About

ಗುರು ಬ್ರಹ್ಮ, ಗುರು ವಿಷ್ಣು, ಗುರು ದೇವೋ ಮಹೇಶ್ವರಃ. ಹೌದು, ಗುರುವೆಂದರೇ ಹಾಗೆ.. ಆತ ಕೇವಲ ಪುಸ್ತಕದಲ್ಲಿದ್ದನ್ನು ವಿದ್ಯಾರ್ಥಿಗಳಿಗೆ ಒಪ್ಪಿಸುವವನಲ್ಲ.. ಗುರುವೆಂದರೆ ಶಿಷ್ಯಂದಿರಿಗೆ ಮೌಲ್ಯಾಧಾರಿತ ಜೀವನ ಶಿಕ್ಷಣ ನೀಡುವ ದೈವಸ್ವರೂಪಿ. ವಸ್ತುನಂತಿದ್ದ ಮನುಷ್ಯನನ್ನು ಕೈಗೆ ಸಿಕ್ಕ ಮಣ್ಣಿನ ಮುದ್ದೆಯಂತೆ ತಿದ್ದಿ ತೀಡಿ ಒಂದು ಸುಂದರ ರೂಪಕೊಡುವ ಶಿಲ್ಪಿ ಅವನು. ಬೆಳೆಯುವ ಸಿರಿಯನ್ನ ಮೊಳಕೆಯಲ್ಲೆ ಗುರುತಿಸಿ ನೀರೆರದು ಚೈತನ್ಯ ತುಂಬುವನು.
‘ ಚಂದ್ರನಿಗೆ ಸ್ವ೦ತ ಬೆಳಕಿಲ್ಲ. ಚಂದ್ರನು ಸೂರ್ಯನ ಸಹಾಯದಿಂದ ಬೆಳಗುತ್ತಾನೆ ‘ ಹಾಗೆಯೇ ಪ್ರತಿಯೊಬ್ಬ ಶಿಷ್ಯನ ಬೆಳವಣಿಗೆಯ ಹಿಂದೆ ಸೂರ್ಯನಂತೆ ಗುರುಗಳಿದ್ದಾರೆ.

image

6 thoughts on “About

  1. ಆತ್ಮೀಯಾ ಮಾನ್ಯರೆ……
    ನಾನು ಕೆಲ ಗೊಂದಲಗಳಿಂದ ಬಳಲುತಿದ್ದು ದಯಮಾಡಿ ಮಾಹಿತಿ ಕೊಡಬೇಕೆಂದು ಕೋರುತ್ತೇನೆ, ಈ ಮಾಹಿತಿಯನ್ನು ನಾನು ಬಹಳಷ್ಟು ಕಡೆ ಹುಡುಕಾಡಿದೆ ಆದರೆ ಯಾವುದೇ ಮಾಹಿತಿ ಸಿಗಲಿಲ್ಲ, ಕೊನೆ ಹಂತದಲ್ಲಿ ತಾವುಗಳು ನೆನಪಾಯಿತು, ಅದಕ್ಕೆ ಈ ನನ್ನ ಗೊಂದಲವನ್ನು ತಮ್ಮ ಮುಂದಿಡುತ್ತಿದ್ದು ದಯಮಾಡಿ ಮಾಹಿತಿ ನೀಡಬೇಕೆಂದು ಕೋರುತ್ತೇನೆ.
    ಇಂತಿ ಧನ್ಯವಾದಗಳೊಂದಿಗೆ,

    ತಮ್ಮ ವಿಶ್ವಾಸಿ
    ಆರ್. ಪರಪ್ಪ.
    ದ್ವಿ.ದ.ಸ.

    ಈ ಕೆಳಕಂಡ ಮಾಹಿತಿಯನ್ನು ಮಾನವೀಯ ನೆಲೆಗಟ್ಟಿನಲ್ಲಿ ನೀಡಬೇಕೆಂದು ಕೋರುತ್ತೇನೆ, ನೀವು ನೀಡುವ ಮಾಹಿತಿಯು ಒಬ್ಬರ ಭವಿಷ್ಯದ ಪದೋನ್ನತಿಯ ಕನಸಿನ ಕೂಸಾಗಿದ್ದು ದಯಮಾಡಿ ತಿರಸ್ಕರಿಸದೆ ಮಾಹಿತಿ ನೀಡಬೇಕೆಂದು ಕೋರುತ್ತೇನೆ.

