉದ್ಧಂಡ ನರಸಿಂಹನ’ ಎಂದು ಸಂತೋಷಪಟ್ಟಿದ್ದಾರೆ. ‘ಎಲ್ಲಿ ನೋಡಿದರಲ್ಲಿ ರಾಮ’ ಎಂಬ ಅನುಭೂತಿಯಲ್ಲಿ ಹರಿಯನ್ನು ಕಂಡ ಬಳಿಕ ‘ಬದುಕಿದೆನು ಬದುಕಿದೆನು ಭವ ಎನಗೆ ಹಿಂಗಿತು’ ಎಂಬ ಧನ್ಯತಾಭಾವ. ‘ದಾಸದಾಸರ ಮನೆಯ ದಾಸಿಯರ ಮಗ ಮಂಕುದಾಸ ಮರುಳುದಾಸ ನರಜನ್ಮಹುಳು ಪರಮಪಾಪಿ’ ಎಂದು ಕರೆದುಕೊಂಡಿದ್ದ ಅವರು ಜೀವ ಮಾಗಿ ಹಣ್ಣಾದಂತೆ ಪರಮಾತ್ಮನ ಸಾಕ್ಷಾತ್ಕಾರವಾದಂತೆ ‘ಆತನೊಲಿದ ಮೇಲೆ ಇನ್ಯಾತರ ಕುಲವಯ್ಯಾ’ ಎಂದುಕೊಳ್ಳುತ್ತಾರೆ.

ಜೈನ, ವೀರಶೈವರ ಕಿತ್ತಾಟ, ಮುಸಲ್ಮಾನ ಪ್ರಾಬಲ್ಯ ಇವುಗಳಿಂದ ಸೊರಗಿ ಹೋಗಿದ್ದ ವೈದಿಕ ಧರ್ಮಕ್ಕೆ ಪುನಶ್ಚೇತನ ನೀಡಲು ವ್ಯಾಸರಾಯರಂಥವರು ಶ್ರಮಿಸುತ್ತಿದ್ದ ಕಾಲವದು. ವೈದಿಕ ಸಂಸ್ಕೃತಿಯ ಉತ್ಥಾನಕ್ಕೆಂದು ಹುಟ್ಟು ಹಾಕಲಾದ ವಿಜಯನಗರ ಸಾಮ್ರಾಜ್ಯ ಕೃಷ್ಣದೇವರಾಯನ ಅಳಿವಿನ ನಂತರ ಪತನದ ಹಾದಿ ಹಿಡಿದಿತ್ತು. ಇಂಥಲ್ಲಿ ಕನಕದಾಸರಂಥವರ ಕಾವ್ಯಕೃಷಿ ಹಾಗೂ ಸಾರ್ವಜನಿಕ ಜೀವನ ವ್ಯಾಸರಾಯರಿಗೆ ಬೆಂಬಲದ ಶ್ರೀರಕ್ಷೆಯಾಗಿದ್ದವು.

‘ನಾವು ಕುರುಬರು ನಮ್ಮ ದೇವರು ಬೀರಯ್ಯ ಕಾವ ನಮ್ಮಜ್ಜ ನರಕುರಿ ಹಿಂಡುಗಳ’ ಎಂದು ವಿನೀತ ಜಾತಿ ಭಾವನೆ ತೋರಿದ್ದ ಕನಕದಾಸರು ವ್ಯಾಸರಾಯರ ಸಂಪರ್ಕದ ನಂತರ ‘ಕುಲಕುಲಕುಲವೆಂದು ಹೊಡೆದಾಡದಿರಿ’ ಎಂದು ಜಂಕಿಸಿ ಕೇಳುವ ಹಾಗಾದರು.
ಇಂಥ ನಡವಳಿಕೆಗಳಿಂದ ವೈದಿಕ ಧರ್ಮದ ಗುತ್ತಿಗೆ ತಮ್ಮದು ಎಂದು ಭಾವಿಸಿದ್ದ ಬ್ರಾಹ್ಮಣರಿಗೆ ಕನಕದಾಸರು ಬಿಸಿ ತುಪ್ಪವಾದರು. ಹಿಂದೂ ಸಮಾಜದಲ್ಲಿ ಈ ಬ್ರಾಹ್ಮಣ ಬ್ರಾಹ್ಮಣೇತರ ಕಂದರ/ಕ ದೊಡ್ಡದಾಗುತ್ತಾ ಹೋದಂತೆ ವ್ಯಾಸಪೀಠದ ಜೊತೆಗೆ ದಾಸಕೂಟದ ರಚನೆಯೂ ಆಗಬೇಕಾದಂತಹ ಅನಿವಾರ್ಯತೆ ಮೂಡಿತು. ಉಚ್ಚಕುಲದ ಮಾಧ್ವ ಬ್ರಾಹ್ಮಣರು ಶಾಸ್ತ್ರಾಧ್ಯಯನ-ತರ್ಕ-ವ್ಯಾಕರಣಾದಿ ವಿಶಿಷ್ಟ ಜ್ಞಾನಸಂಪನ್ನರಾಗಿ ಶಬ್ದ ಶಬ್ದಗಳನ್ನು ತಿಕ್ಕಿ ತೀಡಿ ನಿಷ್ಪತ್ತಿ ಹಿಡಿದು ಸಿದ್ಧಾಂತ ಪ್ರಮೇಯಗಳನ್ನು ಮಂಡಿಸುವುದೇ ಮುಂತಾದ ಪ್ರಕ್ರಿಯೆಗಳನ್ನು ವ್ಯಾಸಪೀಠದಲ್ಲಿ ನಡೆಯಿಸುತ್ತಿದ್ದರು. ಪುರಂದರದಾಸ, ಕನಕದಾಸ, ಜಗನ್ನಾಥದಾಸ ಮೊದಲಾದವರ ಪ್ರಾತಿನಿಧಿಕ ಸಂಘಟನೆಯೇ ದಾಸಕೂಟ. ಇವರೂ ಮಾಧ್ವ ಮತ ಪ್ರಮೇಯಗಳನ್ನೇ ಪಸರಿಸುತ್ತಾ ಆಚರಿಸುತ್ತಿದ್ದರಾದರೂ ಅವುಗಳನ್ನು ಅರಿಯಲು ಸಂಸ್ಕೃತ ಜ್ಞಾನದ ಅನಿವಾರ್ಯತೆಯನ್ನು ನಿರಾಕರಿಸಿ, ಜಾತಿ ಮತಗಳ ಕಟ್ಟು ಪಾಡಿಲ್ಲದ ಇವರು ಶಾಸ್ತ್ರಾಧ್ಯಯನದ ಅನಿವಾರ್ಯತೆ ಇಲ್ಲದೆ ತಮ್ಮ ಅನುಭಾವದಿಂದ ಹೊರಹೊಮ್ಮುವ ಭಕ್ತಿಭಾವನೆಗಳನ್ನು ತಮ್ಮ ತಾಯ್ನುಡಿಯಲ್ಲಿ ಹಾಡಿ ಲೋಕಪಾವನವನ್ನೂ ಆತ್ಮೋದ್ಧಾರವನ್ನೂ ಮಾಡ ಬೇಕೆನ್ನುವವರು. ಇಂಥಾ ದಾಸಕೂಟವನ್ನು ಹುಟ್ಟುಹಾಕಿ ಪೋಷಿಸಿ ಬೆಳೆಸಿದವರು ವ್ಯಾಸರಾಯರು ಹಾಗೂ ವಾದಿರಾಜರು. ಇಷ್ಟಿದ್ದರೂ ದಾಸಕೂಟ ವ್ಯಾಸಪೀಠಗಳ ನಡುವೆ ಆಗಿಂದಾಗ್ಗೆ ಘರ್ಷಣೆಗಳು ನಡೆದೇ ಇದ್ದವು. ಈ ಕುರಿತು ಕನಕ ಪುರಂದರರ ಕೀರ್ತನೆಗಳೇ ನಮಗೆ ಸೂಚ್ಯವಾಗಿ ಹೇಳುತ್ತವೆ. ಕುಲಕುಲವೆನ್ನುತಿಹರು ಕುಲವಾವುದು ಸತ್ಯ ಸುಖವುಳ್ಳ ಜನರಿಗೆ . ತೀರ್ಥವನು ಪಿಡಿದವರು ತಿರುನಾಮಧಾರಿಗಳೇ ಜನ್ಮ ಸಾರ್ಥಕವಿರದವರು ಭಾಗವತರಹುದೇ ಆವ ಕುಲವಾದರೇನು ಆವನಾದರೇನು ಆತ್ಮಭಾವವರಿತ ಮೇಲೆ . ಅವರ ಕೀರ್ತನೆಗಳಲ್ಲಿ ಅವರ ಸಂದೇಶ ನೇರ ಮತ್ತು ಖಚಿತ. ಹಾಗೆಯೇ ಅಮೂರ್ತವಾದ ಪ್ರತಿಮಾ ನಿರೂಪಣೆಯಲ್ಲಿ ಪರಿಣತಿ, ಹಾಗೂ ಕನ್ನಡ ಸಾಹಿತ್ಯ ಮತ್ತು ಸಂಸ್ಕೃತ ಸಾಹಿತ್ಯಗಳ ಪರಿಚಯವನ್ನು ಅವರ ಸಾಹಿತ್ಯದಲ್ಲಿ ಕಾಣಬಹುದು.

ನೀ ಮಾಯೆಯೊಳಗೋ ನಿನ್ನೊಳು ಮಾಯೆಯೋ
ನೀ ಮಾಯೆಯೊಳಗೊ, ನಿನ್ನೊಳು ಮಾಯೆಯೊ
ನೀ ದೇಹದೊಳಗೊ, ನಿನ್ನೊಳು ದೇಹವೂ
ಬಯಲು ಆಲಯದೊಳಗೊ, ಆಲಯವು ಬಯಲೊಳಗೊ
ಬಯಲು ಆಲಯವೆರಡು ನಯನದೊಳಗೊ
ನಯನ ಬುದ್ಧಿಯೊಳಗೊ, ಬುದ್ಧಿ ನಯನದೊಳಗೊ
ನಯನ ಬುದ್ಧಿಗಳೆರಡು ನಿನ್ನೊಳಗೊ ಹರಿಯೆ
ಸವಿಯು ಸಕ್ಕರೆಯೊಳಗೊ, ಸಕ್ಕರೆಯು ಸವಿಯೊಳಗೊ
ಸವಿಯು ಸಕ್ಕರೆಯೆರಡು ಜಿಹ್ವೆಯೊಳಗೊ
ಜಿಹ್ವೆ ಮನಸಿನೊಳಗೊ, ಮನಸು ಜಿಹ್ವೆಯೊಳಗೊ
ಜಿಹ್ವೆ ಮನಸುಗಳೆರಡು ನಿನ್ನೊಳಗೊ ಹರಿಯೆ
ಕುಸುಮದೊಳು ಗಂಧವೊ, ಗಂಧದೊಳು ಕುಸುಮವೊ
ಕುಸುಮ ಗಂಧಗಳೆರಡು ಘ್ರಾಣದೊಳಗೊ
ಅಸಮಭವ ಕಾಗಿನೆಲೆಯಾದಿಕೇಶವರಾಯ
ಉಸುರಲೆನ್ನಳವಲ್ಲ ಎಲ್ಲ ನಿನ್ನೊಳಗೆ

ತೊರೆದು ಜೀವಿಸಬಹುದೆ ಹರಿ ನಿನ್ನ ಚರಣಗಳ
ತೊರೆದು ಜೀವಿಸಬಹುದೆ

ಹರಿ ನಿನ್ನ ಚರಣಗಳ‌

ಬರಿದೇ ಮಾತೇಕಿನ್ನೂ

ಅರಿತು ಪೇಳುವೆನಯ್ಯ… ||ಪ||

ತಾಯಿ ತಂದೆಯ ಬಿಟ್ಟು

ತಪವ ಮಾಡಲುಬಹುದು

ದಾಯಾದಿ ಬಂಧುಗಳ ಬಿಡಲುಬಹುದು

ರಾಯ ತಾ ಮುನಿದರೆ

ರಾಜ್ಯವನೆ ಬಿಡಬಹುದು

ಕಾಯಜಾ ಪಿತನಿನ್ನ ಅಡಿಯ ಬಿಡಲಾಗದು… ||೧||

ಒಡಲು ಹಸಿದರೆ ಮತ್ತೆ

ಅನ್ನವನೆ ಬಿಡಬಹುದು

ಪಡೆದ ಕ್ಷೇತ್ರವ ಬಿಟ್ಟು ಹೊರಡಬಹುದು

ಮಡದಿ ಮಕ್ಕಳ ಕಡೆಗೆ

ತೊಲಗಿಸಿಯೆ ಬಿಡಬಹುದು

ಕಡಲೊಡೆಯ ನಿನ್ನಡಿಯ ಘಳಿಗೆ ಬಿಡಲಾಗದು…||೨||

ಪ್ರಾಣವನು ಪರರು

ಬೇಡಿದರೆತ್ತಿ ಕೊಡಬಹುದು

ಮಾನಾಭಿಮಾನವ ತಗ್ಗಿಸಲುಬಹುದು

ಪ್ರಾಣದಾಯಕಾನಾದ ಆದಿಕೇಶವರಾಯ‌

ಜಾಣ ಶ್ರೀ ಕೃಷ್ಣ ನಿನ್ನಡಿಯ‌ ಬಿಡಲಾಗದು….||೩|| ಎಲ್ಲ ಶಿಕ್ಷಕ ಬಂಧುಗಳಿಗೆ ಕನಕ ಜಯಂತಿ ಶುಭಾಶಯಗಳು

.

ಅಕ್ಟೋಬರ್ 2 ಭಾರತದ ಎರಡು ಮಹಾನ್ ಚೇತನಗಳ ಹುಟ್ಟುಹಬ್ಬ.ಅವರೇ ನಮ್ಮೆಲ್ಲರ ಹೆಮ್ಮೆಯ ಭಾಪೂಜಿ ಹಾಗೂ ಶಾಸ್ತ್ರೀಜಿಯವರು.

ಎಲ್ಲಾ ಭಾರತೀಯರಿಗೂ ಗಾಂಧಿ ಜಯಂತಿ ಹಾಗೂ ಶಾಸ್ತ್ರೀಜಿಯವರ ಹುಟ್ಟು ಹಬ್ಬದ ಶುಭಾಶಯಗಳು*
*ಸತ್ಯ ಅಹಿಂಸೆಗಳ ಪ್ರವಾದಿ, ಭಾರತದ ಸ್ವಾತಂತ್ರ್ಯ ಶಿಲ್ಪಿ, ರಾಷ್ಟ್ರಪಿತ, ಮಹಾತ್ಮ, ಮನುಕುಲದ ಬಗ್ಗೆ ಉನ್ನತ ಮಟ್ಟದ ಆಲೋಚನೆ, ಭಾವನೆ, ಉನ್ನತ ಕಾರ್ಯಗಳಿಗೆ ಜನರನ್ನು ಪ್ರೇರೇಪಿಸಿ ಮೇಲೆತ್ತಲು ಪ್ರಯತ್ನಿಸಿದ ಮನುಕುಲದ ಉದ್ಧಾರಕ, ಶಾಂತಿಧೂತ, ತ್ಯಾಗಮಯಿ, ಸದ್ಗುಣಗಳ ಗಣಿ, ಭಾರತ ಮಾತೆಯ ಹೆಮ್ಮೆಯ ಸುಪುತ್ರ, ಮಹಾತ್ಮಗಾಂಧೀಜಿಯವರ ಹುಟ್ಟುಹಬ್ಬ*
ಹಾಗೂ
*ಭಾರತದ ಎರಡನೇ ಪ್ರಧಾನಿ, ಸರಳ ಸಜ್ಜನಿಕೆಯ ಸಕಾರಮೂರ್ತಿ, ಪಾರದರ್ಶಕ ವ್ಯಕ್ತಿತ್ವ, ನೈತಿಕ ಮೌಲ್ಯಗಳ ಗಣಿ, ಜೈ ಜವಾನ್ ಜೈ ಕಿಸಾನ್ ಎಂಬ ಘೋಷಣೆಯ ಮೂಲಕ ನಮ್ಮ ದೇಶದ ಬೆನ್ನೆಲುಬುಗಳಾದ ರೈತ ಹಾಗೂ ಸೈನಿಕರಿಗೆ ಗೌರವ ಸಲ್ಲಿಸಲು ಅವಕಾಶ ಮಾಡಿಕೊಟ್ಟ ಧೀಮಂತ ರಾಜಕಾರಣಿ, ಲಾಲ್ ಬಹದ್ದೂರ್ ಶಾಸ್ತ್ರಿಯವರ ಹುಟ್ಟುಹಬ್ಬ

ಗಾಂಧೀಜಿ
ಬಾಲ್ಯ : ಗಾಂಧೀಜಿಯವರು ಗುಜರಾತಿನ ಕಾಥೇವಾಡದ ರಾಜಕೋಟೆಯ ಸಮೀಪದ ಪೋರಬಂದರಿನಲ್ಲಿ ಕರಮಚಂದ ಗಾಂಧಿ ಪುತಲಿಬಾಯಿ ದಂಪತಿಗಳಿಗೆ ಕ್ರಿ.ಶ.1869 ಅಕ್ಟೋಬರ್ 2 ರಂದು ಜನಿಸಿದರು.ಇವರ ಪೂರ್ಣ ಹೆಸರು ಮೋಹನದಾಸ ಕರಮಚಂದ ಗಾಂಧಿ.
*ಶಿಕ್ಷಣ*
ಬಾಲ್ಯದ ಪ್ರಾಥಮಿಕ ಶಿಕ್ಷಣವನ್ನು ರಾಜಕೋಟೆಯಲ್ಲಿ ಮುಗಿಸಿ ತಮ್ಮ 14 ನೇ ವಯಸ್ಸಿನಲ್ಲಿ ಕಸ್ತೂರಿಬಾ ಅವರೊಂದಿಗೆ ವಿವಾಹವಾದರು.1888 ಸೆ.4 ರಂದು ಬ್ಯಾರಿಸ್ಟರ್ ಪದವಿಗಾಗಿ ಇಂಗ್ಲೆಂಡಿಗೆ ತೆರಲಿ 1891 ರಲ್ಲಿ ಪದವಿ ಪಡೆದು ಹಿಂದುರಿಗಿ 1892 ರಲ್ಲಿ ವಕೀಲಿ ವೃತ್ತಿ ಆರಂಭಿಸಿದರು..
* ಗಾಂಧೀಜಿಯವರ ಮೇಲೆ ಬಹಳ ಪ್ರಭಾವ ಭೀರಿದ ಎರಡು ನಾಟಕಗಳೆಂದರೆ *ಸತ್ಯಹರಿಶ್ಚಂದ್ರ* ಮತ್ತು *ಶ್ರವಣಕುಮಾರ*.
ಇವುಗಳ ಪ್ರಭಾವ ಎಷ್ಟಾಯಿತೆಂದರೆ ಮುಂದೆ ಸತ್ಯ ಹಾಗೂ ಅಹಿಂಸೆಗಳೇ ಇವರ ಸ್ವಾತಂತ್ರ ಹೋರಾಟದ ಹಾಗೂ ಇವರ ಬದುಕಿನ ಪರಮ ಆದರ್ಶಗಳಾದವು.
*ಇವರ ಶಾಲೆಗೆ ತನಿಖಾಧಿಕಾರಿಯೊಬ್ಬರು ಬೇಟಿ ನೀಡಿ ಉಕ್ತಲೇಖನ ಬರೆಸುವಾಗ ಗಾಂಧಿಯವರು ತಪ್ಪು ಬರೆದಿದ್ದ”ಕೆಟಲ್” ಎಂಬ ಪದವನ್ನು ಸರಿಮಾಡಿಕೊಳ್ಳುವಂತೆ ಶಿಕ್ಷಕರು ಇವರಿಗೆ ಸೂಚನೆ ನೀಡಿದರೂ ಸಹ ಇವರು ಕಾಫಿ ಮಾಡಲಿಲ್ಲ.
*ವಕೀಲಿ ವೃತ್ತಿ*
1893 ರಲ್ಲಿ ದಕ್ಷಿಣ ಆಫ್ರಿಕಾಗೆ ತೆರಳಿ ವರ್ಣಭೇದ ನೀತಿಯ ದಬ್ಬಾಳಿಕೆಯ ವಿರುದ್ಧ 1914 ರ ವರೆಗೆ ಹೋರಾಡಿ ಬಿಳಿಯರ ಸರಿ ಸಮಾನ ಸ್ಥಾನಮಾನಗಳನ್ನು ಕಿರಿಯರಿಗೆ ಕೊಡಿಸುವಲ್ಲಿ ಯಶಸ್ವಿಯಾದರು.
ಈ ಸಮಯದಲ್ಲಿ ಗಾಂಧೀಜಿಯವರು ರೈಲು ಪ್ರಯಾಣ ಮಾಡುತ್ತಿದ್ದರು. ಆಗ ಆ ರೈಲಿನಲ್ಲಿದ್ದ ಒಬ್ಬ ಬ್ರಿಟಿಷ್ ಪ್ರಜೆ ಗಾಂಧಿಯವರನ್ನು ಚಲಿಸುತ್ತಿದ್ದ ರೈಲಿನಿಂದ ಹೊರದಬ್ಬಿದನು.
ಬಹುಶಃ ಅವನಿಗೆ ಮುಂದೊಂದು ದಿನ ಭಾರತದಲ್ಲಿ ಬ್ರಿಟಿಷರ ಅಧಿಪತ್ಯ ಕೊನೆಗಾಣಿಸಿ ಭಾರತದಿಂದ ಅವರನ್ನು ಹೊರದಬ್ಬುವಂತ ವ್ಯಕ್ತಿ ಇವರಾಗುವರೆಂಬ ಕಲ್ಪನೆಯೂ ಕೂಡ ಇರಲಿಲ್ಲವೆನ್ನಬಹುದು.
* ಗಾಂಧೀಜಿಯವರಿಗೆ ಪ್ರಿಯವಾದ ವಸ್ತುಗಳೆಂದರೇ ಭಗವದ್ಗೀತೆ..ಗಡಿಯಾರ..ಮರದ ಬಟ್ಟಲು ಹಾಗೂ ಸೌಟು..ಚರಕ.
ಗಾಂಧಿಯವರು ಸಮಯಕ್ಕೆ ಬಹಳ ಬೆಲೆ ನೀಡುತ್ತಿದ್ದರು.ಒಮ್ಮೆ ಸಭರಮತಿ ಆಶ್ರಮದಲ್ಲಿ ಊಟದ ಸಮಯಕ್ಕೆ 5 ನಿಮಿಷ ತಡವಾಗಿದ್ದಕ್ಕೆ ಅವರು ಆ ದಿನ ಉಪವಾಸ ಮಾಡುವ ಮೂಲಕ ಸಮಯ ಪಾಲನೆಯ ಮಹತ್ವವನ್ನು ಸಾರಿದರು .
ಭಾರತದ ಸ್ವಾತಂತ್ರ್ಯ ಸಂಗ್ರಾಮ
ಒಮ್ಮೆ ದಕ್ಷಿಣ ಆಫ್ರಿಕಾದಲ್ಲಿ ಗೋಪಾಲಕೃಷ್ಣ ಗೋಖಲೆಯವರು ವರ್ಣಭೇದ ನೀತಿಗಿಂತಲೂ ಕಠೋರವಾದ ದಬ್ಬಾಳಿಕೆಯ ನೀತಿ ಬ್ರಿಟಿಷರಿಂದ ನಮ್ಮ ತಾಯ್ನಾಡಿಗೆ ಉಂಟಾಗಿದೆ ಎಂದು ಗಾಂಧೀಜಿಯವರಿಗೆ ಮನವರಿಕೆ ಮಾಡಿಸಿದರು.
1914 ರಲ್ಲಿ ಭಾರತದ ಸ್ವಾತಂತ್ರ್ಯ ಸಂಗ್ರಾಮಕ್ಕೆ ದುಮುಕಿದರು.1916 ರಲ್ಲಿ ವೈಸರಾಯ್ ಲಾರ್ಡ್ ಹಾರ್ಡಿಜ್ ರವರ ಅಧ್ಯಕ್ಷತೆಯಲ್ಲಿ ಒಂದು ಬೃಹತ್ ಸಭೆ ಸೇರಿತ್ತು. ಇದನ್ನು ಉದ್ಧೇಶಿಸಿ ಗಾಂಧೀಜಿಯವರು ಹೀಗೆ ಕರೆ ನೀಡಿದರು.
” ವಿದೇಶಿ ವ್ಯಾಮೋಹ ಬಿಡಿ ಇಂಗ್ಲಿಷರ ದಾಸ್ಯವನ್ನು ತ್ಯಜಿಸಿರಿ. ಬಲಿಧಾನಕ್ಕೆ ಸಿದ್ಧರಾಗಿರಿ. ಪ್ರತಿ ಹಿಂಸೆ ಇಲ್ಲದೇ ಶಸ್ತ್ರರಹಿತ ಸಂಗ್ರಾಮಕ್ಕೆ ಸಿದ್ಧರಾಗಿರಿ.ಬ್ರಿಟೀಷ್ ಪ್ರಭುಗಳನ್ನು ನಿರಾಕರಿಸಿ “..
ರಾಜ ಮಹಾರಾಜರನ್ನು ಕುರಿತು “ನಿಮ್ಮ ಸಿಂಹಾಸನಗಳು, ನಿಮ್ಮ ವಜ್ರ ವೈಡೂರ್ಯದ ಅಲಂಕಾರಗಳು ನಿಮ್ಮ ದಾಸ್ಯದ ಚಿನ್ಹೆಗಳು ನಮ್ಮ ಈ ಬಡದೇಶವನ್ನು ಅಣಕಿಸುತ್ತವೆ.ಎಲ್ಲವನ್ನೂ ದೇಶಸೇವೆಗಾಗಿ ಮುಡಿಪಾಗಿಡಿ ದಾಸ್ಯ ಶೃಂಖಲೆಗಳಿಂದ ಹೊರಬನ್ನಿ ಎಂದು ಕರೆ ನೀಡಿದರು.
ಗಾಂಧಿ ಯುಗ
(1920 ರಿಂದ 1947 )
1920ರಲ್ಲಿ ಲೋಕಮಾನ್ಯ ಬಾಲಾಗಂಗಾಧರ್ ತಿಲಕ್ ಅಕಾಲಿಕ ಮರಣದಿಂದಾಗಿ ರಾಷ್ಟ್ರೀಯ ಕಾಂಗ್ರೇಸ್ಸಿನ ನಾಯಕತ್ವದಲ್ಲಿ ಕರಾಳತೆ ಕಂಡು ಬಂದಿತು. ಇಂತಹ ಸಂದರ್ಭದಲ್ಲಿ ದಕ್ಷ ನಾಯಕತ್ವವಹಿಸಿ ದಿಟ್ಟ ಹೆಜ್ಜೆ ಹಾಕಿದರು.
ರೌಲಟ್ ಶಾಸನದ ವಿರುದ್ಧ ಚಳುವಳಿ, ಅಸಹಕಾರ ಚಳುವಳಿ, ದಂಡಿನ ಸತ್ಯಾಗ್ರಹ, ದುಂಡುಮೇಜಿನ ಪರಿಷತ್ ಹಾಗೂ ಕ್ವಿಟ್ ಇಂಡಿಯಾ ಆಕ್ಟ್ ಗಳ ಮೂಲಕ ಬ್ರಿಟಿಷರ ಎದೆಯಲ್ಲಿ ನಡುಕ ಹುಟ್ಟಿಸಿದವರು ಗಾಂಧೀಜಿ.
1942 ಆಗಸ್ಟ್ 8 ರಂದು ಬ್ರಿಟಿಷರೇ ಭಾರತ ಬಿಟ್ಟು ತೊಲಗಿ ಚಳುವಳಿ ಮೊಳಗಿತು. ಆಗ ಸಭೆಯನ್ನು ಉದ್ದೇಶಿಸಿ ” ನಾನು ನಿಮ್ಮ ಆಜ್ಞಾಪಕನಲ್ಲಾ ನಿಯಂತ್ರಕನೆಂದೂ ಅಲ್ಲ.ಆದರೇ ನಿಮ್ಮೆಲ್ಲರ ವಿನಮ್ರ ಸೇವಕನೆಂದು ನಾನು ಈ ಹೋರಾಟವನ್ನು ನಡೆಸುವ ನೇತೃತ್ವವನ್ನು ಕೈಗೊಳ್ಳುತ್ತಿದ್ದೇನೆ”
ಎಂದು ಘೋಷಿಸಿದರು.
ಗಾಂಧೀಜಿಯವರ ಪ್ರಮುಖ ಆದರ್ಶಗಳು ಎಂದರೆ ಸತ್ಯಮತ್ತು ಅಹಿಂಸೆ.ಅವರು ಸ್ವಾತಂತ್ರ್ಯ ಗ್ರಾಮದ ಕ್ರಾಂತಿಯ ಜ್ವಾಲೆಯಿಂದಾಗಿ ಗಾಂಧೀಜಿಯವರ ಈ ದೇಶಕ್ಕೆ ಅಹಿಂಸೆಯಿಂದ ಸ್ವಾತಂತ್ರ್ಯಗಳಿಸಬಹುದು ಅಂದಾಗ ಕೆಲವರು ಇದನ್ನು ವಿರೋಧಿಸಿದರು.:ಮುಂದೆ ಅಹಿಂಸಾ ಚಳುವಳಿ ವಿಶ್ವವ್ಯಾಪಿಯಾದಾಗ ಬ್ರಿಟಿಷ್ ಸರ್ಕಾರವೇ ನಡುಗಿ ಹೋಯಿತು.
ಅಹಿಂಸಾ ಚಳುವಳಿ ವಿಶ್ವವ್ಯಾಪಿಯಾದಾಗ ಬ್ರಿಟಿಷ್ ಕಮಾಂಡರ್ ಕಡಲರಾಣಿ ರವಿಮುಳುಗದ ನಾಡಿನ ನಾವು ಜಗತ್ತಿನಲ್ಲಿ ಹೊಸದಾಗಿ ಬೆಳಕಿಗೆ ಬಂದಿರುವ ಆಧುನಿಕ ಎಂಥಾ ಮಾರಕ ಅಸ್ತ್ರಗಳನ್ನು
ಉದಿಟ್ಟತನದಿಂದ ಎದುರಿಸಿದಿವು.ಆದರೆ ..ನಗು ನಗುತ್ತಲೇ ನಮುಸ್ಕರಿಸುತ್ತಾ ಬರಿಗೈಲಿ ಬರುವ ಈ ಗಾಂಧೀಜಿಯನ್ನು ಎದುರಿಸಲಾರೆವು….
ಪ್ರಪಂಚದ ಇತಿಹಾಸದಲ್ಲಿ ಸತ್ಯ ಅಹಿಂಸೆಯ ಆಯುಧದಿಂದ ಯುದ್ಧ ಮಾಡಿದ ರಾಷ್ಟ್ರವೆಂದರೇ ಭಾರತ ಮಾತ್ರ..ಪ್ರಪಂಚದಲ್ಲಿ ಸತ್ಯ ಅಹಿಂಸೆ ಎಂಬ ಆಯುಧ ಹಿಡಿದು ಹೋರಾಡಿ ಜಯಶೀಲನಾದ ವ್ಯಕ್ತಿ ಎಂದರೇ ಅದು ಗಾಂಧೀಜಿ.
ಗಾಂಧೀಜಿಯವರು ಸೂಟು ಬೂಟ್ ಧರಿಸಿ ರೈಲಿನಲ್ಲಿ ಹೋಗುವಾಗ ಮಹಿಳೆಯೊಬ್ಬರು ತಾನು ಧರಿಸಿದ್ದ ಸೀರೆಯಲ್ಲಿ ಅರ್ಧವನ್ನು ತೊಳೆದು ಒಣಹಾಕಿ ಉಳಿದರ್ಧ ಸೀರೆಯನ್ನು ತನ್ನ ಮೈಮೇಲೆ ಸುತ್ತಿಕೊಂಡು ಕುಳಿತ್ತಿದ್ದರು.ಇದನ್ನು ಕಂಡ ಗಾಂಧಿಯವರು ಅಯ್ಯೋ.. ನಮ್ಮ ದೇಶದಲ್ಲಿ ಹೆಣ್ಣು ಮಗಳೊಬ್ಬಳು ತನ್ನ ಮಾನ ರಕ್ಷಿಸಿಕೊಳ್ಳಲು ಬಟ್ಟೆಯಿಲ್ಲದಿದ್ದಾಗ ನಾನು ಮಾತ್ರ ಈ ವಿದೇಶಿ ವಸ್ತ್ರಗಳನ್ನು ಧರಿಸುವುದು ಸರಿಯಿಲ್ಲವೆಂದು ಭಾವಿಸಿ ಅಂದಿನಿಂದ ತಾವೇ ನೇಯ್ದ ತುಂಡು ಖಾದಿ ಬಟ್ಟೆಯನ್ನು ಧರಿಸಲು ಪ್ರಾರಂಭಿಸಿದರು.
ಇದನ್ನು ಕಂಡು ವಿದೇಶಿಯರು ಅರೆಬೆತ್ತಲೆಯ ಫಕೀರನೆಂದು ಲೇವಡಿ ಮಾಡಿದಾಗ ” ನಮ್ಮ ದೇಶದ ಬಹುದೊಡ್ಡ ಮೊತ್ತದ ಜನರು ಇಷ್ಟೆ ಬಟ್ಟೆಯನ್ನು ತೊಡುತ್ತಾರೆ.ಆದ್ದರಿಂದ ನಾನು ತೊಡುವ ಬಟ್ಟೆ ನನಗೆ ತೃಪ್ತಿ ನೀಡಿದೆ” ಎಂದು ಉಧ್ಘರಿಸಿದರು.
ಇವರ ನಾಯಕತ್ವದಲ್ಲಿ ಭಾರತ ಸರ್ವ ಸ್ವತಂತ್ರ ದೇಶವಾಯಿತು.1947 ಆಗಸ್ಟ್ 15 ಭಾರತಕ್ಕೆ ಸ್ವಾತಂತ್ರ ಬಂದಿತು. ನೆಹರುರವರು ಸರದಾರ್ ವಲ್ಲಭ ಬಾಯಿ ಪಟೇಲ್ ಹಾಗೂ ಬಾಬು ರಾಜೇಂದ್ರ ಪ್ರಸಾದರ ಜೊತೆ ದೆಹಲಿಯ ಕೆಂಪುಕೋಟೆಯಲ್ಲಿ ರಾಜಕೀಯ ಚರ್ಚಿಸುತ್ತಿದ್ದರೇ.. ಗಾಂಧೀಜಿಯವರು ಹಿಂದೂ ಮುಸ್ಲಿಂ ಗಲಾಟೆಯನ್ನು ಹೋಗಲಾಡಿಸಲು ಯತ್ನಿಸುತ್ತಿದ್ದರು.ನಾವು ಯಾವುದೇ ದೇಶದ ಚರಿತ್ರೆಯನ್ನು ಅಭ್ಯಸಿಸಿದಾಗ ಕ್ರಾಂತಿಯ ನಾಯಕತ್ವವನ್ನು ವಹಿಸಿದ ವ್ಯಕ್ತಿಯೇ ಆ ದೇಶದ ಉನ್ನತಾಧಿಕಾರ ಬಯಸುವರು..ಆದರೇ ಭಾಪೂಜಿಯವರ ನಿಸ್ವಾರ್ಥ ಮನೋಭಾವ ಅವರನ್ನು ವಿಶ್ವಮಾನವನ ಸ್ಥಾನದಲ್ಲಿ ನಿಲ್ಲಿಸಿತು ಎಂದರೇ ತಪ್ಪಾಗಲಾರದು. ಇವರು ಎಂದೂ ಕೇವಲ ಭಾರತದ ಬಗ್ಗೆ ಮಾತ್ರ ಚಿಂತಿಸದೇ ಮನುಕುಲವನ್ನು ಪ್ರೀತಿಸಿದ ಧೀಮಂತ ವ್ಯಕ್ತಿತ್ವ ನಮ್ಮ ಭಾಪುರವರದು.
ಗಾಂಧೀಜಿಯವರ ಕುರಿತು ಮಹಾನ್ ವ್ಯಕ್ತಿಗಳ ಅಭಿಪ್ರಾಯ
ಆಲ್ಬರ್ಟ್ ಐನ್ ಸ್ಟೀನ್ …ಭೂಮಿಯ ಮೇಲೆ ಇಂತಹ ಮನುಷ್ಯನೊಬ್ಬ ಪ್ರತ್ರಕ್ಷವಾಗಿ ಜೀವಿಸಿದ್ದ ಎಂದು ತಲ ತಲಾಂತರದವರೆಗೂ ನಂಬಲು ಕಷ್ಟ.
ಗೋಪಾಲಕೃಷ್ಣ ಗೋಖಲೆಯವರು…ಗಾಂಧೀಜಿಯವರು ಭಾರತದ ಉದ್ಧಾರಕ.
ರವೀಂದ್ರನಾಥ ಠಾಕೂರ್ ರವರು…ಗಾಂಧೀಜಿಯವರನ್ನು ಮಹಾತ್ಮ ಎಂದು ಕರೆದರು.
ಸುಭಾಸ್ ಚಂದ್ರ ಬೋಸ್ ರವರು..ಮೊಟ್ಟ ಮೊದಲ ರಾಷ್ಟ್ರಪಿತ ಗಾಂಧೀಜಿ ಎಂದಿದ್ದಾರೆ.
*ಪ್ರಪಂಚ ಗಾಂಧಿಯನ್ನು ಗುರುತಿಸಿದ್ದು…*ಗೌತಮ ಬುದ್ಧನ ನಂತರದಲ್ಲಿ ಅವತರಿಸಿದ ಶಾಂತಿಧೂತ ಗಾಂಧೀಜಿ.
ಸಾಮಾಜಿಕ ಜೀವನಕ್ಕೆ ಗಾಂಧಿಯವರ ಕೊಡುಗೆಗಳು
* ಸಣ್ಣ ಮತ್ತು ಗೃಹ ಕೈಗಾರಿಕೆಗಳಿಗೆ ಪ್ರೋತ್ಸಾಹ ನೀಡಿದರು.
* ಚರಕದಿಂದ ನೂಲನ್ನು ತೆಗೆದು ಖಾದಿ ಉದ್ಯಮವನ್ನು ಜನಪ್ರಿಯಗೊಳಿಸಿದರು
* ಮಹಿಳೆಯರ ಸರಿ ಸಮಾನ ಸ್ಥಾನ ಮಾನಗಳಿಗಾಗಿ ಹೋರಾಡಿದರು.
*ನಡುರಾತ್ರಿಯಲ್ಲಿ ಹೆಣ್ಣುಮಗಳೊಬ್ಬಳು ನಿರ್ಭೀತಿಯಿಂದ ಓಡಾಡುವಂತ ವಾತಾವರಣದ ಅಗತ್ಯವಿದೆ ಎಂದು ಪ್ರತಿಪಾಧಿಸಿದರು.
* ಸಮಾಜದಲ್ಲಿ ತುಳಿತಕ್ಕೆ ಒಳಗಾದ ಜನರಿಗೆ ಹರಿಜನ ಎಂಬ ಪಾರಿಭಾಷಿಕ ಶಬ್ಧವನ್ನಿಟ್ಟು ಗೌರವಿಸಿದರು ಹಾಗೂ ಹರಿಜನ ಪತ್ರಿಕೆಯ ಮೂಲಕ ಸರಿಯಾದ ಸ್ಥಾನಮಾನ ದೊರಕಿಸಿದರು.
* ಮಾಡುತ್ತಾ ಕಲಿ ..ಆಡುತ್ತಾ ಕಲಿಯೆಂಬ ಶ್ರಮ ಕೇಂದ್ರಿತ ಮೂಲ ಶಿಕ್ಷಣವನ್ನು ಜಾರಿಗೊಳಿಸಿದರು.
*ಗ್ರಾಮರಾಜ್ಯವೇ..ರಾಮರಾಜ್ಯವೆಂಬ ಕಲ್ಪನೆ ಮೂಡಿಸಿದರು.
ಸಾರ್ವಜನಿಕ ಹಣವನ್ನು ಖರ್ಚು ಮಾಡುವಾಗ ಪ್ರತಿಯೊಂದು ಪೈಸೆಗೂ ಲೆಕ್ಕವಿಡಬೇಕೆಂದರು.
ಅದು ಆ ದೇಶದ ಬಡ ಜನತೆಗೆ ಸೇರಬೇಕು ಎಂದರು.
ತ್ಯಾಗಮಯ ಹಾಗೂ ಸರಳತೆ ಜೀವನದ ನಿದರ್ಶನಗಳಾಗಬೇಕುಎಂದರು.

ಗಾಂಧೀಜಿಯವರ ಮರಣ:
1948 ಜನವರಿ 30 ರಂದು ಪ್ರಾರ್ಥನಾ ಮಂದಿರದಲ್ಲಿ ನಾಥೂರಾಮ್ ಗೂಡ್ಸೆ ಎಂಬ ಹಂತಕನ ಗುಂಡಿಗೆ ಭಾರತದ ನಂದಾಜ್ಯೋತಿ ನಂದಿ ಹೋಯಿತು.ಈ ದಿನವನ್ನು ಹುತಾತ್ಮರ ದಿನವಾಗಿ ಆಚರಿಸಲಾಗುತ್ತಿದೆ.
ಇಂತಹ ಹೆಮ್ಮೆಯ ಭಾರತಾಂಭೆಯ ಸುಪುತ್ರ ಮಹಾತ್ಮ ಗಾಂಧೀಜಿ.

ಲಾಲ್ ಬಹದ್ದೂರ್ ಶಾಸ್ತ್ರೀಜಿಯವರು
ಶಾರದ ಪ್ರಸಾದ್ ಹಾಗೂ ರಾಮ್ದುಲಾರಿ ದೇವಿ ದಂಪತಿಗಳ ಮಗನಾದ ಶಾಸ್ತ್ರೀಜಿಯವರು 1904 ಅಕ್ಟೋಬರ್ 2 ರಂದು ಉತ್ತರ ಪ್ರದೇಶದ ರುದ್ರ ಪ್ರಯಾಗದಲ್ಲಿ ಜನಿಸಿದರು.
ಒಮ್ಮೆ ಇವರು ಬಾಲ್ಯದಲ್ಲಿದ್ದಾಗ ಶಾಲೆ ಮುಗಿಸಿ ಮನೆಗೆ ಬರುತ್ತಿದ್ದರು.ದಾರಿಯಲ್ಲಿ ಇದ್ದ ಮಾವಿನ ತೋಟದಲ್ಲಿ ಸ್ನೇಹಿತರೊಂದಿಗೆ ಸೇರಿ ಹಣ್ಣುಗಳನ್ನು ಕೀಳುತ್ತಿದ್ದರು.ತೋಟದ ಮಾಲಿ ಬಂದದ್ದನ್ನು ನೋಡಿದ ಕೂಡಲೇ ಎಲ್ಲಾ ಹುಡುಗರು ಓಡಿ ಹೋದರು.ಆದರೇ ಇವರು ಮಾಲಿಯ ಕೈಗೆ ಸಿಕ್ಕಿ ಬಿದ್ದರು.ಆಗ ಮಾಲಿಯು ನೀನು ಯಾರ ಮಗ? ನಿಮ್ಮ ತಂದೆ ತಾಯಿಗಳು ಇದನ್ನೇ ಏನು ನಿನಗೆ ಕಲಿಸಿದ್ದು?..ನಿನ್ನ ಗುರುಗಳು ಯಾರು ?ಹೇಳು ಅವರು ನಿನಗೆ ಕಳ್ಳತನ ಮಾಡವಂತೆ ಬೋಧಿಸಿದರೇನು? ಎಂದು ಚೆನ್ನಾಗಿ ಬೈದನು.ಇದನ್ನು ಕೇಳಿ ಶಾಸ್ತ್ರಿಯವರಿಗೆ ಬಹಳ ದುಃಖವಾಯಿತು.ನಾನು ಮಾಡಿದ ತಪ್ಪಿಗೆ ಯಾವುದೇ ತಪ್ಪನ್ನು ಮಾಡದ ನನ್ನ ಅಪ್ಪ- ಅಮ್ಮ ಮತ್ತು ನನ್ನ ಶಿಕ್ಷಕರು ನಿಂಧನೆಗೆ ಗುರಿಯಾಗಬೇಕಾಯಿತು ಎಂಬ ಪಶ್ಚಾತ್ತಪದ ನೋವು ಅವರ ಜೀವನದ ದಿಕ್ಕನ್ನೇ ಬದಲಿಸಿತು.ಇನ್ನು ಮುಂದೆ ನನ್ನ ನಡೆ ನುಡಿಗಳು ಇತರರಿಗೆ ಆದರ್ಶಪ್ರಾಯವಾಗಬೇಕು ಎಂದು ದೃಡ ಸಂಕಲ್ಪ ಮಾಡಿಯೇ ಬಿಟ್ಟರು.ಅದರಂತೆ ನಡೆದು ಎಲ್ಲರಿಗೂ ಮಾದರಿಯಾದರು.
ಗಾಂಧೀಜಿಯವರು ಹಾಗೂ ತಿಲಕರಿಂದ ಪ್ರಭಾವಿತರಾಗಿ ಸ್ವಾತಂತ್ರ್ಯ ಚಳುವಳಿಯಲ್ಲಿ ಸಕ್ರಿಯವಾಗಿ ಪಾಲ್ಗೊಂಡರು.
ನೆಹರುವರ ನಂತರದಲ್ಲಿ ಭಾರತದ ಎರಡನೇ ಪ್ರಧಾನಮಂತ್ರಿಗಳಾಗಿ ಅಧಿಕಾರ ವಹಿಸಿಕೊಂಡ ಶಾಸ್ತ್ರೀಜಿಯವರು ಬಹಳ ಕ್ಲಿಷ್ಟಕರ ಸಮಯದಲ್ಲಿ ಅಧಿಕಾರದ ಚುಕ್ಕಾಣಿ ಹಿಡಿದರು.ಈ ದುರ್ಬಲ ವ್ಯಕ್ತಿಯಿಂದ..ವಾಮನ ಮೂರ್ತಿಯಿಂದ.. ಏನು ತಾನೇ ಮಾಡಲು ಸಾಧ್ಯ ಎಂಬ ಉಡಾಫೆ ಮಾತುಗಳಾಡುವ ಜನರಿಗೆ ಇವರು ತಮ್ಮ ಪ್ರಾಮಾಣಿಕ ಹಾಗೂ ದಿಟ್ಟ ನಿರ್ಧಾರಗಳ ಮೂಲಕ ಮೂರ್ತಿ ಚಿಕ್ಕದಾದರೂ ಕೀರ್ತಿ ದೊಡ್ಡದು ಎಂಬ ಮಾತನ್ನು ರುಜುವಾತು ಮಾಡಿದರು.
“ನೀನು ಬಯಸಿದ ಬದಲಾವಣೆ ಮೊದಲು ನಿನ್ನಿಂದಲೇ ಆಗಲಿ” ಎನ್ನುವ ಗಾಂಧೀಜಿಯವರ ಮಾತನ್ನು ಸ್ವತಃ ಪಾಲಿಸಿ ಆದರ್ಶದ ಮುನ್ನುಡಿ ಬರೆದವರು ನಮ್ಮ ಈ ಶಾಸ್ತ್ರೀಜಿಯವರು.
ತಮಗೆ ಬರುತ್ತಿದ್ದ ಸಂಬಳವನ್ನು ದೇಶಕ್ಕಾಗಿ ಮುಡುಪಾಗಿಟ್ಟು ಹರಿದ ದೋತಿ ಉಟ್ಟ ಹಾಗೂ ಹರಿದ ಕೋಟನ್ನು ಸೂಜಿದಾರದಿಂದ ಹೊಲಿದು ಹಾಕಿಕೊಳ್ಳುತ್ತಿದ್ದ ಪ್ರಧಾನಿಯನ್ನು ನಾವು ಮತ್ತೊಮ್ಮೆ ನೋಡಲು ಸಾಧ್ಯವೇ ..ಎಂದು ನಾವು ಚಿಂತಿಸಬೇಕಿದೆ.
ಇವರು ದೇಶ ಸೇವೆಗಾಗಿ ಬಳಸಲು ಬ್ಯಾಂಕಿನಿಂದ ಸಾಲ ಪಡೆದು ಖರೀದಿಸಿದ ಕಾರಿನ ಸಾಲವನ್ನು ಲಲಿತ ಶಾಸ್ತ್ರಿಯವರು ತಮ್ಮ ಪತಿಯ ಮರಣದ ನಂತರ ಬರುತ್ತಿದ್ದ ಪೆನ್ಷನ್ ಹಣದಿಂದ ತೀರಿಸಿದರೆಂದರೇ..ಇವರೆಂತಹ ಆದರ್ಶ ಪತ್ನಿಯಾಗಿದ್ದರು ಎನಿಸುತ್ತದೆ.
ಭಾರತ ಪಾಕಿಸ್ತಾನ ಯುದ್ಧದ ಸಮಯದಲ್ಲಿ ಅಮೇರಿಕ ಗೋಧಿಯ ರಫ್ತನ್ನು ನಿಲ್ಲಿಸಿದಾಗ ಅದಕ್ಕೆ ಬಗ್ಗದೇ… ಭಾರತೀಯರನ್ನು ಸಹಾಯಕ್ಕಾಗಿ ಆಹ್ವಾನಿಸಿ ಸೇನೆಗೆ ಬೇಕಾದ ಸಹಾಯವನ್ನು ಪಡಿದರು. ಶಾಸ್ತ್ರೀಜಿಯವರಂತೆ ಲಕ್ಷಾಂತರ ಜನರು ಸೋಮವಾರದ ಉಪವಾಸ ವ್ರತ ಕೈಗೊಂಡು ಆ ಹಣವನ್ನು ದೇಶ ಸೇವೆಗಾಗಿ ನೀಡಿದರು.
ದೇಶದ ಆರ್ಥಿಕತೆಗೆ ಸಹಾಯವನ್ನು ತನ್ನ ಮನೆಯಿಂದಲೇ ಪ್ರಾರಂಭಿಸಿ ತನ್ನ ಮಗನ ಇಂಗ್ಲೀಷ್ ಟ್ಯೂಷನ್ ಬಿಡಿಸಿದರು.
ಇವರ ಪತ್ನಿ ಲಲಿತಾ ರವರು ಅನಾರೋಗ್ಯ ಪೀಡಿತರಾಗಿದ್ದಾಗಲೂ ಕೆಲಸದ ಹೆಂಗಸನ್ನು ಬಿಡಿಸಿ ಸ್ವತಃ ತಾವೇ ಮನೆಯ ಎಲ್ಲಾ ಕೆಲಸಗಳನ್ನು ಮಾಡಿಕೊಂಡು ಉಳಿಸಿದ ಹಣವನ್ನು ದೇಶಸೇವೆಗಾಗಿ ಮುಡುಪಾಗಿಟ್ಟವರು ಎಂದರೇ ಅದು ಶಾಸ್ತ್ರೀಜಿಯವರು.
ಇಂತಹ ವ್ಯಕ್ತಿ ಇಹಲೋಕದಲ್ಲಿ ತನ್ನ ಸೇವೆ ಮುಗಿಸಿ ಜನವರಿ 11..1966 ರಂದು ಹೃದಯಘಾತದಿಂದ ಮರಣಹೊಂದಿದರು.
ಆದರೇ ನಾವು ಈ ಇಬ್ಬರು ಮಹಾನ್ ವ್ಯಕ್ತಿಗಳ ಆಚರಣೆ ಮಾಡುವ ಜೊತೆಗೆ ಅವರ ಆದರ್ಶಗಳಲ್ಲಿ ಕೆಲವೊಂದನ್ನಾದರೂ ಪಾಲಿಸುವ ಪ್ರಯತ್ನ ಮಾಡಿದರೇ ನಮ್ಮ ಜಯಂತಿಗಳ ಮೌಲ್ಯ ಹೆಚ್ಚಬಹುದು.

🙏ಸರ್ವರಿಗೂ ಈ ಮಹಾನ್ ವ್ಯಕ್ತಿಗಳ ಜಯಂತಿಯ ಹಾರ್ದಿಕ ಶುಭಾಶಯಗಳು🙏

ಬ್ರಹ್ಮಶ್ರೀ ನಾರಾಯಣ ಗುರು

image

೧೨ನೆ ಶತಮಾನದ ಬಸವಣ್ಣನ ಕಾಲದ ಕ್ರೌರ್ಯಕ್ಕಿಂತ ಇಮ್ಮಡಿ, ಮುಮ್ಮಡಿಯಾದ ಕ್ರೌರ್ಯ, ದೌರ್ಜನ್ಯ, ಹಿಂಸೆ, ಬುದ್ಧಿ ಜೀವಿಗಳ ನಾಡಾದ ಕೇರಳದಲ್ಲಿ ೧೯ನೆ ಶತಮಾನದ ಅಂತ್ಯ ಮತ್ತು ೨೦ನೆ ಶತಮಾನದ ಆರಂಭದಲ್ಲಿ ನಡೆದಿತ್ತು. ಆಗಿನ ಕೇರಳದಲ್ಲಿ ಇಡೀ ಭಾರತದಲ್ಲಿಯೇ ಕಂಡರಿಯದ ಅಮಾನುಷ ವರ್ತನೆ ನಂಬೂದರಿ ಎಂಬ ಬ್ರಾಹ್ಮಣ ವರ್ಗದಿಂದ ಶೂದ್ರರ ಮೇಲೆ, ಅಸ್ಪ್ರಷ್ಯರ ಮೇಲೆ ಮತ್ತು ಸ್ತ್ರೀಯರ ಮೇಲೆ ನಡೆದಿತ್ತು. ಅಂತಹ ಜಾತೀಯತೆ, ಅಸ್ಪ್ರಶ್ಯತೆ ಎಂಬ ವಿಷ ವೃಕ್ಷವು ಇವೀ ಶೂದ್ರ ಜನಸಮೂಹವನ್ನು ಉಸಿರುಗಟ್ಟಿ ಸಾಯುಸಿತ್ತಿರುವ ಘೋರ ಕ್ರೌರ್ಯದ ತುರಿಯಾವಸ್ಥೆಯಲ್ಲಿ `ಈಳವ’ ಎಂಬ ಅಸ್ಪ್ರಶ್ಯ ಜಾತಿಯಲ್ಲಿ ನಾರಾಯಣ ಗುರು ಎಂಬ ಪವಿತ್ರಾತ್ಮನ ಜನ್ಮವಾಯಿತು. ಇಂತಹ ಜಾತೀಯತೆ, ಅಸ್ಪ್ರಶ್ಯತೆ ಎಂಬ ಕೊಳಕಿನಿಂದ ಸಮಾಜ ಕೊಳೆಯುತ್ತಿರುವಾಗ ನಾರಾಯಣ ಗುರುಗಳು ಅವತಾರ ಪುರುಷರಂತೆ, ಪ್ರವಾದಿಯಂತೆ ಜನ್ಮ ತಾಳುತ್ತಾರೆ. ಅನ್ಯ ಧರ್ಮಗಳನ್ನು ಖಂಡಿಸಿ ಅದ್ವೈತ ಮತ ಸ್ಥಾಪನಾಚಾರ್ಯರೆಂದು ಪ್ರಸಿದ್ಧಿ ಪಡೆದ ಶ್ರೀ ಶಂಕರಾಚಾರಾಚಾರ್ಯರು ತಮ್ಮ ಅದ್ವೈತ ಸಿದ್ಧಾಂತಕ್ಕೆ ಓರ್ವ ಹರಿಜನ ಗುರು ಎಂದು ಸ್ವೀಕರಿಸಿಕೊಂಡರೆ, ಕಾಲಕ್ರಮದಲ್ಲಿ ಅವರ ಹುಟ್ಟು ನಾಡಾದ ಕೇರಳವು ಜಾತಿಭೇದ ಮತ್ತು ಅಸ್ಪ್ರಶ್ಯತೆಯ ಹುಚ್ಚರ ಸಂತೆಯಾಯಿತು. ಅಂತಹ ಗೊಂದಲಮಯ ವಾತಾವರಣದಲ್ಲಿ ನಾರಾಯಣ ಗುರುಗಳ ಜನನವಾಯಿತು. ಈಳವ ಜಾತಿ ಕೇರಳದ ಅಸ್ಪ್ರಶ್ಯ ಜಾತಿಗಳಲ್ಲಿ ಒಂದಾಗಿದ್ದಿತು. ಕೇರಳ್ದಲ್ಲಿ ಆ ಜಾತಿಯ ಜನ %೩೦ ಇದ್ದರು. ನಾರಾಯಣ ಗುರುಗಳು ಕೇವಲ ಈಳವ ಜಾತಿಯವರನ್ನಲ್ಲದೆ, ಸಮಸ್ತ ಅಸ್ಪ್ರಶ್ಯ, ನಿಮ್ನ ವರ್ಗದವರನ್ನು ಎಲ್ಲ ಸ್ತರಗಳಲ್ಲಿ ಮೇಲೆ ತರಲು ಮಾಡಿದ ಅವರ ಪ್ರಯತ್ನವನ್ನು ಅವರ ಬದುಕಿನ್ ಮಹತ್ಸಾಧನೆ ಎನ್ನಬಹುದು. ನಾರಾಯಣ ಗುರುಗಳನ್ನು ಒಂದು ನಿರ್ದಿಷ್ಟ ಜಾತಿಯ ಗುರುವೆಂದು ಭಾವಿಸುವುದು ಸಂಕುಚಿತ ಮನೋಭಾವದ ಪ್ರತೀಕವೆನಿಸುವುದು.

ಪ್ರಾಚೀನ ಮೌಲ್ಯಾದರ್ಶಗಳನ್ನು, ಸತ್ಯವನ್ನು, ಅರಸಿಕೊಂಡು ಹೋಗಿ ಮನೆಯನ್ನು ತ್ಯಜಿಸಿ, ತಪಸ್ಸು ಮಾಡುತ್ತ ಗುಡ್ಡ, ಗಿರಿ, ಬೆಟ್ಟ, ಕಂದರ, ದಟ್ಟಾರಣ್ಯ, ಗುಹೆ, ಪರ್ಣಶಾಲೆಗಳಲ್ಲಿದ್ದು ಅನೇಕ ವರ್ಷ ಸಾಧನೆ ಮಾಡಿದರು.

ಗುರುಗಳ ಸಮಾಧಿಯ ಬಳಿಕ ಥಿಯೋಸೊಫಿಕಲ್ ಸೊಸೈಟಿಯ ಅಧ್ಯಕ್ಷೆಯಾಗಿದ್ದ ಎನಿಬೆಸಂಟರು ಪತ್ರಿಕೆಯಲ್ಲಿ ಹೀಗೆ ಬರೆದಿದ್ದರು:` ನಾರಾಯಣ ಗುರುಗಳ ಬದುಕೇ ಸನಾತನ ಧರ್ಮದಂತಿದ್ದು, ಅವರ ಸೇವಾ ವ್ಯಾಪ್ತಿ ವಿಶಾಲವಾಗಿತ್ತು. ಚಿಂತನೆಗಳು ಅಮೂಲ್ಯವಾಗಿದ್ದವು. ಯಾವುದೇ ಲೋಪ ದೋಷಗಳಿರದ ಜನಪರ ಕಾಳಜಿ ಅವರಿಗೆ ಇತ್ತು. ಇತ್ತೀಚಿಗಿನ ಶತಮಾನದಲ್ಲಿ ಇಂತಹ ಗೌರವ, ಮಾನ್ಯತೆಗಳನ್ನು ಪಡೆದ ಸ್ವಾಮಿಗಳು ಯಾರೂ ಇರಲಿಲ್ಲ. ಯೋಗದಲ್ಲಿ ಅವರು ಪತಂಜಲಿ, ಜ್ನಾನದಲ್ಲಿ ಶಂಕರ, ಅಹಿಂಸೆಯಲ್ಲಿ ಬುದ್ಧ, ಮಾನವೀಯತೆಯಲ್ಲಿ ಏಸುಗಳೆಲ್ಲರಂತೆ ಇದ್ದರು. ಅವರೊಬ್ಬ ದೇವರ ಅವತಾರವೇ ಆಗಿದ್ದರು. ಭವಿಷ್ಯದಲ್ಲಿ ಅವರನ್ನು ದೇವರೆಂದು ಆರಾಧಿಸುವ್ರು.

*ನಾರಾಯಣ ಗುರುಗಳ ಜನ್ಮ*

ಶಿವಗಿರಿಯಿಂದ ೪೫ ಕಿಲೋಮೀಟರ್ ಉತ್ತರಕ್ಕೆ ತಿರುವನಂತಪುರದಿಂದ ೧೨ ಕಿಲೋಮೀಟರ್ ದೂರದ ಉತ್ತರಪೂರ್ವ ಸೀಮೆಯಲ್ಲಿರುವ ಚೆಂಬಳಾಂತಿ ಗ್ರಾಮದಲ್ಲಿ ನಾರಾಯಣ ಗುರುಗಳು ಜನಿಸಿದರು. ಅವರು ಹುಟ್ಟಿ ಬೆಳೆದ ಮನೆಯನ್ನು ಇಂದಿಗೂ ಸುರಕ್ಷಿತವಾಗಿ ಕಾಯ್ದಿರಿಸಲಾಗಿದೆ. ನಾರಾಯಣ ಗುರು ಹುಟ್ಟಿದ್ದು 18-8-1854ರಂದು ಅವರ ಹೆತ್ತವರ ಕುರಿತಾಗಿ ಗುರು ನಟರಾಜರು ಈ ಕೆಳಗಿನ ವಿವರಗಳನ್ನು ಕೊಡುತ್ತಾರೆ: “ ಆ ಹಳ್ಳಿಯಲ್ಲಿ ೧೮೫೫ರ ಸುಮಾರಿಗೆ ಒಂದು ಕೃಷಿ ಕುಟುಂಬ ಬಾಳಿತ್ತು. ತಂದೆ ಮಾದನ್ ಆಶನ್. ಆಶನ್ ಕೇವಲ ಕೃಷಿಕರಷ್ಟೇ ಆಗಿರಲಿಲ್ಲ. ಅವರು ಖಗೋಲಶಾಸ್ತ್ರ, ಆಯುರ್ವೇದದಲ್ಲಿ ತಜ್ನರಾಗಿದ್ದರು. ಆಶನ್ ಎಂದರೆ ಆಚಾರ್ಯ ಎಂಬರ್ಥ. ವಾರಕ್ಕೊಮ್ಮೆ ಅವರ ಮನೆಯ ಚಾವಡಿಯಲ್ಲಿ ಹಳ್ಳಿಯ ಜನ ಮಾದನ್ ಆಶನ್ ಅವರ ರಾಮಾಯಣ, ಮಹಾಭಾರತ ಪ್ರವಚನವನ್ನು ಕೇಳಲು ನೆರೆಯುತ್ತಿದ್ದರು. ನಾರಾಯಣ ಗುರುವನ್ನು ಮುದ್ದಿನಿಂದ `ನಾಣು’ ಎಂದು ಕರೆಯುತ್ತಿದ್ದರು.ಕೇರಳದಲ್ಲಿ ಸಾಂಪ್ರದಾಯಿಕ ಕಲಿಕೆ ಎಂದರೆ ಸಂಸ್ಕ್ರತವನ್ನು ಕಲಿಯುವುದಾಗಿತ್ತು. ನಾರಾಯಣ ಗುರು ಸುಲಭವಾಗಿ ಸಂಸ್ಕ್ರತ ಭಾಷೆ ಮತ್ತು ವ್ಯಾಕರಣವನ್ನು ಕಲಿತ. `ಸಿದ್ಧ ರೂಪಮ್’,`ಬಾಲಪ್ರಭೋದಮ್’, ಮತ್ತು ಅಮರ ಕೋಶವನ್ನು ಕಲಿತ. ನಾಣುವು ಸಂಸ್ಕ್ರತ ಮತ್ತು ಮಲೆಯಾಳಮ್ ಮಾತ್ರ ಚೆನ್ನಾಗಿ ಕಲಿತಿದ್ದನಲ್ಲದೆ ತಮಿಳನ್ನೂ ಚೆನ್ನಾಗಿ ಕಲಿತನು. ಸ್ವಪ್ರಯತ್ನದಿಂದ ತಮಿಳಿನ ಶ್ರೇಷ್ಠ ಗ್ರಂಥಗಳಾದ `ತೋಲ್ಕಾಪ್ಪಿಯನ್’, `ನನ್ನುಲ್’, `ಸಿಲಪ್ಪದಿಕಾರಮ್’, `ಮನಿಮೇಕಲಮ್’, `ತಿರುಕ್ಕುರಲ್’, ಮತ್ತು `ತಿರುವಾಚಕಮ್’, ಅಭ್ಯಸಿಸಿದನು. ಮದುವೆ ಮತ್ತು ಸಂಸಾರ ತ್ಯಾಗ ವಿಚಿತ್ರ ಎಂದರೆ ನಾಣು ಸ್ವಾಮಿಯ ಮನಸ್ಸನ್ನು ಅರಿಯದ ಸಂಬಂಧಿಕರು ಅವನಿಗೆ ಮದುವೆಯಾಗುವಂತೆ ಒತ್ತಾಯಿಸಿದರು. ನಾಣು ರಾಮಕೃಷ್ಣ ಪರಮಹಂಸರು ಶಾರದಾ ದೇವಿಯನ್ನು ಮದುವೆಯಾದಂತೆ ಮದುವೆಯಾದ್ರು. ಆ ಕಾಲದಲ್ಲಿ ವರನ ಸಹೋದರಿಯು ವಧುವಿಗೆ `ಪುತವಾ’,ಅಂದ್ರೆ ವಧುವಿನ ಬಟ್ಟೆಗಳು, ಕೊಡುವ ಸಂಪ್ರದಾಯವಿತ್ತು. ನಾರಾಯಣ ಗುರುಗಳು ಮದುವೆಗೆ ತಾನೇ ಸ್ವತಃ ಹೋಗಲಿಲ್ಲ. ಮದುವೆ ೧೮೮೨ರ್ಲ್ಲಿ ಆಯಿತು. ಸಂಸಾರ್ ಬಂಧನವನ್ನು ಹರಿದುಕೊಂಡು ಹೋಗಲು ಮದುವೆ ಒಂದು ಅಡ್ಡಿಯಾಗಲಿಲ್ಲ. ಗುರು ಹೇಳಿದರು:“ನಾವು ಈ ಜಗತ್ತಿಗೆ ಯಾವುದೋ ಒಂದು ಉದ್ದೇಶಕ್ಕೆ ಬಂದಿದ್ದೇವೆ. ನನಗೆ ನನ್ನ ಕೆಲಸ ಮಾಡಲಿದೆ. ನಿನಗೆ ನಿನ್ನ ಕೆಲಸ ನಿರ್ವಹಿಸಲಿದೆ. ನನ್ನ ದಾರಿಯಲ್ಲಿ ನಾನು ಹೋಗುತ್ತೇನೆ. ನಿನ್ನ ದಾರಿಯಲ್ಲಿ ನೀನು ಹೋಗು. ಎಂದು ಹೆಂಡತಿಗೆ ಹೇಳಿ, ತಮ್ಮ ಹಳ್ಳಿಯನ್ನೂ, ತನ್ನ ಜನರನ್ನೂ ತ್ಯಜಿಸಿದರು.

*ಚಟ್ಟಾಂಬಿ ಸ್ವಾಮಿಕಲ್ ಮತ್ತು ದೈಕೋಡ್ ಅಯ್ಯಾವು*

ಶ್ರೀ ನಾರಾಯಣ ಗುರುಗಳು ಕುಂಜನ್ ಪಿಳ್ಳೈ ಚಟ್ಟಾಂಬಿ ಸ್ವಾಮಿಕಲ್ ಅವರನ್ನು ಭೇಟಿಯಾದರು. ಅವರನ್ನು ಷಣ್ಮುಖದಾಸ್ ಎಂದೂ ಕರೆಯುತ್ತಿದ್ದರು. ಅವರಿಬ್ಬರೂ ವೇದಾಂತ ವಿಷಯವನ್ನು ಚರ್ಚಿಸಿದರು. ಅವರು ಚಟ್ಟಾಂಬಿಯವರನ್ನು ತನ್ನ ಗುರುಗಳನ್ನಾಗಿ ಸ್ವೀಕರಿಸಿದರು. ಚಟ್ಟಾಂಬಿ ಸ್ವಾಮಿಕಲ್ ನಾರಾಯಣ ಗುರುಗಳನ್ನು ದೈಕೋಡ್ ಅಯ್ಯಾಯುವಿಗೆ ಪರಿಚಯಿಸಿದರು. ಅಯ್ಯಾವು ಸುಬ್ರಹ್ಮಣ್ಯ ದೇವರ ಆರಾಧಕರಾಗಿದ್ದರು. ಮತ್ತು ಯೋಗ ಗುರುಗಳಗಿದ್ದರು. ದೈಕೋಡ್ ನಾಣು ಆಶನ್ ರಿಗ
ೆ ಏಕಾಂತ ಪ್ರದೇಶಕ್ಕೆ ಕೊಂಡೊಯ್ದು ಯೋಗವನ್ನು ಕಲಿಸಿದರು. ಈ ಯೋಗ ತರಬೇತಿಯಿಂದ ಪ್ರೇರೇಪಿತರಾಗಿ ನಗರ್ ಕೊಯಿಲ್ ಹತ್ತಿರದ ಮರತು ಮಲೈ ಬೆಟ್ಟವೊಂದರಲ್ಲಿ ಏಕಾಂತಕ್ಕಾಗಿ, ಧ್ಯಾನಕ್ಕಾಗಿ ಆಶ್ರಯ ಪಡೆದರು. ಅವರು ಗುಹೆಯೊಂದರಲ್ಲಿ ಆಳವಾದ ಧ್ಯಾನದಲ್ಲಿ ತೊಡಗಿದರು. ಕಾಡು ಪ್ರಾಣಿಗಳು ಅವರ ಮಿತ್ರರಾಗಿದ್ದವು. ಅವರು ಗಿಡ ಮೂಲಿಕೆಗಳ ಎಲೆಗಳನ್ನು ತಿಂದು ನೀರು ಕುಡಿದು ಬದುಕಿದರು. ಮರುತಮಲೈಯಲ್ಲಿ ಅವರಿಗೆ ಜ್ನಾನೋದಯವಾಯಿತು. ನಾರಾಯಣ ಗುರುಗಳಿಗೆ ಶಂಕರರ ವೇದಾಂತವು ಹೊಸತನದಿಂದ ಕೂಡಿದ್ದಂತೆ ಎನಿಸಿತು. ಮನುಷ್ಯನ ಜೀವನಕ್ಕೆ ಅವಶ್ಯವಾದ ನ್ಯಾಯ, ಮತ್ತು ಸಮಾನತೆಯ ಕುರಿತಾಗಿ ಅದ್ವೈತ ತತ್ವ ಇದೆ ಎಂದು ಕಂಡುಕೊಂಡರು. ಮನುಷ್ಯ ಮನುಷ್ಯರ ನಡುವೆ ಸಂಬಂಧಗಳ ಕುರಿತು ಸಮಾನತೆ, ನ್ಯಾಯ, ಸ್ವಾತಂತ್ರ್ಯವನ್ನು ಬಯಸುವ ಅದ್ವೈತ ನಾರಾಯಣ ಗುರುಗಳದಾಗಿತ್ತು. ಶ್ರೀ ನಾರಾಯಣ ಗುರುಗಳ ಅಧ್ಯಾತ್ಮಿಕ ಅನುಭಾವವು ಅವರ ರಚನೆಗಳಾದ `ಆತ್ಮೋಪದೇಶ ಶತಕಂ’, ದಲ್ಲಿ ವ್ಯಕ್ತವಾಗಿದೆ.
ನಾರಾಯಣ ಗುರುಗಳು ಮತ್ತು ಅದ್ವೈತ ಸಿದ್ಧಾಂತ

ನಾರಾಯಣ ಗುರುಗಳು ಅರುವಿಪ್ಪುರಂನಲ್ಲಿ ಆಳವಾಗಿ ಧ್ಯಾನಿಸುತ್ತ ಸ್ವಲ್ಪ ದಿನಗಳನ್ನು ಕಳೆದರು. ಇಲ್ಲಿ ಅವರು ಬೃಹತ್ ಸಮಾಜ ಕ್ರಾಂತಿಯ ಬೀಜವನ್ನು ಬಿತ್ತಿದರು. ಅವ್ರು ಬದುಕುತ್ತಿರುವ ಸಮಾಜವು ಜಾತಿ ಎಂಬ ರಾಕ್ಷಸನ ಬಲೆಯಲ್ಲಿ ಸಿಕ್ಕಿ ಬಿದ್ದಿತ್ತು. ಕೆಳ ಜಾತಿಯವರಿಗೆ ದೇವಸ್ಥಾನಗಳಲ್ಲಿ ಪ್ರವೇಶವಿರಲಿಲ್ಲ. ಅವರಿಗೆ ಅಲ್ಲಿ ಪೂಜೆ ಮಾಡುವ ಹಕ್ಕನ್ನು ನಿರಾಕರಿಸಲಾಗಿತ್ತು. ಶಿವರಾತ್ರಿಯ ದಿನ ಶ್ರೀ ನಾರಾಯಣ ಗುರುಗಳು ಅರುವಿಪ್ಪುರಂನಲ್ಲಿ ಎಲ್ಲ ವಿಜೃಂಭಣೆಯೊಂದಿಗೆ ಶಿವಮೂರ್ತಿಯನ್ನು ಪ್ರತಿಷ್ಟಾಪಿಸಿದರು. ಮೇಲ್ಜಾತಿ ದೇವಸ್ಥಾನಗಳಿಗೆ ನಿರಾಕರಿಸಲ್ಪಟ್ಟ ಪ್ರವೇಶವು ಅರುವಿಪ್ಪುರಂನಲ್ಲಿ ಎಲ್ಲರಿಗೂ ಮುಕ್ತವಾಗಿ ತೆರೆಯಲ್ಪಟ್ಟಿತು. ಈ ಧಾರ್ಮಿಕ ಕ್ರಿಯೆಯು ಹಿಂದೂ ಸಮಾಜದಲ್ಲಿ ಧರ್ಮ ಪುನರ್ ಪ್ರತಿಷ್ಟಾಪನೆಗೆ ದಾರಿ ಮಾಡಿಕೊಟ್ಟಿತು. ನಂಬೂದರಿ ಬ್ರಾಹ್ಮಣರೊಬ್ಬರು `ನಿಮಗೆ ಮೂರ್ತಿ ಪ್ರತಿಷ್ಟಾಪನೆ ಮಾಡಲು ಯಾವ ಹಕ್ಕಿದೆ?’ ಎಂದು ಕೇಳಿದಾಗ ನಾರಾಯಣ ಗುರುಗಳು ತಮಾಷೆಯಿಂದ ಉತ್ತರಿಸಿದರು: `ನಾನು ಕೇವಲ ಈಳವ ಶಿವನನ್ನು ಪ್ರತಿಷ್ಟಾಪಿಸಿದ್ದೇನೆ.’ ಮತ್ತು ಈ ಧಾರ್ಮಿಕ ಕ್ರಿಯೆಯ ಸಮರ್ಥನೆಯನ್ನು ನೀಡಿದರು.ಇಡೀ ಭಾರತದಲ್ಲಿ ಮೊತ್ತ ಮೊದಲ ಬಾರಿಗೆ ಈಗಾಗ್ಲೇ ಕೇವಲ ಬ್ರಾಹ್ಮಣರಿಗೆ ಮಾತ್ರ ಮೀಸಲಾದ ವಿಶೇಷ ಹಕ್ಕನ್ನು ಕೆಳ ಜಾತಿಯ ಸ್ವಾಮಿ ಪಡೆದುಕೊಂಡರು. ನಿಜವಾದ ಯೋಗಿಗೆ ಮೂರ್ತಿಯನ್ನು ಪ್ರತಿಷ್ಟಾಪನೆ ಮಾಡುವ ಅಧಿಕಾರ ಎಂದು ನಾರಾಯಣ ಗುರುಗಳು ಸ್ಥಾಪಿಸಿದರು. ಗುರುಗಳು ಹೇಳುತ್ತಾರೆ:“ಯಾವುದೇ ಧರ್ಮವಾಗಲಿ ಮನುಷ್ಯನನ್ನು ಒಳ್ಳೆಯವನನ್ನಾಗಿ ಮಾಡುವುದೇ ಧರ್ಮ. ಶಿವ ದೇವಸ್ಥಾನವನ್ನು ಸ್ಥಾಪಿಸಿದ ಮೇಲೆ `ಈ ದೇವಸ್ಥಾನವನ್ನು ಯಾವುದೇ ಜಾತಿ, ಮತ್, ಧರ್ಮದವರು, ಸ್ಮಾಜದ ಎಲ್ಲ ವರ್ಗದವರು ಲಾಭ ಪಡೆಯುವಂತಹ ಆದರ್ಶ ಸ್ಥಳವಾಗಬೇಕು.’ ಎಂದು ಘೋಷಿಸಿದರು. ಇದು ಮನುಷ್ಯನ ಕಲ್ಯಾಣಕ್ಕಾಗಿ ಮತ್ತು ಬಿಡುಗಡೆಗಾಗಿ ಇರುವ ಅದ್ವೈತ ಧಾರ್ಮಿಕ ಮಾರ್ಗ. ಅರುವಿಪ್ಪುರಂನಲ್ಲಿ ಕೆಲವೇ ದಿನಗಳಲ್ಲಿ ಒಂದು ಆಶ್ರಮವಾಯಿತು. ೧೮೯೯ರಲ್ಲಿ ದೇವಸ್ಥಾನದ ಆಡಳಿತವನ್ನು ನೋಡಿಕೊಳ್ಳಲು ಒಂದು ಸೊಸೈಟಿಯನ್ನು ಸ್ಥಾಪಿಸಲಾಯಿತು. ಆ ಮೇಲೆ ಅದು `ಶ್ರೀ ನಾರಾಯಣ ಗುರು ಧರ್ಮ ಪರಿಪಾಲನ ಯೋಗಮ್’ ಎಂಬ ಸಂಸ್ಥೆಯಾಗಿ ಪುನರ್ರಚನೆಗೊಂಡಿತು. ಅದನ್ನು ಸಂಕ್ಷಿಪ್ತವಾಗಿ ಎಸ್. ಎನ್. ಡಿ. ಪಿ. ಎಂದು ಕರೆಯಲಾಗುತ್ತದೆ.
ಶಿವಗಿರಿ ಮತ್ತು ನಾರಾಯಣ ಗುರುಗಳು

ವರ್ಕಲ ಬೆಟ್ಟಗಳನ್ನು `ಶಿವಗಿರಿ’ ಎಂದು ಕರೆಯಲಾಗುತ್ತದೆ. ವರ್ಕಲ ತ್ರಿವೇಂದ್ರಂನಿಂದ ಉತ್ತರಕ್ಕೆ ೨೦ ಮೈಲುಗಳ್ಷ್ಟು ದೂರವಿರುವ ಕರಾವಳಿ ತೀರದ ಪಟ್ಟಣವಾಗಿದೆ. ಷಿವಗಿರಿಯು ಶಿವ ಮತ್ತು ಶಕ್ತಿಗೆ ಅಂದರೆ ಶಾರದಾ ದೇವಿಗೆ ಅರ್ಪಿತವಾಗಿರುವ ಪವಿತ್ರ ಕ್ಷೇತ್ರ. ಗುರುಗಳು ದಕ್ಷಿಣ ಕಾಶಿಯಾದ ವರ್ಕಲಕ್ಕೆ ಬಂದು ೧೯೦೪ರಲ್ಲಿ ಧಾರ್ಮಿಕ ಮಠವೊಂದನ್ನು ಸ್ಥಾಪಿಸಿದರು. ಎಸ್. ಎನ್. ಡಿ. ಪಿ. ಸ್ಥಾಪಿಸಿದ ೧೮ ವರ್ಷಗಳ ನಂತರ ೧೯೧೨ರಲ್ಲಿ ಶಿವಗಿರಿಯಲ್ಲಿ ಶಾರದಾ ದೇವಸ್ಥಾನವನ್ನು ಸ್ಥಾಪಿಸಿದರು. ಗುರುಗಳಿಗೆ ಎಲ್ಲ ಸಮುದಾಯದಿಂದ ಶಿಷ್ಯರಿದ್ದರು. ಹರಿಜನರೂ ಕೂಡಾ ಗೀತೆಯ ಶ್ಲೋಕಗಳನ್ನು ಪಠಿಸಬಹುದಿತ್ತು. ಉಪನಿಷತ್ತುಗಳನ್ನು ಪಠಿಸಬಹುದಿತ್ತು; ದೇವಸ್ಥಾನಗಳಲ್ಲಿ ಪೂಜೆ ಸಲ್ಲಿಸಬಹುದಿತ್ತು. ಗುರುಗಳ ದೃಷ್ಟಿಯಲ್ಲಿ ಬಡವರ, ದುರ್ಬಲರ ಸೇವೆಯೇ ದೇವರ ಸೇವೆಯಾಗಿತ್ತು. ಎಸ್. ಎನ್. ಡಿ. ಪಿ. ಯನ್ನು ಬಸವಣ್ಣನ ಅನುಭವ ಮಟಪಕ್ಕೆ ಹೋಲಿಸಬಹುದಾಗಿದೆ.

*ಗುರುಗಳು ಮತ್ತು ಅದ್ವೈತ ಆಶ್ರಮ*

ಗುರುಗಳು ಶಿವಗಿರಿಯನ್ನು ಸ್ಥಾಪಿಸಿದ ಮೇಲೆ ಅಲವೇಯಿಗೆ ವಾಸ್ತವ್ಯವನ್ನು ಬದಲಾಯಿಸಿ ಅದನ್ನು ಪ್ರಧಾನ ಧಾರ್ಮಿಕ ಮತ್ತು ಸಾಂಸ್ಕೃತಿಕ ಕೇಂದ್ರವನ್ನಾಗಿ ಮಾಡಿದರು. ಅವರ ಶ್ರೇಷ್ಠ ಗುರುಗಳಾದ ಶಂಕರಾಚಾರ್ಯರ ನೆನಪಿಗೆ ಅಲವೇಯಿಯಲ್ಲಿ ೧೯೧೩ರ್ಲ್ಲಿ ಅದ್ವೈತ ಆಶ್ರಮವನ್ನು ಸ್ಥಾಪಿಸಿದರು. ಅಲವೇಯಿ ಅದ್ವೈತ ಆಶ್ರಮವು ಸಂಸ್ಕೃತ ಮತ್ತು ಅದ್ವೈತ ತತ್ವ ಶಾಸ್ತ್ರವನ್ನು ಪ್ರಚಾರಪಡಿಸುವ ಮತ್ತು ಅಭ್ಯಸಿಸುವ ಕೇಂದ್ರವಾಯಿತು. ಗುರುಗಳು ೧೯೧೨ರಷ್ಟೊತ್ತಿಗೆ ತಮ್ಮ ಮುಖ್ಯ ಕಚೇರಿಯನ್ನು ಬದಲಾಯಿಸಿದರು. ಅವರು ಇನ್ನೂ ಮುಂದೆ ಉತ್ತರಕ್ಕೆ ಅಲೆದಾಡಿದರು. ಹಲವಾರು ತಾಸುಗಳ ಪ್ರವಾಸದ ನಂತರ ಕೇಪ್ ಕೊಮೋರಿನಿಂದ ಮಂಗಳೂರವರೆಗೆ ಅವರು ಎಲ್ಲವರಿಂದ ಗುರು ಎಂದು ಗೌರವಿಸಲ್ಪಟ್ಟರು. ಅವರು ಅಲವೇಯಿಯನ್ನು ತಮ್ಮ ವಾಸ ಸ್ಥಾನವನ್ನಾಗಿ ಮಾಡಿಕೊಡರು. ನದೀ ತೀರದಲ್ಲಿ ಒಣಗಿದ ತಾಳೆ ಗರಿಗಳಿಂದ ಮಾಡಿದ ಸರಳ ಮಾಡಿನಡಿಯಲ್ಲಿ ಅವರು ಪುನ್ಃ ಧ್ಯಾನದಲ್ಲಿ ಮಗ್ನರಾದರು.

*ನಾರಾಯಣ ಗುರುಗಳು ಮತ್ತು ಸಾಮಾಜಿಕ ಸುಧಾರಣೆಗಳು*

ಅಧ್ಯಾತ್ಮಿಕ ಸಾಧನೆಯಾದ ಬ್ರಹ್ಮನ್- ಆತ್ಮನ್ ಸಾಕ್ಷಾತ್ಕಾರದ ನಂತರವೂ ಗುರುಗಳು ಮಾನವ ಜನಾಂಗದ ಉನ್ನತಿಗಾಗಿ ಸಮಾಜ ಸೇವೆಯನ್ನು ಕೈಗೆತ್ತಿಕೊಂಡರು. ಎಸ್. ಎನ್. ಡಿ. ಪಿ. ಯ ಯೋಗಂ ಸಂಸ್ಥೆಯು ಶಿಕ್ಷಣ ಮತ್ತು ಗುರುಗಳ ಸಿದ್ಧಾಂತವಾದ ಒಂದೇ ಜಾತಿ, ಒಂದೇ ದೇವರು, ಒಂದೇ ಧರ್ಮ ಇವುಗಳ ಮೂಲಕ ಮಾನವ ಸಮಾಜವನ್ನು ಎತ್ತರಕ್ಕೆ ಕೊಂಡೊಯ್ಯುವುದು, ಉತ್ತಮಿಸುವುದು, ವಿಶೇಷವಾಗಿ ಮೂಲ್ಭೂತಮಾನವ ಹಕ್ಕುಗಳ ಸಂರಕ್ಷಣೆಗಾಗಿ ಅಸ್ಪ್ರಶ್ಯತಾ ನಿರ್ಮೂಲ ಮಾಡುವುದು ಈ ಮುಂತಾದ ಗುರಿಗಳನ್ನು ಇಟ್ಟುಕೊಂಡಿತ್ತ್ರು. ಮೊ
ದಲನೆಯದಾಗಿ ತನ್ನು ಆಧ್ಯಾತ್ಮಿಕ ಜ್ನಾನವನ್ನು ಶ್ರೀಮಂತಗೊಳಿಸಿಕೊಳ್ಖುವುದು ಮತ್ತು ಅದನ್ನು ಜನರ ಕಲ್ಯಾಣಭಿವೃದ್ಧಿಗಾಗಿ ಬಳಸಿಕೊಳ್ಳುವುದು. ಎರಡನೆಯ ಹೆಜ್ಜೆಯೆಂದರೆ ಜನರೊಂದಿಗೆ ವ್ಯಕ್ತಿಗತ ಸಂಪರ್ಕವನ್ನು ಹೊಂದಿರುವುದು. ನೊಂದ ಜನರ ಹೃದಯಗಳನ್ನು ಸಾಂತ್ವನದ ಮಾತುಗ್ಳಿಂದ ತಣಿಸುವುದು, ಅವರ ಮನಸ್ಸಿಗೆ ನೆಮ್ಮದಿಯನ್ನು ನೀಡುವುದು. ಕೊನೆಯದಾಗಿ ಅವರೆ ಚ್ಟುವಟಿಕೆಗಳು ಎಸ್. ಎನ್. ಡಿ. ಪಿ. ಯೋಗಮ್ ಮತ್ತು ಅಧ್ಯಾತ್ಮಿಕ ಅರಸುವಿಕೆಯಲ್ಲಿ ತೊಡಗಿರುವ ಶಿಷ್ಯರ ಆಮಂತ್ರಣಕ್ಕೆ ಸೀಮಿತಗೊಂಡವು. ೧೮೮೪ ರಿಂದ ೧೯೦೪ರವರೆಗೆ ಗುರುಗಳು ಅರುವಿಪ್ಪುರಮ್ ನ್ಲ್ಲಿ ವಾಸ್ತವ್ಯ ಹೂಡಿದರು. ಈ ಅವಧಿಯಲ್ಲಿಯೇ ಎಸ್. ಎನ್. ಡಿ. ಪಿ. ಯೋಗಮ್ ಸ್ಥಾಪನೆಯಾಯಿತು. ಯೋಗಮ್ ಆರ್ಥಿಕವಾಗಿ ಮತ್ತು ಸಾಮಾಜಿಕವಾಗಿ ತುಳಿತಕ್ಲೂಳಗಾದ ಜನರ ಶಕ್ತಿಶಾಲಿ ದನಿಯಾಯಿತು. ಗುರುಗಳು ದುರ್ಬಲ ವರ್ಗದವರ ಏಳ್ಗೆಗೆ ಅದರಲ್ಲೂ ಹರಿಜನರ ಏಳ್ಘೆಗಾಗಿ ಸಮಾಜ ಸುಧಾರಕರಿಗೆ ಸರಿಯಾದ ನಿರ್ದೇಶನಗಳನ್ನು ನೀಡಿ ಉನ್ನತ ಆದರ್ಶಗಳನ್ನು ಪ್ರಚಾರ ಮಾಡಲು ಪ್ರೇರಣೆ ನೀಡಿದರು. ಬೋಡಕರಿಗೆ ಶಿಕ್ಷಣ, ಧರ್ಮ, ನೀತಿ ತತ್ವಗಳು ನೀತಿ, ನಿಯಮಗಳು, ಪದ್ಧತಿಗಳು ಉದ್ದಿಮೆ ಇವುಗಳ ಬಗ್ಗೆ ಒತ್ತು ನೀಡುವಂತೆ ಸೂಚಿಸಲಾಯಿತು. ಗುರುಗಳ ಸ್ಂದೇಶ ಹೀಗಿದೆ:` ಶಿಕ್ಷಣ ಪ್ಡೆಯಿರಿ; ನೀವು ಸ್ವತಂತ್ರರಾಗುತ್ತೀರಿ. ಸಂಘಟಿತರಾಗಿರಿ; ನೀವು ಬಲಿಷ್ಟರಾಗುತ್ತೀರಿ. ಔದ್ಯೋಗಿಕವಾಗಿಉದ್ದಿಮೆಗಳನ್ನು ಸ್ಥಾಪಿಸಿ; ನಿಮ್ಮ ಆರ್ಥಿಕ ಪರಿಸ್ಥಿತಿಯು ಸುಧಾರಿಸುತ್ತದೆ. ಗುರುಗಳು ತಾವು ಉದ್ದೇಶಿಸಿರುವ ಸಮಾಜ ಸುಧಾರಣೆ ಜನರಿಗೆ ತಲುಪುವಂತೆ `ವಿವೇಕೋದಯಮ್’ ಎಂಬ ಮಾಸಿಕ ಪತ್ರಿಕೆಯನ್ನು ಹೊರತರುವಂತೆ ಸೂಚಿಸಿದರು. ೧೬ನೆ ಒಕ್ಟೋಬರ್ ೧೯೦೫ ರಂದು ಪರವುರ್ ನ್ ಸಭಯಲ್ಲಿ ಅಧ್ಯಕ್ಷತೆ ವಹಿಸಿ ಮದುವೆಯ ಸಮಾರಂಭಕ್ಕೆ ಕೆಲ್ವು ಹೊಸ ನಡೆಗಳನ್ನು ಪರಿಚಯಿಸಿದರು. ಮತ್ತು `ತಾಳಿಕೆಟ್ಟು’, `ತಿರ್ಂಡು ಕಲ್ಯಾಣಮ್’, ಅಂತಹ ಕೆಟ್ಟ ಸಾಂಪ್ರ್ದಾಯಗಳನ್ನು ನಿರ್ಮೂಲ್ನ ಮಾಡುವ್ಂತೆ ಕರೆ ಕೊಟ್ಟರು. ತಾಳಿಕೆಟ್ಟು ಅಥವಾ ಮಿನ್ನು ಕೆಟ್ಟು ಅಥವಾ ಕೆಟ್ಟು ಕಲ್ಯಾಣಮ್ ಇದು ಹಿಂದುಳಿದ ವರ್ಗದವರಲ್ಲಿ ದುಂದು ವೆಚ್ಚಕ್ಕೆ ದಾರಿ ಮಾಡಿಕೊಡುವ ಅರ್ಥವಿಲ್ಲದ ಕೆಟ್ಟ ಸಂಪ್ರದಾಯ. ಇಂಥ ಹಲವಾರು ಸಂಪ್ರದಾಯಗಳ್ಲ್ಲಿ ತಾಳಿ ಕಟ್ಟುವ ಆಚರಣೆಯೂ ಒಂದು. ಒಂದು ಹೆಣ್ಣು ಮಗುವಿಗೆ ಸುಮಾರು ೫ ವರ್ಷ ತುಂಬಿದಾಗ ಪ್ರಾಯಕ್ಕೆ ಬರುವ ಮೊದಲೆ ಮಾಡುವ ಅಣಕು ಮದುವೆ ಇದಾಗಿದ್ದು, ಹುಡುಗಿಯ ಕೊರಳಿಗೆ ಒಬ್ಬ ಹುಡುಗ, ಕೆಲವೊಮ್ಮೆ ಯಾರಾದರೂ ಯುವಕನೊಬ್ಬ ತಾಳಿ ಕಟ್ಟುತ್ತಾನೆ. ಭವಿಷ್ಯದಲ್ಲಿ ಮದುವೆ ಮಾಡುತ್ತೇವೆ ಎಂಬುದರ ಸಂಕೇತವಾದ ಈ ಅಣಕು ಮದುವೆಗೆ ಯ್ವುದೇ ಕಾನೂನಿನ ಆಧಾರವಿಲ್ಲ. ಹೀಗೆ ತಾಳಿ ಕಟ್ಟಿದವನೇ ಮದುವೆಯಾಗುತ್ತಾನೆ ಎಂಬ ನಿಯಮವೇನೂ ಇಲ್ಲ. ನಿಜವಾದ ಮದುವೆಗೆ ಮಾಡುವಂತೆ ಎಲ್ಲ ಕಾರ್ಯಕ್ರಮಗಳು ನಡೆಯುತ್ತವೆ. ತಾಳಿ ಕಟ್ಟಿದ ನಂತರ ಹುಡುಗ ಅವನ ಪಾಡಿಗೆ ತನ್ನ ಜೊತೆಗಾರರೊಂದಿಗೆ ಹೋಗುತ್ತಾನೆ. ಆ ಹುಡುಗನಿಗೆ ಹುಡುಗಿಯ ಕಡೆಯವರು ಬೇಕಾದಷ್ಟು ಹಣ್, ಹೊಸ ಬಟ್ಟೆ, ತೆಂಗಿನ ಕಾಯಿಗಳನ್ನು ಕೊಡುತ್ತಾರೆ. ಹಬ್ಬದ ವಾತಾವರಣ, ಭೂಇ ಭೋಜನ, ಉಡುಗೊರೆ ಮುಂತಾದ ಕಾರ್ಯಕ್ರಮಗಳೆಲ್ಲ ವೈಭವದಿಂದಲೆ ನಡೆಯುತ್ತವೆ. ಹುಡುಗಿ ತನ್ನ ತವರು ಮನೆಗೆ ಹೋದಾಗ ತಾಳಿಯನ್ನು ತೆಗೆಯುತ್ತಾರೆ. ಮುಂದೆ ಋತುಮತಿಯಾದ ಬಳಿಕ ವರನನ್ನು ಹುಡುಕಿ ಮೊದ್ಲು ತಾಳಿ ಕಟ್ಟಿದವನೂ ಆಗಬಹುದು, ವ್ಯವಸ್ಥಿತವಾದ ನಿಜ ಮದುವೆಯನ್ನು ಏರ್ಪಡಿಸುತ್ತಾರೆ. ಈ ಅರ್ಥಹೀನ, ಲಜ್ಜಾಸ್ಪದ ಆಚರಣೆಗಳನ್ನು ಗುರುಗಳು ವಿರೋಧಿಸಿದರು. ಶ್ರೀಮ್ಂತ ಮತ್ತು ಸಂಪ್ರದಾಯಸ್ಥರು ಇದು ಪ್ರತಿಷ್ಟೆಯ ಪ್ರಶ್ನೆ, ನಿಲ್ಲಿಸಿದರೆ ಸಮಾಜಕ್ಕೆ ಕೇಡುಂಟಾಗುತ್ತದೆ ಎಂಬ ವಾದವನ್ನು ಮುಂದಿಟ್ಟರೂ, ಕೇಳ್ದೇ ಗುರುಗಳು ಹೋರಾಟವನ್ನು ಮುಂದುವರಿಸಿದರು. ಎಸ್. ಎನ್. ಡಿ. ಪಿ. ಯೋಗಂ ನ ಮುಖವಾಣಿಯಾದ `ವಿವೇಕೋದಯಂ’ ಪತ್ರಿಕೆಯ ಎಲ್ಲ ಸಂಚಿಕೆಗಳಲ್ಲೂ ಈ ಆಚರಣೆಯಿಂದಾಗುವ ಕೆಡುಕುಗಳನ್ನು ಪ್ರಕಟಿಸುತ್ತಲೇ ಬಂದರು. ೧೯೦೬ರಲ್ಲಿ ಚೇರ್ತಲ ತಾಲೂಕಿನ ದೊಡ್ಡ ಶ್ರೀಮಂತನೂ, ಗುರುಗಳ ಭಕ್ತನೂ ಆಗಿದ್ದ ಕೊಚ್ಚು ರಾಮನ್ ವೈದ್ಯರ್ ಎಂಬವರ ಕುಟುಂಬದವರಲ್ಲಿ ಓರ್ವ ಹುಡುಗಿಗೆ ತಾಳಿ ಕಟ್ಟುವ ಸಮಾರಂಭದ ಬಗ್ಗೆ ತಿಳಿದ ಗುರುಗಳು ಬಧಕಗಳ ಬಗ್ಗೆ ವವರಿಸಿ, ಈಗ ಇದನ್ನು ತ್ಯಜಿಸುವುದರಿಂದ ನಮ್ಮವರೆ ಮನಸ್ಸಿಗೆ ನೋವಾದರೂ ಮುಂದಿನ ಪೀಳಿಗೆ ಇದರ ಫಲವನ್ನು ಸಂತೋಷದಿಂದ ಅನುಭವಿಸಲಿ ಎಂದು ಪತ್ರ ಬರೆದರು. ಪತ್ರವನ್ನೋದಿದ ಕೊಚ್ಚು ರಾಮನ್ ವೈದ್ಯರು ತಾನು ಏರ್ಪಡಿಸಲು ನಿರ್ಧರಿಸಿದ ಸಮಾರಂಭವನ್ನು ರದ್ದುಪ್ಡಿಸಿದರು. ಹೀಗೆ ಒಬ್ಬ ವ್ಯಕ್ತಿಯ ಶಾಂತವಾದ ಕೆಲವು ಹಿತೋಪದೇಶದಿಂದ ಸಮಾಜದಲ್ಲಿ ಇಂತಹ ಪರಿವರ್ತನೆ ಯಾಗುವುದಾದರೆ, ಈ ಮಹಾಮಹಿಮನ ಅಸಾಮಾನ್ಯ ಶಕ್ತಿಯ ಅರಿವು ಯಾರಿಗಾದರೂ ಆಗದಿರಲು ಸಾಧ್ಯವೇ? ಅಂತೆಯೇ ಅಳಿಯ ಸಂತಾನ ಪದ್ಧತಿಯ ಬಾಧಕಗಳನ್ನು ವಿವರಿಸಿ ಅದನ್ನು ತಡೆಹಿಡಿದ ಖ್ಯಾತಿ ಇವರದು. ಸೀಮಂತ ಕಾರ್ಯಕ್ರಮದಲ್ಲಿ ಆಗುವ ದುಂದು ವೆಚ್ಚಕ್ಕೆ ತಡೆ ಹ್ಶಾಕಿದರು. ವಿವಾಹ ವಿಚ್ಛೇದನ ಹಾಗೂ ಪುನರ್ರವಿವಾಹ ಅನಿವಾರ್ಯವಾದಲ್ಲಿ ಮಾಡಿಕೊಳ್ಳಬಹುದು ಎಂದರು. ಬಹು ಪತ್ನಿತ್ವ ಹಾಗೂ ಬಹು ಪತಿತ್ವ ಸಮಾಜಕ್ಕೆ ಹಿತವಲ್ಲ ಎಂದು ಅದಕ್ಕೂ ತಡೆಹಾಕಿದರು. ಸರಳ ವಿವಾಹಕ್ಕೆ ಒತ್ತು ನೀಡಿದರು. ಅಂತ್ಯ ಕ್ರಿಯೆಯಲ್ಲಿ ಮಾಡುವ ದುಂದು ವೆಚ್ಚಕ್ಕೆ ವಿರೋಧ ವ್ಯಕ್ತ ಪ್ಡಿಸಿದರು. ಹೊಸ ದೇವಸ್ಥಾನಗಳ ನಿರ್ಮಾಣವನ್ನು ವಿರೋಧಿಸಿದರು.
ಮಹಿಳಾ ಶೋಷಣೆಯ ದುಷ್ಟ ಪದ್ಧತಿಯನ್ನು ನಿಲ್ಲಿಸಿದ ಒಂದು ಸನ್ನಿವೇಶ

ಈಳವ ಮತ್ತಿತರ ನಿಮ್ನ ವರ್ಗದ ಸ್ತ್ರೀಯರು ಎದೆ ಭಾಗವನ್ನು ಕುಪ್ಪಸದಿಂದ ಮುಚ್ಚದೆ, ಉಚ್ಚ ಜಾತಿಯವರು ಎದುರಾದಾಗ, ಸೆರಗು ಸರಿಸಿ, ಅವರಿಗೆ ಗೌರವ ತೋರಿಸುವ ಕೆಟ್ಟ ಸಂಪ್ರದಾಯವಿತ್ತು. ಇದೊಂದು ಹೆಣ್ಣಿನ ಶೋಷಣೆಯ ನಿಕೃಷ್ಟ ಪದ್ಧತಿಯೆಂದು, ಗುರುಗಳು ಆ ಕ್ರಮವನ್ನು ನಿಲ್ಲಿಸಲು ಅಪ್ಪಣೆ ಕೊಟ್ಟಿದ್ದರು. ಹೀಗೆ ಗುರುಗಳು ತಾವು ಬೋಡಿಸಿದ ವಿಷಯಗಳನ್ನೆಲ್ಲಾ ಸ್ವತಹ್ ಆಚರಿಸುತ್ತಿದ್ದರು. ತಾವು ಪ್ರತಿಷ್ಟಾಪಿಸಿದ ದೇವಸ್ಥಾನಗಳ ಬಾಗಿಲು ಮಾನವರೆಲ್ಲರಿಗೂ ತೆರೆದಿರಬೇಕೆಂಬುದೇ ಅವರ ಇಚ್ಛೆಯಾಗಿರುತ್ತಿತ್ತು. ಅಂತರ್ಧರ್ಮೀಯ ವಿವಾಹಕ್ಕೂ ಗುರುಗಳು ಪ್ರೋತ್ಸಾಹಿಸಿದ್ದರು.

