Monthly Archives: May 2016

ವಿಜ್ಞಾನ ಶಿಕ್ಷಣಕ್ಕೆಕಾಯಕಲ್ಪ ಹೇಗೆ?

ವಿಜ್ಞಾನ ಶಿಕ್ಷಣಕ್ಕೆಕಾಯಕಲ್ಪ ಹೇಗೆ?
ಶರತ್ ಅನಂತಮೂರ್ತಿ.  
ಭಾರತದ ಉನ್ನತ ಶಿಕ್ಷಣ ಕ್ಷೇತ್ರ ಕವಲುದಾರಿಯಲ್ಲಿದೆ. ತಕ್ಷಣದ ಅನುಕೂಲ ಮತ್ತು ಲಾಭಗಳನ್ನು ದೃಷ್ಟಿಯಲ್ಲಿಟ್ಟುಕೊಂಡು ಖಾಸಗೀಕರಣಕ್ಕೆ ನೀಡಿದ ಅತಿಯಾದ ಒತ್ತು ದೂರಗಾಮಿ ದೃಷ್ಟಿಯುಳ್ಳ, ಜ್ಞಾನ ಸೃಷ್ಟಿಗೆ ಅಗತ್ಯವಾಗಿರುವ ಮೂಲಭೂತ ವಿಷಯಗಳ ಅಧ್ಯಯನದ ಮೇಲೆ ಪರಿಣಾಮ ಬೀರುತ್ತಿದೆ.

ಮೂಲ ವಿಜ್ಞಾನ, ತತ್ವಶಾಸ್ತ್ರ, ಸಾಹಿತ್ಯ ಮತ್ತು ಮಾನವಿಕಗಳ ಕ್ಷೇತ್ರದಲ್ಲಿ ತೊಡಗಿಸಿಕೊಂಡಿರುವ ಬೋಧಕರನ್ನು ಬಹುವಾಗಿ ಕಾಡುತ್ತಿರುವ ವಿಚಾರ ಇದು. ವಿಜ್ಞಾನ ಮತ್ತು ತಂತ್ರಜ್ಞಾನದ ವಿದ್ಯಾರ್ಥಿಗಳನ್ನು ತರಬೇತಿಗೊಳಿಸುವುದಕ್ಕೆ ಅಭಿವೃದ್ಧಿ ಹೊಂದಿದ ದೇಶಗಳ ಬೋಧಕರು ಹೊಸ ಮಾರ್ಗಗಳ ಶೋಧನೆಯಲ್ಲಿ ತೊಡಗಿಸಿಕೊಂಡಿದ್ದಾರೆ.

ಮನುಕುಲ ಎದುರಿಸುತ್ತಿರುವ ಹೊಸ ಸವಾಲುಗಳಿಗೆ ವಿಜ್ಞಾನ-ತಂತ್ರಜ್ಞಾನವನ್ನು ಬಳಸಿ ಹೇಗೆ ಉತ್ತರಗಳನ್ನು ಕಂಡುಕೊಳ್ಳಬಹುದು ಎಂಬುದನ್ನು ಕಲಿಸುವುದಕ್ಕೆ ಒತ್ತು ನೀಡುತ್ತಿದ್ದಾರೆ.

ಆರ್ಥಿಕ ಕ್ಷೇತ್ರದಲ್ಲಿ ಅತಿವೇಗದಲ್ಲಿ ಮುನ್ನುಗ್ಗುತ್ತಿರುವ ಮತ್ತು ಜಾಗತಿಕ ಜ್ಞಾನಾಧಾರಿತ ಆರ್ಥಿಕತೆಯಲ್ಲಿ ತನ್ನ ಸ್ಥಾನವನ್ನು ಖಾತರಿಪಡಿಸಿಕೊಳ್ಳಲು ಪ್ರಯತ್ನಿಸುತ್ತಿರುವ ಭಾರತದ ಮಟ್ಟಿಗೆ ವಿಜ್ಞಾನ ಶಿಕ್ಷಣ ಬಹುಮುಖ್ಯ.

ಹೊಸ ಕಾಲದ ಅಗತ್ಯಗಳಿಗೆ ಅನುಗುಣವಾದ ಆವಿಷ್ಕಾರಗಳನ್ನು ಮಾಡುವ, ಒಟ್ಟು ವೈಜ್ಞಾನಿಕ ಜ್ಞಾನಕ್ಕೆ ಹೊಸತನ್ನು ಸೇರಿಸುವ ಸಾಮರ್ಥ್ಯವಿರುವ ವಿದ್ಯಾರ್ಥಿಗಳನ್ನು ರೂಪಿಸಲೇಬೇಕಾದ ಸವಾಲು ನಮ್ಮೆದುರು ಇದೆ.

ಆದರೆ ಸಮಕಾಲೀನ ಭಾರತದ ವಿಜ್ಞಾನ ವಿಷಯಗಳ ಬೋಧನಾ ಕ್ಷೇತ್ರದ ಸ್ಥಿತಿಯನ್ನು ನೋಡಿದರೆ ಹೊಸ ಕಾಲ ಮುಂದೊಡ್ಡಿರುವ ಗುರುತರ ಸವಾಲನ್ನು ಎದುರಿಸುವುದಕ್ಕೆ ಅದು ಪೂರ್ಣವಾಗಿ ಸಿದ್ಧವಾಗಿಲ್ಲ ಎಂದು ಹೇಳಲೇಬೇಕಾಗುತ್ತದೆ.

ಭಾರತದಲ್ಲಿ ವಿಜ್ಞಾನ ವಿಷಯಗಳ ಉನ್ನತ ಶಿಕ್ಷಣದ ಬಹುಪಾಲನ್ನು ಒದಗಿಸುತ್ತಿರುವುದು ವಿಶ್ವವಿದ್ಯಾಲಯಗಳು ಮತ್ತು ವಿಷಯ ನಿರ್ದಿಷ್ಟವಾದ ‘ರಾಷ್ಟ್ರೀಯ ಸಂಸ್ಥೆ’ಗಳು.

ಕೇಂದ್ರ ಸರ್ಕಾರದಿಂದ ಅನುದಾನವನ್ನು ಪಡೆಯುವ ‘ರಾಷ್ಟ್ರೀಯ ಸಂಸ್ಥೆ’ಗಳು ವಿಶ್ವವಿದ್ಯಾಲಯಗಳಿಗಿಂತ ಆರ್ಥಿಕವಾಗಿ ಹೆಚ್ಚು ಸಬಲವಾಗಿವೆ. ಚೀನಾ ಮತ್ತು ಅಮೆರಿಕಗಳಿಗೆ ಹೋಲಿಸಿದರೆ ನಮ್ಮಲ್ಲಿರುವ ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರದ ಪರಿಣತರ ಸಂಖ್ಯೆ ಕಡಿಮೆ.

ಈ ಸವಾಲನ್ನು ಎದುರಿಸುವುದಕ್ಕೆ ಇತ್ತೀಚೆಗೆ ಹಲವು ಕ್ರಮಗಳನ್ನು ಕೈಗೊಳ್ಳಲಾಗಿದೆ. ಇದರಲ್ಲಿ ಬಹುಮುಖ್ಯವಾದುದು ವಿಜ್ಞಾನ ಶಿಕ್ಷಣ ಮತ್ತು ಸಂಶೋಧನೆಗೇ ಮೀಸಲಾಗಿರುವ ಇಂಡಿಯನ್ ಇನ್ಸ್‌ಟಿಟ್ಯೂಟ್ ಆಫ್ ಸೈನ್ಸ್ ಎಜುಕೇಶನ್ ಅಂಡ್ ರಿಸರ್ಚ್‌ಗಳ  (ಐಐಎಸ್ಇಆರ್) ಸ್ಥಾಪನೆ. ಇನ್ನು ಐಐಟಿಗಳ ಸಂಖ್ಯೆ ಹೆಚ್ಚಳ ಕೂಡಾ ಇದೇ ಉದ್ದೇಶ ಹೊಂದಿದೆ.

ಇವುಗಳ ಹೊರತಾಗಿ ವಿಜ್ಞಾನ-ತಂತ್ರಜ್ಞಾನ ಕ್ಷೇತ್ರದಲ್ಲಿ ತಮ್ಮ ವೃತ್ತಿಯನ್ನು ರೂಪಿಸಿಕೊಳ್ಳುವುದಕ್ಕೆ ಪ್ರೋತ್ಸಾಹ ನೀಡುವುದಕ್ಕೆ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ ‘ಇನ್‌ಸ್ಪೈರ್’ ಎಂಬ ಯೋಜನೆಯನ್ನೇ ಆರಂಭಿಸಿದೆ.

