Monthly Archives: June 2016

ಶಿಕ್ಷಕನೆಂಬ ಏಕಪಾತ್ರಾಭಿನಯಧಾರಿ.

image

ಶಿಕ್ಷಕನೆಂಬ ಏಕಪಾತ್ರಾಭಿನಯಧಾರಿ
02 Jul 2016
 ಬಳಪ ಹಿಡಿದರೆ ಮಾಸ್ತರ್, ಬಿಸಿಯೂಟಕ್ಕೆ ತರಕಾರಿ ತರುವಾಗ ತರಕಾರಿಯವ, ಸೌಟ್ ಹಿಡಿದು ನಿಂತರೆ ಬಾಣಸಿಗ, ವಿಷಲ್ ಹಿಡಿದು ಮೈದಾನಕ್ಕೆ ಇಳಿದರೆ ಆಟದ ಮೇಷ್ಟ್ರು, ಚುನಾವಣೆ ಬಂದಾಗ ಮತಗಟ್ಟೆ ಅಧಿಕಾರಿ…

ಕರೆಂಟ್ ಬಿಲ್ ಕಟ್ಟಲೆಂದು ರಸ್ತೆ ಬದಿಯಲ್ಲಿ ರಭಸವಾಗಿ ಹೋಗುತ್ತಿದ್ದ ನನಗೆ ಬೆನ್ನ ಮೇಲೆ ಮೂಟೆ ಹೊತ್ತುಕೊಂಡು ಬಂದು ಅದನ್ನು ಆಟೋಗೆ ಹಾಕುತ್ತಿದ್ದ ವ್ಯಕ್ತಿಯೊಬ್ಬ ಕಂಡ. ಇನ್ನೂ ಹತ್ತಿರ ಬರುತ್ತಿದ್ದಂತೆ ನನಗೆ ನಿಜಕ್ಕೂ ಶಾಕ್ ಆಗಿತ್ತು! ಅವರು ಬೇರೆ ಯಾರೂ ಅಲ್ಲ ನನಗೆ ಅಕ್ಷರ ಕಲಿಸಿದ್ದ ನನ್ನ ಕನ್ನಡ ಸಾಲಿ ಮಾಸ್ತರ್! ‘ಏನ್ ಸಾರ್ ಇದು ಪುಸ್ತಕದ ಮೂಟೆ ಹೊರ್ತಿದೀರಾ?’ ಅಂದೆ. ‘ಮಕ್ಕಳಿಗೆ ಕೊಡಾಕಾ ಬೇಕಲ್ಲಪ್ಪ ತಮ್ಮಾ ಅದ್ಕಾ’ ಅಂದ್ರು.

‘ಸರ್ ಟಿವಿ, ಪೇಪರ್ನಾಗೆ ಶಾಲೆಯ ಬಟ್ಟೆ ಪುಸ್ತಕ ಸರಬರಾಜು ಅಂತಿರುತ್ತಲ್ಲ ಸರ್ ನೀವ್ ನೋಡಿದ್ರಾ ಇಲ್ಲಿ’ ಅಂತ ರಾಗ ಎಳೆದಾಗ, ಹಾಗೆ ಒಂದು ನಗೆ ಬೀರಿ ‘ಅದೆಲ್ಲ ಗೊತ್ತಿಲ್ಲಪ್ಪ , ನಮ್ ಮೇಲಿವನರು ಬಂದು ತಕೊಂಡಹೋಗ್ರಿ ಅಂದವರಾ ಅದ್ಕಾ ತುಂಬ್ಕೊಂಡು ಹೊರ್ತಿೋದೀನಿ ನೋಡು ಅಂದ್ರು’. ನಾನು ಇದ್ದ ಇನ್ನೆರಡು ಮೂಟೆಗಳನ್ನು ತಂದು ಆಟೋಗೆ ಹಾಕಿದೆ. ಅವರಿಗೆ 56ರಿಂದ57 ವರ್ಷ. ದೇಹ ಸೋತಿದೆ ಅದರೆ ವಿಧಿಯಿಲ್ಲ ಪುಸ್ತಕ ಹೊರಲೇಬೇಕು. ಅವರನ್ನು ಕಳುಹಿಸಿಕೊಟ್ಟು ಒಂದು ಕ್ಷಣ ದಿಡನಾದೆ. ಆತ್ಮೀಯರ ಒಡನಾಟದಿಂದ ಕಂಡು, ಕೇಳಿ ತುಂಬಾ ಹತ್ತಿರದಿಂದ ಬಲ್ಲ ಶಿಕ್ಷಕ ವೃತ್ತಿಯ ಚಿತ್ರಣ ಹಾಗೆ ಕಣ್ಣ ಮುಂದೆ ಬಂತು.

ಅದೇ ಮಾಸ್ತರ್ ನಾನು 5ನೇ ಕ್ಲಾಸ್ ಓದ್ತಿದ್ದಾಗ ಏಕ ಪಾತ್ರಾಭಿನಯ ಹೇಳಿಕೊಟ್ಟಿದ್ದರು. ‘ಇಲ್ಲಿ ನಿಂತರೆ ರಾಮ, ಇಲ್ಲಿ ನಿಂತರೆ ಹನುಮ’ ಅಂತ. ಯಾಕೋ ಆ ಏಕ ಪಾತ್ರಾಭಿನಯದ ಚಿತ್ರಣ ಮತ್ತಷ್ಟು ಕಾಡಿತು. ರಾಮ, ಹನುಮರದ್ದಲ್ಲ ಬದಲಿಗೆ ನಮ್ಮ ಮಾಸ್ತರದು. ಇಲ್ಲಿ ಅವರೇ ಏಕಪಾತ್ರಾಭಿನಯಧಾರಿ. ಬಳಪ ಹಿಡಿದರೆ ಮಾಸ್ತರ್, ಶಾಲೆ ದಾಖಲೆ ಬರೆಯುತ್ತಿದಾಗ್ದ ಅವನೇ ಹೆಡ್ಮಾಸ್ತರ್, ಅಲೆದಲೆದು ಬಿಸಿಯೂಟಕ್ಕೆ ತರಕಾರಿ ತರುವಾಗ ತರಕಾರಿಯವ, ಅಡುಗೆ ಮಾಡುವವರು ರಜೆ ಹೋದಾಗ ಸೌಟ್ ಹಿಡಿದು ನಿಂತರೆ ಬಾಣಸಿಗ, ವಿಷಲ್ ಹಿಡಿದು ಮೈದಾನಕ್ಕೆ ಇಳಿದರೆ ಆಟದ ಮೇಷ್ಟ್ರು, ತಾನೇ ಬೀಗ ತೆಗೆದು ಕಸಗೂಡಿಸುತ್ತಿದ್ದರೆ ಕೆಳ ದರ್ಜೆಯವ, ಬಿಲ್ಡಿಂಗ್ ಕಟ್ಟಿಸುವ ಕಂಟ್ರಾಕ್ಟರ್, ಲೆಕ್ಕ ಪತ್ರ ಇಡುವ ಗುಮಾಸ್ತ, ಸಾರ್ವಜನಿಕರಿಗೆ ಶೌಚಾಲಯ ಕಟ್ಟಿಸಿ ಎಂದು ಸರಕಾರ ತಾಕೀತು ಮಾಡಿದಾಗ ಇವನೇ ಜಾಗೃತಿ ಮೂಡಿಸುವ ಸಮಾಜ ಸೇವಕ, ಚುನಾವಣೆ ಬಂದಾಗ ಮತಗಟ್ಟೆ ಅಧಿಕಾರಿ, ಮತಪಟ್ಟಿಗೆ ಯಾರನ್ನು ಸೇರಿಸಬೇಕು, ಬಿಡಬೇಕು ಅಂತ ಬಂದ್ರೆ ಇವನೆ ಬೂತ್ ಲೆವೆಲ್ ಆಫೀಸರ್, ‘ಗಣತಿಗೆ ಬರ್ರೀ’ ಅಂದ್ರೆ ಬಿಸಿಲಲ್ಲಿ ತಿರುಗಿ ಕುರಿ, ಕೋಳಿ, ದನ, ಜನ ಎಣಿಸುವ ಗಣತಿದಾರ, ಶಾಲೆ ಆರಂಭದಲ್ಲಿ ಬಟ್ಟೆ ಪುಸ್ತಕ ಹೊರುವ ಕೆಲಸದವ, ಶಾಲೆ ಸೋರತೋಡಗಿದರೆ ತಾನೇ ರಿಪೇರಿಗೆ ನಿಲ್ಲುವ ಬಡಗಿ, ಶಾಲೆ ಬಿಟ್ಟ ಮಗುವನ್ನು ಮನೆ ಮನೆಗೆ ತೆರಳಿ ಬೇಡಿ ಕರೆತರುವ ಸಾಮಾಜಿಕ ಕಾರ್ಯಕರ್ತ ಇವೆಲ್ಲಾ ಒಬ್ಬನೆ, ಅವನೊಬ್ಬನೆ. ನೇಮಕ ಹೊಂದುವಾಗ ಕೇವಲ ಶಿಕ್ಷಕ ಆತ.

ನಂತರ ಹಲವು ರೂಪಗಳನ್ನು ತೋರಿಸಲೇಬೇಕು. ನಿಜಕ್ಕೂ ತಾನು ಏನೆಂದು ಪಾಪ ಆ ಶಿಕ್ಷಕನಿಗೆ ಮರೆತೇ ಹೋಗಿರುತ್ತದೆ. ನನ್ನನ್ನು ಕಾಡುವ ಪ್ರಶ್ನೆಯೆಂದರೆ ಆತ ಪಾಠ ಮಾಡುವುದು ಯಾವಾಗ? ಅಷ್ಟೇ ಅಲ್ಲದೆ 1ರಿಂದ7 ನೇ ತರಗತಿಗೆ 40 ಮಕ್ಕಳಿದ್ದರೆ ಇರುವುದು ಇಬ್ಬರೇ ಶಿಕ್ಷಕರು. ಏಳು ತರಗತಿಗಳಲ್ಲಿ ಸುಮಾರು 34 ವಿಷಯಗಳಿರುತ್ತವೆ. ಇಬ್ಬರು ಶಿಕ್ಷಕರು 34 ವಿಷಯಗಳನ್ನು ಬೋಧಿಸಬೇಕು. ಕೇವಲ ಕಲಿಸು ಅಂದರೆ ಹೇಗೋ ಕಲಿಸ ಬಹುದು. ಆದರೆ ಅವರನ್ನು ಕಲಿಸಲು ಬಿಟ್ಟರೆ ತಾನೆ? ಏಕ ಪಾತ್ರಾಭಿನಯಕ್ಕೆ ಎಳೆದೊಯ್ಯಲಾಗುತ್ತದೆ. ಇಷ್ಟೆಲ್ಲಾ ಹೊರೆ ಹೊರೆಸಿ ಶಿಕ್ಷಣದ ಗುಣಮಟ್ಟ ಕುಸಿ ಯುತ್ತದೆ ಎಂದರೆ, ಕುಸಿಯದೆ ಇನ್ನೇನಾದೀತು? ಮಗುವಿನ ಶಿಕ್ಷಣದ ಆರಂಭದ ಬುನಾದಿಯನ್ನು ಗಟ್ಟಿಗೊಳಿಸದೆ ಈ ವ್ಯವಸ್ಥೆ ಕೇವಲ ಶಿಕ್ಷಕನನ್ನು ದೂರುವುದೇತಕೆ? ಬಜೆಟ್ನಲ್ಲಿ ಶಿಕ್ಷಣಕ್ಕೆ ದೊಡ್ಡ ಮೊತ್ತದ ಹಣ ನೀಡುವ ಸರಕಾರ ದುಡ್ಡನ್ನು ಏನು ಮಾಡುತ್ತಿದೆಯೋ ತಿಳಿಯದು.

‘ಕೆಲವು ಶಿಕ್ಷಕರಿಗೆ ಏನೂ ಬರುವುದಿಲ್ಲ’ ಎಂದು ಹಲವರು ಹೇಳುತ್ತಾರೆ. 1985ರಿಂದ90ರಲ್ಲಿ ಮತ್ತು ಅದರ ಈಚೆಗೆ ನೇಮಕವಾದ ಶಿಕ್ಷಕರನ್ನು ಕಾಲಕ್ಕೆ ತಕ್ಕಂತೆ ತರಬೇತುಗೊಳಿಸಲು ಇಲಾಖೆ ಕೈಗೊಂಡ ಕಾರ್ಯ ಕ್ರಮಗಳೆಷ್ಟು? ಇಲಾಖೆಯ ತರಬೇತಿ ಕಾರ್ಯಕ್ರಮಗಳನ್ನು ನಾನು ನೋಡಿದ್ದೇನೆ. ಅಲ್ಲಿಯೇ ಇರುವ ಶಿಕ್ಷಕರ ಪೈಕಿ ಮಾತು ಬಲ್ಲ ಒಬ್ಬರನ್ನು ತೆಗೆದುಕೊಂಡು 4ರಿಂದ5 ದಿನದ ತರಬೇತಿ ಶಾಸ್ತ್ರ ಮುಗಿಸುವ ಇಲಾಖೆ ಕೊನೆಗೂ ದೂರುವುದು ಶಿಕ್ಷಕನನ್ನು. ಶಿಕ್ಷಕರನ್ನು ತರಬೇತುಗೊಳಿಸುವ ಪರಿ ಸಾಕಷ್ಟು ಪ್ರಭಾವಿಯಾಗಿರಬೇಕು ಎಂದು ತಿಳಿಯುವುದು ಯಾವಾಗ? ‘ಏ ನಿಂಗೆ ಯಾವನೋ ಪಾಠ ಹೇಳಿಕೊಟ್ಟಿದ್ದು?’ ಎಂದು ಹಿಂದು ಮುಂದು ಯೋಚಿಸದೇ ಬೈಯುವವರು ಯಾಕೆ ಪೋಷಕರು, ಸಾಮಾಜಿಕ ವ್ಯವಸ್ಥೆ, ರಾಜಕೀಯ ದೊಂಬರಾಟ ವನ್ನು ದೂರಬಾರದು.

ಮಗುವಿನ ಬೆಳವಣಿಗೆಗೆ ಶಿಕ್ಷಕನೊಬ್ಬನೆ ಕಾರಣನಲ್ಲ. ಪರಿಸರ ಕೂಡ ಮುಖ್ಯಪಾತ್ರ ವಹಿಸುತ್ತದೆ. ನಮ್ಮ ಸಾಮಾಜಿಕ ವ್ಯವಸ್ಥೆಯಲ್ಲಿ ಶಿಕ್ಷಕನನ್ನು ನಡೆಸಿಕೊಳ್ಳುವ ರೀತಿ ನಿಜಕ್ಕೂ ಖೇದಕರ. ಸರಕಾರವಂತೂ ಶಿಕ್ಷಕರ ಬೇಡಿಕೆಗೆ ಕ್ಯಾರೆ ಅನ್ನುವುದಿಲ್ಲ. ಸಂಬಳ ಜಾಸ್ತಿ ಮಾಡಿ ಎಂದರೆ 400 ರೂ. ಕೊಡ್ತೀನಿ ಅಂತ ತರಕಾರಿ ವ್ಯಾಪಾರದ ರೀತಿ ಚೌಕಾಸಿ ಮಾಡುತ್ತದೆ. ಒಪ್ಪಿಕೊಳ್ಳದಿದ್ದರೆ ಎಸ್ಮಾ ಮುಂದಿಟ್ಟುಕೊಂಡು ಹೆದರಿಸುತ್ತದೆ. ಎಲ್ಲರೂ ಶಿಕ್ಷರಿಂದಲೇ ಕಲಿತು ಬಂದಿದ್ದೇವೆ ಎಂಬುದನ್ನು ಮರೆತ ಸರಕಾರ ಅವರನ್ನು ಗೇಲಿ ಮಾಡುವ, ಹೆದರಿಸುವ ಕೆಲಸ ಮಾಡುತ್ತದೆ. ಶಿಕ್ಷಕರು ಆರ್ಥಿಕವಾಗಿ ತಮ್ಮ ಬುನಾದಿ ಅಲುಗಾಡುತ್ತ್ತಿದ್ದರೂ ಮಗುವಿನ ಭವ್ಯ ಭವಿಷ್ಯದ ಇಟ್ಟಿಗೆಗಳನ್ನು ಜೋಡಿಸುತ್ತಿದ್ದಾರೆ.

ಇಂದಿಗೂ ಮೇಷ್ಟ್ರ ಜತೆಜತೆಯಲ್ಲೇ ಅಂಟಿಕೊಂಡು ಬಂದಿರುವ ಸ್ಥಿತಿಯೆಂದರೆ ಬಡತನ. ಆತ ಬಡ ಮೇಷ್ಟ್ರು ಅಂತಲೇ ಹೆಚ್ಚು ಪ್ರಸಿದ್ಧಿ. ಜೀವನ ಪೂರ್ತಿ ದುಡಿದರೂ ಸ್ವಂತಕ್ಕೆ ಒಂದು ಸೂರು ಕಟ್ಟಿ ಕೊಳ್ಳಲಾಗದ ಪರಿಸ್ಥಿತಿ ಅವನದು. ಇದರ ಮಧ್ಯ ಕಚೇರಿಗಳಲ್ಲಿ ಅವನನ್ನು ಹಿಂಡಿ ಹಾಕಲಾಗುತ್ತದೆ. ಪೇ ಸ್ಲಿಪ್, ವೇತನ ಬಡ್ತಿ, ಅರಿಯರ್ಸ್ ಮುಂತಾದವುಗಳನ್ನು ಪಡೆಯಲು ಮಾಮೂಲಿ ತೆರಲೇ ಬೇಕಿದೆ. ನಮ್ಮ ವ್ಯವಸ್ಥೆಯಲ್ಲಿ ಉನ್ನತ ಶಿಕ್ಷಣಕ್ಕೆ ಕೊಡುವ ಮಹತ್ವ, ಸಂಬಳ ಸವಲತ್ತುಗಳು ಹೇಗಿವೆ ಎಂದರೆ ಮಣ್ಣಿನಿಂದ ತಳಪಾಯ ಕಟ್ಟಿ ಅದರ ಮೇಲೆ ಬಲಿಷ್ಠ ಉಕ್ಕು ಮತ್ತು ಸಿಮೆಂಟ್ನಿಂದ ಭವ್ಯ ಬಂಗಲೆ ನಿರ್ಮಿಸಿದಂತೆ. ಎರಡು ಅವಧಿಗಳನ್ನು ಬೋಧಿಸಿ ಲಕ್ಷ ಲಕ್ಷ ಎಣಿಸುವ ಉನ್ನತ ವ್ಯವಸ್ಥೆ ಮತ್ತು ಬಹುಪಾತ್ರಗಳನ್ನು ಅಭಿನಯಿಸಿ ಮೂರು ಮತ್ತೊಂದು ಸಾವಿರ ಪಡೆಯುವ ಕೆಳಹಂತದ ವ್ಯವಸ್ಥೆ.

ಈ ಅಸಮಾನತೆಯಿಂದ ಮುಂದೊಂದು ದಿನ ವ್ಯವಸ್ಥೆಯ ಸೌಧ ಕುಸಿದು ಬೀಳುವುದರಲ್ಲಿ ಅನುಮಾನವೇ ಇಲ್ಲ. ಶಿಕ್ಷಣ ಕ್ರಮದ ಬಹುತೇಕ ಕಾರ್ಯಕ್ರಮಗಳು, ಯೋಜನೆಗಳು ಎಸಿ ಕೊಠಡಿಯಲ್ಲಿ ತಯಾರಾಗುತ್ತಿರುವುದು ನಿಜಕ್ಕೂ ವಿಷಾದನೀಯ. ಮಗು, ಶಿಕ್ಷಣ, ಪಠ್ಯಕ್ರಮ, ಚಟುವಟಿಕೆ ಸಂಬಂಧಿ ಚರ್ಚೆ, ಯೋಜನೆ, ತೀರ್ಮಾನಗಳು ಶಿಕ್ಷಕರಿಂದಲೇ ಆಗಬೇಕು. ವಿಮರ್ಶೆಗೆ ಸಾರ್ವಜನಿಕರ ಮುಂದಿಡಬೇಕು. ಶಾಲೆ, ಮಗು, ಕಲಿಕಾ ಸಂಬಂಧಿ ಸಮಸ್ಯೆ ಶಿಕ್ಷಕರಿಗೆ ಗೊತ್ತೇ ಹೊರತು ಅಧಿಕಾರಿಗಳಿಗಲ್ಲ. ಇದನ್ನು ಪ್ರಶ್ನಿಸಲು ಹೋದ ನಮ್ಮ ಶಿಕ್ಷಕರಿಗೆ ‘ನಾವು ಹೇಳಿದಂತೆ ಕೇಳಿ’ಎಂಬ ಉತ್ತರ ಸಿಕ್ಕಿದ್ದೂ ಇದೆ.

ಶಿಕ್ಷಣ ಇಲಾಖೆಗೆ ಹರಿದು ಬರುತ್ತಿರುವಷ್ಟು ಪ್ರತಿಭಾವಂತರು ಯಾವ ಇಲಾಖೆಗೂ ಹೋಗುತ್ತಿಲ್ಲ. ಕಲಾ ವಿಭಾಗದಲ್ಲಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳು ಸಾಮಾನ್ಯವಾಗಿ ಆಯ್ದುಕೊಳ್ಳುವುದು ಶಿಕ್ಷಣ ಇಲಾಖೆಯನ್ನು. ಅವರನ್ನು ಯಶಸ್ವಿಯಾಗಿ ಬಳಸಿಕೊಳ್ಳುವಲ್ಲಿ ಇಲಾಖೆ ಸೋತಿದೆ ಎಂಬ ಅನುಮಾನ ಕಾಡದೆ ಇರದು. ಕೆಎಎಸ್ನಂಥ ಹುದ್ದೆಗಳಿಗೆ ಹೆಚ್ಚು ಆಯ್ಕೆಯಾಗುತ್ತಿರುವವರು ಶಿಕ್ಷಕರು ಎಂಬ ಸತ್ಯ ಎಷ್ಟೋ ಜನಕ್ಕೆ ಗೊತ್ತೇ ಇಲ್ಲ. ಹಾಗಾದರೆ ಶಿಕ್ಷರೆಲ್ಲಾ ಪರಿಪೂರ್ಣರೇ? ಅವರಲ್ಲಿ ಯಾವುದು ತಪ್ಪಿಲ್ಲವೇ ಎಂದು ಕೇಳಿದರೆ, ಇರಬಹುದು. ಯಾವುದೋ ಒಂದೆರಡು ಉದಾಹರಣೆಗಳನ್ನು ತೆಗೆದು ಕೊಂಡು ಇಡೀ ಶಿಕ್ಷಕವರ್ಗವನ್ನು ದೂಷಿಸುವುದು ಸಲ್ಲ.

ಶಿಕ್ಷಕರು ಮಾಡಿದರು ಎನ್ನಲಾದ ತಪ್ಪುಗಳ ಸತ್ಯಾಸತ್ಯತೆ ಎಷ್ಟೋ ಬಾರಿ ಆಚೆ ಬರದಿರುವುದು ವಿಷಾದನೀಯ. ಶಿಕ್ಷಕರ ಸಣ್ಣ ಪುಟ್ಟ ತಪ್ಪುಗಳನ್ನು ಆತ ಶಿಕ್ಷಕನೆಂಬ ಕಾರಣಕ್ಕೆ ಮತ್ತಷ್ಟು ವೈಭವೀಕರಿಸಲಾಗುತ್ತಿದೆ. ಅಂತಹ ಶಿಕ್ಷಕರ ವಿರುದ್ಧ ಇಲಾಖೆ ವಿಚಾರಣೆ ನಡೆಸಿ ಶಿಕ್ಷೆ ನೀಡಲಿ. ಅದನ್ನು ಬಿಟ್ಟು ಇಡೀ ಶಿಕ್ಷಕರನ್ನು ಒಂದೇ ತಕ್ಕಡಿಯಲ್ಲಿ ತೂಗುವುದು ಸಲ್ಲ. ಶಿಕ್ಷಕರು 11ಕ್ಕೆ ಬರ್ತಾರೆ 3ಕ್ಕೆ ಹೋಗ್ತಾರೆ ಎಂಬ ದೂರಿದೆ. ಅವರು ಯಾವ ಕಾರಣಕ್ಕೆ ಹೋದರು? ಎಲ್ಲಿಗೆ ಹೋದರು? ಎಂಬುದನ್ನು ತಿಳಿದು ಜನರು ಮಾತಾನಾಡುತ್ತಾರೆಯೇ? ‘ಕ್ಲಸ್ಟರ್ನಲ್ಲಿ ಮೀಟಿಂಗ್ ಇದೆ 2 ಗಂಟೆಗೆ ಬನ್ನಿ’, ‘ಬಿಇಓ ಮೀಟಿಂಗ್ ಇದೆ ತಕ್ಷಣ ಬನ್ನಿ’, ‘ಆ ಮಾಹಿತಿಯನ್ನ ತಕ್ಷಣ ತಂದುಕೊಡಿ’ ಎಂಬ ಕಾರ್ಯದ ಬಗ್ಗೆ ಜನರಿಗೆ ತಿಳಿದಿದೆಯೇ? ಅವರಿಗೆ ಕಾಣಿಸುವುದು 3 ಗಂಟೆ ತೋರಿಸುವ ಗಡಿಯಾರ ಮತ್ತು ಹೋಗುತ್ತಿರುವ ಶಿಕ್ಷಕ ಅಷ್ಟೇ! ತನ್ನ ಏಕಪಾತ್ರಾಭಿನಯಕ್ಕೆ 24ಗಂಟೆ ಸಾಲದೆ ಹೋದಾಗ ಶಾಲೆ ಮತ್ತು ಇತರೆ ಕೆಲಸಗಳನ್ನು ನಿಭಾಯಿಸುವುದು ಹೇಗೆ? ಅವನಿಗೂ ವೈಯಕ್ತಿಕ ಬದುಕು ಇದೆ ಎಂಬುದನ್ನು ಬಹುತೇಕರು ಮರೆತಂತಿದೆ.

ಈ ಬಹುಪಾತ್ರಗಳ ನಡುವೆಯೂ ಅವನಿಗೆ ಅಪ್ಪ, ಅಮ್ಮ, ಹೆಂಡತಿ, ಗಂಡ, ಮಕ್ಕಳಿದ್ದಾರೆ. ಅವರಿಗೂ ಸಮಯ ಕೊಡಬೇಕಲ್ಲವೇ? ಶಿಕ್ಷಕನೊಳಗೆ ಒಬ್ಬ ಮನುಷ್ಯನಿದ್ದಾನೆ. ಅವನಿಗೂ ಆಸೆ, ಆಕಾಂಕ್ಷೆಗಳಿವೆ ಎಂಬುದನ್ನು ಏಕೆ ಅರ್ಥ ಮಾಡಿಕೊಳ್ಳುವುದಿಲ್ಲ. ಶಿಕ್ಷಕನಾದ ಮಾತ್ರಕ್ಕೆ ಅವನು ಪರಿತ್ಯಕ್ತ ಸನ್ಯಾಸಿಯೇ? ಶಿಕ್ಷಕ ರನ್ನು ಎಲ್ಲರಂತೆ ಕಾಣಲು ಬಯಸಿ. ಮಕ್ಕಳ ಉಳಿವಿಗಾಗಿ, ಗುಣಮಟ್ಟದ ಶಿಕ್ಷಣಕ್ಕಾಗಿ, ಶಾಲೆಗಳ ಉಳಿವಿಗಾಗಿ ರಾಜ್ಯ ಮಟ್ಟದಲ್ಲಿ ಬೃಹತ್ ಕ್ರಾಂತಿ ಆಗಲೇ ಬೇಕಿದೆ.

ಬಹುದಿನ ಗಳಿಂದ ಕೂಡಿರುವ ಕೊಳೆಯನ್ನು ತೊಳೆಯಬೇಕಿದೆ. ಕಪ್ಪು ಕವಿದಿರುವ ನಮ್ಮ ಶಿಕ್ಷಣ ವ್ಯವಸ್ಥೆ ಮತ್ತು ಶಿಕ್ಷಕನ ಬದುಕಿಗೆ ಭಾಗ್ಯದ ಬೆಳಕನ್ನು ತೋರಿಸಬೇಕಿದೆ. ಒಂದು ನಾಡು ಎಂದಿಗೂ ಕೂಡ ಅಲ್ಲಿನ ಶಿಕ್ಷಕರನ್ನು ಮೀರಿ ಬೆಳೆಯಲು ಸಾಧ್ಯ ವಿಲ್ಲವಂತೆ. ಅದನ್ನು ಅರಿತರೆ ಮಾತ್ರ ನಾವು ಅಭಿವೃದ್ಧಿಯ ಕಡೆ ಒಂದು ಯಶಸ್ವಿ ದಾಪುಗಾಲಿಡಲು ಸಾಧ್ಯ.

ಸದಾಶಿವ್ ಸೊರಟೂರು.

ವಿಶೇಷ ರೀತಿಯಲ್ಲಿ ಗುರುತಿಸಿಕೊಂಡವರು, ನಮ್ಮ ಸಾಧಕರು.

@

image

ಶ್ರೀನಿವಾಸ ಕಸ್ಬೆ.
👆ಕೂಲಿಕಾರ ಮಕ್ಕಳ ಬಾಳಿಗೆ ಬೆಳಕಾದ ಶಿಕ್ಷಕ ಶ್ರೀನಿವಾಸ ಕಸ್ಬೆ.GLPS ಗುಡ್ಡದಕ್ಯಾಂಪ್, ಗಂಗಾವತಿ.

@

@ ಸುಮಿತ್ರಾ ಕೋಳೂರ್.

ನಂಬಿದ್ರೆ ನಂಬಿ, ಸರಕಾರೀ ಶಾಲೆ ಟೀಚರ್ ಇವರು !
ಕಾಡುದಾರಿಯಲ್ಲಿ ಹತ್ತು ಕಿಮೀ ಕಾಲ್ನಡಿಗೆಯಲ್ಲೇ ಹೋಗಿ ಪಾಠ ಹೇಳುವ ಶಿಕ್ಷಕಿ ಸುಮಿತ್ರಾ ಕೋಳೂರು

image

ಹುಬ್ಬಳ್ಳಿ,ಸೆ.೮: ಕರ್ನಾಟಕದ ಧೋಮನ ಹಟ್ಟಿ ಗ್ರಾಮದ ಸರಕಾರಿ ಪ್ರೈಮರಿ ಶಾಲೆಯ ಅಧ್ಯಾಪಕಿ ಸುಮಿತ್ರಾ ಕೊಲೂರು ತನ್ನ ಮನೆಯಿಂದ ಹತ್ತು ಕಿಲೋಮೀಟರ್ ದೂರವಿರುವ ಶಾಲೆಗೆ ತಲುಪಲು ಸರಿಯಾದ ವಾಹನ ಸೌಕರ್ಯವಿಲ್ಲದ್ದರಿಂದಾಗಿ ದಿನಾಲೂ ನಡೆದು ಬರುತ್ತಿದ್ದಾರೆ. ಅದು ಕೂಡ ಅರಣ್ಯಪ್ರದೇಶಗಳಲ್ಲಿ ಹಾದು ಬರಬೇಕಾಗಿದೆ. ಕಳೆದ ಹತ್ತುವರ್ಷಗಳಿಂದ ಅವರು ಹೀಗೆ ನಡೆದೇ ತಾನು ಕಲಿಸುವ ಶಾಲೆಗೆ ತಲುಪುತ್ತಿದ್ದಾರೆ ಎಂದು ವರದಿಯೊಂದು ತಿಳಿಸಿದೆ. ೨೦೦೫ರಲ್ಲಿ ಈ ಶಾಲೆಗೆ ಸುಮಿತ್ರಾ ಶಿಕ್ಷಕಿಯಾಗಿ ನೇಮಕವಾಗಿದ್ದರು. ಮನೆಯಿಂದ ಕೆಲವು ಕಿಲೋಮೀಟರ್ ದೂರದ ಡೋರಿವರೆಗೆ ಬಸ್ಸಿದೆ. ಅಲ್ಲಿಂದ ಶಾಲೆಗೆ ತಲುಪಲು ಇವರು ನಡೆದೇ ಬರಬೇಕಾಗಿದೆ. ಇದರಲ್ಲಿ ಎರಡು ಕಿ.ಮೀ.ವರೆಗೆ ಮಾತ್ರ ಸರಿಯಾದ ರಸ್ತೆ ಇದೆ.
ನಂತರ ಕಾಡು ಪ್ರದೇಶ. ಕಾಡು ಪ್ರಾಣಿಗಳ ಹೆದರಿಕೆಯೊಂದಿಗೆ ಅವರು ಶಾಲೆಗೆ ಬಂದೇ ಬರುತ್ತಿದ್ದಾರೆ. ಮಕ್ಕಳನ್ನು ನೆನವಾಗ ಎಲ್ಲ ಹೆದರಿಕೆಯೂ ಹೋಗುತ್ತದೆ ಎಂದು ಅವರು ಹೇಳುತ್ತಾರೆ. ಮಳೆಗಾಲದ ಪ್ರಯಾಣವಂತೂ ಮತ್ತಷ್ಟು ಕಷ್ಟಕರವಾಗಿರುತ್ತದೆ. ಕೆಲವೊಮ್ಮೆ ಅವರ ಪತಿ ಡೋರಿವರೆಗೆ ಜೊತೆಯಲ್ಲಿ ಬರುತ್ತಾರೆ. ಆನಂತರ ಸುಮಿತ್ರಾ ಕಾಡಿನ ಹಾದಿಯಲ್ಲಿ ಒಬ್ಬರೇ ನಡೆಯುತ್ತಾರೆ. ಒಂದು ದಿವಸ ಅವರ ಮುಂದೆ ಚಿರತೆಯೊಂದು ಹಾಜರಾಗಿತ್ತು. ಆದರೆ ಯಾವುದೇ ಅಪಾಯ ಮಾಡದೆ ಹೊರಟು ಹೋಗಿತ್ತು ಎಂದು ಸುಮಿತ್ರಾ ಹೇಳುತ್ತಾರೆ. ಧೋಪನ್ ಹಟ್ಟಿ ಕಾಡಿನೊಳಗಿನ ಒಂದು ಪುಟ್ಟಗ್ರಾಮವಾಗಿದೆ. ಇಲ್ಲಿ ೪೦೦ಕ್ಕೂ ಕಡಿಮೆ ಜನಸಂಖ್ಯೆಯಿದೆ. ಹೆಚ್ಚಿನವರ ಕಸಬು ಕೂಲಿನಾಲಿ ಮಾಡುವುದು ಆಗಿದೆ. ತಾನು ಶಾಲೆಗೆ ಬರದಿದ್ದರೆ ಅಲ್ಲಿನ ಮಕ್ಕಳ ಕಲಿಕೆ ಸ್ಥಗಿತಗೊಳ್ಳುತ್ತದೆ ಎಂದು ಸುಮಿತ್ರಾ ಟೀಚರ್ ಹೇಳುತ್ತಾರೆ.

@
image

ಮಂಜುಳಾ ರುದ್ರಪ್ಪ ಲಮಾಣಿಯವರ ವೃತ್ತಿ ಪ್ರೀತಿ!
ಪತಿ ಸಚಿವರಾದರೂ ವೃತ್ತಿ ಬಿಡದ ಪತ್ನಿ!

ಕರಿಯಪ್ಪ ಅರಳಿಕಟ್ಟಿ ರಾಣೆಬೆನ್ನೂರ (ಹಾವೇರಿ)

ಪತಿ ಒಂದು ಬಾರಿ ಜಿಪಂ ಸದಸ್ಯ. ಎರಡು ಬಾರಿ ಶಾಸಕ. ಸದ್ಯ ಸಿದ್ದರಾಮಯ್ಯ ಸರ್ಕಾರದಲ್ಲಿ ರಾಜ್ಯ ಜವಳಿ ಮತ್ತು ಮುಜರಾಯಿ ಸಚಿವ. ಆದರೂ ಶಿಕ್ಷಕ ವೃತ್ತಿ ಬಿಡದ ಪತ್ನಿ…! ಹೌದು. 30 ವರ್ಷಗಳ ರಾಜಕಾರಣದಲ್ಲಿ ತಮ್ಮದೇ ಚಾಪು ಮೂಡಿಸಿರುವ ಸಚಿವ ರುದ್ರಪ್ಪ ಲಮಾಣಿ ಅವರ ಪತ್ನಿ ಮಂಜುಳಾ ಶಿಕ್ಷಕಿಯಾಗಿಯೇ ಕಾರ್ಯನಿರ್ವಹಿಸುತ್ತಿದ್ದು ಇತರರಿಗೆ ಮಾದರಿಯಾಗಿದ್ದಾರೆ.

ಇಂದು ಜನಪ್ರತಿನಿಧಿಗಳಾದವರ ಪತ್ನಿಯರು ಸಂಘ-ಸಂಸ್ಥೆಗಳನ್ನು ಕಟ್ಟಿಕೊಂಡು ರಾಜಕೀಯ ಅಖಾಡಕ್ಕೆ ಧುಮುಕುವುದೇ ಹೆಚ್ಚು. ಆದರೆ ಸಚಿವ ರುದ್ರಪ್ಪ ಲಮಾಣಿ, ಜಿಲ್ಲಾ ಪರಿಷತ್ ಸದಸ್ಯರಾಗಿ ಆಯ್ಕೆಯಾಗುವ ಮೂಲಕ ರಾಜಕೀಯ ಜೀವನ ಆರಂಭಿಸಿ 2 ಬಾರಿ ಶಾಸಕರಾಗಿ ಸದ್ಯ ಸಚಿವರಾಗಿದ್ದಾರೆ. ಆದರೂ ಅವರ ಪತ್ನಿ ಮಂಜುಳಾ ಲಮಾಣಿ ರಾಜಕೀಯದಿಂದ ದೂರವಿದ್ದು, ಮಕ್ಕಳಿಗೆ ಪಾಠ ಹೇಳಿಕೊಡುತ್ತಿದ್ದಾರೆ.

ಕಲಾ ವಿಭಾಗದಲ್ಲಿ ಪದವಿ ಪಡೆದಿರುವ ಮಂಜುಳಾ ನಗರದ ಹರಿಜನ ಮತ್ತು ಗಿರಿಜನ ಕನ್ನಡ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 1988ರಿಂದಲೂ ಶಿಕ್ಷಕಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಮೂಲತಃ ಚಿತ್ರದುರ್ಗ ಜಿಲ್ಲೆ ಹೊಳಲ್ಕೇರೆ ತಾಲೂಕು ಲಂಬಾಣಿಹಟ್ಟಿಯಲ್ಲಿ ಜನಿಸಿದ ಇವರು ಖಂಡೇರಾಯನಹಳ್ಳಿ ನಿವಾಸಿ ರುದ್ರಪ್ಪ ಲಮಾಣಿ ಅವರೊಂದಿಗೆ 1990ರಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಆಗ ರುದ್ರಪ್ಪ ಲಮಾಣಿ ತಾಲೂಕಿನ ಮೇಡ್ಲೇರಿ ಜಿಲ್ಲಾ ಪರಿಷತ್ ಕ್ಷೇತ್ರದ ಸದಸ್ಯರಾಗಿದ್ದರು. ಗೌರಿಶಂಕರ ನಗರದಲ್ಲಿ ಮನೆಯಿದ್ದು, ಮಂಜುಳಾ ನಿತ್ಯವೂ ಆಟೋದಲ್ಲಿ ಸಂಚರಿಸುತ್ತಿದ್ದಾರೆ. ಮಕ್ಕಳೊಂದಿಗೆ ಊಟ, ಅವರನ್ನು ಪ್ರವಾಸಕ್ಕೆ ಕರೆದುಕೊಂಡು ಹೋಗುವುದು ಸೇರಿ ಸದಾ ಮಕ್ಕಳೊಂದಿಗೆ ಬೆರೆಯುವುದು ಇವರಿಗೆ ಇಷ್ಟದ ಕೆಲಸ.

ಶಿಕ್ಷಕಿ ಮಂಜುಳಾ ಅವರು ಅಭಿಮಾನ ಹಾಗೂ ಸೇವೆ ಎಂದು ಪರಿಗಣಿಸಿ ಶಾಲೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ತಾಪಂ, ಜಿಪಂ ಸದಸ್ಯರಾಗಿ ಆಯ್ಕೆಯಾದವರ ಪತ್ನಿಯರು ಇದ್ದ ಕೆಲಸ ಬಿಡುವ ಇಂಥ ದಿನದಲ್ಲಿ ಮಂಜುಳಾ ಅವರ ನಿರ್ಧಾರ ಇತರರಿಗೆ ಮಾದರಿ.
-ಶಂಕರಗೌಡ ಸಿದ್ದನಗೌಡ್ರ ಮುಖ್ಯಾಧ್ಯಾಪಕ

“ಪತಿಗೆ ಸಚಿವ ಸ್ಥಾನ ದೊರಕಿರುವುದು ಸಂತಸ ತಂದಿದೆ. ಆದರೆ ನಾನು ರಾಜಕೀಯದಿಂದ ದೂರವಿದ್ದೇನೆ. ಪತಿ ಸಚಿವ ಅಷ್ಟೇ ಅಲ್ಲ. ಇನ್ನೂ ಹೆಚ್ಚಿನ ಎತ್ತರಕ್ಕೆ ಬೆಳೆಯಲಿ ಎಂಬುದು ನನ್ನ ಅಭಿಲಾಷೆ. ನಾನು ಮಾತ್ರ ಶಿಕ್ಷಣಕ್ಕಾಗಿಯೇ ನನ್ನ ಜೀವನವನ್ನು ಮೀಸಲಿಟ್ಟಿದ್ದು, ಯಾವುದೇ ಕಾರಣಕ್ಕೂ ವೃತ್ತಿ ಬಿಡಲ್ಲ”
-ಮಂಜುಳಾ ಲಮಾಣಿ ಶಿಕ್ಷಕಿ.

“ಇ-ಜ್ಞಾನ” ಮಾಹಿತಿ ತಂತ್ರಜ್ಞಾನ.ಜೂನ್- 2016 ರ ಅಂಕಣಗಳು.

image

ಟಿ.ಜಿ. ಶ್ರೀನಿಧಿ, ಕನ್ನಡದಲ್ಲಿ ಮಾಹಿತಿ ತಂತ್ರಜ್ಞಾನದ ಕುರಿತು ಬರೆಯುತ್ತಿರುವ ಕೆಲವೇ ಕೆಲವು ಲೇಖಕರಲ್ಲೊಬ್ಬರು. ವಿಜ್ಞಾನ ಮತ್ತು ತಂತ್ರಜ್ಞಾನ ಸಂವಹನಕ್ಕೆ ಮೀಸಲಾದ ಕನ್ನಡ ಜಾಲತಾಣ ‘ಇಜ್ಞಾನ ಡಾಟ್ ಕಾಮ್ (www.ejnana.com)ನ ರೂವಾರಿ ಕೂಡ ಹೌದು. ಮೈಸೂರಿನ ಶ್ರೀ ಜಯಚಾಮರಾಜೇಂದ್ರ ಕಾಲೇಜ್ ಆಫ್ ಇಂಜಿನಿಯರಿಂಗ್​ನಿಂದ ಬಿಇ ಪದವಿ, ಬಿಟ್ಸ್ ಪಿಲಾನಿಯಿಂದ ಎಂಎಸ್ ಸ್ನಾತಕೋತ್ತರ ಪದವಿ ಪಡೆದಿದ್ದು ಪ್ರಸ್ತುತ ಬೆಂಗಳೂರಿನ ಬಹುರಾಷ್ಟ್ರೀಯ ಸಂಸ್ಥೆಯೊಂದರಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. 600ಕ್ಕೂ ಹೆಚ್ಚು ಪ್ರಕಟಿತ ಲೇಖನ, ಅಂಕಣಗಳನ್ನು ಬರೆದಿರುವ ಶ್ರೀನಿಧಿ, 10ಕ್ಕೂ ಹೆಚ್ಚು ಪುಸ್ತಕಗಳನ್ನು ಬರೆದಿದ್ದಾರೆ. 2011ರಲ್ಲಿ ಪ್ರಕಟವಾದ ‘ತಿನ್ನಲಾಗದ ಬಿಸ್ಕತ್ತು, ನುಂಗಲಾಗದ ಟ್ಯಾಬ್ಲೆಟ್ಟು’ ಕೃತಿಗೆ ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿಯ ‘ಶ್ರೇಷ್ಠ ಲೇಖಕ’ ಪ್ರಶಸ್ತಿ ದೊರೆತಿದೆ. ಈ ಹಿಂದೆ ವಿಜಯವಾಣಿಯಲ್ಲಿನ ‘ಯಾವುದನ್ ಕೊಳ್ಳಲಿ?’, ‘ಈ ಹೊತ್ತು ಛಿಲೋಕ’ ಅಂಕಣಗಳ ಮೂಲಕ ಪರಿಚಿತರಾಗಿದ್ದ ಟಿ.ಜಿ. ಶ್ರೀನಿಧಿ, ‘ಇ-ಜ್ಞಾನ’ ಅಂಕಣದ ಮೂಲಕ ಓದುಗರಿಗೆ ಮತ್ತೊಮ್ಮೆ ಹತ್ತಿರವಾಗುತ್ತಿದ್ದಾರೆ. ಕಂಪ್ಯೂಟರ್ ತಂತ್ರಜ್ಞಾನಕ್ಕೆ ಸಂಬಂಧಿಸಿದಂತೆ ನಾವು ದಿನನಿತ್ಯ ಇಂಟರ್​ನೆಟ್, ಕ್ಲೌಡ್ ಕಂಪ್ಯೂಟಿಂಗ್, ಸಾಫ್ಟ್​ವೇರ್, ಆನ್​ಲೈನ್ ಶಾಪಿಂಗ್… ಇಂತಹ ಎಷ್ಟೋ ಪದಗಳನ್ನು ಕೇಳುತ್ತಲೇ ಇರುತ್ತೇವೆ. ಆದರೆ ಅವುಗಳ ಅರ್ಥ, ಕಾರ್ಯವಿಧಾನಗಳು ಮಾತ್ರ ಗೊತ್ತಿರುವುದಿಲ್ಲ. ಕಂಪ್ಯೂಟರ್ ಸಂಬಂಧಿ ವಿಷಯಗಳನ್ನು ಸರಳವಾಗಿ ವಿವರಿಸುತ್ತ, ಗ್ರಾಮೀಣ ಭಾಗದ ಜನಸಾಮಾನ್ಯರವರೆಗೂ ಮಾಹಿತಿ ತಂತ್ರಜ್ಞಾನವನ್ನು ಸವಿಸ್ತರಿಸುವುದು ‘ಇ-ಜ್ಞಾನ’ ಅಂಕಣದ ಉದ್ದೇಶ.ಈ ಅಂಕಣದ ಉಪಯೋಗ ಎಲ್ಲರೂ ಪಡೆದುಕೂಳ್ಳಲಿ ಎಂಬ ಆಶಯದೊಂದಿಗೆ ಈ ಬ್ಲಾಗ್ ದಲ್ಲಿ ಸಂಗ್ರಹಿಸಿದ್ದೇನೆ.
@ ಪೋತರಾಜ ಪೋತರದ.

***
1-6-16
ಇ-ಮೇಲ್ ಲೋಕದ ಕಾರ್ಬನ್ ಕಾಪಿ…
ಇ-ಮೇಲ್ ಕಳುಹಿಸುವಾಗ ಸಂದೇಶ ತಲುಪಬೇಕಾದವರ ವಿಳಾಸ ದಾಖಲಿಸಲು ಮೂರು ಆಯ್ಕೆಗಳಿರುವುದನ್ನು ನೋಡಿರಬಹುದು: ಟು, ಸಿಸಿ ಹಾಗೂ ಬಿಸಿಸಿ. ನಮ್ಮ ಸಂದೇಶ ಯಾರಿಗೆ ತಲುಪಬೇಕೋ ಅವರ ಇಮೇಲ್ ವಿಳಾಸವನ್ನು ಟು ವಿಭಾಗದಲ್ಲಿ ದಾಖಲಿಸುತ್ತೇವೆ. ಕಳುಹಿಸುತ್ತಿರುವ ಸಂದೇಶದ ಬಗೆಗೆ ಬೇರೆ ಯಾರಿಗಾದರೂ ಮಾಹಿತಿ ನೀಡಬೇಕು ಎನ್ನುವುದಾದಲ್ಲಿ ಅವರ ವಿಳಾಸವನ್ನು ಸಿಸಿ (ಕಾರ್ಬನ್ ಕಾಪಿ) ವಿಭಾಗದಲ್ಲಿ ಬರೆಯಬಹುದು. ಸಿಸಿ ವಿಭಾಗದಲ್ಲಿ ನೀವು ಯಾರ ಇ-ಮೇಲ್ ವಿಳಾಸವನ್ನು ದಾಖಲಿಸುತ್ತೀರೋ ಅವರಿಗೆ ಆ ಸಂದೇಶದ ಒಂದು ಪ್ರತಿ ತಲುಪುತ್ತದೆ. ಇ-ಮೇಲ್ ಸಂದೇಶ ಯಾರಿಗೆಲ್ಲ ಹೋಗಿದೆ ಎನ್ನುವ ವಿಷಯ ಟು ಹಾಗೂ ಸಿಸಿ ವಿಭಾಗ ದಲ್ಲಿರುವ ಎಲ್ಲರಿಗೂ ತಿಳಿಯುತ್ತದೆ. ಇ-ಮೇಲ್ ಸಂದೇಶವನ್ನು ಯಾರಿಗೆ ಕಳುಹಿಸುತ್ತಿದ್ದೀರಿ ಎನ್ನುವುದು ಬೇರೆಯವರಿಗೆ ತಿಳಿಯದಂತೆ ಮಾಡುವುದೂ ಸಾಧ್ಯ. ಇದಕ್ಕಾಗಿ ವಿಳಾಸಗಳನ್ನು ಬಿಸಿಸಿ (ಬ್ಲೈಂಡ್ ಕಾರ್ಬನ್ ಕಾಪಿ) ವಿಭಾಗದಲ್ಲಿ ದಾಖಲಿಸಿದರೆ ಸಾಕು, ನಿಮ್ಮ ಸಂದೇಶದ ಪ್ರತಿಗಳನ್ನು ಬೇರೆ ಯಾರಿಗೆಲ್ಲ ಕಳುಹಿಸಿದ್ದೀರಿ ಎನ್ನುವ ವಿಷಯ ಆ ಸಂದೇಶವನ್ನು ಪಡೆದುಕೊಳ್ಳುವವರಿಗೆ ತಿಳಿಯುವುದಿಲ್ಲ.

ನಿಮ್ಮ ಸಂದೇಶವನ್ನು ಒಂದೇಬಾರಿ ಬಹಳ ಜನರಿಗೆ ಕಳುಹಿಸುವಾಗ (ಆಮಂತ್ರಣ ಪತ್ರ ಇತ್ಯಾದಿ) ಬಿಸಿಸಿ ಆಯ್ಕೆ ಬಳಸುವುದು ಒಳ್ಳೆಯದು. ಹೀಗೆ ಮಾಡುವುದರಿಂದ ಓದುಗರು ಅನಗತ್ಯವಾಗಿ ರಿಪ್ಲೈ ಆಲ್ ಬಳಸಿ ಎಲ್ಲರಿಗೂ ಉತ್ತರಿಸುವುದನ್ನು ತಪ್ಪಿಸಬಹುದು.
***

2-6-16
ಎಕ್ಸಿಫ್ ಎಂದರೇನು?

ಫೇಸ್​ಬುಕ್​ನಲ್ಲಿ ಚೆಂದದ ಛಾಯಾಚಿತ್ರವೊಂದನ್ನು ಸೇರಿಸಿದಾಗ ಅದನ್ನು ಹಂಚಿಕೊಂಡವರು ಅಥವಾ ಚಿತ್ರವನ್ನು ಮೆಚ್ಚಿದವರು ಚಿತ್ರದ ಎಕ್ಸಿಫ್ (ಉಗಿಐಊ) ಡೇಟಾದ ಬಗ್ಗೆ ಮಾತನಾಡುವುದನ್ನು ನೀವು ಗಮನಿಸಿರಬಹುದು.

ಎಕ್ಸಿಫ್ ಎನ್ನುವುದು ‘ಎಕ್ಸ್​ಚೇಂಜಬಲ್ ಇಮೇಜ್ ಫೈಲ್ ಫಾರ್ವ್ಯಾಟ್’ ಎಂಬ ಹೆಸರಿನ ಹ್ರಸ್ವರೂಪ. ಡಿಜಿಟಲ್ ಕ್ಯಾಮರಾ ಬಳಸಿ ಕ್ಲಿಕ್ಕಿಸಿದಾಗ ಅದರ ಮೆಮೊರಿಯಲ್ಲಿ ಚಿತ್ರ ಉಳಿದುಕೊಳ್ಳುತ್ತದಲ್ಲ, ಆ ಚಿತ್ರದ ಜತೆಗೆ ಉಳಿಸಲಾಗುವ ಹೆಚ್ಚುವರಿ ಮಾಹಿತಿಯೇ ಎಕ್ಸಿಫ್. ಚಿತ್ರ ಕ್ಲಿಕ್ಕಿಸಿದ್ದು ಯಾವಾಗ, ಉಪಯೋಗಿಸಿದ ಕ್ಯಾಮರಾ ಯಾವುದು, ಬಳಸಿದ ಸೆಟ್ಟಿಂಗ್ (ಐಎಸ್​ಒ, ಶಟರ್​ಸ್ಪೀಡ್, ಅಪರ್ಚರ್ ಇತ್ಯಾದಿ) ಏನು ಎನ್ನುವ ವಿವರವೆಲ್ಲ ಎಕ್ಸಿಫ್ ಡೇಟಾದಲ್ಲಿರುತ್ತದೆ. ಅಷ್ಟೇ ಅಲ್ಲ, ನಿಮ್ಮ ಕ್ಯಾಮರಾದಲ್ಲಿ (ಮೊಬೈಲ್ ಕ್ಯಾಮರಾ ಸೇರಿದಂತೆ) ಜಿಪಿಎಸ್ ಸೌಲಭ್ಯ ಬಳಸುತ್ತಿದ್ದರೆ ಚಿತ್ರ ಕ್ಲಿಕ್ಕಿಸಿದ್ದು ಎಲ್ಲಿ ಎನ್ನುವ ಮಾಹಿತಿಯೂ ಇದರಲ್ಲಿ ಸೇರಿಕೊಳ್ಳುತ್ತದೆ.

ಚಿತ್ರಗಳನ್ನು ವೀಕ್ಷಿಸುವ ಅಥವಾ ಸಂಪಾದಿಸುವ ಹಲವು ತಂತ್ರಾಂಶಗಳಲ್ಲಿ ನೀವು ಚಿತ್ರದ ಎಕ್ಸಿಫ್ ವಿವರಗಳನ್ನು ನೋಡಬಹುದು. ಕೆಲವೊಮ್ಮೆ ಚಿತ್ರದ ಬಗ್ಗೆ ಇಷ್ಟೆಲ್ಲ ವಿವರ ಹಂಚಿಕೊಳ್ಳುವುದು ಅನಗತ್ಯ ಎನಿಸುತ್ತದಲ್ಲ, ಅಂತಹ ಸಂದರ್ಭಗಳಲ್ಲಿ ಚಿತ್ರದಿಂದ ಎಕ್ಸಿಫ್ ವಿವರಗಳನ್ನು ತೆಗೆದುಹಾಕಲು ಅನುವು ಮಾಡಿಕೊಡುವ ತಂತ್ರಾಂಶಗಳೂ ಇವೆ (ವಿವರಗಳಿಗೆ ‘ರಿಮೂವ್ ಎಕ್ಸಿಫ್’ ಎಂದು ಗೂಗಲ್ ಮಾಡಿ).
***

3-6-16
ಸಿಮ್ ಸಮಾಚಾರ
ಮೊಬೈಲ್ ಬಳಸುವ ಎಲ್ಲರಿಗೂ ಸಿಮ್ ಪರಿಚಯ ಇದ್ದೇ ಇರುತ್ತದೆ. ‘ಸಿಮ್ ಎಂಬ ಹೆಸರು ‘ಸಬ್​ಸ್ಕ್ರೈಬರ್ ಐಡೆಂಟಿಫಿಕೇಶನ್ ಮಾಡ್ಯೂಲ್’, ಅಂದರೆ ಚಂದಾದಾರರನ್ನು ಗುರುತಿಸುವ ಘಟಕ ಎನ್ನುವುದರ ಹ್ರಸ್ವರೂಪ.

ಮೊಬೈಲ್ ಜಾಲ ಹಾಗೂ ನಮ್ಮ ದೂರವಾಣಿಯ ನಡುವೆ ಸಂಪರ್ಕ ಏರ್ಪಡಿಸುವುದು ಸಿಮ್ ಕೆಲಸ. ಹೆಸರೇ ಹೇಳುವಂತೆ ಅದು ಮೊಬೈಲ್ ಚಂದಾದಾರರನ್ನು ಗುರುತಿಸಬೇಕಲ್ಲ, ಈ ಉದ್ದೇಶಕ್ಕಾಗಿ ಬಳಕೆಯಾಗುವ ಇಂಟರ್​ನ್ಯಾಷನಲ್ ಮೊಬೈಲ್ ಸಬ್​ಸ್ಕ್ರೈಬರ್ ಐಡೆಂಟಿಟಿ (ಐಎಂಎಸ್​ಐ) ಸಂಖ್ಯೆ ಸಿಮ್ಲ್ಲಿ ಶೇಖರವಾಗಿರುತ್ತದೆ. ಈ ಸಂಖ್ಯೆಯನ್ನು ಬಳಸಿಕೊಂಡು ಮೊಬೈಲ್ ಚಂದಾದಾರರನ್ನು ಗುರುತಿಸಿ ಅವರ ದೂರವಾಣಿಗೆ ಜಾಲದ ಸಂಪರ್ಕ ಕಲ್ಪಿಸಿಕೊಡುವ ಕೆಲಸವನ್ನು ಸಿಮ್ ಮಾಡುತ್ತದೆ.

ಇಷ್ಟೆಲ್ಲ ಕೆಲಸಮಾಡುವ ಸಿಮ್ೂ ಒಂದು ಗುರುತು ಬೇಕಲ್ಲ, ಇದಕ್ಕಾಗಿ ಇಂಟಿಗ್ರೇಟೆಡ್ ಸರ್ಕ್ಯ್ ಕಾರ್ಡ್ ಐಡೆಂಟಿಫೈಯರ್ (ಐಸಿಸಿಐಡಿ) ಎಂಬ ಸಂಖ್ಯೆ ಬಳಕೆಯಾಗುತ್ತದೆ. ಪ್ರಪಂಚದಲ್ಲಿರುವ ಪ್ರತಿಯೊಂದು ಸಿಮ್ೂ ಪ್ರತ್ಯೇಕ ಐಸಿಸಿಐಡಿ ಇರಬೇಕು ಎನ್ನುವುದು ನಿಯಮ.

ಫೋನುಗಳ ಸುದ್ದಿ ಬಂದಾಗ ಐಎಂಇಐ ಎನ್ನುವ ಇನ್ನೊಂದು ಸಂಖ್ಯೆಯ ಪ್ರಸ್ತಾಪವೂ ಬರುತ್ತದಲ್ಲ, ಅದಕ್ಕೂ ಸಿಮ್ೂ ಯಾವ ಸಂಬಂಧವೂ ಇಲ್ಲ. ‘ಇಂಟರ್​ನ್ಯಾಷನಲ್ ಮೊಬೈಲ್ ಇಕ್ವಿಪ್​ವೆುಂಟ್ ಐಡೆಂಟಿಟಿ’ ಎಂಬ ಹೆಸರಿನ ಹ್ರಸ್ವರೂಪವಾದ ಐಎಂಇಐ, ಪ್ರಪಂಚದಲ್ಲಿರುವ ಪ್ರತಿಯೊಂದು ಮೊಬೈಲ್ ದೂರವಾಣಿಯನ್ನೂ ಪ್ರತ್ಯೇಕವಾಗಿ ಗುರುತಿಸುವ ಸಂಖ್ಯೆ.
***

4-6-16
ಕಣ್ಣಿಗೆ ಕಾಣದ ಆನ್​ಲೈನ್ ವ್ಯಾಲೆಟ್

ಈಚಿನ ದಿನಗಳಲ್ಲಿ ಯಾವ ಜಾಲತಾಣ ನೋಡಿದರೂ ಅಲ್ಲಿ ವ್ಯಾಲೆಟ್​ಗಳದೇ ಭರಾಟೆ. ‘ನಮ್ಮ ವ್ಯಾಲೆಟ್​ನಲ್ಲಿ ಹಣಹಾಕಿ, ಚಿಲ್ಲರೆ ಹುಡುಕುವ ಗೋಜಿಲ್ಲದೆ ಟ್ಯಾಕ್ಸಿಯಲ್ಲಿ ಪ್ರಯಾಣಿಸಿ’, ‘ನಮ್ಮ ವ್ಯಾಲೆಟ್ ಬಳಸಿ, ಮೊಬೈಲ್ ರಿಚಾರ್ಜ್ ಮೇಲೆ ರಿಯಾಯಿತಿ ಪಡೆಯಿರಿ’, ‘ಆನ್​ಲೈನ್​ನಲ್ಲಿ ಕೊಂಡ ವಸ್ತು ಇಷ್ಟವಾಗಲಿಲ್ಲವೇ? ಅದನ್ನು ಮರಳಿಸಿದ ತಕ್ಷಣ ನಿಮ್ಮ ದುಡ್ಡನ್ನು ವ್ಯಾಲೆಟ್​ಗೆ ಹಾಕಿಬಿಡುತ್ತೇವೆ’ – ಇಂತಹ ಹೇಳಿಕೆಗಳನ್ನು ನಾವು ಕೇಳುತ್ತಲೇ ಇರುತ್ತೇವೆ.

ಗ್ರಾಹಕರಿಂದ ಮುಂಚಿತವಾಗಿಯೇ ಹಣ ಪಡೆದು ಅದು ಮುಗಿಯುವವರೆಗೂ ನಿರ್ದಿಷ್ಟ ಸೇವೆಗಳನ್ನು ಒದಗಿಸುವ ವ್ಯವಸ್ಥೆಯೇ ವ್ಯಾಲೆಟ್. ಪೇಟಿಎಂ, ಮೊಬಿಕ್ವಿಕ್, ಫ್ರೀಚಾರ್ಜ್, ಓಲಾಮನಿಗಳೆಲ್ಲ ಇದಕ್ಕೆ ಉದಾಹರಣೆಗಳು. ಜೇಬಿನಲ್ಲೋ ಬ್ಯಾಗಿನಲ್ಲೋ ಇಟ್ಟುಕೊಳ್ಳುವ ಪರ್ಸನ್ನು ವ್ಯಾಲೆಟ್ ಎಂದು ಕರೆಯುತ್ತೇವಲ್ಲ, ಇದೂ ಅಂತಹುದೇ ಪರ್ಸ; ಕಣ್ಣಿಗೆ ಕಾಣುವುದಿಲ್ಲ ಅಷ್ಟೆ! ವ್ಯಾಲೆಟ್​ಗಳಲ್ಲಿ ಹಲವು ವಿಧ. ನೀವು ಕೊಟ್ಟ ಹಣವನ್ನು ಒಂದೇ ತಾಣದಲ್ಲಿ, ಅದರ ಸೇವೆ ಪಡೆಯಲಷ್ಟೇ ಬಳಸಬೇಕು ಎನ್ನುವುದಾದರೆ ಅದನ್ನು ‘ಕ್ಲೋಸ್ಡ್ (ಮುಚ್ಚಿದ) ವ್ಯಾಲೆಟ್’ ಎಂದು ಕರೆಯುತ್ತಾರೆ. ಒಮ್ಮೆ ದುಡ್ಡು ಸೇರಿಸಿದರೆ ಅದನ್ನು ಹಲವೆಡೆ ಬಳಸುವುದು ಸಾಧ್ಯ ಎನ್ನುವುದಾದರೆ ಅದು ‘ಸೆಮಿ-ಕ್ಲೋಸ್ಡ್ (ಅರೆಮುಚ್ಚಿದ) ವ್ಯಾಲೆಟ್’. ಇದರ ಜತೆಗೆ ಹಾಕಿದ ದುಡ್ಡನ್ನು ಮರಳಿ ಪಡೆಯುವ ಆಯ್ಕೆಯೂ ಇದ್ದರೆ ಅದಕ್ಕೆ ‘ಓಪನ್ (ತೆರೆದ) ವ್ಯಾಲೆಟ್’ ಎಂದು ಹೆಸರು.
***

5-6-16

ನಾವು ಭೇಟಿಕೊಡುವ ವೆಬ್​ಸೈಟುಗಳು ಅಂತರ್ಜಾಲದ ಮೂಲೆಯಲ್ಲೆಲ್ಲೋ ಇರುವ ಒಂದು ಸರ್ವರ್​ನಲ್ಲಿ ಶೇಖರವಾಗಿರುತ್ತವೆ. ಅಂತರ್ಜಾಲ ಸಂಪರ್ಕದಲ್ಲಿರುವ ಸಾಧನಗಳನ್ನು ಪ್ರತ್ಯೇಕವಾಗಿ ಗುರುತಿಸಲು ಐಪಿ ವಿಳಾಸ ಬಳಸುತ್ತಾರೆ ಎನ್ನುವುದು ನಮಗೆ ಗೊತ್ತಲ್ಲ (ಛಿಜ್ಞಾನ – 23 ಏಪ್ರಿಲ್)? ಪ್ರತಿ ಜಾಲತಾಣದ ಸರ್ವರ್​ಗೂ ಇಂತಹುದೇ ಒಂದು ಐಪಿ ವಿಳಾಸ ಇರುತ್ತದೆ.

ಐಪಿ ವಿಳಾಸವೆಂದರೆ ಅಂಕಿಗಳ ಒಂದು ಸರಣಿ – 74.125.70.121 ಎನ್ನುವ ರೀತಿಯದು. ನಮಗೆ ಬೇಕಾದ ಜಾಲತಾಣಗಳನ್ನು ‘ವಿಜಯವಾಣಿ ಡಾಟ್ ನೆಟ್’ ಎಂದೋ ‘ಇಜ್ಞಾನ ಡಾಟ್ ಕಾಮ್ ಎಂದೋ ಗುರುತಿಟ್ಟುಕೊಳ್ಳುವ ಬದಲಿಗೆ ಇಷ್ಟೆಲ್ಲ ಅಂಕಿಗಳನ್ನು ಯಾರು ತಾನೇ ನೆನಪಿಟ್ಟುಕೊಳ್ಳುತ್ತಾರೆ? ಇದನ್ನು ನೆನಪಿಟ್ಟುಕೊಳ್ಳುವ ಕೆಲಸ ನಮಗೆ ಬೇಡ ಎಂದು ರೂಪಿಸಲಾಗಿರುವ ವ್ಯವಸ್ಥೆಯೇ ಡಿಎನ್​ಎಸ್, ಅಂದರೆ ಡೊಮೈನ್ ನೇಮ್ ಸರ್ವರ್.

ಬ್ರೌಸರ್ ತಂತ್ರಾಂಶದಲ್ಲಿ ನಾವು ಟೈಪಿಸಿದ ವಿಳಾಸವನ್ನು ಆ ತಾಣದ ಐಪಿ ವಿಳಾಸದೊಡನೆ ಹೊಂದಿಸಿಕೊಡುವ ಕೆಲಸ ಈ ವ್ಯವಸ್ಥೆಯದು. ಊರಿನ ಫೋನ್ ನಂಬರುಗಳೆಲ್ಲದರ ವಿವರ ಟೆಲಿಫೋನ್ ಡೈರೆಕ್ಟರಿಯಲ್ಲಿರುತ್ತದಲ್ಲ, ಹಾಗೆಯೇ ಎಲ್ಲ ಜಾಲತಾಣಗಳ ವಿವರವೂ ಡಿಎನ್​ಎಸ್​ಗೆ ಲಭ್ಯವಿರುತ್ತದೆ. ಅದು ಸರಿಯಾದ ಐಪಿ ವಿಳಾಸ ಹುಡುಕಿಕೊಟ್ಟರಷ್ಟೇ ನಮಗೆ ಬೇಕಾದ ಜಾಲತಾಣ ನಮ್ಮ ಕಂಪ್ಯೂಟರ್ ಅಥವಾ ಮೊಬೈಲಿನ ಪರದೆಯಲ್ಲಿ ತೆರೆದುಕೊಳ್ಳುತ್ತದೆ.
***

6-6-16
4ಕೆ ಎಂದರೇನು ಗೊತ್ತೇ?
ಹಿಂದೆ ಟಿವಿ ಖರೀದಿಯ ಆಯ್ಕೆಗಳು ಸೀಮಿತವಾಗಿರುತ್ತಿದ್ದವು. ಈಗ ನೂರೆಂಟು ಬ್ರಾಂಡುಗಳು, ಹತ್ತಾರು ಗಾತ್ರಗಳ ಆಯ್ಕೆಯ ಜತೆ ಎಚ್​ಡಿ ರೆಡಿ ಬೇಕೋ, ಫುಲ್ ಎಚ್​ಡಿ ಬೇಕೋ, ಪರದೆ ಚಪ್ಪಟೆಯಾಗಿರಬೇಕೋ, ಬಾಗಿದಂತಿರಬೇಕೋ ಎಂಬ ಪ್ರಶ್ನೆಗಳೂ ಎದುರಾಗುತ್ತವೆ. ಇವುಗಳ ಸಾಲಿಗೆ ಹೊಸ ಸೇರ್ಪಡೆ ‘4ಕೆ’. ಎಚ್​ಡಿ ರೆಡಿ, ಫುಲ್ ಎಚ್​ಡಿಗಳಂತೆ 4ಕೆ ಕೂಡ ಪರದೆಯ ರೆಸಲ್ಯೂಷನ್ ಅನ್ನು ಸೂಚಿಸುತ್ತದೆ. ಫುಲ್ ಎಚ್​ಡಿ ಪರದೆಗಳ ರೆಸಲ್ಯೂಷನ್ 19201080 ಪಿಕ್ಸೆಲ್​ಗಳಷ್ಟಿದ್ದರೆ 4ಕೆ ಪರದೆಗಳದು 38402160 ಪಿಕ್ಸೆಲ್. ರೆಸಲ್ಯೂಷನ್ ಲೆಕ್ಕದಲ್ಲಿ 4ಕೆ ಪರದೆಗಳು ಫುಲ್ ಎಚ್​ಡಿಗಿಂತ ನಾಲ್ಕು ಪಟ್ಟು ಉತ್ತಮವಾಗಿರುತ್ತವೆ. 4ಕೆಗಿಂತ ನಾಲ್ಕು ಪಟ್ಟು ಉತ್ತಮ (76804320 ಪಿಕ್ಸೆಲ್) 8ಕೆ ರೆಸಲ್ಯೂಷನ್ ಕೂಡ ಇದೆ. 4ಕೆ – 8ಕೆಗಳೆರಡನ್ನೂ ‘ಅಲ್ಟ್ರಾ ಎಚ್​ಡಿ’ ಎಂದೂ ಕರೆಯುತ್ತಾರೆ.

ಗಮನಿಸಬೇಕಾದ ಅಂಶ: ಹೆಚ್ಚು ರೆಸಲ್ಯೂಷನ್ನಿನ ಪರದೆಗಳ ಸಾಮರ್ಥ್ಯ ತಿಳಿಯಬೇಕಾದರೆ ನೋಡುವ ಚಿತ್ರಗಳ ರೆಸಲ್ಯೂಷನ್ ಕೂಡ ಹೆಚ್ಚೇ ಇರಬೇಕು. ಸಾಮಾನ್ಯ ಸ್ಪಷ್ಟತೆಯ (ಸ್ಟಾಂಡರ್ಡ್ ಡೆಫಿನಿಷನ್) ಪ್ರಸಾರವನ್ನು 4ಕೆ ಟಿವಿಯಲ್ಲಿ ನೋಡಿದ ಮಾತ್ರಕ್ಕೆ ಚಿತ್ರದ ಗುಣಮಟ್ಟವೇನೂ ಬದಲಾಗದು.
***

7-6-16
ಕಿರಿಕಿರಿ ತಪ್ಪಿಸುವ ಸುಲಭ ಮಾರ್ಗ.

ಸೋಷಿಯಲ್ ನೆಟ್​ವರ್ಕ್​ಗಳಿಂದ ಅನುಕೂಲಗಳೆಷ್ಟಿವೆಯೋ ಅಷ್ಟೇ ಕಿರಿಕಿರಿಗಳೂ ಇವೆ. ವಿಪರೀತ ಸಂಖ್ಯೆಯ ಪೋಸ್ಟು-ಮೆಸೇಜುಗಳು ಈ ಕಿರಿಕಿರಿಯ ಒಂದು ಮುಖವಾದರೆ ನಿರ್ದಿಷ್ಟ ವಿಚಾರಧಾರೆಯ ಪೋಸ್ಟುಗಳ ಪ್ರವಾಹ ಇದರ ಇನ್ನೊಂದು ಮುಖ. ಈ ಪೈಕಿ ಎರಡನೆಯ ಸಮಸ್ಯೆ ಫೇಸ್​ಬುಕ್​ನಲ್ಲಿ ಹೆಚ್ಚು. ವಿಪರೀತ ಸಂಖ್ಯೆಯ ಸಂದೇಶಗಳ ಸಮಸ್ಯೆ ಫೇಸ್​ಬುಕ್ ಜತೆಗೆ ವಾಟ್ಸ್​ಆಪ್​ನಲ್ಲೂ ಇದೆ.

ಹೀಗೆ ಕಿರಿಕಿರಿ ಮಾಡುವವರನ್ನು ಅನ್​ಫ್ರೆಂಡ್ ಅಥವಾ ಬ್ಲಾಕ್ ಮಾಡುವುದು ಸುಲಭದ ದಾರಿ. ಆದರೆ ಯಾವಾಗಲೂ ಇಷ್ಟೊಂದು ದೊಡ್ಡ ಅಸ್ತ್ರದ ಪ್ರಯೋಗ ಬೇಕಾಗುವುದಿಲ್ಲ. ಅಂತಹ ಸನ್ನಿವೇಶಗಳಲ್ಲಿ ಫೇಸ್​ಬುಕ್ ಪೋಸ್ಟ್ ಪ್ರವಾಹದಿಂದ ಪಾರಾಗಲು ನಾವು ‘ಅನ್​ಫಾಲೋ’ ಆಯ್ಕೆ ಬಳಸಬಹುದು. ಯಾವುದೇ ವ್ಯಕ್ತಿಯನ್ನು ಅನ್​ಫಾಲೋ ಮಾಡಿದಾಗ ನಮಗೆ ಅವರ ಪೋಸ್ಟ್ ಗಳು ಕಾಣಿಸುವುದಿಲ್ಲ (ಆದರೆ ಬೇಕೆಂದಾಗ ಅವರ ಪ್ರೊಫೈಲಿಗೆ ಹೋಗಿ ಅವರು ಬರೆದದ್ದನ್ನೆಲ್ಲ ಓದುವುದು ಸಾಧ್ಯವಿರುತ್ತದೆ). ಹಾಗೆಯೇ ವಿಪರೀತ ಸಂಖ್ಯೆಯ ಸಂದೇಶಗಳನ್ನು ಕಳುಹಿಸಿ ಕಿರಿಕಿರಿಮಾಡುವ ವಾಟ್ಸ್​ಆಪ್ ಗುಂಪುಗಳನ್ನು ತೊರೆಯಲು ಸಾಧ್ಯವಿಲ್ಲದಾಗ ‘ಮ್ಯೂಟ್’ ಆಯ್ಕೆಯನ್ನು ಬಳಸಬಹುದು. ಹೊಸ ಸಂದೇಶಗಳು ಬಂದಾಗ ನಮಗೆ ಅದರ ಸೂಚನೆ ದೊರಕದಂತೆ ಮಾಡಿಕೊಳ್ಳುವುದೂ ಸಾಧ್ಯವಿದೆ. ಯಾವಾಗಲೋ ಬಿಡುವಾದಾಗ ನಾವೇ ವಾಟ್ಸ್​ಆಪ್ ತೆರೆದು ಆ ಗುಂಪಿನಲ್ಲಿ ಬಂದಿರುವ ಸಂದೇಶಗಳನ್ನು ನೋಡಬಹುದು.
***

8-6-16
ಯುಎಸ್​ಬಿ

ಕಂಪ್ಯೂಟರ್ ಜಗತ್ತಿನಲ್ಲಿ ಬಳಕೆಯಾಗುವ ಮಾನಕಗಳ (ಸ್ಟಾಂಡರ್ಡ್) ಪೈಕಿ ಯೂನಿವರ್ಸಲ್ ಸೀರಿಯಲ್ ಬಸ್, ಅಂದರೆ ‘ಯುಎಸ್​ಬಿ’ಗೆ ಮಹತ್ವದ ಸ್ಥಾನವಿದೆ. ಕಾರ್ಡ್ ರೀಡರಿನಿಂದ ಕಾರ್ ಸ್ಟೀರಿಯೋವರೆಗೆ, ಮನೆಯ ಟಿವಿಯಿಂದ ಮೊಬೈಲ್ ಫೋನಿನವರೆಗೆ, ಆಟಿಕೆಗಳಿಂದ ಡಿಜಿಟಲ್ ಕ್ಯಾಮರಾವರೆಗೆ ಎಲ್ಲೆಲ್ಲೂ ನಾವು ಇದರ ಬಳಕೆಯನ್ನು ಕಾಣಬಹುದು.