***

ಜಗಜ್ಯೋತಿ ಬಸವೇಶ್ವರ ಜಯಂತಿ.

“ಕಾಯಕವೇ ಕೈಲಾಸ” (Work is Workship) ಪ್ರತಿಯೊಬ್ಬರೂ ತಮ್ಮ ತಮ್ಮ ಜೀವನೋಪಾಯಕ್ಕಾಗಿ ಒಂದು ವೃತ್ತಿಯನ್ನು ಮಾಡಲೇಬೇಕು. ಮಾಡುವ ಕೆಲಸದಲ್ಲಿಯೇ ದೇವರನ್ನು ಕಾಣಬೇಕು. ಕೆಲಸವೇ ಪೂಜೆ, ಕೆಲಸವೇ ದೇವರು. ಕೆಲಸದಲ್ಲಿಯೇ ಕೈಲಾಸವನ್ನು ಕಾಣಬೇಕೆಂದು ಹೇಳಿದವರು ಜಗಜ್ಯೋತಿ ಬಸವೇಶ್ವರರು._ _ವಿಶ್ವಗುರು ಬಸವಣ್ಣನವರು ಪರಮಾತ್ಮನ ಕರುಣೆಯ ಕಂದರಾಗಿ ಅವತರಿಸಿದರು._ _ಇಂಗಳೇಶ್ವರ ಬಾಗೇವಾಡಿಯಲ್ಲಿ ಶೈವ ಬ್ರಾಹ್ಮಣ ದಂಪತಿಗಳಾದ ಮಾದರಸ-ಮಾದಲಾಂಬಿಕೆಯ ಮಗನಾಗಿ ಆನಂದನಾಮ_ ಸಂವತ್ಸರದಲ್ಲಿ _ವೈಶಾಖಮಾಸದ ಅಕ್ಷಯ ತೃತೀಯದಂದು ಏಪ್ರಿಲ್ 30 1134 ರೋಹಿಣ ನಕ್ಷತ್ರದಲ್ಲಿ ಜನಿಸಿದರು. ಯಾವುದೇ_ _ಅಂಧಶ್ರದ್ಧೆ ಜಡ ಸಂಪ್ರದಾಯಗಳನ್ನೊಪ್ಪದ ಸತ್ಯಾನ್ವೇಷಕರಾಗಿ ಹೆತ್ತವರನ್ನು, ಬಂಧು-ಬಾಂಧವರನ್ನು ತೊರೆದು ವಿದ್ಯಾಕಾಂಕ್ಷಿಯಾಗಿ ಕೂಡಲ ಸಂಗಮದ ಗುರುಕುಲಕ್ಕೆ ಹೋದರು. ಶಾಸ್ತ್ರಾಧ್ಯಯನ, ಯೋಗಾಭ್ಯಾಸಗಳಲ್ಲಿ ಬಾಲ್ಯವನ್ನು ಕಳೆದು ತಾರುಣ್ಯಕ್ಕೆ ಕಾಲಿರಿಸಿದರು. ಜನರಲ್ಲಿ ಮನೆ ಮಾಡಿಕೊಂಡಿದ್ದ ಮೌಢ್ಯತೆ, ಕಂದಾಚಾರ,_ _ಜಾತೀಯತೆಗಳನ್ನು ಕಂಡು ಮನನೊಂದು ಪರಿಹಾರವನ್ನು ಅರಸತೊಡಗಿದರು. ಎಲ್ಲ ದೇವರನ್ನು ಮೀರಿದ ಸೃಷ್ಟಿಕರ್ತನೇ ಶ್ರೇಷ್ಠವೆಂದು ಘೋಷಿಸಿ ಆ ದೇವನನ್ನು ಲಿಂಗದೇವ ಎಂದು ಕರೆದರು. ನಿರಾಕಾರ ದೇವನಿಗೆ ಮನುಷ್ಯರ ಪ್ರಾಣ ಗಳ ಆಕಾರ ಕೊಡುವುದು ಸರಿಯಲ್ಲ ಎಂಬ ಭಾವ ತಳೆದು ದೇವನ ಸಾಕಾರ ಕೃತಿಯೇ ಬ್ರಹ್ಮಾಂಡ ಇದು ಗೋಲಾಕಾರದಲ್ಲಿದೆ. ಆದ್ದರಿಂದ ಲಿಂಗದೇವನನ್ನು ವಿಶ್ವಾದಾಕಾರದಲ್ಲಿ ಪೂಜಿಸುವುದು ಸರಿ ಎಂದು ಇಷ್ಟ ಲಿಂಗದ ಪರಿಕಲ್ಪನೆ ನೀಡಿದರೂ, ದೇವರ ಕುರುಹಾದ ಇಷ್ಟಲಿಂಗವು ಮಾನವನ ಜಾತಿ, ವರ್ಣ, ವರ್ಗ ಭೇದಗಳನ್ನು ಕಳೆದು ಶರಣನಾಗಬೇಕು._ _ನವ ಸಮಾಜ ನಿರ್ಮಾಣದ ರೂಪುರೇಷಗಳನ್ನು ತಮ್ಮ ಮನದಲ್ಲಿ ಹೊಂದಿ ಕಲ್ಯಾಣದ ಕಾರ್ಯಕ್ಷೇತ್ರವನ್ನು_ _ಪ್ರವೇಶಿಸಿದರು. ಸೋದರ ಮಾವನ ಮಗಳು ನೀಲಾಂಬಿಕೆಯನ್ನು ವಿವಾಹವಾಗಿ ಕರಣ ಕ ಕಾಯಕ ಕೈಗೊಂಡರು. ಅಲ್ಲಿಂದ ಮುಂದೆ ಭಂಡಾರಿಯಾಗಿ ಪ್ರಧಾನಿ (ದಂಡನಾಯಕ) ಯಾಗಿ ಕಾರ್ಯ ನಿರ್ವಹಿಸಿದರು._ _ಬಸವ ಕಲ್ಯಾಣದಲ್ಲಿ ಬಸವಣ್ಣನವರು ಶರಣರ ಜೊತೆ ಸೇರಿ ಅನುಭವ ಮಂಟಪ_ _ಸ್ಥಾಪಿಸಿದರು. ಅನುಭವ ಮಂಟಪವು ವಿಶ್ವ ಮಾನವ ಸಂದೇಶ ಮತ್ತು ವಿಚಾರಗಳ ಬಗೆಗೆ ಮುಕ್ತವಾಗಿ ಚರ್ಚಿಸಬಹುದಾದ ವೇದಿಕೆಯಾಗಿದೆ_ . _ಅನುಭವ ಮಂಟಪದಿಂದ ಧರ್ಮ ಪ್ರಚಾರ ಮಾಡಿದರು. ಎಲ್ಲರ ಮನಗಳ ಬಾಗಿಲಿಗೂ ಧರ್ಮಗಂಗೆ ಹರಿಯುವಂತೆ ಮಾಡಿದರು. ಇಷ್ಟಲಿಂಗವೆಂಬ_ _ಗಣಲಾಂಛನವನ್ನು ಧರಿಸಿ ಲಿಂಗಾಯತರಾದ ಎಲ್ಲ ಶರಣ ಬಂಧುಗಳನ್ನು ಸಮಾನ ಭಾವದಿಂದ ಕಂಡರು._
_ಮಂಗಳವೇಡದ ರಾಜ ಬಿಜ್ಜಳನ ಆಸ್ಥಾನದಲ್ಲಿ ಮಂತ್ರಿಯಾದ ಬಸವಣ್ಣ ಹಲವಾರು ಜನಪರ ಮತ್ತು ಸಮಾಜ ಸುಧಾರಣೆ ಕ್ರಮಗಳನ್ನು ಕೈಗೊಂಡರು. ಕಾಯಕವೇ ಕೈಲಾಸವೆಂದು ಸಾರಿದರು. ಅಸ್ಪ್ರಶ್ಯತೆಯ ಹೆಸರಿನಲ್ಲಿ ಊರ ಹೊರಗೆ ಇರಿಸಲಾದ ದಲಿತರನ್ನು ಕರೆತಂದು ಸಮಾಜದ ಭಾಗವನ್ನಾಗಿ ಮಾಡಿದರು_ . _ದೇವಾಲಯ, ಕುಡಿಯುವ ನೀರಿನ ಬಾವಿ-ಕೆರೆಗಳನ್ನು ಬಳಸಲು ಇವರಿಗೂ ಸಮಾನ ಹಕ್ಕಿದೆಯಂದು ತೋರಿಸಿದರು._ _“ಉಳ್ಳವರು ಶಿವಾಲಯ ಮಾಡುವರು ನಾನೇನು ಮಾಡಲಿ ಬಡವನಯ್ಯ”_ _ಎಂದು ಬಸವಣ್ಣನವರು ಪುರೋಹಿತಶಾಹಿ ವ್ಯವಸ್ಥೆ ಮತ್ತು ಧರ್ಮದ ಹೆಸರಿನಲ್ಲಿ ಜನಸಾಮಾನ್ಯರ_ _ಶೋಷಣೆಯನ್ನು ಖಂಡಿಸಿದ್ದರು. ಬ್ರಾಹ್ಮಣ ಸಮಾಜದ ಶರಣರಾದ ಮಧುವರಸರ ಮಗಳನ್ನು ಸಮಗಾರ ಸಮಾಜದ ಶರಣರಾದ ಹರಳಯ್ಯನವರ ಮಗನಿಗೆ ಕೊಟ್ಟು ವಿವಾಹ ಮಾಡಲು ಪ್ರೇರಣೆ ನೀಡಿದರು._ _ಈ ವಿವಾಹದಿಂದ ಸಂಪ್ರದಾಯವಾದಿಗಳು ಸಿಡಿದೆದ್ದು ಬಿಜ್ಜಳ ಮಹಾರಾಜನನ್ನು ಬಸವಣ್ಣನವರ ವಿರುದ್ಧ ಪ್ರೇರೇಪಿಸಿ ಬಸವಣ್ಣನವರಿಗೆ ಗಡಿಪಾರು ಶಿಕ್ಷೆ ನೀಡುವಂತೆ ಮಾಡಿದರು. ಧರ್ಮಪಿತರು ಗಡಿಪಾರು ಶಿಕ್ಷೆ ಸ್ವೀಕರಿಸಿ ಕಲ್ಯಾಣದಿಂದ ಹೊರಟ ನಂತರ ಹರಳಯ್ಯ, ಮಧುವರಸ, ಶೀಲವಂತರ ಬಂಧನ ಮಾಡಿ ಅವರು ವರ್ಣಾಂತರ_ _ವಿವಾಹದಲ್ಲಿ ಭಾಗಿಯಾದುದಕ್ಕಾಗಿ ಕಣ್ಣು ಕೀಳಿಸುವ ಶಿಕ್ಷೆ._ _ಎಳೆ ಹೊಟ್ಟೆ ಶಿಕ್ಷೆಗೆ ಒಳಗಾಗಿ ಪ್ರಾಣ ಬಿಡಬೇಕಾಯಿತು. ಜಾತಿವಾದಿಗಳು ವಚನ ಸಾಹಿತ್ಯವನ್ನು ನಾಶ ಮಾಡಲು ಸನ್ನದ್ಧರಾದಾಗ ವೀರಮಾತೆ ಅಕ್ಕನಾಗಲಾಂಬಿಕೆ, ಚೆನ್ನಬಸವಣ್ಣ, ವೀರ ಗಣಾಚಾರಿ, ಮಡಿವಾಳ, ಮಾಚಯ್ಯನವರು ವೀರಾಗ್ರಣ ಗಳಾಗಿ ಕಾದಾಡಿ ವಚನ ಸಾಹಿತ್ಯ ನಿಧಿಯನ್ನು ಉಳಿಸಿಕೊಟ್ಟರು._ _ಇದೇ ಸಮಯದಲ್ಲಿ ಚೆನ್ನಬಸವಣ್ಣನವರು ಉತ್ತರ ಕನ್ನಡ ಜಿಲ್ಲೆಯ ಉಳವಿಗೆ ಬಂದು ನೆಲೆಸಿದರು._
_ಬಸವಣ್ಣನವರು 1196 ರಲ್ಲಿ ಕೂಡಲಸಂಗಮಕ್ಕೆ ಮರಳಿ ಬಂದರು. 7 ಜುಲೈ 1196 ನಳನಾಮ ಸಂವತ್ಸರದ_ _ಶ್ರಾವಣ ಶುದ್ಧ ಪಂಚಮಿಯಂದು ಉರಿಯುಂಡ ಕರ್ಪೂರದಂತೆ ಲಿಂಗೈಕ್ಯರಾದರು. ಅವರ ಸಮಾಧಿಯು ಅಲ್ಲಯೇ ಇದೆ._ _ಅವರ ಸಮಾಧಿಯನ್ನು ಕರ್ನಾಟಕ ಸರಕಾರದಿಂದ ಬಸವ ಸಾಗರ ಹಿನ್ನೀರಿನಲ್ಲಿ ಮುಳಗದಂತೆ ರಕ್ಷಿಸಿಲ್ಪಟ್ಟಿದೆ._

_ಬಸವಣ್ಣನವರ ತತ್ವಗಳು:-_
_ದೇವನೊಬ್ಬ ನಾಮ ಹಲವು ನಮ್ಮನ್ನೆಲ್ಲ ಸೃಷ್ಟಿಸಿದ ದೇವರು ಒಬ್ಬನೇ, ಮಾನವನಿಗೆ ಯಾವುದೇ ರೀತಿ_ _ಜಾತಿಕುಲಗಳಿಲ್ಲ ಮಾನವ ಜಾತಿ ಒಂದೇ. ಸ್ವರ್ಗ-ನರಕಗಳು ಬೇರಿಲ್ಲ :- ಪಾಪ-ಪುಣ್ಯ ಫಲವಾಗಿ ಸ್ವರ್ಗ-ನರಕಗಳು ಬೇರಿಲ್ಲ, ಅಯ್ಯಾ ಎಂದೊಡಿ ಸ್ವರ್ಗ, ಎಲವೇ ಎಂದರೆ ನರಕ, ಆಚಾರವೇ ಸ್ವರ್ಗ,_ ಅನಾಚಾರವೇ ನರಕ, ಸತ್ಯ _ನುಡಿವುದೇ ದೇವಲೋಕ ಮಿಥ್ಯ ನುಡಿಯುವುದೇ ಮೃತ್ರ್ಯಲೋಕ ಎಂದು ತಿಳಿಸಿದರು. ದಯವೇ ಧರ್ಮದ ಮೂಲ_ :- _ಯಾವುದೇ ಧರ್ಮದ ಮೂಲ ದಯೆ ದಯವಿಲ್ಲದ ಧರ್ಮ ಅದಾವುದಯ್ಯ? ದಯವಿರಬೇಕು ಸಕಲ ಪ್ರಾಣ ಗಳೆಲ್ಲರಲ್ಲಿ ಎಂದು ತಿಳಿಸಿ ಹಿಂಸಾಚಾರವನ್ನು ತಡೆಗಟ್ಟಿದರು._
_ಕಾಯಕವೇ ಕೈಲಾಸ :-_ _ಪ್ರತಿಯೊಬ್ಬರೂ ತಮ್ಮ ತಮ್ಮ ಜೀವನೋಪಾಯಕ್ಕಾಗಿ ಒಂದು ವೃತ್ತಿಯನ್ನು ಮಾಡಲೇ ಬೇಕಾಗುವುದು. ಅದರಲ್ಲಿಯೇ ದೇವರನ್ನು ಕಾಣ ರೋ ಎಂದರು._ _ಸಮತಾವಾದ :- ನಮ್ಮ ದೇಶದಲ್ಲಿ 12 ನೇ ಶತಮಾನದಲ್ಲಿ ಸಮತಾವಾದದ ಬೀಜ ಬಿತ್ತಿದ ಪ್ರಥಮ ವ್ಯಕ್ತಿ_ _ಎಂದರೆ ಶ್ರೀ ಬಸವಣ್ಣನವರು. ಜಾತಿ ಪದ್ಧತಿಗಳು ಕೇವಲ ಉದ್ಯೋಗದಿಂದ ಹುಟ್ಟಿ ಬಂದವುಗಳು, ಅವುಗಳನ್ನು ನಾವೇ ಮಾಡಿಕೊಂಡಿದ್ದೇವೆ. ಆದರೆ ಮಾನವ ಜಾತಿ ಒಂದೇ._

_ಬಸವಣ್ಣನವರ ಶೈಕ್ಷಣ ಕ ವಿಚಾರಗಳು :-_
ಪ್ರತಿಯೊಬ್ಬರು ಕಲಿಯುವಂತಾಗಬೇಕು, ಮೂಢ ನಂಬಿಕೆಗಳನ್ನು ಬಿಡುವುದು, ಕಾಯಕದ ಮಹತ್ವ, ಸಮಾನತೆ, ಸ್ತ್ರೀ ಶಿಕ್ಷಣ ನೈತಿಕತೆ ಸಮಾಜದ ಜನರು ಒಳ್ಳೆಯವರಾದರೆ ಉತ್ತಮ ಸಮಾಜ ಕಟ್ಟಬಹುದೆಂದು ತೋರಿಸಿಕೊಟ್ಟರು._
_“ಕಳಬೇಡ, ಕೊಲಬೇಡ, ಹುಸಿಯ ನುಡಿಯಲು ಬೇಡ, ಮುನಿಯಬೇಡ, ಅನ್ಯರಿಗೆ ಅಸಹ್ಯ ಪಡಬೇಡ”ಎಂದು ಜಗಜ್ಯೋತಿ ಬಸವಣ್ಣನವರು ಹೇಳಿದರು.

****

ಸುಭಾಷ್ ಚಂದ್ರ ಬೋಸ್ -ಜನ್ಮ ದಿನಾಚರಣೆ.

ಜನನ ಜನವರಿ ೨೩,೧೮೯೭,ಕಟಕ್, ಒರಿಸ್ಸಾ

ಮರಣ ಆಗಸ್ಟ್ ೧೮, ೧೯೪೫
ಟೈಪೈ, ಟೈವಾನ್ (ಸಂಭಾವಿತ)
ಮರಣದ ಕಾರಣ ವಿಮಾನ ಅಪಘಾತ (ಸಂಭಾವಿತ)
ಇದಕ್ಕೆ ಪ್ರಸಿದ್ಧ ಭಾರತದ ಸ್ವಾತಂತ್ರ್ಯ ಸಂಗ್ರಾಮ, ಭಾರತೀಯ ರಾಷ್ಟ್ರೀಯ ಸೇನೆ

ಶೀರ್ಷಿಕೆ ನೇತಾಜಿ, ಆಜಾದ್ ಹಿಂದ್ ಮುಖ್ಯಸ್ಥ
ರಾಜಕೀಯ ಪಕ್ಷ ಫಾರ್ವರ್ಡ್ ಬ್ಲಾಕ್

ಧರ್ಮ ಹಿಂದು

ಸಂಗಾತಿ(ಗಳು) ಎಮಿಲಿ ಶೆಂಕ್ಲ್

ಮಕ್ಕಳು ಅನಿತ ಬೋಸ್ ಫಾಫ್.

ಸುಭಾಷ್ ಚಂದ್ರ ಬೋಸ್ (সুভাষ চন্দ্র বসু; ಜನನ: ಜನವರಿ ೨೩, ೧೮೯೭ — ಮರಣ (ಸಂಭಾವಿತ): ಆಗಸ್ಟ್ ೧೮, ೧೯೪೫) ನೇತಾಜಿ ಎಂದೇ ಪ್ರಸಿದ್ಧರಾದ ಭಾರತದ ಸ್ವಾತಂತ್ರ್ಯ ಸಂಗ್ರಾಮದ ಪ್ರಮುಖ ಜನನಾಯಕರಲ್ಲಿ ಒಬ್ಬರು. ಸ್ವಾಮಿ ವಿವೇಕಾನಂದರ ವಿಚಾರಗಳಿಂದ ಪ್ರಭಾವಿತರಾದ ಇವರು ಭಾರತ ಸ್ವಾತಂತ್ರ ಹೋರಾಟದಲ್ಲಿ ಅತ್ಯಂತ ವಿಶಿಷ್ಟ ಪಾತ್ರವಹಿಸಿದವರು.

●ಜನನ, ಜೀವನ

ಸುಭಾಷ್‌ಚಂದ್ರ ಬೋಸ್ ಜನಿಸಿದ್ದು ೧೮೯೭ರ ಜನವರಿ ೨೩ರಂದು, ಒರಿಸ್ಸಾದ ಕಟಕ್‌ನಲ್ಲಿ. ತಂದೆ ಜಾನಕೀನಾಥ ಬೋಸ್, ತಾಯಿ ಪ್ರಭಾವತಿ. ಆ ದಂಪತಿಗಳ ೯ ಮಕ್ಕಳಲ್ಲಿ ಸುಭಾಷ್ ೬ನೇ ಯವರು.ಕಟಕ್‌ನಲ್ಲಿ ರ‍್ಯಾವೆನ್‌ಶಾ ಕೊಲಿಜಿಯೇಟ್ ಶಾಲೆಯಲ್ಲಿ ಪ್ರಾಥಮಿಕ ವ್ಯಾಸಂಗ, ಅಲ್ಲಿ ಮುಖ್ಯೋಪಾಧ್ಯಾಯ ಬೇಣಿಮಾಧವದಾಸ್‌ರ ರಿಂದ ಪ್ರೇರಣೆ, ಮುಂದೆ ವಿವೇಕಾನಂದರ ಸಾಹಿತ್ಯಗಳು, ಪತ್ರಗಳು ಮತ್ತು ’ಕೊಲೊಂಬೋದಿಂದ ಆಲ್ಮೋರಾಕ್ಕೆ’ ಉಪನ್ಯಾಸಗಳಿಂದ ಪ್ರಭಾವಿತರಾದ ಬೋಸರು ಅರವಿಂದರ ’ಆರ್ಯ’ ಮಾಸಪತ್ರಿಕೆಯ ತಪ್ಪದ ಓದುಗ!

೧೯೧೯ರಲ್ಲಿ ತತ್ವಶಾಸ್ತ್ರ ವಿಭಾಗದಲ್ಲಿ ಬಿ.ಎ. ಪದವಿ, ನಂತರ ೧೯೧೯ರ ಸೆಪ್ಟೆಂಬರ್ ೧೫ರಂದು ಐ.ಸಿ.ಎಸ್ ಪರೀಕ್ಷೆಗಾಗಿ ಇಂಗ್ಲೆಂಡಿಗೆ ಪಯಣ. ೧೯೨೦ರ ಸೆಪ್ಟಂಬರ್‌ನಲ್ಲಿ ನಾಲ್ಕನೇ ಸ್ಥಾನಿಗರಾಗಿ ಐ.ಸಿ.ಎಸ್ ಪದವಿ ಪ್ರಾಪ್ತಿ.ವಿದೇಶೀ ನೌಕರಿ ಒಲ್ಲೆ ಎಂದು ಗಳಿಸಿದ್ದ ಐ.ಸಿ.ಎಸ್. ಪದವಿಯನ್ನು ೧೯೨೧ರ ಎಪ್ರಿಲ್ ೨೨ರಂದು ಬ್ರಿಟಿಷ್ ಸರ್ಕಾರದ ಭಾರತ ವ್ಯವಹಾರ ಸಚಿವ ಎಡ್ವಿನ್ ಮಾಂಟೆಗುಗೆ ಪತ್ರವೊಂದನ್ನು ಬರೆದು ಮರಳಿಸಿದ್ದರು ಬೋಸ್!

೨೦ ತಿಂಗಳ ಇಂಗ್ಲೆಂಡ್ ವಾಸದ ನಂತರ ೧೯೨೧ರ ಜುಲೈ ೧೬ರಂದು ಮುಂಬಯಿಗೆ ಮರಳಿದರು ಬೋಸ್. ಅಂದೇ ಗಾಂಧೀಜಿ ಜತೆ ಮೊದಲ ಭೇಟಿ.೧೯೨೧ರ ಆಗಸ್ಟ್‌ನಿಂದ ಚಿತ್ತರಂಜನ್‌ದಾಸ್‌ರ ಮಾರ್ಗದರ್ಶನದಲ್ಲಿ ಯುವಕರ ಸಂಘಟನೆಗೆ ಆದ್ಯತೆ. ಚಳುವಳಿಯ ಸಂದರ್ಭವೊಂದರಲ್ಲಿ ಮ್ಯಾಜಿಸ್ಟ್ರೇಟರು ೬ ತಿಂಗಳ ಸಜೆ ಘೋಷಿಸಿದಾಗ ’ಬರಿಯ ೬ ತಿಂಗಳೇ? ನನ್ನದೇನು ಕೋಳಿಕದ್ದ ಅಪರಾಧವೇ?’ ಎಂದಿದ್ದರು ಬೋಸ್!

●ರಾಷ್ಟ್ರ ನಿರ್ಮಾಣದ ಜವಾಬ್ದಾರಿ.

ರಾಷ್ಟ್ರ ನಿರ್ಮಾಣದ ಜವಾಬ್ದಾರಿಯುತ ಸ್ಥಾನದಲ್ಲಿದ್ದು ರಾಷ್ಟ್ರಹಿತಕ್ಕೆ ಧಕ್ಕೆಯಾಗುವ ಯಾವುದೇ ವಿಷಯಗಳಲ್ಲಿ ದುರ್ಬಲನೀತಿ ಹೊಂದಿರಬಾರದೆಂಬ ಸುಭಾಷ್‌ರ ದಿಟ್ಟನಿಲುವಿನ ಪ್ರತಿಧ್ವನಿಯಾಗಿತ್ತು ಆ ಮಾತು. ಕಾಂಗ್ರೆಸ್‌ನ ಬಲಹೀನ ನಾಯಕತ್ವ, ದುರ್ಬಲ ಒಪ್ಪಂದಗಳು, ಸ್ವಾಭಿಮಾನ ಶೂನ್ಯ ವರ್ತನೆಗೆ ಪ್ರತಿಯಾಗಿ ಆತ್ಮಾಭಿಮಾನದ ಸ್ವರಾಜ್ಯಹೋರಾಟಕ್ಕೆ ಬಲತುಂಬಿದವರು ಸುಭಾಷರು.
ತಾನು ಕಷ್ಟಪಟ್ಟುಗಳಿಸಿದ್ದ ಐ.ಸಿ.ಎಸ್. ಪದವಿಯನ್ನೇ ತಿರಸ್ಕರಿಸಿ, ಸ್ವಾತಂತ್ರ್ಯ ಸಂಗ್ರಾಮಕ್ಕೆ ಧುಮುಕಿದ ಬೋಸ್‌ರಿಗಿದ್ದ ರಾಜಕೀಯ ಚಿಂತನೆಯ ವೈಶಾಲ್ಯತೆ ಆ ಕಾಲಮಾನದ ಯಾರೊಬ್ಬರಲ್ಲೂ ಇರಲಿಲ್ಲ. ಆಸ್ಟ್ರಿಯಾ, ಇಂಗ್ಲೆಂಡ್, ಜರ್ಮನಿ, ಜಪಾನ್ ಸೇರಿದಂತೆ ಹತ್ತಾರು ರಾಷ್ಟ್ರಗಳಲ್ಲಿ ಮಿಂಚಿನ ಓಡಾಟ ನಡೆಸಿ ಭಾರತೀಯ ಸ್ವರಾಜ್ಯ ಹೋರಾಟದ ದನಿಗೆ ತೀವ್ರತೆ ತಂದಿದ್ದ ಬೋಸರು, ತಾನು ನಂಬಿದ್ದ ಕ್ರಾಂತಿಪಥದಲ್ಲಿ ಎಂದೂ ರಾಜಿಮಾಡಿದವರಲ್ಲ.
ಶೀಘ್ರ ಸ್ವಾತಂತ್ರ್ಯಪ್ರಾಪ್ತಿಗಾಗಿ ಅವರು ಮಂಡಿಸುತ್ತಿದ್ದ ವಾದಗಳು, ಅದಕ್ಕಾಗಿ ಶ್ರಮಿಸಬೇಕಾದ ತ್ವರಿತ ಸಿದ್ಧತೆಗಳ ಕುರಿತು ಬೋಸ್‌ರ ನಿಲುವುಗಳೆಲ್ಲ ಕಾಂಗ್ರೆಸ್‌ನ ಮಂದಗಾಮಿ ಗುಂಪಿಗೆ ಅಸಹ್ಯವಾಗಿತ್ತು. ಸ್ವತಃ ಗಾಂಧೀಜಿಯವರೇ ಹಲವು ಬಾರಿ ಬೋಸ್‌ರನ್ನು ಟೀಕಿಸಿದ್ದರು! ಅವರಿಗೆ ದೂರಗಾಮಿ ಚಿಂತನೆ ಇಲ್ಲ ಎಂಬ ಆರೋಪ.

ಆದರೆ ೧೯೩೮ರಲ್ಲಿ ಭಾರತದ ವಿಭಜನೆಯ ಮುಸ್ಲಿಂಲೀಗ್- ಬ್ರಿಟಿಷರ ತಂತ್ರಗಾರಿಕೆಯ ಕುರಿತು ಮೊದಲಬಾರಿಗೆ ಬಹಿರಂಗವಾಗಿ ಎಚ್ಚರಿಸಿದರೂ ಮಂದಗಾಮಿಗಳಿಗೆ ಕೇಳಿಸಲಿಲ್ಲ. ಪರಿಣಾಮವಾಗಿ ೯ ವರ್ಷದಲ್ಲೇ ದೇಶ ಹೋಳಾಯಿತು! ಬೋಸ್‌ರ ದೂರಗಾಮಿ ಚಿಂತನೆಗಳಿಗೂ ಕವಡೆ ಕಿಮ್ಮತ್ತಿನ ಬೆಲೆ ಕೊಡದ ಕಾಂಗ್ರೆಸ್‌ನಿಂದ ಸ್ವತಃ ಹೊರಬಂದವರು ಬೋಸ್.

●ಸ್ವರಾಜ್ಯಪಕ್ಷ ಸ್ಥಾಪನೆ

ಕಾಂಗ್ರೆಸ್‌ನ ಡೋಲಾಯಮಾನ ನೀತಿಗಳಿಗೆ ಬೇಸತ್ತು ಚಿತ್ತರಂಜನ್‌ದಾಸ್‌ರಿಂದ ’ಸ್ವರಾಜ್ಯಪಕ್ಷ ಸ್ಥಾಪನೆ. ಬೋಸ್‌ರು ದಾಸ್‌ರ ಜತೆಗೇ ಚಟುವಟಿಕೆಗಳಲ್ಲಿ ಭಾಗಿ. ೧೯೨೩ರ ಅಕ್ಟೋಬರ್‌ನಿಂದ ದಾಸ್‌ರು ಸ್ಥಾಪಿಸಿದ್ದ ’ಫಾರ್ವರ್ಡ್’ ದಿನಪತ್ರಿಕೆಯ ನಿರ್ವಹಣೆಯ ಜವಾಬ್ದಾರಿ. ೧೯೨೫ರ ಜೂನ್ ೧೬, ದಾಸ್‌ರ ನಿಧನ, ಕ್ರಾಂತಿಕಾರಿ ಚಟುವಟಿಕೆಗಳಿಗಾಗಿ ಬೋಸ್‌ರ ಬಂಧನ, ಬಿಡುಗಡೆ.

೧೯೨೭ರ ನವೆಂಬರ್‌ನಲ್ಲಿ ಬಂಗಾಳಪ್ರದೇಶ ಕಾಂಗ್ರೆಸ್‌ನ ಅಧ್ಯಕ್ಷರಾಗಿ ಆಯ್ಕೆ, ಆದರೆ ಗಾಂಧಿ ಪ್ರಣೀತ ಮಂದ ಮಾರ್ಗಕ್ಕಿಂತ ಸುಭಾಷ್‌ರದು ತೀರಾ ಭಿನ್ನ ಎಂಬುದು ಕ್ರಮೇಣ ಗೊತ್ತಾಯಿತು. ಹತ್ತಾರು ಚಳುವಳಿಗೆ ನೇತೃತ್ವ, ಅಖಿಲಭಾರತ ಟ್ರೇಡ್ ಯೂನಿಯನ್ ಕಾಂಗ್ರೆಸ್‌ನ ಅಧ್ಯಕ್ಷರಾಗಿ ಆಯ್ಕೆ.೧೯೩೩, ಫೆಬ್ರವರಿ ೨೩ರಂದು ಯೂರೋಪಿನಲ್ಲಿ ಭಾರತದ ಸ್ವಾತಂತ್ರ್ಯ ಹೋರಾಟಪರ ಅಭಿಯಾನ.

ಇಂಗ್ಲೆಂಡ್, ಆಸ್ಟ್ರಿಯಾ, ಇಟೆಲಿ ವಿಯೆನ್ನಾಗಳ ಭೇಟಿ, ತ್ವರಿತಗತಿಯ ಪ್ರವಾಸ, ಮಿಂಚಿನ ಓಡಾಟ. ಸ್ವಿಟ್ಜರ್ಲೆಂಡ್, ಚೆಕೋಸ್ಲೋವಾಕಿಯಾ, ಪೋಲೆಂಡ್, ಜರ್ಮನಿಗಳಲ್ಲಿ ಭಾರತದ ಪರ ಪ್ರಚಾರ. ಇಟೆಲಿ ಪ್ರಧಾನಿ ಬೆನಿತೋ ಮುಸ್ಸೋಲಿನಿ ಜತೆ ಚರ್ಚೆ. ೧೯೩೬ ಏಪ್ರಿಲ್ ೮ರಂದು ಮರಳಿ ಭಾರತಕ್ಕೆ, ಬಂದರಲ್ಲೇ ಬಂಧನ. ೧೯೩೭ರಲ್ಲಿ ಮತ್ತೆ ಆಸ್ಟ್ರಿಯಾ ಪಯಣ.

●ರಾಜಕೀಯ ಅನುಭವ-ಒಳನೋಟ

ಕಾಂಗ್ರೆಸ್‌ನ ಅಖಿಲಭಾರತ ಅಧಿವೇಶನದ ಅಧ್ಯಕ್ಷತೆ ೧೯೩೮ರ ಫೆಬ್ರವರಿ ೧೯ರಂದು, ಹರಿಪುರದಲ್ಲಿ. ವಿದೇಶೀ ನೆಲಗಳ ಓಡಾಟದಿಂದ ಪಡೆದ ರಾಜಕೀಯ ಅನುಭವ-ಒಳನೋಟಗಳಿಂದ ಬ್ರಿಟಿಷರ ಒಡೆದು ಆಳುವನೀತಿ ಕುರಿತ ಕ್ಷಾತ್ರತೇಜದ ಐತಿಹಾಸಿಕ ಭಾಷಣ, ದೇಶ ವಿಭಜನೆಯ ಬ್ರಿಟಿಷರ ತಂತ್ರದ ಸೂಚನೆ. ಮುಂದಿನ ೯ ವರ್ಷದಲ್ಲೇ ಸತ್ಯವಾದ ಬೋಸ್ ಭವಿಷ್ಯವಾಣಿ! ಆರೆಸ್ಸೆಸ್‌ನ ’ಸಂಘ ಶಿಕ್ಷಾವರ್ಗ’ ಶಿಬಿರಕ್ಕೆ ೧೯೩೮ರಲ್ಲಿ ಭೇಟಿಗೆ ಒಪ್ಪಿಗೆ, ಸಂಘದ ಧ್ಯೇಯ – ಅನುಶಾಸನ ಕಾರ‍್ಯಪದ್ಧತಿ ಕುರಿತ ಶ್ಲಾಘನೆ.
ಆದರೆ ಕಾರಣಾಂತರಗಳಿಂದ ಭೇಟಿ ಸಾಧ್ಯವಾಗಲಿಲ್ಲ.ಕಾಂಗ್ರೆಸ್ ಅಧ್ಯಕ್ಷಗಾದಿಗೆ ನಡೆದ ಮೊತ್ತಮೊದಲ ಚುನಾವಣೆಯಲ್ಲಿ ಡಾ|| ಪಟ್ಟಾಭಿ ಸೀತಾರಾಮಯ್ಯರ ವಿರುದ್ಧ ೨೧೫ ಮತಗಳ ಗೆಲುವು! ಸುಭಾಷ್ ವಿರುದ್ಧ ಹಲವಾರು ಟೀಕೆಗಳು, ಅನಗತ್ಯ ಋಣಾತ್ಮಕ ಮಾತುಗಳು ಗಾಂಧೀಜಿಯಿಂದ. ಸ್ವಾತಂತ್ರ್ಯದ ಮೋಡಗಳು ಸಮೀಪ ಇರುವಂತೆಯೇ ಬ್ರಿಟಿಷ್ ಸರ್ಕಾರದ ಜತೆ ದುರ್ಬಲ ಕಾಂಗ್ರೆಸ್‌ನ ತಾರ್ಕಿಕ ನಡೆಗಳಿಂದ ಬೇಸತ್ತು ಕಾಂಗ್ರೆಸ್‌ಗೆ ರಾಜೀನಾಮೆ.

’ಫಾರ್‌ವರ್ಡ್ ಬ್ಲಾಕ್’ ಸ್ಥಾಪನೆ.೧೯೪೦, ಜೂನ್ ೧೮ರಂದು ಡಾ|| ಹೆಡಗೇವಾರ್ ಜತೆ ಭೇಟಿ ಆದರೆ ತೀವ್ರ ಜ್ವರದಿಂದ ಹಾಸಿಗೆ ಹಿಡಿದಿದ್ದ ಡಾ|| ಹೆಡಗೇವಾರ್ ಜತೆ ಸಾಧ್ಯವಾಗದ ಮಾತುಕತೆ. ಮೂರೇದಿನದಲ್ಲಿ ಡಾ|| ಹೆಡಗೇವಾರ್ ನಿಧನ. ಕೈ ತಪ್ಪಿದ ಮಹಾಮಿಲನ. ನಂತರ ವೀರ ಸಾವರ್ಕರ್ ಭೇಟಿ.ಬೋಸ್ ಕಾಣೆಯಾಗಿದ್ದಾರೆ’ ಎಂಬ ಸುದ್ದಿ ೧೯೪೧ ಜನವರಿ ೨೬ಕ್ಕೆ!
ಕಾಬೂಲ್ ಮೂಲಕ ಬರ್ಲಿನ್ ಸೇರಿದ ಬೋಸ್‌ರಿಂದ ಸೈನಿಕ ಕಾರ‍್ಯಾಚರಣೆ. ’ಫ್ರೀ ಇಂಡಿಯಾ ಸೆಂಟರ್’ ೧೯೪೧, ನವೆಂಬರ್ ೨ಕ್ಕೆ ಉದ್ಘಾಟನೆ, ’ಆಜಾದ್ ಹಿಂದ್’ ಲಾಂಛನ, ’ಜೈಹಿಂದ್’ ಘೋಷಣೆ, ಬೋಸರಿಗೆ ’ನೇತಾಜಿ’ ಬಿರುದು. ಜರ್ಮನ್ ಸೇನಾಕೇಂದ್ರಗಳಿಗೆ ಸೈನಿಕ ತರಬೇತಿ, ಬರ್ಲಿನ್ ರೇಡಿಯೋದಲ್ಲಿ ಆಗಾಗ ಭಾಷಣ, ಹಿಟ್ಲರ್ ಜತೆ ಭೇಟಿ. ಜಪಾನ್‌ಗೆ ತೆರಳಿ ಅಲ್ಲಿಂದ ಪೂರ್ವಾಂಚಲ ಭಾರತದ ಗಡಿಗಳಲ್ಲಿ ಸೈನ್ಯ ಸಜ್ಜು ಮಾಡಲು ಇಂಡಿಯನ್ ಇಂಡಿಪೆಂಡೆನ್ಸ್ ಲೀಗ್ ಮೂಲಕ ಅವಿರತ ಚಟುವಟಿಗೆ.

●ಆಜಾದ್ ಹಿಂದ್ ಸೇನೆ.

ಬಲಿಷ್ಠಗೊಂಡ ಆಜಾದ್ ಹಿಂದ್ ಸೇನೆಗೆ ದೌಡಾಯಿಸುತ್ತಿದ್ದ ನಿವೃತ್ತಯುದ್ಧ ಕೈದಿಗಳು. ಮುಂದಿನ ದಿನಗಳಲ್ಲಿ ಪಕ್ವ ಸೈನ್ಯವಾಗಿ ರೂಪುಗೊಂಡ ಇಂಡಿಯನ್ ನ್ಯಾಷನಲ್ ಆರ್ಮಿ (ಐ.ಎನ್.ಎ).
ಪಾದರಸದಂತೆ ಪೂರ್ವ ಏಷ್ಯಾ ರಾಷ್ಟ್ರಗಳಲ್ಲಿ ಓಡಾಡಿ ಸ್ವರಾಜ್ಯ ಹೋರಾಟಕ್ಕೆ ಅಗಾಧ ಬೆಂಬಲ ಪಡೆದ ಬೋಸ್‌ರಿಂದ ಆರ್ಜೀ-ಹುಕುಮಂತ್-ಎ-ಆಜಾದ್ ಹಿಂದ್ (ಸ್ವತಂತ್ರ ಭಾರತದ ಹಂಗಾಮಿ ಸರ್ಕಾರ) ಸ್ಥಾಪನೆ; ಐಎನ್‌ಎಯ ಕಮಾಂಡರ್ ಇನ್ ಚೀಫ್ ಆಗಿ ಬೋಸ್. ೧೯೪೫ರ ಆಗಸ್ಟ್ ೧೮ರಂದು ದಕ್ಷಿಣ ವಿಯೆಟ್ನಾಂನ ಸೈಗಾನ್‌ನಿಂದ ವಿಮಾನಹತ್ತಿದ ಸುಭಾಷ್, ವಿಮಾನ ಸ್ಫೋಟದಿಂದಾಗಿ ನಿಧನ.

ಆ ಕುರಿತು ಸ್ಪಷ್ಟಗೊಳ್ಳದ ಅನೇಕ ವಿವಾದಗಳು ಇಂದಿಗೂ ಇದೆ. ಅನ್ವೇಷಣಾ ಸಮಿತಿ ನೇಮಿಸಿದರೂ, ಸಾವನ್ನೊಪ್ಪದ ಅನೇಕಮಂದಿ ಬಹಳವರ್ಷ ನೇತಾಜಿ ಬದುಕಿದ್ದಾರೆಂದೇ, ತಿಳಿದಿದ್ದರು. ಬೋಸರು ಆಗಾಗ ಹೇಳುತ್ತಿದ್ದರು “ನೀವು ನಿಮ್ಮ ರಕ್ತ ಕೊಡಿ ನಾನು ನಿಮಗೆ ಸ್ವಾತಂತ್ರ್ಯ ತಂದು ಕೊಡುತ್ತೇನೆ. ಸ್ವಾತಂತ್ರ್ಯವೆಂಬುದು ಯಾರೂಕೊಡುವಂಥ ಸರಕಲ್ಲ ಅದು ನಾವು ಪಡೆದುಕೊಳ್ಳಬೇಕಾದದ್ದು”

ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‍ನ ಅಧ್ಯಕ್ಷರಾಗಿ ಸತತ ಎರಡು ಬಾರಿ ಕಾರ್ಯ ನಿರ್ವಹಿಸದ ಇವರು, ಮಹಾತ್ಮ ಗಾಂಧಿಯವರ ಅಹಿಂಸಾತ್ಮಕ ತತ್ವಗಳನ್ನು ಒಪ್ಪದೆ ಪಕ್ಷದಿಂದ ಹೊರಬಂದರು. ಮುಂದೆ ಬ್ರಿಟಿಷರ ವಿರುದ್ಧದ ಹೋರಾಟದಲ್ಲಿ ನೇತಾಜಿಯವರು ಭಾರತೀಯ ರಾಷ್ಟ್ರೀಯ ಸೇನೆಯನ್ನು ಅನುಸ್ಥಾಪಿಸಿದರು. ಇವರು ಟೈವಾನ್‍ನಲ್ಲಿ ೧೯೪೫ರ ಆಗಸ್ಟ್ ೧೮ರಂದು ವಿಮಾನ ಅಪಘಾತದಲ್ಲಿ ಮರಣ ಹೊಂದಿದರು ಎಂದು ಭಾವಿಸಲಾಗಿದೆ. ಆದರೆ ಈ ಘಟನೆ ವಿವಾದಿತವಾಗಿದೆ.

***

ಮಹಾ ಸಂತ ಸೇವಾಲಾಲ್ ಮಹಾರಾಜ.

ಆರಾಧನೆ: ಪ್ರೋ.ಕೆ. ಖಂಡೋಬ

ಫೆಬ್ರವರಿ 15, 2018 ಮಹಾ ಸಂತ ಶ್ರೀ ಸೇವಾಲಾಲರ 279ನೇ ಜಯಂತಿ. ಕರ್ನಾಟಕ ಸರಕಾರ ಈ ಮಹಾಸಂತನ ಜಯಂತಿಯನ್ನು ಕರ್ನಾಟಕದಾದ್ಯಂತ ಮೊಟ್ಟಮೊದಲ ಬಾರಿಗೆ ಸರಕಾರದ ವತಿಯಿಂದ ಆಚರಿಸುತ್ತಿದ್ದು, ತನ್ನಿಮಿತ್ತ ಈ ಲೇಖನ, ಲೋಕಕಲ್ಯಾಣಕ್ಕಾಗಿ ಈ ಭರತ ಭೂಮಿಯಲ್ಲಿ ಹಲವು ಜನ ಸಾಧು-ಸಂತರು, ಸತ್ಪುರುಷರು, ಮೇಧಾವಿಗಳು, ದಾರ್ಶನಿಕರು, ಬುದ್ಧಿಜೀವಿಗಳು ಮತ್ತು ತ್ಯಾಗಿಗಳು ಅವತರಿಸಿದ್ದಾರೆ. ಜನತೆಯಲ್ಲಿನ ಜಾತಿಪದ್ಧತಿ ಮತ್ತು ಧರ್ಮಾಂಧತೆಗಳನ್ನು ತೊಡೆದುಹಾಕಲು ಆಯಾ ಕಾಲಘಟ್ಟದಲ್ಲಿ ಹಲವು ಜನ ಸಾಂಸ್ಕೃತಿಕ ನಾಯಕರು, ಮೇಧಾವಿಗಳು ಹೋರಾಟ ಮಾಡಿದ್ದಾರೆ.

ಸೇವಾಲಾಲನ ಜನನ, ಮರಣ, ಜೀವನ, ಸಾಧನೆ, ಹೋರಾಟಗಳ ಹಿನ್ನೆಲೆಯಲ್ಲಿ ಲಂಬಾಣಿ ಮೌಖಿಕ ಪರಂಪರೆಯಲ್ಲಿ ಹಲವು ಐತಿಹ್ಯ ಕಥೆ ಪುರಾಣಗಳು ಹುಟ್ಟಿಕೊಂಡಿವೆ. ಇವುಗಳು ಸೇವಾಲಾಲನ ವಾಸ್ತವ ಸಂಗತಿಗಳಿಗಿಂತ ಹೆಚ್ಚಾಗಿ ಅವನನ್ನು ಒಬ್ಬ ಪೌರಾಣಿಕ ವ್ಯಕ್ತಿಯನ್ನಾಗಿ ಚಿತ್ರಿಸಿ ದೈವತ್ವಕ್ಕೆ ಏರಿಸಿವೆ. ವಾಸ್ತವವಾಗಿ ಸೇವಾಲಾಲ ತಮ್ಮ ಜೀವಿತ ಕಾಲಾವಧಿಯಲ್ಲಿ ತನ್ನನ್ನು ನಂಬಿದ ಒಂದು ಜನಾಂಗದ ತನ್ನದೆಲ್ಲವನ್ನೂ ಧಾರೆ ಎರೆದ ಒಬ್ಬ ಮಹಾಸಂತನೆಂಬುದು ಸತ್ಯ. ಲಂಬಾಣಿಗರಲ್ಲಿ ಸೇವಾಲಾಲ್ ಬಹುದೊಡ್ಡ ಸಾಧುಪುರುಷ. ಬಾಲಬ್ರಹ್ಮಚಾರಿಯಾಗಿ ತಪಸ್ಸು, ಧ್ಯಾನ ಮತ್ತು ಭಕ್ತಿ ಮೂಲಕ ಅಧ್ಯಾತ್ಮವನ್ನು ಅಪ್ಪಿಕೊಂಡು, ತನ್ನ ಜನಾಂಗದ ಸೇವೆಯನ್ನು ಮಾಡಿದ ಮಹಾನ್ ಹಿತಚಿಂತಕ. ಅಧ್ಯಾತ್ಮದ ಮೂಲಕವಾಗಿ ಜನಾಂಗಕ್ಕೆ ಉಪದೇಶಗಳನ್ನು ನೀಡಿ, ಸನ್ಮಾರ್ಗದತ್ತ ಕೊಂಡೊಯ್ದ ಮಾರ್ಗದರ್ಶಕ. ಸೇವಾಲಾಲರ ಬೋಧನೆ ಮತ್ತು ಚಿಂತನೆಗಳು ಬಂಜಾರ ಜನಾಂಗದಲ್ಲಿ ಇಂದು ಐಕ್ಯತೆ ಯನ್ನುಂಟುಮಾಡಿರುವುದು ಸ್ಪಷ್ಟ.

ಇಂದು ಬಂಜಾರರು ಸಾಂಸ್ಕೃತಿಕ ನೆಲೆಯಲ್ಲಿ ತನ್ನ ಅಸ್ಮಿತೆಯನ್ನು ಗುರುತಿಸಿಕೊಳ್ಳಲು ಮಹಾನುಭಾವರ ಸತ್ಕಾರ್ಯಗಳೇ ಕಾರಣವಾಗಿವೆ. ಹೀಗಾಗಿ ಬಂಜಾರ ಸಮುದಾಯದಲ್ಲಿ ಸೇವಾಲಾಲರು ವೀರನಾಗಿ, ವಿರಾಗಿಯಾಗಿ, ಒಬ್ಬ ಶ್ರೇಷ್ಠ ದಾರ್ಶನಿಕನಾಗಿ ಮತ್ತು ಸಾಂಸ್ಕೃತಿಕ ನಾಯಕನಾಗಿ ಚಿರಸ್ಥಾಯಿಯಾಗಿದ್ದಾರೆ. ಸೇವಾಲಾಲರು ಹುಟ್ಟಿನಿಂದಲೇ ದೈವಾಂಶ ಸಂಭೂತ. ಆತನ ಚರಿತ್ರೆ, ಪವಾಡ, ಅವತಾರ, ಮೊದಲಾದವುಗಳನ್ನು ಲಂಬಾಣಿಗಳು ತಮ್ಮ ಭಜನೆಗಳಲ್ಲಿ ದಿನಗಟ್ಟಲೆ, ವಾರಗಟ್ಟಲೇ ಹಾಡುತ್ತಾರೆ. ಸೇವಾಲಾಲರ ಕಾಲ, ಜನನ, ವೃತ್ತಾಂತ, ಮರಣ ಮತ್ತು ಬದುಕಿನ ಬಗೆಗೆ ಈಗಾಗಲೇ ಸಾಕಷ್ಟು ಚರ್ಚೆ ನಡೆದಿದೆ. ಚಾರಿತ್ರಿಕ ಆಧಾರಗಳು ಇಲ್ಲದ್ದರಿಂದ ಯಾವುದೇ ಖಚಿತವಾದ ಮಾಹಿತಿಗಳು ದೊರೆಯುವುದಿಲ್ಲ. ಅವರ ಕಥನ ಗೀತೆಗಳು, ಲಾವಣಿಗಳು, ಭಜನೆ-ಗೀತೆ ಹಾಗೂ ಕೆಲವು ಭೌಗೋಳಿಕ ಆಧಾರಗಳನ್ನು ಆಧರಿಸಿ ಇದೀಗ ಶಿವಮೊಗ್ಗ ಜಿಲ್ಲೆಯ ಹೊನ್ನಾಳಿ ತಾಲ್ಲೂಕಿನ ಸೂರಗೊಂಡನಕೊಪ್ಪವೇ ಸೇವಾಲಾಲರ ಜನ್ಮಸ್ಥಳವೆಂದು ನಿರ್ಧರಿಸಲಾಗಿದೆ. ಈ ಪ್ರದೇಶದಲ್ಲಿ ಇಂದಿಗೂ ಕಂಡುಬರುವ ಝುಮ್ರಿ ಝೋಲ್, ಭೂರಿಪಟಾರ್, ಚಂದನಖೋಳಿ, ಕಾಳೋಕೂಂಡೋ, ಕಿಂಚೇರ್ ಗುಂಡಿ, ಬನದವ್ವನ ಗುಡಿ ಮತ್ತು ಗೊಲ್ಲನಮಟ್ಟಿ ಮೊದಲಾದ ಸ್ಥಳಗಳು ಅವರ ಲಾವಣಿಗಳಲ್ಲಿ ಸ್ಪಷ್ಟವಾಗಿ ದಾಖಲಾಗಿರುವುದರಿಂದ ಸೂರಗೊಂಡನಕೊಪ್ಪ ಪ್ರದೇಶವೇ ಸೇವಾಲಾಲರ ಜನ್ಮಸ್ಥಳ ಆಗಿರುವುದರಲ್ಲಿ ಯಾವ ಸಂದೇಹಗಳು ಇರಲಾರವು.

ಭೀಮಾ ನಾಯಕ ಹಾಗೂ ಧರ್ಮಿಣಿ ಬಾಯಿಗೆ ಮದುವೆ ಮಾಡುತ್ತಾರೆ. ಮದುವೆಯಾಗಿ 12 ವರ್ಷ ಕಳೆದರೂ ಸಂತಾನ ಪ್ರಾಪ್ತಿಯಾಗುವುದಿಲ್ಲ. ಈ ದಂಪತಿಗಳಿಬ್ಬರೂ ಜಗನ್ಮಾತೆಯ ಭಕ್ತಿಸೇವೆಯಲ್ಲಿ ಸುಖ-ಸಂತೋಷದಿಂದ ಬದುಕು ಸಾಗಿಸುತ್ತಿದ್ದರು. ಸಂತಾನ ಪ್ರಾಪ್ತಿಗಾಗಿ ಕಂಡ ಕಂಡ ದೇವರು-ದೇವತೆಗಳಿಗೆ ಮೊರೆ ಹೋದರೂ ಪ್ರಯೋಜನವಾಗಲಿಲ್ಲ. ಕೊನೆಗೆ, ಜಗದಂಬೆಯನ್ನೇ ನಂಬಿಕೊಂಡು ಅವಳ ಭಕ್ತಿಯಲ್ಲಿ ಕಾಲ ಕಳೆಯುತ್ತಾ, ಸಂತಾನ ಪ್ರಾಪ್ತಿಗಾಗಿ ಸಂಕಲ್ಪವನ್ನು ಮಾಡಿ ಭೀಮಾ ನಾಯಕರು ಘೋರವಾದ ತಪಸ್ಸನ್ನು ಕೈಗೊಳ್ಳುತ್ತಾನೆ. ಕೊನೆಗೆ ಶಿವ-ಪಾರ್ವತಿಯ ಕರುಣೆಯಿಂದ ಸಂತಾನ ಭಾಗ್ಯವನ್ನು ಈ ನಡುವೆ ತಮಗೆ ಮಗುವಾದರೆ ಭಕ್ತಿಯ ಹೆಸರಲ್ಲಿ ನಿನಗೆ ಒಪ್ಪಿಸುತ್ತೇವೆ ಎಂದು ಮರಿಯಮ್ಮನಲ್ಲಿ ಹರಕೆ ಹೊತ್ತಿರುತ್ತಾರೆ. ಹೀಗೆ ಹುಟ್ಟಿದ ಮಗು ಸಾಮಾನ್ಯ ಮಗುವಾಗಿರಲಿಲ್ಲ. ಅವನೊಬ್ಬ ಸತ್ಪುರುಷನಾಗಿದ್ದ. ಮಾಣಿಕ್ಯದಂತಹ ಮಗುವಿಗೆ ಸಾಕ್ಷಾತ್ ಮಾತೆ ಜಗದಂಬೆಯೇ ಮಾರುವೇಷದಲ್ಲಿ ಬಂದು, ಸೇವಾಭಾಯಾ, ಸೇವಾಲಾಲ ಎಂದು ನಾಮಕರಣ ಮಾಡುತ್ತಾಳೆ.

ಆ ಮಗು ಶಿವನ ಅವತಾರಿಯಾಗಿದ್ದು, ದೇವಿಯ ಭಕ್ತನಾಗಿದ್ದಾನೆ. ಆತನು ಬಂಜಾರ ಕುಲದ ವಂಶೋದ್ಧಾರಕನಾಗಿದ್ದು, ದುಷ್ಟರನ್ನು ಸಂಹರಿಸಿ, ಶಿಷ್ಟರ ರಕ್ಷಣೆ ಮಾಡುವನೆಂದು ಜಗದಂಬೆ ಹೇಳಿ, ಅಲ್ಲಿಂದ ಕಾಲಚಕ್ರ ಗತಿಸಿ ಸೇವಾಲಾಲನಿಗೆ 12 ವರ್ಷ ತುಂಬಿದಾಗ ಮರಿಯಮ್ಮ ತನ್ನ ಷರತ್ತನ್ನು ಈಡೇರಿಸಬೇಕೆಂದು ಧರ್ಮಿಣಿ ಬಾಯಿಯ ಕನಸಿನಲ್ಲಿ ಬಂದು ಸೇವಾಲಾಲನನ್ನು ತನ್ನ ಸೇವೆಗೆ ಬಿಡಬೇಕೆಂದು ಒತ್ತಾಯಿಸುತ್ತಾಳೆ. ಅದಕ್ಕೆ ಧರ್ಮಿಣಿಯು ಒಪ್ಪದೇ ಹೋದಾಗ ನೇರವಾಗಿ ಸೇವಾಲಾಲನನ್ನು ತನ್ನ ಭಕ್ತನಾಗಬೇಕೆಂದು, ತನ್ನ ಜತೆಗೆ ಬರಬೇಕೆಂದು ಕೇಳಿದಾಗ ಅವನೂ ಭಕ್ತನಾಗಲು ತಿರಸ್ಕರಿಸುತ್ತಾನೆ. ತಾನು ಪರಮಾತ್ಮನ ಸೇವಕನೆಂದು, ಮರಿಯಮ್ಮಳ ಸೇವೆ ಮಾಡಲಾರನೆಂದು ಹಠ ಹಿಡಿಯುತ್ತಾನೆ. ಇದರಿಂದ ಅವಮಾನಿತಳಾದ ಮರಿಯಮ್ಮ ಸೇವಾಲಾಲನ ಕುಟುಂಬದ ಸರ್ವಸ್ವವನ್ನು ನಾಶ ಮೂಲಕ ಪರಿಪರಿಯಾಗಿ ಕಾಡಿಸುತ್ತಾಳೆ. ಇದರಿಂದ ಹತಾಶನಾದ ಸೇವಾಭಾಯಾ ಅನಿವಾರ್ಯವಾಗಿ ಜಗನ್ಮಾತೆಯ ಭಕ್ತನಾಗಲು ಒಪ್ಪಿಕೊಳ್ಳುತ್ತಾನೆ.

ಕಾಲಗತಿಯಲ್ಲಿ ಹತ್ತಾರು ವರ್ಷಗಳವರೆಗೆ ಮರಿಯಮ್ಮನ ಸೇವೆಗೆ ತೊಡಗಿಸಿಕೊಂಡ ಸೇವಾಲಾಲರು ಮುಂದೆ ಸಮುದಾಯದಲ್ಲಿ ಜಗನ್ಮಾತೆಗಿಂತ ಹೆಚ್ಚಿನ ಜನಪ್ರಿಯತೆಯನ್ನು ಪಡೆಯುತ್ತಾನೆ. ಜನರು ಮರಿಯಮ್ಮನನ್ನು ಮರೆತು ಸೇವಾಲಾಲನನ್ನೇ ಪೂಜಿಸುವಂತೆ ಮಹಾನ್ ಸಾಧಕನಾಗಿ ಮೆರೆಯುತ್ತಾನೆ. ತನ್ನ ಜನಸಮುದಾಯದ ಏಳಿಗೆಗಾಗಿ ಶ್ರಮಿಸಿ, ಅವರ ಬದುಕನ್ನು ಹಸನುಗೊಳಿಸಲು ನಿರಂತರವಾಗಿ ಹೋರಾಡುತ್ತಾನೆ. ಮರಿಯಮ್ಮಳಿಂದ ಮೊದಲೇ ವರವನ್ನು ಪಡೆದುಕೊಂಡಿದ್ದ ಸೇವಾಲಾಲ ತನ್ನ ಭಕ್ತರು ಕೇಳಿದ ವರಗಳ ತಕ್ಷಣವೇ ಈಡೇರಿಸಿ ಪ್ರಖ್ಯಾತಿಯನ್ನು ಪಡೆದುಕೊಂಡನು. ಈತನ ಜನಪ್ರಿಯತೆಯನ್ನು ಕಂಡು ಮರಿಯಮ್ಮ ಸಹಿಸಲಾರದೇ ಅವನು ಬ್ರಹ್ಮಚಾರಿಯಾಗಿರುವುದರಿಂದಲೇ ಇಷ್ಟೊಂದು ಪ್ರಭಾವಶಾಲಿಯಾಗಿರವನೆಂದು ಬಗೆದು, ಅವನಿಗೆ ಮದುವೆ ಮಾಡಿಸುವ ಮೂಲಕ ಆತನ ಜನಪ್ರಿಯತೆಯನ್ನು ಕುಗ್ಗಿಸಬೇಕೆಂದು ನಿರ್ಧರಿಸುತ್ತಾಳೆ. ಅಂತೆಯೇ, ಸೇವಾನ ಬಳಿಗೆ ಬಂದು ಮದುವೆಯಾಗುವಂತೆ ಅವನನ್ನು ಒತ್ತಾಯಿಸುತ್ತಾಳೆ. ಅದಕ್ಕೆ ಒಪ್ಪಿಕೊಳ್ಳದ ಸೇವಾಲಾಲ ತಾನು ಸಮಸ್ತ ಸಮುದಾಯದವರಿಗೆ ‘‘ಭಾಯಾ’’ (ಸಹೋದರ) ಆಗಿರುವುದರಿಂದ ನಾನು ಯಾರೊಂದಿಗೆ ಮದುವೆಯಾಗಲೆಂದು ವಾದಿಸುತ್ತಾನೆ.

ಎಲ್ಲಾ ನಾರಿಯರು ನನಗೆ ಸಹೋದರಿಯರು ಆಗಿರುವುದರಿಂದ ಈ ಮದುವೆ ಅಲ್ಲಗಳೆಯುತ್ತಾನೆ. ಆಧ್ಯಾತ್ಮ ಜೀವಿಯಾಗಿ ಸಾಧಕನಾಗಿದ್ದ ಸೇವಾಭಾಯಾ ಮರಿಯಮ್ಮನ ಮಾತನ್ನು ತಿರಸ್ಕರಿಸುತ್ತಾನೆ. ಮರಿಯಮ್ಮ ಅವಮಾನಿತಳಾಗಿ ಮತ್ತೆ ಮತ್ತೆ ಒತ್ತಾಯಿಸಿದಾಗ, ಬ್ರಹ್ಮನು ತನ್ನ ಹಣೆಬರಹದಲ್ಲಿ ಮದುವೆಯಾಗುವುದನ್ನು ಬರೆದಿಲ್ಲವಾದ್ದರಿಂದ ಮದುವೆಯಾಗುವುದಾದರೂ ಹೇಗೆ ? ಎಂದು ಪ್ರಶ್ನಿಸುತ್ತಾನೆ. ಹಾಗಾದರೆ, ನಿನ್ನ ಹಣೆಯ ಬರಹವನ್ನು ಪರೀಕ್ಷಿಸಲು ದೇವಲೋಕಕ್ಕೆ ಹೋಗೋಣವೆಂದು ಅವನನ್ನು ಕರೆಯುತ್ತಾಳೆ. ಅದಕ್ಕೆ ಸಮ್ಮತಿಸಿದ ಸೇವಾಭಾಯಾ ಮರಿಯಮ್ಮನೊಂದಿಗೆ ದೇವಲೋಕಕ್ಕೆ ಹೋಗಲು ಅಣಿಯಾಗುತ್ತಾನೆ. ಸೇವಾ ಭಾಯಾ ತಾನು ಸ್ವರ್ಗಲೋಕಕ್ಕೆ ತನ್ನ ಹಣೆಯ ಬರಹವನ್ನು ಕೇಳಲು ಬ್ರಹ್ಮನಲ್ಲಿಗೆ ಹೋಗುವ ಪ್ರಸ್ತಾಪಿಸಿ, ತನ್ನ ಶರೀರವನ್ನು ದೇವಸ್ಥಾನದಲ್ಲಿಟ್ಟು, ಬೇವಿನ ಸೊಪ್ಪಿನಲ್ಲಿ ಮುಚ್ಚಿಡಬೇಕೆಂದು, ತಾನು ಹಿಂದಿರುಗಿ ಬರುವವರೆಗೆ ನಿರಂತರವಾಗಿ ಭಜನೆ ಮಾಡುತ್ತಿರಬೇಕೆಂದು, ಬೇವಿನ ಸೊಪ್ಪಿನಲ್ಲಿರುವ ನನ್ನ ಶರೀರವನ್ನು ಅಪ್ಪಿ-ತಪ್ಪಿಯೂ ಯಾರೂ ಮುಟ್ಟಬಾರದೆಂದು ತನ್ನ ಬಂಧು-ಬಾಂಧವರಿಗೆಲ್ಲಾ ತಿಳಿಸಿ, ಸ್ವರ್ಗಕ್ಕೆ ಹೊರಡುತ್ತಾನೆ.

ಅವನು ಹೇಳಿ ಹೋದಂತೆ ಸಮುದಾಯದವರೆಲ್ಲಾ ಕಟ್ಟುನಿಟ್ಟಾಗಿ ನಡೆದುಕೊಳ್ಳುತ್ತಾರೆ. ಸ್ವರ್ಗದಲ್ಲಿ ಪರಮಾತ್ಮನ ಸಮಕ್ಷಮದಲ್ಲಿ ಮರಿಯಮ್ಮ ಮತ್ತು ಸೇವಾಲಾಲ ತಮ್ಮ ವಾದಗಳನ್ನು ಮಂಡಿಸುತ್ತಾರೆ. ಕೊನೆಗೆ ಸೇವಾಲಾಲನ ಹಣೆಯ ಬರಹವನ್ನು ಪರೀಕ್ಷಿಸಿದ ಪರಮಾತ್ಮನು ಅವನಿಗೆ ಮದುವೆ ಎಂಬುದೇ ಸ್ಪಷ್ಟಪಡಿಸುತ್ತಾನೆ. ಇದರಿಂದ ಇನ್ನಷ್ಟು ಅವಮಾನಿತಳಾದ ಮರಿಯಮ್ಮ ಇನ್ನು ತನಗೆ ಉಳಿಗಾಲ ಇಲ್ಲವೆಂದು, ಲಂಬಾಣಿ ಸಮುದಾಯದಲ್ಲಿ ತನ್ನ ಅಸ್ತಿತ್ವವೇ ಇಲ್ಲದಂತಾಗುವುದೆಂದು ಯೋಚಿಸಿ ಸೇವಾನಿಗಿಂತ ಮೊದಲೇ ಭೂಲೋಕಕ್ಕೆ ಇಳಿದು ಬಂದು ಮಾರುವೇಷದಲ್ಲಿ ನೇರವಾಗಿ ತಾಯಿ ಧರ್ಮಿಣಿ ಬಾಯಿ ಬಳಿಗೆ ಹೋಗುತ್ತಾಳೆ. ‘‘ನಿನ್ನ ಮಗ ಸೇವಾಲಾಲ ದೇವಸ್ಥಾನದಲ್ಲಿ ಸತ್ತು ಬಿದ್ದಿದ್ದು, ನೀನು ಇಲ್ಲಿ ನಿಶ್ಚಿಂತವಾಗಿ ಕಸೂತಿ ಹಾಕುತ್ತಿದ್ದೀಯ ?’’ ಎಂದು ಅವಳಿಗೆ ಹೇಳುತ್ತಲೇ ದು:ಖಿತಳಾದ ಧರ್ಮಿಣಿ ಬಾಯಿ ಎದ್ದು-ಬಿದ್ದು ದೇವಸ್ಥಾನಕ್ಕೆ ಬಂದು ಯಾರು ತಡೆದರೂ ಕೇಳದೇ ಮಗನ ದೇಹದ ಮೇಲೆ ರಪ್ಪನೇ ಬಿದ್ದು ಗೋಳಿಡುತ್ತಾಳೆ.

ಸೇವಾ ಭಾಯಾ ಭೂಲೋಕಕ್ಕೆ ಕಾಲಿಡುವಷ್ಟರಲ್ಲಿ ಆತನ ದೇಹಕ್ಕೆ ಮನುಷ್ಯರ ಸ್ಪರ್ಶವಾಗುತ್ತಿದ್ದಂತೆಯೇ ಆತನ ಆತ್ಮವು ಮರಳಿ ದೇಹವನ್ನು ಸೇರದೇ ಹಿಂದಿರುಗಿ ಸ್ವರ್ಗಕ್ಕೆ ಹೋಗಿಬಿಡುತ್ತದೆ. ಹೀಗೆ ಅಮರನಾದ ಸೇವಾಲಾಲರ ದೇಹಾಂತ್ಯವಾದ ಮೇಲೆ ಮಹಾರಾಷ್ಟ್ರದ ವಾಸಿಮ್ ಜಿಲ್ಲೆಯ ಅಕ್ಕೋಲ ತಾಲ್ಲೂಕಿನ ಸಮೀಪದಲ್ಲಿರುವ ಪೊಹರಾಗಢ ಎಂಬಲ್ಲಿ ಅಂತ್ಯಸಂಸ್ಕಾರ ನಡೆಯಿತು. ಈಗ ಅಲ್ಲಿ ಸೇವಾಲಾಲ್ ಮತ್ತು ಜಗನ್ಮಾತೆ ಮರಿಯಮ್ಮಳ ಬೃಹತ್ ಮಂದಿರಗಳನ್ನು ಕಟ್ಟಿದ್ದು, ಅದು ಬಂಜಾರರ ಪುಣ್ಯಕ್ಷೇತ್ರವಾಗಿದೆ. ಭಾರತದಾದ್ಯಂತ ನೆಲೆಯಾಗಿರುವ ಅಸಂಖ್ಯಾತ ಬಂಜಾರರು ಈ ತೀರ್ಥಕ್ಷೇತ್ರಕ್ಕೆ ಸಾಗರೋಪಾದಿಯಲ್ಲಿ ಬಂದು ದೇವರ ದರ್ಶನ ಪಡೆದು ಪಾವನರಾಗುತ್ತಾರೆ. ಸೇವಾಲಾಲರ ಜನ್ಮಭೂಮಿ ಕರ್ನಾಟಕದ ಸೂರಗೊಂಡ ನಕೊಪ್ಪದಲ್ಲಿ ಇಂದು ಕರ್ನಾಟಕ ಸರಕಾರದ ಸುಪರ್ದಿಯಲ್ಲಿ ಹಲವು ಅಭಿವೃದ್ಧಿ ಕಾರ್ಯಗಳು ಜರುಗಿ, ವಿಸ್ತಾರವಾದ ತೀರ್ಥಕ್ಷೇತ್ರವಾಗಿ ಪರಿಣಮಿಸಿದೆ. ಸರಕಾರ ಈಚೆಗೆ ಮತ್ತೆ 13 ಎಕರೆ ಜಮೀನನ್ನು ನೀಡಿ, ಬೃಹತ್ ಪ್ರಮಾಣದಲ್ಲಿ ಈ ಕ್ಷೇತ್ರವನ್ನು ಅಭಿವೃದ್ಧಿಗೊಳಿಸಿದೆ.

ಪ್ರತಿ ವರ್ಷ ನಡೆಯುವ ಸಂತ ಸೇವಾಲಾಲನ ಜಯಂತಿಗಾಗಿ ಕರ್ನಾಟಕದ ಭಕ್ತಾದಿಗಳು ಶಬರಿಮಲೆಯ ಸ್ವಾಮಿಗಳಂತೆ ವ್ರತಾಧಾರಿಗಳಾಗಿ ಶ್ವೇತವಸ್ತ್ರಗಳನ್ನುಟ್ಟು, ಲಕ್ಷಾಂತರ ಸಂಖ್ಯೆಯಲ್ಲಿ ಸೇರಿ ವಿಜೃಂಭಣೆಯಿಂದ ಯಾತ್ರೆಯಲ್ಲಿ ಪಾಲ್ಗೊಂಡು ಪುನೀತರಾಗುತ್ತಿದ್ದಾರೆ. 2018ರ ಈ ಜಯಂತಿಯನ್ನು ಕರ್ನಾಟಕ ಸರಕಾರ ಅಧಿಕೃತವಾಗಿ ರಾಜ್ಯಾದ್ಯಂತ ಆಚರಿಸಲು ಮುಂದಾಗಿದ್ದು, ಈ ಸಂಭ್ರಮದಲ್ಲಿ ಪಾಲ್ಗೊಳ್ಳಲು ಸಾಗರೋಪಾದಿಯಲ್ಲಿ ಭಕ್ತರು ಸೇರುವ ನಿರೀಕ್ಷೆ ಇದೆ. ಸೇವಾಲಾಲರು ಯೋಗಿಯಾಗಿ, ಮಹಾಸಂತರಾಗಿ ಲೋಕಕಲ್ಯಾಣಕ್ಕಾಗಿ ದೇಶಾದ್ಯಂತ ಸಂಚರಿಸಿ, ಅವರ ಬದುಕನ್ನು ಪಾವನ ಮಾಡುತ್ತಾ, ಅವರ ಬಾಳಿಗೆ ಬೆಳಕನ್ನು ನೀಡುತ್ತಾ, ಬಡತನ, ಕಷ್ಟ-ಕಾರ್ಪಣ್ಯಗಳಿಂದ ಬಳಲುತ್ತಿದ್ದವರಿಗೆ ಸುಂದರವಾಗಿ, ಸುವಿಚಾರಗಳನ್ನು ಹೇಳುತ್ತಾ, ತಿದ್ದಿ-ತೀಡುತ್ತಾ ಕಲ್ಯಾಣ ಮಾಡಿದ್ದಾನೆ.

ಸಂತ ಸೇವಾಲಾಲ ಮಹಾರಾಜ ಜಯಂತಿಯ ಶುಭಾಶಯಗಳು.

Students page ವಿದ್ಯಾರ್ಥಿಗಳ ಪುಟ

.

NEET PREPARATION

Vinod Deoras | New Delhi |
Updated: April 26, 2018 5:49:42 pm

NEET PG 2018: SC orders admission in medical courses as per MCI norms
National Eligibility cum Entrance Test (NEET) 2018 will be held by the Central Board of Secondary on May 6 and by now most candidates must be either practising mock tests or brushing up on their weak chapters. Here are some strategies to help you avoid errors and help you score maximum. NEET exam is conducted by CBSE with 11 and 12 standard syllabus. Class 11 is most crucial so, first revise the NCERT properly. Most negative marking is developed from Class 11 syllabus as students have taken 11th lightly followed by 1 year gap thereby forgetting the basics. Class 12 syllabus should not be a problem for most students.
ADVERTISEMENT

The NEET cut-off of 2016 for Open Category was 145 marks out of 720 (20 per cent) and in 2017, 131 marks out of 720 (18.2 per cent). So NEET qualification is an easy task. Even if a student gets 0 marks in Physics and Chemistry, only Biology with 360 marks can get you qualify if you have studied properly. In 2017, the student with 131 marks in NEET also could secure admission in India purely on merit.
You must ask yourself these basic questions before you go for the exam.
1. Do you need to solve every question in the Paper?
2. What is the right subject-sequence to solve the paper?
3. How do we plan time-management during exam?
4. What is my target score?
5. Is NEET qualification difficult?
6. Is NEET a lengthy exam? How can I complete NEET paper 15 minutes before the time? Time Management is key for exam as many students despite good studies unable to complete the paper.
7. How can I reduce negative marking? One of the major reason why cut-offs are too low.
8. How do I plan to solve the paper? This is the most neglected area?

Let’s address each point in detail starting from entering the examination hall:
1) Answer sheet: Ensure that you fill all details in the OMR answer sheet properly without any over-writing. These are computer readable so any over-writing may lead to rejection. This is basic but most commonly made mistakes that many students in a hurry could end up a mismatch of question number with answer number. Never leave the transfer of answer to answer sheet at the end of the paper. Those are most stressful moments and chances of errors are high. As you solve, you must transfer answer to questions to which you are confident. Only doubtful questions which you have planned to revisit must be held back. Use question paper as rules to align.
2) Time management: Our objective in the NEET exam is to maximise the marks based on the level of studies done in two years. In view, it is not necessary for students to solve all the questions, make mistakes and get trapped in negative marking. Many students do not understand this basic part and waste time in questions which they could have left.
Students often overspend time attempting a question and finally leave it which needs to be addressed. The planning is completely missing during the exams. Time management requires deep understanding of the paper pattern, the sequence to solve but basic question which I always tell the students is very simple: If you are not solving all questions then you must have additional time available by saving time for un-solved questions, that is, if I solve 150 questions out of 180, I left 30 questions which also mean I have 30 more minutes to solve the paper.
3) Subject sequence: When I ask this question, most students say that they would like to start with Biology being strongest and then follow with Chemistry or Physics. The student feels they can score good marks in Biology. This is biggest mistake student make. Every subject will have some easy, mid-level and difficult question and this applies to Biology also. If this was not so, why cut-off in 2017 was just 131 marks for Biology paper of 360 marks. So students must realise that they are failing to solve Biology also.
Let’s take two more situations during the exam:
a) You start solving the paper in sequence and the first question of your paper was most difficult. You try, leave and then move to the second question and that too was very difficult. What will be your mental stage? You start feeling that the paper is too tough this year and you start getting negative thoughts and depression may crop in. You feel depressed and that is a bad sign as good start is very important.
b) Another student sitting next to you will have same paper but the sequence of questions will be different. He/she gets the first question which was the easiest question of the paper. He/she solves easily and moves to next question to find that it was also easy. Think of mindset of the student. He/she has a positive frame of mind, motivated, gain mental strength, happy, cool and thereby get confidence.
Both students got the same paper but just the sequences of questions make both feel completely different. You gain confidence when you solve easy questions.
Can we simulate this simple concept?
So the key to the success in the NEET exam is to solve “Easy Questions” first across all three sections and never attempt subject sequence-wise. Our analysis shows that student with an average profile can also score up to 400-450 marks easily with just solving easy questions first. A number of easy questions will vary based upon your preparation but qualifying NEET is never in question.
4) Psychology and negative marketing: Psychology and negative marking are always related. Most negative marking arises due to psychological aspects. Let’s analyse some common factor leading to negative marking trap which should be avoided at any cost.
a) Keeping target: Student often check the last year cut-off and then set target in the exam. According to our research thinking about target in exam hall will reduce marks drastically.
Students must realise that the strategy in the examination to maximise the marks. Just by thinking does not help anybody. e.g. If student feels that he/she needs to get 550 marks in NEET in order to get into particular Government colleges and feel that he/she can only solve 500 marks questions in exam hall, the student becomes panic and sometimes depression comes.
In order to meet the 550 marks target, student solves 650 marks questions, trap into negative marking and comes as low as 350 marks. He could have scored 500 is he/she was confident of solving those questions. Your ability to answer question or not depends upon your preparedness and not based on your desire.
In 2016, NEET was conducted twice and large number of students got lower marks in second paper than first test due to setting higher targets in the second exam.
b) Planning: Planning how to solve the questions with the proper sequence is the most important factor for success. The objective is to solve easy questions across 3 subjects first followed by mid-level and difficult questions. Let us define:
1. Easy Questions: Student is 100 per cent sure of answers.
2. Mid -Level: Students with some efforts can solve. May eliminate 2 answers.
3. Difficult Questions: The students have no clue and are unable to solve.
Every subject will have all these three types of questions. The first planning phase will require students to identify easy and mid-level questions across all three subjects. There is no need to start solving the paper as soon as you get but first 10-15 minutes to be given for planning. After identification, solve easy questions from each of 3 subjects. This will boost your confidence as well as most students with decent study can cross 350-400 marks with ease.
After easy questions, mid-level questions to be attempted. In case, you have time, you can revisit the difficult questions at the end or just leave the difficult question.
The objective is not to get negative marking in easy questions as these are sure questions. The chances of negative marking are high in Mid-level and difficult questions at the same time these questions take more time to solve. Students can solve easy question in 30-45 seconds thereby saving time for mid-level question and also spare time for planning easily.
Finding 15 minutes for the Planning is very easy for students who leave more than 15 questions or brilliant students who solve an easy question in lesser time. This will ensure major curb into negative marks leakages.
5. Rough work: Student’s most neglected area. They do rough work in shabby un-readable manner and then waste time. Rough work must be neat and clean with the identification of question number with rough work. If you start working on question and then leave mid-way, you should be able to start solving from that point and not from start again once you revisit. This will avoid wastage of time by duplication. At the end of paper, with limited time such partially solved answers will surely help.
6. Practice: You must take multiple Mock tests to master these strategies. Just knowing strategies does not help. Once you start taking mock tests, you will realise you are able to complete NEET paper 15 minutes before time even after sparing 15 minutes for Planning. NEET official website has 2016 & 2017 actual papers. Please take those tests. Do not depend upon the Coaching class tests as it depends upon the teacher’s capability to design.
The author is Chairman & Managing Director, Astute Career Counselling Academy.

***
ಮುಗಿಯಿತೆ ಪಿಯುಸಿ? ಮುಂದಿದೆ ಅವಕಾಶಗಳ ರಾಶಿ!

20 Apr, 2018.

ಟಿ. ಎ. ಬಾಲಕೃಷ್ಣ ಅಡಿಗ.

ಯಾವುದೇ ವಿದ್ಯಾರ್ಥಿಯ ಜೀವನದಲ್ಲಿ ಹತ್ತನೇ ತರಗತಿ ಹಾಗೂ ಪದವಿಪೂರ್ವ ಶಿಕ್ಷಣ ಪ್ರಮುಖ ಘಟ್ಟಗಳು. ಈ ಹಂತಗಳಲ್ಲಿ ಸರಿಯಾದ ನಿರ್ಧಾರ ಕೈಗೊಳ್ಳುವುದು ವಿದ್ಯಾರ್ಥಿ ದೆಸೆಯಲ್ಲಿನ ಮಹತ್ವದ ಸಂಗತಿಯಾಗಿದೆ. ಆ ಕಾರಣದಿಂದಲೇ ಈ ಎರಡು ಹಂತಗಳನ್ನು ವಿದ್ಯಾರ್ಥಿ ಜೀವನದ ತಿರುವುಗಳೆಂದು ಭಾವಿಸಲಾಗುತ್ತದೆ.

ತಮ್ಮ ಭವಿಷ್ಯದ ಜೀವನವನ್ನು ರೂಪಿಸಿಕೊಳ್ಳುವ ನಿಟ್ಟಿನಲ್ಲಿ ಪದವಿಪೂರ್ವ ತರಗತಿಯಲ್ಲಿ ಯಾವ ವಿಷಯಗಳ ಸಂಯೋಜನೆಯನ್ನು ಆಯ್ಕೆ ಮಾಡಿಕೊಂಡರೆ ಉತ್ತಮ ಎಂಬ ನಿರ್ಧಾರವನ್ನು ಹತ್ತನೇ ತರಗತಿಯಲ್ಲಿಯೇ ತೆಗೆದುಕೊಳ್ಳಬೇಕಾದ ಅನಿವಾರ್ಯತೆ ವಿದ್ಯಾರ್ಥಿಗಳಿಗೆ ಎದುರಾಗುತ್ತದೆ. ಅದೇ ರೀತಿ, ಪದವಿಪೂರ್ವ ಶಿಕ್ಷಣದ ನಂತರ ತಮ್ಮ ಗುರಿ ಸಾಧನೆಯ ನಿಟ್ಟಿನಲ್ಲಿ ಇರುವ ಹಲವಾರು ಅವಕಾಶಗಳನ್ನು ತಿಳಿದುಕೊಂಡು ಅದಕ್ಕೆ ಪೂರಕವಾದ ನಿರ್ಧಾರಗಳನ್ನು ತೆಗೆದುಕೊಳ್ಳಬೇಕಾದ ಅನಿವಾರ್ಯತೆಯೂ ಉಂಟಾಗುತ್ತದೆ. ಈ ಎರಡೂ ಹಂತಗಳಲ್ಲಿ ವಿದ್ಯಾರ್ಥಿಗಳು ಮತ್ತು ಪೋಷಕರು ಕೆಳಗಿನ ಕೆಲವು ಅಂಶಗಳ ಕಡೆಗೆ ಗಮನ ಹರಿಸುವುದು ಅತ್ಯವಶ್ಯ.

ಆಸಕ್ತಿ ಮತ್ತು ಗುರಿ: ತಮ್ಮ ಆಸಕ್ತಿಗಳಿಗೆ ಅನುಗುಣವಾಗಿ ವಿದ್ಯಾರ್ಥಿಗಳು ಕೆಲವು ವೃತ್ತಿಗಳ ಪಟ್ಟಿಯೊಂದನ್ನು ಮಾಡಿಕೊಳ್ಳುವುದು ಅಗತ್ಯ. ಇದರಲ್ಲಿ ಯಾವ ವೃತ್ತಿಯ ಬಗ್ಗೆ ಆಸಕ್ತಿ ಇರುವುದೋ ಆ ನಿಟ್ಟಿನಲ್ಲಿಯೇ ಮುಂದುವರೆಯುವುದು ಒಳ್ಳೆಯದು. ನಿಖರ ಗುರಿ ಇದ್ದಾಗ ಸಾಧನೆಯ ದಾರಿಯಲ್ಲಿ ಗೊಂದಲಗಳು ಉಂಟಾಗುವುದಿಲ್ಲ.

ಕನಸಿನ ವೃತ್ತಿಯನ್ನು ನಿರ್ಧರಿಸಿದ ನಂತರ, ಆ ವೃತ್ತಿಗೆ ಸೇರಬೇಕಾದಲ್ಲಿ ಅದಕ್ಕೆ ಪೂರಕವಾದ ಕೆಲವು ಗುರಿಗಳನ್ನು ಹಾಕಿಕೊಳ್ಳಬೇಕು. ಆ ಗುರಿಗಳ ಸಾಧನೆಗೆ ಬೇಕಾದ ಪೂರ್ವಸಿದ್ಧತೆಯನ್ನು ಈಗಿನಿಂದಲೇ ಪ್ರಾರಂಭಿಸಬೇಕು

ಕೌಶಲಗಳು-ಮೌಲ್ಯಗಳು: ಪ್ರತಿಯೊಂದು ವೃತ್ತಿಗೂ ತನ್ನದೇ ಆದ ಕೆಲವು ಕೌಶಲಗಳಿವೆ. ಅವುಗಳ ಬಗ್ಗೆ ಮಾಹಿತಿ ಪಡೆದು ಆ ಕೌಶಲಗಳನ್ನು ವಿದ್ಯಾರ್ಥಿ ದೆಸೆಯಿಂದಲೇ ಬೆಳೆಸಿಕೊಳ್ಳುವ ಪ್ರಯತ್ನ ಮಾಡಬೇಕು. ಅಂತೆಯೇ ಎಲ್ಲ ವೃತ್ತಿಗಳಿಗೂ ನಿರ್ದಿಷ್ಟವಾದ ವೃತ್ತಿ ಧರ್ಮ ಹಾಗೂ ಮೌಲ್ಯಗಳಿರುತ್ತವೆ. ಆ ಮೌಲ್ಯಗಳನ್ನು ಪಾಲಿಸುವ ಮನೋಭಾವವನ್ನು ಬೆಳೆಸಿಕೊಳ್ಳುವುದು ಅತ್ಯವಶ್ಯ.

ಮೇಲಿನ ಎಲ್ಲ ಅಂಶಗಳನ್ನು ಗಮನದಲ್ಲಿಟ್ಟುಕೊಂಡು ವಿದ್ಯಾರ್ಥಿಗಳು ತಮ್ಮ ಭವಿಷ್ಯದ ಬಗ್ಗೆ ನಿರ್ಧಾರವನ್ನು ತೆಗೆದುಕೊಳ್ಳುವುದು ಒಳ್ಳೆಯದು. ಸ್ನೇಹಿತರ ಅಥವಾ ಸಂಬಂಧಿಗಳ ಒತ್ತಡ-ಒತ್ತಾಯಗಳಿಗೆ ಮಣಿಯದೆ ತಮ್ಮ ಪೋಷಕರೊಡನೆ ಚರ್ಚಿಸಿ ಈ ಬಗ್ಗೆ ತೀರ್ಮಾನ ತೆಗೆದುಕೊಳ್ಳಬೇಕು.

ಹತ್ತನೇ ತರಗತಿ ಹಾಗೂ ಪದವಿಪೂರ್ವ ತರಗತಿಯ ಪರೀಕ್ಷೆಗಳು ಈಗಷ್ಟೇ ಮುಗಿದಿವೆ. ವಿದ್ಯಾರ್ಥಿಗಳು ಮತ್ತು ಪೋಷಕರು ಈಗ ಫಲಿತಾಂಶವನ್ನು ಎದುರು ನೋಡುತ್ತಿದ್ದಾರೆ. ‘10ನೇ ತರಗತಿ ನಂತರ ಮುಂದೇನು?’, ‘ಪದವಿಪೂರ್ವ ಶಿಕ್ಷಣದ ನಂತರ ಮುಂದೇನು?’ ಎಂಬ ಪ್ರಶ್ನೆ ಬಹುತೇಕ ವಿದ್ಯಾರ್ಥಿಗಳಲ್ಲೂ ಅವರ ಪೋಷಕರಲ್ಲೂ ಮೂಡಿರುವುದು ಸಹಜ. ಸದ್ಯಕ್ಕೆ ಪದವಿಪೂರ್ವ ವಿದ್ಯಾರ್ಥಿಗಳಿಗೆ ಇರುವ ಅಧ್ಯಯನ ಮತ್ತು ವೃತ್ತಿ ಅವಕಾಶಗಳ ಬಗ್ಗೆ ಗಮನಹರಿಸೋಣ.

ಪದವಿಪೂರ್ವ ಹಂತದ ವಿದ್ಯಾರ್ಥಿಗಳ ಮುಂದೆ ಮುಂದಿನ ಅಧ್ಯಯನಕ್ಕೆ ಮೂರು ಬಗೆಯ ಆಯ್ಕೆಗಳಿವೆ. ಅವುಗಳೆಂದರೆ: 1. ವೃತ್ತಿಪರ ಕೋರ್ಸ್‌ಗಳಿಗೆ ಸೇರುವುದು, 2. ನಿರ್ದಿಷ್ಟ ವಿಷಯದಲ್ಲಿ ಪದವಿ ಕೋರ್ಸ್‌ಗೆ ಸೇರಿ ಅಧ್ಯಯನ ಮುಂದುವರೆಸುವುದು, 3. ಯಾವುದಾದರೂ ವೃತ್ತಿ ಶಿಕ್ಷಣಕ್ಕೆ ಪ್ರವೇಶ ಪಡೆಯುವುದು.

ವಿಜ್ಞಾನ ವಿಭಾಗದಲ್ಲಿರುವ ಅವಕಾಶಗಳು: ವಿಜ್ಞಾನದ ಸಂಯೋಜನೆಗಳನ್ನು ತೆಗೆದುಕೊಂಡಿರುವ ವಿದ್ಯಾರ್ಥಿಗಳು ಪದವಿಪೂರ್ವ ಶಿಕ್ಷಣದ ನಂತರ ಜೆ.ಇ.ಇ, ಸಿ.ಇ.ಟಿ. ಮುಂತಾದ ಪ್ರವೇಶ ಪರೀಕ್ಷೆಗಳನ್ನು ಬರೆದು, ಅದರಲ್ಲಿ ತಾವು ಪಡೆಯುವ ರ‍್ಯಾಂಕ್‌ನ ಆಧಾರದ ಮೇಲೆ ವಿವಿಧ ಎಂಜಿನಿಯರಿಂಗ್ ಕೋರ್ಸ್‌ಗಳಿಗೆ ಸೇರುವುದು ಸರ್ವೇ ಸಾಮಾನ್ಯ. ಅದೇರೀತಿ, ಜೀವಶಾಸ್ತ್ರವನ್ನು ಒಂದು ವಿಷಯವಾಗಿ ತಮ್ಮ ಸಂಯೋಜನೆಯಲ್ಲಿ ಆಯ್ಕೆ ಮಾಡಿಕೊಂಡಿರುವ ವಿದ್ಯಾರ್ಥಿಗಳು ಎನ್.ಇ.ಇ.ಟಿ. (ನೀಟ್) ಪ್ರವೇಶ ಪರೀಕ್ಷೆ ಬರೆದು, ಅದರ ರ‍್ಯಾಂಕಿಂಗ್‌ನ ಆಧಾರದ ಮೇಲೆ ವೈದ್ಯಕೀಯ ಕೋರ್ಸ್‌ಗಳಿಗೆ ಸೇರುವುದೂ ಸರ್ವೇ ಸಾಮಾನ್ಯ.

ವಿಜ್ಞಾನದ ವಿದ್ಯಾರ್ಥಿಗಳಿಗೆ ಎಂಜಿನಿಯರಿಂಗ್ ಅಥವಾ ಮೆಡಿಕಲ್‌ಗೆ ಸೇರುವುದೇ ಜೀವನದ ಪರಮ ಗುರಿಯಾಗಬೇಕಿಲ್ಲ. ಅದರ ಆಚೆಯೂ ಹಲವಾರು ಆಸಕ್ತಿದಾಯಕ ಅವಕಾಶಗಳಿವೆ. ಶುದ್ಧ ವಿಜ್ಞಾನದ ವಿಷಯಗಳಲ್ಲಿ ಪದವಿ ಗಳಿಸಿ, ಆಸಕ್ತಿ ಇರುವ ಯಾವುದಾದರೊಂದು ವಿಷಯದಲ್ಲಿ ಸ್ನಾತಕೋತ್ತರ ಪದವಿಯ ಅಧ್ಯಯನ ಮುಂದುವರೆಸಬಹುದು. ಅದರ ನಂತರವೂ ಆ ವಿಷಯದಲ್ಲಿ ಸಂಶೋಧನೆ ನಡೆಸಿ, ಡಾಕ್ಟರೇಟ್ ಪದವಿಯನ್ನೂ ಪಡೆಯಬಹುದು. ಅದಕ್ಕೆ ವಿಪುಲವಾದ ಅವಕಾಶಗಳಿವೆ.