‘ಕೇಂದ್ರೀಯ ವೈಜ್ಞಾನಿಕ್ ಪ್ರೋತ್ಸಾಹನ್ ಯೋಜನಾ’ ಬಗೆಯ ಶಿಷ್ಯವೇತನ ಯೋಜನೆಗಳೂ ಕಾಲೇಜು ಮಟ್ಟದ ವಿದ್ಯಾರ್ಥಿಗಳಿಗಾಗಿ ಇವೆ. ಸಂಶೋಧನಾ ವಿದ್ಯಾರ್ಥಿಗಳಿಗಂತೂ ಹಲವು ಶಿಷ್ಯವೇತನ ಯೋಜನೆಗಳಿವೆ.

ಈ ಎಲ್ಲಾ ಯೋಜನೆಗಳ ಫಲಾನುಭವಿಗಳೂ ತಥಾಕಥಿತ ‘ರಾಷ್ಟ್ರೀಯ ಸಂಸ್ಥೆ’ಗಳ ವಿದ್ಯಾರ್ಥಿಗಳೇ ಆಗಿದ್ದಾರೆ ಎಂಬುದು ಮತ್ತೊಂದು ವಾಸ್ತವ. ವಿಜ್ಞಾನ-ತಂತ್ರಜ್ಞಾನ ಕ್ಷೇತ್ರದ ಮಾನವ ಸಂಪನ್ಮೂಲದ ಬಹುದೊಡ್ಡ ಪಾಲನ್ನು ಒದಗಿಸುವುದು ವಿ.ವಿ.ಗಳು.

ಅಷ್ಟೇಕೆ ಈ ತಥಾಕಥಿತ ‘ರಾಷ್ಟ್ರೀಯ ಸಂಸ್ಥೆ’ಗಳಿಗೆ ಸೇರುವ ಸ್ನಾತಕೋತ್ತರ ಮತ್ತು ಸಂಶೋಧನಾ ವಿದ್ಯಾರ್ಥಿಗಳ ಸಂಖ್ಯೆಯನ್ನು ನೋಡಿದರೆ ಅಲ್ಲಿಯೂ ವಿ.ವಿ.ಗಳ ಪಾಲೇ ದೊಡ್ಡದಿದೆ. ಆದರೆ ಈ ವಿದ್ಯಾರ್ಥಿಗಳಿಗೆ ದೊರೆಯುವ ಶಿಷ್ಯವೇತನ ಮತ್ತಿತರ ಸವಲತ್ತುಗಳ ಪ್ರಮಾಣ ಮಾತ್ರ ಬಹಳ ಸಣ್ಣದು.

ಇಷ್ಟೆಲ್ಲಾ ಆಗಿಯೂ ಅತ್ಯುತ್ತಮ ಗುಣಮಟ್ಟದ ವಿಜ್ಞಾನ ಪದವೀಧರರನ್ನು ಗಮನಾರ್ಹ ಸಂಖ್ಯೆಯಲ್ಲಿ ಸೃಷ್ಟಿಸುವಲ್ಲಿ ವಿ.ವಿ.ಗಳು ಮತ್ತು ರಾಷ್ಟ್ರೀಯ ಸಂಸ್ಥೆಗಳು ಯಶಸ್ವಿಯಾಗಿಲ್ಲ ಎಂಬುದು ವಾಸ್ತವ.

ಈ ವಿದ್ಯಾರ್ಥಿಗಳ ಉದ್ಯೋಗಾರ್ಹತೆಯ ಬಗ್ಗೆ ಮಾರುಕಟ್ಟೆ ಮತ್ತು ಸಂಶೋಧನಾ ಕ್ಷೇತ್ರಗಳೆರಡೂ ವ್ಯಕ್ತಪಡಿಸುವ ಸಂಶಯವೇ ಇವರ ಗುಣಮಟ್ಟವನ್ನು ಹೇಳುತ್ತಿವೆ. ಈ ಸಮಸ್ಯೆಗೆ ಕಾರಣವಾಗಿರುವುದು ಅನುದಾನದ ಕೊರತೆಯಷ್ಟೇ ಅಲ್ಲ ಎಂಬುದು ಸ್ಪಷ್ಟ.

ಇದರಲ್ಲಿ ವಿಜ್ಞಾನ ಬೋಧನೆಯ ಗುಣಮಟ್ಟದ ವಿಚಾರವೂ ಇದೆ. ಇದಕ್ಕೆ ಮುಖ್ಯ ಕಾರಣ ಪದವಿ ಮಟ್ಟದ ಬೋಧನೆ ಮತ್ತು ಕಲಿಕೆಯಲ್ಲಿ ಸಂಶೋಧನೆಯ ಅಂಶವೇ ಇಲ್ಲದಿರುವುದು. ಈಗಿರುವ ವ್ಯವಸ್ಥೆಯಲ್ಲಿ ಪದವಿ ಮತ್ತು ಸ್ನಾತಕೋತ್ತರ ಪದವಿ ತರಗತಿಗಳ ಬೋಧನೆಯನ್ನು ಪ್ರತ್ಯೇಕವೆಂದೇ ಪರಿಗಣಿಸಲಾಗುತ್ತದೆ.

ಸಂಶೋಧನೆ ಎಂಬುದು ಶೈಕ್ಷಣಿಕ ಚಟುವಟಿಕೆಯಾಗಿ ಆರಂಭಗೊಳ್ಳುವುದೇ ಸ್ನಾತಕೋತ್ತರ ಮಟ್ಟದಲ್ಲಿ. ಸಂಶೋಧನೆಯಲ್ಲಿ ತರಬೇತಿ ದೊರೆಯುವುದಂತೂ ವಿದ್ಯಾರ್ಥಿಯೊಬ್ಬ ಡಾಕ್ಟೊರೇಟ್ ಹಂತದ ಅಭ್ಯಾಸಕ್ಕೆ ತೊಡಗಿದಾಗ ಮಾತ್ರ. ಈಗಿನ ಬೋಧನಾ ವಿಧಾನ  ಮಾಹಿತಿಯನ್ನು ಹಂಚಿಕೊಳ್ಳುವುದಕ್ಕೆ ಸೀಮಿತವಾಗಿದೆ.

ವಿಜ್ಞಾನದ ವಿದ್ಯಾರ್ಥಿಯನ್ನು ಚಿಂತಿಸಿ ಮುಂದುವರೆಯಲು ಪ್ರೋತ್ಸಾಹಿಸುವ ವಿಧಾನವನ್ನು ನಾವು ಅಳವಡಿಸಿಕೊಂಡಿಲ್ಲ. ಈ ಕಾರಣದಿಂದಾಗಿಯೇ ನಾವು ವಿಜ್ಞಾನ ಶಿಕ್ಷಣದ ಸವಾಲುಗಳನ್ನು ಗುರುತಿಸಿ ಪರಿಹಾರಗಳನ್ನು ಕಂಡುಕೊಳ್ಳುವ ಅಗತ್ಯವಿದೆ.

ವೈಜ್ಞಾನಿಕ ಜ್ಞಾನ ಎಂಬುದು ನಿರಂತರವಾಗಿ ವಿಸ್ತಾರಗೊಳ್ಳುತ್ತಿದೆ. ಇದು ಹೊಸ ಜ್ಞಾನ ಕ್ಷೇತ್ರಗಳ ಬಾಗಿಲನ್ನೇ ತೆರೆಯುತ್ತದೆ. ಇಂಥದ್ದೊಂದು ಪ್ರಕ್ರಿಯೆ ನಿರಂತರ ಚಾಲನೆಯಲ್ಲಿರುವ ಅಂತರ್‌ಶಿಸ್ತೀಯ ವಿಧಾನಗಳನ್ನು ಬಳಸಿಕೊಂಡು ವಿಜ್ಞಾನದ ಸಮಸ್ಯೆಗಳಿಗೆ ಉತ್ತರ ಕಂಡುಕೊಳ್ಳುವುದು ಅನಿವಾರ್ಯ.

ಇದು ವಿಜ್ಞಾನ ಬೋಧನೆಯನ್ನೂ ಪ್ರಭಾವಿಸುತ್ತಿದೆ. ನಾವು ಜಗತ್ತನ್ನು ನೋಡುವ ಮತ್ತು ಅರ್ಥ ಮಾಡಿಕೊಳ್ಳುವ ವಿಧಾನವೇ ಬದಲಾಗುತ್ತಿದೆ. ಅಭಿವೃದ್ಧಿ ಹೊಂದಿದ ದೇಶಗಳಲ್ಲಿ ವಿಜ್ಞಾನ ಶಿಕ್ಷಣಕ್ಕಾಗಿ ಬಳಸುತ್ತಿರುವ ಪಠ್ಯಕ್ರಮ ಹೆಚ್ಚು ಚಲನಶೀಲವಾಗಿ ಅಂತರ್‌ಶಿಸ್ತೀಯ ಅಧ್ಯಯನ ಮಾದರಿಗಳನ್ನು ಅಳವಡಿಸಿಕೊಳ್ಳುತ್ತಿದೆ.ಅಲ್ಲಿನ ಅನೇಕ ಕೋರ್ಸ್‌ಗಳು ಇದನ್ನು ಪ್ರತಿಬಿಂಬಿಸುತ್ತವೆ. ಈ ಬದಲಾವಣೆಗೂ ಅಲ್ಲಿನ ಸಮಾಜಗಳಲ್ಲಿ ನಡೆಯುತ್ತಿರುವ ಜ್ಞಾನದ ವಿಕಾಸಕ್ಕೂ ನೇರ ಸಂಬಂಧವಿದೆ.