ಹಲವು ಬಗೆಯ ಸಾಧನಗಳ ಕೇಬಲ್ ಅನ್ನು ಕಂಪ್ಯೂಟರಿಗೆ (ಅಥವಾ ಚಾರ್ಜರ್​ಗೆ) ಸೇರಿಸುವ ಸಂಪರ್ಕ – ‘ಪೋರ್ಟ್’ – ಒಂದೇ ಬಗೆಯದಾಗಿರುವುದು ಯುಎಸ್​ಬಿ ಯಿಂದ ಸಾಧ್ಯವಾಗಿದೆ. ಬಹಳಷ್ಟು ಸಂದರ್ಭಗಳಲ್ಲಿ (ಉದಾ: ಇಂದಿನ ಮೊಬೈಲ್ ಹಾಗೂ ಟ್ಯಾಬ್ಲೆಟ್ಟುಗಳಲ್ಲಿ ಬಳಕೆಯಾಗುವ ಮೈಕ್ರೋ ಯುಎಸ್​ಬಿ) ಕೇಬಲ್​ನ ಇನ್ನೊಂದು ತುದಿಯ ವಿನ್ಯಾಸ ಕೂಡ ಸಾರ್ವತ್ರಿಕವಾಗಿರುತ್ತದೆ. ಬೇರೆಬೇರೆ ಸಾಧನಗಳಿಗೆ ಬೇರೆಬೇರೆ ರೀತಿಯ ಕೇಬಲ್ ಬಳಸಬೇಕಾದ ಅಗತ್ಯ ಇದರಿಂದ ಬಹುಮಟ್ಟಿಗೆ ಕಡಿಮೆಯಾಗಿಬಿಟ್ಟಿದೆ.

ಒಂದೇ ಕೇಬಲ್ಲಿನ ಮೂಲಕ ವಿದ್ಯುತ್ ಹಾಗೂ ದತ್ತಾಂಶಗಳೆರಡನ್ನೂ ಕೊಂಡೊಯ್ಯಲು ಸಾಧ್ಯವಾಗಿಸುವುದು ಯುಎಸ್​ಬಿಯ ವೈಶಿಷ್ಟ್ಯ ಹಾಗಾಗಿಯೇ ಬಹಳಷ್ಟು ಸಾಧನಗಳನ್ನು ಬಳಸುವಾಗ ಅವು ಕೆಲಸಮಾಡಲು ಬರಿಯ ಯುಎಸ್​ಬಿ ಸಂಪರ್ಕವೊಂದೇ ಸಾಕು. ದತ್ತಾಂಶ ಕೊಂಡೊಯ್ಯುವ ಕೇಬಲ್ ಮೂಲಕ ವಿದ್ಯುತ್ತೂ ಹರಿಯುವುದರಿಂದಲೇ – ಇಂದಿನ ಮೊಬೈಲುಗಳ ಡೇಟಾ ಕೇಬಲ್ ಹಾಗೂ ಚಾರ್ಜಿಂಗ್ ಕೇಬಲ್ ಎರಡೂ ಒಂದೇ ಆಗಿರುವುದು.
***

9-6-16
ಒಸಿಆರ್

ಮುದ್ರಿತ ಅಥವಾ ಕೈಬರಹದ ಅಕ್ಷರಗಳನ್ನು ಕಂಪ್ಯೂಟರ್ ಸಹಾಯದಿಂದ ಗುರುತಿಸಲು ನೆರವಾಗುವುದು ಒಸಿಆರ್. ಇದು ‘ಆಪ್ಟಿಕಲ್ ಕ್ಯಾರೆಕ್ಟರ್ ರೆಕಗ್ನಿಷನ್’ ಎನ್ನುವುದರ ಹ್ರಸ್ವರೂಪ. ಕಂಪ್ಯೂಟರ್ ಹಾಗೂ ಮಾನವರ ನಡುವಿನ ಸಂವಹನದ ಹೊಸದೊಂದು ಆಯಾಮವನ್ನು ಪರಿಚಯಿಸುವ ತಂತ್ರಜ್ಞಾನ ಇದು.

ಸ್ಕ್ಯಾನ್ ಮಾಡಿಯೋ, ಫೋಟೋ ಕ್ಲಿಕ್ಕಿಸಿಯೋ ಅಕ್ಷರಗಳನ್ನು ಕಂಪ್ಯೂಟರಿಗೆ ಊಡಿಸುತ್ತೇವಲ್ಲ, ಆ ಚಿತ್ರದಲ್ಲಿ ಇರಬಹುದಾದ ಬರಹವನ್ನು ಗುರುತಿಸುವುದು ಹೇಗೆ, ಗುರುತಿಸಿದ ಚಿತ್ರವನ್ನು ಪಠ್ಯರೂಪಕ್ಕೆ ಬದಲಿಸುವುದು ಹೇಗೆ ಎನ್ನುವುದನ್ನೆಲ್ಲ ಕಂಪ್ಯೂಟರಿಗೆ ಹೇಳಿಕೊಡುವುದು ಒಸಿಆರ್ ತಂತ್ರಾಂಶದ ಕೆಲಸ. ಹಳೆಯ ಪುಸ್ತಕಗಳಲ್ಲಿರುವ ಪಠ್ಯವನ್ನು ಗುರುತಿಸಿ ಕಂಪ್ಯೂಟರೀ ಕರಿಸಲು, ಮುದ್ರಿತ ಅಥವಾ ಲಿಖಿತ ದಾಖಲೆಗಳನ್ನು ಸ್ವಯಂಚಾಲಿತ ವಾಗಿ ವರ್ಗೀಕರಿಸಲು – ಸಂಸ್ಕರಿಸಲು ಇದು ನೆರವಾಗುತ್ತದೆ. ಸ್ಕ್ಯಾನ್ ಮಾಡಿದ ಪುಟಗಳಲ್ಲಿ ಏನು ಮುದ್ರಿತವಾಗಿದೆ ಎಂದು ಗುರುತಿಸುವ ಹಾಗೂ ಅದನ್ನು ಪಠ್ಯರೂಪಕ್ಕೆ ಬದಲಿಸಿಕೊಡುವ ಹಲವು ಒಸಿಆರ್ ತಂತ್ರಾಂಶಗಳು ಕನ್ನಡದಲ್ಲೂ ಇವೆ. ಈ ಪೈಕಿ ಗೂಗಲ್ ಒದಗಿಸಿರುವ ಸೌಲಭ್ಯ ಕೂಡ ಒಂದು: ಕನ್ನಡ ಪಠ್ಯವಿರುವ ಚಿತ್ರವನ್ನು ಡ್ರೈವ್​ನಲ್ಲಿ ಉಳಿಸಿಟ್ಟು ಗೂಗಲ್ ಡಾಕ್ಸ್ ಮೂಲಕ ತೆರೆದರೆ (ಓಪನ್ ವಿತ್ ಗೂಗಲ್ ಡಾಕ್ಸ್) ಅದರಲ್ಲಿರುವ ಪಠ್ಯ ಬದಲಾಯಿಸಬಹುದಾದ ರೂಪಕ್ಕೆ ಬಂದುಬಿಡುತ್ತದೆ.
***

10-6-16
RAM
ಕಂಪ್ಯೂಟರ್ ಅಥವಾ ಮೊಬೈಲಿನಲ್ಲಿ ಕೆಲಸಮಾಡುವಾಗ ನಾವು ಒಂದಲ್ಲ ಒಂದು ರೀತಿಯ ಮಾಹಿತಿಯೊಡನೆ ವ್ಯವಹರಿಸುತ್ತಿರುತ್ತೇವೆ. ಕಾಲೇಜಿನ ಪ್ರಾಜೆಕ್ಟ್ ರಿಪೋರ್ಟು, ಕಚೇರಿಯ ಇಮೇಲ್, ಫೋಟೋಶಾಪಿನ ಚಿತ್ರ – ಇವೆಲ್ಲ ಮಾಹಿತಿಯೇ.

ಈ ಮಾಹಿತಿ ಅಂತಿಮವಾಗಿ ಹಾರ್ಡ್ ಡಿಸ್ಕ್​ನಲ್ಲೋ, ಪೆನ್​ಡ್ರೈವ್​ನಲ್ಲೋ, ಮೆಮೊರಿ ಕಾರ್ಡಿನಲ್ಲೋ ಶೇಖರವಾಗುತ್ತದೆ ಸರಿ, ಆದರೆ ನಾವು ಕೆಲಸಮಾಡುತ್ತಿರುವಷ್ಟು ಹೊತ್ತು – ಕಡತವನ್ನು ಉಳಿಸುವ ಮೊದಲು – ಇದೆಲ್ಲ ಎಲ್ಲಿರುತ್ತದೆ?

ಇದಕ್ಕೆ ಬಳಕೆಯಾಗುವುದೇ ರ್ಯಾಮ್ ಅಂದರೆ ರ್ಯಾಂಡಮ್ ಆಕ್ಸೆಸ್ ಮೆಮೊರಿ. ಕಂಪ್ಯೂಟರ್ ಅಥವಾ ಮೊಬೈಲ್ ಫೋನ್ ಕೆಲಸಮಾಡುತ್ತಿರುವಾಗ ತಾನು ಆ ಕ್ಷಣದಲ್ಲಿ ಬಳಸುತ್ತಿರುವ ದತ್ತಾಂಶ ಹಾಗೂ ಮಾಹಿತಿಯನ್ನೆಲ್ಲ ಇದರಲ್ಲಿ ಉಳಿಸಿಡುತ್ತದೆ. ರ್ಯಾಮ್ ಒಂದು ತಾತ್ಕಾಲಿಕ ಶೇಖರಣಾ ವ್ಯವಸ್ಥೆ ಮಾತ್ರ. ಅಂದರೆ, ವಿದ್ಯುತ್ ಪೂರೈಕೆ ಇರುವವರೆಗೆ ಮಾತ್ರ ರ್ಯಾಮ್ಲ್ಲಿರುವ ಸಂಗತಿಗಳೆಲ್ಲ ಉಳಿದಿರುತ್ತವೆ. ಇದ್ದಕ್ಕಿದ್ದಂತೆ ಕರೆಂಟು ಹೋದಾಗ ನೀವು ನೋಟ್​ಪ್ಯಾಡಿನಲ್ಲಿ ಟೈಪ್ ಮಾಡುತ್ತಿದ್ದ, ಇನ್ನೂ ಸೇವ್ ಮಾಡದ, ಕಡತ ಮಾಯವಾಗಿಬಿಡುತ್ತದಲ್ಲ, ಅದಕ್ಕೆ ಇದೇ ಕಾರಣ! ನಾವು ಸೇರಿಸುತ್ತಿರುವ ಮಾಹಿತಿಯನ್ನು ನಿರ್ದಿಷ್ಟ ಅವಧಿಗೊಮ್ಮೆ ಸ್ವಯಂಚಾಲಿತವಾಗಿ ಸೇವ್ ಮಾಡಿಟ್ಟುಕೊಳ್ಳುವ ಸೌಲಭ್ಯ ಕೆಲ ತಂತ್ರಾಂಶಗಳಲ್ಲಿ ರುತ್ತದೆ. ಆ ಸೌಲಭ್ಯವಿಲ್ಲದ ತಂತ್ರಾಂಶಗಳಲ್ಲಿ ನಾವು ಸೇರಿಸುವ ಮಾಹಿತಿಯನ್ನು ಆಗಿಂದಾಗ್ಗೆ ಸೂಕ್ತವಾಗಿ ಉಳಿಸಿಡುವುದು ಒಳ್ಳೆಯದು.
***

11-6-16
ಅನಗತ್ಯ ಸಂದೇಶ ತಪ್ಪಿಸಿ!
ಇಮೇಲ್, ಫೇಸ್​ಬುಕ್, ವಾಟ್ಸ್​ಆಪ್​ಗಳೆಲ್ಲವುದರ ಮೂಲಕ ಸಂದೇಶಗಳನ್ನು ಕಳುಹಿಸುವುದು ಬಹಳ ಸುಲಭ. ಒಂದು ಸಂದೇಶವನ್ನು ಒಬ್ಬರಿಗಷ್ಟೇ ಏಕೆ, ನಮ್ಮ ಅಡ್ರೆಸ್ ಬುಕ್​ನಲ್ಲಿರುವ ಅಷ್ಟೂ ವಿಳಾಸಗಳಿಗೆ – ಮೊಬೈಲ್ ಸಂಖ್ಯೆಗಳಿಗೆ ಥಟ್ಟನೆ ಕಳುಹಿಸಿಬಿಡಬಹುದು.

ಈ ಸೌಕರ್ಯ ಬಹು ಉಪಯುಕ್ತ. ಆದರೆ, ಹಲವು ಸಂದರ್ಭಗಳಲ್ಲಿ ಅನಪೇಕ್ಷಿತ ಹಾಗೂ ನಿರುಪಯುಕ್ತ (ಕೆಲವೊಮ್ಮೆ ಅಸಂಬದ್ಧ) ಸಂದೇಶಗಳನ್ನು ಹಂಚಲು ಈ ಮಾಧ್ಯಮಗಳು ಬಳಕೆಯಾಗುತ್ತಿರುವುದನ್ನು ನಾವು ನೋಡಬಹುದು. ಇದನ್ನು ತಪ್ಪಿಸಲು ಹಲವು ಮಾರ್ಗಗಳಿವೆ. ಇಮೇಲ್ ಮೂಲಕವಿರಲಿ, ವಾಟ್ಸ್​ಆಪ್​ನಲ್ಲಿರಲಿ, ಗುಂಪುಗಳಿಗೆ ಸಂದೇಶಗಳನ್ನು ಕಳುಹಿಸುವಾಗ ಅದು ನಿಜಕ್ಕೂ ಉಪಯುಕ್ತವೇ ಎಂದು ಯೋಚಿಸಿ. ಗುಡ್ ಮಾರ್ನಿಂಗ್ – ಗುಡ್​ನೈಟ್ ಸಂದೇಶಗಳನ್ನು, ಫಾರ್​ವರ್ಡಗಳನ್ನು ಸುಮ್ಮನೆ ಹಂಚಿಕೊಳ್ಳಬೇಡಿ. ಇಮೇಲ್ ಬಳಸುವಾಗ ’ರಿಪ್ಲೈ ಆಲ್’ ಆಯ್ಕೆಯನ್ನು ಅಗತ್ಯವಿದ್ದಾಗ ಮಾತ್ರ ಬಳಸಿ. ಹೆಚ್ಚು ಜನರಿರುವ ಸಂಭಾಷಣೆಯಲ್ಲಿ ಎಲ್ಲರೂ ’ರಿಪ್ಲೈ ಆಲ್’ ಮಾಡುತ್ತ ಕುಳಿತರೆ ಅನಗತ್ಯವಾಗಿ ಸಂದೇಶಗಳ ಸಂಖ್ಯೆ ಬೆಳೆಯುತ್ತದೆ, ಯಾರು ಏನು ಹೇಳುತ್ತಿದ್ದಾರೆಂದು ಅರ್ಥಮಾಡಿಕೊಳ್ಳುವುದೂ ಕಷ್ಟವಾಗುತ್ತದೆ! ಕಡತಗಳನ್ನು ಹಂಚಿಕೊಳ್ಳುವಾಗಲೂ ಅಷ್ಟೆ, ಎರಡೆರಡು ಬಾರಿ ಯೋಚಿಸಿ. ಅತ್ಯಗತ್ಯವಾದ ಹೊರತು ದೊಡ್ಡಗಾತ್ರದ ಕಡತಗಳನ್ನು ಕಳುಹಿಸುವುದನ್ನು ಆದಷ್ಟೂ ತಪ್ಪಿಸಿ. ಹಾಗೊಮ್ಮೆ ಕಳುಹಿಸುವುದೇ ಆದರೆ ಕಡತವನ್ನು ಗೂಗಲ್ ಡ್ರೈವ್​ನಂತಹ ವ್ಯವಸ್ಥೆಗಳಲ್ಲಿ ಉಳಿಸಿಟ್ಟು ಅದರ ಕೊಂಡಿಯನ್ನು ಮಾತ್ರ ಹಂಚಿಕೊಳ್ಳಬಹುದು.
***

12-6-16
ಬ್ಲೂಟೂತ್
ವಿಚಿತ್ರ ಹೆಸರಿನಿಂದ ಗಮನಸೆಳೆಯುವ ತಂತ್ರಜ್ಞಾನಗಳ ಪೈಕಿ ’ಬ್ಲೂಟೂತ್’ಗೆ ವಿಶೇಷ ಸ್ಥಾನವಿದೆ. ಪರಸ್ಪರ ಸಮೀಪದಲ್ಲಿರುವ ವಿದ್ಯುನ್ಮಾನ ಸಾಧನಗಳ ನಡುವೆ ನಿಸ್ತಂತು (ವೈರ್​ಲೆಸ್) ಸಂವಹನ ಹಾಗೂ ಕಡತಗಳ ವಿನಿಮಯವನ್ನು ಸಾಧ್ಯವಾಗಿಸುವುದು ಈ ತಂತ್ರಜ್ಞಾನದ ವೈಶಿಷ್ಟ್ಯ.

ಮೊದಲಿಗೆ ಮೊಬೈಲ್ ಫೋನುಗಳ ನಡುವೆ ಮಾಹಿತಿ ವಿನಿಮಯ ಮಾಡಿಕೊಳ್ಳಲು ಬ್ಲೂಟೂತ್ ತಂತ್ರಜ್ಞಾನ ವ್ಯಾಪಕವಾಗಿ ಬಳಕೆಯಾಗುತ್ತಿತ್ತು. ಈಚೆಗೆ ವೈಫೈ ತಂತ್ರಜ್ಞಾನ ಆಧರಿತ ’ಶೇರ್​ಇಟ್’ನಂತಹ ಸೌಲಭ್ಯಗಳು ಬಂದಮೇಲೆ ಆ ಬಗೆಯ ಬಳಕೆ ಕೊಂಚ ಕಡಿಮೆಯಾಗಿದೆ. ಆದರೆ ನಿಸ್ತಂತು ಇಯರ್​ಫೋನ್ ಹಾಗೂ ಸ್ಪೀಕರುಗಳಲ್ಲಿ, ಕಾರಿನ ಮನರಂಜನಾ ವ್ಯವಸ್ಥೆಯಲ್ಲೆಲ್ಲ ಬ್ಲೂಟೂತ್ ಆಧಿಪತ್ಯ ಇನ್ನೂ ಮುಂದುವರೆದಿದೆ. ಕಾರಿನಲ್ಲಿರುವ ಸ್ಪೀಕರ್ ಹಾಗೂ ಮೈಕ್ ಮೂಲಕ ಮೊಬೈಲ್ ಫೋನ್ ಬಳಸುತ್ತೇವಲ್ಲ, ಅಲ್ಲಿ ಬಳಕೆಯಾಗುವುದು ಇದೇ ತಂತ್ರಜ್ಞಾನ. ಬೆಂಗಳೂರಿನ ಸಂಚಾರಿ ಪೊಲೀಸರು ರಸ್ತೆಯಲ್ಲಿ ದಂಡ ಕಟ್ಟಿಸಿಕೊಂಡು ರಸೀತಿ ಮುದ್ರಿಸಿಕೊಡುವುದು ಬ್ಲೂಟೂತ್ ಸಂಪರ್ಕವಿರುವ ಪ್ರಿಂಟರಿನಲ್ಲೇ!

ಅಂದಹಾಗೆ ಪುರಾತನ ಯುರೋಪಿನ ಭಾಗವೊಂದನ್ನು ಆಳುತ್ತಿದ್ದ ಹರಾಲ್ಡ್ ಬ್ಲಾಟಂಡ್ (Harald Blåtand) ಎಂಬಾತನ ಹೆಸರಿನ ಉತ್ತರಾರ್ಧದ ಇಂಗ್ಲಿಷ್ ಅನುವಾದ ಈ ಹೆಸರಿಗೆ ಸ್ಪೂರ್ತಿ. ತನ್ನ ಪರಿಣಾಮಕಾರಿ ಸಂವಹನ ಶೈಲಿಯಿಂದ (ಇಂದಿನ) ಡೆನ್ಮಾರ್ಕ್ ಹಾಗೂ ನಾರ್ವೆ ಪ್ರದೇಶಗಳನ್ನು ಒಗ್ಗೂಡಿಸಿದ್ದನಂತೆ. ಬ್ಲೂಟೂತ್ ತಂತ್ರಜ್ಞಾನವೂ ಇಷ್ಟೇ ಪರಿಣಾಮಕಾರಿ ಎನ್ನುವುದು ಅದಕ್ಕೆ ಹೆಸರಿಟ್ಟವರ ಅಭಿಪ್ರಾಯವಾಗಿದ್ದಿರಬಹುದು.
***

13-6-16
ಮೊಬೈಲಿನಲ್ಲೊಬ್ಬ ಸಹಾಯಕ

ಈಗಿನ ಕಾಲದಲ್ಲಿ ಎಲ್ಲರೂ ಯಾವಾಗಲೂ ಒಂದಲ್ಲ ಒಂದು ಕೆಲಸದಲ್ಲಿ ವ್ಯಸ್ತರಾಗಿರುತ್ತಾರೆ. ಎಷ್ಟು ಮಾಡಿದರೂ ಮುಗಿಯದ ಕೆಲಸ. ಇವತ್ತು ಮಾಡಬೇಕಾದ ಕೆಲಸಗಳು, ಈ ವಾರ ಮಾಡಬೇಕಾದ ಕೆಲಸಗಳು, ಈ ತಿಂಗಳು ಮಾಡಬೇಕಾದ ಕೆಲಸಗಳು… ಹೀಗೆ ಸದಾಕಾಲವೂ ನಮ್ಮ ತಲೆಯೊಳಗೆ ಬಾಕಿಯಿರುವ ಕೆಲಸಗಳದೇ ಯೋಚನೆ.

ಈ ಕೆಲಸಗಳ ವಿವರವಾದ ಪಟ್ಟಿಯನ್ನು ಒಂದು ಕಡೆ ಬರೆದಿಟ್ಟುಕೊಂಡರೆ ಅವನ್ನೆಲ್ಲ ಸರಿಯಾಗಿ – ಸರಿಯಾದ ಸಮಯಕ್ಕೆ ಮಾಡಿ ಮುಗಿಸುವುದು ಸಾಧ್ಯವಾಗುತ್ತದೆ. ಆದರೆ ಈ ಪಟ್ಟಿಯನ್ನು ಕಾಗದದ ಹಾಳೆಯಲ್ಲೋ ಡೈರಿಯಲ್ಲೋ ಬರೆದಿಟ್ಟುಕೊಂಡರೆ ಅದನ್ನು ನಾವು ಹೋದಲ್ಲೆಲ್ಲ ತೆಗೆದುಕೊಂಡು ಹೋಗುವುದೇ ಕಷ್ಟ. ಅದನ್ನು ಎಲ್ಲಾದರೂ ಮರೆತು ಬಂದರೂ ತೊಂದರೆಯೇ.

ಈ ತೊಂದರೆಯಿಂದ ಪಾರಾಗಲು ಸದಾಕಾಲ ನಮ್ಮ ಜೊತೆಯಲ್ಲಿರುವ ಮೊಬೈಲ್ ಫೋನನ್ನು ಬಳಸಬಹುದು. ನಾವು ಮಾಡಬೇಕೆಂದಿರುವ ಕೆಲಸಗಳನ್ನು ನೆನಪಿಟ್ಟುಕೊಳ್ಳಲು, ಸೂಕ್ತ ಸಮಯದಲ್ಲಿ ಅವುಗಳನ್ನು ನಮಗೆ ನೆನಪಿಸಲು, ಆ ಕೆಲಸದ ವಿವರಗಳನ್ನು ಬರೆದಿಡಲು-ಹಂಚಿಕೊಳ್ಳಲು ನೆರವಾಗುವ ಅನೇಕ ಆಪ್​ಗಳು ದೊರಕುತ್ತವೆ. ಗೂಗಲ್ ಕೀಪ್ (google keep),ವಂಡರ್​ಲಿಸ್ಟ್ (wunderlist), ಎನಿ.ಡು (any.do) ಮೊದಲಾದವು ಇದಕ್ಕೆ ಕೆಲ ಉದಾಹರಣೆಗಳು. ಗೂಗಲ್ ಕೀಪ್​ನಂತಹ ಕೆಲ ಆಪ್​ಗಳನ್ನು ಮೊಬೈಲಿನಲ್ಲಿ ಮಾತ್ರವಲ್ಲ, ನಮ್ಮ ಲ್ಯಾಪ್​ಟಾಪ್-ಡೆಸ್ಕ್​ಟಾಪ್​ಗಳಲ್ಲೂ ಬಳಸುವುದು ಸಾಧ್ಯ.
***

14-6-16
ಮೊಬೈಲ್ ಸಂಕೇತದ ಶಕ್ತಿ ಎಷ್ಟು?

ಮೊಬೈಲಿನಲ್ಲಿ ಸಿಗ್ನಲ್ ಇಲ್ಲ – ಇದು ಈಚಿನ ದಿನಗಳಲ್ಲಿ ನಮಗೆ ವ್ಯಾಪಕವಾಗಿ ಕೇಳಿಬರುತ್ತಿರುವ ದೂರು. ಮೊಬೈಲ್ ಪರದೆಯ ಬಲಭಾಗದ ಮೇಲ್ತುದಿಯಲ್ಲಿ ಕಾಣಿಸುವ ಸಣ್ಣ ಗೆರೆಗಳು ಮೊಬೈಲ್ ಸಂಕೇತದ ಶಕ್ತಿ ಎಷ್ಟಿದೆಯೆಂದು ತಿಳಿಸುತ್ತವೆ ಎನ್ನುವುದು ನಮಗೆ ಗೊತ್ತು. ಅಲ್ಲಿ ಹೆಚ್ಚು ಗೆರೆಗಳಿದ್ದರೆ ನಮ್ಮ ಮೊಬೈಲಿಗೆ ಸಿಗುತ್ತಿರುವ ಸಂಕೇತದ ಶಕ್ತಿ (ಸಿಗ್ನಲ್ ಸ್ಟ್ರೆಂಥ್) ತೃಪ್ತಿಕರವಾಗಿದೆ ಎಂದು ಅರ್ಥ. ಹಾಗಿದ್ದಾಗ ಮೊಬೈಲ್ ಕರೆ ಮಾಡುವುದು, ಇಂಟರ್​ನೆಟ್ ಬಳಸುವುದೆಲ್ಲ ಸರಾಗ. ಕಾಣಿಸುವ ಗೆರೆಗಳ ಸಂಖ್ಯೆ ಕಡಿಮೆಯಾದಷ್ಟೂ ಸಂಕೇತದ ಶಕ್ತಿ ಕಡಿಮೆಯಾಗಿದೆ ಎಂದು ತಿಳಿದುಕೊಳ್ಳಬಹುದು. ಮೊಬೈಲ್ ಸಂಕೇತದ ಶಕ್ತಿಯನ್ನು ಡಿಬಿಎಂ (DBM) ಎಂಬ ಏಕಮಾನದಲ್ಲಿ ಅಳೆಯಲಾಗುತ್ತದೆ. ಡಿಬಿಎಂ ಎನ್ನುವುದು ಡೆಸಿಬಲ್-ಮಿಲಿವ್ಯಾಟ್ಸ್ ಎಂಬ ಹೆಸರಿನ ಹ್ರಸ್ವರೂಪ. ಮೊಬೈಲಿನ ಸೆಟಿಂಗ್ಸ್​ಗೆ ಹೋದರೆ ಸದ್ಯ ನಮಗೆ ದೊರಕುತ್ತಿರುವ ಸಿಗ್ನಲ್ ಸ್ಟ್ರೆಂಥ್ ಎಷ್ಟು ಎಂದು ತಿಳಿದುಕೊಳ್ಳಬಹುದು (ಆಂಡ್ರಾಯ್್ಡ ನಲ್ಲಿ ಅಬೌಟ್ ಸ್ಟೇಟಸ್ ಸಿಮ್ ಸ್ಟೇಟಸ್). ಈ ಸಂಖ್ಯೆ ಸಾಮಾನ್ಯವಾಗಿ ಋಣಾತ್ಮಕವಾಗಿರುತ್ತದೆ (ನೆಗೆಟಿವ್). ಇದು ಸೊನ್ನೆಗೆ ಸಮೀಪವಿದ್ದಷ್ಟೂ (-60, -80, -90 ಹೀಗೆ) ಮೊಬೈಲ್ ಸಂಕೇತ ಸಾಕಷ್ಟು ಶಕ್ತಿಶಾಲಿಯಾಗಿದೆ ಎಂದರ್ಥ. -100 ಅಥವಾ ಅದಕ್ಕೂ ಕಡಿಮೆಯಾದಾಗ (-110, -120 ಹೀಗೆ) ಮೊಬೈಲಿನಲ್ಲಿ ಸಿಗ್ನಲ್ ಇಲ್ಲವೆಂದು ದೂರುವ ಪರಿಸ್ಥಿತಿ ಬರುತ್ತದೆ!
***

15-6-16
ಸೈಬರ್​ಕ್ರೈಮ್
ಮಾಹಿತಿ ತಂತ್ರಜ್ಞಾನದ ಸೌಲಭ್ಯ-ಸವಲತ್ತುಗಳ ನೆರವು ಪಡೆದು ಎಸಗುವ ಅಪರಾಧ ಚಟುವಟಿಕೆಗಳನ್ನು ‘ಸೈಬರ್ ಕ್ರೈಮ್ ಎಂದು ಗುರುತಿಸಲಾಗುತ್ತದೆ. ಇತರರ ಅವಹೇಳನ, ಪೀಡನೆ, ಅಶ್ಲೀಲ ಮಾಹಿತಿಯ ಪ್ರಸಾರಗಳಿಂದ ಪ್ರಾರಂಭಿಸಿ ವಂಚನೆ, ಕಳ್ಳತನ, ಭಯೋತ್ಪಾದನೆಗಳವರೆಗೆ ಸೈಬರ್ ಕ್ರೖೆಮ್ಲ್ಲಿ ಹಲವು ವಿಧ.

ಈ ಬಗೆಯ ಹೈಟೆಕ್ ಚಟುವಟಿಕೆಗಳಲ್ಲಿ ಮೊಬೈಲ್, ಕಂಪ್ಯುಟರ್ ಹಾಗೂ ಅಂತರ್ಜಾಲ ಸಂಪರ್ಕಗಳನ್ನು ವ್ಯಾಪಕವಾಗಿ ಬಳಸಲಾಗುತ್ತದೆ. ಎಸ್ಸೆಮ್ಮೆಸ್, ವಾಟ್ಸ್​ಆಪ್, ಇಮೇಲ್, ಫೇಸ್​ಬುಕ್ ಇತ್ಯಾದಿಗಳನ್ನೆಲ್ಲ ಸೈಬರ್ ಕ್ರಿಮಿನಲ್​ಗಳು ತಮ್ಮ ಅಪರಾಧದಲ್ಲಿ ಬಳಸುತ್ತಾರೆ. ಬಹುಮಾನ ಬಂದಿದೆಯೆಂದು, ಕೆಲಸ ಕೊಡಿಸುತ್ತೇವೆಂದು ಬರುವ ಫಿಶಿಂಗ್ ಸಂದೇಶಗಳು ಸೈಬರ್ ಅಪರಾಧದ ಗಾಳಗಳೇ! ಪ್ರಪಂಚದ ಹಲವು ರಾಷ್ಟ್ರಗಳಲ್ಲಿ ಸೈಬರ್ ಕ್ರೖೆಮ್ ತಡೆಗೆ ಅನೇಕ ಕಾನೂನುಗಳನ್ನು ರಚಿಸಲಾಗಿದೆ. ಆದರೂ ಸೈಬರ್ ಅಪರಾಧಗಳ ಬಗ್ಗೆ ದೂರುಗಳು ದಾಖಲಾಗುವುದು ಕಡಿಮೆಯೇ. 2014ರ ಅಂಕಿ ಅಂಶಗಳ ಪ್ರಕಾರ ಆ ವರ್ಷ ನಮ್ಮ ದೇಶದಲ್ಲಿ ಒಟ್ಟು 9,622 ಸೈಬರ್ ಕ್ರೖೆಮ್ಳ ಬಗ್ಗೆ ದೂರು ದಾಖಲಿಸಲಾಗಿತ್ತಂತೆ. ಆ ವರ್ಷ ಇಂತಹ ಅತಿ ಹೆಚ್ಚು ದೂರುಗಳು ದಾಖಲಾದ ರಾಜ್ಯಗಳ ಪೈಕಿ ಕರ್ನಾಟಕಕ್ಕೆ ಮೂರನೆಯ ಸ್ಥಾನ. ಇತರರ ವೆಬ್​ಸೈಟ್​ಗಳನ್ನು ಹಾಳುಗೆಡವುವ, ಸಾಮಾನ್ಯವಾಗಿ ‘ಹ್ಯಾಕಿಂಗ್’ ಎಂದು ಗುರುತಿಸಲಾಗುವ, ಚಟುವಟಿಕೆಯೂ ಸೈಬರ್ ಅಪರಾಧವೇ. 2016ರ ಮೊದಲ ಮೂರು ತಿಂಗಳುಗಳಲ್ಲಿ ಸುಮಾರು 8,000 ಇಂತಹ ಪ್ರಕರಣಗಳು ದಾಖಲಾಗಿದ್ದವಂತೆ.
***

16-6-16
COPY PASTE
ಕಂಪ್ಯೂಟರ್​ಲೋಕದಲ್ಲಿ ಒಂದುಕಡೆ ಇರುವ ಮಾಹಿತಿಯನ್ನು ನಕಲುಮಾಡಿಕೊಂಡು ಮತ್ತೊಂದೆಡೆ ಅಂಟಿಸಿ ಬಳಸುವ ಕ್ರಿಯೆಗೆ ‘ಕಾಪಿ-ಪೇಸ್ಟ್’ ಎಂದು ಹೆಸರು. ‘ಕಂಟ್ರೋಲ್’ ಮತ್ತು ‘ಸಿ’ ಕೀಲಿಗಳನ್ನು ಒಟ್ಟಿಗೆ ಒತ್ತಿದರೆ ಕಾಪಿ, ಹಾಗೆಯೇ ‘ಕಂಟ್ರೋಲ್’ ಮತ್ತು ‘ವಿ’ ಕೀಲಿಗಳನ್ನು ಒಟ್ಟಿಗೆ ಒತ್ತಿದರೆ ಪೇಸ್ಟ್ – ಇವು ಕಂಪ್ಯೂಟರ್ ಬಳಕೆದಾರರಿಗೆಲ್ಲ ಚಿರಪರಿಚಿತ.

ಕಾಪಿ-ಪೇಸ್ಟ್​ನ ಈ ಪರಿಕಲ್ಪನೆ ಪದಸಂಸ್ಕಾರಕ (ವರ್ಡ್​ಪ್ರಾಸೆಸರ್) ತಂತ್ರಾಂಶಗಳ ಪರಿಚಯದ ಜತೆಗೇ ಕಂಪ್ಯೂಟರ್​ಲೋಕವನ್ನು ಪ್ರವೇಶಿಸಿತು. ಆದರೆ ಕಾಪಿ ಮಾಡಲು ಕಂಟ್ರೋಲ್ ಸಿ, ಹಾಗೂ ಪೇಸ್ಟ್ ಮಾಡಲು ಕಂಟ್ರೋಲ್ ವಿ ಆಯ್ಕೆಗಳ (ಶಾರ್ಟ್​ಕಟ್) ಬಳಕೆ ಪ್ರಾರಂಭವಾದದ್ದು 1970ರ ದಶಕದಲ್ಲಿ, ಜೆರಾಕ್ಸ್ ಸಂಸ್ಥೆಯ ಪಾಲೋ ಆಲ್ಟೋ ರೀಸರ್ಚ್ ಸೆಂಟರ್​ನಲ್ಲಿ. ಕಟ್ ಮಾಡಲು ಕಂಟ್ರೋಲ್ ಎಕ್ಸ್, ಹಿಂದಿನ ಕ್ರಿಯೆಯನ್ನು ರದ್ದುಪಡಿಸಲು ಕಂಟ್ರೋಲ್ ಜೆಡ್, ಮುದ್ರಿಸಲು ಕಂಟ್ರೋಲ್ ಪಿ ಮುಂತಾದ ಆಯ್ಕೆಗಳ ಬಳಕೆ ಪ್ರಾರಂಭವಾದದ್ದೂ ಇದೇ ಸಮಯದಲ್ಲಿ.

ಮುಂದಿನ ದಿನಗಳಲ್ಲಿ ಕಂಟ್ರೋಲ್ ಸಿ ಹಾಗೂ ಕಂಟ್ರೋಲ್ ವಿ ಎಷ್ಟು ಪ್ರಮಾಣದ ಜನಪ್ರಿಯತೆ ಗಳಿಸಿಕೊಂಡವೆಂದರೆ ಅವು ಈಗ ಕಾಪಿ-ಪೇಸ್ಟ್​ಗೆ ಪರ್ಯಾಯ ಹೆಸರಾಗಿ ಬೆಳೆದಿವೆ. ಒಬ್ಬರ ಬರವಣಿಗೆಯನ್ನು ನಕಲಿಸಿ ತಮ್ಮ ಕೆಲಸದಲ್ಲಿ ಬಳಸಿಕೊಳ್ಳುವ ಲೇಖಕರು, ತಂತ್ರಾಂಶ ತಯಾರಿಯಲ್ಲಿ ಪ್ರೋಗ್ರಾಮುಗಳನ್ನು ಕದಿಯುವ ತಂತ್ರಜ್ಞರನ್ನೆಲ್ಲ ಲೇವಡಿ ಮಾಡಲೂ ಈ ಹೆಸರು ಬಳಕೆಯಾಗುತ್ತದೆ.
***

17-6-16
ರೀಡ್ ಓನ್ಲಿ ಮೆಮೊರಿ.
ಕಂಪ್ಯೂಟರಿನ ಮೆಮೊರಿ ಬಗ್ಗೆ ಮಾತನಾಡುವಾಗಲೆಲ್ಲ ರ್ಯಾಮ್ ಮತ್ತು ರಾಮ್ ಎಂಬ ಎರಡು ಹೆಸರುಗಳು ನಮ್ಮ ಮನಸ್ಸಿಗೆ ಬರುತ್ತವೆ. ರ್ಯಾಮ್ ಎಂದರೆ ರೀಡ್ ಓನ್ಲಿ ಮೆಮೊರಿ (ಛಿಜ್ಞಾನ 10 ಜೂನ್) ಸರಿ, ಆದರೆ ಇದೇನು ಈ ರಾಮ್

ರಾಮ್ ಎನ್ನುವುದು ರೀಡ್ ಓನ್ಲಿ ಮೆಮೊರಿ ಎಂಬ ಹೆಸರಿನ ಹ್ರಸ್ವರೂಪ. ಇಲ್ಲಿ ಶೇಖರವಾಗಿರುವ ಮಾಹಿತಿ ವಿದ್ಯುತ್ ಸಂಪರ್ಕವಿದ್ದರೂ ಇಲ್ಲದಿದ್ದರೂ ಹಾಗೆಯೇ ಉಳಿದಿರುತ್ತದೆ. ಹೆಸರೇ ಹೇಳುವಂತೆ ಇಲ್ಲಿರುವ ಮಾಹಿತಿಯನ್ನು ಓದುವುದು ಮಾತ್ರ ಸಾಧ್ಯ, ಬದಲಾಯಿಸುವುದು ಅಷ್ಟು ಸುಲಭವಲ್ಲ (ಅಳಿಸಿ ಮತ್ತೆ ಬರೆಯಬಹುದಾದ ರಾಮ್ಳೂ ಇವೆ, ವಿವರಗಳನ್ನು ಇನ್ನೊಮ್ಮೆ ನೋಡೋಣ). ಕಂಪ್ಯೂಟರಿನ ಉದಾಹರಣೆ ತೆಗೆದುಕೊಳ್ಳುವುದಾದರೆ ಅದರ ಕೆಲಸ ಪ್ರಾರಂಭವಾಗಲು ಬೇಕಾದ ನಿರ್ದೇಶನಗಳು ರಾಮ್ಲ್ಲಿ ದಾಖಲಾಗಿರುತ್ತವೆ. ಕಂಪ್ಯೂಟರಿನಂತೆ ಸ್ಮಾರ್ಟ್​ಫೋನಿನಲ್ಲೂ ರಾಮ್ ಇರುತ್ತದೆ. ಮೊಬೈಲಿನ ಆಪರೇಟಿಂಗ್ ಸಿಸ್ಟಂ ಇತ್ಯಾದಿಗಳೆಲ್ಲ ಶೇಖರವಾಗುವುದು ಇಲ್ಲೇ. ಕಂಪ್ಯೂಟರಿನಲ್ಲಿರುವಂತೆ ಪ್ರತ್ಯೇಕವಾಗಿರುವ ಬದಲು ಮೊಬೈಲಿನ ಆಂತರಿಕ ಶೇಖರಣಾ ಸಾಮರ್ಥ್ಯದ (ಇಂಟರ್ನಲ್ ಮೆಮೊರಿ) ಒಂದು ಭಾಗವೇ ರಾಮ್ಂತೆ ಬಳಕೆಯಾಗುತ್ತದೆ ಎನ್ನುವುದು ವ್ಯತ್ಯಾಸ. ಮೊಬೈಲಿನಲ್ಲಿ 32 ಜಿಬಿ ಶೇಖರಣಾ ಸಾಮರ್ಥ್ಯದೆ ಎಂದು ತಯಾರಕರು ಹೇಳಿಕೊಂಡರೂ ಅಷ್ಟು ಮೆಮೊರಿ ನಮ್ಮ ಬಳಕೆಗೆ ಸಿಗುವುದಿಲ್ಲವಲ್ಲ, ಅದಕ್ಕೆ ಇದೇ ಕಾರಣ.
***

18-6-16
ಪ್ರಾಸೆಸರ್
ಕಂಪ್ಯೂಟರ್ ವಿಜ್ಞಾನದ ಪ್ರಾಥಮಿಕ ಪಾಠಗಳನ್ನು ಓದಿದವರೆಲ್ಲರಿಗೂ ಕೇಂದ್ರೀಯ ಸಂಸ್ಕರಣ ಘಟಕ ಅಥವಾ ಸೆಂಟ್ರಲ್ ಪ್ರಾಸೆಸಿಂಗ್ ಯುನಿಟ್ (ಸಿಪಿಯು) ಎಂಬ ಹೆಸರಿನ ಪರಿಚಯ ಇರುತ್ತದೆ. ಕಂಪ್ಯೂಟರ್, ಮೊಬೈಲ್, ಟ್ಯಾಬ್ಲೆಟ್ ಮುಂತಾದ ಸಾಧನಗಳಲ್ಲಿ ಸಿಪಿಯುನಂತೆ ಕೆಲಸಮಾಡುವುದು ಅವುಗಳ ಪ್ರಾಸೆಸರ್. ಈ ಸಾಧನಗಳ ಚಟುವಟಿಕೆಯ ಪ್ರತಿ ಹೆಜ್ಜೆಯಲ್ಲೂ ನಡೆಯುವ ಅಸಂಖ್ಯ ಲೆಕ್ಕಾಚಾರಗಳನ್ನೆಲ್ಲ ನಿಭಾಯಿಸುವುದು ಪ್ರಾಸೆಸರ್​ನ ಜವಾಬ್ದಾರಿ.

ಪ್ರಾಸೆಸರ್ ಸಾಮರ್ಥ್ಯನ್ನು ಅದರ ವೇಗದ (ಕ್ಲಾಕ್ ಸ್ಪೀಡ್) ಮೂಲಕ ಪ್ರತಿನಿಧಿಸುವುದು ಸಂಪ್ರದಾಯ. ಈ ಪ್ರಾಸೆಸರ್ 1.5 ಗಿಗಾಹರ್ಟ್್ಸದು ಎಂದು ಹೇಳುತ್ತಾರಲ್ಲ, ಆ ಸಂಖ್ಯೆ ಸೂಚಿಸುವುದು ಇದೇ ಕ್ಲಾಕ್ ಸ್ಪೀಡ್ ಅನ್ನು. ಹರ್ಟ್್ಸ ಎನ್ನುವುದು ಇದರ ಏಕಮಾನ.

ಪ್ರಾಸೆಸರ್ ಕಾರ್ಯಕ್ಷಮತೆ ಅದರ ಕ್ಲಾಕ್ ಸ್ಪೀಡ್ ಜೊತೆಗೆ ಇನ್ನೂ ಅನೇಕ ಸಂಗತಿಗಳನ್ನು ಅವಲಂಬಿಸಿರುತ್ತದೆ. ಅದರಲ್ಲಿರುವ ತಿರುಳುಗಳ (ಕೋರ್) ಸಂಖ್ಯೆ ಇಂತಹ ಸಂಗತಿಗಳಲ್ಲೊಂದು.

ಒಂದು ಪ್ರಾಸೆಸರ್​ನಲ್ಲಿ ಎರಡು ತಿರುಳುಗಳಿವೆ (ಡ್ಯುಯಲ್ ಕೋರ್) ಎನ್ನುವುದಾದರೆ ಸೈದ್ಧಾಂತಿಕವಾಗಿ ಅದು ತನ್ನ ಕೆಲಸಗಳನ್ನು ಎರಡು ಪಟ್ಟು ವೇಗವಾಗಿ ಮಾಡಬಲ್ಲದು. ಅಷ್ಟೇ ಅಲ್ಲ, ವಿವಿಧ ಕೆಲಸಗಳನ್ನು ಈ ತಿರುಳುಗಳು ತಮ್ಮ ನಡುವೆ ಹಂಚಿಕೊಳ್ಳುವುದರಿಂದ ಒಂದೇ ಸಮಯಕ್ಕೆ ಹಲವು ಕೆಲಸಗಳಲ್ಲಿ ತೊಡಗಿಕೊಳ್ಳುವುದು (ಮಲ್ಟಿ ಟಾಸ್ಕಿಂಗ್) ಕೂಡ ಸಾಧ್ಯವಾಗುತ್ತದೆ. ಒಂದು-ಎರಡು ತಿರುಳುಗಳ ಪ್ರಾಸೆಸರ್​ಗಳಿಗಿಂತ ನಾಲ್ಕು ತಿರುಳುಗಳ ’ಕ್ವಾಡ್-ಕೋರ್’, ಎಂಟು ತಿರುಳುಗಳ ’ಆಕ್ಟಾ-ಕೋರ್’ ಪ್ರಾಸೆಸರ್ ಕಾರ್ಯಕ್ಷಮತೆ ಹೆಚ್ಚು ಎನ್ನುವುದಕ್ಕೆ ಇದೇ ಕಾರಣ.
***

19-6-16
ಮೊಬೈಲ್ ಜಗತ್ತು
ಕಳೆದೊಂದು ದಶಕದಲ್ಲಿ ಮೊಬೈಲ್ ಫೋನ್​ಗಳ ಜನಪ್ರಿಯತೆ ಬೆಳೆದ ರೀತಿಯನ್ನು ನಾವೆಲ್ಲ ಕಂಡಿದ್ದೇವೆ. ಎಲ್ಲರ ಕೈಯಲ್ಲೂ ಒಂದೊಂದು ಫೋನ್ ಕಾಣುತ್ತದಲ್ಲ, ಪ್ರಪಂಚದಲ್ಲಿ ಒಟ್ಟು ಎಷ್ಟು ಜನ ಮೊಬೈಲ್ ಬಳಸುತ್ತಿರಬಹುದು ಎನ್ನುವ ಪ್ರಶ್ನೆ ನಮ್ಮಲ್ಲಿ ಒಮ್ಮೆಯಾದರೂ ಮೂಡಿರುವುದು ಸಾಧ್ಯ.

ವಿಶ್ವದೆಲ್ಲೆಡೆ ಮೊಬೈಲ್ ಸೇವೆ ಒದಗಿಸುವ ಸಂಸ್ಥೆಗಳ ಒಕ್ಕೂಟ ಜಿಎಸ್​ಎಂ ಅಸೋಸಿಯೇಶನ್. ಈ ಸಂಸ್ಥೆ ಪ್ರಕಟಿಸಿರುವ ‘ದ ಮೊಬೈಲ್ ಎಕಾನಮಿ – 2016’ ವರದಿಯ ಪ್ರಕಾರ 2015ರ ಅಂತ್ಯದಲ್ಲಿ ಪ್ರಪಂಚದಲ್ಲಿ ಒಟ್ಟು 760 ಕೋಟಿ ಮೊಬೈಲ್ ಸಂಪರ್ಕಗಳಿದ್ದವಂತೆ. ಒಬ್ಬರ ಹೆಸರಿನಲ್ಲೇ ಒಂದಕ್ಕಿಂತ ಹೆಚ್ಚು ಸಂಪರ್ಕಗಳಿರುವ ಪ್ರಸಂಗಗಳನ್ನು ಹೊರತುಪಡಿಸಿದರೂ ಪ್ರಪಂಚದಲ್ಲಿರುವ ಒಟ್ಟು ಮೊಬೈಲ್ ಬಳಕೆದಾರರ ಸಂಖ್ಯೆ 470 ಕೋಟಿ! ಪ್ರಪಂಚದ ಶೇ. 63ರಷ್ಟು ಜನಸಂಖ್ಯೆ ಇದೀಗ ಮೊಬೈಲ್ ಬಳಸುತ್ತಿದೆ ಎಂದು ಈ ವರದಿ ಹೇಳುತ್ತದೆ. 2020ರ ವೇಳೆಗೆ ಈ ಪ್ರಮಾಣ ಶೇ. 70ನ್ನು ಮುಟ್ಟಲಿದೆ ಎನ್ನುವುದು ಅಂದಾಜು. ಇದೇ ಸಂಸ್ಥೆ ಪ್ರಕಟಿಸಿರುವ 2015ರ ವರದಿಯ ಪ್ರಕಾರ ಅತಿ ಹೆಚ್ಚು ಮೊಬೈಲ್ ಬಳಕೆದಾರರಿರುವ ರಾಷ್ಟ್ರಗಳ ಸಾಲಿನಲ್ಲಿ ನಮ್ಮ ದೇಶ ಎರಡನೇ ಸ್ಥಾನದಲ್ಲಿದೆ (ಮೊದಲ ಸ್ಥಾನದಲ್ಲಿರುವುದು ಚೀನಾ). ಮೊಬೈಲ್ ಬಳಸುವ ಭಾರತೀಯರ ಸಂಖ್ಯೆ 2020ರ ವೇಳೆಗೆ 73.4 ಕೋಟಿ ತಲುಪಲಿದೆ ಎಂದು ಅಂದಾಜಿಸಲಾಗಿದೆ.
***

22-6-16
ಸ್ಟೋರ್ಡ್ ಪ್ರೋಗ್ರಾಮ್ ಕಂಪ್ಯೂಟರ್

ಕಂಪ್ಯೂಟರಿನಲ್ಲಿ, ಮೊಬೈಲ್ ಫೋನಿನಲ್ಲಿ ಬೇರೆಬೇರೆ ಕೆಲಸಗಳಿಗೆ ಬೇರೆಬೇರೆ ತಂತ್ರಾಂಶಗಳನ್ನು ಬಳಸುವುದು ನಮಗೆ ಹೊಸ ವಿಷಯವೇನಲ್ಲ. ಹೀಗೆ ತಂತ್ರಾಂಶಗಳನ್ನು, ಅದರ ಅಂಗವಾದ ಪ್ರೋಗ್ರಾಮುಗಳನ್ನು ಬರೆಯುವ ಕೆಲಸಕ್ಕೆ ಪ್ರೋಗ್ರಾಮಿಂಗ್ ಎಂಬ ಹೆಸರಿರುವುದೂ ನಮಗೆ ಗೊತ್ತು (ಜಜ್ಞಾನ 30 ಏಪ್ರಿಲ್).

ನಮಗೇನು ಬೇಕೆಂದು ಕಂಪ್ಯೂಟರಿಗೆ ಹೇಳುವ ಈ ಕೆಲಸ ಹಿಂದೆಲ್ಲ ಇಷ್ಟು ಸುಲಭವಾಗಿರಲಿಲ್ಲ. ಮೊದಮೊದಲು ಕಂಪ್ಯೂಟರುಗಳು ಬಂದಾಗಲಂತೂ ಅವನ್ನು ಪ್ರೋಗ್ರಾಮ್ ಮಾಡಲು ವೈರುಗಳನ್ನು ಒಂದೆಡೆಯಿಂದ ಕಿತ್ತು ಇನ್ನೊಂದೆಡೆ ಜೋಡಿಸಬೇಕಾಗಿತ್ತು. ನಂತರದ ದಿನಗಳಲ್ಲೂ ಅಷ್ಟೆ, ಪ್ರೋಗ್ರಾಮಿನ ಸೂಚನೆಗಳನ್ನು ಕಾಗದದ ಪಟ್ಟಿಯ ಮೇಲೆ ಕೊರೆದ ರಂಧ್ರಗಳು ಸೂಚಿಸುತ್ತಿದ್ದವು. ಪಂಚ್ಡ್ ಕಾರ್ಡ್ ಅಥವಾ ಪಂಚ್ಡ್ ಟೇಪ್ ಎಂಬ ಈ ಮಾಧ್ಯಮವನ್ನು ಕಂಪ್ಯೂಟರಿನೊಳಕ್ಕೆ ತೂರಿಸುವ ಮೂಲಕ ಕಂಪ್ಯೂಟರಿಗೆ ಹೇಳಬೇಕಾದುದನ್ನು ಹೇಳಲಾಗುತ್ತಿತ್ತು. ಈ ಪರಿಸ್ಥಿತಿಯನ್ನು ಬದಲಿಸಿ ಆಧುನಿಕ ಕಂಪ್ಯೂಟರುಗಳ ಉಗಮಕ್ಕೆ ಕಾರಣವಾದ ಅಂಶಗಳಲ್ಲಿ ಸ್ಟೋರ್ಡ್ ಪ್ರೋಗ್ರಾಮ್ ಪರಿಕಲ್ಪನೆಗೆ ಪ್ರಮುಖ ಸ್ಥಾನವಿದೆ. ದತ್ತಾಂಶವನ್ನು ಉಳಿಸಿಡುವಂತೆ ಪ್ರೋಗ್ರಾಮುಗಳನ್ನೂ ಕಂಪ್ಯೂಟರಿನ ಮೆಮೊರಿಯಲ್ಲಿ ಉಳಿಸಿಡಬಹುದೆಂದು ಸೂಚಿಸಿದ್ದು ಈ ಪರಿಕಲ್ಪನೆ. ಈ ಪರಿಕಲ್ಪನೆಯ ವಿಕಾಸದ ಹಿಂದೆ ಇದ್ದ ಹಲವು ತಂತ್ರಜ್ಞರಲ್ಲಿ ಜಾನ್ ವಾನ್ ನ್ಯೂಮನ್​ರದು ಗಮನಾರ್ಹ ಹೆಸರು. ಸ್ಟೋರ್ಡ್ ಪ್ರೋಗ್ರಾಮ್ ಪರಿಕಲ್ಪನೆಯನ್ನು ಮೊದಲ ಬಾರಿಗೆ ಪ್ರಾಯೋಗಿಕವಾಗಿ ಬಳಸಿ ತೋರಿಸಿದ ಹೆಗ್ಗಳಿಕೆ ಮ್ಯಾಂಚೆಸ್ಟರ್ ವಿವಿಯ ಸ್ಮಾಲ್ ಸ್ಕೇಲ್ ಎಕ್ಸ್ ಪೆರಿಮೆಂಟಲ್ ಮಶೀನ್​ನದು. ಅದನ್ನು 1948ರಲ್ಲಿ ಇದೇ ದಿನ ಪರಿಚಯಿಸಲಾಗಿತ್ತು.
***

23-6-16
ಟಚ್​ಸ್ಕ್ರೀನ್
ಮೊಬೈಲ್ ಫೋನ್​ನಿಂದ ಕಾರ್​ನ ಮ್ಯೂಸಿಕ್ ಸಿಸ್ಟಂವರೆಗೆ, ಎಟಿಎಂನಿಂದ ಏರ್​ಪೋರ್ಟಿನ ಚೆಕಿನ್ ಯಂತ್ರದವರೆಗೆ ಈಗ ಎಲ್ಲಿ ನೋಡಿದರೂ ಟಚ್​ಸ್ಕ್ರೀನ್​ನದೇ ಕಾರುಬಾರು. ಕೀಬೋರ್ಡ್ ಕೀಲಿಗಳನ್ನು ಕುಟ್ಟುವ ಬದಲು ಪರದೆಯ ಮೇಲಿನ ಅಕ್ಷರಗಳನ್ನು ಮುಟ್ಟಿದರೆ ಸಾಕು, ನಮ್ಮ ಕೆಲಸ ಸಲೀಸಾಗಿ ಮುಗಿಯುತ್ತದೆ.
ಬಹುತೇಕ ಮೊಬೈಲ್ ಫೋನ್ ಹಾಗೂ ಟ್ಯಾಬ್ಲೆಟ್ಟುಗಳಲ್ಲಿ ಬಳಕೆಯಾಗುವ ಸ್ಪರ್ಶಸಂವೇದಿ ಪರದೆಗಳನ್ನು ‘ಕೆಪಾಸಿಟಿವ್’ ಟಚ್​ಸ್ಕ್ರೀನುಗಳೆಂದು ಕರೆಯುತ್ತಾರೆ. ನೀವು ಈ ಪರದೆಯನ್ನು ಮುಟ್ಟಿದಾಗ ಅದರ ವಿದ್ಯುತ್​ಕ್ಷೇತ್ರದಲ್ಲಿ (ಇಲೆಕ್ಟ್ರಿಕಲ್ ಫೀಲ್ಡ್) ಬದಲಾವಣೆಯಾಗುವಂತೆ ಅದನ್ನು ವಿನ್ಯಾಸಗೊಳಿಸಲಾಗಿರುತ್ತದೆ. ಈ ಬದಲಾವಣೆಯನ್ನು ಗ್ರಹಿಸಿ ನೀವು ಪರದೆಯ ಯಾವ ಭಾಗ ಮುಟ್ಟಿದ್ದೀರಿ ಎಂದು ತಿಳಿದುಕೊಳ್ಳುವುದು, ಅದಕ್ಕೆ ಅನುಗುಣವಾಗಿ ಮುಂದಿನ ಕೆಲಸಗಳನ್ನು ನಡೆಸುವುದು ಸಾಧ್ಯವಾಗುತ್ತದೆ.

ಅಂದಹಾಗೆ ಪರದೆಯ ವಿದ್ಯುತ್​ಕ್ಷೇತ್ರವನ್ನು ಬದಲಾಯಿಸಲು ಮನುಷ್ಯನ ಚರ್ಮ, ಸ್ಟೈಲಸ್ ಕಡ್ಡಿ ಮುಂತಾದ ವಿಶಿಷ್ಟ ವಸ್ತುಗಳಿಗಷ್ಟೇ ಸಾಧ್ಯ. ಕೈಚೀಲ ಹಾಕಿಕೊಂಡಾಗ, ಬೆರಳಿಗೆ ಬ್ಯಾಂಡೇಜ್ ಸುತ್ತಿದಾಗ ಅಥವಾ ಪೆನ್ನಿನಿಂದ ಕುಟ್ಟಿದಾಗ ಕೆಪಾಸಿಟಿವ್ ಟಚ್​ಸ್ಕ್ರೀನ್ ಸ್ಪಂದಿಸದಿರಲು ಇದೇ ಕಾರಣ. ‘ರೆಸಿಸ್ಟಿವ್ ಟಚ್​ಸ್ಕ್ರೀನ್’ ಎನ್ನುವುದು ಸ್ಪರ್ಶಸಂವೇದಿ ಪರದೆಗಳ ಇನ್ನೊಂದು ವಿಧ. ಕಡಿಮೆ ಬೆಲೆಯ ಹಣೆಪಟ್ಟಿಯೊಡನೆ ಮೊದಮೊದಲು ಬಂದ ಟ್ಯಾಬ್ಲೆಟ್ಟುಗಳಲ್ಲಿ ಈ ಬಗೆಯ ಟಚ್​ಸ್ಕ್ರೀನ್ ಇದ್ದದ್ದು ನಿಮ್ಮ ನೆನಪಿನಲ್ಲಿರಬಹುದು. ಕೈಬೆರಳನ್ನೋ ಬೇರಾವುದೇ ಸಾಧನವನ್ನೋ ಪರದೆಯ ಮೇಲೆ ಒತ್ತಿದಾಗ ಉಂಟಾಗುವ ಒತ್ತಡವನ್ನು ಗ್ರಹಿಸಿ ಈ ಬಗೆಯ ಟಚ್​ಸ್ಕ್ರೀನುಗಳು ಕೆಲಸಮಾಡುತ್ತವೆ. ಕೆಪಾಸಿಟಿವ್ ಟಚ್​ಸ್ಕ್ರೀನುಗಳ ಹೋಲಿಕೆಯಲ್ಲಿ ಇವುಗಳ ಬಳಕೆ ಅಷ್ಟೊಂದು ಸರಾಗ ಎನ್ನಿಸುವುದಿಲ್ಲ.
***

24-6-16
ಕ್ವರ್ಟಿ ಕೀಬೋರ್ಡ್
ಕಂಪ್ಯೂಟರಿನ ಕೀಬೋರ್ಡ್ ನಮಗೆಲ್ಲ ಗೊತ್ತು. ಇಂಗ್ಲಿಷ್ ಅಕ್ಷರ ‘ಎ’ ಪಕ್ಕದಲ್ಲಿ ‘ಎಸ್’, ‘ಬಿ’-’ಸಿ’ಗಳ ನಡುವೆ ‘ವಿ’, ‘ಡಿ’ ನಂತರ ‘ಎಫ್’ – ಹೀಗೆ ಇಲ್ಲಿನ ಕೀಲಿಗಳ ಜೋಡಣೆ ತೀರಾ ವಿಚಿತ್ರ ಎನ್ನುವುದೂ ನಮ್ಮ ಗಮನಕ್ಕೆ ಬಂದಿರುತ್ತದೆ. ಕೀಲಿಮಣೆಯ ಮೊದಲ ಸಾಲಿನಲ್ಲಿ ಕಾಣುವ ಕಿ – ಘ – ಇ – ಖ – ಖಿ – š ಯಂತೂ ಎಷ್ಟು ಪರಿಚಿತವೆಂದರೆ ಕೀಲಿಮಣೆಗಳನ್ನು ‘ರ್ಕÌ ಕೀಬೋರ್ಡ್’ಗಳೆಂದು ಕರೆಯುವ ಅಭ್ಯಾಸವೇ ಬೆಳೆದುಬಂದಿದೆ.

ಈ ಜೋಡಣೆ ಮೊದಲಿಗೆ ಕಾಣಿಸಿಕೊಂಡದ್ದು ಟೈಪ್​ರೈಟರುಗಳಲ್ಲಿ, ಸುಮಾರು ಎರಡು ಶತಮಾನಕ್ಕೂ ಹಿಂದೆ! ಇದನ್ನು ರೂಪಿಸಿದ ಶ್ರೇಯ ಕ್ರಿಸ್ಟೋಫರ್ ಶೋಲ್ಸ್ (1819 – 1890) ಎಂಬಾತನಿಗೆ ಸಲ್ಲುತ್ತದೆ. ಟೈಪ್​ರೈಟರಿನಲ್ಲಿ ಟೈಪಿಸುವಾಗ ಅಕ್ಷರದ ಅಚ್ಚುಗಳು ಒಂದಕ್ಕೊಂದು ಸಿಕ್ಕಿಕೊಳ್ಳದಂತೆ ನೋಡಿಕೊಳ್ಳುವ ಉದ್ದೇಶದಿಂದ ಅವನು ಈ ವಿನ್ಯಾಸ ರೂಪಿಸಿದನಂತೆ. ಜೊತೆಯಾಗಿ ಬಳಕೆಯಾಗುವ ಅಕ್ಷರಗಳು ಪರಸ್ಪರ ದೂರದಲ್ಲಿರುವಂತೆ ನೋಡಿಕೊಳ್ಳಲು ಅವನು ರೂಪಿಸಿದ ಸೂತ್ರವೇ ರ್ಕÌ. ಈ ಜೋಡಣೆ ಬಳಸಿದ ಟೈಪ್​ರೈಟರ್ ವಿನ್ಯಾಸಕ್ಕೆ ಪೇಟೆಂಟ್ ದೊರೆತದ್ದು 1868ರ ಜೂನ್ 23ರಂದು.

ಈ ವಿನ್ಯಾಸ ಟೈಪ್​ರೈಟರುಗಳಲ್ಲಿ ಅದೆಷ್ಟು ಜನಪ್ರಿಯವಾಯಿತೆಂದರೆ ನಂತರದ ದಿನಗಳಲ್ಲಿ ಬಂದ ಕಂಪ್ಯೂಟರುಗಳೂ ಇದೇ ವಿನ್ಯಾಸವನ್ನು ಬಳಸಿದವು. ಟೈಪ್​ರೈಟರುಗಳೊಡನೆ ದೂರದ ಸಂಬಂಧವೂ ಇರದ, ಭೌತಿಕ ಕೀಲಿಮಣೆಯೇ ಇಲ್ಲದ ಸ್ಮಾರ್ಟ್​ಫೋನುಗಳಲ್ಲೂ ಈ ವಿನ್ಯಾಸ ಬಳಕೆಯಲ್ಲಿದೆ.
***

25-6-16
ಯುಎಸ್​ಬಿ ಆನ್ ದ ಗೋ
ನಮಗೆ ಯುಎಸ್​ಬಿ ಪರಿಚಯ ಚೆನ್ನಾಗಿಯೇ ಇದೆ (ಛಿಜ್ಞಾನ 8 ಜೂನ್). ಕಂಪ್ಯೂಟರ್ ಬಳಕೆದಾರರಲ್ಲದವರೂ ಟೀವಿ, ಮ್ಯೂಸಿಕ್ ಸಿಸ್ಟಂ ಇತ್ಯಾದಿಗಳ ಮೂಲಕ ಯುಎಸ್​ಬಿ ಅನುಕೂಲ ಪಡೆದುಕೊಳ್ಳುತ್ತಿರುವುದು ಅಪರೂಪದ ಸಂಗತಿಯೇನಲ್ಲ. ಮೊಬೈಲ್ ಹಾಗೂ ಟ್ಯಾಬ್ಲೆಟ್​ಗಳ ಬಳಕೆ ಜಾಸ್ತಿಯಾದಂತೆ ಅವು ಕಂಪ್ಯೂಟರ್​ಗೆ ಪರ್ಯಾಯವಾಗಿ ಬೆಳೆದುಬಿಟ್ಟಿವೆಯಲ್ಲ, ಹಾಗಾಗಿ ಯುಎಸ್​ಬಿ ಬಳಸುವ ವಿವಿಧ ಸಾಧನಗಳನ್ನು

(ಪೆನ್​ಡ್ರೈವ್, ಮೌಸ್, ಕೀಬೋರ್ಡ್ ಇತ್ಯಾದಿ) ಅವುಗಳಿಗೆ ಸಂರ್ಪಸುವ ಪರಿಪಾಠವೂ ಬೆಳೆಯುತ್ತಿದೆ.

ಕಂಪ್ಯೂಟರಿನ ನೆರವಿಲ್ಲದೆ ಮೊಬೈಲಿಗೋ ಟ್ಯಾಬ್ಲೆಟ್ಟಿಗೋ ಈ ಸಾಧನಗಳನ್ನೆಲ್ಲ ಸಂರ್ಪಸಲು ಸಾಧ್ಯವಾಗಿಸಿರುವುದು ಯುಎಸ್​ಬಿ ಆನ್ ದ ಗೋ ಅಥವಾ ಓಟಿಜಿ ಸೌಲಭ್ಯ. ಈ ಸೌಲಭ್ಯವಿರುವ ಯಾವುದೇ ಮೊಬೈಲ್ ಹಾಗೂ ಟ್ಯಾಬ್ಲೆಟ್ಟಿಗೆ ನಾವು ಯುಎಸ್​ಬಿ ಸಾಧನಗಳನ್ನು ಜೋಡಿಸಬಹುದು. ಇದಕ್ಕೆಂದೇ ಮೈಕ್ರೋ ಯುಎಸ್​ಬಿ ಪೋರ್ಟ್​ಗೆ ಜೋಡಿಸಬಹುದಾದ ಪೆನ್​ಡ್ರೈವ್, ಕಾರ್ಡ್ ರೀಡರ್​ಗಳೆಲ್ಲ ಬಂದಿವೆ. ಮೊಬೈಲಿಗೋ ಪವರ್​ಬ್ಯಾಂಕಿಗೋ ಸಂರ್ಪಸಿ ಬಳಸಬಹುದಾದ ಫ್ಯಾನ್

ಕೂಡ ಇದೆ! ಇನ್ನಿತರ ಸಾಮಾನ್ಯ ಯುಎಸ್​ಬಿ ಸಾಧನಗಳನ್ನೂ ಮೈಕ್ರೋ ಯುಎಸ್​ಬಿ ಪೋರ್ಟ್​ಗೆ ಜೋಡಿಸುವುದು ಸಾಧ್ಯ; ಇದಕ್ಕಾಗಿ ಒಂದು ಬದಿ ಮೈಕ್ರೋ ಯುಎಸ್​ಬಿ ಸಂಪರ್ಕವಿರುವ, ಇನ್ನೊಂದು ಬದಿಯಲ್ಲಿ ಸಾಮಾನ್ಯ ಯುಎಸ್​ಬಿ ಸಾಧನ ಜೋಡಿಸಬಹುದಾದ ಓಟಿಜಿ ಕೇಬಲ್ ಅಥವಾ ಅಡಾಪ್ಟರುಗಳನ್ನು ಬಳಸಬಹುದು. ನೆನಪಿಡಿ, ಇದನ್ನೆಲ್ಲ ಬಳಸಲು ನಿಮ್ಮ ಫೋನ್ ಅಥವಾ ಟ್ಯಾಬ್ಲೆಟ್ಟಿನಲ್ಲಿ ಓಟಿಜಿ ಸೌಲಭ್ಯ ಇರಬೇಕಾದ್ದು ಕಡ್ಡಾಯ.
***

26-6-16
ಬಗೆಬಗೆ ಸಾಫ್ಟ್​ವೇರ್
ಮೊಬೈಲ್ ಫೋನ್, ಕಂಪ್ಯೂಟರ್ ಮುಂತಾದ ಸಾಧನಗಳಿಗೆಲ್ಲ ಪಾಠಹೇಳುವ ಕೆಲಸ ಸಾಫ್ಟ್​ವೇರ್, ಅಂದರೆ ತಂತ್ರಾಂಶದ್ದು ಎನ್ನುವ ವಿಷಯ ನಮಗೆ ಗೊತ್ತು (ಇಜ್ಞಾನ 19 ಮೇ). ಬೇರೆಬೇರೆ ಕೆಲಸಗಳಿಗೆ ಬೇರೆಬೇರೆ ತಂತ್ರಾಂಶಗಳು ಬಳಕೆಯಾಗುವುದೂ ನಮಗೆ ಗೊತ್ತಿರುವ ಸಂಗತಿಯೇ.

ತಂತ್ರಾಂಶಗಳು ಯಾವ ಉದ್ದೇಶಕ್ಕಾಗಿ ಬಳಕೆಯಾಗುತ್ತವೆ ಎನ್ನುವುದರ ಆಧಾರದ ಮೇಲೆ ಅವನ್ನು ಬೇರೆಬೇರೆ ಗುಂಪುಗಳಲ್ಲಿ ವರ್ಗೀಕರಿಸುತ್ತಾರೆ. ಆನ್ವಯಿಕ ಹಾಗೂ ವ್ಯವಸ್ಥಾ ತಂತ್ರಾಂಶಗಳು ಇಂತಹ ಗುಂಪುಗಳಿಗೆ ಎರಡು ಉದಾಹರಣೆ.

ಬಳಕೆದಾರನ ನಿರ್ದಿಷ್ಟ ಉದ್ದೇಶವನ್ನು (ಉದಾ: ಪತ್ರ ಟೈಪ್ ಮಾಡುವುದು, ಲೆಕ್ಕಾಚಾರವನ್ನು ದಾಖಲಿಸಿಕೊಳ್ಳುವುದು ಇತ್ಯಾದಿ) ಪೂರೈಸಿಕೊಳ್ಳಲು ನೆರವಾಗುವ ತಂತ್ರಾಂಶಗಳನ್ನು ಅಪ್ಲಿಕೇಶನ್ ಸಾಫ್ಟ್​ವೇರ್, ಅಂದರೆ ಆನ್ವಯಿಕ ತಂತ್ರಾಂಶಗಳೆಂದು ಕರೆಯುತ್ತಾರೆ. ಪದಸಂಸ್ಕರಣೆ, ಲೆಕ್ಕಾಚಾರ, ಸ್ಲೈಡ್ ಪ್ರೆಸೆಂಟೇಶನ್​ಗಳಲ್ಲೆಲ್ಲ ನೆರವಾಗುವ ತಂತ್ರಾಂಶಗಳು (ಹಾಗೂ ಮೊಬೈಲ್ ಆಪ್​ಗಳು) ಆನ್ವಯಿಕ ತಂತ್ರಾಂಶಗಳೇ. ಬಹಳಷ್ಟು ಕ್ಷೇತ್ರಗಳಲ್ಲಿ ಇವುಗಳ ಉಪಯೋಗ ಸಾಮಾನ್ಯ. ಆನ್ವಯಿಕ ತಂತ್ರಾಂಶಗಳು ಕೆಲಸಮಾಡಲು ನೆರವಾಗುವ ಆಪರೇಟಿಂಗ್ ಸಿಸ್ಟಂನಂತಹ ತಂತ್ರಾಂಶಗಳಿಗೆ ಸಿಸ್ಟಂ

ಸಾಫ್ಟ್​ವೇರ್, ಅಂದರೆ ವ್ಯವಸ್ಥಾ ತಂತ್ರಾಂಶಗಳೆಂದು ಹೆಸರು. ಆನ್ವಯಿಕ ತಂತ್ರಾಂಶಗಳಂತೆ ಯಾವುದೋ ಒಂದು ನಿರ್ದಿಷ್ಟ ಉದ್ದೇಶಕ್ಕಾಗಿ ನಾವು ಇವನ್ನು ಬಳಸುವುದಿಲ್ಲ, ನಿಜ. ಆದರೆ ಆನ್ವಯಿಕ ತಂತ್ರಾಂಶಗಳು ಸರಿಯಾಗಿ ಕೆಲಸಮಾಡಲು ವ್ಯವಸ್ಥಾ ತಂತ್ರಾಂಶಗಳ ಬೆಂಬಲ ಅತ್ಯಗತ್ಯ.
***

27-6-16
ಸಂವಹನದ ಸಮುದ್ರೋಲ್ಲಂಘನ
ನಾವು ಮೊಬೈಲಿನಲ್ಲಿ ಮಾತನಾಡುತ್ತೇವೆ, ಅಂತರಜಾಲ ಸಂಪರ್ಕ ಬಳಸುತ್ತೇವೆ. ಇದೆಲ್ಲ ಹೇಗೆ ಸಾಧ್ಯವಾಗುತ್ತದೆ ಎಂದು ಕೇಳಿದರೆ ಕಿಟಕಿಯಿಂದಾಚೆ ಕಾಣುವ ಮೊಬೈಲ್ ಟವರ್ ಅನ್ನು ತೋರಿಸುತ್ತೇವೆ. ಆದರೆ ಅಲ್ಲಿಂದ ಮುಂದಿನ ಸಂಪರ್ಕ ಸಾಧ್ಯವಾಗುವುದು, ನಮ್ಮ ಕರೆ ಬೇರೆಲ್ಲೋ ಇರುವ ಇನ್ನೊಬ್ಬರನ್ನು ತಲುಪುವುದು ಹೇಗೆ?