ರಾಜ್ಯದ ಎಲ್ಲ ವಿಶ್ವವಿದ್ಯಾಲಯಗಳೂ ಈಗ ಜಿಲ್ಲಾ ಕೇಂದ್ರಗಳಲ್ಲಿ ಸ್ನಾತಕೋತ್ತರ ಅಧ್ಯಯನ ಕೇಂದ್ರಗಳನ್ನು ತೆರೆದಿವೆ. ಅಲ್ಲದೆ, ತಮ್ಮ ವ್ಯಾಪ್ತಿಯಲ್ಲಿ ಬರುವ ಖಾಸಗೀ ಕಾಲೇಜುಗಳಲ್ಲಿಯೂ ಸ್ನಾತಕೋತ್ತರ ಅಧ್ಯಯನ ಕೇಂದ್ರಗಳನ್ನು ತೆರೆಯಲು ಅನುಮತಿ ನೀಡುತ್ತಿವೆ. ಇಂದು ಶುದ್ಧ ವಿಜ್ಞಾನದಲ್ಲಿ ಸಂಶೋಧನೆ ಕೈಗೊಳ್ಳುತ್ತಿರುವವರ ಸಂಖ್ಯೆ ಬಹಳ ಕ್ಷೀಣಿಸಿದೆ. ಶುದ್ಧ ವಿಜ್ಞಾನದ ಜೊತೆಗೆ, ಆನ್ವಯಿಕ ವಿಜ್ಞಾನದ ಹಲವು ಕ್ಷೇತ್ರಗಳಲ್ಲಿ ಸಂಶೋಧನೆಗೆ ಅವಕಾಶಗಳು ಮುಕ್ತವಾಗಿವೆ.

ವೈಜ್ಞಾನಿಕ ಸಂಶೋಧನೆ ನಡೆಸುತ್ತಿರುವ ಹಲವಾರು ಖ್ಯಾತನಾಮ ಸಂಸ್ಥೆಗಳು ನಮ್ಮ ರಾಜ್ಯದಲ್ಲಿವೆ. ಬೆಂಗಳೂರಿನಲ್ಲಿರುವ ‘ಟಾಟಾ ವಿಜ್ಞಾನ ಮಂದಿರ’ (ಟಾಟಾ ಇನ್‍ಸ್ಟಿಟ್ಯೂಟ್ ಆಫ್ ಸೈನ್ಸ್) ಅಂತರರಾಷ್ಟ್ರೀಯ ಖ್ಯಾತಿ ಪಡೆದಿದೆ. ಮೈಸೂರಿನ ಮಹಾರಾಜರಾದ ಕೃಷ್ಣರಾಜ ಒಡೆಯರ್ ಅವರ ನೆರವಿನಿಂದ, 1909ರಲ್ಲಿ ಜೆಮ್‍ಶೆಟ್‍ಜಿ ಟಾಟಾ ಅವರು ಪ್ರಾರಂಭಿಸಿದ ಈ ಸಂಸ್ಥೆಯಲ್ಲಿ ಇಂದು ವಿಜ್ಞಾನದ ಹಲವು ಶಾಖೆಗಳಿಗೆ ಸಂಬಂಧಿಸಿದ ಉತ್ಕೃಷ್ಟ ಸಂಶೋಧನೆ ನಡೆಯುತ್ತಿದೆ. ಇದರ ಜೊತೆಗೆ, ಬೆಂಗಳೂರಿನವರೇ ಆದ ಅಂತರರಾಷ್ಟ್ರೀಯ ಖ್ಯಾತಿಯ ಡಾ. ಸಿ. ಎನ್. ಆರ್. ರಾವ್ ಅವರು ಸ್ಥಾಪಿಸಿರುವ ‘ಜವಾಹರಲಾಲ್ ನೆಹರೂ ಸೆಂಟರ್ ಫಾರ್ ಅಡ್ವಾನ್ಸ್ಡ್ ಸೈಂಟಿಫಿಕ್ ರಿಸರ್ಚ್’ನಲ್ಲಿಯೂ ವೈಜ್ಞಾನಿಕ ಸಂಶೋಧನೆಗೆ ಅವಕಾಶಗಳಿವೆ. ಮೈಸೂರಿನಲ್ಲಿರುವ ಸಿ.ಎಫ್.ಟಿ.ಆರ್.ಐ. ಆಹಾರ ತಂತ್ರಜ್ಞಾನ ಕ್ಷೇತ್ರದಲ್ಲಿ ನಡೆಸಿರುವ ತನ್ನ ಸಂಶೋಧನೆಗಳಿಂದ ಅಂತರರಾಷ್ಟ್ರೀಯ ಖ್ಯಾತಿ ಗಳಿಸಿದೆ.

ಕೆಮಿಕಲ್ ಟೆಕ್ನಾಲಜಿ, ಸೆರಾಮಿಕ್ ಟೆಕ್ನಾಲಜಿ, ಟೆಕ್ಸ್‌ಟೈಲ್ ಟೆಕ್ನಾಲಜಿ ಮುಂತದ ಹಲವಾರು ಅಸಾಂಪ್ರದಾಯಿಕ ವಿಷಯಗಳಲ್ಲಿಯೂ ವಿಜ್ಞಾನದ ವಿದ್ಯಾರ್ಥಿಗಳು ಬಿ.ಟೆಕ್ ಪದವಿಯನ್ನು ಆಯ್ಕೆ ಮಾಡಿಕೊಳ್ಳಬಹುದು. ಇಲ್ಲವೇ, ಬಯೋಫಿಸಿಕ್ಸ್, ಆಸ್ಟ್ರೋಫಿಸಿಕ್ಸ್, ನ್ಯೂಕ್ಲಿಯರ್ ಫಿಸಿಕ್ಸ್ ಮುಂತಾದ ವಿಶಿಷ್ಟ ವಿಷಯಗಳನ್ನು ಅಧ್ಯಯನಕ್ಕೆ ಆಯ್ಕೆ ಮಾಡಿಕೊಳ್ಳಬಹುದು. ಬಯೋಟೆಕ್ನಾಲಜಿ, ಜೆನೆಟಿಕ್ಸ್, ಮೈಕ್ರೋಬಯಾಲಜಿ ಮುಂತಾದ ಕ್ಷೇತ್ರಗಳಲ್ಲಿಯೂ ಪದವಿ ಹಾಗೂ ಸ್ನಾತಕೋತ್ತರ ಪದವಿ ಪಡೆಯಲು ಸಾಕಷ್ಟು ಅವಕಾಶಗಳಿವೆ.

ವೈದ್ಯಕೀಯ ಶಿಕ್ಷಣಕ್ಕೆ ಪೂರಕವಾದ ಹಲವು ಬಗೆಯ ಪ್ಯಾರಾ ವೈದ್ಯಕೀಯ ಕೋರ್ಸ್‌ಗಳೂ ಇಂದು ಲಭ್ಯವಿವೆ. ಎಕ್ಸ್‌ರೇ ಟೆಕ್ನೀಷಿಯನ್, ಫಿಸಿಯೋಥೆರಪಿ, ಆಕ್ಯುಪೇಷನಲ್ ಥೆರಪಿ, ನರ್ಸಿಂಗ್, ಕ್ಲಿನಿಕಲ್ ಟೆಕ್ನಾಲಜಿ ಮುಂತಾದ ಹಲವಾರು ಕೋರ್ಸ್‌ಗಳನ್ನು ಸರ್ಕಾರಿ ಹಾಗು ಖಾಸಗಿ ಮೆಡಿಕಲ್ ಕಾಲೇಜುಗಳು ಪ್ರಾರಂಭಿಸಿವೆ. ಪಿ.ಯು. ನಂತರ ಇಂಥ ವಿಷಯಗಳಲ್ಲಿ ಡಿಪ್ಲೊಮ ಅಧ್ಯಯನ ಮಾಡಿ ಉದ್ಯೋಗ ಗಳಿಸಬಹುದು.

ವಾಣಿಜ್ಯ ವಿಭಾಗದಲ್ಲಿರುವ ಅವಕಾಶಗಳು: ಪದವಿಪೂರ್ವ ಹಂತದಲ್ಲಿ ವಾಣಿಜ್ಯ ವಿಷಯಗಳಲ್ಲಿ ಯಾವುದೇ ಸಂಯೋಜನೆಯಲ್ಲಿ ಅಧ್ಯಯನ ಮಾಡಿರುವ ವಿದ್ಯಾರ್ಥಿಗಳು ಸಾಮಾನ್ಯವಾಗಿ ಬಿ.ಕಾಂ. ಪದವಿಗೆ ಸೇರಿಕೊಳ್ಳುತ್ತಾರೆ. ಇಲ್ಲವೇ ಬಿ.ಬಿ.ಎಮ್. ಪದವಿಗೆ ಸೇರಿಕೊಳ್ಳುತ್ತಾರೆ. ಬಹುತೇಕ ಬಿ.ಕಾಂ. ವಿದ್ಯಾರ್ಥಿಗಳು ಪದವಿ ಅಧ್ಯಯನದ ಜೊತೆಗೆ ಮುಂದೆ ಚಾರ್ಟರ್ಡ್ ಅಕೌಂಟೆಂಟ್ ಆಗಿ ಉದ್ಯೋಗ ಅಥವಾ ಸ್ವಯಂ ವೃತ್ತಿ ಹಿಡಿಯುವ ದೃಷ್ಟಿಯಿಂದ ಸಿ.ಎ. ಪರೀಕ್ಷೆ ತೆಗೆದುಕೊಳ್ಳಲು ಬಯಸುತ್ತಾರೆ. ಬಿ.ಕಾಂ. ಪದವಿಯ ಜೊತೆಗೇ ಈ ಅಧ್ಯಯನವನ್ನು ನಡೆಸಲು ಸಾಧ್ಯವಿದೆ.

ಬಿ.ಕಾಂ. ಪದವಿಯ ನಂತರ ಕಂಪನಿಗಳಲ್ಲಿ ಉದ್ಯೋಗಕ್ಕೆ ನೇರ ನೇಮಕಾತಿಯ ಅವಕಾಶಗಳು ಇಂದು ಹೆಚ್ಚಿವೆ. ಪದವಿ ಮುಗಿಯುತ್ತಿದ್ದಂತೆ ನೇರವಾಗಿ ಉದ್ಯೋಗಕ್ಕೆ ಸೇರಬಹುದು. ಇಲ್ಲವೇ ಎಂ.ಕಾಂ. ಸ್ನಾತಕೋತ್ತರ ಪದವಿ ಕೋರ್ಸ್‌ಗೆ ಸೇರಿಕೊಳ್ಳಬಹುದು.

ಬಿ.ಕಾಂ. ಪದವಿಯಲ್ಲಿಯೇ ಫೈನಾನ್ಸ್, ಮ್ಯಾನೇಜ್‌ಮೆಂಟ್, ಟ್ಯಾಕ್ಸೇಷನ್, ಬ್ಯಾಂಕಿಂಗ್, ಟೂರಿಸಂ ಮುಂತಾದ ಇಂದಿನ ಅವಶ್ಯಕತೆಯ ಕ್ಷೇತ್ರಗಳಲ್ಲಿ ವಿಶೇಷ ಜ್ಞಾನ ನೀಡುವ ಕೋರ್ಸ್‌ಗಳನ್ನು ಕೆಲವು ವಿದ್ಯಾಸಂಸ್ಥೆಗಳು ನಡೆಸುತ್ತಿವೆ. ಅಂಥ ಉಪಯುಕ್ತ ಕೋರ್ಸ್‌ಗಳಿಗೆ ಸೇರಿ ಉದ್ಯೋಗದ ಅವಕಾಶಗಳನ್ನು ಹೆಚ್ಚಿಸಿಕೊಳ್ಳಬಹುದು. ಬಿ.ಕಾಂ. ಅಥವಾ ಬಿ.ಬಿ.ಎಂ. ನಂತರ ಎಂ.ಬಿ.ಎ. ಪದವಿಗೆ ಅಧ್ಯಯನ ಮಾಡುವುದು ಸಹ ವಾಣಿಜ್ಯ ವಿದ್ಯಾರ್ಥಿಗಳಿಗೆ ಇರುವ ಇನ್ನೊಂದು ಆಯ್ಕೆ.

ವಿಜ್ಞಾನ ವಿಭಾಗದ ವಿದ್ಯಾರ್ಥಿಗಳಿಗಿರುವಷ್ಟು ಬಗೆಯ ಆಯ್ಕೆಗಳು ವಾಣಿಜ್ಯ ವಿದ್ಯಾರ್ಥಿಗಳಿಗೆ ಇಲ್ಲವಾದರೂ ಉದ್ಯೋಗ ಹಾಗೂ ಸ್ವಾವಲಂಬನೆಯ ದೃಷ್ಟಿಯಿಂದ ವಾಣಿಜ್ಯ ವಿದ್ಯಾರ್ಥಿಗಳು ಹೆಚ್ಚು ಅನುಕೂಲಕರ ಪರಿಸ್ಥಿತಿಯಲ್ಲಿದ್ದಾರೆ.

ಕಲಾ ವಿಭಾಗದಲ್ಲಿರುವ ಅವಕಾಶಗಳು: ಕಾರಣಾಂತರಗಳಿಂದ ಕಲಾ ವಿಭಾಗಕ್ಕೆ ಸಂಬಂಧಿಸಿದ ಸಂಯೋಜನೆಗಳನ್ನು ಆಯ್ಕೆ ಮಾಡಿಕೊಂಡಿರುವ ವಿದ್ಯಾರ್ಥಿಗಳಲ್ಲಿ ತಮಗೆ ಉದ್ಯೋಗಾವಕಾಶಗಳು ಕಡಿಮೆ ಎಂಬ ನಂಬಿಕೆಯಿದೆ. ಆದರೆ, ಇಲ್ಲಿಯೂ ಸಹ ಅಧ್ಯಯನ ಮುಂದುವರೆಸುವ ಅಥವಾ ವೃತ್ತಿ ಹಿಡಿಯುವ ಹಲವಾರು ಅವಕಾಶಗಳಿವೆ. ಬಿ.ಎ. ಪದವಿಯಲ್ಲಿ ಇಂದು ಹಲವು ಬಗೆಯ ಸಂಯೋಜನೆಗಳು ಲಭ್ಯವಿವೆ. ಸೈಕಾಲಜಿ, ಕ್ರಿಮಿನಾಲಜಿ, ಸೋಷಿಯಲ್ ವರ್ಕ್, ಮುಂತಾದ ಕ್ಷೇತ್ರಗಳ ಜೊತೆಗೆ ಇಂದು ಪತ್ರಿಕೋದ್ಯಮ ಕೂಡ ಒಂದು ಜನಪ್ರಿಯ ಆಯ್ಕೆಯ ಕ್ಷೇತ್ರವಾಗಿದೆ.

ಉಳಿದ ವಿಭಾಗಗಳಲ್ಲಿರುವಂತೆ, ಕಲಾ ವಿಭಾಗದ ವಿದ್ಯಾರ್ಥಿಗಳು ತಮ್ಮ ಆಸಕ್ತಿಯ ಒಂದು ವಿಷಯದಲ್ಲಿ ಸ್ನಾತಕೋತ್ತರ ಪದವಿಯ ಅಧ್ಯಯನನ್ನು ಮುಂದುವರೆಸಬಹುದು. ನಂತರ ಅದೇ ಕ್ಷೇತ್ರದಲ್ಲಿ ಸಂಶೋಧನೆಯನ್ನೂ ಕೈಗೊಳ್ಳಬಹುದು.

ಶಿಕ್ಷಕ ವೃತ್ತಿಯನ್ನು ಆಯ್ಕೆ ಮಾಡಿಕೊಳ್ಳಿ

ವಿಜ್ಞಾನ ಮತ್ತು ಕಲಾ ವಿಭಾಗದ ವಿದ್ಯಾರ್ಥಿಗಳಿಗೆ ಪದವಿಯ ನಂತರ ಇರುವ ಇನ್ನೊಂದು ಆಯ್ಕೆ ಎಂದರೆ ಶಿಕ್ಷಕ ತರಬೇತಿ ಕಾಲೇಜುಗಳಲ್ಲಿ ಬಿ.ಎಡ್. ಪದವಿ ಅಧ್ಯಯನ ಮಾಡಿ ಶಿಕ್ಷಕ ವೃತ್ತಿಗೆ ಸೇರಿಕೊಳ್ಳುವುದು. ಶಿಕ್ಷಕ ವೃತ್ತಿಗೆ ಪೂರಕವಾದ ಮನೋಭಾವವನ್ನು ಹೊಂದಿರುವುದು ಇದಕ್ಕೆ ಅತ್ಯವಶ್ಯ. ಇಲ್ಲಿಯೂ ಸಹ ಬಿ.ಎಡ್. ಪದವಿಯ ನಂತರ ಎಂ.ಎಡ್. ಸ್ನಾತಕೋತ್ತರ ಪದವಿ ಪಡೆದು ನಂತರ ಸಂಶೋಧನೆ ಕೈಗೊಳ್ಳಬಹುದು.

ನಾಗರಿಕ ಸೇವೆಗಳ ಪರೀಕ್ಷೆ: ರಾಷ್ಟ್ರಮಟ್ಟದಲ್ಲಿ ಪ್ರತಿ ವರ್ಷ ಐ.ಎ.ಎಸ್., ಐ.ಪಿ.ಎಸ್. ಮುಂತಾದ ನಾಗರಿಕ ಸೇವೆಗಳಿಗೆ ಆಯ್ಕೆ ಮಾಡಿಕೊಳ್ಳಲು ‘ಯೂನಿಯನ್ ಪಬ್ಲಿಕ್ ಸರ್ವೀಸ್ ಕಮಿಷನ್’ (ಯು.ಪಿ.ಎಸ್.ಸಿ.) ವತಿಯಿಂದ ಪ್ರವೇಶ ಪರೀಕ್ಷೆಗಳನ್ನು ನಡೆಸಲಾಗುತ್ತದೆ. ಇದಕ್ಕೆ ಕನಿಷ್ಠ ಅರ್ಹತೆ ಪದವಿ ಪಡೆದಿರಬೇಕು. ಪದವಿ ಅಧ್ಯಯನದ ಕೊನೆಯ ವರ್ಷದಿಂದಲೇ ಇದಕ್ಕೆ ಪೂರಕವಾದ ಸಿದ್ಧತೆಯನ್ನು ನೀವು ಮಾಡಿಕೊಳ್ಳಬಹುದು.

ಪದವಿಪೂರ್ವ ಶಿಕ್ಷಣ ಅತ್ಯವಶ್ಯವೇ?: ಒಂದು ವೇಳೆ ಯಾವುದೇ ಕಾರಣಕ್ಕೆ ಪದವಿಪೂರ್ವ ಶಿಕ್ಷಣವನ್ನು ಮುಂದುವರೆಸಲು ಸಾಧ್ಯವಾಗದೇ ಹೋಗುವವರು ಧೃತಿಗೆಡುವ ಅವಶ್ಯಕತೆ ಇಲ್ಲ. ಹತ್ತನೇ ತರಗತಿಯ ಕನಿಷ್ಠ ಅರ್ಹತೆ ಹೊಂದಿರುವ ಹಲವಾರು ಡಿಪ್ಲೊಮ ತರಗತಿಗಳು ವಿವಿಧ ವಿಷಯಗಳಲ್ಲಿ ಲಭ್ಯವಿವೆ. ನಿಮ್ಮ ಆಸಕ್ತಿಯ ವಿಷಯವನ್ನು ಆಯ್ಕೆ ಮಾಡಿಕೊಂಡು ಅಧ್ಯಯನ ಮುಂದುವರೆಸಬಹುದು. ಡಿಪ್ಲೊಮ ನಂತರ ಉದ್ಯೋಗಕ್ಕೆ ಸೇರಬಹುದಾದ ಹಲವಾರು ಅವಕಾಶಗಳು ಮುಕ್ತವಾಗಿವೆ.

ವಿಜ್ಞಾನ, ವಾಣಿಜ್ಯ ಅಥವಾ ಕಲಾ ವಿಭಾಗಗಳಲ್ಲಿ ಯಾವುದು ಉತ್ತಮ ಎಂಬ ಪ್ರಶ್ನೆಯೇ ಏಳುವುದಿಲ್ಲ. ನಿಮ್ಮ ಆಸಕ್ತಿ ಹಾಗು ಸಾಮರ್ಥ್ಯಗಳೇ ನಿಜವಾದ ಅಳತೆಗೋಲು. ವಿವಿಧ ಅವಕಾಶಗಳ ಬಗ್ಗೆ ಮಾಹಿತಿ ಸಂಗ್ರಹಿಸಿ. ಪೋಷಕರ ಹಾಗೂ ಶಿಕ್ಷಕರ ನೆರವು ಪಡೆದುಕೊಂಡು ಸೂಕ್ತ ನಿರ್ಧಾರಕ್ಕೆ ಬನ್ನಿ.

***

ಪಿಯುಸಿ ವಿದ್ಯಾರ್ಥಿಗಳೇ ಪರೀಕ್ಷೆಗೆ ರೆಡಿನಾ?

21.02.2018,

| ನರೇಂದ್ರ ಎಸ್. ಗಂಗೊಳ್ಳಿ

ಇದೇ ಮಾರ್ಚ್ ಒಂದರಿಂದ ದ್ವಿತೀಯ ಪಿಯುಸಿ ಪರೀಕ್ಷೆಗಳು ಆರಂಭವಾಗಲಿವೆ. ಲಕ್ಷ ಲಕ್ಷ ವಿದ್ಯಾರ್ಥಿಗಳು ದ್ವಿತೀಯ ಪಿಯುಸಿ ಪರೀಕ್ಷೆ ಬರೆಯಲಿದ್ದಾರೆ.

ಪರೀಕ್ಷೆ ಎಂದರೆ ಸಾಕು ವಿದ್ಯಾರ್ಥಿಗಳಲ್ಲಿ ಅದೆಂಥದೋ ತಳಮಳ. ಪಾಲಕರು, ಶಿಕ್ಷಕರಲ್ಲೂ ಸ್ವಲ್ಪಮಟ್ಟಿನ ತಳಮಳ ಸಹಜ. ನಕಲು ಮಾಡುವಾಗ ಸಿಕ್ಕಿಬಿದ್ದರೆ ಮುಂದಿನ ಮೂರು ವರುಷ ಪರೀಕ್ಷೆ ಬರೆಯಲು ಸಾಧ್ಯವಿಲ್ಲವಂತೆ, ಹಾಗಂತೆ ಹೀಗಂತೆ ಎಂದು ಆತಂಕ ಪಡುತ್ತಿರುತ್ತಾರೆ. ಆದರೆ ಓದಿ ಪ್ರಾಮಾಣಿಕವಾಗಿ ಪರೀಕ್ಷೆ ಬರೆಯೋ ವಿದ್ಯಾರ್ಥಿಗಳು, ಅವರ ಪಾಲಕರು ಮತ್ತು ಶಿಕ್ಷಕರು ಭಯಪಡುವ ಅಗತ್ಯ ಖಂಡಿತ ಇಲ್ಲ. ನಕಲು ಮಾಡದೇ ಇರುವವರಿಗೆ ಯಾವ ನಿಯಮಗಳು ಇದ್ದರೆಷ್ಟು ಬಿಟ್ಟರೆಷ್ಟು? ಹಾಗಂತ ಪರೀಕ್ಷೆಯ ದಿನದ ವಾತಾವರಣ, ಅಲ್ಲಿನ ನಿಯಮಗಳು ಮತ್ತು ತಮ್ಮ ಮೂಲಭೂತ ಜವಾಬ್ದಾರಿಗಳ ಬಗೆಗೆ ವಿದ್ಯಾರ್ಥಿಗಳು ಕನಿಷ್ಠ ತಿಳಿವಳಿಕೆಯನ್ನು ಹೊಂದಿರಲೇಬೇಕಾಗುತ್ತದೆ.

ಯಾರೇನೇ ಅಂದರೂ ನಿಮ್ಮ ಭವಿಷ್ಯ ರೂಪಿಸುವಲ್ಲಿ ದ್ವಿತೀಯ ಪಿಯುಸಿ ಪರೀಕ್ಷೆಯ ಪಾತ್ರ ಅತ್ಯಂತ ಪ್ರಮುಖವಾದದ್ದು. ಹಾಗಾಗಿ ಇದನ್ನು ಗಂಭೀರವಾಗಿ ಪರಿಗಣಿಸಬೇಕು. ಹಗುರವಾಗಿ ತೆಗೆದುಕೊಂಡರೆ ಮುಂದೆ ಪಶ್ಚಾತ್ತಾಪ ಪಡಬೇಕಾದೀತು.

ಪರೀಕ್ಷೆ ಎಂದರೆ ಭಯ ಪಡಲು ಅದೇನು ಸಾವು- ಬದುಕಿನ ಪ್ರಶ್ನೆ ಅಲ್ಲ. ಯುದ್ಧವಂತೂ ಖಂಡಿತ ಅಲ್ಲ. ಆದರೂ ಅದರ ಬಗ್ಗೆ ಅಸಡ್ಡೆ ಬೇಡ. ನಿರ್ಲಕ್ಷಿ್ಯದರೆ ಅದು ನಿಮಗೆ ನೀವೇ ಮಾಡಿಕೊಳ್ಳುವ ದ್ರೋಹವಲ್ಲದೇ ಬೇರೇನೂ ಅಲ್ಲ. ಹಾಗಾಗಿ ಉತ್ತಮ ಅಂಕಗಳನ್ನು ತೆಗೆಯಲು ಪ್ರಯತ್ನಿಸಿ.

ಇವಿಷ್ಟು ಅನುಸರಿಸಿ

ಮನೆಯಿಂದ ಹೊರಡುವ ಮೊದಲು ನಿಮ್ಮ ಬಳಿ ಪ್ರವೇಶಪತ್ರ (ಹಾಲ್ ಟಿಕೆಟ್), ಶಾಲಾ ಗುರುತುಚೀಟಿ ಇರುವುದನ್ನು ಖಾತ್ರಿಪಡಿಸಿಕೊಳ್ಳಿ.

ಬಾಲ್ ಪಾಯಿಂಟ್ ಪೆನ್, ಪೆನ್ಸಿಲ್, ರಬ್ಬರ್, ಶಾರ್ಪನರ್, ಸ್ಕೇಲ್ ಇನ್ನಿತರ ಅಗತ್ಯ ವಸ್ತುಗಳನ್ನು ತೆಗೆದುಕೊಂಡು ಬಿಡಿ. ಪೆನ್ನಿನ ಶಾಯಿ ತೀರಾ ಢಾಳಾಗಿ ಅಥವಾ ಪೇಲವವಾಗಿ ಇರದಂತೆ ನೋಡಿಕೊಳ್ಳಿ.

ನೆನಪಿರಲಿ ಈ ಬಾರಿ ಪರೀಕ್ಷೆ ಆರಂಭಗೊಳ್ಳುವುದು ಬೆಳಗ್ಗೆ 10.15 ಕ್ಕೆ; ಮುಕ್ತಾಯವಾಗುವುದು ಮಧ್ಯಾಹ್ನ 1.30ಕ್ಕೆ.

ಕನಿಷ್ಠ ಅರ್ಧ ಗಂಟೆ ಮೊದಲು ನೀವು ನಿಮ್ಮ ಪರೀಕ್ಷಾ ಕೇಂದ್ರದಲ್ಲಿರುವುದು ಒಳ್ಳೆಯದು. ತಡವಾಗಿ ಹೋಗಿ ನಿಮ್ಮ ಕೊಠಡಿ ಹುಡುಕಬೇಡಿ. ನಿಮಗೆ ತಿಳಿದಿಲ್ಲವಾದರೆ ಅಲ್ಲಿನ ಸಿಬ್ಬಂದಿಯನ್ನು ಕೇಳಿ.

ನೆನಪಿರಲಿ ಸ್ಟಾ್ಯಟಿಸ್ಟಿಕ್ಸ್ ಪರೀಕ್ಷೆ ಹೊರತುಪಡಿಸಿ ಉಳಿದ ಪರೀಕ್ಷೆಗಳಿಗೆ ಸೈಂಟಿಫಿಕ್ ಕ್ಯಾಲ್ಕುಲೇಟರ್ ತೆಗೆದುಕೊಂಡು ಹೋಗಲು ಅವಕಾಶ ಇಲ್ಲ.

ನಿಮ್ಮ ಜೇಬು, ಪೌಚ್ಗಳಲ್ಲಿ ಅನಗತ್ಯವಾದ ಕಾಗದದ ತುಣುಕುಗಳಿದ್ದರೆ ಪರೀಕ್ಷಾ ಕೇಂದ್ರ ಪ್ರವೇಶಿಸುವ ಮುನ್ನವೇ ತೆಗೆದುಹಾಕಿಬಿಡಿ.

ಉತ್ತರ ಪತ್ರಿಕೆ ನೀಡಿದ ತಕ್ಷಣ ಅದರಲ್ಲಿ ಎಲ್ಲ (ಮಾಮೂಲಿಯಾಗಿ 16) ಪುಟಗಳು ಸರಿಯಾಗಿದೆಯೇ ಎಂದು ನೋಡಿಕೊಳ್ಳಿ. ಸಮಸ್ಯೆಯಿದ್ದಲ್ಲಿ ತಕ್ಷಣವೇ ಪರೀಕ್ಷಕರ ಗಮನಕ್ಕೆ ತನ್ನಿ.

10.15ಕ್ಕೆ ಪ್ರಶ್ನೆಪತ್ರಿಕೆಗಳನ್ನು ನಿಮಗೆ ನೀಡಿದಾಗ ಅದರಲ್ಲಿ ನಿಮ್ಮ ರಿಜಿಸ್ಟರ್ ನಂಬರ್ ಬರೆದು ಹತ್ತು ನಿಮಿಷ ಪ್ರಶ್ನೆಪತ್ರಿಕೆಯನ್ನು ಪೂರ್ತಿಯಾಗಿ ಓದಿ.

ಅಪ್ಪಿತಪ್ಪಿಯೂ ಪ್ರಶ್ನೆಪತ್ರಿಕೆ ಮೇಲೆ ರಿಜಿಸ್ಟರ್ ನಂಬರ್ ಬಿಟ್ಟು ಬೇರೆ ಏನನ್ನೂ ಬರೆಯಬೇಡಿ.

ಉತ್ತರ ಪತ್ರಿಕೆಗಳನ್ನು ನೀಡಿದ ಬಳಿಕ ಅದರಲ್ಲಿ ನಿಮ್ಮ ರಿಜಿಸ್ಟರ್ ನಂಬರ್, ಸಬ್ಜೆಕ್ಟ್ ಮತ್ತು ಸಬ್ಜೆಕ್ಟ್ ಕೋಡ್ ಸರಿಯಾಗಿ ನಮೂದಿಸಿರಿ.

ಉತ್ತರ ಪತ್ರಿಕೆಯ ಎರಡನೇ ಪುಟದಲ್ಲಿ ಮದ್ರಣದ ಅಚ್ಚುಗಳೇನಾದರೂ ಇದ್ದು ಬರೆಯಲು ಸಹ್ಯವಲ್ಲ ಎನ್ನಿಸಿದರೆ ಮೂರನೇ ಪುಟದಿಂದ ನಿಮ್ಮ ಉತ್ತರ ಆರಂಭಿಸಿ.

ಉತ್ತರಿಸುವಾಗ ಆಯಾ ಪ್ರಶ್ನೆಯ ಎದುರಿಗಿರುವ ಕ್ರಮಸಂಖ್ಯೆಯನ್ನೇ ಬರೆಯಿರಿ. ಉತ್ತರಕ್ಕೆ ನಿಮ್ಮದೇ ಪ್ರಶ್ನೆ ಸಂಖ್ಯೆಯನ್ನು ದಯವಿಟ್ಟು ಕೊಡದಿರಿ.

ಒತ್ತೊತ್ತಾಗಿ ಉತ್ತರಗಳನ್ನು ಬರೆಯದಿರಿ. ಪ್ರತಿಯೊಂದು ವಿಭಾಗಗಳನ್ನು ನಮೂದಿಸುವುದು ಒಳ್ಳೆಯದು.

ಪ್ರತಿ ಪ್ರಶ್ನೆಗೆ ಉತ್ತರಿಸಿದ ಬಳಿಕ ಒಂದು ಗೆರೆ ಬಿಟ್ಟು ಮುಂದಿನ ಪ್ರಶ್ನೆಗೆ ಉತ್ತರಿಸಿರಿ.

ನೆನಪಿರಲಿ ನಿಮಗೆ ಅಗತ್ಯವಿರುವಷ್ಟು ಹೆಚ್ಚುವರಿ ಹಾಳೆಗಳನ್ನು ಒದಗಿಸಲಾಗುತ್ತದೆ.

ಪ್ರತಿ ಹೆಚ್ಚುವರಿ ಹಾಳೆ ತೆಗೆದುಕೊಂಡಾಗ ಅದರ ಮೇಲೆ ನಿಮ್ಮ ರಿಜಿಸ್ಟರ್ ನಂಬರ್ ಬರೆದುಬಿಡಿ. ಜತೆಯಲ್ಲೇ ಹೆಚ್ಚುವರಿ ಹಾಳೆಯ ಕ್ರಮ ಸಂಖ್ಯೆಯನ್ನು ನಿಮ್ಮ ಉತ್ತರ ಪತ್ರಿಕೆಯ ಮೊದಲ ಪುಟದಲ್ಲಿರುವ ಕಾಲಂನಲ್ಲಿ ಬರೆದುಬಿಡಿ.

ಎಲ್ಲವನ್ನೂ ಉತ್ತರಿಸಿದ ಬಳಿಕ ನೀವು ಒಟ್ಟು ಎಷ್ಟು ಪುಟಗಳನ್ನು ಬಳಸಿದ್ದೀರಿ ಎನ್ನುವುದನ್ನು ನಿಮ್ಮ ಉತ್ತರ ಪತ್ರಿಕೆಯ ಮೊದಲ ಪುಟದಲ್ಲಿ ಇರುವ ಕಾಲಂನಲ್ಲಿ ನಮೂದಿಸಿ.

ಪರೀಕ್ಷೆ ಮಧ್ಯದಲ್ಲಿ ಕುಡಿಯಲು ನೀರು ಬೇಕೆನಿಸಿದಲ್ಲಿ ಎದ್ದು ನಿಂತು ಪರೀಕ್ಷಕರ ಬಳಿ ಕೇಳಿ. ಈ ವಿಷಯದಲ್ಲಿ ಸಂಕೋಚ ಬೇಡ.

ಪರೀಕ್ಷಾ ಕೇಂದ್ರದಲ್ಲಿ ಇತರರು ಏನು ಮಾಡುತ್ತಿದ್ದಾರೆ, ಕಾರಿಡಾರ್ನಲ್ಲಿ ಆಚೆ ಯಾರು ಓಡಾಡುತ್ತಿದ್ದಾರೆ ಎಂಬ ಕುತೂಹಲ ಬೇಡ. ಸ್ನೇಹಿತರನ್ನು ನೋಡಿ ಅನವಶ್ಯಕವಾಗಿ ನಗದಿರಿ.

ಪರೀಕ್ಷಾ ಕೇಂದ್ರದಲ್ಲಿ ನಿಮಗೆ ಏನೇ ಸಮಸ್ಯೆಗಳಿದ್ದರೂ ಅಥವಾ ಏನಾದರೂ ನೆರವು ಬೇಕಾದರೂ ಎದ್ದು ನಿಂತು ಪರೀಕ್ಷಕರ ಬಳಿ ಕೇಳುವ ಅಥವಾ ಹೇಳುವ ಗೌರವದ ನಡೆ ಇರಲಿ.

ಅಸ್ತವ್ಯಸ್ತವಾಗಿ ಕುಳಿತುಕೊಳ್ಳುವುದು, ಉತ್ತರ ಪತ್ರಿಕೆಯನ್ನು ಹಿಂದಿನವರಿಗೆ ಕಾಣಿಸುವಂತೆ ಕೈಯಲ್ಲಿ ಎತ್ತಿ ಹಿಡಿಯುವುದು, ಕಾಪಿ ಹೊಡೆಯುವುದು, ಇನ್ನೊಬ್ಬರಿಗೆ ಹೇಳಿಕೊಡುವುದು, ಅನವಶ್ಯಕ ಶಬ್ದಗಳನ್ನು ಮಾಡುವುದು ಮಾಡಲೇಬೇಡಿ.

ಶೀತವಾಗಿದ್ದರೆ ದಯವಿಟ್ಟು ಒಂದು ಕರ್ಚೀಫ್ ಜತೆಯಲ್ಲಿರಿಸಿಕೊಳ್ಳಿ. ಮೂಗಿನಲ್ಲಿ ಉಸಿರು ಕಟ್ಟಿಸಿಕೊಂಡು ಕುಳಿತುಕೊಳ್ಳಬೇಡಿ. ಸರಾಗವಾಗಿ ಉಸಿರಾಡಲು ಆಗಾಗ ಮೂಗನ್ನು ಎಳೆದುಕೊಳ್ಳಬೇಕೆನಿಸಿದರೆ ಹಾಗೆ ಮಾಡಿ. ಅಕ್ಕಪಕ್ಕದವರಿಗೆ ಕಿರಿಕಿರಿ ಅನ್ನಿಸಿದರೂ ಪರವಾಗಿಲ್ಲ. ನಮ್ಮ ಮತ್ತು ಅವರ ಬರವಣಿಗೆಗೂ ತೊಂದರೆ ಆಗಬಾರದು. ಹಾಗೆಂದು ಸಭ್ಯತೆ ಮರೆಯಬೇಡಿ.

ಅಗತ್ಯದ ಯಾವುದೇ ಪ್ರಶ್ನೆಯನ್ನು ಉತ್ತರಿಸದೆ ಹಾಗೆಯೇ ಬಿಡಬೇಡಿ. ನಿಮಗೆ ಗೊತ್ತಿರುವಷ್ಟನ್ನಾದರೂ ಬರೆಯಲು ಯತ್ನಿಸಿ.

ಥಿಯರಿ ವಿಷಯಗಳಲ್ಲಿ ಹತ್ತು ಅಂಕಗಳ ವಿವರಣಾತ್ಮಕ ಪ್ರಶ್ನೆಗಳಿಗೆ ಉತ್ತರಿಸುವ ಮೊದಲು ಪ್ರಾಕ್ಟಿಕಲ್ ಒರಿಯೆಂಟೆಡ್ ಪ್ರಶ್ನೆಗಳನ್ನು ಉತ್ತರಿಸಿ ಮುಗಿಸುವುದು ಒಳ್ಳೆಯದು.

ಒಂದು ಉತ್ತಮ ಕೈ ಗಡಿಯಾರ ನಿಮ್ಮ ಜತೆಗಿರಲಿ. ಮತ್ತು ಅದು ಪರೀಕ್ಷಾ ಕೇಂದ್ರದ ಸಮಯಕ್ಕೆ ಅನುಗುಣವಾಗಿ ಸಮಯ ತೋರಿಸುತ್ತಿದೆ ಎನ್ನುವುದನ್ನು ಮೊದಲ ದಿನವೇ ಖಚಿತಪಡಿಸಿಕೊಳ್ಳಿ.

ಉತ್ತರ ಪತ್ರಿಕೆಯಲ್ಲೇ ಅಲ್ಲಲ್ಲಿ ಪಾಯಿಂಟ್ಗಳನ್ನು ಅಥವಾ ಲೆಕ್ಕಾಚಾರಗಳನ್ನು ನೆನಪು ಮಾಡಿಕೊಳ್ಳಲೋಸುಗ ಪೆನ್ಸಿಲ್ನಲ್ಲಿ ಬರೆದು ಅದನ್ನು ರಬ್ಬರ್ನಲ್ಲಿ ಒರೆಸುತ್ತ ಸಮಯ ಹಾಳು ಮಾಡಬೇಡಿ. ತೀರ ಅಗತ್ಯವೆನಿಸಿದಲ್ಲಿ ಉತ್ತರ ಪತ್ರಿಕೆಯಲ್ಲೇ ಒಂದು ಹಾಳೆಯನ್ನು ಸಂಪೂರ್ಣವಾಗಿ ರಫ್ ವರ್ಕ್ಗೆ ಮೀಸಲಿಡಿ. ಕೊನೆಯಲ್ಲಿ ಅದನ್ನು ರಫ್ ಎಂದು ನಮೂದಿಸಿ ಅಡ್ಡಗೆರೆಯನ್ನು ಎಳೆದುಬಿಡಿ.

ಪರೀಕ್ಷೆ ಮುಂಚಿನ ದಿನ ಬಹಳ ಹೊತ್ತು ನಿದ್ರೆ ಬಿಟ್ಟು ಓದುವಂತಹ ಅಭ್ಯಾಸ ನಿಮ್ಮನ್ನು ಮರುದಿನದ ಪರೀಕ್ಷೆಯಲ್ಲಿ ಲವಲವಿಕೆಯಿಂದ ಇರಲು ಬಿಡುವುದಿಲ್ಲ. ಹಾಗಾಗಿ ಅಂತಹ ಅಭ್ಯಾಸ ಒಳ್ಳೆಯದಲ್ಲ.

ಅನಾರೋಗ್ಯ ಅಥವಾ ಮತ್ತೇನೆ ಕಾರಣವಿದ್ದರೆ, ತೀರಾ ಅನಿವಾರ್ಯವೆನಿಸಿದಲ್ಲಿ ಪ್ರಕೃತಿಯ ಕರೆಗೆ ಸ್ಪಂದಿಸಬೇಕಿದ್ದರೆ ನೀವು ಕೊಠಡಿ ಮೇಲ್ವಿಚಾರಕರ ಬಳಿ ಮನವಿ ಮಾಡಿಕೊಳ್ಳಬಹುದು.

ಪರೀಕ್ಷೆ ಮುಗಿಸಿ ಹೊರಬಂದ ಮೇಲೆ ಆ ಪರೀಕ್ಷೆಯ ಕುರಿತಂತೆ ನಿಮ್ಮ ಸ್ನೇಹಿತರ ಬಳಿ ಯಾವುದೇ ಚರ್ಚೆ ನಡೆಸದಿರಿ. ಕೆಲವೊಮ್ಮೆ ನಿಮ್ಮ ತಪ್ಪಾದ ಉತ್ತರಗಳು ನಿಮಗೆ ಆಗ ತಿಳಿದು ಅನವಶ್ಯಕವಾಗಿ ಆತಂಕಕ್ಕೆ ಒಳಗಾಗಬಹುದು. ಅದು ನಿಮ್ಮ ಉಳಿದ ಪರೀಕ್ಷೆಗಳ ಮೇಲೆ ಕೆಟ್ಟ ಪರಿಣಾಮ ಬೀರಬಹುದು.

***

ಪರೀಕ್ಷಾ ಗುಮ್ಮನಿಂದ ಹೊರಬರೋಣ

17.01.2018.

| ಪರಮೇಶ್ವರಯ್ಯ ಸೊಪ್ಪಿಮಠ
ಪರೀಕ್ಷೆ ಎಂದರೆ ಹೂವಿನ ಚೆಂಡೆ? ಎಂದು ನರಸಿಂಹಸ್ವಾಮಿಯವರು ‘ಹಿಂದಿನ ಸಾಲಿನ ಹುಡುಗರು’ ಕವನದಲ್ಲಿ ಬರೆದ ಸಾಲುಗಳು ಪರೀಕ್ಷೆಯನ್ನು ಹಗುರವಾಗಿ ತೆಗೆದುಕೊಳ್ಳಬೇಕೆಂದು ಹೇಳುತ್ತವೆ. ಇತ್ತೀಚೆಗೆ ವ್ಯಾಟ್ಸಾಪ್ನಲ್ಲಿ ಹರಿದಾಡುತ್ತಿದ್ದ ಎಸ್ಎಂಎಸ್… ‘ಪರೀಕ್ಷೆ ಎಂಬುದನ್ನು ಕಂಡುಹಿಡಿದವನು ಕೈಗೆ ಸಿಕ್ಕರೆ ಅವನನ್ನು ಹುಚ್ಚು ನಾಯಿಗೆ ಬಡಿಯುವ ಹಾಗೆ ಹೊಡೆಯಲು ಕಾಯುತ್ತಿದ್ದೇವೆ’ ಎಂದಿತ್ತು! ಕೆಲವು ವಿದ್ಯಾರ್ಥಿಗಳು ‘ಏನಾದರೂ ಓದಬಹುದು ಸರ್, ಆದರೆ ಈ ಎಸ್ಎಸ್ಎಲ್ಸಿ ಮತ್ತು ಪಿಯುಸಿಯನ್ನು ಮಾತ್ರ ಜೀವನದಲ್ಲಿ ಸಹಿಸಲು ಸಾಧ್ಯವಿಲ್ಲ’ ಎಂದು ಅಲವತ್ತುಕೊಂಡಿದ್ದರು. ಮಕ್ಕಳ ಮೇಲೆ ಪರೀಕ್ಷೆ ಎಂಬುದು ಎಂತಹ ಒತ್ತಡ, ಪರಿಣಾಮ ಬೀರಿದೆ ಎಂಬುದನ್ನು ಇವು ಸ್ಪಷ್ಟಪಡಿಸುತ್ತವೆ. ಪರೀಕ್ಷಾ ಜ್ವರ ಎಲ್ಲರನ್ನೂ ಕಾಡುತ್ತದೆ. ಅದಕ್ಕೆ ಮನೋವಿಜ್ಞಾನಿಗಳು ಹೇಳುವುದೇನೆಂದರೆ ‘ಪರೀಕ್ಷಾ ಭಯ ಮಾನಸಿಕ ಪ್ರಕ್ರಿಯೆ. ಕೆಲವು ಸಂದರ್ಭದಲ್ಲಿ ಇದು ಸ್ವಾಭಾವಿಕ. ಮನಸ್ಸು ಮಾಡಿದಲ್ಲಿ ಈ ಭಯದಿಂದ ಮುಕ್ತರಾಗಬಹುದು’. ಅಂದಮೇಲೆ ಹೆದರುವ ಪ್ರಶ್ನೆಯೇ ಬರುವುದಿಲ್ಲ. ಸರಿಯಾದ ಸಿದ್ಧತೆ ಮಾಡಿಕೊಂಡು, ಉತ್ತಮ ಪರೀಕ್ಷಾ ತಂತ್ರಗಳನ್ನು ಅಳವಡಿಸಿಕೊಂಡರೆ ಯಶಸ್ಸು ಸಿಗುವುದರಲ್ಲಿ ಅನುಮಾನವಿಲ್ಲ. ಓದು ವಿದ್ಯಾರ್ಥಿಗಳ ಮುಂದಿನ ಭವಿಷ್ಯದ ಅಡಿಪಾಯ. ಆದರೆ, ಇದೊಂದೇ ಅವರ ಬದುಕಲ್ಲ. ಬದುಕಲು ಕಲಿಯುವುದಕ್ಕಾಗಿ ಮಕ್ಕಳು ಓದಬೇಕು. ಅಂಥ ಮಹತ್ವದ ಓದನ್ನು ಹಣದಿಂದ ಕೊಂಡುಕೊಳ್ಳಲಿಕ್ಕೆ ಸಾಧ್ಯವಿಲ್ಲ. ಕದ್ದು ತರುವುದಕ್ಕಾಗದು. ಸಾಲವಾಗಿ ಬೇರೆಯವರಿಂದ ಪಡೆಯಲೂ ಆಗುವುದಿಲ್ಲ. ಆದರೆ ಕಳ್ಳದಾರಿಗಳಿಂದ ನಮ್ಮೊಳಗಿರದ ಅರ್ಹತೆಯನ್ನು ನಮ್ಮದೇ ಎಂದು ನಂಬಿಸಬಹುದು. ಆದರೂ ಅದು ನಿಜವಾದ ಗೆಲುವಲ್ಲ. ಅದರಿಂದ ಮುಂದಿನ ದಿನಗಳಲ್ಲಿ ಸೋಲು, ಅವಮಾನಗಳು ಕಟ್ಟಿಟ್ಟ ಬುತ್ತಿ. ಈ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳ ಪರೀಕ್ಷಾ ದಿನಗಳು ಮಹತ್ವ ಪಡೆಯುತ್ತವೆ.

ಆತ್ಮವಿಶ್ವಾಸ ಹೆಚ್ಚಿಸಿಕೊಂಡು ಕೆಲವೊಂದು ಸರಳ ಸೂತ್ರಗಳನ್ನು ಅನುಸರಿಸಿದರೆ ಉತ್ತಮ ಅಂಕ ಪಡೆಯಲು ಸಾಧ್ಯವಾಗುತ್ತದೆ.

ಕಷ್ಟಪಟ್ಟರೆ ಪ್ರತಿಫಲವುಂಟು: ಪರೀಕ್ಷೆ ಹತ್ತಿರವಾದಂತೆ ಅನೇಕ ವಿದ್ಯಾರ್ಥಿಗಳು ಎಚ್ಚರಗೊಳ್ಳುತ್ತಾರೆ. ಬುದ್ಧಿವಂತಿಕೆ ಉಪಯೋಗಿಸಲು ಪ್ರಾರಂಭಿಸುತ್ತಾರೆ. ಅನುಕೂಲದ ಹಾಗೂ ಸುಲಭ ದಾರಿಗಳ ಬೆನ್ನು ಹತ್ತುತ್ತಾರೆ. ಆದರೆ ಆ ಮಾರ್ಗಗಳು ಸುಲಭವೂ ಅಲ್ಲ, ಸರಳವೂ ಅಲ್ಲ. ಅವು ನಿರೀಕ್ಷಿತ ಫಲ ಕೊಡುವುದಿಲ್ಲ. ಇಷ್ಟೆಲ್ಲ ಮಾಡುವ ಬದಲು ಅದೇ ಸಮಯವನ್ನು ಓದಿಗಾಗಿ ಬಳಸಿದಲ್ಲಿ ಯಾರಿಗೂ ತಲೆ ಬಾಗಿಸಬೇಕಾದ ಪ್ರಮೇಯವೇ ಬರುವುದಿಲ್ಲ. ಆರಾಮಾಗಿ ಪರಿಕ್ಷೆ ಬರೆದು, ನೆಮ್ಮದಿಯಿಂದ ಮನೆ ಸೇರಿ, ಇಚ್ಛಾನುಸಾರ ಫಲಿತಾಂಶ ಪಡೆಯಬಹುದು.

ಓದು: ಮನೆಯಲ್ಲಿಯೇ ಇದ್ದರೆ 90 ನಿಮಿಷಗಳ ಕಾಲ ಓದಬಹುದು. ಆಮೇಲೆ ಗ್ರಹಿಕೆ ಪ್ರಮಾಣ ಕಡಿಮೆಯಾಗುತ್ತದೆ. 15 ನಿಮಿಷಗಳ ವಿಶ್ರಾಂತಿ ಪಡೆದು ಮತ್ತೆ ಓದು ಮುಂದುವರಿಸಬಹುದು. ಹೀಗೆ ಮೂರು ಗಂಟೆಗಳ ಓದಿನ ನಂತರ ದೀರ್ಘಕಾಲಿಕ ವಿಶ್ರಾಂತಿ ಒಳ್ಳೆಯದು. ಈ ರೀತಿ ಒಟ್ಟಾರೆ ದಿನದಲ್ಲಿ 9 ಗಂಟೆಗಳ ಗುಣಮಟ್ಟದ ಓದನ್ನು ಅಭ್ಯಾಸ ಮಾಡಿಕೊಳ್ಳಬಹುದು. ಕೇವಲ ಎರಡೇ ಗಂಟೆಗಳ ಗುಣಮಟ್ಟದ ಓದನ್ನು ನಿರಂತರವಾಗಿ ಮಾಡಿದವರು ಸಹ ಯಾವುದೇ ಆತಂಕವಿಲ್ಲದೆ ನಿರಾಳ ಮನಸ್ಸಿನಿಂದ ಪರೀಕ್ಷೆ ಬರೆಯಬಹುದು.

ಸಿದ್ಧತೆ-ಬದ್ಧತೆ: ಪ್ರತಿ ವಿಷಯವನ್ನೂ ಎಳೆಎಳೆಯಾಗಿ ಅಭ್ಯಸಿಸಬೇಕು. ಅನೇಕ ಬಾರಿ ಪುನರಾವರ್ತಿಸಬೇಕು. ಮುಖ್ಯಾಂಶಗಳಿಗೆ ಒತ್ತು ನೀಡಬೇಕು. ಹಿಂದಿನ ಪ್ರಶ್ನೆಪತ್ರಿಕೆಗಳನ್ನು ಸಂಗ್ರಹಿಸಿ, ಅವಕ್ಕೆ ಉತ್ತರ ಬರೆಯಬೇಕು.

ಸಾಮರ್ಥ್ಯದಲ್ಲಿ ನಂಬಿಕೆ: ವಿದ್ಯಾರ್ಥಿಗಳಿಗೆ ತಮ್ಮ ಓದು-ಬರಹ-ಅಭ್ಯಾಸಗಳ ಬಗ್ಗೆ ನಂಬಿಕೆ ಇದ್ದರೆ ಅದೇ ಅವರನ್ನು ಯಶಸ್ಸಿನತ್ತ ಕೊಂಡೊಯ್ಯುತ್ತದೆ. ಯಾವುದೋ ಒಂದು ವಿಷಯ ಕಠಿಣವಾದಾಗ ಅಥವಾ ಆಸಕ್ತಿ ಕೆರಳಿಸದಿದ್ದರೆ ಅದು ಉಳಿದ ವಿಷಯಗಳ ಮೇಲೆಯೂ ಪರಿಣಾಮ ಬೀರುತ್ತದೆ. ಇದರಿಂದ ಆಸಕ್ತಿಯ ವಿಷಯಗಳೂ ಕೈತಪ್ಪುವ ಸಾಧ್ಯತೆ ಹೆಚ್ಚಿರುತ್ತದೆ. ಹೀಗಾಗಿ, ಉಳಿದ ವಿಷಯದ ಜತೆಗೇ ಆಸಕ್ತಿ ಇರದ ವಿಷಯಗಳನ್ನೂ ಓದಿಕೊಳ್ಳಬೇಕು.

ಪೌಷ್ಟಿಕಾಂಶಯುಕ್ತ ಆಹಾರ: ಮಕ್ಕಳಿಗೆ ಎಲ್ಲರೂ ಚೆನ್ನಾಗಿ ಓದು ಎಂದಷ್ಟೇ ಹೇಳುತ್ತಾರೆ. ಚೆನ್ನಾಗಿ ಊಟ ಮಾಡು ಎಂದು ಹೇಳುವವರು ಯಾರೂ ಇಲ್ಲ. ಈ ಸಮಯದಲ್ಲಿ ನಿದ್ರೆಗೆಟ್ಟು ಅಭ್ಯಾಸ ಮಾಡುವುದರಿಂದ ಜ್ವರ, ತಲೆನೋವು, ತಲೆಸುತ್ತು, ಅಜೀರ್ಣ ಮುಂತಾದವು ಮಕ್ಕಳನ್ನು ಪೀಡಿಸಲಾರಂಭಿಸುತ್ತವೆ. ವರ್ಷಪೂರ್ತಿ ಪಟ್ಟ ಶ್ರಮ ಇನ್ನೇನು ಫಲ ನೀಡಿತು ಎಂಬ ಹೊತ್ತಿನಲ್ಲಿ ಆರೋಗ್ಯ ಹದಗೆಟ್ಟು ಎಲ್ಲವೂ ಕೈತಪ್ಪಿ ಹೋಗುವ ಸಂಭವ ಇರುತ್ತದೆ. ಹಾಗಾಗದಿರಲು, ಈ ಸಮಯದಲ್ಲಿ ಅಗತ್ಯವಾದ ಶಕ್ತಿ ತುಂಬಲೇಬೇಕು. ಉತ್ತಮ ಆಹಾರ ನೀಡಬೇಕು. ಕನಿಷ್ಠ 7 ತಾಸುಗಳ ನಿದ್ದೆ, ಒಂದಷ್ಟು ದೈಹಿಕ ಕಸರತ್ತು, ನಿಗದಿತ ಪ್ರಮಾಣದ ಮನರಂಜನೆ ಇವು ಅತ್ಯವಶ್ಯಕ. ಧಾರಾಳವಾಗಿ ನೀರು ಕುಡಿಯುವುದು ಅಗತ್ಯ.

ಬರವಣಿಗೆ: ಎಲ್ಲರಿಗಿಂತ ಭಿನ್ನ ರೀತಿಯಲ್ಲಿ ಉತ್ತರ ಬರೆದಲ್ಲಿ ಮೌಲ್ಯಮಾಪಕರ ಮನ ಗೆದ್ದು ಹೆಚ್ಚು ಅಂಕ ಪಡೆಯಬಹುದು. ಪೂರ್ತಿ ಪ್ರಶ್ನೆ ಪತ್ರಿಕೆಯನ್ನು ಮನನವಾಗುವಂತೆ ಓದಿದರೆ ಮುಂದಿನ ಹಂತ ಸುಲಭವಾಗುತ್ತದೆ. ಬರೆಯಲು ಆರಂಭಿಸುವ ಮುನ್ನ ಉತ್ತರ ಪತ್ರಿಕೆಯಲ್ಲಿ ಎಲ್ಲ ಮಾಹಿತಿಗಳನ್ನು ಪೂರ್ಣಗೂಳಿಸಬೇಕು. ಹೆಚ್ಚು ಸುಲಭವಾದ ಪ್ರಶ್ನೆಗಳಿಗೆ ಮೊದಲು ಉತ್ತರ ಬರೆಯಿರಿ. ಸಮಯದತ್ತ ಗಮನವಿರಲಿ. ಪೂರ್ತಿ ಉತ್ತರಗಳನ್ನು ಸೂಚನಾ ಗಂಟೆಯಾಗುವುದರೊಳಗೆ ಬರೆಯಬೇಕು. ಅಂದರೆ ಮಾತ್ರ ಉತ್ತರ ಪತ್ರಿಕೆಯಲ್ಲಿ ಏನಾದರೂ ದೋಷಗಳಿವೆಯೇ ಎಂದು ಪರೀಕ್ಷಿಸಲು ಸಾಧ್ಯವಾಗುತ್ತದೆ.

ಅಂತರ್ಜಾಲದಲ್ಲೂ ಮಾಹಿತಿ: ಪರೀಕ್ಷೆಗೆ ಬರೀ ಓದಿದರಷ್ಟೆ ಸಾಲದು. ಬರೆಯುವ ವಿಶಿಷ್ಟ ತಂತ್ರಗಳನ್ನು ಕರಗತ ಮಾಡಿಕೊಳ್ಳಬೇಕು. ಹೇಗೆ ಸಿದ್ಧಗೊಳ್ಳಬೇಕು? ಹೆಚ್ಚಿನ ಅಂಕ ಗಳಿಸಲು ಅಳವಡಿಸಿಕೊಳ್ಳಬಹುದಾದ ತಂತ್ರಗಳು ಯಾವುವು? ಈ ರೀತಿಯಾಗಿ ಪರೀಕ್ಷಾ ಸಿದ್ಧತೆಗಾಗಿ ನೆರವು ನೀಡಲು ಐದು ಕೋಟಿಗೂ ಹೆಚ್ಚು ವೆಬ್ಸೈಟ್ಗಳು ಕಾದು ನಿಂತಿವೆ ಎಂದರೆ ಅಚ್ಚರಿ ಆಗಬಹುದು. ಇವುಗಳಲ್ಲಿ ಮಾಹಿತಿಗಳ ಕಣಜವೇ ಅಡಗಿದೆ. ಛಾಯಾ ಚಿತ್ರಗಳೂ ಲಭ್ಯ. ವಿಡಿಯೋ ತುಣುಕುಗಳನ್ನೂ ಗಮನಿಸಬಹುದು. ಗೂಗಲ್ನಲ್ಲಿ ಠ್ಚಜಟಟ್ಝ ಛ್ಡಿಚಞಜ್ಞಿಚಠಿಜಿಟ್ಞ ಠಿಛ್ಚಿಜ್ಞಜಿಟ್ಠಿಛಿ ಎಂದು ಟೈಪ್ ಮಾಡಿದರೆ ಚಿತ್ರಗಳು, ಮಾಹಿತಿ ಸಿಗುತ್ತವೆ. ಆತ್ಮವಿಶ್ವಾಸ ಪುಟಿದೆಬ್ಬಿಸಲು ಈ ತಾಣಗಳು ನೆರವಾಗುತ್ತವೆ. ಅವನ್ನು ಊಟದಂತೆ ಬಳಸದೆ ಉಪ್ಪಿನಕಾಯಾಗಿ ಬಳಸಿದಲ್ಲಿ ಖಂಡಿತ ಫಲಿತಾಂಶದ ಮೇಲಾಗುವ ಪರಿಣಾಮ ಕಾಣಬಹುದು.

ಕುಟುಂಬದವರ ಪಾತ್ರ: ಮನೆ ಮಂದಿ, ಅದರಲ್ಲಿಯೂ ತಾಯಂದಿರು ಆತಂಕದಿಂದ ನರಳುತ್ತಿದ್ದರೆ ಅದು ಮಕ್ಕಳಿಗೂ ವ್ಯಾಪಿಸುತ್ತದೆ. ಕೆಲವು ಹೆತ್ತವರು ಅಂಕ ಕಡಿಮೆ ಬಂತು ಎಂದು ಮಕ್ಕಳನ್ನು ಹೊಡೆಯುತ್ತಾರೆ. ಇವೆರಡೂ ಸಲ್ಲದ ನಡೆವಳಿಕೆಗಳು. ಮನೆಯ ವಾತಾವರಣ ಮಗುವಿಗೆ ಆತ್ಮವಿಶ್ವಾಸ ತುಂಬುವಂತೆ ಇರಬೇಕು. ಬೇರೆ ಮಕ್ಕಳೊಡನೆ ಹೋಲಿಸಬಾರದು. ಒತ್ತಡವನ್ನೂ ಹೇರಬಾರದು. ಹಾಗೆಂದು ಸುಮ್ಮನೆ ಇರಲೂ ಬಿಡಬಾರದು. ಈ ವಿಷಯದಲ್ಲಿ ತಂದೆ-ತಾಯಿ ಇಬ್ಬರೂ ಪರಸ್ಪರ ಭಿನ್ನಾಭಿಪ್ರಾಯವಿಲ್ಲದೆ ಒಂದೇ ರೀತಿ ವ್ಯವಹರಿಸಬೇಕು. ಮಕ್ಕಳಲ್ಲಿ ಧೈರ್ಯ ತುಂಬಿ, ಹೆಚ್ಚು ಚಿಂತಿಸದೆ ಪರೀಕ್ಷಾ ಕೇಂದ್ರಕ್ಕೆ ಕಳುಹಿಸಿದರೆ ಅವರಿಗೆ ನೂರಾನೆ ಬಲ ಬರುತ್ತದೆ. ಮಗುವಿನ ವರ್ತನೆಯಲ್ಲಿ ವ್ಯತ್ಯಾಸವಾಗಿದ್ದರೆ ಆಪ್ತಸಲಹೆಗಾರರ ಬಳಿಗೆ ಕರೆದುಕೊಂಡು ಹೋಗಬೇಕು.

ವಿದ್ಯಾರ್ಥಿಗಳು ಸದಾ ನೆನಪಿನಲ್ಲಿಡಬೇಕಾದ ಅಂಶವೆಂದರೆ, ಸೋಲಿಗೆ, ಅಪಯಶಸ್ಸಿಗೆ ಯಾವ ಕಾರಣಗಳೂ ಸಕಾರಣಗಳಲ್ಲ. ಅಂತಹ ಸಂದರ್ಭದಲ್ಲಿ ನೆಪಗಳನ್ನೊಡ್ಡಿ ಪಾರಾಗುವ ವ್ಯರ್ಥ ಪ್ರಯತ್ನ ಮಾಡುತ್ತೇವೆ. ಹಾಗಾಗಿ, ಈಗಲೂ ಕಾಲ ಮಿಂಚಿಲ್ಲ, ತಕ್ಷಣ ಪ್ರಯತ್ನಕ್ಕಿಳಿಯಿರಿ. ನೀವಲ್ಲದೆ ಮತ್ತಾರೂ ನಿಮ್ಮನ್ನು ಮೇಲೆತ್ತಲಾರರು.

ಒಂದಷ್ಟು ಟಿಪ್ಸ್

# ಆಶಾವಾದಿಯಾಗಿರಿ. ಭರವಸೆ ನಿಮ್ಮ ಕೈ ಬಿಡದಿರಲಿ. ನಕಾರಾತ್ಮಕ ಯೋಚನೆ, ದುಃಖಗಳಿಂದ ದೂರ ಸಾಗಿರಿ.

# ಸಕಾರಾತ್ಮಕ ಯೋಚನೆಗಳು ಸಾಮರ್ಥ್ಯ ಹೆಚ್ಚಿಸುತ್ತ, ಸಮಸ್ಯೆ ಬಿಡಿಸುವ ಶಕ್ತಿ ವೃದ್ಧಿಸುತ್ತವೆ.

# ನಾನು ಗುರಿ ತಲುಪುತ್ತೇನೆ, ನನ್ನಲ್ಲಿ ಪ್ರತಿಭೆ ಇದೆ ಎಂದು ಸದಾ ಹೇಳಿಕೊಳ್ಳುತ್ತಿರಿ. ನಿಮ್ಮ ಮೇಲೆ ನಿಮಗೇ ಸಂಶಯ ಬಂದರೆ ಏನೂ ಮಾಡಲಾಗದು.

# ಆಸೆ ಒಂದೇ ನಮ್ಮನ್ನು ಗುರಿ ತಲುಪಿಸಲಾರದು. ಅದಕ್ಕೆ ಶ್ರಮವೂ ಅಗತ್ಯ.

# ಕಷ್ಟಪಟ್ಟು ಅಭ್ಯಾಸ ಮಾಡಿ. ತರಗತಿಯಲ್ಲಿನ ಜಾಣ ವಿದ್ಯಾರ್ಥಿಗಳೊಂದಿಗೆ ಕೂಡಿಕೊಂಡು ಅಭ್ಯಾಸ ಮಾಡುತ್ತ ಚರ್ಚೆ ನಡೆಸಿರಿ. ದೊರಕುವ ಸಮಯಕ್ಕನುಗುಣವಾಗಿ ವಿವಿಧ ವಿಷಯಗಳ ವೇಳಾಪಟ್ಟಿ ಸಿದ್ಧ ಪಡಿಸಿಕೊಳ್ಳಿ.
ಗಡಿಬಿಡಿ-ಒತ್ತಡ ಬೇಡ
ಅನೇಕ ವಿದ್ಯಾರ್ಥಿಗಳು ವಿಷಯಗಳನ್ನು ಚೆನ್ನಾಗಿ ಓದಿರುತ್ತಾರೆ. ಆದರೆ, ಪರೀಕ್ಷೆಯ ವಾತಾವರಣ ಕಂಡು ಎಲ್ಲವನ್ನೂ ಮರೆತು ಬಿಡುತ್ತಾರೆ. ಇದಕ್ಕೆ ಮೊದಲು ಮಾಡಬೇಕಾದುದು ಏನೆಂದರೆ, ಸಮಯಕ್ಕಿಂತ ಮುಂಚೆ ಪರೀಕ್ಷಾ ಕೇಂದ್ರದಲ್ಲಿ ಹಾಜರಿರಬೇಕು. ಆಗ ಅಲ್ಲಿನ ವಾತಾವರಣಕ್ಕೆ ಮನಸ್ಸು ಹೊಂದಿಕೊಳ್ಳುತ್ತದೆ. ಸ್ವಲ್ಪ ತಡವಾದರೆ ಎಡವಟ್ಟುಗಳು ಪ್ರಾರಂಭವಾಗುತ್ತವೆ

***

Written By: Bhaskar
August 8, 2017
ಇಂಜಿನಿಯರಿಂಗ್ ಓದಿದ ನಂತರ ಸಾಫ್ಟ್‌ವೇರ್ ಉದ್ಯೋಗ ಮಾಡುತ್ತೇನೆ ಎನ್ನುವ ಎಷ್ಟೋ ವಿಧ್ಯಾರ್ಥಿಗಳಿಗೆ ಭವಿಷ್ಯದ ಉದ್ಯೋಗದ ಬಗ್ಗೆ ಪ್ಲಾನ್ ಸಹ ಮಾಡಿರುವುದಿಲ್ಲ.!! ಆದರೆ, ಟೆಕ್‌ ಲೋಕ ದೊಡ್ಡ ಸಾಗರ ಇದ್ದಂತೆ. ಇಲ್ಲಿ ದಡ ಸೇರಲು ಕಷ್ಟಪಟ್ಟು ಈಜಲೇಬೇಕು. ಈಜುವ ಮೊದಲು ಈಜುವುದು ಹೇಗೆ ಎಂದು ಮೊದಲೇ ಕಲಿಯಲೇಬೇಕು.!!

ಪ್ರಸ್ತುತ ಯಾವ ತಂತ್ರಜ್ಞಾನ ಹೆಚ್ಚು ಬೆಲೆ ಹೊಂದಿದೆ? ಯಾವ ಕಂಪನಿ ಮುಂಚೂಣಿಯಲ್ಲಿದೆ? ಯಾವ ಕ್ಷೇತ್ರವನ್ನು ಆರಿಸಿಕೊಳ್ಳಬೇಕು ಮುಂತಾದ ವಿಚಾರಗಳತ್ತ ವಿದ್ಯಾರ್ಥಿ ಜೀವನದಲ್ಲಿದ್ದಾಗಲೇ ಗಮನ ಹರಿಸಿ ಸ್ವಂತ ದೃಷ್ಟಿಕೋನ ಬೆಳೆಸಿಕೊಳ್ಳುವುದು ಮುಖ್ಯ.! ಹಾಗಾಗಿ, ಸಾಫ್ಟ್‌ವೇರ್ ಪ್ರಪಂಚದಲ್ಲಿ ಸದ್ಯ ಟ್ರೆಂಡ್‌ನಲ್ಲಿರುವ ತಂತ್ರಜ್ಞಾನಗಳ ಪರಿಚಯ ಇಲ್ಲಿದೆ.!!

ವೆಬ್‌ ಡೆವೆಲಪರ್‌
ಇಂಟರ್‌ನೆಟ್‌ ಬಳಕೆದಾರರ ಸಂಖ್ಯೆ ದಿನದಿನಕ್ಕೂ ಹೆಚ್ಚುತ್ತಿದೆ. ಆನ್‌ಲೈನ್‌ ವ್ಯವಹಾರದಲ್ಲಿಯೇ ಇ-ಕಾಮರ್ಸ್ ಸೇವೆಗಳು ನಡೆಯುತ್ತಿದ್ದು, ಹಾಗಾಗಿ ವೆಬ್‌ ಡೆವೆಲಪರ್‌ಗೆ ಎಲ್ಲಿಲ್ಲದ ಅವಕಾಶಗಳು ಹುಡುಕಿಕೊಂಡು ಬರತೊಡಗಿವೆ. ವೆಬ್‌ ಡೆವೆಲಪರ್ಗಳು ಇಂದು ಲಕ್ಷಗಳಲ್ಲಿ ಸಂಬಳ ಪಡೆಯುತ್ತಿದ್ದಾರೆ.!!

ಆಂಡ್ರಾಯ್ಡ್ ಡೆವಲಪರ್ಸ್!!
ಇಂದು ಆಪ್ ಮೂಲಕವೇ ಜೀವನದ ಬಹುತೇಕ ಎಲ್ಲಾ ಕಾರ್ಯಗಳು ನಡೆಯುತ್ತಿವೆ ಎಂದರೆ ತಪ್ಪಾಗಲಾರದು. ಸರಿಸುಮಾರು 30 ಲಕ್ಷಕ್ಕೂ ಹೆಚ್ಚು ಆಪ್‌ಗಳಿದ್ದರೂ ಸಹ ಇನ್ನು ಸಹ ಆಪ್‌ಗಳಿಗೆ ಬೇಡಿಕೆ ಹುಟ್ಟುತ್ತಲೇ ಇದೆ.!! ಹಾಗಾಗಿ, ಆಂಡ್ರಾಯ್ಡ ತಂತ್ರಜ್ಞಾನವನ್ನು ಕಲಿತುಕೊಳ್ಳುವುದರಿಂದ ಭವಿಷ್ಯ ಉಜ್ವಲವಾಗುವುದರಲ್ಲಿ ಎರಡು ಮಾತಿಲ್ಲ.!!
ಇಂಟರ್‌ನೆಟ್‌ ಆಫ್ ಥಿಂಗ್ಸ್!!
ಯಾವುದೋ ಒಂದು ನಿರ್ದಿಷ್ಟ ಉಪಯೋಗಕ್ಕೆ ಅಥವಾ ಉಪಕರಣಗಳಿಗೆ ಅಪ್ಲಿಕೇಷನ್‌ ಬರೆಯುವುದು ಇಂಟರ್‌ನೆಟ್‌ ಆಫ್ ಥಿಂಗ್ಸ್ ವಿಶೇಷ.!! ಇಂಟರ್‌ನೆಟ್‌ ಆಫ್ ಥಿಂಗ್ಸ್‌ಗಾಗಿ ಉದ್ಯಮಿಗಳು ದೊಡ್ಡ ಮೊತ್ತದ ಬಂಡವಾಳವನ್ನು ಹೂಡುತ್ತಿದ್ದು, ತಂತ್ರಜ್ಞಾನದಲ್ಲಿ ಕ್ರಾಂತಿ ಇಲ್ಲಿಂದ ಆರಂಭವಾಗಲಿದೆ.!!

ಪೈಥಾನ್‌
ವಿಡಿಯೋ ಗೇಮ್‌ಗಳನ್ನು ಅಭಿವೃದ್ಧಿಪಡಿಸುವುದರ ಹಿಂದೆ ಇರುವ ಮ್ಯಾಜಿಕ್‌ ಲ್ಯಾಂಗ್ವೇಜ್‌ ಈ ಪೈಥಾನ್‌. ಕೋಡ್‌ ಬರೆಯುವ ಸಾಧಾರಣ ಕ್ರಿಯೆಯೂ ಮನರಂಜನೆ ಒದಗಿಸಬಲ್ಲದು ಎಂಬುದಕ್ಕೆ ಸಾಕ್ಷಿ ಈ ಪೈಥಾನ್‌!! ನಿಮಗೆ ಗೊತ್ತಾ?..ಗೂಗಲ್‌, ಯಾಹೂ ಮತ್ತು ಐಬಿಎಂನಲ್ಲಿ ಪೈಥಾನ್‌ ಪ್ರೋಗ್ರಾಮರ್‌ಗಳಿಗೆ ಹೆಚ್ಚಿನ ಬೆಲೆ ಇದೆ.!!

ಸಿ ಮತ್ತು ಸಿ++ ಪ್ರೋಗ್ರಾಮಿಂಗ್!!
ದಶಕಗಳೇ ಕಳೆದರೂ ಬೇಡಿಕೆ ಕಳೆದುಕೊಂಡಿಲ್ಲದ ತಂತ್ರಜ್ಞಾನ ಎಂದರೆ ಸಿ ಮತ್ತು ಸಿ++ ಪ್ರೋಗ್ರಾಮಿಂಗ್‌ ಲ್ಯಾಂಗ್ವೇಜ್‌! ಅಂತರಾಷ್ಟ್ರೀಯ ಕಂಪೆನಿಗಳೂ ಸೇರಿದಂತೆ ದೇಶದ ಬಹುತೇಕ ಎಲ್ಲಾ ಕಂಪೆನಿಗಳು, ಸಣ್ಣಪುಟ್ಟ ಉಧ್ಯಮಗಳಲ್ಲಿಯೂ ಉಪಯೋಗವಾಗುತ್ತಿರುವ ಸಿ/ ಸಿ++ ಪ್ರೋಗ್ರಾಮಿಂಗ್ ತಿಳಿದಿದ್ದರೆ ಒಳ್ಳೆಯ ಸಂಬಳಕ್ಕೆ ದಕ್ಕೆ ಇಲ್ಲ.!!‌

2018 ರ ಸರ್ಕಾರಿ ಕಾರ್ನರ್ ಪ್ರಶ್ನೆಗಳು.(ಜನವರಿ to ಜೂನ್ ವರೆಗೆ)

ಪ್ರಶ್ನೆ ಕೇಳಿ ಪರಿಹಾರ ಪಡೆಯಿರಿ:

ನಿಮ್ಮ ಪ್ರಶ್ನೆಗಳನ್ನು ಈ ವಿಳಾಸಕ್ಕೆ ಕಳುಹಿಸಿ.

ವಿಳಾಸ: ವಿಜಯವಾಣಿ, ನಂ.24, ಶ್ರೀ ಸಾಯಿರಾಂ ಟವರ್ಸ್, ಮೊದಲ ಮಹಡಿ, 5ನೇ ಮುಖ್ಯರಸ್ತೆ, ಚಾಮರಾಜಪೇಟೆ, ಬೆಂಗಳೂರು 560018.

ಇ-ಮೇಲ್: sarakaricorner@gmail.com

ದೂರವಾಣಿ: 8884431909, ಫ್ಯಾಕ್ಸ್: 080-26257464.

*** .
ಸರ್ಕಾರಿ ಕಾರ್ನರ್.

10-6-18.
ನನ್ನ ತಂದೆ-ತಾಯಿ ಪ್ರಾಥಮಿಕ ಶಾಲಾ ಶಿಕ್ಷಕರಾಗಿದ್ದು 2012ರಲ್ಲಿ ತಂದೆ ನಿಧನರಾದರು. ಆಗ ನನ್ನ ವಯಸ್ಸು 15 ವರ್ಷ 8 ತಿಂಗಳು. ನನ್ನ ತಾಯಿಯವರಿಗೆ ಕುಟುಂಬ ಪಿಂಚಣಿ ಸೌಲಭ್ಯ ದೊರಕುತ್ತಿದ್ದು ಆಗ ಅನುಕಂಪದ ನೇಮಕಾತಿಗಾಗಿ ಅರ್ಜಿ ಸಲ್ಲಿಸಿದ್ದೆ. ನನಗೀಗ ಮದುವೆಯಾಗಿದ್ದು ಅನುಕಂಪದ ಆಧಾರದ ಮೇಲೆ ನೇಮಕಾತಿಗೆ ಅರ್ಹಳಾಗಿರುತ್ತೇನೆಯೇ?

| ಭಾವನಾ ಶಿವಮೊಗ್ಗ

ಕರ್ನಾಟಕ ಸರ್ಕಾರಿ ಸೇವಾ (ಅನುಕಂಪದ ಮೇಲೆ ನೇಮಕಾತಿ) ನಿಯಮಾವಳಿ ರೀತ್ಯ ಅನುಕಂಪದ ಮೇಲೆ ನೇಮಕಗೊಳ್ಳಲು ಬಯಸುವ ಮರಣಹೊಂದಿದ ಸರ್ಕಾರಿ ನೌಕರನ ಅವಲಂಬಿತ ಮಕ್ಕಳು – ನಿಧನ ಹೊಂದಿದ ಒಂದು ವರ್ಷದೊಳಗೆ 18 ವರ್ಷ ಪೂರ್ಣಗೊಳ್ಳುವಂತಿದ್ದರೆ ಮಾತ್ರ ಅನುಕಂಪದ ಮೇಲೆ ನೇಮಕಕ್ಕೆ ಅರ್ಹರು. ಈ ಹಿನ್ನೆಲೆಯಲ್ಲಿ ನೀವು ವಿವಾಹವಾಗಿರುವುದರಿಂದ ಈಗ ಅನುಕಂಪದ ಮೇಲೆ ನೇಮಕಗೊಳ್ಳಲು ಅವಕಾಶವಿರುವುದಿಲ್ಲ. ಹೆಚ್ಚಿನ ವಿವರಗಳಿಗೆ ಇದೇ ಲೇಖಕರ ‘ಕರ್ನಾಟಕ ಸರ್ಕಾರಿ ಸೇವಾ ಕಾನೂನು ಕೈಪಿಡಿ’ ನೋಡಬಹುದು.
***
9-6-18
ನಾನು ಶಿಕ್ಷಣ ಇಲಾಖೆಯಗೆ ಸೇರಿ ವಯೋನಿವೃತ್ತಿ ಹೊಂದಿದೆ. ನನ್ನ ಪತಿ ಆರೋಗ್ಯ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾಗ ನಿಧನ ಹೊಂದಿದ್ದು ಅಂದಿನಿಂದ ನಾನು ಕುಟುಂಬ ನಿವೃತ್ತಿವೇತನ ಪಡೆಯುತ್ತಿದ್ದೇನೆ. ನನ್ನ ಮಗನಿಗೆ ಆರೋಗ್ಯ ಇಲಾಖೆಯಲ್ಲಿ ದ್ವಿತಿಯ ದರ್ಜೆ ಸಹಾಯಕರ ಹುದ್ದೆಗೆ ನೇಮಕವಾಗಿದೆ. ನಾನು ನನ್ನ ಮತ್ತು ಪತಿಯ ಕುಟುಂಬ ನಿವೃತ್ತಿವೇತನ ಪಡೆಯುತ್ತಿರುವುದರಿಂದ ಅನುಕಂಪದ ಮೇಲೆ ನೇಮಕವಾದ ನನ್ನ ಮಗನಿಗೆ ಮುಂದೇನಾದರೂ ಕಾನೂನಿನ ತೊಡಕಾಗುತ್ತದೆಯೇ?

| ಶಶಿಕಲಾ ಬೆಂಗಳೂರು

2002ರ ಕುಟುಂಬ ನಿವೃತ್ತಿವೇತನ ನಿಯಮಾವಳಿಯ ರೀತ್ಯ ಪತಿ-ಪತ್ನಿ ಇಬ್ಬರಿಗೂ ಸಂದಾಯವಾಗಬೇಕಾದ ಕುಟುಂಬವೇತನವನ್ನು ನೀವು ಪಡೆಯುತ್ತಿದ್ದರೂ ಅನುಕಂಪದ ಮೇಲೆ ನೇಮಕವಾದ ನಿಮ್ಮ ಮಗನ ಭವಿಷ್ಯದ ದೃಷ್ಟಿಯಿಂದ ಯಾವುದೇ ತೊಡಕು ಉಂಟಾಗುವುದಿಲ್ಲ. ಹೆಚ್ಚಿನ ವಿವರಗಳಿಗೆ ಇದೇ ಲೇಖಕರ ‘ಕರ್ನಾಟಕ ಸರ್ಕಾರಿ ಸೇವಾ ನಿಯಮಗಳು’ ಪುಸ್ತಕವನ್ನು ನೋಡಬಹುದು.
***
8-6-18.
ಮೇಲಧಿಕಾರಿಗಳ ಆದೇಶದ ಮೇಲೆ ನನ್ನ ಕಾರ್ಯವ್ಯಾಪ್ತಿಯಲ್ಲಿ ಬರುವ ಎಲ್ಲ ಶಾಲೆಯ ಮಕ್ಕಳ ಆರೋಗ್ಯ ತಪಾಸಣೆ ಮತ್ತು ಪ್ರಾಥಮಿಕ ಆರೋಗ್ಯಕೇಂದ್ರಗಳಲ್ಲಿ ರೋಗಿಗಳ ಆರೋಗ್ಯ ಪರೀಕ್ಷೆ ಮಾಡಲು ಹೋಗುತ್ತಿದ್ದೇನೆ. ನನಗೆ ಐದು ವರ್ಷಗಳಿಂದ ಯಾವುದೇ ಪ್ರವಾಸ ಭತ್ಯೆ ಹಾಗೂ ದಿನಭತ್ಯೆ ಸಂದಾಯವಾಗಿಲ್ಲ. ನನಗೆ ಸಂದಾಯವಾಗದಿರುವ ಈ ಭತ್ಯೆಗಳನ್ನು ಪಡೆದುಕೊಳ್ಳುವ ರೀತಿ ಹೇಗೆ?

| ಡಾ. ಅಶೋಕ್ ಚಿಕ್ಕಮಗಳೂರು

ಕರ್ನಾಟಕ ಸರ್ಕಾರಿ ಸೇವಾ ನಿಯಮಾವಳಿಯ ನಿಯಮ 491ರಂತೆ ಯಾರೇ ಸರ್ಕಾರಿ ನೌಕರನು ಕರ್ತವ್ಯದ ನಿಮಿತ್ತ ವ್ಯಾಪಕವಾಗಿ ಪ್ರಯಾಣ ಮಾಡಬೇಕಾಗಿದೆಯೋ ಅಂತಹ ನೌಕರನಿಗೆ ಖಾಯಂ ಮಾಸಿಕ ಪ್ರಯಾಣ ಭತ್ಯೆಯನ್ನು ಮಂಜೂರು ಮಾಡಬಹುದೆಂದು ತಿಳಿಸಲಾಗಿದೆ. ಅಂಥ ಭತ್ಯೆಯನ್ನು ಸರ್ಕಾರಿ ನೌಕರನ ಅಧಿಕಾರ ವ್ಯಾಪ್ತಿಯೊಳಗೆ ಕೈಗೊಳ್ಳುವ ಪ್ರಯಾಣಭತ್ಯೆಯ ಬದಲಾಗಿ ಮಂಜೂರು ಮಾಡಬಹುದಾಗಿದೆೆ ಮತ್ತು ವರ್ಷಪೂರ್ತಿ ಪಡೆಯಬಹುದಾಗಿದೆ. ಈ ಹಿನ್ನೆಲೆಯಲ್ಲಿ ನೀವು 494ರ ಅಡಿಯಲ್ಲಿ ಮಾಸಿಕ ಪ್ರಯಾಣ ಭತ್ಯೆಯೊಂದಿಗೆ ಹೆಚ್ಚಿನ ದಿನಭತ್ಯೆಯನ್ನೂ ಪಡೆಯಬಹುದು.
***

7-6-18.
ನಾನು ಸರ್ಕಾರಿ ನೌಕರ. ನಮಗೆ ಇನ್ನೂ ಮಗುವಾಗದೆ ಇರುವುದರಿಂದ ನನ್ನ ಸಹೋದರನು ಮಗುವನ್ನು ದತ್ತುಕೊಡಲು ಒಪ್ಪಿದ್ದು 2018ರ ಆಗಸ್ಟ್ ಮೊದಲ ವಾರದಲ್ಲಿ ಹೆರಿಗೆ ಸಮಯದಲ್ಲಿ ನೀಡುತ್ತಾರೆ. ನಾವು ಮಗುವನ್ನು ದತ್ತು ತೆಗೆದುಕೊಳ್ಳುವುದು ಹೇಗೆ? ನನ್ನ ಸೇವಾಪುಸ್ತಕದಲ್ಲಿ ನಾಮನಿರ್ದೇಶನ ಹೇಗೆ ಮಾಡಿಸಬೇಕು? ಪರಿಹಾರ ನೀಡಿ.

| ಚೇತನ್ ಕುಮಾರ್, ಮಂಡ್ಯ

ಹಿಂದು ದತ್ತಕ ಕಾಯ್ದೆ ಅಡಿಯಲ್ಲಿ ನೀವು ಮಗುವನ್ನು ದತ್ತು ತೆಗೆದುಕೊಳ್ಳಬೇಕು. ದತ್ತು ತೆಗೆದುಕೊಂಡ ಮಗುವನ್ನು ನೋಂದಣಿ ಮಾಡಿಸಿ ಕರ್ನಾಟಕ ಸರ್ಕಾರಿ ಸೇವಾ ನಿಯಮಾವಳಿಯ ನಿಯಮ 302ರಂತೆ ನಿಮ್ಮ ದತ್ತಕ ಮಗುವನ್ನು ನಾಮನಿರ್ದೇಶನ ಮಾಡಿಸಬೇಕು. ಆಗ ನಿಮ್ಮ ಸ್ವಂತ ಮಗುವಿಗೆ ದೊರಕುವಂತೆ ಎಲ್ಲ ಸರ್ಕಾರಿ ಸೌಲಭ್ಯಗಳು ಈ ಮಗುವಿಗೂ ದೊರಕುತ್ತದೆ. ಹೆಚ್ಚಿನ ವಿವರಗಳಿಗೆ ಇದೇ ಲೇಖಕರ ‘ಕರ್ನಾಟಕ ಸರ್ಕಾರಿ ಸೇವಾ ನಿಯಮಗಳು’ ಪುಸ್ತಕವನ್ನ್ನು ನೋಡಬಹುದು.
***

6-6-18
ನಾನು ಮೊದಲ ಸರ್ಕಾರಿ ಹುದ್ದೆಗೆ ಸಿಂಧುತ್ವ ಪ್ರಮಾಣಪತ್ರ ನೀಡಿ (2ಅ ಪ್ರವರ್ಗದಲ್ಲಿ) ಆಯ್ಕೆಯಾಗಿ, 10 ವರ್ಷ ಸೇವೆ ಸಲ್ಲಿಸಿದ್ದೇನೆ. ಈಗ ಅದೇ ಇಲಾಖೆಯ ಇನ್ನೊಂದು ಹುದ್ದೆಗೆ ಅನುಮತಿಯೊಂದಿಗೆ ನೇರ ನೇಮಕಾತಿಯಲ್ಲಿ ಅದೇ ಮೀಸಲಾತಿಯಲ್ಲಿ ಆಯ್ಕೆಯಾಗಿದ್ದು ಮತ್ತೊಮ್ಮೆ ಸಿಂಧುತ್ವ ಪ್ರಮಾಣಪತ್ರ ಮಾಡುವ ಅವಶ್ಯಕತೆ ಇದೆಯೆ?

| ಶೇಖರ್ ಉಡುಪಿ

ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗ ಮತ್ತು ಹಿಂದುಳಿದ ವರ್ಗಗಳ ಮೀಸಲಾತಿ ಅಧಿನಿಯಮ 1992ರಡಿಯಲ್ಲಿ ಹಿಂದುಳಿದ ವರ್ಗಗಳ ಮೀಸಲಾತಿಯ ಸಿಂಧುತ್ವ ಪ್ರಮಾಣಪತ್ರವು ಐದು ವರ್ಷವಾಗಿದ್ದು, ಪರಿಶಿಷ್ಟ ಜಾತಿ / ವರ್ಗದ ಪ್ರಮಾಣಪತ್ರವು ಶಾಶ್ವತವಾಗಿರುತ್ತವೆ. ಈ ಹಿನ್ನೆಲೆಯಲ್ಲಿ ನೀವು ಹಿಂದುಳಿದ ವರ್ಗಕ್ಕೆ ಸೇರಿರುವುದರಿಂದ ಮತ್ತೊಮ್ಮೆ ಸಿಂಧುತ್ವ ಪ್ರಮಾಣಪತ್ರವನ್ನು ಕ್ರೀಮಿ ಲೇಯರ್ ದೃಷ್ಟಿಯಿಂದ ಮಾಡಿಸುವುದು ಅಗತ್ಯವಾಗಿರುತ್ತದೆ.
***
5-6-18
ಸರ್ಕಾರಿ ನೌಕರಳಾದ ನಾನು ಈಗ ಹೆರಿಗೆ ರಜೆಯಲ್ಲಿದ್ದು 2019ರ ಜನವರಿಯಲ್ಲಿ ಕರ್ತವ್ಯಕ್ಕೆ ಹಾಜರಾಗಬೇಕಾಗಿದೆ. ಆದರೆ ಮನೆಯಲ್ಲಿ ಮಗುವನ್ನು ನೋಡಿಕೊಳ್ಳಲು ಯಾರೂ ಇರುವುದಿಲ್ಲ. ಆದ್ದರಿಂದ ನಾನು ಒಂದೂವರೆ ವರ್ಷಗಳ ಕಾಲ ವೇತನರಜೆ ಸಲ್ಲಿಸಲು ಬಯಸಿದ್ದು ಈ ರೀತಿ ರಜೆ ಹಾಕಲು ಕೆೆಸಿಎಸ್ಆರ್ನಲ್ಲಿ ಅವಕಾಶವಿದೆಯೆ ಅಥವಾ ಬೇರೆ ಮಾರ್ಗವಿದೆಯೆ? ತಿಳಿಸಿ.

| ಸಬೀನಾಬಾನು ರಾಯಚೂರು

ಕರ್ನಾಟಕ ಸರ್ಕಾರಿ ಸೇವಾ ನಿಯಮಾವಳಿಯ ನಿಯಮ 135ರ ಉಪನಿಯಮ 4(ಎ)ರ ಅಡಿಯಲ್ಲಿ ಹೆರಿಗೆ ರಜೆ ನಂತರ 60 ದಿನಗಳ ವರೆಗೆ ವೈದ್ಯಕೀಯ ಪ್ರಮಾಣಪತ್ರವಿಲ್ಲದೆ ರಜೆ ಮಂಜೂರು ಮಾಡಿಸಿಕೊಳ್ಳಬಹುದು. ಉಪನಿಯಮ 4(ಬಿ)ಯಡಿಯಲ್ಲಿ ಮಗುವಿಗೆ ತಾಯಿಯ ವೈಯಕ್ತಿಕ ಗಮನದ ಮತ್ತು ಮಗುವಿನ ಹತ್ತಿರ ತಾಯಿ ಇರುವುದು ತುಂಬ ಅವಶ್ಯಕವೆಂದು ಅಧಿಕೃತ ವೈದ್ಯಾಧಿಕಾರಿ ನೀಡುವ ಪ್ರಮಾಣಪತ್ರದ ಮೇಲೆ ರಜೆಯನ್ನು ಮಂಜೂರು ಮಾಡಿಸಿಕೊಳ್ಳಬಹುದು. ನೀವು ವೈದ್ಯಕೀಯ ಪ್ರಮಾಣಪತ್ರದ ಆಧಾರದ ಮೇಲೆ ನಿಮ್ಮ ಮಗುವಿನ ಆರೈಕೆ ದೃಷ್ಟಿಯಿಂದ ವೇತನರಹಿತ ರಜೆ ಪಡೆಯಬಹುದು.
***

4-5-18.
ನಾನು ಕರ್ನಾಟಕ ವಿದ್ಯುತ್ ಪ್ರಸರಣ ವಿಭಾಗದಲ್ಲಿ ಕಿರಿಯ ಇಂಜಿನಿಯರ್ ಆಗಿದ್ದು ಇಲಾಖೆಯ ಅನುಮತಿ ಪಡೆದು ಅದೇ ಇಲಾಖೆಯ ಸಹಾಯಕ ಇಂಜಿನಿಯರ್ ಹುದ್ದೆಗೆ ಅರ್ಜಿ ಸಲ್ಲಿಸಿ ಆಯ್ಕೆಯಾಗಿದ್ದೇನೆ. ನನ್ನನ್ನು ಕರ್ತವ್ಯದಿಂದ ಬಿಡುಗಡೆ ಮಾಡಲು ಹಿರಿಯ ಅಧಿಕಾರಿಗಳನ್ನು ವಿಚಾರಿಸಿದಾಗ ನೀವು ಸದರಿ ಹುದ್ದೆಗೆ ರಾಜೀನಾಮೆ ಸಲ್ಲಿಸಿ ಉನ್ನತ ಹುದ್ದೆಗೆ ಹೋಗಬಹುದು ಎಂದಿದ್ದಾರೆ. ಆದರೆ ನನಗೆ ಹಿಂದಿನ ಸೇವಾ ಅವಧಿಯ ರಜೆ, ಪಿಂಚಣಿ ಸೌಲಭ್ಯ ಲಭ್ಯವಾಗುವುದೆ? ಹೇಗೆ ಕರ್ತವ್ಯದಿಂದ ಬಿಡುಗಡೆ ಹೊಂದಬೇಕು?

| ವಿಜಯ್ಕುಮಾರ್, ಬೆಂಗಳೂರು

ಕರ್ನಾಟಕ ಸರ್ಕಾರಿ ಸೇವಾ ನಿಯಮಾವಳಿಯ ನಿಯಮ 252 ಬಿ ಪ್ರಕಾರ ನೀವು ಹಿಂದಿನ ಹುದ್ದೆಗೆ ರಾಜೀನಾಮೆ ಸಲ್ಲಿಸಿದರೆ ಅದು ಸರ್ಕಾರಿ ಸೇವೆಗೆ ಸಲ್ಲಿಸಿದ ರಾಜೀನಾಮೆ ಆಗುವುದಿಲ್ಲ. ಹಿಂದಿನ ಸೇವೆಯಲ್ಲಿ ಲಭ್ಯವಾದ ರಜೆ, ಪಿಂಚಣಿ ಸೌಲಭ್ಯಗಳು ಸಹ ನೀವು ಅನುಮತಿ ಪಡೆದು ಅರ್ಜಿ ಸಲ್ಲಿಸಿರುವುದರಿಂದ ಮುಂದುವರಿಯುತ್ತದೆ. ನಿಮಗೆ ಸೇವಾ ನಷ್ಟ ಉಂಟಾಗುವುದಿಲ್ಲ.
***
3-6-18.
ಸರ್ಕಾರಿ ನೌಕರರಾಗಿದ ಪತಿ-ಪತ್ನಿಯಲ್ಲಿ ಮೊದಲು ಯಾರಾದರೂ ಮೃತಪಟ್ಟರೆ ಉಳಿದ ಇನ್ನೊಬ್ಬರಿಗೆ ಕುಟುಂಬ ಪಿಂಚಣಿ ಬರುತ್ತದೆಯೇ? ಇಲ್ಲವೇ? ಕೆಲವರು ಹೆಂಡತಿ ಸತ್ತರೆ ಗಂಡನಿಗೆ ಕುಟುಂಬ ಪಿಂಚಣಿ ಬರುವುದಿಲ್ಲವೆಂದು ಹೇಳುತ್ತಿದ್ದಾರೆ. ಇದು ನಿಜವೇ?

| ರಂಗಶಾಮಯ್ಯ ತುಮಕೂರು

ಕರ್ನಾಟಕ ಸರ್ಕಾರಿ ಸೇವಾ (ಕುಟುಂಬ ನಿವೃತ್ತಿವೇತನ) ನಿಯಮಾವಳಿಯ ರೀತ್ಯ ಗಂಡ ಅಥವಾ ಹೆಂಡತಿ ಇವರಲ್ಲಿ ಯಾರಾದರೊಬ್ಬರು ನಿಧನ ಹೊಂದಿದರೂ ಬದುಕಿರುವವರೆಗೆ ಅವರ ಬಾಳಸಂಗಾತಿಗೆ ಕುಟುಂಬ ಪಿಂಚಣಿ ಸೌಲಭ್ಯ ನೀಡಲಾಗುತ್ತದೆ. ಹೆಂಡತಿ ಸತ್ತರೆ ಗಂಡನಿಗೆ ಕುಟುಂಬ ಪಿಂಚಣಿ ಲಭ್ಯವಾಗುವುದಿಲ್ಲ ಎನ್ನುವ ಅಂಶ ಸತ್ಯಕ್ಕೆ ದೂರವಾದುದು. ಹೆಚ್ಚಿನ ವಿವರಗಳಿಗೆ ಇದೇ ಲೇಖಕರ ‘ಕರ್ನಾಟಕ ಸರ್ಕಾರಿ ಸೇವಾ ನಿಯಮಗಳು’ ಪುಸ್ತಕವನ್ನು ನೋಡಬಹುದು.
***
2-6-18.
ನಾನು 1.12.1980ರಿಂದ ದಿನಗೂಲಿ ನೌಕರನಾಗಿ ಸೇವೆಗೆ ಸೇರಿ 1996ರಲ್ಲಿ ಖಾಯಂಗೊಂಡಿರುತ್ತೇನೆ. ನನ್ನ ಜನ್ಮದಿನಾಂಕ 22-10-1962. ಸ್ವಯಂನಿವೃತ್ತಿ ಪಡೆದರೆ ನನಗೆ ಸಿಗುವ ಸೌಲಭ್ಯಗಳು ಯಾವುವು?