ಭಾರತದಲ್ಲಿ ಪದವಿ ಮತ್ತು ಸ್ನಾತಕೋತ್ತರ ಪದವಿ ಮಟ್ಟದ ಕೋರ್ಸ್‌ಗಳಲ್ಲಿ ಈ ಬಗೆಯ ಚಲನಶೀಲ ಪಠ್ಯಕ್ರಮವಿಲ್ಲ. ಕಾಲಕಾಲಕ್ಕೆ ನಡೆಯುವ ಪಠ್ಯಕ್ರಮವನ್ನು ಪರಿಷ್ಕರಿಸುವ ಕೆಲಸದಲ್ಲಿ ‘ಅಪ್ರಸ್ತುತ’ವಾಗಿರುವುದನ್ನು ತೆಗೆದು ‘ಹೊಸ’ ಅಂಶಗಳನ್ನು ಸೇರಿಸುವ ಕ್ರಿಯೆಯೊಂದು ನಡೆಯುತ್ತದೆ. ಇದನ್ನು ಪಠ್ಯಕ್ರಮವನ್ನು ಮರುರೂಪಿಸುವ ಪ್ರಕ್ರಿಯೆ ಎನ್ನಲು ಸಾಧ್ಯವಿಲ್ಲ.

ಇಷ್ಟರ ಮೇಲೆ ಇಡೀ ಕೋರ್ಸ್‌ನ ರಚನೆ ಮತ್ತು ಬೋಧನಾ ಕ್ರಿಯೆ ಯಾವಾಗಲೂ ಪರೀಕ್ಷೆಗಳನ್ನು ನಡೆಸುವುದು ಮತ್ತು ಮೌಲ್ಯಮಾಪನ ಮಾಡುವುದಕ್ಕೇ ಹೆಚ್ಚಿನ ಒತ್ತು ನೀಡುತ್ತವೆ. ಅನೇಕ ಸಂದರ್ಭಗಳಲ್ಲಿ ಇದು ಅನಗತ್ಯ ಒತ್ತಡ ಹೇರುವ, ವಿದ್ಯಾರ್ಥಿಗಳು ಮತ್ತು ಬೋಧಕರನ್ನು ಆಯಾಸಕ್ಕೀಡು ಮಾಡುವ ಕೆಲಸವಷ್ಟೇ ಆಗಿಬಿಡುತ್ತದೆ.

ಇದು ಸಾಂಸ್ಥಿಕವಾಗಿ ಸೃಷ್ಟಿಸುವ ಆರ್ಥಿಕ ಒತ್ತಡಗಳ ಸ್ವರೂಪ ಬೇರೆಯೇ ಇದೆ. ಈ ಕೋರ್ಸ್‌ಗಳನ್ನು ವಿನ್ಯಾಸಗೊಳಿಸುವವರಿಗೂ ಅಂತರ್‌ಶಿಸ್ತೀಯ ಮಾದರಿಯ ಅಧ್ಯಯನ ಕ್ರಮ ಹೇಗಿರಬೇಕು ಎಂಬ ವಿಚಾರದಲ್ಲಿ ಸ್ಪಷ್ಟತೆ ಇಲ್ಲ.

ಪದವಿ ಹಂತದ ಕೋರ್ಸ್‌ಗಳನ್ನು ಪರಿಣಾಮಕಾರಿಯಾಗಿ ವಿನ್ಯಾಸಗೊಳಿಸುವುದರಲ್ಲಿ ಕಂಡಿರುವ ವೈಫಲ್ಯ ಬಹಳ ಮುಖ್ಯವಾದುದು. ವೈಜ್ಞಾನಿಕ ಸಂಶೋಧನೆಗಳಲ್ಲಿ ತೊಡಗಿಕೊಳ್ಳಲು ಅಗತ್ಯವಿರುವ ಯಾವುದೇ ಗುಣಗಳನ್ನು ಪದವಿ ಹಂತದಲ್ಲಿ ರೂಢಿಸಲಾಗುವುದಿಲ್ಲ.

ಇದರ ಪರಿಣಾಮವಾಗಿ ಒಂದು ಬಗೆಯ ‘ಆಂತರಿಕ ಪ್ರತಿಭಾ ಪಲಾಯನ’ ನಡೆಯುತ್ತಿದೆ. ಕೆಲವು ಕೌಶಲ ಮತ್ತು ಸಾಮರ್ಥ್ಯಗಳನ್ನು ಪಡೆದುಕೊಂಡಿದ್ದಾರೆಂದು ಭಾವಿಸಬಹುದಾದ ವಿದ್ಯಾರ್ಥಿಗಳೇ ಅವುಗಳಲ್ಲಿ ಯಾವೊಂದನ್ನೂ ಸರಿಯಾಗಿ ಮಾಡಲಾಗದ ಸ್ಥಿತಿಯಲ್ಲಿರುತ್ತಾರೆ. ಇದು ವೈಜ್ಞಾನಿಕ ಕ್ಷೇತ್ರಕ್ಕೆ ಬೇಕಿರುವ ಮಾನವ ಸಂಪನ್ಮೂಲ ಸೃಷ್ಟಿಗೆ ಒಂದು ದೊಡ್ಡ ಆತಂಕವಾಗಿ ಪರಿಣಮಿಸುತ್ತಿದೆ.

ವಿಜ್ಞಾನ ಕ್ಷೇತ್ರದ ಸಂಶೋಧನಾ ವಿದ್ಯಾರ್ಥಿಗಳ ದೊಡ್ಡ ಪಾಲಿರುವುದು ರಾಷ್ಟ್ರೀಯ ಸಂಸ್ಥೆಗಳಲ್ಲಿ. ಈ ಸಂಸ್ಥೆಗಳಿಗೆ ಪಿಎಚ್‌ಡಿ ವಿದ್ಯಾರ್ಥಿಗಳನ್ನು ಒದಗಿಸುವ ಸಂಸ್ಥೆಗಳಂತೆ ಕೆಲಸ ಮಾಡುವ ಕೇಂದ್ರ ಮತ್ತು ರಾಜ್ಯ ಸರ್ಕಾರದಿಂದ ಅನುದಾನ ಪಡೆಯುವ ವಿಶ್ವವಿದ್ಯಾಲಯಗಳಲ್ಲಿಯೂ
ಗಮನಾರ್ಹ ಸಂಖ್ಯೆಯ ಸಂಶೋಧನಾ ವಿದ್ಯಾರ್ಥಿಗಳಿದ್ದಾರೆ.

ಸ್ನಾತಕೋತ್ತರ ಪದವಿ ಮುಗಿಸಿ ಪಿಎಚ್‌ಡಿಗೆ ಸೇರುವ ವಿದ್ಯಾರ್ಥಿಗಳ ಸಂಖ್ಯೆ ಈಗ ವರ್ಷದಿಂದ ವರ್ಷಕ್ಕೆ ಕಡಿಮೆಯಾಗುತ್ತಿದೆ. ಇದಕ್ಕೆ ಮುಖ್ಯ ಕಾರಣ ಪಿಎಚ್‌ಡಿ ಪಡೆದ ನಂತರ ಇರುವ ಉದ್ಯೋಗಾವಕಾಶಗಳ ಸಂಖ್ಯೆ. ಹಲವು ವರ್ಷಗಳನ್ನು ಸಂಶೋಧನೆಯಲ್ಲಿ ವ್ಯಯಿಸಿದರೂ ಉದ್ಯೋಗ ಖಾತರಿಯಿಲ್ಲ ಎಂದಾದಾಗ ಸಂಶೋಧನೆಯಲ್ಲಿ ಆಸಕ್ತಿ ಕುಂದುವುದು ಸಹಜ.