ಉತ್ತರ ಗೊತ್ತಿಲ್ಲದಿದ್ದರೆ ಆಕಾಶ ನೋಡಬೇಕಿಲ್ಲ, ಕಾಲ ಕೆಳಗಿನ ನೆಲವನ್ನಷ್ಟೇ ನೋಡಿದರೆ ಸಾಕು. ಏಕೆಂದರೆ ಮೊಬೈಲ್ ಟವರ್​ಗಳ ನಂತರದ ಹಂತದ ಸಂವಹನದಲ್ಲಿ ಪ್ರಮುಖ ಪಾತ್ರ ವಹಿಸುವುದು ನೆಲದಡಿಯ ಕೇಬಲ್ಲುಗಳು. ಇಲ್ಲಿ ಬಳಕೆಯಾಗುವುದೇ ಆಪ್ಟಿಕಲ್ ಫೈಬರ್ ಕೇಬಲ್ ಅಥವಾ ಓಎಫ್​ಸಿ (ಛಿಜ್ಞಾನ 29 ಮೇ).

ನೆಲದ ಮೇಲೇನೋ ಸರಿ, ಬಡಾವಣೆಯಿಂದ ಬಡಾವಣೆಗೆ – ಊರಿಂದ ಊರಿಗೆ ಈ ಕೇಬಲ್ಲುಗಳು ಸಂಪರ್ಕ ಕಲ್ಪಿಸುತ್ತವೆ. ಆದರೆ ಸಂವಹನದ ಸಮುದ್ರೋಲ್ಲಂಘನ? ಅಲ್ಲೂ ಇಂತಹ ಕೇಬಲ್ಲುಗಳೇ ಬಳಕೆಯಾಗುತ್ತವೆ!

ವಿವಿಧ ರಾಷ್ಟ್ರಗಳ – ಖಂಡಗಳ ನಡುವೆ ಸಂವಹನ ಸಾಧ್ಯವಾಗಿಸುವ ಇಂತಹ ಕೇಬಲ್ಲುಗಳನ್ನು ಸಬ್​ವುರೀನ್ ಕಮ್ಯುನಿಕೇಶನ್ಸ್ ಕೇಬಲ್ಲುಗಳೆಂದು ಕರೆಯುತ್ತಾರೆ. ನಾವು-ನೀವು ರಸ್ತೆಬದಿಯಲ್ಲಿ ಕಾಣುವ ಕೇಬಲ್ಲುಗಳಿಗಿಂತ ಹೆಚ್ಚು ಸದೃಢ ರಚನೆಯ ಈ ಕೇಬಲ್ಲುಗಳನ್ನು ಸಮುದ್ರದಾಳದಲ್ಲಿ ಹುದುಗಿಸಿಡಲು ವಿಶೇಷ ಹಡಗುಗಳು ಬಳಕೆಯಾಗುತ್ತವೆ. ಇಂತಹ ಕೇಬಲ್ಲುಗಳನ್ನು ಅಳವಡಿಸಿ ನಿರ್ವಹಿಸುವುದೇ ಹಲವು ದೊಡ್ಡ ಸಂಸ್ಥೆಗಳ ಕೆಲಸ.
***

28-6-16
ಸಂವಹನ ಉಪಗ್ರಹ
ಮಾನವನಿರ್ವಿುತ ಉಪಗ್ರಹಗಳ (ಆರ್ಟಿಫೀಶಿಯಲ್ ಸ್ಯಾಟೆಲೈಟ್) ಬಗ್ಗೆ ನಾವೆಲ್ಲ ಕೇಳಿಯೇ ಇರುತ್ತೇವೆ. ವೈಜ್ಞಾನಿಕ ಅಧ್ಯಯನ, ಹವಾಮಾನ ಮುನ್ಸೂಚನೆ ಮುಂತಾದ ಅನೇಕ ಉದ್ದೇಶಗಳಿಗಾಗಿ ಅವು ಬಳಕೆಯಾಗುತ್ತವೆ ಎನ್ನುವುದೂ ನಮಗೆ ಗೊತ್ತು. ಈ ಪೈಕಿ ಸಂವಹನಕ್ಕಾಗಿ ಬಳಕೆಯಾಗುವ ಉಪಗ್ರಹಗಳನ್ನು ಕಮ್ಯೂನಿಕೇಶನ್ಸ್ ಸ್ಯಾಟೆಲೈಟ್​ಗಳೆಂದು ಕರೆಯುತ್ತಾರೆ.

ಟಿವಿ ಪ್ರಸಾರದಲ್ಲಿ ನೆರವಾಗುವುದು ಈ ಉಪಗ್ರಹಗಳ ಪ್ರಮುಖ ಜವಾಬ್ದಾರಿ. ಮನೆಗಳಲ್ಲಿ ಡಿಟಿಎಚ್ ಮೂಲಕ ಟಿವಿ ಪ್ರಸಾರ ವೀಕ್ಷಿಸುತ್ತೇವಲ್ಲ, ಪ್ರಸಾರ ಕೇಂದ್ರದಿಂದ ನಮ್ಮ ಮನೆ ಮೇಲಿನ ಡಿಶ್ ಆಂಟೆನಾವರೆಗೆ ಟೀವಿ ಸಂಕೇತಗಳನ್ನು ತಲುಪಿಸುವುದು ಸಂವಹನ ಉಪಗ್ರಹಗಳದೇ ಕೆಲಸ. ಕೆಲವು ದಶಕಗಳ ಹಿಂದೆ ಖಂಡಾಂತರ ದೂರವಾಣಿ ಕರೆಗಳನ್ನು ಸಾಧ್ಯವಾಗಿಸಲೂ ಈ ಉಪಗ್ರಹಗಳನ್ನು ಬಳಸಲಾಗುತ್ತಿತ್ತು. ಈಗ, ದೂರಸಂಪರ್ಕದ ಬೇರೆ ಮಾರ್ಗಗಳು ರೂಪುಗೊಂಡ ನಂತರ, ಸಾಮಾನ್ಯ ದೂರವಾಣಿ ಸಂಪರ್ಕವಿಲ್ಲದ ಪ್ರದೇಶಗಳಲ್ಲಿ ಮಾತ್ರವೇ ಸ್ಯಾಟೆಲೈಟ್ ಟೆಲಿಫೋನ್ ಬಳಕೆಯಾಗುತ್ತಿದೆ. ಅಂತಹ ಪ್ರದೇಶಗಳಲ್ಲಿ ಅಂತರಜಾಲ ಸಂಪರ್ಕ ಕಲ್ಪಿಸಲೂ ಸಂವಹನ ಉಪಗ್ರಹಗಳು ನೆರವಾಗಬಲ್ಲವು. ಇದಲ್ಲದೆ ಹ್ಯಾಮ್ ರೇಡಿಯೋ ಹಾಗೂ ಮಿಲಿಟರಿ ಸಂವಹನದಂತ ಕ್ಷೇತ್ರಗಳಲ್ಲೂ ಸಂವಹನ ಉಪಗ್ರಹಗಳು ಪ್ರಮುಖ ಪಾತ್ರ ವಹಿಸುತ್ತವೆ. ಡಿಅಂದಹಾಗೆ ಸಂವಹನ ಉಪಗ್ರಹಗಳ ಪ್ರಯೋಜನವನ್ನು ಮೊತ್ತಮೊದಲ ಬಾರಿಗೆ ಜನಸಾಮಾನ್ಯರಿಗೂ ತಲುಪಿಸಿದ ಹಿರಿಮೆ ಅಮೆರಿಕಾದ ‘ಇಂಟೆಲ್​ಸ್ಯಾಟ್-1’ ಉಪಗ್ರಹದ್ದು. ಇಂದಿಗೆ ಐವತ್ತೊಂದು ವರ್ಷಗಳ ಹಿಂದೆ (ಜೂನ್ 28, 1965) ಈ ಉಪಗ್ರಹ ಕಾರ್ಯಾರಂಭ ಮಾಡಿತ್ತು.
***

29-6-16
ವೈರ್​ಲೆಸ್ ಚಾರ್ಜಿಂಗ್
BY ವಿಜಯವಾಣಿ ಸುದ್ದಿಜಾಲ · JUN 29, 2016

ಮೊಬೈಲ್ ಫೋನಿನ ಮೇಲೆ ನಮ್ಮ ಅವಲಂಬನೆ ಇತ್ತೀಚಿನ ವರ್ಷಗಳಲ್ಲಿ ತೀರಾ ಜಾಸ್ತಿಯಾಗಿದೆ. ಕೊಂಚಹೊತ್ತು ಮೊಬೈಲ್ ಕೆಲಸ ಮಾಡಲಿಲ್ಲವೆಂದರೆ ನಮ್ಮಲ್ಲಿ ಅನೇಕರಿಗೆ ಕೈಕಾಲುಗಳೇ ಆಡುವುದಿಲ್ಲವೇನೋ!

ಮೊಬೈಲ್ ಸದಾಕಾಲ ಕೆಲಸಮಾಡುವಂತೆ ಮಾಡಲು ನಾವು ಮಾಡಬಹುದಾದ ಒಂದು ಕೆಲಸವೆಂದರೆ ಅದರಲ್ಲಿ ಸಾಕಷ್ಟು ಚಾರ್ಜ್ ಇರುವಂತೆ ನೋಡಿಕೊಳ್ಳುವುದು. ಇದಕ್ಕಾಗಿ ಮೊಬೈಲಿನ ಜೊತೆಗೆ ಚಾರ್ಜರನ್ನು ಬೇರೆ ಕೊಂಡೊಯ್ಯಬೇಕಲ್ಲ ಎಂದು ಚಿಂತಿಸುವವರಿಗೆ ಹೊಸದೊಂದು ಆಯ್ಕೆಯೂ ಇದೆ. ಆ ಆಯ್ಕೆಯ ಹೆಸರೇ ವೈರ್​ಲೆಸ್ ಚಾರ್ಜಿಂಗ್.

ನಾವೆಲ್ಲ ಸಾಮಾನ್ಯವಾಗಿ ಮಾಡುವಂತೆ ಕೇಬಲ್​ನ ಒಂದು ತುದಿಯನ್ನು ಚಾರ್ಜರಿಗೂ ಇನ್ನೊಂದನ್ನು ಮೊಬೈಲಿಗೂ ಚುಚ್ಚಿಡುವ ಬದಲು ಇಲ್ಲಿ ಪುಟ್ಟದೊಂದು ಫಲಕದ (ಚಾರ್ಜಿಂಗ್ ಪ್ಯಾಡ್) ಮೇಲೆ ಮೊಬೈಲನ್ನು ಇಟ್ಟರೆ ಸಾಕು, ಅದು ಚಾರ್ಜ್ ಆಗಲು ಶುರು ವಾಗುತ್ತದೆ!

ಅಡುಗೆಮನೆಯ ಆಧುನಿಕ ಒಲೆಯಂತೆ ಇಲ್ಲೂ ಬಳಕೆಯಾಗುವುದು ಇಂಡಕ್ಷನ್ (ಪ್ರೇರಣೆ) ಎಂಬ ವಿದ್ಯಮಾನ. ಇಂಡಕ್ಷನ್ ಒಲೆಯಲ್ಲಿ ಈ ವಿದ್ಯಮಾನ ಆಹಾರ ಪದಾರ್ಥಗಳನ್ನು ಬಿಸಿಮಾಡಿದರೆ ಮೊಬೈಲ್ ಚಾರ್ಜರಿನಲ್ಲಿ ಬ್ಯಾಟರಿಯನ್ನು ಚಾರ್ಜ್ ಮಾಡುತ್ತದೆ. ಆದರೆ ನೆನಪಿಡಿ, ಎಲ್ಲ ಗ್ಯಾಜೆಟ್​ಗಳನ್ನೂ ಈ ವಿಧಾನದ ಮೂಲಕ ಚಾರ್ಜ್ ಮಾಡುವಂತಿಲ್ಲ್ಲ; ವೈರ್​ಲೆಸ್ ಚಾರ್ಜಿಂಗ್ ಬೆಂಬಲಿಸುವ ಮಾದರಿಗಳು ಮಾತ್ರವೇ ಹೀಗೆ ಚಾರ್ಜ್ ಆಗಬಲ್ಲವು. ವೈರ್​ಲೆಸ್ ಚಾರ್ಜಿಂಗ್ ಪ್ಯಾಡ್ ಬಳಸಿ ಇತರ ಸಾಧನಗಳನ್ನೂ ಚಾರ್ಜ್ ಮಾಡಲು ಕೆಲ ಹೆಚ್ಚುವರಿ ಸಲಕರಣೆಗಳು ಮಾರುಕಟ್ಟೆಯಲ್ಲಿ ಸಿಗುತ್ತವಾದರೂ ಅದನ್ನು ನಮ್ಮ ಜವಾಬ್ದಾರಿ ಹಾಗೂ ಎಚ್ಚರಿಕೆಯಲ್ಲೇ ಬಳಸಬೇಕು.

ಜೂನ್-2016 ರ ಸರ್ಕಾರಿ ಕಾರ್ನರ್ ಪ್ರಶ್ನೆಗಳು

ರಜೆ, ಭತ್ಯೆ, ವೇತನ ತಾರತಮ್ಯ, ದೈಹಿಕ, ಮಾನಸಿಕ ಕಿರುಕುಳ ಸೇರಿದಂತೆ ಸರ್ಕಾರಿ ನೌಕರರಿಗೆ ಸಂಬಂಧಪಟ್ಟ ಸಮಸ್ಯೆಗಳಿಗೆ ಕಾನೂನು ಪರಿಹಾರ ಸೂಚಿಸುವ ದೈನಂದಿನ ಅಂಕಣ ಸರ್ಕಾರಿ ಕಾರ್ನರ್. ಸೇವಾ ಕಾನೂನು ತಜ್ಞ ಲ. ರಾಘವೇಂದ್ರ ಅವರು ಸರ್ಕಾರಿ ಉದ್ಯೋಗಸ್ಥರ ಸಮಸ್ಯೆಗಳಿಗೆ ಪರಿಹಾರ ಸೂಚಿಸುತ್ತಾರೆ.

image

ಪ್ರಶ್ನೆ ಕೇಳಿ ಪರಿಹಾರ ಪಡೆಯಿರಿ.

ನಿಮ್ಮ ಪ್ರಶ್ನೆಗಳನ್ನು ನಮಗೆ ಕಳುಹಿಸಿ. ನಮ್ಮ ವಿಳಾಸ: ವಿಜಯವಾಣಿ, ನಂ.24, ಶ್ರೀ ಸಾಯಿರಾಂ ಟವರ್ಸ್, ಮೊದಲ ಮಹಡಿ, 5ನೇ ಮುಖ್ಯರಸ್ತೆ, ಚಾಮರಾಜಪೇಟೆ, ಬೆಂಗಳೂರು 560018.

ಇ-ಮೇಲ್: sarakaricarner@gmail.com

ದೂರವಾಣಿ: 8884432666, ಫ್ಯಾಕ್ಸ್: 080-26257464.
***

1-6-16.
ನಾನು ಆಯುಷ್ ಇಲಾಖೆಯಲ್ಲಿ ವೈದ್ಯಾಧಿಕಾರಿಯಾಗಿ ಕಾರ್ಯ ನಿರ್ವಹಿಸುತ್ತಿದ್ದು ನನಗೆ ಇನ್ನೊಂದು ಚಿಕಿತ್ಸಾಲಯದ ವೈದ್ಯಾಧಿಕಾರಿ ಹುದ್ದೆಗೆ ಪ್ರಭಾರ ವಹಿಸಲಾಗಿದೆ. ನಾನು ಪ್ರಯಾಣ ಭತ್ಯೆ ಪಡೆಯುತ್ತಿದ್ದು ಪ್ರಭಾರ ಭತ್ಯೆ ಪಡೆಯಬಹುದೇ?

| ಡಾ. ಸುಶೀಲಾ ಪಿ. ಬೆಳಗಾವಿ

ಕರ್ನಾಟಕ ಸರ್ಕಾರಿ ಸೇವಾ ನಿಯಮಾವಳಿಯ ನಿಯಮ 32ನ್ನು ಓದಿಕೊಂಡಂತೆ ನಿಯಮ 68ರ ಮೇರೆಗೆ ನಿಮ್ಮ ವೇತನ ಶ್ರೇಣಿಯ ಕನಿಷ್ಠ ವೇತನಕ್ಕೆ ಶೇ. 7.5 ಪ್ರಭಾರ ಭತ್ಯೆ ಪಡೆಯಬಹುದು. ನೀವು ಪ್ರಯಾಣ ಭತ್ಯೆ ಪಡೆಯುತ್ತಿದ್ದರೂ ಹೆಚ್ಚುವರಿಯಾದ ಪ್ರಭಾರವನ್ನು ವಹಿಸಿಕೊಂಡಿರುವುದರಿಂದ ನೀವು ಪ್ರವಾಸ ಭತ್ಯೆಯೊಂದಿಗೆ ಈ ಪ್ರಭಾರ ಭತ್ಯೆಯನ್ನು ಪಡೆಯಬಹುದು.
***

2-6-16

ನಾನು ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ಉಪನ್ಯಾಸಕಿಯಾಗಿದ್ದು ನನ್ನ ಮಗಳ ಬಾಣಂತನದ ಸಲುವಾಗಿ 160 ದಿನಗಳ ಕಾಲ ವೇತನ ರಜೆ ಪಡೆದಿರುತ್ತೇನೆ. ದಿನಾಂಕ 4.1.2016ರಂದು ಕರ್ತವ್ಯಕ್ಕೆ ಹಾಜರಾಗಿದ್ದು ನನ್ನ ವಾರ್ಷಿಕ ವೇತನ ಬಡ್ತಿಯು 2016 ಆಗಿರುತ್ತದೆ. ವೇತನ ರಹಿತ ರಜೆಯನ್ನು ಮಂಜೂರು ಮಾಡುವ ಸಕ್ಷಮ ಪ್ರಾಧಿಕಾರ ಯಾವುದು? ನನ್ನ ವಾರ್ಷಿಕ ವೇತನ ಬಡ್ತಿಯು ಯಾವ ತಿಂಗಳಿನಲ್ಲಿ ಬೀಳುತ್ತದೆ? ಮುಂದೂಡಲ್ಪಟ್ಟ ವಾರ್ಷಿಕ ವೇತನ ಬಡ್ತಿಯು ಮುಂದಿನ ವರ್ಷಗಳಲ್ಲಿ ಅದೇ ತಿಂಗಳಲ್ಲಿ ಮುಂದುವರಿಯುವುದೇ ಅಥವಾ ಹಿಂದಿನಂತೆ ಫೆಬ್ರವರಿ ತಿಂಗಳಿನಲ್ಲಿ ಜಮೆಯಾಗುವುದೇ?

|ಕೆ. ನೀರಜಾಬಾಯಿ ಹೊಸಪೇಟೆ

ಕರ್ನಾಟಕ ಸಿವಿಲ್ ಸೇವಾ ನಿಯಮಾವಳಿಯ ನಿಯಮ 117ರಂತೆ ವೇತನ ರಹಿತ ರಜೆಯನ್ನು ರಜೆ ಮಂಜೂರು ಮಾಡುವ ಅಧಿಕಾರವುಳ್ಳ ಅಧಿಕಾರಿಯೇ ಮಂಜೂರು ಮಾಡಬಹುದು. ನಿಮ್ಮ ವಾರ್ಷಿಕ ವೇತನ ಬಡ್ತಿಯು ಫೆಬ್ರವರಿಯಿಂದ 160 ದಿನಗಳ ಕಾಲ ಮುಂದೂಡಲ್ಪಟ್ಟಿದ್ದು ಜುಲೈ 10ರಂದು ಮಂಜೂರು ಮಾಡಲಾಗುತ್ತದೆ. ಮುಂದಿನ ವರ್ಷಗಳಲ್ಲಿ ಈ ವೇತನ ಬಡ್ತಿಯನ್ನು ಸೇವಾ ನಿಯಮಾವಳಿಯಂತೆ ಫೆಬ್ರವರಿ ತಿಂಗಳಿನಲ್ಲೇ ಜಮೆ ಮಾಡಲಾಗುತ್ತದೆ.
***

3-6-16

***

5-6-16
ಮೈಸೂರಿನ ಕಾರಾಗೃಹ ಇಲಾಖೆಯಲ್ಲಿ ಶೀಘ್ರಲಿಪಿಗಾರರಾಗಿ ಕೆಲಸ ಮಾಡುತ್ತಿದ್ದ ನನ್ನ ಪತಿ 2013ರಲ್ಲಿ ಸೇವೆಯಲ್ಲಿರುವಾಗಲೇ ನಿಧನ ಹೊಂದಿರುತ್ತಾರೆ. ನಾವು ಇಲಾಖೆಯ ಸರ್ಕಾರಿ ವಸತಿ ಗೃಹದಲ್ಲಿ ವಾಸಮಾಡುತ್ತಿದ್ದು 2015ರ ಮೇ ತಿಂಗಳಿನಲ್ಲಿ ಖಾಲಿ ಮಾಡಿ ಬಾಡಿಗೆಗೆ ಹೋಗಿರುತ್ತೇವೆ. ನನಗೆ ಅನುಕಂಪದ ಮೇಲೆ ನೌಕರಿ ನೀಡಬೇಕೆಂದು ಅರ್ಜಿ ಸಲ್ಲಿಸಿದರೂ ಈವರೆಗೂ ನೌಕರಿ ನೀಡಿರುವುದಿಲ್ಲ. ಅಲ್ಲದೆ ಬರುತ್ತಿರುವ ಕುಟುಂಬ ಪಿಂಚಣಿಯು ಸಹ ಕಡಿವೆಾಯಾಗಿದ್ದು ನಮ್ಮ ಎರಡೂ ಮಕ್ಕಳ ವಿದ್ಯಾಭ್ಯಾಸದ ಜೊತೆಗೆ ಜೀವನ ನಿರ್ವಹಣೆ ಕಷ್ಟವಾಗಿದೆ. ಏತನ್ಮಧ್ಯೆ 2013ರಿಂದ 2015ರವರ ಅವಧಿಯಲ್ಲಿ ನಾವು ಸರ್ಕಾರಿ ವಸತಿ ಗೃಹದಲ್ಲಿ ವಾಸವಾಗಿದ್ದ ಪ್ರಯುಕ್ತ 2,75,000 ರೂ. ಬಾಡಿಗೆ ಕಟ್ಟಬೇಕೆಂದು ನೋಟಿಸ್ ನೀಡಿದ್ದಾರೆ. ನಾನು ಎಷ್ಟು ಹಣ ಸಂದಾಯ ಮಾಡಬೇಕೆಂಬುದು ನನಗೆ ತಿಳಿದಿರುವುದಿಲ್ಲ. ದಯವಿಟ್ಟು ಸೂಕ್ತ ಸಲಹೆ ನೀಡಿ.

|ಸುಮಾ ಮೈಸೂರು

ಕರ್ನಾಟಕ ಸಿವಿಲ್ ಸೇವಾ ನಿಯಮಾವಳಿಯ ಪರಿಶಿಷ್ಟ 4ರಲ್ಲಿರುವ ಸರ್ಕಾರಿ ನೌಕರರ ನಿವಾಸಿಗಳಿಗಾಗಿ ಬಳಸುವ ಸರ್ಕಾರಿ ಕಟ್ಟಡಗಳ ಹಂಚಿಕೆ ಮತ್ತು ಲೈಸೆನ್ಸ್ ಶುಲ್ಕ ವಿಧಿಸುವಿಕೆ ನಿಯಮಗಳು 2002ರ ನಿಯಮ 30 (4) ರಂತೆ ಸರ್ಕಾರಿ ನೌಕರನು ಮರಣ ಹೊಂದಿದ ದಿನಾಂಕದಿಂದ ಒಂದು ತಿಂಗಳು ಮಾತ್ರ ಬಾಡಿಗೆ ಇಲ್ಲದೆ ನಿವಾಸವನ್ನು ಇಟ್ಟುಕೊಳ್ಳಲು ಆತನಿಗೆ ಅವಕಾಶವಿರುತ್ತದೆ. ತದನಂತರ ಮುಂದಿನ 3 ತಿಂಗಳ ಅವಧಿಗೆ 10ನೇ ನಿಯಮದ ಮೇರೆಗೆ ಶುಲ್ಕವನ್ನು ಸಂದಾಯ ಮಾಡಲು ಅವಕಾಶವಿರತಕ್ಕದ್ದೆಂದು ಸೂಚಿಸಲಾಗಿದೆ. ಹೀಗಿರುವಲ್ಲಿ ನೀವು ಇಲಾಖೆಯು ಸೂಚಿಸಿದ ಬಾಡಿಗೆಯನ್ನು ಪಾವತಿಸಬೇಕಾಗುತ್ತದೆ.
***

7-6-16
ನಾನು ಶಿಸ್ತು ಪ್ರಾಧಿಕಾರಿಯು ಸಿಸಿಎ ನಿಯಮಾವಳಿಯ ನಿಯಮ 11(4)ರ ಮೇರೆಗೆ ಹೊರಡಿಸಿದ ಆರೋಪ ಪಟ್ಟಿಯನ್ನು ತೆಗೆದುಕೊಳ್ಳಲು ನಿರಾಕರಿಸಿದೆ. ನನ್ನ ಈ ವರ್ತನೆ ದುರ್ನಡತೆಯಾಗುತ್ತದೆಯೇ?

| ಸುರೇಶ್​ಕುಮಾರ್ ಮಂಗಳೂರು

ನಿಮ್ಮ ಈ ವರ್ತನೆ ಅವಿಧೇಯತೆಯಾಗುತ್ತದೆ. ಸರ್ಕಾರಿ ನೌಕರನಿಗೆ ತಕ್ಕುದಲ್ಲದ ನಡತೆಯಾಗುತ್ತದೆ. ಅಲ್ಲದೆ ನಡತೆ ನಿಯಮಗಳ ನಿಯಮ 3 (ಜಿ) ರ ಉಲ್ಲಂಘನೆಯಾಗುತ್ತದೆ. ಆದ್ದರಿಂದ ಇಂತಹ ನಿಮ್ಮ ನಡತೆ ಸಿಸಿಎ ನಿಯಮಗಳ ನಿಯಮ 8ರ ಉದ್ದೇಶಕ್ಕೆ ವಿರುದ್ಧವಾಗಿದ್ದು ನಿಮ್ಮ ಮೇಲೆ ಶಿಸ್ತು ಕ್ರಮ ಕೈಗೊಳ್ಳಬಹುದಾಗಿರುತ್ತದೆ.
***

8-6-16

***
9-6-16
ಈಗ ಸರ್ಕಾರದ ಅನುಮತಿ ಪಡೆಯಬಹುದೇ?

ನಾನು ಸಮಾಜ ಕಲ್ಯಾಣ ಇಲಾಖೆಯಲ್ಲಿ 2002ರಿಂದ 5 ವರ್ಷ ಸೇವೆ ಸಲ್ಲಿಸಿ ನಂತರ 2007ರಲ್ಲಿ ಪ್ರೌಢಶಾಲಾ ಶಿಕ್ಷಕನಾಗಿ ನೇಮಕ ಹೊಂದಿ ಕಾರ್ಯ ನಿರ್ವಹಿಸುತ್ತಿದ್ದೇನೆ. ನನ್ನ ಹಿಂದಿನ ಸೇವಾ ಪುಸ್ತಕವೇ ಮುಂದುವರಿದಿದ್ದು ಪಿಂಚಣಿ ಸೌಲಭ್ಯಕ್ಕಾಗಿ ಸರ್ಕಾರದ ಅನುಮತಿ ಅಗತ್ಯವೇ? ಈಗ ಸರ್ಕಾರದ ಅನುಮತಿ ಪಡೆಯಬಹುದೇ?

|ಎಂ. ನಾರಾಯಣರಾವ್ ಮಸ್ಕಿ, ರಾಯಚೂರು

ಕರ್ನಾಟಕ ಸರ್ಕಾರಿ ಸೇವಾ ನಿಯಮಾವಳಿಯ ನಿಯಮ 124 ಬಿ ರೀತ್ಯ ನಿವೃತ್ತಿ ವೇತನಕ್ಕಾಗಿ ಸರ್ಕಾರಿ ಸೇವೆಗೆ ಸೇರಿದ ದಿನಾಂಕದಿಂದ 3 ವರ್ಷದೊಳಗಾಗಿ ಸರ್ಕಾರಿ ನೌಕರನು ತನ್ನ ಹಿಂದಿನ ಸೇವೆಯನ್ನು ಪರಿಗಣಿಸಲು ಕೋರಿ ಅರ್ಜಿಯನ್ನು ಸಲ್ಲಿಸತಕ್ಕದ್ದು. ಅನಂತರ ನೇಮಕ ಪ್ರಾಧಿಕಾರವು ಸೂಕ್ತ ಆದೇಶ ಹೊರಡಿಸುವ ಮೊದಲು ಸೂಕ್ತ ದಾಖಲೆಗಳೊಂದಿಗೆ ಸರ್ಕಾರದ ಅನುಮೋದನೆ ಪಡೆಯಬೇಕು. ಹೀಗಿರುವಲ್ಲಿ ನೀವು ನಿಮ್ಮ ಹಿಂದಿನ ಸೇವೆಯನ್ನು ಪರಿಗಣಿಸಲು ನಿಮ್ಮ ನೇಮಕ ಪ್ರಾಧಿಕಾರಕ್ಕೆ ಅರ್ಜಿಯನ್ನು ಸಲ್ಲಿಸಬೇಕು.
***

10-6-2016
ನಾನು ಪ್ರಾಥಮಿಕ ಶಾಲಾ ಶಿಕ್ಷಕನಾಗಿ 1.6.1991ರಿಂದ 31.5.2016ರವರೆಗೆ 25 ವರ್ಷಗಳ ಕಾಲ ಸೇವೆ ಸಲ್ಲಿಸಿದ್ದೇನೆ. ಆದರೆ ಕಳೆದ ಮಾರ್ಚ್​ನಲ್ಲಿ ಮುಖ್ಯ ಶಿಕ್ಷಕರ ಹುದ್ದೆಗೆ ಬಡ್ತಿ ನೀಡಲು ಕೌನ್ಸಿಲಿಂಗ್​ಗೆ ಹೋಗಿದ್ದ ನಾನು ಮತ್ತು ನನ್ನ ಅನೇಕ ಸಹೋದ್ಯೋಗಿಗಳು ತಾತ್ಕಾಲಿಕವಾಗಿ ಪದೋನ್ನತಿಯನ್ನು ನಿರಾಕರಿಸಿದ್ದೇವೆ. ಈ ಹಿನ್ನೆಲೆಯಲ್ಲಿ ನಮಗೆ 25 ವರ್ಷಗಳ ಕಾಲ ಸಲ್ಲಿಸಿದ ಸೇವೆಗೆ ಹೆಚ್ಚುವರಿ ವೇತನ ಬಡ್ತಿ ಲಭ್ಯವಾಗುತ್ತದೆಯೇ? ಇಲ್ಲವಾದಲ್ಲಿ ಆಡಳಿತ ನ್ಯಾಯಮಂಡಳಿಗೆ ದಾವೆ ಹೂಡಬಹುದೇ*?

|ಎಂ. ಮಂಜುನಾಥ್ ಕೋಲಾರ

ಸರ್ಕಾರವು ದಿನಾಂಕ 14.6.2012ರ ತನ್ನ ಆದೇಶ ಸಂಖ್ಯೆ ಎಫ್​ಡಿ 12, ಎಸ್​ಆರ್​ಪಿ 2012 (8) ರಲ್ಲಿ ಸೇವೆಯಲ್ಲಿ ಒಂದೂ ಪದೋನ್ನತಿ ಇಲ್ಲದೆ ನಿರಂತರವಾಗಿ 25 ಮತ್ತು 30 ವರ್ಷಗಳು ಕಾರ್ಯ ನಿರ್ವಹಿಸಿದ್ದರೆ ಅಂತಹ ಸರ್ಕಾರಿ ನೌಕರರಿಗೆ ಹೆಚ್ಚುವರಿ ವೇತನಬಡ್ತಿ ಮಂಜೂರು ಮಾಡಬೇಕೆಂದು ಸೂಚಿಸಿದೆ. ಇದೇ ಆದೇಶದ ಕಂಡಿಕೆ 6 (ಜಿಜಿ)ರಲ್ಲಿ ಈ ಸೌಲಭ್ಯವನ್ನು ತಮ್ಮ ಪದೋನ್ನತಿಯನ್ನು ಬಿಟ್ಟುಕೊಟ್ಟ ಸರ್ಕಾರಿ ನೌಕರರಿಗೆ ಅನ್ವಯಿಸತಕ್ಕದ್ದಲ್ಲವೆಂದು ತಿಳಿಸಿದೆ. ಹೀಗಾಗಿ ನೀವು ಪದೋನ್ನತಿಯನ್ನು ಬಿಟ್ಟುಕೊಟ್ಟಿರುವುದರಿಂದ ನಿಮಗೆ ಈ 25ವರ್ಷಗಳ ಹೆಚ್ಚುವರಿ ವೇತನ ಬಡ್ತಿ ಲಭ್ಯವಾಗುವುದಿಲ್ಲ. ಅಲ್ಲದೆ ನೀವು ನ್ಯಾಯಮಂಡಳಿಯಲ್ಲಿ ಪ್ರಶ್ನಿಸುವುದರಿಂದ ಯಾವುದೇ ಪ್ರಯೋಜನವಾಗುವುದಿಲ್ಲ.
***

11-6-16.
ನಾನು ಪ್ರಾಥಮಿಕ ಶಾಲಾ ಶಿಕ್ಷಕನಾಗಿ 1.6.1991ರಿಂದ 31.5.2016ರವರೆಗೆ 25 ವರ್ಷಗಳ ಕಾಲ ಸೇವೆ ಸಲ್ಲಿಸಿದ್ದೇನೆ. ಆದರೆ ಕಳೆದ ಮಾರ್ಚ್​ನಲ್ಲಿ ಮುಖ್ಯ ಶಿಕ್ಷಕರ ಹುದ್ದೆಗೆ ಬಡ್ತಿ ನೀಡಲು ಕೌನ್ಸಿಲಿಂಗ್​ಗೆ ಹೋಗಿದ್ದ ನಾನು ಮತ್ತು ನನ್ನ ಅನೇಕ ಸಹೋದ್ಯೋಗಿಗಳು ತಾತ್ಕಾಲಿಕವಾಗಿ ಪದೋನ್ನತಿಯನ್ನು ನಿರಾಕರಿಸಿದ್ದೇವೆ. ಈ ಹಿನ್ನೆಲೆಯಲ್ಲಿ ನಮಗೆ 25 ವರ್ಷಗಳ ಕಾಲ ಸಲ್ಲಿಸಿದ ಸೇವೆಗೆ ಹೆಚ್ಚುವರಿ ವೇತನ ಬಡ್ತಿ ಲಭ್ಯವಾಗುತ್ತದೆಯೇ? ಇಲ್ಲವಾದಲ್ಲಿ ಆಡಳಿತ ನ್ಯಾಯಮಂಡಳಿಗೆ ದಾವೆ ಹೂಡಬಹುದೇ?

|ಎಂ. ಮಂಜುನಾಥ್ ಕೋಲಾರ

ಸರ್ಕಾರವು ದಿನಾಂಕ 14.6.2012ರ ತನ್ನ ಆದೇಶ ಸಂಖ್ಯೆ ಎಫ್​ಡಿ 12, ಎಸ್​ಆರ್​ಪಿ 2012 (8) ರಲ್ಲಿ ಸೇವೆಯಲ್ಲಿ ಒಂದೂ ಪದೋನ್ನತಿ ಇಲ್ಲದೆ ನಿರಂತರವಾಗಿ 25 ಮತ್ತು 30 ವರ್ಷಗಳು ಕಾರ್ಯ ನಿರ್ವಹಿಸಿದ್ದರೆ ಅಂತಹ ಸರ್ಕಾರಿ ನೌಕರರಿಗೆ ಹೆಚ್ಚುವರಿ ವೇತನಬಡ್ತಿ ಮಂಜೂರು ಮಾಡಬೇಕೆಂದು ಸೂಚಿಸಿದೆ. ಇದೇ ಆದೇಶದ ಕಂಡಿಕೆ 6 (ಜಿಜಿ)ರಲ್ಲಿ ಈ ಸೌಲಭ್ಯವನ್ನು ತಮ್ಮ ಪದೋನ್ನತಿಯನ್ನು ಬಿಟ್ಟುಕೊಟ್ಟ ಸರ್ಕಾರಿ ನೌಕರರಿಗೆ ಅನ್ವಯಿಸತಕ್ಕದ್ದಲ್ಲವೆಂದು ತಿಳಿಸಿದೆ. ಹೀಗಾಗಿ ನೀವು ಪದೋನ್ನತಿಯನ್ನು ಬಿಟ್ಟುಕೊಟ್ಟಿರುವುದರಿಂದ ನಿಮಗೆ ಈ 25ವರ್ಷಗಳ ಹೆಚ್ಚುವರಿ ವೇತನ ಬಡ್ತಿ ಲಭ್ಯವಾಗುವುದಿಲ್ಲ. ಅಲ್ಲದೆ ನೀವು ನ್ಯಾಯಮಂಡಳಿಯಲ್ಲಿ ಪ್ರಶ್ನಿಸುವುದರಿಂದ ಯಾವುದೇ ಪ್ರಯೋಜನವಾಗುವುದಿಲ್ಲ.
***

12-6-16
ನಾನು ನ್ಯಾಯಾಂಗ ಇಲಾಖೆಯಲ್ಲಿ ಬೆರಳಚ್ಚುಗಾರನಾಗಿ 2002ರಲ್ಲಿ ನೇಮಕ ಗೊಂಡಿದ್ದು, 2011ರಲ್ಲಿ ಕೆಪಿಎಸ್​ಸಿಯಿಂದ ಕರೆಯಲಾದ ಬೆರಳಚ್ಚುಗಾರರ ಹುದ್ದೆಗೆ ನಿರಾಕ್ಷೇಪಣಾ ಪತ್ರ ಸಹಿತ ಅರ್ಜಿ ಸಲ್ಲಿಸಿದ್ದೇನೆ. ಅಲ್ಲದೆ ದಿನಾಂಕ 31.5.2015ರಂದು ಕೆಸಿಎಸ್​ಆರ್ 252 (ಬಿ)ರ ಅನ್ವಯ ಬಿಡುಗಡೆ ಹೊಂದಿ ರಾಜ್ಯ ಲೆಕ್ಕಪತ್ರ ಇಲಾಖೆಗೆ ಕರ್ತವ್ಯಕ್ಕೆ ಹಾಜರಾಗಿದ್ದೇನೆ. ಆದ್ದರಿಂದ ಯಾವ ನಿಯಮದಡಿಯಲ್ಲಿ 2002ರಿಂದ 2015ರವರೆಗೆ ಪಡೆದ ವೇತನ ಮುಂದುವರಿಯುತ್ತದೆ? ನನ್ನ ಈ ಮೊದಲಿನ ಸೇವೆಯನ್ನು ಅರ್ಹತಾದಾಯಕ ಸೇವೆ ಎಂದು ಪರಿಗಣಿಸಲು ಯಾವ ನಿಯಮದಡಿ ಅವಕಾಶವಿದೆ? |ಎಸ್.ಎಂ. ರಾಘವೇಂದ್ರ ಧಾರವಾಡ

ಕರ್ನಾಟಕ ಸರ್ಕಾರಿ ಸೇವಾ ನಿಯಮಾವಳಿಯ ನಿಯಮ 41-ಎ ರೀತ್ಯ ನಿಮಗೆ ವೇತನ ರಕ್ಷಣೆ ಲಭ್ಯವಾಗುತ್ತದೆ. ಈ ನಿಯಮಾವಳಿಯಂತೆ ಹಿಂದೆ ಹೊಂದಿದ್ದ ಹುದ್ದೆಯ ಸಾದೃಶ್ಯವಾದ ವೇತನ ಶ್ರೇಣಿಯಲ್ಲಿ ನೇಮಕಗೊಂಡ ವೇತನಕ್ಕೆ ಸಮನಾದ ಹಂತಕ್ಕೆ ವೇತನವನ್ನು ನಿಗದಿಪಡಿಸಬೇಕೆಂದು ಸೂಚಿಸಲಾಗಿದೆ. ನಿಮ್ಮ ಸೇವೆಯನ್ನು ಈ ನಿಯಮಾವಳಿಯ 224-ಬಿ ಅಡಿಯಲ್ಲಿ ನೀವು ಹಿಂದಿನ ಸೇವೆಯನ್ನು ಪರಿಗಣಿಸಲು ನಿಮ್ಮ ನೇಮಕಾತಿ ಪ್ರಾಧಿಕಾರಕ್ಕೆ ಅರ್ಜಿಯನ್ನು ಸಲ್ಲಿಸಬೇಕು. ಈ ರೀತಿ ಅರ್ಜಿ ಸಲ್ಲಿಸಿದರೆ ಮಾತ್ರ ನಿಮಗೆ ಹಿಂದಿನ ನಿವೃತ್ತಿ ವೇತನ ಸೌಲಭ್ಯಗಳ ನಿಯಮಾವಳಿ ಅನ್ವಯವಾಗುತ್ತವೆ.
***

13-6-16

***
14-6-16
ಸರ್ಕಾರದಿಂದ ಸಹಕಾರ ಇಲಾಖೆಯ ಮೂಲಕ ನೋಂದಾಯಿಸಿದ ಸಹಕಾರಿ ಸಂಘಗಳು ಸ್ವಾಯತ್ತ ಸಂಸ್ಥೆಗಳಾಗಿದ್ದು ಆಡಳಿತ ಮಂಡಳಿಯ ಮೂಲಕ ನಡೆಸಲ್ಪಡುತ್ತಿವೆ. ಸಿಬ್ಬಂದಿ ವೃಂದ ಬಲವರ್ಧನೆ, ವೇತನ ಶ್ರೇಣಿ ಪರಿಷ್ಕರಣೆ ಮುಂತಾದವುಗಳಿಗೆ ಸಹಕಾರ ಇಲಾಖೆಯ ಅನುಮತಿ ಪಡೆಯುವ ಅಗತ್ಯವೇ?

|ನಾರಾಯಣ ಶೆಟ್ಟಿ ದಕ್ಷಿಣ ಕನ್ನಡ

ಕರ್ನಾಟಕ ಸಹಕಾರಿ ಸಂಘಗಳ ಅಧಿನಿಯಮ 1959 ಮತ್ತು ನಿಯಮಾವಳಿ 1964ರಂತೆ ಆಯಾಯಾ ಸಹಕಾರ ಸಂಘಗಳ ಆಡಳಿತ ಮಂಡಳಿಗಳೇ ತಮ್ಮ ಕಾರ್ಯಭಾರದ ದೃಷ್ಟಿಯಿಂದ ವೃಂದಬಲ ಮಾಡಿಕೊಳ್ಳಬಹುದು. ಆದರೆ ವೇತನ ಶ್ರೇಣಿ, ಮತ್ತು ಪರಿಷ್ಕರಣೆ ಮುಂತಾದವುಗಳನ್ನು ಸಹಕಾರ ಇಲಾಖೆಯ ಅನುಮೋದನೆಯೊಂದಿಗೆ ಮಾಡಬೇಕಾದುದು ಅಗತ್ಯವಾಗಿರುತ್ತದೆ.
***

15-6-16
ನಮ್ಮ ಇಲಾಖೆಯಲ್ಲಿ ಸಿ ಗುಂಪಿನ ಹುದ್ದೆಯಲ್ಲಿ ಸೇವೆ ಸಲ್ಲಿಸುತ್ತಿದ್ದ ನೌಕರರೊಬ್ಬರು 30 ವರ್ಷ ಸೇವೆ ಸಲ್ಲಿಸಿ ನಿಧನ ಹೊಂದಿದ್ದಾರೆ. ಅವರು ವಿಚ್ಛೇದಿತರಾಗಿದ್ದು, ಸರ್ಕಾರದಿಂದ ದೊರೆಯಬೇಕಾಗಿದ್ದ ಆರ್ಥಿಕ ಸೌಲಭ್ಯಗಳಿಗೆ ಅವರ ತಾಯಿ ಹೆಸರನ್ನು ನಾಮ ನಿರ್ದೇಶನ ಮಾಡಿದ್ದರು. ಆದರೆ, ಅವರ ತಾಯಿಯೂ ನಿಧನರಾಗಿದ್ದು ನಿವೃತ್ತಿ ವೇತನದ ಆರ್ಥಿಕ ಸೌಲಭ್ಯ ನೀಡುವಂತೆ ನೌಕರನ ಐವರು ಸಹೋದರರು ಒತ್ತಾಯಿಸುತ್ತಿದ್ದಾರೆ. ಕರ್ನಾಟಕ ಸರ್ಕಾರಿ ಸೇವಾ ನಿಯಮಾವಳಿಯ 302(1)ರಂತೆ ಕುಟುಂಬದ ಅರ್ಹ ಸದಸ್ಯರು ಇಲ್ಲದ ಪ್ರಯುಕ್ತ ಅವರ ಸಹೋದರರಿಗೆ ಆರ್ಥಿಕ ಸೌಲಭ್ಯಗಳನ್ನು ನೀಡಬಹುದೇ?

|ಸಹಾಯಕ ಕೃಷಿ ನಿರ್ದೇಶಕರು ಯಾದಗಿರಿ

ಕರ್ನಾಟಕ ಸರ್ಕಾರಿ ಸೇವಾ ನಿಯಮಾವಳಿಯ ನಿಯಮ 302 (1)ರಂತೆ ಮೃತ ಸರ್ಕಾರಿ ನೌಕರನ ಸಹೋದರರಿಗೆ ನಾಮನಿರ್ದೇಶನ ಮಾಡದಿದ್ದರೂ ಕರ್ನಾಟಕ ಆರ್ಥಿಕ ಸಂಹಿತೆ ಅನುಚ್ಛೇದ 81ಸಿ ಪ್ರಕಾರ ವಾರಸುದಾರಿಕೆ ಪ್ರಮಾಣಪತ್ರವನ್ನು ತಹಸೀಲ್ದಾರರಿಂದ ಪಡೆದು ಸಲ್ಲಿಸಿದರೆ ಮರಣ ಉಪದಾನವನ್ನು ಮಾತ್ರ ನೀಡಬಹುದಾಗಿರುತ್ತದೆ. ಆದರೆ, ಯಾವುದೇ ಕುಟುಂಬ ನಿವೃತ್ತಿ ವೇತನವಾಗಲೀ, ಇನ್ನಿತರ ಪಿಂಚಣಿ ಸೌಲಭ್ಯಗಳಾಗಲೀ ನೀಡತಕ್ಕದ್ದಲ್ಲ.
***

16-6-16
ನಾನು ಪ್ರಸ್ತುತ ಸರ್ಕಾರಿ ಪ್ರೌಢಶಾಲೆಯಲ್ಲಿ ಮುಖ್ಯೋಪಾಧ್ಯಾಯನಾಗಿದ್ದು, ದೂರ ಶಿಕ್ಷಣದ ಮೂಲಕ ಪಿಎಚ್​ಡಿ ಮಾಡುತ್ತಿದ್ದೇನೆ. ಈ ಪಿಎಚ್​ಡಿ ಅವಧಿಯಲ್ಲಿಯೇ ಬೇರೆ ವಿಷಯದಲ್ಲಿ ಸ್ನಾತಕೋತ್ತರ ಪದವಿ ಸೇರಬಹುದೇ? ಸೇರಬಹುದಾದರೆ ಸರ್ಕಾರದ ಆದೇಶ ಸಂಖ್ಯೆ ಏನು?

|ಪ್ರವೀಣ್ ಮೈಸೂರು

1973ರ ಸರ್ಕಾರಿ ಆದೇಶದಂತೆ ದೂರ ಶಿಕ್ಷಣದ ಮೂಲಕ ಹಾಗೂ ಕರ್ನಾಟಕ ಸಿವಿಲ್ ಸೇವಾ ನಿಯಮಾವಳಿಯ ನಿಯಮ 61ರ ಮೇರೆಗೆ ವೃತ್ತಿಪರ ಅಥವಾ ತಾಂತ್ರಿಕ ವಿಷಯಗಳಲ್ಲಿ ಉನ್ನತ ವ್ಯಾಸಂಗ ಮಾಡಲು ಅನುಮತಿ ಅವಶ್ಯಕತೆ ಇಲ್ಲ. ಅಲ್ಲದೆ ನೀವು ದೂರ ಶಿಕ್ಷಣದ ಮೂಲಕ ಒಂದೇ ಕಾಲಾವಧಿಯಲ್ಲಿ ಎರಡೆರಡು ಶಿಕ್ಷಣವನ್ನು ಪಡೆಯುವುದಕ್ಕೆ ನಿಯಮಾವಳಿಯಲ್ಲಿ ಅವಕಾಶವಿರುವುದಿಲ್ಲ.
***

17-6-16
ನಾನು ಪ್ರೌಢಶಾಲಾ ಮುಖ್ಯೋಪಾಧ್ಯಾಯನಾಗಿ 30 ವರ್ಷ 8 ತಿಂಗಳು ಸೇವೆ ಸಲ್ಲಿಸಿ ನನ್ನ ವಯಸ್ಸು 55 ಆಗಿದ್ದಾಗ ಸ್ವಇಚ್ಛಾ ನಿವೃತ್ತಿ ಪಡೆದಿದ್ದೇನೆ. 50 ವರ್ಷ ಮೀರಿರುವುದರಿಂದ ನಿಯಮ 285 (2) ರಡಿ ಸ್ವಇಚ್ಛಾ ನಿವೃತ್ತಿಗೆ ಅವಕಾಶವಿಲ್ಲ. 285 (3) ರಂತೆ ಸ್ವಇಚ್ಛಾ ನಿವೃತ್ತಿ ನೀಡಲು ಬರುತ್ತದೆ ಎಂದು ತಿಳಿಸಿ ಅನುಮತಿ ನೀಡಿದ್ದಾರೆ. ನನಗೆ ಅರ್ಹತಾ ಸೇವೆಗೆ ಸೇರಬೇಕಾದ ಸೇವಾ ಅಧಿಕ್ಯವನ್ನು (ವೈಟೇಜ್) ನೀಡದೆ ಪಿಂಚಣಿ ಮತ್ತು ಇತರ ಸೌಲಭ್ಯಗಳಿಂದ ವಂಚಿತನಾಗಿದ್ದೇನೆ. ಆದ್ದರಿಂದ ನಿಜವಾಗಿ ನನಗೆ ಅನ್ವಯವಾಗುವ ನಿಯಮ ಯಾವುದು? ಈ ಬಗ್ಗೆ ಮುಂದಿನ ಕ್ರಮ ಏನು ಕೈಗೊಳ್ಳಬೇಕು?

|ಶ್ರೀ ಬಾಲ್ಕೆ ದೇವೇಂದ್ರ ಬೀದರ್

ಕರ್ನಾಟಕ ಸಿವಿಲ್ ಸೇವಾ ನಿಯಮಾವಳಿಯ ನಿಯಮ 285(2)ರಂತೆ 15 ವರ್ಷಗಳಿಗಿಂತ ಕಡಿಮೆ ಇಲ್ಲದಂತೆ ಸೇವೆ ಸಲ್ಲಿಸಿದ ನೌಕರನು ಕೆಲವೊಂದು ಷರತ್ತುಗಳಿಗನುಸಾರವಾಗಿ ಸ್ವಇಚ್ಛಾ ನಿವೃತ್ತಿ ಹೊಂದಿದರೆ ಈ ನಿಯಮದ ಪ್ರಕಾರ 5 ವರ್ಷಗಳ ಕಾಲ ಸೇವಾ ಅಧಿಕ್ಯ ನೀಡಬೇಕಾಗುತ್ತದೆ. ಆದ ಕಾರಣ ನಿಮಗೆ 2 ವರ್ಷ 4 ತಿಂಗಳು ಸೇವಾ ಅಧಿಕ್ಯ ಲಭ್ಯವಾಗುತ್ತದೆ. ಆದರೆ ನಿಮ್ಮ ಪಿಂಚಣಿ ಪತ್ರಗಳನ್ನು ಮಹಾಲೇಖಪಾಲರಿಗೆ ಕಳುಹಿಸುವಾಗ 285(2)ರಂತೆ ಸ್ವಇಚ್ಛಾ ನಿವೃತ್ತಿಗೆ ಅನುಮತಿ ನೀಡಲಾಗಿದೆ ಎಂಬುದನ್ನು ನಿಮ್ಮ ನೇಮಕ ಪ್ರಾಧಿಕಾರವು ಮಾಹಿತಿ ನೀಡಬೇಕು. ಆದರೆ ನಿಮ್ಮ ಪ್ರಕರಣದಲ್ಲಿ 285 (3) ರಡಿ ಅನುಮತಿ ನೀಡಿರುವುದು ನಿಯಮಾವಳಿಗೆ ವ್ಯತಿರಿಕ್ತವಾಗಿದೆ. ಆದ್ದರಿಂದ ಪುನಃ ಮನವಿ ಸಲ್ಲಿಸಿ ಸೇವಾ ಅಧಿಕ್ಯ ಸೇರಿಸಿ ಪಿಂಚಣಿ ಸೌಲಭ್ಯ ನೀಡಲು ಸಕ್ಷಮ ಪ್ರಾಧಿಕಾರಕ್ಕೆ ಅರ್ಜಿ ಸಲ್ಲಿಸಿ.
***

18-6-16
ನಾನು ಸರ್ಕಾರಿ ನೌಕರಳಾಗಿದ್ದು, ನನ್ನ ವೈಯಕ್ತಿಕ ಬದುಕಿನ ಬಗ್ಗೆ ಚಾರಿತ್ರ್ಯ ಹರಣ ವರದಿಗಳನ್ನು ಎಲೆಕ್ಟ್ರಾನಿಕ್ ಮಾಧ್ಯಮಗಳಲ್ಲಿ ಬಿತ್ತರಿಸಲಾಗಿದೆ. ನನ್ನ ನಡತೆಯನ್ನು ಮಾಧ್ಯಮಗಳ ಮೂಲಕ ಸಮರ್ಥಿಸಿಕೊಳ್ಳಲು ಸರ್ಕಾರದ ಪೂರ್ವಾನುಮತಿ ಅವಶ್ಯಕವೇ?

| ಸುಶೀಲಮ್ಮ ಚಾಮರಾಜನಗರ

ಕರ್ನಾಟಕ ಸಿವಿಲ್ ಸೇವಾ (ನಡತೆ ) ನಿಯಮ 24 (1)ರ ಪ್ರಕಾರ ಅಕೃತ ಕೃತ್ಯದ ಸಮರ್ಥನೆಗಾಗಿ ಪತ್ರಿಕೆಗೆ ಅಥವಾ ಮಾಧ್ಯಮಗಳಿಗೆ ಮೊರೆ ಹೋಗಲು ಸರ್ಕಾರದ ಪೂರ್ವಾನುಮತಿ ಅವಶ್ಯಕ. ಆದರೆ ಇದು ನಿಮ್ಮ ವೈಯಕ್ತಿಕ ಚಾರಿತ್ರ್ಯಧೆಯಾಗಿರುವುದರಿಂದ ಅನುಮತಿ ಅನವಶ್ಯಕ. ಆದರೆ ನೀವು ಈ ಬಗ್ಗೆ ಖಾಸಗಿ ಚಾರಿತ್ರ್ಯನ್ನು ಸಮರ್ಥಿಸಿಕೊಳ್ಳುವುದಕ್ಕಾಗಿ ತೆಗೆದುಕೊಂಡ ಕ್ರಮದ ಬಗ್ಗೆ ಸಕ್ಷಮ ಪ್ರಾಧಿಕಾರಕ್ಕೆ ಒಂದು ವರದಿಯನ್ನು ಸಲ್ಲಿಸಬೇಕು.
***
19-6-16

ನಾನು ಸರ್ಕಾರಿ ಪ್ರಾಥಮಿಕ ಶಾಲಾ ಶಿಕ್ಷಕಿಯಾಗಿ 1981ರಿಂದ ಕಾರ್ಯ ನಿರ್ವಹಿಸುತ್ತಿದ್ದು 2006ರ ಡಿಸೆಂಬರ್​ನಲ್ಲಿ ಮುಖ್ಯ ಶಿಕ್ಷಕಿಯಾಗಿ ಪದೋನ್ನತಿ ಹೊಂದಿರುತ್ತೇನೆ. ದಿನಾಂಕ 14.7.2006ರವರೆಗೆ ಸತತವಾಗಿ ಒಂದೇ ಹುದ್ದೆಯಲ್ಲಿ ಸಹ ಶಿಕ್ಷಕಿಯಾಗಿ ಕಾರ್ಯ ನಿರ್ವಹಿಸಿರುವ ಪ್ರಯುಕ್ತ 25 ವರ್ಷದ ವೇತನ ಬಡ್ತಿ ಸಿಕ್ಕಿರುವುದಿಲ್ಲ. ಈಗ ಅದನ್ನು ಯಾವ ರೀತಿ ಪಡೆಯಬಹುದು?

|ಶ್ರೀಮತಿ ಎಸ್.ಎಂ. ಹೂಗಾರ ಲಕ್ಷೆ್ಮೕಶ್ವರ

ದಿನಾಂಕ 14.6.2012ರ ಸರ್ಕಾರಿ ಆದೇಶ ಸಂಖ್ಯೆ ಎಫ್​ಡಿ 12, ಎಸ್​ಆರ್​ಪಿ 2012(8) ರಂತೆ ಸತತವಾಗಿ 25 ವರ್ಷಗಳ ಕಾಲ ಸೇವೆ ಸಲ್ಲಿಸಿದ ಸರ್ಕಾರಿ ನೌಕರರಿಗೆ ದಿನಾಂಕ 1.4.2012ರಿಂದ ಜಾರಿಗೆ ಬರುವಂತೆ ಒಂದು ಹೆಚ್ಚುವರಿ ವೇತನ ಬಡ್ತಿ ನೀಡಲು ಸೂಚಿಸಲಾಗಿದೆ. ಆದರೆ ಇದೇ ಆದೇಶದ ಕಂಡಿಕೆ 6(ಜಿಜಿ)ರಲ್ಲಿ ಈಗಾಗಲೇ ಕನಿಷ್ಠ ಒಂದು ಪದೋನ್ನತಿ ಪಡೆದಿರುವ ಸರ್ಕಾರಿ ನೌಕರರಿಗೆ ಈ ಸೌಲಭ್ಯ ಲಭ್ಯವಾಗುವುದಿಲ್ಲ. ನೀವು ಇದಕ್ಕಿಂತ ಮೊದಲೇ 25 ವರ್ಷ ಪೂರೈಸಿದ್ದು ತದನಂತರ ಪದೋನ್ನತಿ ಪಡೆದಿರುವುದಿರಂದ ಈ ಹೆಚ್ಚುವರಿ ವೇತನ ಬಡ್ತಿ ಲಭ್ಯವಾಗುವುದಿಲ್ಲ.
***

20-6-16

ವಿನಾಯಿತಿಗೆ ಅರ್ಹನಾಗಿರುತ್ತೇನೆಯೇ?

ನಾನು ಕಿಯೋನಿಕ್ಸ್ ಸಂಸ್ಥೆಯಿಂದ ನಡೆಸಿದ ಆಫೀಸ್ ಮ್ಯಾನೇಜ್​ವೆುಂಟ್ ವಿಷಯದಲ್ಲಿ ಕಂಪ್ಯೂಟರ್ ಸಾಕ್ಷರತಾ ಪರೀಕ್ಷೆಯಲ್ಲಿ ಶೇ. 75 ಅಂಕ ಪಡೆದು ತೇರ್ಗಡೆಯಾಗಿದ್ದೇನೆ. ಹೀಗಿರುವಾಗ ನಾನು 2012ರ ಕರ್ನಾಟಕ ಸಿವಿಲ್ ಸೇವಾ (ಕಂಪ್ಯೂಟರ್ ಸಾಕ್ಷರತಾ ಪರೀಕ್ಷೆ) ನಿಯಮಾವಳಿಯಂತೆ ವಿನಾಯಿತಿಗೆ ಅರ್ಹನಾಗಿರುತ್ತೇನೆಯೇ?

| ಮೊಹಮ್ಮದ್ ಸಿರಾಜುದ್ದೀನ್ ಕೃಷ್ಣಾಪುರ ಕರ್ನಾಟಕ ಸಿವಿಲ್ ಸೇವಾ (ಕಂಪ್ಯೂಟರ್ ಸಾಕ್ಷರತಾ ಪರೀಕ್ಷೆ) ನಿಯಮಗಳು 2012ರ ರೀತ್ಯ ಪ್ರತಿಯೊಬ್ಬ ಸರ್ಕಾರಿ ನೌಕರನು ಕಂಪ್ಯೂಟರ್ ಸಾಕ್ಷರತೆ ಪರೀಕ್ಷೆಯಲ್ಲಿ ತೇರ್ಗಡೆಯಾಗಬೇಕಾದುದು ಕಡ್ಡಾಯವಾಗಿರುತ್ತದೆ. ಈ ಪರೀಕ್ಷೆಯನ್ನು ಸರ್ಕಾರದ ಅಂಗ ಸಂಸ್ಥೆಯಾದ ಕಿಯೋನಿಕ್ಸ್ ಸಂಸ್ಥೆಯು ಆನ್​ಲೈನ್ ಮೂಲಕ ನಡೆಸುತ್ತದೆ. ಈ ನಿಯಮಾವಳಿಯಲ್ಲಿ ಕಂಪ್ಯೂಟರ್ ಬಗ್ಗೆ ಬೇರೆ ಯಾವುದೇ ತರಬೇತಿ ಅಥವಾ ಡಿಪ್ಲೋಮೋ ಪಡೆದಿದ್ದರೆ ನಿಯಮಾವಳಿಯಲ್ಲಿ ಯಾವುದೇ ವಿನಾಯಿತಿಯ ಅವಕಾಶಗಳಿರುವುದಿಲ್ಲ. ಆದ ಕಾರಣ ನೀವು ಕಿಯೋನಿಕ್ಸ್​ನ ಆನ್​ಲೈನ್ ಪರೀಕ್ಷೆಯನ್ನು ತೆಗೆದುಕೊಂಡು ತೇರ್ಗಡೆಯಾಗಬೇಕಾದುದು ಕಡ್ಡಾಯವಾಗಿರುತ್ತದೆ.
***

28-6-16
ನಾನು ಪ್ರಸ್ತುತ ಪ್ರಾಥಮಿಕ ಶಾಲಾ ಶಿಕ್ಷಕನಾಗಿ ಸೇವೆ ಸಲ್ಲಿಸುತ್ತಿದ್ದು ಕಾಲ ವೇತನ ಬಡ್ತಿಯನ್ನು ಪಡೆದಿರುತ್ತೇನೆ. ನನ್ನ ಈಗಿನ ಮೂಲ ವೇತನ 17,650-00 ರೂ.ಗಳಾಗಿರುತ್ತವೆ. ನಾನು ಈಗ ಪಡೆಯುತ್ತಿರುವ ತತ್ಸಮಾನ ವೇತನ ಶ್ರೇಣಿಯ ಬೇರೊಂದು ಜಿಲ್ಲೆಗೆ ಅರ್ಜಿ ಸಲ್ಲಿಸಲು ಅನುಮತಿ ಅವಶ್ಯಕವೇ? ಸೇವಾ ಭದ್ರತೆ ಮತ್ತು ಮೂಲ ವೇತನ ನಿಗದಿ ಬಗ್ಗೆ ಪರಿಹಾರವೇನು?

|ಡಾ. ಬಸವಣ್ಣಪ್ಪ ಗುಂಜಾಳ ಕೊಪ್ಪಳ

ಕರ್ನಾಟಕ ಸಿವಿಲ್ ಸೇವಾ (ಸಾಮಾನ್ಯ ನೇಮಕಾತಿ) ನಿಯಮಾವಳಿ 1977ರ ರೀತ್ಯ ಪ್ರತಿಯೊಬ್ಬ ಸರ್ಕಾರಿ ನೌಕರನು ಬೇರೊಂದು ನೇಮಕಾತಿ ಪ್ರಾಧಿಕಾರಕ್ಕೆ ಅರ್ಜಿ ಸಲ್ಲಿಸಬೇಕಾದರೆ ಅನುಮತಿ ಪಡೆಯುವುದು ಅವಶ್ಯಕ. ನೀವು ತತ್ಸಮಾನ ವೇತನ ಶ್ರೇಣಿಯ ಹಿರಿಯ ಪ್ರಾಥಮಿಕ ಶಾಲೆಗೆ ಬೇರೆ ಜಿಲ್ಲೆಗೆ ಅರ್ಜಿ ಸಲ್ಲಿಸಬೇಕಾದರೆ ಈ ಅನುಮತಿ ಪತ್ರ ಪಡೆದು ಸಲ್ಲಿಸಿ ನೇಮಕವಾದರೆ ನಿಮ್ಮ ಹಿಂದಿನ ಸೇವೆ ಮತ್ತು ವೇತನ ರಕ್ಷಣೆ ದೊರಕುತ್ತದೆ.
***

 *

1-5-16.
ರಜೆ ಪಡೆಯಲು ನಿಯಮಾವಳಿಯಲ್ಲಿ ಅವಕಾಶವಿದೆಯೇ?
ನಾನು ಸರ್ಕಾರಿ ಪ್ರೌಢಶಾಲೆಯಲ್ಲಿ ದೈಹಿಕ ಶಿಕ್ಷಕನಾಗಿದ್ದು ಸಾಂರ್ದಭಿಕ ರಜೆ ಜೊತೆ ನಿರ್ಬಧಿಂತ ರಜೆ ಪಡೆಯಲು ನಿಯಮಾವಳಿಯಲ್ಲಿ ಅವಕಾಶವಿದೆಯೇ?

| ಶಂಕರ ಮಾಳಗಟ್ಟಿ ಬೆಳಗಾವಿ

ಕರ್ನಾಟಕ ಸಿವಿಲ್ ಸೇವಾ ನಿಯಮಾವಳಿಯ ಅನುಬಂಧ ಬಿ ರೀತ್ಯ ಸಾಂರ್ದಭಿಕ ರಜೆ ಜತೆ ರಜೆ ಪಡೆಯಲು ಅವಕಾಶವಿದೆ.
***

2-5-16.
ಅನುಕಂಪದ ಆಧಾರದಲ್ಲಿ ನೇಮಕಾತಿ ಹುದ್ದೆ ಲಭ್ಯವಾಗುವುದೇ?

ನನ್ನ ತಂದೆಯವರು 16 ವರ್ಷಗಳ ಕಾಲ ಅರಣ್ಯ ಇಲಾಖೆಯಲ್ಲಿ ವಲಯ ಅರಣ್ಯಾಧಿಕಾರಿಯಾಗಿ ಸೇವೆ ಸಲ್ಲಿಸಿದ್ದು, ಸೇವಾವಧಿಯಲ್ಲೇ ನಿಧನ ಹೊಂದಿದರು. ನಂತರ ನನ್ನ ತಾಯಿಯವರು ಅನುಕಂಪದ ಆಧಾರದ ಮೇಲೆ ಸಿ ವೃಂದದ ಹುದ್ದೆಯಲ್ಲಿ ಗುಮಾಸ್ತರಾಗಿ 6 ವರ್ಷಗಳ ಕಾಲ ಸೇವೆ ಸಲ್ಲಿಸಿದರು. ನಮ್ಮ ತಾಯಿಯವರೂ ಸಹ ಕ್ಯಾನ್ಸರ್ ಪೀಡಿತರಾಗಿ 2 ತಿಂಗಳ ಹಿಂದೆ ನಿಧನ ಹೊಂದಿದರು. ನಾನು ಒಬ್ಬನೇ ಮಗನಾಗಿರುವುದರಿಂದ ನನಗೆ ಅನುಕಂಪದ ಆಧಾರದ ಮೇಲೆ ನೇಮಕಾತಿ ಹುದ್ದೆ ಲಭ್ಯವಾಗುವುದೇ?

| ಪ್ರಶಾಂತ ಪಿ.ಎಸ್ ದುರ್ಗದಬೈಲು, ಹುಬ್ಬಳ್ಳಿ

ಕರ್ನಾಟಕ ಸಿವಿಲ್ ಸೇವಾ (ಅನುಕಂಪದ ಆಧಾರದ ಮೇಲೆ ನೇಮಕ ) ನಿಯಮಗಳು 1996ರ ನಿಯಮ 3ರ ರೀತ್ಯ ಮೃತ ಸರ್ಕಾರಿ ನೌಕರನ ಅವಲಂಬಿತರು ಅನುಕಂಪದ ಆಧಾರದ ಮೇಲೆ ಹುದ್ದೆ ಪಡೆಯಲು ಅರ್ಹರಾಗುತ್ತಾರೆ. ಆದ ಕಾರಣ ನೀವು ಸಹ ಪುನರ್ ಅನುಕಂಪದ ನೇಮಕಕ್ಕೆ ಸಕ್ಷಮ ಪ್ರಾಧಿಕಾರಕ್ಕೆ ಅರ್ಜಿಯನ್ನು ಸಲ್ಲಿಸಬಹುದು.
***

3-5-16.

ಅವಿವಾಹಿತ ಮಹಿಳೆ ಸೇವೆಯಲ್ಲಿದ್ದಾಗ ಮರಣ ಹೊಂದಿದರೆ ಅವಳ ಅವಿವಾಹಿತ ಸಹೋದರನಿಗೆ ಅನುಕಂಪ ಆಧಾರಿತ ನೌಕರಿ ದೊರೆಯುವುದೇ?

| ಬಿ.ಡಿ. ಬಳಿಗಾರ ಸೌದತ್ತಿ, ಬೆಳಗಾವಿ

ಕರ್ನಾಟಕ ಸಿವಿಲ್ ಸೇವಾ (ಅನುಕಂಪದ ಆಧಾರದ ಮೇಲೆ ನೇಮಕ ) ನಿಯಮಗಳು 1996ರ ನಿಯಮ 3ರ ರೀತ್ಯ ಮೃತ ಸರ್ಕಾರಿ ನೌಕರನ ಅವಲಂಬಿತರಾದ ಸಹೋದರರೂ ಸಹ ಅನುಕಂಪದ ಆಧಾರದ ಮೇಲೆ ಹುದ್ದೆ ಪಡೆಯಲು ಅರ್ಹರಾಗುತ್ತಾರೆ. ಆದ ಕಾರಣ ನೀವು ಸಹ ಅನುಕಂಪದ ನೇಮಕಕ್ಕೆ ಸಕ್ಷಮ ಪ್ರಾಧಿಕಾರಕ್ಕೆ ಅರ್ಜಿಯನ್ನು ಸಲ್ಲಿಸಬಹುದು.
***

4-5-16.
ಅನುಕಂಪ ಆಧಾರಿತ ಹುದ್ದೆ ದೊರೆಯುವುದೇ?
ನನ್ನ ಗೆಳತಿಯೊಬ್ಬರು ಅನುಕಂಪದ ಆಧಾರದ ಮೇಲೆ ನೇಮಕಾತಿ ಬಯಸಿ ಅರ್ಜಿ ಸಲ್ಲಿಸಿದ 2 ತಿಂಗಳ ನಂತರ ಮದುವೆಯಾದರು. ಅವರಿಗೆ ಅನುಕಂಪ ಆಧಾರಿತ ಹುದ್ದೆ ದೊರೆಯುವುದೇ?

| ಶಾಂತಾ ಮಂಡ್ಯ

ನಿಮ್ಮ ಗೆಳತಿ ಕರ್ನಾಟಕ ಸಿವಿಲ್ ಸೇವಾ (ಅನುಕಂಪದ ಆಧಾರದ ಮೇಲೆ ನೇಮಕ) ನಿಯಮಗಳು 1996ರ ನಿಯಮ 3ರ ರೀತ್ಯ ಅನುಕಂಪದ ಮೇರೆಗೆ ನೇಮಕ ಮಾಡಿಕೊಳ್ಳಲು ಮದುವೆಗೆ ಮುಂಚೆಯೇ ಅರ್ಜಿ ಸಲ್ಲಿಸಿರುವುದರಿಂದ ಪ್ರಸ್ತುತ ಅವರು ಅನುಕಂಪದ ಆಧಾರದ ಮೇಲೆ ಹುದ್ದೆ ಪಡೆಯಲು ಅರ್ಹರಾಗುತ್ತಾರೆ. ಆದ ಕಾರಣ ಅವರು ಕರ್ತವ್ಯಕ್ಕೆ ಹಾಜರಾದ ನಂತರ ವೈವಾಹಿಕ ಸ್ಥಿತಿಯನ್ನು ತನ್ನ ಸೇವಾ ಪುಸ್ತಕದಲ್ಲಿ ನಮೂದಿಸಬೇಕು.
***

5-5-16.