| ಎಸ್.ಬಿ. ಚೊಳ್ಳಿ ಚಿಕ್ಕೋಡಿ, ಬೆಳಗಾವಿ

ಕರ್ನಾಟಕ ಸರ್ಕಾರಿ ಸೇವಾ ನಿಯಮಾವಳಿಯ ನಿಯಮ 285(2)ರ ಮೇರೆಗೆ ನೀವು ಸ್ವಯಂ ನಿವೃತ್ತಿ ಹೊಂದಲು ಮೂರು ತಿಂಗಳ ಮೊದಲು ನೋಟಿಸ್ ನೀಡಬೇಕಾಗುತ್ತದೆ. ಈ ರೀತಿ ನೋಟಿಸ್ ನೀಡಿದ ಮೇಲೆ ನೇಮಕಾತಿ ಪ್ರಾಧಿಕಾರವು ನಿಮಗೆ ಸ್ವಯಂನಿವೃತ್ತಿ ಹೊಂದಲು ಅನುಮತಿ ನೀಡಿದಾಗ ಪಿಂಚಣಿ, ಉಪದಾನ ಮತ್ತು ನಿವೃತ್ತಿ ವೇತನದ ಪರಿವರ್ತನೆ, ರಜೆ ನಗದೀಕರಣ ಮುಂತಾದ ಸೌಲಭ್ಯಗಳು ಲಭ್ಯವಾಗುತ್ತವೆ. ಅಲ್ಲದೆ ನಿಮಗೆ ನಾಲ್ಕು ವರ್ಷಗಳ ಕಾಲ ಸೇವಾಧಿಕ್ಯವೂ ಲಭ್ಯವಾಗುತ್ತದೆ. ಹೀಗಾಗಿ ನೀವು ನೀಡಿರುವ ಮಾಹಿತಿಯ ಹಿನ್ನೆಲೆಯಲ್ಲಿ 33 ವರ್ಷಗಳ ಅರ್ಹತಾದಾಯಕ ಸೇವೆ ಲಭ್ಯವಾಗಲಿದ್ದು ಲೆಕ್ಕಾಚಾರದ ಪ್ರಕಾರ 21 ಸಾವಿರ ರೂ. ಪಿಂಚಣಿ, 6,93,000 /- ರೂ. ಉಪಾದಾನ, ಹಾಗೂ ನಿವೃತ್ತಿವೇತನದ ಪರಿವರ್ತನಾ ಮೊಬಲಗು ರೂ. 9,32,400 /- ಲಭ್ಯವಾಗುತ್ತದೆ.
***

1-6-18.
ನಾನು ತುಂಗಭದ್ರಾ ಮಹಾವಿದ್ಯಾಲಯದಲ್ಲಿ 38 ವರ್ಷ ಬೆರಳಚ್ಚುಗಾರ್ತಿಯಾಗಿ ಸೇವೆ ಸಲ್ಲಿಸಿ ನಿವೃತ್ತಳಾಗಿದ್ದೇನೆ. ನಾನು ಹುದ್ದೆಗೆ ಲಗತ್ತಾದ ವಿಶೇಷ ಭತ್ಯೆ ಪಡೆಯುತ್ತಿದ್ದು ಇದನ್ನು ಪಿಂಚಣಿ ಸೌಲಭ್ಯಗಳಿಗೆ ಪರಿಗಣಿಸಲಾಗುತ್ತದೆಯೆ?

| ಎಸ್. ರಮಾಮಣಿ ಶಿವಮೊಗ್ಗ

ಕರ್ನಾಟಕ ಸರ್ಕಾರಿ ಸೇವಾ ನಿಯಮಾವಳಿಯ ನಿಯಮ 8 (42)ರ ಮೇರೆಗೆ ಪಡೆಯುವ ವಿಶೇಷ ಭತ್ಯೆಯನ್ನು ಹುದ್ದೆಗೆ ಲಗತ್ತಾದ ಕಷ್ಟದಾಯಕವಾದ ಕರ್ತವ್ಯ ನಿರ್ವಹಿಸುವ ನೌಕರರಿಗೆ ನೀಡಲಾಗುತ್ತದೆ. ದಿನಾಂಕ 29.4.2000ದ ಸರ್ಕಾರಿ ಅಧಿಸೂಚನೆ ಸಂಖ್ಯೆ ಎಫ್ಡಿ 7, ಎಸ್ಆರ್ಎ 99ರ ಮೇರೆಗೆ ವಿಶೇಷ ವೇತನಕ್ಕೆ ವಿಶೇಷ ಭತ್ಯೆಯೆಂದು ಮರುನಾಮಕರಣ ಮಾಡಲಾಗಿದೆ. ಇದು 1.4.1998ರಿಂದ ಜಾರಿಗೆ ಬಂದಿದ್ದು, ಈ ಭತ್ಯೆಯನ್ನು ಪಿಂಚಣಿ ಸೌಲಭ್ಯಗಳಿಗೆ ಪರಿಗಣಿಸಲಾಗುವುದಿಲ್ಲ. ಹೆಚ್ಚಿನ ವಿವರಗಳಿಗೆ ಇದೇ ಲೇಖಕರ ‘ಕರ್ನಾಟಕ ಸರ್ಕಾರಿ ಸೇವಾ ನಿಯಮಗಳು’ ಪುಸ್ತಕವನ್ನು ನೋಡಬಹುದು.
***

31-5-18.
ನಾನು ಲೋಕೋಪಯೋಗಿ ಇಲಾಖೆಯಲ್ಲಿ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಆಗಿ ಪದೋನ್ನತಿ ಹೊಂದಿದಾಗ ಸ್ಥಳ ನಿಯುಕ್ತಿಯಿಲ್ಲದೆ ಹಲವು ತಿಂಗಳುಗಳ ಕಾಲ ಕಡ್ಡಾಯ ನಿರೀಕ್ಷಣಾ ಅವಧಿಯಲ್ಲಿದ್ದು, ನಂತರ ನಗರಾಭಿವೃದ್ಧಿ ಇಲಾಖೆಯಲ್ಲಿ ಸ್ವಲ್ಪ ದಿನ ಸೇವೆ ಸಲ್ಲಿಸಿ ನಿವೃತ್ತನಾಗಿದ್ದೇನೆ. ಇಲ್ಲಿಯವರೆಗೂ ನನ್ನ ಪಿಂಚಣಿ ಸೌಲಭ್ಯಗಳು ಇತ್ಯರ್ಥವಾಗದೆ ಸೇವಾವಧಿಯಲ್ಲಿ ಸ್ವಲ್ಪ ಅವಧಿಯನ್ನು ಕರ್ತವ್ಯವಲ್ಲದ ಅವಧಿ (ಡೈಸ್-ನಾನ್) ಎಂದು ಪರಿಗಣಿಸಿದರೆ ಈ ಅವಧಿ ಕಳೆದು ಪಿಂಚಣಿ ಲೆಕ್ಕಿಸುತ್ತಾರೆಂದು ಹೇಳುತ್ತಿದ್ದಾರೆ. ಈ ಬಗ್ಗೆ ತಿಳಿಸಿ.

| ಡಿ.ಎಸ್. ರಾಜಶೇಖರಮೂರ್ತಿ ಮೈಸೂರು

ಕರ್ನಾಟಕ ಸರ್ಕಾರಿ ಸೇವಾ ನಿಯಮಾವಳಿಯ ನಿಯಮ 8 (15ಎಫ್)ರಂತೆ ಸ್ಥಳ ನಿಯುಕ್ತಿ ಇಲ್ಲದೆ ಕಡ್ಡಾಯ ನಿರೀಕ್ಷಣಾ ಅವಧಿಯನ್ನು ಕರ್ತವ್ಯವೆಂದು ಪರಿಗಣಿಸಬೇಕಾಗುತ್ತದೆ. ಅಲ್ಲದೆ ನಿಯಮ 8 (14)ರ ಮೇರೆಗೆ ಕರ್ತವ್ಯವಲ್ಲದ ಅವಧಿ ಎಂದರೆ ಸರ್ಕಾರಿ ನೌಕರನು ಅನಧಿಕೃತವಾಗಿ ಗೈರುಹಾಜರಾಗಿ ನೇಮಕಾತಿ ಪ್ರಾಧಿಕಾರವು ಈ ಅವಧಿಯನ್ನು ಡೈಸ್-ನಾನ್ ಎಂದು ಪರಿಗಣಿಸಿದ್ದರೆ ಈ ಅವಧಿಯನ್ನು ಸರ್ಕಾರಿ ನೌಕರನು ಸಲ್ಲಿಸಿದ ಒಟ್ಟು ಸೇವಾವಧಿಯಲ್ಲಿ ಕಳೆಯಲಾಗುತ್ತದೆ. ಇದರ ಆಧಾರದ ಮೇಲೆ ಅವನ ಅರ್ಹತಾದಾಯಕ ಸೇವೆ ಪರಿಗಣಿಸಿ ಪಿಂಚಣಿ ಸೌಲಭ್ಯಗ ನೀಡಲಾಗುತ್ತದೆ.
***

30-5-18
1994ರಿಂದ ಸರ್ಕಾರಿ ಪ್ರಾಥಮಿಕ ಶಾಲಾ ಶಿಕ್ಷಕ. ನೌಕರಿ ಸಿಗುವ ಮೊದಲೇ ಮದುವೆಯಾಗಿ ಮಕ್ಕಳಾಗಿದ್ದು, ಆಗ ಕೋರ್ಟಿನಲ್ಲಿ ಅಫಿಡವಿಟ್ ಮಾಡಿ ನನ್ನ ಹೆಸರನ್ನು ಮತ್ತು ಅಡ್ಡಹೆಸರನ್ನು ಬದಲಿಸಿದ್ದೆ. ಹೊಸ ಹೆಸರಿನಿಂದ ಮಕ್ಕಳಿಗೆ ನಾಮಕರಣ ಮಾಡಲಾಗಿದೆ. ನನ್ನ ಮೂಲ ದಾಖಲೆಗಳಲ್ಲಿರುವ ಹೆಸರು ಮತ್ತು ಅಡ್ಡ ಹೆಸರು ಈಗ ಮಕ್ಕಳ ಹೆಸರು ಮತ್ತು ಅಡ್ಡಹೆಸರು ಬೇರೆ ಬೇರೆ. ಮುಂದೆ ತೊಂದರೆಯಾದೀತೆ?

| ಬಿ.ಎನ್. ನಾಯಕ್ ಕಾರವಾರ

ನೀವು ಕರ್ನಾಟಕ ಸರ್ಕಾರಿ ನೌಕರರ (ಹೆಸರು ಬದಲಾವಣೆ ) ನಿಯಮಗಳು 1974ರ ಮೇರೆಗೆ ಮುದ್ರಣ ಮತ್ತು ಲೇಖನ ಸಾಮಗ್ರಿ ಇಲಾಖೆಯ ನಿರ್ದೇಶಕರಿಗೆ ಹೆಸರು ಬದಲಾವಣೆ ಕುರಿತ ಅರ್ಜಿ ನಮೂನೆಯಲ್ಲಿ ಭರ್ತಿಗೊಳಿಸಿ ಮೇಲಧಿಕಾರಿಗಳ ಮೂಲಕ ರಾಜ್ಯಪತ್ರದಲ್ಲಿ ಬದಲಾವಣೆ ಮಾಡಿಕೊಳ್ಳುವ ಹೆಸರನ್ನು ಸಕಾರಣಗಳೊಂದಿಗೆ ನಮೂದಿಸಿ ಸಲ್ಲಿಸಬೇಕು. ಆಗ ನಿಮ್ಮ ಹೆಸರು ಕರ್ನಾಟಕ ರಾಜ್ಯಪತ್ರದಲ್ಲಿ ಪ್ರಕಟವಾಗಿ ಅದು ಲಭ್ಯವಾದ ವೇಳೆ ನಿಮ್ಮ ಹೆಸರನ್ನು ಸೇವಾ ಪುಸ್ತಕದಲ್ಲಿ ಬದಲಾವಣೆ ಮಾಡಲು ಮೇಲಧಿಕಾರಿಗಳಲ್ಲಿ ಸಲ್ಲಿಸಬೇಕು. ಈ ರೀತಿ ಬದಲಾವಣೆಯ ನಂತರ ಮಕ್ಕಳ ಅಂಕಪಟ್ಟಿಗಳನ್ನೂ ಬದಲಾಯಿಸಲು ಕಾಲೇಜಿನ ಮೂಲಕ ಕ್ರಮ ಕೈಗೊಳ್ಳಬೇಕು.
***
29-5-18.
ನಾನು ಶಿಕ್ಷಕನಾಗಿ 13 ವರ್ಷ ಸೇವೆ ಸಲ್ಲಿಸಿದ್ದೇನೆ. ಪ್ರಸ್ತುತ ಗಂಟಲಿನ ಸಮಸ್ಯೆಯಿಂದಾಗಿ ವಿದ್ಯಾರ್ಥಿಗಳಿಗೆ ಪರಿಣಾಮಕಾರಿಯಾಗಿ ಬೋಧಿಸಲಾಗುತ್ತಿಲ್ಲ. ನನಗೆ 38 ವರ್ಷವಾಗಿದ್ದು ಹುದ್ದೆ ಬದಲಾವಣೆ ಅಥವಾ ಮಾತೃ ಇಲಾಖೆ / ಬೇರೆ ಇಲಾಖೆಯಲ್ಲಿ ಸಮಾನಾಂತರ ಹುದ್ದೆ ಪಡೆಯಲು ಸಾಧ್ಯವೆ?

| ಗಣಪತಿ ಭಟ್ ಉಡುಪಿ

ಕರ್ನಾಟಕ ಸರ್ಕಾರಿ ಸೇವಾ (ಸಾಮಾನ್ಯ ನೇಮಕಾತಿ ಬಡ್ತಿ ) ನಿಯಮಾವಳಿಯ ನಿಯಮ 16 (ಎ) ರಂತೆ ಇಲಾಖಾ ಮುಖ್ಯಸ್ಥರು ಸೇವೆಗೆ ಸಂಬಂಧಿಸಿದಂತೆ ಸಾರ್ವಜನಿಕ ಹಿತದೃಷ್ಟಿಯಿಂದ ಮತ್ತು ಕಾರಣಗಳನ್ನು ದಾಖಲಿಸಿ ಮತ್ತು ಈ ಸರ್ಕಾರವು ಈ ಸಂಬಂಧ ಹೊರಡಿಸಬಹುದಾದ ಯಾವುದೇ ಸಾಮಾನ್ಯ ಸೂಚನೆಗಳಿಗೆ ಒಳಪಟ್ಟು ಸಿ ಅಥವಾ ಡಿ ಗುಂಪಿನ ನೌಕರನನ್ನು ಒಂದು ಘಟಕದಲ್ಲಿನ ಹುದ್ದೆಯಿಂದ ಮತ್ತೊಂದು ಘಟಕದಲ್ಲಿನ ಅದೇ ಕೇಡರ್ನಲ್ಲಿನ ಸಮಾನ ಹುದ್ದೆಗೆ ವರ್ಗಾವಣೆ ಮೂಲಕ ನೇಮಿಸಬಹುದು. ಆದುದರಿಂದ ನೀವು ಬೋಧಿಸಲು ಅಸಮರ್ಥತೆ ಬಗ್ಗೆ ವೈದ್ಯಕೀಯ ಮಂಡಳಿಯಪ್ರಮಾಣ ಪತ್ರವನ್ನು ಸಲ್ಲಿಸಿ ಈ ನಿಯಮಾವಳಿಯಂತೆ ನಿಮ್ಮ ಮಾತೃ ಇಲಾಖೆಯಲ್ಲಾಗಲಿ ಅಥವಾ ಬೇರೆ ಇಲಾಖೆಯಲ್ಲಾಗಲಿ ವೃಂದ ಬದಲಾವಣೆ ಮಾಡಿಕೊಳ್ಳಬಹುದು.
***

28-5-18.
2017ರ ಅಕ್ಟೋಬರ್ನಲ್ಲಿ ಕೆಪಿಎಸ್ಸಿ ಮುಖಾಂತರ ಪ್ರಥಮ ದರ್ಜೆ ಸಹಾಯಕ ಹುದ್ದೆಗೆ ಆಯ್ಕೆಯಾಗಿದ್ದು, ನೇಮಕಾತಿ ಆದೇಶಕ್ಕಾಗಿ ಕಾಯುತ್ತಿದ್ದೇನೆ. ಈ ಪರೀಕ್ಷೆ ತೆಗೆದುಕೊಳ್ಳುವ ಸಂದರ್ಭದಲ್ಲಿ ಶಿಕ್ಷಣ ಇಲಾಖೆಗೆ ಸೇರಿರಲಿಲ್ಲವಾದ್ದರಿಂದ ಯಾವುದೇ ನಿರಾಕ್ಷೇಪಣಾ ಪತ್ರ ಪಡೆದಿಲ್ಲ. ಇದೀಗ ಪ್ರಾಥಮಿಕ ಶಾಲಾ ಶಿಕ್ಷಕ ಹುದ್ದೆಗೆ ರಾಜೀನಾಮೆ ನೀಡಿ ಪ್ರಥಮ ದರ್ಜೆ ಸಹಾಯಕ ಹುದ್ದೆಗೆ ಹೋಗಲು ಇಚ್ಛಿಸಿದ್ದೇನೆ. ನನ್ನ ಹಿಂದಿನ ಸೇವಾವಧಿ ಪುಸ್ತಕ, ಕೆಜಿಐಡಿ, ಎನ್85ಗಳನ್ನು ಮುಂದಿನ ಪ್ರಥಮ ದರ್ಜೆ ಸಹಾಯಕ ಹುದ್ದೆಗೆ ವರ್ಗಾಯಿಸಲು ಅವಕಾಶವಿದೆಯೆ?

-ವಿಷ್ಣುಮೂರ್ತಿ ಮೈಸೂರು

ನೀವು ಕರ್ನಾಟಕ ಸರ್ಕಾರಿ ಸೇವಾ ನಿಯಮಾವಳಿಯ ಪ್ರಕಾರ – ಪ್ರಸ್ತುತವಿರುವ ಪ್ರಾಥಮಿಕ ಶಾಲಾ ಹುದ್ದೆಯಿಂದ ನಿಯಮ 252ಬಿ ರಂತೆ ಕಾರ್ಯಮುಕ್ತಿಗೊಂಡು, ಪ್ರ.ದ.ಸ. ಹುದ್ದೆಗೆ ಕರ್ತವ್ಯಕ್ಕೆ ಹಾಜರಾದರೆ ನಿಮ್ಮ ಕೆಜಿಐಡಿ ಮುಂದುವರೆಯುತ್ತದೆ. ಅಲ್ಲದೆ ಎಫ್ಡಿ (ಸ್ಪೆಷಲ್) 118 ಪಿಎನ್ 2013, 7.5.2014ರಂತೆ ಸರ್ಕಾರಿ ಸೇವಾವಧಿಯಲ್ಲಿ ಒಂದೇ ಪಿಆರ್ಎಎನ್ ಸಂಖ್ಯೆ, ನಿಮ್ಮ ನೂತನ ಪಿಂಚಣಿ ಯೋಜನೆಯ ಕಡತಗಳನ್ನೇ ಪ್ರ.ದ.ಸ.ದಲ್ಲೂ ಸಹ ಮುಂದುವರೆಸಲಾಗುತ್ತದೆ.
***

27-5-18.
ಐದು ವರ್ಷಗಳಿಂದ ನ್ಯಾಯಾಂಗ ಇಲಾಖೆಯಲ್ಲಿ ಎಸ್ಡಿಎ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದೇನ. ಈಗ ಹಿರಿಯ ಪ್ರಾಥಮಿಕ ಶಾಲೆ ಶಿಕ್ಷಕಿ ಮತ್ತು ಪ್ರೌಢಶಾಲೆ ಸಹಶಿಕ್ಷಕಿಯಾಗಿ ನೇಮಕವಾಗಿದ್ದೇನೆ. ಎರಡೂ ಹುದ್ದೆಗೆ ಮೂಲ ಇಲಾಖೆಯ ಅನುಮತಿ ಪಡೆದಿದ್ದೇನೆ. ಈಗ ಹಿರಿಯ ಪ್ರಾಥಮಿಕ ಶಾಲೆಗೆ ಸೇವೆಗೆ ಸೇರಿದರೆ ತದನಂತರ ಪ್ರೌಢಶಾಲೆಯ ಅಂತಿಮ ಆಯ್ಕೆ ಪಟ್ಟಿಯಲ್ಲಿ ನೇಮಕವಾದರೆ, ಈ ಹುದ್ದೆಗೆ ಸೇರಿದಾಗ ಕಳೆದ ಸೇವೆಯು, ಮತ್ತು ಹಿಂದಿನ ಇಲಾಖೆಯ ಎಲ್ಲ ಸೇವೆಗಳು ಮುಂದುವರಿಯುತ್ತವೆಯೆ?

| ನಿರುಪಮಾ, ಗದಗ

ಕರ್ನಾಟಕ ಸರ್ಕಾರಿ ಸೇವಾ ನಿಯಮಾವಳಿಯ ನಿಯಮ 252ಬಿರಂತೆ ನೀವು ಕಾರ್ಯವಿಮುಕ್ತಿಗೊಂಡು ಪ್ರೌಢಶಾಲಾ ಶಿಕ್ಷಕಿಯಾಗಿ ಕರ್ತವ್ಯಕ್ಕೆ ಹಾಜರಾದರೆ ನೀವು ಈ ಹಿಂದೆ ಸಲ್ಲಿಸಿದ ಸೇವೆಯು ವೇತನರಕ್ಷಣೆ ರಜೆ, ಪಿಂಚಣಿ ಸೌಲಭ್ಯಗಳಿಗಾಗಿ ಮುಂದುವರಿಯುತ್ತವೆ. ಹಿಂದಿನ ಸೇವೆಯ ಕೆ.ಜಿ.ಐ.ಡಿ. ಮತ್ತು ಎನ್.ಪಿ.ಎಸ್. ಸಹ ಹೊಸ ಹುದ್ದೆಯಲ್ಲೂ ಮುಂದುವರಿಯುತ್ತವೆ. ಹೆಚ್ಚಿನ ವಿವರಗಳಿಗಾಗಿ ಇದೇ ಲೇಖಕರ ಕರ್ನಾಟಕ ಸರ್ಕಾರಿ ಸೇವಾ ನಿಯಮಗಳು ಪುಸ್ತಕವನ್ನು ನೋಡಬಹುದು.
***

25-5-18.
ಶಿಕ್ಷಕಿಯಾದ ನನ್ನನ್ನು ಸೇವಾ ಆದ್ಯತೆಯ ಮೇರೆಗೆ 2013ರಲ್ಲಿ ಮುಖ್ಯ ಶಿಕ್ಷಕಿ ಆಯ್ಕೆ ಪಟ್ಟಿಗೆ ಸೇರಿಸಲಾಗಿತ್ತು. ಅನಿವಾರ್ಯವಾಗಿ ಮುಂದಿನ ಪ್ರಕ್ರಿಯೆಯಲ್ಲಿ ಭಾಗವಹಿಸುತ್ತೇನೆಂದು ಬರೆದುಕೊಟ್ಟಿದ್ದೆ. ಆದರೆ ನನ್ನ ಸೇವಾ ಪುಸ್ತಕದಲ್ಲಿ ನಿರಾಕರಿಸಿದ್ದಾರೆಂದು ಬರೆದಿದ್ದಾರೆ. ಈ ಕಾರಣದಿಂದ ನನಗೆ ಹೆಚ್ಚುವರಿಯಾಗಿ ನೀಡಬೇಕಾದ 25 ಹಾಗೂ 30 ವರ್ಷದ ಬಡ್ತಿ ನೀಡಿಲ್ಲ. 2013ಕ್ಕೆ ನನ್ನ ವೇತನವೂ ಕೊನೆಯ ಹಂತ ತಲುಪಿದ್ದರಿಂದ ವಾರ್ಷಿಕ ಬಡ್ತಿಯೂ ಬರುತ್ತಿಲ್ಲ. ಪರಿಹಾರವೇನು?

| ಕುಸುಮ ಹಾಸನ

ಕರ್ನಾಟಕ ಮುಖ್ಯ ಸೇವಾ ಸಾಮಾನ್ಯ ನೌಕರಿ ಬಡ್ತಿ ನಿಯಮಗಳು 1977ರ ನಿಯಮ 4ಎರಂತೆ ಬಡ್ತಿ ನೀಡಲಾದ ಸರ್ಕಾರಿ ನೌಕರನು ಅಂಥ ಪದೋನ್ನತಿಗೆ ಇಚ್ಛಿಸದಿದ್ದರೆ ಆದೇಶ ಸ್ವೀಕರಿಸಿದ ದಿನಾಂಕದಿಂದ 15 ದಿನಗಳೊಳಗೆ ಹಾಗೆ ನೀಡಲಾದ ಪದೋನ್ನತಿ ಬಿಟ್ಟುಕೊಡಲು ನೇಮಕ ಪ್ರಾಧಿಕಾರದ ಅನುಮತಿ ಕೋರಿ ಲಿಖಿತ ಮನವಿ ಸಲ್ಲಿಸಬಹುದು. ಸಲ್ಲಿಸಿದ ದಿನಾಂಕದಿಂದ ಒಂದು ವರ್ಷದ ಅವಧಿಯವರೆಗೆ ಅಥವಾ ಬಡ್ತಿಗಾಗಿ ಪರಿಗಣಿಸಲಾಗುವ ನಿಕಟ ತರುವಾಯದ ದಿನಾಂಕದವರೆಗೆ ಪದೋನ್ನತಿಗಾಗಿ ಪರಿಗಣಿಸತಕ್ಕದ್ದಲ್ಲ. ಸ್ವಇಚ್ಛೆಯಿಂದ ಪದೋನ್ನತಿ ಬಿಟ್ಟವರಿಗೆ 25 ವರ್ಷಗಳ ಹೆಚ್ಚುವರಿ ವೇತನ ಬಡ್ತಿ ನೀಡತಕ್ಕದ್ದಲ್ಲ ಎಂದಿದೆ.
***
24-5-18.
ನಾನು ಸರ್ಕಾರಿ ಪ್ರೌಢಶಾಲಾ ಸಹಶಿಕ್ಷಕನಾಗಿ 26-8-2010ರಂದು ನೇಮಕವಾಗಿದ್ದೇನೆ. ಕೆ.ಎ.ಎಸ್. ಪರೀಕ್ಷಾ ತಯಾರಿಗಾಗಿ ಮುಖ್ಯ ಶಿಕ್ಷಕರಿಂದ ಅನುಮತಿ ಪಡೆದು 17-5-2017ರಿಂದ 31-8-2017ರವರೆಗೆ ವೇತನರಹಿತ ರಜೆ ಪಡೆದೆ. ಈಗ ನನ್ನ ವಾರ್ಷಿಕ ವೇತನ ಬಡ್ತಿ ಆಗಸ್ಟ್ ತಿಂಗಳ ಬದಲಾಗಿ ಅಕ್ಟೋಬರ್ ತಿಂಗಳಿಗೆ ನಿಗದಿಪಡಿಸಿದ್ದಾರೆ. ಇದು ಸರಿಯೇ? ನನ್ನ ವಾರ್ಷಿಕ ವೇತನಬಡ್ತಿ ಆಗಸ್ಟ್ನಲ್ಲಿಯೇ ಮುಂದುವರಿಯುತ್ತದೆಯೇ?

| ಕನ್ಯಾಕುಮಾರಿ ರಾಯಚೂರು

ಕರ್ನಾಟಕ ಸರ್ಕಾರಿ ಸೇವಾ ನಿಯಮಾವಳಿಯ ನಿಯಮ 51ರಂತೆ ನಿಮ್ಮ ವಾರ್ಷಿಕ ವೇತನ ಬಡ್ತಿಯನ್ನು ಒಂದು ವರ್ಷ ಮಾತ್ರ ಮುಂದೂಡಬೇಕು. ಪ್ರತಿ ವರ್ಷ ನೀವು ಜುಲೈ ತಿಂಗಳಿನಲ್ಲಿ ಪಡೆಯುತ್ತಿದ್ದ ದಿನಾಂಕದಂದೇ ವಾರ್ಷಿಕ ವೇತನಬಡ್ತಿಯನ್ನು ಮಂಜೂರು ಮಾಡಬೇಕಾಗುತ್ತದೆ.ಕರ್ನಾಟಕ ಸರ್ಕಾರಿ ಸೇವಾ ನಿಯಮಾವಳಿಯ ನಿಯಮ 53ರಂತೆ ನಿಮ್ಮ ವೇತನ ಬಡ್ತಿಯನ್ನು ಮುಂದೂಡಲು ಶಿಸ್ತು ಪ್ರಾಧಿಕಾರ ಯಾವುದೇ ದಂಡನೆಯನ್ನು ವಿಧಿಸದ ಕಾರಣ ಪ್ರತಿವರ್ಷ ಆಗಸ್ಟ್ ತಿಂಗಳಿನಲ್ಲೇ ಮಂಜೂರು ಮಾಡಲು ಪುನರ್ ಮನವಿ ಸಲ್ಲಿಸಬೇಕು.
***

23-5-18.
ಅನುದಾನಕ್ಕೆ ಒಳಪಟ್ಟು ಸ್ವತಂತ್ರವಾಗಿ ಕಾರ್ಯನಿರ್ವಹಿಸುವ ಬಾಲಕಿಯರ ಪ್ರೌಢಶಾಲೆಯಲ್ಲಿ ಪೂರ್ಣಾವಧಿ ಮುಖ್ಯೋಪಾಧ್ಯಾಯರಾಗಿ ಕಮೀಶನರ್ ಆಫೀಸಿನಿಂದ ಅನುಮೋದನೆ ಪಡೆದಿದ್ದೇನೆ. ಈಗ ನಾನು ಮೂಲ ಪ್ರತಿಗಳನ್ನು ಆಧಾರವಾಗಿ ಇಟ್ಟುಕೊಂಡು ಜೆರಾಕ್ಸ್ ಪ್ರತಿಗಳಿಗೆ ದೃಢೀಕರಿಸಲು (ಅಟೆಸ್ಟೇಷನ್) ಬರುತ್ತದೆಯೋ ಇಲ್ಲವೋ?

| ಮುರುಗೇಶ ಎಸ್.ಬಿ. ಕಡೂರು

ಕರ್ನಾಟಕ ಸರ್ಕಾರಿ ಸೇವಾ ನಿಯಮಾವಳಿಯ ನಿಯಮ 8(20)ರಂತೆ ರಾಜ್ಯ ಸರ್ಕಾರಿ ಸೇವೆಯ ಗ್ರೂಪ್ ಎ ಅಥವಾ ಗ್ರೂಪ್ ಬಿ ವೃಂದಕ್ಕೆ ಸೇರಿದವನು ಅಥವಾ ಒಂದು ಕರಾರಿನ ನಿಬಂಧನೆಗಳಿಗನುಸಾರವಾಗಿ ನೇಮಕವಾದ ಗೆಜೆಟೆಡ್ ಸರ್ಕಾರಿ ನೌಕರನು ಮಾತ್ರ ನಕಲು ಪ್ರಮಾಣಪತ್ರಗಳಿಗೆ ದೃಢೀಕರಣಕ್ಕೆ ಸಹಿ ಮಾಡಬಹುದು. ಅನುದಾನಿತ ಪ್ರೌಢಶಾಲೆಯ ಮುಖ್ಯೋಪಾಧ್ಯಾಯರು ದೃಢೀಕರಿಸಲು ಬರುವುದಿಲ್ಲ. ಹೆಚ್ಚಿನ ಮಾಹಿತಿಗೆ ಇದೇ ಲೇಖಕರ ಕರ್ನಾಟಕ ಸರ್ಕಾರಿ ಸೇವಾ ನಿಯಮಗಳು ನೋಡಬಹುದು.
***

22-5-18.
ವೃತ್ತಿಯಲ್ಲಿ ಸರ್ಕಾರಿ ಶಿಕ್ಷಕನಾಗಿರುವ ನಾನು ಚರ್ಚ್ನಲ್ಲಿ ನಡೆಯುವ ಸಭಾಪಾಲನ ಸಮಿತಿ ಸದಸ್ಯರ ಚುನಾವಣೆಗೆ ಸ್ಪರ್ಧಿಸಲು ಇಚ್ಛಿಸುತ್ತೇನೆ. ಈ ಸೇವೆಯಲ್ಲಿ ನಮಗೆ ಸಂಭಾವನೆ ಇರುವುದಿಲ್ಲ. ಈ ಚುನಾವಣೆಗೆ ಸ್ಪರ್ಧಿಸಬಹುದೇ? ಇಲಾಖಾ ಅನುಮತಿ ಪಡೆಯಬೇಕೇ? ದಯವಿಟ್ಟು ತಿಳಿಸಿ.

| ಡಿ. ಅರುಣ್ ಚಿಕ್ಕಬಳ್ಳಾಪುರ

ಕರ್ನಾಟಕ ಸರ್ಕಾರಿ ಸೇವಾ (ನಡತೆ ನಿಯಮಗಳು) 1966ರ ನಿಯಮ 6ರ ಮೇರೆಗೆ ಯಾರೇ ಸರ್ಕಾರಿ ನೌಕರನು ಯಾವ ಸಂಘ ಸಂಸ್ಥೆಯ ಉದ್ದೇಶಗಳು ಅಥವಾ ಚಟುವಟಿಕೆಗಳು ಭಾರತದ ಸಾರ್ವಭೌಮತ್ವದ ಮತ್ತು ಅಖಂಡತೆಯ ಸಾರ್ವಜನಿಕ ಸುವ್ಯವಸ್ಥೆಯ ಅಥವಾ ಹಿತಾಸಕ್ತಿಗೆ ಧಕ್ಕೆ ಉಂಟುಮಾಡುವುವೋ ಆ ಸಂಘ ಸಂಸ್ಥೆಗೆ ಸೇರಿಕೊಳ್ಳತಕ್ಕದ್ದಲ್ಲ ಎಂದು ತಿಳಿಸಿದೆ. ಹೀಗಾಗಿ ನಿಮ್ಮದು ಧಾರ್ವಿುಕ ಸಂಸ್ಥೆಯಾಗಿರುವುದರಿಂದ ನೀವು ಚುನಾವಣೆಗೆ ಸ್ಪರ್ಧಿಸಿ ಯಾವುದೇ ಪ್ರತಿಫಲ ಇಲ್ಲದೆ ಸೇವೆ ಸಲ್ಲಿಸಲು ನಿಯಮಾವಳಿಯಲ್ಲಿ ಅಡ್ಡಿಯಿಲ್ಲ. ಹೆಚ್ಚಿನ ವಿವರಗಳಿಗೆ ಇದೇ ಲೇಖಕರ ‘ಕರ್ನಾಟಕ ಸರ್ಕಾರಿ ಸೇವಾ ಕಾನೂನು ಕೈಪಿಡಿ’ ಪುಸ್ತಕವನ್ನು ನೋಡಬಹುದು.
***

21-5-18.
ನಾನು ಸರ್ಕಾರಿ ಅನುದಾನಿತ ಪ್ರೌಢಶಾಲೆಯಲ್ಲಿ 15 ವರ್ಷಗಳ ಕಾಲ ಶಿಕ್ಷಕನಾಗಿ ಸೇವೆ ಸಲ್ಲಿಸುತ್ತಿದ್ದು ಮುಂದಿನ ತಿಂಗಳು ನಡೆಯುವ ಕರ್ನಾಟಕ ವಿಧಾನ ಪರಿಷತ್ ಚುನಾವಣೆಗೆ ಸ್ಪರ್ಧಿಸಲು ಇಚ್ಛಿಸಿದ್ದೇನೆ. ನಮ್ಮದು ಅನುದಾನಿತ ಶಾಲೆಯಾಗಿರುವುದರಿಂದ ನನ್ನ ಹುದ್ದೆಗೆ ಚುನಾವಣೆ ನಂತರ ಗೆದ್ದರೆ ರಾಜೀನಾಮೆ ಅಥವಾ ವಯೋನಿವೃತ್ತಿ ಪಡೆಯಬಹುದೆ? ಇದಕ್ಕೆ ನಿಯಮಾವಳಿ ರೀತ್ಯ ಅನುಮತಿ ಅಗತ್ಯವೆ?

| ಡಿ. ಕೆ. ಮೋಹನ್ಕುಮಾರ್ ಮಡಿಕೇರಿ

ಕರ್ನಾಟಕ ಶೈಕ್ಷಣಿಕ ಸಂಸ್ಥೆಗಳ (ಖಾಸಗಿ ಅನುದಾನಿತ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಂಸ್ಥೆಗಳ) ನೌಕರರ ನೇಮಕಾತಿ ಮತ್ತು ಸೇವಾ ಷರತ್ತುಗಳ ನಿಯಮಗಳು 1999ರ ನಿಯಮ 25 (2) (ಸಿ) ಪ್ರಕಾರ ಯಾವುದೇ ಖಾಸಗಿ ಅನುದಾನಿತ ಶಿಕ್ಷಣ ಸಂಸ್ಥೆಗಳ ನೌಕರರು ರಾಜಕೀಯದಲ್ಲಿ ಭಾಗವಹಿಸುವಂತಿಲ್ಲ ಅಥವಾ ಚುನಾವಣೆಯಲ್ಲಿ ಸ್ಪರ್ಧಿಸುವಂತಿಲ್ಲ. ಹೀಗಾಗಿ ನೀವು ನಿಮ್ಮ ಹುದ್ದೆಗೆ ರಾಜೀನಾಮೆ ನೀಡಿ ಈ ಚುನಾವಣೆಗೆ ಸ್ಪರ್ಧಿಸಬಹುದು. ನಿಮ್ಮ ರಾಜೀನಾಮೆ ಅಂಗೀಕಾರವಾಗುವ ಮೊದಲೇ ಚುನಾವಣಾ ಅಧಿಕಾರಿಗಳು ನಾಮಪತ್ರ ಅಂಗೀಕರಿಸಿದರೆ ಅದು ದೋಷವಾಗುತ್ತದೆ.
***

20-5-18.
ನಾನು ಪ್ರಾಥಮಿಕ ಶಾಲಾ ಶಿಕ್ಷಕಿ. 2017ರ ಜುಲೈ 1ರಂದು 20,500/- ರೂ. ಮತ್ತು ವಿಶೇಷ ಭತ್ಯೆ 450/- ರೂ. ಆಗಿದ್ದು, ಪರಿಷ್ಕೃತ ವೇತನಶ್ರೇಣಿಯಲ್ಲಿ ಮೂಲವೇತನವನ್ನು 36,000/- ರೂ.ಗಳಿಗೆ ನಿಗದಿಪಡಿಸಲಾಗಿದೆ. ಇದರಿಂದಾಗಿ ನನಗೆ ಆರ್ಥಿಕ ಸೌಲಭ್ಯ ಕಡಿಮೆಯಾಗುತ್ತದೆ. ಸೂಕ್ತ ಪರಿಹಾರ ಸೂಚಿಸಿ.

| ವಿಜಯಲಕ್ಷ್ಮಿ ಎಂ. ಹೂಗಾರ್ ಹಾವೇರಿ

ಕರ್ನಾಟಕ ಸರ್ಕಾರಿ ಸೇವಾ (ಪರಿಷ್ಕೃತ ವೇತನ) ನಿಯಮಗಳು 2018ರ ನಿಯಮ 7(2)ರ ಅನ್ವಯ 01.07.2017ರಂದು ಸರ್ಕಾರಿ ನೌಕರನ ವೇತನವನ್ನು ಪರಿಷ್ಕೃತ ವೇತನದಲ್ಲಿ ಕಾಲ್ಪನಿಕವಾಗಿ ನಿಗದಿಪಡಿಸಬೇಕು. ಅವನ ಮೂಲವೇತನಕ್ಕೆ ವಿಶೇಷ ಭತ್ಯೆ ಸೇರಿಸಿ, ಪರಿಷ್ಕೃತ ವೇತನಶ್ರೇಣಿಯಲ್ಲಿ ನಿಗದಿಪಡಿಸಬೇಕಾಗುತ್ತದೆ. ಆದುದರಿಂದ ನಿಮ್ಮ ಮೂಲವೇತನ 20,500/- ರೂ. ಮತ್ತು ವಿಶೇಷ ಭತ್ಯೆ ಸೇರಿಸಿದಾಗ 20,950/- ರೂ. ಆಗುತ್ತದೆ. ಅದನ್ನು ಪರಿಷ್ಕೃತ ವೇತನಶ್ರೇಣಿಯ ಮುಂದಿನ ಹಂತಕ್ಕೆ ನಿಗದಿಪಡಿಸಿದಾಗ 36,950/- ರೂ. ಆಗುತ್ತದೆ. ಹೆಚ್ಚಿನ ವಿವರಗಳಿಗೆ ಇದೇ ಲೇಖಕರ ಕರ್ನಾಟಕ ಸರ್ಕಾರಿ ಸೇವಾ ನಿಯಮಗಳು ಪುಸ್ತಕವನ್ನು ನೋಡಬಹುದು.
***

19-5-18.
ರಾಜ್ಯ ಸರ್ಕಾರಿ ಸೇವೆಯಲ್ಲಿದ್ದ ನಾನು 2017ರ ಸೆಪ್ಟೆಂಬರ್ನಲ್ಲಿ ವಯೋ ನಿವೃತ್ತಿ ಹೊಂದಿದೆ. ಪ್ರಸ್ತುತ ನಿವೃತ್ತಿವೇತನ ಪಡೆಯುತ್ತಿದ್ದು, ನಿವೃತ್ತಿ ಉಪದಾನ ಹಾಗೂ ಪರಿವರ್ತಿತ ಮೌಲ್ಯ ಸಂದಾಯವಾಗಿದೆ. ಈಗ ಆರನೇ ವೇತನ ಪರಿಷ್ಕರಣೆಯ ಪ್ರಕಾರ ನನಗೆ ನಿವೃತ್ತಿ ಉಪದಾನ ಮತ್ತು ಪರಿವರ್ತಿತ ಮೌಲ್ಯ ಮರುಲೆಕ್ಕಾಚಾರಗೊಳ್ಳುತ್ತದೆಯೇ ಹಾಗೂ ನನಗೆ ಬಾಕಿ ಬರುತ್ತದೆಯೇ?

| ಎನ್. ಕೃಷ್ಣಮೂರ್ತಿ ಬೆಂಗಳೂರು

ದಿನಾಂಕ: 24.04.2018ರ ಸರ್ಕಾರಿ ಆದೇಶ ಸಂಖ್ಯೆ: ಆಇ 33 ಪಿಇಎನ್ 2018ರ ಮೇರೆಗೆ ದಿನಾಂಕ: 01.04.2018ರಿಂದ ಅಥವಾ ತದನಂತರ ನಿವೃತ್ತರಾಗುವ ನೌಕರರಿಗೆ ಮಾತ್ರ ಈ ಉಪದಾನ ಮತ್ತು ಪರಿವರ್ತನಾ ಮೌಲ್ಯಗಳನ್ನು ಪರಿಷ್ಕೃತಗೊಳಿಸಿ ನೀಡಲಾಗುತ್ತದೆ. ಆದರೆ, ನಿಮ್ಮ ಪ್ರಕರಣದಲ್ಲಿ ಈ ಆರ್ಥಿಕ ಸೌಲಭ್ಯ ಲಭ್ಯವಾಗದೆ ನಿವೃತ್ತಿವೇತನವನ್ನು ಮಾತ್ರ ಮರುಲೆಕ್ಕಾಚಾರ ಮಾಡಲಾಗುತ್ತದೆ. ಹೆಚ್ಚಿನ ವಿವರಗಳಿಗೆ ಇದೇ ಲೇಖಕರ ಕರ್ನಾಟಕ ಸರ್ಕಾರಿ ಸೇವಾ ನಿಯಮಗಳು ಪುಸ್ತಕವನ್ನು ನೋಡಬಹುದು.
***

18-5-18.
ನಾನು 18.06.2010ರಂದು ಪ್ರೌಢಶಾಲಾ ಸಹಶಿಕ್ಷಕನಾಗಿ ಸೇವೆಗೆ ಸೇರಿದೆ. ನನ್ನ ವಾರ್ಷಿಕ ವೇತನ ಬಡ್ತಿ ಜೂನ್ 1. ಇಲಾಖಾ ಅನುಮತಿಯೊಡನೆ ಕೆ.ಎ.ಎಸ್. ಪರೀಕ್ಷೆ ಪಾಸಾಗಿ, 02.01.2018ರಿಂದ ಸಹಾಯಕ ನಿರ್ದೇಶಕನಾಗಿದ್ದೇನೆ. ಈಗ ನನಗೆ ಮುಂದಿನ ವಾರ್ಷಿಕ ವೇತನ ಬಡ್ತಿ ದಿನಾಂಕ ಯಾವುದು?

| ಯೋಗಾನಂದ ಮಂಡ್ಯ

ಕರ್ನಾಟಕ ಸರ್ಕಾರಿ ಸೇವಾ ನಿಯಮಾವಳಿಯ, ನಿಯಮ 41 (ಎ) ಪ್ರಕಾರ ಸರ್ಕಾರಿ ನೌಕರನು ನೇಮಕ ಹೊಂದಿದ ಹುದ್ದೆಯ ಸಾದೃಶ್ಯವಾದ ವೇತನಶ್ರೇಣಿಯಲ್ಲಿ ನೇಮಕ ಹೊಂದಿದ್ದರೆ, ನೇಮಕಗೊಂಡ ವೇತನಕ್ಕೆ ಸಮಾನವಾದ ಹಂತಕ್ಕೆ ವೇತನವನ್ನು ನಿಗದಿಪಡಿಸಲಾಗುವುದು. ನಿಯಮ 53ರಂತೆ ಪ್ರಸ್ತುತ ಹೆಚ್ಚಿನ ವೇತನ ಶ್ರೇಣಿಗೆ ಅವನು ಹಿಂದೆ ಪಡೆಯುತ್ತಿದ್ದ ಮೂಲವೇತನಕ್ಕಿಂತ ಹೆಚ್ಚಾಗಿದ್ದರೆ, ಅವನ ವೇತನವನ್ನು ಈ ಹೆಚ್ಚಿನ ವೇತನ ಶ್ರೇಣಿಯ ಕನಿಷ್ಠ ಹಂತಕ್ಕೆ ನಿಗದಿಪಡಿಸಲಾಗುವುದು. ಈ ಹೆಚ್ಚಿನ ವೇತನ ಶ್ರೇಣಿಯ ದಿನಾಂಕವೇ ಅವನ ವಾರ್ಷಿಕ ವೇತನ ಬಡ್ತಿ ದಿನಾಂಕವಾಗಿರುತ್ತದೆ. ಆದುದರಿಂದ, ನಿಮ್ಮ ಮುಂದಿನ ವಾರ್ಷಿಕ ವೇತನ ಬಡ್ತಿಯ ದಿನಾಂಕವು 1-1-2019 ಆಗಿರುತ್ತದೆ.
***
17-5-18.
ನನ್ನ ಪತಿ ಸರ್ಕಾರಿ ಕ್ರೖೆಸ್ಟ್ ಕಾಲೇಜಿನಲ್ಲಿ ಉಪನ್ಯಾಸಕರಾಗಿ 2002ರಲ್ಲಿ ನಿವೃತ್ತರಾಗಿದ್ದಾರೆ. ಅವರ ಪಿ.ಪಿ.ಓ.ದಲ್ಲಿ ಕುಟುಂಬ ಪಿಂಚಣಿ ರೂ. 1,680/- ಎಂದು ನಮೂದಾಗಿದೆ. 2016ರ ಫೆಬ್ರವರಿ 19ರಂದು ನನ್ನ ಪತಿ ನಿಧನರಾಗಿದ್ದು, ಅಲ್ಲಿಂದ ಎಷ್ಟು ಕುಟುಂಬ ನಿವೃತ್ತಿವೇತನ ನಿಗದಿಯಾಗಬೇಕು ಹಾಗೂ 2018ರ ಏಪ್ರಿಲ್ ಒಂದರಿಂದ ಎಷ್ಟು ನಿಗದಿಯಾಗಬೇಕು?

| ಸರೋಜಮ್ಮ ಹಿರಿಯೂರು, ಚಿತ್ರದುರ್ಗ

ರಾಜ್ಯ ಸರ್ಕಾರಿ ನೌಕರರ ವೇತನ ಬದಲಾವಣೆ ಆದಂತೆಲ್ಲ ನಿವೃತ್ತ ನೌಕರರ ಪಿಂಚಣಿ ಸೌಲಭ್ಯಗಳೂ ಸಹ ಕಾಲಕಾಲಕ್ಕೆ ಬದಲಾವಣೆ ಆಗುತ್ತದೆ. ನಿಮ್ಮ ಕುಟುಂಬ ಪಿಂಚಣಿಯು 19.02.2016ರಿಂದ ರೂ. 6,934/- ಆಗಬೇಕಾಗಿದ್ದು, ಅದು 01.04.2018ರಿಂದ ಪರಿಷ್ಕೃತಗೊಂಡು, ರೂ. 12,152/- ಆಗುತ್ತದೆ. ಹೆಚ್ಚಿನ ವಿವರಗಳಿಗೆ ಇದೇ ಲೇಖಕರ ಕರ್ನಾಟಕ ಸರ್ಕಾರಿ ಸೇವಾ ನಿಯಮಗಳು ಪುಸ್ತಕವನ್ನು ನೋಡಬಹುದು.
***

16-5-18.
ನಾನು ಸರ್ಕಾರಿ ಪ್ರೌಢಶಾಲೆಯಲ್ಲಿ ಶಿಕ್ಷಕಿಯಾಗಿ ಕೆಲಸ ಮಾಡುತ್ತಿದ್ದು, ನನ್ನ ಎರಡನೇ ಮಗುವು 9 ತಿಂಗಳ ಗರ್ಭಾವಸ್ಥೆಯಲ್ಲೇ ನಿಧನ ಹೊಂದಿರುವುದರಿಂದ, 180 ದಿನಗಳ ಹೆರಿಗೆ ರಜೆ ಸೌಲಭ್ಯವನ್ನು ಪಡೆದಿರುತ್ತೇನೆ. ಈಗ ಮೂರನೇ ಮಗುವಿನ 10 ತಿಂಗಳ ಗರ್ಭವತಿಯಾಗಿದ್ದು, ನಾನು ಈಗ ನಮ್ಮ ಮೇಲಾಧಿಕಾರಿಗಳಿಗೆ ಹೆರಿಗೆ ರಜೆ ಸೌಲಭ್ಯ ನೀಡಲು ಅರ್ಜಿ ಸಲ್ಲಿಸಿದಾಗ, ನಿಮಗೆ ಎರಡು ಸಲ ಈ ಸೌಲಭ್ಯ ನೀಡಿರುವುದರಿಂದ, ಮೂರನೆ ಮಗುವಿಗೆ ನೀಡಲು ಬರುವುದಿಲ್ಲವೆಂದು ಸೂಚಿಸಿ ನನ್ನ ರಜೆ ಅರ್ಜಿಯನ್ನು ತಿರಸ್ಕರಿಸಿರುತ್ತಾರೆ. ಇದಕ್ಕೆ ಸೂಕ್ತ ಪರಿಹಾರವೇನು?

| ಜಯಲಕ್ಷ್ಮಿ ಚಿತ್ರದುರ್ಗ

ಕರ್ನಾಟಕ ಸರ್ಕಾರಿ ಸೇವಾ ನಿಯಮಾವಳಿಯ ನಿಯಮ 135 (1) ರ ಮೇರೆಗೆ ಮಹಿಳಾ ಸರ್ಕಾರಿ ನೌಕರಳು ಎರಡು ಜೀವಂತ ಮಗು ಪಡೆಯುವವರೆಗೂ ಈ ಹೆರಿಗೆ ರಜೆ ಸೌಲಭ್ಯವನ್ನು ನೀಡಲು ಸೂಚಿಲಾಗಿದೆ. ಆದುದರಿಂದ, ನೀವು ಮೂರನೇ ಮಗುವಗೆ 180 ದಿನಗಳ ಕಾಲ ಪ್ರಸೂತಿ ರಜೆ ಪಡೆಯಲು ಅರ್ಹರಾಗಿರುತ್ತೀರಿ. ಈ ಬಗ್ಗೆ ನಿಮ್ಮ ಮೇಲಾಧಿಕಾರಿಗಳಿಗೆ ಮನವರಿಕೆ ಮಾಡಿಕೊಡಬಹುದು.
***
15-5-18.
ನಾನು ಸರ್ಕಾರಿ ನೌಕರನಾಗಿದ್ದು, ಪತ್ನಿಯ ಹೆಸರಿನಲ್ಲಿ ವ್ಯಾಪಾರ-ವ್ಯವಹಾರವನ್ನು ಮಾಡಲು ಬಯಸಿದ್ದೇನೆ. ಇದಕ್ಕೆ ಸಕ್ಷಮ ಪ್ರಾಧಿಕಾರಿಯಿಂದ ಅನುಮತಿ ಪಡೆಯಬೇಕೆ?

-ವಿರೂಪಾಕ್ಷ ಬೀದರ್

ಕರ್ನಾಟಕ ಸರ್ಕಾರಿ ಸೇವಾ (ನಡತೆ) ನಿಯಮಗಳು 1966ರ ನಿಯಮ 16ರ ಮೇರೆಗೆ ಯಾರೇ ಸರ್ಕಾರಿ ನೌಕರನು ಸರ್ಕಾರದಿಂದ ಪೂರ್ವ ಮಂಜೂರಾತಿಯಲ್ಲದೆ, ಪ್ರತ್ಯಕ್ಷವಾಗಿ ಆಗಲಿ ಅಥವಾ ಪರೋಕ್ಷವಾಗಿ ಆಗಲಿ ಯಾವುದೇ ರೀತಿಯ ವ್ಯಾಪಾರ ವ್ಯವಹಾರದಲ್ಲಿ ತೊಡಗತಕ್ಕದ್ದಲ್ಲ ಅಥವಾ ಯಾವುದೇ ಉದ್ಯೋಗಗಳನ್ನು ಕೈಗೊಳ್ಳತಕ್ಕದ್ದಲ್ಲವೆಂದು ಸೂಚಿಸಲಾಗಿದೆ. ಆದ್ದರಿಂದ ನೀವು ಸಕ್ಷಮ ಪ್ರಾಧಿಕಾರದಿಂದ ಅನುಮತಿ ಪಡೆದು, ಮುಂದಿನ ಕ್ರಮ ಕೈಗೊಳ್ಳಬಹುದು. ಇಲ್ಲದಿದ್ದರೆ ಶಿಸ್ತಿನ ಕ್ರಮಕ್ಕೆ ಒಳಗಾಗುತ್ತೀರಿ. ಹೆಚ್ಚಿನ ವಿವರಗಳಿಗೆ ಇದೇ ಲೇಖಕರ ಕರ್ನಾಟಕ ಸರ್ಕಾರಿ ಸೇವಾ ಕಾನೂನು ಕೈಪಿಡಿ ಪುಸ್ತಕವನ್ನು ನೋಡಬಹುದು.
***

14-5-18.
ನನ್ನ ತಾಯಿ ನನ್ನ ತಂದೆಯವರ ಎರಡನೇ ಪತ್ನಿ. ಸರ್ಕಾರಿ ನೌಕರಿಯಲ್ಲಿದ್ದ ನನ್ನ ತಂದೆ ಇತ್ತೀಚೆಗೆ ನಿಧನರಾದರು. ನಾನು ನೇಮಕಾತಿ ಪ್ರಾಧಿಕಾರಕ್ಕೆ ಅನುಕಂಪದ ಮೇರೆಗೆ ಸರ್ಕಾರಿ ನೌಕರಿ ನೀಡಲು ವಿನಂತಿಸಿದಾಗ, ದ್ವಿತೀಯ ಪತ್ನಿಯ ಮಕ್ಕಳಿಗೆ ಸರ್ಕಾರಿ ನೌಕರಿ ನೀಡಲು ಅವಕಾಶ ಇರುವುದಿಲ್ಲವೆಂದು ನನ್ನ ಅರ್ಜಿಯನ್ನು ತಿರಸ್ಕರಿಸಿದ್ದಾರೆ. ಸೂಕ್ತ ಪರಿಹಾರ ಸೂಚಿಸಿ.

| ಎನ್. ಸುಮನ್ ಚಿಕ್ಕಮಗಳೂರು

ದಿನಾಂಕ: 27.08.2015ರ ಸರ್ಕಾರಿ ಸುತ್ತೋಲೆ ಸಂಖ್ಯೆ: ಸಿಆಸುಇ 131 ಸೇಆನೇ 2015ರ ಮೇರೆಗೆ ರಾಜ್ಯ ಉಚ್ಚ ನ್ಯಾಯಾಲಯದ ತೀರ್ಪಿನಂತೆ ಸರ್ಕಾರಿ ನೌಕರರಿಗೆ ಕಾನೂನುಬಾಹಿರ ಎರಡನೇ ಪತ್ನಿಯಿಂದ ಜನಿಸಿದ ಮಕ್ಕಳಿಗೆ ಅನುಕಂಪದ ಆಧಾರದ ಮೇಲೆ ನೇಮಕಾತಿ ನೀಡಲು ಬರುವುದಿಲ್ಲ. ಆದ್ದರಿಂದ, ನಿಮ್ಮ ತಂದೆಯವರು ಕರ್ನಾಟಕ ಸರ್ಕಾರಿ ಸೇವಾ (ನಡತೆ) ನಿಯಮಗಳು 1966 ರ ನಿಯಮ 26ರ ಮೇರೆಗೆ ಅನುಮತಿ ಪಡೆಯದೆ ನಿಮ್ಮ ತಾಯಿಯನ್ನು ವಿವಾಹವಾಗಿದ್ದರೆ ನಿಮಗೆ ಅನುಕಂಪದ ಮೇರೆಗೆ ಸರ್ಕಾರಿ ನೌಕರಿ ಲಭ್ಯವಾಗದು. ಹೆಚ್ಚಿನ ವಿವರಗಳಿಗೆ ಇದೇ ಲೇಖಕರ ಕರ್ನಾಟಕ ಸರ್ಕಾರಿ ಸೇವಾ ಕಾನೂನು ಕೈಪಿಡಿ ಪುಸ್ತಕವನ್ನು ನೋಡಬಹುದು.
***

13-5-18.
ಪ್ರಾಥಮಿಕ ಶಾಲಾ ಶಿಕ್ಷಕಿಯಾಗಿದ್ದ ನನ್ನ ಪತ್ನಿ 2018ರ ಏಪ್ರಿಲ್ 22ರಂದು ನಿಧನರಾದರು. ಪ್ರವರ್ಗ-2-ಬಿ ವರ್ಗಕ್ಕೆ ಸೇರಿದ ನಾನು ಡಿ.ಇಡಿ. ಶಿಕ್ಷಣ ಪಡೆದಿದ್ದೇನೆ. ಈಗ ನನ್ನ ವಯಸ್ಸು 38. ನನಗೆ ಅನುಕಂಪದ ಮೇರೆಗೆ ಪ್ರಾಥಮಿಕ ಶಾಲಾ ಶಿಕ್ಷಕರ ಉದ್ಯೋಗ ಲಭಿಸುವುದೆ? ವಯೋಮಿತಿ ಸಡಿಲಿಕೆ ಉಂಟೆ?

| ಬಿ.ಎನ್. ಪಾಟೀಲ್, ರಾಯಚೂರು

ಕರ್ನಾಟಕ ಸರ್ಕಾರಿ ಸೇವಾ (ಅನುಕಂಪದ ಮೇರೆಗೆ ನೇಮಕ) ನಿಯಮಗಳು 1996ರ ನಿಯಮ 3ರ ಮೇರೆಗೆ ಮೃತ ಸರ್ಕಾರಿ ನೌಕರಳ ಪತಿಯು ಅನುಕಂಪದ ಮೇರೆಗೆ ನೇಮಕ ಹೊಂದಲು ಅರ್ಹರು. ಅವರು ಯಾವ ಪ್ರವರ್ಗಕ್ಕೆ ಸೇರಿರುತ್ತಾರೋ ಆ ಪ್ರವರ್ಗಕ್ಕೆ ಸಾಮಾನ್ಯ ನೇಮಕಾತಿ ನಿಯಮಾವಳಿಯಲ್ಲಿ ನಿಗದಿಪಡಿಸಿದ ಗರಿಷ್ಠ ವಯೋಮಿತಿಯೊಳಗಿರಬೇಕು. ದಿನಾಂಕ: 04.08.2014 ರ ಸಾರ್ವಜನಿಕ ಶಿಕ್ಷಣ ಇಲಾಖೆಯ ಆಯುಕ್ತರ ಸುತ್ತೋಲೆಯಂತೆ ಡಿ.ಇಡಿ. ಪಡೆದವರು ಪ್ರಾಥಮಿಕ ಶಾಲಾ ಶಿಕ್ಷಕರಾಗಿ ನೇಮಕಾತಿ ಹೊಂದಲು ಅರ್ಹರು. ಹೆಚ್ಚಿನ ವಿವರಗಳಿಗೆ ಇದೇ ಲೇಖಕರ ಕರ್ನಾಟಕ ಸರ್ಕಾರಿ ಸೇವಾ ಕಾನೂನು ಕೈಪಿಡಿ ಪುಸ್ತಕವನ್ನು ನೋಡಿ.
***

12.05.2018,
ನಾನು 35 ವರ್ಷಗಳ ಕಾಲ ಸೇವೆ ಸಲ್ಲಿಸಿ 2018ರ ಮೇ 31ರಂದು ನಿವೃತ್ತಳಾಗುತ್ತಿದ್ದೇನೆ. ನನ್ನ ಪರಿಷ್ಕೃತ ವೇತನಶ್ರೇಣಿಯಲ್ಲಿ ರೂ. 76,300/-ಕ್ಕೆ ನಿಗದಿಪಡಿಸಲಾಗಿದೆ. ನನಗೆ ಎಷ್ಟು ನಿವೃತ್ತಿ ಉಪದಾನ ಹಾಗೂ ನಿವೃತ್ತಿ ವೇತನ ಲಭ್ಯವಾಗುತ್ತದೆ?

ರೇಖಾ ಆರ್. ಉಡುಪಿ

ದಿನಾಂಕ: 24.04.2018ರ ಸರ್ಕಾರಿ ಆದೇಶ ಸಂಖ್ಯೆ: ಆಇ 33 ಪಿಇಎನ್ 2018ರಲ್ಲಿ ಪರಿಷ್ಕೃತ ನಿವೃತ್ತಿ ವೇತನ ಸೌಲಭ್ಯಗಳನ್ನು ಕಲ್ಪಿಸಲಾಗಿದೆ. ನಿಮ್ಮ ಮೂಲ ವೇತನಕ್ಕೆ ಅನುಗುಣವಾಗಿ ಲೆಕ್ಕಾಚಾರ ಹಾಕಿದರೆ ನಿಮಗೆ ರೂ. 12,58,950/- ನಿವೃತ್ತಿ ಉಪದಾನ ಹಾಗೂ ನಿವೃತ್ತಿ ವೇತನವು ರೂ. 38,150/-ಗಳಿಗೆ ನಿಗದಿಯಾಗುತ್ತದೆ. ಹೆಚ್ಚಿನ ವಿವರಗಳಿಗೆ ಇದೇ ಲೇಖಕರು ಬರೆದಿರುವ ಕರ್ನಾಟಕ ಸರ್ಕಾರಿ ಸೇವಾ ನಿಯಮಗಳು ಪುಸ್ತಕವನ್ನು ನೋಡಬಹುದು.
***

11-5-18

ದುರ್ನಡತೆಯ ಆರೋಪದ ಕಾರಣ ನನ್ನ ಮೇಲೆ ಇಲಾಖಾ ವಿಚಾರಣೆ ಆರಂಭವಾಗಿದೆ. ನನ್ನ ಪರ ರಕ್ಷಣಾ ಸಹಾಯಕರಾಗಿ ವಕೀಲರನ್ನು ನೇಮಿಸಿಕೊಳ್ಳಲು ವಿನಂತಿಸಿದಾಗ ಇಲಾಖಾ ವಿಚಾರಣಾಧಿಕಾರಿಗಳು ತಿರಸ್ಕರಿಸಿದ್ದಾರೆ. ಹಾಗಾದರೆ, ನಾನು ಯಾರನ್ನು ರಕ್ಷಣಾ ಸಹಾಯಕರಾಗಿ ನೇಮಿಸಿಕೊಳ್ಳಬಹುದು?

| ಮಹಾಂತೇಶ ಗೌಡ ಹಾಸನ

ಕರ್ನಾಟಕ ಸರ್ಕಾರಿ ಸೇವಾ (ಸಿಸಿಎ) ನಿಯಮಗಳು 1957ರ ನಿಯಮ 28ರ ಮೇರೆಗೆ ಇಲಾಖಾ ವಿಚಾರಣೆಯಲ್ಲಿ ರಕ್ಷಣಾ ಸಹಾಯಕರನ್ನಾಗಿ ನೇಮಿಸಿಕೊಳ್ಳಲು ಅವಕಾಶವಿರುವುದಿಲ್ಲ. ಆದರೆ, ನೀವು ರಕ್ಷಣಾ ಸಹಾಯಕರನ್ನಾಗಿ ನಿವೃತ್ತ ಅಥವಾ ಸೇವೆಯಲ್ಲಿರುವ ಸರ್ಕಾರಿ ನೌಕರರನ್ನು ನೇಮಿಸಿಕೊಳ್ಳಬಹುದು. ಇದನ್ನು ನೀವು ಇಲಾಖಾ ವಿಚಾರಣಾಧಿಕಾರಿಗೆ ತಿಳಿಸಬಹುದು. ಹೆಚ್ಚಿನ ವಿವರಗಳಿಗೆ ಇದೇ ಲೇಖಕರ ಕರ್ನಾಟಕ ಸರ್ಕಾರಿ ಸೇವಾ ಕಾನೂನು ಕೈಪಿಡಿ ಪುಸ್ತಕವನ್ನು ನೋಡಬಹುದು.

10-5-18.
ನನ್ನ ತಂದೆ ಇತ್ತೀಚೆಗೆ ಸರ್ಕಾರಿ ಸೇವೆಯಲ್ಲಿರುವಾಗಲೇ ನಿಧನರಾದರು. ನನ್ನ ತಾಯಿಯೂ ಸರ್ಕಾರಿ ನೌಕರರಾಗಿದ್ದು, ಅವರ ಈಗಿನ ಪರಿಷ್ಕೃತ ಮೂಲವೇತನ ರೂ. 36000/-. ನಾನು ತಂದೆಯವರ ನೇಮಕಾತಿ ಪ್ರಾಧಿಕಾರಕ್ಕೆ ಅನುಕಂಪದ ಆಧಾರದ ಮೇಲೆ ಅರ್ಜಿ ಸಲ್ಲಿಸಿದಾಗ, ನಿಮ್ಮ ತಾಯಿ ಸರ್ಕಾರಿ ಸೇವೆಯಲ್ಲಿರುವುದರಿಂದ ಹಾಗೂ ವಾರ್ಷಿಕ ಆದಾಯ ಹೆಚ್ಚಾಗಿರುವುದರಿಂದ, ನೇಮಕಾತಿ ನೀಡಲಾಗದು ಎಂದಿದ್ದಾರೆ. ನನಗೆ ಈ ನೌಕರಿ ಲಭಿಸುವುದೆ?

ಬಿ.ಎನ್. ಪ್ರಸನ್ನ ಕುಮಾರ್ ಹುಬ್ಬಳ್ಳಿ

1996 ಕರ್ನಾಟಕ ಸರ್ಕಾರಿ ಸೇವಾ ನಿಯಮಾವಳಿಯ ನಿಯಮ 3ರ ಮೇರೆಗೆ ಮೃತ ಸರ್ಕಾರಿ ನೌಕರನ ಅವಲಂಬಿತರಾರು ಅನುಕಂಪದ ಆಧಾರದ ಮೇರೆಗೆ ನೇಮಕಾತಿಗೆ ಅರ್ಹರು. ಇದೇ ನಿಯಮಾವಳಿಯ ನಿಯಮ 4(1) ರ ವಿವರಣೆ(ಎ)ಯಲ್ಲಿ ತಿಳಿಸಿರುವಂತೆ ಅನುಕಂಪದ ಆಧಾರದ ಮೇರೆಗೆ ನೇಮಕಾತಿಗೆ ಪ್ರಥಮ ದರ್ಜೆ ಸಹಾಯಕರ ಪರಿಷ್ಕೃತ ವೇತನ ಶ್ರೇಣಿ ರೂ.27,650-52,650ರ ಸರಾಸರಿ ವೇತನಕ್ಕೆ ಅನ್ವಯವಾಗುವ ಭತ್ಯೆಗಳನ್ನು ಒಳಗೊಂಡಂತೆ ವಾರ್ಷಿಕ ವರಮಾನ ಹೆಚ್ಚಾದರೆ, ಅವಲಂಬಿತರು ಆರ್ಥಿಕ ಮುಗ್ಗಟ್ಟಿನಲ್ಲಿದ್ದಾರೆಂದು ಭಾವಿಸಿ ತಿರಸ್ಕರಿಸಲಾಗುತ್ತದೆ. ನಿಮ್ಮ ತಾಯಿಯ ವೇತನ ಈ ಸರಾಸರಿ ವೇತನಕ್ಕಿಂತ ಕಡಿಮೆ ಇರುವುದರಿಂದ ನಿಮಗೆ ಸರ್ಕಾರಿ ನೌಕರಿ ಲಭ್ಯ.
***
9-5-18.
ಇತ್ತೀಚೆಗೆ ನನ್ನ ತಂದೆಯವರ ನಿಧನದ ಪ್ರಯುಕ್ತ ನಾನು ಅನುಕಂಪದ ಆಧಾರದ ಮೇಲೆ ದ್ವಿತೀಯ ದರ್ಜೆ ಸಹಾಯಕನಾಗಿ ಕೆಲಸಕ್ಕೆ ಸೇರಿದ್ದೇನೆ. ನಾನು ಇಂಜಿನಿಯರಿಂಗ್ ಪದವಿಯ 6ನೇ ಸೆಮಿಸ್ಟರ್ ಪೂರೈಸಿದ್ದು, ಉಳಿದ ಸೆಮಿಸ್ಟರ್ಗಳನ್ನು ಮುಗಿಸಲು ವೇತನರಹಿತ ರಜೆ ಪಡೆದು ಹೋಗಬಹುದೆ? ಸೂಕ್ತ ಪರಿಹಾರ ಸೂಚಿಸಿ.

| ಆದಿತ್ಯ ಮೈಸೂರು

ದಿನಾಂಕ: 06.09.1986 ರ ಸರ್ಕಾರಿ ಸುತ್ತೋಲೆ ಸಂಖ್ಯೆ: ಸಿಆಸುಇ 9 ಎಸ್.ಆರ್.ಸಿ.86 ರಂತೆ ಕಚೇರಿ ಕೆಲಸಕ್ಕೆ ಅಡ್ಡಿ ಬಾರದಂತೆ ಸರ್ಕಾರಿ ನೌಕರನು ಉನ್ನತ ವ್ಯಾಸಂಗ ಮಾಡಲು ಅನುಮತಿ ನೀಡಬಹುದು ಎಂದು ಸೂಚಿಸಲಾಗಿದೆ. ‘ಸಿ’ ಮತ್ತು ‘ಡಿ’ ಗುಂಪಿನ ನೌಕರರಿಗೆ ಮಾತ್ರ ಈ ಅನುಮತಿಯು ಅನ್ವಯಿಸುತ್ತದೆ. ನೀವು ನಿಮ್ಮ ಉಳಿದ ಸೆಮಿಸ್ಟರ್ ಪರೀಕ್ಷೆಗಳನ್ನು ಪೂರೈಸಲು ವೇತನರಹಿತ ರಜೆ ಪಡೆದು ಅಧ್ಯಯನ ಮುಂದುವರಿಸಬಹುದು. ಹೆಚ್ಚಿನ ವಿವರಗಳಿಗೆ ಇದೇ ಲೇಖಕರ ಕರ್ನಾಟಕ ಸರ್ಕಾರಿ ಸೇವಾ ಕಾನೂನು ಕೈಪಿಡಿ ಪುಸ್ತಕವನ್ನು ನೋಡಬಹುದು.
***

8-5-18.
ನಾನು ಸರ್ಕಾರಿ ನೌಕರನಾಗಿದ್ದು, 2012ರ ವೇತನಶ್ರೇಣಿ ರೂ. 11600-21000ದಲ್ಲಿ ರೂ. 12,780ಗಳನ್ನು 1ಜುಲೈ, 2017ರಂದು ಪಡೆಯುತ್ತಿದ್ದೆ. 01-12-2017ರಲ್ಲಿ ಪ್ರಸಕ್ತ ವೇತನ ಶ್ರೇಣಿಯಲ್ಲಿ ಒಂದು ವಾರ್ಷಿಕ ವೇತನ ಬಡ್ತಿಯನ್ನು ಪಡೆದಿರುತ್ತೇನೆ. ನನಗೆ ಪರಿಷ್ಕೃತ ವೇತನ ಶ್ರೇಣಿ(21400-42000)ಯಲ್ಲಿ 22,410 ನಿಗದಿಪಡಿಸಿದ್ದಾರೆ. ಇದರಿಂದಾಗಿ ನನಗೆ ಒಂದು ವಾರ್ಷಿಕ ವೇತನ ಬಡ್ತಿ ನಷ್ಟವಾಗಿದೆ. ಈ ಬಗ್ಗೆ ಮನವಿ ಮಾಡಿದಾಗ, ಪರಿಷ್ಕೃತ ವೇತನ ಸರಿಯೆಂದಿದ್ದಾರೆ. ಪರಿಹಾರ ಸೂಚಿಸಿ.

| ಪದ್ಮ ಎಂ.ಸಿ. ಬೆಂಗಳೂರು

2018ರ ಪರಿಷ್ಕೃತ ವೇತನ ಶ್ರೇಣಿಗಳ ನಿಯಮಗಳ ಪ್ರಕಾರ 1ನೇ ಜುಲೈ 2017ರಂದು ಹಳೆಯ ವೇತನದಲ್ಲಿದ್ದ ವೇತನಕ್ಕೆ ಸರಿಸಮವಾಗಿ ಪರಿಷ್ಕೃತ ವೇತನಶ್ರೇಣಿಯ ಪಟ್ಟಿಯಲ್ಲಿ ಕಾಲ್ಪನಿಕವಾಗಿ ವೇತನ ನಿಗದಿಪಡಿಸಬೇಕು. ಈ ನಿಯಮಾವಳಿಯ ನಿಯಮ-8 (1)ರ ಪರಂತುಕದನ್ವಯ ವೇತನವನ್ನು ನಿಗದಿಪಡಿಸಿ ವೇತನಬಡ್ತಿ ನೀಡಬೇಕು. ನಿಮ್ಮ ಮೇಲಾಧಿಕಾರಿ ಹೇಳಿರುವುದು ಸಮಂಜಸವಾಗಿಲ್ಲ.
***

7-5-18.
ನಾನು ಕರ್ನಾಟಕ ವಿದ್ಯುತ್ ಪ್ರಸರಣ ನಿಗಮದಲ್ಲಿ ಸೇವೆ ಸಲ್ಲಿಸುತ್ತಿದ್ದೇನೆ. ಕಲೆ, ನಾಟ್ಯ, ಸಾಹಿತ್ಯ, ಹಾಡುಗಾರಿಕೆ ಹವ್ಯಾಸ ಹೊಂದಿದ್ದು; ಬಿಡುವಿನ ವೇಳೆಯಲ್ಲಿ ಪರಿಸರ ಮಾಲಿನ್ಯ, ಬಯಲು ಶೌಚಾಲಯ ಮುಂತಾದ ಚಿತ್ರಗಳನ್ನು ನಿರ್ದೇಶಿಸಲು ಪ್ರಯತ್ನಿಸುತ್ತಿದ್ದೇನೆ. ಈ ಚಿತ್ರಕ್ಕೆ ಕಥೆ ಬರೆದು, ನಿರ್ದೇಶನ ಮಾಡಲು ಇಲಾಖೆಯ ಅನುಮತಿ ಪಡೆಯಬೇಕೆ?

| ನರಸಿಂಹಮೂರ್ತಿ ಬೆಂಗಳೂರು

ಕರ್ನಾಟಕ ಸರ್ಕಾರಿ ಸೇವಾ (ನಡತೆ) ನಿಯಮಗಳು 1966ರ ನಿಯಮ (9)ರ ಮೇರೆಗೆ ಸರ್ಕಾರಿ ನೌಕರರು ಸಾಹಿತ್ಯಕ, ಕಲಾತ್ಮಕ ಅಥವಾ ವೈಜ್ಞಾನಿಕ ಸ್ವರೂಪದ್ದಾಗಿದ್ದರೆ ಅಂತಹ ಕೃತಿಗಳ ರಚನೆಗೆ ಇಲಾಖಾ ಅನುಮತಿಯ ಆವಶ್ಯಕತೆಯಿಲ್ಲ. ಆದರೆ, 2001ರ ಆದೇಶದ ಮೇರೆಗೆ ಸರ್ಕಾರಿ ನೌಕರನು ಚಲನಚಿತ್ರದಲ್ಲಿ ಅಥವಾ ದೂರದರ್ಶನದಲ್ಲಿ ಅಭಿನಯಿಸಬೇಕಾದರೆ, ಅಥವಾ ನಿರ್ದೇಶನ ಮಾಡಬೇಕಾದರೆ ಸರ್ಕಾರದ ಅನುಮತಿ ಆವಶ್ಯಕ. ಆದುದರಿಂದ, ನೀವು ಅನುಮತಿ ಪಡೆದು ಈ ಚಲನಚಿತ್ರ ನಿರ್ದೇಶನವನ್ನು ಕೈಗೆತ್ತಿಕೊಳ್ಳಬಹುದು.
***

6-5-18.
ನಾನು 2004ರ ಏಪ್ರಿಲ್ನಲ್ಲಿ ಸರ್ಕಾರಿ ಸೇವೆಯಿಂದ ನಿವೃತ್ತನಾದೆ. ನನ್ನ ಸಹೋದ್ಯೋಗಿಗಳು 1978ರಲ್ಲಿ ಮೀಸಲಾತಿ ಅಡಿಯಲ್ಲಿ ಪದೋನ್ನತಿ ಪಡೆದು, ಮೇಲಿನ ಹುದ್ದೆಗಳಲ್ಲಿ ಸೇವೆ ಸಲ್ಲಿಸಿದ್ದರಿಂದ ನಾನು ಜ್ಯೇಷ್ಠತೆಯಲ್ಲಿ ಸಾಮಾನ್ಯ ವರ್ಗಕ್ಕೆ ಸೇರಿದ್ದೆ. ಆದ್ದರಿಂದ ಪದೋನ್ನತಿ ಪಡೆಯಲು ವಿಫಲನಾಗಿದ್ದೆ. ಈಗ ಅವರೆಲ್ಲ ಹಿಂಬಡ್ತಿಯಾಗಿ, ನನಗೆ ಜ್ಯೇಷ್ಠತೆ ಬರುವುದರಿಂದ ನಿವೃತ್ತಿವೇತನ ಹೆಚ್ಚಾಗಬಹುದೆ?

| ಮಹಾಬಲ ಶಾಸ್ತ್ರಿ ಮಂಗಳೂರು

ಸವೋಚ್ಚ ನ್ಯಾಯಾಲಯ ಬಿ.ಕೆ. ಪವಿತ್ರ ಪ್ರಕರಣದಲ್ಲಿ 1978ರಿಂದ ಮೀಸಲಾತಿ ಅಡಿಯಲ್ಲಿ ಪದೋನ್ನತಿ ನೀಡಿರುವುದರಿಂದ, 09.02.2017ರಂದು ರಾಜ್ಯ ಸರ್ಕಾರವು ಪದೋನ್ನತಿಯಲ್ಲಿ ಮೀಸಲಾತಿ ಪಡೆಯುವವರ ಜ್ಯೇಷ್ಠತೆಯನ್ನು ಸಂರಕ್ಷಿಸಲು 2002ರ ರಾಜ್ಯ ಸರ್ಕಾರದ ಅಧಿನಿಯಮದ ಪ್ರಕರಣ 3, 4ನ್ನು ರದ್ದುಗೊಳಿಸಿದೆ. ಸಾಮಾನ್ಯ ವರ್ಗದವರಿಗೆ ಮುಂಬಡ್ತಿ ನೀಡಲು, 1978ರಿಂದಲೇ ಹೊಸ ಜ್ಯೇಷ್ಠತಾಪಟ್ಟಿಯನ್ನು ಪರಿಷ್ಕರಿಸಿ ನೀಡಲು ಸೂಚಿಸಿದೆ. ಈ ಬಗ್ಗೆ 04.04.2018ರಂದು ಸರ್ಕಾರವು ಸುತ್ತೋಲೆ ಹೊರಡಿಸಿ, ಹಿಂಬಡ್ತಿ-ಮುಂಬಡ್ತಿಯನ್ನು 16.04.2018ರೊಳಗೆ ಪೂರೈಸಲು ಸೂಚಿಸಿದೆ. ನೀವು ನಿವೃತ್ತರಾಗಿರುವುದರಿಂದ ನಿಮ್ಮ ಜ್ಯೇಷ್ಠತೆ ಹಿನ್ನೆಲೆಯಲ್ಲಿ ಪರಿಷ್ಕೃತ ಪಿಂಚಣಿ ಸೌಲಭ್ಯ ಕಲ್ಪಿಸಲು ಕೋರ್ಟ್ ಆದೇಶಿಸಬೇಕಿದೆ.
***

4-5-18.
ಸರ್ಕಾರಿ ಪ್ರೌಢಶಾಲೆಯಲ್ಲಿ ಶಿಕ್ಷಕನಾಗಿರುವ ನನಗೆ ಬರವಣಿಗೆಯಲ್ಲಿ ಆಸಕ್ತಿಯಿದೆ. ನಾನು ಪತ್ರಿಕೆ, ಸಿನಿಮಾ, ಟಿ.ವಿ. ಇತ್ಯಾದಿಗಳಿಗೆ ಕಥೆ-ಕವನ-ಲೇಖನ ಕಳುಹಿಸಲು ಹಾಗೂ ಕವನವಾಚನ ಕಾರ್ಯಕ್ರಮಗಳಲ್ಲಿ ಭಾಗವಹಿಸಲು ಯಾವ ಅಧಿಕಾರಿಯಿಂದ ಅನುಮತಿ ಪಡೆಯಬೇಕು?

| ಕೆ. ನಟರಾಜ್ ಪಾಂಡವಪುರ, ಮಂಡ್ಯ

ಕರ್ನಾಟಕ ಸರ್ಕಾರಿ ಸೇವಾ (ನಡತೆ) ನಿಯಮಗಳು 1966ರ ನಿಯಮ 9ರ ಮೇರೆಗೆ ಸಾಹಿತ್ಯ, ಸಾಂಸ್ಕೃತಿಕ, ಕಲೆ-ಮುಂತಾದವುಗಳಿಗೆ ಸಂಬಂಧಿಸಿದಂತೆ ಬರೆಯಲು ಅನುಮತಿ ಬೇಕಾಗಿಲ್ಲ. ಆದರೆ, ನೀವು ಪತ್ರಿಕೆ ಮತ್ತು ದೂರದರ್ಶನ ಮಾಧ್ಯಮಗಳಲ್ಲಿ ಲೇಖನ, ಕಥೆ-ಕವನ ಬರೆಯಲು ನಿಮ್ಮ ನೇಮಕಾತಿ ಪ್ರಾಧಿಕಾರದಿಂದ ಅನುಮತಿ ಪಡೆಯಬೇಕು. ಹೆಚ್ಚಿನ ವಿವರಗಳಿಗೆ ಇದೇ ಲೇಖಕರ ‘ಕರ್ನಾಟಕ ಸರ್ಕಾರಿ ಸೇವಾ ಕಾನೂನು ಕೈಪಿಡಿ’ ಪುಸ್ತಕವನ್ನು ನೋಡಬಹುದು.
***

5-5-18
ನಾನು ಸರ್ಕಾರಿ ಪ್ರೌಢಶಾಲೆಯಲ್ಲಿ ಸಹಶಿಕ್ಷಕಿಯಾಗಿ ಕೆಲಸ ಮಾಡುತ್ತಿದ್ದೇನೆ. ನನಗೆ 10 ತಿಂಗಳ ಮಗುವಿದ್ದು, ಅದರ ಆರೈಕೆಗಾಗಿ ನಾಲ್ಕು ತಿಂಗಳ ವೇತನರಹಿತ ರಜೆ ಹಾಕಬೇಕೆಂದಿದ್ದೇನೆ. ಇದರಿಂದ ನನ್ನ ಸೇವಾನಷ್ಟ ಆಗುವುದೇ?

| ಸಬ್ರೀನ್ ಬಾನು ರಾಯಚೂರು

ಕರ್ನಾಟಕ ಸರ್ಕಾರಿ ಸೇವಾ ನಿಯಮಗಳು 1958ರ ನಿಯಮ 117ರ ಮೇರೆಗೆ ನಿಮ್ಮ ಮಗುವಿನ ಆರೈಕೆಗಾಗಿ ನಾಲ್ಕು ತಿಂಗಳ ವೇತನರಹಿತ ರಜೆಯನ್ನು ಪಡೆಯಬಹುದು. ಈ ರೀತಿ ವೇತನರಹಿತ ರಜೆಯನ್ನು ಮೂರು ವರ್ಷಗಳ ಕಾಲಾವಧಿಯವರೆಗೆ ಬಳಸಿಕೊಳ್ಳುವುದರಿಂದ ನಿಮ್ಮ ಸೇವಾಭಂಗವಾಗುವುದಿಲ್ಲ. ಹೆಚ್ಚಿನ ವಿವರಗಳಿಗೆ ಇದೇ ಲೇಖಕರು ಬರೆದಿರುವ ‘ಕರ್ನಾಟಕ ಸರ್ಕಾರಿ ಸೇವಾ ನಿಯಮಗಳು’ ಪುಸ್ತಕವನ್ನು ನೋಡಬಹುದು.
***

3-5-18.
ನಾನು ಪ್ರಸ್ತುತ ಬೀದರ್ ಜಿಲ್ಲೆಯಲ್ಲಿ ಗ್ರಾಮಲೆಕ್ಕಿಗನಾಗಿ ಸೇವೆ ಸಲ್ಲಿಸುತ್ತಿದ್ದೇನೆ. ನಾನು ಎರಡು ವರ್ಷ ಸೇವೆ ಸಲ್ಲಿಸಿದ್ದು, ಪ್ರೊಬೇಷನ್ ಅವಧಿ ಘೊಷಣೆಯಾಗಿದೆ. ನನ್ನ ಸ್ವಂತ ಜಿಲ್ಲೆ ಬಳ್ಳಾರಿ ಜಿಲ್ಲೆಯ ಹಗರಿಬೊಮ್ಮನಹಳ್ಳಿಗೆ ವರ್ಗಾವಣೆ ಮಾಡಿಸಿಕೊಂಡು ಹೋಗಬಹುದೇ?

| ಎಂ. ಗೋಣಿಬಸಪ್ಪ ಬೀದರ್

ಪ್ರತಿಯೊಂದು ಜಿಲ್ಲೆಯ ಗ್ರಾಮಲೆಕ್ಕಿಗರ ನೇಮಕಾತಿಗೆ ಆಯಾ ಜಿಲ್ಲಾಧಿಕಾರಿಗಳೇ ನೇಮಕಾತಿ ಪ್ರಾಧಿಕಾರವಾಗಿರುತ್ತಾರೆ. ನೀವು ಬಳ್ಳಾರಿ ಜಿಲ್ಲೆಯ ಜಿಲ್ಲಾಧಿಕಾರಿಯವರಿಗೆ ನಿಯೋಜನೆ ಮೇರೆಗೆ ಅಥವಾ ಕಾಯಂ ಆಗಿ ನೇಮಕ ಮಾಡಿಕೊಳ್ಳಲು ಅಧಿಕೃತ ದ್ವಾರದ ಮೂಲಕ ಮನವಿಯನ್ನು ಸಲ್ಲಿಸಬಹುದು. ಆಗ ಅವರು ನಿಮ್ಮ ನೇಮಕಾತಿ ಪ್ರಾಧಿಕಾರಕ್ಕೆ ನಿಮ್ಮ ಸೇವೆಯನ್ನು ಪಡೆಯಲು ಅನುಮತಿ ಕೋರಿ ಪತ್ರ ಬರೆದು ವರ್ಗಾವಣೆ ಮಾಡಿಸಿಕೊಳ್ಳಬಹುದು. ಹೆಚ್ಚಿನ ವಿವರಗಳಿಗೆ ಇದೇ ಲೇಖಕರ ‘ಕರ್ನಾಟಕ ಸರ್ಕಾರಿ ಸೇವಾ ಕಾನೂನು ಕೈಪಿಡಿ’ ಪುಸ್ತಕವನ್ನು ನೋಡಬಹುದು.
***

1-5-18.
ನಾನು 2015ರಲ್ಲಿ ಪ್ರಾಥಮಿಕ ಮತ್ತು ಪ್ರೌಢಶಾಲಾ ಶಿಕ್ಷಕರ ಹುದ್ದೆಗೆ ಒಟ್ಟಿಗೆ ಅರ್ಜಿ ಸಲ್ಲಿಸಿದ್ದೆ. ಮೊದಲು ಪ್ರಾಥಮಿಕ ಶಾಲಾ ಶಿಕ್ಷಕಿಯಾಗಿ 29.02.2016ರಿಂದ 29.08.2017ರ ವರೆಗೆ ಸೇವೆ ಸಲ್ಲಿಸಿ, 30.08.2017ರಂದು ಪ್ರೌಢಶಾಲಾ ಶಿಕ್ಷಕಿಯಾಗಿ ಕೆಲಸಕ್ಕೆ ಸೇರಿದ್ದೇನೆ. ನಾನು ಜುಲೈ ನಂತರ ಹೊಸ ಹುದ್ದೆಗೆ ಸೇರಿರುವುದರಿಂದ ನನಗೆ ಪರಿಷ್ಕೃತ ವೇತನಶ್ರೇಣಿ ಅನ್ವಯಿಸುವುದೆ? ಅನ್ವಯಿಸುವುದಾದರೆ ಯಾವ ಮೂಲವೇತನಕ್ಕೆ ಅನ್ವಯಿಸುವುದು? ಸೂಕ್ತ ಪರಿಹಾರ ಸೂಚಿಸಿ.

| ದಾಕ್ಷಾಯಿಣಿ ಮೈಸೂರು

ನೀವು 01.07.2017ರ ನಂತರ ಪ್ರೌಢಶಾಲಾ ಶಿಕ್ಷಕಿಯಾಗಿ ವೇತನಶ್ರೇಣಿ ರೂ. 17650-32000 ಸೇರಿದ್ದು, ಪರಿಷ್ಕೃತ ವೇತನಶ್ರೇಣಿ ಇದೇ ದಿನಾಂಕದ ನಂತರ ಅನ್ವಯವಾಗುತ್ತದೆ. ಆದ್ದರಿಂದ ಪರಿಷ್ಕೃತ ವೇತನಶ್ರೇಣಿಯಲ್ಲಿ ನಿಮ್ಮ ವೇತನವನ್ನು ಸೆಪ್ಟೆಂಬರ್ 2017ರಿಂದ ರೂ. 33450ಕ್ಕೆ ಕಾಲ್ಪನಿಕವಾಗಿ ನಿಗದಿಪಡಿಸಲಾಗುತ್ತದೆ. ನಿಮ್ಮ ಮುಂದಿನ ವೇತನಬಡ್ತಿಯು 01.09.2018ಕ್ಕೆ ಆಗುತ್ತದೆ. ಹೆಚ್ಚಿನ ವಿವರಗಳಿಗೆ ಇದೇ ಲೇಖಕರ ‘ಕರ್ನಾಟಕ ಸರ್ಕಾರಿ ಸೇವಾ ನಿಯಮಗಳು’ ಪುಸ್ತಕವನ್ನು ನೋಡಬಹುದು.
***

2-5-18.
ನನ್ನ ಪತ್ನಿ ಸರ್ಕಾರಿ ಸೇವೆಗೆ ಸೇರುವ ಮೊದಲೇ ಎರಡು ಮಕ್ಕಳ ತಾಯಿಯಾಗಿದ್ದಾಳೆ. ಹೀಗಾಗಿ, ಮೂರನೇ ಮಗುವಿಗೆ ಹೆರಿಗೆ ರಜೆ ದೊರೆಯುವುದೆ?

| ಸಿ.ಆರ್. ನಾಯಕ್ ಲಿಂಗಸೂರು, ರಾಯಚೂರು

ಕರ್ನಾಟಕ ಸರ್ಕಾರಿ ಸೇವಾ ನಿಯಮಾವಳಿಯ ನಿಯಮ 135ರಲ್ಲಿ ಮಹಿಳಾ ಸರ್ಕಾರಿ ನೌಕರರಿಗೆ ಎರಡು ಜೀವಂತ ಮಗು ಪಡೆಯುವವರೆಗೂ ಎರಡು ಬಾರಿ 180 ದಿನಗಳ ಹೆರಿಗೆ ರಜೆಯನ್ನು ನೀಡಲಾಗುತ್ತದೆ. ನಿಮ್ಮ ಪತ್ನಿಯು ಸರ್ಕಾರಿ ಸೇವೆಗೆ ಸೇರುವ ಮೊದಲೇ ಎರಡು ಮಕ್ಕಳ ತಾಯಿಯಾಗಿರುವುದರಿಂದ, ಮೂರನೇ ಮಗುವಿಗೆ ಹೆರಿಗೆ ರಜೆ ಲಭ್ಯವಾಗುವುದಿಲ್ಲ. ಹೆಚ್ಚಿನ ವಿವರಗಳಿಗೆ ಇದೇ ಲೇಖಕರ ‘ಕರ್ನಾಟಕ ಸರ್ಕಾರಿ ಸೇವಾ ನಿಯಮಗಳು’ ಪುಸ್ತಕವನ್ನು ನೋಡಬಹುದು
***

30-4-18.
ನಾನು 2017 ರಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆಗೆ ಪ್ರ.ದ.ಸ. ಹುದ್ದೆಗೆ ಸೇರಿದ್ದೇನೆ. ಕೆ.ಪಿ.ಎಸ್.ಸಿ. ಯಿಂದ ಪ್ರಸ್ತುತ ಕರೆದಿರುವ ಗ್ರೂಪ್-ಎ ಮತ್ತು ಬಿ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಬಯಸಿದ್ದು, ಕಚೇರಿಯಿಂದ ನಿರಾಕ್ಷೇಪಣಾ ಪತ್ರ ನೀಡಲು ನಿರಾಕರಿಸುತ್ತಿದ್ದಾರೆ. ಇದಕ್ಕೆ ನಿಮ್ಮ ಪ್ರೊಬೇಷನ್ ಅವಧಿ ಘೊಷಣೆ ಆಗಿಲ್ಲ ಎಂಬ ಕಾರಣ ನೀಡಿದ್ದಾರೆ. ನಿರಾಕ್ಷೇಪಣಾ ಪತ್ರ ನೀಡಲು ಪ್ರೊಬೇಷನ್ ಅವಧಿ ಘೊಷಣೆಯಾಬೇಕೆ? ಆ ಪತ್ರವಿಲ್ಲದೆ, ನೇರವಾಗಿ ಅರ್ಜಿ ಸಲ್ಲಿಸಬಹುದೆ?

| ಶ್ರೀಕಾಂತ್ ಹಾಸನ

ಕರ್ನಾಟಕ ಸರ್ಕಾರಿ ಸೇವಾ ನಿಯಮಾವಳಿಯ ನಿಯಮ 145ರ ಮೇರೆಗೆ ಪ್ರ್ರೊೇಷನ್ ಅವಧಿಯಲ್ಲಿ ಕೆಲಸ ಮಾಡುತ್ತಿರುವ ನೌಕರರು ಖಾಯಂ ನೌಕರರ ಎಲ್ಲಾ ಹಕ್ಕುಬಾಧ್ಯತೆ ಹೊಂದಿರುತ್ತಾರೆ. 1977ರ ಕರ್ನಾಟಕ ಸರ್ಕಾರಿ ಸೇವಾ (ಸಾಮಾನ್ಯ ನೇಮಕಾತಿ) ನಿಯಮಾವಳಿಯ ನಿಯಮ 11ರ ಮೇರೆಗೆ ಪ್ರತಿಯೊಬ್ಬ ಸರ್ಕಾರಿ ನೌಕರರು ಬೇರೊಂದು ಸರ್ಕಾರಿ ಹುದ್ದೆಗೆ ಅರ್ಜಿ ಸಲ್ಲಿಸಬೇಕಾದರೆ, ತಮ್ಮ ನೇಮಕಾತಿ ಪ್ರಾಧಿಕಾರದ ಮೂಲಕ ಸಲ್ಲಿಸಬೇಕು. ಇಲ್ಲವಾದರೆ, ಅಂತಹ ನೌಕರರು ಶಿಸ್ತುಕ್ರಮಕ್ಕೆ ಒಳಗಾಗುತ್ತಾರೆ. ಪ್ರೊಬೇಷನ್ ಅವಧಿಯಲ್ಲಿರುವ ಸರ್ಕಾರಿ ನೌಕರರಿಗೆ ಬೇರೊಂದು ಹುದ್ದೆಗೆ ಅರ್ಜಿ ಸಲ್ಲಿಸಲು ಅನುಮತಿ ನೀಡಬಾರದೆಂದು ಎಲ್ಲೂ ಹೇಳಿಲ್ಲ. ನೀಡದಿರುವುದು ನೇಮಕಾತಿ ಪ್ರಾಧಿಕಾರದ ದೋಷವಾಗುತ್ತದೆ.
***

29-4-18.
ನಮ್ಮ ಮನೆಯವರು ದ್ವಿ.ದ.ಸ. ಹುದ್ದೆಯಲ್ಲಿರುವಾಗಲೇ ಮರಣ ಹೊಂದಿದ್ದಾರೆ. ನಾನು ಅನುಕಂಪದ ಆಧಾರದ ಮೇಲೆ ದ್ವಿ.ದ.ಸ. ಹುದ್ದೆಗೆ ಸೇರಿದ್ದೇನೆ. ಮದುವೆಯಾಗಿ ಎರಡು ತಿಂಗಳೊಳಗಾಗಿ ಅವರು ತೀರಿಕೊಂಡಿದ್ದು, ನಮಗೆ ಮಕ್ಕಳಾಗಿಲ್ಲ. ನಾನು ಎರಡನೇ ಮದುವೆಯಾಗಿ ಮಕ್ಕಳನ್ನು ಪಡೆಯಲು ಬಯಸಿದ್ದೇನೆ. ಎರಡನೇ ಮದುವೆಯಾಗಲು ಕಾನೂನು ತೊಡಕುಗಳಿವೆಯೆ?

| ಸ್ನೇಹ ವಿಜಯಪುರ

ಕರ್ನಾಟಕ ಸರ್ಕಾರಿ ಸೇವಾ ನಿಯಮಾವಳಿಯ ನಿಯಮ 20ರ ಮೇರೆಗೆ ಸರ್ಕಾರಿ ಸೇವೆಗೆ ಸೇರಿ ಒಂದು ದಿವಸವಾದರೂ ಅವನು ಸರ್ಕಾರಿ ನೌಕರನೇ. 1996ರ ಕರ್ನಾಟಕ ಸರ್ಕಾರಿ ಸೇವಾ (ಅನುಕಂಪದ ಮೇರೆಗೆ ನೇಮಕ) ನಿಯಮಾವಳಿಯಲ್ಲಿ ಎಲ್ಲಿಯೂ ಅನುಕಂಪದ ಮೇರೆಗೆ ನೇಮಕವಾದ ಸರ್ಕಾರಿ ನೌಕರನು ಎರಡನೇ ಮದುವೆ ಆಗಬಾರದೆಂದು ಸೂಚಿಸಿಲ್ಲ. ನೀವು ಎರಡನೇ ಮದುವೆಯಾಗಬಹುದು. ಹೆಚ್ಚಿನ ವಿವರಗಳಿಗೆ ಇದೇ ಲೇಖಕರ ‘ಕರ್ನಾಟಕ ಸರ್ಕಾರಿ ಸೇವಾ ಕಾನೂನು ಕೈಪಿಡಿ’ ಪುಸ್ತಕವನ್ನು ನೋಡಬಹುದು.
***

28-4-18.
ನಾನು 2016ರಲ್ಲಿ ಬೆರಳಚ್ಚುಗಾರಳಾಗಿ ಸರ್ಕಾರಿ ಸೇವೆಗೆ ಸೇರಿದ್ದೇನೆ. ಶೀಘ್ರಲಿಪಿಗಾರಳಾಗಿ ಪದೋನ್ನತಿ ಪಡೆಯಬೇಕಾದರೆ ಯಾವ್ಯಾವ ಪರೀಕ್ಷೆಗಳನ್ನು ಪಾಸು ಮಾಡಬೇಕು? ಸೂಕ್ತ ಸಲಹೆ ನೀಡಿ.

| ವಿಜಯಲಕ್ಷ್ಮಿ ಮೈಸೂರು

ಶೀಘ್ರಲಿಪಿಗಾರರಾಗಿ ಪದೋನ್ನತಿ ಪಡೆಯಲು ಮೊದಲು ನೀವು ಕನ್ನಡ ಶೀಘ್ರಲಿಪಿ ಪ್ರೌಢದರ್ಜೆ (ಸೀನಿಯರ್) ಪರೀಕ್ಷೆಯಲ್ಲಿ ತೇರ್ಗಡೆಯಾಗಬೇಕು. ಅದರೊಂದಿಗೆ ಇಲಾಖಾ ಪರೀಕ್ಷೆಗಳಾದ ಅಕೌಂಟ್ಸ್ ಹೈಯರ್ ಹಾಗೂ ನಿಮ್ಮ ಇಲಾಖೆಗೆ ಸಂಬಂಧಿಸಿದ ಇಲಾಖಾ ಪರೀಕ್ಷೆಗಳಲ್ಲಿ ತೇರ್ಗಡೆಯಾಗಬೇಕು. ಹೆಚ್ಚಿನ ವಿವರಗಳಿಗೆ ಇದೇ ಲೇಖಕರು ಬರೆದಿರುವ ಕರ್ನಾಟಕ ಸರ್ಕಾರಿ ಸೇವಾ ಕಾನೂನು ಕೈಪಿಡಿ ಪುಸ್ತಕವನ್ನು ನೋಡಿ.
***

27-4-18.
ನಾನು ಪ್ರಾಥಮಿಕ ಶಾಲಾ ಶಿಕ್ಷಕನಾಗಿ 24 ವರ್ಷ ಸೇವೆ ಸಲ್ಲಿಸಿದ ನಂತರ 26-12-2007ರಂದು ಪ್ರೌಢಶಾಲಾ ಸಹಶಿಕ್ಷಕನಾಗಿ ಪದೋನ್ನತಿ ಪಡೆದು 10 ವರ್ಷ ಸೇವೆಯನ್ನು ಪೂರ್ಣಗೊಳಿಸಿದ್ದೇನೆ. ಇದರಿಂದ ಕಾಲಮಿತಿ ವೇತನ ಬಡ್ತಿ ಲಭ್ಯವಾಗುತ್ತದೆಯೆ? ದಯವಿಟ್ಟು ಪರಿಹಾರ ಸೂಚಿಸಿ.

| ಮಹಾಂತೇಶ ಧಾರವಾಡ

1983ರ ಕರ್ನಾಟಕ ಸರ್ಕಾರಿ ಸೇವಾ (ಕಾಲಮಿತಿ ಬಡ್ತಿ) ನಿಯಮಗಳ ನಿಯಮ 3ರ ರೀತ್ಯ ಸೇವಾವಧಿಯಲ್ಲಿ ನಿರಂತರವಾಗಿ 10 ವರ್ಷಗಳ ಕಾಲ ಯಾವುದೇ ಪದೋನ್ನತಿ ಇಲ್ಲದೆ ಸೇವೆ ಸಲ್ಲಿಸಿದ್ದರೆ ಸೇವಾವಧಿಯಲ್ಲಿ ಒಂದು ಸಲ ಮಾತ್ರ ಈ ಸೌಲಭ್ಯವನ್ನು ನೀಡಲಾಗುತ್ತದೆ. ಆದರೆ ನೀವು 24 ವರ್ಷಗಳ ಕಾಲ ಪ್ರಾಥಮಿಕ ಶಾಲಾ ಶಿಕ್ಷಕರಾಗಿ ಅಲ್ಲಿ ಕಾಲಮಿತಿ ಬಡ್ತಿ ಪಡೆದಿರುವುದರಿಂದ ಪ್ರೌಢಶಾಲಾ ಶಿಕ್ಷಕರ ಹುದ್ದೆಯನ್ನು ಈ ಹತ್ತು ವರ್ಷದ ಕಾಲಮಿತಿ ಬಡ್ತಿ ಲಭ್ಯವಾಗುವುದಿಲ್ಲ. ಹೆಚ್ಚಿನ ವಿವರಗಳಿಗೆ ಇದೇ ಲೇಖಕರ ಕರ್ನಾಟಕ ಸರ್ಕಾರಿ ಸೇವಾ ನಿಯಮಗಳು ಪುಸ್ತಕವನ್ನು ನೋಡಿ.
***

26.04.2018.
ನಾನು 1994ರಲ್ಲಿ ಬಾಹ್ಯ ಅಭ್ಯರ್ಥಿಯಾಗಿ ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಉತ್ತೀರ್ಣನಾಗಿದ್ದು ಪ್ರಸ್ತುತ ಡಿ ಗುಂಪಿನ ಹುದ್ದೆಯಲ್ಲಿ ಸೇವೆ ಸಲ್ಲಿಸುತ್ತಿದ್ದೇನೆ. ನಾನು ಪಿಯುಸಿ ಹಾಗೂ ಪದವಿಯನ್ನೂ ಬಾಹ್ಯ ಅಭ್ಯರ್ಥಿಯಾಗಿ ಪಡೆದಿರುವುದರಿಂದ ಉನ್ನತ ಹುದ್ದೆ ಪಡೆಯಲು ಅರ್ಹಳೆ? ತಿಳಿಸಿ.

| ಕೃಷ್ಣಕುಮಾರಿ ಚಿತ್ರದುರ್ಗ

1977ರ ಕರ್ನಾಟಕ ಸರ್ಕಾರಿ ಸೇವಾ (ಸಾಮಾನ್ಯ ನೇಮಕಾತಿ) ನಿಯಮಗಳ ರೀತ್ಯ ಪದೋನ್ನತಿಗೆ ಬಾಹ್ಯವಾಗಿ ಮಾಡಿದ ಎಸ್ಎಸ್ಎಲ್ಸಿ ಅಥವಾ ಪದವಿಯನ್ನು ಪದೋನ್ನತಿಗೆ ಪರಿಗಣಿಸಬಹುದೆಂದು ಸೂಚಿಸಲಾಗಿದೆ. ಆದುದರಿಂದ ನೀವು ಈ ವಿದ್ಯಾರ್ಹತೆಯೊಂದಿಗೆ ನಿಮ್ಮ ಪದೋನ್ನತಿಗೆ ಅರ್ಹರಾದ ಇಲಾಖಾ ಪರೀಕ್ಷೆಗಳಾದ ಅಕೌಂಟ್ಸ್ ಲೋಯರ್ ಅಥವಾ ಹೈಯರ್, ಕಮ್ಯೂನಿಟಿ ಡೆವಲಪ್ವೆುಂಟ್ ಭಾಗ 1 ಮತ್ತು 2, ರೆವಿನ್ಯೂ ಹೈಯರ್ ಪರೀಕ್ಷೆಗಳಲ್ಲಿ ಉತ್ತೀರ್ಣರಾಗಬೇಕು ಹಾಗೂ ನಿಮ್ಮ ಸೇವಾ ಅರ್ಹತೆ ಉತ್ತಮವಾಗಿರಬೇಕು. ಹೆಚ್ಚಿನ ವಿವರಗಳಿಗೆ ಇದೇ ಲೇಖಕರ ಕರ್ನಾಟಕ ಸರ್ಕಾರಿ ಸೇವಾ ಕಾನೂನು ಕೈಪಿಡಿ ಪುಸ್ತಕವನ್ನು ನೋಡಿ.