    1. ನಾನು ಮತ್ತು ನನ್ನ ಸಹೋದ್ಯೋಗಿ ವಿನುತಾ ಎಂ.ಎಸ್ ಎಂಬುವವರು ಒಂದೇ ದಿನ ಒಂದೇ ಹುದ್ದೆಗೆ ಒಂದೇ ಸಮಯದಲ್ಲಿ ಕರ್ತವ್ಯಕ್ಕೆ ವರದಿ ಮಾಡಿಕೊಂಡಿರುತ್ತೇವೆ, ಆದರೆ ವಿನುತಾ ಎಮ್.ಎಸ್. ರವರು 09 ತಿಂಗಳ ಕಾಲ ವೇತನ ರಹಿತ ರಜೆಯನ್ನು ಪಡೆದಿದ್ದಾರೆ. ಪ್ರಸ್ತುತ ಜೇಷ್ಟತಾ ಪಟ್ಟಿಯನ್ನು ತಯಾರಿಸುವಾಗ ವಯಸ್ಸಿನಲ್ಲಿ ಮತ್ತು ಮೇರಿಟ್ ನಲ್ಲಿ ವಿನುತಾ ಎಮ್.ಎಸ್ ಹಿರಿಯರೆಂದು ಅವರನ್ನೇ ಜೇಷ್ಟರೆಂದು ಆದೇಶ ಹೊರಡಿಸಲಾಗಿದೆ. ನಾನು ಅವರಿಗಿಂತ ಕಿರಿಯ ಸ್ಥಾನದಲ್ಲಿರುತ್ತೇನೆ. ಇದು ಸರಿಯಾದ ಕ್ರಮವೇ.

    2. ಜೇಷ್ಟತಾ ಪಟ್ಟಿಯಲ್ಲಿ ಅವರು ಜೇಷ್ಟರಾಗಿದ್ದರು ವೇತನ ರಹಿತ ರಜೆಯನ್ನು ಪಡೆದಿರುವುದರಿಂದ ಪದೋನ್ನತಿ ನೀಡುವಾಗ ಅವರನ್ನು ಪರಿಗಣಿಸದೆ ನಂತರದ ಜೇಷ್ಟತೆಯಲ್ಲಿರುವ ನನ್ನನ್ನು ಪರಿಗಣಿಸುತ್ತಾರೆಂದು ತಿಳಿಸಿರುತ್ತಾರೆ. ಇದು ಸರಿಯಾದ ಕ್ರಮವೇ.

    3. ವೇತನ ರಹಿತ ರಜೆಯನ್ನು ಪಡೆದವರು ಜೇಷ್ಟತಾ ಪಟ್ಟಿಯಲ್ಲಿ ಸ್ಥಾನ ಗಳಿಸಿದರೂ ಪದನ್ನೋತಿ ಅವರಿಗೆ ಲಭಿಸುತ್ತದೋ ಇಲ್ಲವೋ ತಿಳಿಸಿ.

    4. ವೇತನ ರಜೆಯನ್ನು ಪಡೆದವರಿಗೆ ಪದೋನ್ನತಿ ನೀಡುವಾಗ ಯಾವ ಮಾನದಂಡವನ್ನು ಅನುಸರಿಸಲಾಗುತ್ತದೆ. ಯಾವುದಾದರೂ ಆದೇಶಗಳಿದ್ದರೆ ನೀಡುವುದು.

    5. ವೇತನ ರಹಿತ ರಜೆಯನ್ನು ಪಡೆದವರು ಎಷ್ಟು ದಿನಗಳ ಕಾಲ ಅಂದರೆ ಪಡೆದ ವೇತನ ರಹಿತ ರಜೆಯಷ್ಟು ದಿನ ಅವರ ವಾರ್ಷಿಕ ಬಡ್ತಿ ಮುಂದೂಡಲ್ಪಿಟ್ಟಿದ್ದು ಪದೋನ್ನತಿ ಪಡೆಯುವಾಗ ವೇತನ ರಹಿತ ರಜೆಯನ್ನು ಪರಿಗಣಿಸುತ್ತಾರೂ ಇಲ್ಲವೋ ತಿಳಿಸಿ.