ನನ್ನ ಮಗನಿಗೆ ಆ ಕೆಲಸಕ್ಕೆ ಸೇರಲು ಅವಕಾಶವಿದೆಯೇ?
ಪಶು ವೈದ್ಯ ಸಹಾಯಕರಾಗಿ ನನ್ನ ಪತಿ 20 ವರ್ಷ ಸೇವೆ ಸಲ್ಲಿಸಿ ಹೃದಯಾಘಾತದಿಂದ 2008ರಲ್ಲಿ ನಿಧನ ಹೊಂದಿದ್ದಾರೆ. ನನ್ನ ಪತಿ ಕೆಲಸಕ್ಕೆ ಸರಿಯಾಗಿ ಹೋಗದ ಕಾರಣ ಸೇವೆಯಿಂದ ವಜಾಗೊಂಡಿದ್ದರು. ನನ್ನ ಮಗನಿಗೆ ಆ ಕೆಲಸಕ್ಕೆ ಸೇರಲು ಅವಕಾಶವಿದೆಯೇ?

|ತ್ರಿವೇಣಿ ಕಲ್ಲೇಶ್ ಹೊಸದುರ್ಗ

ಸರ್ಕಾರಿ ನೌಕರರು ಸರ್ಕಾರಿ ಸೇವೆಯಲ್ಲಿದ್ದಾಗಲೇ ವಜಾಗೊಂಡಿದ್ದರೆ ಅವರ ಕುಟುಂಬ ವರ್ಗಕ್ಕೆ ಯಾವುದೇ ಸರ್ಕಾರಿ ಸೇವಾ ಸೌಲತ್ತುಗಳು ಲಭ್ಯವಾಗುವುದಿಲ್ಲ. ಹೀಗಿರುವಲ್ಲಿ ಕರ್ನಾಟಕ ಸಿವಿಲ್ ಸೇವಾ (ಅನುಕಂಪದ ನೇಮಕಾತಿ) ನಿಯಮಗಳು 1996ರ ರೀತ್ಯ ಅನುಕಂಪದ ಆಧಾರದ ಮೇಲೆ ನಿಮ್ಮ ಮಗನು ನೇಮಕ ಹೊಂದಲು ಅರ್ಹನಾಗುವುದಿಲ್ಲ.
***

6-5-16.
ಎಫ್ ಡಿಎ ಹುದ್ದೆಗೆ ಆಯ್ಕೆಯಾದರೆ ವೇತನ ನಿಗದಿಪಡಿಸುವರೇ?
ನಾನು ಪ್ರಸ್ತುತ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದು, ನನ್ನ ಮೂಲ ವೇತನ 21,000 ಇದೆ. ನಾನು ಎಫ್​ಡಿಎ ಹುದ್ದೆಗೆ ಆಯ್ಕೆಯಾದರೆ ವೇತನವನ್ನು 21,000 ರೂ.ಗಳಿಗೆ ನಿಗದಿಪಡಿಸುವರೇ?

|ತಿಲಕ್​ರಾಜ್ ಶಿವಮೊಗ್ಗ

ಸರ್ಕಾರಿ ಸೇವಾ ನಿಯಮಾವಳಿ 41ಎ ಪ್ರಕಾರ ನಿಮ್ಮ ವೇತನವನ್ನು ನೀವು ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಹುದ್ದೆಗೆ ನೇಮಕವಾದ ದಿನಾಂಕದಿಂದ ಎಫ್​ಡಿಎ ಹುದ್ದೆಯ ವೇತನ ಶ್ರೇಣಿಯಲ್ಲಿ ನಿಗದಿ ಪಡಿಸಿಕೊಂಡು ಬರಲಾಗುತ್ತದೆ. ಆದರೆ ನಿಮಗೆ ರೂ. 21,000 ಮೂಲ ವೇತನ ನಿಗದಿಗೊಳಿಸಲಾಗುವುದಿಲ್ಲ.
***

7-5-16
ಪಿಂಚಣಿ ದೊರಕುವುದೇ?
ದಿನಗೂಲಿ ನೌಕರರ ಸೇವೆಯನ್ನು ಸಕ್ರಮಗೊಳಿಸುವ ಮೊದಲೇ ನನ್ನ ಪತಿ ನಿಧನ ಹೊಂದಿದ್ದಾರೆ. ನನ್ನ ಪತಿಯವರು 11 ವರ್ಷ ಸೇವೆ ಸಲ್ಲಿಸಿದ್ದು, ಅವರ ನೇಮಕಾತಿ ಆದೇಶ ಸಿಗುವ ಮೊದಲೇ ಮರಣ ಹೊಂದಿದ್ದಾರೆ. ಅವರ ಅವಲಂಬಿತಳಾದ ನಾನು ಅನುಕಂಪದ ಆಧಾರದ ಮೇಲೆ ನೇಮಕ ಹೊಂದಲು ಅರ್ಜಿ ಸಲ್ಲಿಸಬಹುದೇ? ಪಿಂಚಣಿ ದೊರಕುವುದೇ?

|ಡಿ.ಎನ್. ಪುರೋಹಿತ ಕಾರವಾರ

ದಿನಾಂಕ 2.1.1997ರ ಸರ್ಕಾರದ ಸುತ್ತೋಲೆಯಂತೆ ದಿನಗೂಲಿ ಆಧಾರದ ಮೇಲೆ ಸೇವೆ ಸಲ್ಲಿಸುತ್ತಿರುವ ನೌಕರರು ಸಕ್ರಮ ಗೊಳಿಸುವ ಮೊದಲೇ ಮೃತರಾದರೆ ಕರ್ನಾಟಕ ಸಿವಿಲ್ ಸೇವಾ (ಅನುಕಂಪದ ಆಧಾರದ ಮೇಲೆ ನೇಮಕ) ನಿಯಮಗಳು 1996ರ ರೀತ್ಯ ಮೃತ ಸರ್ಕಾರಿ ನೌಕರನ ಅವಲಂಬಿತರು ಅನುಕಂಪದ ಆಧಾರದ ಮೇಲೆ ಹುದ್ದೆ ಪಡೆಯಲು ಅರ್ಹರಾಗುತ್ತಾರೆ. ಆದರೆ ಅವರು 1.7.1984ಕ್ಕಿಂತ ಮೊದಲು ನೇಮಕವಾಗಿದ್ದು ದಿನಾಂಕ 31.12.1989ಕ್ಕೆ 10 ವರ್ಷಗಳ ಕಾಲ ಸೇವೆ ಸಲ್ಲಿಸಿದ್ದು ನಿಧನರಾದರೆ ಮಾತ್ರ ಈ ನೇಮಕಾತಿ ದೊರಕುತ್ತದೆ. ಆದರೆ ನಿಮಗೆ ಕುಟುಂಬ ಪಿಂಚಣಿ ಸೌಲಭ್ಯ ಲಭ್ಯವಾಗುವುದಿಲ್ಲ. ಆದ ಕಾರಣ ನೀವು ಸಹ ಮರು ಅನುಕಂಪದ ನೇಮಕಕ್ಕೆ ಸಕ್ಷಮ ಪ್ರಾಧಿಕಾರಕ್ಕೆ ಅರ್ಜಿಯನ್ನು ಸಲ್ಲಿಸಬಹುದು.

***

8-5-16
ಹೆಚ್ಚಿನ ಪಿಂಚಣಿ ಪಡೆಯಬಹುದೇ?
ನನ್ನ ತಂದೆ 1974ರಲ್ಲಿ ನಿವೃತ್ತರಾಗಿ ಕೆಲವು ಕಾಲದ ನಂತರ ಮರಣ ಹೊಂದಿದರು. ನನ್ನ ತಾಯಿ ಕುಟುಂಬ ಪಿಂಚಣಿ ಪಡೆಯುತ್ತಿದ್ದು ಅವರಿಗೀಗ 80 ವರ್ಷವಾಗಿರುವ ಕಾರಣ ಹೆಚ್ಚಿನ ಪಿಂಚಣಿ ಪಡೆಯಬಹುದೇ?
|ಮಲ್ಲಿಕಾರ್ಜುನ ತುಮಕೂರು
ನಿಮ್ಮ ತಾಯಿಯವರು 80 ವರ್ಷ ದಾಟಿ 81ನೇ ವರ್ಷಕ್ಕೆ ಕಾಲಿಟ್ಟಾಗ ಶೇ.20 ಹೆಚ್ಚಿನ ಕುಟುಂಬ ಪಿಂಚಣಿಯನ್ನು 2010ರ ಸರ್ಕಾರಿ ಆದೇಶದಂತೆ ಪಡೆಯಲು ಅರ್ಹರಾಗುವರು.
***

9-5-16
ನಾನು ಪ್ರಾಥಮಿಕ ಶಾಲೆಯಲ್ಲಿ 1981ರಿಂದ 2010ರವರೆಗೆ 25 ವರ್ಷಗಳ ಕಾಲ ಕರ್ತವ್ಯ ನಿರ್ವಹಿಸುತ್ತಾ ಬಂದಿದ್ದೇನೆ. ಆದರೆ ನನಗೆ 25 ವರ್ಷದ ಒಂದು ಹೆಚ್ಚುವರಿ ವೇತನ ಬಡ್ತಿ ಲಭ್ಯವಾಗಿಲ್ಲ. ಇದಕ್ಕೆ ಯಾವ ರೀತಿ ಕ್ರಮ ಕೈಗೊಳ್ಳಬೇಕು.

|ಶಕುಂತಲಾ ಮುಂಜಿ ಲಕ್ಷೇಶ್ವರ

ದಿನಾಂಕ 14.6.2102ರ ಸರ್ಕಾರಿ ಆದೇಶ ಸಂಖ್ಯೆ ಎಫ್​ಡಿ 12, ಎಸ್​ಆರ್​ಪಿ 2012(8)ರ ರೀತ್ಯ ದಿನಾಂಕ 1.4.2012ಕ್ಕೆ 25 ವರ್ಷಗಳ ಸೇವೆ ಪೂರೈಸಿರುವ ಸರ್ಕಾರಿ ನೌಕರರು ಹೆಚ್ಚುವರಿ ವೇತನ ಬಡ್ತಿಗೆ ಅರ್ಹರಾಗುತ್ತಾರೆ. ಆದ ಕಾರಣ ನೀವು 1.4.2012ರಿಂದ ಈ ಹೆಚ್ಚುವರಿ ವೇತನ ಬಡ್ತಿ ಪಡೆಯಬಹುದು.
***

10-5-2016.
ಕೋರ್ಟ್ ಮೊರೆ ಹೋಗಬಹುದೇ?
ನಾನು ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯಲ್ಲಿ ತಾಂತ್ರಿಕ ಸಹಾಯಕನಾಗಿ ಪ್ರವರ್ಗ 2ಎ ಮೀಸಲಾತಿಯಲ್ಲಿ ಆಯ್ಕೆಯಾಗಿ 2007ರಲ್ಲಿ ಸಿಂಧುತ್ವ ಪ್ರಮಾಣ ಪತ್ರ ನೀಡಿದ ಮೇಲೆ ನೇಮಕಗೊಂಡಿರುತ್ತೇನೆ. ಈಗ ನಿಗಮದಿಂದ ಇನ್ನೊಂದು ನಿಗಮಕ್ಕೆ ವರ್ಗಾವಣೆ ನೀಡದ ಕಾರಣ ಅದೇ ಹುದ್ದೆಗೆ ಇಲಾಖಾ ಅಭ್ಯರ್ಥಿಯಾಗಿ ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯಲ್ಲಿ ಅರ್ಜಿ ಸಲ್ಲಿಸಿ ಈ ಹಿಂದೆ ನೀಡಿದ ಸಿಂಧುತ್ವ ಪ್ರಮಾಣ ಪತ್ರ ನೀಡಿರುತ್ತೇನೆ. ಆದರೆ ಈ ಸಿಂಧುತ್ವ ಪ್ರಮಾಣ ಪತ್ರವನ್ನು ಆಯ್ಕೆ ಸಮಿತಿಯವರು ತಿರಸ್ಕರಿಸಿರುತ್ತಾರೆ. ನಾನು ಇಲಾಖಾ ಅಭ್ಯರ್ಥಿಯಾಗಿ ಮತ್ತೆ ಜಾತಿ, ಆದಾಯ ಪ್ರಮಾಣ ಪತ್ರಗಳನ್ನು ಹೊಸದಾಗಿ ಸಲ್ಲಿಸಬೇಕೇ? ಕೋರ್ಟ್ ಮೊರೆ ಹೋಗಬಹುದೇ?

|ಅಂಬರೀಷ ಬಿಎಂಟಿಸಿ, ಬೆಂಗಳೂರು

22.2.2012ರ ಸರ್ಕಾರಿ ಸುತ್ತೋಲೆ ಸಂಖ್ಯೆ ಎಸ್​ಡಬ್ಲ್ಯು ಡಿ 155 ಬಿಸಿಎ 2012ರಂತೆ ಸಿಂಧುತ್ವ ಪ್ರಮಾಣ ಪತ್ರದ ಸಿಂಧುತ್ವವು 5 ವರ್ಷ ಮಾತ್ರ ಆಗಿರುತ್ತದೆ. ಹೀಗಿರುವಲ್ಲಿ ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ನೇಮಕಾತಿ ಸಂಸ್ಥೆಯು ನಿಮ್ಮ ಸಿಂಧುತ್ವ ಪ್ರಮಾಣ ಪತ್ರವನ್ನು ತಿರಸ್ಕರಿಸಿರುವುದು ಕ್ರಮಬದ್ಧವಾಗಿರುತ್ತದೆ. ನೀವು ಇಲಾಖಾ ಅಭ್ಯರ್ಥಿಯಾಗದ್ದರೂ ನಿಮ್ಮ ಜಾತಿ ಮತ್ತು ಸಿಂಧುತ್ವ ಪ್ರಮಾಣ ಪತ್ರವನ್ನು ನಿಯಮಾವಳಿಯಂತೆ ಸಲ್ಲಿಸಬೇಕಾಗಿರುವುದು ನಿಮ್ಮ ಕರ್ತವ್ಯವಾಗಿರುತ್ತದೆ. ಆದ ಕಾರಣ ನೀವು ನ್ಯಾಯಾಲಯದ ಮೊರೆ ಹೊಗುವುದು ಸೂಕ್ತವೆನಿಸುವುದಿಲ್ಲ.
***

12-5-16.
ನನಗೆ ಹೆರಿಗೆ ರಜೆ ದೊರಕುವುದೇ?
ನಾನು ಪ್ರಾಥಮಿಕ ಶಾಲಾ ಶಿಕ್ಷಕಿಯಾಗಿ ಆಯ್ಕೆಯಾಗಿದ್ದು, ಹೆರಿಗೆಯಾದ 2 ತಿಂಗಳ ನಂತರ ಸರ್ಕಾರಿ ನೌಕರಿಗೆ ಸೇರಲಿದ್ದೇನೆ. ನನಗೆ ಹೆರಿಗೆ ರಜೆ ದೊರಕುವುದೇ?

|ವಸಂತಲಕ್ಷ್ಮೀ ಚಿಕ್ಕಮಗಳೂರು

ಕರ್ನಾಟಕ ಸರ್ಕಾರಿ ಸೇವಾ ನಿಯಮಾವಳಿಯ ನಿಯಮ 135(1)ರಂತೆ ಈ ಹೆರಿಗೆ ರಜೆಯನ್ನು ಮಹಿಳಾ ಸರ್ಕಾರಿ ನೌಕರರಿಗೆ 180 ದಿನಗಳವರೆಗೆ ಮಂಜೂರು ಮಾಡಲಾಗುತ್ತದೆ. ಆದರೆ ನೀವು ಕರ್ತವ್ಯಕ್ಕೆ ಸೇರುವ ಮೊದಲೆ ತಾಯಿ ಆಗಿರುವ ಕಾರಣ ನಿಮಗೆ ಹೆರಿಗೆ ರಜೆ ಸೌಲಭ್ಯ ಲಭ್ಯವಾಗುವುದಿಲ್ಲ.
***

13-5-16
ಸರ್ಕಾರಿ ಶಿಕ್ಷಕನಾಗಿದ್ದು ತಾಯಿಯ ಶಸ್ತ್ರಚಿಕಿತ್ಸೆಗೆ ಸಹಾಯ ಸಿಗುತ್ತದೆಯೇ? 
ನಾನು ಸರ್ಕಾರಿ ಪ್ರಾಥಮಿಕ ಶಾಲಾ ಶಿಕ್ಷಕನಾಗಿದ್ದು ಇತ್ತೀಚೆಗೆ ಮಹಾರಾಷ್ಟ್ರದ ಸೊಲ್ಲಾಪುರದ ಆಸ್ಪತ್ರೆಯಲ್ಲಿ ನಮ್ಮ ತಾಯಿಯವರಿಗೆ ತುರ್ತಾಗಿ ಹೃದಯ ಶಸ್ತ್ರ ಚಿಕಿತ್ಸೆ ಮಾಡಿಸಿದ್ದೇನೆ. ಈ ಶಸ್ತ್ರಚಿಕಿತ್ಸೆಗೆ ತಗುಲಿದ ವೆಚ್ಚ ಭರಿಸಲು ಬರುತ್ತದೆಯೇ? ಬರುವಂತಿದ್ದರೆ ಯಾವೆಲ್ಲಾ ಕ್ರಮಗಳನ್ನು ಕೈಗೊಳ್ಳಬೇಕು?

ಪ್ರಶಾಂತ್ ಕುನ್ನೂರು ವಿಜಯಪುರ(ಸಿಂದಗಿ)

ನೀವು ನಿಮ್ಮ ತಾಯಿಯವರಿಗೆ ಮಾಡಿಸಿದ ಶಸ್ತ್ರ ಚಿಕಿತ್ಸಾ ವೆಚ್ಚವನ್ನು ಜ್ಯೋತಿ ಸಂಜೀವಿನಿ ಯೋಜನೆಯಡಿಯಲ್ಲಿ ಪಡೆಯಬಹುದು. ಈ ಮೊಬಲಗನ್ನು ಸರ್ಕಾರವು ಸ್ಥಾಪಿಸಿರುವ ಸುವರ್ಣ ಆರೋಗ್ಯ ಟ್ರಸ್ಟ್ ಮೂಲಕ ನಿಗದಿತ ಅರ್ಜಿ ಸಲ್ಲಿಸಿ ಈ ವೈದ್ಯಕೀಯ ಸೌಲಭ್ಯದ ವೆಚ್ಚವನ್ನು ಪಡೆಯಬಹುದು.
***
14-5-16
ಪ್ರಕಟವಾಗಿರವದಿಲ್ಲ

***

15-5-16.

ನಿಯಮಾವಳಿ ರೀತ್ಯ ಯಾವ ಕ್ರಮ ಕೈಗೊಳ್ಳಬೇಕು?

ನನ್ನ ಪತ್ನಿ ವಿಶ್ವವಿದ್ಯಾನಿಲಯವೊಂದರಲ್ಲಿ ಸಹಾಯಕ ಪ್ರಾಧ್ಯಾಪಕಿಯಾಗಿ 3 ವರ್ಷಗಳ ಕಾಲ ಸೇವೆ ಸಲ್ಲಿಸಿದ್ದಾರೆ. ಪರೀಕ್ಷಾರ್ಥ ಅವಧಿಯೊಳಗೆ ತತ್ಸಮಾನ ಹುದ್ದೆಗೆ ಅರ್ಜಿ ಸಲ್ಲಿಸಬಾರದು ಎಂಬ ಷರತ್ತಿನೊಡನೆ ನೇಮಕವಾಗಿದ್ದು ಅವರು ಬೇರೊಂದು ಇಲಾಖೆಗೆ ಆನ್​ಲೈನ್ ಮೂಲಕ ಅರ್ಜಿಸಲ್ಲಿಸಿದ್ದಾರೆ. ಆದರೆ ವಿಶ್ವವಿದ್ಯಾನಿಲಯವು ಆಕ್ಷೇಪಣಾ ರಹಿತ ಪ್ರಮಾಣಪತ್ರ ನೀಡಿಲ್ಲ. ನನ್ನ ಪತ್ನಿಗೆ ಅವರು ಈ ಹುದ್ದೆಯಲ್ಲಿ ಮುಂದುವರಿಯಲು ಇಷ್ಟವಿಲ್ಲವಾಗಿದ್ದು, ಹೊರ ಹುದ್ದೆಯಲ್ಲಿ ನೇಮಕಗೊಳ್ಳಲು ಇಚ್ಛಿಸುತ್ತಿರುವುದರಿಂದ ಈ ಹಂತದಲ್ಲಿ ನಿಯಮಾವಳಿ ರೀತ್ಯ ಯಾವ ಕ್ರಮ ಕೈಗೊಳ್ಳಬೇಕು?

|ಪ್ರಶಾಂತ್ ಹೆಗಡೆ ಕಾರವಾರ

ನಿಮ್ಮ ಪತ್ನಿ ಪ್ರಸ್ತುತ ಸೇವೆ ಸಲ್ಲಿಸುತ್ತಿರುವ ಹುದ್ದೆಗೆ ರಾಜೀನಾಮೆ ನೀಡಿ ಹೊಸ ಹುದ್ದೆಗೆ ಸೇರಬೇಕಾಗುತ್ತದೆ. ಆದರೆ 1977ರ ಕರ್ನಾಟಕ ಸರ್ಕಾರಿ ಸೇವಾ (ಸಾಮಾನ್ಯ ನೇಮಕಾತಿ) ನಿಯಮಾವಳಿ ರೀತ್ಯ ನೇಮಕಾತಿ ಪ್ರಾಧಿಕಾರದ ಆಕ್ಷೇಪಣಾ ರಹಿತ ಪ್ರಮಾಣ ಪತ್ರವನ್ನು ಪಡೆದೇ ಹೊಸ ಹುದ್ದೆಗೆ ಅರ್ಜಿ ಸಲ್ಲಿಸಬೇಕು. ನಿಮ್ಮ ಪತ್ನಿಯು ರಾಜೀನಾಮೆ ಸಲ್ಲಿಸಿ ಹೊಸ ಹುದ್ದೆಗೆ ಹಾಜರಾದರೆ ಅವರ ಹಿಂದಿನ ಸೇವೆಯನ್ನು ಪರಿಗಣಿಸಲಾಗುವುದಿಲ್ಲ.
***

16-5-2016

ವಿನ್ಯೂ ಲೋಯರ್ ಮತ್ತು ಅಕೌಂಟ್ಸ್ ಲೋಯರ್ ಪರೀಕ್ಷೆಗಳಲ್ಲಿ ತೇರ್ಗಡೆಯಾಗಬೇಕೆ?

ನಾನು ಚಿತ್ರದುರ್ಗದಲ್ಲಿ ಗ್ರಾಮ ಲೆಕ್ಕಿಗನಾಗಿ ಕಾರ್ಯನಿರ್ವಹಿಸುತ್ತಿದ್ದು 2014ರ ದ್ವಿತೀಯ ಅಧಿವೇಶನದಲ್ಲಿ ಅಕೌಂಟ್ಸ್ ಹೈಯರ್ ಮತ್ತು ರೆವಿನ್ಯೂ ಹೈಯರ್ ಪರೀಕ್ಷೆಗಳಲ್ಲಿ ಉತ್ತೀರ್ಣನಾಗಿರುತ್ತೇನೆ. ಆದರೆ ನಮ್ಮ ಮೇಲಾಧಿಕಾರಿಗಳು ನಿಮಗೆ ನಿಗದಿಪಡಿಸಿರುವ ರೆವಿನ್ಯೂ ಲೋಯರ್ ಮತ್ತು ಅಕೌಂಟ್ಸ್ ಲೋಯರ್ ಪರೀಕ್ಷೆಗಳಲ್ಲಿ ತೇರ್ಗಡೆಯಾಗಬೇಕೆಂದು ಸೂಚಿಸಿದ್ದಾರೆ. ಆದ ಕಾರಣ ನಾನು ಈ ಪರೀಕ್ಷೆಗಳಿಗೆ ಹಾಜರಾಗಿ ತೇರ್ಗಡೆಯಾಗಬೇಕೇ?

|ವಿಶ್ವನಾಥ್ ಚಿತ್ರದುರ್ಗ

ದಿನಾಂಕ 1.4.1976ರ ಸರ್ಕಾರಿ ಸುತ್ತೋಲೆ ಸಂಖ್ಯೆ ಜಿಎಡಿ 25, ಎಸ್​ಎಸ್​ಆರ್ 76ರಂತೆ ಸರ್ಕಾರಿ ನೌಕರನು ರೆವಿನ್ಯೂ ಹೈಯರ್ ಮತ್ತು ಅಕೌಂಟ್ಸ್ ಹೈಯರ್ ಪರೀಕ್ಷೆಗಳಲ್ಲಿ ತೇರ್ಗಡೆಯಾಗಿದ್ದರೆ ಅಂತಹ ನೌಕರನು ಮತ್ತೆ ರೆವಿನ್ಯೂ ಲೋಯರ್ ಮತ್ತು ಅಕೌಂಟ್ಸ್ ಲೋಯರ್ ಪರೀಕ್ಷೆಗಳಲ್ಲಿ ತೇರ್ಗಡೆಯಾಗುವುದರಿಂದ ವಿನಾಯಿತಿ ನೀಡಲಾಗಿದೆ. ಆದ ಕಾರಣ ನೀವು ಮತ್ತೆ ಈ ರೆವಿನ್ಯೂ ಲೋಯರ್ ಮತ್ತು ಅಕೌಂಟ್ಸ್ ಲೋಯರ್ ಪರೀಕ್ಷೆಗಳಿಗೆ ಹಾಜರಾಗುವ ಅಗತ್ಯವಿಲ್ಲ.
***

17-5-16

ಕಂಪ್ಯೂಟರ್ ಸಾಕ್ಷರತಾ ಪರೀಕ್ಷೆಯಲ್ಲಿ ತೇರ್ಗಡೆಯಾಗಲೇಬೇಕೇ?
ನಾನು ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆಯಲ್ಲಿ ಶೀಘ್ರಲಿಪಿಗಾರ್ತಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದು ನನಗೀಗ 54 ವರ್ಷವಾಗಿರುತ್ತದೆ. ನಾನು ಕಂಪ್ಯೂಟರ್ ಜ್ಞಾನ ಹೊಂದಿದ್ದು ಕಂಪ್ಯೂಟರ್ ಸಾಕ್ಷರತಾ ಪರೀಕ್ಷೆಯಲ್ಲಿ ತೇರ್ಗಡೆಯಾಗಲೇಬೇಕೇ?

|ಎಂ ಉಮಾ ಚಿಕ್ಕಮಗಳೂರು

ಕರ್ನಾಟಕ ಸಿವಿಲ್ ಸೇವಾ ಕಂಪ್ಯೂಟರ್ ಸಾಕ್ಷರತಾ ಪರೀಕ್ಷೆ ನಿಯಮಗಳು 2012ರ ರೀತ್ಯ ದಿನಾಂಕ 7.3.2012ಕ್ಕೆ 50 ವರ್ಷ ಪೂರೈಸಿದ ನೌಕರರಿಗೆ ಈ ಪರೀಕ್ಷೆಯಿಂದ ವಿನಾಯಿತಿ ನೀಡಲಾಗಿದೆ. ಆದರೆ ನಿಮಗೆ ತದನಂತರದ ದಿನಾಂಕದಲ್ಲಿ 54 ವರ್ಷವಾಗಿರುವುದರಿಂದ ಪರೀಕ್ಷೆಯಲ್ಲಿ ತೇರ್ಗಡೆ ಹೊಂದುವುದು ಕಡ್ಡಾಯ.
***

18-5-16
ಅನುಕಂಪದ ಮೇಲೆ ಸರ್ಕಾರಿ ನೌಕರಿ ದೊರಕುತ್ತದೆಯೇ?
ಶಿಕ್ಷಣ ಇಲಾಖೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ನಮ್ಮ ತಂದೆ ನಿಧನದ ನಂತರ ನನ್ನ ಹಿರಿಯ ಸಹೋದರನಿಗೆ ಅನುಕಂಪದ ಮೇಲೆ ನೌಕರಿ ದೊರೆಯಿತು. ನನ್ನ ಹಿರಿಯ ಸಹೋದರ ದಿನಾಂಕ 28.4.2016ರಂದು ಹೃದಯಾಘಾತದಿಂದ ನಿಧನರಾಗಿದ್ದಾರೆ. ಅವಿವಾಹಿತರಾಗಿದ್ದ ನನ್ನ ಹಿರಿಯ ಸಹೋದರನ ನಿಧನದಿಂದ ಅವಲಂಬಿತನಾದ ನನಗೆ ಅನುಕಂಪದ ಮೇಲೆ ಸರ್ಕಾರಿ ನೌಕರಿ ದೊರಕುತ್ತದೆಯೇ?

|ನಾಗರಾಜ ದೇವದುರ್ಗ ರಾಯಚೂರು

ಕರ್ನಾಟಕ ಸಿವಿಲ್ ಸೇವಾ (ಅನುಕಂಪದ ಆಧಾರ ಮೇಲೆ ನೇಮಕಾತಿ) ನಿಯಮಾವಳಿ 1996ರ ನಿಯಮ 3ರ ರೀತ್ಯ ಅವಿವಾಹಿತ ಸಹೋದರನು ಅನುಕಂಪದ ಆಧಾರದ ಮೇಲೆ ನೇಮಕವಾಗಲು ಅರ್ಹನಾಗಿರುತ್ತಾನೆ. ಆದ ಕಾರಣ ನೀವು ಈ ನಿಯಮಾವಳಿ ರೀತ್ಯ ಅನುಕಂಪದ ಆಧಾರದ ಮೇಲೆ ನೇಮಕ ಮಾಡಿಕೊಳ್ಳಲು ಸಕ್ಷಮ ಪ್ರಾಧಿಕಾರಿಗೆ ಮನವರಿಕೆ ಮಾಡಿಸಿ ಅರ್ಜಿಯನ್ನು ಸಲ್ಲಿಸಬಹುದು.
***

19-5-16
ನೇಮಕಾತಿ ಮಾಡಿಕೊಳ್ಳಲು ಯಾವ ರೀತಿ ಕ್ರಮ ಕೈಗೊಳ್ಳಬೇಕು?
ಅನುದಾನಿತ ಪ್ರೌಢಶಾಲೆಯಲ್ಲಿ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದ ನನ್ನ ತಂದೆಯವರು ಇತ್ತೀಚೆಗೆ ನಿಧನ ಹೊಂದಿದ್ದು, ನಾನು ಸಂಬಂಧಿತ ಶಿಕ್ಷಣ ಸಂಸ್ಥೆಯ ಮುಖ್ಯೋಪಾಧ್ಯಾಯರನ್ನು ಭೇಟಿಯಾದಾಗ ಅನುಕಂಪದ ಆಧಾರದ ಮೇಲೆ ನೇಮಕಾತಿಗೆ ಅವಕಾಶವಿಲ್ಲವೆಂದು ತಿಳಿಸಿ ನನ್ನ ಮನವಿ ತಿರಸ್ಕರಿಸಿದ್ದಾರೆ. ಹೀಗಿರುವಲ್ಲಿ ನಾನು ಅನುಕಂಪದ ಆಧಾರದ ಮೇಲೆ ನೇಮಕಾತಿ ಮಾಡಿಕೊಳ್ಳಲು ಯಾವ ರೀತಿ ಕ್ರಮ ಕೈಗೊಳ್ಳಬೇಕು?

|ಮಂಜುನಾಥ ಬಿ.ಎನ್. ಹಾಸನ

ಕರ್ನಾಟಕ ಸಿವಿಲ್ ಸೇವಾ (ಅನುಕಂಪದ ಆಧಾರದ ಮೇಲೆ ನೇಮಕ ) ನಿಯಮ ಗಳು 1996ರ ನಿಯಮ 3ರ ರೀತ್ಯ ಅನುದಾನಿತ ಮೃತ ನೌಕರನ ಅವಲಂಬಿತರು ಅನುಕಂಪದ ಆಧಾರದ ಮೇಲೆ ಹುದ್ದೆ ಪಡೆಯಲು ಅರ್ಹರಾಗುತ್ತಾರೆ. ದಿನಾಂಕ 12.9.1996ರ ಅಸೂಚನೆಯಲ್ಲಿ ಅನುದಾನಿತ ಶಿಕ್ಷಣ ಸಂಸ್ಥೆಗಳಿಗೂ ಸಹ ಈ ನಿಯಮಾವಳಿಯನ್ನು ಅನ್ವಯಿಸಲಾಗಿದೆ. ಆದ ಕಾರಣ ನೀವು ಸಹ ಪುನರ್ ಅನುಕಂಪದ ನೇಮಕಕ್ಕೆ ಸಂಬಂಧಿತ ಶಿಕ್ಷಣ ಸಂಸ್ಥೆಯ ಆಡಳಿತ ಮಂಡಳಿಗೆ ಅರ್ಜಿಯನ್ನು ಸಲ್ಲಿಸಬಹುದು.
***

20-4-16
ನಾನು 30 ವರ್ಷಗಳಿಂದ ಸರ್ಕಾರಿ ನೌಕರಳಾಗಿ ಸೇವೆ ಸಲ್ಲಿಸುತ್ತಿದ್ದು, ನನಗೀಗ 55 ವರ್ಷ.ನನ್ನ ಸೇವಾ ಅವಧಿ 4 ವರ್ಷ ಉಳಿದಿದ್ದು, ನಾನು ಕರ್ನಾಟಕ ಸರ್ಕಾರಿ ಸೇವಾ ನಿಯಮಾವಳಿ ರೀತ್ಯ ಸ್ವಯಂ ನಿವೃತ್ತಿ ಪಡೆದರೆ ಸಿಗುವ ಸೇವಾ ಅಕ್ಯ (ವೈಟೇಜ್) ಎಷ್ಟು?

|ಅನಿತಾ ಮದಬಾವಿ, ವಿಜಯಪುರ.

ಕರ್ನಾಟಕ ಸಿವಿಲ್ ಸೇವಾ ನಿಯಮಾವಳಿಯ ನಿಯಮ 285 (2)(v)ರ ರೀತ್ಯ 15 ವರ್ಷಗಳ ಕಾಲ ಸೇವೆ ಸಲ್ಲಿಸಿ ಸ್ವಯಂ ನಿವೃತ್ತಿ ಹೊಂದುವ ಸರ್ಕಾರಿ ನೌಕರರಿಗೆ 5 ವರ್ಷಗಳ ಕಾಲ ಸೇವಾ ಅಕ್ಯವು ದೊರಕುತ್ತದೆ. ಆದರೆ ಇದು ಒಟ್ಟು ಅರ್ಹತಾದಾಯಕ ಸೇವೆ 33 ವರ್ಷಗಳನ್ನು ದಾಟಬಾರದು.ಆದ ಕಾರಣ ನಿಮಗೆ 3 ವರ್ಷಗಳ ಕಾಲ ಸೇವಾ ಅಕ್ಯ ಲಭ್ಯವಾಗುತ್ತದೆ.
***

21-5-16.
ನಾನು ನ್ಯಾಯಾಂಗ ಇಲಾಖೆಯಲ್ಲಿ 2009ರಲ್ಲಿ ಪ್ರಥಮ ದರ್ಜೆ ಸಹಾಯಕಿಯಾಗಿ ನೇಮಕಗೊಂಡಿರುತ್ತೇನೆ. ನನ್ನ ಪತಿ ನಿರುದ್ಯೋಗಿ. ನನ್ನ ಅತ್ತೆಯವರಿಗೆ ಇತ್ತೀಚೆಗೆ ತೆರೆದ ಹೃದಯ ಚಿಕಿತ್ಸೆ ಮಾಡಿಸಿದ್ದು ನಾನು ಈ ವೈದ್ಯಕೀಯ ಚಿಕಿತ್ಸೆಯನ್ನು ನಮ್ಮ ಕಚೇರಿಯಿಂದ ಮರು ಪಾವತಿ ಪಡೆಯಬಹುದೇ?

|ಶಾರದಾ ಬೆಂಗಳೂರು

ಕರ್ನಾಟಕ ಸರ್ಕಾರಿ ನೌಕರರ (ವೈದ್ಯಕೀಯ ಚಿಕಿತ್ಸೆ) ನಿಯಮಗಳು 1963ರ ನಿಯಮ 2ರಲ್ಲಿ ಕುಟುಂಬ ಎನ್ನುವ ಪದಾವಳಿಯನ್ನು ಪರಿಭಾಷಿಸಿದ್ದು ಅದರಂತೆ ಸರ್ಕಾರಿ ನೌಕರನ/ಳ ಪತಿ ಅಥವಾ ಪತ್ನಿ ತಂದೆ, ತಾಯಿ, ನೌಕರನೊಂದಿಗೆ ವಾಸಿಸುತ್ತಿದ್ದರೆ ಅಂಥವರು ಎಂದು ತಿಳಿಸಿದೆ. ಆದರೆ ಅತ್ತೆಯವರ ವೈದ್ಯಕೀಯ ವೆಚ್ಚವನ್ನು ಮರು ಸಂದಾಯ ಮಾಡಲು ನಿಯಮಾವಳಿ ರೀತ್ಯ ಅವಕಾಶವಿರುವುದಿಲ್ಲ.
***

22-5-16
ಪೊಲೀಸ್ ವಸತಿ ಗೃಹದಲ್ಲಿ ಎಷ್ಟು ಅವಧಿಯವರೆಗೆ ಮುಂದುವರಿಯಬಹುದು?
ಪೊಲೀಸ್ ಇಲಾಖೆಯಲ್ಲಿ ಮುಖ್ಯ ಪೇದೆಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ನನಗೀಗ ಪಿಎಸ್​ಐ ಹುದ್ದೆಗೆ ಪದೋನ್ನತಿ ಲಭ್ಯವಾಗಿದ್ದು ಚಾಮರಾಜನಗರದಿಂದ ಮೈಸೂರಿಗೆ ಸ್ಥಳ ನಿಯುಕ್ತಿಗೊಂಡಿರುತ್ತೇನೆ. ಮುಖ್ಯ ಪೇದೆಯಾಗಿದ್ದಾಗ ಹಂಚಿಕೆಯಾಗಿರುವ ಪೊಲೀಸ್ ವಸತಿ ಗೃಹದಲ್ಲಿ ಎಷ್ಟು ಅವಧಿಯವರೆಗೆ ಮುಂದುವರಿಯಬಹುದು. ಈ ಬಗ್ಗೆ ಇರುವ ನಿರ್ದಿಷ್ಟ ನಿಯಮಗಳೇನು?

|ಜಯಕೀರ್ತಿ ಮೈಸೂರು

ಕರ್ನಾಟಕ ಸಿವಿಲ್ ಸೇವಾ ನಿಯಮಗಳ ಪರಿಶಿಷ್ಟ 4ರಲ್ಲಿನ ನಿಯಮ 29 (2ಎ) ರೀತ್ಯ ಒಂದು ತಿಂಗಳೊಳಗಾಗಿ ವಸತಿ ಗೃಹವನ್ನು ಖಾಲಿ ಮಾಡಲು ಅವಕಾಶ ನೀಡಲಾಗುತ್ತದೆ. ಅವಧಿ 1 ತಿಂಗಳಿಗಿಂತ ಜಾಸ್ತಿಯಾದಲ್ಲಿ ನಿಮ್ಮ ವಸತಿ ಗೃಹದ ಬಾಡಿಗೆ/ಲೈಸೆನ್ಸ್ ಶುಲ್ಕವನ್ನು ಮೂರರಷ್ಟು ವಿಧಿಸಬಹುದು. 3 ತಿಂಗಳಿಗಿಂತ ಜಾಸ್ತಿಯಾದಲ್ಲಿ ವಸತಿ ಗೃಹವನ್ನು ಖಾಲಿ ಮಾಡದಿದ್ದರೆ ಲೋಕೋಪಯೋಗಿ ಇಲಾಖೆಯು ಅಗತ್ಯ ಕ್ರಮ ಕೈಗೊಂಡು ಖಾಲಿ ಮಾಡಿಸಬಹುದು 3 ತಿಂಗಳಿಗಿಂತ ಜಾಸ್ತಿಯಾದಲ್ಲಿ 5ರಷ್ಟು ಲೈಸೆನ್ಸ್ ಶುಲ್ಕವನ್ನು ವಿಧಿಸಬಹುದು.
***

23-5-16.
ಅರಣ್ಯ ಇಲಾಖೆಯಲ್ಲಿ ದಿನಗೂಲಿ ನೌಕರರಾಗಿ 1987ರಿಂದ ಕೆಲಸ ಮಾಡುತ್ತಿದ್ದ ನಮ್ಮ ತಂದೆ 12.02.2015ರಂದು ನಿಧನ ಹೊಂದಿರುತ್ತಾರೆ. ಅವರ ಪುತ್ರನಾದ ನನಗೆ ಅನುಕಂಪದ ಆಧಾರದ ಮೇಲೆ ಸರ್ಕಾರಿ ನೌಕರಿ ದೊರಕುತ್ತದೆಯೇ?

|ಹುಲುಗಪ್ಪ ಉಪ್ಪಾರ ಧಾರವಾಡ

ದಿನಾಂಕ 2.1.1997ರ ಸರ್ಕಾರಿ ಸುತ್ತೋಲೆ ಸಿಆಸುಇ 11, ಸೇಅನೆ 95ರಂತೆ ದಿನಾಂಕ 1.4.1984ಕ್ಕಿಂತ ಮೊದಲು ದಿನಗೂಲಿ ನೌಕರರಾಗಿ ನೇಮಕವಾಗಿದ್ದು ದಿನಾಂಕ 31.12.1991ಕ್ಕೆ 10 ವರ್ಷಗಳ ಕಾಲ ಸೇವೆ ಸಲ್ಲಿಸಿ ಸಕ್ರಮಗೊಂಡಿರುವ ನೌಕರರ ಅವಲಂಬಿತರಿಗೆ 1996ರ ಅನುಕಂಪದ ಆಧಾರದ ಮೇಲೆ ನೇಮಕಾತಿ ನಿಯಮಾವಳಿ ರೀತ್ಯ ಸರ್ಕಾರಿ ನೌಕರಿ ಲಭ್ಯವಾಗುತ್ತದೆ. ಆದರೆ ನಿಮ್ಮ ತಂದೆಯವರು ತದನಂತರ ನಿಯೋಜಿತರಾಗಿದ್ದು ಖಾಯಂ ಆಗದ ಕಾರಣ ಅನುಕಂಪದ ನೇಮಕ ಲಭ್ಯವಾಗುವುದಿಲ್ಲ.
***

24-5-16

ನಾನು ಶಿಕ್ಷಣ ಇಲಾಖೆಯಲ್ಲಿ ದ್ವಿತೀಯ ದರ್ಜೆ ಸಹಾಯಕನಾಗಿ ಕಾರ್ಯ ನಿರ್ವಹಿಸುತ್ತಿದ್ದು ಪೂರ್ವಾಗ್ರಹ ಪೀಡಿತರಾಗಿದ್ದ ನನ್ನ ಮೇಲಧಿಕಾರಿ ಶಿಸ್ತುಪ್ರಾಧಿಕಾರಕ್ಕೆ ನನ್ನ ವಿರುದ್ಧ ವರದಿ ಸಲ್ಲಿಸಿದ್ದಾರೆ. ಶಿಸ್ತುಪ್ರಾಧಿಕಾರದ ಇಲಾಖಾ ಆಯುಕ್ತರು ಇಲಾಖಾ ವಿಚಾರಣೆ ನಡೆಸಲು ನನ್ನ ಮೇಲಧಿಕಾರಿಯನ್ನೇ ವಿಚಾರಣಾಧಿಕಾರಿಯನ್ನಾಗಿ ನಿಯುಕ್ತಿಗೊಳಿಸಿದ್ದಾರೆ. ಈ ಹಿನ್ನೆಲೆಯಲ್ಲಿ ನಾನು ಬೇರೊಬ್ಬರನ್ನು ವಿಚಾರಣಾಧಿಕಾರಿಯಾಗಿ ನೇಮಿಸಲು ಕೋರಬಹುದೇ?

|ಶಿವಕುಮಾರ ಹಾಸನ

ಸಿಸಿಎ ನಿಯಮಾವಳಿಯಡಿ ವಿಚಾರಣಾಧಿಕಾರಿ ಪಕ್ಷಪಾತಿ ಎಂಬುದು ಆಪಾದಿತನ ಅನಿಸಿಕೆಯಾದರೆ ಸಕಾರಣಗಳನ್ನು ಒಳಗೊಂಡ ಮನವಿಯನ್ನು ಶಿಸ್ತುಪ್ರಾಧಿಕಾರಿಗೆ ವಿಚಾರಣೆ ಪ್ರಾರಂಭವಾಗುವುದಕ್ಕೆ ಮೊದಲೇ ಸಲ್ಲಿಸಬೇಕು ಎಂದು ಮನಕ್​ಲಾಲ್ ಡ/ಠ ಈ. ಖಜ್ಞಿಜಚಡಜಿ. ಪ್ರಕರಣದಲ್ಲಿ ಸರ್ವೇಚ್ಛ ನ್ಯಾಯಾಲಯವು ಸೂಚಿಸಿದೆ.
***

25-5-16
ಪ್ರಾಥಮಿಕ ಶಾಲಾ ಶಿಕ್ಷಕಿಯಾದ ನನಗೆ, ಎರಡು ಮಕ್ಕಳಿದ್ದು, ಈಗಾಗಲೇ ಎರಡು ಸಲ ಹೆರಿಗೆ ರಜೆ ಪಡೆದಿರುತ್ತೇನೆ. ನನ್ನ ವೈಯಕ್ತಿಕ ಕಾರಣಗಳಿಂದ ನಮಗೆ ಇನ್ನೊಂದು ಮಗುವಿನ ಅವಶ್ಯಕತೆ ಇದೆ. ನಾನು ಇನ್ನೊಂದು ಮಗು ಪಡೆದರೆ ವೇತನ ರಹಿತ ರಜೆ ಹಾಕಿಕೊಳ್ಳಬಹುದೇ? ಎಷ್ಟು ದಿನ ರಜೆ ಪಡೆಯಬಹುದು? ವೈದ್ಯಕೀಯ ಪ್ರಮಾಣಪತ್ರ ನೀಡಬೇಕೆ? ವೇತನರಹಿತ ರಜೆ ತೆಗೆದುಕೊಳ್ಳುವುದರಿಂದ, ಕುಟುಂಬ ಯೋಜನೆ ಅನುಸರಿಸದೆ ಇರುವುದರಿಂದ ನನ್ನ ವೃತ್ತಿ ಬದುಕಿಗೆ ತೊಂದರೆಯಾಗುತ್ತದೆಯೇ?

| ಪ್ರಿಯಾ ಚಾಮರಾಜನಗರ

ನೀವು ಸರ್ಕಾರಿ ಸೇವಾ ನಿಯಾಮಾವಳಿಯ ನಿಯಮ 117ರ ಪ್ರಕಾರ ವೇತನರಹಿತ ರಜೆಯನ್ನು 5 ವರ್ಷಗಳವರೆಗೆ ಪಡೆಯಬಹುದು. ಆದರೆ ಈ ಅವಧಿಯಲ್ಲಿ ನಿಮಗೆ ವಾರ್ಷಿಕ ವೇತನ ಬಡ್ತಿ ಇತ್ಯಾದಿ ಸೌಲಭ್ಯಗಳು ಮುಂದೂಡಲ್ಪಡುತ್ತದೆ. ಆದರೆ ನೀವು ಗಳಿಸದ ರಜೆಯನ್ನು ನಿಯಮ 114(6) (ಸಿ) ರೀತ್ಯ ಇಡೀ ಸೇವಾ ಅವಧಿಯಲ್ಲಿ 360 ದಿನ ಪಡೆಯಬಹುದು. ಈ ವೇತನರಹಿತ ರಜೆ ಪಡೆಯುವುದರಿಂದ ಮತ್ತು ಕುಟುಂಬ ಯೋಜನೆ ಅನುಸರಿಸದೇ ಇರುವುದರಿಂದ ನಿಮ್ಮ ವೃತ್ತಿ ಬದುಕಿಗೆ ಯಾವುದೇ ತೊಂದರೆ ಆಗುವುದಿಲ್ಲ. ಆದರೆ ಪದೋನ್ನತಿಗಳನ್ನು ಮುಂದೂಡಲಾಗುವುದು.
***

26-5-16
ಯಾವ ದಿನಾಂಕದಿಂದ ಕಾಲಮಿತಿ ಬಡ್ತಿ ಲಭ್ಯವಾಗುತ್ತದೆ?

ನಾನು ನೇರ ನೇಮಕಾತಿ ಮುಖಾಂತರ ಸಿ ದರ್ಜೆಯ ವಾಹನ ಚಾಲಕ ಹುದ್ದೆಯಲ್ಲಿ ದಿನಾಂಕ 3.10.2003ರಂದು ಕರ್ತವ್ಯಕ್ಕೆ ಸೇರಿದ್ದು, ಕರ್ನಾಟಕ ಸರ್ಕಾರಿ ಸೇವಾ (ಲಿಪಿಕ ಹುದ್ದೆಗಳ ನೇಮಕಾತಿ) ನಿಯಮಗಳು 1978ರ ನಿಯಮ 3 ಮತ್ತು 4ರನ್ವಯ ವಾಹನ ಚಾಲಕ ಹುದ್ದೆಯಿಂದ ದ್ವಿತೀಯ ದರ್ಜೆ ಸಹಾಯಕರ ಹುದ್ದೆಗೆ ನೇಮಕಾತಿ ಪ್ರಾಧಿಕಾರದಿಂದ ವೃಂದ ಬದಲಾವಣೆಗೊಂಡು ದಿನಾಂಕ 4.7.2012ರಿಂದ ಕೆಲಸ ಮಾಡುತ್ತಿರುತ್ತೇನೆ. ನಾನು 10 ವರ್ಷಗಳ ಆಯ್ಕೆಕಾಲಿಕ ವೇತನ ಪಡೆದಿರುವುದಿಲ್ಲ. ಇದನ್ನು ಪಡೆಯಲು ನಾನು ಅರ್ಹನೇ? ಯಾವ ದಿನಾಂಕದಿಂದ ಕಾಲಮಿತಿ ಬಡ್ತಿ ಲಭ್ಯವಾಗುತ್ತದೆ?

|ಮಧುಸೂದನ್ ಚಿತ್ರದುರ್ಗ

1983ರ ಕರ್ನಾಟಕ ಸರ್ಕಾರಿ ಸೇವಾ (ಕಾಲಬದ್ಧ ಮುಂಬಡ್ತಿ ನಿಯಮಗಳು) ನಿಯಮ 3ರಂತೆ ಒಂದೇ ಹುದ್ದೆಯಲ್ಲಿ 10 ವರ್ಷಗಳ ಕಾಲ ಸೇವೆ ಸಲ್ಲಿಸಿದ್ದಲ್ಲಿ ಅಂತವರಿಗೆ ಈ ಸೌಲಭ್ಯ ಲಭ್ಯವಾಗುತ್ತದೆ. ಈ ನಿಯಮಾವಳಿಯ ನಿಯಮ 3(ಬಿ)ಯಂತೆ 10 ವರ್ಷಕ್ಕಿಂತ ಮೊದಲೇ ನೀವು ವೃಂದ ಬದಲಾವಣೆ ಮಾಡಿಕೊಂಡಿರುವುದರಿಂದ ನಿಮ್ಮ ವಾರ್ಷಿಕ ವೇತನವನ್ನು ಮೂರು ತಿಂಗಳುಗಳ ಕಾಲ ಮುಂದೂಡಿ ನಿಮ್ಮ ಹಿಂದಿನ ಹುದ್ದೆಯಲ್ಲಿ ಕಾಲವೇತನ ಮುಂಬಡ್ತಿಯನ್ನು ಪಡೆಯಬಹುದು.
***

27-5-16.
ನಾನು ಪ್ರಾಥಮಿಕ ಶಾಲಾ ಶಿಕ್ಷಕನಾಗಿದ್ದು ರಜಾ ದಿನಗಳಲ್ಲಿ ಚಲನಚಿತ್ರಗಳಲ್ಲಿ ಅಭಿನಯ, ನಿರ್ದೇಶನ ಮುಂತಾದ ಚಟುವಟಿಕೆಗಳಲ್ಲಿ ಭಾಗವಹಿಸಲು ಅನುಮತಿ ಅವಶ್ಯಕವೇ?

|ಸಿ.ಪಿ. ಲಿಂಗರಾಜು ಚಿಕ್ಕಮಗಳೂರು

ಸರ್ಕಾರದ ಸುತ್ತೋಲೆ ಸಂಖ್ಯೆ ಸಿಆಸುಇ 2, ಸೇನೆಸಿ 2004, ದಿನಾಂಕ 8.3.2004ರಂತೆ ಅಖಿಲ ಭಾರತ ಸೇವಾ ಅಧಿಕಾರಿಗಳು ಒಳಗೊಂಡಂತೆ ಎಲ್ಲಾ ಅಧಿಕಾರಿ ಮತ್ತು ನೌಕರರು ಚಲನಚಿತ್ರ ಮತ್ತು ಟೆಲಿವಿಷನ್ ಧಾರವಾಹಿಗಳಲ್ಲಿ ನಟಿಸುವುದನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಹೀಗಾಗಿ ಸರ್ಕಾರಿ ನೌಕರರು ಚಲನಚಿತ್ರಗಳಲ್ಲಿ ನಟಿಸುವುದು ಮತ್ತು ಟೆಲಿವಿಜನ್ ಧಾರಾವಾಹಿಗಳಲ್ಲಿ ಅಭಿನಯಿಸುವುದು ಕರ್ನಾಟಕ ಸರ್ಕಾರಿ ಸೇವಾ (ನಡತೆ) ನಿಯಮಗಳು 1966ರ ನಿಯಮ 16ರ ಮೇರೆಗೆ ದುರ್ನಡತೆಯಾಗುತ್ತದೆ. ಅಂತಹ ನೌಕರರು ಶಿಸ್ತು ಕ್ರಮಕ್ಕೆ ಒಳಪಡುತ್ತಾರೆ.
***

28-5-16

ಒಬ್ಬ ಸರ್ಕಾರಿ ನೌಕರನಿಗೆ ಯಾವುದೇ ನೋಟಿಸ್ ನೀಡದೆ ಅವನ ಅನುಪಸ್ಥಿತಿಯಲ್ಲಿ ಹಾಜರಿ ಪುಸ್ತಕದಲ್ಲಿ ಕೆಂಪು ಶಾಹಿಯಿಂದ ಅಮಾನತು ಎಂದು ಬರೆದು ತದ ನಂತರ ಅಮಾನತು ಆದೇಶ ಹೊರಡಿಸಲು ಬರುತ್ತದೆಯೇ? ಆ ಅವಧಿಯಲ್ಲಿ ಜೀವನಾ ಧಾರ ಭತ್ಯೆ ನಿರಾಕರಿಸಲು ಅವಕಾಶ ಇದೆಯೇ?

|ಜಿ. ಶಿವಕುಮಾರ್ ಮುದ್ದೆಬಿಹಾಳ

ಸರ್ಕಾರಿ ನೌಕರನನ್ನು ಸಿಸಿಎ ನಿಯಮಾವಳಿ ನಿಯಮ 10ರಂತೆ ಅವನು ಯಾವುದಾದರೂ ದುರ್ನಡತೆ ಅಥವಾ ಕರ್ತವ್ಯ ಲೋಪವೆಸಗಿದರೆ ಶಿಸ್ತು ಪ್ರಾಧಿಕಾರವು ಯಾವುದೇ ನೋಟಿಸ್ ನೀಡದೆ ಅಮಾನತುಗೊಳಿಸಬಹುದು. ತದನಂತರ ಅವನ ಹಾಜರಿ ಪುಸ್ತಕದಲ್ಲಿ ಅಮಾನತು ಎಂದು ನಮೂದಿಸಬೇಕು. ಅಮಾನತಿನ ಅವಧಿಯಲ್ಲಿ ಕರ್ನಾಟಕ ಸರ್ಕಾರಿ ಸೇವಾ ನಿಯಮಾವಳಿಯ ನಿಯಮ 98ರಂತೆ ಮೊದಲ 6 ತಿಂಗಳ ಅವಧಿಗೆ ಸರ್ಕಾರಿ ನೌಕರನ ಮೂಲ ವೇತನದ ಶೇ. 50 ಜೀವನಾಧಾರ ಭತ್ಯೆ ಮತ್ತು ಅದಕ್ಕೆ ಹೊಂದಿಕೊಂಡಂತೆ ತುಟ್ಟಿ ಭತ್ಯೆ ನೀಡಬೇಕು. ಅಲ್ಲದೆ ಅವನು ಅಮಾನತ್ತಿನ ಮೊದಲು ಪಡೆಯುತ್ತಿದ್ದ ಮನೆ ಬಾಡಿಗೆ ಭತ್ಯೆ, ನಗರ ಪರಿಹಾರ ಭತ್ಯೆಗಳಲ್ಲಿ ಯಾವುದೇ ಕಡಿತಗೊಳಿಸದೆ ಸಂಪೂರ್ಣವಾಗಿ ನೀಡಬೇಕಾಗುತ್ತದೆ. (ಹೆಚ್ಚಿನ ವಿವರಗಳಿಗೆ ಲ. ರಾಘವೇಂದ್ರ ಅವರ ಕರ್ನಾಟಕ ಸರ್ಕಾರಿ ಸೇವಾ ನಿಯಮಗಳು ಪುಸ್ತಕ ನೋಡಬಹು
***

29-5-16
ನಾನು ಪ್ರೌಢಶಾಲಾ ಶಿಕ್ಷಕಿಯಾಗಿ ಕಳೆದ 25 ವರ್ಷಗಳಿಂದ ಕರ್ತವ್ಯ ನಿರ್ವಹಿಸುತ್ತಿದ್ದು ಮುಖ್ಯ ಶಿಕ್ಷಕಿಯಾಗಿ ಪದೋನ್ನತಿಯ ಬಡ್ತಿ ಸಿಗುತ್ತದೆಯೇ ಮತ್ತು ಮುಖ್ಯ ಶಿಕ್ಷಕಿಯಾಗಿ ಪದೋನ್ನತಿ ನಿರಾಕರಿಸಿ ಹುದ್ದೆಯಲ್ಲಿ ಮುಂದುವರಿದರೆ 25 ಮತ್ತು 30 ವರ್ಷಗಳ ಹೆಚ್ಚುವರಿ ವಾರ್ಷಿಕ ವೇತನ ಬಡ್ತಿ ಸಿಗುತ್ತದೆಯೇ?

|ಬಾಲಸರಸ್ವತಿ ಮೈಸೂರು

ಕರ್ನಾಟಕ ಸರ್ಕಾರಿ ಸೇವಾ ನಿಯಮಾವಳಿಯ ನಿಯಮ 42 ಬಿ ರೀತ್ಯ ನೀವು ಮುಖ್ಯ ಶಿಕ್ಷಕಿಯಾಗಿ ಪದೋನ್ನತಿ ಪಡೆದರೆ ನಿಮಗೆ ವೇತನ ಬಡ್ತಿ ಲಭ್ಯವಾಗುತ್ತದೆ. ಆದರೆ ನೀವು ಮುಖ್ಯ ಶಿಕ್ಷಕಿಯ ಪದೋನ್ನತಿಯನ್ನು ನಿರಾಕರಿಸಿದರೆ ದಿನಾಂಕ 14.6.2012ರ ಸರ್ಕಾರಿ ಆದೇಶ ಸಂಖ್ಯೆ ಎಫ್​ಡಿ 12, ಎಸ್​ಆರ್​ಪಿ 2012ರ ಕಂಡಿಕೆ 6ರ ಪ್ರಕಾರ 25 ಮತ್ತು 30 ವರ್ಷಗಳ ಸೇವಾ ಅವಧಿಯ ಹೆಚ್ಚುವರಿ ವೇತನ ಬಡ್ತಿ ಲಭ್ಯವಾಗುವುದಿಲ್ಲ.
***

30-5-16
ನಾನು ದಿನಾಂಕ 7.6.2001ರಂದು ನ್ಯಾಯಾಂಗ ಇಲಾಖೆಯಲ್ಲಿ ಬೆರಳಚ್ಚುಗಾರಳಾಗಿ ನೇಮಕಗೊಂಡಿದ್ದು ದಿನಾಂಕ 7.6.2016ಕ್ಕೆ 15 ವರ್ಷಗಳ ಸೇವೆಯನ್ನು ಪೂರೈಸಿದ್ದೇನೆ. ನನಗೆ ದಿನಾಂಕ 12.4.2010ರಂದು ಪ್ರಥಮ ದರ್ಜೆ ಸಹಾಯಕರಾಗಿ ಮುಂಬಡ್ತಿಯಾಗಿರತ್ತದೆ. ನಾನು 15 ವರ್ಷಗಳ ಸ್ವಯಂಚಾಲಿತ ಬಡ್ತಿ ಪಡೆಯಬಹುದೇ? ಪಡೆಯಬಹುದಾದಲ್ಲಿ ಯಾವ ಕ್ರಮದಲ್ಲಿ ಪಡೆಯಬೇಕು? ಎಂಬುದನ್ನು ತಿಳಿಸಿ.

|ಹೆಚ್.ಎನ್. ಲೀಲಾ ನ್ಯಾಯಾಂಗ ಇಲಾಖೆ, ಹಾಸನ

ಕರ್ನಾಟಕ ಸರ್ಕಾರಿ ಸೇವಾ (ಹಿರಿಯ ವೇತನ ಶ್ರೇಣಿಗೆ ವಿಶೇಷ ಮುಂಬಡ್ತಿ ನೀಡುವಿಕೆ ) ನಿಯಮಗಳು 1991ರ ನಿಯಮ 3ರ ಮೇರೆಗೆ ಒಂದೇ ಹುದ್ದೆಯಲ್ಲಿ 15 ವರ್ಷಗಳ ಕಾಲ ನಿರಂತರವಾಗಿ ಸೇವೆ ಸಲ್ಲಿಸಿದರೆ ಅಂಥವರಿಗೆ ಈ ಸ್ವಯಂಚಾಲಿತ ವೇತನಬಡ್ತಿ ದೊರಕುತ್ತದೆ. ನಿಮಗೆ 15 ವರ್ಷವಾಗುವ 2 ತಿಂಗಳ ಮೊದಲೇ ಪದೋನ್ನತಿ ದೊರಕಿರುವುದರಿಂದ ನೀವು ಈ ನಿಯಮಾವಳಿಯ ನಿಯಮ 7 (ಎ) ಪ್ರಕಾರ 15 ವರ್ಷಗಳ ವೇತನ ಬಡ್ತಿಯನ್ನು ಹಿಂದಿನ ಹುದ್ದೆಯಲ್ಲಿ ಪಡೆದು ತದನಂತರ ಪದೋನ್ನತಿಯ ಹುದ್ದೆಯಾದ ಪ್ರಥಮ ದರ್ಜೆ ಸಹಾಯಕರ ಹುದ್ದೆಯಲ್ಲಿವೇತನ ನಿಗದಿಗೊಳಿಸಲು ನಿಮ್ಮ ಮೇಲಾಧಿಕಾರಿಗಳಿಗೆ ಮನವಿಯನ್ನು ಸಲ್ಲಿಸಬೇಕು.
***

31-5-16

ನಾನು ಕಲಬುರ್ಗಿ ಸರ್ಕಾರಿ ಪಾಲಿಟೆಕ್ನಿಕ್​ನಲ್ಲಿ ಡಿ ಗುಂಪಿನ ನೌಕರೆ. ನನ್ನ ಮಗಳು ಮೂಕಿಯಾಗಿದ್ದು ಮೆದುಳು ತೊಂದರೆಯಿಂದ ನರಳುತ್ತಿದ್ದಾಳೆ. ಅವಳ ಸಂಪೂರ್ಣ ನಿರ್ವಹಣೆಗಾಗಿ ನನಗೆ ವಿಶೇಷ ವೇತನವನ್ನು ನೀಡಲು ಬರುತ್ತದೆಯೇ?

ಭಾರತಿ ಸುತಾರ ಕಲಬುರ್ಗಿ

ದಿನಾಂಕ 10.6.2013ರ ಸರ್ಕಾರಿ ಆದೇಶ ಸಂಖ್ಯೆ ಎಫ್​ಡಿ 12, ಎಸ್​ಆರ್​ಪಿ 2012, (ಜಿಜಿ) ರ ರೀತ್ಯ ಸರ್ಕಾರಿ ನೌಕರರ ಮಕ್ಕಳು ಚಲನ ವೈಕ್ಯಲತೆ ಮತ್ತು ಅಂಗವಿಕಲತೆಯಿಂದಾಗಿ ಶಾಲೆಗೆ ಹೋಗದೆ ಮನೆಯಲ್ಲೇ ಉಳಿದುಕೊಂಡರೆ ಪೋಷಕರ ಮೇಲೆ ಸಂಪೂರ್ಣವಾಗಿ ಅವಲಂಬಿತವಾಗಿದ್ದರೆ ಅಂತಹ ನೌಕರರಿಗೆ ಒಂದು ಮಗುವಿಗೆ ಮಾಸಿಕವಾಗಿ 500 ರೂ. ಪೋಷಣಾ ಭತ್ಯೆ ಮಂಜೂರು ಮಾಡಲಾಗುತ್ತದೆ. ಅಲ್ಲದೆ ದಿನಾಂಕ 19.1.2016ರ ಸರ್ಕಾರಿ ಆದೇಶದಂತೆ ಮಾನಸಿಕ ವೈಕಲ್ಯತೆಯಿಂದ ನರಳುತ್ತಿರುವ ಸರ್ಕಾರಿ ನೌಕರರ ವಿಶೇಷ ಮಕ್ಕಳ ಪೋಷಣೆಗೆ ಈ ಭತ್ಯೆಯನ್ನು ನೀಡಲಾಗುತ್ತದೆ.

 ದಿನದ ಪ್ರಶ್ನೆ ( 1-4-16)

ನನ್ನ ಗಂಡ ತನ್ನ ತಂದೆಯ ನಿಧನದ ನಂತರ 2003 ರಲ್ಲಿ ಅನುಕಂಪದ ಮೇರೆಗೆ ಕೆಲಸಕ್ಕೆ ಸೇರಿಕೊಂಡಿದ್ದರು. 2016ರ ಜನವರಿಯಲ್ಲಿ ನನ್ನ ಗಂಡ ಆಕಸ್ಮಿಕವಾಗಿ ನಿಧನ ಹೊಂದಿದ್ದಾರೆ. ನನ್ನ ಗಂಡನ ನಂತರ ನಾನು ಅನುಕಂಪದ ಆಧಾರದ ಮೇಲೆ ಕೆಲಸವನ್ನು ಪಡೆಯಲು ಅರ್ಹಳಾ? ಮಾಹಿತಿ ನೀಡಿ.

|ರಂಗಮ್ಮ ರಾಯಚೂರು

ಕರ್ನಾಟಕ ಸಿವಿಲ್ ಸೇವಾ (ಅನುಕಂಪದ ಆಧಾರದ ಮೇಲೆ ನೇಮಕ) ನಿಯಮಗಳು 1996 ರ ನಿಯಮ 3ರ ರೀತ್ಯಾ ನೀವು ಕೆಲಸ ಪಡೆಯಲು ಆರ್ಹರು. ನಿಮ್ಮ ವಿದ್ಯಾರ್ಹತೆ ಮೇಲೆ ನಿಮಗೆ ಸಿ ಅಥವಾ ಡಿ ಗುಂಪಿನ ಹುದ್ದೆ ಲಭಿಸುತ್ತದೆ.
(ಹೆಚ್ಚಿನ ವಿವರಗಳಿಗೆ ಲ. ರಾಘವೇಂದ್ರ ಅವರ ಕರ್ನಾಟಕ ಸರ್ಕಾರಿ ಸೇವಾ ಕಾನೂನು ಕೈಪಿಡಿ ಪುಸ್ತಕ ನೋಡಬಹುದಾಗಿದ್ದು ಪುಸ್ತಕಕ್ಕೆ ಮೊಬೈಲ್ ಸಂಖ್ಯೆ 94812 44434ನ್ನು ಸಂರ್ಪಸಬಹುದು.)

***

ಪ್ರಶ್ನೆ ಕೇಳಿ ಪರಿಹಾರ ಪಡೆಯಿರಿ

ನಿಮ್ಮ ಪ್ರಶ್ನೆಗಳನ್ನು ನಮಗೆ ಕಳುಹಿಸಿ. ನಮ್ಮ ವಿಳಾಸ: ವಿಜಯವಾಣಿ, ನಂ.24, ಶ್ರೀ ಸಾಯಿರಾಂ ಟವರ್ಸ್, ಮೊದಲ ಮಹಡಿ, 5ನೇ ಮುಖ್ಯರಸ್ತೆ, ಚಾಮರಾಜಪೇಟೆ, ಬೆಂಗಳೂರು 560018.
ಇ-ಮೇಲ್: sarakaricorner@gmail.com

ದೂರವಾಣಿ: 8884432666, ಫ್ಯಾಕ್ಸ್: 080-26257464.
***

2-4-16.
ನಾನು 2011ರಿಂದ ಎಸ್​ಡಿಎ ಆಗಿ ಕಾರ್ಯ ನಿರ್ವಹಿಸುತ್ತಿದ್ದು ಈಗ ಕೆಪಿಎಸ್​ಸಿಯಲ್ಲಿ ಕರೆದಿರುವ ಸಿ ವೃಂದದ ಹುದ್ದೆಗೆ ಇಲಾಖೆಯಿಂದ ಎನ್​ಒಸಿ ಪಡೆಯುವುದು ಕಡ್ಡಾಯವೇ? ಬೇರೆ ಹುದ್ದೆಗೆ ಆಯ್ಕೆಯಾದರೆ ಈಗಿನ ಹುದ್ದೆಗೆ ರಾಜೀನಾಮೆ ಸಲ್ಲಿಸಿ ಆ ಹುದ್ದೆಗೆ ಹೋಗಬಹುದೇ? ಆನ್​ಲೈನ್ ಅರ್ಜಿಯಲ್ಲಿ ಸರ್ಕಾರಿ ನೌಕರರೇ ಇರುವ ಕಾಲಂನಲ್ಲಿ ಇಲ್ಲ ಎಂದು ನಮೂದಿಸಬಹುದೇ?

|ವಿಶ್ವನಾಥ ಭಟ್ಟ ಹಾವೇರಿ.

ಕರ್ನಾಟಕ ಸಿವಿಲ್ ಸೇವಾ (ಸಾಮಾನ್ಯ ನೌಕರಿ ಭರ್ತಿ) ನಿಯಮಗಳು 1977ರ ನಿಯಮ 11 ರೀತ್ಯ ಸರ್ಕಾರಿ ನೌಕರರು ಪೂರ್ವಾನುಮತಿ ಪಡೆದೇ ಬೇರೆ ಇಲಾಖೆಗೆ ಅರ್ಜಿ ಸಲ್ಲಿಸಬೇಕು. ಈ ರೀತಿ ನಾನು ಸರ್ಕಾರಿ ನೌಕರನಲ್ಲ ಎಂದು ಅರ್ಜಿಯಲ್ಲಿ ನಮೂದಿಸಿ ಆಯ್ಕೆಯಾದರೆ ಅಂತಹ ಅಭ್ಯರ್ಥಿಗಳು ಭವಿಷ್ಯದಲ್ಲಿ ತೊಂದರೆ ಅನುಭವಿಸುವಂತಾಗುತ್ತದೆ. ಸರ್ಕಾರಿ ನೌಕರರಿಗೆ ಅನುಮತಿ ನೀಡುವುದು ಪ್ರಾಧಿಕಾರದ ನಿರ್ಧಾರವಾಗಿರುತ್ತದೆ.
***

3-4-16.
ಸಂತಾನ ಶಕ್ತಿ ಹರಣ ಚಿಕಿತ್ಸೆಗೆ ವಿಶೇಷ ಭತ್ಯೆಗೆ ಅರ್ಹಳೇ?
ನಾನು ಸರ್ಕಾರಿ ಶಾಲೆಯಲ್ಲಿ ಸಹಶಿಕ್ಷಕಿಯಾಗಿ ಕೆಲಸ ಮಾಡುತ್ತಿದ್ದು, 2006ರಲ್ಲಿ ನನಗೆ ಸಂತಾನ ಶಕ್ತಿ ಹರಣ ಚಿಕಿತ್ಸೆಯಾಗಿದೆ. 2007ರ ಏಪ್ರಿಲ್​ನಲ್ಲಿ ಸರ್ಕಾರಿ ಕೆಲಸ ಸಿಕ್ಕಿದೆ. ನನಗೀಗ 39 ವರ್ಷವಾಗಿದ್ದು ನಾನು ಸಂತಾನ ಶಕ್ತಿ ಹರಣ ಚಿಕಿತ್ಸೆಗೆ ಸಂಬಂಧಿಸಿದಂತೆ ವಿಶೇಷ ಭತ್ಯೆ ಪಡೆಯಲು ಅರ್ಹಳೇ?

|ಮಂಜುಳಾ ಹಾಸನ

ನೀವು ಸರ್ಕಾರಿ ಸೇವೆಗೆ ಸೇರುವ ಮೊದಲೇ ಸಂತಾನ ಶಕ್ತಿ ಹರಣ ಚಿಕಿತ್ಸೆ ಮಾಡಿಕೊಂಡಿರುವುದರಿಂದ 1985ರ ಸರ್ಕಾರಿ ಆದೇಶ ಸಂಖ್ಯೆ ಎಫ್​ಡಿ 27 ಎಸ್​ಆರ್​ಎಸ್ 85ರಂತೆ ನೀವು ವಿಶೇಷ ಭತ್ಯೆ ಪಡೆಯಲು ಅರ್ಹರಾಗಿರುವುದಿಲ್ಲ.
***

4-4-16.
ಮಗುವಿಗೆ ಎಷ್ಟು ತಿಂಗಳಾಗುವವರೆಗೆ ಈ ಅನುಕೂಲ ಪಡೆಯಬಹುದು?
ನಾನು ಪ್ರಾಥಮಿಕ ಶಾಲಾ ಶಿಕ್ಷಕಿಯಾಗಿದ್ದು ನನಗೆ 7 ತಿಂಗಳ ಮಗು ಇದೆ. ಮಗುವಿಗೆ ದಿನದ ಅವಧಿಯಲ್ಲಿ ಮನೆಗೆ ಹೋಗಿ ಹಾಲುಣಿಸಿ ಬರಲು ಅವಕಾಶವಿದೆಯೇ? ಇದ್ದರೆ ಯಾವ ಅವಧಿಯಲ್ಲಿ ಹೋಗಿ ಬರಬಹುದು? ಹಾಗೆಯೇ ಮಗುವಿಗೆ ಎಷ್ಟು ತಿಂಗಳಾಗುವವರೆಗೆ ಈ ಅನುಕೂಲ ಪಡೆಯಬಹುದು?

| ನಿರ್ಮಲ ಗದಗ

ಕರ್ನಾಟಕ ಸಿವಿಲ್ ಸೇವಾ ನಿಯಮಾವಳಿ ರೀತ್ಯ ಮಹಿಳಾ ಸರ್ಕಾರಿ ನೌಕರರು ತಮ್ಮ ಮಗುವಿಗೆ ಹಾಲುಣಿಸಿ ಬರಲು ಅವಕಾಶವಿಲ್ಲ. ಆದರೆ ನಿಮ್ಮ ಮೇಲಾಧಿಕಾರಿಗಳ ಅನುಕಂಪದ ಆಧಾರದ ಮೇಲೆ ಮಗುವಿನ ಬೆಳವಣಿಗೆ ದೃಷ್ಟಿಯಿಂದ ನೀವು ಪೂರ್ವಾನುಮತಿ ಪಡೆದು ಹೋಗಿಬರಬಹುದು.
***

5-4-16.
ಸಿ ಗುಂಪಿನ ಹುದ್ದೆ ಲಭ್ಯವಾಗುತ್ತದೆಯೇ?
ನಾನು ಅನುಕಂಪದ ಆಧಾರದ ಮೇಲೆ 2000ದಿಂದ 2016ರವರೆಗೆ 15 ವರ್ಷ ಸೇವೆ ಸಲ್ಲಿಸಿದ್ದೇನೆ. 2015ರಲ್ಲಿ ಎಸ್​ಎಸ್​ಎಲ್​ಸಿ ಪರೀಕ್ಷೆಯಲ್ಲಿ ತೇರ್ಗಡೆಯಾಗಿದ್ದೇನೆ. ನನಗೆ ಸಿ ಗುಂಪಿನ ಹುದ್ದೆ ಲಭ್ಯವಾಗುತ್ತದೆಯೇ ? ದಯವಿಟ್ಟು ತಿಳಿಸಿ.

|ಶಂಕರ ಹುಬ್ಬಳ್ಳಿ

ಕರ್ನಾಟಕ ಸಿವಿಲ್ ಸೇವಾ (ಲಿಪಿಕ ಹುದ್ದೆಗಳಿಗೆ ನೇಮಕಾತಿ) ನಿಯಮಗಳು 1978ರ ನಿಯಮ 4 ರಂತೆ ದ್ವಿತೀಯ ದರ್ಜೆ ಸಹಾಯಕರ ಹುದ್ದೆಗೆ ನೇಮಕಗೊಳ್ಳಲು ಪಿಯುಸಿ ಶಿಕ್ಷಣ ಕಡ್ಡಾಯಗೊಳಿಸಲಾಗಿದೆ. ಆದ ಕಾರಣ ನೀವು ಪದವಿಪೂರ್ವ ಶಿಕ್ಷಣ ಪಡೆದ ಮೇಲೆ ಸಿ ವರ್ಗದ ಹುದ್ದೆಗೆ ಅರ್ಜಿ ಸಲ್ಲಿಸಬಹುದು.
***

6-4-16.