ಈ ಎಲ್ಲವುಗಳ ಜೊತೆಗೆ ಮೂಲ ವಿಜ್ಞಾನ ಶಿಕ್ಷಣ ಕ್ಷೇತ್ರದ ಸಾಮಾಜಿಕ ಸ್ವರೂಪವನ್ನೂ ಪರಿಗಣಿಸಿ ಆಲೋಚಿಸಬೇಕಾಗುತ್ತದೆ. ಸದ್ಯಕ್ಕೆ ಭಾರತದಾದ್ಯಂತ ಮೂಲ ವಿಜ್ಞಾನ ವಿಷಯಗಳನ್ನು ಕಲಿಯಲು ವಿಶ್ವವಿದ್ಯಾಲಯ ಸೇರುತ್ತಿರುವ ವಿದ್ಯಾರ್ಥಿಗಳಲ್ಲಿ ಹೆಚ್ಚಿನವರು ಗ್ರಾಮೀಣ ಮತ್ತು ಪುಟ್ಟ ಪಟ್ಟಣಗಳಿಂದ ಬರುವವರೇ ಹೆಚ್ಚು. ಇವರಲ್ಲಿ ಹೆಚ್ಚಿನವರು ಸಾಮಾಜಿಕವಾಗಿ ಮತ್ತು ಆರ್ಥಿಕವಾಗಿ ಹಿಂದುಳಿದವರು.

ಇತ್ತೀಚಿನ ಪ್ರವೇಶಾತಿ ವಿವರಗಳನ್ನು ನೋಡಿದರೆ ಇಂಥ ಕೋರ್ಸ್‌ಗಳನ್ನು ಆರಿಸಿಕೊಳ್ಳುವವರಲ್ಲಿ ಶೇಕಡ 50ರಷ್ಟು ಹಿಂದುಳಿದ ಜಾತಿಗಳು ಮತ್ತು ಪರಿಶಿಷ್ಟ ಜಾತಿ–ಪಂಗಡಗಳಿಗೆ ಸೇರಿದವರಿದ್ದಾರೆ. ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳೇ ಹೆಚ್ಚಿರುವ ವಿಶ್ವವಿದ್ಯಾಲಯಗಳಲ್ಲಿ ಈ ಪ್ರಮಾಣ ಇನ್ನೂ ಹೆಚ್ಚಿದೆ.

ಮೀಸಲಾತಿಯಂಥ ಕ್ರಮಗಳು ಈ ವರ್ಗದ ವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣ ಸಿಗುವಂತೇನೋ ಮಾಡಿವೆ. ಆದರೆ ನಾವು ಒದಗಿಸುತ್ತಿರುವ ಶಿಕ್ಷಣ, ನಿರ್ದಿಷ್ಟ ಕ್ಷೇತ್ರಗಳಲ್ಲಿ ಉತ್ಕೃಷ್ಟ ಸಾಧನೆಗಳನ್ನು ಮಾಡಲು ಅವರನ್ನು ಸಿದ್ಧಪಡಿಸುತ್ತಿದೆಯೇ ಎಂಬ ಪ್ರಶ್ನೆಯನ್ನೂ ಇಲ್ಲಿ ಕೇಳಬೇಕಾಗುತ್ತದೆ.

ಈ ಪ್ರಶ್ನೆಯನ್ನು ಮತ್ತೊಂದು ರೀತಿಯಲ್ಲೂ ಕೇಳಬಹುದು. ವಿಜ್ಞಾನ ಕ್ಷೇತ್ರದ ಉನ್ನತ ಶಿಕ್ಷಣಕ್ಕೆ ತೆರೆದುಕೊಂಡಿರುವ ಹಿಂದುಳಿದ ಜಾತಿಗಳ ಮತ್ತು ಪರಿಶಿಷ್ಟ ಜಾತಿ ಹಾಗೂ ಪಂಗಡಗಳ ವಿದ್ಯಾರ್ಥಿಗಳನ್ನು ನಮ್ಮ ಬೋಧನಾ ವ್ಯವಸ್ಥೆ ಎಷ್ಟರಮಟ್ಟಿಗೆ  ವಿಜ್ಞಾನಿಗಳಾಗಲು ಅವರಿಗೆ ಸಹಾಯ ಮಾಡುತ್ತಿದೆ? ವಿಜ್ಞಾನದ ಬೋಧಕರು ಮತ್ತು ಸಂಶೋಧಕರಾಗಲು ಅವರನ್ನು ಎಷ್ಟರಮಟ್ಟಿಗೆ ಸಿದ್ಧಪಡಿಸುತ್ತಿದೆ?

ಶೈಕ್ಷಣಿಕವಾಗಿ ಸಾಧನೆ ಮಾಡುವುದಕ್ಕೂ ಸಾಮಾಜಿಕ ಪರಿಸ್ಥಿತಿಗೂ ಇರುವ ಸಂಬಂಧವನ್ನು ಈಗಾಗಲೇ ಅನೇಕ ಸಂಶೋಧನೆಗಳು ಹೇಳಿವೆ. ವಿಜ್ಞಾನ ಬೋಧನೆಯ ವಿಚಾರದಲ್ಲಿಯೂ ಇವುಗಳು ಪ್ರಸ್ತುತ ಎಂಬುದನ್ನು ಮರೆಯಲು ಸಾಧ್ಯವಿಲ್ಲ.

ಎರಡು ದಶಕಗಳ ಅವಧಿಯಲ್ಲಿ ಸಂಭವಿಸಿರುವ ಆರ್ಥಿಕ ಸ್ಥಿತ್ಯಂತರಗಳು ಜಾಗತಿಕ ಜ್ಞಾನಾಧಾರಿತ ಆರ್ಥಿಕತೆಯಲ್ಲಿ ದೊಡ್ಡ ಪಾಲನ್ನು ಪಡೆಯುವುದಕ್ಕೆ ಭಾರತವನ್ನು ಪ್ರೇರೇಪಿಸಿದೆ. ಇದಕ್ಕೆ ಬೇಕಿರುವ ಮಾನವ ಸಂಪನ್ಮೂಲವನ್ನು ಸೃಷ್ಟಿಸುವಲ್ಲಿ ಆನ್ವಯಿಕ ವಿಜ್ಞಾನಗಳಂತೆಯೇ ಮೂಲ ವಿಜ್ಞಾನದ ಪಾತ್ರವೂ ಬಹಳ ದೊಡ್ಡದಿದೆ. ನೂತನ ಆವಿಷ್ಕಾರಗಳಿಗೆ ಬೇಕಿರುವ ಬೌದ್ಧಿಕ ಮತ್ತು ಭೌತಿಕ ವಾತಾವರಣಗಳನ್ನು ಸೃಷ್ಟಿಸುವಲ್ಲಿ ವಿಜ್ಞಾನಕ್ಕೆ ಬಹುದೊಡ್ಡ ಪಾತ್ರವಿದೆ.

ನಮ್ಮ ಸಂದರ್ಭದಲ್ಲಿ ವಿಜ್ಞಾನ ಈ ಪಾತ್ರವನ್ನು ಸರಿಯಾಗಿ ನಿರ್ವಹಿಸುವಂತೆ ಮಾಡಬೇಕಾದರೆ ವಿಜ್ಞಾನ ಶಿಕ್ಷಣದ ಸುಧಾರಣೆಯ ಅಗತ್ಯವಿದೆ. ಈ ಕುರಿತಂತೆ ಗಂಭೀರ ಚರ್ಚೆಯೊಂದನ್ನು ಆರಂಭಿಸುವ ನಿಟ್ಟಿನಲ್ಲಿ ಬೆಂಗಳೂರು ವಿಶ್ವವಿದ್ಯಾಲಯ ಮೊದಲ ಹೆಜ್ಜೆಯನ್ನಿಟ್ಟಿದೆ.

ಈ ತಿಂಗಳ 27 ಮತ್ತು 28ರಂದು ವಿಜ್ಞಾನ ಬೋಧನೆ ಮತ್ತು ಸಂಶೋಧನೆಯ ಸವಾಲುಗಳನ್ನೇ ಕೇಂದ್ರವಾಗಿರಿಸಿಕೊಂಡು ದೇಶದ ಪ್ರಮುಖ ವಿಜ್ಞಾನ, ತಂತ್ರಜ್ಞಾನ ಮತ್ತು ತತ್ವಶಾಸ್ತ್ರ ಸಂಶೋಧಕರು ಮತ್ತು ಬೋಧಕರು ಭಾಗವಹಿಸುವ ವಿಚಾರ ಸಂಕಿರಣವೊಂದನ್ನು ಆಯೋಜಿಸಿದೆ.

ಮಾರುಕಟ್ಟೆಯನ್ನು ಗಮನದಲ್ಲಿಟ್ಟುಕೊಂಡಿರುವ ನೀತಿ ನಿರೂಪಕರಿಗೆ ಈ ಸಮಸ್ಯೆಯನ್ನು ನಿವಾರಿಸಲು ತಂತ್ರಜ್ಞಾನಾಧಾರಿತ ಉಪಕರಣಗಳ ಮಂತ್ರದಂಡಗಳು ಸಿಕ್ಕಿರಬಹುದು. ಅದು ನಿಜವಾದ ಪರಿಹಾರವಾಗುವುದಿಲ್ಲ ಎಂಬುದು ವಿಜ್ಞಾನ ಬೋಧನೆಯಲ್ಲಿ ತೊಡಗಿಸಿಕೊಂಡಿರುವವರ ಅನುಭವ.