***

25-4-18.
ಸರ್ಕಾರಿ ನೌಕರನಾದ ನಾನು 35 ವರ್ಷ ಸೇವೆ ಸಲ್ಲಿಸಿ ನಿವೃತ್ತನಾದೆ. ಇಲಾಖೆಯ ಜೀತದ ಪಟ್ಟಿ ಸೇರಿದಂತೆ ನನ್ನ ಎಲ್ಲಾ ದಾಖಲಾತಿಗಳಲ್ಲಿ ಜನ್ಮದಿನಾಂಕ 22-7-1958 ಎಂದಿದೆ. ಆದರೆ ಸೇವಾ ಪುಸ್ತಕದಲ್ಲಿ 1-1-1956 ಎಂದಾಗಿದ್ದು, ಅದನ್ನು ಪ್ರಶ್ನಿಸಿ ಇಲಾಖಾ ಮುಖ್ಯಸ್ಥರನ್ನು ಭೇಟಿಯಾದಾಗ, ನಿಮ್ಮನ್ನು ನಿವೃತ್ತಿಗೊಳಿಸಲಾಗಿದೆ. ಮತ್ತೆ ಕೆಲಸಕ್ಕೆ ತೆಗೆದುಕೊಳ್ಳುವುದಿಲ್ಲವೆಂದು ತಿಳಿಸಿ ಕೋರ್ಟ್ಗೆ ಹೋಗಬಹುದೆಂದಿದ್ದಾರೆ. ಪರಿಹಾರ ತಿಳಿಸಿ.

| ಎಂ.ಎಫ್. ತೋರಗಲ್ ಬಾಗಲಕೋಟೆ

ಕರ್ನಾಟಕ ಸರ್ಕಾರಿ ಸೇವಾ ನಿಯಮಾವಳಿಯ ನಿಯಮ 405ರಂತೆ ದಾಖಲೆಗಳ ಸಾಕ್ಷ್ಯ ಮೇಲೆ ಪರಿಶೀಲಿಸಿ ಸರ್ಕಾರಿ ನೌಕರನ ಸೇವಾಪುಸ್ತಕದಲ್ಲಿ ಜನ್ಮದಿನಾಂಕದ ವಿವರ ನಮೂದಿಸಬೇಕು. ಪ್ರತಿವರ್ಷ ಸೇವಾ ಪುಸ್ತಕದ ಪ್ರತಿಯನ್ನು ನೌಕರನಿಗೆ ನೀಡಬೇಕು. ಅದನ್ನು ಪರಿಶೀಲಿಸಿ ನಿಯಮ 415ರಂತೆ ನೀಡಬೇಕು. ನೀವು ಸೇವಾ ದಾಖಲೆ ಗಮನಿಸದಿರುವುದು ನಿಮ್ಮ ತಪ್ಪೂ ಹೌದು. ಅಲ್ಲದೆ ಮುಂದಿನ ವರ್ಷ ನಿವೃತ್ತರಾಗುವ ಸರ್ಕಾರಿ ನೌಕರರ ವಿವರಗಳನ್ನು ಹಿಂದಿನ ವರ್ಷದ ಡಿಸೆಂಬರ್ ತಿಂಗಳಿನಲ್ಲಿ ಇಲಾಖಾ ಮುಖ್ಯಸ್ಥರು ಅಥವಾ ನೇಮಕಾತಿ ಪ್ರಾಧಿಕಾರದವರು ಪ್ರಕಟಿಸಬೇಕು. ಈ ಸಂದರ್ಭದಲ್ಲಾದರೂ ಜನ್ಮದಿನಾಂಕವನ್ನು ಪರಿಶೀಲಿಸಬೇಕಿತ್ತು. ಈ ಬಗ್ಗೆ ಇಲಾಖಾ ಮುಖ್ಯಸ್ಥರಿಗೆ ಮನವಿ ಸಲ್ಲಿಸಿ.
***
24-4-18.
ಸರ್ಕಾರಿ ನೌಕರನಾದ ನನ್ನನ್ನು 15-2-2018ರಂದು ಹಣ ದುರುಪಯೋಗ, ಕರ್ತವ್ಯ ನಿರ್ಲಕ್ಷ್ಯ ಆಧಾರದ ಮೇಲೆ ಅಮಾನತ್ತು ಮಾಡಿದ್ದಾರೆ. ನಾನು ಮುಂದಿನ ತಿಂಗಳು ನಡೆಯುವ ವಿಧಾನಸಭಾ ಚುನಾವಣೆಗೆ ಸ್ಪರ್ಧಿಸಿದ್ದು ಸದರಿ ಸರ್ಕಾರಿ ಹುದ್ದೆಗೆ ರಾಜೀನಾಮೆ ಸಲ್ಲಿಸಿದಾಗ ಶಿಸ್ತು ಪ್ರಾಧಿಕಾರಿಯವರು ತಿರಸ್ಕರಿಸಿದ್ದಾರೆ. ಇದು ಸರಿಯೆ?

ಮಂಜುನಾಥ್ ಗೌಡ ಮಂಡ್ಯ

ಕರ್ನಾಟಕ ಸರ್ಕಾರಿ ಸೇವಾ ನಿಯಮಾವಳಿ ನಿಯಮ 250ರ ಪ್ರಕಾರ; ವಿಚಾರಣೆ ಪೂರ್ತಿಯಾದ ಬಳಿಕ ಸಂಪೂರ್ಣ ದೋಷಮುಕ್ತನಾದರೆ ಅಥವಾ ಆ ಅಮಾನತ್ತುಗಳು ಸಂಪೂರ್ಣ ನ್ಯಾಯಪರಿಗಣಿತವಾದರೆ ಹಾಗೂ ಸರ್ಕಾರಿ ನೌಕರನ ಮೇಲಿರುವ ದೋಷಾರೋಪವು ಗಂಭೀರ ಸ್ವರೂಪವಾಗಿದ್ದರೆ – ಇಲಾಖಾ ವಿಚಾರಣೆಯಿಂದಾಗಿ ಅವನನ್ನು ಸೇವೆಯಿಂದ ವಜಾ ಮಾಡುವ ದಂಡನೆಗೆ ಒಳಗಾಗಬಹುದಾದರೆ ಅಂಥ ರಾಜೀನಾಮೆಯನ್ನು ಅಂಗೀಕರಿಸಬಾರದೆಂದು 3-4-1990 ಸರ್ಕಾರದ ಅಧಿಕೃತ ಜ್ಞಾಪನ ಸಂಖ್ಯೆ ಡಿಪಿಆರ್20ಎಸ್ಡಿಇ86ರ ಖಂಡಿಕೆ1(ಬಿ)(2) ರಂತೆ ತಿಳಿಸಲಾಗಿದೆ. ನಿಮ್ಮ ವಿರುದ್ಧದ ಗಂಭೀರ ಆರೋಪದಿಂದ ಮುಕ್ತರಾದರೆ ನಿಮ್ಮ ರಾಜೀನಾಮೆ ಶಿಸ್ತು ಪ್ರಾಧಿಕಾರಿಯಿಂದ ಅಂಗೀಕಾರವಾಗುತ್ತದೆ.
***

23-4-18

ಒಬ್ಬ ಮಹಿಳಾ ಸರ್ಕಾರಿ ನೌಕರರಿಗೆ ಮಾತೃತ್ವ ರಜೆಯನ್ನು ಹೆರಿಗೆ ದಿನದಿಂದ ಮಂಜೂರು ಮಾಡಬೇಕೇ ಅಥವಾ ನೌಕರರು ಮನವಿ ಪತ್ರದಲ್ಲಿ ಸಲ್ಲಿಸಿದ ದಿನಾಂಕವನ್ನು ನಮೂದಿಸಿದ ದಿನದಿಂದ ಮಂಜೂರು ಮಾಡಬೇಕೆ? ಪರಿಹಾರ ಸೂಚಿಸಿ.

| ಮಮತಾ ಮಲ್ಲಾಪುರ ಬೆಳಗಾವಿ

ಕರ್ನಾಟಕ ಸರ್ಕಾರಿ ಸೇವಾನಿಯಮಾವಳಿಯ ನಿಯಮ 135ರಡಿಯಲ್ಲಿ ಮಹಿಳಾ ಸರ್ಕಾರಿ ನೌಕರರಿಗೆ ಸಕ್ಷಮ ಅಧಿಕಾರಿಯು ಹೆರಿಗೆ ರಜೆಯನ್ನು ಆರಂಭ ದಿನಾಂಕದಿಂದ 180 ದಿನಗಳವರೆಗೆ ಮಂಜೂರು ಮಾಡಬಹುದು. ಈ ರಜೆಯು ಸರ್ಕಾರಿ ನೌಕರರು ಪ್ರಸವಪೂರ್ವದಲ್ಲಿ ಸಲ್ಲಿಸಿದ ದಿನಾಂಕದಿಂದಲೇ ಮಂಜೂರು ಮಾಡಬಹುದಾಗಿದೆ. ಹೆಚ್ಚಿನ ವಿವರಗಳಿಗೆ ಇದೇ ಲೇಖಕರ ಕರ್ನಾಟಕ ಸರ್ಕಾರಿ ಸೇವಾ ನಿಯಮಗಳು ಪುಸ್ತಕವನ್ನು ನೋಡಿ.

***

22-4-18.
ನಾನು ಸರ್ಕಾರಿ ನೌಕರನಾಗಿದ್ದು, ಗದಗ ಜಿಲ್ಲೆಯಿಂದ ಬೆಂಗಳೂರಿಗೆ ನಿಯೋಜನೆ ಮೇರೆಗೆ ಕೆಲಸ ಮಾಡುತ್ತಿದ್ದು ನನಗೆ ಯಾವ ಮನೆ ಬಾಡಿಗೆ ಭತ್ಯೆ ಸಾಧ್ಯವಾಗುತ್ತದೆ?

|ಸಿದ್ಧನಗೌಡ ಪಾಟೀಲ, ಬೆಂಗಳೂರು

ಕರ್ನಾಟಕ ಸರ್ಕಾರಿ ಸೇವಾ ನಿಯಮಾವಳಿಯ ನಿಯಮ 74ರ ಮೇರೆಗೆ ಸರ್ಕಾರಿ ನೌಕರನು ವಿಶೇಷ ಕರ್ತವ್ಯ ನಿರತನಾದರೆ ಅಥವಾ ಪ್ರತಿ ನಿಯೋಜಿತನಾದರೆ ಈ ಮನೆ ಬಾಡಿಗೆ ಭತ್ಯೆಯನ್ನು ಅವನು ಎಲ್ಲೇ ವಾಸವಾಗಿರಲಿ ಅವನು ನಿಯೋಜಿತ ಸ್ಥಳದ ಮನೆ ಬಾಡಿಗೆ ಭತ್ಯೆಗೆ ಅರ್ಹನಾಗುತ್ತಾನೆ. ದಿನಾಂಕ 19-10-2013ರ ಸರ್ಕಾರಿ ಆದೇಶಸಂಖ್ಯೆ ಎಫ್ಡಿ18ಎಸ್ಆರ್ಪಿ2012ರ ಮೇರೆಗೂ ಸಹ ಅವನು ಕರ್ತವ್ಯ ನಿರ್ವಹಿಸುವ ಸ್ಥಳದ ಮನೆ ಬಾಡಿಗೆ ಭತ್ಯೆಗೆ ಅರ್ಹನಾಗುತ್ತಾನೆಂದು ತಿಳಿಸಲಾಗಿದೆ. ಆದುದರಿಂದ ನೀವು ಬೆಂಗಳೂರಿನ ಮನೆ ಬಾಡಿಗೆ ಭತ್ಯೆ ಪಡೆಯಲು ಅರ್ಹರಾಗಿರುತ್ತೀರಿ. ಈ ಬಗ್ಗೆ ಮನವಿ ಸಲ್ಲಿಸಬಹುದು. ಹೆಚ್ಚಿನ ವಿವರಗಳಿಗೆ ಇದೇ ಲೇಖಕರ ಕರ್ನಾಟಕ ಸರ್ಕಾರಿ ಸೇವಾ ನಿಯಮಗಳು ಪುಸ್ತಕ ನೋಡಿ.
***

21-4-18

ನಾನು 2007ರ ರಾಜ್ಯ ಸರ್ಕಾರಿ ಸೇವೆಗೆ ಸೇರಿದ್ದು, ನಾನು ಹೊಸ ಪಿಂಚಣಿ ಪದ್ಧತಿಗೆ ಒಳಪಡುತ್ತೇನೆಂದು ಪ್ರತಿ ತಿಂಗಳು ನನ್ನ ವೇತನದಿಂದ ಹಣ ಕಟಾವು ಮಾಡುತ್ತಿದ್ದೇನೆ. ನಾನು ಹೊಸ ಪಿಂಚಣಿ ಯೋಜನೆಗೆ ಒಳಪಡುತ್ತೇನೆಯೇ?

| ಮಾಜೀದಮಿಯ್ಯಾಂ ಕಲಬುರಗಿ

ದಿನಾಂಕ 31-3-2006ರ ಸರ್ಕಾರಿ ಆದೇಶ ಸಂಖ್ಯೆ ಎಫ್ಡಿ (ಸ್ಪೆಷಲ್04 ಪಿಇಟಿ2005ರ ನಡುವೆ 1-4-2006)ರ ನಂತರ ಸರ್ಕಾರಿ ಸೇವೆಗೆ ಸೇರುವ ಪ್ರತಿಯೊಬ್ಬ ಸರ್ಕಾರಿ ನೌಕರನು ಹೊಸದಾಗಿ ವ್ಯಾಖ್ಯಾನಿಸಿದ ಅಂಶದಾಯಿ ನಿವೃತ್ತಿ ವೇತನ ಯೋಜನೆಗೆ ಒಳಪಡುತ್ತಾನೆಂದು ತಿಳಿಸಲಾಗಿದೆ. ಆದುದರಿಂದ ನೀವು ನೂತನ ಪಿಂಚಣಿ ಯೋಜನೆಗೆ ಒಳಪಡುವುದರಿಂದ ಮಾಸಿಕವಾಗಿ ಶೇಕಡ 10ರಷ್ಟು ವೇತನದಿಂದ ಮತ್ತು ತುಟ್ಟಿ ಭತ್ಯೆಯಿಂದ ಕಟಾವು ಮಾಡುತ್ತಿರುವುದು ಸರಿಯಾಗಿರುತ್ತದೆ. ಹೆಚ್ಚಿನ ವಿವರಗಳಿಗೆ ಇದೇ ಲೇಖಕರ ಕರ್ನಾಟಕ ಸರ್ಕಾರಿ ಸೇವಾ ನಿಯಮಗಳು ಪುಸ್ತಕ ನೋಡಿ.

***

20-4-18.
ನಾನು 1997ರ ಫೆಬ್ರವರಿಯಲ್ಲಿ ಪ್ರಾಥಮಿಕ ಶಾಲಾ ಶಿಕ್ಷಕನಾಗಿ ಸೇರಿದ್ದು ದಿನಾಂಕ 16-6-2016ರಿಂದ 31-8-2016ರವರೆಗೆ ವೈದ್ಯಕೀಯ ಆಧಾರದ ಮೇಲೆ ವೇತನ ರಜೆಯನ್ನು ಮಂಜೂರು ಮಾಡಲಾಗಿದೆ. ಆದರೆ ನನ್ನ ವೇತನವನ್ನು ಮೇ ತಿಂಗಳಿಗೆ ಬದಲಾಗಿ ಜುಲೈ ತಿಂಗಳಿಗೆ ನಿಗದಿ ಪಡಿಸಿರುತ್ತಾರೆ. ಇದು ಸರಿಯಾದ ಕ್ರಮವೇ ?

| ಎನ್.ಎಚ್. ಕಲಬುರಗಿ ಬಾಗಲಕೋಟೆ

ಕರ್ನಾಟಕ ಸರ್ಕಾರಿ ಸೇವಾ ನಿಯಮಾವಳಿಯ ನಿಯಮ 116ರ ಮೇರೆಗೆ ವೇತನ ರಹಿತ ರಜೆಯನ್ನು ವೈದ್ಯಕೀಯ ಆಧಾರದ ಮೇರೆಗೆ ಮಂಜೂರು ಮಾಡಿದ್ದರೆ ನಿಯಮ 53(ಬಿ) (2)ರಂತೆ, ಅವನ ವಾರ್ಷಿಕ ವೇತನ ಬಡ್ತಿಯನ್ನು ಮುಂದೂಡತಕ್ಕದ್ದಲ್ಲವೆಂದು ತಿಳಿಸಲಾಗಿದೆ. ಹೀಗಾಗಿದ್ದರೂ ನಿಮ್ಮ ವಾರ್ಷಿಕ ವೇತನ ಬಡ್ತಿಯನ್ನು ಪ್ರತಿ ತಿಂಗಳೂ ಮೇ ತಿಂಗಳಿನಲ್ಲಿಯೇ ದೊರಕುವಂತೆ ಹಿಂದೂಡಬೇಕಾಗುತ್ತದೆ. ಹೆಚ್ಚಿನ ವಿವರಗಳಿಗೆ ಇದೇ ಲೇಖಕರ ಕರ್ನಾಟಕ ಸರ್ಕಾರಿ ಸೇವಾ ನಿಯಮಗಳು ಪುಸ್ತಕವನ್ನು ನೋಡಿ.
***
19.04.2018.
ನಾನು ನ್ಯಾಯಾಂಗ ಇಲಾಖೆಯಲ್ಲಿ ದ್ವಿತೀಯ ದರ್ಜೆ ಸಹಾಯಕನಾಗಿ ಕೆಲಸ ಮಾಡುತ್ತಿದ್ದು ನಾನು ಬೇರೆ ಹುದ್ದೆಗೆ ಸಲ್ಲಿಸಲು ನೇಮಕಾತಿ ಪ್ರಾಧಿಕಾರಗಳು ನಿರಾಕ್ಷೇಪಣಾ ಪತ್ರಗಳನ್ನು ನೀಡಲು ನಿರಾಕರಿಸುತ್ತಿದ್ದಾರೆ. ಇದರಿಂದ ನಾನು ಬೇರೆ ಹುದ್ದೆಗೆ ಸಲ್ಲಿಸಲು ಕ್ಲಿಷ್ಟಕರವಾಗುತ್ತದೆ. ಸೂಕ್ತ ಪರಿಹಾರ ಸೂಚಿಸಿ.

| ರಮೇಶ್ ಕುಮಾರ್ ತುಮಕೂರು

ಕರ್ನಾಟಕ ಸರ್ಕಾರಿ ಸೇವಾ (ಸಾಮಾನ್ಯ ನೇಮಕಾತಿ) ನಿಯಮಾವಳಿಯ ನಿಯಮ 11ರ ಮೇರೆಗೆ ಸರ್ಕಾರಿ ನೌಕರನು ಬೇರೊಂದು ಹುದ್ದೆಗೆ ಅರ್ಜಿ ಸಲ್ಲಿಸಬೇಕಾದರೆ ಅವನು ನಿರಾಕ್ಷೇಪಣಾ ಪತ್ರವನ್ನು ಪಡೆದು ಸಲ್ಲಿಸಬೇಕಾಗುತ್ತದೆ. ಇಲ್ಲದೆ ಹೋದರೆ ಅಂತಹ ನೌಕರನು ಶಿಸ್ತು ಕ್ರಮಕ್ಕೆ ಒಳಗಾಗುತ್ತಾನೆ. ಹೆಚ್ಚಿನ ವಿವರಗಳಿಗೆ ಇದೇ ಲೇಖಕರ ಕರ್ನಾಟಕ ಸರ್ಕಾರಿ ಸೇವಾ ಕಾನೂನು ಕೈಪಿಡಿಯನ್ನು ನೋಡಿ.

***

18-4-18.

ನಾನು ಪ್ರಥಮದರ್ಜೆ ಸಹಾಯಕಳಾಗಿದ್ದು, ಪತಿ ಪೊಲೀಸ್ ಪೇದೆ. ವಸತಿಗೃಹಕ್ಕಾಗಿ ಅರ್ಜಿ ಸಲ್ಲಿಸಿದಾಗ, ‘ನಿಮ್ಮ ಪತ್ನಿಯೂ ಸರ್ಕಾರಿ ನೌಕರಳಾಗಿದ್ದರಿಂದ ಇಬ್ಬರ ವೇತನದಲ್ಲೂ ಮನೆ ಬಾಡಿಗೆ ಕಡಿತಗೊಳಿಸಲಾಗುವುದು ಎಂದಿದ್ದಾರೆ. ದಯಮಾಡಿ ನಾವು ವಸತಿಗೃಹ ಪಡೆಯುವ ಬಗೆಯನ್ನು ತಿಳಿಸಿ.

| ಪರಿಮಳ ವಗ್ಗರ ರಾವೂರ, ಕಲಬುರಗಿ

ಸರ್ಕಾರಿ ನಿವಾಸಿಗಳಾಗಿ ಬಳಸಲು ಸರ್ಕಾರಿ ಕಟ್ಟಡಗಳ ಹಂಚಿಕೆ ಮತ್ತು ಲೈಸೆನ್ಸ್ ಶುಲ್ಕ ವಿಧಿಸುವಿಕೆ ಮತ್ತು ನಿಯಮಗಳು 2002ರ ನಿಯಮ 10ರ ಮೇರೆಗೆ ಪತಿ-ಪತ್ನಿ ಇಬ್ಬರೂ ಸರ್ಕಾರಿ ನೌಕರರಾಗಿದ್ದು ಅವರಿಗೆ ಸರ್ಕಾರಿ ನೌಕರಗೃಹ ಹಂಚಿಕೆಯಾದರೆ ಅಂಥ ದಂಪತಿಗಳ ಮನೆಬಾಡಿಗೆ ಭತ್ಯೆಯನ್ನು ಕಡಿತಗೊಳಿಸಲು ಸೂಚಿಸಲಾಗಿದೆ. ಆದುದರಿಂದ ನೀವು ಈ ಸರ್ಕಾರಿ ವಸತಿ ಗೃಹ ಪಡೆಯುವ ಮುನ್ನ ಮತ್ತೊಮ್ಮೆ ಪರ್ಯಾಲೋಚಿಸಬೇಕು. ಹೆಚ್ಚಿನ ವಿವರಗಳಿಗೆ ಇದೇ ಲೇಖಕರ ಕರ್ನಾಟಕ ಸರ್ಕಾರಿ ಸೇವಾ ನಿಯಮಗಳು ಪುಸ್ತಕವನ್ನು ನೋಡಬಹುದು.

***

17-4-18.

ಉನ್ನತ ವ್ಯಾಸಂಗ ಮಾಡುತ್ತಿರುವ ಸರ್ಕಾರಿ ನೌಕರಿ ಲಭ್ಯವಾದರೆ ಉನ್ನತ ಶಿಕ್ಷಣವನ್ನು ಮುಂದುವರಿಸಲು ನಿಯಮಾವಳಿಯಲ್ಲಿ ಅವಕಾಶಗಳಿದೆಯೆ? ಪರಿಹಾರ ಸೂಚಿಸಿ.

| ಬಿ.ಎನ್. ಶ್ರೀಕಂಠಮೂರ್ತಿ ಶಿವಮೊಗ್ಗ

ಉನ್ನತ ವ್ಯಾಸಂಗ ಮಾಡುತ್ತಿರುವ ವ್ಯಕ್ತಿಗೆ ಸರ್ಕಾರಿ ನೌಕರಿ ಲಭ್ಯವಾದರೆ ತಕ್ಷಣವೇ ಉನ್ನತ ವ್ಯಾಸಂಗ ಮುಗಿಸಲು ಅವಕಾಶವಿಲ್ಲ. ಆದರೆ ಸರ್ಕಾರಿ ಆದೇಶ ಸಂಖ್ಯೆ ಜಿಎಡಿ4ಎಸ್ಆರ್ಎಸ್73 ದಿನಾಂಕ 5-2-1973ರ ಮೇರೆಗೆ ಬಾಹ್ಯವಾಗಿ ವ್ಯಾಸಂಗ ಮಾಡಲು ಸರ್ಕಾರಿ ನೌಕರರಿಗೆ ಅನುಮತಿ ನೀಡಬಹುದೆಂದು ಸೂಚಿಸಲಾಗಿದೆ. ಆದರೆ ಈ ರೀತಿ ಬಾಹ್ಯ ಮತ್ತು ಅಂಚೆ ತೆರಪಿನ ವ್ಯಾಸಂಗ ಮಾಡಲು ಇಚ್ಛಿಸಿರುವ ನೌಕರನು ಸಂಪರ್ಕ ಕಾರ್ಯಕ್ರಮದ ಕಾರಣಗಳನ್ನು ನೀಡಿ ರಜಾ ಮಂಜೂರಾತಿ ಕೋರಿಕೆ ಸಲ್ಲಿಸಿದಾಗ ಸಕ್ಷಮ ಪ್ರಾಧಿಕಾರಗಳು ಅಂತಹ ಮನವಿಯನ್ನು ಪರಿಶೀಲಿಸಿ ಅಧಿಕೃತ ಕೆಲಸಕಾರ್ಯಗಳಿಗೆ ತೊಂದರೆಯಾಗದಂತೆ ಅನುಮತಿ ನೀಡಬಹುದು.

****

16-4-18.
ನಾನು ಪೊಲೀಸ್ ಪೇದೆಯಾಗಿ ಕೆಲಸ ಮಾಡುತ್ತಿದ್ದೇನೆ. ಇತ್ತೀಚೆಗೆ ಜನ್ಮವಿತ್ತ ಗಂಡುಮಗು 15 ದಿನ ಬದುಕಿ ಸತ್ತುಹೋಯಿತು. 180 ದಿನಗಳ ಕಾಲ ಹೆರಿಗೆ ರಜೆ ಮಂಜೂರು ಮಾಡುವಂತೆ ಮೇಲಧಿಕಾರಿಗಳಿಗೆ ಕೋರಿದಾಗ, ಮಗು ಬದುಕಿಲ್ಲದ ಕಾರಣ 45 ದಿನಗಳ ಗರ್ಭಸ್ರಾವದ ಪ್ರಯುಕ್ತ ರಜೆ ನೀಡಲಾಗುವುದು ಎಂದಿದ್ದಾರೆ. ಇದು ಸರಿಯೆ?

| ಇಂದ್ರಾಣಿ ಚಿಕ್ಕಬಳ್ಳಾಪುರ

ಕರ್ನಾಟಕ ಸರ್ಕಾರಿ ಸೇವಾ ನಿಯಮಾವಳಿಯ ನಿಯಮ 135ರ ಮೇರೆಗೆ ಮಹಿಳಾ ಸರ್ಕಾರಿ ನೌಕರಳಿಗೆ ಎರಡು ಜೀವಂತ ಮಗು ಹೊಂದುವವರೆಗೆ 180 ದಿನಗಳ ಕಾಲ ಹೆರಿಗೆ ರಜೆ ಮಂಜೂರು ಮಾಡಬಹುದೆಂದು ಸೂಚಿಸಲಾಗಿದೆ. ನಿಮ್ಮ ಮಗು ಜನಿಸಿ 15 ದಿನ ಬದುಕಿ ಸತ್ತುಹೋಗಿರುವುದರಿಂದ ಬಾಣಂತಿಯ ಆರೈಕೆಗಾಗಿ 180 ದಿನಗಳ ಕಾಲ ಹೆರಿಗೆ ರಜೆ ಮಂಜೂರು ಮಾಡಬೇಕಾಗುತ್ತದೆ. ನಿಯಮ 135(2)ರ ಪ್ರಕಾರ ಮಗುವು ಗರ್ಭದಲ್ಲೇ 26 ವಾರಗಳಿಗಿಂತ ಮುಂಚಿತವಾಗಿ ನಿಧನವಾದ ಸಂದರ್ಭದಲ್ಲಿ ಗರ್ಭಪಾತ ರಜೆ ಮಂಜೂರು ಮಾಡಬಹುದು.
***
15-4-18
ನಾನು ಅನುಕಂಪದ ಆಧಾರದ ಮೇಲೆ 24-3-1994ರಲ್ಲಿ ನೌಕರಿ ಪಡೆದಿದ್ದೇನೆ. 2019ರ ಫೆಬ್ರವರಿಯಲ್ಲಿ ವಯೋನಿವೃತ್ತಿ ಹೊಂದಲಿದ್ದೇನೆ. ಕೆಲಸಕ್ಕೆ ಸೇರಿದಾಗ ನನ್ನ ವಯಸ್ಸು 35 ವರ್ಷ 5 ತಿಂಗಳು. ನನಗೆ ಅರ್ಹತಾದಾಯಕ ಸೇವೆ ಒಟ್ಟು 24 ವರ್ಷ 7 ತಿಂಗಳು. ಕರ್ನಾಟಕ ನಾಗರಿಕ ಸೇವಾ ನಿಯಮಾವಳಿಗಳ ಸೆಕ್ಷನ್ 247 ಕಾಲಂ ಅನ್ವಯ ಎರಡು ವರ್ಷಗಳು ಹೆಚ್ಚಿಗೆ ಪಿಂಚಣಿ ಅರ್ಹತಾಸೇವೆಯನ್ನು ಸೇರಿಸುವ ಅವಕಾಶದ ಬಗ್ಗೆ ಸೂಕ್ತ ಮಾಹಿತಿ ನೀಡಿ.

| ಎಂ.ಡಿ. ರಮೇಶ್ ಹಾಸನ

ನೀವು ಕರ್ನಾಟಕ ಸರ್ಕಾರಿ ಸೇವಾ ನಿಯಮಾವಳಿಯ ನಿಯಮ 247 ಬಿ ಪ್ರಕಾರ 30 ವರ್ಷಗಳ ನಂತರ ಸೇವೆಗೆ ಸೇರಿದ್ದರೆ ಎರಡು ವರ್ಷಗಳ ಕಾಲ ಪಿಂಚಣಿ ಸೌಲಭ್ಯದ ಅರ್ಹತಾದಾಯಕ ಸೇವೆಗೆ ಸೇರಿಸಲಾಗುತ್ತದೆ. ಈ ಬಗ್ಗೆ ನಿಮ್ಮ ನೇಮಕಾತಿ ಪ್ರಾಧಿಕಾರಕ್ಕೆ ಮನವಿ ಸಲ್ಲಿಸಬೇಕು. ಹೆಚ್ಚಿನ ವಿವರಗಳಿಗೆ ಇದೇ ಲೇಖಕರ ಕರ್ನಾಟಕ ಸರ್ಕಾರಿ ಸೇವಾ ನಿಯಮಗಳು ಪುಸ್ತಕವನ್ನು ನೋಡಬಹುದು.
***

14-4-18.

28ನೇ ಫೆಬ್ರುವರಿ 2001ರಲ್ಲಿ ವಯೋನಿವೃತ್ತಿ ಹೊಂದಿದ್ದೇನೆ. ನನಗೆ ದೊರಕಬೇಕಾದ ಕಾಲನಿಗದಿತ ಬಡ್ತಿ ವೇತನ / ಸ್ಥಗಿತ ವೇತನ ಬಡ್ತಿ ವೇತನ / ಸ್ವಯಂಚಾಲಿತ ಬಡ್ತಿ ವೇತನ ಪ್ರಸ್ತಾವನೆಗಳನ್ನು ಜಂಟಿ ಕೃಷಿ ನಿರ್ದೇಶಕರು ಕೃಷಿ ಆಯುಕ್ತರಿಗೆ ಕಳುಹಿಸಿದ್ದಾರೆ. ಆದರೆ ಸದರಿಯವರಿಂದ ಈವರೆಗೂ ಆವಶ್ಯಕ ಮಂಜೂರಾತಿ ದೊರೆತಿಲ್ಲ. ಇದಕ್ಕೆ ನಿರ್ದಿಷ್ಟ ಕಾಲನಿರ್ಬಂಧ ಇಲ್ಲವೆ?

ಆರ್.ಎಸ್. ಕಲ್ಮಠ ಶ್ರೀಶಕ್ತಿನಗರ, ಧಾರವಾಡ

ಕರ್ನಾಟಕ ಸರ್ಕಾರಿ ಸೇವಾ ನಿಯಮಾವಳಿ ರೀತ್ಯ ನೀವು ನಿವೃತ್ತಿ ಹೊಂದಿ 17 ವರ್ಷಗಳಾದರೂ ನಿಮ್ಮ ವೇತನ ಬಡ್ತಿಗಳು ಮಂಜೂರಾಗದೆ ಇರುವುದು ವಿಷಾದಕರ ಸಂಗತಿ. ಆದರೆ ನೀವು ಅಗತ್ಯ ಇಲಾಖಾ ಪರೀಕ್ಷೆ ಅಥವಾ ಇನ್ಯಾವುದಾದರೂ ಕಾರಣದಿಂದ ಈ ಆರ್ಥಿಕ ಸೌಲಭ್ಯಗಳನ್ನು ತಡೆಹಿಡಿಯುತ್ತಿದ್ದರೆ ಅದಕ್ಕೆ ಮೇಲ್ಮನವಿ ಸಲ್ಲಿಸಬಹುದು. ಈ ಬಗ್ಗೆ ಆವಶ್ಯಕವಾದ ಮಂಜೂರಾತಿ ನೀಡಲು ನೀವು ಸರ್ಕಾರಕ್ಕೆ ಮನವಿ ಮಾಡಬಹುದು. ಹೆಚ್ಚಿನ ವಿವರಗಳಿಗೆ ಇದೇ ಲೇಖಕರ ಕರ್ನಾಟಕ ಸರ್ಕಾರಿ ಸೇವಾ ನಿಯಮಗಳು ಪುಸ್ತಕ ನೋಡಬಹುದು.

***

13-4-18.
ಫಾರ್ಮಸಿಸ್ಟ್ ಆಗಿ 1981ರಲ್ಲಿ ಕೆಲಸಕ್ಕೆ ಸೇರಿದೆ. 2016ರಲ್ಲಿ ವೇತನಶ್ರೇಣಿ ರೂ. 20000-36300 ಅಡಿಯಲ್ಲಿ ಹಿರಿಯ ಫಾರ್ಮಸಿಸ್ಟ್ ಹುದ್ದೆಗೆ ಪದೋನ್ನತಿ ಸಿಕ್ಕಿದೆ. 25 ಮತ್ತು 30 ವರ್ಷಗಳ ಕಾಲಬದ್ಧ ಪದೋನ್ನತಿ ವೇತನವನ್ನು ಕಾರಣಾಂತರಗಳಿಂದ ಪಡೆದಿಲ್ಲ. ಆಗಸ್ಟ್ 2015ರಲ್ಲಿ ವೇತನ ಶ್ರೇಣಿ ರೂ. 17650-32000ದಲ್ಲಿ ಮೂಲವೇತನ ರೂ. 32000/- + ರೂ. 3200ಗಳನ್ನು ರೂ. 800 /- ದರದಂತೆ ನಾಲ್ಕು ಸ್ಟಾಗ್ನೇಷನ್, ಒಟ್ಟು ರೂ. 35200/- ಮೂಲ ವೇತನ ಪಡೆದಿದ್ದೇನೆ. ಪ್ರಸ್ತುತ ಮೂಲ ವೇತನ ರೂ. 35200 ಪಡೆಯುತ್ತಿದ್ದು ನನ್ನ ಪದೋನ್ನತಿಯನ್ನು ಅಫಿಷಿಯೇಟಿಂಗ್ ಮಾಡಿಲ್ಲ. ನಾನು ರೂ. 21600-40050 ವೇತನಶ್ರೇಣಿಗೆ ಅರ್ಹನೆ, ಅಥವಾ ಅಫಿಷಿಯೇಟಿಂಗ್ ಹೊಂದುವ ಬಗ್ಗೆ ತಿಳಿಸಿ.

ಕೆ.ಎಂ.ವಿಶ್ವನಾಥ್ ಬೆಂಗಳೂರು

ನೀವು ಯಾವ ಕಾರಣದಿಂದ 25 ಮತ್ತು 30 ವರ್ಷಗಳ ಹೆಚ್ಚುವರಿ ವೇತನ ಪಡೆದಿಲ್ಲ ಎಂದು ಸ್ಪಷ್ಟವಾಗಬೇಕು. ನಾಲ್ಕು ಸ್ಥಗಿತ ವೇತನ ಪಡೆದ ನಿಮ್ಮನ್ನು ಪದೋನ್ನತಿಗೊಳಿಸಿ ಅಫಿಷಿಯೇಟಿಂಗ್ ಮಾಡದ ಕಾರಣ ಈ ಬಗ್ಗೆ ನಿಮ್ಮ ನೇಮಕಾತಿ ಪ್ರಾಧಿಕಾರಕ್ಕೆ ಮನವಿಯನ್ನು ಸಲ್ಲಿಸಿ ವೇತನ ನಿಗದಿ ಮಾಡಬಹುದು.
***

12-4-18.
ಇಲಾಖಾ ಮುಖ್ಯಸ್ಥರು ಅಥವಾ ಶಿಸ್ತು ಪ್ರಾಧಿಕಾರಿಗಳು ಇಲಾಖಾ ವಿಚಾರಣೆ ನಡೆಸಿ ವಿಧಿಸುವ ದಂಡನಾದೇಶದ ವಿರುದ್ಧ ಮೇಲ್ಮನವಿ ಪ್ರಾಧಿಕಾರಕ್ಕೆ ಸಲ್ಲಿಸುವ ಮೇಲ್ಮನವಿ ಪ್ರಕರಣಗಳನ್ನು ಇತ್ಯರ್ಥಗೊಳಿಸಲು ಸರ್ಕಾರವು ಕಾಲಮಿತಿ ನಿಗದಿಪಡಿಸಿದೆಯೆ? ನಿಗದಿಪಡಿಸಿದ್ದರೆ ಈ ಕುರಿತ ಮಾಹಿತಿ ಹಾಗೂ ಇದಕ್ಕೆ ಸಂಬಂಧಿಸಿದಂತೆ ಸರ್ಕಾರದಿಂದ ಹೊರಡಿಸಲಾದ ಸರ್ಕಾರದ ಆದೇಶ / ನಡಾವಳಿ / ಸುತ್ತೋಲೆಯ ವಿವರಗಳನ್ನು ನೀಡಿ.

ಗಿರಿಧರ, ಬೆಂಗಳೂರು

ಕರ್ನಾಟಕ ಸರ್ಕಾರಿ ಸೇವಾ (ಸಿಸಿಎ) ನಿಯಮಾವಳಿ 1957ರ ಮೇರೆಗೆ ಯಾವುದಾದರೂ ದಂಡನಾದೇಶ ವಿಧಿಸಿದರೆ ಮೇಲ್ಮನವಿ ಪ್ರಾಧಿಕಾರವು ಆರು ತಿಂಗಳೊಳಗಾಗಿ ಇತ್ಯರ್ಥಗೊಳಿಸಲು ನಿಗದಿಪಡಿಸಲಾಗಿದೆ. ಅಲ್ಲದೆ ಈ ಬಗ್ಗೆ ಈಗಾಗಲೇ ಸರ್ಕಾರಿ ಆದೇಶ ಇದ್ದು ಕರ್ನಾಟಕ ಸವೋಚ್ಚ ನ್ಯಾಯಾಲಯವೂ ಈಮೇಲ್ಮನವಿಯನ್ನು ಆರು ತಿಂಗಳೊಳಗಾಗಿ ಕ್ರಮ ಕೈಗೊಳ್ಳಬೇಕೆಂದು ಸೂಚಿಸಿದೆ.
***
11-4-18.
ನಾನು 20-7-1994ರಿಂದ ಪ್ರಾಥಮಿಕ ಶಾಲಾ ಸಹಶಿಕ್ಷಕನಾಗಿ ಸೇವೆ ಸಲ್ಲಿಸುತ್ತಿದ್ದು 20-4-2018ಕ್ಕೆ ಸ್ವಯಂ ನಿವೃತ್ತಿ ಬಯಸಿರುತ್ತೇನೆ. ನನ್ನ ಈಗಿನ ಮೂಲ ವೇತನ ರೂ. 23400 ನಾನು ವಿ.ಆರ್.ಎಸ್. ಕೊಟ್ಟರೆ ಹೆಚ್ಚುವರಿ ಸೇವಾಧಿಕ್ಯ ಎಷ್ಟು ಸೇರುತ್ತದೆ? ಮಾಸಿಕ ಪಿಂಚಣಿ, ಡಿ.ಸಿ.ಆರ್.ಜಿ. ಮತ್ತು ಕಮ್ಯುಟೇಷನ್ (ನಿವೃತ್ತಿ ವೇತನದ ಪರಿವರ್ತನಾ ಮೊಬಲಗು) ಎಷ್ಟು ದೊರಕುತ್ತದೆ?

ಟಿ.ಎಫ್. ಮಾದರ ಧಾರವಾಡ

ನೀವು ಕರ್ನಾಟಕ ಸರ್ಕಾರಿ ಸೇವಾ ನಿಯಮಾವಳಿಯ ನಿಯಮ 285(1) ಮತ್ತು (2)ರ ಮೇರೆಗೆ ಸ್ವಯಂನಿವೃತ್ತಿ ಹೊಂದಲು ಮೂರು ತಿಂಗಳು ಮುಂಚಿತವಾಗಿ ನೇಮಕಾತಿ ಪ್ರಾಧಿಕಾರಕ್ಕೆ ನೋಟಿಸ್ ನೀಡಬೇಕಾಗುತ್ತದೆ. ಈ ನಿಯಮಾವಳಿ ರೀತ್ಯ ಐದು ವರ್ಷಗಳ ಕಾಲ ಸೇವಾಧಿಕ್ಯ ಲಭ್ಯ. ಮೂಲ ವೇತನ ರೂ. 23,400 ಆಗಿರುವುದರಿಂದ ನಿಮಗೆ ಕಾಲ್ಪನಿಕ ವೇತನ ನಿಗದಿಯಾಗದು. ಆದರೆ 2018ರ ನೂತನ ವೇತನ ಶ್ರೇಣಿಯಂತೆ ನಿಮ್ಮ ವೇತನವು 45,300 ಆಗಬಹುದು. ಇದಕ್ಕನುಗುಣವಾಗಿ ನಿಮ್ಮ ಮಾಸಿಕ ಪಿಂಚಣಿ ಮತ್ತು ನಿವೃತ್ತಿ ಉಪದಾನವನ್ನು ಕಮ್ಯುಟೇಷನ್ ನಿಯಮಾನುಸಾರ ಲೆಕ್ಕ ಹಾಕಿ ನೀಡಲಾಗುತ್ತದೆ.
***
10-4-18.
ನನ್ನ ಬಂಧುವೊಬ್ಬರು ಚಿಕ್ಕಮಗಳೂರು ಜಿಲ್ಲೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯಲ್ಲಿ 11-8-2014ರಿಂದ ದ್ವಿತೀಯ ದರ್ಜೆ ಲೆಕ್ಕ ಸಹಾಯಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಇಲಾಖೆಯಿಂದ ನಿರಾಕ್ಷೇಪಣಾ ಪ್ರಮಾಣ ಪತ್ರ ಪಡೆದು, ಅದೇ ಇಲಾಖೆಯಲ್ಲಿ 1-3-2018ರಂದು ಪಂಚಾಯತಿ ಅಭಿವೃದ್ಧಿ ಅಧಿಕಾರಿಯಾಗಿ ಆಯ್ಕೆಯಾಗಿದ್ದಾರೆ. ಈಗ ಅವರು ದ್ವಿತೀಯ ದರ್ಜೆ ಲೆಕ್ಕ ಸಹಾಯಕ ಹುದ್ದೆಯಿಂದ ಹೇಗೆ ಬಿಡುಗಡೆಗೊಳ್ಳಬೇಕು ಮತ್ತು ಪಂಚಾಯತಿ ಅಭಿವೃದ್ಧಿ ಅಧಿಕಾರಿ ಹುದ್ದೆಯ ಕರ್ತವ್ಯಕ್ಕೆ ಹೇಗೆ ವರದಿ ಮಾಡಿಕೊಳ್ಳಬೇಕು?

| ಎಸ್. ವಿ. ನಾಗರಾಜ ಚಿಕ್ಕಮಗಳೂರು

ಕರ್ನಾಟಕ ಸರ್ಕಾರಿ ಸೇವಾ ನಿಯಮಾವಳಿಯ ನಿಯಮ 252 ಬಿ ಪ್ರಕಾರ ಪ್ರಸ್ತುತ ಇರುವ ದ್ವಿತೀಯ ದರ್ಜೆ ಲೆಕ್ಕ ಸಹಾಯಕರ ಹುದ್ದೆಯಿಂದ ಕಾರ್ಯ ವಿಮುಕ್ತಿಗೊಂಡು ಪಂಚಾಯತಿ ಅಭಿವೃದ್ಧಿ ಅಧಿಕಾರಿ ಹುದ್ದೆಗೆ ಹಾಜರಾಗಬೇಕು. ಇಲಾಖೆ ಒಂದೇ ಆಗಿರುವುದರಿಂದ ನೇಮಕಾತಿ ಪ್ರಾಧಿಕಾರ ಬೇರೆ ಬೇರೆಯಾಗಿದ್ದರೆ ಇಂಥ ಕ್ರಮ ವಹಿಸಬೇಕು. ಆದರೆ ಕರ್ನಾಟಕ ಸರ್ಕಾರಿ ಸೇವಾ ನಿಯಮಾವಳಿಯ ನಿಯಮ 76(6)ರ ಮೂಲಕ ನೇಮಕವಾದರೆ ಅವರಿಗೆ ಸೇರಿಕೆ ಕಾಲ ಲಭ್ಯವಾಗುತ್ತದೆ. ಮತ್ತು ಇದೇ ರೀತಿ ಸೇವಾನಿರತ ಸರ್ಕಾರಿ ನೌಕರರ ವರ್ಗಾವಣೆಯಂತೆ ಕರ್ತವ್ಯದಿಂದ ಬಿಡುಗಡೆ ಹೊಂದಬೇಕಾಗುತ್ತದೆ.
***

9-4-18.

ನನ್ನ ಹೆಂಡತಿ ಸರೋಜಬಾಯಿಯವರಿಗೆ ಫ್ಯಾಮಿಲಿ ಪೆನ್ಷನ್ ಬರುತ್ತಿತ್ತು. ಆಕೆ 2011ರ ಆಗಸ್ಟ್ 14ರಂದು ಮರಣ ಹೊಂದಿದರು. ನನ್ನ ಅಣ್ಣ-ತಮ್ಮ ಎಲ್ಲರೂ ತೀರಿಕೊಂಡಿದ್ದಾರೆ. ನಾನು ಬದುಕಿರುವಾಗಲೇ ನನ್ನ ಕುಟುಂಬ ಪಿಂಚಣಿ ಹಣವನ್ನು ಅಂಗವಿಕಲೆಯಾದ ಮಗಳ ಹೆಸರಿಗೆ ವರ್ಗಾವಣೆ ಮಾಡಬೇಕು. ಇದಕ್ಕೆ ಯಾವ ಕ್ರಮ ವಹಿಸಬೇಕು ?

| ಎಂ. ರಾಘವೇಂದ್ರ ರಾವ್ ಹೊಸಪೇಟೆ, ಬಳ್ಳಾರಿ

ಕರ್ನಾಟಕ ಸರ್ಕಾರಿ ಸೇವಾ (ಕುಟುಂಬ ಪಿಂಚಣಿ) ನಿಯಮಗಳು 9 ಡಿ (1) ರ ಪ್ರಕಾರ ಅಂಗವಿಕಲ ಮಕ್ಕಳಿಗೆ ಕುಟುಂಬ ಪಿಂಚಣಿ ನೀಡಲು ನೀವು ನಮೂನೆ ಇ ಯಲ್ಲಿ ಅರ್ಜಿಯನ್ನು ನಿಮ್ಮ ನೇಮಕಾತಿ ಪ್ರಾಧಿಕಾರದ ಮೂಲಕ ಮಹಾಲೇಖಪಾಲಕರಿಗೆ ಕಳುಹಿಸಿಕೊಡಬೇಕು. ಅವರು ಅಧಿಕೃತ ದೃಢತೆ ಪತ್ರ ನೀಡಿದ ಮೇಲೆ ನಿಮ್ಮ ನಿಧನದ ನಂತರ ನಿಮ್ಮ ಮಗಳಿಗೆ ‘ಕುಟುಂಬ ಪಿಂಚಣಿ’ ಲಭ್ಯವಾಗುತ್ತದೆ. ಹೆಚ್ಚಿನ ವಿವರಗಳಿಗೆ ಇದೇ ಲೇಖಕರ ಕರ್ನಾಟಕ ಸರ್ಕಾರಿ ಸೇವಾ ನಿಯಮಗಳು ಪುಸ್ತಕವನ್ನು ನೋಡಬಹುದು.

8-4-18.
ನನಗೆ 2001ರ ಜನಗಣತಿ ಕಾರ್ಯದಲ್ಲಿ ಅಪ್ರತಿಮ ಕಾರ್ಯಕೌಶಲಕ್ಕಾಗಿ ರಾಷ್ಟ್ರಪತಿಗಳ ಬೆಳ್ಳಿ ಪದಕ ಪುರಸ್ಕಾರ ಲಭಿಸಿದೆ. ನನಗೆ ಲಭಿಸಿರುವ ಈ ಪುರಸ್ಕಾರದ ಕಾರಣಕ್ಕೆ ನಾನು ಕರ್ನಾಟಕ ನಾಗರಿಕ ಸೇವಾ ನಿಯಮಾವಳಿಯಂತೆ ಒಂದು ಹೆಚ್ಚುವರಿ ವೇತನ ಮುಂಬಡ್ತಿಗೆ ಅರ್ಹಳಾಗಿರುವೆನಾ? ಯಾವುದೇ ಸರ್ಕಾರಿ ಆದೇಶ ಈ ಪ್ರಕರಣಕ್ಕೆ ಅನ್ವಯವಾಗುವುದಾ?

| ನಾಗರತ್ನ ಎಂ.ಎಸ್. ಜಕ್ಕಸಂದ್ರ, ಬೆಂಗಳೂರು

ಕರ್ನಾಟಕ ಸರ್ಕಾರಿ ಸೇವಾ ನಿಯಮಾವಳಿಯ ನಿಯಮ 51ರಂತೆ ಈ ರೀತಿಯ ಸಾಧನೆಗೆ ಯಾವುದೇ ಹೆಚ್ಚುವರಿ ವೇತನ ಮಂಜೂರು ಮಾಡಲು ಅವಕಾಶವಿಲ್ಲ. ಆದರೆ ಇಂತಹ ಸಾಧನೆಯ ಬಗ್ಗೆ ನಿಮ್ಮ ನೇಮಕಾತಿ ಪ್ರಾಧಿಕಾರದ ಮೂಲಕ ಪ್ರಸ್ತಾವನೆಯನ್ನು ಕಳುಹಿಸಿ, ಉತ್ತೇಜನ ಪಡೆಯಬಹುದಾಗಿದೆ. ಹೆಚ್ಚಿನ ವಿವರಗಳಿಗೆ ಇದೇ ಲೇಖಕರ ಕರ್ನಾಟಕ ಸರ್ಕಾರಿ ಸೇವಾ ನಿಯಮಗಳು ಪುಸ್ತಕವನ್ನು ನೋಡಬಹುದು.
***
7-4-18.
ಸರ್ಕಾರಿ ನೌಕರರಾಗಿದ್ದ ನಮ್ಮ ತಂದೆ 1996ರಲ್ಲಿ ನಿವೃತ್ತರಾದರು. ತಾಯಿ 2009ರಲ್ಲಿ ನಿಧನರಾದರು. ತಂದೆ 12-2-2018ರಂದು ನಿಧನರಾದರು. ನಾವು ಒಟ್ಟು ಐದು ಜನ ಮಕ್ಕಳು. ಅದರಲ್ಲಿ ಮೂರು ಹೆಣ್ಣು, ಎರಡು ಗಂಡು. ಇವರಲ್ಲಿ ಒಂದು ಗಂಡು ಒಂದು ಹೆಣ್ಣುಮಕ್ಕಳು ಬುದ್ಧಿಮಾಂದ್ಯರು. ಅವರಿಬ್ಬಗೂ ಸರ್ಕಾರದ ಪಿಂಚಣಿ ಪಡೆಯಲು ಬರುವುದೇ ಎಂದು ತಿಳಿಸಿ.

| ಎಚ್.ಎ. ಮುಜುವಾರ್, ತಿಕೋಟಾ, ವಿಜಯಪುರ

ಕರ್ನಾಟಕ ಸರ್ಕಾರಿ ಸೇವಾ (ಕುಟುಂಬ ನಿವೃತ್ತಿವೇತನ) ನಿಯಮಗಳು 2002ರ 9 ಡಬ್ಲ್ಯು (1) (4)ರ ಮೇರೆಗೆ ಈ ರೀತಿ ಬುದ್ಧಿಮಾಂದ್ಯ ಮಕ್ಕಳಿಗೆ ಜೀವಮಾನಪರ್ಯಂತ ಈ ಕುಟುಂಬ ಪಿಂಚಣಿ ಪಡೆಯಲು ಅರ್ಹರಾಗುತ್ತಾರೆ. ಈ ನಿಯಮಾನುಸಾರ ಸಂಬಂಧಿಸಿದ ನೇಮಕಾತಿ ಪ್ರಾಧಿಕಾರದ ಮೂಲಕ ನಮೂನೆ ‘ಇ’ಯಲ್ಲಿ ಅರ್ಜಿ ಸಲ್ಲಿಸಿದರೆ ಕುಟುಂಬ ಪಿಂಚಣಿ ಸೌಲಭ್ಯ ಮಂಜೂರು ಮಾಡಲು ಅವಕಾಶವಿದೆ. ಹೆಚ್ಚಿನ ವಿವರಗಳಿಗೆ ಇದೇ ಲೇಖಕರ ಕರ್ನಾಟಕ ಸರ್ಕಾರಿ ಸೇವಾ ನಿಯಮಗಳು ಪುಸ್ತಕವನ್ನು ನೋಡಿ.

***

6-4-18.

ಪ್ರಸ್ತುತ ಸರ್ಕಾರದಿಂದ ಅನುದಾನಿತ ಪ್ರೌಢಶಾಲೆಯಲ್ಲಿ ಶಿಕ್ಷಕನಾಗಿ ಕಾರ್ಯನಿರ್ವಹಿಸುತ್ತಿದ್ದು ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಲು ಇಚ್ಛಿಸಿದ್ದೇನೆ. ನಾನು ಚುನಾವಣೆಗೆ ನಿಂತು ಜಯಶಾಲಿಯಾದರೆ ನಂತರ ಈಗಿನ ಹುದ್ದೆಗೆ ರಾಜೀನಾಮೆ ನೀಡಬಹುದೆ?

| ಬಿ.ಎಸ್. ಪಾಟೀಲ್ ರಾಯಚೂರು.

ಸರ್ಕಾರದ ಅನುದಾನಿತ ಪ್ರೌಢಶಾಲೆಯಲ್ಲಿ ಕೆಲಸ ಮಾಡುತ್ತಿರುವುದರಿಂದ ನೀವು ನೇರವಾಗಿ ಚುನಾವಣೆಗೆ ಸ್ಪರ್ಧಿಸುವಂತಿಲ್ಲ. ಕರ್ನಾಟಕ ಸರ್ಕಾರಿ ಸೇವಾ (ನಡತೆ) ನಿಯಮಗಳು ನಿಯಮ 5(1)ರಂತೆ ಸರ್ಕಾರಿ ನೌಕರನು ಚುನಾವಣೆಯಲ್ಲಿ ಸ್ಪರ್ಧಿಸಬಾರದೆಂದು ಸೂಚಿಸಲಾಗಿದೆ. ಅಲ್ಲದೆ ಭಾರತ ಸಂವಿಧಾನದ ಅನುಚ್ಛೇದ 191(1)(ಎ) ಪ್ರಕಾರ ಲಾಭದಾಯಕ ಹುದ್ದೆ ಹೊಂದಿರುವ ವ್ಯಕ್ತಿ ವಿಧಾನಸಭೆ ಅಥವಾ ಪರಿಷತ್ತಿನ ಸದಸ್ಯನಾಗಿ ಆಯ್ಕೆಯಾಗಲು ಅನರ್ಹ ಎಂದು; ಜಾವೇದ್ ವರ್ಸಸ್ ಹರ್ಯಾಣ ರಾಜ್ಯ ಪ್ರಕರಣದಲ್ಲಿ ಸವೋಚ್ಚ ನ್ಯಾಯಾಲಯವು ಸೂಚಿಸಿದೆ. ನೀವು ಸ್ವಯಂನಿವೃತ್ತಿ ಅಥವಾ ನಿಮ್ಮ ಹುದ್ದೆಗೆ ರಾಜೀನಾಮೆ ಸಲ್ಲಿಸಿ ಚುನಾವಣೆಗೆ ಸ್ಪರ್ಧಿಸಬಹುದು.

***

5-4-2018.

ಪ್ರಥಮ ದರ್ಜೆ ಸಹಾಯಕಳಾಗಿ ಕಾರ್ಯನಿರ್ವಹಿಸುತ್ತಿರುವ ನಾನು ಎರಡು ಜೀವಂತ ಮಕ್ಕಳ ನಂತರ ಸಂತಾನಶಕ್ತಿಹರಣ ಶಸ್ತ್ರಚಿಕಿತ್ಸೆ ಮಾಡಿಸಿಕೊಂಡಿದ್ದು, ವಿಶೇಷ ವೇತನಕ್ಕಾಗಿ ಅರ್ಜಿ ಸಲ್ಲಿಸಿದ್ದೇನೆ. ಪೊಲೀಸ್ ಪೇದೆಯಾಗಿರುವ ನನ್ನ ಪತಿ ವಿಶೇಷ ವೇತನ ಪಡೆಯಲು ಅರ್ಹರೆ?

| ಪರಿಮಳ ವಗ್ಗರ ಕಲಬುರಗಿ

1-10-1985ರ ಸರ್ಕಾರಿ ಆದೇಶ ಸಂಖ್ಯೆ ಎಫ್ಡಿ 27ಎಸ್ಆರ್ಎಸ್85 ಸರ್ಕಾರಿ ನೌಕರ/ನೌಕರಳು ಸಣ್ಣ ಕುಟುಂಬ ಯೋಜನೆ ಅನುಸರಿಸಿದರೆ ಶಸ್ತ್ರಚಿಕಿತ್ಸೆಗೆ ಒಳಪಡುವ ದಿನಾಂಕದಂದು ಅವರ ವೇತನಶ್ರೇಣಿಯಲ್ಲಿ ಪಡೆಯುತ್ತಿದ್ದ ವೇತನ ಬಡ್ತಿಯಷ್ಟು ವಿಶೇಷ ವೇತನವನ್ನು ಉತ್ತೇಜನಕರವಾಗಿ ನೀಡಬಹುದೆಂದು ಸೂಚಿಸಲಾಗಿದೆ. 12-6-1986ರ ಸರ್ಕಾರದ ಅಧಿಕೃತ ಜ್ಞಾಪನ ಸಂಖ್ಯೆ ಎಫ್ಡಿ27ಎಸ್ಆರ್ಎಸ್85ರ ಮೇರೆಗೆ ಪತಿ ಮತ್ತು ಪತ್ನಿ ಇಬ್ಬರೂ ಸರ್ಕಾರಿ ನೌಕರರಾಗಿದ್ದಲ್ಲಿ ವೈಯಕ್ತಿಕ ವೇತನ ರೂಪದಲ್ಲಿರುವ ಮುಂಬಡ್ತಿಯನ್ನು ಪತಿ ಅಥವಾ ಪತ್ನಿ ಇಬ್ಬರಲ್ಲಿ ಒಬ್ಬರು ಪಡೆಯಬಹುದೇ ಹೊರತು ಇಬ್ಬರೂ ಅಲ್ಲ. ಅವರಿಬ್ಬರಿಗೆ ದೊರೆಯುತ್ತಿರುವ ವಾರ್ಷಿಕ ವೇತನ ಬಡ್ತಿಯಲ್ಲಿ ಯಾವುದು ಹೆಚ್ಚಾಗಿದೆಯೋ ಅದನ್ನು ಆಯ್ಕೆ ಮಾಡಿಕೊಳ್ಳಲು ಅಭ್ಯಂತರವಿಲ್ಲವೆಂದು ತಿಳಿಸಲಾಗಿದೆ.

***

4-4-18.

ನಾನು ಕಳೆದ ಎಂಟು ತಿಂಗಳುಗಳಿಂದ ಪದವಿಪೂರ್ವ ಶಿಕ್ಷಣ ಇಲಾಖೆಯಲ್ಲಿ ಪ್ರಥಮ ದರ್ಜೆ ಸಹಾಯಕನಾಗಿ ಕಾರ್ಯನಿರ್ವಹಿಸುತ್ತಿದ್ದೇನೆ. ಈ ಮೊದಲು ಕರ್ನಾಟಕ ಉಚ್ಚ ನ್ಯಾಯಾಲಯದಲ್ಲಿ ದ್ವಿತೀಯ ದರ್ಜೆ ಸಹಾಯಕನಾಗಿ ಒಂದು ವರ್ಷ ಆರು ತಿಂಗಳು ಸೇವೆ ಸಲ್ಲಿಸಿರುವೆ. ಕರ್ನಾಟಕ ಉಚ್ಚನ್ಯಾಯಾಲಯದಲ್ಲಿ ದ್ವಿತೀಯ ದರ್ಜೆ ಸಹಾಯಕ ಹುದ್ದೆಗೆ ಅರ್ಜಿ ಸಲ್ಲಿಸಿ ಆಯ್ಕೆಗೊಂಡು ಪದವಿ ಪೂರ್ವ ಶಿಕ್ಷಣ ಇಲಾಖೆಗೆ ನೇಮಕಗೊಂಡಿದ್ದೇನೆ.

| ಶರಣಬಸವ ರಾಯಚೂರು

ನೀವು ಕರ್ನಾಟಕ ಸರ್ಕಾರಿ ಸೇವಾ ನಿಯಮಾವಳಿಯ ನಿಯಮ 20ರ ಮೇರೆಗೆ ಕರ್ನಾಟಕ ಉಚ್ಚ ನ್ಯಾಯಾಲಯದಿಂದ ವಿಮುಕ್ತಿಗೊಳ್ಳುವ ಮೊದಲು ನಿಮ್ಮ ಹುದ್ದೆಯ ಹಕ್ಕನ್ನು ಕಾಯ್ದಿರಿಸಿಕೊಳ್ಳಬೇಕೆಂದು ವಿನಂತಿಸಿ 252 ಬಿ ಪ್ರಕಾರ ಬಿಡುಗಡೆಗೊಂಡಿದ್ದರೆ ನೀವು ಪುನಃ ಪದವಿಪೂರ್ವ ಶಿಕ್ಷಣ ಇಲಾಖೆಯಿಂದ ಉಚ್ಛ ನ್ಯಾಯಾಲಯಕ್ಕೆ ಹೋಗಬಹುದು. ಈ ಬಗ್ಗೆ ನೀವು ಉಚ್ಚ ನ್ಯಾಯಾಲಯಕ್ಕೆ ಮನವಿಯನ್ನು ಕೂಡ ಸಲ್ಲಿಸಬಹುದು. ಹೆಚ್ಚಿನ ವಿವರಗಳಿಗೆ ಇದೇ ಲೇಖಕರ ಕರ್ನಾಟಕ ಸರ್ಕಾರಿ ಸೇವಾ ನಿಯಮಗಳು ಪುಸ್ತಕ ನೋಡಬಹುದು.

***

2-4-18.
1-4-2016ರಂದು ಬೆರಳಚ್ಚುಗಾರ ಹುದ್ದೆಯಿಂದ ಶೀಘ್ರಲಿಪಿಗಾರ ಹುದ್ದೆಗೆ ಪದೋನ್ನತಿ ಹೊಂದಿದೆ. ಬೆರಳಚ್ಚುಗಾರ ಹುದ್ದೆಯಲ್ಲಿ ಪಡೆಯುತ್ತಿದ್ದ ವೇತನಶ್ರೇಣಿಯಲ್ಲಿ ವೇತನ ಮತ್ತು ನಂತರದ ವೇತನ ಶ್ರೇಣಿ 14550-26700ಕ್ಕೆ ಶೇ. 7.5ರಂತೆ ರೂ. 1091/- ಪಡೆಯುತ್ತಿದ್ದೇನೆ. ಆದರೆ ಶೀಘ್ರಲಿಪಿಗಾರರಿಗೆ ನೀಡುವ ವಿಶೇಷ ಭತ್ಯ ರೂ. 135/-ನ್ನು ನೀಡುತ್ತಿಲ್ಲ. ಪ್ರಸಕ್ತ ನನಗೆ ಶೀಘ್ರಲಿಪಿಗಾರರಿಗೆ ನೀಡುವ ವಿಶೇಷ ಭತ್ಯೆ ಪಡೆಯಲು ಅವಕಾಶವಿದೆಯೇ?

| ವಿ.ಸಿ. ಕದಂಬ ಹೊಳೇನರಸಿಪುರ, ಹಾಸನ

ನೀವು ಶೀಘ್ರಲಿಪಿಗಾರರಾಗಿ ನಿಯಮ 32ರಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವುದರಿಂದ ನಿಯಮ 68ರಂತೆ ಶೇಕಡ 7.5ರಷ್ಟು ಶೀಘ್ರಲಿಪಿಗಾರರ ಹುದ್ದೆಯ ಕನಿಷ್ಠ ವೇತನದ ಅನುಪಾತಕ್ಕನುಗುಣವಾಗಿ ಪ್ರಭಾರ ಭತ್ಯೆಯನ್ನು ಪಡೆಯಬಹುದು. ಅಲ್ಲದೆ ನೀವು ಶೀಘ್ರಲಿಪಿಗಾರರ ಕೆಲಸವನ್ನೇ ನಿರ್ವಹಿಸುವುದರಿಂದ ನೀವು ಈ ವಿಶೇಷ ಭತ್ಯೆ ರೂ. 135ಗಳನ್ನೂ ಸಹ ಪಡೆಯಬಹುದಾಗಿದೆ. ಹೆಚ್ಚಿನ ವಿವರಗಳಿಗೆ ಇದೇ ಲೇಖಕರ ಕರ್ನಾಟಕ ಸರ್ಕಾರಿ ಸೇವಾ ನಿಯಮಗಳು ಪುಸ್ತಕವನ್ನು ನೋಡಬಹುದು.
***
3-4-18.
ಕಳೆದ 25 ವರ್ಷಗಳಿಂದ ಸಹಕಾರ ಸಂಸ್ಥೆಯಲ್ಲಿ ಖಾಯಂ ನೌಕರನಾಗಿದ್ದು 30-1-2019ಕ್ಕೆ ನಿವೃತ್ತಿ ಹೊಂದಲಿದ್ದೇನೆ. ಈ ಮಧ್ಯೆ 30-2-2017ರಿಂದ 30-2-2019ರ ವರೆಗೆ ಎರಡು ವರ್ಷ ಬಡ್ತಿಯನ್ನು ಕರ್ತವ್ಯಲೋಪವೆಂದು ವಿಚಾರಣೆ ನಡೆಸಿ, ಆರೋಪಿಯನ್ನಾಗಿ ಮಾಡಿ ಸಂಚಿತ / ಹೆಚ್ಚುವರಿ ಪರಿಣಾಮವಾಗಿ ವೇತನದಲ್ಲಿ ತಡೆಹಿಡಿಯಲಾಗಿದೆ. 2018ರ ಮಾರ್ಚ್ಗೆ ಮುಂಬಡ್ತಿಗೆ ಅವಕಾಶವಿದ್ದು, ಸಲಹೆ ನೀಡಿ.

| ಶಿವಕುಮಾರ್ ಬೆಂಗಳೂರು

ನೀವು ಕರ್ನಾಟಕ ಸಹಕಾರ ಸಂಘಗಳ ಅಧಿನಿಯಮ ಮತ್ತು ನಿಯಮ 60ರ ಮೇರೆಗೆ ಸಹಕಾರ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದು ನಿಮ್ಮ ಎರಡು ವಾರ್ಷಿಕ ವೇತನ ಬಡ್ತಿಯನ್ನು ಕರ್ತವ್ಯ ಲೋಪದ ನಿಮಿತ್ತ ತಡೆಹಿಡಿದಿರುವುದರಿಂದ 2018ರ ಮಾರ್ಚಿಯಲ್ಲಿ ನಿಮಗೆ ಲಭ್ಯವಾಗಬಹುದಾದ ಮುಂಬಡ್ತಿಯೂ ಸಹ ನಿಯಮಾನುಸಾರ ತಡೆಹಿಡಿಯಲಾಗುತ್ತದೆ. ಆದುದರಿಂದ ನೀವು ನಿಮಗೆ ವಿಧಿಸಿದ ದಂಡನೆಯಿಂದ ಮುಕ್ತರಾಗಲು ಮೇಲ್ಮನವಿಯನ್ನುಸಲ್ಲಿಸಿ ಈ ಪದೋನ್ನತಿಯನ್ನು ಪಡೆಯಬಹುದು. ಹೆಚ್ಚಿನ ವಿವರಗಳಿಗೆ ಇದೇ ಲೇಖಕರ ಕರ್ನಾಟಕ ಸಹಕಾರ ಸಂಘಗಳ ಅಧಿನಿಯಮ 1959 ಮತ್ತು ನಿಯಮಗಳು 1960 ಪುಸ್ತಕವನ್ನು ನೋಡಬಹುದು.
***

1-4-18.
ನನ್ನ ತಂಗಿ ಸರ್ಕಾರಿ ಪ್ರಾಥಮಿಕ ಶಾಲಾ ಶಿಕ್ಷಕಿಯಾಗಿದ್ದು, ಅವಳ ಮೇಲೆ ಅದೇ ಶಾಲೆಯ ಶಿಕ್ಷಕನಿಂದ ಲೈಂಗಿಕ ಕಿರುಕುಳ ಮತ್ತು ದೌರ್ಜನ್ಯ ನಡೆದಿದೆ. ಆತ್ಮಹತ್ಯೆ ಯತ್ನದಿಂದ ಎಫ್ಐಆರ್ ಕೂಡ ದಾಖಲಾಗಿದೆ. ಲೈಂಗಿಕ ಕಿರುಕುಳ ಮತ್ತು ದೌರ್ಜನ್ಯ ಪ್ರಕರಣದಲ್ಲಿ ಬಿಇಓ ಅವರಿಗೆ ಈ ಶಿಕ್ಷಕರನ್ನು ಅಮಾನತ್ತು ಮಾಡುವ ಅಧಿಕಾರ ಇರುವುದಿಲ್ಲವೆ? ಈ ಪ್ರಕರಣಕ್ಕೆ 14(1) (2) ನಿಯಮ ಅನ್ವಯಿಸುವುದಿಲ್ಲವೆ?

| ಹೆಸರು ಬೇಡ, ಊರು ಬೇಡ

ಕೆಲಸದ ಸ್ಥಳದಲ್ಲಿ ಮಹಿಳಾ ಸರ್ಕಾರಿ ನೌಕರರಿಗೆ ಲೈಂಗಿಕ ಕಿರುಕುಳ ನೀಡಿದರೆ ಅಂತಹ ನೌಕರನ ಮೇಲೆ ಭಾರತ ದಂಡಸಂಹಿತೆಯ ಮೇರೆಗೆ ಕ್ರಮ ಕೈಗೊಳ್ಳಬಹುದು. ಈ ಬಗ್ಗೆ ಆ ಮಹಿಳಾ ನೌಕರಳು ಹತ್ತಿರದ ಪೊಲೀಸ್ ಠಾಣೆಗೆ ದೂರು ನೀಡಬೇಕಾಗುತ್ತದೆ. ಆ ಸಂದರ್ಭದಲ್ಲಿ ಪೊಲೀಸರು ಅಂಥ ಸಹೋದ್ಯೋಗಿ ನೌಕರರನ್ನು ಬಂಧನಕ್ಕೊಳಪಡಿಸಿ ಎಫ್ಐಆರ್ ದಾಖಲಿಸಿದರೆ ಬಿಇಓ ಅವರು ಕೂಡಲೆ ಅಮಾನತ್ತು ಮಾಡುವ ಅಧಿಕಾರವಿರುತ್ತದೆ. ಆದುದರಿಂದ ನಿಮ್ಮ ತಂಗಿಯು ಈ ಬಗ್ಗೆ ಕೂಡಲೇ ದೂರನ್ನು ಸಲ್ಲಿಸಬಹುದು ಹಾಗೂ ಇಲಾಖಾ ಸಮಿತಿಗೆ ಆಂತರಿಕ ವಿಚಾರಣಾ ಸಹ ದೂರನ್ನು ನೀಡಿದರೆ ಅಂಥ ನೌಕರರನ್ನು ತಕ್ಷಣವೇ ಅಮಾನತ್ತುಗೊಳಿಸುವ ಅಧಿಕಾರ ಶಿಸ್ತು ಪ್ರಾಧಿಕಾರಕ್ಕಿದೆ.

****

31-3-18.

ನಾನು ರಾಜ್ಯ ಸರ್ಕಾರಿ ‘ಡಿ’ ಗ್ರೂಪ್ ನೌಕರಳಾಗಿದ್ದು, ನನ್ನ ವಾರ್ಷಿಕ ವೇತನಬಡ್ತಿ 1-3-2009 ಇದೆ. ನನಗೆ ವೈದ್ಯಕೀಯ ಆಧಾರದ ಮೇಲೆ 1-4-2008ರಿಂದ 3-2-2011ರವರೆಗೆ 1049 ದಿವಸಗಳಿಗೆ ವೇತನರಹಿತ ರಜೆಯನ್ನು ಮಂಜೂರಾಗಿದೆ. ಮೇಲೆ ತಿಳಿಸಿದ ದಿವಸಗಳಿಗೆ ನನ್ನ ವಾರ್ಷಿಕ ವೇತನಬಡ್ತಿ ಮುಂದೂಡಬಹುದೆ ಅಥವಾ ವಾರ್ಷಿಕ ವೇತನಬಡ್ತಿಯು ಮೊದಲೇ ನಿಗದಿಪಡಿಸಿದ ದಿನಾಂಕ 1-3-2009ರಂದು ಮಂಜೂರು ಮಾಡಬಹುದೆ?

-ಶ್ರೀದೇವಿ ಕಲಬುರಗಿ

ಕರ್ನಾಟಕ ಸರ್ಕಾರಿ ಸೇವಾ ನಿಯಮಾವಳಿಯ ನಿಯಮ 53(ಬಿ)(2)ವೈದ್ಯಕೀಯ ಪ್ರಮಾಣ ಪತ್ರದ ಮೇರೆಗೆ ತೆಗೆದುಕೊಂಡ ಅಸಾಧಾರಣ ರಜೆಯ ಸಂದರ್ಭದಲ್ಲಿ ಸರ್ಕಾರಿ ನೌಕರನ ವಾರ್ಷಿಕ ವೇತನಬಡ್ತಿಯನ್ನು ಮುಂದೂಡುವಂತಿಲ್ಲ. ಆದುದರಿಂದ ನೀವು 1-3-2009ರಂತೆ ಈ ವಾರ್ಷಿಕ ವೇತನ ಬಡ್ತಿಯನ್ನು ಮಂಜೂರು ಮಾಡಿಸಿಕೊಳ್ಳಬಹುದು. ಹೆಚ್ಚಿನ ವಿವರಗಳಿಗೆ ಇದೇ ಲೇಖಕರು ಬರೆದಿರುವ ಕರ್ನಾಟಕ ಸರ್ಕಾರಿ ಸೇವಾ ನಿಯಮಗಳು ಪುಸ್ತಕವನ್ನು ನೋಡಬಹುದು.

30-3-18.

ಸಹಾಯಕ ಹುದ್ದೆಯಲ್ಲಿನ ನನ್ನ ಸೇವೆಯನ್ನು 6-8-1990ರ ಸರ್ಕಾರಿ ಆದೇಶದ ಮೇರೆಗೆ 1-1-1990ರಿಂದ ಪೂರ್ವಾನ್ವಯವಾಗಿ ಜಾರಿಗೆ ಬರುವಂತೆ ಸಕ್ರಮ ಸೇವೆಯಲ್ಲಿ ವಿಲೀನ ಮಾಡಿದ್ದಾರೆ. ಯಾವುದೇ ಪದೋನ್ನತಿ ಪಡೆಯದೆ ಸೇವೆ ಸಲ್ಲಿಸಿದ್ದರೂ, ನಿಗದಿತ ಇಲಾಖಾ ಪರೀಕ್ಷೆಗಳಲ್ಲಿ ನಾನು ಉತ್ತೀರ್ಣನಾಗದ್ದರಿಂದ; ಹೆಚ್ಚುವರಿ ವೇತನ ಬಡ್ತಿ ಮಂಜೂರು ಮಾಡಲು ಬರದೆಂದಿದ್ದಾರೆ. ಮಾಹಿತಿ ನೀಡಿ.

-ಕೃಷ್ಣಕುಮಾರ ಕಲಬುರಗಿ

1991ರ ಕರ್ನಾಟಕ ಸರ್ಕಾರಿ ಸೇವಾ ಹಿರಿಯ ವೇತನ ಶ್ರೇಣಿಗೆ ಸ್ವಯಂಚಾಲಿತ ಪದೋನ್ನತಿ ನಿಯಮಾವಳಿ ಹಾಗೂ 20, 25, 30 ವರ್ಷಗಳ ಸೇವಾವಧಿಗೆ ಒಂದು ಹೆಚ್ಚುವರಿ ವೇತನ ಬಡ್ತಿ ಆದೇಶಗಳಲ್ಲಿ ಸರ್ಕಾರಿ ನೌಕರನು 1974ರ ಕರ್ನಾಟಕ ಸರ್ಕಾರಿ ಸೇವಾ (ಕನ್ನಡ ಭಾಷೆ ಮತ್ತು ಇಲಾಖಾ ಪರೀಕ್ಷೆಗಳು) ನಿಯಮಾವಳಿ ರೀತ್ಯ ಪದೋನ್ನತಿಗೆ ಅರ್ಹವಾಗುವ ವಿದ್ಯಾರ್ಹತೆ ಹೊಂದಿದ್ದರೆ ಮಾತ್ರ ಅಂತಹ ನೌಕರರಿಗೆ ಈ ಆರ್ಥಿಕ ಸೌಲಭ್ಯಗಳನ್ನು ನೀಡಲಾಗುತ್ತದೆ. ನಿಮ್ಮ ಹುದ್ದೆಯ ಪದನಾಮವು ಸಿ ಗುಂಪಿನದಾಗಿದ್ದರೆ ಅದಕ್ಕೆ ಈ ಇಲಾಖಾ ಪರೀಕ್ಷೆ ಕಡ್ಡಾಯ. ಆದರೆ 45ನೇ ವಯಸ್ಸಿನ ನಂತರ ಈ ಪರೀಕ್ಷೆ ತೇರ್ಗಡೆಯಾಗದಿದ್ದರೂ ವಾರ್ಷಿಕ ವೇತನ ಬಡ್ತಿ ಪಡೆಯಬಹುದು.

***

29-3-18.

ನನ್ನ ಪತ್ನಿ ಮತ್ತು ನಾನು ಇಬ್ಬರೂ ಸರ್ಕಾರಿ ನೌಕರರು. ನಾನು ಈಗಾಗಲೇ ಎರಡು ಬಾರಿ ಪಿತೃತ್ವದ ರಜೆಯನ್ನು ಪಡೆದಿರುತ್ತೇನೆ. ಆದರೆ ನನ್ನ ಎರಡನೇ ಮಗುವು ಅಕಾಲಿಕವಾಗಿ ಮರಣ ಹೊಂದಿದ್ದು, ಮೂರನೇ ಮಗುವಿಗೆ ಈ ಪಿತೃತ್ವದ ರಜೆಯನ್ನು ಪಡೆಯಬಹುದೆ? ಸೂಕ್ತ ಉತ್ತರ ನೀಡಿ.

| ವಿಜಯಶಂಕರ್ ಧಾರವಾಡ

ಕರ್ನಾಟಕ ಸರ್ಕಾರಿ ಸೇವಾ ನಿಯಮಾವಳಿಯ ನಿಯಮ 135(ಸಿ) ಪ್ರಕಾರ ಪುರುಷ ಸರ್ಕಾರಿ ನೌಕರರಿಗೆ ಅವನ ಪತ್ನಿಯ ಆರೈಕೆ ಸಲುವಾಗಿ ಎರಡು ಜೀವಂತ ಮಗು ಇರುವವರೆಗೂ ಈ ಪಿತೃತ್ವದ ರಜೆಯನ್ನು ಪಡೆಯಬಹುದು. ಆದುದರಿಂದ ಮೂರನೇ ಮಗುವಿಗೆ ಈ ಪಿತೃತ್ವದ ರಜೆಯನ್ನು ಅದು ಜನಿಸಿದ ದಿನಾಂಕದಿಂದ 15 ದಿವಸಗಳ ಕಾಲ ಪಡೆಯಬಹುದಾಗಿದೆ. ಹೆಚ್ಚಿನ ವಿವರಗಳಿಗೆ ಇದೇ ಲೇಖಕರ ಕರ್ನಾಟಕ ಸರ್ಕಾರಿ ಸೇವಾ ನಿಯಮಗಳು ಪುಸ್ತಕ ನೋಡಿ.

28-3-28.

ನಾನು ಶಾಲಾ ಶಿಕ್ಷಕಿಯಾಗಿ ಕೆಲಸ ಮಾಡುತ್ತಿದ್ದೇನೆ. ನಾನೀಗ ಒಂಬತ್ತು ತಿಂಗಳ ಗರ್ಭಿಣಿಯಾಗಿದ್ದು ಮಾರ್ಚ್ ಅಂತ್ಯದ ವೇಳೆಗೆ ವೈದ್ಯರು ಮಗುವಿನ ಹೆರಿಗೆ ಆಗಬಹುದೆಂದು ತಿಳಿಸಿದ್ದಾರೆ. ನಾನು ಹೆರಿಗೆ ರಜೆಯನ್ನು ವೆಕೇಷನ್ ನಂತರ ಪಡೆದುಕೊಳ್ಳಬಹುದೆ? ದಯವಿಟ್ಟು ಸೂಕ್ತ ಪರಿಹಾರ ಸೂಚಿಸಿ.

-ವಿಜಯಲಕ್ಷ್ಮಿ ಚಿಕ್ಕಮಗಳೂರು.

ಕರ್ನಾಟಕ ಸರ್ಕಾರಿ ಸೇವಾ ನಿಯಮಾವಳಿಯ ನಿಯಮ 135ರಂತೆ ಮಗುವಿನ ಹೆರಿಗೆಯ ದಿನಾಂಕದಿಂದಲೇ ನಿಮಗೆ ಈ 180 ದಿನಗಳ ಹೆರಿಗೆ ರಜೆಯನ್ನು ಸರ್ಕಾರವು ನೀಡುತ್ತದೆ. ಆದುದರಿಂದ ನೀವು ವೆಕೇಷನ್ ನಂತರ ಈ ರಜೆಯನ್ನು ಪಡೆಯಲು ಸಾಧ್ಯವಾಗುವುದಿಲ್ಲ. ಈ ರಜೆಯನ್ನು ಎರಡು ಜೀವಂತ ಮಗು ಇರುವವರೆಗೂ ನಿಯಮಾವಳಿ ರೀತ್ಯ ಪಡೆದುಕೊಳ್ಳಬಹುದು. ಹೆಚ್ಚಿನ ವಿವರಗಳನ್ನು ತಿಳಿದುಕೊಳ್ಳಲು ಇದೇ ಲೇಖಕರು ಬರೆದಿರುವ ಕರ್ನಾಟಕ ಸರ್ಕಾರಿ ಸೇವಾ ನಿಯಮಗಳು ಪುಸ್ತಕವನ್ನು ನೋಡಿ.

***

27-3-18.

ನಾನು ಕೆಲವು ವರ್ಷಗಳಿಂದ ಸರ್ಕಾರಿ ನೌಕರನಾಗಿ ಕಾರ್ಯ ನಿರ್ವಹಿಸುತ್ತಿದ್ದೇನೆ. ಹೀಗೆ ಸರ್ಕಾರಿ ನೌಕರನಾಗಿದ್ದುಕೊಂಡು ಕೆಲಸ ಮಾಡುತ್ತಲೇ ಸಾರ್ವಜನಿಕ ಸಂಸ್ಥೆಗೆ ಅಥವಾ ಖಾಸಗಿ ವೃತ್ತಿಗೆ ಮಾಡಿಕೊಟ್ಟಂತಹ ಕೆಲಸಕ್ಕಾಗಿ ಶುಲ್ಕವನ್ನು ತೆಗೆದುಕೊಳ್ಳಬಹುದೆ? ಈ ಬಗ್ಗೆ ಸೂಕ್ತವಾದ ಮಾಹಿತಿಯನ್ನು ನೀಡಿ.

-ಎಂ. ಉಮೇಶ್ ಚಿಕ್ಕಬಳ್ಳಾಪುರ.

ಕರ್ನಾಟಕ ಸರ್ಕಾರಿ ಸೇವಾ (ನಡತೆ ನಿಯಮಗಳು) 1966ರ ನಿಯಮ 16(4)ರ ಪ್ರಕಾರ ಶುಲ್ಕ ತೆಗೆದುಕೊಳ್ಳುವಂತಿಲ್ಲ. ಆದರೆ ನಿಯಮಿಸಿದ ಪ್ರಾಧಿಕಾರದ ಸಾಮಾನ್ಯ ಅಥವಾ ವಿಶೇಷ ಮಂಜೂರಾತಿ ಪಡೆದು ಅಂತಹ ಕೆಲಸಕ್ಕೆ ಶುಲ್ಕವನ್ನು ಪಡೆಯಬಹುದಾಗಿದೆ. ಹೆಚ್ಚಿನ ವಿವರಗಳಿಗೆ ಎಂ. ಉಮೇಶ್ ಅವರು ಬರೆದಿರುವಂತಹ ನಡತೆ ನಿಯಮಗಳು ಸಮಗ್ರ ಕೈಪಿಡಿಯನ್ನು ನೋಡಬಹುದು.

***

26-3-18.

ನಮ್ಮ ಕಚೇರಿಯಲ್ಲಿ ಸಹೋದ್ಯೋಗಿಯೊಬ್ಬ ಚೆನ್ನಾಗಿ ಕುಡಿದ ಮತ್ತಿನಲ್ಲಿ ದಾಂಧಲೆ ಎಬ್ಬಿಸಿದ್ದಾನೆ. ಅವನ ಈ ದುರ್ನಡತೆಯಿಂದ ಅವನನ್ನು ಸೇವೆಯಿಂದ ವಜಾಗೊಳಿಸಬೇಕೆ?

–ರಮೇಶ್ ಕೃಷ್ಣ ಧಾರವಾಡ

ಕರ್ನಾಟಕ ಸರ್ಕಾರಿ ಸೇವಾ (ನಡತೆ ನಿಯಮಗಳು) ನಿಯಮಾವಳಿಯ ನಿಯಮ 3 (3) ಸರ್ಕಾರಿ ನೌಕರರಿಗೆ ತಕ್ಕದ್ದಲ್ಲವೆಂದು ಯಾವುದೊಂದು ಮಾಡಬಾರದೆಂದು ಸೂಚಿಸಲಾಗಿದೆ. ಅಲ್ಲದೆ ಸವೋಚ್ಚ ನ್ಯಾಯಾಲಯವು ಸ್ಟೇಟ್ ಆಫ್ ಪಂಜಾಬ್ ವರ್ಸಸ್ ರಾಮ್ ಸಿಂಗ್ 1992 ಎಸ್ಸಿಡಬ್ಲ್ಯು 2595 ಪ್ರಕರಣದಲ್ಲಿ ತೀರ್ಪು ನೀಡಿದೆ. ಮಿತಿ ಮೀರಿ ಕುಡಿದಿದ್ದ ಪೊಲೀಸ್ನೊಬ್ಬ ತನ್ನ ಸರ್ವಿಸ್ ರಿವಾಲ್ವರ್ನೊಂದಿಗೆ ಮಾರುಕಟ್ಟೆಯಲ್ಲಿ ತಿರುಗಾಡುತ್ತಿದ್ದ. ವೈದ್ಯಕೀಯ ತಪಾಸಣೆಗೆ ಕರೆದುಕೊಂಡು ಹೋದಾಗ ಅವನು ವೈದ್ಯರನ್ನು ದೂಷಿಸಿದ. ಕುಡಿತದ ಅಭ್ಯಾಸದಿಂದಾಗಿ ಹೀನಾವಸ್ಥೆಗೆ ತಲುಪಿದ್ದ ಎಂಬುದಕ್ಕೆ ಅವನ ಈ ನಡತೆಯೇ ಸಾಕ್ಷಿಯಾಗಿತ್ತು. ಅವನನ್ನು ವಜಾಗೊಳಿಸಲಾಯಿತು. ಆದುದರಿಂದ ನಿಮ್ಮ ಕಚೇರಿಯಲ್ಲಿ ನೌಕರನು ದಾಂಧಲೆ ಎಬ್ಬಿಸಿದರೆ ಅದು ದುರ್ನಡತೆಯಾಗುವುದರಿಂದ ಸೇವೆಯಿಂದ ವಜಾಗೊಳಿಸಬಹುದು.

***

24-3-18.

ನಾನು ಪೊಲೀಸ್ ಇಲಾಖೆಯಲ್ಲಿ ಪೊಲೀಸ್ ಪೇದೆಯಾಗಿ ಕಾರ್ಯನಿರ್ವಹಿಸುತ್ತಿದ್ದೆ. 2017ರಲ್ಲಿ ಹೆಡ್ ಕಾನ್ಸ್ಟೇಬಲ್ ಹುದ್ದೆಗೆ ಪದೋನ್ನತಿ ನೀಡಿದಾಗ ವಯಸ್ಸಿನ ಕಾರಣದಿಂದ ತಾತ್ಕಾಲಿಕವಾಗಿ ನಿರಾಕರಿಸಿದ್ದೆ. ಆದುದರಿಂದ ಈಗ ಮತ್ತೆ ಪದೋನ್ನತಿ ಅವಕಾಶ ನೀಡುತ್ತಿದ್ದಾರೆ. ಒಂದು ವರ್ಷದ ನಂತರ ನೀಡುತ್ತಿರುವುದರಿಂದ ನನ್ನ ಜ್ಯೇಷ್ಠತೆ ಹೇಗೆ ಪರಿಗಣಿತವಾಗುತ್ತದೆಂದು ದಯವಿಟ್ಟು ತಿಳಿಸಿ.

| ಹೆಚ್. ಮಹಂತೇಶ ಹಾವೇರಿ.