***
7-4-16.
ಸಿ ಗುಂಪಿನ ಹುದ್ದೆ ಲಭ್ಯವಾಗುತ್ತದೆಯೇ?
ನಾನು ಅನುಕಂಪದ ಆಧಾರದ ಮೇಲೆ 2000ದಿಂದ 2016ರವರೆಗೆ 15 ವರ್ಷ ಸೇವೆ ಸಲ್ಲಿಸಿದ್ದೇನೆ. 2015ರಲ್ಲಿ ಎಸ್​ಎಸ್​ಎಲ್​ಸಿ ಪರೀಕ್ಷೆಯಲ್ಲಿ ತೇರ್ಗಡೆಯಾಗಿದ್ದೇನೆ. ನನಗೆ ಸಿ ಗುಂಪಿನ ಹುದ್ದೆ ಲಭ್ಯವಾಗುತ್ತದೆಯೇ ? ದಯವಿಟ್ಟು ತಿಳಿಸಿ.

|ಶಂಕರ ಹುಬ್ಬಳ್ಳಿ

ಕರ್ನಾಟಕ ಸಿವಿಲ್ ಸೇವಾ (ಲಿಪಿಕ ಹುದ್ದೆಗಳಿಗೆ ನೇಮಕಾತಿ) ನಿಯಮಗಳು 1978ರ ನಿಯಮ 4 ರಂತೆ ದ್ವಿತೀಯ ದರ್ಜೆ ಸಹಾಯಕರ ಹುದ್ದೆಗೆ ನೇಮಕಗೊಳ್ಳಲು ಪಿಯುಸಿ ಶಿಕ್ಷಣ ಕಡ್ಡಾಯಗೊಳಿಸಲಾಗಿದೆ. ಆದ ಕಾರಣ ನೀವು ಪದವಿಪೂರ್ವ ಶಿಕ್ಷಣ ಪಡೆದ ಮೇಲೆ ಸಿ ವರ್ಗದ ಹುದ್ದೆಗೆ ಅರ್ಜಿ ಸಲ್ಲಿಸಬಹುದು.
***

8-4-16.
ನನ್ನ ಗೆಳೆಯರೊಬ್ಬರು ಅನುದಾನಿತ ಪ್ರೌಢಶಾಲೆಯಲ್ಲಿ 1992ರಿಂದ ಸೇವೆ ಸಲ್ಲಿಸುತ್ತಿದ್ದು ಆ ಸಂಸ್ಥೆಯು 2014ರಲ್ಲಿ ಅನುದಾನಕ್ಕೊಳಪಟ್ಟಿದೆ. 2016ರ ಜನವರಿಯಲ್ಲಿ ಆಕಸ್ಮಿಕವಾಗಿ ಅವರು ನಿಧನ ಹೊಂದಿದ್ದಾರೆ. ಇವರ ಕುಟುಂಬ ವರ್ಗದವರಿಗೆ ಅನುಕಂಪದ ಆಧಾರದ ಮೇಲೆ ಉದ್ಯೋಗ ದೊರಕುತ್ತದೆಯೇ ?

|ಸುರೇಂದ್ರ ಪಿರಿಯಪಟ್ಟಣ

ಸೇವೆಯಲ್ಲಿರುವಾಗಲೇ ಅನುದಾನಿತ ಶಿಕ್ಷಣ ಸಂಸ್ಥೆಯಲ್ಲಿನ ನೌಕರರು ನಿಧನ ಹೊಂದಿದರೆ ಅವರಿಗೆ ಅನುಕಂಪದ ಆಧಾರದ ಮೇಲೆ ನೌಕರಿ ನೀಡಬೇಕಾದುದು ಆಯಾ ಶಿಕ್ಷಣ ಸಂಸ್ಥೆಯ ಕರ್ತವ್ಯವಾಗಿರುತ್ತದೆ. ಹೀಗಿರುವಲ್ಲಿ ಈ ಅನುದಾನಿತ ಶಿಕ್ಷಣ ಸಂಸ್ಥೆಯಲ್ಲಿ ಉದ್ಯೋಗ ಪಡೆಯಲು ನಿಧನರಾದ ನೌಕರರ ಕುಟುಂಬ ವರ್ಗದವರು ಅರ್ಹರಾಗಿದ್ದಲ್ಲಿ ಅರ್ಜಿಯನ್ನು ಸಲ್ಲಿಸಬಹುದು.
***

9-4-16.

***

10-4-16.
ಸೇವಾ ಅವಧಿಯನ್ನು ಸೇರಿಸಲು ಏನು ಮಾಡಬೇಕು?

ನಾನು 35ನೇ ವರ್ಷದಲ್ಲಿ ಸರ್ಕಾರಿ ಸೇವೆಗೆ ಸೇರಿದ್ದು ಕೆಸಿಎಸ್​ಆರ್ 247 ಎ ಪ್ರಕಾರ ಹೆಚ್ಚುವರಿ 2 ವರ್ಷಗಳ ನಿವೃತ್ತಿ ಸೌಲಭ್ಯಗಳಿಗಾಗಿ ಅರ್ಜಿಯನ್ನು ಸಲ್ಲಿಸಿದ್ದೆ. ಆದರೆ ನನಗೆ ಇದುವರೆಗೂ ಏನೂ ಪ್ರಯೋಜನವಾಗಿಲ್ಲ. ಈ ಸೇವಾ ಅವಧಿಯನ್ನು ಸೇರಿಸಲು ಏನು ಮಾಡಬೇಕು?

|ಎಸ್.ಆರ್. ವೆಂಕಮ್ಮ ಹೊಯ್ಸಳ ನಗರ, ಹಾಸನ

ಕರ್ನಾಟಕ ಸಿವಿಲ್ ಸೇವಾ ನಿಯಮಾವಳಿಯ ನಿಯಮ 247ಎ ರೀತ್ಯ ನೇಮಕಾತಿ ಪ್ರಾಧಿಕಾರದ ಮೂಲಕ ಆಯ್ಕೆಯಾಗಿ 30 ವರ್ಷಗಳ ನಂತರ ಸೇವೆಗೆ ಸೇರಿದರೆ, ಅಂಥವರಿಗೆ 2 ವರ್ಷಗಳ ಸೇವಾ ಅವಧಿಯನ್ನು ಸೇರಿಸಲು ಸೂಚಿಸಲಾಗಿದೆ. ಆದ ಕಾರಣ ನೀವು ಸರ್ಕಾರಕ್ಕೆ ಈ ಬಗ್ಗೆ ನಿಮ್ಮ ಇಲಾಖೆಯ ಮುಖಾಂತರ ಅಥವಾ ನೇರವಾಗಿ ಮನವಿ ಯನ್ನು ಸಲ್ಲಿಸಬಹುದು.
***

11-4-16.
ಸ್ವಯಂ ನಿವೃತ್ತಿ ಪಡೆದರೆ ನಿವೃತ್ತಿ ವೇತನ ದೊರೆಯುತ್ತವೆಯೆ?

ನಾನು 2003ರಲ್ಲಿ ಶಿಕ್ಷಕಿಯಾಗಿ ಸೇರಿದ್ದು, 2014ರ ಮೇ ತಿಂಗಳಿನಲ್ಲಿ ಮೆದುಳಿನ ಆಘಾತದಿಂದ ಕೈ ಕಾಲು ಸ್ವಾಧೀನ ಇಲ್ಲವಾಗಿದೆ. ಇಲ್ಲಿಯವರೆಗೂ ನಾನು ವೇತನ ರಹಿತ ರಜೆಯ ಮೇಲಿದ್ದು ನಾನು ಸ್ವಯಂ ನಿವೃತ್ತಿ ಪಡೆದರೆ ನನಗೆ ನಿವೃತ್ತಿ ವೇತನ, ಉಪದಾನ, ಇತರ ಸೌಲಭ್ಯಗಳು ದೊರೆಯುತ್ತವೆಯೋ ಇಲ್ಲವೋ ದಯವಿಟ್ಟು ತಿಳಿಸಿ.

|ಅರುಣಾ ಮಾಧವರಾವ್ ಟೊಣಪಿ ವಿಜಯಪುರ

ಕರ್ನಾಟಕ ಸಿವಿಲ್ ಸೇವಾ ನಿಯಮಾವಳಿ ರೀತ್ಯ ನಿಯಮ 222ರಂತೆ ಒಬ್ಬ ಸರ್ಕಾರಿ ನೌಕರನು ನಿವೃತ್ತಿ ವೇತನ ಪಡೆಯಲು ಕನಿಷ್ಠ ಹತ್ತು ವರ್ಷಗಳ ಕಾಲ ಸೇವೆ ಸಲ್ಲಿಸಿರಬೇಕು. ಹೀಗಿರುವಲ್ಲಿ ನೀವು ಕೈಕಾಲು ಸ್ವಾಧೀನ ಇಲ್ಲದ ಪ್ರಯುಕ್ತ ವೈದ್ಯಕೀಯ ಆಧಾರದ ಮೇಲೆ ನಿಯಮ 273ರಂತೆ ಅಶಕ್ತತಾ ನಿವೃತ್ತಿ ವೇತನ ಪಡೆಯಬಹುದು. ಆಗ ನಿಮಗೆ ಪಿಂಚಣಿ ಸೌಲಭ್ಯಗಳು ಲಭ್ಯವಾಗುತ್ತವೆ. ಆದರೆ ನೀವು ಅಶಕ್ತರೆಂದು ಜಿಲ್ಲಾ ಸರ್ಜನ್​ರಿಂದ ವೈದ್ಯಕೀಯ ಪ್ರಮಾಣ ಪತ್ರವನ್ನು ಸಲ್ಲಿಸಬೇಕು.
***

12-4-16.
ಎಸ್​ಡಿಎ ಹುದ್ದೆಗೆ ಅರ್ಹಳಲ್ಲವೇ?
ಅನುದಾನಿತ ಶಾಲೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ನನ್ನ ಪತಿ ಅನಾರೋಗ್ಯದಿಂದ 1979ರಲ್ಲಿ ನಿಧನ ಹೊಂದಿದ್ದಾರೆ. ಆದರೆ ನಾನು ಆಡಳಿತ ಮಂಡಳಿಗೆ ಅರ್ಜಿ ಸಲ್ಲಿಸಿದಾಗ ನಿಮ್ಮ ಪತಿ ಬೆರಳಚ್ಚುಗಾರರಾಗಿದ್ದರೆಂದು ನಿಮಗೆ ಹುದ್ದೆ ನೀಡಲು ಆಗುವುದಿಲ್ಲವೆಂದು ತಿರಸ್ಕರಿಸಿದ್ದಾರೆ. ನಾನು ಎಸ್​ಡಿಎ ಹುದ್ದೆಗೆ ಅರ್ಹಳಲ್ಲವೇ?

|ಕಮಲಾ ಚಂದಪ್ಪ ಡೋಳೂರ ವಿಜಯಪುರ

ಕರ್ನಾಟಕ ಸಿವಿಲ್ ಸೇವಾ ನಿಯಮಾವಳಿ ರೀತ್ಯ ಸರ್ಕಾರಿ ನೌಕರರು ಯಾವುದೇ ಹುದ್ದೆಯಲ್ಲಿ ಇದ್ದು ನಿಧನ ಹೊಂದಿದರೂ ಅವರ ಕುಟುಂಬ ವರ್ಗದವರಿಗೆ ಅನುಕಂಪದ ಆಧಾರದ ಮೇಲೆ ಅರ್ಹತೆಯನ್ನು ಪರಿಗಣಿಸಿ ಉದ್ಯೋಗ ನೀಡಬೇಕೆಂದು ಸೂಚಿಸಲಾಗಿದೆ. ಹೀಗಿರುವಲ್ಲಿ ನೀವು ತಿಳಿಸಿದ ಅನುದಾನಿತ ಸಂಸ್ಥೆ ನಿಮ್ಮ ಪತಿ ಬೆರಳಚ್ಚುಗಾರರಾಗಿದ್ದರೆಂದು ಹೇಳಿ ನಿಮಗೆ ಉದ್ಯೋಗ ನೀಡಲು ಸಾಧ್ಯವಿಲ್ಲವೆಂದು ತಿಳಿಸಿರುವುದು ನಿಯಮಬಾಹಿರವಾಗಿರುತ್ತದೆ. ನಿಮ್ಮನ್ನು ಎಸ್​ಡಿಎ ಹುದ್ದೆಗೆ ಆಗಲೇ ನೇಮಕ ಮಾಡಿಕೊಳ್ಳಬಹುದಾಗಿತ್ತು. ನೀವು ನ್ಯಾಯಾಲಯದ ಮೊರೆ ಹೋಗಬಹುದು.
***

13-4-16.
ಮನೆ ಕಟ್ಟಲು ಕಚೇರಿಯ ಅನುಮತಿ ಪಡೆಯಬೇಕೇ?

ನನ್ನ ಮಾವನವರು ನನ್ನ ಹೆಂಡತಿ ಹೆಸರಿಗೆ ನಿವೇಶನ ಖರೀದಿ ಮಾಡಿ ಕೊಟ್ಟಿರುತ್ತಾರೆ. ನಾನು ಈಗ ಬ್ಯಾಂಕಿನಿಂದ ಸಾಲ ಪಡೆದು ನಿವೇಶನದಲ್ಲಿ ಮನೆ ಕಟ್ಟಿಸಲು ತೀರ್ವನಿಸಿರುತ್ತೇನೆ. ಮನೆ ಕಟ್ಟಲು ಕಚೇರಿಯ ಅನುಮತಿ ಪಡೆಯಬೇಕೇ?

|ಹೆಚ್.ಆರ್. ಕುಮಾರಸ್ವಾಮಿ ಭೂದಾಖಲೆಗಳ ಸಹಕಾರ ನಿರ್ದೇಶಕ, ಬೆಂಗಳೂರು

ಕರ್ನಾಟಕ ಸಿವಿಲ್ ಸೇವಾ (ನಡತೆ) ನಿಯಮ 21 (4)ರ ರೀತ್ಯ ಸರ್ಕಾರಿ ನೌಕರನು ಸರ್ಕಾರದ ಪೂರ್ವ ಮಂಜೂರಾತಿ ಪಡೆಯದ ಹೊರತು, ತಾನೇ ಆಗಲಿ ಅಥವಾ ತನ್ನ ಕುಟುಂಬದ ಸದಸ್ಯರ ಪರವಾಗಿ ಬ್ಯಾಂಕ್ ವ್ಯವಹಾರವನ್ನು ನಡೆಸತಕ್ಕದ್ದಲ್ಲ. ಅಂದರೆ ಸಾಲವನ್ನು ಪಡೆಯತಕ್ಕದ್ದಲ್ಲ. ಅಲ್ಲದೆ ನೀವು ನಿಮ್ಮ ಪತ್ನಿಗೆ ನಿಮ್ಮ ಮಾವನವರು ನೀಡಿದ ನಿವೇಶನದ ಮಾಹಿತಿಯನ್ನು ಆಸ್ತಿ ಮತ್ತು ಋಣ ಪಟ್ಟಿಯಲ್ಲಿ ಆಯಾ ವರ್ಷವೇ ತಿಳಿಸಿರತಕ್ಕದ್ದು.
***

14-4-16.
ಕಾನೂನಿನಲ್ಲಿ ಪರಿಹಾರ ಇದೆಯೇ?
ನಾನು 1984ರಲ್ಲಿ ಸರ್ಕಾರಿ ಕೆಲಸಕ್ಕೆ ಸೇರಿದ್ದು 88ರಲ್ಲಿ ಕುಟುಂಬಯೋಜನೆ ಶಸ್ತ್ರ ಚಿಕಿತ್ಸೆ ಮಾಡಿಸಿಕೊಂಡು ಅಂದಿನ ವಿಶೇಷ ವೇತನ ರೂ. 25 ಪಡೆದಿದ್ದೇನೆ. ಈಗ ಸೇವೆಯಲ್ಲಿ ಕಿರಿಯರಾದ ನೌಕರರು ರೂ. 350 ವಿಶೇಷ ವೇತನವಾಗಿ ಪಡೆಯುತ್ತಿದ್ದಾರೆ. ಇದಕ್ಕೆ ಕಾನೂನಿನಲ್ಲಿ ಏನಾದರೂ ಪರಿಹಾರ ಇದೆಯೇ?

|ಶಾರದಾದೇವಿ ಶೃಂಗೇರಿ

1985ರ ಸರ್ಕಾರಿ ಆದೇಶದಂತೆ ಒಬ್ಬ ಸರ್ಕಾರಿ ನೌಕರನಿಗೆ ಅವನು ಪಡೆಯುತ್ತಿದ್ದ ವಾರ್ಷಿಕ ವೇತನ ಬಡ್ತಿಯನ್ನೇ ಕುಟುಂಬ ಯೋಜನೆ ಅನುಸರಣೆಗೆ ವಿಶೇಷ ಭತ್ಯೆಯಾಗಿ ನೀಡಲಾಗುತ್ತದೆ. ದಿನಾಂಕ 13.12.1999ರ ಸರ್ಕಾರಿ ಆದೇಶ ಸಂಖ್ಯೆ ಎಫ್​ಡಿ10, ಎಸ್​ಆರ್​ಎಸ್ 99 ರಂತೆ ಸರ್ಕಾರಿ ನೌಕರರಿಗೆ ವೇತನ ಬಡ್ತಿ ಹೆಚ್ಚಳವಾದರೂ ಅವರಿಗೆ ಈ ವಿಶೇಷ ಭತ್ಯೆಯನ್ನು ಹೆಚ್ಚಿಸಿ ನೀಡಲಾಗುವುದಿಲ್ಲ.
***

15-4-16.
ನಾನು ಬ್ರಾಹ್ಮಣ ಜಾತಿಗೆ ಸೇರಿದ್ದು ನನ್ನ ಪತಿ ಪರಿಶಿಷ್ಟ ಜಾತಿಗೆ ಸೇರಿದ್ದಾರೆ. ನಮ್ಮದು ಅಂತರ್ಜಾತಿ ವಿವಾಹವಾಗಿದ್ದು, ನಮಗೀಗ 2 ಮಕ್ಕಳಿದ್ದಾರೆ. ದಿನಾಂಕ 3.8.2015ರಂದು ನಾನು ಸರ್ಕಾರಿ ನೌಕರಿಗೆ ಸೇರಿದ್ದು ನನ್ನ ಜಾತಿಯನ್ನು ಪರಿಶಿಷ್ಟ ಜಾತಿ ಎಂದು ಸೇವಾ ಪುಸ್ತಕದಲ್ಲಿ ನಮೂದಿಸಬಹುದೇ?

| ಪೂರ್ಣಿಮಾ ಎಸ್.ಸಿ. ಎಸ್​ಡಿಎ ಡಯಟ್, ಚಿಕ್ಕಬಳ್ಳಾಪುರ

ಕರ್ನಾಟಕ ಅನುಸೂಚಿತ ಜಾತಿಗಳು, ಅನುಸೂಚಿತ ಬುಡಕಟ್ಟುಗಳು ಮತ್ತು ಇತರೆ ಹಿಂದುಳಿದ ವರ್ಗಗಳ (ನೇಮಕಾತಿ ಮುಂತಾದವುಗಳ ಮೀಸಲಾತಿ) ಅಧಿನಿಯಮ 1990ರಡಿಯಲ್ಲಿ ನಿಮ್ಮ ಪತಿಯವರು ಪರಿಶಿಷ್ಟ ಜಾತಿಗೆ ಸೇರಿದ್ದರೂ ನಿಮ್ಮ ಸೇವಾ ಪುಸ್ತಕದಲ್ಲಿ ಅದನ್ನು ನಮೂದಿಸಲು ನಿಯಮಾವಳಿ ರೀತ್ಯ ಅವಕಾಶವಿಲ್ಲ. ಆದರೆ ನಿಮ್ಮ ಇಬ್ಬರು ಮಕ್ಕಳಿಗೆ ಈ ಪರಿಶಿಷ್ಟ ಜಾತಿಯ ಮೀಸಲಾತಿ ಸೌಲಭ್ಯ ಲಭ್ಯವಾಗುತ್ತದೆ.
***

16-4-16.
ಸಹೋದರನ ಮನವಿಯನ್ನು ತಿರಸ್ಕರಿಸಿದ್ದಾರೆ. ಇದಕ್ಕೆ ಪರಿಹಾರ ಏನು?

ಕಾಲೇಜು ಶಿಕ್ಷಣ ಇಲಾಖೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ನನ್ನ ತಂದೆ 2015ರ ಮಾರ್ಚ್​ನಲ್ಲಿ ನಿಧನರಾಗಿದ್ದಾರೆ. ನಮ್ಮ ತಾಯಿ ಸರ್ಕಾರಿ ಪ್ರೌಢಶಾಲೆಯಲ್ಲಿ ಶಿಕ್ಷಕಿಯಾಗಿದ್ದು ಅವರ ವಾರ್ಷಿಕ ವರಮಾನ 4 ಲಕ್ಷ ರೂ.ಗಳಾಗಿದೆ. ಈ ಆದಾಯದ ಆಧಾರದ ಮೇಲೆ ಕಾಲೇಜು ಶಿಕ್ಷಣ ಇಲಾಖೆಯವರು ಅನುಕಂಪದ ಆಧಾರದ ಮೇಲೆ ನೇಮಿಸಿಕೊಳ್ಳಲು ಅರ್ಜಿ ಸಲ್ಲಿಸಿದ ನನ್ನ ಸಹೋದರನ ಮನವಿಯನ್ನು ತಿರಸ್ಕರಿಸಿದ್ದಾರೆ. ಇದಕ್ಕೆ ಪರಿಹಾರ ಏನು?

| ಶಿಲ್ಪಾ ಎಂ.ಆರ್. ಬೆಂಗಳೂರು

ಕರ್ನಾಟಕ ಸಿವಿಲ್ ಸೇವಾ (ಅನುಕಂಪದ ನೇಮಕಾತಿ) ನಿಯಮಗಳು 1996ರ ನಿಯಮ 4(1) ರೀತ್ಯ ಅನುಕಂಪದ ಆಧಾರದ ಮೇಲೆ ನೇಮಕ ಹೊಂದಲು ಮೃತ ಕುಟುಂಬದ ಆದಾಯ ಪ್ರಥಮ ದರ್ಜೆ ಸಹಾಯಕರ ಹುದ್ದೆಯ ವೇತನ ಶ್ರೇಣಿಯ ಕನಿಷ್ಠ ಮತ್ತು ಗರಿಷ್ಠ ವೇತನದ ಸರಾಸರಿ ವೇತನಕ್ಕೆ ತುಟ್ಟಿಭತ್ಯೆ, ಬೆಂಗಳೂರಿಗೆ ಅನ್ವಯಿಸುವಂತೆ ಮನೆ ಬಾಡಿಗೆ ಭತ್ಯೆ, ನಗರ ಪರಿಹಾರ ಭತ್ಯೆಯೂ ಸೇರಿ ಒಟ್ಟು ಉಪಲಬ್ಧಿಗಿಂತ ಕಡಿಮೆ ಇದ್ದರೆ ಮೃತ ಸರ್ಕಾರಿ ನೌಕರನ ಕುಟುಂಬವು ಆರ್ಥಿಕ ಮುಗ್ಗಟ್ಟಿನಿಂದ ಕೂಡಿದೆ ಎಂದು ಪರಿಗಣಿಸಬೇಕು. ಆದ್ದರಿಂದ ನಿಮ್ಮ ತಾಯಿಯ ಆದಾಯವು ಪ್ರಸ್ತುತ ಭತ್ಯೆಗಳು ಸೇರಿ 4 ಲಕ್ಷ 6 ಸಾವಿರಕ್ಕಿಂತ ಕಡಿಮೆ ಇದ್ದರೆ ನಿಮ್ಮ ಸಹೋದರನು ಅನುಕಂಪದ ಮೇರೆಗೆ ನೇಮಕಾತಿ ಹೊಂದಲು ಅರ್ಹನಾಗುತ್ತಾನೆ.
***
17-4-16.
ಅನುಕಂಪದ ಮೇಲೆ ಉದ್ಯೋಗ ಪಡೆಯಲು ಅರ್ಹನೇ?

ನಮ್ಮ ಪೋಷಕರು ಸರ್ಕಾರಿ ಶಾಲೆಗಳಲ್ಲಿ ಶಿಕ್ಷಕರಾಗಿದ್ದವರು. ನಮ್ಮ ತಾಯಿ 7 ವರ್ಷಗಳ ಹಿಂದೆ ನಿಧನರಾಗಿದ್ದು, ಅದರ ಹಿನ್ನೆಲೆಯಲ್ಲಿ ನನ್ನ ಸಹೋದರನಿಗೆ ಅನುಕಂಪದ ಮೇಲೆ ನೌಕರಿ ಸಿಕ್ಕಿರುತ್ತದೆ ಮತ್ತು ಅವನ ವಿವಾಹವಾಗಿರುತ್ತದೆ. ನನ್ನ ತಂದೆ 1 ವರ್ಷದ ಕೆಳಗೆ ಸೇವೆಯಲ್ಲಿರುವಾಗಲೇ ನಿಧನ ಹೊಂದಿದ್ದು, ನಾನು ಅನುಕಂಪದ ಮೇಲೆ ಉದ್ಯೋಗ ಪಡೆಯಲು ಅರ್ಹನೇ?

| ಸುಮೇಘ ರಾಜ್

ಕರ್ನಾಟಕ ಸರ್ಕಾರಿ ಸೇವಾ (ಅನುಕಂಪದ ಮೇಲೆ ನೇಮಕ) ನಿಯಮಾವಳಿಯ 1996ರ ಅನ್ವಯ ನಿಮಗೆ 18 ವರ್ಷ ಪೂರ್ಣವಾಗಿದ್ದಲ್ಲಿ ನಿಮ್ಮ ತಂದೆಯವರ ನಿಧನದ ದಿನಾಂಕದಿಂದ 1 ವರ್ಷದೊಳಗೆ ಅನುಕಂಪದ ಮೇರೆಗೆ ನೇಮಕಗೊಳ್ಳಲು ಸಕ್ಷಮ ಪ್ರಾಕಾರಕ್ಕೆ ಅರ್ಜಿಯನ್ನು ಸಲ್ಲಿಸಬಹುದು.
***

18-4-16.

***

19-4-16
ವೃಂದ ಬದಲಾವಣೆ ಮಾಡಿಕೊಳ್ಳಲು ನಿಯಮಾವಳಿಯಲ್ಲಿ ಅವಕಾಶವಿಲ್ಲವೇ?

ನಾನು ರಾಮದುರ್ಗ ತಾಲೂಕು ಪಂಚಾಯ್ತಿಯಲ್ಲಿ 18 ವರ್ಷಗಳಿಂದ ಬೆರಳಚ್ಚು ಗಾರಳಾಗಿ ಕಾರ್ಯನಿರ್ವಹಿಸುತ್ತಿದ್ದೇನೆ. ನಾನು ವೃಂದ ಬದಲಾವಣೆ ಕೋರಿದಾಗ ದ್ವಿತೀಯ ದರ್ಜೆ ಸಹಾಯಕರ ಹುದ್ದೆಯನ್ನು ನೀಡುತ್ತೇವೆಂದು ಹೇಳುತ್ತಾರೆ. ನಾನು ಬಿ.ಎ. ಪದವಿಧರಳಾಗಿದ್ದು ನನಗೆ ಪ್ರಥಮ ದರ್ಜೆ ಸಹಾಯಕರ ಹುದ್ದೆಗೆ ವೃಂದ ಬದಲಾವಣೆ ಮಾಡಿಕೊಳ್ಳಲು ನಿಯಮಾವಳಿಯಲ್ಲಿ ಅವಕಾಶವಿಲ್ಲವೇ?

|ಜಯಶ್ರೀ ಜಿ. ಅಗಾಸೆ ರಾಮದುರ್ಗ, ಬೆಳಗಾವಿ

ಕರ್ನಾಟಕ ಸಿವಿಲ್ ಸೇವಾ (ಬೆರಳಚ್ಚುಗಾರರು ಮತ್ತು ಕಿರಿಯ ಸಹಾಯಕರು, ದ್ವಿತೀಯ ದರ್ಜೆ ಸಹಾಯಕರು) (ಉದ್ಯೋಗ ವೃಂದ ಬದಲಾವಣೆ)ನಿಯಮಗಳು 1964ರ ನಿಯಮ 2ರಲ್ಲಿ ಬೆರಳಚ್ಚುಗಾರರು ಪ್ರೊಬೇಷನ್ ಅವಧಿ ಹೊರತುಪಡಿಸಿ 5 ವರ್ಷಗಳಿಗೆ ಕಡಿಮೆ ಇಲ್ಲದಂತೆ ಸೇವೆ ಸಲ್ಲಿಸಿದ್ದರೆ ಅವರಿಗೆ ದ್ವಿತೀಯ ದರ್ಜೆ ಸಹಾಯಕರ ಹುದ್ದೆಗೆ ವೃಂದ ಬದಲಾವಣೆ ಮಾಡಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ. ಹೀಗಾಗಿರುವುದರಿಂದ ನೀವು ಬಿ.ಎ. ಪದವಿಧರರಾಗಿದ್ದು ದ್ವಿತೀಯ ದರ್ಜೆ ಸಹಾಯಕರ ಹುದ್ದೆಯಿಂದ ಪ್ರಥಮ ದರ್ಜೆ ಸಹಾಯಕರ ಹುದ್ದೆಗೆ ಪದೋನ್ನತಿ ಮೂಲಕ ನಿಯೋಜನೆಗೊಳ್ಳಬಹುದು.

***
20-4-2016.
ನಿವೃತ್ತಿ ಸೌಲಭ್ಯಗಳು ಯಾವುವು?
ನಾನು ಕರ್ನಾಟಕ ಲೋಕಸೇವಾ ಆಯೋಗದಿಂದ ಪ್ರಥಮ ದರ್ಜೆ ಸಹಾಯಕನಾಗಿ ಆಯ್ಕೆಗೊಂಡು ಪ್ರಸ್ತುತ ಸಮಾಜ ಕಲ್ಯಾಣ ಇಲಾಖೆಯಲ್ಲಿ ನಿಯಮ 32ರಡಿಯಲ್ಲಿ ತಾಲೂಕು ಸಮಾಜ ಕಲ್ಯಾಣ ಅಧಿಕಾರಿಯಾಗಿ ಕಾರ್ಯ ನಿರ್ವಹಿಸುತ್ತಿದ್ದೇನೆ. 28 ವರ್ಷ ಸೇವೆ ಪೂರೈಸಿದ್ದು ಈಗ ನನಗೆ 54 ವರ್ಷ ವಯಸ್ಸು. ಸಕ್ಕರೆ ಕಾಯಿಲೆಯಿಂದ ಬಳಲುತ್ತಿರುವ ನಾನು ವೈಯಕ್ತಿಕ ಕಾರಣಗಳಿಗಾಗಿ ಸ್ವ ಇಚ್ಛೆ ನಿವೃತ್ತಿ ಪಡೆದಲ್ಲಿ ನನಗೆ ಸಿಗುವ ಅರ್ಹತಾದಾಯಕ ಸೇವೆ ಎಷ್ಟು? ಹಾಗೂ ಸಿಗುವ ನಿವೃತ್ತಿ ಸೌಲಭ್ಯಗಳು ಯಾವುವು?

|ಬಿ.ಎಸ್. ಜಗದೀಶ್ ಮೈಸೂರು

ನೀವು ವೈಯಕ್ತಿಕ ಕಾರಣಗಳಿಂದ ಕರ್ನಾಟಕ ಸರ್ಕಾರಿ ಸೇವಾ ನಿಯಮಾವಳಿಯ ನಿಯಮ 285 (2)ರಂತೆ ಸ್ವ ಇಚ್ಛೆ ನಿವೃತ್ತಿ ಪಡೆದರೆ ನಿಮಗೆ 5 ವರ್ಷಗಳವರೆಗಿನ ಸೇವಾ ಅಧಿಕ್ಯವನ್ನು (ವೆಟೇಜ್) ಪಡೆಯುವುದರಿಂದ ನಿಮಗೆ ನಿಮ್ಮ ಮೂಲ ವೇತನದ ಶೇ. 50ರಷ್ಟು ಮೊಬಲಗು ನಿವೃತ್ತಿ ವೇತನವಾಗಿ ಲಭ್ಯವಾಗುವುದು. ಅಲ್ಲದೆ ಕರ್ನಾಟಕ ಸರ್ಕಾರಿ ಸೇವಾ ನಿಯಮಾವಳಿಯಂತೆ ನಿವೃತ್ತಿ ಉಪದಾನ, ಕಮ್ಯೂಟೇಷನ್ ಮುಂತಾದ ಎಲ್ಲಾ ಸೇವಾ ಸೌಲಭ್ಯಗಳು ಲಭ್ಯವಾಗುತ್ತದೆ.
***

21-4-2016.

25 ವರ್ಷದ ಹೆಚ್ಚುವರಿ ವೇತನ ಬಡ್ತಿ ಲಭ್ಯವಾಗುವುದೇ?

ನಾನು 1981ರಿಂದ ಅನುದಾನಿತ ಪ್ರೌಢಶಾಲೆಯಲ್ಲಿ 20 ವರ್ಷಗಳ ಕಾಲ ಸಹ ಶಿಕ್ಷಕನಾಗಿ ಕೆಲಸ ಮಾಡಿ 1997ರಲ್ಲಿ ಪದವಿಪೂರ್ವ ಕಾಲೇಜು ಉಪನ್ಯಾಸಕನಾಗಿ ಪದೋನ್ನತಿಯನ್ನು ಪಡೆದಿದ್ದೇನೆ. ನನಗೆ 25 ವರ್ಷದ ಹೆಚ್ಚುವರಿ ವೇತನ ಬಡ್ತಿ ಲಭ್ಯವಾಗುವುದೇ?

| ಎಂ.ಎಸ್. ಮಕನದಾರ ಬೆಳಗಾವಿ

ದಿನಾಂಕ 14.6.2012ರ ಸರ್ಕಾರಿ ಆದೇಶದಂತೆ ಸೇವೆಯಲ್ಲಿ ಒಂದು ಪದೋನ್ನತಿ ಪಡೆದ ಸರ್ಕಾರಿ ನೌಕರನಿಗೆ 25 ವರ್ಷಗಳ ಸೇವೆ ಸಲ್ಲಿಸಿದ್ದಕ್ಕೆ ಹೆಚ್ಚುವರಿ ವೇತನ ಬಡ್ತಿಯನ್ನು ನೀಡಬೇಕೆಂದು ಸೂಚಿಸಿದೆ. ಆದರೆ ಕನಿಷ್ಠ ಒಂದು ಪದೋನ್ನತಿಯನ್ನು ಪಡೆದವರಿಗೆ ಈ ಹೆಚ್ಚುವರಿ ವೇತನ ಬಡ್ತಿಯನ್ನು ನೀಡಬಾರದೆಂದು ಆದೇಶದಲ್ಲಿ ನೀಡಲಾಗಿದೆ. ನೀವು 1990ರಲ್ಲೇ ಪದವಿ ಪೂರ್ವ ಶಿಕ್ಷಕರಾಗಿ ಪದೋನ್ನತಿ ಹೊಂದಿರುವುದರಿಂದ ನಿಮಗೆ ಈ ಹೆಚ್ಚುವರಿ ವೇತನ ಬಡ್ತಿ ಲಭ್ಯವಾಗುವುದಿಲ್ಲ.
***

22-4-16.
ಅನುಕಂಪದ ಆಧಾರದ ಮೇಲೆ ನೌಕರಿ ದೊರಕುತ್ತದೆಯೇ? 

ಸರ್ಕಾರಿ ನೌಕರ ಪಾರ್ಶ್ವವಾಯು ಪೀಡಿತನಾಗಿ ನಿವೃತ್ತಿ ಪಡೆದರೆ ಅವಲಂಬಿತರಿಗೆ ಅನುಕಂಪದ ಆಧಾರದ ಮೇಲೆ ನೌಕರಿ ದೊರಕುತ್ತದೆಯೇ?

| ಎಂ. ತಿಪ್ಪೇಸ್ವಾಮಿ ಬಳ್ಳಾರಿ

1996ರ ಕರ್ನಾಟಕ ಸರ್ಕಾರಿ ಸೇವಾ (ಅನುಕಂಪದ ಆಧಾರದ ಮೇಲೆ ನೇಮಕಾತಿ) ನಿಯಮಾವಳಿಯ ನಿಯಮ 3ಎ ರೀತಿಯಂತೆ ಸರ್ಕಾರಿ ಸೇವೆಯಲ್ಲಿದ್ದಾಗಲೇ ಶಾಶ್ವತ ಅಸಮರ್ಥತೆಯಿಂದಾಗಿ ಸ್ವಯಂ ನಿವೃತ್ತಿ ಪಡೆಯುವ ಸರ್ಕಾರಿ ನೌಕರರ ಅವಲಂಬಿತರು ಅನುಕಂಪದ ಆಧಾರದ

ಮೇಲೆ ಸರ್ಕಾರಿ ನೌಕರಿ ಪಡೆಯಲು ಅರ್ಹರಾಗಿರುತ್ತಾರೆ. ಆದರೆ ಪಾರ್ಶ್ವವಾಯು, ಇನ್ನಿತರ ಕಾಯಿಲೆಯಿಂದ ನಿವೃತ್ತಿ ಪಡೆಯುವ ಸರ್ಕಾರಿ ನೌಕರರ ಅವಲಂಬಿತರಿಗೆ ನಿಯಮಾವಳಿಯಂತೆ ಸರ್ಕಾರಿ ನೌಕರಿ ಲಭ್ಯವಾಗುವುದಿಲ್ಲ.
***

23-4-16.
ಸರ್ಕಾರದ ಇತರ ಹುದ್ದೆಗಳಿಗೆ ಆಯ್ಕೆಯಾದರೆ ಸೇವಾ ಅವಧಿ ಪರಿಗಣಿಸಲಾಗುವುದೇ?

ನಾನು ಕರ್ನಾಟಕ ಹಾಲು ಒಕ್ಕೂಟದಲ್ಲಿ (ಕೆಎಂಎಫ್) 2014ರಿಂದ ಕೆಲಸ ನಿರ್ವಹಿಸುತ್ತಿದ್ದೇನೆ. ನಾನು ಸರ್ಕಾರಿ ನೌಕರಿಯ ವಿವಿಧ ಹುದ್ದೆಗಳಿಗೆ ಅರ್ಜಿ ಸಲ್ಲಿಸುವಾಗ ಸಂಬಂಧಿತ ಅಂಕಣದಲ್ಲಿ ನೀವು ಸರ್ಕಾರಿ ನೌಕರರೇ? ಎಂದು ಕೇಳಲಾಗುತ್ತದೆ. ನಾವು ಸರ್ಕಾರಿ ನೌಕರರೇ? ನಮ್ಮ ಸೇವಾ ಅವಧಿಯನ್ನು ಸರ್ಕಾರದ ಇತರ ಹುದ್ದೆಗಳಿಗೆ ಆಯ್ಕೆಯಾದರಲ್ಲಿ ಪರಿಗಣಿಸಲಾಗುವುದೇ?

| ಎಸ್.ಡಿ. ರಾಮಕೃಷ್ಣ, ಬೆಂಗಳೂರು ಡೇರಿ

ನೀವು ಸೇವೆ ಸಲ್ಲಿಸುತ್ತಿರುವ ಬೆಂಗಳೂರು ಡೇರಿಯು ಸರ್ಕಾರದ ಇಲಾಖೆಯಾಗಿರದೆ ಅದೊಂದು ಅರೆ ಸರ್ಕಾರಿ ಸಂಸ್ಥೆಯಾಗಿದೆ. ಹೀಗಾಗಿ ನೀವು ಸರ್ಕಾರಿ ನೌಕರರಲ್ಲ. ಆದ್ದರಿಂದ ನಿಮ್ಮ ಸೇವೆಯನ್ನು ಸರ್ಕಾರಿ ಹುದ್ದೆಗಳಿಗೆ ಪರಿಗಣಿಸಲಾಗುವುದಿಲ್ಲ.
***

24-4-16
ವೇತನ ಬಡ್ತಿ ಪಡೆಯಲು ಅರ್ಹನಿದ್ದೇನೆಯೆ?
ನಾನು ಜಲಸಂಪನ್ಮೂಲ ಇಲಾಖೆಯಲ್ಲಿ ಸಹಾಯಕ ಇಂಜಿನಿಯರ್ ಆಗಿ 32 ವರ್ಷಗಳಿಂದ ಸೇವೆ ಸಲ್ಲಿಸಿ ನಿಯಮ 32ರಲ್ಲಿ ಪದೋನ್ನತಿ ಪಡೆದಿರುವೆ. ಏತನ್ಮಧ್ಯೆ ನನ್ನನ್ನು ಸುಮಾರು ಒಂದೂವರೆ ವರ್ಷಗಳ ಕಾಲ ಅಮಾನತಿನಲ್ಲಿಟ್ಟು ತದನಂತರ ಇಲಾಖಾ ವಿಚಾರಣೆಯನ್ನು ಬಾಕಿ ಇರಿಸಿ ಸ್ಥಳ ನಿಯುಕ್ತಿಗೊಳಿಸಿದ್ದಾರೆ. ಮತ್ತೆ ನಾನು ನಿಯಮ 32ರಡಿಯಲ್ಲೇ ಪದೋನ್ನತಿ ಹೊಂದಿದ್ದು 25 ಮತ್ತು 30 ವರ್ಷಗಳ ಹೆಚ್ಚುವರಿ ವೇತನ ಬಡ್ತಿ ಪಡೆಯಲು ಅರ್ಹನಿದ್ದೇನೆಯೇ?

| ಚಂದ್ರಶೇಖರ ಕಲಬುರ್ಗಿ

ನೀವು ನಿಯಮ 32ರಲ್ಲಿ ಪದೋನ್ನತಿ ಪಡೆದು ಮಧ್ಯದಲ್ಲಿ ಒಂದೂವರೆ ವರ್ಷಗಳ ಕಾಲ ಅಮಾನತುಗೊಂಡಿರುವುದರಿಂದ ಈ ಅಮಾನತಿನ ಅವಧಿಯನ್ನು ಕರ್ತವ್ಯ ಅಥವಾ ರಜೆ ಎಂದು ಪರಿಗಣಿಸಿದಾಗ ನಿಮಗೆ 25 ವರ್ಷದ ಹೆಚ್ಚುವರಿ ವೇತನ ಬಡ್ತಿ ಲಭ್ಯವಾಗುವುದು.
***

26-4-16.

ನಾನು 1985ರಲ್ಲಿ ಉಪನ್ಯಾಸಕನಾಗಿ ಸರ್ಕಾರಿ ಸೇವೆಗೆ ಸೇರಿದ್ದು, 1995ರಲ್ಲಿ ಕಾಲಮಿತಿ ವೇತನ ಬಡಿ ್ತ ಪಡೆದಿದ್ದೇನೆ. 1996ರಲ್ಲಿ ನಾನು ಪ್ರಾಂಶುಪಾಲನಾಗಿ ಪದೋನ್ನತಿ ಹೊಂದಿದ್ದು 2012ರವರೆಗೆ ಒಂದೇ ಹುದ್ದೆಯಲ್ಲಿ 16 ವರ್ಷ ಕಾರ್ಯ ನಿರ್ವಹಿಸಿದ್ದೇನೆ. ನಾನು 15 ವರ್ಷಗಳ ಹೆಚ್ಚುವರಿ ವೇತನ ಸ್ವಯಂಚಾಲಿತ ವಿಶೇಷ ಮುಂಬಡ್ತಿ ಪಡೆಯಲು ಅವಕಾಶವಿದೆಯೇ?

| ಸಂಕ್ರಪ್ಪ ಯಾದಗಿರಿ

1991ರ ಕರ್ನಾಟಕ ಸಿವಿಲ್​ಸೇವಾ (ಹಿರಿಯ ವೇತನ ಶ್ರೇಣಿಗೆ ಸ್ವಯಂಚಾಲಿತ ಬಡ್ತಿ) ನಿಯಮಾವಳಿಯ ನಿಯಮ 3ರಂತೆ ಒಂದೇ ಹುದ್ದೆಯಲ್ಲಿ 15 ವರ್ಷಗಳ ಕಾಲ ಸೇವೆ ಸಲ್ಲಿಸಿದ್ದರೆ ಅಂಥ ಸರ್ಕಾರಿ ನೌಕರರು ಸ್ವಯಂ ಚಾಲಿತ ಬಡ್ತಿಗೆ ಅರ್ಹರಾಗುತ್ತಾರೆ. ಆದ ಕಾರಣ ನೀವು ಪ್ರಾಂಶುಪಾಲರಾಗಿ ಒಂದೇ ಹುದ್ದೆಯಲ್ಲಿ ಸೇವೆ ಸಲ್ಲಿಸಿರುವುದರಿಂದ ಸ್ವಯಂಚಾಲಿತ ವಿಶೇಷ ಮುಂಬಡ್ತಿಯನ್ನು ಪಡೆಯಲು ಅರ್ಹರಾಗಿರುತ್ತೀರಿ.
***

27-4-16.
ಅನುಕಂಪದ ನೌಕರಿ ಲಭ್ಯವಾಗುತ್ತದೆಯೇ?
ನನ್ನ ತಂದೆ ಕಲಬುರಗಿ ಜಿಲ್ಲೆ ಆಳಂದ ಸರ್ಕಾರಿ ಆಸ್ಪತ್ರೆಯಲ್ಲಿ ಶುಶ್ರೂಷಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದು 2013ರಲ್ಲಿ ಅನಾರೋಗ್ಯದಿಂದ ನಿಧನ ಹೊಂದಿದ್ದಾರೆ. ನನ್ನ ತಾಯಿ ಅನುಕಂಪದ ಆಧಾರದ ಮೇಲೆ ನೇಮಕ ಮಾಡಿಕೊಳ್ಳಲು ಅರ್ಜಿ ಸಲ್ಲಿಸಿದ್ದರು. ಆದರೆ ನೇಮಕಾತಿ ಆದೇಶ ಪಡೆಯುವ ಮುಂಚೆಯೇ 2014ರಲ್ಲಿ ಅನಾರೋಗ್ಯದಿಂದ ಅವರೂ ನಿಧನರಾಗಿದ್ದಾರೆ. ಒಬ್ಬಳೇ ಮಗಳಾದ ನನಗೆ ಅನುಕಂಪದ ಮೇರೆಗೆ ನೇಮಕಾತಿ ನೀಡಬೇಕೆಂದು ಕೋರಿದ್ದೇನೆ. ನನಗೆ ಅನುಕಂಪದ ನೌಕರಿ ಲಭ್ಯವಾಗುತ್ತದೆಯೇ?

|ಸ್ವಾತಿ ಕಲಬುರಗಿ

ಕರ್ನಾಟಕ ಸಿವಿಲ್ ಸೇವಾ (ಅನುಕಂಪದ ಆಧಾರದ ಮೇಲೆ ನೇಮಕ) ನಿಯಮಗಳು 1996ರ ನಿಯಮ 3 (2)ರಂತೆ ಅವಿವಾಹಿತ ಮಗಳು ಅನುಕಂಪದ ಮೇರೆಗೆ ನೇಮಕಾತಿ ಪಡೆಯಲು ಅರ್ಹಳು. ನಿಮ್ಮ ತಂದೆಯವರ ಹುದ್ದೆಯನ್ನು ನಿಮ್ಮ ತಾಯಿಯವರು ಪಡೆಯುವ ಮೊದಲೇ ನಿಧನರಾಗಿರುವುದರಿಂದ ಈ ನಿಯಮಾವಳಿಯಂತೆ ನಿಮ್ಮ ಅರ್ಜಿಯನ್ನು ಪರಿಗಣಿಸಿ ಸಂಬಂಸಿದ ಸಕ್ಷಮ ಪ್ರಾಧಿಕಾರಿಯವರು ನೇಮಕ ಮಾಡಿಕೊಳ್ಳಬೇಕು.
***

28-4-16.

ಅನುಕಂಪದ ನೌಕರಿ ಲಭ್ಯವಾಗುತ್ತದೆಯೇ?
ನನ್ನ ತಂದೆ ಕಲಬುರಗಿ ಜಿಲ್ಲೆ ಆಳಂದ ಸರ್ಕಾರಿ ಆಸ್ಪತ್ರೆಯಲ್ಲಿ ಶುಶ್ರೂಷಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದು 2013ರಲ್ಲಿ ಅನಾರೋಗ್ಯದಿಂದ ನಿಧನ ಹೊಂದಿದ್ದಾರೆ. ನನ್ನ ತಾಯಿ ಅನುಕಂಪದ ಆಧಾರದ ಮೇಲೆ ನೇಮಕ ಮಾಡಿಕೊಳ್ಳಲು ಅರ್ಜಿ ಸಲ್ಲಿಸಿದ್ದರು. ಆದರೆ ನೇಮಕಾತಿ ಆದೇಶ ಪಡೆಯುವ ಮುಂಚೆಯೇ 2014ರಲ್ಲಿ ಅನಾರೋಗ್ಯದಿಂದ ಅವರೂ ನಿಧನರಾಗಿದ್ದಾರೆ. ಒಬ್ಬಳೇ ಮಗಳಾದ ನನಗೆ ಅನುಕಂಪದ ಮೇರೆಗೆ ನೇಮಕಾತಿ ನೀಡಬೇಕೆಂದು ಕೋರಿದ್ದೇನೆ. ನನಗೆ ಅನುಕಂಪದ ನೌಕರಿ ಲಭ್ಯವಾಗುತ್ತದೆಯೇ?

|ಸ್ವಾತಿ ಕಲಬುರಗಿ

ಕರ್ನಾಟಕ ಸಿವಿಲ್ ಸೇವಾ (ಅನುಕಂಪದ ಆಧಾರದ ಮೇಲೆ ನೇಮಕ) ನಿಯಮಗಳು 1996ರ ನಿಯಮ 3 (2)ರಂತೆ ಅವಿವಾಹಿತ ಮಗಳು ಅನುಕಂಪದ ಮೇರೆಗೆ ನೇಮಕಾತಿ ಪಡೆಯಲು ಅರ್ಹಳು. ನಿಮ್ಮ ತಂದೆಯವರ ಹುದ್ದೆಯನ್ನು ನಿಮ್ಮ ತಾಯಿಯವರು ಪಡೆಯುವ ಮೊದಲೇ ನಿಧನರಾಗಿರುವುದರಿಂದ ಈ ನಿಯಮಾವಳಿಯಂತೆ ನಿಮ್ಮ ಅರ್ಜಿಯನ್ನು ಪರಿಗಣಿಸಿ ಸಂಬಂಸಿದ ಸಕ್ಷಮ ಪ್ರಾಧಿಕಾರಿಯವರು ನೇಮಕ ಮಾಡಿಕೊಳ್ಳಬೇಕು.
***

29-4-16.
ವಿಶೇಷ ಅಂಗವೈಕಲ್ಯತೆ ರಜೆ ಲಭ್ಯವಾಗುತ್ತದೆಯೇ?
| ಎಸ್. ಸೋಮಶೇಖರ್ ಮೈಸೂರು

ನಾನು ಗ್ರೂಪ್ ಡಿ ನೌಕರನಾಗಿದ್ದು ರಸ್ತೆ ಅಪಘಾತವಾಗಿ ನನ್ನ ಬಲ ಮೊಣಕಾಲು ಕಳೆದುಕೊಂಡಿರುತ್ತೇನೆ. ಅಂಗವಿಕಲನಾಗಿರುವ ನನಗೆ ವಿಶೇಷ ಅಂಗವೈಕಲ್ಯತೆ ರಜೆ ಲಭ್ಯವಾಗುತ್ತದೆಯೇ? ನಾನು ಕೃತಕ ಕಾಲನ್ನು ಒಂದೂವರೆ ಲಕ್ಷ ರೂಪಾಯಿಗೆ ಖರೀದಿಸಿ ಅಳವಡಿಸಿಕೊಳ್ಳಲು ಇಚ್ಛಿಸಿದ್ದೇನೆ. ಈ ಖರೀದಿಗೆ ಸಂಬಂಧಿಸಿದಂತೆ ನನಗೆ ಎಷ್ಟು ಮೊತ್ತದ ಹಣವು ಸರ್ಕಾರದಿಂದ ಮರುಪಾವತಿಯಾಗುತ್ತದೆ? ತಿಳಿಸಿ.

ಕರ್ನಾಟಕ ಸಿವಿಲ್ ಸೇವಾ ನಿಯಮಾವಳಿಯ ನಿಯಮ 136 (1)ರಂತೆ ಸರ್ಕಾರಿ ನೌಕರನು ತನ್ನ ಕಚೇರಿ ಕೆಲಸ ನಿರ್ವಹಣೆಯ ಸಮಯದಲ್ಲಿ ಆದ ಗಾಯದಿಂದ ಅಂಗವಿಕಲನಾದರೆ ಅವನಿಗೆ ವಿಶೇಷ ರಜೆ ಲಭ್ಯವಾಗುತ್ತದೆ. 1963ರ ಕರ್ನಾಟಕ ಸರ್ಕಾರಿ ನೌಕರರ ವೈದ್ಯಕೀಯ ಚಿಕಿತ್ಸಾ ನಿಯಮಾವಳಿಯಂತೆ ಕೃತಕ ಕಾಲು ಅಳವಡಿಸಿಕೊಳ್ಳಲು 65,000 ರೂಪಾಯಿಗಳ ಮರು ಸಂದಾಯದ ಅವಕಾಶವಿರುತ್ತದೆ.
***

30-4-2016.
ನನ್ನ ತಂದೆ ಸರ್ಕಾರಿ ಆಸ್ಪತ್ರೆಯಲ್ಲಿ ಗುಮಾಸ್ತರಾಗಿ ಸೇವೆ ಸಲ್ಲಿಸಿ ಕಳೆದ ಮಾರ್ಚ್ ನಲ್ಲಿ ಹೃದಯಾಘಾತದಿಂದ ನಿಧನ ಹೊಂದಿದ್ದಾರೆ? ಅನುಕಂಪದ ಆಧಾರದ ಮೇಲೆ ನೌಕರಿ ನೀಡಬೇಕಾದರೆ ವಾರ್ಷಿಕ ಆದಾಯ ಎಷ್ಟಿರಬೇಕು? ನಮ್ಮ ಅಜ್ಜನ ಹೆಸರಲ್ಲಿ 8 ಲಕ್ಷ ರೂ. ಚರಾಸ್ಥಿ ಇರುವುದರಿಂದ ಅನುಕಂಪದ ಮೇರೆಗೆ ನೌಕರಿ ನೀಡಲಾಗುವುದಿಲ್ಲವೆಂದು ತಿರಸ್ಕರಿಸಿರುತ್ತಾರೆ. ಇದಕ್ಕೆ ಸೂಕ್ತ ಪರಿಹಾರ ಸೂಚಿಸಿ.

| ಮಂಜುನಾಥ ಎಚ್. ಕಾರವಾರ

ಕರ್ನಾಟಕ ಸಿವಿಲ್ ಸೇವಾ (ಅನುಕಂಪದ ಆಧಾರ ಮೇಲೆ ನೇಮಕಾತಿ) ನಿಯಮಾವಳಿ 1996ರ ನಿಯಮ 4ರಲ್ಲಿ ಅನುಕಂಪದ ಆಧಾರದ ಮೇಲೆ ನೇಮಕವಾಗಲು ಮೃತ ಸರ್ಕಾರಿ ನೌಕರನ ಕುಟುಂಬವು ಆರ್ಥಿಕ ಮುಗ್ಗಟ್ಟಿನಲ್ಲಿರಬೇಕು ಅಥವಾ ಜೀವನಾಧಾರ ರಹಿತವಾಗಿರಬೇಕು. ಅವರ ವಾರ್ಷಿಕ ಆದಾಯವು ಪ್ರಥಮ ದರ್ಜೆ ಸಹಾಯಕರ ವೇತನ ಶ್ರೇಣಿಯ ಕನಿಷ್ಠ ಮತ್ತು ಗರಿಷ್ಠ ವೇತನದ ಸರಾಸರಿಯ ಉಪಲಬ್ಧಿಗೆ ಬೆಂಗಳೂರಿನಲ್ಲಿ ಅನ್ವಯಿಸುವಂತೆ ಮನೆ ಬಾಡಿಗೆ, ನಗರ ಪರಿಹಾರ ಭತ್ಯೆಯು ಸೇರಿದಂತೆ ಒಟ್ಟು ಮೊಬಲಗು ಕಡಿಮೆ ಇದ್ದರೆ ಅಂತಹ ಕುಟುಂಬವು ಆರ್ಥಿಕ ಮುಗ್ಗಟ್ಟಿನಿಂದ ಕೂಡಿದೆ ಎಂದು ಪರಿಗಣಿಸಲು ಸೂಚಿಸಲಾಗಿದೆ. ಹೀಗಿರುವಲ್ಲಿ ನಿಮ್ಮ ಅಜ್ಜನವರ ಚರಾಸ್ಥಿಯ ಹಿನ್ನೆಲೆಯಲ್ಲಿ ನಿಮ್ಮ ಅರ್ಜಿಯನ್ನು ತಿರಸ್ಕರಿಸುವುದು ನಿಯಮಬದ್ಧವಾಗಿಲ್ಲ. ಆದ ಕಾರಣ ನೀವು ಮತ್ತೊಮ್ಮೆ ಸಂಬಂಧಿಸಿದ ಸಕ್ಷಮ ಪ್ರಾಧಿಕಾರಿಗೆ ಮನವರಿಕೆ ಮಾಡಿಸಿ ಅರ್ಜಿಯನ್ನು ಸಲ್ಲಿಸಬಹುದು.

 ದಿನದ ಪ್ರಶ್ನೆ( 1-3-16 )

ನಾನು ಆರೋಗ್ಯ ಇಲಾಖೆಯಲ್ಲಿ ಕಳೆದ 14 ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದು ಯಾವುದೇ ಪದೋನ್ನತಿ ಅವಕಾಶವಿಲ್ಲ. ನನಗೆ ಈ ಸೇವೆಯಲ್ಲಿ ಮುಂದುವರಿಯಲು ಮನಸ್ಸಿಲ್ಲದ ಕಾರಣ ರಾಜೀನಾಮೆ ನೀಡಿ ಉನ್ನತ ವ್ಯಾಸಂಗ ಮಾಡಲು ನಿಯಮಾವಳಿಗಳಡಿ ಅವಕಾಶವಿದ್ದರೆ ತಿಳಿಸಿ. ಅಥವಾ ಇಲಾಖೆಯಲ್ಲಿದ್ದುಕೊಂಡೇ ಅದರ ಮುಖಾಂತರ ಸಸ್ಯ ಶಾಸ್ತ್ರದಲ್ಲಿ ಪಿ.ಎಚ್​ಡಿ., ಪದವಿ ಪಡೆಯಲು ಅರ್ಜಿ ಸಲ್ಲಿಸಲು ಅನುಸರಿಸಬೇಕಾದ ನಿಯಮಗಳೇನು? ನನಗೀಗ 37 ವರ್ಷವಾಗಿದ್ದು ರಾಜೀನಾಮೆ ನೀಡಲು 15 ವರ್ಷ ಪೂರೈಸಬೇಕೆ? ನಿವೃತ್ತಿ ವೇತನ ಎಷ್ಟು ಸಿಗುತ್ತದೆ. ಸೂಕ್ತ ಸಲಹೆ ನೀಡಿ.

|ನಿರಂಜನ ಕುಮಾರ ನೇತ್ರಾಧಿಕಾರಿ, ಸಾಗರ

ಕರ್ನಾಟಕ ಸರ್ಕಾರಿ ಸೇವಾ ನಿಯಮಾವಳಿಯ ಪರಿಶಿಷ್ಟ ಐಐಎ ಪ್ರಕಾರ ಸರ್ಕಾರಿ ನೌಕರನು ಪಿಎಚ್.ಡಿ., ಮಾಡಲು ಮೂರು ವರ್ಷಗಳ ಕಾಲ ಅವಕಾಶವಿರುತ್ತದೆ. ಆದರೆ ಈ ಪದವಿ ಪಡೆಯುವುದು ಆ ಹುದ್ದೆಗೆ ಅವಶ್ಯಕವೆಂದು ಸರ್ಕಾರಕ್ಕೆ ಮನದಟ್ಟಾದರೆ ನಿಯೋಜನೆ ಮೇರೆಗೆ ಕಳುಹಿಸಲಾಗುವುದು. ಆದರೆ ನಿಮ್ಮ ಹುದ್ದೆಗೆ ಈ ಪಿಎಚ್.ಡಿ., ಅವಶ್ಯಕವಿಲ್ಲವಾದ್ದರಿಂದ ನೀವು 15 ವರ್ಷಗಳ ಸೇವೆ ಪೂರೈಸಿ ಸ್ವಯಂ ನಿವೃತ್ತಿ ಹೊಂದಿ ಈ ಪಿಎಚ್.ಡಿ., ಪದವಿಯನ್ನು ಪಡೆಯಬಹುದು. ಆಗ ನಿಮಗೆ ನಿವೃತ್ತಿ ಸೇವಾ ಸೌಲಭ್ಯಗಳು ಲಭ್ಯವಾಗುತ್ತವೆ.
***

2-3-16.
ಗ್ರಾಮ ಪಂಚಾಯ್ತಿ – ಪಂಚಾಯ್ತಿಯ ಅಭಿವೃದ್ಧಿ ಇಲಾಖಾ ಅಧಿಕಾರಿಗಳು ಶಾಲೆಗೆ ಭೇಟಿ ನೀಡಿದಾಗ ಶಿಕ್ಷಕರ ಹಾಜರಾತಿ ಪುಸ್ತಕದಲ್ಲಿ ಮೇಲುಸಹಿ ಮಾಡುವ ಹಾಜರಿರದ ಶಿಕ್ಷಕರಿಗೆ ಗಿ (ಗೈರುಹಾಜರಿ) ಚಿಹ್ನೆ ಹಾಕುವ ಅಧಿಕಾರವಿದೆಯೇ?

| ಶಶಾಂಕ್ ಮೂಡಿಗೆರೆ, ಚಿಕ್ಕಮಗಳೂರು

ಗ್ರಾಮ ಪಂಚಾಯ್ತಿಯ ಅಭಿವೃದ್ಧಿ ಅಧಿಕಾರಿಗಳು ಶಾಲೆಗೆ ಭೇಟಿ ನೀಡುವ ಅಧಿಕಾರ ಹೊಂದಿರುವುದಿಲ್ಲ. ಅಲ್ಲದೆ ಅವರು ಶಿಕ್ಷಕರ ಹಾಜರಾತಿ ಪುಸ್ತಕದಲ್ಲಿ ಮೇಲುಸಹಿ ಮಾಡುವ ಮತ್ತು ಹಾಜರಿರದ ಶಿಕ್ಷಕರಿಗೆ ಗಿ ಚಿಹ್ನೆ ಹಾಕುವ ಅಧಿಕಾರವನ್ನು ಹೊಂದಿರುವುದಿಲ್ಲ. ನಿಮ್ಮ ಪಿಡಿಒ ಅವರು ವ್ಯಾಪ್ತಿ ಮೀರಿ ಕರ್ತವ್ಯ ನಿರ್ವಹಿಸಿರುವುದರಿಂದ ಈ ಬಗ್ಗೆ ಶಾಲಾ ಮುಖ್ಯೋಪಾಧ್ಯಾಯರು ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ವರದಿಯನ್ನು ಸಲ್ಲಿಸಬಹುದು.
***

3-3-16.
ಅನುಕಂಪದ ಆಧಾರದ ಮೇರೆಗೆ ದ್ವಿತೀಯ ದರ್ಜೆ ಸಹಾಯಕರ ಹುದ್ದೆ ದೊರಕುವುದೆ?

ನಾನು ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿಯಿಂದ ಎಸ್​ಎಸ್​ಎಲ್​ಸಿ ಮುಗಿಸಿ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದಲ್ಲಿ ಬಾಹ್ಯವಾಗಿ ಒಂದು ವರ್ಷದ ಪಿಯುಸಿ ಮುಗಿಸಿರುತ್ತೇನೆ. ಇತ್ತೀಚೆಗೆ ನನ್ನ ತಂದೆಯವರು ನಿಧನ ಹೊಂದಿದ್ದು ಅನುಕಂಪದ ಆಧಾರದ ಮೇರೆಗೆ ದ್ವಿತೀಯ ದರ್ಜೆ ಸಹಾಯಕರ ಹುದ್ದೆ ದೊರಕುವುದೇ.

|ರಾಜ್​ಕುಮಾರ್, ಪೂಜಾರಿ, ಸಿಂದಗಿ, ವಿಜಯಪುರ

ಕರ್ನಾಟಕ ಸರ್ಕಾರಿ ಸೇವಾ (ಲಿಪಿಕ ಹುದ್ದೆಗಳ ನೇಮಕಾತಿ) ನಿಯಮಗಳು 1973ಕ್ಕೆ 2013ರಲ್ಲಿ ರಾಜ್ಯ ಸರ್ಕಾರ ತಿದ್ದುಪಡಿ ಮಾಡಿ ದ್ವಿತೀಯ ದರ್ಜೆ ಸಹಾಯಕರ ನೇಮಕಾತಿಗೆ 2 ವರ್ಷದ ಪಿಯುಸಿ ಅಥವಾ ತತ್ಸಮಾನ ವಿದ್ಯಾರ್ಹತೆಯನ್ನು ನಿಗದಿ ಪಡಿಸಿರುತ್ತದೆ. ಈ ಹಿನ್ನೆಲೆಯಲ್ಲಿ ಸರ್ಕಾರವು ಮುಕ್ತ ವಿಶ್ವವಿದ್ಯಾನಿಲಯದ ಪಿಯುಸಿಯನ್ನು ಪದವಿ ಪೂರ್ವ ಪರೀಕ್ಷಾ ಮಂಡಳಿಯ ಪಿಯುಸಿಗೆ ತತ್ಸಮಾನವಲ್ಲವೆಂದು ಆದೇಶಿಸಿದೆ. ಆದ ಕಾರಣ ನೀವು ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದ ಒಂದು ವರ್ಷದ ಪಿಯುಸಿಯನ್ನು ಪೂರೈಸಿರುವುದರಿಂದ ಅನುಕಂಪದ ಆಧಾರದ ಮೇಲೆ ನೇಮಕಾತಿ ಹೊಂದಲು ಅರ್ಹರಾಗಿರುವುದಿಲ್ಲ.
***

4-3-16.
ಸರ್ಕಾರಿ ಸ್ವಾಮ್ಯದ ಅಭಿವೃದ್ಧಿ ನಿಗಮದಿಂದ ನಿವೃತ್ತಿ ಹೊಂದಿ 20 ತಿಂಗಳಾಯಿತು. ಭವಿಷ್ಯನಿಧಿ ಉಪದಾನ, ಜಿಐಎಸ್​ಗಳಿಗೆ ರಜೆ ನಗದೀಕರಣ, ಪಿಂಚಣಿ ಮುಂತಾದ ಸವಲತ್ತುಗಳನ್ನು ಬಿಡುಗಡೆ ಮಾಡದೆ ವಿನಾಕಾರಣ ತಡೆಹಿಡಿಯಲಾಗಿದೆ. ಇವುಗಳ ಪರಿಹಾರಕ್ಕಾಗಿ ಸೂಕ್ತ ಕಾನೂನಿನ ಮಾರ್ಗೇಪಾಯಗಳೇನು?

|ಕೆ.ಎಲ್. ನಾಗಲಕ್ಷ್ಮೀ ತುಮಕೂರು

ನೀವು ಸರ್ಕಾರಿ ಸ್ವಾಮ್ಯದ ಅಭಿವೃದ್ಧಿ ನಿಗಮದಿಂದ ನಿವೃತ್ತಿ ಹೊಂದಿದ್ದು, ನಿಮ್ಮ ಭವಿಷ್ಯ ನಿಧಿ ಮೊಬಲಗನ್ನು ಅಂತಿಮವಾಗಿ ನೀವೇ ಪಡೆಯಬಹುದು. ನಿಮಗೆ ಲಭ್ಯವಾಗಬೇಕಾದ ಇತರೆ ನಿವೃತ್ತಿ ಸೌಲಭ್ಯಗಳನ್ನು ಕರ್ನಾಟಕ ಸರ್ಕಾರಿ ಸೇವಾ ನಿಯಮಾವಳಿಯ ನಿಯಮ 214ರ ರೀತ್ಯ ಯಾವುದೇ ಹಣಕಾಸು ನಷ್ಟವಿದ್ದರೆ ಅಂತಹ ಸಂದರ್ಭದಲ್ಲಿ ತಡೆಹಿಡಿಯಲು ಅವಕಾಶವಿದೆ. ಅಲ್ಲದೆ ನಿಮ್ಮ ಮೇಲೆ ಯಾವುದೇ ಇಲಾಖಾ ವಿಚಾರಣೆ ಬಾಕಿ ಇದ್ದರೆ ಅಂತಹ ಸಂದರ್ಭದಲ್ಲಿಯೂ ಸಹ ನಿಯಮಾವಳಿಯಲ್ಲಿ ಅವಕಾಶವಿದೆ. ಆದರೆ ನಿಮ್ಮ ಪ್ರಕರಣದಲ್ಲಿ 20 ತಿಂಗಳೊಳಗಾಗಿ ವಿಚಾರಣೆಯನ್ನು ಪೂರೈಸಿ ನಿಮ್ಮಿಂದ ಬರಬೇಕಾಗಿರುವ ಬಾಕಿಯನ್ನು ಇವುಗಳಿಂದ ಕಠಾಯಿಸಿಕೊಳ್ಳಬಹುದಾಗಿತ್ತು. ಆದ ಕಾರಣ ಸ್ವಾಭಾವಿಕ ನ್ಯಾಯಕ್ಕೆ ವಿರುದ್ಧವಾಗಿರುವುದರಿಂದ ಸಂಬಂಧಿತ ನಿಗಮದ ಸರ್ಕಾರದ ಪ್ರಧಾನ ಕಾರ್ಯದರ್ಶಿಯವರನ್ನು ಅಥವಾ ಮೇಲ್ಮನವಿ ಪ್ರಾಧಿಕಾರವನ್ನು ಕೋರಬಹುದು. ತದನಂತರ ನೀವು ನ್ಯಾಯಾಲಯಕ್ಕೆ ಮೊರೆ ಹೋಗಬಹುದು.
***

5-3-16.
ನಾನು 1996ರಲ್ಲಿ ಪ್ರಾಥಮಿಕ ಶಾಲಾ ದೈಹಿಕ ಶಿಕ್ಷಣದ ಶಿಕ್ಷಕ ಗ್ರೇಡ್-2 ಹುದ್ದೆಗೆ ನೇಮಕವಾಗಿ 2006ರಲ್ಲಿ 10 ವರ್ಷಗಳ ಕಾಲ ಮಿತಿ ವೇತನ ಬಡ್ತಿ ಪಡೆದಿರುತ್ತೇನೆ. 2008ರಲ್ಲಿ ಪ್ರೌಢಶಾಲಾ ದೈಹಿಕ ಶಿಕ್ಷಣ ಶಿಕ್ಷಕ ಗ್ರೇಡ್-1 ಹುದ್ದೆಗೆ ಪದೋನ್ನತಿ ಹೊಂದಿದ್ದು ಈ ಹುದ್ದೆಯಲ್ಲಿ ನಿರಂತರ ಸೇವೆ ಸಲ್ಲಿಸಿದ್ದಕ್ಕಾಗಿ ನನಗೆ ಮತ್ತೊಮ್ಮೆ ಕಾಲಮಿತಿ ವೇತನ ಬಡ್ತಿ ದೊರೆಯುವುದೇ?

|ಎಂ.ಆರ್. ಶಿವಮೂರ್ತಿ

ಕರ್ನಾಟಕ ಸರ್ಕಾರಿ ಸೇವಾ (ಕಾಲಮಿತಿ ಭರ್ತಿ) ನಿಯಮ 1983ರಂತೆ ಸರ್ಕಾರಿ ನೌಕರನಿಗೆ ಸೇವಾವಧಿಯಲ್ಲಿ 10 ವರ್ಷಗಳ ಕಾಲ ನಿರಂತರವಾಗಿ ಒಂದೇ ಹುದ್ದೆಯಲ್ಲಿ ಸೇವೆ ಸಲ್ಲಿಸಿರುವುದಕ್ಕೆ ಹೆಚ್ಚಿನ ವೇತನ ಶ್ರೇಣಿಯ ಪದೋನ್ನತಿಯನ್ನು ನೀಡಲಾಗುವುದು. ಆದ ಕಾರಣ ನೀವು ಈಗಾಗಲೇ ಒಮ್ಮೆ ಕೆಳಗಿನ ಹುದ್ದೆಯಲ್ಲಿ ಕಾಲಮಿತಿ ಬಡ್ತಿಯನ್ನು ಪಡೆದಿರುವುದರಿಂದ ಮತ್ತೊಮ್ಮೆ ನಿಮಗೆ ಮೇಲಿನ ಹುದ್ದೆಯಲ್ಲಿ ಇದು ದೊರಕುವುದಿಲ್ಲ.
***

6-3-16.
13 ವರ್ಷಗಳ ಸೇವೆಯನ್ನು ಸೇವಾ ಮುಂಬಡ್ತಿಗೆ ಪರಿಗಣಿಸಲಾಗುತ್ತದೆಯೇ?