ತೋರಿಕೆಯ ಪರಿಹಾರಗಳನ್ನು ಸೂಚಿಸುವ ಬದಲಿಗೆ ಆಮೂಲಾಗ್ರವಾಗಿ ಸಮಸ್ಯೆಯನ್ನು ಅರ್ಥ ಮಾಡಿಕೊಂಡು ಅದಕ್ಕೆ ಪರಿಹಾರ ಕಂಡುಕೊಳ್ಳುವ ದಾರಿಯಲ್ಲಿ ನಾವು ಸಾಗಬೇಕಿದೆ.

ಪಿಯುಸಿ ಫಲಿತಾಂಶ-2016 ರ ಪೂರ್ಣಮಾಹಿತಿ.

ಪಿಯು ಮೌಲ್ಯಮಾಪಕರ ಯಡವಟ್ಟು:ಈಗ ರವೀಶ್‌ ರಾಜ್ಯಕ್ಕೆ ಟಾಪರ್‌

ಉದಯವಾಣಿ, Jun 17, 2016
ಬೆಂಗಳೂರು : ಪಿಯು ಮಂಡಳಿ ಪ್ರಶ್ನೆ ಪತ್ರಿಕೆ ಸೋರಿಕೆ ಸೇರಿದಂತೆ ಹತ್ತು ಹಲವು ಯಡವಟ್ಟುಗಳ ಮೂಲಕ ಸುದ್ದಿಯಲ್ಲಿದೆ .ಇದೀಗ ಇನ್ನೊಂದು ಯಡವಟ್ಟನ್ನು ಮೌಲ್ಯ ಮಾಪಕರು ಮಾಡಿದ್ದು ಇದರಿಂದಾಗಿ ಸೈನ್ಸ್‌ ವಿಭಾಗದಲ್ಲಿ ರಾಜ್ಯಕ್ಕೆ ಟಾಪರ್‌ ಅಗಬೇಕಾಗಿದ್ದ ವಿದ್ಯಾರ್ಥಿಯೊಬ್ಬನಿಗೆ ಅನ್ಯಾಯವಾಗಿತ್ತು.

ಫ‌ಲಿತಾಂಶ ಪ್ರಕಟವಾದಾಗ 600ಕ್ಕೆ 589 ಅಂಕ ಪಡೆದಿದ್ದ ಮೂಲತಃ ಬೆಂಗಳೂರಿನ ನಿವಾಸಿ ಮೈಸೂರಿನ ಶ್ರೀ ರಾಮಕೃಷ್ಣ ವಿದ್ಯಾ ಶಾಲೆಯ ವಿದ್ಯಾರ್ಥಿ ರವೀಶ್‌ ಸುರೇಶ್‌ ಬನಹಟ್ಟಿ ಅವರು ಇದೀಗ ಮರು ಮೌಲ್ಯ ಮಾಪನದ ಬಳಿಕ 597 ಅಂಕಗಳನ್ನು ಪಡೆದು ರಾಜ್ಯಕ್ಕೆ ಟಾಪರ್‌ ಎನಿಸಿಕೊಂಡಿದ್ದಾರೆ.

ಇಂಗ್ಲೀಷ್‌ ವಿಷಯದಲ್ಲಿ ರವೀಶ್‌ಗೆ ಅನ್ಯಾಯವಾಗಿದ್ದು 90ಅಂಕ ಮಾತ್ರ ನೀಡಲಾಗಿತ್ತು. ಆದರೆ ಹೆಚ್ಚು ಅಂಕ ಪಡೆಯುವ ಧೃಡ ವಿಶ್ವಾಸವಿದ್ದ ರವೀಶ್‌ ಉತ್ತರ ಪತ್ರಿಕೆಯ ನಕಲು ತರಿಸಿ ಪರಿಶೀಲಿಸಿದ್ದಾರೆ. ಆಬಳಿಕ ಮರು ಮೌಲ್ಯ ಮಾಪನಕ್ಕೆ ಅರ್ಜಿ ಹಾಕಿ ಮೌಲ್ಯ ಮಾಪನ ನಡೆದಾಗ 98 ಅಂಕ ಬಂದಿದೆ.

ರವೀಶ್‌ ಅವರು ಸಿಇಟಿಯಲ್ಲೂ ಉತ್ತಮ ಸಾಧನೆ ತೋರಿದ್ದು ಮೆಡಿಕಲ್‌ ವಿಭಾಗದಲ್ಲಿ 56 ನೇ ರಾಂಕ್‌ ಪಡೆದಿದ್ದು ಮುಂದೆ ವೈದ್ಯ ಶಿಕ್ಷಣ ಆಯ್ಕೆ ಮಾಡಿಕೊಂಡಿದ್ದಾರೆ.

ಈ ಹಿಂದೆ ವಿಜ್ಞಾನ ವಿಭಾಗದಲ್ಲಿ 596 ಅಂಕ ಪಡೆದ ರಕ್ಷಿತಾ ತಮನ್‌ ರಾಜ್ಯಕ್ಕೆ ಟಾಪರ್‌ ಆಗಿದ್ದರು.
****

*ದ್ವಿತೀಯ ಪಿಯುಸಿ ಫಲಿತಾಂಶ:

ದಕ್ಷಿಣ ಕನ್ನಡ ಪ್ರಥಮ, ಉಡುಪಿ ದ್ವಿತೀಯ.

ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟಗೊಂಡಿದ್ದು, ಈ ಬಾರಿಯೂ ಬಾಲಕಿಯರೇ ಮೇಲುಗೈ ಸಾಧಿಸಿದ್ದಾರೆ. ಪಿಯು ಬೋರ್ಡ್‍ನಲ್ಲಿ ಶಿಕ್ಷಣ ಸಚಿವ ಕಿಮ್ಮನೆ ರತ್ನಾಕರ್ ದಿ:25-5-16 ರಂದು ಸುದ್ದಿಗೋಷ್ಠಿ ನಡೆಸಿ ಫಲಿತಾಂಶವನ್ನು ಪ್ರಕಟಿಸಿದರು.
ಈ ಬಾರಿ ಒಟ್ಟು ಶೇ. 57.20ಫಲಿತಾಂಶ ದಾಖಲಾಗಿದೆ. ಮೂರು ವರ್ಷದಲ್ಲಿ ತೀವ್ರ ಕಳಪೆ ಸಾಧನೆ ಇದಾಗಿದ್ದು, ಕಳೆದ ವರ್ಷ ಶೇ. 60.54 ಫಲಿತಾಂಶ ಪ್ರಕಟವಾಗಿತ್ತು.
ದಕ್ಷಿಣ ಕನ್ನಡಕ್ಕೆ ಮೊದಲ ಸ್ಥಾನ, ಉಡುಪಿ ಎರಡನೇ ಸ್ಥಾನ,ಕೊಡಗು ಮೂರನೇ ಸ್ಥಾನ, ಯಾದಗಿರಿಗೆ ಕೊನೆ ಸ್ಥಾನ ಸಿಕ್ಕಿದೆ. ಕಲಾ ವಿಭಾಗದಲ್ಲಿ ಶೇ. 42.12, ವಾಣಿಜ್ಯ ವಿಭಾಗ ಶೇ.64.16, ವಿಜ್ಞಾನ ವಿಭಾಗ ಶೇ. 62.25 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ.
ನಗರ ಪ್ರದೇಶ ಶೇ.57.36 ರಷ್ಟು ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದರೆ, ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳು 56.66 ರಷ್ಟು ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. 91 ಸರ್ಕಾರಿ ಕಾಲೇಜುಗಳು ಶೂನ್ಯ ಫಲಿತಾಂಶ ದಾಖಲಿಸಿದ್ದರೆ, 88 ಖಾಸಗಿ ಕಾಲೇಜುಗಳಲ್ಲಿ ಶೂನ್ಯ ಸಂಪಾದನೆ ಮಾಡಿವೆ.
ಒಟ್ಟು 6,36,368 ವಿದ್ಯಾರ್ಥಿಗಳು ಪರೀಕ್ಷೆ ಬರದಿದ್ದು, ಒಟ್ಟು 3,64,013 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಒಟ್ಟು 163484(ಶೇ.50.02) ವಿದ್ಯಾರ್ಥಿಗಳು ಉತ್ತೀರ್ಣಗೊಂಡಿದ್ದರೆ, 2,50,029(ಶೇ.64.79) ವಿದ್ಯಾರ್ಥಿನಿಯರು ಉತ್ತೀರ್ಣರಾಗಿದ್ದಾರೆ.
ದಕ್ಷಿಣ ಕನ್ನಡ ಮೊದಲ ಸ್ಥಾನ – ಶೇ.90.48
ಉಡುಪಿ ಎರಡನೇ ಸ್ಥಾನ – ಶೇ.90.35
ಕೊಡಗು ಮೂರನೇ ಸ್ಥಾನ – ಶೇ.79.35
ಯಾದಗಿರಿಗೆ ಕೊನೆ ಸ್ಥಾನ – ಶೇ. 44.16.