ಕರ್ನಾಟಕ ಸರ್ಕಾರಿ ಸೇವಾ (ಸಾಮಾನ್ಯ ನೇಮಕಾತಿ) ನಿಯಮಾವಳಿ ನಿಯಮ 6ರ ಮೇರೆಗೆ ನೀವು ಒಮ್ಮೆ ಲಭ್ಯವಾದ ಪದೋನ್ನತಿಯನ್ನು ನಿರಾಕರಿಸಿದರೆ ಮತ್ತೊಮ್ಮೆ ಒಂದು ವರ್ಷಗಳ ನಂತರ ನಿಮ್ಮನ್ನು ಪದೋನ್ನತಿಗೆ ಪರಿಗಣಿಸಲಾಗುವುದು. ಹೀಗೆ ಪರಿಗಣಿಸುವುದಾದರೆ ನಿಮ್ಮ ಜ್ಯೇಷ್ಠತೆಯು – ನೀವು ಕರ್ತವ್ಯಕ್ಕೆ ಹಾಜರಾದ ದಿನಾಂಕವನ್ನು ಆಧರಿಸಿ ನಿರ್ಧರಿಸಲಾಗುತ್ತದೆ. ಆಗ ನೀವು ನಿಮ್ಮ ಕಿರಿಯರಿಗಿಂತ ಜ್ಯೇಷ್ಠತೆಯಲ್ಲಿ ಕಿರಿಯರಾಗುತ್ತೀರಿ. ಹೆಚ್ಚಿನ ವಿವರಗಳಿಗೆ ಇದೇ ಲೇಖಕರ ಕರ್ನಾಟಕ ಸರ್ಕಾರಿ ಸೇವಾ ನಿಯಮಗಳು ಪುಸ್ತಕ ನೋಡಿ.

***

23-3-18

ಕರ್ನಾಟಕ ಸರ್ಕಾರದ ನಿಯಮಾನುಸಾರ ಇಲಾಖಾ ವಿಚಾರಣಾಧಿಕಾರಿಯಾಗಿ ಕಾರ್ಯ ನಿರ್ವಹಿಸಲು ನೇಮಕಾತಿ ಆದೇಶ ಯಾರಿಗೆ ನೀಡಬೇಕು? ಸರ್ಕಾರಿ ನೌಕರರ ಸಂದರ್ಭದಲ್ಲಿ ಶಿಸ್ತು ಪ್ರಾಧಿಕಾರಿಯು ತಮ್ಮ ಕಾರ್ಯಾಲಯದಲ್ಲಿ ಗೌರವಧನದ ಆಧಾರದ ಮೇಲೆ ಕಾರ್ಯ ನಿರ್ವಹಣೆ ಮಾಡುತ್ತಿದ್ದ ಕಾನೂನು ಸಲಹೆಗಾರನನ್ನು ವಿಚಾರಣಾಧಿಕಾರಿಯಾಗಿ ನೇಮಕಾತಿ ಮಾಡಲು ಅವಕಾಶ ಕಲ್ಪಿಸಲಾಗಿದೆ. ಇದು ಸರಿಯೇ?

| ಪಿ.ಎಸ್. ನವೀನ್ ಕುಮಾರ್ ಹುಬ್ಬಳ್ಳಿ.

ಕರ್ನಾಟಕ ಸರ್ಕಾರಿ ಸೇವಾ (ಸಿಸಿಎ) ನಿಯಮಾವಳಿಯ 1957ರ ನಿಯಮ 11(2)ರ ಮೇರೆಗೆ ಇಲಾಖಾ ವಿಚಾರಣೆಯನ್ನು ಶಿಸ್ತು ಪ್ರಾಧಿಕಾರಿಗೆ ತಾನೇ ನಡೆಸಬಹುದು ಅಥವಾ ನಿಯಮ (11)(5)ರ ಮೇರೆಗೆ ಆರೋಪಿತ ನೌಕರನ ನಿಕಟ ಮೇಲಧಿಕಾರಿಯನ್ನು ಅಥವಾ ನಿವೃತ್ತ ನ್ಯಾಯಾಧೀಶರನ್ನು ನೇಮಕ ಮಾಡಬಹುದೆಂದು ಸೂಚಿಸಲಾಗಿದೆ. ಆದರೆ ನೀವು ತಿಳಿಸಿದಂತೆ ಗೌರವಧನದ ಮೇಲೆ ಕೆಲಸ ಮಾಡುತ್ತಿರುವ ಕಾನೂನು ಸಲಹೆಗಾರರನ್ನು ವಿಚಾರಣಾಧಿಕಾರಿಯಾಗಿ ನೇಮಕಾತಿ ಮಾಡಲು ನಿಯಮಾವಳಿಯಲ್ಲಿ ಅವಕಾಶವಿರುವುದಿಲ್ಲ.

***

22-3-18.
ನಾನು 2011ರಿಂದ 2016ರ ತನಕ ಕೇಂದ್ರ ಸರ್ಕಾರದ ಅಂಚೆ ಇಲಾಖೆಯಲ್ಲಿ ಪೋಸ್ಟಲ್ ಅಸಿಸ್ಟೆಂಟ್ ಆಗಿ ಸೇವೆ ಸಲ್ಲಿಸಿದೆ. ಇಲಾಖೆ ಅನುಮತಿ ಪಡೆದು ಪರೀಕ್ಷೆ ಪಾಸಾಗಿ 2016ರ ಮಾರ್ಚ್ ತಿಂಗಳಿನಿಂದ ರಾಜ್ಯ ಸರ್ಕಾರಿ ಶಿಕ್ಷಣ ಇಲಾಖೆಯ ಶಿಕ್ಷಕನಾಗಿ ಸೇವೆ ಸಲ್ಲಿಸುತ್ತಿದ್ದೇನೆ. ನಾನು ಸೇವೆಗೆ ಸೇರಿದ ದಿನಾಂಕ ಯಾವುದು? ಕೇಂದ್ರ ಸರ್ಕಾರದ ಸೇವೆ ಹಿಂದಿನ ಅವಧಿಯ ಸೇವಾವಧಿಯಲ್ಲಿ ದೊರೆಯುತ್ತಿದ್ದ ಹಳೆ ಪಿಂಚಣಿ ಸೌಲಭ್ಯ ಮುಂದುವರಿಯುವುದೇ? ಎನ್ಪಿಎಸ್ ಖಾತೆ ಸಂಖ್ಯೆ ಮುಂದುವರಿಯುವುದೇ? ಈ ಬಗ್ಗೆ ದಯವಿಟ್ಟು ಮಾಹಿತಿ ನೀಡಿ.

| ಮಂಜುನಾಥ್ ಗಂಟೇರ ಉಪ್ಪುಣಸಿ, ಹಾವೇರಿ.

ನೀವು ರಾಜ್ಯ ಸರ್ಕಾರಕ್ಕೆ ಸೇರಿದ ದಿನಾಂಕವೇ ಸೇವಾರಾತ ದಿನಾಂಕವಾಗಿರುತ್ತದೆ. ನೀವು ಹಿಂದೆ ಮಾಡಿದ ಎನ್ಪಿಎಸ್ ಪಿಂಚಣಿ ಸೌಲಭ್ಯವೇ ಹೊಸ ಹುದ್ದೆಯನ್ನು ಸೇರಿದ ನಂತರವೂ ಮುಂದುವರೆಯುತ್ತದೆ. ಹೆಚ್ಚಿನ ವಿವರಗಳಿಗೆ ಇದೇ ಲೇಖಕರು ಬರೆದಿರುವ ಕರ್ನಾಟಕ ಸರ್ಕಾರಿ ಸೇವಾ ನಿಯಮಗಳು ಪುಸ್ತಕವನ್ನು ನೋಡಿ.

***

21-3-18.

ನಾನು ಕರ್ನಾಟಕ ರಾಜ್ಯ ಮೀಸಲು ಪೊಲೀಸ್ ಇಲಾಖೆಯಲ್ಲಿ 2016ರ ನವೆಂಬರ್ 27 ರಂದು ಕರ್ತವ್ಯಕ್ಕೆ ಹಾಜರಾಗಿರುತ್ತೇನೆ. ಮಂಗಳೂರಿನಲ್ಲಿ ಎರಡು ತಿಂಗಳ ಕಾಲ ಮೂಲ ತರಬೇತಿಯನ್ನು ಪಡೆದ ಬಳಿಕ ವೈದ್ಯಕೀಯ ಕಾರಣಗಳಿಂದ ತರಬೇತಿ ಅವಧಿಯಲ್ಲೇ ರಾಜೀನಾಮೆ ನೀಡಿದ್ದೇನೆ. ನಾನೀಗ ಮತ್ತೆ ಇಲಾಖೆಗೆ ಸೇರಬಹುದೇ? ಯಾವ ರೀತಿ ಎಂದು ದಯಮಾಡಿ ತಿಳಿಸಿ.

| ಸಂಜಯ್ ರಾಥೋಡ್ ವಿಜಯಪುರ.

ನೀವು ಸ್ವಇಚ್ಛೆಯ ಮೇರೆಗೆ ಪೊಲೀಸ್ ಇಲಾಖೆಗೆ ರಾಜೀನಾಮೆ ಸಲ್ಲಿಸಿರುವುದರಿಂದ ನಿಮ್ಮ ರಾಜೀನಾಮೆಯನ್ನು ಸ್ವೀಕರಿಸುವ ಪ್ರಾಧಿಕಾರಕ್ಕೆ ಆ ನಿರ್ಧಾರ ಸೇರಿರುತ್ತದೆ. ಈ ರೀತಿ ರಾಜೀನಾಮೆ ಅಂಗೀಕಾರವಾದ ಕೂಡಲೆ ಅದು ಕಾರ್ಯಗತವಾಗುವುದರಿಂದ ಪ್ರಸ್ತುತ ನೀವು ಪ್ರಯತ್ನ ಮಾಡುವುದು ಫಲಕಾರಿಯಾಗದು. ಹೆಚ್ಚಿನ ವಿವರಗಳಿಗಾಗಿ ಇದೇ ಲೇಖಕರು ಬರೆದಿರುವ ಕರ್ನಾಟಕ ಸರ್ಕಾರಿ ಸೇವಾ ನಿಯಮಗಳು ಪುಸ್ತಕವನ್ನು ನೋಡಿ

***

18-3-18.

ನಾನೀಗ ಪ್ರೌಢಶಾಲಾ ಶಿಕ್ಷಕನಾಗಿದ್ದು, ಗ್ರಾಮ ಪಂಚಾಯತಿ ಕಾರ್ಯದರ್ಶಿ ಹುದ್ದೆಗೆ ಆಯ್ಕೆಯಾಗಿದ್ದೇನೆ. ನನ್ನ ಈಗಿನ ಮೂಲವೇತನ 21,600 ಆಗಿದ್ದು, ಗ್ರಾಮ ಪಂಚಾಯತಿ ಕಾರ್ಯದರ್ಶಿ ಹುದ್ದೆಗೆ ಹೋದರೆ ಮೂಲವೇತನ ಎಷ್ಟಾಗುತ್ತದೆ? ಈ ಬಗ್ಗೆ ನಾನು ಗೊಂದಲದಲ್ಲಿದ್ದೇನೆ. ದಯವಿಟ್ಟು ಪರಿಹಾರ ಸೂಚಿಸಿ.

-ಚಿನ್ನಸ್ವಾಮಿ ಹಾಸನ

ಕರ್ನಾಟಕ ಸರ್ಕಾರಿ ಸೇವಾ ನಿಯಮಾವಳಿಯ ನಿಯಮ 41ಎ ಪ್ರಕಾರ ಸಮಾನವೇತನ ಶ್ರೇಣಿಯ ಮತ್ತೊಂದು ಹುದ್ದೆಗೆ ನೇಮಕವಾದರೆ ವೇತನ ರಕ್ಷಣೆ ದೊರಕುತ್ತದೆ. ಆದುದರಿಂದ ನಿಮ್ಮ ವೇತನಶ್ರೇಣಿಯು ಮತ್ತು ಪ್ರಸ್ತುತ ಗ್ರಾಮ ಪಂಚಾಯ್ತಿ ಕಾರ್ಯದರ್ಶಿ ವೇತನ ಶ್ರೇಣಿಯು ಒಂದೇ ಆಗಿದ್ದರೆ ನಿಮಗೆ ವೇತನ ರಕ್ಷಣೆ ದೊರಕುತ್ತದೆ. ಹೆಚ್ಚಿನ ವಿವರಗಳಿಗೆ ಇದೇ ಲೇಖಕರು ಬರೆದಿರುವ ಕರ್ನಾಟಕ ಸರ್ಕಾರಿ ಸೇವಾ ನಿಯಮಗಳು ಪುಸ್ತಕವನ್ನು ನೋಡಿ.

***

17-3-18.

ನಾನು ದ್ವಿತೀಯ ದರ್ಜೆ ಸಹಾಯಕನಾಗಿ ಕೆಲಸ ಮಾಡುತ್ತಿದ್ದು, 2017ರ ಜುಲೈ ತಿಂಗಳಿನಿಂದ ವಾಣಿಜ್ಯ ತೆರಿಗೆ ಇಲಾಖೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದೇನೆ. ಐಎಎಸ್ ಪರೀಕ್ಷೆಗೆ ತಯಾರಿ ನಡೆಸುತ್ತಿದ್ದು, ಆರು ತಿಂಗಳುಗಳ ಕಾಲ ವೇತನಸಹಿತ ಅಥವಾ ರಹಿತ ರಜೆ ತೆಗೆದುಕೊಳ್ಳಬೇಕೆಂದಿದ್ದೇನೆ. ಈ ಬಗ್ಗೆ ಸೂಕ್ತ ಸಲಹೆ ನೀಡಿ.

ಭೀಮಪ್ಪ ಕೊಪ್ಪಳ.

ನೀವು ಕರ್ನಾಟಕ ಸರ್ಕಾರಿ ಸೇವೆಗೆ ಸೇರಿ ಒಂದು ವರ್ಷವೂ ಆಗಿಲ್ಲದಿರುವುದರಿಂದ ನಿಮಗೆ ವೇತನಸಹಿತ ಗಳಿಸದ ರಜೆ ಲಭ್ಯವಾಗುವುದಿಲ್ಲ. ಆದರೆ ಕರ್ನಾಟಕ ಸರ್ಕಾರಿ ಸೇವಾ ನಿಯಮಾವಳಿಯ ನಿಯಮ 117ರ ಮೇರೆಗೆ ಮಂಜೂರಾತಿ ಪ್ರಾಧಿಕಾರದಿಂದ ನೀವು ವೇತನರಹಿತ ರಜೆಯನ್ನು ರಜೆಯನ್ನು ಮಂಜೂರು ಮಾಡಿಸಿಕೊಂಡು ನಾಗರಿಕ ಸೇವಾ ಪರೀಕ್ಷೆಗೆ ತಯಾರಿ ನಡೆಸಬಹುದು. ಹೆಚ್ಚಿನ ವಿವರಗಳಿಗೆ ಇದೇ ಲೇಖಕರ ಕರ್ನಾಟಕ ಸರ್ಕಾರಿ ಸೇವಾ ನಿಯಮಗಳು ಪುಸ್ತಕ ನೋಡಿ.

***

16.03.2018,

2007ರ ಜುಲೈ ತಿಂಗಳಿನಲ್ಲಿ ಪ್ರಾಥಮಿಕ ಶಾಲಾ ಶಿಕ್ಷಕನಾಗಿ ಕೆಲಸಕ್ಕೆ ಸೇರಿದ್ದು ಪ್ರಸ್ತುತ ನನ್ನ ಮೂಲವೇತನ 17200 ರೂ. ಆಗಿದೆ. ಇಲಾಖೆಯಿಂದ ನಿರಪೇಕ್ಷಣಾ ಪತ್ರವನ್ನು ಪಡೆದು 2014-15ನೇ ಸಾಲಿನ ಪ್ರೌಢಶಾಲಾ ಗ್ರೇಡ್-2 ಶಿಕ್ಷಕ ಹುದ್ದೆಗೆ ಆಯ್ಕೆಯಾಗಿದ್ದೇನೆ. ನನಗೆ ಈಗ 450 ರೂ. ವಿಶೇಷ ಭತ್ಯೆ ನೀಡಲಾಗುತ್ತಿದೆ. ಏಪ್ರಿಲ್ ತಿಂಗಳಿನಲ್ಲಿ ಆರನೇ ವೇತನಾ ಆಯೋಗದ ವರದಿ ಜಾರಿಯಾಗುವುದರಿಂದ ನಾನು ಪ್ರೌಢಶಾಲಾ ಶಿಕ್ಷಕನಾಗಿ ವರದಿ ಮಾಡಿಕೊಂಡರೆ ನಿಯಮಾವಳಿಯಲ್ಲಿ ನನಗೆ ವಿಶೇಷ ಭತ್ಯೆ ಮುಂದುವರಿಯಲು ಅವಕಾಶವಿದೆಯೆ?

| ಚಿಕ್ಕಮಾದು ಹುಣಸೂರು.

29-8-2008ರ ಸರ್ಕಾರಿ ಆದೇಶ ಸಂಖ್ಯೆ ಎಫ್ಡಿ 31 ಎಸ್ಆರ್ಪಿ 2007ರ ಖಂಡಿಕೆ 1ರಲ್ಲಿ ಪ್ರಾಥಮಿಕ ಶಾಲಾ ಶಿಕ್ಷಕರು 1-8-2008ರಂದು ನೇಮಕವಾಗಿದ್ದರೆ ಅಂತಹವರಿಗೆ ಈ ವಿಶೇಷ ಭತ್ಯೆ ಲಭ್ಯವಾಗುವುದಿಲ್ಲ. ಆದರೆ ಸರ್ಕಾರವು ಆರನೇ ವೇತನ ಆಯೋಗದ ವರದಿಯನ್ನು ಅಂಗೀಕರಿಸಿರುವುದರಿಂದ ನಿಮಗೆ ಪ್ರೌಢಶಾಲೆಯಲ್ಲಿ ಈ ವಿಶೇಷ ಭತ್ಯೆ ಮುಂದುವರಿಯಬಹುದು. ಸರ್ಕಾರಿ ಆದೇಶವನ್ನು ನಿರೀಕ್ಷಿಸಿ.

***

15-3-18

ನಾನು ಹಿಂದೆ ವಾಣಿಜ್ಯ ತೆರಿಗೆ ಇಲಾಖೆಯಲ್ಲಿ ಪ್ರಥಮ ದರ್ಜೆ ಸಹಾಯಕನಾಗಿ 10 ತಿಂಗಳು ಕೆಲಸ ಮಾಡಿದ್ದೆ. ನಂತರ ಕರ್ನಾಟಕ ಸರ್ಕಾರಿ ಸೇವಾ ನಿಯಮಾವಳಿಯ ನಿಯಮ 252 ಬಿ ಪ್ರಕಾರ ಬಿಡುಗಡೆ ಹೊಂದಿ ಕಳೆದ ಎರಡು ತಿಂಗಳಿನಿಂದ ಖಜಾನೆ ಇಲಾಖೆಯಲ್ಲಿ ಪ್ರಥಮ ದರ್ಜೆ ಸಹಾಯಕನಾಗಿ ಕೆಲಸ ಮಾಡುತ್ತಿದ್ದೇನೆ. ಈಗ ಮತ್ತೆ ವಾಣಿಜ್ಯ ತೆರಿಗೆ ಇಲಾಖೆಗೆ ಹಿಂದಿರುಗಬೇಕೆಂದು ಇಚ್ಛಿಸಿದ್ದು ನಿಯಮಾವಳಿ ರೀತ್ಯ ಹೋಗಬಹುದೆ?

| ಎ.ಟಿ. ತೇಜಸ್ ದಾವಣಗೆರೆ.

ಕರ್ನಾಟಕ ಸರ್ಕಾರಿ ಸೇವಾ ನಿಯಮಾವಳಿಯ ನಿಯಮ 252 ಬಿ ಪ್ರಕಾರ ಪೂರ್ವಾನುಮತಿ ಪಡೆದು ಖಜಾನೆ ಇಲಾಖೆಗೆ ಹಾಜರಾಗಿದ್ದೀರಿ. ನೀವು ಮತ್ತೆ ವಾಣಿಜ್ಯ ತೆರಿಗೆ ಇಲಾಖೆಗೆ ಹೋಗಬೇಕಾದರೆ ಅಲ್ಲಿಂದ ಬಿಡುಗಡೆಗೊಳ್ಳುವ ಮೊದಲು ಕರ್ನಾಟಕ ಸರ್ಕಾರಿ ಸೇವಾ ನಿಯಮ 20ರ ಮೇರೆಗೆ ಹಕ್ಕನ್ನು ಕಾಯ್ದಿರಿಸಬೇಕೆಂದು ವಿನಂತಿಸಿ ಮನವಿ ಸಲ್ಲಿಸಬೇಕು. ಎರಡು ವರ್ಷದೊಳಗಾಗಿ ಈ ನಿಯಮದ ಮೇರೆಗೆ ವಾಣಿಜ್ಯ ತೆರಿಗೆ ಇಲಾಖೆಗೆ ಮರಳಬಹುದಾಗಿದೆ. ಹೆಚ್ಚಿನ ವಿವರಗಳಿಗೆ ಇದೇ ಲೇಖಕರ ಅವರ ಕನಾಟಕ ಸರ್ಕಾರಿ ಸೇವಾ ನಿಯಮಗಳು ಪುಸ್ತಕ ನೋಡಿ.

***

14-3-18.

ಎಸ್ಡಿಎ ಹುದ್ದೆಗೆ ಜೆಒಸಿ ಡಿಪ್ಲೊಮಾ ಅನ್ವಯವಾಗುತ್ತದೋ ಇಲ್ಲವೋ ತಿಳಿಸಿ. ನಾನು ಕೆಪಿಎಸ್ಸಿಗೆ ದೂರವಾಣಿ ಮಾಡಿ ಈ ಬಗ್ಗೆ ವಿಚಾರಿಸಿದಾಗ ಆಗುವುದಿಲ್ಲ ಎಂದಿದ್ದಾರೆ. ಈ ಬಗ್ಗೆ ಸೂಕ್ತ ಪರಿಹಾರ ಸೂಚಿಸಿ.

| ಕೆ.ಜಿ. ಸುನೀಲಕುಮಾರ್ ಮೈಸೂರು.

27-2-2018ರ ಸರ್ಕಾರಿ ಸುತ್ತೋಲೆ ಸಂಖ್ಯೆ ಸಿಆಸುಇ81ಸೇವನೆ2017ರಲ್ಲಿ ಪದವಿ ಪೂರ್ವ ಶಿಕ್ಷಣಕ್ಕೆ ಎರಡು ವರ್ಷಗಳ ವೃತ್ತಿ ಶಿಕ್ಷಣದ ಡಿಪ್ಲೊಮಾ (ಜೆಒಸಿ) ಡಿಪ್ಲೊಮಾವನ್ನು ಪದವಿಪೂರ್ವ ಶಿಕ್ಷಣಕ್ಕೆ ತತ್ಸಮಾನವೆಂದು ಪರಿಗಣಿಸಲಾಗಿದೆ. ಆದರೆ ಈ ಅಭ್ಯರ್ಥಿಗಳು ಪಿಯುಸಿಯ ಒಂದು ಐಚ್ಛಿಕ ವಿಷಯ ಹಾಗೂ ಭಾಷಾ ವಿಷಯದಲ್ಲಿ ತೇರ್ಗಡೆಯಾದರೆ ಮಾತ್ರ ತತ್ಸಮಾನವೆಂದು ಪರಿಗಣಿಸಲಾಗುವುದೆಂದು ಸೂಚಿಸಲಾಗಿದೆ. ಆದುದರಿಂದ ಪದವಿಪೂರ್ವ ಶಿಕ್ಷಣಕ್ಕೆ ಜೆಓಸಿ ತತ್ಸಮಾನವಾಗುವುದರಿಂದ ನೀವು ಕೆಪಿಎಸ್ಸಿ ನಡೆಸುವ ಪದವಿಪೂರ್ವ ಮಟ್ಟದ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದು. ಹೆಚ್ಚಿನ ವಿವರಗಳಿಗೆ ಇದೇ ಲೇಖಕರ ಸರ್ಕಾರಿ ಸೇವಾ ಕಾನೂನು ಕೈಪಿಡಿ ಪುಸ್ತಕ ನೋಡಿ.

***

13-3-18.

ಜೂನ್ 2018ಕ್ಕೆ ನಮ್ಮ ಶಾಲೆಯ ಮುಖ್ಯೋಪಾಧ್ಯಾಯರು ನಿವೃತ್ತರಾಗುತ್ತಾರೆ. ನಂತರ ಶಾಲೆಯ ಮುಖ್ಯೋಪಾಧ್ಯಾಯರ ಪ್ರಭಾರೆಯನ್ನು ಆ ಶಾಲೆಯಲ್ಲಿ ಹೆಚ್ಚು ಸೇವೆ ಸಲ್ಲಿಸಿದವರು ಅಥವಾ ಜಿಲ್ಲಾ ಸೇವಾ ಹಿರಿತನದಲ್ಲಿ ಹಿರಿಯ ಶಿಕ್ಷಕರು ಇವರಲ್ಲಿ ಯಾರು ವಹಿಸಿಕೊಳ್ಳಬೇಕು?

| ಸಿ. ಕೆ. ಜೆ. ರಮೇಶ್ ದಾವಣಗೆರೆ.

ಕರ್ನಾಟಕ ಸರ್ಕಾರದ 6-3-2017ರ ಸುತ್ತೋಲೆ ಸಂಖ್ಯೆ ಇಡಿ124ಎಲ್ಬಿಪಿ2016ರಲ್ಲಿ ಈ ಹಿಂದೆ ಶಾಲೆಯ ಹಿರಿಯ ಶಿಕ್ಷಕರು ಪ್ರಭಾರ ವಹಿಸಿಕೊಳ್ಳುವ ಬಗ್ಗೆ ಹೊರಡಿಸಿದ್ದ 25-5-2016ರ ಅಥವಾ ಸಮಸಂಖ್ಯೆಯ ಸುತ್ತೋಲೆಯನ್ನು ಹಿಂಪಡೆಯಲಾಗಿದೆ. ಆದುದರಿಂದ ಕರ್ನಾಟಕ ಸರ್ಕಾರಿ ಸೇವಾ ನಿಯಮಾವಳಿಯ ನಿಯಮ 32ರ ಮೇರೆಗೆ ಜಿಲ್ಲೆಯ ಜ್ಯೇಷ್ಠತಾ ಘಟಕದಲ್ಲಿ ಯಾವುದೇ ವಿಷಯದ ಶಿಕ್ಷಕರು ಶಾಲೆಯಲ್ಲಿ ಕೆಲಸ ಮಾಡುತ್ತಿದ್ದರೆ ಅವರು ಮುಖ್ಯೋಪಾಧ್ಯಾಯರ ಪ್ರಭಾರವನ್ನು ವಹಿಸಿಕೊಳ್ಳಬಹುದು. ನಿಮ್ಮ ಶಾಲೆಯಲ್ಲಿ ಹಿರಿಯ ಶಿಕ್ಷಕರು ಮಾತ್ರ ಪ್ರಭಾರ ವಹಿಸಿಕೊಳ್ಳಲು ಶೈಕ್ಷಣಿಕ ಜಿಲ್ಲಾ ಉಪನಿರ್ದೇಶಕರು ಆದೇಶಿಸಬಹುದು. ಹೆಚ್ಚಿನ ವಿವರಗಳಿಗೆ ಇದೇ ಲೇಖಕರು ಬರೆದಿರುವ ಕರ್ನಾಟಕ ಸರ್ಕಾರಿ ಸೇವಾ ನಿಯಮಗಳು ಪುಸ್ತಕವನ್ನು ನೋಡಿ.

***

12-3-18.

ನಾನೊಬ್ಬ ಸರ್ಕಾರಿ ನೌಕರನಾಗಿದ್ದು, ಬ್ಯಾಂಕಿನಿಂದ ಸಾಲವನ್ನು ಪಡೆಯಬೇಕು ಎಂದುಕೊಂಡಿದ್ದೇನೆ. ಹೀಗೆ ಬ್ಯಾಂಕಿನಿಂದ ಸಾಲವನ್ನು ಪಡೆಯಲು ಸರ್ಕಾರದ ಪೂರ್ವ ಮಂಜೂರಾತಿಯನ್ನು ಪಡೆದುಕೊಳ್ಳುವುದು ಅಗತ್ಯವಾಗಿದೆಯೇ? ಈ ಕುರಿತಾಗಿ ಸೂಕ್ತವೆನಿಸುವಂತಹ ಸಲಹೆಯನ್ನು ನೀಡಿ.

| ವಿ. ವೆಂಕಟರಮಣಯ್ಯ ಬೆಂಗಳೂರು.

ಕರ್ನಾಟಕ ಸರ್ಕಾರಿ ಸೇವಾ (ನಡತೆ ನಿಯಮಗಳು) 1966ರ ನಿಯಮ 21(4) (ಜಿ)ರ ರೀತ್ಯ ಬ್ಯಾಂಕಿಂಗ್ ವ್ಯವಹಾರವನ್ನು ನಡೆಸಲು ಅಧಿಕಾರ ಪಡೆದಿರುವ ಬ್ಯಾಂಕಿನಿಂದ ಅಥವಾ ಸಂಸ್ಥೆಯಿಂದ ಸಾಲವನ್ನು ಪಡೆಯಲು ಸರ್ಕಾರದ ಪೂರ್ವ ಮಂಜೂರಾತಿಯನ್ನು ಪಡೆದುಕೊಳ್ಳಬೇಕು ಎಂದೇನಿಲ್ಲ. ಆದರೆ ನಿಯಮ 23ರಂತೆ ಆಸ್ತಿ ಮತ್ತು ಜವಾಬ್ದಾರಿಯನ್ನು ಹೊಂದಿರಲು ಇಂತಹ ಸಾಲವನ್ನು ಹೊಣೆಗಾರಿಕೆಯಾಗಿ ತೋರಿಸಬೇಕಾಗುತ್ತದೆ. ಹೆಚ್ಚಿನ ವಿವರಗಳಿಗಾಗಿ ಎಂ. ಉಮೇಶ್ ಅವರು ಬರೆದಿರುವ ನಡತೆ ನಿಯಮಗಳು ಸಮಗ್ರ ಕೈಪಿಡಿ ಪುಸ್ತಕವನ್ನು ನೋಡಬಹುದು.

***

11-3-18.

ನಾನು ಸರ್ಕಾರಿ ನೌಕರ. ನಮ್ಮ ಕಚೇರಿಯಲ್ಲೊಬ್ಬ ಸಹೋದ್ಯೋಗಿಗಳಿಗೆ ಸಾಲ ನೀಡುವ ವ್ಯವಹಾರವನ್ನು ನಡೆಸುತ್ತಿದ್ದಾನೆ. ಆ ವಿಚಾರವು ಮೇಲಧಿಕಾರಿಗಳ ಗಮನಕ್ಕೆ ಬಂದರೂ ಪ್ರಯೋಜನವಾಗಿಲ್ಲ. ಸರ್ಕಾರಿ ನೌಕರ ಸಾಲದ ವಹಿವಾಟನ್ನು ನಡೆಸಬಹುದೆ? ಸೂಕ್ತವಾದ ಉತ್ತರ ನೀಡಿ.

| ಪುಟ್ಟೇಗೌಡ ಮಂಡ್ಯ.

ಕರ್ನಾಟಕ ಸರ್ಕಾರಿ ಸೇವಾ (ನಡತೆ) ನಿಯಮಗಳು 1956ರ ನಿಯಮ 21(4) (ಜಿ) (ಎ) ರಂತೆ ಸರ್ಕಾರಿ ನೌಕರನು ತನ್ನ ಅಧಿಕಾರದ ಸ್ಥಳಿಯ ಪರಿಮಿತಿಯೊಳಗೆ ಇರುವ ಯಾವುದೇ ವ್ಯಕ್ತಿಗೆ ತಾನು ಯಾರೊಂದಿಗೆ ಅಧಿಕೃತ ವ್ಯವಹಾರ ನಡೆಸುವ ಸಂಭವವಿದೆಯೋ ಆ ವ್ಯಕ್ತಿಗೆ ಸಾಲ ಕೊಡುವಂತಿಲ್ಲ. ಈ ರೀತಿಯ ಸಾಲದ ವಹಿವಾಟು ನಡತೆ ನಿಯಮಾವಳಿಯ ಉಲ್ಲಂಘನೆಯಾಗಿದ್ದು ಶಿಸ್ತು ಕ್ರಮ ಕೈಗೊಳ್ಳಲು ಸಕಾರಣವಾಗಿರುತ್ತದೆ. ಹೆಚ್ಚಿನ ವಿವರಗಳಿಗೆ ಎಂ. ಉಮೇಶ್ ಅವರು ಬರೆದಿರುವ ನಡತೆ ನಿಯಮಗಳು – ಸಮಗ್ರ ಕೈಪಿಡಿ ಪುಸ್ತಕವನ್ನು ನೋಡಿ.

***

10-3-18.

ನಾನು ಇಬ್ಬರು ಪತ್ನಿಯರನ್ನು ಹೊಂದಿದ್ದೇನೆ. ಈ ಕಾರಣದಿಂದಾಗಿ ನಾನು ಸರ್ಕಾರಿ ಸೇವೆಗೆ ಸೇರಲು ಅರ್ಹನಾಗುತ್ತೇನೆಯೇ? ಈ ಬಗ್ಗೆ ಸೂಕ್ತ ಪರಿಹಾರ ಸೂಚಿಸಿ.

| ಮೊಹಮ್ಮದ್ ಇಸ್ಮಾಯಿಲ್ ಬೀದರ್.

ಕರ್ನಾಟಕ ಸರ್ಕಾರಿ ಸೇವಾ (ಸಾಮಾನ್ಯ ನೌಕರಿ ಭರ್ತಿ) ನಿಯಮಗಳು 1977ರ ನಿಯಮ 5(2)ರಲ್ಲಿ – ಒಬ್ಬರಿಗಿಂತ ಹೆಚ್ಚು ಜೀವಂತವಾಗಿರುವ ಪತ್ನಿಯರನ್ನು ಹೊಂದಿರುವ ಯಾವುದೇ ವ್ಯಕ್ತಿಯು ಮತ್ತು ಈಗಾಗಲೇ ಪತ್ನಿಯನ್ನು ಹೊಂದಿರುವಂತಹ ವ್ಯಕ್ತಿಯನ್ನು ಮದುವೆಯಾಗಿರುವ ಯಾರೇ ಮಹಿಳೆಯು ಕೂಡ ಕರ್ನಾಟಕ ರಾಜ್ಯ ಸರ್ಕಾರಿ ಸೇವೆಗೆ ನೇಮಕವಾಗಲು ಅರ್ಹರಾಗಿರುವುದಿಲ್ಲ ಎಂದು ತಿಳಿಸಲಾಗಿದೆ. ಆದುದರಿಂದ ನೀವು ಸರ್ಕಾರಿ ಸೇವೆಗೆ ಸೇರಲು ಈ ನಿರ್ಬಂಧದಿಂದಾಗಿ ಅನರ್ಹರಾಗುತ್ತೀರಿ. ಈ ಕುರಿತು ಹೆಚ್ಚಿನ ವಿವರಗಳಿಗಾಗಿ ಎಂ. ಉಮೇಶ್ ಅವರು ಬರೆದಿರುವ ‘ನಡತೆ ನಿಯಮಗಳು – ಸಮಗ್ರ ಕೈಪಿಡಿ’ ಪುಸ್ತಕವನ್ನು ನೋಡಿ.

***

9-3-18.

ನಾನು ಶಿಕ್ಷಕ ಹುದ್ದೆಗೆ ಸೇರಿ ಐದು ವರ್ಷಗಳಾಗಿವೆ (2012). 2014ರಲ್ಲಿ ಪಿಎಚ್.ಡಿ. ಸಂಶೋಧನೆಗೆ ನೋಂದಣಿ ಮಾಡಿಸಿದ್ದು ತತ್ಸಂಬಂಧವಾಗಿ ಇಲಾಖಾ ಅನುಮತಿ ಕೋರಿದ್ದರೂ ಯಾವುದೇ ಉತ್ತರ ಬಂದಿಲ್ಲ. ಸಂಶೋಧನೆಗೆ ಸಂಬಂಧಪಟ್ಟಂತೆ ದತ್ತಾಂಶ ಸಂಗ್ರಹಿಸಲು ಎರಡು ತಿಂಗಳ ರಜೆ ಅಗತ್ಯವಿದೆ. ಹೇಗೆ ಎರಡು ತಿಂಗಳ ರಜೆ ಪಡೆಯಬಹುದು?

| ಸಂಪತ್ಕುಮಾರ್ ತುಮಕೂರು.

ಕರ್ನಾಟಕ ಸರ್ಕಾರಿ ಸೇವಾ ನಿಯಮಾವಳಿಯ ಪರಿಶಿಷ್ಟ 2ಎ ನಿಯಮ 10ರ ಪ್ರಕಾರ ಪಿಎಚ್ಡಿ ಸೇವಾ ಮುಂಬಡ್ತಿಗೆ ಅರ್ಹತಾದಾಯಕವೆಂದು ಪರಿಗಣಿಸಿದ್ದಲ್ಲಿ ಅಂಥದ್ದಕ್ಕೆ ಅನುಮತಿ ನೀಡಬಹುದು. ಈ ಪಿಎಚ್ಡಿ ಪದವಿಯು ಕಾಲೇಜು ಶಿಕ್ಷಣ ಅಥವಾ ವಿ.ವಿ.ಯ ಸಹಾಯಕ ಪ್ರಾಧ್ಯಾಪಕರ ಹುದ್ದೆಯ ಪದೋನ್ನತಿಗೆ ಅವಶ್ಯವಾಗಿದ್ದು ಪ್ರೌಢಶಾಲಾ ಶಿಕ್ಷಕರಿಗೆ ಅಗತ್ಯವಿಲ್ಲ. ಆದುದರಿಂದ ನೀವು ದತ್ತಾಂಶ ಸಂಗ್ರಹಿಸಲು ಮೇಲಧಿಕಾರಿಗಳ ಅನುಮತಿಯೊಡನೆ ಕರ್ನಾಟಕ ಸರ್ಕಾರಿ ಸೇವಾ ನಿಯಮಾವಳಿಯ ನಿಯಮ 117ರ ಮೇರೆಗೆ 2 ತಿಂಗಳ ಕಾಲ ಅಸಾಧಾರಣ ರಜೆ ಅಥವಾ ಗಳಿಸದ ರಜೆ ಪಡೆಯಬಹುದು.

***

8-3-18.

ನಾನು 2012-13ನೇ ಸಾಲಿನಲ್ಲಿ ಮೊರಾರ್ಜಿ ದೇಸಾಯಿ ವಸತಿ ಶಾಲೆಗಳ ಸಂಘದಿಂದ ನೇರ ನೇಮಕಾತಿ ಆಗಿದ್ದು ಅದೇ ಸಾಲಿನಲ್ಲಿ ಪ್ರೌಢಶಾಲಾ ಶಿಕ್ಷಕ ಹುದ್ದೆಗೂ ಅರ್ಜಿ ಸಲ್ಲಿಸಿದ್ದೆ. 2014-15ನೇ ಸಾಲಿನಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆಯ ಪ್ರೌಢಶಾಲಾ ಶಿಕ್ಷಕನಾಗಿ ನೇಮಕಾತಿ ಹೊಂದಿದ್ದೇನೆ. ನಿರಾಕ್ಷೇಪಣಾ ಪತ್ರ ತೆಗೆದುಕೊಳ್ಳದೆ ವಸತಿ ಶಾಲೆಯ ಶಿಕ್ಷಕ ಹುದ್ದೆಗೆ ರಾಜೀನಾಮೆ ನೀಡಿ ಸಾರ್ವಜನಿಕ ಶಿಕ್ಷಣ ಇಲಾಖೆಯ ಪ್ರೌಢಶಾಲಾ ಶಿಕ್ಷಕನಾಗಿದ್ದೇನೆ. ಮತ್ತೊಮ್ಮೆ ಇಲಾಖಾ ಪರೀಕ್ಷೆ ಬರೆಯಬೇಕೆ?

| ನಿರುಪಾದಪ್ಪ ಕಟ್ಟೀಮನಿ ವಿಜಯಪುರ.

ಕರ್ನಾಟಕ ಸರ್ಕಾರಿ ಸೇವಾ (ಕನ್ನಡ ಭಾಷೆ ಮತ್ತು ಸೇವಾ ಪರೀಕ್ಷೆಗಳು) ನಿಯಮಗಳು 1974ರ ನಿಯಮ 3ರ ಪ್ರಕಾರ ಸರ್ಕಾರಿ ನೌಕರನು ಹೊಂದಿರುವ ನಿಗದಿತ ಇಲಾಖಾ ಪರೀಕ್ಷೆಗಳನ್ನು ತೇರ್ಗಡೆಯಾಗುವುದು ಕಡ್ಡಾಯ. ಆದರೆ ನೀವು ಮೊರಾರ್ಜಿ ದೇಸಾಯಿ ಶಾಲೆಯ ಶಿಕ್ಷಕ ಹುದ್ದೆಗೆ ರಾಜೀನಾಮೆ ನೀಡಿದ್ದು, ಪ್ರೌಢಶಾಲಾ ಶಿಕ್ಷಕ ಹುದ್ದೆಯಲ್ಲಿ ಆ ಸೇವೆ ಮುಂದುವರೆಯದೆ ಇರುವುದರಿಂದ ಕರ್ನಾಟಕ ಲೋಕಸೇವಾ ಆಯೋಗದ ಇಲಾಖಾ ಪರೀಕ್ಷೆಗಳಿಗೆ ಮತ್ತೊಮ್ಮೆ ಹಾಜರಾಗಬೇಕಾಗುತ್ತದೆ.

***

7-3-18.

ನನ್ನ ತಂದೆ ಮರಣ ಹೊಂದಿದ ನಂತರ ಅನುಕಂಪದ ಮೇರೆಗೆ ಕೆಲಸ ಮಾಡಲು ಅರ್ಜಿ ಸಲ್ಲಿಸಿದ್ದೆ. ನನ್ನ ತಾಯಿ ತಂದೆಯವರಿಗೆ ದ್ವಿತೀಯ ಪತ್ನಿಯಾಗಿದ್ದು ಸರ್ಕಾರದ ಅನುಮತಿ ಪಡೆದು ವಿವಾಹವಾಗಿದ್ದರು. ಮೊದಲ ಪತ್ನಿಯ ಜತೆ ವಿಚ್ಛೇದನವಾಗಿದ್ದರೂ ಅವರ ಪುತ್ರ ಬಂದು ಅನುಕಂಪದ ಮೇರೆಗೆ ಅರ್ಜಿ ಸಲ್ಲಿಸಿದ್ದಾರೆ. ವಿಚ್ಛೇದನವಾದ ಎರಡು ವರ್ಷಗಳ ಬಳಿಕ ದ್ವಿತೀಯ ಪತಿಗೆ ಅವನು ಜನಿಸಿದ್ದಾನೆ. ಈ ಬಗ್ಗೆ ಪ್ರಶ್ನಿಸಬಹುದೆ?

| ಎಂ. ನಟೇಶ್ ವಿಜಯಪುರ.

ಕರ್ನಾಟಕ ಸಿವಿಲ್ ಸೇವಾ (ಅನುಕಂಪದ ಮೇರೆಗೆ ನೇಮಕಾತಿ) ನಿಯಮಗಳ 1996ರ ನಿಯಮ 3ರ ಮೇರೆಗೆ ಮೃತ ಸರ್ಕಾರಿ ನೌಕರನ ಪತ್ನಿ ಅಥವಾ ಅವರ ಮಗ ಅರ್ಹರಾಗುತ್ತಾರೆ. ಆದರೆ ನಿಮ್ಮ ತಂದೆಯ ಮೊದಲ ಪತ್ನಿಗೆ ವಿವಾಹ ವಿಚ್ಛೇದದ ನಂತರ ದ್ವಿತೀಯ ಪತಿಯಿಂದ ಜನಿಸಿದ ಪುತ್ರನು ಅನುಕಂಪದ ಮೇರೆಗೆ ನೇಮಕಕ್ಕೆ ಅರ್ಹನಾಗುವುದಿಲ್ಲ. ಸರ್ಕಾರದ ಅನುಮತಿ ಮೇರೆಗೆ ನಿಮ್ಮ ತಾಯಿಯನ್ನು ವಿವಾಹವಾಗಿರುವುದರಿಂದ ನೀವು ಅನುಕಂಪದ ಮೇರೆಗೆ ನೇಮಕ ಮಾಡಿಕೊಳ್ಳಲು ಅರ್ಜಿ ಸಲ್ಲಿಸಬಹುದು.

***

6-3-18.

ನಾನು ಆರೋಗ್ಯ ಇಲಾಖೆಯಲ್ಲಿ ‘ಸಿ’ ದರ್ಜೆಯ ವೇತನಶ್ರೇಣಿಯಲ್ಲಿ ಕಿರಿಯ ಆರೋಗ್ಯ ಸಹಾಯಕನಾಗಿ ಕಾರ್ಯ ನಿರ್ವಹಿಸುತ್ತಿದ್ದು, ದ್ವಿತೀಯ ದರ್ಜೆ ಸಹಾಯಕರ ಹುದ್ದೆಗೆ ಬದಲಿಸಿಕೊಳ್ಳಬಹುದೆ? ಸಾಧ್ಯವಿದ್ದಲ್ಲಿ ಹೇಗೆ ಯಾವ ನಿಯಮಾವಳಿಯ ಪ್ರಕಾರ ಯಾವ ಹುದ್ದೆಗಳಿಗೆ ಬದಲಿಸಿಕೊಳ್ಳಬಹುದು?

ಹೆಚ್. ಸಂತೋಷ್ ಬೆಳಗಾವಿ.

ಕರ್ನಾಟಕ ಸರ್ಕಾರಿ ಸೇವಾ (ಸಾಮಾನ್ಯ ನೇಮಕಾತಿ) ನಿಯಮಗಳು 1977ರ ನಿಯಮ 16ಎ ಪ್ರಕಾರ ಸಿ ಅಥವಾ ಡಿ ಗುಂಪಿನ ನೌಕರರು ಒಂದು ಜ್ಯೇಷ್ಠತಾ ಘಟಕದಿಂದ ಮತ್ತೊಂದು ಜ್ಯೇಷ್ಠತಾ ಘಟಕಕ್ಕೆ ಅದೇ ಕೇಡರ್ನಲ್ಲಿನ ಸಮಾನ ಹುದ್ದೆಗೆ ವರ್ಗಾವಣೆ ಮೂಲಕ ನೇಮಕ ಮಾಡಿಕೊಳ್ಳಬಹುದು. ಆದರೆ ತತ್ಸಮಾನ ವೇತನಶ್ರೇಣಿ ಹೊಂದಿರಬೇಕು. ದ್ವಿತೀಯ ದರ್ಜೆ ಸಹಾಯಕರ ವೇತನಶ್ರೇಣಿಯು (11,600-21,000) ನೀವು ಹೊಂದಿರುವ ವೇತನಶ್ರೇಣಿಗಿಂತ ಕಡಿಮೆಯಾಗಿರುವುದರಿಂದ ಬದಲಿಸಿಕೊಳ್ಳಲು ಸಾಧ್ಯವಿಲ್ಲ. ಆದರೆ ಇನ್ನಿತರ ಹುದ್ದೆಗಳಿಗೆ ನಿಮ್ಮ ಇಲಾಖೆಯ ವೃಂದ ಮತ್ತು ನೇಮಕಾತಿ ನಿಯಮಾವಳಿಯಾನುಸಾರ ಬದಲಾವಣೆ ಮಾಡಿಕೊಳ್ಳಬಹುದು.

***

5-3-18.

ನನ್ನ ಪತ್ನಿ 2013ರ ಮೇ ಐದಕ್ಕೆ ಖಜಾನೆ ಇಲಾಖೆಯ ಎಫ್ಡಿಎ ಹುದ್ದೆಗೆ ಸೇರಿದ್ದರು. ದ್ವಿಚಕ್ರ ವಾಹನದ ಅಪಘಾತದಲ್ಲಿ ಕೈ ಮುರಿದುಕೊಂಡಿದ್ದರಿಂದ 2017ರ ಮೇ 26ರಿಂದ 2017ರ ಜೂನ್ 26ರ ತನಕ ವೈದ್ಯಕೀಯ ರಜೆ ಪಡೆದಿದ್ದರು. ಹೀಗಾಗಿ ಅವರ ಪರಿವೀಕ್ಷಣಾ ಅವಧಿ ನಿಗದಿತ ಅವಧಿಗಿಂತ ಒಂದು ತಿಂಗಳು ಮುಂದೂಡಲಾಗುವುದೆ? ನಿಯಮಗಳ ವಿವರ ತಿಳಿಸಿ.

| ಸಿ.ಆರ್. ನಾಯಕ್ ಲಿಂಗಸುಗೂರ.

ಕರ್ನಾಟಕ ಸಿವಿಲ್ ಸೇವಾ (ಪ್ರೊಬೇಷನ್) ನಿಯಮಗಳು 1977ರ ನಿಯಮ 3ರಂತೆ ವೈದ್ಯಕೀಯ ಕಾರಣಗಳ ನಿಮಿತ್ತ ಪಡೆದ ಅಸಾಧಾರಣ ರಜೆಗಳನ್ನು ಒಳಗೊಂಡಂತೆ ಅವರ ಪರೀಕ್ಷಾರ್ಥ ಅವಧಿಯನ್ನು ಒಂದು ತಿಂಗಳ ಕಾಲ ಮುಂದೂಡಲಾಗುತ್ತದೆ. ಆದುದರಿಂದ ಈ ಕುರಿತಾದ ಹೆಚ್ಚಿನ ವಿವರಗಳಿಗೆ ನೀವು ಇದೇ ಲೇಖಕರು ಬರೆದಿರುವ ಕರ್ನಾಟಕ ಸರ್ಕಾರಿ ಸೇವಾ ಕಾನೂನು ಕೈಪಿಡಿ ಪುಸ್ತಕವನ್ನು ನೋಡಬಹುದು.

***

4-3-2018.

ಪೊಲೀಸ್ ಇಲಾಖೆಯಲ್ಲಿ 38 ವರ್ಷ ಸೇವೆ ಸಲ್ಲಿಸಿ 2011ರ ಆಗಸ್ಟ್ 31ರಂದು ವಯೋನಿವೃತ್ತಿ ಹೊಂದಿದೆ. ನಿವೃತ್ತಿ ಸಮಯದಲ್ಲಿ ನನಗೆ 60 ವರ್ಷ ತುಂಬಿದೆ. ಇಲಾಖೆಯಿಂದ ಬರಬೇಕಾದ ಡಿ.ಸಿ.ಆರ್.ಜಿ. ಮತ್ತು ಕಮ್ಯೂಟೇಷನ್ ಹಣ ಸರಿಯಾಗಿ ಬಂದಿದೆ. ಕಮ್ಯೂಟೇಷನ್ನಿಂದ ಬಂದ ಹಣವನ್ನು ಯಾವ ಲೆಕ್ಕದಲ್ಲಿ 15 ವರ್ಷಗಳವರೆಗೆ ಕಡಿತ ಮಾಡುತ್ತಾರೆ? ಸರ್ಕಾರದಿಂದ ಬಂದ ಕಮ್ಯೂಟೇಷನ್ ಹಣ ಬಡ್ಡಿ ಸಹಿತವೆ ಅಥವಾ ಬಡ್ಡಿರಹಿತವೆ?

| ಬಸವರಾಜು ಎಂ. ಬೆಂಗಳೂರು.

ಕರ್ನಾಟಕ ಸರ್ಕಾರಿ ಸೇವಾ ನಿಯಮಾವಳಿಯ ನಿಯಮ 376 (2)ರಂತೆ ಸರ್ಕಾರಿ ನೌಕರನು ನಮೂನೆ 1-ಬಿಯಲ್ಲಿ ನಿವೃತ್ತಿ ವೇತನದ ವಿವರಗಳನ್ನು ನೀಡುವಾಗ 1/3ನೇ ಭಾಗ ಪಿಂಚಣಿಯನ್ನು ಪರಿವರ್ತನೆ ಮಾಡಿಕೊಳ್ಳಲು ತನ್ನ ಐಚ್ಛಿಕತೆಯನ್ನು ಘೊಷಿಸಬೇಕು. ಈ ರೀತಿ ಪರಿವರ್ತಿತ ಮೊಬಲಗನ್ನು ಪಡೆದ ಮೇಲೆ ನಿಯಮ 376(14)ರಂತೆ 15 ವರ್ಷಗಳ ನಿಮ್ಮ ಪಿಂಚಣಿಯಿಂದ ಕಟಾಯಿಸಿಕೊಳ್ಳಲಾಗುತ್ತದೆ. ಇದು, ನಿವೃತ್ತ ಸರ್ಕಾರಿ ನೌಕರನಿಗೆ ಆರ್ಥಿಕ ಸೌಲಭ್ಯ ಕಲ್ಪಿಸಲು ಕಡಿಮೆ ಬಡ್ಡಿದರದ ಆವರ್ತಕ ಮೊಬಲಾಗಿದೆ.

***

3-3-18

ನಾನು ತೋಟಗಾರಿಕಾ ವಿಜ್ಞಾನ ವಿ.ವಿ.ಯಲ್ಲಿ 14-7-2006ರಿಂದ ಹಿರಿಯ ಸಹಾಯಕರ ಹುದ್ದೆಯಲ್ಲಿ ಖಾಯಂ ಸೇವೆ ಸಲ್ಲಿಸುತ್ತಿದ್ದೇನೆ. ಅಲ್ಲೇ ನೇರ ನೇಮಕಾತಿಯಡಿ ಅಧಿಸೂಚಿಸಲಾದ ಅಧೀಕ್ಷಕರ (ಸಾಮಾನ್ಯ) ಹುದ್ದೆಗೆ ಅರ್ಜಿ ಸಲ್ಲಿಸಿ ನೇಮಕಾತಿ ಹೊಂದಿದ್ದೇನೆ. ಈ ಪ್ರಯುಕ್ತ ಹಿರಿಯ ಸಹಾಯಕ ಹುದ್ದೆಗೆ ತಾಂತ್ರಿಕ ರಾಜೀನಾಮೆ ನೀಡಿ 26-12-2013ರಂದು ಹೊಸ ಹುದ್ದೆಯ ಕರ್ತವ್ಯಕ್ಕೆ ವರದಿ ಮಾಡಿಕೊಂಡಿದ್ದೇನೆ. ಇದೇ ವಿ.ವಿ.ಯಲ್ಲಿ ಈ ಹಿಂದೆ ಹಿರಿಯ ಸಹಾಯಕರ ಹುದ್ದೆಯಲ್ಲಿ ನಿರ್ವಹಿಸಲಾದ ನನ್ನ ಸೇವಾಪುಸ್ತಕವನ್ನು ಹೊಸ ಹುದ್ದೆಯಲ್ಲೂ ಮುಂದುವರಿಸಬಹುದೆ? ರಜಾ ಸೌಲಭ್ಯ ಪಡೆಯಬಹುದೆ?

ಸುವರ್ಣಾ ಪ. ಕೊಟ್ರಣ್ಣವರ, ಬಾಗಲಕೋಟೆ.

ನೀವು ಕರ್ನಾಟಕ ಸರ್ಕಾರಿ ಸೇವಾ ನಿಯಮ 252(ಬಿ) ರಂತೆ; ಸೂಕ್ತ ಅನುಮತಿ ಪಡೆದು ಬೇರೊಂದು ಹುದ್ದೆಗೆ ನೇಮಕವಾದ ಮೇಲೆ ಹಿಂದಿನ ಸೇವೆಯು ಪೂರ್ಣವಾಗಿ ಪರಿಗಣಿಸಲ್ಪಡುವಂತಿದ್ದರೆ, ಅಂಥ ರಾಜೀನಾಮೆ ಸರ್ಕಾರಿ ಸೇವೆಗೆ ನೀಡಿದ ರಾಜೀನಾಮೆ ಆಗುವುದಿಲ್ಲ. ನಿಯಮ 408ರಂತೆ ನೀವು ಹಿಂದೆ ಬಳಸಿದ ಸೇವಾ ಪುಸ್ತಕವನ್ನು ಮುಂದುವರಿಸಬಹುದು. ನಿಮ್ಮ ಖಾತೆಯಲ್ಲಿದ್ದ ರಜೆಯನ್ನೂ ಪಡೆಯಬಹುದು.

***

2/3/18.

ನಾನು 2016ರ ಏಪ್ರಿಲ್ 26ರಿಂದ ಶಿಕ್ಷಣ ಇಲಾಖೆಯಲ್ಲಿ ಡಿ ದರ್ಜೆ ನೌಕರನಾಗಿ ಸೇವೆ ಸಲ್ಲಿಸುತ್ತಿದ್ದು ಈಗ ವರ್ಗಾವಣೆ ಬಯಸಿ ಅರ್ಜಿ ಹಾಕಲು ಇಚ್ಛಿಸುತ್ತೇನೆ. ವರ್ಗಾವಣೆ ಅರ್ಜಿ ಹಾಕಬೇಕಾದರೆ ಒಂದು ಕಡೆ ಇಷ್ಟು ವರ್ಷ ಸೇವೆ ಸಲ್ಲಿಸಬೇಕು ಎಂದು ಷರತ್ತುಗಳಿವೆಯೇ? ಹಾಗೇನಾದರೂ ಇದ್ದರೆ ಒಂದು ಕಡೆ ಎಷ್ಟು ವರ್ಷ ಸೇವೆ ಸಲ್ಲಿಸಿದರೆ ವರ್ಗಾವಣೆ ಅರ್ಜಿ ಹಾಕಲು ಅನುಮತಿಸಲಾಗುತ್ತದೆ?

-ಮಂಜುನಾಥ ಘಸ್ತಿ ಹುಕ್ಕೇರಿ.

ದಿನಾಂಕ 7-6-2013ರ ಸರ್ಕಾರಿ ಆದೇಶ ಸಂಖ್ಯೆ ಡಿಪಿಎಆರ್ 22 ಸೇನೌವ 2013ರ ಕಂಡಿಕೆ 8ರಂತೆ ‘ಡಿ’ ಗುಂಪಿನ ನೌಕರರು ಒಂದು ಸ್ಥಳದಲ್ಲಿ ಕನಿಷ್ಠ ಏಳು ವರ್ಷಗಳ ಕಾಲ ಸೇವಾವಧಿ ಪೂರ್ಣಗೊಳಿಸದಿದ್ದರೆ ಅಂತಹ ನೌಕರರನ್ನು ವರ್ಗಾವಣೆ ಮಾಡುವಂತಿಲ್ಲ. ಆದ್ದರಿಂದ ನೀವು ವರ್ಗಾವಣೆ ಕೋರಿ ಅರ್ಜಿ ಹಾಕಲು ಅರ್ಹರಾಗುವುದಿಲ್ಲ. ಹೆಚ್ಚಿನ ವಿವರಗಳಿಗೆ ಇದೇ ಲೇಖಕರ ಕರ್ನಾಟಕ ಸರ್ಕಾರಿ ಸೇವಾ ಕಾನೂನು ಕೈಪಿಡಿ ಪುಸ್ತಕವನ್ನು ನೋಡಿ.

***

01-03-18.

ನಾನು ಒಟ್ಟು 17 ವರ್ಷ 8 ತಿಂಗಳು 29 ದಿನ ಸೇವೆ ಸಲ್ಲಿಸಿ ದಿನಾಂಕ 2017ರ ಆಗಸ್ಟ್ 30ರಂದು ಸ್ವಯಂನಿವೃತ್ತಿ ಹೊಂದಿದೆ. ನಿವೃತ್ತಿ ಹೊಂದುವಾಗಿನ ನನ್ನ ಮೂಲವೇತನ 18,550 ರೂ. ನನಗೆ ಸಿಗುವ ಮಾಸಿಕ ಪಿಂಚಣಿ ಹಾಗೂ ಉಪದಾನ, ಪಿಂಚಣಿ ಪರಿವರ್ತನೆ ಮೊತ್ತ ಎಷ್ಟು?

| ವಿ.ಎಸ್. ಬಡಿಗೇರ.

ಕರ್ನಾಟಕ ಸರ್ಕಾರಿ ಸೇವಾ ನಿಯಮಾವಳಿಯ ನಿಯಮ 285(2)(5) ರಂತೆ ನೀವು ಸಲ್ಲಿಸಿದ ಸೇವಾವಧಿಗೆ ಹೆಚ್ಚುವರಿ ಸೇವಾಧಿಕ್ಯ (ಡಿಛಿಜಿಜಜಠಿಚಜಛಿ) ಸೇರಿಸಿದರೆ 45 ಅರ್ಧ ವರ್ಷಗಳಾಗುತ್ತವೆ. ನೀವು ನೀಡಿದ ಮಾಹಿತಿಗೆ ಅನುಸಾರವಾಗಿ ಲೆಕ್ಕಾಚಾರ ಮಾಡಿದರೆ 6426 ರೂ. ಪಿಂಚಣಿ ಲಭ್ಯವಾದರೆ 4,17,375 ರೂ. ಡಿಸಿಆರ್ಜಿ ದೊರಕುತ್ತದೆ. ನಿಯಮ 376 ಮತ್ತು 377ರಂತೆ ನಿಮಗೆ 4,02,010 ರೂ. ನಿವೃತ್ತಿ ವೇತನದ ಪರಿವರ್ತನಾ (ಕಮ್ಯುಟೇಷನ್) ಮೊಬಲಗು ಪಡೆಯಲು ಅರ್ಹರಾಗುತ್ತೀರಿ. ಹೆಚ್ಚಿನ ವಿವರಗಳಿಗೆ ಇದೇ ಲೇಖಕರ ಕರ್ನಾಟಕ ಸರ್ಕಾರಿ ಸೇವಾ ನಿಯಮಗಳು ಪುಸ್ತಕವನ್ನು ನೋಡಿ.

***

28-02-18.

ನಾನು 1988ರಲ್ಲಿ ಕೃಷಿ ವಿಶ್ವವಿದ್ಯಾಲಯದಲ್ಲಿ ಸೇವೆಗೆ ಸೇರಿ 1995ರಲ್ಲಿ ಸುದ್ದಿವಾಹಕ ಹುದ್ದೆಯಿಂದ ಹಿರಿಯ ಸುದ್ದಿವಾಹಕ ಎಂದು ಮುಂಬಡ್ತಿ ಪಡೆದೆ. 1998ರಲ್ಲಿ ವಿಶ್ವವಿದ್ಯಾಲಯದ ಅಧಿಸೂಚನೆಯಂತೆ ಪ್ರಯೋಗಶಾಲಾ ಹುದ್ದೆಗೆ ಅರ್ಜಿ ಹಾಕಿ ಮತ್ತೆ ನೇಮಕಾತಿ ಹೊಂದಿ 1998ರಲ್ಲಿ ಮಾರ್ಚ್ ತಿಂಗಳು ಪ್ರಯೋಗಶಾಲಾ ಸಹಾಯಕ ಎಂದು ಹಾಜರಾದೆ. ಅದೇ ಹುದ್ದೆಯಲ್ಲಿ 10-15 ವರ್ಷ ಯಾವುದೇ ಮುಂಬಡ್ತಿಯಿಲ್ಲದೆ ಸೇವೆ ಸಲ್ಲಿಸಿದಕ್ಕಾಗಿ ಸ್ವಯಂಚಾಲಿತ ವಿಶೇಷ ಬಡ್ತಿ ಯೋಜನೆ ಅಡಿಯಲ್ಲಿ ಹಿರಿಯ ವೇತನ ಶ್ರೇಣಿ ಮಂಜೂರಾತಿ ಪಡೆದಿದ್ದೇನೆ. ಆದರೆ ಮಾರ್ಚ್ 2018ಕ್ಕೆ 20 ವರ್ಷಗಳ ಒಂದು ಹೆಚ್ಚುವರಿ ವಿಶೇಷ ವೇತನ ಬಡ್ತಿ ಯೋಜನೆಯಡಿ ಮಂಜೂರಾತಿಗೆ ಅರ್ಹನೆ?

ಎಂ.ಪಿ. ಜಾಧವ ಧಾರವಾಡ.

9 ಮೇ 2002 6(2)(ಆ)ರ ಸರ್ಕಾರಿ ಆದೇಶ ಸಂಖ್ಯೆ: ಎಫ್ಡಿ.13 ಎಸ್ಆರ್ಪಿ 2002ರ ಕಂಡಿಕೆಯ ಮೇರೆಗೆ ಸೇವಾವಧಿಯಲ್ಲಿ ಒಂದು ಬಾರಿ ಪದೋನ್ನತಿ ಸೌಲಭ್ಯ ಪಡೆದವರು ಈ ಇಪ್ಪತ್ತು ವರ್ಷಗಳ ವಿಶೇಷ ವೇತನ ಬಡ್ತಿಗೆ ಅರ್ಹರಾಗುವುದಿಲ್ಲ. ಆದ್ದರಿಂದ ಈ ಆದೇಶದಂತೆ ನಿಮಗೆ ಈ ವಿಶೇಷ ವೇತನ ಬಡ್ತಿ ಲಭ್ಯವಾಗುವುದಿಲ್ಲ.

***

27-2-18.

ಕರ್ನಾಟಕ ಸರ್ಕಾರದಿಂದ ಪಿಂಚಣಿ ಪಡೆಯುತ್ತಿರುವ ವಿಧವೆಯೊಬ್ಬಳಿಗೆ 65 ವರ್ಷ ವಯಸ್ಸು. ಮಕ್ಕಳು ಬಂಧುಗಳು ಯಾರೂ ಇಲ್ಲ. ಪಿಂಚಣಿ ಪಡೆಯುತ್ತಿರುವ 62 ವರ್ಷದ ವಿದುರರೊಬ್ಬರು ಅವರನ್ನು ಮದುವೆಯಾಗಲು ಮುಂದೆ ಬಂದಿದ್ದಾರೆ. ಅವರಿಗೂ ಮಕ್ಕಳು ಬಂಧುಗಳು ಯಾರೂ ಇಲ್ಲ. ಈ ಹಂತದಲ್ಲಿ ಅವರು ಮದುವೆಯಾದರೆ ಪತ್ನಿಯ ಮರಣದ ನಂತರ ಪತಿಗೆ, ಪತಿಯ ಮರಣದ ನಂತರ ಪತ್ನಿಗೆ ಕುಟುಂಬ ಪಿಂಚಣಿ ದೊರಕುತ್ತದೆಯೆ?

| ಪ್ರಾಣೇಶ ರಾವ್ ಕಲಬುರಗಿ.

ಕರ್ನಾಟಕ ಸರ್ಕಾರಿ ನೌಕರರ (ಕುಟುಂಬ ಪಿಂಚಣಿ) ನಿಯಮಗಳು 2002ರ ನಿಯಮ 15(1) ರೀತ್ಯಾ ನಿವೃತ್ತಿ ವೇತನದಾರನು/ಳು ವಿವಾಹವಾದಾಗ, ಆ ವಿಷಯವನ್ನು ಮೂರು ತಿಂಗಳೊಳಗಾಗಿ ನಮೂನೆ ‘ಎಫ್’ನಲ್ಲಿ ನಿವೃತ್ತಿ ಸಂದರ್ಭದಲ್ಲಿ ಪಿಂಚಣಿ ಕಾಗದಪತ್ರಗಳಿಗೆ ಸಂಬಂಧಪಟ್ಟಂತೆ ವ್ಯವಹರಿಸಿದ ಕಚೇರಿ ಮುಖ್ಯಸ್ಥನಿಗೆ ತಿಳಿಸಬೇಕು. ಅರ್ಜಿಯೊಂದಿಗೆ ವಿವಾಹ ಪ್ರಮಾಣಪತ್ರದ ದೃಢೀಕೃತ ಪ್ರತಿ ಹಾಗೂ ಪತಿ-ಪತ್ನಿಯೊಂದಿಗಿನ ಪಾಸ್ಪೋರ್ಟ್ ಅಳತೆಯ ಜಂಟಿ ಭಾವಚಿತ್ರದ ಮೂರು ಪ್ರತಿಗಳನ್ನು ಸಲ್ಲಿಸಬೇಕು. ತದನಂತರ ಈ ನಿಯಮಾವಳಿ ರೀತ್ಯಾ ಮಹಾಲೇಖಾಪಾಲರಿಗೆ ಕಳುಹಿಸಿ ಪರಿಷ್ಕೃತ ಪಿಂಚಣಿ ದಾಖಲೆ ನೀಡಲು ಕ್ರಮ ವಹಿಸಬೇಕಾಗುತ್ತದೆ.

***

26-2-18.

ನಾನು ಶಿಕ್ಷಕಿ. ಪತಿಯ ನಿಧನದಿಂದ ಪಿಂಚಣಿ ಪಡೆಯುತ್ತಿದ್ದೇನೆ. ನಾನೀಗ ಎರಡನೆ ಮದುವೆಯಾಗಲು ಇಚ್ಛಿಸಿದ್ದೇನೆ. ‘ನೀವು ಎರಡನೇ ಮದುವೆಯಾದರೆ ಪಿಂಚಣಿ ಕಳೆದುಕೊಳ್ಳುವಿರಿ’ ಎಂದು ಹೇಳುತ್ತಾರೆ. ನಾನು ಎರಡನೇ ಮದುವೆಯಾದರೆ ಪಿಂಚಣಿ ಪಡೆಯಲು ಕಾನೂನು ತೊಡಕುಗಳಿವೆಯೆ?

| ಲಕ್ಷ್ಮಿ ಬಳ್ಳಾರಿ.

ಕರ್ನಾಟಕ ಸರ್ಕಾರಿ ನೌಕರರ (ಕುಟುಂಬ ನಿವೃತ್ತಿವೇತನ) ನಿಯಮಗಳು 2002ರ ನಿಯಮ 9(ಎ)ರಲ್ಲಿ ವಿಧವೆಯು ಮರುವಿವಾಹವಾದಲ್ಲಿ ಆ ದಿನಾಂಕದವರೆಗೆ ಈ ಕುಟುಂಬ ಪಿಂಚಣಿ ಸಂದಾಯ ಮಾಡಲು ಸೂಚಿಸಿದೆ. ಆದ್ದರಿಂದ ನೀವು ಎರಡನೇ ವಿವಾಹವಾದರೆ ಈ ಪಿಂಚಣಿ ಸೌಲಭ್ಯ ನಿಂತುಹೋಗುತ್ತದೆ. ಹೆಚ್ಚಿನ ವಿವರಗಳಿಗೆ ಇದೇ ಲೇಖಕರು ಬರೆದಿರುವ ‘ಕರ್ನಾಟಕ ಸರ್ಕಾರಿ ಸೇವಾ ನಿಯಮಗಳು’ ಪುಸ್ತಕವನ್ನು ನೋಡಿ

***

25-2-18

ನಾನು ಜಿಲ್ಲಾ ಪಂಚಾಯತ್ನಲ್ಲಿ ದ್ವಿತೀಯ ದರ್ಜೆ ಸಹಾಯಕನಾಗಿ ಒಂದು ವರ್ಷ ಕಾರ್ಯನಿರ್ವಹಿಸಿದ್ದು, 2016ರಲ್ಲಿ ಪ್ರಥಮ ದರ್ಜೆ ಸಹಾಯಕನಾಗಿ ಆಯ್ಕೆಯಾಗಿ ಖಜಾನೆ ಇಲಾಖೆಗೆ ನೇಮಕಗೊಂಡೆ. ಎಸ್ಡಿಎ ಹುದ್ದೆಗೆ 2017ರ ಏಪ್ರಿಲ್ನಲ್ಲಿ ರಾಜೀನಾಮೆ ನೀಡಿ ಅಂದೇ ಪೂರ್ವಾನ್ವಯವಾಗುವಂತೆ 10-4-2017ರಂದು ಪ್ರಥಮ ದರ್ಜೆ ಸಹಾಯಕರ ಹುದ್ದೆಗೆ ಕರ್ತವ್ಯಕ್ಕೆ ಹಾಜರಾಗಿದ್ದೇನೆ. ಪ್ರಸ್ತುತ ಜಿಲ್ಲಾ ಪಂಚಾಯತ್ನಲ್ಲಿ ರಾಜೀನಾಮೆ ಅಂಗೀಕಾರದ ಬಗ್ಗೆ ಸರ್ಕಾರಕ್ಕೆ ಬರೆಯುತ್ತೇವೆ ಎಂದಿದ್ದಾರೆ. ಇದರಿಂದ ತೊಂದರೆಯಾಗುವುದೆ?

| ಕುಮಾರ್ ಎಂ.ಯು. ಮಂಗಳೂರು.

ಕರ್ನಾಟಕ ಸರ್ಕಾರಿ ಸೇವಾ (ಸಾಮಾನ್ಯ ನೌಕರಿ ಭರ್ತಿ) ನಿಯಮಗಳು ನಿಯಮ 11ರಂತೆ ಪ್ರತಿಯೊಬ್ಬ ಸರ್ಕಾರಿ ನೌಕರನು ಬೇರೊಂದು ಹುದ್ದೆಗೆ ಅರ್ಜಿ ಸಲ್ಲಿಸುವಾಗ ಪೂರ್ವಾನುಮತಿ ಪಡೆಯಬೇಕಾಗುತ್ತದೆ. ನಂತರ ಅರ್ಜಿ ಸಲ್ಲಿಸಿ ಮೇಲಿನ ಹುದ್ದೆಯ ಪರೀಕ್ಷೆಗೆ ಹಾಜರಾಗಿ ಆಯ್ಕೆಯಾಗಬಹುದು. ನೀವು ಎಸ್ಡಿಎ ಹುದ್ದೆಗೆ ರಾಜೀನಾಮೆ ಸಲ್ಲಿಸಿ ಕರ್ತವ್ಯದಿಂದ ಬಿಡುಗಡೆ ಹೊಂದಿ ಪ್ರಥಮ ದರ್ಜೆ ಸಹಾಯಕರ ಹುದ್ದೆಗೆ ಹಾಜರಾಗಬೇಕಿತ್ತು. ಆದರೆ ನೀವು ಹಾಗೆ ಮಾಡದ ಕಾರಣ ನಿಮ್ಮ ವಿರುದ್ಧ ಶಿಸ್ತುಕ್ರಮ ಕೈಗೊಳ್ಳಬಹುದಾಗಿದೆ.

***

24-2-18.

ನಾನು ಸರ್ಕಾರಿ ಸೇವೆಯಲ್ಲಿ ಎಂಟು ವರ್ಷಗಳ ಕಾಲ ಸೇವೆ ಸಲ್ಲಿಸಿದ್ದೇನೆ. ಆದರೆ ಕಾರಣಾಂತರಗಳಿಂದ ನನ್ನನ್ನು ಸೇವೆಯಿಂದ ವಜಾಗೊಳಿಸಿದ್ದಾರೆ. ನಾನು ವಸತಿಗೃಹದಲ್ಲಿದ್ದು ಎಷ್ಟು ದಿನಗಳ ಒಳಗಾಗಿ ವಸತಿಗೃಹವನ್ನು ಖಾಲಿ ಮಾಡಬೇಕು? ದಯವಿಟ್ಟು ತಿಳಿಸಿ.
| ಮಹದೇವ ನಾಯಕ ದಾವಣಗೆರೆ
ಸರ್ಕಾರಿ ನಿವಾಸಿಗಳಾಗಿ ಬಳಸಲು ಸರ್ಕಾರಿ ಕಟ್ಟಡಗಳ ಹಂಚಿಕೆ ಮತ್ತು ಲೈಸೆನ್ಸ್ ಶುಲ್ಕ ವಿಧಿಸುವಿಕೆ ಮತ್ತು ನಿಯಮ 2002ರ ನಿಯಮ 30(5)ರ ಮೇರೆಗೆ ಒಂದು ತಿಂಗಳ ಅವಧಿಯ ಮೇರೆಗೆ ಲೈಸೆನ್ಸ್ ಶುಲ್ಕವಿಲ್ಲದೆ ಇಟ್ಟುಕೊಳ್ಳಬಹುದು. ಆದುದರಿಂದ ಒಂದು ತಿಂಗಳು ಮೀರಿದ ಅವಧಿಗೆ ಹೆಚ್ಚಿನ ಬಾಡಿಗೆಯನ್ನು ವಿಧಿಸಲಾಗುತ್ತದೆ. ಹೆಚ್ಚಿನ ವಿವರಗಳಿಗೆ ಇದೇ ಲೇಖಕರು ಬರೆದಿರುವ ಕರ್ನಾಟಕ ಸರ್ಕಾರಿ ಸೇವಾ ನಿಯಮಗಳು ಪುಸ್ತಕವನ್ನು ನೋಡಬಹುದು.

***

23-02-2018.

ಕಳೆದ 10 ವರ್ಷಗಳಿಂದ ಅನುದಾನಿತ ಖಾಸಗಿ ಶಿಕ್ಷಣ ಸಂಸ್ಥೆಯಲ್ಲಿ ಶಿಕ್ಷಕನಾಗಿದ್ದೇನೆ. ಕಳೆದ ಒಂದು ವರ್ಷದಿಂದ ಕರ್ತವ್ಯ ನಿರ್ಲಕ್ಷ್ಯೆ ಮೇರೆಗೆ ಅಮಾನತ್ತಿನಲ್ಲಿಟ್ಟಿದ್ದಾರೆ. ಮತ್ತೆ ಕರ್ತವ್ಯಕ್ಕೆ ತೆಗೆದುಕೊಳ್ಳಲು ವಿನಂತಿಸಿದಾಗ ಇಲಾಖೆಯ ಅನುಮತಿ ಬೇಕೆಂದರು. ಆದರೆ ನನ್ನ ಮೇಲಿನ ಆರೋಪದ ಬಗ್ಗೆ ಈ ತನಕ ವಿಚಾರಣೆ ನಡೆಸಿಲ್ಲ. ಜೀವನಾಧಾರ ಭತ್ಯೆಯನ್ನೂ ಹೆಚ್ಚಿಸಿಲ್ಲ. ಪರಿಹಾರ ಸೂಚಿಸಿ.

| ರಾಜುಗೌಡ ಮಂಡ್ಯ.

ಕರ್ನಾಟಕ ಶಿಕ್ಷಣ ಸಂಸ್ಥೆಗಳು (ಅನುದಾನಿತ ಖಾಸಗಿ ಪ್ರಾಥಮಿಕ ಪ್ರೌಢಶಿಕ್ಷಣ ಸಂಸ್ಥೆಗಳ ನೌಕರರ ನೇಮಕಾತಿ , ಸೇವಾ ಷರತ್ತುಗಳು) ನಿಯಮಗಳು 1999ರ ನಿಯಮ 2(1)(ಡಿ) ಇದರಡಿಯಲ್ಲಿ ಸಂಬಂಧಿಸಿದ ಅನುದಾನಿತ ಆಡಳಿತ ಮಂಡಳಿಯೇ ಶಿಸ್ತು ಪ್ರಾಧಿಕಾರವಾಗಿದ್ದು ಶಿಸ್ತಿನ ಕ್ರಮ ಅನುಸರಿಸಿ ದಂಡನೆಯ ಅಧಿಕಾರ ಹೊಂದಿರುತ್ತದೆಂದು 16-1-2006ರ ಸರ್ಕಾರಿ ಸುತ್ತೋಲೆ ಸಂಖ್ಯೆ ಇ.ಡಿ. 150 ಎಸ್.ಎಲ್.ಬಿ. 2005ರಂತೆ ಸೂಚಿಸಲಾಗಿದೆ. ಆಡಳಿತ ಮಂಡಳಿ ಆರು ತಿಂಗಳೊಳಗೆ ನಿಮ್ಮ ವಿರುದ್ಧದ ಆರೋಪದ ಬಗ್ಗೆ ಇಲಾಖಾ ವಿಚಾರಣೆ ಪೂರೈಸಿ ಕ್ರಮ ಕೈಗೊಳ್ಳಬೇಕಯ. ಈ ಪ್ರಕರಣದಲ್ಲಿ ನೀವು ಇಲಾಖಾ ವಿಚಾರಣೆಗೆ ಸಹಕರಿಸಿರುವುದರಿಂದ ನಿಮ್ಮ ಜೀವನಾಧಾರ ಭತ್ಯೆಯನ್ನು ಶೇ. 50ರಷ್ಟು ಹೆಚ್ಚಿಸಬೇಕಾಗುತ್ತದೆ. ಈ ಬಗ್ಗೆ ಮನವಿ ಸಲ್ಲಿಸಿ.

***

22-02-18.

ನಾನು ಸರ್ಕಾರಿ ನೌಕರಳಾಗಿದ್ದು ಕಳೆದ ವರ್ಷ ಅಕ್ಟೋಬರ್ ತಿಂಗಳಿನಲ್ಲಿ ನಮ್ಮ ಪತಿ ನಿಧನರಾದರು. 26 ವರ್ಷದ ನನಗೆ ಮೂರು ವರ್ಷದ ಒಂದು ಹೆಣ್ಣುಮಗು ಇದೆ. ಎರಡನೇ ವಿವಾಹವಾದರೆ ನನಗೆ ಪತಿಯ ಕುಟುಂಬ ನಿವೃತ್ತಿವೇತನ ಮುಂದುವರಿಯುವುದೆ ಅಥವಾ ಇಲ್ಲವೆ?

| ಬಿ.ಎನ್. ರಾಧಾ ಚಿಕ್ಕಮಗಳೂರು.

ಕರ್ನಾಟಕ ಸರ್ಕಾರಿ ಸೇವಾ (ಕುಟುಂಬ ನಿವೃತ್ತಿವೇತನ) ನಿಯಮಗಳು 2002ರ ನಿಯಮ 9 ಡಿ ಪ್ರಕಾರ; ವಿಧವೆ ಪುನರ್ವಿವಾಹವಾದರೆ ಆ ದಿನಾಂಕದ ನಂತರ ಅವಳ ಹೆಣ್ಣುಮಗುವಿಗೆ 21 ವರ್ಷ ಪೂರ್ಣವಾಗುವವರೆಗೂ ಈ ಕುಟುಂಬ ನಿವೃತ್ತಿವೇತನವನ್ನು ಮಂಜೂರು ಮಾಡಬಹುದೆಂದು ತಿಳಿಸಲಾಗಿದೆ. ಆದ್ದರಿಂದ ನೀವು ನೇಮಕಾತಿ ಪ್ರಾಧಿಕಾರಕ್ಕೆ ನಮೂನೆ ಎಫ್ನಲ್ಲಿ ಈ ಬಗ್ಗೆ ಮಾಹಿತಿ ನೀಡಿ, ನಿಮ್ಮ ಮಗುವಿಗೆ ಈ ಪಿಂಚಣಿ ಲಭ್ಯವಾಗುವಂತೆ ಮಾಡಬಹುದು.

***

21-02-18.

ನಾನು ಮತ್ತು ನನ್ನ ಪತ್ನಿ ಸರ್ಕಾರಿ ನೌಕರರು. ನನ್ನ ಪತ್ನಿಗೆ ಎರಡನೇ ಹೆರಿಗೆಯಲ್ಲಿ ಅವಳಿ ಮಕ್ಕಳು ಜನಿಸಿವೆ. ಪತ್ನಿಗೆ ಸಂತಾನಶಕ್ತಿಹರಣ ಶಸ್ತ್ರಚಿಕಿತ್ಸೆ ಮಾಡಿಸಿ ಕುಟುಂಬಯೋಜನೆಗೆ ವಿಶೇಷ ಭತ್ಯೆ ನೀಡಲು ವಿನಂತಿಸಿದಾಗ, ಮೂರು ಮಕ್ಕಳಿರುವುದರಿಂದ ವಿಶೇಷ ಭತ್ಯೆ ನೀಡಲಾಗದು ಎಂದಿದ್ದಾರೆ. ಪರಿಹಾರ ಸೂಚಿಸಿ.

| ಗುರುರಾಜ್ ಚಿತ್ರದುರ್ಗ.

1-10-2015ರ ಸರ್ಕಾರಿ ಆದೇಶ ಸಂಖ್ಯೆ ಎಫ್ಡಿ 27 ಎಸ್ಆರ್ಎಸ್85ರ ಮೇರೆಗೆ ಕುಟುಂಬ ಯೋಜನೆ ಅನುಸರಿಸುವ ರಾಜ್ಯ ಸರ್ಕಾರಿ ನೌಕರರಿಗೆ ಉತ್ತೇಜನ ನೀಡಲು ಎರಡು ಜೀವಂತ ಮಕ್ಕಳಿರುವ ಸರ್ಕಾರಿ ನೌಕರ ಸಂತಾನಶಕ್ತಿಹರಣ ಚಿಕಿತ್ಸೆ ಮಾಡಿಸಿಕೊಂಡರೆ ವೈಯಕ್ತಿಕ ವೇತನ ರೂಪದಲ್ಲಿ ಅವನು ಪಡೆಯುತ್ತಿದ್ದ ವಾರ್ಷಿಕ ವೇತನ ಬಡ್ತಿಯಷ್ಟು ವಿಶೇಷ ಭತ್ಯೆ ಮಂಜೂರು ಮಾಡಲು ಆದೇಶಿಸಿದೆ. ಮೊದಲ ಒಂದು ಮಗುವಿನ ನಂತರ ಅವಳಿ ಮಕ್ಕಳು ಜನಿಸಿದರೆ ಒಟ್ಟು ಮಕ್ಕಳ ಸಂಖ್ಯೆ ಎರಡಕ್ಕಿಂತ ಹೆಚ್ಚಾದರೂ ಯಾವುದೇ ಸರ್ಕಾರಿ ನೌಕರ ಅಥವಾ ಆತನ ಪತ್ನಿ ಸಂತಾನಹರಣ ಶಸ್ತ್ರಚಿಕಿತ್ಸೆಗೆ ಒಳಗಾದಲ್ಲಿ 29-6-1993ರ ಸರ್ಕಾರದ ಅಧಿಕೃತ ಜ್ಞಾಪನ ಸಂಖ್ಯೆ ಎಫ್ಡಿ7 ಎಸ್ಆರ್ಎಸ್ 93 ರಂತೆ ಅಂಥವರಿಗೆ ಈ ಯೋಜನೆ ಅನುಸರಣೆಗೆ ವಿಶೇಷ ವೇತನ ಬಡ್ತಿಗೆ ಸೂಚಿಸಲಾಗಿದೆ.

***

20-02-18.

ನನ್ನ ಪತ್ನಿ ನ್ಯಾಯಾಂಗ ಇಲಾಖೆಯಲ್ಲಿ ಶಿರಸ್ತೇದಾರರಾಗಿ ಕೆಲಸ ನಿರ್ವಹಿಸುತ್ತಿದ್ದು, ಸೇವೆಯಲ್ಲಿದ್ದಾಗಲೇ ನಿಧನರಾದರು. ನನ್ನ ಮಗ, ಬಿ.ಕಾಂ. ಅಂತಿಮ ವರ್ಷದಲ್ಲಿ ಅನುತ್ತೀರ್ಣರಾಗಿರುವುದರಿಂದ ಅನುಕಂಪ ಆಧಾರದ ಮೇಲೆ ದ್ವಿತೀಯ ದರ್ಜೆ ಸಹಾಯಕ ಹುದ್ದೆಗೆ ಅರ್ಜಿ ಸಲ್ಲಿಸಿದೆವು. ನ್ಯಾಯಾಂಗ ಇಲಾಖೆ ಗ್ರೂಪ್ ಡಿ ನೌಕರ ನೀಡಿದ್ದಾರೆ. ದ್ವಿತೀಯ ದರ್ಜೆ ಹುದ್ದೆ ನೀಡಲು ಸಾಧ್ಯವೆ? |

ಎಂ. ಬಸಪ್ಪ ಕೆ.ಜಿ.ಎಫ್, ಕೋಲಾರ.

ನಿಮ್ಮ ಪುತ್ರನು ದ್ವಿತೀಯ ಪಿಯುಸಿಯಲ್ಲಿ ತೇರ್ಗಡೆಯಾಗಿರುವುದರಿಂದ ಕರ್ನಾಟಕ ಸರ್ಕಾರಿ ಸೇವಾ ಅನುಕಂಪದ ಆಧಾರದ ಮೇಲೆ ನೇಮಕಾತಿ ನಿಯಮಗಳು 1996 ರ ನಿಯಮ 6ರ ಮೇರೆಗೆ ದ್ವಿತೀಯ ದರ್ಜೆ ಸಹಾಯಕರ ಹುದ್ದೆಯನ್ನೇ ನೀಡಬೇಕಾಗುತ್ತದೆ. ಅಲ್ಲದೆ ಸರ್ಕಾರವು ಇತ್ತೀಚೆಗೆ ಸುತ್ತೋಲೆಯೊಂದನ್ನು ಹೊರಡಿಸಿ (ಸಂಖ್ಯೆ ಸಿಆಸುಇ 150ಸೇಆಸೇ 2017 ದಿನಾಂಕ 27-10-2017) ಅಭ್ಯರ್ಥಿಯು ಯಾವ ವಿದ್ಯಾರ್ಹತೆ ಹೊಂದಿರುತ್ತಾನೋ ಆ ವಿದ್ಯಾರ್ಹತೆಗೆ ತಕ್ಕ ಉದ್ಯೋಗ ನೀಡಲು ಸೂಚಿಸಿದೆ. ಆದುದರಿಂದ ನೀವು ಮತ್ತೆ ನ್ಯಾಯಾಂಗ ಇಲಾಖೆಗೆ ದ್ವಿತೀಯ ದರ್ಜೆ ಸಹಾಯಕರ ಹುದ್ದೆ ನೀಡಲು ಅರ್ಜಿ ಸಲ್ಲಿಸಬಹುದು.

***

19-02-18.

ಸರ್ಕಾರಿ ನೌಕರಳಾದ ನನಗೆ 32 ವಾರ 3 ದಿನಗಳಿದ್ದಾಗ (8 ತಿಂಗಳು ತುಂಬಿ, 9ನೇ ತಿಂಗಳು ಬಂದಿದೆ) 2018ರ ಜನವರಿ 17ನೇ ತಾರೀಖು, ಸಿಸೇರಿಯನ್ ಮೂಲಕ ಮೃತಪಟ್ಟ ಹೆಣ್ಣುಮಗುವಿಗೆ ಜನ್ಮ ನೀಡಿದೆ. ಹಾಗಾದರೆ ನಾನು 6 ತಿಂಗಳ ಹೆರಿಗೆ ರಜೆಗೆ ಅರ್ಹಳೇ? ಹೆರಿಗೆ ರಜೆಗೆ ಅರ್ಹಳಾಗದಿದ್ದಲ್ಲಿ ನನ್ನ ಆರೈಕೆಗೆ ಎಷ್ಟು ದಿನಗಳ ರಜೆ ಸಿಗುತ್ತದೆ ಹಾಗೂ 6 ತಿಂಗಳ ಹೆರಿಗೆ ರಜೆ ಅನ್ವಯವಾಗುವುದಾದರೆ ಕೆ.ಸಿ.ಎಸ್.ಆರ್.ನ ಯಾವ ನಿಯಮ, ಉಪನಿಯಮ ಅನ್ವಯವಾಗುತ್ತದೆ?

| ವಾಣಿ ಕಗ್ಗಲೀಪುರ, ಬೆಂಗಳೂರು.

ಕರ್ನಾಟಕ ಸರ್ಕಾರಿ ಸೇವಾ ನಿಯಮಾವಳಿಯ ನಿಯಮ 135ರ ಮೇರೆಗೆ 180 ದಿನಗಳ ಕಾಲ ಹೆರಿಗೆ ರಜೆ ಲಭ್ಯವಾಗುತ್ತದೆ. 1961ರ ಪ್ರಸೂತಿ ಸೌಲಭ್ಯ ಅಧಿನಿಯಮದ ಪ್ರಕರಣ 3ಬಿ ರಂತೆ 26 ವಾರಗಳ ನಂತರ ಜನನವಾಗುವ ಮಗುವು ಜೀವಂತವಿರಲಿ ಅಥವಾ ಇಲ್ಲದಿರಲಿ ಅದು ಸಾಮಾನ್ಯ ಹೆರಿಗೆ ಎಂದು ಭಾವಿಸಿ ಅಷ್ಟು ದಿನಗಳ ಕಾಲ ಹೆರಿಗೆ ರಜೆ ಸೌಲಭ್ಯ ನೀಡಬೇಕಾಗುತ್ತದೆ. ಈ ನಿಯಮದಂತೆ ನೀವು 180 ದಿನಗಳ ಕಾಲ ಹೆರಿಗೆ ರಜೆ ಸೌಲಭ್ಯ ಪಡೆದು ತದನಂತರ ಕರ್ತವ್ಯಕ್ಕೆ ಹಾಜರಾಗಬಹುದು. ಹೆಚ್ಚಿನ ವಿವರಗಳಿಗೆ ಇದೇ ಲೇಖಕರ ಕರ್ನಾಟಕ ಸರ್ಕಾರಿ ಸೇವಾ ನಿಯಮಗಳು ಪುಸ್ತಕವನ್ನು ನೋಡಿ.

***

18-02-18.

ನಾನು 35 ವರ್ಷದವಳಾಗಿದ್ದು ಅನುಕಂಪದ ಆಧಾರದಲ್ಲಿ (ದ್ವಿ.ದ.ಸ.) ಹುದ್ದೆಗೆ ನೇಮಕಗೊಂಡಿದ್ದೇನೆ. ಶಿಕ್ಷಕರಾಗಿದ್ದ ನನ್ನ ಗಂಡ ಮರಣ ಹೊಂದಿದ್ದಾರೆ. ಗಂಡ ಜೀವಂತವಿರುವಾಗಲೇ ನಾನು ಎರಡನೇ ಮಗುವಿಗೆ ‘ಸಂತಾನಹರಣ ಶಸ್ತ್ರಚಿಕಿತ್ಸೆ’ ಮಾಡಿಸಿಕೊಂಡಿದ್ದೇನೆ. ಈ ಚಿಕಿತ್ಸೆಯ ವಿಶೇಷ ಭತ್ಯೆಯ ಸೌಲಭ್ಯವನ್ನು ಪಡೆಯಲು ಸಾಧ್ಯವೆ ಎಂಬ ಬಗ್ಗೆ ಗೊಂದಲವಾಗಿದೆ. ಈ ಗೊಂದಲ ನಿವಾರಿಸಿ.

| ನಾಗವೇಣಿ ಮೈಸೂರು.

1-10-1985ರ ಸರ್ಕಾರಿ ಆದೇಶ ಸಂಖ್ಯೆ ಎಫ್ಡಿ 27 ಎಸ್ಆರಎಸ್ 85ರ ಮೇರೆಗೆ ಕುಟುಂಬಯೋಜನೆಯನ್ನು ಅನುಸರಿಸುವ ರಾಜ್ಯ ಸರ್ಕಾರಿ ನೌಕರರಿಗೆ ಉತ್ತೇಜನ ನೀಡಲು ಎರಡು ಜೀವಂತ ಮಕ್ಕಳನ್ನು ಹೊಂದಿರುವ ಸರ್ಕಾರಿ ನೌಕರಳು ಸಂತಾನಹರಣ ಚಿಕಿತ್ಸೆ ಮಾಡಿಸಿಕೊಂಡರೆ ವೈಯಕ್ತಿಕ ವೇತನ ರೂಪದಲ್ಲಿ ವಿಶಿಷ್ಟ ವೇತನ ಬಡ್ತಿಯನ್ನು ಮಂಜೂರು ಮಾಡಲಾಗುತ್ತದೆ. ಆದರೆ ನೀವು ಸರ್ಕಾರಿ ಸೇವೆಗೆ ಸೇರುವ ಮೊದಲು ಕುಟುಂಬಯೋಜನೆ ಅನುಸರಣೆಗೆ ಸಂತಾನಹರಣ ಚಿಕಿತ್ಸೆ ಮಾಡಿಸಿಕೊಂಡಿರುವುದರಿಂದ ಈ ವಿಶೇಷ ವೇತನ ಬಡ್ತಿ ಲಭ್ಯವಾಗುವುದಿಲ್ಲ.

***

17-02-18.

ನಾನು ಸರ್ಕಾರಿ ಪ್ರಾಥಮಿಕ ಶಾಲಾ ಶಿಕ್ಷಕಿಯಾಗಿ 24 ವರ್ಷ ಸೇವೆ ಸಲ್ಲಿಸಿದ್ದೇನೆ. 47 ವರ್ಷದ ನಾನು ಅವಿವಾಹಿತಳಾಗಿದ್ದು ಪುತ್ರನನ್ನು ‘ದತ್ತಕ’ ತೆಗೆದುಕೊಂಡರೆ ಆತನಿಗೆ ಅನುಕಂಪದ ಆಧಾರದ ಮೇಲೆ ನೌಕರಿ ಸಿಗಬಹುದೆ? ಎಷ್ಟು ವಯಸ್ಸಿನವರನ್ನು ‘ದತ್ತು’ ತೆಗೆದುಕೊಳ್ಳಬೇಕು ?

ಎನ್.ಕೆ. ಗಾಯತ್ರಿ ಶಿವಮೊಗ್ಗ.

ಕರ್ನಾಟಕ ಸರ್ಕಾರಿ ಸೇವಾ (ಅನುಕಂಪದ ಮೇರೆಗೆ ನೇಮಕ) ನಿಯಮಗಳು 1996ರ ನಿಯಮ 3(3) ಪ್ರಕಾರ ಮೃತ ಸರ್ಕಾರಿ ನೌಕರನ ದತ್ತು ಮಗ ಅಥವಾ ದತ್ತು ಮಗಳು ಈ ನಿಯಮಾವಳಿ ರೀತ್ಯ ಅನುಕಂಪದ ಆಧಾರದ ಮೇಲೆ ಅರ್ಹರಾಗುವುದಿಲ್ಲ. ನೀವು ಐದು ವರ್ಷದೊಳಗಿನ ದತ್ತುಪುತ್ರ ಅಥವಾ ಪುತ್ರಿಯನ್ನು ತೆಗೆದುಕೊಂಡು ಕರ್ನಾಟಕ ಸರ್ಕಾರಿ ಸೇವಾ ನಿಯಮಾವಳಿಯ ನಿಯಮ 302ರ ಪ್ರಕಾರ ನಾಮನಿರ್ದೇಶನ ಮಾಡಿದರೆ ನಿಮ್ಮ ಆಕಸ್ಮಿಕ ನಿಧನದಿಂದ ಮರಣ ಉಪದಾನ ಕುಟುಂಬ ನಿವೃತ್ತಿ ವೇತನ ಮುಂತಾದ ಪಿಂಚಣಿ ಸೌಲಭ್ಯಗಳು ಲಭ್ಯ.

***

16-02-2018.