ನಾನು 2002ರಲ್ಲಿ ಸಿಇಟಿ ಮೂಲಕ ಮೈಸೂರು ಜಿಲ್ಲೆಗೆ ಪ್ರಾಥಮಿಕ ಶಾಲಾ ಶಿಕ್ಷಕಿಯಾಗಿ ನೇಮಕಗೊಂಡು, 2015ರ ಸಾಮಾನ್ಯ ವರ್ಗಾವಣೆಯಲ್ಲಿ ಹಾಸನ ಜಿಲ್ಲೆಗೆ ವರ್ಗಾವಣೆಗೊಂಡಿರುತ್ತೇನೆ. ನನ್ನ 13 ವರ್ಷಗಳ ಸೇವೆಯನ್ನು ಸೇವಾ ಮುಂಬಡ್ತಿಗೆ ಇಲ್ಲಿ ಪರಿಗಣಿಸಲಾಗುತ್ತದೆಯೇ? ಇಲ್ಲವಾದಲ್ಲಿ ಸೂಕ್ತ ಕಾರಣ ತಿಳಿಸಿ.

|ಹೇಮಾವತಿ ಎಸ್.ಬಿ. ಗಂಡಸಿ, ಅರಸೀಕೆರೆ ತಾಲೂಕು

ನೀವು ಮೈಸೂರು ಜಿಲ್ಲೆಯಿಂದ ಹಾಸನ ಜಿಲ್ಲೆಗೆ ಸ್ವತಃ ಕೋರಿಕೆ ಮೇರೆಗೆ ವರ್ಗಾವಣೆಗೊಂಡಿರುವುದರಿಂದ ನಿಮ್ಮ ಸೇವಾವಧಿಯನ್ನು ಮುಂಬಡ್ತಿಗಾಗಿ ನಿಯಮಾವಳಿ ರೀತ್ಯಾ ಪರಿಗಣಿಸಲಾಗುವುದಿಲ್ಲ. ನೀವು ಹಾಸನದಲ್ಲಿ ಜ್ಯೇಷ್ಠತಾ ಪಟ್ಟಿಯಲ್ಲಿ ಕಿರಿಯರಾಗಿರುವುದರಿಂದ ನಿಮ್ಮ ಮುಂಬಡ್ತಿಗೆ ಅವಕಾಶವಿರುವುದಿಲ್ಲ.
***

7-3-16.
ನಮ್ಮ ತಂದೆಯವರು ಲೋಕೋಪಯೋಗಿ ಇಲಾಖೆಯಲ್ಲಿ ದಿನಗೂಲಿ ನೌಕರರಾಗಿ 1996ರಿಂದ ಕೆಲಸ ಮಾಡುತ್ತಿದ್ದು, 2015ರ ಅಕ್ಟೋಬರ್ ತಿಂಗಳ 20ರಂದು ನಿಧನ ಹೊಂದಿರುತ್ತಾರೆ. ನನಗೆ ಈ ಇಲಾಖೆಯಲ್ಲಿ ಅನುಕಂಪದ ಆಧಾರದ ಮೇಲೆ ಸರ್ಕಾರಿ ನೌಕರಿ ಲಭ್ಯವಾಗುತ್ತದೆಯೇ?

| ಪಿ.ಎನ್. ರಮೇಶ್ ಚಿತ್ರದುರ್ಗ

ದಿನಾಂಕ 2.1.1997ರ ಸರ್ಕಾರಿ ಸುತ್ತೋಲೆಯಂತೆ ದಿನಾಂಕ 1.4.1984ಕ್ಕಿಂತ ಮುಂಚೆ ದಿನಗೂಲಿ ನೌಕರರಾಗಿ ಸೇವೆಗೆ ಸೇರಿದ್ದು, 10 ವರ್ಷಗಳ ಕಾಲ ಸೇವೆ ಸಲ್ಲಿಸಿದ ನೌಕರರನ್ನು ಖಾಯಂಗೊಳಿಸುವ ಮುನ್ನ ನಿಧನಹೊಂದಿದರೆ ಅಂತಹವರ ಮಕ್ಕಳಿಗೆ ಅನುಕಂಪದ ಆಧಾರದ ಮೇಲೆ ಸರ್ಕಾರಿ ನೌಕರಿ ನೀಡಬೇಕೆಂದು ಸೂಚಿಸಿದೆ. ಆದರೆ ನಿಮ್ಮ ತಂದೆಯವರು ಈ ದಿನಾಂಕದ ನಂತರ ಸೇವೆಗೆ ಸೇರಿರುವ ಕಾರಣ ನೀವು ಅನುಕಂಪದ ಮೇರೆಗೆ ಸರ್ಕಾರಿ ನೌಕರಿ ಪಡೆಯಲು ಅರ್ಹರಲ್ಲ.
***

8-3-16.
ನಿಯಮಾವಳಿ ರೀತ್ಯ ಸರಿಯಾಗಿದೆಯೇ?
ನಾನು ಆರೋಗ್ಯ ಇಲಾಖೆಯಲ್ಲಿ ಶುಶ್ರೂಷಕಿಯಾಗಿ ಕಾರ್ಯ ನಿರ್ವಹಿಸುತ್ತಿದ್ದು, ಅನಿವಾರ್ಯ ಕಾರಣದಿಂದಾಗಿ 2 ತಿಂಗಳು ಅನಧಿಕೃತವಾಗಿ ಗೈರು ಹಾಜರಾಗಬೇಕಾಯಿತು. ಈ ನನ್ನ ವರ್ತನೆಗೆ ಶಿಸ್ತುಪ್ರಾಧಿಕಾರಿಯು ಇಲಾಖಾ ವಿಚಾರಣೆ ನಡೆಸಿ ನನ್ನ ವಾರ್ಷಿಕ ವೇತನ ಬಡ್ತಿಯನ್ನು ಖಾಯಂ ಆಗಿ ತಡೆಹಿಡಿದಿದ್ದಾರೆ. ಇದು ನಿಯಮಾವಳಿ ರೀತ್ಯ ಸರಿಯಾಗಿದೆಯೇ?

ಬಿ.ಎಸ್. ಪ್ರಮೀಳ ಸರ್ಕಾರಿ ಆಸ್ಪತ್ರೆ, ವಿಜಯಪುರ

ಸರ್ಕಾರಿ ಸೇವಾ ನಿಯಮಾವಳಿ ರೀತ್ಯ ದಂಡನೆಯಾಗಿ ವಾರ್ಷಿಕ ವೇತನ ಬಡ್ತಿಯನ್ನು ಶಾಶ್ವತವಾಗಿ ತಡೆಯುವಂತಿಲ್ಲ. ಈಗಾಗಲೇ ಮದೋಸಿಂಗ್ ದೌಲತ್​ಸಿಂಗ್ v/s State of Bombayಪ್ರಕರಣದಲ್ಲಿ ಸರ್ವೇಚ್ಛ ನ್ಯಾಯಾಲಯ ಆದೇಶಿಸಿದೆ.
***

9-3-16.
ನಾನು ಕೃಷಿ ಇಲಾಖೆಗೆ ಶೀಘ್ರಲಿಪಿಗಾರನಾಗಿ 2006ರಲ್ಲಿ ಕೆಲಸಕ್ಕೆ ಸೇರಿದೆ. ಕೆಲವೊಂದು ಕಾರಣಗಳಿಂದಾಗಿ ನನ್ನ ಮೇಲೆ ಆರೋಪ ಹೊರಿಸಿ, ಇಲಾಖಾ ವಿಚಾರಣೆ ನಡೆಸಿ ಶಿಸ್ತು ಪ್ರಾಧಿಕಾರಿಯು ನನಗೆ ಬೆರಳಚ್ಚುಗಾರನ ಹುದ್ದೆಗೆ ಹಿಂಬಡ್ತಿ ನೀಡಿದರು. ಈ ರೀತಿಯಾಗಿ ಶಿಸ್ತುಪ್ರಾಧಿಕಾರಿಯು ವಿಧಿಸಿದ ದಂಡನೆಯು ನಿಯಮಾವಳಿ ರೀತ್ಯ ಸರಿಯಾಗಿದೆಯೇ?

|ಮಹೇಶ್ ಎನ್. ಚಿಕ್ಕಮಗಳೂರು

ಸಿಸಿಎ ನಿಯಮಾವಳಿಯ ನಿಯಮ 8 (ಡ) ರೀತ್ಯ ಒಬ್ಬ ನೌಕರ ನೇರ ನೇಮಕಾತಿಯಿಂದ ಒಂದು ಹುದ್ದೆಗೆ ನೇಮಕಗೊಂಡ ಮೇಲೆ ಅದಕ್ಕಿಂತ ಕೆಳಗಿನ ಹುದ್ದೆಗೆ ಹಿಂಬಡ್ತಿಗೊಳಿಸುವ ದಂಡನೆಯನ್ನು ವಿಧಿಸುವಂತಿಲ್ಲ.
***

10-3-16.
ನಾನು ಕಂದಾಯ ಇಲಾಖೆಯಲ್ಲಿ ಗ್ರಾಮಲೆಕ್ಕಾಧಿಕಾರಿಯಾಗಿ ಕಾರ್ಯ ನಿರ್ವಹಿಸುತ್ತಿದ್ದು 2015ರ ಮಾರ್ಚ್ ತಿಂಗಳಿನಲ್ಲಿ ಶಿಸ್ತು ಪ್ರಾಧಿಕಾರಿಯಾದ ಜಿಲ್ಲಾಧಿಕಾರಿಯವರು ನನ್ನನ್ನು ಕರ್ತವ್ಯ ನಿರ್ಲಕ್ಷ್ಯ ಆಧಾರದ ಮೇಲೆ ಅಮಾನತಿನಲ್ಲಿಟ್ಟಿದ್ದಾರೆ. ಇಲ್ಲಿಯವರೆಗೂ ನನ್ನನ್ನು ಕೆಲಸಕ್ಕೆ ಹಿಂತೆಗೆದುಕೊಂಡಿರುವುದಿಲ್ಲ. ನನಗೆ ಬರುತ್ತಿರುವ ಜೀವನಾಧಾರ ಭತ್ಯೆಯಲ್ಲಿ ಸಂಸಾರ ನಡೆಸುವುದು ಕಷ್ಟಕರವಾಗಿದೆ. ನಾನು ಬೇರೆ ಖಾಸಗಿ ನೌಕರಿಯನ್ನು ಈ ಅಮಾನತಿನ ಅವಧಿಯಲ್ಲಿ ಮಾಡಬಹುದೇ?

|ದಿನೇಶ್ ಎಂ. ಮಂಗಳೂರು

ಕರ್ನಾಟಕ ಸೇವಾ ನಿಯಮಾವಳಿಯ ನಿಯಮ 98 (2)ರಂತೆ ಸರ್ಕಾರಿ ನೌಕರನು ಅಮಾನತಿನ ಅವಧಿಯಲ್ಲಿ ಯಾವುದೇ ಉದ್ಯೋಗದಲ್ಲಿ, ವ್ಯಾಪಾರ ವ್ಯವಹಾರದಲ್ಲಿ ಅಥವಾ ಕಸುಬಿನಲ್ಲಿ ನಿರತನಾಗಿಲ್ಲ ಎಂಬುದನ್ನು ಸಮರ್ಥಿಸುವ ಪ್ರಮಾಣ ಪತ್ರವನ್ನು ನೀಡದ ಹೊರತು ಅವನಿಗೆ ಜೀವನಾಧಾರ ಭತ್ಯೆ ನೀಡತಕ್ಕದ್ದಲ್ಲ ಎಂದು ಸೂಚಿಸಿದೆ. ಹೀಗಾಗಿ ನೀವು ನಿಮ್ಮ ಅಮಾನತಿನ ಅವಧಿ ಯಲ್ಲಿ ಯಾವುದೇ ಖಾಸಗಿ ಉದ್ಯೋಗವನ್ನು ಮಾಡುವಂತಿಲ್ಲ.
***

11-3-16.
ನಾನು ವಾಣಿಜ್ಯ ತೆರಿಗೆ ಇಲಾಖೆಯಲ್ಲಿ ನೌಕರನಾಗಿದ್ದು, 2015ರ ಡಿಸೆಂಬರ್​ನಲ್ಲಿ ಲೋಕಾಯುಕ್ತ ಟ್ರ್ಯಾಪ್ ಕೇಸಿನಲ್ಲಿ ಸಿಲುಕಿಕೊಂಡಿದ್ದರಿಂದ ನನ್ನನ್ನು ಅಮಾನತ್ತಿನಲ್ಲಿಟ್ಟಿದ್ದಾರೆ. ಅಲ್ಲದೆ ನನ್ನ ಮೇಲೆ ಇಲಾಖಾ ವಿಚಾರಣೆ ಮತ್ತು ಕ್ರಿಮಿನಲ್ ಮೊಕದ್ದಮೆಗಳನ್ನು ಹೂಡಿರುವುದರಿಂದ ಎರಡೆರಡು ದಂಡನೆಗಳು ಒಟ್ಟೊಟ್ಟಿಗೆ ನಡೆಸುವುದು ಕಾನೂನು ಸಮ್ಮತವೇ?

|ಎನ್. ಮಾದೇಗೌಡ ಮಂಡ್ಯ

ಇಲಾಖಾ ವಿಚಾರಣೆ ಮತ್ತು ಕ್ರಿಮಿನಲ್ ಪ್ರಕರಣ ಒಟ್ಟೊಟ್ಟಿಗೆ ನಡೆಸುವುದು ಸಂವಿಧಾನದ ಅನುಚ್ಛೇದ 20(2)ರ ವ್ಯಾಪ್ತಿಯಲ್ಲಿ ಎರಡು ದಂಡನೆಯಾಗುವುದಿಲ್ಲ. ಇಲಾಖಾ ವಿಚಾರಣೆಯು ಶಾಸನಬದ್ಧ ನಿಯಮಾವಳಿಯಲ್ಲಿ ಬಂದ ಒಂದು ಪ್ರಕಾರವಾಗಿದ್ದರೂ ಇಲಾಖಾ ಶಿಸ್ತು ಕ್ರಮಗಳು ಪ್ರಮಾಣ ವಚನ ಆಧಾರಿತ ಕಾನೂನುಬದ್ಧ ಸಾಕ್ಷ್ಯ ಆಧಾರ ಮೇಲೆ ನಡೆಯುವುದಿಲ್ಲ. ಆದ್ದರಿಂದ ಇದು ಎರಡೆರಡು ದಂಡನೆಯಾಗುವುದಿಲ್ಲ.
***

12- 3 -16.
ನಮ್ಮ ತಾಯಿಯವರು ಪ್ರೌಢಶಾಲಾ ಶಿಕ್ಷಕಿಯಾಗಿ 25 ವರ್ಷಗಳ ಕಾಲ ಸೇವೆ ಸಲ್ಲಿಸಿದ್ದು ಕಳೆದ ನವೆಂಬರ್ ತಿಂಗಳಿನಲ್ಲಿ ಅವರನ್ನು ದುರ್ನಡತೆ ಆರೋಪದ ಮೇಲೆ ಅಮಾನತಿನಲ್ಲಿಡಲಾಯಿತು. ನಮ್ಮ ತಾಯಿ ಅಮಾನತಿನ ಅವಧಿಯಲ್ಲಿಯೇ 2016ರ ಫೆಬ್ರವರಿ 25ರಂದು ಹೃದಯಾಘಾತದಿಂದ ನಿಧನ ಹೊಂದಿದ್ದಾರೆ. ಈ ಹಿನ್ನೆಲೆಯಲ್ಲಿ ನಿರುದ್ಯೋಗಿಯಾಗಿರುವ ನನಗೆ ಯಾವ್ಯಾವ ಆರ್ಥಿಕ ಮತ್ತು ಸೇವಾ ಸೌಲಭ್ಯ ಲಭ್ಯವಾಗುತ್ತದೆ?

|ಡಿ.ಎಚ್. ಮಂಜುನಾಥ್ ಬಳ್ಳಾರಿ

ಕರ್ನಾಟಕ ಸರ್ಕಾರಿ ಸೇವಾ ನಿಯಮಾವಳಿಯ ನಿಯಮ 100 (2) ರಂತೆ ಅಮಾನತಿನಲ್ಲಿರುವ ಸರ್ಕಾರಿ ನೌಕರನು ಶಿಸ್ತಿನ ಅಥವಾ ನ್ಯಾಯಾಲಯದ ವಿಚಾರಣೆ ಪೂರ್ಣಗೊಳ್ಳುವುದಕ್ಕೆ ಮುಂಚೆ ನಿಧನ ಹೊಂದಿದರೆ ಅಂಥವರ ಕುಟುಂಬಕ್ಕೆ ಅಮಾನತಿನ ಮತ್ತು ನಿಧನದ ದಿನಾಂಕಗಳ ನಡುವಿನ ಅವಧಿಯನ್ನು ಎಲ್ಲಾ ಉದ್ದೇಶಕ್ಕಾಗಿ ಕರ್ತವ್ಯವೆಂದು ಪರಿಗಣಿಸಿ ಬಾಕಿ ವೇತನ ಭತ್ಯೆಗಳನ್ನು ನೀಡಬೇಕು. ಅಲ್ಲದೇ ಅವನ ಕುಟುಂಬಕ್ಕೆ ಕುಟುಂಬ ವೇತನ, ಅನುಕಂಪದ ಮೇರೆಗೆ ನೇಮಕ, ಉಪದಾನ ಇತ್ಯಾದಿ ಸೇವಾ ಸೌಲಭ್ಯಗಳು ಲಭ್ಯವಾಗುತ್ತದೆ.
***

13-3-16.
ನಾನು ರೇಷ್ಮೆ ಇಲಾಖೆಯಲ್ಲಿ ರೇಷ್ಮೆ ವಿಸ್ತರಣಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದು, ನನ್ನ ಮೇಲೆ ಖಾಸಗಿ ದೂರ ಬಂದ ಪ್ರಯುಕ್ತ ನನ್ನನ್ನು ಶಿಸ್ತುಕ್ರಮಕ್ಕೆ ಒಳಪಡಿಸಲಾಯಿತು. ಈ ಶಿಸ್ತುಕ್ರಮಕ್ಕೆ ಒಳಪಡಿಸಲು ವಿಚಾರಣಾಕಾಧಿರಿಯಾಗಿ ನನಗಿಂತ ಸೇವಾ ಜ್ಯೇಷ್ಠತೆಯಲ್ಲಿ ಮತ್ತು ಸ್ಥಾನಮಾನದಲ್ಲಿ ಕಿರಿಯರಾದ ಅಧಿಕಾರಿಯನ್ನು ನೇಮಿಸಲಾಯಿತು. ಇದರಿಂದಾಗಿ ನಾನು ಈ ಇಲಾಖಾ ವಿಚಾರಣೆಗೆ ಪಾಲ್ಗೊಳ್ಳಲು ಮುಜುಗರ ಉಂಟಾಗುತ್ತದೆ. ಈ ಬಗ್ಗೆ ನಿಮ್ಮ ಸಲಹೆ ಏನು?

|ಎಚ್. ಹನುಮಂತಯ್ಯ ಚಿಕ್ಕಬಳ್ಳಾಪುರ

ಸಿಸಿಎ ನಿಯಮಾವಳಿಯ ನಿಯಮ 11(5)ರಂತೆ ವಿಚಾರಣಾಧಿಕಾರಿಯಾಗಿ ನೇಮಕವಾಗುವ ಅಧಿಕಾರಿ ಆಬಾಧಿತ ನೌಕರನಿಗಿಂತ ಸ್ಥಾನಮಾನದಲ್ಲಿ ಮತ್ತು ಸೇವಾ ಜ್ಯೇಷ್ಠತೆಯಲ್ಲಿ ಹಿರಿಯನಾಗಿರಬೇಕೆಂದು ಸೂಚಿಸಿದೆ. ಆದುದರಿಂದ ನೀವು ಶಿಸ್ತು ಪ್ರಾಧಿಕಾರಿಗೆ ಈ ಬಗ್ಗೆ ಮನವರಿಕೆ ಮಾಡಿಕೊಟ್ಟು ವಿಚಾರಣಾಧಿಕಾರಿಯನ್ನು ಬದಲಾಯಿಸಲು ಮನವಿ ಸಲ್ಲಿಸಬಹುದು.
***

14-3-16.
ವಿಚಾರಣಾಧಿಕಾರಿಯಾಗಿ ನೇಮಿಸಲು ಶಿಸ್ತುಪ್ರಾಧಿಕಾರಿಯನ್ನು ಕೋರಬಹುದೇ?

ನಾನು ಕಾಲೇಜು ಶಿಕ್ಷಣ ಇಲಾಖೆಯಲ್ಲಿ ದ್ವಿತೀಯ ದರ್ಜೆಯ ಸಹಾಯಕನಾಗಿ ಕಾರ್ಯ ನಿರ್ವಹಿಸುತ್ತಿದ್ದು ಪೂರ್ವಾಗ್ರಹ ಪೀಡಿತರಾಗಿದ್ದ ನನ್ನ ಮೇಲಧಿಕಾರಿಯವರು ಶಿಸ್ತುಪ್ರಾಧಿಕಾರಕ್ಕೆ ನನ್ನ ಮೇಲೆ ಶಿಸ್ತುಕ್ರಮ ಕೈಗೊಳ್ಳಲು ವರದಿಯನ್ನು ಸಲ್ಲಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಶಿಸ್ತುಪ್ರಾಧಿಕಾರದ ಇಲಾಖಾ ಆಯುಕ್ತರು ನನ್ನ ವಿರುದ್ಧ ಇಲಾಖಾ ವಿಚಾರಣೆಯನ್ನು ನಡೆಸಲು ನನ್ನ ಮೇಲಧಿಕಾರಿಯವರನ್ನೇ ವಿಚಾರಣಾಧಿಕಾರಿಯನ್ನಾಗಿ ನಿಯುಕ್ತಿಗೊಳಿಸಿದರು. ಈ ಹಿನ್ನೆಲೆಯಲ್ಲಿ ನಾನು ಬೇರೊಬ್ಬರನ್ನು ವಿಚಾರಣಾಧಿಕಾರಿಯಾಗಿ ನೇಮಿಸಲು ಶಿಸ್ತುಪ್ರಾಧಿಕಾರಿಯನ್ನು ಕೋರಬಹುದೇ?

|ಮೋಹನ್​ಕುಮಾರ್ ಬಳ್ಳಾರಿ

ಸಿಸಿಎ ನಿಯಮಾವಳಿಯಡಿಯಲ್ಲಿ ವಿಚಾರಣಾಧಿಕಾರಿ ಪಕ್ಷಪಾತಿ ಎಂಬುದು ಆಪಾದಿತನ ಅನಿಸಿಕೆಯಾದರೆ ಸಕಾರಣಗಳನ್ನು ಒಳಗೊಂಡ ಮನವಿಯನ್ನು ಶಿಸ್ತುಪ್ರಾಧಿಕಾರಿಗೆ ವಿಚಾರಣೆ ಪ್ರಾರಂಭವಾಗುವುದಕ್ಕೆ ಮೊದಲೇ ಸಲ್ಲಿಸಬೇಕು. ಎಂದು ಮನಕ್​ಲಾಲ್ ಡ/ಠ ಈ. ಖಜ್ಞಿಜಚಡಜಿ. ಪ್ರಕರಣದಲ್ಲಿ ಸರ್ವೇಚ್ಛ ನ್ಯಾಯಾಲಯವು ಸೂಚಿಸಿದೆ. (ಹೆಚ್ಚಿನ ವಿವರಗಳಿಗೆ ಎಂ. ಉಮೇಶ್ ಅವರ ಸಿಸಿಎ ನಿಯಮಾವಳಿ ಸಮಗ್ರ ಕೈಪಿಡಿ ನೋಡಬಹುದಾಗಿದ್ದು ಪುಸ್ತಕಕ್ಕೆ ಮೊಬೈಲ್ ಸಂಖ್ಯೆ 94812 44434ನ್ನು ಸಂರ್ಪಸಬಹುದು)
***

15-3-16.
ಅನಾರೋಗ್ಯದ ನಿಮಿತ್ತ ತುರ್ತು ಚಿಕಿತ್ಸೆಗಾಗಿ ವೈದ್ಯಕೀಯ ರಜೆಯ ಮೇಲೆ ಹೋಗಬೇಕಾದರೆ ರಜೆ ಮಂಜೂರು ಮಾಡುವ ಅಧಿಕಾರಿಯ ಪೂರ್ವಾನುಮತಿ ಪಡೆದುಕೊಂಡೇ ಹೋಗಬೇಕೇ? ಇಲ್ಲೊಬ್ಬ ಅಧಿಕಾರಿ ಈ ರೀತಿ ಲಿಖಿತ ಸೂಚನೆ ನೀಡಿದ್ದಾರೆ. ಇದು ಸರಿಯಾದ ಕ್ರಮವೇ?

|ಎಸ್.ಎನ್. ವರ್ಣೇಕರ್ ಧಾರವಾಡ

ಕರ್ನಾಟಕ ಸರ್ಕಾರಿ ಸೇವಾ ನಿಯಮಾವಳಿಯ ನಿಯಮ 175ರಂತೆ ವೈದ್ಯಕೀಯ ಆಧಾರದ ಮೇಲೆ ರಜೆ ಮಂಜೂರು ಮಾಡಲು ಪೂರ್ವಾನುಮತಿ ಅಗತ್ಯವಿಲ್ಲ. ಆದರೆ ನಿಯಮ 177ರಂತೆ ರಜೆ ಅರ್ಜಿಯನ್ನು ಚಿಕಿತ್ಸೆ ನಂತರ ಸಲ್ಲಿಸಿ ಮಂಜೂರು ಮಾಡಿಸಿಕೊಳ್ಳಬಹುದು. ಅಧಿಕಾರಿ ನೀಡಿರುವ ಸೂಚನೆ ನಿಯಮಬದ್ಧವಾಗಿರುವುದಿಲ್ಲ.
***

16-3-16.
ನಾನು ಪ್ರಾಥಮಿಕ ಶಾಲಾ ಶಿಕ್ಷಕಿ. ಎರಡೂ ಮೂತ್ರಪಿಂಡಗಳ ವೈಫಲ್ಯದಿಂದ ಬಳಲುತ್ತಿದ್ದು ವಾರಕ್ಕೆರಡು ಬಾರಿ ಡಯಾಲಿಸೀಸ್ ಚಿಕಿತ್ಸೆ ಪಡೆಯುತ್ತಿದ್ದೇನೆ. ಸರ್ಕಾರಿ ನೌಕರರಿಗಿರುವ ಜ್ಯೋತಿ ಸಂಜೀವಿನಿ ಯೋಜನೆಯಡಿಯಲ್ಲಿ ಡಯಾಲಿಸಿಸ್ ಚಿಕಿತ್ಸೆ ಪಡೆಯಬಹುದೇ?

|ಎಸ್. ರಶ್ಮಿ ಬೆಂಗಳೂರು

ಜ್ಯೋತಿ ಸಂಜೀವಿನಿ ಯೋಜನೆಯ ಅನುಷ್ಠಾನದ ದಿನಾಂಕ 18.8.2014ರ ಸರ್ಕಾರಿ ಆದೇಶದಲ್ಲಿ ಮಾರಣಾಂತಿಕ ಕಾಯಿಲೆಗಳಾದ ಕ್ಯಾನ್ಸರ್, ಮೂತ್ರಪಿಂಡ ಸಮಸ್ಯೆ ಮುಂತಾದವುಗಳಿಗೆ ಚಿಕಿತ್ಸೆ ಪಡೆಯಲು ನಗದು ರಹಿತ ವೈದ್ಯಕೀಯ ಸೌಲಭ್ಯ ಕಲ್ಪಿಸಲಾಗಿದೆ. ಹೀಗಿರುವುದರಿಂದ ನೀವು ಈ ಯೋಜನೆಯಡಿಯಲ್ಲಿ ಚಿಕಿತ್ಸೆ ಪಡೆದು ವೈದ್ಯಕೀಯ ಮರು ವೆಚ್ಚಕ್ಕೆ ಕೋರಬಹುದು.
***

17-3-16.
ನಾನು ಮಂಗಳೂರು ಮಹಾನಗರ ಪಾಲಿಕೆಯಲ್ಲಿ ಚಾಲಕನಾಗಿ 1982ರಿಂದ ಕರ್ತವ್ಯ ನಿರ್ವಹಿಸುತ್ತಿದ್ದೇನೆ. 2008ರಲ್ಲಿ ನನಗೆ ಹಿರಿಯ ಚಾಲಕರ ಹುದ್ದೆಗೆ ಪದೋನ್ನತಿ ನೀಡಿದ್ದು ನಾನು ಚಾಲಕನಾಗಿಯೇ ಕಾರ್ಯ ನಿರ್ವಹಿಸುತ್ತಿದ್ದೇನೆ. ಹೀಗಾಗಿ ನಾನು 20, 25 ಮತ್ತು 30 ವರ್ಷಗಳ ಹೆಚ್ಚುವರಿ ವೇತನ ಬಡ್ತಿಯನ್ನು ಕೋರಬಹುದೇ?

|ಕೃಷ್ಣ ಮಂಗಳೂರು

ನೀವು 2008ರಲ್ಲಿ ಹಿರಿಯ ಚಾಲಕರ ಹುದ್ದೆಗೆ ಪದೋನ್ನತಿ ಹೊಂದಿರುವು ದರಿಂದ ದಿನಾಂಕ 9.5.2002ರ ಸರ್ಕಾರಿ ಆದೇಶದಂತೆ 20 ವರ್ಷಗಳ ಹೆಚ್ಚುವರಿ ವೇತನ ಬಡ್ತಿಯನ್ನು ಹಾಗೂ ದಿನಾಂಕ 14.6.2012ರ ಸರ್ಕಾರಿ ಆದೇಶಗಳಂತೆ 25 ವರ್ಷಗಳ ಹೆಚ್ಚುವರಿ ವೇತನ ಬಡ್ತಿಯನ್ನು ಪಡೆಯಬಹುದು. ಆದರೆ ನೀವು 25 ವರ್ಷಗಳ ನಂತರ ಹಿರಿಯ ಚಾಲಕರಾಗಿ ಪದೋನ್ನತಿ ಹೊಂದಿರುವುದರಿಂದ 30 ವರ್ಷಗಳ ಹೆಚ್ಚುವರಿ ವೇತನ ಬಡ್ತಿಯನ್ನು ಪಡೆಯಲು ಅವಕಾಶವಾಗುವುದಿಲ್ಲ.
***

18-3-16
ವೇತನ ನಿಗದಿಗೆ ಪರಿಗಣಿಸಲಾಗುತ್ತದೆಯೇ?
ನಾನು ನ್ಯಾಯಾಂಗ ಇಲಾಖೆಯಲ್ಲಿ 2008ರಿಂದ ಪ್ರಥಮ ದರ್ಜೆ ಸಹಾಯಕಳಾಗಿ ಕರ್ತವ್ಯ ನಿರ್ವಹಿಸುತ್ತಿದ್ದೇನೆ. ನನಗೆ ಸಿಸಿಎ ನಿಯಮಾವಳಿ ರೀತ್ಯ ಆರೋಪ ಹೊರಿಸಿ 2015ರಲ್ಲಿ ಸೇವೆಯಿಂದ ತೆಗೆದುಹಾಕಿದ್ದಾರೆ. ನನಗೀಗ 32 ವರ್ಷ ವಯಸ್ಸಾಗಿದ್ದು ಪುನಃ ಯಾವುದಾದರೂ ಸರ್ಕಾರಿ ಹುದ್ದೆಗೆ ಅರ್ಜಿ ಸಲ್ಲಿಸಿ ಆಯ್ಕೆಯಾಗಬಹುದೇ? ಆಯ್ಕೆಯಾದರೆ ನನ್ನ ಹಿಂದಿನ ಸೇವೆಯನ್ನು ರಜೆ , ಪಿಂಚಣಿ, ಜ್ಯೇಷ್ಠತೆ ಮತ್ತು ವೇತನ ನಿಗದಿಗೆ ಪರಿಗಣಿಸಲಾಗುತ್ತದೆಯೇ?

ಸಿಸಿಎ ನಿಯಮಾವಳಿಯ ನಿಯಮ 8 (ಡಜಿಜಿ) ರಡಿಯಲ್ಲಿ ನಿಮ್ಮನ್ನು ಸೇವೆಯಿಂದ ತೆಗೆದುಹಾಕಲು ನಿಯಮ 11ರಡಿಯಲ್ಲಿನ ಕಾರ್ಯವಿಧಾನವನ್ನು ಅನುಸರಿಸಬೇಕು. ಹೀಗೆ ತೆಗೆದು ಹಾಕಲಾಗಿರುವುದರಿಂದ ನೀವು ಮತ್ತೆ ವಯೋಮಿತಿ ಇದ್ದರೆ ಸರ್ಕಾರಿ ನೌಕರಿಗೆ ಅರ್ಜಿ ಸಲ್ಲಿಸಿ ಆಯ್ಕೆ ಆಗಬಹುದು. ಆದರೆ ನಿಮ್ಮ ಹಿಂದಿನ ಸೇವೆಯನ್ನು ಮುಟ್ಟುಗೋಲು ಹಾಕಿಕೊಳ್ಳುವುದರಿಂದ ನಿಮಗೆ ವೇತನ ನಿಗದಿ, ರಜೆ, ಮತ್ತು ಜ್ಯೇಷ್ಠತೆಯಾಗಲಿ ಲಭ್ಯವಾಗುವುದಿಲ್ಲ.
***

19-3-16.
ಎಷ್ಟು ಸೇರಿಕೆ ಕಾಲ ಲಭ್ಯವಾಗುತ್ತದೆ?
ನಾನು ತೋಟಗಾರಿಕೆ ಇಲಾಖೆಯಲ್ಲಿ ತೋಟಗಾರಿಕೆ ಸಹಾಯಕನಾಗಿ ಕಾರ್ಯ ನಿರ್ವಹಿಸುತ್ತಿದ್ದು ದಿನಾಂಕ 20.6.2015ರಂದು ನನ್ನನ್ನು ಕೆಲವೊಂದು ಆರೋಪಗಳ ಹಿನ್ನೆಲೆಯಲ್ಲಿ ಅಮಾನತಿನಲ್ಲಿಡಲಾಯಿತು. ಅದಾಗಿ 6 ತಿಂಗಳಾದ ಬಳಿಕ ಮರು ನೇಮಕ ಮಾಡಿಕೊಳ್ಳಲು ಮನವಿ ಮಾಡಿದಾಗ ವಿಚಾರಣೆ ಬಾಕಿ ಇಟ್ಟು ಬೆಂಗಳೂರಿನಿಂದ ಮಂಗಳೂರಿಗೆ ಸ್ಥಳ ನಿಯುಕ್ತಿಗೊಳಿಸಿ ನೇಮಿಸಲಾಯಿತು. ಅಲ್ಲದೆ ನನ್ನನ್ನು ದಿನಾಂಕ 5.3.2016ರಂದು ಅಪರಾಹ್ನ ಕಾರ್ಯ ನಿಯುಕ್ತಿಗೊಳಿಸಲಾಯಿತು. ಅಮಾನತಿನಲ್ಲಿರುವ ನನಗೆ ಎಷ್ಟು ಸೇರಿಕೆ ಕಾಲ ಲಭ್ಯವಾಗುತ್ತದೆ?

|ಶಿವಮೂರ್ತಿ ಬೆಂಗಳೂರು

ಕರ್ನಾಟಕ ಸರ್ಕಾರಿ ಸೇವಾ ನಿಯಮಾವಳಿಯ ನಿಯಮ 76 (9) ರಂತೆ ಅಮಾನತಿನಲ್ಲಿದ್ದ ಸರ್ಕಾರಿ ನೌಕರರನ್ನು ಮರು ನೇಮಕ ಮಾಡಿ ಅವನು ಕೆಲಸ ಮಾಡುತ್ತಿದ್ದ ಸ್ಥಳವನ್ನು ಬಿಟ್ಟು ಬೇರೆ ಸ್ಥಳಕ್ಕೆ ನಿಯೋಜಿಸಿದಾಗ ಅವನು ನೇಮಕಾತಿ ಆದೇಶವನ್ನು ಸ್ವೀಕರಿಸಿದ ದಿನಾಂಕದಿಂದ 10 ದಿನಗಳ ಕಾಲ ಸೇರಿಕೆ ಕಾಲವನ್ನು ಪಡೆಯುತ್ತಾನೆ.
***

20-3-16.
ಪ್ರಾಥಮಿಕ ಶಾಲಾ ಶಿಕ್ಷಕಿಯಾಗಿ ಸೇವೆ ಸಲ್ಲಿಸಿ ನೇರ ನೇಮಕಾತಿ ಮೂಲಕ ಪ್ರೌಢಶಾಲಾ ಮುಖ್ಯೋಪಾಧ್ಯಾಯರ ಹುದ್ದೆಗೆ ನೇಮಕಗೊಂಡಿದ್ದೇನೆ. ಪ್ರಾಥಮಿಕ ಶಾಲಾ ಶಿಕ್ಷಕಿಯಾಗಿದ್ದಾಗ ಪಡೆಯುತ್ತಿದ್ದ ಕುಟುಂಬ ಕಲ್ಯಾಣ ವಿಶೇಷ ಭತ್ಯೆಯನ್ನು ಪಡೆಯಬಹುದೇ?

|ಶಿವಲೀಲಾ ಎನ್.ಕೆ. ಧಾರವಾಡ

ದಿನಾಂಕ 1.10.1985ರ ಸರ್ಕಾರಿ ಆದೇಶದಂತೆ ಸರ್ಕಾರಿ ನೌಕರರು ಪಡೆಯುತ್ತಿರುವ ವಿಶೇಷ ಭತ್ಯೆಗಳು ಅವರು ಮೇಲಿನ ಹುದ್ದೆಗೆ ನೇಮಕವಾದರೂ ಮುಂದುವರಿಯುತ್ತವೆ.
***

21-3-16.
ನಾನು ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದು ಕಳೆದ ತಿಂಗಳು ನನ್ನ ವ್ಯಾಪ್ತಿಯಲ್ಲಿ ಬರುವ ಸರ್ಕಾರಿ ಪ್ರಾಥಮಿಕ ಶಾಲೆಗೆ ಕೆಲವೊಂದು ದೂರಿನ ಹಿನ್ನೆಲೆಯಲ್ಲಿ ಪರಿವೀಕ್ಷಣೆಗೆ ತೆರಳಿದ್ದೆ. ಆದರೆ ಶಾಲೆಯ ಶಿಕ್ಷಕರು ಮತ್ತು ಮುಖ್ಯೋಪಾಧ್ಯಾಯರು ನನ್ನ ಭೇಟಿಯನ್ನು ಆಕ್ಷೇಪಿಸಿದರು. ನಾನು ಈ ರೀತಿ ಭೇಟಿ ನೀಡುವುದು ಸರಿಯಾದ ಕ್ರಮವಲ್ಲವೇ? ಇದು ನನ್ನ ಕರ್ತವ್ಯವಲ್ಲವೇ?

| ಶಿವಶಂಕರ್ ಕಡೂರು, ಚಿಕ್ಕಮಗಳೂರು

ದಿನಾಂಕ 3.3.2014ರ ಸರ್ಕಾರದ ಆದೇಶ ಸಂಖ್ಯೆ ಗ್ರಾಅಪ 313, ಗ್ರಾಪಂಕ 2013ರಂತೆ ಪಂಚಾಯ್ತಿ ಅಭಿವೃದ್ಧಿ ಅಧಿಕಾರಿಗಳು ನಿರ್ವಹಿಸಬೇಕಾದ ಕರ್ತವ್ಯಗಳ ಬಗ್ಗೆ ಸ್ಪಷ್ಟವಾಗಿ ಸರ್ಕಾರವು ಕಾರ್ಯ ಹಂಚಿಕೆ ಮಾಡಿದೆ. ಅಲ್ಲದೇ ನೀವು ನಿಮ್ಮ ವ್ಯಾಪ್ತಿಯಲ್ಲಿರುವ ಸರ್ಕಾರಿ ಶಾಲೆಗೆ ಸಂಬಂಧಿಸಿ ಯಾವುದೇ ದೂರು ಬಂದರೆ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ವರದಿಯನ್ನು ಸಲ್ಲಿಸಬೇಕೇ ಹೊರತು ನೇರವಾಗಿ ಪರಿವೀಕ್ಷಣೆ ಮಾಡುವುದು ಸರಿಯಾದ ಕ್ರಮವಲ್ಲ. ಇದು ನಿಮ್ಮ ಕರ್ತವ್ಯವೂ ಅಲ್ಲ.
***

22-3-16.
ನನಗೆ ಪರಿಚಿತರಿರುವ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕಿ 30-6-2016 ರಂದು ವಯೋನಿವೃತ್ತಿ ಹೊಂದಲಿದ್ದಾರೆ. ಅವರು ಈ ಅವಧಿಯೊಳಗೆ ಎಷ್ಟು ಸಾಂರ್ದಭಿಕ ರಜೆ ತೆಗೆದುಕೊಳ್ಳಬಹುದು ?

ವಾಣಿ ಪಾಟೀಲ ಬೆಳಗಾವಿ
ಕರ್ನಾಟಕ ಸರ್ಕಾರಿ ಸೇವಾ ನಿಯಮಾವಳಿಯ ಅನುಬಂಧ ಬಿ, ನಿಯಮ 2ರಲ್ಲಿ ಒಬ್ಬ ಸರ್ಕಾರಿ ನೌಕರನಿಗೆ ಕ್ಯಾಲೆಂಡರ್ ವರ್ಷದಲ್ಲಿ 15 ದಿನಗಳ ಸಾಂರ್ದಭಿಕ ರಜೆ ಪಡೆಯಲು ಅವಕಾಶ ಕಲ್ಪಿಸಲಾಗಿದೆ. ಈ ಉಪನ್ಯಾಸಕಿ ಜೂನ್ 30ರೊಳಗೆ 15 ದಿನಗಳ ಸಾಂರ್ದಭಿಕ ರಜೆ ಬಳಸಿಕೊಳ್ಳಬಹುದು.
***

23-3-16.
ನನ್ನ ತಮ್ಮ ಕಂದಾಯ ಇಲಾಖೆಯಲ್ಲಿ ಶಿರಸ್ತೇದಾರನಾಗಿ ಕಾರ್ಯ ನಿರ್ವಹಿಸುತ್ತಿದ್ದು, ಪಾರ್ಶ್ವವಾಯುವಿಗೆ ತುತ್ತಾಗಿ ಸರ್ಕಾರಿ ಸೇವೆಗೆ ಅನರ್ಹನಾಗಿರುತ್ತಾನೆ. ಆತನಿಗೆ ನಿವೃತ್ತಿ ವೇತನ ಬರುತ್ತದೆಯೇ? ಅವನ ಮಕ್ಕಳಿಗೆ ಅನುಕಂಪದ ಆಧಾರದ ಮೇಲೆ ಉದ್ಯೋಗ ಸಿಗುವುದೇ? ನಿವೃತ್ತಿ ವೇತನ ಬೇಡ, ನೌಕರಿ ಬೇಕೆಂದು ಛಾಪಾ ಕಾಗದದಲ್ಲಿ ಬರೆದುಕೊಡಬೇಕೇ

ಜಿ. ತಿಪ್ಪರಂಗಯ್ಯ ಕನ್ಮೆಡಿ, ತುಮಕೂರು

ನಿಮ್ಮ ತಮ್ಮ ಕರ್ನಾಟಕ ಸರ್ಕಾರಿ ಸೇವಾ ನಿಯಮಾವಳಿ ರೀತ್ಯ ವೈದ್ಯಕೀಯ ಆಧಾರದ ಮೇಲೆ ನಿವೃತ್ತಿ ಪಡೆದರೆ ಪಿಂಚಣಿ ಸೌಲಭ್ಯ ದೊರಕುವುದಲ್ಲದೆ, 1996ರ ಕರ್ನಾಟಕ ಸರ್ಕಾರಿ ಸೇವಾ (ಅನುಕಂಪದ ಮೇರೆಗೆ ನೇಮಕ) ನಿಯಮಾವಳಿಯಲ್ಲಿ ಅವರ ಮಕ್ಕಳಿಗೆ ನೌಕರಿಯೂ ದೊರಕುತ್ತದೆ. ನಿವೃತ್ತಿ ವೇತನ ಬೇಡ, ನೌಕರಿ ಕೊಡಿ ಎಂದು ಛಾಪಾ ಕಾಗದದಲ್ಲಿ ಬರೆದುಕೊಡುವ ಅಗತ್ಯವಿಲ್ಲ. ಅಂಥ ಯಾವ ನಿಯಮವೂ ಇಲ್ಲ.
***

24-3-16.
ನಾನು 31.5.2010 ರಂದು ಸರಕಾರಿ ಪ್ರಾಥಮಿಕ ಶಾಲಾ ಶಿಕ್ಷಕಿಯಾಗಿ ಸೇವೆಗೆ ಸೇರಿದ್ದು, ಪ್ರಸ್ತುತ ಪ್ರೌಢಶಾಲಾ ಸಹ ಶಿಕ್ಷಕರ ಆಯ್ಕೆ ಪಟ್ಟಿಯಲ್ಲಿ ಸೇರಿರುತ್ತೇನೆ. ಪ್ರೌಢಶಾಲೆಗೆ ಸಹಶಿಕ್ಷಕಿಯಾಗಿ ಸೇರಿದ ಮೇಲೆ ಪುನಃ ಪ್ರೊಬೇಷನರಿ ಅವಧಿ ಮುಗಿಸಬೇಕೇ? ಪ್ರೌಢಶಾಲೆಯಿಂದ ಪದವಿಪೂರ್ವ ಕಾಲೇಜಿಗೆ ಬಡ್ತಿ ಹೊಂದುವಾಗ ಪ್ರಾಥಮಿಕ ಶಾಲಾ ಶಿಕ್ಷಕಿಯಾಗಿ ಕಾರ್ಯ ನಿರ್ವಹಿಸಿದ ಸೇವಾ ಅವಧಿಯನ್ನು ಪರಿಗಣಿಸುತ್ತಾರೆಯೇ?
| ಸುಮತಿ, ಎಂ.ಕೆ. ಪುತ್ತೂರು, ದ.ಕ. ಜಿಲ್ಲೆ
ಕರ್ನಾಟಕ ಸರ್ಕಾರಿ ಸೇವಾ (ಪ್ರೊಬೇಷನ್) ನಿಯಮಾವಳಿ 1977ರ ರೀತ್ಯಾ ನೀವು ಪ್ರಾಥಮಿಕ ಶಾಲಾ ಶಿಕ್ಷಕಿಯಾಗಿ ಸಲ್ಲಿಸಿದ ಸೇವೆಯು ಬೇರೆ ವೃಂದವಾಗಿದ್ದು ಪ್ರೌಢಶಾಲೆಗೆ ಸಹ ಶಿಕ್ಷಕಿಯಾಗಿ ಸೇರಿದ ಮೇಲೆ ಪುನಃ 2 ವರ್ಷಗಳ ಕಾಲ ಪ್ರೊಬೇಷನ್ ಅವಧಿಯನ್ನು ಪೂರೈಸಬೇಕಾಗುತ್ತದೆ. ಪ್ರೌಢಶಾಲೆಯಿಂದ ಪದವಿ ಪೂರ್ವ ಕಾಲೇಜಿಗೆ ಪದೋನ್ನತಿ ಹೊಂದುವಾಗ ನೀವು ಪ್ರಾಥಮಿಕ ಶಾಲೆಯಲ್ಲಿ ನಿರ್ವಹಿಸಿದ ಸೇವಾವಧಿಯನ್ನು ಜ್ಯೇಷ್ಠತೆಯ ದೃಷ್ಟಿಯಿಂದ ಪರಿಗಣಿಸಲಾಗುವುದಿಲ್ಲ.
***

25-3-16.
ನಾನು ಪ್ರಾಥಮಿಕ ಶಾಲಾ ಶಿಕ್ಷಕಿಯಾಗಿ ಕಾರ್ಯ ನಿರ್ವಹಿಸುತ್ತಿದ್ದೇನೆ. ನನ್ನ ತಂದೆ ತಾಯಿಗೆ ನಾನು ಒಬ್ಬಳೇ ಮಗಳಾಗಿದ್ದು, ಅವರಿಗೆ ಆರೋಗ್ಯ ಸಮಸ್ಯೆ ಉಂಟಾದಲ್ಲಿ ನಾನು ಸರ್ಕಾರದಿಂದ ವೈದ್ಯಕೀಯ ಪರಿಹಾರ ಭತ್ಯೆ ಪಡೆಯಬಹುದೇ?

ಮಹಾಲಕ್ಷ್ಮೀ ಶಿಡ್ಲಘಟ್ಟ ತುಮಕೂರು.

ಕರ್ನಾಟಕ ಸರ್ಕಾರಿ ನೌಕರರ (ವೈದ್ಯಕೀಯ ಚಿಕಿತ್ಸೆ ) ನಿಯಮಗಳು 1963ರ ನಿಯಮ 2ರಲ್ಲಿ ಸರ್ಕಾರಿ ನೌಕರನ/ನೌಕರಳ ತಂದೆ, ತಾಯಿ ಸಾಮಾನ್ಯವಾಗಿ ಅವರೊಂದಿಗೆ ವಾಸಿಸುತ್ತಿದ್ದರೆ ಮತ್ತು ಅವರ ಮಾಸಿಕ ಆದಾಯವು 6,000ಕ್ಕಿಂತ ಹೆಚ್ಚು ಮೀರದಿದ್ದರೆ ಈ ನಿಯಮಾವಳಿ ರೀತ್ಯ ವೈದ್ಯಕೀಯ ಚಿಕಿತ್ಸಾ ಪರಿಹಾರ ಭತ್ಯವನ್ನು ಪಡೆಯಬಹುದು.
***

26-3-16.
ನಮ್ಮ ತಂದೆಯವರು ಸರ್ಕಾರಿ ನೌಕರಿಯಲ್ಲಿರುವಾಗಲೇ 15-1-2016 ರಂದು ನಿಧನ ಹೊಂದಿರುತ್ತಾರೆ. ನಮ್ಮ ತಂದೆಯವರಿಗೆ ಗಂಡುಮಕ್ಕಳಿಲ್ಲ, ವಿವಾಹಿತೆಯಾದ ನಾನೊಬ್ಬಳೇ ಹೆಣ್ಣು ಮಗಳು. ನಾನು ಅನುಕಂಪದ ಆಧಾರದ ಮೇಲೆ ನೌಕರಿ ಪಡೆಯಲು ಸಾಧ್ಯವಿದೆಯೇ?

| ಗಿರಿಜಾ ಎಂ.ಎಸ್. ಚಿಕ್ಕಮಗಳೂರು

ಕರ್ನಾಟಕ ಸಿವಿಲ್ ಸೇವೆಗಳ (ಅನುಕಂಪದ ಆಧಾರದ ಮೇಲೆ ನೇಮಕಾತಿ) ನಿಯಮಗಳು 1996ರ ನಿಯಮ 3(ಸಿ)ರಡಿಯಲ್ಲಿ ಅವಿವಾಹಿತ ಮಗಳು ಮಾತ್ರ ಅನುಕಂಪದ ಮೇಲೆ ಸರ್ಕಾರಿ ನೌಕರಿ ಪಡೆಯಲು ಅರ್ಹಳಾಗುತ್ತಾಳೆ. ನೀವು ವಿವಾಹಿತರಾಗಿರುವುದರಿಂದ ನಿಮಗೆ ಈ ಅನುಕಂಪದ ನೇಮಕಾತಿ ಲಭ್ಯವಾಗುವುದಿಲ್ಲ.
***

27-3-16.

ಸರ್ಕಾರಿ ಹುದ್ದೆಗೆ ಅರ್ಜಿ ಸಲ್ಲಿಸಬಯಸಿದರೆ, ವಯೋಮಿತಿಯಲ್ಲಿ ಎಷ್ಟು ವರ್ಷಗಳ ಕಾಲ ಸಡಿಲಿಕೆ ನೀಡಲಾಗುತ್ತದೆ?

ನಾನು ಪೊಲೀಸ್ ಇಲಾಖೆಯಲ್ಲಿ 13 ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದು ನನಗೀಗ 40 ವರ್ಷವಾಗಿರುತ್ತದೆ. ನಾನೀಗ ಬೇರೆ ಸರ್ಕಾರಿ ಹುದ್ದೆಗೆ ಅರ್ಜಿ ಸಲ್ಲಿಸಬಯಸಿದರೆ, ವಯೋಮಿತಿಯಲ್ಲಿ ಎಷ್ಟು ವರ್ಷಗಳ ಕಾಲ ಸಡಿಲಿಕೆ ನೀಡಲಾಗುತ್ತದೆ?

| ಬೈರೇಗೌಡ ಬೆಂಗಳೂರು

ಕರ್ನಾಟಕ ಸಿವಿಲ್ ಸೇವಾ (ಸಾಮಾನ್ಯ ನೌಕರಿ ಭರ್ತಿ) ನಿಯಮಗಳು 1977ರ ನಿಯಮ 6 (3) (ಡಿ) ರಡಿಯಲ್ಲಿ ಸರ್ಕಾರಿ ಸೇವೆ ಸಲ್ಲಿಸಿದ ಅಭ್ಯರ್ಥಿಯು ಬೇರೊಂದು ಇಲಾಖೆಗೆ ಅಥವಾ ಹುದ್ದೆಗೆ ಅರ್ಜಿ ಸಲ್ಲಿಸಬೇಕಾದರೆ ಅವನು ಎಷ್ಟು ವರ್ಷ ಸೇವೆ ಸಲ್ಲಿಸಿರುತ್ತಾನೋ ಅಷ್ಟು ವರ್ಷ ಅಥವಾ ಗರಿಷ್ಠ 10 ವರ್ಷಗಳವರೆಗೆ ವಯೋಮಿತಿಯ ಗರಿಷ್ಠ ಮಿತಿಯಲ್ಲಿ ಸಡಿಲಿಸಲಾಗುವುದು. ಆದ ಕಾರಣ 40 ವರ್ಷವಾಗಿರುವುದರಿಂದ ನೀವು ಬೇರೊಂದು ಹುದ್ದೆಗೆ ಇಲಾಖೆಯ ಅನುಮತಿ ಪಡೆದು ಅರ್ಜಿಯನ್ನು ಸಲ್ಲಿಸಬಹುದು.
***

28-3-16.
ವೇತನ ಬಡ್ತಿಗೆ ಅರ್ಹನೇ? ಅಥವಾ ಇಲ್ಲವೇ? ಸೂಕ್ತ ಪರಿಹಾರ ಸೂಚಿಸಿ

ನಾನು ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಮುಖ್ಯ ಶಿಕ್ಷಕನಾಗಿ ಬಡ್ತಿ ಪಡೆದು ಕಾರಣಾಂತರದಿಂದ ಹಿಂಬಡ್ತಿ ಪಡೆದಿರುತ್ತೇನೆ. ಈಗ ನಾನು 28 ವರ್ಷಗಳ ಕಾಲ ಸೇವೆ ಸಲ್ಲಿಸಿದ್ದು 25 ಮತ್ತು 30 ವರ್ಷಗಳ ಹೆಚ್ಚುವರಿ ವೇತನ ಬಡ್ತಿಗೆ ಅರ್ಹನೇ? ಅಥವಾ ಇಲ್ಲವೇ? ಸೂಕ್ತ ಪರಿಹಾರ ಸೂಚಿಸಿ.

|ಜಿ. ಅಶ್ವತ್ಥಪ್ಪ ಬಾಗೇಪಲ್ಲಿ

ದಿನಾಂಕ 14.6.2012ರ ಸರ್ಕಾರಿ ಆದೇಶದ (ಸಂಖ್ಯೆ ಎಫ್​ಡಿ 12, ಎಸ್​ಆರ್​ಪಿ 2012 (ಐಐಐ) ಪ್ರಕಾರ ಸ್ವ ಇಚ್ಛೆಯಿಂದ ತಮ್ಮ ಪದೋನ್ನತಿಯನ್ನು ಬಿಟ್ಟುಕೊಟ್ಟ ಸರ್ಕಾರಿ ನೌಕರರಿಗೆ ಈ 25 ಮತ್ತು 30 ವರ್ಷಗಳ ಹೆಚ್ಚುವರಿ ವೇತನ ಬಡ್ತಿಯನ್ನು ನೀಡಬಾರದೆಂದು ಸೂಚಿಸಲಾಗಿದೆ. ಅಲ್ಲದೇ ನೀವೇ ಸ್ವತಃ ಪದೋನ್ನತಿಯನ್ನು ಪಡೆದು ತದನಂತರ ಸ್ವಇಚ್ಛೆಯಿಂದ ಹಿಂಬಡ್ತಿ ಹೊಂದಿರುವುದರಿಂದ ನಿಮಗೆ ಈ 25 ಮತ್ತು 30 ವರ್ಷಗಳ ಹೆಚ್ಚುವರಿ ವೇತನ ಬಡ್ತಿ ಲಭ್ಯವಾಗುವುದಿಲ್ಲ.
***

29-3-16.
ವೇತನ ಬಡ್ತಿಗೆ ಅರ್ಹನೇ? ಅಥವಾ ಇಲ್ಲವೇ? ಸೂಕ್ತ ಪರಿಹಾರ ಸೂಚಿಸಿ

ನಾನು ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಮುಖ್ಯ ಶಿಕ್ಷಕನಾಗಿ ಬಡ್ತಿ ಪಡೆದು ಕಾರಣಾಂತರದಿಂದ ಹಿಂಬಡ್ತಿ ಪಡೆದಿರುತ್ತೇನೆ. ಈಗ ನಾನು 28 ವರ್ಷಗಳ ಕಾಲ ಸೇವೆ ಸಲ್ಲಿಸಿದ್ದು 25 ಮತ್ತು 30 ವರ್ಷಗಳ ಹೆಚ್ಚುವರಿ ವೇತನ ಬಡ್ತಿಗೆ ಅರ್ಹನೇ? ಅಥವಾ ಇಲ್ಲವೇ? ಸೂಕ್ತ ಪರಿಹಾರ ಸೂಚಿಸಿ.

|ಜಿ. ಅಶ್ವತ್ಥಪ್ಪ ಬಾಗೇಪಲ್ಲಿ

ದಿನಾಂಕ 14.6.2012ರ ಸರ್ಕಾರಿ ಆದೇಶದ (ಸಂಖ್ಯೆ ಎಫ್​ಡಿ 12, ಎಸ್​ಆರ್​ಪಿ 2012 (ಐಐಐ) ಪ್ರಕಾರ ಸ್ವ ಇಚ್ಛೆಯಿಂದ ತಮ್ಮ ಪದೋನ್ನತಿಯನ್ನು ಬಿಟ್ಟುಕೊಟ್ಟ ಸರ್ಕಾರಿ ನೌಕರರಿಗೆ ಈ 25 ಮತ್ತು 30 ವರ್ಷಗಳ ಹೆಚ್ಚುವರಿ ವೇತನ ಬಡ್ತಿಯನ್ನು ನೀಡಬಾರದೆಂದು ಸೂಚಿಸಲಾಗಿದೆ. ಅಲ್ಲದೇ ನೀವೇ ಸ್ವತಃ ಪದೋನ್ನತಿಯನ್ನು ಪಡೆದು ತದನಂತರ ಸ್ವಇಚ್ಛೆಯಿಂದ ಹಿಂಬಡ್ತಿ ಹೊಂದಿರುವುದರಿಂದ ನಿಮಗೆ ಈ 25 ಮತ್ತು 30 ವರ್ಷಗಳ ಹೆಚ್ಚುವರಿ ವೇತನ ಬಡ್ತಿ ಲಭ್ಯವಾಗುವುದಿಲ್ಲ.
***

30-3-16.
ವಾಹನಭತ್ಯೆ ಯಾವ ನಿಯಮದಡಿಯಲ್ಲಿ ನೀಡಬೇಕಾಗಿರುತ್ತದೆ ?
ಸರ್ಕಾರಿ ಆದೇಶ ಸಂಖ್ಯೆ ಎಫ್​ಡಿ 12, ಎಸ್​ಆರ್​ಪಿ 2012, ದಿನಾಂಕ 14.6.2012ರನ್ವಯ ಡಿ ದರ್ಜೆ ನೌಕರರಿಗೆ ಮಾಸಿಕವಾಗಿ ರೂ. 200 ವಾಹನಭತ್ಯೆ ನೀಡುತ್ತದೆ. ಕಚೇರಿಯ ಎಲ್ಲಾ ಡಿ ದರ್ಜೆ ನೌಕರರು ವಾಹನಭತ್ಯೆ ಮಂಜೂರಾತಿಗಾಗಿ ಅರ್ಜಿ ಸಲ್ಲಿಸಿದ್ದಾರೆ. ವಾಹನಭತ್ಯೆ ಯಾವ ನಿಯಮದಡಿಯಲ್ಲಿ ನೀಡಬೇಕಾಗಿರುತ್ತದೆ ಮತ್ತು ಷರತ್ತುಗಳೇನು? ದಯವಿಟ್ಟು ಮಾಹಿತಿ ನೀಡಿ.

| ಎಚ್.ಎಂ. ಮಂಜುನಾಥ್ ತಿಪಟೂರು

ಕರ್ನಾಟಕ ಸರ್ಕಾರಿ ಸೇವಾ ನಿಯಮಾವಳಿಯ ನಿಯಮ 496ರಂತೆ ಡಿ ದರ್ಜೆ ನೌಕರನು ಕಚೇರಿಯ ಹೊರಗೆ ಕಾರ್ಯನಿರ್ವಹಿಸಬೇಕಾಗಿ ಬಂದು ಅವನು 16 ಕಿ.ಮೀ.ಗಿಂತ ದೂರ ಕ್ರಮಿಸಬೇಕಾದರೆ ಈ ವಾಹನ ಭತ್ಯೆ ನೀಡಬಹುದು. (ಸೈಕಲ್ ಆರ್ಡರ್ಲಿ) ನಿಯಮ 497ರಡಿ ಈ ವಾಹನ ಭತ್ಯೆ ಮಂಜೂರು ಮಾಡುವ ಷರತ್ತುಗಳನ್ನು ನೀಡಿದ್ದು ಅದರಂತೆ ಕಚೇರಿಯ ಎಲ್ಲ ಡಿ ದರ್ಜೆ ನೌಕರರಿಗೂ ಈ ಭತ್ಯೆಯನ್ನು ನೀಡುವಂತಿಲ್ಲ.
***

31-3-16.
ನನ್ನ ಗಂಡ ದಿನಾಂಕ 27.6.2012ರಂದು ಗ್ರೇಡ್-2 ಪಂಚಾಯ್ತಿ ಕಾರ್ಯದರ್ಶಿ ವೃಂದಕ್ಕೆ ನೇಮಕಗೊಂಡಿದ್ದು, ದಿನಾಂಕ 21.12.2014ರಂದು ಮೃತಪಟ್ಟಿರುತ್ತಾರೆ.ಪ್ರೊಬೇಷನರಿ ಅವಧಿ ಪೂರ್ಣಗೊಳ್ಳುವ ಮೊದಲೇ ಮೃತರಾದ ಕಾರಣ ಅವರನ್ನು ಸರ್ಕಾರಿ ನೌಕರರೆಂದು ಪರಿಗಣೆಸಲು ಅವಕಾಶವಿಲ್ಲವೆಂದು ರಾಯಚೂರು ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ನನಗೆ ಅನುಕಂಪದ ಮೇರೆಗೆ ಉದ್ಯೋಗ ಕೊಡಲು ತಿರಸ್ಕರಿಸಿದ್ದಾರೆ. ದಯವಿಟ್ಟು ಪರಿಹಾರ ಸೂಚಿಸಿ.

|ಕಮಲಮ್ಮ ರಾಯಚೂರು.

ಒಬ್ಬ ವ್ಯಕ್ತಿ ಸರ್ಕಾರಿ ಸೇವೆಗೆ ಸೇರಿ 1 ದಿನ ಕರ್ತವ್ಯ ನಿರ್ವಹಿಸಿದರೂ ಸಹ ಅವನು ಸರ್ಕಾರಿ ನೌಕರನೇ. ಹಾಗಾಗಿ ರಾಯಚೂರು ಜಿಲ್ಲಾ ಪಂಚಾಯ್ತಿ ಸಿಇಒ ನಿಮಗೆ ಅನುಕಂಪದ ಹುದ್ದೆ ನಿರಾಕರಿಸಿರುವುದು ಕಾನೂನು ಬಾಹಿರವಾಗಿದೆ.ಆದ ಕಾರಣ ನೀವು ಮತ್ತೊಮ್ಮೆ ಮನವಿ ಸಲ್ಲಿಸಿ 1996ರ ಅನುಕಂಪದ ಆಧಾರದ ಮೇಲೆ ನೇಮಕಾತಿ ನಿಯಮಾವಳಿ ರೀತ್ಯ ನೇಮಕಗೂಳ್ಳಲು ಅವಕಾಶವಿದೆ.

  *

1-2-16.

ಹೆಚ್ಚು ಮೂಲ ವೇತನದಿಂದ ಕಡಿಮೆ ಮೂಲವೇತನದ ಹುದ್ದೆಗೆ ಹೋಗಬಹುದೇ?

ಕಳೆದ ಬಾರಿ ಕೆಪಿಎಸ್​ಸಿಯವರು ನಡೆಸಿದ ಎಸ್​ಡಿಎ ಪರೀಕ್ಷೆಯನ್ನು ಇಲಾಖೆಯ ಅನುಮತಿ ಪಡೆದು ಬರೆದಿರುತ್ತೇನೆ. ಇದರಲ್ಲಿ ಉತ್ತಮವಾದ ಅಂಕಗಳು ಬಂದಿದೆ. ನಾನು 2007ರಿಂದ ಶಿಕ್ಷಣ ಇಲಾಖೆಯಲ್ಲಿ ಶಿಕ್ಷಕನಾಗಿ ಕಾರ್ಯ ನಿರ್ವಹಿಸುತ್ತಿದ್ದು ನನ್ನ ಮೂಲ ವೇತನ 16,000-00 ರೂ. ಆಗಿದೆ. ನಾನು ಈಗ ಬೇರೆ ಇಲಾಖೆಗೆ ನೇಮಕಾತಿ ಹೊಂದಿದರೆ ನನ್ನ ವೇತನವನ್ನು ಇದೇ ವೇತನಕ್ಕೆ ನಿಯಮಿಸುತ್ತಾರೆಯೇ? ಅಥವಾ ಎಸ್​ಡಿಎ ಮೂಲ ವೇತನ 11,600-00ರಿಂದ ಪ್ರಾರಂಭಿಸುತ್ತಾರೆಯೇ? ಹಾಗೂ ಹೆಚ್ಚು ಮೂಲ ವೇತನದ ಹುದ್ದೆಯಿಂದ ಕಡಿಮೆ ಮೂಲವೇತನದ ಹುದ್ದೆಗೆ ಹೋಗಬಹುದೇ? ಈ ಕಡಿಮೆ ವೇತನದ ಹುದ್ದೆಗೆ ಹೋದರೆ ಈಗ ಪಡೆಯುತ್ತಿರುವ ವೇತನವನ್ನೇ ಮುಂದುವರಿಸುವರೇ? ದಯಮಾಡಿ ತಿಳಿಸಿರಿ.

| ಈ. ಮಧು, ಶಿಕ್ಷಕರು

ಕರ್ನಾಟಕ ಸರ್ಕಾರಿ ಸೇವಾ ನಿಯಮಾವಳಿಯ ನಿಯಮ 41ಎ (ಜಿ) ರೀತ್ಯ ನೀವು ಹೆಚ್ಚಿನ ಶ್ರೇಣಿಯ ಹುದ್ದೆಯಿಂದ ಕಡಿಮೆ ವೇತನ ಶ್ರೇಣಿಗೆ ನೇಮಕವಾದಲ್ಲಿ ನಿಮಗೆ ಯಾವುದೇ ವೇತನ ರಕ್ಷಣೆ ದೊರಕುವುದಿಲ್ಲ. ಆದರೆ ಈ ನಿಯಮಾನುಸಾರ ನೀವು ಶಾಲಾ ಶಿಕ್ಷಕರಾಗಿ ನೇಮಕ ಹೊಂದಿದ ದಿನಾಂಕದಿಂದ ಎಸ್​ಡಿಎ ಹುದ್ದೆಯಲ್ಲಿ ವೇತನವನ್ನು ನಿಗದಿಪಡಿಸಿಕೊಂಡು ಬರಲಾಗುತ್ತದೆ.
***

2-2-16.

ವಾಗ್ದಂಡನೆ ಎಂದರೇನು?
ವಾಗ್ದಂಡನೆ ವಿಧಿಸಿದ ನಂತರ ಬಡ್ತಿ ನೀಡಬಹುದೇ ಅಥವಾ ಇಲ್ಲವೇ ಎಂಬುದನ್ನು ತಿಳಿಸಿರಿ.

| ಜಿ. ಲಕ್ಷ್ಮಣಯ್ಯ, ಕಡೂರು , ಚಿಕ್ಕಮಗಳೂರು

ಕರ್ನಾಟಕ ಸರ್ಕಾರಿ ಸೇವಾ (ಸಿಸಿಎ) ನಿಯಮಾವಳಿಯ ನಿಯಮ 8(ಜಿಜಿ)ರ ರೀತ್ಯ ಒಬ್ಬ ಸರ್ಕಾರಿ ನೌಕರ ಅವನ ಕರ್ತವ್ಯ ನಿರ್ವಹಣೆಯಲ್ಲಿ ಲೋಪ ಎಸಗಿರುವುದನ್ನು ಔಪಚಾರಿಕವಾಗಿ ದಾಖಲಿಸುವುದೇ ವಾಗ್ದಂಡನೆ. ಸರ್ಕಾರಿ ಸುತ್ತೋಲೆ ಸಂಖ್ಯೆ ಸಿಆಸುಇ 37, ಸೇಇವಿ 2009, ದಿನಾಂಕ 6-4-2010ರ ಪ್ರಕಾರ ವಿಧಿಸಿದ ದಿನಾಂಕದಂದೇ ಈ ವಾಗ್ದಂಡನೆಯು ಅಂತ್ಯಗೊಳ್ಳುತ್ತದೆ. ವಾಗ್ದಂಡನೆ ವಿಧಿಸಿದ ನಂತರವೂ ನೌಕರನ ಪ್ರಕರಣವನ್ನು ಪದೋನ್ನತಿಗೆ ಪರಿಗಣಿಸಬಹುದು.
***

3-2-16.

ವಾಗ್ದಂಡನೆ ಎಂದರೇನು?

ವಾಗ್ದಂಡನೆ ಎಂದರೇನು? ವಾಗ್ದಂಡನೆ ವಿಧಿಸಿದ ನಂತರ ಬಡ್ತಿ ನೀಡಬಹುದೇ ಅಥವಾ ಇಲ್ಲವೇ ಎಂಬುದನ್ನು ತಿಳಿಸಿರಿ.

| ಜಿ. ಲಕ್ಷ್ಮಣಯ್ಯ, ಕಡೂರು , ಚಿಕ್ಕಮಗಳೂರು

ಕರ್ನಾಟಕ ಸರ್ಕಾರಿ ಸೇವಾ (ಸಿಸಿಎ) ನಿಯಮಾವಳಿಯ ನಿಯಮ 8(ಜಿಜಿ)ರ ರೀತ್ಯ ಒಬ್ಬ ಸರ್ಕಾರಿ ನೌಕರ ಅವನ ಕರ್ತವ್ಯ ನಿರ್ವಹಣೆಯಲ್ಲಿ ಲೋಪ ಎಸಗಿರುವುದನ್ನು ಔಪಚಾರಿಕವಾಗಿ ದಾಖಲಿಸುವುದೇ ವಾಗ್ದಂಡನೆ. ಸರ್ಕಾರಿ ಸುತ್ತೋಲೆ ಸಂಖ್ಯೆ ಸಿಆಸುಇ 37, ಸೇಇವಿ 2009, ದಿನಾಂಕ 6-4-2010ರ ಪ್ರಕಾರ ವಿಧಿಸಿದ ದಿನಾಂಕದಂದೇ ಈ ವಾಗ್ದಂಡನೆಯು ಅಂತ್ಯಗೊಳ್ಳುತ್ತದೆ. ವಾಗ್ದಂಡನೆ ವಿಧಿಸಿದ ನಂತರವೂ ನೌಕರನ ಪ್ರಕರಣವನ್ನು ಪದೋನ್ನತಿಗೆ ಪರಿಗಣಿಸಬಹುದು.
***

4-2-16.

ಅನುಕಂಪದ ಮೇಲೆ ನೌಕರಿ ಲಭ್ಯವಾಗುತ್ತದೆಯೇ ?
ನನ್ನ ತಂದೆಯವರು ಅಂತರ್ಜಾತಿ ವಿವಾಹವಾಗಿದ್ದು, ತದನಂತರ ಸ್ವಜಾತಿಯ ಇನ್ನೊಬ್ಬರನ್ನು ಸರ್ಕಾರದ ಅನುಮತಿಯಿಲ್ಲದೆ ವಿವಾಹವಾಗಿ ಅವರಿಗೂ ಸಹ ಒಂದು ಹೆಣ್ಣು ಮಗುವಾಗಿ, ಆ ನನ್ನ ಸಹೋದರಿಗೆ ವಿವಾಹವಾಗಿದೆ. ನನಗೀಗ 34 ವರ್ಷ ವಯಸ್ಸಾಗಿದ್ದು ನನ್ನ ತಂದೆಯವರು ನನ್ನ ತಾಯಿಯೊಂದಿಗೆ ವಾಸವಾಗಿದ್ದಾರೆ. ಅವರ ದ್ವಿತೀಯ ಪತ್ನಿ ಸುಮಾರು 20 ವರ್ಷಗಳ ಹಿಂದೆ ಬಿಟ್ಟು ಹೋಗಿರುತ್ತಾರೆ. ಪ್ರೌಢಶಾಲಾ ಮುಖ್ಯೋಪಾಧ್ಯಾಯರಾಗಿದ್ದ ನನ್ನ ತಂದೆಯವರು ಇತ್ತೀಚೆಗೆ ನಿಧನ ಹೊಂದಿರುತ್ತಾರೆ. ನನಗೆ ಸರ್ಕಾರಿ ನಿಯಮಾವಳಿ ರೀತ್ಯ ಅನುಕಂಪದ ಮೇಲೆ ನೌಕರಿ ಲಭ್ಯವಾಗುತ್ತದೆಯೇ ? |

ದೇವರಾಜ್ ಚಿಕ್ಕಮಗಳೂರು

ಕರ್ನಾಟಕ ಸರ್ಕಾರಿ ಸೇವಾ (ನಡತೆ) ನಿಯಮಗಳು 1966ರ ನಿಯಮ 28ರಡಿಯಲ್ಲಿ ಸರ್ಕಾರಿ ನೌಕರನಿಗೆ ಜೀವಂತ ಪತ್ನಿ ಇರುವಾಗ ತತ್ಕಾಲದಲ್ಲಿ ಅವನಿಗೆ ಅನ್ವಯವಾಗುವ ವೈಯಕ್ತಿಕ ಕಾನೂನಿನ ಅಡಿಯಲ್ಲಿ ಅನುಮತಿ ಇದ್ದರೂ ಸಹ ಆತನು ಮೊದಲು ಸರ್ಕಾರದ ಅನುಮತಿಯನ್ನು ಪಡೆಯದೇ ಇನ್ನೊಂದು ವಿವಾಹವನ್ನು ಮಾಡಿಕೊಳ್ಳತಕ್ಕದ್ದಲ್ಲ ಎಂದು ತಿಳಿಸಲಾಗಿದೆ. ಅಲ್ಲದೇ ಇತ್ತೀಚಿನ ಸರ್ಕಾರಿ ಸುತ್ತೋಲೆ ದಿನಾಂಕ 28.8.2015ರಲ್ಲಿ ದ್ವಿತೀಯ ಪತ್ನಿಯು ಕುಟುಂಬದ ವ್ಯಾಖ್ಯೆಯಲ್ಲಿ ಬರುವುದಿಲ್ಲವಾದ ಕಾರಣ ದ್ವಿತೀಯ ಪತ್ನಿಗಾಗಲೀ ಅಥವಾ ಅವರ ಮಕ್ಕಳಿಗಾಗಲಿ 1996ರ ಕರ್ನಾಟಕ ಸರ್ಕಾರಿ ಸೇವಾ (ಅನುಕಂಪದ ಮೇರೆಗೆ ನೇಮಕ) ನಿಯಮಗಳಡಿಯಲ್ಲಿ ನೇಮಕಾತಿಗೆ ಅವಕಾಶವಿಲ್ಲವೆಂದು ಸೂಚಿಸಲಾಗಿದೆ. ನೀವು ನಿಮ್ಮ ತಂದೆಯವರ ಮೊದಲ ಪತ್ನಿಯ ಪುತ್ರರಾಗಿರುವುದರಿಂದ ನಿಮಗೆ ಅನುಕಂಪದ ಮೇಲೆ ಸರ್ಕಾರಿ ನೌಕರಿ ಲಭ್ಯವಾಗುತ್ತದೆ. (ಹೆಚ್ಚಿನ ವಿವರಗಳಿಗೆ ಲ. ರಾಘವೇಂದ್ರ ಅವರ ಕರ್ನಾಟಕ ಸರ್ಕಾರಿ ಸೇವಾ ಕಾನೂನು ಕೈಪಿಡಿ ಯನ್ನು ನೋಡಬಹುದು)
***

5-2-16.

ಅನುಕಂಪದ ಮೇಲೆ ಯಾವುದಾದರೂ ನಿವೃತ್ತಿ ಸೌಲಭ್ಯಗಳು ಲಭ್ಯವಾಗುತ್ತದೆಯೇ?