ಬಾಳೆ ಹಣ್ಣಿನ ವ್ಯಾಪಾರಿಯೊಬ್ಬರ ಪುತ್ರಿಯಾದ ಬಳ್ಳಾರಿ ಜಿಲ್ಲೆಯ ಕೊಟ್ಟೂರು ತಾಲೂಕಿನ ಇಂದೂ ಪಿಯು ಕಾಲೇಜಿನ ಅನಿತಾ ಬಸಪ್ಪ ಅವರು 600ಕ್ಕೆ 597 ಅಂಕ ಗಳಿಸಿ ಕಲಾ ವಿಭಾಗದಲ್ಲಿ ಪ್ರಥಮ ಸ್ಥಾನಗಳಿಸಿದ್ದಾರೆ.

ವಿಜ್ಞಾನ ವಿಭಾಗದಲ್ಲಿ ಬೆಂಗಳೂರು ನಗರದ ಸರ್ದಾರ್ ಪಟೇಲ್ ಪಿಯು ಕಾಲೇಜಿನ ವಿದ್ಯಾರ್ಥಿನಿ ರಕ್ಷಿತಾ ತಮನ್ 600ಕ್ಕೆ 596 ಅಂಕ ಪಡೆದು ಪ್ರಥಮ ಸ್ಥಾನ ಗಳಿಸಿದ್ದಾರೆ.

ಉಡುಪಿ ಜಿಲ್ಲೆಯ ನೇಹಾ ಶೆಟ್ಟಿ ವಿಜ್ಞಾನ ವಿಭಾಗದಲ್ಲಿ ದ್ವಿತೀಯ ಸ್ಥಾನ ಪಡೆದಿದ್ದಾರೆ. ವಾಣಿಜ್ಯ ವಿಭಾಗದಲ್ಲಿ ವಿಜಯಪುರದ ವಿ ಬಿ ದರ್ಬಾರ್ ಪಿಯು ಕಾಲೇಜಿನ ಸಹನಾ ಕುಲಕರ್ಣೀ ಅವರು 594 ಅಂಕ ಪಡೆದು ಪ್ರಥಮ ಸ್ಥಾನ ಪಡೆದಿದ್ದಾರೆ. ಬೆಂಗಳೂರಿನ ಛಾಯಾಶ್ರೀ ವಿ ಮತ್ತು ದೀಕ್ಷಾ ನಾಯಕ್ ಅವರು ಕೂಡಾ ಅಷ್ಟೇ ಅಂಕಗಳನ್ನು ಗಳಿಸಿದ್ದಾರೆ.

ಎಷ್ಟು ಮಂದಿ ಡಿಸ್ಟಿಂಕ್ಷನ್?

41,373 ವಿದ್ಯಾರ್ಥಿಗಳು ಡಿಸ್ಟಿಂಕ್ಷನ್
1,89,791 ವಿದ್ಯಾರ್ಥಿಗಳು ಪ್ರಥಮ ಶ್ರೇಣಿ
78,301 ದ್ವಿತೀಯ ಶ್ರೇಣಿ
54,548 ತೃತೀಯ ಶ್ರೇಣಿ
*ಮರು ಮೌಲ್ಯಮಾಪನಕ್ಕೆ ಅರ್ಜಿ ಸಲ್ಲಿಸಲು ಜೂ. 7ಕ್ಕೆ ಕೊನೆಯ ದಿನಾಂಕ.*
ಸ್ಕ್ಯಾನಿಂಗ್ ಪತ್ರಿ ಪಡೆಯಲು 400 ರೂ.
ಸ್ಕ್ಯಾನಿಂಗ್ ಪತ್ರಿಗೆ ಸಲ್ಲಿಸಲು ಮೇ 30 ಕೊನೆಯ ದಿನಾಂಕ
ಪರೀಕ್ಷಾ ಶುಲ್ಕ ಕಟ್ಟಲು ಜೂನ್ 6 ಕೊನೆಯ ದಿನಾಂಕ
ಜುಲೈ 1 ರಿಂದ 13 ರವರೆಗೆ ಸಪ್ಲಿಮೆಂಟ್ರಿ ಪರೀಕ್ಷೆ
ಪೂರಕ ಪರೀಕ್ಷೆ ಕಟ್ಟಲು ಒಂದು ವಿಷ್ಯಕ್ಕೆ 101 ರೂ.
ಮೂರು ವಿಷಯಕ್ಕೆ 301 ರೂ.

ಜಿಲ್ಲಾವಾರು ಫಲಿತಾಂಶ:

image

image

ವಾಣಿಜ್ಯ ವಿಭಾಗದಲ್ಲಿ 3 ಹೆಣ್ಮಕ್ಕಳು ಫಸ್ಟ್:

ಈ ಬಾರಿಯ ದ್ವಿತೀಯ ಪಿಯುಸಿ ವಾಣಿಜ್ಯ ವಿಭಾಗದಲ್ಲಿ ಮೂವರು ವಿದ್ಯಾರ್ಥಿನಿಯರೂ ಸಮ ಅಂಕಗಳು ಪಡೆದಿದ್ದು ಈ ಮೂವರಲ್ಲಿ ಸಹನಾ ಫಸ್ಟ್
ವಿಜಯಪುರದ ವಿವಿ ದರ್ಬಾರ್ ಪಿಯು ಕಾಲೇಜಿನ ಸಹನಾ ಕುಲಕರ್ಣಿ 594, ಬೆಂಗಳೂರಿನ ಮಲ್ಲೇಶ್ವರಂ ಎಂಇಎಸ್ ಪಿಯು ಕಾಲೇಜಿನ ಛಾಯಶ್ರೀ 594 ಹಾಗೂ ವಿವಿ ಪುರಂನ ಮಹಾವೀರ್ ಜೈನ್ ಕಾಲೇಜಿನ ವಿದ್ಯಾರ್ಥಿನಿ ದೀಕ್ಷಾ ನಾಯಕ್ 594 ಅಂಕಗಳನ್ನು ಪಡೆದಿದ್ದಾರೆ.