ನಾನು 1989ರಲ್ಲಿ ಅಂಗವಿಕಲರ ಕೋಟಾದಲ್ಲಿ ಪ್ರಾಥಮಿಕ ಶಾಲಾ ಶಿಕ್ಷಕ ಎಂದು ಆಯ್ಕೆ ಆಗಿದ್ದೇನೆ. 54 ವರ್ಷದ ನಾನು ನರದೌರ್ಬಲ್ಯದಿಂದ ಕೆಲಸ ಮಾಡಲು ಅಸಮರ್ಥನಾಗಿದ್ದೇನೆ. ಯಾವ ಆಧಾರದ ಮೇಲೆ ಸ್ವಯಂನಿವೃತ್ತಿ ಪಡೆದರೆ ಮಗನಿಗೆ ಅನುಕಂಪದ ನೌಕರಿ ದೊರೆಯುತ್ತದೆ?

– ಪಿ.ಎಚ್. ಪಾಟೀಲ್ ಬೆಳಗಾವಿ.

ಕರ್ನಾಟಕ ಸರ್ಕಾರಿ ಸೇವಾ (ಅನುಕಂಪದ ಮೇರೆಗೆ ನೇಮಕಾತಿ) ನಿಯಮಗಳು 1996ರ ನಿಯಮ 3ಎ ಪ್ರಕಾರ ವೈದ್ಯಕೀಯ ಕಾರಣಗಳ ಮೇಲೆ ನಿವೃತ್ತಿ ಹೊಂದಿದ ಸರ್ಕಾರಿ ನೌಕರನ ಅವಲಂಬಿತರ ನೇಮಕಾತಿಗೆ ಕೆಲವು ಷರತ್ತುಗಳನ್ನು ವಿಧಿಸಲಾಗಿದೆ. ಅದರಂತೆ ಸರ್ಕಾರಿ ನೌಕರನು ಕರ್ತವ್ಯ ನಿರ್ವಹಿಸುತ್ತಿರುವ ಸಂದರ್ಭದಲ್ಲಿ ಶಾಶ್ವತ ಅಸಮರ್ಥತೆ ಉಂಟಾಗಬೇಕಾಗುತ್ತದೆ. ಅದು ಸರ್ಕಾರಿ ನೌಕರನು ಇತರ ಕರ್ತವ್ಯ ನಿರ್ವಹಿಸಲು ಅಸಮರ್ಥನಾಗಿರುವುದಕ್ಕೆ ವೈದ್ಯಕೀಯ ಮಂಡಳಿಯ ಪ್ರಮಾಣಪತ್ರ ಅವಶ್ಯಕವಾಗಿರುತ್ತದೆ. ಆದರೆ ನೀವು ನರದೌರ್ಬಲ್ಯದಿಂದ ಕೆಲಸ ಮಾಡುತ್ತಿದ್ದು, ಇದು ನಿಮ್ಮ ಕರ್ತವ್ಯ ನಿರ್ವಹಣೆಯಿಂದ ಉಂಟಾದ ಅನಾರೋಗ್ಯವಲ್ಲವಾದ್ದರಿಂದ ನೀವು ಸ್ವಯಂನಿವೃತ್ತಿ ತೆಗೆದುಕೊಂಡರೂ ನಿಮ್ಮ ಮಗನಿಗೆ ಅನುಕಂಪದ ನೌಕರಿ ದೊರಕುವುದಿಲ್ಲ.

***

15-02-2018.

ನಾನು ಕೌಟುಂಬಿಕ ಕಲಹದಿಂದ ಬಳಲುತ್ತಿದ್ದೇನೆ. ನನ್ನ ಮರಣದ ನಂತರ ಬರುವ ಸಂಬಳ, ಉಪದಾನ, ಪಿಂಚಣಿ, ಅನುಕಂಪದ ನೌಕರಿ ಇನ್ನಿತರೆ ನಗದು ಮತ್ತು ಸೌಲಭ್ಯಗಳನ್ನು ಹೆಂಡತಿ ಮತ್ತು ಮಕ್ಕಳಿಗೆ ಹೊರತುಪಡಿಸಿ ಬೇರೆಯವರಿಗೆ (ಅಣ್ಣ/ಅಕ್ಕ) ಸಲ್ಲಿಕೆಯಾಗುವಂತೆ ಮಾಡಲು ಅವಕಾಶ ಇದೆಯೆ? ವೈಯಕ್ತಿಕವಾಗಿ ವಿಲ್ ಮಾಡಿದಲ್ಲಿ ಕೆಸಿಎಸ್ಆರ್ ನಿಬಂಧನೆಗಳಿಂದ ಅಡ್ಡಿಯಾಗುವುದೆ?

| ಸುರೇಶ್ಬಾಬು ದಾವಣಗೆರೆ.

ಕರ್ನಾಟಕ ಸರ್ಕಾರಿ ಸೇವಾ ನಿಯಮಾವಳಿಯ ನಿಯಮ 302ರಂತೆ; ಸರ್ಕಾರಿ ನೌಕರನ ಸಂದರ್ಭದಲ್ಲಿ ಪತ್ನಿ ಮಕ್ಕಳು 18 ವರ್ಷದೊಳಗಿನ ಸಹೋದರ /ಸಹೋದರಿಯರು; ಅವಿವಾಹಿತ/ ವಿಧವೆ/ವಿಚ್ಛೇದಿತ ಸಹೋದರಿಯರು ಒಳಗೊಂಡಿರುತ್ತಾರೆ. ಈ ನಿಯಮದಡಿ ಸರ್ಕಾರಿ ನೌಕರನು ಯಾರಿಗೆ ನಾಮನಿರ್ದೇಶನ ಮಾಡಿದರೂ ನಿಯಮ 302(5-ಎ) ಪ್ರಕಾರ ಪ್ರತಿಯೊಬ್ಬ ನೌಕರನು ಮದುವೆಗೆ ಮುಂಚೆ ಮಾಡಿದ ನಾಮನಿರ್ದೇಶನವು ಮದುವೆಯ ನಂತರ ತಾನಾಗಿ ಅನೂರ್ಜಿತವಾಗುವುದು ಮತ್ತು ಪತ್ನಿಯ ಹೆಸರಿನಲ್ಲಿ ನಾಮನಿರ್ದೇಶನವಾಗಿದೆ ಎಂದು ಭಾವಿಸತಕ್ಕದ್ದು ಎಂದು ಸೂಚಿಸಲಾಗಿದೆ. ನೀವು ಸೇವಾಪುಸ್ತಕದಲ್ಲಿ ಸಹೋದರ/ಸಹೋದರಿಯರ ಹೆಸರನ್ನು ಹಾಗೂ ವೈಯಕ್ತಿಕವಾಗಿ ವಿಲ್ ಮಾಡಿದರೆ ಅದು ಅಸಿಂಧುವಾಗುತ್ತದೆ.

***

14-02-2018.

ನಾನು 2012ರ ಸೆಪ್ಟೆಂಬರ್ 21ರಂದು ಉದ್ಯೋಗಕ್ಕಾಗಿ ನ್ಯಾಯಾಂಗ ಇಲಾಖೆಗೆ ಸೇರಿದೆ. ಈಗ ನನ್ನ ವಯಸ್ಸು 40. ನಾನು ಇಲಾಖಾ ಪರೀಕ್ಷೆಯ ಮೂಲಕ ಎಫ್ಡಿಎ/ಎಸ್ಡಿಎ ಪರೀಕ್ಷೆ ತೆಗೆದುಕೊಳ್ಳಬಹುದೆ? ನೌಕರಿಗೆ ಸೇರಿದಾಗ ನನ್ನ ವಯಸ್ಸು 35 ವರ್ಷ 2 ತಿಂಗಳಾಗಿತ್ತು. ಸೂಕ್ತ ಪರಿಹಾರ ತಿಳಿಸಿ.

| ಸೌಮ್ಯ ಎನ್. ತುಮಕೂರು.

ಕರ್ನಾಟಕ ಸರ್ಕಾರಿ ಸೇವಾ (ಸಾಮಾನ್ಯ ನೌಕರಿ ಭರ್ತಿ) ನಿಯಮಗಳು 1977 ನಿಯಮ 6ರಂತೆ ಪರಿಶಿಷ್ಟ ಜಾತಿ ಮತ್ತು ವರ್ಗಕ್ಕೆ 40 ವರ್ಷ, ಹಿಂದುಳಿದ ವರ್ಗಕ್ಕೆ 38 ವರ್ಷ ಹಾಗೂ ಸಾಮಾನ್ಯ ವರ್ಗಕ್ಕೆ 35 ವರ್ಷ ಮಿತಿಯನ್ನು ನಿಗದಿಪಡಿಸಲಾಗಿದೆ. ಸರ್ಕಾರಿ ಸೇವೆಯಲ್ಲಿರುವ ನೌಕರನು ಅವನು ಸಲ್ಲಿಸಿದ ಸೇವಾವಧಿ ಅಥವಾ ಗರಿಷ್ಠ 10 ವರ್ಷಗಳಿಗಿಂತ ಮೀರದಷ್ಟು ವಯೋಮಿತಿ ಸಡಿಲಿಕೆ ನೀಡಲಾಗುತ್ತದೆ. ಆದುದರಿಂದ ನೀವು ಸಲ್ಲಿಸಿದ ಸೇವಾವಧಿಯನ್ನು ಈ ಗರಿಷ್ಠ ವಯೋಮಿತಿಗೆ ಸೇರಿಸಿ ನಿಯಮ 11ರಂತೆ ಪೂರ್ವಾನುಮತಿ ಪಡೆದು ಪ್ರಥಮ ದರ್ಜೆ ಸಹಾಯಕರ ಹುದ್ದೆಗೆ ಅರ್ಜಿ ಸಲ್ಲಿಸಬಹುದು. ಹೆಚ್ಚಿನ ವಿವರಗಳಿಗೆ ಇದೇ ಲೇಖಕರ ಕರ್ನಾಟಕ ಸರ್ಕಾರಿ ಸೇವಾ ಕಾನೂನು ಕೈಪಿಡಿ ಪುಸ್ತಕವನ್ನು ನೋಡಿ.

****

13-02-18.
ಪ್ರಾಥಮಿಕ ಶಾಲಾ ಪ್ರಧಾನ ಗುರುಗಳು ಸಹಶಿಕ್ಷಕರಿಗೆ ಗರಿಷ್ಠ ಎಷ್ಟು ಸಾಂರ್ದಭಿಕ ರಜೆಗಳನ್ನು ಮಂಜೂರು ಮಾಡಲು ಬರುತ್ತದೆ? ಶನಿವಾರ ಮತ್ತು ಸೋಮವಾರ ಸಾಂರ್ದಭಿಕ ರಜೆ ಹಾಕಿದ್ದರೆ ಭಾನುವಾರವೂ ಸಾಂರ್ದಭಿಕ ರಜೆಯಾಗಿ ಪರಿವರ್ತನೆಯಾಗುತ್ತದೆಯೆ?

| ಧರೆಪ್ಪ ಅಂಬಗೆರೆ, ಸುರಪುರ, ಯಾದಗಿರಿ.

ಕರ್ನಾಟಕ ಸರ್ಕಾರಿ ಸೇವಾ ನಿಯಮಾವಳಿಯ ಅನುಬಂಧ – (ಬಿ)ಯ ನಿಯಮ (1)ರ ಪ್ರಕಾರ ಶಾಲಾ ಪ್ರಧಾನ ಗುರುಗಳು ಒಂದು ಸಲಕ್ಕೆ ಗರಿಷ್ಠ ಏಳು ದಿನಗಳಷ್ಟು ಸಾಂರ್ದಭಿಕ ರಜೆಯನ್ನು ಮಂಜೂರು ಮಾಡಬಹುದು. ಆದರೆ ಭಾನುವಾರ ಸಾರ್ವತ್ರಿಕ ರಜೆ ಆಗಿರುವುದರಿಂದ ಅದು ಸಾಂರ್ದಭಿಕ ರಜೆಯಾಗಿ ಪರಿವರ್ತನೆಯಾಗುವುದಿಲ್ಲ. ಹೆಚ್ಚಿನ ವಿವರಗಳಿಗೆ ಇದೇ ಲೇಖಕರು ಬರೆದಿರುವ ಕರ್ನಾಟಕ ಸರ್ಕಾರಿ ಸೇವಾ ನಿಯಮಗಳು ಪುಸ್ತಕವನ್ನು ನೋಡಿ.

***

12-02-18.

ನನ್ನ ಗೆಳೆಯನ ತಂದೆ ಆಕಸ್ಮಿಕವಾಗಿ ಮರಣ ಹೊಂದಿದ್ದಾರೆ. ತಾಯಿ ಇನ್ನೂ ಕೆಲಸದಲ್ಲಿದ್ದಾರೆ. ನನ್ನ ಗೆಳೆಯನಿಗೆ ತಂದೆಯ ಅನುಕಂಪದ ನೌಕರಿ ಹಾಗೂ ಆರ್ಥಿಕ ಸೌಲಭ್ಯ ದೊರೆಯಬಹುದೆ?

| ತೋಟಗಂಟಿ ಸಿದ್ಧಪ್ಪ ಹಿರೇಕೆರೂರು, ಹಾವೇರಿ.

ಕರ್ನಾಟಕ ಸರ್ಕಾರಿ ಸೇವಾ (ಅನುಕಂಪದ ಆಧಾರದ ಮೇಲೆ ನೇಮಕಾತಿ) ನಿಯಮಗಳು 1996ರ ನಿಯಮ 3ರ ಮೇರೆಗೆ ಅನುಕಂಪದ ಆಧಾರದ ಮೇಲೆ ನೇಮಕಾತಿ ಹೊಂದಲು ನಿಮ್ಮ ಗೆಳೆಯ ಅರ್ಹರಾಗಿರುತ್ತಾರೆ. ಆದರೆ ನಿಯಮ 4ರಲ್ಲಿ ತಿಳಿಸಿದಂತೆ ಅವರ ಕೌಟುಂಬಿಕ ಆದಾಯವು ಮೃತ ಸರ್ಕಾರಿ ನೌಕರನ ನಿಧನದ ದಿನದಂದು ಪ್ರಥಮ ದರ್ಜೆಸಹಾಯಕ ವೇತನ ಶ್ರೇಣಿಯ ಸರಾಸರಿ ವೇತನಕ್ಕೆ ಬೆಂಗಳೂರಿನಲ್ಲಿ ಅನ್ವಯವಾಗುವ ಮನೆಬಾಡಿಗೆ ಭತ್ಯೆ, ನಗರ ಪರಿಹಾರ ಭತ್ಯೆ ಹಾಗೂ ತುಟ್ಟಿ ಭತ್ಯೆ ಒಳಗೊಂಡಂತೆ ವಾರ್ಷಿಕ ಆದಾಯವು ನಾಲ್ಕು ಲಕ್ಷ ಮೀರಬಾರದು ಹಾಗೂ ಆರ್ಥಿಕ ಸಂಕಷ್ಟದಲ್ಲಿರಬೇಕು. ಅವರ ತಂದೆಯ ಆಕಸ್ಮಿಕ ಮರಣದಿಂದ ಆರ್ಥಿಕ ಸೌಲಭ್ಯವನ್ನು ಅವರ ತಾಯಿ ಪಡೆಯಲು ಅರ್ಹರಾಗಿರುತ್ತಾರೆ.

***

11-02-2018.

ನಾನು ಸರ್ಕಾರಿ ಪ್ರೌಢಶಾಲೆಯಲ್ಲಿ ಸೇವೆ ಸಲ್ಲಿಸುತ್ತಿದ್ದೇನೆ. ಈ ಹಿಂದೆ ಪೊಲೀಸ್ ಇಲಾಖೆಯಲ್ಲಿ 2007ರ ಮೇ 14ರಂದು ಸೇವೆಗೆ ಸೇರಿ ಕಾನ್ಸ್ಟೇಬಲ್ (ಪಿ.ಸಿ.) ಆಗಿ ಒಂದು ವರ್ಷ ಮೂರು ತಿಂಗಳು ಸೇವೆ ಸಲ್ಲಿಸಿ ಪೊಲೀಸ್ ಇಲಾಖೆಯ ಸೂಕ್ತ ಅನುಮತಿ ಪಡೆದು ಕೆ.ಸಿ.ಎಸ್.ಆರ್. ನಿಯಮ 252(ಬಿ) ರೀತ್ಯ ಮುಂದುವರಿಸಿಕೊಂಡು ಬಂದಿರುತ್ತೇನೆ. ಪೊಲೀಸ್ ಇಲಾಖೆಯ ಸೇವಾವಹಿಯನ್ನು ಶಿಕ್ಷಣ ಇಲಾಖೆಗೂ ಮುಂದುವರಿಸಿಕೊಂಡು ಬಂದದ್ದು ಇರುತ್ತದೆ. ಆದರೆ ನನಗೆ ಕೆ.ಸಿ.ಎಸ್.ಆರ್. ಯಾವ ನಿಯಮದ ಪ್ರಕಾರ ಹಿಂದಿನ ಸೇವೆ ಹಾಗೂ ಸೇವಾವಹಿಯಲ್ಲಿರುವಂಥ ಗಳಿಕೆ ರಜೆ ಹಾಗೂ ಅರ್ಧ ವೇತನ ರಜೆಗಳ ಸೌಲಭ್ಯ ಪಡೆಯಬಹುದೆ?

| ಈರಣ್ಣ ಎಂ. ಜಾಡರ ಶಿರಹಟ್ಟಿ ಗದಗ.

ನೀವು ಕರ್ನಾಟಕ ಸರ್ಕಾರಿ ಸೇವಾ ನಿಯಮಾವಳಿಯ ನಿಯಮ 252ಬಿ ಪ್ರಕಾರ ಪೂರ್ವಾನುಮತಿ ಪಡೆದು ಕರ್ತವ್ಯದಿಂದ ಬಿಡುಗಡೆ ಹೊಂದಿರುವುದರಿಂದ ನೀವು ಪ್ರೌಢಶಾಲೆಯಲ್ಲಿ ಹಿಂದಿನ ಸೇವಾವಧಿಯಲ್ಲಿ ಗಳಿಸಿದ ಗಳಿಕೆ ರಜೆ, ಅರ್ಧವೇತನ ರಜೆ ಸೌಲಭ್ಯಗಳಲ್ಲದೆ ನೂತನ ಪಿಂಚಣಿ ಯೋಜನೆ (ಎನ್ಪಿಎಸ್) ಮತ್ತು ಕೆಜಿಐಡಿ ಸಹ ಮುಂದುವರಿಯುತ್ತದೆ. ಆದುದರಿಂದ ನಿಮ್ಮ ಹಿಂದಿನ ಸೇವೆ ಈ ಸೌಲಭ್ಯಗಳಿಗೆ ಪರಿಗಣಿಸಿ ಪುನಃ ಪ್ರಸ್ತಾವನೆ ಸಲ್ಲಿಸಲು ಕೋರಬಹುದು.

***

10-02-2018.

ನನ್ನ ಸ್ನೇಹಿತರೊಬ್ಬರು ಪ್ರೌಢಶಾಲೆಯಲ್ಲಿ ದೈಹಿಕ ಶಿಕ್ಷಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಪ್ರಾಥಮಿಕ ಶಾಲೆ ಗ್ರೇಡ್-2ರಿಂದ ಪ್ರೌಢಶಾಲೆಗೆ ಗ್ರೇಡ್ 1 ಹುದ್ದೆಗೆ ನವೆಂಬರ್ 8ರಂದು ಬಡ್ತಿ ಹೊಂದಿದ್ದು, 2015ರ ನವೆಂಬರ್ 7ಕ್ಕೆ 20 ವರ್ಷ ಪೂರ್ಣಗೊಂಡಿರುತ್ತದೆ. ಆದ್ದರಿಂದ ನನ್ನ ಸ್ನೇಹಿತರು 20 ವರ್ಷದ ಹೆಚ್ಚುವರಿ ವೇತನ ಬಡ್ತಿಗೆ ಅರ್ಹರೆ?

| ದಿನೇಶ್ ಕೆ.ಆರ್. ನಗರ, ಮೈಸೂರು.

ಕರ್ನಾಟಕ ಸರ್ಕಾರದ ಆದೇಶ ಸಂಖ್ಯೆ ಎಫ್ ಡಿ 13 ಎಸ್ಆರ್ಪಿ 2002 ದಿನಾಂಕ 9-5-2002ರ ಕಂಡಿಕೆ 6(2)(ಆ) ಈಗಾಗಲೇ ಕನಿಷ್ಠ ಒಂದು ಪದೋನ್ನತಿಯನ್ನು ಪಡೆದಿರುವ ಸರ್ಕಾರಿ ನೌಕರರು ಈ 20 ವರ್ಷದ ಹೆಚ್ಚುವರಿ ವೇತನ ಬಡ್ತಿಗೆ ಅರ್ಹರಾಗುವುದಿಲ್ಲ ಎಂದು ತಿಳಿಸಲಾಗಿದೆ. ಆದುದರಿಂದ ನಿಮ್ಮ ಸ್ನೇಹಿತರು ಈ 20 ವರ್ಷದ ಹೆಚ್ಚುವರಿ ವೇತನ ಬಡ್ತಿಗೆ ಅರ್ಹರಾಗುವುದಿಲ್ಲ. ಹೆಚ್ಚಿನ ವಿವರಗಳಿಗೆ ಇದೇ ಲೇಖಕರ ಕರ್ನಾಟಕ ಸರ್ಕಾರಿ ಸೇವಾ ನಿಯಮಗಳು ಪುಸ್ತಕವನ್ನು ನೋಡಿ.

***

09-02-2018.

ಕಳೆದ ವರ್ಷ ಅಕ್ಟೋಬರ್ 29ರಂದು ನಮ್ಮ ಮಾವ ದೈವಾಧೀನರಾದರು. ಅವರು ಪ್ರಾಥಮಿಕ ಶಾಲೆಯಲ್ಲಿ ಬಡ್ತಿ ಮುಖ್ಯಶಿಕ್ಷಕರಾಗಿ ಕಾರ್ಯ ನಿರ್ವಹಿಸುತ್ತಿದ್ದರು. ಇನ್ನೂ ಸೇವೆ ಒಂದು ವರ್ಷ ಇತ್ತು. ಅವರ ಮಗ ಇಂಜಿನಿಯರಿಂಗ್ ಪದವಿ ಮುಗಿಸಿದ್ದಾರೆ. ಡಿಪ್ಲೊಮಾ ಆಗಿದೆ. ಅವರಿಗೆ ಯಾವ ಹುದ್ದೆ ದೊರೆಯಬಹುದು? ಶಿಕ್ಷಣ ಇಲಾಖೆಯಿಂದ ಬೇರೆ ಇಲಾಖೆಗೆ ಅನುಕಂಪದ ಹುದ್ದೆಯನ್ನು ಬದಲಾಯಿಸಿಕೊಳ್ಳಬಹುದೆ?

| ಮಹೇಶ್ ಕುಂಚಿಗನಾಳ ಚಿತ್ರದುರ್ಗ.

ಕರ್ನಾಟಕ ಸರ್ಕಾರಿ ಸೇವಾ (ಅನುಕಂಪದ ಆಧಾರದ ಮೇಲೆ ನೇಮಕಾತಿ) ನಿಯಮಗಳು 1996ರ ನಿಯಮ 3ರ ಮೇರೆಗೆ ಅವರ ಪುತ್ರ ಇಂಜಿನಿಯರಿಂಗ್ ಪದವೀಧರರಾಗಿದ್ದರೆ ಅವರು ಪ್ರಥಮ ದರ್ಜೆ ಸಹಾಯಕರ ಹುದ್ದೆಗೆ ಅರ್ಹರಾಗುತ್ತಾರೆ. ಶಿಕ್ಷಣ ಇಲಾಖೆಯಿಂದ ಬೇರೆ ಇಲಾಖೆಗೆ ಅನುಕಂಪದ ಹುದ್ದೆಯನ್ನು ಬದಲಾಯಿಸಿಕೊಳ್ಳಲು ನಿಯಮಾವಳಿಯಲ್ಲಿ ಅವಕಾಶವಿಲ್ಲ. ಆದರೆ ಆ ಇಲಾಖೆಯಲ್ಲಿ ಹುದ್ದೆ ಇಲ್ಲವೆಂದು ಪ್ರಾದೇಶಿಕ ಆಯುಕ್ತರಿಗೆ ಸಂಬಂಧಿತ ನೇಮಕಾತಿ ಪ್ರಾಧಿಕಾರ ತಿಳಿಸಿದರೆ ಹುದ್ದೆಯನ್ನು ಬದಲಾಯಿಸಿಕೊಳ್ಳಬಹುದು.

***

08-02-2018.

ನಾನು ಪ್ರಾಥಮಿಕ ಶಾಲಾ ಶಿಕ್ಷಕನಾಗಿದ್ದು, 2010ರಿಂದ ಕರ್ತವ್ಯ ನಿರ್ವಹಿಸುತ್ತಿದ್ದೇನೆ. ನನ್ನ ಮೊದಲ ಮಗುವಿನ ಜನನ 2014ರ ಬೇಸಿಗೆ ರಜೆಯಲ್ಲಾಗಿದ್ದು, ಪಿತೃತ್ವ ರಜೆಯನ್ನು ಪಡೆದಿಲ್ಲ. 2018ರ ಫೆಬ್ರವರಿ ತಿಂಗಳಿನಲ್ಲಿ ಎರಡನೇ ಮಗುವಿನ ನಿರೀಕ್ಷೆಯಲ್ಲಿದ್ದು ಪ್ರಥಮ ಪಿತೃತ್ವದ ರಜೆ ಪಡೆಯಬಹುದಾ ಅಥವಾ ದ್ವಿತೀಯ ಪಿತೃತ್ವ ರಜೆ ಪಡೆಯಬಹುದಾ? ಮಾಹಿತಿ ನೀಡಿ.

| ಅಮೋಘ ಪೂಜಾರಿ ಮಂಗಳೂರು.

ಕರ್ನಾಟಕ ಸರ್ಕಾರಿ ಸೇವಾ ನಿಯಮಾವಳಿಯ ನಿಯಮ 135 ಬಿ ಪ್ರಕಾರ ಪುರುಷ ಸರ್ಕಾರಿ ನೌಕರರಿಗೆ ಅವರ ಪತ್ನಿಯ ಹೆರಿಗೆಯ ಪ್ರಾರಂಭದಲ್ಲಿ 15 ದಿನಗಳ ಕಾಲ ಪಿತೃತ್ವದ ರಜೆಯನ್ನು ನೀಡಬಹುದು. ಎರಡು ಅಥವಾ ಅದಕ್ಕಿಂತ ಹೆಚ್ಚು ಜೀವಂತ ಮಕ್ಕಳಿರುವ ಸರ್ಕಾರಿ ನೌಕರರಿಗೆ ಈ ರಜೆ ದೊರೆಯುವುದಿಲ್ಲ. ಆದುದರಿಂದ ನೀವು ದ್ವಿತೀಯ ಮಗುವಿಗೆ ಮೊದಲ ಪಿತೃತ್ವದ ರಜೆ ಪಡೆದುಕೊಳ್ಳದಿದ್ದರೂ ದ್ವಿತೀಯ ಪಿತೃತ್ವ ರಜೆಯನ್ನು ಬಳಸಿಕೊಳ್ಳಬಹುದು.

***

07-02-2018.

ನಾನು ಸರ್ಕಾರಿ ಪ್ರಾಥಮಿಕ ಸೇವಾ ಶಿಕ್ಷಕಿಯಾಗಿದ್ದೇನೆ. ನನಗೆ ಏಳು ತಿಂಗಳ ಮಗುವಿದ್ದು, ಕೆಲಸದ ಅವಧಿಯಲ್ಲಿ ಮಗುವಿಗೆ ಹಾಲುಣಿಸಲು ಮುಖ್ಯಶಿಕ್ಷಕರು ಅನುಮತಿಸುತ್ತಿಲ್ಲ. ಇದಕ್ಕೆ ಸಂಬಂಧಿಸಿದಂತೆ ಯಾವುದೇ ನಿಯಮಾವಳಿಯು ರಾಜ್ಯ ಸರ್ಕಾರಿ ನೌಕರರಿಗಿಲ್ಲ ಎಂದು ಮೇಲಧಿಕಾರಿಗಳು ತಿಳಿಸಿದ್ದಾರೆ. ಶಿಶುಪಾಲನೆಗೆ ಸಂಬಂಧಿಸಿದಂತೆ ಕೆಲಸದ ಅವಧಿಯಲ್ಲಿ ವಿರಾಮ ಪಡೆಯಲು ಅವಕಾಶವಿಲ್ಲವೆ? ಯಾವುದಾದರೂ ಸರ್ಕಾರಿ ಆದೇಶ ಅಥವಾ ನಿಯಮವಿದ್ದರೆ ತಿಳಿಸಿ.

| ನೇಮಿತ್ ಸಿದ್ದಿಕಾ ಆವಲಹಳ್ಳಿ, ಬೆಂಗಳೂರು.

ಕರ್ನಾಟಕ ಸರ್ಕಾರಿ ಸೇವಾ ನಿಯಮಾವಳಿ ಯಲ್ಲಿ ಮಹಿಳಾ ನೌಕರರಿಗೆ ಪ್ರಸೂತಿ ರಜೆಯ ನಂತರ ಆ ಮಗುವಿಗೆ ಹಾಲುಣಿಸಲು ಅವಕಾಶ ಕಲ್ಪಿಸುವ ಯಾವುದೇ ನಿಯಮಾವಳಿ ಇಲ್ಲ. ಆದರೆ 1961ರ ಪ್ರಸೂತಿ ಸೌಲಭ್ಯ ಅಧಿನಿಯಮದಡಿಯಲ್ಲಿ ಮಗುವಿಗೆ 15 ತಿಂಗಳಾಗುವವರೆಗೆ ಹಾಲುಣಿಸಲು ಅವಕಾಶ ನೀಡಬೇಕೆಂದು ಸೂಚಿಸಿದೆ. ಈ ಹಿನ್ನೆಲೆಯಲ್ಲಿ ನೀವು ನಿಮ್ಮ ಮೇಲಧಿಕಾರಿಗಳ ಬಳಿ ಈ ಬಗ್ಗೆ ವಿನಂತಿ ಮಾಡಿಕೊಳ್ಳಬಹುದು.

***

06-02-2018.

ನನ್ನ ಪತ್ನಿಯು ಪ್ರೌಢಶಾಲಾ ಸಹಶಿಕ್ಷಕಿಯಾಗಿದ್ದಾಳೆ. ಅವಳು 2017ರ ಫೆಬ್ರವರಿ ಏಳರಿಂದ ಹೆರಿಗೆರಜೆ ಸಲ್ಲಿಸಿದ್ದು 2017ರ ಜುಲೈ ಎರಡರಂದು ಮಗು ಜನಿಸಿದೆ. ಈ ಹೆರಿಗೆರಜೆಯು ಯಾವಾಗಿನಿಂದ ಪ್ರಾರಂಭವಾಗುತ್ತದೆ? ದಯವಿಟ್ಟು ಇದರ ಬಗ್ಗೆ ಸೂಕ್ತ ಪರಿಹಾರ ಸೂಚಿಸಿ.

| ಮಲ್ಲಿಕಾರ್ಜುನ್ ಶೋರಾಪುರ, ಯಾದಗಿರಿ.

ಕರ್ನಾಟಕ ಸರ್ಕಾರಿ ಸೇವಾ ನಿಯಮಾವಳಿಯ ನಿಯಮ 135 ರಂತೆ ಮಹಿಳಾ ಸರ್ಕಾರಿ ನೌಕರರಿಗೆ ಈ ಹೆರಿಗೆರಜೆಯನ್ನು ಅದರ ಆರಂಭದ ದಿನಾಂಕದಿಂದ 180 ದಿನಗಳವರೆಗೆ ಮಂಜೂರು ಮಾಡಲಾಗುತ್ತದೆ. ಆದಕಾರಣ ನೀವು ಫೆಬ್ರವರಿ ಏಳರಿಂದ ಅರ್ಜಿ ಸಲ್ಲಿಸಿರುವುದರಿಂದ, ವೈದ್ಯಕೀಯ ಪ್ರಮಾಣತ್ವದ ಆಧಾರದ ಮೇಲೆ ಈ ಹೆರಿಗೆ ರಜೆಯನ್ನು ಮಂಜೂರು ಮಾಡಬಹುದು. ಹೆಚ್ಚಿನ ವಿವರಗಳಿಗೆ ಇದೇ ಲೇಖಕರು ಬರೆದಿರುವ ‘ಕರ್ನಾಟಕ ಸರ್ಕಾರಿ ಸೇವಾ ನಿಯಮಗಳು’ ಪುಸ್ತಕವನ್ನು ನೋಡಬಹುದು.

***

05-02-2018.

ನಾನು 2012ರಲ್ಲಿ ಬೆರಳಚ್ಚುಗಾರನಾಗಿ ಸರ್ಕಾರಿ ಸೇವೆಗೆ ಸೇರಿದ್ದೇನೆ. ಈಗ ಕನ್ನಡ ಶೀಘ್ರಲಿಪಿ ಪ್ರೌಢದರ್ಜೆ ಪರೀಕ್ಷೆಯಲ್ಲಿ ಉತ್ತೀರ್ಣಳಾಗಿದ್ದು ಶೀಘ್ರಲಿಪಿಗಾರರ ಹುದ್ದೆಗೆ ಪದೋನ್ನತಿ ಹೊಂದಲು ಅರ್ಹಳೆ? ಅಕೌಂಟ್ಸ್ ಹೈಯರ್ ಪರೀಕ್ಷೆ ಪಾಸಾಗಿದ್ದು ಜನರಲ್ ಲಾ ಮತ್ತಿತರ ಪರೀಕ್ಷೆಯಲ್ಲಿ ಉತ್ತೀರ್ಣಳಾಗಿಲ್ಲ.

| ಜಯಲಕ್ಷ್ಮಿ ಬೆಂಗಳೂರು.

ಕರ್ನಾಟಕ ಸರ್ಕಾರಿ ಸೇವಾ (ಶೀಘ್ರಲಿಪಿಗಾರರ ಮತ್ತು ಬೆರಳಚ್ಚುಗಾರರ ನೇಮಕಾತಿ) ನಿಯಮಗಳು 1983ರ ಪ್ರಕಾರ ಶೀಘ್ರಲಿಪಿಗಾರರ ಹುದ್ದೆಗೆ ಪದೋನ್ನತಿ ಹೊಂದಲು ಕನ್ನಡ ಶೀಘ್ರಲಿಪಿ, ಪ್ರೌಢದರ್ಜೆ ಪರೀಕ್ಷೆಯಲ್ಲಿ ಉತ್ತೀರ್ಣರಾಗುವುದು ಅಗತ್ಯವಾಗಿದೆ. ಅದಲ್ಲದೆ ಅಕೌಂಟ್ಸ್ ಹೈಯರ್ ಹುದ್ದೆಯಲ್ಲೂ ಉತ್ತೀರ್ಣರಾಗಿದ್ದರೆ ನೀವು ಈ ಶೀಘ್ರಲಿಪಿಗಾರರ ಹುದ್ದೆಗೆ ಪದೋನ್ನತಿಯನ್ನು ಪಡೆಯಬಹುದು.

***

04-02-2018.

ನಾನು ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾಲಯಗಳಲ್ಲಿ ಸಹಾಯಕ ಕುಲಸಚಿವನಾಗಿ ಕೆಲಸ ಮಾಡುತ್ತಿದ್ದು 2017ರ ಡಿಸೆಂಬರ್ಗೆ 6 ವರ್ಷ ಪೂರೈಸಿದ್ದೇನೆ. ನಮ್ಮ ವಿಶ್ವವಿದ್ಯಾಲಯದ ನೇಮಕಾತಿ ನಿಯಮಗಳನ್ವಯ 5 ವರ್ಷ ಪೂರೈಸಿದವರಿಗೆ ಪದೋನ್ನತಿ ನೀಡಬೇಕೆಂದಿದೆ. ಆದರೆ ವಿಶ್ವವಿದ್ಯಾಲಯದಲ್ಲಿ ಸಹಕುಲಸಚಿವ ಹುದ್ದೆಗಳು ಇಲ್ಲದಿರುವುದರಿಂದ ಪದೋನ್ನತಿ ನೀಡಲು ಸಾಧ್ಯವಿಲ್ಲ ಎನ್ನುತ್ತಿದ್ದಾರೆ. ಇಂಥ ಸಂದರ್ಭದಲ್ಲಿ ಸಂಖ್ಯಾತೀತವಾಗಿ ಸಹಕುಲಸಚಿವ ಹುದ್ದೆ ಸೃಷ್ಟಿಸಿ ಪದೋನ್ನತಿ ನೀಡಬಹುದೆ?

| ಶಿವಾನಂದ ಮಾರಡಗಿ ಶಿವಮೊಗ್ಗ.

ಕರ್ನಾಟಕ ಸರ್ಕಾರಿ ಸೇವಾನಿಯಮಾವಳಿಯ ನಿಯಮ 100ರ ರೀತ್ಯ ಹೀಗಿದೆ: ಒಂದು ಸಂಖ್ಯಾತೀತ ಹುದ್ದೆ ಸೃಷ್ಟಿಸಲು ಸಕ್ಷಮ ಅಧಿಕಾರಿಯ ಅಭಿಪ್ರಾಯ ಹೀಗಿರಬೇಕು. ಒಂದು ಕ್ರಮಬದ್ಧ ಖಾಯಂ ಹುದ್ದೆಯ ಹಕ್ಕನ್ನು ಹೊಂದಲು ಅರ್ಹನಾದ, ಆದರೆ ಸಾಂರ್ದಭಿಕ ಕಾರಣಗಳಿಂದಾಗಿ ಅಂಥ ಹುದ್ದೆ ಹೊಂದಲು ಸಾಧ್ಯವಾಗದ ಸರ್ಕಾರಿ ನೌಕರನ ಅರ್ಜಿಗೆ ಅವಕಾಶ ನೀಡಲು ಸೃಷ್ಟಿಸಬಹುದು. ಆದರೆ ಅದನ್ನು ಸೃಷ್ಟಿಸುವ ಅಥವಾ ಆ ನಂತರ ಅಗತ್ಯಕ್ಕಿಂತ ಹೆಚ್ಚು ಸಿಬ್ಬಂದಿಯಾದರೆ ಸೃಷ್ಟಿಸತಕ್ಕದ್ದಲ್ಲ ಎನ್ನಲಾಗಿದೆ. ಹೀಗಾಗಿ ನಿಮ್ಮ ವಿ.ವಿ.ಯಲ್ಲಿ ಈ ಸಂಖ್ಯಾತೀತ ಹುದ್ದೆ ಸೃಷ್ಟಿಸಲು ಸಾಧ್ಯವಿಲ್ಲ.

***

03-02-2018.

ನಾನು ಸರ್ಕಾರಿ ಪ್ರೌಢಶಾಲಾ ಶಿಕ್ಷಕ. ನನ್ನ ಮೂಲ ವೇತನ ರೂ. 24 ಸಾವಿರ ರೂ.ಗಳು. ನಾನು ಎಫ್ಡಿಎ ಆಯ್ಕೆಯಾದರೆ ನನ್ನ ಮೂಲ ವೇತನ ಎಷ್ಟಾಗುತ್ತದೆ? ದಯವಿಟ್ಟು ತಿಳಿಸಿ.

| ಶಿವು ಬೆಂಗಳೂರು.

ಕರ್ನಾಟಕ ಸರ್ಕಾರ ಸೇವಾ ನಿಯಮಾವಳಿಯ ನಿಯಮ 41 (ಎ) ಪ್ರಕಾರ ನೀವು ಸಮಾನ ವೇತನಶ್ರೇಣಿಗೆ ನೇಮಕವಾದರೆ ವೇತನ ರಕ್ಷಣೆ ದೊರಕುತ್ತದೆ. ಇಲ್ಲವಾದರೆ ನೀವು ಪ್ರಥಮ ದರ್ಜೆ ಸಹಾಯಕರ ವೇತನ ಶ್ರೇಣಿಯು ಪ್ರೌಢಶಾಲಾ ಶಿಕ್ಷಕರ ವೇತನ ಶ್ರೇಣಿಗಿಂತ ಕಡಿಮೆಯಾಗಿದ್ದರೆ ನಿಮ್ಮ ವೇತನವನ್ನು ನೀವು ಪ್ರೌಢಶಾಲಾ ಶಿಕ್ಷಕ ಹುದ್ದೆಗೆ ಸೇರಿದ ದಿನಾಕದಿಂದ ಪ್ರಥಮ ದರ್ಜೆ ಸಹಾಯಕರ ಹುದ್ದೆಯಲ್ಲಿ ವೇತನವನ್ನು ನಿಗದಿಪಡಿಸಲಾಗುತ್ತದೆ. ಹೆಚ್ಚಿನ ವಿವರಗಳಿಗಾಗಿ ಇದೇ ಲೇಖಕರು ಬರೆದಿರುವ ‘ಕರ್ನಾಟಕ ಸರ್ಕಾರಿ ಸೇವಾ ನಿಯಮಗಳು’ ಪುಸ್ತಕವನ್ನು ನೋಡಬಹುದು.

***

04-02-2018.

ನಾನು ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾಲಯಗಳಲ್ಲಿ ಸಹಾಯಕ ಕುಲಸಚಿವನಾಗಿ ಕೆಲಸ ಮಾಡುತ್ತಿದ್ದು 2017ರ ಡಿಸೆಂಬರ್ಗೆ 6 ವರ್ಷ ಪೂರೈಸಿದ್ದೇನೆ. ನಮ್ಮ ವಿಶ್ವವಿದ್ಯಾಲಯದ ನೇಮಕಾತಿ ನಿಯಮಗಳನ್ವಯ 5 ವರ್ಷ ಪೂರೈಸಿದವರಿಗೆ ಪದೋನ್ನತಿ ನೀಡಬೇಕೆಂದಿದೆ. ಆದರೆ ವಿಶ್ವವಿದ್ಯಾಲಯದಲ್ಲಿ ಸಹಕುಲಸಚಿವ ಹುದ್ದೆಗಳು ಇಲ್ಲದಿರುವುದರಿಂದ ಪದೋನ್ನತಿ ನೀಡಲು ಸಾಧ್ಯವಿಲ್ಲ ಎನ್ನುತ್ತಿದ್ದಾರೆ. ಇಂಥ ಸಂದರ್ಭದಲ್ಲಿ ಸಂಖ್ಯಾತೀತವಾಗಿ ಸಹಕುಲಸಚಿವ ಹುದ್ದೆ ಸೃಷ್ಟಿಸಿ ಪದೋನ್ನತಿ ನೀಡಬಹುದೆ?

| ಶಿವಾನಂದ ಮಾರಡಗಿ ಶಿವಮೊಗ್ಗ.

ಕರ್ನಾಟಕ ಸರ್ಕಾರಿ ಸೇವಾನಿಯಮಾವಳಿಯ ನಿಯಮ 100ರ ರೀತ್ಯ ಹೀಗಿದೆ: ಒಂದು ಸಂಖ್ಯಾತೀತ ಹುದ್ದೆ ಸೃಷ್ಟಿಸಲು ಸಕ್ಷಮ ಅಧಿಕಾರಿಯ ಅಭಿಪ್ರಾಯ ಹೀಗಿರಬೇಕು. ಒಂದು ಕ್ರಮಬದ್ಧ ಖಾಯಂ ಹುದ್ದೆಯ ಹಕ್ಕನ್ನು ಹೊಂದಲು ಅರ್ಹನಾದ, ಆದರೆ ಸಾಂರ್ದಭಿಕ ಕಾರಣಗಳಿಂದಾಗಿ ಅಂಥ ಹುದ್ದೆ ಹೊಂದಲು ಸಾಧ್ಯವಾಗದ ಸರ್ಕಾರಿ ನೌಕರನ ಅರ್ಜಿಗೆ ಅವಕಾಶ ನೀಡಲು ಸೃಷ್ಟಿಸಬಹುದು. ಆದರೆ ಅದನ್ನು ಸೃಷ್ಟಿಸುವ ಅಥವಾ ಆ ನಂತರ ಅಗತ್ಯಕ್ಕಿಂತ ಹೆಚ್ಚು ಸಿಬ್ಬಂದಿಯಾದರೆ ಸೃಷ್ಟಿಸತಕ್ಕದ್ದಲ್ಲ ಎನ್ನಲಾಗಿದೆ. ಹೀಗಾಗಿ ನಿಮ್ಮ ವಿ.ವಿ.ಯಲ್ಲಿ ಈ ಸಂಖ್ಯಾತೀತ ಹುದ್ದೆ ಸೃಷ್ಟಿಸಲು ಸಾಧ್ಯವಿಲ್ಲ.

***

02-02-2018.

ಪತಿಯ ನಿಧನದಿಂದ ನಾನು ಅನುಕಂಪದ ಆಧಾರದ ಮೇಲೆ 2016ರಲ್ಲಿ ದ್ವಿತೀಯ ದರ್ಜೆ ಸಹಾಯಕಳಾಗಿ ಕೆಲಸಕ್ಕೆ ಸೇರಿದ್ದೇನೆ. ನಾನೀಗ ಎರಡನೇ ಮದುವೆಯಾಗಲು ಇಚ್ಛಿಸಿದ್ದೇನೆ. ‘ನೀವು ಅನುಕಂಪದ ಆಧಾರದ ಮೇಲೆ ಪತಿಯ ಹುದ್ದೆಯನ್ನು ಪಡೆದಿರುವುದರಿಂದ ಎರಡನೇ ಮದುವೆಯಾದರೆ ಕೆಲಸ ಕಳೆದುಕೊಳ್ಳುವಿರಿ’ ಎಂದು ಮೇಲಧಿಕಾರಿಗಳು ಹೆದರಿಸುತ್ತಿದ್ದಾರೆ. ನಾನು ಎರಡನೇ ಮದುವೆಯಾಗಹುದೆ? ಕಾನೂನು ತೊಡಕುಗಳಿವೆಯೆ?

| ಸೌಮ್ಯಲತಾ ಮೈಸೂರು.

ಕರ್ನಾಟಕ ಸರ್ಕಾರಿ ಸೇವಾ (ಅನುಕಂಪದ ಆಧಾರದ ಮೇಲೆ ನೇಮಕಾತಿ) ನಿಯಮಗಳು 1996ರ ರೀತ್ಯ ಅನುಕಂಪದ ಮೇಲೆ ಪತಿಯ ನೌಕರಿಯನ್ನು ಪಡೆದ ಮಹಿಳೆಯು ಎರಡನೇ ವಿವಾಹವಾದರೆ ಕೆಲಸ ಕಳೆದುಕೊಳ್ಳುತ್ತಾರೆ ಎನ್ನುವ ನಿಯಮವಿಲ್ಲ. ಆದುದರಿಂದ ನೀವು ಯಾವುದೇ ಬೆದರಿಕೆಗೆ ಅಂಜದೆ ಎರಡನೇ ಮದುವೆಯಾಗಬಹುದು. ಹೆಚ್ಚಿನ ವಿವರಗಳಿಗೆ ಇದೇ ಲೇಖಕರ ‘ಕರ್ನಾಟಕ ಸರ್ಕಾರಿ ಸೇವಾ ಕಾನೂನು ಕೈಪಿಡಿ’ ಪುಸ್ತಕವನ್ನು ನೋಡಬಹುದು.

***

01-02-2018.

ವೃಂದ ಮತ್ತು ನೇಮಕಾತಿ ರೀತ್ಯಾ ಗ್ರಾಮಲೆಕ್ಕಾಧಿಕಾರಿ ಹುದ್ದೆಯಿಂದ ದ್ವಿತೀಯ ದರ್ಜೆ ಸಹಾಯಕರ ಹುದ್ದೆಗೆ ವೃಂದ ಬದಲಾವಣೆ ಮಾಡಿಕೊಳ್ಳಲು ಅವಕಾಶವಿದೆಯೇ?

| ಚಂದ್ರಕಾಂತ ಕಲಬುರಗಿ.

ಕರ್ನಾಟಕ ಸರ್ಕಾರಿ ಸೇವಾ (ಸಾಮಾನ್ಯ ನೇಮಕಾತಿ) ನಿಯಮಗಳು 1977ರ ನಿಯಮ 16(ಎ) ರೀತ್ಯ ಸಮಾನ ವೇತನ ಶ್ರೇಣಿಯ ಸಿ ಮತ್ತು ಡಿ ಗುಂಪಿನ ಹುದ್ದೆಗಳಲ್ಲಿರುವ ಸರ್ಕಾರಿ ನೌಕರರು ವೃಂದ ಬದಲಾವಣೆ ಮಾಡಿಕೊಳ್ಳಲು ಅವಕಾಶ ಇರುತ್ತದೆ. ಈ ವೃಂದ ಬದಲಾವಣೆಗೆ ವೈದ್ಯಕೀಯ ಹಾಗೂ ಇನ್ನಿತರ ಸರ್ಕಾರಿ ನೌಕರನ ಇನ್ನಿತರ ಕಾರಣಗಳಿಂದ ವೃಂದ ಬದಲಾವಣೆ ಮಾಡಿಕೊಳ್ಳಬಹುದು.

***

31.01.2018.

2018ರ ಮಾರ್ಚ್ 31ರಂದು ವಯೋನಿವೃತ್ತರಾಗಲಿರುವ ಸರ್ಕಾರಿ ನೌಕರನಿಗೆ ಎಷ್ಟು ದಿನ ಸಾಂರ್ದಭಿಕ ರಜೆಗಳನ್ನು ಮುಂಗಡವಾಗಿ ಜಮೆ ಮಾಡಬಹುದು, ಹಾಗೂ ಹೊಸದಾಗಿ ಸೇರಿದ ನೌಕರನಿಗೆ ನಿರ್ಬಂಧಿತ ರಜೆಯನ್ನು ಮುಂಗಡವಾಗಿ ಜಮೆ ಮಾಡಬಹುದು?

| ಪ. ಚಂದ್ರಕುಮಾರ್ ಗೌನಹಳ್ಳಿ ಚಿತ್ರದುರ್ಗ.

ಕರ್ನಾಟಕ ಸರ್ಕಾರ ಸೇವಾ ನಿಯಮಾವಳಿಯ ಅನುಬಂಧ (ಬಿ) ರಂತೆ ಸರ್ಕಾರಿ ನೌಕರನಿಗೆ ಒಂದು ಕ್ಯಾಲೆಂಡರ್ ವರ್ಷದಲ್ಲಿ 15 ದಿನಗಳ ಕಾಲ ಸಾಂರ್ದಭಿಕ ರಜೆ ಲಭ್ಯವಾಗುತ್ತದೆ. 2018ರ ಮಾರ್ಚ್ 31ರಂದು ವಯೋನಿವೃತ್ತರಾಗಲಿರುವ ಸರ್ಕಾರಿ ನೌಕರನಿಗೆ 15 ದಿನಗಳ ಕಾಲ ಸಾಂರ್ದಭಿಕ ರಜೆಯನ್ನು ಜಮೆ ಮಾಡಬಹುದು. ಹೊಸದಾಗಿ ಸೇರುವ ನೌಕರನಿಗೆ ಎರಡು ದಿನಗಳ ಕಾಲ ನಿರ್ಬಂಧಿತ ರಜೆಯನ್ನು ನೀಡಬಹುದು. ಹೆಚ್ಚಿನ ವಿವರಗಳಿಗೆ ಇದೇ ಲೇಖಕರ ‘ಕರ್ನಾಟಕ ಸರ್ಕಾರಿ ಸೇವಾ ನಿಯಮಗಳು’ ಪುಸ್ತಕವನ್ನು ನೋಡಬಹುದು.

***

30-01-2018.

ನಾನು ಹಿಂದುಗಳ ಪವಿತ್ರಾ ಯಾತ್ರಾಸ್ಥಳವಾದ ಮಾನಸಸರೋವರ ಮತ್ತು ಕೈಲಾಸಪರ್ವತಕ್ಕೆ ಹೋಗಬೇಕೆಂದು ಇಚ್ಛಿಸಿರುತ್ತೇನೆ. ನಾನು ಇಲ್ಲಿಗೆ ಹೋಗಲು ಇಲಾಖಾ ಮುಖ್ಯಸ್ಥರ ಅಥವಾ ಸರ್ಕಾರದ ಅನುಮತಿ ಪಡೆದುಕೊಳ್ಳುವುದು ಆವಶ್ಯಕವೆ?

| ಕಮಲಾ ನಾಗೇಶ್ವರರಾವ್ ಧಾರವಾಡ.

ನೀವು ಮಾನಸಸರೋವರಕ್ಕೆ ಹೋಗಲು ಸರ್ಕಾರದ ಅನುಮತಿ ಆವಶ್ಯಕ. ಮಾನಸಸರೋವರವು ಚೀನಾದೇಶದಲ್ಲಿರುವುದರಿಂದ ಹಾಗೂ ಅದು ವಿದೇಶಿ ಪ್ರವಾಸವಾಗಿರುವುದರಿಂದ ಇದಕ್ಕೆ ವೀಸಾ ಪಾಸ್ಪೋರ್ಟ್ ಬಳಸಬೇಕಾಗುತ್ತದೆ. ಆದ್ದರಿಂದ ಸ್ವಂತ ಖರ್ಚಿನಲ್ಲಿ ಸರ್ಕಾರದ ಅಥವಾ ಇಲಾಖಾ ಮುಖ್ಯಸ್ಥರಿಂದ ಅನುಮತಿ ಪಡೆದು ಹೋಗಬಹುದು. ಹೆಚ್ಚಿನ ವಿವರಗಳಿಗೆ ಇದೇ ಲೇಖಕರು ಬರೆದಿರುವಂತಹ ‘ಕರ್ನಾಟಕ ಸರ್ಕಾರಿ ಸೇವಾ ಕಾನೂನು ಕೈಪಿಡಿ’ ಪುಸ್ತಕವನ್ನು ನೋಡಬಹುದು.

***

29-01-2018.

ನಾನು 20-10-2010ರಂದು ಅರಣ್ಯ ಇಲಾಖೆಯಲ್ಲಿ ಬೆರಳಚ್ಚುಗಾರನಾಗಿ ಸೇವೆಗೆ ಸೇರಿ ಏಳು ವರ್ಷ ಸೇವೆ ಪೂರೈಸಿದ್ದೇನೆ. ಈಗ ವೃಂದ ಬದಲಾವಣೆಗೆ ಅರ್ಜಿ ಸಲ್ಲಿಸಿದರೆ ಮೇಲಾಧಿಕಾರಿಯವರು ಪಿಯುಸಿ ತೇರ್ಗಡೆಯಾಗಬೇಕು ಎನ್ನುತ್ತಿದ್ದಾರೆ. ನಾನು ಐ.ಟಿ.ಐ.ನಲ್ಲಿ ತೇರ್ಗಡೆ ಆಗಿದ್ದು ಇದನ್ನು ಪರಿಗಣಿಸಬಹುದೆ?

| ಪಾಂಡುರಂಗ ಧವಳೇಶ್ವರ ಬಾಗಲಕೋಟೆ.

ಕರ್ನಾಟಕ ಸರ್ಕಾರ ಸೇವಾ (ಲಿಪಿಕ ಹುದ್ದೆಗಳ ನೇಮಕಾತಿ) ನಿಯಮಾವಳಿ 1973ರ ಪ್ರಕಾರ ದ್ವಿತೀಯ ದರ್ಜೆ ಸಹಾಯಕರ ಹುದ್ದೆಗೆ ನೇರ ನೇಮಕಾತಿ ಮಾಡಿಕೊಳ್ಳಲು ಪಿಯುಸಿ ತತ್ಸಮಾನ ವಿದ್ಯಾರ್ಹತೆ ಪಡೆದಿರಬೇಕು. ದಿನಾಂಕ: 27-01-2015ರ ಸರ್ಕಾರಿ ಸುತ್ತೋಲೆ ಸಂಖ್ಯೆ: ಡಿಪಿ.ಎ.ಆರ್ 147 ಎಸ್ಸಿಎ2014ರ ರೀತ್ಯ ದ್ವಿತೀಯ ದರ್ಜೆ ಸಹಾಯಕರ ಹುದ್ದೆಗೆ ಐ.ಟಿ.ಐ. ಅಥವಾ ತಾಂತ್ರಿಕ ಶಿಕ್ಷಣ ಇಲಾಖೆಯ ಮೂರು ವರ್ಷ ಡಿಪ್ಲೊಮೋ ಪಡೆದಿದ್ದರೂ ನೇಮಿಸಿಕೊಳ್ಳಬಹುದೆಂದು ಸೂಚಿಸಲಾಗಿದೆ. ಹೀಗಿರುವಲ್ಲಿ ನೀವು ದ್ವಿತೀಯ ದರ್ಜೆ ಸಹಾಯಕರ ಹುದ್ದೆಗೆ ವೃಂದ ಬದಲಾವಣೆ ಮಾಡಿಕೊಳ್ಳಲು ಐ.ಟಿ.ಐ. ವಿದ್ಯಾರ್ಹತೆಯನ್ನು ಪರಿಗಣಿಸಬಹುದಾಗಿದೆ. ಹೆಚ್ಚಿನ ವಿವರಗಳಿಗೆ ಇದೇ ಲೇಖಕರ ‘ಕರ್ನಾಟಕ ಸರ್ಕಾರಿ ಸೇವಾ ಕಾನೂನು ಕೈಪಿಡಿ’ ಪುಸ್ತಕವನ್ನು ನೋಡಬಹುದು.

***

28.01.2018.

ನನ್ನ ತಾಯಿ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕರಾಗಿದ್ದರು. ನಾನು ಎರಡು ವರ್ಷ ವಯಸ್ಸಾಗಿದ್ದಾಗ ತಂದೆ-ತಾಯಿ ಮರಣ ಹೊಂದಿದರು. ಅವರು ತೀರಿಕೊಂಡು ಸುಮಾರು ಇಪ್ಪತ್ತು ವರ್ಷಗಳಾಗಿವೆ. ಈ ಅನುಕಂಪದ ನೇಮಕಾತಿಯ ಬಗ್ಗೆ ಗೊತ್ತಿರಲಿಲ್ಲ. ನಾನೀಗ ಎಂ.ವಿ.ಪದವೀಧರಳಾಗಿದ್ದು ಅನುಕಂಪದ ಆಧಾರದ ಮೇಲೆ ಈಗ ನನ್ನ ತಾಯಿಯ ಸರ್ಕಾರಿ ನೌಕರಿಯನ್ನು ಪಡೆಯಬಹುದೆ?

| ಭೂಮಿಕಾ ದೇಸಾಯಿ ಧಾರವಾಡ.

1996ರ ಕರ್ನಾಟಕ ಸರ್ಕಾರಿ ಸೇವಾ (ಅನುಕಂಪದ ಆಧಾರದ ಮೇಲೆ ನೇಮಕ) ನಿಯಮಾವಳಿ ರೀತ್ಯ ಸರ್ಕಾರಿ ನೌಕರನು ನಿಧನ ಹೊಂದಿದ ಒಂದು ವರ್ಷದೊಳಗಾಗಿ ಅನುಕಂಪದ ಮೇರೆಗೆ ನೌಕರಿಯನ್ನು ಪಡೆಯುವ ಅವಲಂಬಿತರು 18 ವರ್ಷ ಪೂರೈಸಿದ್ದು ನಿಗದಿತ ವಿದ್ಯಾರ್ಹತೆ ಹೊಂದಿದ್ದರೆ ಅರ್ಜಿ ಸಲ್ಲಿಸಬೇಕು. ಅಂತಹವರಿಗೆ ಈ ಅನುಕಂಪದ ಆಧಾರದ ಮೇಲೆ ನೌಕರಿ ಲಭ್ಯವಾಗುತ್ತದೆ. ಆದರೆ ನಿಮ್ಮ ತಾಯಿ ಮರಣ ಹೊಂದಿ ಇಪ್ಪತ್ತು ವರ್ಷಗಳಾಗಿರುವುದರಿಂದ ಲಭ್ಯವಾಗುವುದಿಲ್ಲ.

***

27-01-2018.

ನಾನು 2012ರ ಏಪ್ರಿಲ್ 5ರಂದು ಪೊಲೀಸ್ ಪೇದೆಯಾಗಿ ಆಯ್ಕೆಯಾಗಿ ಕರ್ತವ್ಯ ನಿರ್ವಹಿಸಿದೆ. 2016ರಲ್ಲಿ ಇಲಾಖೆಯಿಂದ ಅನುಮತಿ ಪಡೆದುಕೊಂಡು ನ್ಯಾಯಾಂಗ ಇಲಾಖೆಯಲ್ಲಿ ದ್ವಿತೀಯ ದರ್ಜೆ ಸಹಾಯಕನಾಗಿ ಹಾಜರಾಗಿದ್ದೇನೆ. ನಾನು ಪೊಲೀಸ್ ಇಲಾಖೆಗೆ ಮರಳಿ ಹೋಗುವುದಕ್ಕೆ ಕರ್ನಾಟಕ ಸರ್ಕಾರದ ಸೇವಾ ನಿಯಮಾವಳಿಗಳಲ್ಲಿ ಅವಕಾಶ ಇದೆಯೇ? ದಯವಿಟ್ಟು ವಿವರ ನೀಡಿ.

| ಉದಯ ರೆಡ್ಡಿ ರಾಯಚೂರು.

ಕರ್ನಾಟಕ ಸರ್ಕಾರದ ಸೇವಾ ನಿಯಮಾವಳಿಯ ನಿಯಮ 20ರ ಮೇರೆಗೆ ಹುದ್ದೆಯ ಹಕ್ಕನ್ನು ಕಾಯ್ದಿರಿಸಲು ವಿನಂತಿಸಿ ನಿಯಮ 252(ಬಿ) ರಂತೆ ಬಿಡುಗಡೆ ಹೊಂದಿರಬೇಕು. ನೀವು ಎರಡು ವರ್ಷಗಳೊಳಗಾಗಿ ನ್ಯಾಯಾಂಗ ಇಲಾಖೆಯಿಂದ ಪೊಲೀಸ್ ಇಲಾಖೆಗೆ ವಾಪಸ್ಸು ಹೋಗಬಹುದು.

***

26-01-2018.

ನಾನು 2010ರಲ್ಲಿ ಪ್ರಾಥಮಿಕ ಶಾಲಾ ಶಿಕ್ಷಕನಾಗಿ ಸೇವೆಗೆ ಸೇರಿದ್ದೆ. ಆ ನಂತರ ನಿರಾಕ್ಷೇಪಣ ಪತ್ರವನ್ನು ಪಡೆದು 2016ರಲ್ಲಿ ಪಿಎಸ್ಐ ಆಗಿ ನೇಮಕ ಹೊಂದಿದ್ದೇನೆ. ಈ ಹುದ್ದೆಗೆ ನನ್ನ ಹಿಂದಿನ ಸೇವೆಯನ್ನು ಕೂಡ ಪರಿಗಣಿಸುತ್ತಾರೆಯೆ? ನನಗೆ ಯಾವ ಯಾವ ಸೇವಾಸೌಲಭ್ಯಗಳು ದೊರಕುತ್ತವೆ?

| ಡಿ. ಸಂತೋಷ ಕೊಪ್ಪಳ.

ಕರ್ನಾಟಕ ಸರ್ಕಾರದ ಸೇವಾ ನಿಯಮಾವಳಿಯ ನಿಯಮ 252ಬಿ ರಂತೆ ಶಾಲಾ ಶಿಕ್ಷಕ ಹುದ್ದೆಯಿಂದ ಬಿಡುಗಡೆಯಾಗಿ ಪಿ.ಎಸ್.ಐ. ಹುದ್ದೆಗೆ ಸೇರಿದ್ದರೆ ವೇತನ ರಕ್ಷಣೆ, ರಜೆ ಸೌಲಭ್ಯಗಳು ದೊರೆಯುತ್ತವೆ. ಅಷ್ಟೇ ಅಲ್ಲ, ಹೊಸ ಹುದ್ದೆಯಲ್ಲೂ ಎನ್.ಪಿ.ಎಸ್. ಕೆ.ಜಿ.ಐ.ಡಿ, ಸೌಲಭ್ಯಗಳು ಮುಂದುವರಿಯುತ್ತವೆ.

***

25-01-2018.

ನಾನು ಅನುಕಂಪದ ಆಧಾರದ ಮೇಲೆ 2004ರಲ್ಲಿ ಪ್ರಥಮ ದರ್ಜೆ ಸಹಾಯಕಿಯಾಗಿ ಸೇವೆಗೆ ಸೇರಿದ್ದೇನೆ. 2017ರಲ್ಲಿ ಕಿಯಾನಿಕ್ಸ್ ಅವರು ನಡೆಸಿದ ಕಂಪ್ಯೂಟರ್ ಸಾಕ್ಷರತಾ ಪರೀಕ್ಷೆಯಲ್ಲಿ ಗರಿಷ್ಠ ಅಂಕ 80ಕ್ಕೆ 34 ಅಂಕಗಳನ್ನು ಪಡೆದಿದ್ದೇನೆ. ನಾನು ಈ ಪರೀಕ್ಷೆ ತೆಗೆದುಕೊಳ್ಳಬೇಕೆ? 50 ವರ್ಷ ವಯಸ್ಸಾಗಿರುವ ನನಗೆ ಈ ಪರೀಕ್ಷೆಯಿಂದ ವಿನಾಯಿತಿ ಇದೆಯೇ?

| ಬಿ. ಸುವರ್ಣ ಹಾವೇರಿ.

ಕರ್ನಾಟಕ ಸಿವಿಲ್ ಸೇವಾ (ಕಂಪ್ಯೂಟರ್ ಸಾಕ್ಷರತಾ ಪರೀಕ್ಷೆ) ನಿಯಮಗಳು 2012ರ ಪ್ರಕಾರ ಈ ನಿಯಮವು ಜಾರಿಗೆ ಬಂದ ದಿನಾಂಕ : 22 ಮಾರ್ಚ್ 2012ರ ಪೂರ್ವದಲ್ಲಿ ಸರ್ಕಾರಿಸೇವೆಗೆ ಸೇರಿದ ನೌಕರರು ಶೇ. 35ರಷ್ಟು ಅಂದರೆ, 80ಕ್ಕೆ 28 ಅಂಕಗಳನ್ನು ಗಳಿಸಿದರೆ ಸಾಕು. ಜಾರಿ ದಿನಾಂಕದಂದು 50 ವರ್ಷವಾಗಿದ್ದರೆ ಈ ಪರೀಕ್ಷೆಯಿಂದ ವಿನಾಯಿತಿಯಿದೆ. ಹೆಚ್ಚಿನ ವಿವರಗಳಿಗೆ ಇದೇ ಲೇಖಕರು ಬರೆದಿರುವ ಕಂಪ್ಯೂಟರ್ ಸಾಕ್ಷರತಾ ಕೈಪಿಡಿಯನ್ನು ನೋಡಬಹುದು.

***

24-01-2018.

ನಾನು ವಿದ್ಯಾ ಇಲಾಖೆಯಲ್ಲಿ ಸೇವೆಗೆ ಸೇರಿ ವಯೋನಿವೃತ್ತಿ ಹೊಂದಿದ್ದು ನನ್ನ ಪತಿ ಸಹ ಆರೋಗ್ಯ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾಗ ನಿಧನ ಹೊಂದಿದರು. ಅಂದಿನಿಂದ ನಾನು ಕುಟುಂಬ ನಿವೃತ್ತಿವೇತನವನ್ನು ಪಡೆಯುತ್ತಿದ್ದೇನೆ. ನನ್ನ ಮಗನಿಗೆ ಆರೋಗ್ಯ ಇಲಾಖೆಯಲ್ಲಿ ದ್ವಿತೀಯ ದರ್ಜೆ ಸಹಾಯಕರ ಹುದ್ದೆಗೆ ನೇಮಕವಾಗಿದ್ದು ನನ್ನ ಮತ್ತು ನನ್ನ ಪತಿಯ ಕುಟುಂಬ ವೇತನವನ್ನು ಪಡೆಯುತ್ತಿರುವುದರಿಂದ ಅನುಕಂಪದ ಮೇಲೆ ನೇಮಕವಾದ ನನ್ನ ಮಗನಿಗೆ ಮುಂದೇನಾದರೂ ಕಾನೂನಿನ ತೊಡಕಾಗುತ್ತದೆಯೆ?

| ರೋಹಿಣಿ ಎಂ. ಹೊಳ್ಳ ಮಂಗಳೂರು

2002ರ ಕುಟುಂಬ ನಿವೃತ್ತಿವೇತನ ನಿಯಮಾವಳಿಯ ರೀತ್ಯ ಪತಿ-ಪತ್ನಿ ಇಬ್ಬರಿಗೂ ಸಂದಾಯವಾಗಬೇಕಾದ ಕುಟುಂಬ ವೇತನವನ್ನು ನೀವು ಪಡೆಯುತ್ತಿದ್ದರೂ ಅನುಕಂಪದ ಮೇಲೆ ನೇಮಕವಾದ ನಿಮ್ಮ ಮಗನ ಭವಿಷ್ಯದ ದೃಷ್ಟಿಯಿಂದ ಯಾವುದೇ ತೊಡಕು ಉಂಟಾಗುವುದಿಲ್ಲ. ಆದರೆ ಒಟ್ಟು ಕುಟುಂಬ ನಿವೃತ್ತಿ ವೇತನವು 39,600 ರೂ.ಗಳು ಮಾಸಿಕವಾಗಿ ಮೀರಬಾರದು. ಹೆಚ್ಚಿನ ವಿವರಗಳಿಗೆ ಇದೇ ಲೇಖಕರ ‘ಕರ್ನಾಟಕ ಸರ್ಕಾರಿ ಸೇವಾ ನಿಯಮಗಳು’ ಪುಸ್ತಕವನ್ನು ನೋಡಬಹುದಾಗಿದೆ.

***

23-01-2018.

ಮೇಲಧಿಕಾರಿಗಳ ಆದೇಶದಂತೆ ನನ್ನ ಕಾರ್ಯವ್ಯಾಪ್ತಿಯಲ್ಲಿ ಬರುವ ಎಲ್ಲಾ ಶಾಲೆಯ ಮಕ್ಕಳ ನೇತ್ರ ತಪಾಸಣೆ ಮತ್ತು ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ನೇತ್ರರೋಗಿಗಳ ಪರೀಕ್ಷೆ ಮಾಡಲು ಹೋಗುತ್ತಿದ್ದೇನೆ. ನನಗೆ 5 ವರ್ಷಗಳಿಂದ ಯಾವುದೇ ಪ್ರವಾಸಭತ್ಯೆ ಹಾಗೂ ದಿನಭತ್ಯೆ ಸಂದಾಯವಾಗಿಲ್ಲ. ಈ ಭತ್ಯೆಗಳನ್ನು ಪಡೆದುಕೊಳ್ಳುವುದು ಹೇಗೆ?

| ಸುಭಾಷ್ ಚೌಗಲೆ ಬೆಳಗಾವಿ.

ಕರ್ನಾಟಕ ಸರ್ಕಾರಿ ಸೇವಾ ನಿಯಮಾವಳಿಯ ನಿಯಮ 491ರಂತೆ ಯಾರೇ ಸರ್ಕಾರಿ ನೌಕರನು ಕರ್ತವ್ಯನಿಮಿತ್ತ ವ್ಯಾಪಕವಾಗಿ ಪ್ರಯಾಣ ಮಾಡಬೇಕಾಗಿದೆಯೋ ಅವನಿಗೆ ಖಾಯಂ ಮಾಸಿಕ ಪ್ರಯಾಣಭತ್ಯೆ ಮಂಜೂರು ಮಾಡಬಹುದೆನ್ನಲಾಗಿದೆ. ಸರ್ಕಾರಿ ನೌಕರನ ಕಾರ್ಯವ್ಯಾಪ್ತಿಯೊಳಗೆ ಕೈಗೊಳ್ಳುವ ಪ್ರಯಾಣಭತ್ಯೆಯ ಬದಲಾಗಿ ಅಂಥ ಭತ್ಯೆಯನ್ನು ಮಂಜೂರು ಮಾಡಬಹುದು ಮತ್ತು ವರ್ಷಪೂರ್ತಿ ಪಡೆಯಬಹುದು. ನೀವು ನಿಯಮ 494ರ ಅಡಿಯಲ್ಲಿ ಮಾಸಿಕ ಪ್ರಯಾಣಭತ್ಯೆಯೊಂದಿಗೆ ಹೆಚ್ಚಿನ ದಿನಭತ್ಯೆಯನ್ನೂ ಪಡೆಯಬಹುದು. ಹೆಚ್ಚಿನ ವಿವರಗಳಿಗೆ ಇದೇ ಲೇಖಕರ ‘ಕರ್ನಾಟಕ ಸರ್ಕಾರಿ ಸೇವಾ ನಿಯಮಗಳು’ ಪುಸ್ತಕವನ್ನು ನೋಡಬಹುದಾಗಿದೆ.

***

22-01-2018.

ನಾನು ಸರ್ಕಾರಿ ನೌಕರ. ನಮಗೆ ಇನ್ನೂ ಮಗುವಾಗದ ಕಾರಣ ನನ್ನ ಸಹೋದರನು ಮಗುವನ್ನು ದತ್ತು ಕೊಡಲು, 2017ರ ಫೆಬ್ರವರಿ ಮೊದಲ ವಾರದಲ್ಲಿ ಡೆಲಿವರಿ ಸಮಯದಲ್ಲಿ ಒಪ್ಪಿದ್ದಾರೆ. ಮಗುವನ್ನು ದತ್ತು ತೆಗೆದುಕೊಳ್ಳುವುದು ಹೇಗೆ? ನನ್ನ ಸೇವಾಪುಸ್ತಕದಲ್ಲಿ ಹೇಗೆ ನಾಮನಿರ್ದೇಶನ ಮಾಡಿಸಬೇಕು? ಮಾರ್ಗದರ್ಶನ ಮಾಡಿ.

| ವಿಜಯಕುಮಾರ್ ದಾವಣಗೆರೆ.

ಹಿಂದು ದತ್ತಕ ಕಾಯ್ದೆ ಅಡಿಯಲ್ಲಿ ನೀವು ಮಗುವನ್ನು ದತ್ತು ತೆಗೆದುಕೊಳ್ಳಬೇಕು. ದತ್ತು ತೆಗೆದುಕೊಂಡ ಮಗುವನ್ನು ನೋಂದಣಿ ಮಾಡಿಸಿ ಕರ್ನಾಟಕ ಸರ್ಕಾರಿ ಸೇವಾ ನಿಯಮಾವಳಿಯ ನಿಯಮ 302ರಂತೆ ನಿಮ್ಮ ದತ್ತಕ ಮಗುವನ್ನು ನಾಮ ನಿರ್ದೇಶನ ಮಾಡಿಸಬೇಕು. ಆಗ ನಿಮ್ಮ ಸ್ವಂತ ಮಗುವಿಗೆ ದೊರಕುವಂತೆ ಎಲ್ಲ ಸರ್ಕಾರಿ ಸೌಲಭ್ಯಗಳು ಈ ಮಗುವಿಗೂ ದೊರಕುತ್ತದೆ.

***

21-01-2018.

ನಾನು ಮೊದಲ ಸರ್ಕಾರಿ ಹುದ್ದೆಗೆ ಸಿಂಧುತ್ವ ಪ್ರಮಾಣಪತ್ರ ನೀಡಿ ಆಯ್ಕೆಯಾಗಿ, ಮೂರು ವರ್ಷ ಸೇವೆ ಸಲ್ಲಿಸಿದ್ದೇನೆ. ಈಗ ಅದೇ ಇಲಾಖೆಯ ಇನ್ನೊಂದು ಹುದ್ದೆಗೆ ಅನುಮತಿಯೊಂದಿಗೆ ನೇರ ನೇಮಕಾತಿಯಲ್ಲಿ ಅದೇ ಮೀಸಲಾತಿಯಲ್ಲಿ ಆಯ್ಕೆಯಾಗಿದ್ದೇನೆ. ಮತ್ತೊಮ್ಮೆ ಸಿಂಧುತ್ವ ಪ್ರಮಾಣಪತ್ರವನ್ನು ಮಾಡುವ ಆವಶ್ಯಕತೆ ಇದೆಯೆ?

| ಅಭಿಲಾಷ್ ಚಿಕ್ಕಮಗಳೂರು.

ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗ ಮತ್ತು ಹಿಂದುಳಿದ ವರ್ಗಗಳ ಮೀಸಲಾತಿ ಅಧಿನಿಯಮ 1992ರಡಿಯಲ್ಲಿ ಹಿಂದುಳಿದ ವರ್ಗಗಳ ಮೀಸಲಾತಿಯ ಸಿಂಧುತ್ವ ಪ್ರಮಾಣಪತ್ರವು ಐದು ವರ್ಷದ್ದಾಗಿದ್ದು, ಪರಿಶಿಷ್ಟ ಜಾತಿ/ವರ್ಗದ ಪ್ರಮಾಣಪತ್ರವು ಶಾಶ್ವತವಾಗಿರುತ್ತದೆ. ಈ ಹಿನ್ನೆಲೆಯಲ್ಲಿ ನೀವು ಹಿಂದುಳಿದ ವರ್ಗಕ್ಕೆ ಸೇರಿದ್ದರೆ ಮತ್ತೊಮ್ಮೆ ಸಿಂಧುತ್ವ ಪ್ರಮಾಣಪತ್ರವನ್ನು ಕ್ರೀಮಿ ಲೇಯರ್ ದೃಷ್ಟಿಯಿಂದ ಮಾಡಿಸುವುದು ಆವಶ್ಯಕ. ಹೆಚ್ಚಿನ ವಿವರಗಳಿಗೆ ಇದೇ ಲೇಖಕರ ‘ಕರ್ನಾಟಕ ಸರ್ಕಾರಿ ಸೇವಾ ಕಾನೂನು ಕೈಪಿಡಿ’ಯನ್ನು ನೋಡಬಹುದು.

***

20-01-2018.

ಹೆರಿಗೆ ರಜೆಯ ಮೇಲಿರುವ ನಾನು ಸರ್ಕಾರಿ ನೌಕರಳಾಗಿದ್ದು, 2018ರ ಜನವರಿಯಲ್ಲಿ ಕರ್ತವ್ಯಕ್ಕೆ ಹಾಜರಾಗಬೇಕಾಗಿದೆ. ಆದರೆ ಮನೆಯಲ್ಲಿ ಮಗುವನ್ನು ನೋಡಿಕೊಳ್ಳಲು ಯಾರೂ ಇಲ್ಲ. ಆದ್ದರಿಂದ ನಾನು ಒಂದೂವರೆ ವರ್ಷಗಳ ಕಾಲ ವೇತನರಜೆ ಸಲ್ಲಿಸಲು ಬಯಸಿದ್ದೇನೆ. ಕೆೆಸಿಎಸ್ಆರ್ನಲ್ಲಿ ಈ ರೀತಿ ರಜೆ ಹಾಕಲು ಅವಕಾಶವಿದೆಯೆ ಅಥವಾ ಬೇರೆ ಮಾರ್ಗವಿದೆಯೆ?

| ಮನಸ್ವಿನಿ ಉಡುಪಿ.

ಕರ್ನಾಟಕ ಸರ್ಕಾರಿ ಸೇವಾ ನಿಯಮಾವಳಿಯ ನಿಯಮ 135ರ ಉಪನಿಯಮ 4(ಎ)ರ ಅಡಿಯಲ್ಲಿ ಹೆರಿಗೆ ರಜೆ ನಂತರ 60 ದಿನಗಳವರೆಗೆ ವೈದ್ಯಕೀಯ ಪ್ರಮಾಣ ಪತ್ರವಿಲ್ಲದೆ ರಜೆ ಮಂಜೂರು ಮಾಡಿಸಿಕೊಳ್ಳಬಹುದು. ಉಪನಿಯಮ 4(ಬಿ)ಯಡಿಯಲ್ಲಿ ಮಗುವಿಗೆ ತಾಯಿಯ ವೈಯಕ್ತಿಕ ಗಮನದ ಮತ್ತು ಮಗುವಿನ ಹತ್ತಿರ ತಾಯಿ ಇರುವುದು ತುಂಬ ಅವಶ್ಯವೆಂದು ಅಧಿಕೃತ ವೈದ್ಯಾಧಿಕಾರಿ ನೀಡುವ ಪ್ರಮಾಣಪತ್ರದ ಮೇಲೆ ರಜೆ ಮಂಜೂರು ಮಾಡಿಸಿಕೊಳ್ಳಬಹುದು. ಹೀಗಾಗಿ ನೀವು ಮಗುವಿನ ಆರೈಕೆಯ ದೃಷ್ಟಿಯಿಂದ ವೈದ್ಯಕೀಯ ಪ್ರಮಾಣಪತ್ರದ ಆಧಾರದ ಮೇಲೆ ವೇತನರಹಿತ ರಜೆ ಪಡೆಯಬಹುದು. ಹೆಚ್ಚಿನ ವಿವರಗಳಿಗೆ ಇದೇ ಲೇಖಕರ ‘ಕರ್ನಾಟಕ ಸರ್ಕಾರಿ ಸೇವಾ ನಿಯಮಗಳು’ ಪುಸ್ತಕವನ್ನು ನೋಡಬಹುದು.

***

19-01-2018.

ನಾನು 24.3.2003ರಲ್ಲಿ ಸಶಸ್ತ್ರ ಪೊಲೀಸ್ಪೇದೆಯಾಗಿ ಸೇರಿ 2007ರಲ್ಲಿ ಸಿವಿಲ್ ಪೊಲೀಸ್ ಆಗಿ ಆಯ್ಕೆಯಾದೆ. ತದನಂತರ 2016ರಲ್ಲಿ ಕೆಪಿಎಸ್ಸಿ ಮೂಲಕ ಎಫ್ಡಿಎ ಹುದ್ದೆಗೆ ನೇಮಕಗೊಂಡು 2017ರಲ್ಲಿ ಪಿಎಸ್ಐ ಆಗಿ ಆಯ್ಕೆಯಾಗಿದ್ದೇನೆ. ಆದರೆ ಮೈಸೂರು ಮಹಾನಗರ ಪಾಲಿಕೆಯು ಸ್ಥಳೀಯ ಸಂಸ್ಥೆಯಾಗಿದ್ದು ಸದರಿಯವರು ನನ್ನನ್ನು ಕೆಸಿಎಸ್ಆರ್ 252ಬಿ ಪ್ರಕಾರ ಬಿಡುಗಡೆಗೊಳಿಸಿರುವುದಿಲ್ಲ. ಆದ್ದರಿಂದ ನನ್ನ ಹಿಂದಿನ ಸೇವೆಯು ನಿಯಮ 224ಬಿ ಪ್ರಕಾರ ಅರ್ಹತಾದಾಯಕ ಸೇವೆಯೆಂದು ಪರಿಗಣಿಸಬಹುದೆ?.

| ಎನ್.ಕೆ. ಹರೀಶ ಮೈಸೂರು.

ಕರ್ನಾಟಕ ಸರ್ಕಾರಿ ಸೇವಾ ನಿಯಮಾವಳಿಯ ನಿಯಮ 224ಬಿ ಪ್ರಕಾರ ನೀವು ಪಿಂಚಣಿ ಸೌಲಭ್ಯಕ್ಕೆ ಅರ್ಹತಾದಾಯಕ ಸೇವೆಯೆಂದು ಪರಿಗಣಿಸಬೇಕಾದರೆ ನಿಯಮ 252 ಬಿ ಪ್ರಕಾರ ರಾಜೀನಾಮೆ ನೀಡಿ ಬೇರೊಂದು ಹುದ್ದೆಗೆ ಕರ್ತವ್ಯಕ್ಕೆ ಹಾಜರಾದರೆ ಪರಿಗಣಿಸಲಾಗುತ್ತದೆ. ಏತನ್ಮಧ್ಯೆ ನೀವು 2016ರಿಂದ 2017ರವರೆಗೆ ಸ್ಥಳೀಯ ಸಂಸ್ಥೆಯಲ್ಲಿ ಸಲ್ಲಿಸಿದ ಸೇವೆಯನ್ನು ಪಿಂಚಣಿ ಸೌಲಭ್ಯಕ್ಕೆ ಪರಿಗಣಿಸಲು ಬರುವುದಿಲ್ಲ.

***

18-01-2018.

ನಾನು 2017ರ ಮೇ ತಿಂಗಳಿನಲ್ಲಿ ಪ್ರಥಮ ದರ್ಜೆ ಸಹಾಯಕನಾಗಿ ಸರ್ಕಾರಿ ಸೇವೆಗೆ ಸೇರಿದ್ದೇನೆ. ನನಗೆ ಪ್ರತಿ ತಿಂಗಳು ಎಷ್ಟು ದಿವಸ ಸಾಂರ್ದಭಿಕ ರಜೆ ಲಭಿಸುತ್ತದೆ? ಈ ರೀತಿ ಲಭ್ಯವಾದ ಸಾಂರ್ದಭಿಕ ರಜೆ ಆಯಾ ವರ್ಷದ ಡಿಸೆಂಬರ್ನಲ್ಲಿ ನಷ್ಟವಾಗುತ್ತದೆಯೆ? ಒಮ್ಮೆ ಎಷ್ಟು ಸಾಂರ್ದಭಿಕ ರಜೆಯನ್ನು ಪಡೆಯಬಹುದು?

| ಜಗದೀಶ್ ಎಂ ಕೋಲಾರ.

ಕರ್ನಾಟಕ ಸರ್ಕಾರಿ ಸೇವಾ ನಿಯಮಾವಳಿಯ ಅನುಬಂಧ ಬಿ ಮೇರೆಗೆ ಸರ್ಕಾರಿ ಸೇವೆಗೆ ಸೇರಿದ ಮೊದಲ ವರ್ಷದಲ್ಲಿ ತಿಂಗಳಿಗೆ ಒಂದು ದಿನದಂತೆ ಸಾಂರ್ದಭಿಕ ರಜೆ ಲಭಿಸುತ್ತದೆ. ಈ ರೀತಿಯಾಗಿ ರಜೆ ಖಾತೆಯಲ್ಲಿ ಸೇರ್ಪಡೆಯಾದ ರಜೆಯು ಮುಂದಿನ ವರ್ಷದ ಡಿಸೆಂಬರ್ವರೆಗೂ ನಷ್ಟವಾಗದೆ ಉಳಿಯುತ್ತದೆ. ಒಂದು ವರ್ಷವಾದ ಮೇಲೆ ಕ್ಯಾಲೆಂಡರ್ ವರ್ಷದಲ್ಲಿ ನೀಡುವ 15 ದಿನಗಳ ಅನುಪಾತದಲ್ಲಿ ಲೆಕ್ಕ ಹಾಕಿ ಖಾತೆಗೆ ಸೇರಿಸಲಾಗುತ್ತದೆ. ಒಮ್ಮೆಗೆ ಒಟ್ಟು ಏಳು ದಿನಗಳ ಕಾಲ ಸಾಂರ್ದಭಿಕ ರಜೆಯನ್ನು ವೈಯಕ್ತಿಕ ಅಥವಾ ಇನ್ನಿತರ ಕಾರಣಗಳ ನಿಮಿತ್ತ ಪಡೆಯಬಹುದಾಗಿದೆ. ಈ ಸಾಂರ್ದಭಿಕ ರಜೆಗಳು ಸಾರ್ವತ್ರಿಕ ರಜೆಗಳಾದ ಭಾನುವಾರ, ಇನ್ನಿತರ ಹಬ್ಬ ಹರಿದಿನಗಳ ರಜೆ ಒಳಗೊಳ್ಳುವುದಿಲ್ಲ.

***

17-01-2018

ಜಿಲ್ಲಾ ಸಹಕಾರಿ ಬ್ಯಾಂಕಿನಲ್ಲಿ ಅಕೌಂಟೆಂಟ್ ಆಗಿ 22 ವರ್ಷ ಸೇವೆ ಸಲ್ಲಿಸಿರುವ
ನನಗೆ 55 ವರ್ಷ. ನಾನೀಗ ಸ್ವಯಂನಿವೃತ್ತಿ ಪಡೆಯಬಹುದೆ? ಸ್ವಯಂನಿವೃತ್ತಿ
ಹೊಂದಲು ಗರಿಷ್ಠ ಎಷ್ಟು ವರ್ಷ ಸೇವೆ ಸಲ್ಲಿಸಬೇಕು? ಸೂಕ್ತ ಮಾಹಿತಿ ನೀಡಿ.
| ಕೆ.ಆರ್. ರಾಮಕೃಷ್ಣ ಅಡಿಗ ಮಂಗಳೂರು
ಕರ್ನಾಟಕ ಸಹಕಾರಿ ಸಂಘಗಳ ನಿಯಮಗಳು 1960ರ ನಿಯಮ 18 (4)(ಜಿಜಿ)ರ ಮೇರೆಗೆ ಸಹಕಾರಿ ಬ್ಯಾಂಕಿನ ಯಾವುದೇ ಉದ್ಯೋಗಿಯು ಸ್ವಯಂನಿವೃತ್ತಿ ತೆಗೆದುಕೊಳ್ಳಲು ಬಯಸಿದರೆ ಕನಿಷ್ಠ 15 ವರ್ಷ ತೃಪ್ತಿದಾಯಕ ಸೇವೆ ಸಲ್ಲಿಸಿರಬೇಕು ಅಥವಾ 50 ವರ್ಷ ವಯಸ್ಸನ್ನು ಪೂರ್ಣಗೊಳಿಸಿರಬೇಕು ಎನ್ನಲಾಗಿದೆ. ಆದುದರಿಂದ ನೀವು ಸ್ವಯಂನಿವೃತ್ತಿ ಪಡೆಯಲು ಅನುಮತಿ ಕೋರಿ ಮೂರು ತಿಂಗಳ ಮುಂಚಿತವಾಗಿ ಆಡಳಿತ ಮಂಡಳಿಗೆ ಅರ್ಜಿ ಸಲ್ಲಿಸಬೇಕು. ಹೆಚ್ಚಿನ ವಿವರಗಳಿಗೆ ಇದೇ ಲೇಖಕರು ಬರೆದಿರುವ ‘ಕರ್ನಾಟಕ ಸಹಕಾರ ಸಂಘಗಳ ಅಧಿನಿಯಮ 1959 ಮತ್ತು ನಿಯಮಗಳು 1961’ ಪುಸ್ತಕವನ್ನು ನೋಡಬಹುದಾಗಿದೆ.

***

16-01-2018.

ಸರ್ಕಾರಿ ಸೇವೆಯಲ್ಲಿ ಸುಮಾರು 30 ವರ್ಷ ಸೇವೆ ಸಲ್ಲಿಸಿರುವ ನನಗೆ 54 ವರ್ಷ. ಇತ್ತೀಚೆಗೆ ಸರ್ಕಾರವು ಎಲ್ಲಾ ನೌಕರರು ಕಂಪ್ಯೂಟರ್ ಸಾಕ್ಷರತಾ ಪರೀಕ್ಷೆಯಲ್ಲಿ ತೇರ್ಗಡೆಯಾಗುವುದು ಕಡ್ಡಾಯವೆಂದು ಆದೇಶಿಸಿದೆ. ಆದ್ದರಿಂದ 50 ವರ್ಷಕ್ಕಿಂತ ಹೆಚ್ಚಾಗಿರುವುದರಿಂದ ಹಾಗೂ ನಾನು 1989ರಲ್ಲಿ ಸರ್ಕಾರಿ ಸೇವೆಗೆ ಸೇರಿರುವುದರಿಂದ ಈ ಪರೀಕ್ಷೆ ಕಡ್ಡಾಯವೆ? ಈ ಪರೀಕ್ಷೆಯಲ್ಲಿ ಎಷ್ಟು ಅಂಕ ಪಡೆಯಬೇಕು?

| ವಿಠಲ್ ರಾವ್ ಶಿವಮೊಗ್ಗ.

ಕರ್ನಾಟಕ ಸರ್ಕಾರಿ ಸೇವಾ (ಕಂಪ್ಯೂಟರ್ ಸಾಕ್ಷರತಾ ಪರೀಕ್ಷೆ) ನಿಯಮಗಳು 2012ರ ನಿಯಮ 3(3)ರ ಮೇರೆಗೆ ದಿನಾಂಕ 22.3.2012ರಲ್ಲಿ 50 ವರ್ಷ ದಾಟಿದ ಸರ್ಕಾರಿ ನೌಕರರಿಗೆ ವಿನಾಯಿತಿ ನೀಡಲಾಗಿದೆ. ಆದರೆ ನಿಮಗೆ ಆಗ ಈ ವಯಸ್ಸು ದಾಟದೆ ಇರುವುದರಿಂದ ಪ್ರಸ್ತುತ ಕಡ್ಡಾಯವಾಗಿರುತ್ತದೆ. ನೀವು ಈ ಪರೀಕ್ಷೆಯಲ್ಲಿ ನಿಯಮ 3(1)ರ ಮೇರೆಗೆ ಶೇ. 35 ಅಂಕಗಳನ್ನು ಪಡೆದು ತೇರ್ಗಡೆಯಾದರೆ ಸಾಕು. ಅಂದರೆ 80 ಅಂಕಗಳಿಗೆ 28 ಅಂಕಗಳನ್ನು ಗಳಿಸಿದರೆ ಸಾಕು. ಹೆಚ್ಚಿನ ವಿವರಗಳಿಗೆ ಲ. ರಾಘವೇಂದ್ರ ಅವರ ‘ಕಂಪ್ಯೂಟರ್ ಸಾಕ್ಷರತಾ ಪರೀಕ್ಷಾ ಕೈಪಿಡಿ’ ಪುಸ್ತಕವನ್ನು ನೋಡಬಹುದಾಗಿದೆ.

***

15-01-2018.

ನಾನು ಸ್ಥಳೀಯ ಸಂಸ್ಥೆಯಲ್ಲಿ ‘ಸಿ’ ಗುಂಪಿನ ಹುದ್ದೆಯಲ್ಲಿ ಕಾರ್ಯನಿರ್ವಹಿಸಿದ್ದೇನೆ. 2013ರಲ್ಲಿ ಕೌಟುಂಬಿಕ ಕಾರಣಕ್ಕಾಗಿ ಎರಡು ತಿಂಗಳು ಗೈರುಹಾಜರಾಗಿ ಸೇವೆಗೆ ಹೋಗಲು ಅನುಮತಿ ಕೋರಿದಾಗ ನಮ್ಮ ಮೇಲಧಿಕಾರಿಗಳು ಸಕ್ಷಮ ಅಧಿಕಾರಿಯಿಂದ ಅನುಮತಿ ದೊರೆಯದ ಹೊರತು ಕರ್ತವ್ಯಕ್ಕೆ ವರದಿ ಮಾಡಿಸಿಕೊಳ್ಳುವುದಿಲ್ಲ ಎಂದರು. ಸುಮಾರು ಎಂಟು ತಿಂಗಳ ನಂತರ ಕರ್ತವ್ಯಕ್ಕೆ ಸೇರಿಸಿಕೊಂಡು ಎರಡು ವರ್ಷಗಳ ನಂತರ ಶಿಸ್ತುಪ್ರಾಧಿಕಾರಿ ಇಲಾಖಾ ವಿಚಾರಣೆ ಕುರಿತು ನೋಟಿಸ್ ಜಾರಿ ಮಾಡಿ ಲಿಖಿತವಾಗಿ ಸಲ್ಲಿಸಿದ ದಾಖಲೆಗಳನ್ನು ಪರಿಗಣಿಸದೆ ಸೇವೆಯಿಂದ ವಜಾಗೊಳಿಸಿದ್ದಾರೆ. ಇದು ಸರಿಯಾದ ಕ್ರಮವೆ?

| ಪರಶುರಾಮ್ ಸಿಕ್ಕಲಾಗರ್ ಕೊಪ್ಪಳ.

ಕರ್ನಾಟಕ ಸರ್ಕಾರಿ ಸೇವಾ ನಿಯಮಾವಳಿಯ ನಿಯಮ 108ರ ಮೇರೆಗೆ 120 ದಿನಗಳಿಗಿಂತ ಹೆಚ್ಚು ಕಾಲ ಅನಧಿಕೃತವಾಗಿ ಗೈರು ಹಾಜರಾದರೆ ಸೇವೆಯಿಂದ ವಜಾಗೊಳಿಸಬಹುದು, ಕಡ್ಡಾಯ ನಿವೃತ್ತಿ ಮಾಡಬಹುದು. ಈ ರೀತಿ ದಂಡನೆ ವಿಧಿಸುವ ಮೊದಲು ಸರ್ಕಾರಿ ಸೇವಾ ನಿಯಮಾವಳಿ ರೀತ್ಯ ಇಲಾಖಾ ವಿಚಾರಣೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳಬಹುದು. ನಿಮ್ಮ ಮೇಲಧಿಕಾರಿಯ ಮಾತು ಹಾಗೂ ಈ ರೀತಿಯ ವಜಾ ಸರಿಯಲ್ಲ. ನೀವು ಮೇಲ್ಮನವಿ ಪ್ರಾಧಿಕಾರಕ್ಕೆ ಅರ್ಜಿ ಸಲ್ಲಿಸಬಹುದು ಅಥವಾ ಕೋರ್ಟ್ ಮೊರೆ ಹೋಗಬಹುದು.

***

14-01-2018.

ನಾನು ಪ್ರಾಥಮಿಕ ಶಾಲಾ ಶಿಕ್ಷಕಿಯಾಗಿ 1981ರಿಂದ ಕರ್ತವ್ಯ ನಿರ್ವಹಿಸುತ್ತಿದ್ದು, 2006ರಲ್ಲಿ ಹಿರಿಯ ಪ್ರಾಥಮಿಕ ಶಾಲೆಗೆ ಪದೋನ್ನತಿ ಪಡೆದಿದ್ದೇನೆ. ನನಗೆ ಒಂದು ಹೆಚ್ಚುವರಿ ವೇತನ ಬಡ್ತಿ ಲಭ್ಯವಾಗಿದ್ದು, ಅದೇ ವೇತನ ಶ್ರೇಣಿಯಲ್ಲಿರುವುದರಿಂದ ನನಗೆ 2015 ಮತ್ತು 30 ವರ್ಷಗಳ ಹೆಚ್ಚುವರಿ ವೇತನ ಬಡ್ತಿ ಲಭ್ಯವಾಗುವುದೆ?

| ಪ್ರೇಮಾ ಗೋ. ಭಟ್ಟ, ಅಳವಳ್ಳಿ, ಕುಮಟಾ.

ದಿನಾಂಕ 9-5-2002ರ ಸರ್ಕಾರಿ ಆದೇಶ ಸಂಖ್ಯೆ: ಎಫ್ಡಿ 13 ಎಸ್ಆರ್ಪಿ 2002 ರಂತೆ ಸೇವೆಯಲ್ಲಿ ಕನಿಷ್ಠ ಒಂದು ಪದೋನ್ನತಿ ಪಡೆದ ಸರ್ಕಾರಿ ನೌಕರರಿಗೆ ಇಪ್ಪತ್ತು ವರ್ಷಗಳ ಸೇವಾವಧಿಗೆ ಹೆಚ್ಚುವರಿ ವೇತನಬಡ್ತಿ ಲಭ್ಯವಾಗುವುದಿಲ್ಲ. ಅದೇ ರೀತಿಯಾಗಿ ದಿನಾಂಕ 14-6-2012ರ ಸರ್ಕಾರಿ ಆದೇಶ ಸಂಖ್ಯೆ: ಎಫ್ಡಿ 12 ಎಸ್ಆರ್ಎಸ್2012ರ ಮೇರೆಗೆ ಈ ಹೆಚ್ಚುವರಿ ವೇತನ ಬಡ್ತಿ ಲಭ್ಯವಾಗುವುದಿಲ್ಲ. ಹೆಚ್ಚಿನ ವಿವರಗಳಿಗೆ ಇದೇ ಲೇಖಕರ ಕರ್ನಾಟಕ ಸರ್ಕಾರಿ ಸೇವಾ ನಿಯಮಗಳು ಪುಸ್ತಕವನ್ನು ನೋಡಿ.