    6. ಕೆಲಸದ ವಿವಿಧ ಹಂತದಲ್ಲಿ ಕಚೇರಿಯ ಕೆಲಸಗಳಲ್ಲಿ ಲೋಪ ತೋರಿದವರಿಗೆ/ಉದ್ಧಟತನ ತೋರಿದವರಿಗೆ/ಕರ್ತವ್ಯ ಲೋಪ ಎಸಗಿದವರಿಗೆ ಜ್ಷಾಪನ/ಎಚ್ಚರಿಕೆ/ಮೆಮೋಗಳನ್ನು ನೀಡಲಾಗಿರುತ್ತದೆ. ಪದನ್ನೋತಿ ಸಮಯದಲ್ಲಿ ಇದು ಪರಿಗಣನೆಗೆ ಬರುತ್ತದೆಯೆ.

    THANKING YOU

    YOURS FAITHFULLY

    *********************************************************

    PARAPPA JEEVA

    SECOND DIVISION ASSISTANT
    TUMKUR UNIVERSITY

    Like

  2. ಸರ್ಕಾರಿ ಕಾಲೇಜಿಗೆ ನಿಯೋಜಿಸಿರುತ್ತಾರೆ. ನಾನು ೪ ವರ್ಷಗಳಿಂದ ಸರ್ಕಾರಿ ನಿಯೋಜನೆ ಮೇರೆಗೆ ಕಾರ್ಯ ನಿರ್ವಹಿಸಿರುತ್ತೇನೆ. ಅನುದಾನಿತ ಕಾಲೇಜು ವಿದ್ಯಾರ್ಥಿಗಳ ಕೊರತೆಯಿಂದ ಮುಚ್ಚಿದರೆ, ನಿಯೋಜನೆ ಮೇರೆಗೆ ಕಾರ್ಯನಿರ್ವಹಿಸುತ್ತಿರುವ ಕಾಲೇಜಿನಲ್ಲಿ ಕಾಯಂಯಾಗಿ ಕೆಲಸಮಾಡಲು ಅನುಮತಿ ಪಡೆಯಲು ಅವಕಾಶ ಇದಿಯೆ? ಅದಕ್ಕೆ ಮುಂದಿನ ಕ್ರಮ ಹೇಗೆ? ತಿಳಿಸಿ.

    Like

  3. ನಾನು 2017 ಪೆಬ್ರವರಿ 27 ರಿಂದಾ ಅರಣ್ಯ ಇಲಾಖೆಯಲ್ಲಿ ಪ್ರಥಮ ದರ್ಜೆ ಸಹಾಯಕನಾಗಿ ಕಾರ್ಯ ನಿರ್ವಹಿಸುತ್ತಿದ್ದು.. ಸದರಿ ನೌಕರಿಗೆ ವರದಿ ಮಾಡಿಕೊಳ್ಳುವುದಕ್ಕಿಂತ ಮುಂಚೆ ನೋಂದಣಿ ಮತ್ತು ಮುದ್ರಾಂಕ ಇಲಾಖೆಯ ಪ್ರಥಮ ದರ್ಜೆ ಸಹಾಯಕ ಹುದ್ದೆಗೆ ಅರ್ಜಿ ಸಲ್ಲಿಸಿದ್ದು ಪ್ರಸ್ತುತ ಆಯ್ಕೆ ಹೊಂದಿರುತ್ತೇನೆ… KCSR 252b ನಿಯಮದ ಮೇರೆಗೆ ಅರಣ್ಯ ಇಲಾಖೆಯಿಂದ ಬಿಡುಗಡೆ ಮಾಡಿಸಿಕೊಂಡಲ್ಲಿ ನನ್ನ ಸೇವಾ ಪುಸ್ತಕ, ರಜೆಗಳು, ಹಾಗೂ ವೇತನ ಶ್ರೇಣಿಯಲ್ಲಿ ಯಾವುದಾದರೂ ವ್ಯತ್ಯಾಸ ಉಂಟಾಗುತ್ತದೆಯೇ ತಿಳಿಸಿ?

    Like

  4. ನಾನು ಖಾಸಗಿ ಅನುದಾನಿತ ಶಾಲೆಯಲ್ಲಿ ದಿನ/ ೧_೧_೧೯೮೫ ರಿಂದ ದಿ//೩೧_೬_೨೦೨೦ ಕ್ಕೆ ನಿವ್ರತಿಹೊಂದಿದೇನೆ ಈಗ ನನ್ನ ಮೂಲ ವೇತನ ೭೧೫೫೦ ರೂ ಇದೆ ನನ್ನಗೆ ಪಿಂಚಣಿ ‌.ಉಪಾದಾನ. ಕಮಖಟೇಷನ್ ಎಷ್ಟು?