ಬಾಳೆಹಣ್ಣಿನ ವ್ಯಾಪಾರಿ ಮಗಳು ಕಲಾ ವಿಭಾಗದಲ್ಲಿ ಬೆಸ್ಟ್

image

ಸಾಧನೆಗೆ ಬಡತನ ತೊಡಕಾಗುವುದಿಲ್ಲ. ಸಾಧಿಸುವ ಛಲವಿರಬೇಕಷ್ಟೆ. ನಿರಂತರ ಪರಿಶ್ರ ಮವಿದ್ದರೆ ಏನನ್ನಾದರೂ ಸಾಧಿಸಬಹುದು ಎನ್ನುವುದಕ್ಕೆ ಬಾಳೆಹಣ್ಣು ವ್ಯಾಪಾರಿ ಪಿಯುಸಿ ವಿದ್ಯಾರ್ಥಿನಿ ಅನಿತಾ ಬಸಪ್ಪ ಸೂಕ್ತ ಉದಾಹರಣೆಯಾಗಿದ್ದಾರೆ. ಕೂಡ್ಲಿಗಿಯ ಕೊಟ್ಟೂರು ನಿವಾಸಿ ಬಸಪ್ಪ ಅವರ ಪುತ್ರಿ ಅನಿತಾ ಬಸಪ್ಪ ಇಂದೂ ಕಾಲೇಜಿನಲ್ಲಿ ಕಲಾ ವಿಭಾಗ ತೆಗೆದುಕೊಂಡಿದ್ದು, ಪ್ರಸಕ್ತ ಸಾಲಿನ ಪಿಯುಸಿ ಪರೀಕ್ಷೆಯಲ್ಲಿ 600ಕ್ಕೆ 585 ಅಂಕಗಳನ್ನು ಗಳಿಸುವುದರ ಮುಖಾಂತರ ಕಲಾ ವಿಭಾಗದಿಂದ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದಿದ್ದಾರೆ.
ಈ ಸಂದರ್ಭದಲ್ಲಿ ಮಾತನಾಡಿದ ಅನಿತಾ ನಾನು ಈ ರೀತಿಯ ಫಲಿತಾಂಶ ಬರುತ್ತದೆ ಎಂದು ಕನಸು ಮನಸಿನಲ್ಲಿಯೂ ಯೋಚಿಸಿರಲಿಲ್ಲ. ಇಷ್ಟು ಅಂಕ ಬಂದಿರುವುದಕ್ಕೆ ಮೊದಲು ನನ್ನ ಪೋಷಕರು ಹಾಗೂ ಕಾಲೇಜಿನ ಉಪನ್ಯಾಸಕರೇ ಸ್ಫೂರ್ತಿಯಾಗಿದ್ದು , ಅವರಿಗೆ ಋಣಿಯಾಗಿರುತ್ತೇನೆ ಎಂದು ತಿಳಿಸಿದರು. ತಂದೆ ಬಸಪ್ಪ ಮಾತನಾಡಿ, ನಾವು ತುಂಬಾ ಬಡವರು ಪ್ರತಿ ದಿನ ಬಾಳೆಹಣ್ಣು ಮಾರಬೇಕು. ಜೀವನ ನಡೆಸಬೇಕು. ಒಂದು ದಿನ ವ್ಯಾಪಾರ ಆಗಲಿಲ್ಲ ಅಂದ್ರೆ ಜೀವನ ನಡೆಸೋದು ತುಂಬಾ ಕಷ್ಟ. ಇದರ ಮಧ್ಯೆಯೂ ನನ್ನ ಮಗಳು ಪರಿಶ್ರಮ ಪಟ್ಟು ಓದಿ ರಾಜ್ಯಕ್ಕೆ ಪ್ರಥಮ ಸ್ಥಾನ ಬಂದಿರುವುದು ನಿಜಕ್ಕೂ ಸಂತೋಷದ ವಿಷಯವಾಗಿದೆ.
ಉನ್ನತ ಶಿಕ್ಷಣ ದುಬಾರಿಯಾಗಿರುವುದರಿಂದ ನಾವು ನಮ್ಮ ಮಗಳನ್ನು ಹೆಚ್ಚು ಓದಿಸಲು ಸಾಧ್ಯವಾಗುವುದಿಲ್ಲ ಎಂದು ತಮ್ಮ ಅಸಹಾಯಕತೆಯನ್ನು ತೋಡಿಕೊಂಡರು. ಕೆಎಎಸ್ ಪರೀಕ್ಷೆ ಬರೆಯುವ ಆಸೆ ಹೊಂದಿರುವ ಅನಿತಾಳ ಕನಸು ನನಸಾಗಲಿ. ಬೆಂಗಳೂರಿನ ಕ್ರಿಸ್ಟ್ ಪಿಯು ಕಾಲೇಜಿನ ತಾನಿಯಾ ಮಾರ್ಥಾ ಥಾಮಸ್ 580 ಅಂಕಗಳು ಪಡೆದಿದ್ದರೆ, ಮೌಂಟ್ ಕಾರ್ಮೆಲ್ ಕಾಲೇಜಿನ ಅನುಶ್ರೀ.ಪಿ.ಜಿ 575 ಅಂಕಗಳನ್ನು ಪಡೆದು ತೃತೀಯ ಸ್ಥಾನದಲ್ಲಿದ್ದಾರೆ.

image

ಅಂಕಕ್ಕಿಂತ ಅರ್ಥಕ್ಕೆ ಹೆಚ್ಚು ಒತ್ತು ನೀಡಿದ್ದೆ: ರಾಜ್ಯ ಟಾಪರ್ ಸಹನಾ ಕುಲಕರ್ಣಿ:

ನಾನು ತರಗತಿಯಲ್ಲಿ ಆಸಕ್ತಿಯಿಂದ ಪಾಠ ಕೇಳುತ್ತಿದ್ದೆ. ನನಗೆ ನಮ್ಮ ಶಿಕ್ಷಕರು ಹಾಗೂ ಪೋಷಕರು ತುಂಬಾ ಸಹಕಾರ ನೀಡಿದ್ದಾರೆ. ನನ್ನ ಈ ಯಶಸ್ಸಿಗೆ ಅವರೂ ಭಾಗೀದಾರರು. ನಾನು ಮುಂದೆ ಸಿಎ ಮಾಡಬೇಕೆಂದಿದ್ದೇನೆ ಎಂದು ವಾಣಿಜ್ಯ ವಿಭಾಗದಲ್ಲಿ 594 ಅಂಕಗಳಿಸಿ ರಾಜ್ಯಕ್ಕೆ ಟಾಪರ್ ಆಗಿರುವ ಸಹನಾ ಕುಲಕರ್ಣಿ ಸುವರ್ಣ ನ್ಯೂಸ್- ಕನ್ನಡ ಪ್ರಭದೊಂದಿಗೆ ತಮ್ಮ ಸಂತೋಷವನ್ನು ಹಂಚಿಕೊಂಡಿದ್ದಾರೆ.

ಕಾಲೇಜಿನ ಯಾವುದೇ ವಿಷಯವನ್ನೇ ಆಗಲಿ ಕೇವಲ ಅಂಕಗಳಿಸುವ ಗುರಿಯಿಟ್ಟುಕೊಂಡು ಓದಬಾರದು. ನಾನು ಸಾಧ್ಯವಾದಷ್ಟು ವಿಷಯವನ್ನು ಅರ್ಥ ಮಾಡಿಕೊಂಡು ಓದುತ್ತಿದ್ದೆ. ಯಾವುದೇ ವೇಳಾಪಟ್ಟಿ ಹಾಕಿಕೊಂಡು ಓದುತ್ತಿರಲಿಲ್ಲ ಎಂದಿರುವ ಸಹನಾ ಯಶಸ್ಸಿಗೆ ಸಹಕರಿಸಿದ ಎಲ್ಲರಿಗೂ ಥ್ಯಾಂಕ್ಸ್ ಹೇಳಿದ್ದಾಳೆ. ವಿ.ಬಿ. ದರ್ಬಾರ್ ಪದವಿ ಪೂರ್ವ ಕಾಲೇಜಿನಲ್ಲಿ ವ್ಯಾಸಂಗ ಮಾಡಿದ ಸಹನಾ, ಮುಂದೆ ಇದೇ ಸಂಸ್ಥೆಯ ಶ್ರೀಮತಿ ಕುಮುದಬೆನ್ ದರ್ಬಾರ್ ಕಾಲೇಜ್ ಆಫ್ ಕಾಮರ್ಸ್ ಅಂಡ್ ಮ್ಯಾನೇಜ್’ಮೆಂಟ್ (ವಿಜಯಪುರ) ನಲ್ಲಿ ಬಿ.ಕಾಂ ಮಾಡುವುದಾಗಿ ಸಹನಾ ತಿಳಿಸಿದ್ದಾಳೆ.

ಸಹನಾ ಪೋಷಕರು ಕೂಡ ಮಗಳ ಸಾಧನೆ ಕುರಿತು ಸಂತೋಷ ವ್ಯಕ್ತಪಡಿಸಿದ್ದಾರೆ. ‘ ಸಹನಾ ಬರಿ ಓದಿಗೆ ಮಾತ್ರ ಸೀಮಿತವಾಗಿರಲಿಲ್ಲ. ಕಲೆ ಕ್ರೀಡೆಯಲ್ಲೂ ಸಕ್ರಿಯವಾಗಿ ಭಾಗವಹಿಸುತ್ತಿದ್ದಳು. ಅವಳು ಟಾಪರ್ ಪಟ್ಟಿಯಲ್ಲಿ ಸ್ಥಾನ ಪಡೆಯಬಹುದೆಂದು ನಿರೀಕ್ಷೆಯಿತ್ತು, ಆದರೆ ರಾಜ್ಯಕ್ಕೆ ಪ್ರಥಮ ಸ್ಥಾನಗಳಿಸುತ್ತಾಳೆಂದು ನಿರೀಕ್ಷಿಸಿರಲಿಲ್ಲ ಎಂದು ಸಹನಾ ತಂದೆ ಗುರುರಾಜ್ ಕುಲಕರ್ಣಿ ಸಂತೋಷ ಹಂಚಿಕೊಂಡಿದ್ದಾರೆ.

ಸಹನಾ ವಾಣಿಜ್ಯ ವಿಭಾಗದಲ್ಲಿ ರಾಜ್ಯಕ್ಕೆ ಮೊದಲ ಸ್ಥಾನ ಗಳಿಸಿದ್ದು ತುಂಬಾ ಸಂತೋಷವಾಗಿದೆ. ಇದು ಸಹನಾಳ ಕಠಿಣ ಪರಿಶ್ರಮಕ್ಕೆ ಸಿಕ್ಕ ಪ್ರತಿಫಲ ಎಂದು ವಿ.ಬಿ. ದರ್ಬಾರ್ ಪಿಯು ಕಾಲೇಜಿನ ಪ್ರಾಂಶುಪಾಲರಾದ ಸಿ.ಆರ್ ಕುಲಕರ್ಣಿ ಸುವರ್ಣ ನ್ಯೂಸ್- ಕನ್ನಡ ಪ್ರಭದೊಂದಿಗೆ ಸಂತಸ ಹಂಚಿಕೊಂಡಿದ್ದಾರೆ.