***

13.01.2018.

ನಮ್ಮ ಶಾಲೆಯಲ್ಲಿ ಜನವರಿ 2018ಕ್ಕೆ ಮುಖ್ಯೋಪಾಧ್ಯಾಯರೊಬ್ಬರು ನಿವೃತ್ತರಾಗುತ್ತಾರೆ. ನಂತರ ಶಾಲೆಯ ಮುಖ್ಯೋಪಾಧ್ಯಾಯರ ಪ್ರಭಾರೆಯನ್ನು ಆ ಶಾಲೆಯಲ್ಲಿ ಹೆಚ್ಚು ಸೇವೆ ಸಲ್ಲಿಸಿದವರು ಅಥವಾ ಜಿಲ್ಲಾ ಸೇವಾ ಹಿರಿತನದಲ್ಲಿ ಹಿರಿಯ ಶಿಕ್ಷಕರು ವಹಿಸಿಕೊಳ್ಳಬೇಕು. ಪರಿಹಾರ ಸೂಚಿಸಿ.

| ಕೆ.ಜೆ. ರಾಜೇಶ್ ಧಾರವಾಡ.

ದಿನಾಂಕ 6-3-2017ರ ಸರ್ಕಾರದ ಸುತ್ತೋಲೆ ಸಂಖ್ಯೆ ಇಡಿ124ಎಲ್ಬಿಪಿ2016ರಲ್ಲಿ ಈ ಹಿಂದೆ ಶಾಲೆಯ ಹಿರಿಯ ಶಿಕ್ಷಕರು ಪ್ರಭಾರ ವಹಿಸಿಕೊಳ್ಳುವ ಬಗ್ಗೆ ಹೊರಡಿಸಿದ್ದ ದಿನಾಂಕ 25-5-2016ರ ಅಥವಾ ಸಮಸಂಖ್ಯೆಯ ಸುತ್ತೋಲೆಯನ್ನು ಹಿಂಪಡೆಯಲಾಗಿದೆ. ಆದುದರಿಂದ ಪ್ರಸ್ತುತ ಕರ್ನಾಟಕ ಸರ್ಕಾರಿ ಸೇವಾ ನಿಯಮಾವಳಿಯ ನಿಯಮ 32ರ ಮೇರೆಗೆ ಜಿಲ್ಲೆಯ ಜ್ಯೇಷ್ಠತಾ ಘಟಕದಲ್ಲಿ ಯಾವುದೇ ವಿಷಯದ ಶಿಕ್ಷಕರು ಶಾಲೆಯಲ್ಲಿ ಕೆಲಸ ಮಾಡುತ್ತಿದ್ದರೆ ಅಂತಹ ಶಿಕ್ಷಕರು ಮುಖ್ಯೋಪಾಧ್ಯಾಯರ ಪ್ರಭಾರವನ್ನು ವಹಿಸಿಕೊಳ್ಳಬಹುದು. ಆದುದರಿಂದ ನಿಮ್ಮ ಶಾಲೆಯಲ್ಲಿ ಹಿರಿಯ ಶಿಕ್ಷಕರು ಮಾತ್ರ ಪ್ರಭಾರ ವಹಿಸಿಕೊಳ್ಳಲು ಶೈಕ್ಷಣಿಕ ಜಿಲ್ಲಾ ಉಪನಿರ್ದೇಶಕರು ಆದೇಶ ನೀಡಬಹುದು. ಹೆಚ್ಚಿನ ವಿವರಗಳಿಗೆ ಇದೇ ಲೇಖಕರ ಕರ್ನಾಟಕ ಸರ್ಕಾರಿ ಸೇವಾ ನಿಯಮಗಳು ಪುಸ್ತಕ ನೋಡಿ.

***

12-01-2018.
ನಾನು 36ನೇ ವಯಸ್ಸಿಗೆ ಕೆಲಸಕ್ಕೆ ಸೇರಿ, 24 ವರ್ಷ ಸೇವೆ ಸಲ್ಲಿಸಿ, 2016ರ ಜುಲೈ 31ರಂದು ವಯೋನಿವೃತ್ತನಾಗಿದ್ದೇನೆ. ಸರ್ಕಾರಿ ಸೇವಾ ನಿಯಮಾವಳಿ ರೀತ್ಯ 30 ವರ್ಷ ಕಳೆದ ನಂತರ ಕೆಲಸಕ್ಕೆ ಸೇರಿದ್ದರೆ, ಪಿಂಚಣಿಗಾಗಿ ನಾಲ್ಕು ವರ್ಷಗಳ ಅರ್ಹತಾದಾಯಕ ಸೇವೆಯನ್ನು ವಿಶೇಷ ಸೇರ್ಪಡೆಯಾಗಿ ಪರಿಗಣಿಸಬಹುದೆ? ಹಾಗಿದ್ದಲ್ಲಿ ಯಾರಿಗೆ ಮನವಿ ಸಲ್ಲಿಸಬೇಕು?
| ಡಿ. ಶಾಂತ ನೆಲಮಂಗಲ
ಕರ್ನಾಟಕ ಸರ್ಕಾರಿ ಸೇವಾ ನಿಯಮಾವಳಿಯ ನಿಯಮ 247ಎ ರೀತ್ಯ 30 ವರ್ಷ ತುಂಬಿದ ತರುವಾಯ ನೇರ ನೇಮಕಾತಿ ಆಗುವ ವ್ಯಕ್ತಿಗಳು ನಿವೃತ್ತಿ ಹೊಂದುವ ಸಂದರ್ಭದಲ್ಲಿ ಅವರ ಅರ್ಹತಾದಾಯಕ ಸೇವೆಗೆ ಎರಡು ವರ್ಷಗಳಿಗೆ ಒಳಪಟ್ಟು ಸೇರಿಸಬಹುದಾಗಿದೆ. ಈ ಸೌಲಭ್ಯವು ದಿನಾಂಕ 15-2-2012ರ ಸರ್ಕಾರದ ತಿದ್ದುಪಡಿ ಅಧಿಸೂಚನೆ ಸಂಖ್ಯೆ ಎಫ್ಡಿ2004ಎಸ್ಆರ್ಎ2010ರ ಮೇರೆಗೆ ದಿನಾಂಕ 15-2-2012ರ ನಂತರ ನಿವೃತ್ತರಾಗುವ ನೌಕರರಿಗೆ ನೀಡಲಾಗುತ್ತದೆ.

***

11.01.2018.

ನಾನು ತಂದೆಯ ಮರಣದ ಅನುಕಂಪದ ಆಧಾರದ ಮೇಲೆ 1985ರಲ್ಲಿ ಕಾಯಂ ಸರ್ಕಾರಿ ನೌಕರಳಾಗಿ ಜವಾನ ಹುದ್ದೆ ಪಡೆದಿದ್ದೇನೆ. ಆದರೆ ನಾನು ಆ ಸಮಯದಲ್ಲಿ ದೇವದಾಸಿ ಆಗಿದ್ದು ಮತ್ತು ನನಗೆ ಬೇರೆ ಬೇರೆ ಪುರುಷರಿಂದ ಜನಿಸಿದ ಎರಡು ಗಂಡು ಮಕ್ಕಳೂ ಇದ್ದರು. ಆದರೆ ನನ್ನ ಅಣ್ಣಂದಿರು ನನ್ನನ್ನು ‘ಕುಮಾರಿ’ ಎಂದು ಜವಾನ ಹುದ್ದೆಗೆ ಸೇರಿಸಿದ್ದರು. ಈ ರೀತಿಯಾಗಿ ಹುದ್ದೆ ಸೇರಿದ್ದು ತಪ್ಪು ಎಂದು ಕೆಲವರು ಹೇಳುತ್ತಿದ್ದಾರೆ. ಈ ರೀತಿ ಹುದ್ದೆ ಪಡೆದಿದ್ದು ತಪ್ಪೇ? ಇದಕ್ಕೆ ನಾನು ಏನು ಮಾಡಬೇಕು?

| ಸುಶೀಲಾ ರಾಯಚೂರು.

ನೀವು ದೇವದಾಸಿ ಪದ್ಧತಿಯಲ್ಲಿ ಬೇರೆ ಬೇರೆ ಪುರುಷರಿಂದ ಎರಡು ಗಂಡು ಮಕ್ಕಳನ್ನು ಪಡೆದಿರುತ್ತೀರಿ. ನೀವು ಈಗಾಗಲೇ ಅನುಕಂಪದ ಮೇಲೆ ನೇಮಕಾತಿ ಹೊಂದಿರುವುದು ಸ್ವಾಭಾವಿಕ ನ್ಯಾಯದಡಿಯಲ್ಲಿ ಸರಿಯಾಗಿದೆ. ಸುಮಾರು 32 ವರ್ಷಗಳ ಸೇವೆ ಗತಿಸಿರುವುದರಿಂದ ಈಗಾಗಲೇ ಇದು ಸ್ವಾಭಾವಿಕ ನ್ಯಾಯದಡಿಯಲ್ಲಿ ಕ್ರಮಬದ್ಧವಾಗಿದೆ, ಹಾಗೂ ನಿಯಮಾವಳಿ ರೀತ್ಯ ಸರಿಯಾಗಿರುತ್ತದೆ. ಹೆಚ್ಚಿನ ವಿವರಗಳಿಗೆ ಲ. ರಾಘವೇಂದ್ರ ಅವರ ಸರ್ಕಾರಿ ಸೇವಾ ಕಾನೂನು ಕೈಪಿಡಿ ಪುಸ್ತಕವನ್ನು ನೋಡಿ.

***

10.01.2018.

ನಾನು ಅಂಗವಿಕಲ ಮೀಸಲಾತಿ ಅಡಿಯಲ್ಲಿ ಪ್ರೌಢಶಾಲಾ ಸಹಶಿಕ್ಷಕಿಯಾಗಿ 1997ರಲ್ಲಿ ಆಯ್ಕೆಯಾಗಿ ಕೆಲಸ ಮಾಡುತ್ತಿದ್ದೇನೆ. ಯಾವುದೋ ಮೂಗರ್ಜಿಯ ಹಿನ್ನೆಲೆಯಲ್ಲಿ ಹೊಸದಾಗಿ ಅಂಗವಿಕಲ ಪ್ರಮಾಣಪತ್ರ ನೀಡಲು ವೈದ್ಯಕೀಯ ಮಂಡಳಿಗೆ ಹಾಜರಾಗಲು ಇಲಾಖೆಯವರು ಹೇಳುತ್ತಿದ್ದಾರೆ. ಇದು ನಿಯಮಾವಳಿ ರೀತ್ಯ ಸರಿಯೆ?

| ಬಿ. ಪದ್ಮಾವತಿ ಬೆಂಗಳೂರು.

13-8-1995ರ ಸರ್ಕಾರದ ಅಧಿಕೃತ ಜ್ಞಾಪನ ಸಂಖ್ಯೆ ಡಿಪಿಎಆರ್ಸೇಸ್ಥಅ94ರಲ್ಲಿ ನೇಮಕಾತಿ ಪ್ರಾಧಿಕಾರಿಯವರು ಅಂಗವಿಕಲ ಹುದ್ದೆಗಳನ್ನು ತುಂಬಲು ಅರ್ಜಿಗಳನ್ನು ಆಹ್ವಾನಿಸಿದ್ದಾಗ ಅಧಿಕೃತ ನಮೂನೆಯಲ್ಲಿ, ಅಂಗವಿಕಲತೆ ಬಗ್ಗೆ ಸಂಬಂಧಪಟ್ಟ ಜಿಲ್ಲಾ/ತಾಲ್ಲೂಕು ಮಟ್ಟದ ವೈದ್ಯಾಧಿಕಾರಿ ನೀಡಿದ ಪ್ರಮಾಣಪತ್ರವನ್ನು ಅರ್ಜಿಯೊಡನೆ ಸಲ್ಲಿಸಬೇಕೆಂದು ತಿಳಿಸಲಾಗಿದೆ. ಈ ರೀತಿ ಸಲ್ಲಿಸಿ ಹುದ್ದೆಗೆ ಆಯ್ಕೆಯಾದ ಅಭ್ಯರ್ಥಿಗಳು ಮೂಲ ವೈದ್ಯಕೀಯ ಪ್ರಮಾಣಪತ್ರಗಳನ್ನು ನೇಮಕಾತಿ ಪ್ರಾಧಿಕಾರಕ್ಕೆ ನೀಡಬೇಕು. ಒಮ್ಮೆ ವೈದ್ಯಕೀಯ ಪ್ರಮಾಣಪತ್ರ ನೀಡಿದಲ್ಲಿ ಅದು ಸದಾ ಚಾಲ್ತಿಯಲ್ಲಿರುತ್ತದೆ. ಸರ್ಕಾರಿ ನೌಕರರ ಮೇಲೆ ಬರುವ ಅನಾಮಧೇಯ ದೂರು ಅರ್ಜಿಗಳನ್ನು ಪರಿಗಣಿಸಿ ಕ್ರಮ ಕೈಗೊಳ್ಳಬಾರದೆಂದು ಸವೋಚ್ಚ ನ್ಯಾಯಾಲಯ ಸೂಚಿಸಿದೆ.

***

09.01.2018.

ನಾನು ಸೇವೆಗೆ ಸೇರುವ ಮೊದಲೇ ಒಂದು ಹೆಣ್ಣುಮಗುವನ್ನು ಪಡೆದಿದ್ದು, 2007ರಲ್ಲಿ ಸಹಶಿಕ್ಷಕಿಯಾಗಿ ಸೇವೆಗೆ ಸೇರಿದ್ದೇನೆ. 2010ರಲ್ಲಿ ಮತ್ತೊಂದು ಮಗುವಿಗೆ ಜನ್ಮ ನೀಡಿದ್ದು, ಒಂದು ಬಾರಿ ಮಾತ್ರ ಹೆರಿಗೆ ರಜೆ ಪಡೆದಿರುತ್ತೇನೆ. ಮೂರನೇ ಮಗುವಿಗೆ ಈ ಹೆರಿಗೆ ರಜೆ ಪಡೆಯಲು ಅರ್ಹಳೆ? ಪ್ರಸೂತಿ ರಜೆಯನ್ನು ಬಿಟ್ಟು ಬೇರೆ ರಜೆ ಪಡೆಯಬಹುದೆ?

| ರಶ್ಮಿ ಹಿರಿಯೂರು, ಚಿತ್ರದುರ್ಗ.

ಕರ್ನಾಟಕ ಸರ್ಕಾರಿ ಸೇವಾ ನಿಯಮಾವಳಿಯ ನಿಯಮ 135ರ ರೀತ್ಯ ಎರಡು ಜೀವಂತ ಮಕ್ಕಳು ಇರುವವರೆಗೆ ಈ ಪ್ರಸೂತಿ ರಜೆ ಪಡೆಯಬಹುದು. ಈಗಾಗಲೇ ಸೇವೆಗೆ ಸೇರಿದ ನಂತರ ಒಂದು ಪ್ರಸೂತಿ ರಜೆ ಪಡೆದಿರುವುದರಿಂದ ಹಾಗೂ ಎರಡು ಜೀವಂತ ಮಕ್ಕಳು ಇರುವುದರಿಂದ, ಮೂರನೇ ಮಗುವಿಗೆ ಈ ಹೆರಿಗೆ ರಜೆ ಸೌಲಭ್ಯಕ್ಕೆ ನೀವು ಅರ್ಹರಾಗಿರುವುದಿಲ್ಲ. ಆದರೆ ನಿಮ್ಮ ಲೆಕ್ಕದಲ್ಲಿರುವ ಗಳಿಕೆ ರಜೆ ಅಥವಾ ಅಸಾಧಾರಣ ರಜೆ, ನಿಯಮ 117ರ ಮೇರೆಗೆ ಗಳಿಸದ ರಜೆಯನ್ನು ಪಡೆಯಬಹುದು.

***

08.01.2018.

ನನ್ನ ಪತ್ನಿ ಮಾನ್ಯತೆ ಪಡೆದ ಒಂದು ಸಹಕಾರಿ ಬ್ಯಾಂಕ್ನಲ್ಲಿ 12 ವರ್ಷ ಸೇವೆ ಸಲ್ಲಿಸಿ 2017ರ ನವೆಂಬರ್ ಹತ್ತರಂದು ಅನಾರೋಗ್ಯದಿಂದ ನಿಧನರಾದರು. ನಮಗೆ ಒಂದು ಗಂಡುಮಗು ಇದೆ. ಬಿ.ಕಾಂ. ಪದವೀಧರನಾಗಿರುವ 47 ವರ್ಷದ ನಾನು 3ಬಿ ಪ್ರವರ್ಗಕ್ಕೆ ಸೇರಿದವನು. ನನಗೆ ಅನುಕಂಪದ ಆಧಾರದ ಮೇಲೆ ಆ ಬ್ಯಾಂಕ್ನಲ್ಲಿ ಉದ್ಯೋಗ ಸಿಗುತ್ತದೆಯೆ? ಈ ಬಗ್ಗೆ ಬ್ಯಾಂಕ್ ಅಧಿಕಾರಿಗಳನ್ನು ವಿಚಾರಿಸಿದಾಗ, ನೀವು ವಯಸ್ಸು ದಾಟಿರುವುದರಿಂದ ಯಾವುದೇ ಉದ್ಯೋಗ ನೀಡಲು ಸಾಧ್ಯವಿಲ್ಲ’ ಎಂದಿದ್ದಾರೆ. ಈ ಬಗ್ಗೆ ತಿಳಿಸಿ.

| ವಿನಾಯಕ ಶಿರಸಿ, ಉತ್ತರ ಕನ್ನಡ.

1960 ಕರ್ನಾಟಕ ಸಹಕಾರ ಸಂಘಗಳ ನಿಯಮಾವಳಿಯ ನಿಯಮ 18(3)ರಡಿಯಲ್ಲಿ (ತಿದ್ದುಪಡಿ ಅಧಿಸೂಚನೆ ಸಂಖ್ಯೆ ಸಿಒ123ಸಿಎಲ್ಎಂ2016 ದಿನಾಂಕ 29-7-2017) ಸಹಕಾರ ಸಂಘದ / ಬ್ಯಾಂಕಿನಲ್ಲಿ ಮರಣ ಹೊಂದಿದ ಪುರುಷ / ಸ್ತ್ರೀ ಉದ್ಯೋಗಿಗೂ ವಿಧುರ / ವಿಧವೆಯಾದರೆ ಈ ಹುದ್ದೆಯ ನೇಮಕಾತಿಗೆ ಗರಿಷ್ಠ ವಯಸ್ಸು ಮಿತಿಯನ್ನು 10 ವರ್ಷಗಳಷ್ಟು ಸಡಿಲಿಸಲಾಗಿದೆ. ಈ ನಿಯಮದ ಅನುಸಾರ ಸಹಕಾರ ಬ್ಯಾಂಕುಗಳಲ್ಲಿ ನಿಧನ ಹೊಂದಿದರೆ ಅನುಕಂಪದ ಆಧಾರದ ಮೇಲೆ ವಿಧುರನಿಗೆ ನೇಮಕಾತಿಗೆ ಅವಕಾಶ ನೀಡಲು ತಿಳಿಸಲಾಗಿದೆ. 3ಬಿ ಪ್ರವರ್ಗಕ್ಕೆ ಸೇರಿರುವ ನಿಮಗೆ 48 ವರ್ಷದವರೆಗೆ ನೇಮಕಕ್ಕೆ ಅವಕಾಶವಿದೆ.

***

07.01.2018.

ನನ್ನ ತಂದೆಯವರು ಕೆಎಸ್ಆರ್ಟಿಸಿಯಲ್ಲಿ ಕಂಡಕ್ಟರ್ ಆಗಿದ್ದರು. ಅನಾರೋಗ್ಯದಿಂದ ಅವರ ನಿಧನದ ನಂತರ ಅನುಕಂಪದ ಆಧಾರದ ಮೇಲೆ ತಾಯಿಗೆ ಉದ್ಯೋಗ ದೊರಕಿತ್ತು. ಅವರೂ ಅನಾರೋಗ್ಯದಿಂದ ಕರ್ತವ್ಯದಲ್ಲಿರುವಾಗಲೇ ನಿಧನ ಹೊಂದಿದ್ದಾರೆ. ನಾನು ಅನುಕಂಪದ ಆಧಾರದ ಮೇಲೆ ನೇಮಕಾತಿಗೆ ಅರ್ಜಿ ಸಲ್ಲಿಸಿದಾಗ, ಈಗಾಗಲೇ ನಿಮ್ಮ ತಾಯಿಗೆ ಅನುಕಂಪದ ಮೇಲೆ ನೇಮಕಾತಿ ನೀಡಿರುವುದರಿಂದ ಮತ್ತೆ ನೀಡಲು ಸಾಧ್ಯವಿಲ್ಲ ಎನ್ನುತ್ತಿದ್ದಾರೆ. ಈ ಬಗ್ಗೆ ಮಾಹಿತಿ ನೀಡಿ.

| ಪಿ. ಮನು, ಮೈಸೂರು.

1996ರ ಕರ್ನಾಟಕ ಸರ್ಕಾರಿ ಸೇವಾ (ಅನುಕಂಪದ ಆಧಾರದ ಮೇಲೆ ನೇಮಕ) ನಿಯಮಾವಳಿಯ ನಿಯಮ 3ರ ಮೇರೆಗೆ ನೌಕರರ ಅವಲಂಬಿತರಾದ ಪತಿ/ಪತ್ನಿ/ಮಗ ಮತ್ತು ಅವಿವಾಹಿತ ಮಗಳು ಇದ್ದರೆ ಅನುಕಂಪದ ಮೇರೆಗೆ ಉದ್ಯೋಗ ನೀಡಬಹುದೆಂದು ಸೂಚಿಸುತ್ತದೆ. ನೀವು ಸಂಪೂರ್ಣವಾಗಿ ತಾಯಿಯನ್ನೇ ಅವಲಂಬಿಸುತ್ತಿದ್ದುದರಿಂದ ನಿಮಗೆ ಅನುಕಂಪದ ಮೇರೆಗೆ ಮತ್ತೊಮ್ಮೆ ಉದ್ಯೋಗಾವಕಾಶ ಕೊಡಬೇಕಾದುದು ನ್ಯಾಯ. ನೀವು ಮತ್ತೊಮ್ಮೆ ಕೆಎಸ್ಆರ್ಟಿಸಿ ನೇಮಕಾತಿ ಪ್ರಾಧಿಕಾರಕ್ಕೆ ಮನವಿ ಮಾಡಿ ಉದ್ಯೋಗ ಪಡೆಯಬಹುದು ಅಥವಾ ಕಾರ್ವಿುಕ ನ್ಯಾಯಾಲಯಕ್ಕೆ ಹೋಗಬಹುದು.

*** ಸರ್ಕಾರಿ ಕಾರ್ನರ್:

06.01.2018.

ನಾನು 2008ರಲ್ಲಿ ಬೆಂಗಳೂರು ವಿಭಾಗದಿಂದ ಪ್ರೌಢಶಾಲಾ ಶಿಕ್ಷಕಿಯಾಗಿ ನೇಮಕಾತಿ ಹೊಂದಿದೆ. 2014ರಲ್ಲಿ ಕೋರಿಕೆ ಮೇರೆಗೆ ತುಮಕೂರು ಜಿಲ್ಲೆಯಿಂದ ಶಿವಮೊಗ್ಗ ಜಿಲ್ಲೆಗೆ ವರ್ಗಾವಣೆಯಾಗಿದ್ದು, ಜ್ಯೇಷ್ಠತಾ ಪಟ್ಟಿಯಲ್ಲಿ ನೇಮಕಾತಿ ಆದೇಶದ ದಿನಾಂಕದ ಬದಲು ವರ್ಗಾವಣೆಯಾದ ದಿನಾಂಕವನ್ನು ಸೇರಿಸಲಾಗಿದೆ. ಒಂದೇ ವಿಭಾಗದಲ್ಲಿನ ಒಂದು ಜಿಲ್ಲೆಯಿಂದ ಇನ್ನೊಂದು ಜಿಲ್ಲೆಗೆ ವರ್ಗಾವಣೆಯಾಗಿದ್ದರೆ ಸೇವಾಜ್ಯೇಷ್ಠತೆ ಬೇರೆಬೇರೆಯಾಗುತ್ತದೆಯೆ?

| ರತ್ನಾ ಪ್ರಭಾಕರ ಶಿವಮೊಗ್ಗ.

ಕರ್ನಾಟಕ ರಾಜ್ಯ ಸಿವಿಲ್ ಸೇವೆಗಳ (ಶಿಕ್ಷಕರ ವರ್ಗಾವಣೆ ನಿಯಂತ್ರಣ) ನಿಯಮಗಳು 2007ರ ನಿಯಮ 8(4)ರಂತೆ; ಸ್ವಂತ ಕೋರಿಕೆ ಮೇರೆಗೆ ಒಂದು ಜ್ಯೇಷ್ಠತಾ ಘಟಕದಿಂದ ಮತ್ತೊಂದು ಘಟಕಕ್ಕೆ ವರ್ಗಾವಣೆಯಾದಲ್ಲಿ, ಅಂತಹವರ ಜ್ಯೇಷ್ಠತೆಯನ್ನು ಕರ್ನಾಟಕ ಸರ್ಕಾರಿ ಸೇವಾ (ಜ್ಯೇಷ್ಠತೆ) ನಿಯಮಗಳು 1957ರ ನಿಯಮ 6ರ ಪರಂತುಕದಡಿಯಲ್ಲಿ ವರ್ಗಾವಣೆಯ ದಿನಾಂಕದಂದು ಆ ಸೇವೆಯ ವೃಂದ ಅಥವಾ ಶ್ರೇಣಿ ಹೊಂದಿದ ನೌಕರರ ಕೆಳಗೆ ಅಂಖವರನ್ನು ಇಡತಕ್ಕದ್ದೆಂದು ಸೂಚಿಸಿದೆ. ಆದ್ದರಿಂದ ಒಂದೇ ವಿಭಾಗವಾದರೂ ನೇಮಕಾತಿ ಪ್ರಾಧಿಕಾರ ಬೇರೆ ಬೇರೆಯಾದ್ದರಿಂದ ಜ್ಯೇಷ್ಠತೆ ಲಭ್ಯವಾಗದು.

***

05.01.2018.

ನಾನು ಸರ್ಕಾರಿ ನೌಕರ. ಸವೋಚ್ಚ ನ್ಯಾಯಾಲಯವು ಬಿ.ಕೆ.ಪವಿತ್ರ ಪ್ರಕರಣದ ಹಿನ್ನೆಲೆಯಲ್ಲಿ ಇತ್ತೀಚೆಗೆ ಹೊರಡಿಸಿದ ಸುತ್ತೋಲೆಯಂತೆ ನಮ್ಮ ಇಲಾಖೆಯಲ್ಲಿ ಜ್ಯೇಷ್ಠತಾ ಪಟ್ಟಿಯನ್ನು ತಯಾರಿಸಬೇಕಾಗಿತ್ತು. ಆದರೆ ಈ ರೀತಿ ಮಾಡದೆ ಜ್ಯೇಷ್ಠತಾ ಪಟ್ಟಿಯಲ್ಲಿ ಅನೇಕ ಲೋಪದೋಷಗಳು ಸಂಭವಿಸಿದ್ದು, ಈ ಬಗ್ಗೆ ಇಲಾಖಾ ಮುಖ್ಯಸ್ಥರಿಗೆ ಮನವಿ ಮತ್ತು ಆಕ್ಷೇಪಣೆ ಸಲ್ಲಿಸಿದ್ದರೂ ಪ್ರಯೋಜನವಾಗುತ್ತಿಲ್ಲ. ಈ ದೋಷಪೂರಿತ ಜ್ಯೇಷ್ಠತಾ ಪಟ್ಟಿಯ ಆಧಾರದ ಮೇಲೆ ಕಿರಿಯವರಿಗೆ ಪದೋನ್ನತಿ ನೀಡಿದರೆ ನಾವು ಯಾವ ಕ್ರಮ ಕೈಗೊಳ್ಳಬೇಕು?

| ಎನ್. ರಮೇಶ್, ಬೆಂಗಳೂರು.

ಕರ್ನಾಟಕ ಸರ್ಕಾರಿ ಸೇವಾ (ಜ್ಯೇಷ್ಠತಾ) ನಿಯಮಾವಳಿಯ ಮೇರೆಗೆ ಹಾಗೂ ಸರ್ಕಾರವು ಬಿ.ಕೆ. ಪವಿತ್ರ ಪ್ರಕರಣದಲ್ಲಿ ಹೊರಡಿಸಿದ ಆದೇಶದ ಮೇರೆಗೆ ಆಯಾ ಇಲಾಖೆಯ ನೇಮಕಾತಿ ಪ್ರಾಧಿಕಾರಗಳು ಜ್ಯೇಷ್ಠತಾ ಪಟ್ಟಿಯನ್ನು ದಿನಾಂಕ 15-1-2002ರೊಳಗೆ ಸಿದ್ಧಪಡಿಸಿ ಸರ್ವೇಚ್ಚ ನ್ಯಾಯಾ ಲಯಕ್ಕೆ ನೀಡಬೇಕಾಗುತ್ತದೆ. ಈ ಹಿನ್ನೆಲೆಯಲ್ಲಿ ದೋಷಪೂರಿತ ಜ್ಯೇಷ್ಠತಾ ಪಟ್ಟಿಯಿದ್ದರೆ ಅಂತಹ ಪಟ್ಟಿಯು ಅಂತಿಮವಾದ ನಂತರ ನೀವು ಕರ್ನಾಟಕ ಆಡಳಿತ ನ್ಯಾಯಮಂಡಳಿಗೆ ಮೊರೆ ಹೋಗಬಹುದು. ಹೆಚ್ಚಿನ ವಿವರಗಳಿಗೆ ಇದೇ ಲೇಖಕರ ಕರ್ನಾಟಕ ಸರ್ಕಾರಿ ಸೇವಾ ಕಾನೂನು ಕೈಪಿಡಿ ಕೃತಿಯನ್ನು ನೋಡಬಹುದು.

***

04-01-2018.

52 ವರ್ಷದ ನಾನು ಆರೋಗ್ಯ ಇಲಾಖೆಯಲ್ಲಿ ಗ್ರೂಪ್ ಡಿ ನೌಕರ. 2018ರ ಮೇ ತಿಂಗಳಿನಲ್ಲಿ 25 ವರ್ಷಗಳ ಸೇವಾವಧಿ ಪೂರ್ಣವಾಗುತ್ತದೆ. ನಾನೀಗ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದು ಸ್ವಯಂನಿವೃತ್ತಿ ಹೊಂದಲು ನಿರ್ಧರಿಸಿದ್ದೇನೆ. ನಾನು ಸ್ವಯಂನಿವೃತ್ತಿ ಆದರೆ ಪಿಂಚಣಿಯಮೂಲವೇತನ ಎಷ್ಟಾಗುತ್ತದೆ? (ಈಗ ನನ್ನ ಮೂಲವೇತನ ರೂ. 16,800) ಎಷ್ಟು ಉಪದಾನ ಹಾಗೂ ಕಮ್ಯುಟೇಷನ್ ಲಭ್ಯವಾಗುತ್ತದೆ? ನನಗೆ ಹೆಚ್ಚುವರಿ ಐದು ವರ್ಷಗಳ ಸೇವಾಧಿಕ್ಯವನ್ನು ಪರಿಗಣಿಸುತ್ತಾರೆಯೇ? ದಯವಿಟ್ಟು ತಿಳಿಸಿ.

| ಎಸ್. ಲಕ್ಷ್ಮೀನಾರಾಯಣ ಕೊಳ್ಳೇಗಾಲ.

ಕರ್ನಾಟಕ ಸರ್ಕಾರ ಸೇವಾ ನಿಯಮಾವಳಿಯಂತೆ ನೀವು 50 ವರ್ಷಗಳ ನಂತರ ನಿವೃತ್ತರಾಗುವುದರಿಂದ ಐದು ವರ್ಷಗಳ ಸೇವಾಧಿಕ್ಯವನ್ನು ಅರ್ಹತಾದಾಯಕ ಸೇವೆಗೆ ಸೇರಿಸಲಾಗುವುದಿಲ್ಲ. ನಿಮ್ಮ ಈಗಿನ ಮೂಲ ವೇತನದ ಹಿನ್ನೆಲೆಯಲ್ಲಿ ಪಿಂಚಣಿಯು ರೂ. 6,363ಕ್ಕೆ ನಿಗದಿಯಾಗಲಿದ್ದು ನಿಮಗೆ 2,10,000 ರೂ. ಉಪದಾನ ಕಮ್ಯುಟೇಷನ್, 3,16,332 ರೂ. ಲಭ್ಯವಾಗುತ್ತದೆ.

***

03.01-2018

ನಾನು 2018ರ ಜುಲೈ 31ರಂದು ನಿವೃತ್ತಿ ಹೊಂದುತ್ತಿದ್ದೇನೆ. ಜುಲೈ ತಿಂಗಳಿನಲ್ಲಿ ನಿವೃತ್ತಿ ಹೊಂದುವ ಕಾರಣದಿಂದ ನನಗೆ ದೊರಕುವ ಸಾಂರ್ದಭಿಕ ರಜೆ, ಗಳಿಕೆ ರಜೆ, ಅರ್ಧವೇತನ ರಜೆಗಳು ಎಷ್ಟು ಎಂಬುದನ್ನು ತಿಳಿಸಬೇಕೆಂದು ವಿನಂತಿಸಿಕೊಳ್ಳುತ್ತೇನೆ.

| ಎ.ಬಿ. ಮೋಹನ್ಕುಮಾರ್ ಹಾಸನ.

ಕರ್ನಾಟಕ ಸರ್ಕಾರಿ ಸೇವಾ ನಿಯಮಾವಳಿಯ ಅನುಬಂಧ ಬಿ ಪ್ರಕಾರ 15 ದಿನಗಳ ಕಾಲ ಸಾಂರ್ದಭಿಕ ರಜೆ; ನಿಯಮ 112ರ ಪ್ರಕಾರ 15 ದಿನಗಳ ಕಾಲ ಗಳಿಕೆ ರಜೆ; ಎರಡು ದಿನಗಳ ನಿರ್ಬಂಧಿತ ರಜೆ ಹಾಗೂ ಹತ್ತು ದಿನಗಳ ಅರ್ಧವೇತನ ರಜೆಗಳು ನಿಮಗೆ ಲಭ್ಯವಾಗುತ್ತವೆ. ಹೆಚ್ಚಿನ ವಿವರಗಳಿಗೆ ಇದೇ ಲೇಖಕರು ರಚಿಸಿರುವ ಕರ್ನಾಟಕ ಸರ್ಕಾರಿ ಸೇವಾ ನಿಯಮ ಕೃತಿಯನ್ನು ನೋಡಬಹುದು.

***

02.01.2018.

ನಾನು ಪ್ರಾಥಮಿಕ ಶಾಲಾ ಶಿಕ್ಷಕನಾಗಿದ್ದು 2006ರಲ್ಲಿ ಇಲಾಖಾ ಅನುಮತಿ ಪಡೆದು, 273 ದಿನಗಳ ಕಾಲ ಬಿಎಡ್ ಶಿಕ್ಷಣವನ್ನು ಪಡೆದಿದ್ದೇನೆ. ನನ್ನ ಈ ಅವಧಿಯನ್ನು ಕರ್ತವ್ಯವಲ್ಲದ (ಈಜಿಛಿಠ ್ಞ್ಞ ಅವಧಿಯೆಂದು ಪರಿಗಣಿಸಿದ್ದು, ನನ್ನ ವಾರ್ಷಿಕ ವೇತನ ಬಡ್ತಿಯನ್ನು ಮುಂದೂಡಲಾಗಿದೆ. ಇದು ಸರಿಯೆ?

| ಕೆ.ಸಿ. ವಸಂತಕುಮಾರ ಶಿಕಾರಿಪುರ, ಶಿವಮೊಗ್ಗ.

ಕರ್ನಾಟಕ ಸರ್ಕಾರಿ ಸೇವಾ ನಿಯಮಾವಳಿಯ ನಿಯಮ 55ಎ ಪ್ರಕಾರ ಕರ್ತವ್ಯವಲ್ಲದ ಅವಧಿಯನ್ನು (ಛಜಿಛಿಠಟ್ಞ) ವಾರ್ಷಿಕ ವೇತನ ಬಡ್ತಿಗೆ ಪರಿಗಣಿಸಬಾರದೆಂದು ಸೂಚಿಸಲಾಗಿದೆ. ಆದ್ದರಿಂದ ನಿಮ್ಮ ವೇತನ ಬಡ್ತಿಯನ್ನು ನಿಯಮ 51ರ ಮೇರೆಗೆ ಮುಂದೂಡಲಾಗಿದೆ. ಹೆಚ್ಚಿನ ಮಾಹಿತಿಗಾಗಿ ಇದೇ ಲೇಖಕರು ರಚಿಸಿರುವ ‘ಕರ್ನಾಟಕ ಸರ್ಕಾರಿ ಸೇವಾ ನಿಯಮಗಳು’ ಪುಸ್ತಕವನ್ನು ಓದಿ.

***

01-01-2018.

ನಾನು 1988ರಿಂದ ದಿನಗೂಲಿ ನೌಕರಿಗೆ ಸೇರಿದ್ದೇನೆ. ನಮಗೆ ದಿನಗೂಲಿ ಕ್ಷೇಮಾಭಿವೃದ್ಧಿ ಅಡಿಯಲ್ಲಿ ವೇತನ ಭತ್ಯೆಗಳನ್ನು ನೀಡಲಾಗುತ್ತಿದೆ. ಗಿರಿಧಾಮದಲ್ಲಿ ಕೆಲಸ ಮಾಡುತ್ತಿರುವ ಎಲ್ಲ ವರ್ಗದ ನೌಕರರಿಗೂ ತಿಂಗಳಿಗೆ 300 ರೂ.ಗಳನ್ನು ಗಿರಿತಾಣಭತ್ಯೆ ನೀಡಲಾಗುತ್ತಿದೆ. ಆದರೆ ನಮಗೆ ಈ ಸೌಲಭ್ಯ ನೀಡುತ್ತಿಲ್ಲ. ಆದ್ದರಿಂದ ನಮಗೆ ಈ ಗಿರಿತಾಣ ಭತ್ಯೆ ಅನ್ವಯಿಸುತ್ತದೆಯೆ?

| ಎಸ್. ದೇವರಾಜ್ ಚಿಕ್ಕಬಳ್ಳಾಪುರ.

ದಿನಾಂಕ 14.6.2012ರ ಸರ್ಕಾರಿ ಆದೇಶ ಸಂಖ್ಯೆ ಎಫ್ಡಿ 12 ಎಸ್ಆರ್ಪಿ 2012 (4)ರ ಮೇರೆಗೆ ರಾಜ್ಯ ಸರ್ಕಾರಿ ನೌಕರರಿಗೆ 1.4.2012 ರಿಂದ ಜಾರಿಗೆ ಬರುವಂತೆ ಗಿರಿತಾಣ ಭತ್ಯೆಯನ್ನು ನೀಡಲಾಗುತ್ತಿದೆ. ಆದರೆ ದಿನಗೂಲಿ ಕ್ಷೇಮಾಭಿವೃದ್ಧಿ ಅಧಿನಿಯಮದಡಿಯಲ್ಲಿ ಸೇವೆ ಸಲ್ಲಿಸುತ್ತಿರುವ ನೀವು ಖಾಯಂ ನೌಕರರಾಗಿರದ ಕಾರಣದಿಂದ ನಿಮಗೆ ಕರ್ನಾಟಕ ಸರ್ಕಾರಿ ಸೇವಾ ನಿಯಮಾವಳಿ ಅನ್ವಯವಾಗುವುದಿಲ್ಲ. ಆದುದರಿಂದ ಈ ಗಿರಿತಾಣ ಭತ್ಯೆಯನ್ನು ನಿಮಗೆ ನೀಡಲಾಗುವುದಿಲ್ಲ .
***

೮೩ ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಮೈಸೂರು.

      ಮೈಸೂರು. ನ.22.(ಕರ್ನಾಟಕ ವಾರ್ತೆ):- ಕನ್ನಡ ಸಾಹಿತ್ಯ ಪರಿಷತ್ತು ವತಿಯಿಂದ ನವೆಂಬರ್ 24 ರಿಂದ 26ರ ವರೆಗೆ ಮೈಸೂರು ಮಹಾರಾಜ ಕಾಲೇಜು ಮೈದಾನದಲ್ಲಿ 83ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. 

    ನವೆಂಬರ್ 24 ರಂದು ಬೆಳಿಗ್ಗೆ 8.30ಕ್ಕೆ ಮಹಾರಾಜ ಕಾಲೇಜು ಮೈದಾನದಲ್ಲಿ ಧ್ವಜಾರೋಹಣ ಕಾರ್ಯಕ್ರಮವು ಜರುಗುವುದು. ಲೋಕೋಪಯೋಗಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಡಾ.ಹೆಚ್.ಸಿ.ಮಹದೇವಪ್ಪ ರಾಷ್ಟ್ರಧ್ವಜಾರೋಹಣ ಮಾಡುವರು. ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಡಾ. ಮನುಬಳಿಗಾರ್ ಪರಿಷತ್ತಿನ ಧ್ವಜಾರೋಹಣ ಹಾಗೂ ಮೈಸೂರು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರಾದ ಡಾ. ವೈ.ಡಿ.ರಾಜಣ್ಣ ನಾಡಧ್ವಜಾರೋಹಣ ನೆರವೇರಿಸುವರು.  

    ಸಮ್ಮೇಳನಾಧ್ಯಕ್ಷರ ಮೆರವಣಿಗೆಗೆ ಬೆಳಿಗ್ಗೆ 9 ಗಂಟೆಗೆ ಅರಮನೆ ಆವರಣದ ಕೋಟೆಆಂಜನೇಯ ಸ್ವಾಮಿ ಮುಂಭಾಗದಲ್ಲಿ ಮೈಸೂರು ಜಿಲ್ಲಾ ಪಂಚಾಯತ್ ಅಧ್ಯಕ್ಷರಾದ ನಯಿಮಾ ಸುಲ್ತಾನ್ ನಜೀರ್ ಅಹಮದ್ ಅವರು ಚಾಲನೆ ನೀಡುವರು. 

    ಮೈಸೂರು ಜಿಲ್ಲಾಧಿಕಾರಿಗಳಾದ ರಂದೀಪ್ ಡಿ., ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಪಿ.ಶಿವಶಂಖರ್, ಪೊಲೀಸ್ ಆಯುಕ್ತರಾದ ಸುಬಹ್ಮಣ್ಯೇಶ್ವರ ರಾವ್, ಪೊಲೀಸ್ ವರಿಷ್ಠಾಧಿಕಾರಿ ರವಿ.ಡಿ.ಚೆನ್ನಣ್ಣನವರ್, ಮೈಸೂರು ಮಹಾನಗರ ಪಾಲಿಕೆ ಆಯುಕ್ತರಾದ ಜಿ.ಜಗದೀಶ್ ಅವರು ಮೆರವಣಿಗೆಯಲ್ಲಿ ಮುಖ್ಯ ಅಥಿತಿಗಳಾಗಿ ಭಾಗವಹಿಸುವರು. 

    ಕಾರ್ಯಕ್ರಮದ ಅಥಿತಿಗಳಾಗಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಿ.ಧೃವಕುಮಾರ್, ವಸ್ತು ಪ್ರದರ್ಶನ ಪ್ರಾಧಿಕಾರದ ಅಧ್ಯಕ್ಷ ಸಿ.ಸಿದ್ದರಾಜು, ಅಗರು ಮತ್ತು ಬಣ್ಣ ಕಾರ್ಖಾನೆ ಅಧ್ಯಕ್ಷ ಹೆಚ್.ಎ.ವೆಂಕಟೇಶ್, ಮೃಗಾಲಯ ಪ್ರಾಧಿಕಾರದ ಅಧ್ಯಕ್ಷರಾದ ಮಲ್ಲಿಗೆ ವೀರೇಶ್, ಉಪ ಮಹಾಪೌರರಾದ ರತ್ನಲಕ್ಷ್ಮಣ್, ಜಿಲ್ಲಾ ಪಂಚಾಯತ್‍ನ ಉಪಾಧ್ಯಕ್ಷರಾದ ಜಿ.ನಟರಾಜ್, ಕಾವೇರಿ ಅಚ್ಚುಕಟ್ಟು ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಹೆಚ್.ಎಸ್.ನಂಜಪ್ಪ, ರಾಜ್ಯ ನೌಕರರ ಸಂಘದ ಅಧ್ಯಕ್ಷ ಹೆಚ್.ಕೆ.ರಾಮು, ತಾಲ್ಲೂಕು ಪಂಚಾಯಿತಿ ಅಧ್ಯಕ್ಷರಾದ ಕಾಳಮ್ಮ ಕೆಂಪರಾಮಯ್ಯ ಮತ್ತು ತಾಲ್ಲೂಕು ಪಂಚಾಯಿತಿ ಉಪಾಧ್ಯಕ್ಷರಾದ ಎನ್.ಬಿ.ಮಂಜು ಭಾಗವಹಿಸುವರು. 

     ನವೆಂಬರ್ 24 ಶುಕ್ರವಾರ ಬೆಳಿಗ್ಗೆ 11 ಗಂಟೆಗೆ ಮಹಾರಾಜ ಕಾಲೇಜು ಮೈದಾನದಲ್ಲಿ ನಾಡಗೀತೆಯ ನಂತರ ಮಾನ್ಯ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಅವರು ಕಾರ್ಯಕ್ರಮ ಉದ್ಘಾಟಿಸುವರು. ಲೋಕೋಪಯೋಗಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಡಾ|| ಹೆಚ್.ಸಿ.ಮಹದೇವಪ್ಪ ಅವರು ಸ್ವಾಗತ ಭಾಷಣ ಮಾಡುವರು. ಕನ್ನಡ ಸಾಹಿತ್ಯ ಪರಿಷತ್ತಿ ಅಧ್ಯಕ್ಷರಾದ ಡಾ.ಮನು ಬಳಿಗಾರ್ ಆಶಯ ನುಡಿಯನ್ನಾಡುವರು. ನಾಡೋಜ ಡಾ. ಬರಗೂರು ರಾಮಚಂದ್ರಪ್ಪ ಅವರು ನಿಕಟಪೂರ್ವ ಸಮ್ಮೇಳನಾಧ್ಯಕ್ಷರಾಗಿ ಮಾತನಾಡುವರು. 

    ಹಿರಿಯ ಸಾಹಿತಿಗಳು ಹಾಗೂ ಚಿಂತಕರಾದ ಪ್ರೊ. ಚಂದ್ರಶೇಖರ್ ಪಾಟೀಲಾ ಅವರು ಸಮ್ಮೇಳನ ಅಧ್ಯಕ್ಷರ ಭಾಷಣ ಮಾಡುವರು. ಕನ್ನಡ ಸಂಸ್ಕ್ರತಿ ಇಲಾಖೆ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವರಾದ ಉಮಾಶ್ರೀ ಅವರು ಸಾಂಸ್ಕøತಿಕ ಕಾರ್ಯಕ್ರಮ ಉದ್ಘಾಟಿಸುವರು. ವಿಧಾನ ಸಭೆ ವಿರೊಧ ಪಕ್ಷದ ನಾಯಕರಾದ ಜಗದೀಶ್ ಶೆಟ್ಟರ್ ಅವರು ಸ್ಮರಣ ಸಂಚಿಕೆ ಬಿಡುಗಡೆ ಮಾಡುವರು. ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣ ಸಚಿವರಾದ ತನ್ವೀರ್ ಶೇಠ್ ಅವರು ಪುಸ್ತಕ ಮಳಿಗೆಗಳ ಉದ್ಘಾಟನೆ ಮಾಡುವರು. ಸಣ್ಣ ಕೈಗಾರಿಕೆ ಮತ್ತು ಸಕ್ಕರೆ ಸಚಿವರಾದ ಎಂ.ಸಿ.ಮೋಹನ್‍ಕುಮಾರಿ ಪರಿಷತ್ತಿನ ಪುಸ್ತಕಗಳ ಬಿಡುಗಡೆಗೊಳಿಸುವರು. ಲೋಕಸಭಾ ಸದಸ್ಯರಾದ ಪ್ರತಾಪ್ ಸಿಂಹ ಅವರು ವಿವಿಧ ಲೇಖಕರ ಪುಸ್ತಕಗಳ ಬಿಡುಗಡೆಗೊಳಿಸುವರು. ವಿಧಾನ ಪರಿಷತ್ತಿನ ಉಪಸಭಾಪತಿಗಳಾದ ಮರಿತಿಬ್ಬೆಗೌಡ ಅವರು ಚಿತ್ರಕಲಾ ಪ್ರದರ್ಶನ ಉದ್ಘಾಟಿಸುವರು. 

    ಲೋಕಸಭಾ ಸದಸ್ಯರಾದ ಆರ್ ಧೃವನಾರಾಯಣ ಅವರು ವಾಣಿಜ್ಯ ಮಳಿಗೆಗಳನ್ನು ಉದ್ಘಾಟಿಸುವರು. ಪಾಲಿಕೆಯ ಮಹಾಪೌರರಾದ ರವಿಕುಮಾರ್ ಎಂ.ಜೆ ಅವರು ಮಹಾಮಂಟಪ ಉದ್ಘಾಟಿಸುವರು. ಶಾಸಕರಾದ ವಾಸು ಅವರು ವೇದಿಕೆ ಉದ್ಘಾಟಿಸುವರು. ಲೋಕಸಭಾ ಸದಸ್ಯ ಸಿ.ಎಸ್. ಪುಟ್ಟರಾಜು ಮುಖ್ಯಧ್ವಾರ ಉದ್ಘಾಟನೆ ಮಾಡುವರು. 

    ಮುಖ್ಯಅಥಿತಿಗಳಾಗಿ ಶಾಸಕರುಗಳಾದ ಎಂ.ಕೆ ಸೋಮಶೇಖರ್, ಜಿ.ಟಿ.ದೇವೇಗೌಡ, ಕೆ.ವೆಂಕಟೇಶ್, ಹೆಚ್.ಪಿ.ಮಂಜುನಾಥ್, ಸಾ.ರಾ ಮಹೇಶ್, ವಿಧಾನ ಪರಿಷತ್ ಸದಸ್ಯರಾದ ಸಂದೇಶ ನಾಗರಾಜು, ಕನ್ನಡ ಮತ್ತು ಸಂಸ್ಕøತ ಇಲಾಖೆ ಕಾರ್ಯದರ್ಶಿ ಚಕ್ರವರ್ತಿ ಮೋಹನ್‍ಕುಮಾರ್, ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ನಿರ್ದೇಶಕರಾದ ಎನ್.ಆರ್ ವಿಶುಕುಮಾರ್ ಅವರುಗಳು ಭಾಗವಹಿಸುವರು. . 

       ಗೋಷ್ಠಿ 1- ನವೆಂಬರ್ 24 ಮದ್ಯಾಹ್ನ 2 ಗಂಟೆಗೆ ಶಿಕ್ಷಣ-ವರ್ತಮಾನದ ಸಾವಾಲುಗಳು ಕುರಿತು  ವಿಚಾರಗೋಷ್ಠಿ ನಡೆಯಲಿದ್ದು, ಕನ್ನಡ ಅಬಿವೃದ್ದಿ ಪ್ರಾದಿಕಾರದ ಅದ್ಯಕ್ಷ ಪ್ರೊ. ಎಸ್.ಜಿ ಸಿದ್ದಾರಾಮಯ್ಯ ಅವರು ಅಧ್ಯಕ್ಷತೆ ವಹಿಸುವರು. ಪ್ತಾಥಮಿಕ ಶಿಕ್ಷಣ-ದೂರವಾಗುತ್ತಿರುವ ಕನ್ನಡ ವಿಷಯ ಕುರಿತು ಟಿ.ಎಂ ಕುಮಾರ್ ಉನ್ನತ ಶಿಕ್ಷಣ-ಗುಣಮಟ್ಟದ ಸವಾಲುUಳು ಕುರಿತು ಡಾ.ಜಯಪ್ರಕಾಶ್ ಮಾವಿನಕುಳಿ,  ಕನ್ನಡ ಮಾದ್ಯಮ-ಉದ್ಯೋಗಾವಕಾಶಗಳು ಕುರಿತು ಡಾ.ವಿಷ್ಣುಕಾಂತ ಚಟಪಲ್ಲಿ ಅವರುಗಳು ವಿಷಯ ಮಂಡಿಸಲಿದ್ದಾರೆ. 

     ಗೋಷ್ಠಿ 2- ನವೆಂಬರ್ 24 ಮದ್ಯಾಹ್ನ 3-30 ಗಂಟೆಗೆ ದಲಿತ ಲೋಕದೃಷ್ಟಿ ಕುರಿತು ವಿಚಾರಗೋಷ್ಠಿ ನಡೆಯಲಿದ್ದು,  ಧರಣಿದೇವಿ ಮಾಲಗತ್ತಿಯವರು ಅದ್ಯಕ್ಷತೆ ವಹಿಸುವರು. ದಲಿತ ಚಲಿವಳಿ-ಸಮಕಾಲಿನ ಸಾವಾಲುಗಳು ಕುರಿತಂತೆ ಡಾ.ಹೆಚ್ ದಂಡಪ್ಪ, ಹಿಂಸೆ ಮತ್ತು ಅಪಮಾನದ ನಿರ್ವಹಣೆ ಕುರಿತಂತೆ ಆರ್.ಬಿ ಅಗವಾನೆ,  ಅಸ್ಪøಸ್ಯತೆಯ ಹೊಸ ರೂಪಗಳು ಕುರಿತಂತೆ ಡಾ.ಶಿವರುದ್ರ ಕಲ್ಲೋಳಿಕರ ವಿಷಯ ಮಂಡಿಸಲಿದ್ದಾರೆ. 

       ಗೋಷ್ಠಿ 3- ನವೆಂಬರ್ 24 ಸಂಜೆ 5 ಗಂಟೆಗೆ ಮಾದ್ಯಮ- ಮುಂದಿರುವ ಸವಾಲುಗಳು ಕುರಿತುವಿಚಾರಗೋಷ್ಠಿ ನಡೆಯಲಿದ್ದು,  ಹೆಚ್ ಆರ್ ರಂಗನಾಥ್ ಧಿಕ್ಸೂಚಿ ಭಾಷಣ ಮಾಡಲಿದ್ದಾರೆ. ತಿಮ್ಮಪ್ಪ ಭಟ್ ಅದ್ಯಕ್ಷತೆ ವಹಿಸಲಿದ್ದು    ಸಾಮಾಜಿಕ ಜಾಲತಾಣ ಕುರಿತು ಎನ್.ರವಿಶಂಕರ್,  ಮುದ್ರಣ ಮಾಧ್ಯಮ ಕುರಿತು ಎನ್.ಉದಯ ಕುಮಾರ, ವಿದ್ಯುನ್ಮಾನ ಮಾಧ್ಯಮ ಕುರಿತು ಅಜೀತ್ ಹನುಮಕ್ಕನವರ್ ಅವರುಗಳು ವಿಷಯ ಮಂಡಿಸಲಿದ್ದಾರೆ.  

       ಗೋಷ್ಠಿ 4- ನವೆಂಬರ್ 25 ಬೆಳಿಗ್ಗೆ 9.30 ಗಂಟೆಗೆ ಮಹಿಳೆ- ಹೊಸಲೋಕ ಮೀಮಾಂಸೆ ವಿಚಾರಗೋಷ್ಠಿ ನಡೆಯಲಿದ್ದು, ಡಾ.ವಿಜಯಾ ಅದ್ಯಕ್ಷತೆ ವಹಿಸಲಿದ್ದಾರೆ. ವಿಧಾನ ಪರಿಷತ್ ಸದಸ್ಯರಾದ ಡಾ.ಜಯಮಾಲ ಆಶಯ ನುಡಿ ಆಡಲಿದ್ದಾರೆ. ಶೋಷಣೆಯ ಛದ್ಮವೇಶಗಳು ಕುರಿತಂತೆ ಡಾ ಸಬಿಹಾ ಭೂಮಿ ಗೌಡ,  ಸಮಾಕಾಲಿನ ಸಾಂಸ್ಕøತಿಕ ರಾಜಕಾರಣ ವಿಷಯ ಕುರಿತು ಡಾ. ಎನ್.ಕೆ ಲೋಲಾಕ್ಷಿ, ಸ್ವ ಬಿಡುಗಡೆಯ ದಾರಿಗಳು ಕುರಿತಂತೆ ಡಾ.ಎಂ.ಎಸ್ ಅಶಾದೇವಿ ಅವರುಗಳು ವಿಷಯ ಮಂಡಿಸಲಿದ್ದಾರೆ. 

     ಗೋಷ್ಠಿ 5- ನವೆಂಬರ್ 25 ಬೆಳಿಗ್ಗೆ 11 ಗಂಟೆಗೆ ಕರ್ನಾಟಕ ಕೃಷಿ- ಸಂಕ್ರಮಣ ಸ್ಥಿತಿ ವಿಚಾರಗೋಷ್ಠಿ ನಡೆಯಲಿದ್ದು,  ಮಾಜಿ ಕುಲಪತಿಯವರಾದ ಪ್ರೊ. ಬಿಸಿಲಯ್ಯ ಅದ್ಯಕ್ಷತೆ ವಹಿಸಲಿದ್ದಾರೆ. ಪರ್ಯಾಯ ಕೃಷಿ ಮಾದಿರಿಗಳು ಮತ್ತು ಸಾದ್ಯತೆಗಳು ಕುರಿತಂತೆ ಡಾ. ನಾರಾಯಣಗೌಡ, ಕೃಷಿ ಮಾರುಕಟ್ಟೆಯ ಸವಾಲುಗಳು ಕುರಿತಂತೆ ಡಾ.ಸಿದ್ದನ ಗೌಡ ಪಾಟೀಲ, ಬರ ನಿÀರ್ವಹಣೆಯ ಪಾಠಗಳು ಕುರಿತಂತೆ ಡಾ. ವಸಂತ ಕುಮಾರ್ ತಿಮಕಾಪುರ ಅವರುಗಳು ವಿಷಯ ಮಂಡಿಸಲಿದ್ದಾರೆ. 

    ಗೋಷ್ಠಿ 6- ನವೆಂಬರ್ 25 ಮಧ್ಯಾಹ್ನ 12.30 ಗಂಟೆಗೆ ಕನ್ನಡ ಸಂಶೋದನೆ ಮತ್ತು ವಿಮರ್ಶೆ ಕುರಿತು ವಿಚಾರಗೋಷ್ಠಿ ನಡೆಯಲಿದ್ದು, ಡಾ. ಬಿ. ಎ. ವಿವೇಕ ರೈ ಅದ್ಯಕ್ಷತೆ ವಹಿಸಲಿದ್ದಾರೆ, ಕನ್ನಡ ವಿಮರ್ಶೆ- ಹೊಸ ದೃಷ್ಟಿಕೊನ ಕುರಿತಂತೆ ಡಾ. ಕೇಶವ ಶರ್ಮಾ,  ಕನ್ನಡ ಸಂಶೋದನೆ -ಹೊಸ ಆಶಕ್ತಿಗಳು ಕುರಿತಂತೆ ಡಾ.ಅಮರೇಶ ನುಗಡೋಣೆ,  ಕನ್ನಡ ಸಂಶೋದನೆ- ಮುಂದಿನ ಹೆಜ್ಜೆಗಳು ಕುರಿತು ಡಾ. ಪುರುಷೋತ್ತಮ ಬಿಳಿಮಲೆ ಅವರುಗಳು ವಿಷಯ ಮಂಡಿಸಲಿದ್ದಾರೆ. 

    ಗೋಷ್ಠಿ 7- ನವೆಂಬರ್ 25 ಮಧ್ಯಾಹ್ನ 2.30 ಗಂಟೆಗೆ ಸಾಮಾಜಿಕ ನ್ಯಾಯ-ಕನ್ನಡ ಪರಂಪರೆ ವಿಷಯ ಕುರಿತುವಿಚಾರಗೋಷ್ಠಿ ನಡೆಯಲಿದ್ದು,  ಡಾ. ಸಿ ಎಸ್ ದ್ವಾರಕನಾಥ್ ಅದ್ಯಕ್ಷತೆ ವಹಿಸಲಿದ್ದಾರೆ. ಕನ್ನಡ ಮೌಲಿಕ ಪರಂಪರೆಯಲ್ಲಿ ಸಾಮಾಜಿಕ ನ್ಯಾಯದ ನಿರೂಪಣೆ ಕುರಿತು ಡಾ.ಮಳಲಿ ವಸಂತ ಕುಮಾರ್,  ಪ್ರಾಚೀನ ಹಾಗೂ ಮದ್ಯಕಾಲಿನ ಕಾವ್ಯ ಪರಂಪರೆಯಲ್ಲಿ ಸಾಮಾಜಿಕ ನ್ಯಾಯ ಕುರಿತಂತೆ ಕೆ.ವೈ ನಾರಾಯಣ ಸ್ವಾಮಿ, ಅಧುನಿಕ ಕನ್ನಡ ಸಾಹಿತ್ಯ ಹಾಗೂ ಸಾಮಾಜಿಕ ನ್ಯಾಯ  ಕುರಿತಂತೆ ಡಾ. ಮೊಗಳ್ಳಿ ಗಣೇಶ ಅವರುಗಳು ವಿಷಯ ಮಂಡಿಸಲಿದ್ದಾರೆ. 

      ಸಂಜೆ 4.30 ಗಂಟೆಗೆ ಸನ್ಮಾನ ಸಮಾರಂಭ ಸನ್ಮಾನಿಸುವವರು ಮಾಜಿ ಪ್ರಧಾನ ಮಂತ್ರಿಗಳು ಹೆಚ್.ಡಿ ದೇವೇಗೌಡರು, ಹಿರಿಯ ಸಾಹಿತಿ ಡಾ. ಗೊ. ರು. ಚನ್ನಬಸಪ್ಪ ಆಶಯ ಭಾಷಣ ಮಾಡಲಿದ್ದಾರೆ. ಕನ್ನಡ ಸಾಹಿತ್ಯ ಪರಿಷತ್ ಅದ್ಯಕ್ಷರಾದ ಡಾ. ಮನು ಬಳಿಗಾರ್ ಅದ್ಯಕ್ಷತೆ ವಹಿಸಲಿದ್ದಾರೆ. 

      ಗೋಷ್ಠಿ 8-ನವೆಂಬರ್ 26 ಭಾನುವಾರ ಬೆಳಿಗ್ಗೆ 9.30 ಗಂಟೆಗೆ ಸಮಕಾಲೀನ ಸಂದರ್ಭ :ಬಹುತ್ವದ ಸವಾಲುಗಳು ಕುರಿತು ವಿಚಾರಗೋಷ್ಠಿ ನಡೆಯಲಿದ್ದು,  ಡಾ. ಕಾಳೇಗೌಡ ನಾಗವಾರ ಅವರು ಅಧ್ಯಕ್ಷತೆ ವಹಿಸುವರು. ನವರಾಷ್ಟ್ರೀಯತೆ ಧಾರ್ಮಿಕ ಮೂಲಭೂತ ವಾದ ವಿಷಯ ಕುರಿತು ಡಾ. ಪ್ರಧಾನ್ ಗುರುದತ್ತ, ಅಸಹಿಷ್ಣುತೆ ವಿಷಯ ವಿಸ್ತಾರ ವಿಷಯ ಕುರಿತು ಡಾ.ವೀರಣ್ಣ ದಂಡೆ,  ಅಭಿವ್ಯಕ್ತಿ ಸ್ವಾತಂತ್ರ್ಯದ ಬಿಕ್ಕಟ್ಟುಗಳ ಕುರಿತಾದ ಡಾ.ವಿನಯಾ ಒಕ್ಕುಂದ  ಅವರುಗಳು ವಿಷಯ ಮಂಡನೆ ಮಾಡುವರು. 

     ಗೋಷ್ಠಿ 9-ನವೆಂಬರ್ 26 ಬೆಳಿಗ್ಗೆ 10 ಗಂಟೆಗೆ ಕವಿಗೋಷ್ಠಿ ನಡೆಯಲಿದೆ. ಅಧ್ಯಕ್ಷತೆಯನ್ನು ಡಾ.ಸಿದ್ದಲಿಂಗ ಪಟ್ಟಣಶೆಟ್ಟಿ ಅವರು ವಹಿಸುವರು. ಡಾ.ಜಯಂತ್ ಕಾಯ್ಕಿಣಿ ಅವರು  ಆಶಯ ನುಡಿ ಆಡುವರು. ಅನೇಕ ಕವಿ-ಕವಯತ್ರಿಯರು ಕವಿಗೋಷ್ಠಿಗೆ ಭಾಗವಹಿಸುವರು. 

     ಗೋಷ್ಠಿ 10- ನವೆಂಬರ್ 26 ಮಧ್ಯಾಹ್ನ 2 ಗಂಟೆಗೆ ಸಮ್ಮೇಳನಾಧ್ಯಕ್ಷರೊಂದಿಗೆ ಸಂವಾದ ಕಾರ್ಯಕ್ರಮ. ಕಾರ್ಯಕ್ರಮದ ನಿರ್ವಹಣೆ ಕಾ. ತ. ಚಿಕ್ಕಣ್ಣ ಅವರು ವಹಿಸಲಿದ್ದಾರೆ. ಬಹಿರಂಗ ಅಧಿವೇಶನ 3-30 ಗಂಟೆಗೆ ನಡೆಯಲಿದೆ. ಅಧ್ಯಕ್ಷತೆಯನ್ನು ಡಾ.ಮನು ಬಳಿಗಾರ್ ಅವರು ವಹಿಸುವರು. 

     ನವೆಂಬರ್ 26 ಸಂಜೆ 4-15 ಗಂಟೆಗೆ  ಸಮಾರೋಪ ಸಮಾರಂಭಕ್ಕೆ ರಾಸಾಯನಿಕ ರಸಗೊಬ್ಬರ ಮತ್ತು ಸಂಸದೀಯ ವ್ಯವಹಾರಗಳ ಖಾತೆ ಸಚಿವ ಅನಂತಕುಮಾರ್ ಹಾಗೂ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ಯ ಸಚಿವರಾದ ಹೆಚ್.ಕೆ. ಪಾಟಿಲ್ ಅವರು ಗೌರವ ಅತಿಥಿಗಳಾಗಿ ಭಾಗವಹಿಸುವರು. ಹಿರಿಯ ಸಾಹಿತಿಗಳಾದ ಡಾ.ಹೆಚ್.ಎಸ್ ವೆಂಕಟೇಶ್ ಮೂರ್ತಿ ಅವರು ಸಮರೋಪ ಭಾಷಣವನ್ನು ಮಾಡುವರು. 

       ಹಿರಿಯ ಸಾಹಿತಿಗಳಾದ ಪ್ರೊ. ಚಂದ್ರಶೇಖರ ಪಾಟೀಲ ಅವರು ಸಮ್ಮೇಳನದ ಅಧ್ಯಕ್ಷರ ನುಡಿಗಳನ್ನಾಡುವರು. ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರಾದ ಡಾ.ಮನು ಬಳಿಗಾರ್ ಅವರು  ಅಧ್ಯಕ್ಷತೆ ವಹಿಸುವರು. ಮುಖ್ಯ ಅತಿಥಿಗಳಾಗಿ ಸಾರಿಗೆ ಸಚಿವರಾದ ಹೆಚ್.ಎಂ ರೇವಣ್ಣ, ಕರ್ನಾಟಕ ಸಹಕಾರ ಅಫೆಕ್ಸ್ ಬ್ಯಾಂಕ್‍ನ ಅಧ್ಯಕ್ಷರಾದ ಕೆ.ಎನ್.ರಾಜಣ್ಣ, ದೆಹಲಿ ಪ್ರತಿನಿಧಿ ಅಪ್ಪಾಜಿ ಸಿ.ಎಸ್.ನಾಡಗೌಡ ಮತ್ತು ಹಿರಿಯ ಸಾಹಿತಿಗಳಾದ ಡಾ. ಸಿ.ಪಿ. ಕೃಷ್ಣಕುಮಾರ್ ಅವರುಗಳು ಭಾಗವಹಿಸುವರು. ವಿಶೇಷ ಆಹ್ವಾನಿತರಾಗಿ   ಶಾಸಕ ಕಳಲೆ ಕೇಶವ ಮೂರ್ತಿ, ವಿಧಾನ ಪರಿಷತ್‍ನ ಸದಸ್ಯರುಗಳಾದ ಕೆ.ಟಿ.ಶ್ರೀಂಕಠೇ ಗೌಡ, ಆರ್. ಧರ್ಮಸೇನ, ಕೆ.ವಿ. ನಾರಾಯಣ ಸ್ವಾಮಿ ಹಾಗೂ ಮೈಸೂರು ವಿವಿ ಪ್ರೊ.ದಯಾನಂದ್ ಎ ಮಾನೆ ಅವರು ಭಾಗವಹಿಸುವರು. 

ಸಮಾನಾಂತರ ವೇದಿಕೆ-1 ಮಹಾರಾಜ ಕಾಲೇಜು ಶತಮಾನೋತ್ಸವ ಭವನದಲ್ಲಿ ನಡೆಯಲಿರುವ ಗೋಷ್ಠಿಗಳು

    ಗೋಷ್ಠಿ-1 ನವೆಂಬರ್ 24 ರಂದು ಶುಕ್ರವಾರ ಮಧ್ಯಾನ 2.30 ಗಂಟೆಗೆ ಆಧುನಿಕ ಕರ್ನಾಟಕ ನಿರ್ಮಾಣ: ಮೈಸೂರು ರಾಜರ ಕೊಡುಗೆ ಕುರಿತು ಗೋಷ್ಠಿ ನಡೆಯಲಿದ್ದು, ಅಧ್ಯಕ್ಷತೆಯನ್ನು ಡಾ. ಟಿ.ವಿ ವೆಂಕಟಾಚಲಶಾಸ್ತ್ರೀ ವಹಿಸುವರು. ಆಶಯ ನುಡಿ ಪ್ರೊ.ಪಿ.ವಿ ನಂಜರಾಜೆ ಅರಸ್,  ಒಡೆಯರ ಕೊಡುಗೆ ಕುರಿತು ಡಾ.ಎನ್ .ಎಸ್ .ತಾರಾನಾಥ್, ಹೈದರಾಲಿ ಟಿಪ್ಪು ಆಡಳಿತ ಕುರಿತು ಡಾ.ಪೃಥ್ವಿದತ್ತ ಚಂದ್ರಶೋಭಿ, ದಿವಾನರುಗಳ ಪಾತ್ರ ಕುರಿತು ಪ್ರೊ.ಡಿ.ಎಸ್. ಜಯಪ್ಪಗೌಡ ಅವರುಗಳು ವಿಷಯ ಮಂಡನೆ ಮಾಡುವರು. 

    ಗೋಷ್ಠಿ-2 ನವೆಂಬರ್ 24 ರಂದು ಸಂಜೆ 4.30  ಗಂಟೆಗೆ ಕರ್ನಾಟಕ ಏಕೀಕರಣ ಕರಿತು ವಿಷಯ ಗೋಷ್ಠಿ ನಡೆಯಲಿದೆ.  ಪ್ರೊ. ಮಲೆಯೂರು ಗುರುಸ್ವಾಮಿ ಅಧ್ಯಕ್ಷತೆ ವಹಿಸುವರು. ಅಪ್ಪರಾವ್ ಅಕ್ಕೋಣಿ ಅವರು ಆಶಯ ನುಡಿ ಹಾಡುವರು. ಪ್ರಾದೇಶಿಕ ಅಸಮಾನತೆ ಸವಾಲು ಮತ್ತು ಪರಿಹಾರ ಕುರಿತು ಡಾ.ಕೆ.ಎನ್.ಇಂಗಳಗಿ, ಕಾವೇರಿ ಯಿಂದ ಮಾ ಗೋದಾವರಿ :ಒಂದು ಅವಲೋಕನ  ಕರಿತು ಡಾ.ಜಗನ್ನಾಥ್, ಗಡಿನಾಡು ಪ್ರದೇಶಗಳು: ಬಿಕ್ಕಟ್ಟುಗಳನ್ನು ಕುರಿತು ಡಾ. ಬಾಳಾಸಾಹೇಬ ಲೋಕಾಪುರ, ಅವರುಗಳು ವಿಷಯ ಮಂಡಿಸುವರು. 

     ಗೋಷ್ಠಿ-3 ನವೆಂಬರ್ 25 ಬೆಳಿಗ್ಗೆ 10 ಗಂಟೆಗೆ  ಅಲಕ್ಷಿತ ಸಮುದಾಯಗಳು ಕುರಿತು ಗೋಷ್ಠಿ ನಡೆಯಲಿದ್ದು, ಪ್ರೊ .ಕೆ ಎಸ್. ಭಗವಾನ್ ಅವರು ಅಧ್ಯಕ್ಷತೆ ವಹಿಸುವರು,  ವಿಶೇಷ ಚೇತನರು ಕುರಿತು ಜಿ.ಕೆ ಮಹಾಂತೇಶ್, ಲೈಂಗಿಕ ದಮನಿತರು ಕುರುತು ಡಾ. ಮೀನಾಕ್ಷಿ ಬಾಳಿ, ಅಲೆಮಾರಿಗಳು ಕುರಿತು ಡಾ.ಬಾಲಗುರುಮೂರ್ತಿ, ಬುಡಕಟ್ಟು ಸಮುದಾಯ ಕುರಿತು ಡಾ.ಎಂ.ಕೆ ಗುರುಲಿಂಗಯ್ಯ ಅವರುಗಳು ವಿಷಯ ಮಂಡನೆ ಮಾಡುವರು. 

    ಗೋಷ್ಠಿ-4  ನವೆಂಬರ್ 25 ಮಧ್ಯಾಹ್ನ 12 ಗಂಟೆಗೆ ಕರ್ನಾಟಕ ನೀರಾವರಿ ಕುರಿತು ಗೋಷ್ಠಿ ನಡೆಯಲಿದ್ದು,  ಕೆ.ಎಸ್. ಪುಟ್ಟಣ್ಣಯ್ಯ ಅವರು ಅಧ್ಯಕ್ಷತೆ ವಹಿಸುವರು. ಕಾವೇರಿ: ಇತ್ತೀಚಿನ ವಿದ್ಯಮಾನಗಳ ಕುರಿತು ಕ್ಯಾಪ್ಟನ್(ನಿ) ರಾಜಾರಾವ್, ಮಹದಾಯಿ, ಕಳಸಾ ಬಂಡೂರಿ: ವಿವಾದ- ಪರಿಹಾರ ಕುರಿತು ಎನ್.ಹೆಚ್. ಕೋನರೆಡ್ಡಿ, ಎತ್ತಿನಹೊಳೆ : ಸಾಧಕ-ಬಾಧಕ ಕುರಿತು ಪ್ರೊ. ನರಸಿಂಹಪ್ಪ ಅವರುಗಳು ವಿಷಯ ಮಂಡನೆ ಮಾಡುವರು. 

     ಗೋಷ್ಠಿ-5 ನವೆಂಬರ್ 25 ರಂದು ಮಧ್ಯಾನ 2.30 ಗಂಟೆಗೆ ಯುವಗೋಷ್ಠಿ-ನನ್ನ ಹಾಡು ನನ್ನದು ಕುರಿತು ಗೋಷ್ಠಿ ನಡೆಯಲಿದ್ದು, ಡಾ. ಡಿ.ಕೆ. ಚಿತ್ತಯ್ಯ ಪೂಜಾರ ಅವರು ಅಧ್ಯಕ್ಷತೆ ವಹಿಸುವರು. ಯುವ ಶಕ್ತಿ ಸದ್ಬಳಕೆ ಕುರಿತು ಡಾ.ಎಂ.ಎನ್.ನಂದೀಶ್ ಹಂಚೆ, ನನ್ನ ಓದು- ನನ್ನ ಭಾಷೆ ಕುರಿತು ಕುಮಾರಿ ಮಿಸ್ಬಾ ಮೆಹರೀನ್, ನನ್ನ ಮತ- ನನ್ನ ಧರ್ಮ ಕುರಿತು ಡಾ. ದಮ್ಮೂರು ಮಲ್ಲಿಕಾರ್ಜುನ, ಯುವ ಸಾಹಿತ್ಯ : ಪ್ರಭಾವ ಪ್ರೇರಣೆಗಳು ಕುರಿತು ಡಾ.ಎಂ.ಎನ್. ರಘು ಅವರುಗಳು ವಿಷಯ ಮಂಡನೆ ಮಾಡುವರು. 

      ಗೋಷ್ಠಿ-6 ನವೆಂಬರ್ 25 ರಂದು ಮಧ್ಯಾಹ್ನ ಸಂಜೆ 4.15 ಗಂಟೆಗೆ ಕವಿಗೋಷ್ಠಿ-2 ನಡೆಯುವುದು. ಪ್ರೊ. ಅಲ್ಲಮಪ್ರಭು ಬೆಟದೂರು ಅವರು ಅಧ್ಯಕ್ಷತೆ ವಹಿಸುವರು. ಬಿ.ಎ.ಸನದಿ ಅವರು ಆಶಯ ನುಡಿಗಳನ್ನಾಡುವರು. ಅನೇಕ ಕವಿ-ಕವಯತ್ರಿಯರು ಕವಿಗೋಷ್ಠಿಗೆ ಭಾಗವಹಿಸುವರು. 

     ಗೋಷ್ಠಿ-7 ನವೆಂಬರ್ 26 ಬೆಳಿಗ್ಗೆ 9.30 ಗಂಟೆಗೆ  ಜನಪರ ಚಳುವಳಿಗಳು ಕುರಿತು ವಿಚಾರಗೋಷ್ಠಿಗಳು ನಡೆಯಲಿದ್ದು, ಸತೀಶ್ ಕುಲಕರ್ಣಿ ಅವರು ಅಧ್ಯಕ್ಷತೆ ವಹಿಸುವರು. ಪ್ರೊ. ರವಿವರ್ಮ ಕುಮಾರ್  ಅವರು ಆಶ ನುಡಿ ಆಡುವರು.  ರೈತ ಚಳುವಳಿ ಕುರಿತು ಚಾಮರಸ ಮಾಲಿಪಾಟೀಲ, ಕನ್ನಡ ಚಳುವಳಿ ಕುರಿತು ರಾ. ನಂ. ಚಂದ್ರಶೇಖರ, ಕಾರ್ಮಿಕ ಚಳುವಳಿ ಕುರಿತು ವರಲಕ್ಷ್ಮೀ, ಮಹಿಳಾ ಚಳುವಳಿ ಕುರಿತು ಡಾ. ಎಲ್ ಜಿ ಮೀರಾ ಅವರುಗಳು ವಿಷಯ ಮಂಡಿಸುವರು. 

    ಗೋಷ್ಠಿ-8 ನವೆಂಬರ್ 26 ಭಾನುವಾರ  ಬೆಳಿಗ್ಗೆ 11.30 ಗಂಟೆಗೆ ಕನ್ನಡ ತಂತ್ರಜ್ಞಾನ ಕುರಿತು ವಿಚಾರಗೋಷ್ಠಿ ನಡೆಯಲಿದ್ದು,  ಇ-ಆಡಳಿತ ಅನುಷ್ಠಾನ- ಸಮಸ್ಯೆಗಳು ಕುರಿತು ಹಾಗೂ ಗೋಷ್ಠಿಯ ಅಧ್ಯಕ್ಷತೆಯನ್ನು ಕೆ.ಎ.ದಯಾನಂದ್ ಅವರು ವಹಿಸುವರು. ಐ.ಟಿ ಬಿ.ಟಿ ಕ್ಷೇತ್ರದಲ್ಲಿ ಉದ್ಯೋಗಾವಕಾಶಗಳು ಕುರಿತು ಮತ್ತು ಆಶಯ ನುಡಿಯನ್ನು ಅನಂತ ಕೊಪ್ಪರ ಅವರು ನಡೆಸಿಕೊಡುವರು. ಕನ್ನಡ ಭಾಷೆ : ತಂತ್ರಾಂಶದ ಪ್ರಯೋಜನಗಳು ಕುರಿತು ಡಾ ಯು.ಬಿ ಪವನಜ, ಕನ್ನಡ ಗ್ರಂಥ ಡಿಜಿಟಲೈಜೇಶನ್ ಕುರಿತು ವಸಂತಶೆಟ್ಟಿ ಅವರುಗಳು ವಿಷಯ ಮಂಡಿಸುವರು. 

     ಗೋಷ್ಠಿ-9 ನವೆಂಬರ್ 26 ಭಾನುವಾರ ಮಧ್ಯಾಹ್ನ 2 ಗಂಟೆಗೆ ವಿಜ್ಞಾನ ತಂತ್ರಜ್ಞಾನ : ಕನ್ನಡದ ಬಳಕೆ ಕುರಿತು ಗೋಷ್ಠಿ ನಡೆಯಲಿದ್ದು, ಅಧ್ಯಕ್ಷತೆಯನ್ನು ಡಾ. ಪಿ. ಎಸ್. ಶಂಕರ್ ಅವರು ವಹಿಸುವರು. ಪರಿಸರ ವಿಜ್ಞಾನ ಕುರಿತು ಆಶಯ ನುಡಿಯನ್ನು ಅ. ನ ಯಲ್ಲಪ್ಪರೆಡ್ಡಿ ಅವರು ಹಾಡುವರು. ಮನೋವಿಜ್ಞಾನ ಕುರಿತು ಡಾ. ಸಿ.ಆರ್. ಚಂದ್ರಶೇಖರ , ವೈದ್ಯ ವಿಜ್ಞಾನ ಕುರಿತು ಡಾ. ವಿಜಯಲಕ್ಷೀ ಬಾಳೇಕುಂದ್ರಿ , ತಂತ್ರಜ್ಞಾನ ಕ್ಷೇತ್ರ ಕುರಿತು ಉದಯಶಂಕರ ಪುರಾಣಿಕ ಅವರು ವಿಷಯ ಮಂಡಿಸುವರು. 

ಸಮಾನಾಂತರ ವೇದಿಕೆ-2 ರಲ್ಲಿ  ಕಲಾಮಂದಿರದಲ್ಲಿ ನಡೆಯಲಿರುವ ಗೋಷ್ಠಿಗಳು: 

ಗೋಷ್ಠಿ-1 

ನವೆಂಬರ್ 25 ಬೆಳಿಗ್ಗೆ 10 ಗಂಟೆಗೆ  ಮಕ್ಕಳ ಸಾಹಿತ್ಯ ಗೋಷ್ಠಿ  ನಡೆಯಲಿದ್ದು,  ಅಧ್ಯಕ್ಷತೆಯನ್ನು ಜಯವಂತ ಕಾಡದೇವರ ಅವರು ವಹಿಸುವರು.  ಬೋಳುವಾರು ಮಹಮ್ಮದ್ ಕುಂಞ ಅವರು ಆಶಯ ನುಡಿ ಹಾಡುವರು. ಮಕ್ಕಳ ಸಾಹಿತ್ಯ : ಆಧುನಿಕ ಸವಾಲುಗಳು ಕುರಿತು ಪ್ರೊ. ಚಂದ್ರೇಗೌಡ ಕುಲಕರ್ಣಿ, ನನ್ನ ದೇಶ – ನನ್ನ ನಾಡು ವಿಷಯ ಕುರಿತು ಕುಮಾರಿ ಸಾನಿಯಾ ಧನ್ನೂರ, ನನ್ನ ನಾಳೆ- ನನ್ನ ಕನಸು ಕುರಿತು ಕುಮಾರ ಅಂತಃಕರಣ,  ಮಕ್ಕಳ ಸಾಹಿತ್ಯ-ಇತ್ತೀಚಿನ ಒಲವುಗಳು ಕುರಿತು ಫ.ಗು ಸಿದ್ಧಾಪೂರ ಅವರುಗಳು ವಿಷಯ ಮಂಡನೆ ಮಾಡುವರು. 

    ಗೋಷ್ಠಿ-2 ನವೆಂಬರ್ 25 ಬೆಳ್ಳಿಗ್ಗೆ 11.30 ಗಂಟೆಗೆ ಕವಿಗೋಷ್ಠಿ-3 ನಡೆಯಲಿದ್ದು,  ಅಧ್ಯಕ್ಷತೆಯನ್ನು ಡಾ.ಲತಾ ರಾಜಶೇಖರ ಅವರು ವಹಿಸುವರು. ಆಶಯ ನುಡಿಯನ್ನು ಮೋಹನ ನಾಗಮ್ಮನವರ ಅವರು ಹಾಡುವರು.

      ಗೋಷ್ಠಿ-3 ನವೆಂಬರ್ 25 ಮಧ್ಯಾಹ್ನ 2.30 ಗಂಟೆಗೆ ಕರ್ನಾಟಕ ಕಲಾ ಜಗತ್ತು ಕುರಿತ ಗೋಷ್ಠಿ ನಡೆಯಲಿದ್ದು, ಡಾ. ಎಂ.ಎಸ್ ಮೂರ್ತಿ ಅವರು ಅಧ್ಯಕ್ಷತೆ ವಹಿಸಿ  ಚಿತ್ರಕಲೆ  ಕುರಿತು ವಿಷಯ ಮಂಡಿಸಲಿದ್ದಾರೆ. ರಂಗಭೂಮಿ ಕುರಿತು ಡಾ.ನಾ .ದಾಮೋಧರ ಶೆಟ್ಟಿ, ಸಂಗೀತ ಕುರಿತು ಡಾ. ಆರ್.ಎನ್ ಶ್ರೀಲತಾ , ನೃತ್ಯ ಕುರಿತು ರಮ್ಯಾ ನಾಗರಾಜ್, ಯಕ್ಷಗಾನ ಕುರಿತು ಡಾ.ಕಬ್ಬಿನಾಲೆ ವಸಂತ ಭಾರಧ್ವಜ್ ಅವರುಗಳು ವಿಷಯ ಮಂಡಿಸಲಿದ್ದಾರೆ.

–  ಕರ್ನಾಟಕ ವಾರ್ತೆ .

****

ಇದುವರೆಗಿನ ಸಮ್ಮೇಳನಾಧ್ಯಕ್ಷರುಗಳು:

ಕ್ರ.ಸಂ  /  ಇಸ್ವಿ.  /   ಸ್ಥಳ  /    ಅಧ್ಯಕ್ಷರು.

    • ೧ ೧೯೧೫  ಬೆಂಗಳೂರು ಎಚ್.ವಿ.ನಂಜುಂಡಯ್ಯ
    • ೨ ೧೯೧೬  ಬೆಂಗಳೂರು ಎಚ್.ವಿ.ನಂಜುಂಡಯ್ಯ
    • ೩ ೧೯೧೭  ಮೈಸೂರು ಎಚ್.ವಿ.ನಂಜುಂಡಯ್ಯ
    • ೪ ೧೯೧೮  ಧಾರವಾಡ ಆರ್.ನರಸಿಂಹಾಚಾರ್
    • ೫ ೧೯೧೯  ಹಾಸನ ಕರ್ಪೂರ ಶ್ರೀನಿವಾಸರಾವ್
    • ೬ ೧೯೨೦  ಹೊಸಪೇಟೆ ರೊದ್ದ ಶ್ರೀನಿವಾಸರಾವ
    • ೭ ೧೯೨೧  ಚಿಕ್ಕಮಗಳೂರು ಕೆ.ಪಿ.ಪುಟ್ಟಣ್ಣ ಶೆಟ್ಟಿ
    • ೮ ೧೯೨೨  ದಾವಣಗೆರೆ ಎಂ.ವೆಂಕಟಕೃಷ್ಣಯ್ಯ
    • ೯ ೧೯೨೩  ಬಿಜಾಪುರ ಸಿದ್ಧಾಂತಿ ಶಿವಶಂಕರ ಶಾಸ್ತ್ರಿ
    • ೧೦ ೧೯೨೪  ಕೋಲಾರ ಹೊಸಕೋಟೆ ಕೃಷ್ಣಶಾಸ್ತ್ರಿ
    • ೧೧ ೧೯೨೫  ಬೆಳಗಾವಿ ಬೆನಗಲ್ ರಾಮರಾವ್
    • ೧೨ ೧೯೨೬  ಬಳ್ಳಾರಿ ಫ.ಗು.ಹಳಕಟ್ಟಿ
    • ೧೩ ೧೯೨೭  ಮಂಗಳೂರು ಆರ್.ತಾತಾಚಾರ್ಯ
    • ೧೪ ೧೯೨೮  ಕಲಬುರ್ಗಿ ಬಿ ಎಂ ಶ್ರೀ
    • ೧೫ ೧೯೨೯  ಬೆಳಗಾವಿ ಮಾಸ್ತಿ ವೆಂಕಟೇಶ ಅಯ್ಯಂಗಾರ್
    • ೧೬ ೧೯೩೦  ಮೈಸೂರು ಆಲೂರು ವೆಂಕಟರಾಯರು
    • ೧೭ ೧೯೩೧  ಕಾರವಾರ ಮುಳಿಯ ತಿಮ್ಮಪ್ಪಯ್ಯ
    • ೧೮ ೧೯೩೨  ಮಡಿಕೇರಿ ಡಿ ವಿ ಜಿ
    • ೧೯ ೧೯೩೩  ಹುಬ್ಬಳ್ಳಿ ವೈ.ನಾಗೇಶ ಶಾಸ್ತ್ರಿ
    • ೨೦ ೧೯೩೪  ರಾಯಚೂರು ಪಂಜೆ ಮಂಗೇಶರಾಯರು
    • ೨೧ ೧೯೩೫  ಮುಂಬಯಿ ಎನ್.ಎಸ್.ಸುಬ್ಬರಾವ್
    • ೨೨ ೧೯೩೭  ಜಮಖಂಡಿ ಬೆಳ್ಳಾವೆ ವೆಂಕಟನಾರಣಪ್ಪ
    • ೨೩ ೧೯೩೮  ಬಳ್ಳಾರಿ ರಂಗನಾಥ ದಿವಾಕರ
    • ೨೪ ೧೯೩೯  ಬೆಳಗಾವಿ ಮುದವೀಡು ಕೃಷ್ಣರಾಯರು
    • ೨೫ ೧೯೪೦  ಧಾರವಾಡ ವೈ.ಚಂದ್ರಶೇಖರ ಶಾಸ್ತ್ರಿ
    • ೨೬ ೧೯೪೧  ಹೈದರಾಬಾದ್ ಎ.ಆರ್.ಕೃಷ್ಣಶಾಸ್ತ್ರಿ
    • ೨೭ ೧೯೪೩  ಶಿವಮೊಗ್ಗ ದ.ರಾ.ಬೇಂದ್ರೆ
    • ೨೮ ೧೯೪೪  ರಬಕವಿ ಎಸ್.ಎಸ್.ಬಸವನಾಳ
    • ೨೯ ೧೯೪೫  ಮದರಾಸು ಟಿ ಪಿ ಕೈಲಾಸಂ
    • ೩೦ ೧೯೪೭  ಹರಪನಹಳ್ಳಿ ಸಿ.ಕೆ.ವೆಂಕಟರಾಮಯ್ಯ
    • ೩೧ ೧೯೪೮  ಕಾಸರಗೋಡು ತಿ.ತಾ.ಶರ್ಮ
    • ೩೨ ೧೯೪೯  ಕಲಬುರ್ಗಿ ಉತ್ತಂಗಿ ಚನ್ನಪ್ಪ
    • ೩೩ ೧೯೫೦  ಸೊಲ್ಲಾಪುರ ಎಮ್.ಆರ್.ಶ್ರೀನಿವಾಸಮೂರ್ತಿ
    • ೩೪ ೧೯೫೧  ಮುಂಬಯಿ ಗೋವಿಂದ ಪೈ
    • ೩೫ ೧೯೫೨  ಬೇಲೂರು ಎಸ್.ಸಿ.ನಂದೀಮಠ
    • ೩೬ ೧೯೫೪  ಕುಮಟಾ ವಿ.ಸೀತಾರಾಮಯ್ಯ
    • ೩೭ ೧೯೫೫  ಮೈಸೂರು ಶಿವರಾಮ ಕಾರಂತ
    • ೩೮ ೧೯೫೬  ರಾಯಚೂರು ಶ್ರೀರಂಗ
    • ೩೯ ೧೯೫೭  ಧಾರವಾಡ ಕುವೆಂಪು
    • ೪೦ ೧೯೫೮  ಬಳ್ಳಾರಿ ವಿ.ಕೆ.ಗೋಕಾಕ
    • ೪೧ ೧೯೫೯  ಬೀದರ ಡಿ.ಎಲ್.ನರಸಿಂಹಾಚಾರ್
    • ೪೨ ೧೯೬೦  ಮಣಿಪಾಲ ಅ.ನ. ಕೃಷ್ಣರಾಯ
    • ೪೩ ೧೯೬೧  ಗದಗ ಕೆ.ಜಿ.ಕುಂದಣಗಾರ
    • ೪೪ ೧೯೬೩  ಸಿದ್ದಗಂಗಾ ರಂ.ಶ್ರೀ.ಮುಗಳಿ
    • ೪೫ ೧೯೬೫  ಕಾರವಾರ ಕಡೆಂಗೋಡ್ಲು ಶಂಕರಭಟ್ಟ
    • ೪೬ ೧೯೬೭  ಶ್ರವಣಬೆಳಗೊಳ ಆ.ನೇ.ಉಪಾಧ್ಯೆ
    • ೪೭ ೧೯೭೦  ಬೆಂಗಳೂರು ದೇ.ಜವರೆಗೌಡ
    • ೪೮ ೧೯೭೪  ಮಂಡ್ಯ ಜಯದೇವಿತಾಯಿ ಲಿಗಾಡೆ
    • ೪೯ ೧೯೭೬  ಶಿವಮೊಗ್ಗ ಎಸ್.ವಿ.ರಂಗಣ್ಣ
    • ೫೦ ೧೯೭೮  ದೆಹಲಿ ಜಿ.ಪಿ.ರಾಜರತ್ನಂ
    • ೫೧ ೧೯೭೯  ಧರ್ಮಸ್ಥಳ ಗೋಪಾಲಕೃಷ್ಣ ಅಡಿಗ
    • ೫೨ ೧೯೮೦  ಬೆಳಗಾವಿ ಬಸವರಾಜ ಕಟ್ಟೀಮನಿ
    • ೫೩ ೧೯೮೧  ಚಿಕ್ಕಮಗಳೂರು ಪು.ತಿ.ನರಸಿಂಹಾಚಾರ್
    • ೫೪ ೧೯೮೧  ಮಡಿಕೇರಿ ಶಂ.ಬಾ.ಜೋಶಿ
    • ೫೫ ೧೯೮೨  ಶಿರಸಿ ಗೊರೂರು ರಾಮಸ್ವಾಮಿ ಐಯಂಗಾರ್
    • ೫೬ ೧೯೮೪  ಕೈವಾರ ಎ.ಎನ್.ಮೂರ್ತಿ ರಾವ್
    • ೫೭ ೧೯೮೫  ಬೀದರ್ ಹಾ.ಮಾ.ನಾಯಕ
    • ೫೮ ೧೯೮೭  ಕಲಬುರ್ಗಿ ಸಿದ್ದಯ್ಯ ಪುರಾಣಿಕ
    • ೫೯ ೧೯೯೦  ಹುಬ್ಬಳ್ಳಿ ಆರ್.ಸಿ.ಹಿರೇಮಠ
    • ೬೦ ೧೯೯೧  ಮೈಸೂರು ಕೆ.ಎಸ್. ನರಸಿಂಹಸ್ವಾಮಿ
    • ೬೧ ೧೯೯೨  ದಾವಣಗೆರೆ ಜಿ.ಎಸ್.ಶಿವರುದ್ರಪ್ಪ
    • ೬೨ ೧೯೯೩  ಕೊಪ್ಪ್ಪಳ ಸಿಂಪಿ ಲಿಂಗಣ್ಣ
    • ೬೩ ೧೯೯೪  ಮಂಡ್ಯ ಚದುರಂಗ
    • ೬೫ ೧೯೯೬  ಹಾಸನ ಚನ್ನವೀರ ಕಣವಿ
    • ೬೬ ೧೯೯೭  ಮಂಗಳೂರು ಕಯ್ಯಾರ ಕಿಞ್ಞಣ್ಣ ರೈ
    • ೬೭ ೧೯೯೯  ಕನಕಪುರ ಎಸ್.ಎಲ್.ಭೈರಪ್ಪ
    • ೬೮ ೨೦೦೦  ಬಾಗಲಕೋಟೆ ಶಾಂತಾದೇವಿ ಮಾಳವಾಡ
    • ೬೯ ೨೦೦೨  ತುಮಕೂರು ಯು.ಆರ್. ಅನಂತಮೂರ್ತಿ
    • ೭೦ ೨೦೦೩  ಮೂಡುಬಿದಿರೆ ಕಮಲಾ ಹಂಪನಾ
    • ೭೨ ೨೦೦೬  ಬೀದರ್ ಶಾಂತರಸ ಹೆಂಬೆರಳು
    • ೭೩ ೨೦೦೭  ಶಿವಮೊಗ್ಗ ನಿಸಾರ್ ಅಹಮ್ಮದ್
    • ೭೪ ೨೦೦೮  ಉಡುಪಿ ಎಲ್. ಎಸ್. ಶೇಷಗಿರಿ ರಾವ್
    • ೭೫ ೨೦೦೯  ಚಿತ್ರದುರ್ಗ ಎಲ್. ಬಸವರಾಜು
    • ೭೬ ೨೦೧೦  ಗದಗ ಡಾ. ಗೀತಾ ನಾಗಭೂಷಣ
    • ೭೭ ೨೦೧೧  ಬೆಂಗಳೂರು ಜಿ. ವೆಂಕಟಸುಬ್ಬಯ್ಯ
    • ೭೮ ೨೦೧೨  ಗಂಗಾವತಿ ಸಿ.ಪಿ ಕೃಷ್ಣಕುಮಾರ್
    • ೭೯ ೨೦೧೩  ವಿಜಾಪುರ ಕೋ.ಚನ್ನಬಸಪ್ಪ
    • ೮೦ ೨೦೧೪  ಕೊಡಗು ನಾ ಡಿಸೋಜ
    • ೮೧ ೨೦೧೫  ಶ್ರವಣಬೆಳಗೊಳ ಡಾ.ಸಿದ್ದಲಿಂಗಯ್ಯ
    • ೮೨ ೨೦೧೬ ರಾಯಚೂರು ಡಾ.ಬರಗೂರು ರಾಮಚಂದ್ರಪ್ಪ.
    • ೮೩ ೨೦೧೭ ಮೈಸೂರು ಪ್ರೊ. ಚಂದ್ರಶೇಖರ ಪಾಟೀಲ್.