ನನ್ನ ಸಂಬಂಧಿಕರೊಬ್ಬರು 25 ವರ್ಷಗಳ ಕಾಲ ಸರ್ಕಾರಿ ಸೇವೆಯಲ್ಲಿದ್ದು ಲೋಕಾಯುಕ್ತ ಟ್ರ್ಯಾಪ್ ಪ್ರಕರಣದಲ್ಲಿ ಸಿಲುಕಿ 1 ವರ್ಷ ಸಾದಾ ಜೈಲು ಶಿಕ್ಷೆ ಅನುಭವಿಸಿದ್ದಾರೆ. ಸರ್ಕಾರವು ಅವರನ್ನು ಸೇವೆಯಿಂದ ವಜಾ ಮಾಡಿದೆ. ಇತ್ತೀಚೆಗಷ್ಟೇ ಜೈಲಿನಿಂದ ಬಿಡುಗಡೆ ಹೊಂದಿರುವ ಇವರ ಮೇಲೆ ಅವಲಂಬಿತರಾದ ಹೆಂಡತಿ ಮಕ್ಕಳ ಜೀವನೋಪಾಯಕ್ಕಾಗಿ ಸರ್ಕಾರದಿಂದ ಅನುಕಂಪದ ಮೇಲೆ ಯಾವುದಾದರೂ ನಿವೃತ್ತಿ ಸೌಲಭ್ಯಗಳು ಲಭ್ಯವಾಗುತ್ತದೆಯೇ?

| ವೆಂಕಟೇಶ್ ಶರಾವತಿನಗರ, ಶಿವಮೊಗ್ಗ

ಕರ್ನಾಟಕ ಸರ್ಕಾರಿ ಸೇವಾ ನಿಯಮಾವಳಿಯ ನಿಯಮ 217ರ ಉಪಬಂಧಗಳಿಗನುಸಾರವಾಗಿ ದುರ್ನಡತೆಗಾಗಿ, ದಿವಾಳಿತನಕ್ಕಾಗಿ ವಜಾ ಮಾಡಲಾದ ಅಥವಾ ತೆಗೆದುಹಾಕಲಾದ ಸರ್ಕಾರಿ ನೌಕರನಿಗೆ ಯಾವ ನಿವೃತ್ತಿ ವೇತನವನ್ನೂ ಮಂಜೂರು ಮಾಡಲಾಗುವುದಿಲ್ಲ. ಆದರೆ ಹೀಗೆ ವಜಾಗೊಳಿಸಲಾದ ಸರ್ಕಾರಿ ನೌಕರನು ವಿಶೇಷ ಪರಿಗಣನೆಗೆ ಅರ್ಹನಾಗಿರುವ ಸಂದರ್ಭದಲ್ಲಿ ಅನುಕಂಪ ಭತ್ಯೆ ನೀಡಬಹುದು. ಈ ಅನುಕಂಪದ ಅನುದಾನವು ಸರ್ಕಾರಿ ನೌಕರನು ಮೃತನಾದಾಗ ತಾನಾಗಿಯೇ ನಿಂತು ಹೋಗುವುದಲ್ಲದೆ, ಅವನ ಕುಟುಂಬಕ್ಕೆ ಕುಟುಂಬ ನಿವೃತ್ತಿ ವೇತನ ಲಭ್ಯವಾಗುತ್ತದೆ. ಈ ಅನುಕಂಪದ ಅನುದಾನದ ಪ್ರಮಾಣವು ಸರ್ಕಾರಿ ನೌಕರನು ಸಹಜವಾಗಿ ನಿವೃತ್ತವಾಗುವ ಸಂದರ್ಭದಲ್ಲಿ ಪಡೆಯುವ ನಿವೃತ್ತಿ ವೇತನದ ಮೂರನೇ ಎರಡು ಭಾಗದಷ್ಟು ಪರಿಮಿತವಾಗಿರುತ್ತದೆ.
***
6-2-16.

ನೆಮ್ಮದಿಯಿಂದ ಕರ್ತವ್ಯ ನಿರ್ವಹಿಸಲು ಏನು ಕ್ರಮ ಕೈಗೊಳ್ಳಬೇಕು

ನಾನು ಸರ್ಕಾರಿ ನೌಕರಳಾಗಿದ್ದು, ಪರಿಶಿಷ್ಟ ಜಾತಿಗೆ ಸೇರಿದವಳಾಗಿದ್ದೇನೆ. 16 ವರ್ಷದಿಂದ ನಾನು ಸರ್ಕಾರಿ ಕಚೇರಿಯಲ್ಲಿ ವಾಹನ ಚೊಕ್ಕಟ ಮಾಡುತ್ತಿದ್ದು, ಕೆಲವು ಸರ್ಕಾರಿ ಅಧಿಕಾರಿಗಳು ಮತ್ತು ಸಿಬ್ಬಂದಿ ಜಾತಿನಿಂದನೆ ಮಾಡಿ ನನಗೆ ಮಾನಸಿಕವಾಗಿ ಹಿಂಸಿಸುತ್ತಿದ್ದಾರೆ. ನನ್ನ ಪತಿ ಖಾಸಗಿ ಸಂಸ್ಥೆಯಲ್ಲಿದ್ದು ಇಬ್ಬರು ಮಕ್ಕಳು ಸಹ ಇದ್ದಾರೆ. ಆದರೆ ನನ್ನ ಕಚೇರಿಯಲ್ಲಿ ಇಲ್ಲ ಸಲ್ಲದ ಆರೋಪಗಳನ್ನು ಹೊರಿಸಿ ನೋಟಿಸ್ ನೀಡಿ, ನನ್ನ ಉತ್ತರವನ್ನು ಒಪ್ಪಿಕೊಳ್ಳದೇ ಮಾನಸಿಕ ಕಿರುಕುಳ ಕೊಡುತ್ತಿದ್ದಾರೆ. ಇದಕ್ಕೆ ಪರಿಹಾರವನ್ನು ನೀಡಿ ನೆಮ್ಮದಿಯಿಂದ ಕರ್ತವ್ಯ ನಿರ್ವಹಿಸಲು ಏನು ಕ್ರಮ ಕೈಗೊಳ್ಳಬೇಕೆಂದು ಸಲಹೆ ನೀಡಿ.

|ಮೀನಾ ಬೆಂಗಳೂರು

ಸರ್ಕಾರಿ ಕಚೇರಿಗಳಲ್ಲಿ ಜಾತಿ ನಿಂದನೆ ಮಾಡುವುದು ನಾಗರಿಕ ಹಕ್ಕು ಸಂರಕ್ಷಣಾ ಕಾಯ್ದೆ ಅಡಿಯಲ್ಲಿ ಅಪರಾಧವಾಗುತ್ತದೆ. ಈ ಹಿನ್ನೆಲೆಯಲ್ಲಿ ನೀವು ಪೊಲೀಸ್ ಇಲಾಖೆಯ ನಾಗರಿಕ ಹಕ್ಕು ನಿರ್ದೇಶನಾಲಯಕ್ಕೆ ಜಾತಿ ನಿಂದನೆ ಮಾಡಿ ಹಿಂಸಿಸುವವರ ವಿರುದ್ಧ ದೂರನ್ನು ನೀಡಬಹುದು. ಅಲ್ಲದೆ ನಿಮಗೆ ಯಾವುದೇ ಜ್ಞಾಪನ ನೀಡಬೇಕಾದರೂ ಸರ್ಕಾರಿ ಸೇವಾ ನಿಯಮಾವಳಿಯ ಚೌಕಟ್ಟಿನಲ್ಲೇ ಕಚೇರಿ ಮುಖ್ಯಾಧಿಕಾರಿಗೆ ನೀಡಬೇಕಾಗುತ್ತದೆ. ಆದ ಕಾರಣ ಯಾವುದೇ ಬೆದರಿಕೆಗೆ ಬಗ್ಗದೆ ನಿಮ್ಮ ಕರ್ತವ್ಯವನ್ನು ನಿರ್ವಹಿಸಲು ಜಾಗ್ರತೆ ವಹಿಸಿ.
***

7-2-16.

ವಿಶೇಷ ಕರ್ತವ್ಯಕ್ಕೆ ನಿಯೋಜಿತನಾದಾಗ ಪರಿಹಾರ ಭತ್ಯೆ ಲಭ್ಯ.

ಪೋಲೀಸ್ ಇಲಾಖೆಗೆ ನೇಮಕ ಹೊಂದಿ ತರಬೇತಿಗೆ ನಿಯುಕ್ತಿ ಹೊಂದಿರುವ ಅಧಿಕಾರಿ /ಸಿಬ್ಬಂದಿಯು ತರಬೇತಿ ಅವಧಿಯಲ್ಲಿ ಮನೆ ಬಾಡಿಗೆ ಪಡೆಯಲು ಅರ್ಹರೇ ? ಈ ಬಗ್ಗೆ ನಿಯಮ ಯಾವುದು?

| ಜಯಕೀರ್ತಿ

ಉತ್ತರ ಕರ್ನಾಟಕ ಸರ್ಕಾರಿ ಸೇವಾ ನಿಯಮಾವಳಿಯ ನಿಯಮ 74ರ ಮೇರೆಗೆ ಸರ್ಕಾರಿ ನೌಕರರು ತರಬೇತಿ ಅಥವಾ ವಿಶೇಷ ಕರ್ತವ್ಯಕ್ಕೆ ನಿಯೋಜಿತನಾದಾಗ ಅವನಿಗೆ ಮನೆ ಬಾಡಿಗೆ ಭತ್ಯೆ ಅಥವಾ ನಗರ ಪರಿಹಾರ ಭತ್ಯೆ ಲಭ್ಯವಾಗುತ್ತದೆ.
***

8-2-16.

ಅಸಾಧಾರಣ ರಜೆಯನ್ನು ನಿವೃತ್ತಿ ವೇತನಕ್ಕೆ ಅರ್ಹತಾದಾಯಕ ಸೇವೆ ಎಂದು ಪರಿಗಣಿಸಲಾಗುವುದೇ?

ನಾನು ಸರ್ಕಾರಿ ನೌಕರಳಾಗಿದ್ದು ಅನಿವಾರ್ಯವಾಗಿ 9 ತಿಂಗಳು ವೈದ್ಯಕೀಯ ಕಾರಣಗಳಿಗಾಗಿ ಅಸಾಧಾರಣ ರಜೆಯನ್ನು ಪಡೆದುಕೊಂಡಿರುತ್ತೇನೆ. ಇದೇ ಜನವರಿಗೆ 15 ವರ್ಷ ಸೇವಾವಧಿ ಮುಕ್ತಾಯವಾಗಲಿದ್ದು ಮೇನಲ್ಲಿ ಸ್ವಯಂನಿವೃತ್ತಿ ಪಡೆಯಲು ಅಪೇಕ್ಷಿಸಿದ್ದೇನೆ. ನಾನು ಪಡೆದಿರುವ ಅಸಾಧಾರಣ ರಜೆಯನ್ನು ನಿವೃತ್ತಿ ವೇತನಕ್ಕೆ ಅರ್ಹತಾದಾಯಕ ಸೇವೆ ಎಂದು ಪರಿಗಣಿಸಲಾಗುವುದೇ?

| ಪಲ್ಲವಿ ಶ್ರೀಹರ್ಷ ಮೈಸೂರು

ಕರ್ನಾಟಕ ಸರ್ಕಾರಿ ಸೇವಾ ನಿಯಮಾವಳಿಯ ನಿಯಮ 244ರಡಿಯಲ್ಲಿ ವೈದ್ಯಕೀಯ ಆಧಾರದ ಮೇಲೆ ಪಡೆದ ಅಸಾಧಾರಣ ರಜೆಯನ್ನು ಸಹ ಅರ್ಹತಾದಾಯಕ ಸೇವೆಯೆಂದು ಪರಿಗಣಿಸಬಹುದು. ಆದರೆ ನಿಯಮ 244ಎರಂತೆ ಲೆಕ್ಕಿಕ್ಕಿಲ್ಲದ ಅವಧಿಯನ್ನು ನಿವೃತ್ತಿ ವೇತನಕ್ಕೆ ಅರ್ಹತಾದಾಯಕ ಸೇವೆಯೆಂದು ಪರಿಗಣಿಸಲಾಗುವುದಿಲ್ಲ. ನೀವು 3 ವರ್ಷದ ಒಳಗೆ ಅಸಾಧಾರಣ ರಜೆಯನ್ನು ಪಡೆದಿರುವುದರಿಂದ ಸ್ವಯಂನಿವೃತ್ತಿ ಹೊಂದಲು ಯಾವುದೇ ತೊಂದರೆ ಉಂಟಾಗುವುದಿಲ್ಲ.
***

9-2-16.

ಪದವಿ ಪೂರ್ವ ಕಾಲೇಜಿನ ಉಪನ್ಯಾಸಕರಿಗೆ ಪ್ರಮಾಣ ಪತ್ರ ದೃಢೀಕರಣ ಅಧಿಕಾರ ಇದೆಯೇ?
ಅನುದಾನಿತ ಪದವಿ ಪೂರ್ವ ಕಾಲೇಜಿನ ಪೂರ್ಣಕಾಲಿಕ ಕಾಯಂ ಉಪನ್ಯಾಸಕರಿಗೆ ಯಾವುದೇ ಪ್ರಮಾಣಪತ್ರಗಳಿಗೆ ದೃಢೀಕರಣ ಮಾಡಲು ಅಧಿಕಾರ ಇದೆಯೇ? ಇದಕ್ಕೆ ಯಾವುದಾದರೂ ವಿಶೇಷ ನಿಯಮಗಳಿವೆಯೇ?

|ಬಸವರಾಜ್ ಬರಮಶೆಟ್ಟಿ

ಕರ್ನಾಟಕ ಸರ್ಕಾರಿ ಸೇವಾ ನಿಯಮಾವಳಿಯ ನಿಯಮ 8 (20)ರಂತೆ ಗೆಜೆಟೆಡ್ ಸರ್ಕಾರಿ ನೌಕರರು ಮಾತ್ರ ಪ್ರಮಾಣ ಪತ್ರಗಳಿಗೆ ದೃಢೀಕರಣ ಮಾಡಲು ಅಧಿಕಾರವಿರುತ್ತದೆ. ಅನುದಾನಿತ ಶಾಲೆ ಕಾಲೇಜುಗಳ ಕಾಯಂ ಉಪನ್ಯಾಸಕರು ದೃಢೀಕರಣ ಮಾಡಲು ಯಾವುದೇ ವಿಶೇಷ ನಿಯಮಗಳಿಲ್ಲ. (ಹೆಚ್ಚಿನ ವಿವರಗಳಿಗೆ ಲ. ರಾಘವೇಂದ್ರ ಅವರ ಕರ್ನಾಟಕ ಸರ್ಕಾರಿ ಸೇವಾ ನಿಯಮಗಳು ಪುಸ್ತಕ ನೋಡಬಹುದಾಗಿದ್ದು ಪುಸ್ತಕಕ್ಕೆ ಮೊಬೈಲ್ ಸಂಖ್ಯೆ 94812 44434ನ್ನು ಸಂರ್ಪಸಬಹುದು)
***

10-2-16.

1963ರ ಕರ್ನಾಟಕ ಸರ್ಕಾರಿ ಸೇವಾ (ವೈದ್ಯೋಪಚಾರ) ನಿಯಮಾವಳಿ ರೀತ್ಯ ತಂದೆ-ತಾಯಿಯವರ ಮಾಸಿಕ ಆದಾಯ ರೂ. 4,000ಕ್ಕಿಂತ ಕಡಿಮೆ ಇದ್ದರೆ ವೈದ್ಯಕೀಯ ವೆಚ್ಚ ಪಡೆಯಲು ಅರ್ಹರು. ಈ ನಿಯಮದ ಆದಾಯದ ಮಿತಿ ಹೆಚ್ಚಿಸಲಾಗಿದೆಯೇ? ಅಥವಾ ಪೂರ್ಣವಾಗಿ ಮಿತಿಯನ್ನು ತೆಗೆಯಲಾಗಿದೆಯೇ ? ದಯವಿಟ್ಟು ತಿಳಿಸಿ.

|ಕೆ.ರಮೇಶ್ ಸಿದ್ಧಾರ್ಥ ನಗರ, ಮೈಸೂರು

ಕರ್ನಾಟಕ ಸರ್ಕಾರಿ ನೌಕರರ ವೈದ್ಯಕೀಯ (ಚಿಕಿತ್ಸೆ) ನಿಯಮಾವಳಿ 63ರ ನಿಯಮ 2(ಜಿಜಿ) ಪ್ರಕಾರ ತಂದೆತಾಯಿಯವರ ವಾರ್ಷಿಕ ಆದಾಯ 6,000 ರೂಪಾಯಿಗಳನ್ನು ಮೀರದಿದ್ದರೆ ವೆಚ್ಚ ಪಡೆಯಲು ಅರ್ಹರು ಎಂದು ತಿದ್ದುಪಡಿ ಮಾಡಲಾಗಿದೆ.
***

11-2-16.

ನಾನು ಮತ್ತು ನನ್ನ ಪತ್ನಿ ಸರ್ಕಾರಿ ಪ್ರಾಥಮಿಕ ಶಾಲಾ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದೇವೆ. ನಾವು ವಿವಾಹವಾಗಿ 5 ವರ್ಷಗಳಾದರೂ ಮಕ್ಕಳಾಗಿಲ್ಲ. ಶಿಕ್ಷಣ ಇಲಾಖೆ ವತಿಯಿಂದ ಬಂಜೆತನ ಪರಿಹಾರಕ್ಕೆ ಚಿಕಿತ್ಸೆ ಪಡೆಯಲು ವೈದ್ಯಕೀಯ ಸೌಲಭ್ಯ ಇದೆಯೇ?

| ರವಿ, ಮೈಸೂರು

ಕರ್ನಾಟಕ ಸರ್ಕಾರಿ ನೌಕರರ (ವೈದ್ಯಕೀಯ ಚಿಕಿತ್ಸೆ) ನಿಯಮಗಳು 1963ರ ನಿಯಮ 14(2ಪಿ) ರೀತ್ಯ ಬಂಜೆತನದ ಚಿಕಿತ್ಸೆಗೆ ತಗುಲಿದ ವೈದ್ಯಕೀಯ ವೆಚ್ಚವನ್ನು ಸೇವಾವಧಿಯಲ್ಲಿ ಒಂದು ಬಾರಿ 3 ಆವರ್ತಗಳಿಗೆ ಮಾತ್ರ ಪಡೆಯಲು ಅವಕಾಶ ಕಲ್ಪಿಸಲಾಗಿದೆ. ದಿನಾಂಕ 17.12.2012ರ ಸರ್ಕಾರಿ ಆದೇಶದಲ್ಲಿ ಸರ್ಕಾರದಿಂದ ಮಾನ್ಯತೆ ಪಡೆದ ಆಸ್ಪತ್ರೆಗಳಲ್ಲಿ ಈ ಚಿಕಿತ್ಸೆಯನ್ನು ಪಡೆದ ಪ್ರಕರಣಗಳಲ್ಲಿ ಮರು ಪಾವತಿಗೆ ಸರ್ಕಾರದ ಒಪ್ಪಿಗೆಯನ್ನು ಪಡೆಯಬೇಕೆಂದು ಸೂಚಿಸಿದ್ದು ಬಂಜೆತನದ ಚಿಕಿತ್ಸೆಯನ್ನು ಪಡೆಯಲು ಮಹಿಳಾ ಸರ್ಕಾರಿ ನೌಕರಳು 21-39ವರ್ಷದೊಳಗಿರಬೇಕು ಹಾಗೂ ಇದಕ್ಕೆ ರೂ. 65,000-00 ಗಳನ್ನು ನೀಡಲಾಗುತ್ತದೆ.
***

12-2-16.

ಅನುಕಂಪದ ಆಧಾರದಲ್ಲಿ ಮಕ್ಕಳಿಗೆ ನೌಕರಿ ದೊರೆಯುತ್ತದೆಯೇ?

ಪತಿ ಹಾಗೂ ಪತ್ನಿ ಇಬ್ಬರೂ ಸರ್ಕಾರಿ ನೌಕರಿಯಲ್ಲಿದ್ದು, ಇಬ್ಬರಲ್ಲಿ ಒಬ್ಬರು ಅಕಾಲಿಕ ಮರಣ ಹೊಂದಿದರೆ ಅನುಕಂಪದ ಆಧಾರದಲ್ಲಿ ಮಕ್ಕಳಿಗೆ ನೌಕರಿ ದೊರೆಯುತ್ತದೆಯೇ? ಪಿಂಚಣಿ ವ್ಯವಸ್ಥೆ ಹೇಗಿರುತ್ತದೆ?

|ಉಮೇಶ್ ಎನ್

ಕರ್ನಾಟಕ ಸರ್ಕಾರಿ ಸೇವಾ (ಅನುಕಂಪದ ಮೇಲೆ ನೇಮಕ) ನಿಯಮಾವಳಿಯ 1996ರ ರೀತ್ಯ ಮಕ್ಕಳಿಗೆ ಅನುಕಂಪದ ಆಧಾರದ ಮೇಲೆ ಸಿ ಗುಂಪಿನ ಹುದ್ದೆಗಳು ಲಭ್ಯವಾಗುತ್ತವೆ. ಅಲ್ಲದೆ ಕುಟುಂಬ ಪಿಂಚಣಿಯೂ ಸಹ ಅವಲಂಬಿತ ಮಕ್ಕಳಿಗೆ ದೊರಕುತ್ತವೆ.
***

13-2-16.

ಮಡಿದ ಪತಿಯ ನೌಕರಿಯನ್ನು ವಯೋಮಿತಿ ಮೀರಿದೆ ಎಂದು ಪತ್ನಿಗೆ ನಿರಾಕರಣೆ.

ಸರ್ಕಾರಿ ನೌಕರರಾಗಿದ್ದ ನನ್ನ ಪತಿ ದಿನಾಂಕ 31.12.2015ರಂದು ಹೃದಯಾಘಾತದಿಂದ ನಿಧನ ಹೊಂದಿದ್ದಾರೆ. ನಾನು ನಮ್ಮ ಪತಿ ಕೆಲಸ ಮಾಡುತ್ತಿದ್ದ ಇಲಾಖೆಗೆ ಅನುಕಂಪದ ಮೇಲೆ ನೌಕರಿ ನೀಡಲು ಅರ್ಜಿ ಸಲ್ಲಿಸಿದಾಗ ವಯೋಮಿತಿ ದಾಟಿದೆ ಎಂದು ನನ್ನ ಅರ್ಜಿ ತಿರಸ್ಕರಿಸಿದ್ದಾರೆ. ನನಗೀಗ 43 ವರ್ಷ ವಯಸ್ಸು. ದಯವಿಟ್ಟು ಸಲಹೆ ನೀಡಿ?

|ಸಾವಿತ್ರಿ ಎಂ ಚಿಕ್ಕಮಗಳೂರು

ಕರ್ನಾಟಕ ಸರ್ಕಾರಿ ಸೇವಾ (ಸಾಮಾನ್ಯ ನೌಕರಿ ಭರ್ತಿ) ನಿಯಮಗಳು 1977ರ ನಿಯಮ 6ರಲ್ಲಿ ನೇರ ನೇಮಕಾತಿಗೆ ಗರಿಷ್ಠ 35 ವರ್ಷಗಳನ್ನು ನಿಗದಿಪಡಿಸಿದ್ದು, ಇದೇ ನಿಯಮದ ಅನ್ವಯ ಅಭ್ಯರ್ಥಿ ವಿಧವೆಯಾಗಿದ್ದಲ್ಲಿ 10 ವರ್ಷಗಳ ವಿನಾಯಿತಿ ನೀಡಬೇಕೆಂದು ಸೂಚಿಸಲಾಗಿದೆ. ಹೀಗಿರುವಲ್ಲಿ ನಿಮ್ಮ ಪತಿಯವರ ಇಲಾಖಾ ನೇಮಕ ಪ್ರಾಧಿಕಾರಿದವರು ನಿಮ್ಮನ್ನು ಅನುಕಂಪದ ಮೇರೆಗೆ ನಿಯುಕ್ತಿಗೊಳಿಸಿಕೊಳ್ಳಲು ನಿರಾಕರಿಸಿರುವುದು ನಿಯಮಾವಳಿಯ ಉಲ್ಲಂಘನೆಯಾಗಿದೆ. ಆದ ಕಾರಣ ನೀವು ಮತ್ತೊಮ್ಮೆ ಮನವರಿಕೆ ಮಾಡಿ ಅರ್ಜಿ ಸಲ್ಲಿಸಬಹುದು.
***

14-2-16.

ಚುನಾವಣೆ ಕರ್ತವ್ಯಕ್ಕೆ ಹಾಜರಾದರೆ ಗಳಿಕೆ ರಜೆ ಸಿಗುವುದೇ?

ನಾನು ಕಳೆದ ಮೇ ತಿಂಗಳಿನಲ್ಲಿ ನಡೆದ ಗ್ರಾಮ ಪಂಚಾಯತ್ ಸಾರ್ವತ್ರಿಕ ಚುನಾವಣೆಯಲ್ಲಿ ಸಹಾಯಕ ಚುನಾವಣಾ ಅಧಿಕಾರಿಯಾಗಿ ವೆಕೇಶನ್ ಅವಧಿಯಲ್ಲಿ 1 ತಿಂಗಳ ಕಾಲ ಚುನಾವಣಾ ಕರ್ತವ್ಯಗಳನ್ನು ನಿರ್ವಹಿಸಿದ್ದೆ. ನನಗೆ ಗಳಿಕೆ ರಜೆ ಸೌಲಭ್ಯ ಸಿಗುವುದೇ?

|ಶೇಖರಯ್ಯ ಸಹಶಿಕ್ಷಕ, ದೇವದುರ್ಗ,ರಾಯಚೂರು

ಕರ್ನಾಟಕ ಸರ್ಕಾರಿ ಸೇವಾ ನಿಯಮಾವಳಿಯ ನಿಯಮ 113ರಂತೆ ನೌಕಕರು ರಜಾ ಅವಧಿಯಲ್ಲಿ ಕರ್ತವ್ಯ ನಿರ್ವಹಿಸಿದರೆ ನಿಯಮ 112ರಂತೆ ವರ್ಷಕ್ಕೆ ಗರಿಷ್ಠ 30 ದಿನಗಳ ಕಾಲ ಗಳಿಕೆ ರಜೆಯನ್ನು ಪಡೆಯಲು ಅರ್ಹರಾಗಿರುತ್ತಾರೆ.
***

15-2-16.

ಹೆಚ್ಚುವರಿಯಾಗಿ ಪಿಂಚಣಿಯನ್ನು ನೀಡಲಾಗುವುದೇ?

ನಾನು ಸರ್ಕಾರಿ ಸೇವೆಯಿಂದ ನಿವೃತ್ತನಾಗಿದ್ದು ಸದ್ಯ 81ನೇ ವರ್ಷಕ್ಕೆ ಕಾಲಿಡುತ್ತಿದ್ದೇನೆ. ನನಗೆ ಹೆಚ್ಚುವರಿಯಾಗಿ ಪಿಂಚಣಿಯನ್ನು ನೀಡಲಾಗುವುದೇ?

|ಬಿ.ಟಿ. ರಾಜಪ್ಪ ಬೀಚದಹಳ್ಳಿ, ಕೆ.ಆರ್. ನಗರ

ರಾಜ್ಯ ಸರ್ಕಾರವು 2010ರ ಅಕ್ಟೋಬರ್​ನಲ್ಲಿ ಹೊರಡಿಸಿದ ಅಧಿಸೂಚನೆಯಂತೆ 80 ವರ್ಷ ದಾಟಿ 81ನೇ ವರ್ಷಕ್ಕೆ ಪದಾರ್ಪಣೆ ಮಾಡಿದ ಮೊದಲ ದಿನದಿಂದಲೇ ನಿವೃತ್ತ ಸರ್ಕಾರಿ ನೌಕರರು ಶೇ.20 ಪಿಂಚಣಿ ಹೆಚ್ಚಳ ಸೌಲಭ್ಯಕ್ಕೆ ಅರ್ಹರಾಗುತ್ತಾರೆಂದು ತಿಳಿಸಲಾಗಿದೆ. ಆದ ಕಾರಣ ನೀವು ಈ ಹೆಚ್ಚಳವನ್ನು ಪಡೆಯಲು ಅರ್ಹರಾಗಿರುತ್ತೀರಿ.
***

16-2-16.

ಪ್ರತಿವರ್ಷ ಮಂಜೂರಾತಿ ಪತ್ರ ಪಡೆಯಬೇಕೇ?

ಒಂದು ಹುದ್ದೆಯಲ್ಲಿ ಸರ್ಕಾರ ನಿಗದಿಪಡಿಸಿದ ಗರಿಷ್ಠ ಮಿತಿ ತಲುಪಿದ ಮೇಲೆ ಕೊಡಲಾಗುವ ಸ್ಥಗಿತ ವೇತನದ ಬಡ್ತಿ ಪಡೆಯಲು ಇಲಾಖೆಯ ನೇಮಕಾತಿ ಪ್ರಾಧಿಕಾರದಿಂದ ಪ್ರಥಮ ಸ್ಥಗಿತ ವೇತನ ಮೊದಲ್ಗೊಂಡು ಪ್ರತಿವರ್ಷ ಮಂಜೂರಾತಿ ಪತ್ರ ಪಡೆಯಬೇಕೇ? ಹಾಗೆ ಮಂಜೂರಾತಿ ಪಡೆಯದೆ ಸ್ಥಗಿತ ವೇತನ ಬಡ್ತಿಯನ್ನು ಕಚೇರಿ ಮುಖ್ಯಸ್ಥರ ಅನುಮತಿಯೊಂದಿಗೆ ಸೇರ್ಪಡೆ ಮಾಡಿ ತೆಗೆದದ್ದಾದರೆ ನಿವೃತ್ತಿ ವೇತನದ ಸಂದರ್ಭದಲ್ಲಿ ಏನಾದರೂ ತೊಂದರೆಯಾಗುತ್ತದೆಯೇ?

|ಶಿವಾನಂದ ಬಿ. ಮರಿಗೇರಿ ಸಹಶಿಕ್ಷಕರು ,ಚಿಕ್ಕೊಪ್ಪ, ಬೆಳಗಾವಿ

ಸರ್ಕಾರಿ ಆದೇಶ ಸಂಖ್ಯೆ ಎಫ್​ಡಿ 3, ಎಫ್​ಆರ್​ಪಿ 96, ದಿನಾಂಕ 18-3-1996ರ ಪ್ಯಾರಾ 7ರಲ್ಲಿ ಎ ಮತ್ತು ಬಿ ಗುಂಪಿನ ಹುದ್ದೆಗಳಿಗೆ ಸಂಬಂಧಿಸಿದಂತೆ ಈ ಸ್ಥಗಿತ ವೇತನವನ್ನು ಆಡಳಿತ ಇಲಾಖೆಯ ಮುಖ್ಯಸ್ಥರು ಮಂಜೂರು ಮಾಡುವ ಅಧಿಕಾರ ಹೊಂದಿರುತ್ತಾರೆ. ಅದೇ ರೀತಿಯಾಗಿ ಸಿ ಮತ್ತು ಡಿ ಗುಂಪಿನ ಹುದ್ದೆಗಳಿಗೆ ಸಂಬಂಧಿಸಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳು ಮಂಜೂರು ಮಾಡುವ ಪ್ರಾಧಿಕಾರಿಯಾಗಿರುತ್ತಾರೆ. ಆದ ಕಾರಣ ನೀವು ಜಿಲ್ಲಾ ಮಟ್ಟದ ಅಧಿಕಾರಿಯಿಂದ (ಡಿಡಿಪಿಐ) ಮಂಜೂರು ಮಾಡಿಸಿಕೊಂಡರೆ ನಿವೃತ್ತಿ ಸಂದರ್ಭದಲ್ಲಿ ಯಾವುದೇ ತೊಂದರೆಯಾಗುವುದಿಲ್ಲ.
***

17-2-16.

ಫ್ಯಾಮಿಲಿ ಪ್ಲಾನಿಂಗ್ ಆಪರೇಷನ್ ಮಾಡಿಸಿಕೊಂಡರೆ ಬಡ್ತಿ ಸಿಗುವುದೇ?

ನಾನು ಸರ್ಕಾರಿ ಶಾಲೆಯಲ್ಲಿ ಶಿಕ್ಷಕಿಯಾಗಿದ್ದು, ನನಗೀಗ 10 ವರ್ಷದ ಮಗಳಿದ್ದಾಳೆ. ನನ್ನ ಜನ್ಮ ದಿನಾಂಕ 12.6.1971 ಆಗಿದ್ದು, ನಾನು ಫ್ಯಾಮಿಲಿ ಪ್ಲಾನಿಂಗ್ ಆಪರೇಷನ್ ಮಾಡಿಸಿಕೊಂಡರೆ ಸಣ್ಣ ಕುಟುಂಬ ವಿಶೇಷ ಬಡ್ತಿ ಪಡೆಯಲು ಅರ್ಹಳೇ?

|ಬಿ. ಜಯಶ್ರೀ, ಹಂಸಭಾವಿ

ಕುಟುಂಬ ಯೋಜನೆಯನ್ನು ಅನುಸರಣೆ ಮಾಡುವ ರಾಜ್ಯ ಸರ್ಕಾರಿ ನೌಕರರಿಗೆ ಉತ್ತೇಜನ ನೀಡುವ ಸಲುವಾಗಿ ದಿನಾಂಕ 1.10.1985ರ ಸರ್ಕಾರಿ ಆದೇಶದಲ್ಲಿ (ಸಂಖ್ಯೆ ಎಫ್​ಡಿ 27, ಎಸ್​ಆರ್​ಎಸ್ 85,) ಸರ್ಕಾರಿ ನೌಕರಳು 45 ವರ್ಷದೊಳಗಿದ್ದು, ಆಕೆಯ ಪತಿ 50 ವರ್ಷ ದಾಟಿರಬಾರದು. ಅಂತಹವರು ಈ ಯೋಜನೆಯನ್ನು ಅಳವಡಿಸಿಕೊಂಡರೆ ವಿಶೇಷ ವೇತನ ಬಡ್ತಿ ದೊರಕುತ್ತದೆ. ನೀವು ದಿನಾಂಕ 12.6.2016ರೊಳಗೆ ಈ ಶಸ್ತ್ರಚಿಕಿತ್ಸೆಯನ್ನು ಮಾಡಿಸಿಕೊಂಡಲ್ಲಿ ಕುಟುಂಬ ಯೋಜನೆಯ ವಿಶೇಷ ಭತ್ಯೆ ಲಭ್ಯವಾಗುತ್ತದೆ.
***

18-2-16.

ಯಾವ ನಿಯಮದಡಿಯಲ್ಲಿ ವೈದ್ಯಕೀಯ ರಜೆಯನ್ನು ಪಡೆಯಬಹುದು?

ನಾನು ಸರ್ಕಾರಿ ಪ್ರೌಢಶಾಲೆ ಶಿಕ್ಷಕಿಯಾಗಿದ್ದು ಕರ್ತವ್ಯದ ಸಮಯದಲ್ಲಿ ತಲೆ ಸುತ್ತಿ ಬಿದ್ದು ಕೈಮೂಳೆ ಮುರಿದು ಶಸ್ತ್ರಚಿಕಿತ್ಸೆ ಮಾಡಿಸಿಕೊಂಡಿದ್ದೇನೆ. ಕರ್ನಾಟಕ ಸರ್ಕಾರಿ ಸೇವಾ ನಿಯಮಾವಳಿಯ ಯಾವ ನಿಯಮದಡಿಯಲ್ಲಿ ವೈದ್ಯಕೀಯ ರಜೆಯನ್ನು ಪಡೆಯಬಹುದು?

|ಶಿಲಾರತ್ನ ಧಾರವಾಡ

ಕರ್ನಾಟಕ ಸರ್ಕಾರಿ ಸೇವಾ ನಿಯಮಾವಳಿಯ ನಿಯಮ 183ರಡಿಯಲ್ಲಿ ಅಧಿಕೃತ ವೈದ್ಯಕೀಯ ವೈದ್ಯಾಕಾರಿಗಳಿಂದ ನಿಯಮ 189ರಲ್ಲಿ ಸೂಚಿಸಲಾದ ನಮೂನೆಯಲ್ಲಿ ವೈದ್ಯಕೀಯ ಪ್ರಮಾಣ ಪತ್ರವನ್ನು ಸಲ್ಲಿಸಿ ರಜೆ ಪಡೆಯಬಹುದು.
***

19-2-16

ಮುಂಬಡ್ತಿಯನ್ನು ಬಿಟ್ಟುಕೊಡಬೇಕಾಗುತ್ತದೆಯೇ?

ನನ್ನನ್ನು 2006ರಲ್ಲಿ ಬೆರಳಚ್ಚುಗಾರನ ಹುದ್ದೆಯಿಂದ ಶೀಘ್ರಲಿಪಿಕಾರ ಹುದ್ದೆಗೆ ನಿಯಮ 32ರಡಿಯಲ್ಲಿ ಪ್ರಭಾರದಲ್ಲಿರಿಸಲಾಗಿದೆ. 2006ರಿಂದಲೇ ನನ್ನ ಶೀಘ್ರಲಿಪಿಕಾರನ ಹುದ್ದೆ ಸಕ್ರಮಗೊಳಿಸಿದಲ್ಲಿ ನಾನು ಈಗಾಗಲೇ ಪಡೆದಿರುವ ಪ್ರಭಾರ ಭತ್ಯೆಯನ್ನು ವಾಪಸ್ಸು ಮಾಡಬೇಕಾಗುತ್ತದೆಯೇ? ಹಾಗೆಯೇ, ಬೆರಳಚ್ಚುಗಾರನ ಹುದ್ದೆಯಲ್ಲಿ ಪಡೆದಿರುವ 10 ಮತ್ತು 15 ವರ್ಷಗಳ ಕಾಲಮಿತಿ ಮುಂಬಡ್ತಿಯನ್ನು ಬಿಟ್ಟುಕೊಡಬೇಕಾಗುತ್ತದೆಯೇ?

|ಎಸ್.ಎಂ. ಪಾಟೀಲ್, ಶೀಘ್ರಲಿಪಿಕಾರ ವಾಣಿಜ್ಯ ತೆರಿಗೆ ಇಲಾಖೆ

ಕರ್ನಾಟಕ ಸರ್ಕಾರಿ (ಪಿಪಿಪಿ) ನಿಯಮಾವಳಿ 1973ರ ರೀತ್ಯ ನಿಮ್ಮನ್ನು ಪೂರ್ವಾನ್ವಯವಾಗಿ ಪದೋನ್ನತಿಗೊಳಿಸಿದಲ್ಲಿ ನಿಮಗೆ ಆಗಿನಿಂದಲೇ ವೇತನಬಡ್ತಿ ಇತ್ಯಾದಿ ಸೌಲಭ್ಯಗಳು ಲಭ್ಯವಾಗುವುದರಿಂದ ನಿಮ್ಮ ವೇತನದಲ್ಲಿ ಏನೂ ವ್ಯತ್ಯಾಸವಾಗದಿದ್ದಲ್ಲಿ ಈ ಪ್ರಭಾರ ಭತ್ಯೆಯನ್ನು ಹಿಂದಿರುಗಿಸುವುದಾಗಲೀ ಅಥವಾ 10-15 ವರ್ಷಗಳ ಕಾಲ ಮಿತಿ ಬಡ್ತಿಯನ್ನು ಬಿಟ್ಟುಕೊಡುವುದಾಗಲೀ ಅವಶ್ಯವಿರುವುದಿಲ್ಲ.
***

20-2-16

ಎಚ್ಐವಿ ಪೀಡಿತನಾಗಿದ್ದು ಕರ್ತವ್ಯಕ್ಕೆ ರಾಜಿನಾಮೆ ನೀಡಲು ಅರ್ಹನೆ?

ತಾಂತ್ರಿಕ ಶಿಕ್ಷಣ ಇಲಾಖೆಯಲ್ಲಿ 2003ರಿಂದ ಪ್ರಥಮ ದರ್ಜೆ ಸಹಾಯಕರಾಗಿ ಕಾರ್ಯ ನಿರ್ವಹಿಸುತ್ತಿದ್ದೇನೆ. ಆದರೆ, ಎಚ್​ಐವಿ ಪೀಡಿತನಾಗಿರುವ ಕಾರಣ ಕರ್ತವ್ಯ ನಿರ್ವಹಿಸಲು ಆಗುತ್ತಿಲ್ಲ. ದಿನೇ ದಿನೇ ಕಾಯಿಲೆ ಉಲ್ಬಣಗೊಳ್ಳುತ್ತಿರುವ ಕಾರಣ ಕರ್ತವ್ಯಕ್ಕೆ ರಾಜೀನಾಮೆ ನೀಡಲು ನಾನು ಅರ್ಹನೇ ಅಥವಾ ಅನರ್ಹನೇ ಎಂಬ ಗೊಂದಲ ಪರಿಹರಿಸಿ.

|ಕೃಷ್ಣ ಎನ್.

ಈ ಗಂಭೀರ ಸ್ವರೂಪದ ಕಾಯಿಲೆಯ ಹೊರತಾಗಿಯೂ ಕರ್ನಾಟಕ ಸರ್ಕಾರಿ ಸೇವಾ ನಿಯಮಾವಳಿಯ ನಿಯಮ 285(2) ರೀತ್ಯಾ ಕನಿಷ್ಠ ಹದಿನೈದು ವರ್ಷ ಸೇವೆ ಸಲ್ಲಿಸದ ಹೊರತು ಸ್ವಯಂ ನಿವೃತ್ತಿ ಹೊಂದಲು ಅವಕಾಶ ಇರುವುದಿಲ್ಲ. ರಾಜೀನಾಮೆ ಸಲ್ಲಿಸಿದರೂ ಯಾವುದೇ ನಿವೃತ್ತಿವೇತನ, ಸೌಲಭ್ಯಗಳು ಲಭ್ಯವಾಗುವುದಿಲ್ಲ. ಆದ್ದರಿಂದ ನೀವು ಸದ್ಯದ ಪರಿಸ್ಥಿತಿಯಲ್ಲಿ ಸ್ವಯಂ ನಿವೃತ್ತಿಹೊಂದಲು ಅನರ್ಹರಾಗಿರುತ್ತೀರಿ.
***

21-2-16.

ಮಾತೃತ್ವ ರಜೆ ಪಡೆಯುವ ಅರ್ಹತೆ ಕುರಿತು ತಿಳಿಸಿ.

ನಾನು ಸರ್ಕಾರಿ ನೌಕರಳಾಗಿದ್ದು 10 ವರ್ಷಗಳ ಕಾಲ ಸೇವೆ ಸಲ್ಲಿಸಿದ್ದೇನೆ. ನನಗೊಂದು ಮಗುವಿದ್ದು, 2ನೇ ಮಗು ಏಳೂವರೆ ತಿಂಗಳಿಗೆ ಜನಿಸಿ 20 ದಿನಗಳ ಬಳಿಕ ಮರಣ ಹೊಂದಿದೆ. ಕೆ.ಸಿ.ಎಸ್.ಆರ್. ಪ್ರಕಾರ ನಾನು ಆರೂವರೆ ತಿಂಗಳು ಹೆರಿಗೆ ರಜೆ ಪಡೆದಿದ್ದರೂ ಮಗು ಮರಣ ಹೊಂದಿರುವ ಕಾರಣ ಈ ರಜೆ ಪಡೆಯಲು ಅರ್ಹಳಲ್ಲ ಎಂದು ಕಚೇರಿಯಲ್ಲಿ ಹೇಳುತ್ತಿದ್ದಾರೆ. ನಿಯಮಾವಳಿ ರೀತ್ಯ ನಾನು ಮಾತೃತ್ವ ರಜೆ ಪಡೆಯಲು ಅರ್ಹಳಾಗಿದ್ದೇನೆಯೇ ಸೂಚಿಸಿ.

| ಗೀತಾ ಅರಸಿಕೆರೆ ತಾಲೂಕು, ಹಾಸನಜಿಲ್ಲೆ

ಕರ್ನಾಟಕ ಸರ್ಕಾರಿ ಸೇವಾ ನಿಯಮಾವಳಿಯ ನಿಯಮ 135ರಡಿಯಲ್ಲಿ ಮಹಿಳಾ ಸರ್ಕಾರಿ ನೌಕರರಿಗೆ 2 ಜೀವಂತ ಮಕ್ಕಳ ಪಾಲನೆಗೆ 180 ದಿನಗಳ ಹೆರಿಗೆ ರಜೆ ಪಡೆಯಲು ಅವಕಾಶ ಕಲ್ಪಿಸಲಾಗಿದೆ. ನಿಮ್ಮ 2ನೇ ಮಗು ಅಲ್ಪ ಕಾಲದಲ್ಲೇ ಮರಣ ಹೊಂದಿದ್ದರೂ ನೌಕರಳ ಆರೋಗ್ಯ ಸ್ಥಿತಿ ಉತ್ತಮಗೊಳ್ಳಲು ಈ ಹೆರಿಗೆ ರಜೆ ನೀಡುವುದು ನಿಯಮಾವಳಿ ರೀತ್ಯಾ ನ್ಯಾಯೋಚಿತವಾಗಿದೆ. ಹಾಗಾಗಿ ನಿಮ್ಮ ಕಚೇರಿಯವರು ತಳೆದಿರುವ ತಗಾದೆಯು ನಿಯಮಬದ್ಧವಾಗಿಲ್ಲ.
***

22-2-16.

ನನ್ನ ಮೊದಲ ಹೆಂಡತಿಗೆ 2 ಮಕ್ಕಳಾಗಿದ್ದು ಅವಳಿಗೆ ಮುಂದೆ ಮಕ್ಕಳಾಗದಂತೆ ಆಪರೇಷನ್ ಮಾಡಿಸಿ ಕುಟುಂಬ ಯೋಜನೆಯ ವಿಶೇಷ ಭತ್ಯೆಯನ್ನು ಪ್ರತಿ ತಿಂಗಳು ಪಡೆಯುತ್ತಿರುತ್ತೇನೆ. ಅನಂತರ ಕಾರಣಾಂತರಗಳಿಂದ ನಾವು ಕಾನೂನಿನ ಮೂಲಕ ವಿಚ್ಛೇದನವನ್ನು ಪಡೆದಿರುತ್ತೇವೆ. 2ನೇ ಹೆಂಡತಿಗೆ 1 ಗಂಡು ಮಗು ಜನಿಸಿದ್ದು, ಈಗ ಮೂರು ಮಕ್ಕಳಿರುವ ಹಿನ್ನೆಲೆಯಲ್ಲಿ ಸರ್ಕಾರದಿಂದ ಸಿಗುವ ವಿಶೇಷ ಭತ್ಯೆಯ ಸೌಲಭ್ಯವನ್ನು ಕಡಿತಗೊಳಿಸಲಾಗುತ್ತದೆಯೆ?

|ಮಂಜುನಾಥ್ ಶಿಕ್ಷಕರು, ಮಂಡ್ಯ

ಕರ್ನಾಟಕ ಸರ್ಕಾರದ 1985ರ ಸರ್ಕಾರಿ ಆದೇಶದಲ್ಲಿ 2 ಜೀವಂತ ಮಕ್ಕಳಿರುವವರಿಗೆ ಮಾತ್ರ ಈ ವಿಶೇಷ ಭತ್ಯೆಯನ್ನು ಉತ್ತೇಜನ ಪೂರ್ವಕವಾಗಿ ನೀಡಲಾಗುತ್ತಿದೆ. ನಿಮಗೆ ಎರಡನೇ ಪತ್ನಿಯಲ್ಲಿ ಮತ್ತೊಂದು ಮಗು ಜನಿಸಿರುವುದರಿಂದ ನೀವು ಈ ವಿಶೇಷ ಭತ್ಯೆಯನ್ನು ಈ ಮಗು ಜನಿಸಿದ ದಿನಾಂಕದಿಂದ ಸರ್ಕಾರಕ್ಕೆ ಹಿಂತಿರುಗಿಸಿ ಕಡಿತಗೊಳಿಸಿಕೊಳ್ಳಬೇಕು.
***

23-2-16.

ಎಲ್ಟಿಸಿ ಸೌಲಭ್ಯದಡಿ ವಿಮಾನ ಪ್ರಯಾಣ ಮಾಡಬಹುದೇ?

ನಾನು ಬಿ ಗ್ರೂಪ್ ವೃಂದಕ್ಕೆ ಸೇರಿದ್ದು ಎಲ್​ಟಿಸಿ ಸೌಲಭ್ಯದಡಿ ಅಂಡಮಾನ್ ದ್ವೀಪ ಸಮೂಹಕ್ಕೆ ಪ್ರವಾಸ ಮಾಡಿದೆ. ಈ ಸಂಬಂಧ ಸಾರ್ವಜನಿಕ ಶಿಕ್ಷಣ ಇಲಾಖೆಯ ಆಯುಕ್ತರು ಘಟನೋತ್ತರ ಅನುಮತಿ ನೀಡಿದ್ದಾರೆ. ಈ ದ್ವೀಪ ಸಮೂಹಗಳಿಗೆ ರೈಲು ಮತ್ತು ರಸ್ತೆ ಸಂಪರ್ಕವಿಲ್ಲದಿರುವುದರಿಂದ ವಿಮಾನ ಪ್ರಯಾಣಕ್ಕೆ ಅವಕಾಶವಿದೆಯೇ?

|ಎಚ್. ಆರ್. ಗಂಗಾಧರ್ ಬೆಂಗಳೂರು

ಕರ್ನಾಟಕ ಸರ್ಕಾರಿ ಸೇವಾ ನಿಯಮಾವಳಿಯ ನಿಯಮ 550ರಡಿಯಲ್ಲಿ ರೈಲು ಅಥವಾ ರಸ್ತೆ ಸಂಪರ್ಕ ಇಲ್ಲದಿರುವ ಅಂಡಮಾನ್ ದ್ವೀಪ ಸಮೂಹಕ್ಕೆ ಹೋಗಿಬರಲು ನಿಯಮ 451ರಡಿಯಲ್ಲಿ ವರ್ಗೀಕರಿಸಲಾದ ಅಧಿಕಾರಿ ವರ್ಗದವರಿಗೆ ಅವರು ಹೊಂದಿರುವ ಮೂಲ ವೇತನದ ಆಧಾರದ ಮೇಲೆ ವಿಮಾನದ ಮೂಲಕ ಪ್ರಯಾಣಿಸಲು ಅವಕಾಶವಿದೆ. ನಿಮ್ಮ ಮೂಲವೇತನ ಈ ನಿಯಮಾವಳಿ ರೀತ್ಯಾ ಇದ್ದರೆ ನೀವು ವಿಮಾನ ಪ್ರಯಾಣಕ್ಕೆ ಎಲ್​ಟಿಸಿ ಸೌಲಭ್ಯವನ್ನು ಪಡೆಯಬಹುದು. ಇಲ್ಲದೆ ಹೋದಲ್ಲಿ ಪ್ರಥಮ ದರ್ಜೆ ರೈಲು ಪ್ರಯಾಣದ ದರವನ್ನು ನಿಮಗೆ ನೀಡಲಾಗುವುದು.
***

24-2-16.

ನಾನು ಪೊಲೀಸ್ ಇಲಾಖೆಯಲ್ಲಿ 8 ವರ್ಷ ಕಾಲ ಪೇದೆಯಾಗಿ ಸೇವೆ ಸಲ್ಲಿಸಿ, ಇಲಾಖೆಯ ಅನುಮತಿ ಪಡೆದು ಇತ್ತೀಚೆಗೆ ನಡೆದ ಸಿಇಟಿ ಪರೀಕ್ಷೆಯಲ್ಲಿ ಪ್ರಾಥಮಿಕ ಶಾಲಾ ಶಿಕ್ಷಕನಾಗಿ ಆಯ್ಕೆ ಆಗಿರುತ್ತೇನೆ. ಆದರೆ, ನಮ್ಮ ಶಾಲೆಯ ಮುಖ್ಯೋಪಾಧ್ಯಾಯರು ನಿಮ್ಮ ಹಿಂದಿನ ಸೇವೆಯ ಸಾಂರ್ದಭಿಕ ರಜೆ ಮತ್ತು ನಿರ್ಬಂಧಿತ ರಜೆ ಲೆಕ್ಕಕ್ಕೆ ಬರುವುದಿಲ್ಲ. ನೀವು ಹೊಸದಾಗಿ ಸೇವೆಗೆ ಸೇರಿರುವುದರಿಂದ ತಿಂಗಳಿಗೆ ಒಂದು ದಿನದಂತೆ ಸಾಂರ್ದಭಿಕ ರಜೆ ನೀಡಲಾಗುವುದೆಂದು ತಿಳಿಸಿರುತ್ತಾರೆ. ನಾನು ಪೊಲೀಸ್ ಇಲಾಖೆಯಲ್ಲಿದ್ದಾಗ ನನ್ನ ಲೆಕ್ಕದಲ್ಲಿ 11 ಸಾಂರ್ದಭಿಕ ರಜೆ ಮತ್ತು 2 ನಿರ್ಬಧಿಂತ ರಜೆ ಇದ್ದು ಈ ರಜೆಯು ಪ್ರಾಥಮಿಕ ಶಾಲಾ ಶಿಕ್ಷಕ ಹುದ್ದೆಯಲ್ಲೂ ಮುಂದುವರಿಯುವುದೇ ಎಂದು ನಿಯಮಾವಳಿ ಪ್ರಕಾರ ಪರಿಹಾರ ಸೂಚಿಸಿ.

|ಎಂ.ಎಸ್. ನಾಗರಾಜ್ ಗುಂಡ್ಲುಪೇಟೆ, ಚಾಮರಾಜನಗರ

ಕರ್ನಾಟಕ ಸರ್ಕಾರಿ ಸೇವಾ ನಿಯಮಾವಳಿಯ ನಿಯಮ 252ಬಿಯಂತೆ ನೀವು ಪೊಲೀಸ್ ಪೇದೆಯ ಹುದ್ದೆಗೆ ರಾಜೀನಾಮೆ ಸಲ್ಲಿಸಿ ಪ್ರಾಥಮಿಕ ಶಾಲಾ ಶಿಕ್ಷಕರ ಹುದ್ದೆಗೆ ಕರ್ತವ್ಯಕ್ಕೆ ಹಾಜರಾಗಿದ್ದರೆ ಈ ನಿಯಮಾವಳಿಯ ಅನುಬಂಧ ಬಿನಂತೆ 15 ದಿನಗಳ ಕಾಲ ಸಾಂರ್ದಭಿಕ ರಜೆ ಮತ್ತು ನಿರ್ಬಂಧಿತ ರಜೆ ಮುಂದುವರಿಯುತ್ತದೆ. ನೀವು ಈಗಾಗಲೇ ಹೇಳಿದಂತೆ ಇಲಾಖಾ ಅನುಮತಿ ಪಡೆದು ಅರ್ಜಿ ಸಲ್ಲಿಸಿರುವುದರಿಂದ ನಿಮ್ಮ ಲೆಕ್ಕದಲ್ಲಿರುವ 11 ದಿನಗಳ ಸಾಂರ್ದಭಿಕ ರಜೆ ಮತ್ತು 2 ದಿನ ನಿರ್ಬಂಧಿತ ರಜೆ ಪ್ರಾಥಮಿಕ ಶಾಲಾ ಹುದ್ದೆಯಲ್ಲೂ ಮುಂದುವರಿಯುತ್ತವೆ. ನಿಮ್ಮ ಮುಖ್ಯೋಪಾಧ್ಯಾಯರು ತೆಗೆದಿರುವ ಆಕ್ಷೇಪ ನಿಯಮಾವಳಿ ರೀತ್ಯಾ ಸರಿಯಾದ ಕ್ರಮವಲ್ಲ.
***

25-2-16.

ಒಬ್ಬ ಸರ್ಕಾರಿ ನೌಕರನ ವಿರುದ್ಧ 2006ರಲ್ಲಿ ಶಿಕ್ಷಣ ಇಲಾಖೆಯ ಅಧಿಕಾರಿಯು ಒಂದೇ ಆರೋಪಕ್ಕೆ ಸಂಬಂಧಪಟ್ಟಂತೆ ಏಕಕಾಲದಲ್ಲಿ ಇಲಾಖಾ ವಿಚಾರಣೆ ಕಾಯ್ದಿರಿಸಿ ಮತ್ತು ಎರಡು ಕ್ರಿಮಿನಲ್ ದಾವೆ ದಾಖಲಿಸಿದ್ದಾರೆ. ಅದಾಗಿ 9 ವರ್ಷವಾದರೂ ಸಹ ಇದುವರೆಗೂ ಇಲಾಖಾ ವಿಚಾರಣೆ ದಾವೆಯಾಗಲೀ ಅಥವಾ ಕ್ರಿಮಿನಲ್ ದಾವೆಯಾಗಲಿ ಇತ್ಯರ್ಥವಾಗಿಲ್ಲ . ಈ ವಿಚಾರವಾಗಿ ನೌಕರನಿಗೆ ದಯವಿಟ್ಟು ಸಲಹೆ ನೀಡಿ.

|ಚಿಕ್ಕತಿಮ್ಮಯ್ಯ ಕೆ. ಕಿರುಗಾವಲು, ಮಂಡ್ಯಜಿಲ್ಲೆ

ಕರ್ನಾಟಕ ಸರ್ಕಾರಿ ಸೇವಾ (ಸಿಸಿಎ) ನಿಯಮಾವಳಿ ರೀತ್ಯಾ ಸರ್ಕಾರಿ ನೌಕರನ ವಿರುದ್ಧ ಇರುವ ಯಾವುದೇ ಇಲಾಖಾ ವಿಚಾರಣೆಯನ್ನು 6 ತಿಂಗಳೊಳಗೆ ಮುಗಿಸಬೇಕೆಂದು ಸರ್ಕಾರವು ಆದೇಶಿಸಿದೆ. ಅಲ್ಲದೆ ಕ್ರಿಮಿನಲ್ ಮೊಕದ್ದಮೆಯನ್ನೂ ಸಹ ಕೂಡಲೇ ಇತ್ಯರ್ಥಗೊಳಿಸಬೇಕೆಂದು ಈ ನಿಯಮಾವಳಿ ತಿಳಿಸುತ್ತದೆ. ಹೀಗಾಗಿದ್ದರೂ 9 ವರ್ಷದಿಂದ ಪ್ರಕರಣ ಇತ್ಯರ್ಥ ಪಡಿಸದಿರುವುದು ಉದ್ದೇಶ ಪೂರ್ವಕವಾದ ನಿಧಾನ ಪ್ರವೃತ್ತಿಯಾಗಿರಬಹುದು ಈ ಹಿನ್ನೆಲೆಯಲ್ಲಿ ಸ್ವಾಭಾವಿಕ ನ್ಯಾಯವನ್ನು ಪಡೆಯಲು ನ್ಯಾಯಾಲಯದ ಮೊರೆ ಹೋಗಬಹುದು.
***

26-2-16.

ಅಮಾನತ್ತಿನಲ್ಲಿರುವವರು ಮೃತಪಟ್ಟರೆ ಅವರ ನೌಕರಿ ಕುಟುಂಬದವರಿಗೆ ದೊರೆಯುವುದೇ?

ನನ್ನ ಪತಿ ಸರ್ಕಾರಿ ನೌಕರರಾಗಿದ್ದು ಲೋಕಾಯುಕ್ತ ಟ್ರ್ಯಾಪ್​ನಲ್ಲಿ ಸಿಲುಕಿ 5 ತಿಂಗಳ ಕಾಲ ಅಮಾನತ್ತಿನಲ್ಲಿದ್ದರು. ದಿನಾಂಕ 5-1-2016ರಂದು ಮಾನಸಿಕ ವ್ಯಾಕುಲತೆಯಿಂದಾಗಿ ಹೃದಯಾಘಾತವಾಗಿ ನಿಧನ ಹೊಂದಿರುತ್ತಾರೆ. ನಾನು ನನ್ನ ಪತಿಯವರ ನೇಮಕಾತಿ ಪ್ರಾಧಿಕಾರಕ್ಕೆ ಅನುಕಂಪದ ಮೇರೆಗೆ ನೇಮಕಾತಿ ಮಾಡಿಕೊಳ್ಳಲು ಅರ್ಜಿಯನ್ನು ಸಲ್ಲಿಸಿದಾಗ, ಪತಿ ಅಮಾನತ್ತಿನಲ್ಲಿದ್ದ ಕಾರಣ ಅನುಕಂಪದ ಆಧಾರದ ಮೇಲೆ ಸರ್ಕಾರಿ ನೌಕರಿ ನೀಡಲು ಸಾಧ್ಯವಿಲ್ಲವೆಂದು ಅರ್ಜಿಯನ್ನು ತಿರಸ್ಕರಿಸಿದ್ದಾರೆ. ಇದಕ್ಕೆ ಸೂಕ್ತ ಪರಿಹಾರ ಸೂಚಿಸಿ.

| ವಸಂತಕುಮಾರಿ, ಶಿವಮೊಗ್ಗ

ಕರ್ನಾಟಕ ಸರ್ಕಾರಿ ಸೇವಾ ನಿಯಮಾವಳಿ ರೀತ್ಯಾ ನಿಮ್ಮ ಪತಿಯವರು ಅಮಾನತ್ತಿನಲ್ಲಿದ್ದರೂ ನಿಯಮ 100ರಡಿಯಲ್ಲಿ ಜೀವನಾಧಾರ ಭತ್ಯೆ ಪಡೆಯುತ್ತಿರುವುದರಿಂದ ಸರ್ಕಾರಿ ನೌಕರರ ಎಲ್ಲ ಹಕ್ಕುಬಾಧ್ಯತೆಗಳನ್ನು ಹೊಂದಿರುತ್ತಾರೆ. ಹೀಗಿರುವಲ್ಲಿ ನೇಮಕಾತಿ ಪ್ರಾಧಿಕಾರದವರು 1996ರ (ಅನುಕಂಪದ ಆಧಾರದ ಮೇಲೆ ನೇಮಕಾತಿ) ನಿಯಮಗಳ ರೀತ್ಯಾ ಅನುಕಂಪದ ಆಧಾರದ ಮೇಲೆ ನೇಮಕಾತಿ ನೀಡಬೇಕಾಗುತ್ತದೆ. ನೇಮಕಾತಿ ಪ್ರಾಧಿಕಾರಿಯ ನಿಮ್ಮ ಅರ್ಜಿಯನ್ನು ತಿರಸ್ಕರಿಸಿದ್ದರೆ ನಿಯಮಾವಳಿಯ ಉಲ್ಲಂಘನೆ ಆಗುತ್ತದೆ.
***

27-2-16.

ನನ್ನ ಸ್ನೇಹಿತರು ಆರೋಗ್ಯ ಇಲಾಖೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದು ಸೇವೆಯಲ್ಲಿರುವಾಗಲೇ ಮರಣ ಹೊಂದಿರುತ್ತಾರೆ. ಅವರ ಪತ್ನಿ ಶಿಕ್ಷಣ ಇಲಾಖೆಯಲ್ಲಿ ಶಿಕ್ಷಕರಾಗಿ ಸೇವೆಯಲ್ಲಿದ್ದಾರೆ. ಪತ್ನಿಗೆ 5 ಲಕ್ಷ ರೂ. ವಾರ್ಷಿಕ ವೇತನ ಬರುತ್ತಿದೆ ಎಂಬ ಕಾರಣಕ್ಕೆ ಮೃತರ ಮಗನಿಗೆ ಅನುಕಂಪದ ಆಧಾರದಲ್ಲಿ ಹುದ್ದೆ ನಿರಾಕರಿಸಲಾಗಿದೆ. ಆರೋಗ್ಯ ಇಲಾಖೆಯ ಈ ಕ್ರಮ ಸರಿಯೇ? ದಯಮಾಡಿ ಸೂಕ್ತ ಸಲಹೆ ನೀಡಬೇಕಾಗಿ ವಿನಂತಿ.

|ಕರಗುಂದ ರಾಮಣ್ಣ ಅಜ್ಜರಕಾಡು, ಉಡುಪಿ

‘ಕರ್ನಾಟಕ ಸರ್ಕಾರಿ ಸೇವಾ (ಅನುಕಂಪದ ಆಧಾರದ ಮೇಲೆ ನೇಮಕಾತಿ) ನಿಯಮಗಳು 1996’ರ ನಿಯಮ 4ರಡಿಯಲ್ಲಿ ಅನುಕಂಪದ ಆಧಾರದ ಮೇಲೆ ನೇಮಕವಾಗಬೇಕಾದರೆ ಮೃತ ಸರ್ಕಾರಿ ನೌಕರನ ಕುಟುಂಬವು ಆರ್ಥಿಕ ಮುಗ್ಗಟ್ಟಿನಲ್ಲಿ ಇರಬೇಕು ಅಥವಾ ಜೀವನಾಧಾರರಹಿತವಾಗಿರಬೇಕು. ಆ ಕುಟುಂಬದ ಆವರ್ತಕ ಮಾಸಿಕ ವರಮಾನವು ಎಲ್ಲ ಮೂಲಗಳಿಂದ ಪ್ರಥಮ ದರ್ಜೆ ಹುದ್ದೆಯ ವೇತನ ಶ್ರೇಣಿಯ ಕನಿಷ್ಠ ಮತ್ತು ಗರಿಷ್ಠ ವೇತನದ ಸರಾಸರಿ ವೇತನಕ್ಕೆ ಲಭ್ಯವಾಗುವ ಭತ್ಯೆಗಳನ್ನು ಒಳಗೊಂಡಂತೆ ಒಟ್ಟು ಬರುವ ಉಪಲಬ್ಧಿಗಿಂತ ಕಡಿಮೆ ಇದ್ದರೆ ಅಂತಹ ನೌಕರನ ಕುಟುಂಬವು ಆರ್ಥಿಕ ಮುಗ್ಗಟ್ಟಿನಿಂದ ಪಾರಾಗಿದೆ ಎಂದು ಪರಿಗಣಿಸಬೇಕೆಂದು ಸೂಚಿಸಲಾಗಿದೆ. ಹೀಗಿರುವಲ್ಲಿ ನಿಮ್ಮ ಸ್ನೇಹಿತರ ವಾರ್ಷಿಕ ಆದಾಯವು 5 ಲಕ್ಷ ರೂ. ಇರುವುದರಿಂದ ಇಲಾಖೆಯು ನೀಡಿರುವ ಹಿಂಬರಹ ನಿಯಮಾವಳಿ ರೀತ್ಯಾ ಕ್ರಮಬದ್ಧವಾಗಿದೆ.
***

28-2-16.

ಅನುಕಂಪದ ಆಧಾರದ ಮೇಲೆ ನೌಕರಿ ಪಡೆಯುವ ನಿಯಮಾವಳಿಗಳೇನು?

ನಮ್ಮ ತಂದೆಯವರು ದಿನಾಂಕ 31-12-2015 ರಂದು ಸರ್ಕಾರಿ ಸೇವೆಯಿಂದ ನಿವೃತ್ತರಾಗಿ ಅಂದೇ ರಾತ್ರಿ 11 ಗಂಟೆಗೆ ಹೃದಯಾಘಾತದಿಂದ ನಿಧನ ಹೊಂದಿರುತ್ತಾರೆ. ನಾನು ನಮ್ಮ ತಂದೆಯವರ ನೇಮಕಾತಿ ಪ್ರಾಧಿಕಾರಕ್ಕೆ ಅನುಕಂಪದ ಆಧಾರದ ಮೇಲೆ ನೇಮಕಾತಿ ನೀಡಬೇಕೆಂದು ಅರ್ಜಿಯನ್ನು ಸಲ್ಲಿಸಿದ್ದಕ್ಕಾಗಿ ನಿಮ್ಮ ತಂದೆಯವರು ದಿನಾಂಕ 31-12-2015 ರಂದು ಸಂಜೆ 5.30ಕ್ಕೆ ನಿವೃತ್ತರಾಗಿ ಅವರನ್ನು ಕಾರ್ಯನಿವೃತ್ತಿಗೊಳಿಸಿರುವುದರಿಂದ ಅನುಕಂಪದ ಆಧಾರದ ಮೇಲೆ ನೇಮಕಾತಿ ನೀಡಲು ಸಾಧ್ಯವಿಲ್ಲವೆಂದು ನನ್ನ ಮನವಿಯನ್ನು ತಿರಸ್ಕರಿಸುತ್ತಾರೆ. ಇದಕ್ಕೆ ಸೂಕ್ತ ಪರಿಹಾರ ಸೂಚಿಸಿ.

|ಬಿ.ಎಲ್. ಶ್ರೀನಾಥ್ ವಿಜಯಪುರ

ಕರ್ನಾಟಕ ಸರ್ಕಾರಿ ಸೇವಾ ನಿಯಮಾವಳಿ ರೀತ್ಯಾ ಸರ್ಕಾರಿ ನೌಕರನೊಬ್ಬ ದಿನದ 24 ಗಂಟೆಯೂ ನೌಕರನಾಗಿರುತ್ತಾನೆ. ಈ ನಿಯಮಾವಳಿಯ ನಿಯಮ 8(24) ರೀತ್ಯಾ ದಿನದ ಪರಿಭಾಷೆಯನ್ನು ತಿಳಿಸಿದ್ದು ಅದರಂತೆ ರಾತ್ರಿ 11 ಗಂಟೆ 59 ನಿಮಿಷದವರೆಗೂ ಸರ್ಕಾರಿ ನೌಕರನಾಗಿರುತ್ತಾನೆ. ಆ ಪ್ರಕಾರ ನಿಮ್ಮ ತಂದೆಯವರು ಸಂಜೆ 5.30ಕ್ಕೆ ನಿವೃತ್ತರಾಗಿದ್ದರೂ ಸೇವೆಯಲ್ಲಿರುವಾಗಲೇ ನಿಧನ ಹೊಂದಿದ ಪ್ರಕರಣದಂತೆ ಕುಟುಂಬಕ್ಕೆ ಎಲ್ಲ ಸೇವಾ ಸೌಲಭ್ಯ ಮತ್ತು ಅನುಕಂಪದ ಆಧಾರದ ಮೇಲೆ ನೇಮಕಾತಿ ಹಕ್ಕು ಇರುತ್ತದೆ. ಈ ದೃಷ್ಟಿಯಿಂದ ನೀವು 1996ರ ಅನುಕಂಪದ ಆಧಾರದ ಮೇಲೆ ನೇಮಕಾತಿ ನಿಯಮಗಳ ರೀತ್ಯಾ ನೇಮಕಾತಿ ಹೊಂದಲು ಅರ್ಹರಾಗಿರುತ್ತೀರಿ. ನೇಮಕಾತಿ ಪ್ರಾಧಿಕಾರದ ನಿಮ್ಮ ಅರ್ಜಿ ತಿರಸ್ಕರಿಸಿರುವುದು ನಿಯಮಾವಳಿಗೆ ವ್ಯತಿರಿಕ್ತವಾಗಿರುತ್ತದೆ.
***

29-2-16.

ವೈದ್ಯಕೀಯ ವೆಚ್ಚದ ಮರುಪಾವತಿ ಗರಿಷ್ಠ ಮೊತ್ತ ಎಷ್ಟು?

ನಾನು ಪದವಿ ಪೂರ್ವ ಕಾಲೇಜಿನಲ್ಲಿ ಉಪನ್ಯಾಸಕನಾಗಿದ್ದು, ಕಳೆದ 6 ವರ್ಷಗಳಿಂದ ನರರೋಗಿಯಾಗಿದ್ದೇನೆ. ನಾನು ಒಂದು ವರ್ಷಕ್ಕೆ ಗರಿಷ್ಠ ಎಷ್ಟು ಮೊತ್ತ ವೈದ್ಯಕೀಯ ವೆಚ್ಚದ ಮರುಪಾವತಿಗೆ ಕ್ಲೇಮ್ ಮಾಡಿಕೊಳ್ಳಬಹುದು. ಈ ಬಗ್ಗೆ ವಿವರ ತಿಳಿಸಿ.

|ಕೆ.ಎನ್. ಅಶ್ವತ್ಥಪ್ಪ, ಬಾಗೇಪಲ್ಲಿ

ಕರ್ನಾಟಕ ಸರ್ಕಾರಿ ನೌಕರರ (ವೈದ್ಯಕೀಯ ಚಿಕಿತ್ಸಾ ) ನಿಯಮಗಳು 1963ರ ಪ್ರಕಾರ ನೀವು ಸರ್ಕಾರದಿಂದ ಮಾನ್ಯತೆ ಪಡೆದ ಖಾಸಗಿ ಆಸ್ಪತ್ರೆಗಳಲ್ಲೂ ಚಿಕಿತ್ಸೆ ಪಡೆಯಬಹುದಾಗಿದ್ದು ಚಿಕಿತ್ಸೆಯ ಪೂರ್ಣ ವೆಚ್ಚವನ್ನು ಈ ನಿಯಮಾವಳಿ ರೀತ್ಯಾ ಮರುಪಾವತಿ ಪಡೆಯಬಹುದು. ಈ ರೀತಿಯಾಗಿ ವೈದ್ಯಕೀಯ ವೆಚ್ಚವನ್ನು ನಿಯಮಾವಳಿ ರೀತ್ಯಾ ಕಾಲಕಾಲಕ್ಕೆ ನಿಗದಿತ ಅತ್ಯವಶ್ಯಕ ಪ್ರಮಾಣ ಪತ್ರದೊಂದಿಗೆ ಅರ್ಜಿಯನ್ನು ಸಲ್ಲಿಸಿ ಸಿಜಿಹೆಚ್​ಎಸ್ ಪದ್ಧತಿಯಲ್ಲಿ ನಿಗದಿಪಡಿಸಿದ ಮೊಬಲಿಗಿನಷ್ಟು ಮರುಪಾವತಿ ಪಡೆಯಬಹುದು.

1-1-16

ನಾನು 1987ರಲ್ಲಿ ದ್ವಿತೀಯ ದರ್ಜೆ ಸಹಾಯಕರ ಹುದ್ದೆಗೆ ಅನುದಾನ ರಹಿತ ಶಾಲೆಗೆ ಸೇರಿದೆ. ಈ ಶಾಲೆಯು 1992ರಲ್ಲಿ ಅನುದಾನಕ್ಕೊಳಪಟ್ಟಿದ್ದು, ನನ್ನ ಹಿಂದಿನ 6 ವರ್ಷಗಳ ಸೇವೆಯನ್ನು ನಿವೃತ್ತಿ ವೇತನಕ್ಕೆ ಪರಿಗಣಿಸುತ್ತಾರೆಯೇ? ಸದ್ಯ ನನಗೆ 2 ವರ್ಷ ಮಾತ್ರ ಸೇವಾವಧಿ ಉಳಿದಿದ್ದು, ನನಗೆ ವಿಶ್ರಾಂತಿ ವೇತನ ದೊರಕುತ್ತದೆಯೇ?

|ಕೆ.ಎಲ್.ವಿಜಯಕುಮಾರ್, ಕುಣಿಗಲ್, ತುಮಕೂರು

ನಿಮ್ಮ ಹಿಂದಿನ ಸೇವೆಯನ್ನು ಸರ್ಕಾರ ನೀಡುವ ಅನುಮೋದನೆಯ ಷರತ್ತುಗಳಿಗೊಳಪಟ್ಟು ರಜೆ ಮತ್ತು ನಿವೃತ್ತಿ ವೇತನಕ್ಕೆ ಪರಿಗಣಿಸಲಾಗುತ್ತದೆ.
***

2-1-16.