    Like

  5. ನಾನು ಸರ್ಕಾರಿ ಪ್ರೌಢಶಾಲೆ ಶಿಕ್ಷಕ ಆಗಿದ್ದು ಯಾವುದೇ ಸರ್ಕಾರದ ಆದೇಶ ಇಲ್ಲದ್ದಿದ್ದರೂ ನನ್ನದು ಒಂದು ವೇತನ ಬಡ್ತಿ ಹೆಚ್ಚಾಗಿದೆ ಎಂದು ಕಟಾವಣೆ ಮಾಡಿದ್ದಾರೆ ಮತ್ತು ಸೇವಾ ಪುಸ್ತಕದಲ್ಲಿ ತಪ್ಪು ಮಾಹಿತಿ ನೀಡಿದ್ದಾರೆ ಇದರ ಬಗ್ಗೆ ದೂರು ನೀಡಬಹುದಾದ.

    Like

  6. ನನ್ನ ಸ್ನೇಹಿತನ ಹೆಂಡತಿ ಸರ್ಕಾರದ ಅಂಗ ಸಂಸ್ಥೆಯಲ್ಲಿ 2012 ರಲ್ಲಿ ನೇರ ನೇಮಕಾತಿ ಆಗಿ ಕಾರ್ಯ ನಿರ್ವಹಿಸುತ್ತಿದ್ದರು, ಅವರಿಗೆ ನನ್ನ ಸ್ನೇಹಿತನ ಜೊತೆ 2014 ರಲ್ಲಿ ಮದುವೆ ಆಯಿತು, ಮದುವೆ ಆಗಿ ಒಂದು ವರ್ಷಕ್ಕೆ ಗಂಡು ಮಗು ಜನಿಸಿತು, ಹೆರಿಗೆ ಆಗಿ 15 ದಿನಗಳು ಆದ ಮೇಲೆ ಆತನ ಹೆಂಡತಿಯು ಅಕಾಲಿಕ ಮರಣ ಹೊಂದಿದರು(2015), ಈ ಘಟನೆ ನಡೆದು ಸುಮಾರು ನಾಲ್ಕು ವರ್ಷಗಳು ಕಳೆದಿವೆ, ನನ್ನ ಸ್ನೇಹಿತನು ಅದೇ ಸಂಸ್ಥೆಯಲ್ಲಿ ಹೊರಗುತ್ತಿಗೆಯಲ್ಲಿ ಕೆಲಸ ಮಾಡುತ್ತಿದ್ದ, ಆತನ ಹೆಂಡತಿಯ ಅಕಾಲಿಕ ಮರಣದಿಂದ ಅವನು ಅನುಕಂಪದ ನೌಕರಿಗೆ ಅರ್ಜಿಸಲ್ಲಿಸಿದ್ದು ಆತನಿಗೆ ಸುಮಾರು ನಾಲ್ಕು ವರ್ಷದ ನಂತರ ಅನುಕಂಪದ ನೌಕರಿ ಸಿಗುತ್ತಿದೆ,(ಆತ 2016 ರಲ್ಲಿ ಅರ್ಜಿ ಹಾಕುವಾಗ ಮದುವೆ ಆಗಿರಲಿಲ್ಲ) ಮಗುವಿನ ಹಾರೈಕೆಯ ದೃಷ್ಟಿಯಿಂದ ಆತನು ಹೋದ ವರ್ಷ ಮತ್ತೊಂದು ಮದುವೆ ಆಗಿದ್ದಾನೆ, ಮತ್ತೊಂದು ಮದುವೆ ಆಗಿರುವುದರಿಂದ ಅನುಕಂಪದ ನೌಕರಿಗೆ ಏನಾದರೂ ಅಡೆತಡೆ ಆಗುತ್ತದೆಯೇ ಎಂಬುದು ನಮಗೆ ತಿಳಿದಿಲ್ಲ, ಆದ್ದರಿಂದ ತಾವು ನಮಗೆ ಕಾನೂನಿನ ಅಡಿಯಲ್ಲಿ ಪರಿಹಾರ ಕೊಡಬೇಕೆಂದು ತಮ್ಮಲ್ಲಿ ಕೇಳಿಕೊಳ್ಳುತ್ತೇನೆ.
    ವಂದನೆಗಳೊಂದಿಗೆ

    ಇಂತಿ ನಿಮ್ಮವ
    ಹರಿಪ್ರಸಾದ್. ಎಂ

    Like

Leave a comment