ನಾನು 3 ವರ್ಷಗಳಿಂದ ರಾಜ್ಯ ಸರ್ಕಾರಿ ನೌಕರನಾಗಿ ಸೇವೆ ಸಲ್ಲಿಸುತ್ತಿದ್ದು, ಸರ್ಕಾರದ ಬೇರೊಂದು ನೌಕರಿಗೆ ಆನ್​ಲೈನ್​ನಲ್ಲಿ ಅರ್ಜಿ ಸಲ್ಲಿಸುವಾಗ ನೀವು ಸರ್ಕಾರಿ ನೌಕರರೇ? ಎಂಬ ಕಾಲಂನಲ್ಲಿ ಇಲ್ಲ ಎಂದು ನಮೂದಿಸಿ ಆಯ್ಕೆಯಾಗಿರುತ್ತೇನೆ. ನಾನು ನಮ್ಮ ಮೇಲಧಿಕಾರಿಗಳಿಂದ ಎನ್​ಒಸಿ ಪಡೆಯದೇ ಅರ್ಜಿಯಲ್ಲಿ ಇಲ್ಲ ಎಂದು ನಮೂದಿಸಿರುವುದು ಅಪರಾಧವಾದೀತೇ? ಭವಿಷ್ಯದಲ್ಲಿ ತೊಡಕಾದೀತೇ?

| ರಘುರಾಮ, ಮಂಡ್ಯ

ಕರ್ನಾಟಕ ಸರ್ಕಾರಿ ಸೇವಾ (ಸಾಮಾನ್ಯ ನೇಮಕಾತಿ) ನಿಯಮಾವಳಿ 1977ರ ರೀತ್ಯ ಪ್ರತಿಯೊಬ್ಬ ಸರ್ಕಾರಿ ನೌಕರರು ಬೇರೊಂದು ಹುದ್ದೆಗೆ ಅರ್ಜಿ ಸಲ್ಲಿಸುವಾಗ ನಿರಾಕ್ಷೇಪಣಾ ಪ್ರಮಾಣಪತ್ರ ಪಡೆಯುವುದು ಕಡ್ಡಾಯವಾಗಿದ್ದು, ನೀವು ಅರ್ಜಿಯಲ್ಲಿ ಇಲ್ಲ ಎಂದು ನಮೂದಿಸಿರುವುದು ಶಿಸ್ತು ನಿಯಮಾವಳಿಯ ಉಲ್ಲಂಘನೆಯಾಗುತ್ತದೆ. ಇದರಿಂದಾಗಿ ನೀವು ಎರಡೂ ಕಡೆಯೂ ಉದ್ಯೋಗಾವಕಾಶವನ್ನು ಕಳೆದುಕೊಳ್ಳುವ ಸಂಭವವುಂಟಾಗುತ್ತದೆ.
***

3-1-16.

1963ರ ಕರ್ನಾಟಕ ಸರ್ಕಾರಿ ಸೇವಾ (ವೈದ್ಯೋಪಚಾರ) ನಿಯಮಾವಳಿ ರೀತ್ಯ ತಂದೆ ತಾಯಿಯವರ ಮಾಸಿಕ ಆದಾಯ ರೂ. 4,000ಕ್ಕಿಂತ ಕಡಿಮೆ ಇದ್ದರೆ ವೈದ್ಯಕೀಯ ವೆಚ್ಚದ ಹಿಂಭರ್ತಿಗೆ ಅರ್ಹರು. ಈ ನಿಯಮದ ಆದಾಯದ ಮಿತಿ ಹೆಚ್ಚಿಸಲಾಗಿದೆಯೇ? ಅಥವಾ ಪೂರ್ಣವಾಗಿ ಮಿತಿಯನ್ನು ತೆಗೆಯಲಾಗಿದೆಯೇ? ದಯವಿಟ್ಟು ತಿಳಿಸಿ.

|ಕೆ. ರಮೇಶ್ ಸಿದ್ಧಾರ್ಥ ನಗರ, ಮೈಸೂರು

ಕರ್ನಾಟಕ ಸರ್ಕಾರಿ ನೌಕರರ ವೈದ್ಯಕೀಯ (ಚಿಕಿತ್ಸೆ) ನಿಯಮಾವಳಿ 63ರ ನಿಯಮ 2(ಜಿಜಿ) ಪ್ರಕಾರ ತಂದೆತಾಯಿಯವರ ವಾರ್ಷಿಕ ಆದಾಯ 6,000 ರೂಪಾಯಿಗಳನ್ನು ಮೀರದಿದ್ದರೆ ಹಿಂಭರ್ತಿಗೆ ಅರ್ಹರು ಎಂದು ತಿದ್ದುಪಡಿ ಮಾಡಲಾಗಿದೆ. (ಸಆಸಂಖ್ಯೆ ಡಿಪಿಎಆರ್ 26, ಎಸ್​ಎಂಆರ್ 2012, ದಿನಾಂಕ 27-3-2012) (ಹೆಚ್ಚಿನ ವಿವರಗಳಿಗೆ ಲ. ರಾಘವೇಂದ್ರರವರು ಬರೆದ ಕರ್ನಾಟಕ ಸರ್ಕಾರಿ ನೌಕರರ (ವೈದ್ಯಕೀಯ ಚಿಕಿತ್ಸಾ ) ಕಾನೂನು ಕೈಪಿಡಿಯನ್ನು ನೋಡಬಹುದು.)
***

4-1-16

ಮಹಿಳಾ ನೌಕರರು ಎಷ್ಟು ಬಾರಿ ಹೆರಿಗೆ ರಜೆ ಸೌಲಭ್ಯ ಪಡೆಯಬಹುದು? ಎಷ್ಟು ಅವಧಿಯವರೆಗೆ ಪಡೆಯಬಹುದು? ಪ್ರಸವಪೂರ್ವ/ ಪ್ರಸವೋತ್ತರವೆಂಬ ನಿಯಮವೇನಾದರೂ ಇದೆಯೇ ? ಮಗುವಿನ ಆರೈಕೆಗೆ ಮತ್ತೆ ರಜೆಯನ್ನು ಮುಂದುವರಿಸಬಹುದೇ?

| ಸೀಮಾ ಕುಣಿಗಲ್ ತಾಲೂಕು, ತುಮಕೂರು

ಕರ್ನಾಟಕ ಸರ್ಕಾರಿ ಸೇವಾ ನಿಯಮಾವಳಿಯ ನಿಯಮ 135ರ ರೀತ್ಯ ಹೆರಿಗೆ ರಜೆಯನ್ನು ಪ್ರಸವಪೂರ್ವದಿಂದಲೇ 180 ದಿನಗಳವರೆಗೆ ಪಡೆಯಬಹುದು. ಆದರೆ ಈ ರಜೆ 2ಕ್ಕಿಂತ ಕಡಿಮೆ ಮಕ್ಕಳಿರುವ ನೌಕರರಿಗೆ ಮಾತ್ರ ಮಂಜೂರು ಮಾಡಲಾಗುತ್ತದೆ. ಮಗುವಿನ ಆರೈಕೆಗಾಗಿ 60 ದಿನಗಳಿಗೆ ಮೀರದಂತೆ ವೈದ್ಯಕೀಯ ಪ್ರಮಾಣ ಪತ್ರದ ಆಧಾರದ ಮೇಲೆ ಮುಂದುವರಿದ ಇತರ ರಜೆಯನ್ನು ಪಡೆಯಬಹುದು.
***

6-1-15.

ಒಂದು ಹುದ್ದೆಯಲ್ಲಿ ಸರ್ಕಾರ ನಿಗದಿಪಡಿಸಿದ ಗರಿಷ್ಠ ವೇತನ ಮಿತಿ ತಲುಪಿದ ಮೇಲೆ ಲಭ್ಯವಾಗುವ ಸ್ಥಗಿತ ವೇತನದ ಬಡ್ತಿ ಪಡೆಯಲು ಇಲಾಖೆಯ ನೇಮಕಾತಿ ಪ್ರಾಧಿಕಾರದಿಂದ ಪ್ರಥಮ ಸ್ಥಗಿತ ವೇತನ ಮೊದಲ್ಗೊಂಡು ಪ್ರತಿವರ್ಷ ಮಂಜೂರಾತಿ ಪತ್ರ ಪಡೆಯಬೇಕೇ? ಹಾಗೆ ಮಂಜೂರಾತಿ ಪಡೆಯದೆ ಸ್ಥಗಿತ ವೇತನ ಬಡ್ತಿಯನ್ನು ಕಚೇರಿ ಮುಖ್ಯಸ್ಥರ ಅನುಮತಿಯೊಂದಿಗೆ ಸೇರ್ಪಡೆ ಮಾಡಿ ತೆಗೆದದ್ದಾದರೆ ನಿವೃತ್ತಿ ವೇತನದ ಸಂದರ್ಭದಲ್ಲಿ ಏನಾದರೂ ತೊಂದರೆಯಾಗುತ್ತದೆಯೇ?

|ಶಿವಾನಂದ ಬಿ. ಮರಿಗೇರಿ ಸಹಶಿಕ್ಷಕರು, ಚಿಕ್ಕೊಪ್ಪ, ಬೆಳಗಾವಿ

ಸರ್ಕಾರಿ ಆದೇಶ ಸಂಖ್ಯೆ ಎಫ್​ಡಿ 3, ಎಫ್​ಆರ್​ಪಿ 96, ದಿನಾಂಕ 18-3-1996ರ ಪ್ಯಾರಾ 7ರಲ್ಲಿ ಎ ಮತ್ತು ಬಿ ಗುಂಪಿನ ಹುದ್ದೆಗಳಿಗೆ ಸಂಬಂಸಿದಂತೆ ಸ್ಥಗಿತ ವೇತನವನ್ನು ಆಡಳಿತ ಇಲಾಖೆಯ ಮುಖ್ಯಸ್ಥರು ಮಂಜೂರು ಮಾಡುವ ಅಧಿಕಾರ ಹೊಂದಿರುತ್ತಾರೆ. ಅದೇ ರೀತಿಯಾಗಿ ಸಿ ಮತ್ತು ಡಿ ಗುಂಪಿನ ಹುದ್ದೆಗಳಿಗೆ ಸಂಬಂಧಿಸಿದಂತೆ ಜಿಲ್ಲಾಮಟ್ಟದ ಅಧಿಕಾರಿಗಳು ಮಂಜೂರು ಮಾಡುವ ಪ್ರಾಧಿಕಾರಿಯಾಗಿರುತ್ತಾರೆ. ಆದ ಕಾರಣ ನೀವು ಜಿಲ್ಲಾಮಟ್ಟದ ಅಧಿಕಾರಿಯಿಂದ (ಡಿಡಿಪಿಐ) ಮಂಜೂರು ಮಾಡಿಸಿಕೊಂಡರೆ ನಿವೃತ್ತಿ ಸಂದರ್ಭದಲ್ಲಿ ಯಾವುದೇ ತೊಂದರೆಯಾಗುವುದಿಲ್ಲ.
***

7-1-16.

ನಾನು ಕನ್ನಡ ಸಾಹಿತ್ಯ ಪರಿಷತ್ತಿನ ಕಾರ್ಯಕಾರಿ ಮಂಡಳಿಗೆ ನಡೆಯುವ ಚುನಾವಣೆಯಲ್ಲಿ ಸ್ಪರ್ಧಿಸಲು ಇಚ್ಛಿಸಿದ್ದೇನೆ. ನಾನು ಸರ್ಕಾರಿ ನೌಕರನಾಗಿದ್ದು ಈ ಚುನಾವಣೆಗೆ ಸ್ಪರ್ಧಿಸಲು ಸರ್ಕಾರದ ಪೂರ್ವಾನುಮತಿ ಅಗತ್ಯವೇ? |ನಟೇಶ್

ಕರ್ನಾಟಕ ಸರ್ಕಾರಿ ಸೇವಾ (ನಡತೆ ) ನಿಯಮಗಳು 1966ರ ನಿಯಮ 6ರ ಪ್ರಕಾರ ಸರ್ಕಾರಿ ನೌಕರರು ಭಾರತದ ಸಾರ್ವಭೌಮತ್ವ ಮತ್ತು ಅಖಂಡತೆಗೆ ಅಥವಾ ನೈತಿಕತೆಯ ಹಿತಾಸಕ್ತಿಗೆ ಧಕ್ಕೆ ಉಂಟು ಮಾಡುವಂಥ ಸಂಘ-ಸಂಸ್ಥೆಗಳಿಗೆ ಸೇರಿಕೊಳ್ಳತಕ್ಕದ್ದಲ್ಲ ಎಂದು ನಿರ್ಬಂಧಿಸಲಾಗಿದೆ. ಆದರೆ, ನಿಯಮ 16 (3)ರ ಪ್ರಕಾರ ಸಾಹಿತ್ಯಿಕ, ವೈಜ್ಞಾನಿಕ ಅಥವಾ ಧರ್ವತ್ಮಕ ಸಂಘಗಳ ನಿರ್ವಹಣೆಯಲ್ಲಿ ಸರ್ಕಾರದ ಪೂರ್ವಾನುಮತಿಯಿಲ್ಲದಿದ್ದರೂ ಸರ್ಕಾರಿ ನೌಕರರು ಪಾಲ್ಗೊಳ್ಳಬಹುದು ಎಂದು ಸೂಚಿಸಲಾಗಿದೆ. ಅಲ್ಲದೆ ಕನ್ನಡ ಸಾಹಿತ್ಯ ಪರಿಷತ್ತಿನ ನಿಬಂಧನೆಗಳಲ್ಲಿ ಸರ್ಕಾರಿ ನೌಕರರು ಪರಿಷತ್ತಿನ ಕಾರ್ಯಕಾರಿ ಮಂಡಳಿಯ ಚುನಾವಣೆಗೆ ಸ್ಪರ್ಧಿಸುವ ಬಗ್ಗೆ ನಿರ್ದಿಷ್ಟವಾದ ಷರತ್ತುಗಳು ಇಲ್ಲವಾದ್ದರಿಂದ ಯಾವುದೇ ಅಭ್ಯರ್ಥಿಗಳ ನಾಮಪತ್ರಗಳನ್ನು ತಿರಸ್ಕರಿಸುವಂತಿಲ್ಲ ಎಂಬುದಾಗಿ ಪರಿಷತ್ತಿನ ಕೇಂದ್ರ ಚುನಾವಣಾಕಾರಿಗಳು ಸ್ಪಷ್ಟನೆ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ನೀವು ಪರಿಷತ್ತಿನ ಕಾರ್ಯಕಾರಿ ಸಮಿತಿಯ ಚುನಾವಣೆಗೆ ಸ್ಪರ್ಧಿಸಬಹುದಾಗಿದೆ. (ಹೆಚ್ಚಿನ ವಿವರಗಳಿಗೆ ಎಂ. ಉಮೇಶ್ ಅವರ ನಡತೆ ನಿಯಮಗಳು ಸಮಗ್ರ ಕೈಪಿಡಿಯನ್ನು ನೋಡಬಹುದು).

ಕಾನೂನು ಪುಸ್ತಕ ಮಾಹಿತಿ

ಲ. ರಾಘವೇಂದ್ರ ಅವರು ಬರೆದಿರುವ ಕರ್ನಾಟಕ ಸರ್ಕಾರಿ ಸೇವಾ ನಿಯಮಗಳು (ಕೆಸಿಎಸ್​ಆರ್​ಎಸ್ ) ಕೃತಿಯು ರಾಜ್ಯ ಸರ್ಕಾರಿ ನೌಕರರಿಗೆ ಲಭ್ಯವಾಗತಕ್ಕ ರಜೆ, ಸೇರಿಕೆ ಕಾಲ, ವೇತನ ನಿಗದೀಕರಣ, ನಿವೃತ್ತಿ ವೇತನ ಸೌಲಭ್ಯಗಳು, ಪ್ರಯಾಣ ಭತ್ಯೆ, ಪ್ರಭಾರ ಭತ್ಯೆ, ಇತ್ಯಾದಿ ಅಂಶಗಳನ್ನು ಒಳಗೊಂಡ ಕಾನೂನು ಸಂಹಿತೆಯಾಗಿದೆ. ಈ ಕೃತಿ ನೂತನ ವೇತನ ಶ್ರೇಣಿಯೊಂದಿಗೆ ಕಾಲಮಿತಿ ಬಡ್ತಿ ವೇತನಗಳು 20, 25, 30 ವರ್ಷಗಳ ಸೇವಾ ಅವಧಿಗೆ ಹೆಚ್ಚುವರಿ ವೇತನ ಬಡ್ತಿ, ಇತ್ಯಾದಿ ಮಾಹಿತಿಗಳನ್ನು ಒಳಗೊಂಡಿದೆ. ಬೆಂಗಳೂರಿನ ಶ್ರೀ ರಾಘವೇಂದ್ರ ಪ್ರಕಾಶನದವರು ಪ್ರಕಟಿಸಿದ್ದಾರೆ.
***

8-1-16

ನಾನು ರಾಜ್ಯ ಸರ್ಕಾರಿ ಸೇವೆಯಲ್ಲಿದ್ದು, 2016ರ ಮೇ 31ರಂದು ನಿವೃತ್ತನಾಗಲಿದ್ದೇನೆ. ನಾನು 15 ದಿನಗಳ ಸಾಂರ್ದಭಿಕ ರಜೆ ಹಾಗೂ 2 ದಿನಗಳ ನಿರ್ಬಂಧಿತ ರಜೆ ಉಪಯೋಗಿಸಿಕೊಳ್ಳಲು ಸಾಧ್ಯವೇ?

|ಶಿವಾನಂದ ಜಲಸಂಪನ್ಮೂಲ ಇಲಾಖೆ, ಕಲಬುರಗಿ

ಕರ್ನಾಟಕ ಸರ್ಕಾರಿ ಸೇವಾ ನಿಯಮಾವಳಿಯ ಅನುಬಂಧ ಬಿ ಯಲ್ಲಿ ಸರ್ಕಾರಿ ನೌಕರರಿಗೆ ಪ್ರತಿ ಕ್ಯಾಲೆಂಡರ್ ವರ್ಷದಲ್ಲಿ 15 ದಿನಗಳ ಕಾಲ ಸಾಂರ್ದಭಿಕ ರಜೆ ಮಂಜೂರು ಮಾಡಲು ಅವಕಾಶವಿದ್ದು, ಒಂದು ಬಾರಿಗೆ 7 ದಿನಗಳಿಗಿಂತ ಹೆಚ್ಚು ಮಂಜೂರು ಮಾಡಬಾರದೆಂದು ತಿಳಿಸಲಾಗಿದೆ. ಈ ನಿಯಮಾವಳಿಯಲ್ಲಿ ನೀವು 2016ರ ಮೇನಲ್ಲಿ ನಿವೃತ್ತಿಯಾಗುವುದರಿಂದ 15 ದಿನಗಳ ಸಾಂರ್ದಭಿಕ ರಜೆಯನ್ನು ಉಪಯೋಗಿಸಿಕೊಳ್ಳಬಹುದಾಗಿದೆ. ಅಲ್ಲದೆ 2 ದಿನಗಳ ನಿರ್ಬಂಧಿತ ರಜೆಯನ್ನೂ ಪಡೆದುಕೊಳ್ಳಬಹುದು.
***

9-1-16

ನನ್ನ ಪತಿ ಸರ್ಕಾರಿ ನೌಕರಿಯಲ್ಲಿರುವಾಗಲೇ ನಿಧನರಾಗಿದ್ದಾರೆ. ನನ್ನ ಮಗಳು ಅವಿವಾಹಿತೆಯಾಗಿದ್ದು, ಸರ್ಕಾರಿ ನೌಕರಿಯಲ್ಲಿದ್ದಾಳೆ. ನನ್ನ ಮಗನಿಗೆ 20 ವರ್ಷ ತುಂಬಿದೆ. ನನ್ನ ಮಗನಿಗೆ ಅನುಕಂಪದ ಆಧಾರದ ಮೇಲೆ ಸರ್ಕಾರಿ ನೌಕರಿ ಸಿಗುತ್ತದೆಯೇ?

|ಸಾವಿತ್ರಮ್ಮ ಹಿರಿಯೂರು, ಚಿತ್ರದುರ್ಗ

ಕರ್ನಾಟಕ ಸರ್ಕಾರಿ ಸೇವಾ (ಅನುಕಂಪದ ನೇಮಕ) ನಿಯಮಾವಳಿ ನಿಯಮ 1996ರ ಮೇರೆಗೆ ನಿಮ್ಮ ಪತಿಯವರು ನಿಧನಹೊಂದಿದ 1 ವರ್ಷದೊಳಗೆ ಅನುಕಂಪದ ಮೇಲೆ ನೇಮಕ ಮಾಡಿಕೊಳ್ಳಲು ಸಂಬಂಧಿತ ನೇಮಕಾತಿ

ಪ್ರಾಧಿಕಾರಕ್ಕೆ ನಿಮ್ಮ ಮಗ ಅರ್ಜಿ ಸಲ್ಲಿಸಬೇಕು. ಈ ಅರ್ಜಿಯ ಆಧಾರದ ಮೇಲೆ ಅವನಿಗೆ ವಿದ್ಯಾರ್ಹತೆಯ ಹಿನ್ನೆಲೆಯಲ್ಲಿ ಸರ್ಕಾರಿ ನೌಕರಿ ಲಭ್ಯವಾಗುತ್ತದೆ.
***

10:1:16.

ನಾನು ವಿಶ್ವವಿದ್ಯಾನಿಲಯದ ಮುದ್ರಣಾಲಯದಲ್ಲಿ ಕಂಪೋಸಿಟರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದು 2014ರ ಮಾರ್ಚ್​ನಲ್ಲಿ ಸ್ವಯಂಚಾಲಿತ ವಿಶೇಷ ಬಡ್ತಿ ಪಡೆದಿದ್ದೇನೆ. ಅಲ್ಲದೆ 2015ರಲ್ಲಿ ಪದೋನ್ನತಿಯನ್ನು ಹೊಂದಿದ್ದು ನನಗೆ ಈ ಪದೋನ್ನತಿಯ ವೇತನ ಬಡ್ತಿಯನ್ನು ನೀಡಲು ಬರುವುದಿಲ್ಲವೆಂದು ತಿಳಿಸಿರುತ್ತಾರೆ. ಸೂಕ್ತ ಪರಿಹಾರ ನೀಡಿ.

| ಪಿ.ವಿ. ಮಂಜುನಾಥ್ ಮೈಸೂರು ವಿಶ್ವವಿದ್ಯಾನಿಲಯ, ಮೈಸೂರು

ಕರ್ನಾಟಕ ಸರ್ಕಾರಿ ಸೇವಾ ನಿಯಮಾವಳಿಯ (ಸ್ವಯಂಚಾಲಿತ) ವಿಶೇಷ ಮುಂಬಡ್ತಿ ನಿಯಮದಂತೆ ನೀವು ವೇತನ ಬಡ್ತಿಯನ್ನು ಪಡೆದಿದ್ದರೂ ಸಹ 2015ರಲ್ಲಿ ಪದೋನ್ನತಿಯನ್ನು ಹೊಂದಿರುವುದರಿಂದ ಕರ್ನಾಟಕ ಸರ್ಕಾರಿ ಸೇವಾ ನಿಯಮಾವಳಿಯ 42ಬಿ ಮತ್ತು 42ಸಿ ಮೇರೆಗೆ ನಿಮ್ಮ ವೇತನವನ್ನು ನಿಗದಿ ಪಡಿಸಬೇಕಾಗುತ್ತದೆ. 2 ವರ್ಷದೊಳಗೆ ಪದೋನ್ನತಿ ಪಡೆದರೆ ಅದರ ವೇತನ ಬಡ್ತಿಯನ್ನು ನೀಡಲಾಗುವುದಿಲ್ಲವೆಂದು ಹೇಳುವುದು ನಿಯಮಬದ್ಧವಲ್ಲ.
***

11-1-16.

ನಾನು ಸಾರ್ವಜನಿಕ ಗ್ರಂಥಾಲಯ ಇಲಾಖೆಯಲ್ಲಿ ದಿನಗೂಲಿ ನೌಕರನಾಗಿ 1-1-1990ರಿಂದ ಸಂಖ್ಯಾತಿರಿಕ್ತ ಹುದ್ದೆಯಲ್ಲಿ ಕಾಯಂ ಆಗಿದ್ದು 26 ವರ್ಷಗಳಿಂದ ಒಂದೇ ಹುದ್ದೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದೇನೆ. ಇದುವರೆಗೂ ಒಂದು ಪದೋನ್ನತಿಯೂ ದೊರಕಿರುವುದಿಲ್ಲ. ಜ್ಯೇಷ್ಠತಾ ಪಟ್ಟಿಯನ್ನು ಸಹ ತಯಾರಿಸದೆ ನನ್ನನ್ನು ಬಡ್ತಿಗೆ ಪರಿಗಣಿಸುತ್ತಿಲ್ಲ. ಅನುಭವ ಅರ್ಹತೆಯಿದ್ದರೂ ನನಗೆ ಬಡ್ತಿ ನೀಡಲಾಗಿಲ್ಲ. ದಯವಿಟ್ಟು ಪರಿಹಾರ ತಿಳಿಸಿ.

|ಮುರುಗೇಶ ಸಂಗಮ ಜಿಲ್ಲಾ ಕೇಂದ್ರ ಗ್ರಂಥಾಲಯ, ಬಬಲೇಶ್ವರ ವಿಜಯಪುರ

ಕರ್ನಾಟಕ ಸರ್ಕಾರಿ ಸೇವಾ ನಿಯಮಾವಳಿಯಂತೆ ಸಂಖ್ಯಾತಿರಿಕ್ತ ಹುದ್ದೆಗಳು ಸಹ ತಾತ್ಕಾಲಿಕ ಹುದ್ದೆಯಾಗಿದ್ದು ಆ ಹುದ್ದೆಗಳಲ್ಲಿ ಸೇವೆ ಸಲ್ಲಿಸುವ ಎಲ್ಲ ನೌಕರರು ಪದೋನ್ನತಿ ಇತ್ಯಾದಿ ಸೇವಾ ಮತ್ತು ಆರ್ಥಿಕ ಸೌಲಭ್ಯಗಳಿಗೆ ಅರ್ಹರು. ಹೀಗಿರುವಲ್ಲಿ ಜ್ಯೇಷ್ಠತಾ ಪಟ್ಟಿಯನ್ನು ಸಿದ್ಧಪಡಿಸಿ ನಿಮಗೆ ಪದೋನ್ನತಿ ನೀಡಬೇಕಾದುದು ಇಲಾಖಾ ಅಧಿಕಾರಿಗಳ ಕರ್ತವ್ಯವಾಗಿರುತ್ತದೆ.
***

12-1-16

ನಾನೊಬ್ಬ ಸರ್ಕಾರಿ ನೌಕರನಾಗಿದ್ದು ಅಧಿಕ ರಕ್ತದೊತ್ತಡದಿಂದ ಬಳಲುತ್ತಿದ್ದೇನೆ. ನನ್ನ ಹೆಂಡತಿಯೂ ಸಹ ಮಧುಮೇಹ ಹಾಗೂ ರಕ್ತದ ಒತ್ತಡದಿಂದ ಬಳಲುತ್ತಿದ್ದು ವೈದ್ಯಕೀಯ ಚಿಕಿತ್ಸೆ ಪಡೆಯಲು ನಿಯಮಾವಳಿಯಲ್ಲಿ ಅವಕಾಶವಿದೆಯೇ?

|ಎನ್.ಎಂ. ಆಳಂದ ಅಬ್ಜಲ್​ಪುರ, ಕಲಬುರಗಿ

ಕರ್ನಾಟಕ ಸರ್ಕಾರಿ ಸೇವಾ (ವೈದ್ಯಕೀಯ ಚಿಕಿತ್ಸಾ) ನಿಯಮಾವಳಿ 1963ರ ರೀತ್ಯ ನೀವು ಸರ್ಕಾರ ಗುರುತಿಸಿದ ಆಸ್ಪತ್ರೆ ಅಥವಾ ಚಿಕಿತ್ಸಾಲಯದಲ್ಲಿ ಚಿಕಿತ್ಸೆ ಪಡೆದು ಅದನ್ನು ಜಿಲ್ಲಾ ಸರ್ಜನ್ ಅವರಿಂದ ಮೇಲು ಸಹಿ ಮಾಡಿಸಿ ವೈದ್ಯಕೀಯ ಚಿಕಿತ್ಸಾ ವೆಚ್ಚದ ಮರುಪಾವತಿಯನ್ನು ಪಡೆಯಬಹುದು.
***

13-1-16.

ಸರ್ಕಾರಿ ನೌಕರನು ಅನಾರೋಗ್ಯದ ನಿಮಿತ್ತ ತುರ್ತು ಚಿಕಿತ್ಸೆಗಾಗಿ ವೈದ್ಯಕೀಯ ರಜೆ ಪಡೆಯಬೇಕಾದರೂ ರಜೆ ಮಂಜೂರು ಮಾಡುವ ಅಧಿಕಾರಿಯ ಪೂರ್ವಾನುಮತಿ ಪಡೆಯುವುದು ಕಡ್ಡಾಯವೇ? ಇಲ್ಲೋರ್ವ ಅಧಿಕಾರಿ

ಈ ರೀತಿ ಲಿಖಿತ ಸೂಚನೆ ನೀಡಿದ್ದಾರೆ. ಇದು ಸರಿಯಾದ ಕ್ರಮವೇ?

|ಎಸ್.ಎನ್. ವರ್ಣೇಕರ್ ಸಪ್ತಾಪುರ, ಧಾರವಾಡ

ಕರ್ನಾಟಕ ಸರ್ಕಾರಿ ಸೇವಾ ನಿಯಮಾವಳಿಯ ನಿಯಮ 183ರಂತೆ ವೈದ್ಯಕೀಯ ಪ್ರಮಾಣ ಪತ್ರವನ್ನು ಸಲ್ಲಿಸಿ ರಜೆಯನ್ನು ಪಡೆಯಬಹುದು. ಆದರೆ ಈ ನಿಯಮಾವಳಿಯಂತೆ ಅನಾರೋಗ್ಯ ನಿಮಿತ್ತ ಪೂರ್ವಾನುಮತಿ ಪಡೆದು ರಜೆ ಅರ್ಜಿ ಸಲ್ಲಿಸಿ ಮಂಜೂರಿ ಮಾಡಿಸಿಕೊಳ್ಳಬೇಕೆಂದು ಹೇಳುವ ನಿಮ್ಮ ಮೇಲಧಿಕಾರಿಯ ಕ್ರಮ ನಿಯಮಬದ್ಧವಲ್ಲ.
***

14-1-16

ನಾನು ಈ ಹಿಂದೆ ಪದವಿಪೂರ್ವ ಶಿಕ್ಷಣ ಇಲಾಖೆಯಲ್ಲಿ ಉಪನ್ಯಾಸಕನಾಗಿದ್ದು, ಲೋಕಸೇವಾ ಆಯೋಗದ ಮೂಲಕ ಸಹಾಯಕ ಪ್ರಾಧ್ಯಾಪಕರ ಹುದ್ದೆಗೆ ಆಯ್ಕೆಯಾಗಿ ದಿನಾಂಕ 7.9.2009ರಿಂದ ಕರ್ತವ್ಯಕ್ಕೆ ಹಾಜರಾಗಿದ್ದೇನೆ. ಇಲಾಖೆ ಅನುಮತಿ ಪಡೆದು ಆಯ್ಕೆಯಾಗಿದ್ದು ಹೊಸ ಹುದ್ದೆಗೆ ಸೇರಿಕೆ ಕಾಲ ಅನ್ವಯವಾಗುತ್ತದೆಯೇ?

|ಟಿ. ದೀಪಕ್ ಕುಮಾರ್ ಸಹಾಯಕ ಪ್ರಾಧ್ಯಾಪಕರು, ಮದ್ದೂರು

ಕರ್ನಾಟಕ ಸರ್ಕಾರಿ ಸೇವಾ ನಿಯಮಾವಳಿಯ ನಿಯಮ 76ರಿಂದ 90 ರವರೆಗೆ ಸಾರ್ವಜನಿಕ ಹಿತದೃಷ್ಟಿಯಿಂದ ವರ್ಗಾವಣೆಯ ನಿಮಿತ್ತ ಸೇರಿಕೆ ಕಾಲ ಅನ್ವಯವಾಗುತ್ತದೆ. ಆದರೆ ನೀವು ಹೊಸ ಹುದ್ದೆಗೆ ನೇಮಕವಾಗಲು ಸ್ವ ಇಚ್ಛೆಯ ಮೂಲಕ ಅರ್ಜಿ ಸಲ್ಲಿಸಿರುವುದರಿಂದ ನೀವು ಸರ್ಕಾರಿ ನೌಕರರಾಗಿದ್ದರೂ ಈ ನಿಯಮಾವಳಿಯ ರೀತ್ಯ ಸೇರಿಕೆ ಕಾಲ ಲಭ್ಯವಾಗುವುದಿಲ್ಲ. ನಿಮ್ಮ ಸೇವಾ ಅವಧಿಯನ್ನು ರಜೆ ಸೌಲಭ್ಯ ಹಾಗೂ ನೂತನ ಪಿಂಚಣಿ ಯೋಜನೆಗೆ ಪರಿಗಣಿಸಲಾಗುತ್ತದೆ.
***

15-1-16

ನಾನು ಮೊದಲ ಸರ್ಕಾರಿ ಹುದ್ದೆಗೆ ಸಿಂಧುತ್ವ ಪ್ರಮಾಣಪತ್ರ ನೀಡಿ ಆಯ್ಕೆಯಾಗಿ, 10 ವರ್ಷ ಸೇವೆ ಸಲ್ಲಿಸಿರುತ್ತೇನೆ. ಈಗ ಅದೇ ಇಲಾಖೆಯ ಇನ್ನೊಂದು ಹುದ್ದೆಗೆ ಅನುಮತಿಯೊಂದಿಗೆ ನೇರ ನೇಮಕಾತಿಯಲ್ಲಿ ಅದೇ ಮೀಸಲಾತಿಯಲ್ಲಿ ಆಯ್ಕೆಯಾಗಿದ್ದು ಮತ್ತೊಮ್ಮೆ ಸಿಂಧುತ್ವ ಪ್ರಮಾಣಪತ್ರವನ್ನು ಮಾಡುವ ಅವಶ್ಯಕತೆ ಇದೆಯೇ ?

| ಪವನ್ ಶಿಕ್ಷಕರು ಹೆಜ್.ಡಿ. ಕೋಟೆ, ಮೈಸೂರು
ಪರಿಶಿಷ್ಟ ಜಾತಿ , ಪರಿಶಿಷ್ಟ ವರ್ಗ ಮತ್ತು ಹಿಂದುಳಿದ ವರ್ಗಗಳ ಮೀಸಲಾತಿ ಅಧಿನಿಯಮ 1992ರಡಿಯಲ್ಲಿ ಹಿಂದುಳಿದ ವರ್ಗಗಳ ಮೀಸಲಾತಿಯ ಸಿಂಧುತ್ವ ಪ್ರಮಾಣ ಪತ್ರವು 5 ವರ್ಷವಾಗಿದ್ದು, ಪರಿಶಿಷ್ಟ ಜಾತಿ/ವರ್ಗದ ಪ್ರಮಾಣ ಪತ್ರವು ಶಾಶ್ವತವಾಗಿರುತ್ತವೆ. ಈ ಹಿನ್ನೆಲೆಯಲ್ಲಿ ನೀವು ಮತ್ತೊಮ್ಮೆ ಹಿಂದುಳಿದ ವರ್ಗಕ್ಕೆ ಸೇರಿದ್ದರೆ ಸಿಂಧುತ್ವ ಪ್ರಮಾಣ ಪತ್ರವನ್ನು ಕ್ರೀಮಿಲೇಯರ್ ದೃಷ್ಟಿಯಿಂದ ಮಾಡಿಸುವುದು ಅವಶ್ಯಕವಾಗಿರುತ್ತದೆ.
***

16-1-16

ನನ್ನ ಮೇಲಧಿಕಾರಿಗಳ ಆದೇಶದ ಮೇಲೆ ನನ್ನ ಕಾರ್ಯವ್ಯಾಪ್ತಿಯಲ್ಲಿ ಬರುವ ಎಲ್ಲಾ ಶಾಲೆಯ ಮಕ್ಕಳ ನೇತ್ರ ತಪಾಸಣೆ ಮತ್ತು ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ನೇತ್ರ ರೋಗಿಗಳ ಪರೀಕ್ಷೆ ಮಾಡಲು ಹೋಗುತ್ತಿದ್ದು, ನನಗೆ 5 ವರ್ಷದಿಂದ ಯಾವುದೇ ಪ್ರವಾಸ ಭತ್ಯೆ ಹಾಗೂ ದಿನಭತ್ಯೆ ಸಂದಾಯವಾಗಿರುವುದಿಲ್ಲ. ಈ ಭತ್ಯೆಗಳನ್ನು ಪಡೆದುಕೊಳ್ಳುವ ರೀತಿ ಹೇಗೆ?

ಬಸವರಾಜ್ ಎಸ್ ಚಿಕ್ಕೊಂಡ ನೇತ್ರಾಧಿಕಾರಿ, ಬಸವನಬಾಗೇವಾಡಿ

ಕರ್ನಾಟಕ ಸರ್ಕಾರಿ ಸೇವಾ ನಿಯಮಾವಳಿಯ ನಿಯಮ 491ರಂತೆ ಯಾರೇ ಸರ್ಕಾರಿ ನೌಕರನು ಕರ್ತವ್ಯದ ನಿಮಿತ್ತ ವ್ಯಾಪಕವಾಗಿ ಪ್ರಯಾಣ ಮಾಡಬೇಕಾಗಿದೆಯೋ ಅಂತಹ ನೌಕರನಿಗೆ ಖಾಯಂ ಮಾಸಿಕ ಪ್ರಯಾಣ ಭತ್ಯೆಯನ್ನು ಮಂಜೂರು ಮಾಡಬಹುದೆಂದು ತಿಳಿಸಲಾಗಿದೆ. ಅಂಥ ಭತ್ಯೆಯನ್ನು ಸರ್ಕಾರಿ ನೌಕರನ ಅಧಿಕಾರ ವ್ಯಾಪ್ತಿಯೊಳಗೆ ಕೈಗೊಳ್ಳುವ ಪ್ರಯಾಣ ಭತ್ಯೆಯ ಬದಲಾಗಿ ಮಂಜೂರು ಮಾಡಬಹುದಾಗಿದೆೆ ಹಾಗೂ ವರ್ಷ ಪೂರ್ತಿ ಪಡೆಯಬಹುದಾಗಿದೆ. ಈ ಹಿನ್ನೆಲೆಯಲ್ಲಿ ನೀವು 494ರ ಅಡಿಯಲ್ಲಿ ಮಾಸಿಕ ಪ್ರಯಾಣ ಭತ್ಯೆಯೊಂದಿಗೆ ಹೆಚ್ಚಿನ ದಿನಭತ್ಯವನ್ನು ಸಹ ಪಡೆಯಬಹುದು.
***

17-1-16

ನಾನು ಸರ್ಕಾರಿ ನೌಕರನಾಗಿದ್ದು, ನಮಗೆ ಇನ್ನೂ ಮಗುವಾಗದೆ ಇರುವುದರಿಂದ ನನ್ನ ಸಹೋದರನು ತನ್ನ ಮಗುವನ್ನು ದತ್ತುಕೊಡಲು ಒಪ್ಪಿದ್ದಾನೆ. ಬರುವ ಫೆಬ್ರವರಿ ಮೊದಲನೇ ವಾರದಲ್ಲಿ ಡೆಲಿವರಿ ಸಮಯದಲ್ಲಿ ಅವರು ದತ್ತು ನೀಡುತ್ತಾರೆ. ನಾವು ಮಗುವನ್ನು ದತ್ತು ತೆಗೆದುಕೊಳ್ಳುವುದು ಹೇಗೆ? ನನ್ನ ಸೇವಾ ಪುಸ್ತಕದಲ್ಲಿ ನಾಮ ನಿರ್ದೇಶನ ಹೇಗೆ ಮಾಡಿಸಬೇಕು? ಮಾಹಿತಿ ನೀಡಿ.

| ಹೆಸರು ಮತ್ತು ಊರು ಬೇಡ

ಹಿಂದು ದತ್ತಕ ಕಾಯ್ದೆ ಅಡಿಯಲ್ಲಿ ನೀವು ಮಗುವನ್ನು ದತ್ತು ತೆಗೆದುಕೊಳ್ಳಬೇಕು. ದತ್ತು ತೆಗೆದುಕೊಂಡ ಮಗುವನ್ನು ನೋಂದಣಿ ಮಾಡಿಸಿ ಕರ್ನಾಟಕ ಸರ್ಕಾರಿ ಸೇವಾ ನಿಯಮಾವಳಿಯ ನಿಯಮ 302ರಂತೆ ನಿಮ್ಮ ದತ್ತಕ ಮಗುವನ್ನು ನಾಮ ನಿರ್ದೇಶನ ಮಾಡಿಸಬೇಕು. ಆಗ ನಿಮ್ಮ ಸ್ವಂತ ಮಗುವಿಗೆ ದೊರಕುವಂತೆ ಎಲ್ಲಾ ಸರ್ಕಾರಿ ಸೌಲಭ್ಯಗಳು ಈ ಮಗುವಿಗೂ ಸಹ ದೊರಕುತ್ತದೆ.
***

18-1-16

ನಾನು ವಿದ್ಯಾ ಇಲಾಖೆಯಲ್ಲಿ ಸೇವೆಗೆ ಸೇರಿ ವಯೋನಿವೃತ್ತಿ ಹೊಂದಿದ್ದು, ನನ್ನ ಪತಿ ಸಹ ಆರೋಗ್ಯ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾಗ ನಿಧನ ಹೊಂದಿದ್ದಾರೆ. ಅಂದಿನಿಂದ ನಾನು ಕುಟುಂಬ ನಿವೃತ್ತಿ ವೇತನವನ್ನು ಪಡೆಯುತ್ತಿದ್ದೇನೆ. ನನ್ನ ಮಗನಿಗೆ ಆರೋಗ್ಯ ಇಲಾಖೆಯಲ್ಲಿ ದ್ವಿತೀಯ ದರ್ಜೆ ಸಹಾಯಕರ ಹುದ್ದೆಗೆ ನೇಮಕವಾಗಿದ್ದು ನನ್ನ ಮತ್ತು ನನ್ನ ಪತಿಯ ಕುಟುಂಬ ವೇತನವನ್ನು ಪಡೆಯುತ್ತಿರುವುದರಿಂದ ಅನುಕಂಪದ ಮೇಲೆ ನೇಮಕವಾದ ನನ್ನ ಮಗನಿಗೆ ಮುಂದೆ ಕಾನೂನಿನ ತೊಡಕು ಎದುರಾಗಬಹುದೇ? ದಯವಿಟ್ಟು ತಿಳಿಸಿ.

ಬಿ. ಶಕುಂತಲಾದೇವಿ ರಾಜಾಜಿನಗರ, ಬೆಂಗಳೂರು

2002ರ ಕುಟುಂಬ ನಿವೃತ್ತಿ ವೇತನ ನಿಯಮಾವಳಿಯ ರೀತ್ಯ ಪತಿ, ಪತ್ನಿ ಇಬ್ಬರಿಗೂ ಸಂದಾಯವಾಗಬೇಕಾದ ಕುಟುಂಬ ವೇತನವನ್ನು ನೀವು ಪಡೆಯುತ್ತಿದ್ದರೂ ಅನುಕಂಪದ ಮೇಲೆ ನೇಮಕವಾದ ನಿಮ್ಮ ಮಗನ ಭವಿಷ್ಯದ ದೃಷ್ಟಿಯಿಂದ ಯಾವುದೇ ತೊಡಕು ಉಂಟಾಗುವುದಿಲ್ಲ.ದ
***

19-1-16

ನಮ್ಮ ತಂದೆ ತಾಯಿ ಪ್ರಾಥಮಿಕ ಶಾಲಾ ಶಿಕ್ಷಕರಾಗಿದ್ದು 2008ರಲ್ಲಿ ನಮ್ಮ ತಂದೆಯವರು ನಿಧನರಾಗಿದ್ದಾರೆ. ಆಗ ನನ್ನ ವಯಸ್ಸು 15 ವರ್ಷ 8 ತಿಂಗಳು ಆಗಿದ್ದು, ಅನುಕಂಪದ ನೇಮಕಾತಿಗಾಗಿ ಅರ್ಜಿಯನ್ನು ಸಲ್ಲಿಸಿದ್ದೆ. ನನ್ನ ತಾಯಿಯವರಿಗೆ ಕುಟುಂಬ ಪಿಂಚಣಿ ಸೌಲಭ್ಯ ದೊರಕುತ್ತಿದೆ. ನನಗೀಗ ಮದುವೆಯಾಗಿದ್ದು ನಾನು ಅನುಕಂಪದ ಆಧಾರದ ಮೇಲೆ ನೇಮಕಾತಿಗೆ ಅರ್ಹಳಾಗಿರುತ್ತೇನೆಯೇ?

ರಮ್ಯ ಎಸ್.ಎನ್. ಗೌರಿಬಿದನೂರು, ಚಿಕ್ಕಬಳ್ಳಾಪುರ

ಕರ್ನಾಟಕ ಸರ್ಕಾರಿ ಸೇವಾ (ಅನುಕಂಪದ ಮೇಲೆ ನೇಮಕಾತಿ) ನಿಯಮಾವಳಿ ರೀತ್ಯ ಅನುಕಂಪದ ಮೇಲೆ ನೇಮಕಗೊಳ್ಳಲು ಬಯಸುವ ಮರಣ ಹೊಂದಿದ ಸರ್ಕಾರಿ ನೌಕರನ ಅವಲಂಬಿತ ಮಕ್ಕಳು ನಿಧನ ಹೊಂದಿದ 1 ವರ್ಷದೊಳಗೆ 18 ವರ್ಷ ಪೂರ್ಣಗೊಳ್ಳುವಂತಿದ್ದರೆ ಅಂಥವರು ಮಾತ್ರ ಅನುಕಂಪದ ಮೇಲೆ ನೇಮಕಕ್ಕೆ ಅರ್ಹರು. ಈ ಹಿನ್ನೆಲೆಯಲ್ಲಿ ನೀವು ವಿವಾಹವಾಗಿರುವುದರಿಂದ ಈಗ ಅನುಕಂಪದ ಮೇಲೆ ನೇಮಕಗೊಳ್ಳಲು ಅವಕಾಶವಿರುವುದಿಲ್ಲ.
***

20-1-16.

ಹಿಂದಿನ ಕ್ಷೇತ್ರ ಶಿಕ್ಷಣಾಧಿಕಾರಿಯವರ ಸಹಿ ಅವಶ್ಯಕವೇ?

ನನ್ನ ಸೇವಾ ಪುಸ್ತಕವು ಇತ್ತೀಚೆಗೆ ಕಳೆದುಹೋಗಿದ್ದು ಹೊಸ ಸೇವಾ ಪುಸ್ತಕ ಮಾಡಲು ಬರುತ್ತದೆಯೇ? ಬರುವಂತಿದ್ದರೆ ಹೊಸ ಸೇವಾ ಪುಸ್ತಕಕ್ಕೆ ಹಿಂದಿನ ಕ್ಷೇತ್ರ ಶಿಕ್ಷಣಾಧಿಕಾರಿಯವರ ಸಹಿ ಅವಶ್ಯಕವೇ? | ಪ್ರಶಾಂತ್ ಕಣ್ಣೂರು

ಕರ್ನಾಟಕ ಸರ್ಕಾರಿ ಸೇವಾ ನಿಯಮಾವಳಿಯ ನಿಯಮ 397ರಂತೆ ಸೇವಾ ಪುಸ್ತಕವನ್ನು ನಿರ್ವಹಿಸಬೇಕಾಗಿದ್ದು, ಅದರಂತೆ ನಕಲು ಸೇವಾ ಪುಸ್ತಕವನ್ನು ಪ್ರತಿಯೊಬ್ಬ ನೌಕರನಿಗೂ ನೀಡಬೇಕಾಗಿರುವುದು ಕಚೇರಿಯ ಮುಖ್ಯಾಧಿಕಾರಿಯ ಕರ್ತವ್ಯವಾಗಿರುತ್ತದೆ. ನಿಯಮ 415(2)ರಲ್ಲಿ ಮೂಲ ಸೇವಾ ಪುಸ್ತಕ ಕಳೆದು ಹೋದರೆ ದ್ವಿಪ್ರತಿ ಪುಸ್ತಕವನ್ನು ಸಕ್ಷಮ ಪ್ರಾಧಿಕಾರಿಯು ಸಿದ್ಧಪಡಿಸಬೇಕು. ಇದಕ್ಕೆ ಹಿಂದಿನ ಕ್ಷೇತ್ರ ಶಿಕ್ಷಣಾಧಿಕಾರಿಯವರ ಸಹಿ ಬೇಕಾಗುವುದಿಲ್ಲ.
***

21-1-16.

ನಾನು 30.4.2011ರಂದು ಪದೋನ್ನತಿ ಹೊಂದಿ ಕುಂದಾಪುರದಿಂದ ಉಡುಪಿ ನ್ಯಾಯಾಲಯಕ್ಕೆ ಕೆಲಸಕ್ಕೆ ಹಾಜರಾಗಿದ್ದು ನನಗೆ ವರ್ಗಾವಣೆ ಅನುದಾನ ನೀಡಲು ಅರ್ಜಿ ಸಲ್ಲಿಸಿದ್ದೇನೆ. ಆದರೆ ಈಗ ವರ್ಗಾವಣೆ ಅನುದಾನವನ್ನು ಖಜಾನೆಯವರು ತಿರಸ್ಕರಿಸಿದ್ದಾರೆ. ಇದಕ್ಕೆ ಪರಿಹಾರ ತಿಳಿಸಿ.

| ದಿವಾಕರ್​ರಾವ್ ನಿವೃತ್ತ ಶಿರಸ್ತೇದಾರ್, ಉಡುಪಿ

ಕರ್ನಾಟಕ ಸರ್ಕಾರಿ ಸೇವಾ ನಿಯಮಾವಳಿಯ ನಿಯಮ 539ಎ (1)ರ ರೀತ್ಯ ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಸಾರ್ವಜನಿಕ ಹಿತಾಸಕ್ತಿಯಿಂದ ವರ್ಗಾವಣೆಗೊಂಡರೆ ಅಂಥವರಿಗೆ ಈ ವರ್ಗಾವಣಾ ಅನುದಾನವನ್ನು ನೀಡಬೇಕೆಂದು ಸೂಚಿಸುತ್ತದೆ. ಆದರೆ ಒಂದೇ ಊರಿನ ಒಂದು ಕಚೇರಿಯಿಂದ ಮತ್ತೊಂದು ಕಚೇರಿಗೆ ಸಾರ್ವಜನಿಕ ಹಿತಾಸಕ್ತಿಯಿಂದ ವರ್ಗಾವಣೆಯಾದರೆ ಅವರಿಗೆ ಯಾವ ಅನುದಾನವೂ ದೊರಕುವುದಿಲ್ಲ. ಆದ ಕಾರಣ ನಿಮಗೆ ಈ ನಿಯಮಾವಳಿರೀತ್ಯ ವರ್ಗಾವಣೆ ಅನುದಾನ ಲಭ್ಯವಾಗುತ್ತದೆ.
***

22-1-16.

ಸಿಸಿಎ ನಿಯಮಾವಳಿ ಪ್ರಕಾರ ದಂಡನೆ ವಿಧಿಸುವ ಸಾಧ್ಯತೆ ಇದೆಯೇ?
ನಾನು ವೃತ್ತಿಯಲ್ಲಿ ಶಿಕ್ಷಕನಾಗಿದ್ದು, ಈ ಹಿಂದೆ ನನ್ನ ಸಹೋದ್ಯೋಗಿ ಶಿಕ್ಷಕಿಯೊಬ್ಬಳು ಚೀಟಿ ಹಣ ಕೇಳಿದ್ದಕ್ಕೆ ನನ್ನ ವಿರುದ್ಧ ಪೊಲೀಸ್ ಠಾಣೆಯಲ್ಲಿ ಲೈಂಗಿಕ ಕಿರುಕುಳದ ಸುಳ್ಳು ದೂರನ್ನು ದಾಖಲಿಸಿದ್ದಳು. ಅದರ ಆಧಾರದ ಮೇಲೆ ನನ್ನ ವಿರುದ್ಧ ಐಪಿಸಿ 509ರ ಅಡಿಯಲ್ಲಿ ಎಫ್​ಐಆರ್ ದಾಖಲಾಗಿ 7 ವರ್ಷಗಳ ವಿಚಾರಣೆ ನಂತರ ನ್ಯಾಯಾಲಯವು 2000 ರೂ. ದಂಡ ವಿಧಿಸಿದೆ. ಈ ಹಿನ್ನೆಲೆಯಲ್ಲಿ ನನಗೆ ಶಿಕ್ಷಣ ಇಲಾಖೆಯಲ್ಲಿ ಸಿಸಿಎ ನಿಯಮಾವಳಿ ಪ್ರಕಾರ ದಂಡನೆ ವಿಧಿಸುವ ಸಾಧ್ಯತೆ ಇದೆಯೇ?

| ತಮ್ಮಣ್ಣ ಮೈಸೂರು

ಕರ್ನಾಟಕ ಸರ್ಕಾರಿ (ಸೇವಾ) ನಿಯಮಗಳು 1966ರ ನಿಯಮ 21 (4) (ಜಿ) (ಬಿ)ರಡಿಯಲ್ಲಿ ಸರ್ಕಾರಿ ನೌಕರ ಅಥವಾ ಆತನ ಕುಟುಂಬದ ಸದಸ್ಯರು ಬಡ್ಡಿ ವ್ಯವಹಾರ ಅಥವಾ ಚೀಟಿ ವ್ಯವಹಾರ ನಡೆಸುವುದನ್ನು ಪ್ರತಿಬಂಧಿಸುತ್ತದೆ. ಹೀಗಿರುವಾಗ ನೀವು ಈ ರೀತಿ ಚೀಟಿ ವ್ಯವಹಾರವನ್ನು ನಿರ್ವಹಿಸಿರುವುದರಿಂದ ಸಿಸಿಎ ನಿಯಮಾವಳಿಯ ರೀತ್ಯ ನಿಮಗೆ ಕಾಲ ವೇತನ ಶ್ರೇಣಿಯಿಂದ ಕೆಳಗಿನ ಹಂತಕ್ಕೆ ಇಳಿಸಬಹುದು ಅಥವಾ ದಿನಾಂಕ 14-9-2001ರ ಸರ್ಕಾರಿ ಸುತ್ತೋಲೆಯಲ್ಲಿ ನಿಗದಿಪಡಿಸಿರುವ ಯಾವುದಾದರೊಂದು ದಂಡನೆಯನ್ನು ಶಿಸ್ತು ಪ್ರಾಧಿಕಾರ ವಿಧಿಸಬಹುದು.
***

23-1-16

ಅನುಕಂಪದ ಮೇಲೆ ಉದ್ಯೋಗ ಪಡೆಯಬಹುದೇ ?

ನಮ್ಮ ಪೋಷಕರು ಸರ್ಕಾರಿ ಶಾಲೆಗಳಲ್ಲಿ ಶಿಕ್ಷಕರಾಗಿದ್ದು, ನಮ್ಮ ತಾಯಿಯವರು 7 ವರ್ಷಗಳ ಹಿಂದೆ ನಿಧನರಾಗಿದ್ದಾರೆ. ಅದರ ಹಿನ್ನೆಲೆಯಲ್ಲಿ ನನ್ನ ಸಹೋದರನಿಗೆ ಅನುಕಂಪದ ಮೇಲೆ ನೌಕರಿ ಸಿಕ್ಕಿರುತ್ತದೆ ಮತ್ತು ಅವನ ವಿವಾಹವಾಗಿರುತ್ತದೆ. ನನ್ನ ತಂದೆಯವರು 1 ವರ್ಷದ ಕೆಳಗಡೆ ಸೇವೆಯಲ್ಲಿರುವಾಗಲೇ ನಿಧನ ಹೊಂದಿದ್ದು, ನಾನು ಅನುಕಂಪದ ಮೇಲೆ ಉದ್ಯೋಗ ಪಡೆಯಲು ಅರ್ಹನೇ?

| ಸುಮೇಘ ರಾಜ್

ಕರ್ನಾಟಕ ಸರ್ಕಾರಿ ಸೇವಾ (ಅನುಕಂಪದ ಮೇಲೆ ನೇಮಕ) ನಿಯಮಾವಳಿಯ 1996ರ ಅಡಿಯಲ್ಲಿ ನೀವು ನಿಮ್ಮ ತಂದೆಯವರ ನಿಧನ ಪ್ರಯುಕ್ತ ನಿಮಗೆ 18 ವರ್ಷ ಪೂರ್ಣವಾಗಿದ್ದರೆ ನಿಧನದ ದಿನಾಂಕದಿಂದ 1 ವರ್ಷದೊಳಗೆ ಅನುಕಂಪದ ಮೇರೆಗೆ ನೇಮಕಗೊಳ್ಳಲು ಸಕ್ಷಮ ಪ್ರಾಧಿಕಾರಕ್ಕೆ ಅರ್ಜಿಯನ್ನು ಸಲ್ಲಿಸಬಹುದು. ಈ ಹಿನ್ನೆಲೆಯಲ್ಲಿ ನೀವು ಅನುಕಂಪದ ಆಧಾರಕ್ಕೆ ಅರ್ಹರಾಗಿರುತ್ತೀರಿ.
***

24-1-16

ವಿಶೇಷ ವೇತನ ಬಡ್ತಿ ದೊರಕುತ್ತದೆಯೇ ?

ನಾನು ಕುಟುಂಬ ಯೋಜನಾ ಕ್ರಮಗಳನ್ನು ಅನುಸರಿಸಿಕೊಂಡು ಬಂದು 2 ಮಕ್ಕಳ ನಂತರ 2015ರಲ್ಲಿ ನನ್ನ ಪತ್ನಿಗೆ ಸಂತಾನ ಹರಣ ಚಿಕಿತ್ಸೆ ಮಾಡಿಸಿರುತ್ತೇನೆ. ನನಗೆ ಈಗ ಎಷ್ಟು ವಿಶೇಷ ವೇತನ ಬಡ್ತಿ ದೊರಕುತ್ತದೆ?

| ಲೋಕೇಶ್ ಕಂದಾಯ ಇಲಾಖೆ, ಕುಣಿಗಲ್ ತಾಲೂಕು

ದಿನಾಂಕ 1.10.1985ರ (ಸರ್ಕಾರಿ ಆದೇಶ ಸಂಖ್ಯೆ ಎಫ್​ಡಿ 27, ಎಸ್​ಆರ್i​ಎಸ್ 85) ಸರ್ಕಾರಿ ಆದೇಶದಂತೆ ವೈಯಕ್ತಿಕ ವೇತನ ರೂಪದಲ್ಲಿ ನೀಡುವ ಈ ವಿಶೇಷ ವೇತನ ಬಡ್ತಿಯ ದರವು ಮುಂದೆ ಮಂಜೂರಾಗುವ ವೇತನ ಬಡ್ತಿಗೆ ಸಮನಾಗಿದ್ದು ಇಡೀ ಸೇವಾ ಅವಧಿಗೆ ನಿಗದಿ ಪಡಿಸಬೇಕು ಎಂದು ಸೂಚಿಸಲಾಗಿದೆ. ಈ ಹಿನ್ನೆಲೆಯಲ್ಲಿ ನಿಮಗೆ ಪ್ರಸ್ತುತ ವೇತನ ಶ್ರೇಣಿಯಲ್ಲಿನ ಭವಿಷ್ಯದ ವಾರ್ಷಿಕ ವೇತನ ಬಡ್ತಿ ರೂ. 350 ಆಗಿರುವುದರಿಂದ ನಿಮಗೆ ಇದನ್ನೇ ವಿಶೇಷ ವೇತನ ಬಡ್ತಿಯಾಗಿ ನೀಡಬೇಕಾಗುತ್ತದೆ.
***

25-1-16.

ರಜೆ ತೆಗೆದುಕೊಳ್ಳಬಹುದೇ?
15 ದಿನಗಳ ಪಿತೃತ್ವ ರಜೆಯನ್ನು ಹೆರಿಗೆ ಆದ ದಿನದಿಂದ ತೆಗೆದುಕೊಳ್ಳಬಹುದೇ? ಅಥವಾ ಮಾತೃತ್ವ ರಜೆಯ 6 ತಿಂಗಳೊಳಗೆ ಯಾವಾಗಲಾದರೂ ತೆಗೆದುಕೊಳ್ಳಬಹುದೇ?

| ಜಂಬುನಾಥ ಬೆಂತೂರ, ಜಗಳೂರು

ಕರ್ನಾಟಕ ಸರ್ಕಾರಿ ಸೇವಾ ನಿಯಮಾವಳಿಯ ನಿಯಮ 35ಬಿ ಅಡಿಯಲ್ಲಿ ಪತ್ನಿಗೆ ಹೆರಿಗೆ ಪ್ರಾರಂಭದಲ್ಲಿ 15 ದಿನಗಳ ಕಾಲ ಪಿತೃತ್ವ ರಜೆಯನ್ನು ಮಂಜೂರು ಮಾಡಲಾಗುತ್ತದೆ. ಹೀಗಿರುವುದರಿಂದ ನೀವು ಆರಂಭದಲ್ಲಿಯೇ ಈ ರಜೆ ಬಳಸಿಕೊಳ್ಳಬೇಕೇ ವಿನಃ ನಿಮ್ಮ ಪತ್ನಿಯ ಹೆರಿಗೆ ರಜೆಯ 6 ತಿಂಗಳೊಳಗೆ ಯಾವಾಗಲಾದರೂ ತೆಗೆದುಕೊಳ್ಳಲು ಬರುವುದಿಲ್ಲ.
***

26-1-16.

ನಾನು ಪ್ರಾಥಮಿಕ ಶಾಲಾ ಶಿಕ್ಷಕನಾಗಿ 23 ವರ್ಷ ಸೇವೆ ಸಲ್ಲಿಸಿದ್ದು ಪ್ರಸ್ತುತ ಈ ಉದ್ಯೋಗದಲ್ಲಿ ಮುಂದುವರಿಯಲು ಇಷ್ಟವಿರುವುದಿಲ್ಲ. ಬೇರೆ ಯಾವುದಾದರೂ ಇಲಾಖೆಯಲ್ಲಿ ಕೆಲಸ ಸಿಗಬಹುದೇ? ಅಥವಾ ನಿಯೋಜನೆಯ ಮೇರೆಗೆ ಹೋಗಬಹುದೇ?

| ಪ್ರಭಾಕರ ತೀರ್ಥಹಳ್ಳಿ

ಕರ್ನಾಟಕ ಸರ್ಕಾರಿ ಸೇವಾ (ಸಾಮಾನ್ಯ ನೇಮಕಾತಿ) ನಿಯಮಾವಳಿ 1977ರ ರೀತ್ಯ ಸರ್ಕಾರಿ ನೌಕರರು ಬೇರೆ ಇಲಾಖೆಗಳಿಗೆ ತನ್ನ ತತ್ಸಮಾನ ವೇತನ ಶ್ರೇಣಿಯ ಮತ್ತು ವೃಂದದ ಹುದ್ದೆಗಳಿಗೆ ನಿಯೋಜನೆ ಮೇರೆಗೆ ಹೋಗಬಹುದು. ಅಲ್ಲದೆ ಸರ್ಕಾರಿ ನೌಕರನಿಗೆ ಗರಿಷ್ಠ ವಯೋಮಿತಿಯಲ್ಲಿ ಅವನು ಸಲ್ಲಿಸಿದ ಸೇವಾವಧಿ ಅಥವಾ ಗರಿಷ್ಠ 10 ವರ್ಷಗಳ ಕಾಲ ವಿನಾಯಿತಿ ದೊರಕುವುದರಿಂದ ಬೇರೆ ಕೆಲಸಕ್ಕೆ ಹೋಗಬಹುದು.
***

27-1-16.

ನಾನು 13 ವರ್ಷಗಳಿಂದ ಶಾಲಾ ಶಿಕ್ಷಕಿಯಾಗಿದ್ದು, ನನ್ನ 2ನೇ ಮಗಳು ಶೇ. 90ಕ್ಕಿಂತ ಹೆಚ್ಚು ಬುದ್ಧಿಮಾಂಧ್ಯತೆಯಿಂದ ಬಳಲುತ್ತಿದ್ದಾಳೆ. ಅವಳ ಪಾಲನೆಗೆ ಜಿಲ್ಲಾ ವೈದ್ಯಾಧಿಕಾರಿಯಿಂದ ಅಂಗವಿಕಲ ಪ್ರಮಾಣಪತ್ರ ಪಡೆದು ರಜೆ ಅರ್ಜಿಯನ್ನು ಸಲ್ಲಿಸಿದಾಗ ಕ್ಷೇತ್ರ ಶಿಕ್ಷಣಾಧಿಕಾರಿ ತಿರಸ್ಕರಿಸಿದ್ದಾರೆ. ಇದಕ್ಕೆ ಸೂಕ್ತ ಪರಿಹಾರ ತಿಳಿಸಿ?

| ಶ್ರೀಮತಿ ಹರಿಕೃಷ್ಣ ಹಂಚತೆ

ಕರ್ನಾಟಕ ಸರ್ಕಾರಿ ಸೇವಾ ನಿಯಮಾವಳಿಯ ನಿಯಮ 135(ಸಿ)ರಂತೆ ಮಹಿಳಾ ಸರ್ಕಾರಿ ನೌಕರರಿಗೆ ಇಡೀ ಸೇವಾ ಅವಧಿಯಲ್ಲಿ 730 ದಿನಗಳ ಕಾಲ ಶಿಶುಪಾಲನಾ ರಜೆಯನ್ನು ಪಡೆಯಲು ಅವಕಾಶವಿರುತ್ತದೆ. ಈ ರಜೆ ಮಂಜೂರು ಮಾಡಲು ವೈದ್ಯಕೀಯ ಮೂಲ ಪ್ರಮಾಣಪತ್ರವನ್ನು ವೈದ್ಯಕೀಯ ಮಂಡಳಿಯು ದೃಢೀಕರಿಸಿ, ಬುದ್ಧಿಮಾಂಧ್ಯತೆಯಿಂದ ಗುಣವಾಗುವ ಸಾಧ್ಯತೆ ಕಡಿಮೆಯೆಂದು ಪ್ರಮಾಣೀಕರಿಸಿದರೆ ವರ್ಷಕ್ಕೆ 15 ದಿನಕ್ಕಿಂತ ಕಡಿಮೆ ಇಲ್ಲದಂತೆ ಮೂರು ಬಾರಿ ಮಂಜೂರು ಮಾಡಬಹುದು. ಆದ ಕಾರಣ ನೀವು ವೈದ್ಯಕೀಯ ಮಂಡಳಿಯಿಂದ ನಿಮ್ಮ ಪ್ರಮಾಣಪತ್ರವನ್ನು ದೃಢೀಕರಿಸಿದರೆ ಶಿಶುಪಾಲನಾ ರಜೆ ನಿಯಮಾವಳಿ ರೀತ್ಯ ನಿಮಗೆ ರಜೆ ಲಭ್ಯವಾಗುತ್ತದೆ.
***

28-1-16.

ಅನುಕಂಪದ ಆಧಾರದ ಮೇಲೆ ನೇಮಕಾತಿ ಹೊಂದಿ 2 ವರ್ಷದ ನಂತರ ಮದುವೆಯಾಗದೆ ಮರಣ ಹೊಂದಿರುವ ನೌಕರನ ತಂಗಿಗೆ ಅಥವಾ ನೌಕರನ ಅವಲಂಬಿತರಿಗೆ ಅನುಕಂಪದ ಆಧಾರದ ಮೇಲೆ ನೌಕರಿ ದೊರೆಯಬಹುದೇ?

| ಪ್ರಕಾಶ್ ಎಸ್. ಗುಮ್ಮಗೋಳ, ಧಾರವಾಡ

ಕರ್ನಾಟಕ ಸರ್ಕಾರಿ ಸೇವಾ (ಅನುಕಂಪದ ಆಧಾರದ ಮೇಲೆ ನೇಮಕ) ನಿಯಮಾವಳಿಯ ರೀತ್ಯ ಸರ್ಕಾರಿ ನೌಕರನ ಅವಿವಾಹಿತ ಸಹೋದರಿಗೆ ಅಥವಾ ಸಹೋದರನಿಗೆ ಈ ಅನುಕಂಪದ ಆಧಾರದ ಮೇಲೆ ನೌಕರಿ ದೊರಕುತ್ತದೆ.
***

29-1-16.

ಸೌಲಭ್ಯಕ್ಕಾಗಿ ನ್ಯಾಯಾಲಯಕ್ಕೆ ಹೋಗಬಹುದೇ?
ನಾನು ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾಗ ಪದೋನ್ನತಿ ನೀಡಲು ತಯಾರಿಸಿದ ಪಟ್ಟಿಯಲ್ಲಿ ಜ್ಯೇಷ್ಠತೆಯಲ್ಲಿ ಹಿರಿಯನಾಗಿದ್ದು, ಪದೋನ್ನತಿ ನೀಡುವ ಸಮಯದಲ್ಲಿ ನನ್ನ ಮೇಲೆ ಬೇನಾಮಿ ಹೆಸರಲ್ಲಿ ಒಂದು ಸಾರ್ವಜನಿಕ ಪುಕಾರು ಅರ್ಜಿ ಇತ್ತೇ ವಿನಃ ಇಲಾಖಾ ವಿಚಾರಣೆಯಾಗಲೀ, ಕ್ರಿಮಿನಲ್ ಮೊಕದ್ದಮೆಯಾಗಲಿ ಇರಲಿಲ್ಲ. ಇದರ ಆಧಾರದ ಮೇಲೆ ನನಗೆ ಪದೋನ್ನತಿ ತಡೆಹಿಡಿದರು. ಈಗ ನನಗೀಗಿರುವ ಸೌಲಭ್ಯಕ್ಕೂ ನನ್ನ ಸ್ನೇಹಿತರು ಪಡೆಯುತ್ತಿರುವ ಸೌಲಭ್ಯಕ್ಕೂ ಬಹಳ ವ್ಯತ್ಯಾಸವಿರುತ್ತದೆ. ಈ ಬಗ್ಗೆ ನಾನು ನ್ಯಾಯಾಲಯಕ್ಕೆ ಹೋಗಬಹುದೇ? ನನ್ನ ಪರವಾಗಿ ತೀರ್ಪು ಬರುವುದೇ? ದಯವಿಟ್ಟು ಪರಿಹಾರ ಸೂಚಿಸಿ.

| ಬಿ.ಎನ್. ರಾಜಪ್ಪ, ಪಂಚಾಯಿತಿ ಕಾರ್ಯದರ್ಶಿ, (ಗ್ರೇಡ್ 1) ಮಡಿಕೇರಿ

ಕರ್ನಾಟಕ ಸರ್ಕಾರಿ ಸೇವಾ (ಸಿಸಿಎ) ನಿಯಮಾವಳಿ 1957ರ ನಿಯಮ 11 (4), ನಿಯಮ 12 (1) (ಎ) ಅಥವಾ ನಿಯಮ 12 (1) (ಬಿ) ಅಡಿ ನೋಟಿಸ್ ಜಾರಿಯಾಗದ ಹೊರತು ಅವನು ಪದೋನ್ನತಿಗೆ ಅರ್ಹನಾಗಿರುತ್ತಾನೆ. ಈ ಸಂಬಂಧವಾಗಿ 14.7.1993ರಲ್ಲಿ ಸರ್ಕಾರದ ಅಧಿಕೃತ ಜ್ಞಾಪನದಲ್ಲಿ ಸ್ಪಷ್ಟವಾದ ಸೂಚನೆಗಳನ್ನು ನೀಡಲಾಗಿದೆ. ಹೀಗಿರುವುದರಿಂದ ನೀವು ಪದೋನ್ನತಿಗೆ ಅರ್ಹರಾಗಿದ್ದು ನ್ಯಾಯಾಲಯದಲ್ಲಿ ನೀವು ಪ್ರಶ್ನಿಸಿದರೆ ನಿಮ್ಮ ಪರವಾಗಿ ತೀರ್ಪು ಬರುವುದು ಖಚಿತವಾಗಿರುತ್ತದೆ. ನಂತರ ನಿಮಗೆ ಎಲ್ಲಾ ಸೇವಾ ಸೌಲಭ್ಯಗಳು ಲಭ್ಯವಾಗುತ್ತವೆ.
***

30-1-16.

ವೇತನ ರಕ್ಷಣೆ ದೊರಕುತ್ತದೆಯೇ ?
ನಾನು 2009ರಲ್ಲಿ ಪೊಲೀಸ್ ಪೇದೆಯಾಗಿ ಸೇವೆಗೆ ಸೇರಿ ಇಲಾಖೆಯಿಂದ ಅನುಮತಿ ಪಡೆದು ಇತ್ತೀಚೆಗೆ ಪ್ರಾಥಮಿಕ ಶಾಲಾ ಶಿಕ್ಷಕನಾಗಿ ಆಯ್ಕೆಯಾಗಿರುತ್ತೇನೆ. ನನ್ನ ಮೂಲ ವೇತನ ಪ್ರಸ್ತುತ ರೂ. 13,900 ಆಗಿದ್ದು, ನಾನು ಆಯ್ಕೆಯಾಗಿರುವ ಶಿಕ್ಷಕ ಹುದ್ದೆಯ ಮೂಲ ವೇತನ ರೂ. 13,600 ಆಗಿರುತ್ತದೆ. ಒಂದು ವೇಳೆ ನಾನು ಶಿಕ್ಷಕ ಹುದ್ದೆಗೆ ಸೇರಿದರೆ ವೇತನ ರಕ್ಷಣೆ ದೊರಕುತ್ತದೆಯೇ ?

| ಆರ್. ಚಂದ್ರಶೇಖರ್ ಚಿತ್ರದುರ್ಗ

ಕರ್ನಾಟಕ ಸರ್ಕಾರಿ ಸೇವಾ ನಿಯಮಾವಳಿಯ ನಿಯಮ 41 ಎ ರೀತ್ಯ, ಹೆಚ್ಚಿನ ವೇತನ ಶ್ರೇಣಿಯಾಗಿದ್ದರೆ ಸರ್ಕಾರಿ ನೌಕರನು ಈ ಹಿಂದೆ ಪಡೆಯುತ್ತಿದ್ದ ಮೂಲ ವೇತನಕ್ಕೆ ಸಮನಾದ ಹಂತಕ್ಕೆ ವೇತನವನ್ನು ನಿಗದಿಪಡಿಸತಕ್ಕದ್ದು ಎಂದು ಹೇಳಲಾಗಿದೆ. ಆದ ಕಾರಣ ನೀವು ಪೊಲೀಸ್ ಇಲಾಖೆಯಲ್ಲಿ ಪಡೆಯುತ್ತಿದ್ದ ಮೂಲ ವೇತನವನ್ನೇ ಶಾಲಾ ಶಿಕ್ಷಕರಾಗಿ ನೇಮಕವಾದರೆ ಮುಂದುವರಿಸಲಾಗುವುದು.
***

31-1-16.

ವೈದ್ಯಕೀಯ ವೆಚ್ಚ ಮರು ಪಾವತಿ ಪಡೆಯಲು ಅವಕಾಶವಿದೆಯೇ?
ನಾನು ರಾಜ್ಯ ಸರ್ಕಾರದ ನೌಕರನಾಗಿ ಸೇವೆ ಸಲ್ಲಿಸುತ್ತಿದ್ದೇನೆ. ನನ್ನ ಹೆಂಡತಿ ಗಂಡು ಮಗುವಿಗೆ ಜನ್ಮ ನೀಡಿದ್ದು, ಮಗುವು ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದೆ. ಸದರಿ ಆಸ್ಪತ್ರೆಯು ಸರ್ಕಾರದ ಮಾನ್ಯತೆ ಪಡೆದಿರುತ್ತದೆ. ಈಗ ನಾನು ವೈದ್ಯಕೀಯ ವೆಚ್ಚ ಮರು ಪಾವತಿ ಪಡೆಯಲು ಅವಕಾಶವಿದೆಯೇ?

| ಹರ್ಷ ಸಿ.ಪಿ.

1963ರ ಕರ್ನಾಟಕ ಸರ್ಕಾರಿ ನೌಕರರ (ವೈದ್ಯಕೀಯ ಚಿಕಿತ್ಸಾ) ನಿಯಮಾವಳಿ ರೀತ್ಯ ನೀವು ಮಗುವಿಗೆ ಚಿಕಿತ್ಸೆ ಕೊಡಿಸಿ ಸದರಿ ಆಸ್ಪತ್ರೆಯ ಅವಶ್ಯಕತಾ ಪ್ರಮಾಣಪತ್ರವನ್ನು ಪಡೆದು ವೈದ್ಯಕೀಯ ವೆಚ್ಚವನ್ನು ಪಡೆಯಬಹುದು.