ಸಹನಾ ಯಾವುದೇ ಟ್ಯೂಷನ್’ಗೆ ಹೋಗುತ್ತಿರಲಿಲ್ಲ. ಉಪನ್ಯಾಸಕರ ಪಾಠವನ್ನು ತುಂಬಾ ಆಸಕ್ತಿಯಿಂದ ಕೇಳುತ್ತಿದ್ದಳು. ಓದಿಗೆ ಸಂಬಂಧಿಸಿದಂತೆ ಯಾವುದೇ ಗೊಂದಲಗಳಿದ್ದರು ಅದನ್ನು ಉಪನ್ಯಾಸಕರಗಳ ಬಳಿ ಚರ್ಚಿಸುತ್ತಿದ್ದಳು. ಸಹನಾ ಅಗ್ರ ಶ್ರೇಯಾಂಕದಲ್ಲಿ ಉತ್ತೀರ್ಣರಾಗುತ್ತಾಳೆ ಎಂಬ ನಿರೀಕ್ಷೆಯಿತ್ತು, ಆದರೆ ರಾಜ್ಯಕ್ಕೆ ಪ್ರಥಮ ಸ್ಥಾನ ಗಳಿಸುತ್ತಾಳೆ ಎಂದು ನಿರೀಕ್ಷಿಸಿರಲಿಲ್ಲ ಎಂದು ಸಿ.ಆರ್ ಕುಲಕರ್ಣಿ ತಿಳಿಸಿದ್ದಾರೆ.

ಸಾಮಾನ್ಯವಾಗಿ ಉತ್ತರ ಕರ್ನಾಟಕ ಭಾಗಗಳಲ್ಲಿ ಶಿಕ್ಷಣಕ್ಕೆ ಒತ್ತು ನೀಡುವ ವಿಚಾರದಲ್ಲಿ ಪೋಷಕರು ನಿರಾಸಕ್ತಿ ಹೊಂದಿರುತ್ತಾರೆ. ಇಂತಹ ಸನ್ನಿವೇಶದಲ್ಲಿ ನಮ್ಮ ವಿದ್ಯಾವರ್ಧಕ ಸಂಘದ ಆಡಳಿತ ಮಂಡಳಿಯ ಸಹಕಾರದಿಂದ ಗುಣಮಟ್ಟದ ಶಿಕ್ಷಣ ನೀಡುವಲ್ಲಿ ಯಶಸ್ವಿಯಾಗುತ್ತಾ ಬಂದಿದೆ. ನಾವು ನಮ್ಮ ವಿದ್ಯಾರ್ಥಿಗಳಿಗೆ ಪ್ರತಿ ತಿಂಗಳೂ ಕಿರುಪರೀಕ್ಷೆಗಳನ್ನು ನಡೆಸುತ್ತಿದ್ದೆವು. ಅದರಲ್ಲಿ ಮಕ್ಕಳ ಸರಿ-ತಪ್ಪು ತಿದ್ದಲು ಇದು ಸಹಕಾರಿಯಾಯಿತು ಎಂದು ವಿ.ಬಿ ದರ್ಬಾರ್ ಕಾಲೇಜಿನ ಪ್ರಾಂಶುಪಾಲರು ತಿಳಿಸಿದ್ದಾರೆ.

ಕಾಮರ್ಸ್ ವಿಭಾಗದ ಟಾಪ್ಪರ್ ಛಾಯಾಶ್ರೀ
ಎಂಇಎಸ್ ಕಾಲೇಜಿನ ವಿದ್ಯಾರ್ಥಿನಿ ಛಾಯಾಶ್ರೀ ಈ ಬಾರಿಯ ದ್ವಿತೀಯ ಪಿಯುಸಿ ವಾಣಿಜ್ಯ ವಿಭಾಗದಲ್ಲಿ 594 ಅಂಕ ಗಳಿಸಿ ಅಗ್ರಸ್ಥಾನ ಪಡೆದಿದ್ದಾರೆ.

image

ಫಲಿತಾಂಶ ಪ್ರಕಟವಾದ ಬಳಿಕ ಸುವರ್ಣ ನ್ಯೂಸ್ ಜೊತೆ ಮಾತನಾಡಿದ ಛಾಯಾಶ್ರೀ ತಾನು ಟಾಪರ್ ಆಗುತ್ತೇನೆಂದು ನಿರೀಕ್ಷಿಸಿರಲಿಲ್ಲ ಎಂದಿದ್ದಾರೆ. ಇಂತಿಷ್ಟೇ ಓದಬೇಕೆಂದು ಟೈಮ್ ಟೇಬಲ್ ಹಾಕಿಕೊಳ್ಳದಿದ್ದರೂ ಅವತ್ತಿನ ಪಾಠಗಳನ್ನು ಅವತ್ತವತ್ತೇ ಓದುತ್ತಿದ್ದೆ ಎಂದವರು ಹೇಳಿದ್ದಾರೆ. ಹಿಂದಿನ ವರ್ಷಗಳ ಮತ್ತು ಮಾದರಿ ಪ್ರಶ್ನೆಪತ್ರಿಕೆಗಳನ್ನು ತಪ್ಪದೇ ಅಭ್ಯಾಸ ಮಾಡುತ್ತಿದ್ದುದು ಈಕೆಯ ನೆರವಿಗೆ ಬಂದಿದೆ. ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಹೆಚ್ಚು ಆಸಕ್ತಿ ತೋರದ ಛಾಯಾಶ್ರೀ ಮುಂದೆ ಚಾರ್ಟರ್ಡ್ ಅಕೌಂಟೆಂಟ್ ಆಗಬೇಕೆಂಬ ಗುರಿ ಇದೆ. ಈಗಾಗಲೇ ಇದಕ್ಕಾಗಿ ತಯಾರಿ ನಡೆಸಿದ್ದು ಮುಂದಿನ ತಿಂಗಳು ನಡೆಯಲಿರುವ ಸಿಪಿಟಿ ಪರೀಕ್ಷೆಯನ್ನು ಬರೆಯಲಿದ್ದಾರೆ.

#

ರಾಜ್ಯಕ್ಕೆ ಪ್ರಥಮ ಬಂದ ರಕ್ಷಿತಾಗೆ ವಿಜ್ಞಾನಿಯಾಗುವ ಆಸೆ
“ನನಗೆ ಮೊದಲಿನಿಂದಲೂ ವಿಜ್ಞಾನದ ಬಗ್ಗೆ ಆಸಕ್ತಿ. ಅದೇ ಕ್ಷೇತ್ರದಲ್ಲಿ ಏನನ್ನಾದರೂ ಸಾಧಿಸಬೇಕೆಂಬ ಹಂಬಲ. ನಾನೂ ಮೂಲವಿಜ್ಞಾನವನ್ನೇ ಓದಬೇಕೆಂದುಕೊಂಡಿದ್ದೇನೆ. ವಿಜ್ಞಾನಿಯಾಗಬೇಕೆಂಬುದು ನನ್ನ ಕನಸು’’

ಇದು ಪಿಯುಸಿಯಲ್ಲಿ 596 ಅಂಕಗಳನ್ನ ಪಡೆದು ರಾಜ್ಯಕ್ಕೆ ಪ್ರಥಮರಾದ ರಕ್ಷಿತಾ ಅವರು ಹೇಳಿದ ಮಾತು. ಭೌತಶಾಸ್ತ್ರ, ರಸಾಯನಶಾಸ್ತ್ರ, ಗಣಿತ, ಮತ್ತು ಎಲೆಕ್ಟ್ರಾನಿಕ್ಸ್ ನಲ್ಲಿ ಪಿಯುಸಿ ವ್ಯಾಸಂಗ ಮಾಡಿದ ರಕ್ಷಿತಾ ಹೆಚ್ಚೇನು ಶ್ರಮ ಪಡದೆ ಶ್ರದ್ಧೆಯಿಂದ ಓದಿದ್ದೇ ಈ ಫಲಿತಾಂಶಕ್ಕೆ ಕಾರಣವೆಂದು ಕನ್ನಡಪ್ರಭದೊಂದಿಗೆ ಮಾತನಾಡುತ್ತಾ ತಿಳಿಸಿದರು.

“ತರಗತಿಗಳನ್ನು ಮಿಸ್ ಮಾಡಿಕೊಳ್ಳದೆ ಎಲ್ಲಾ ತರಗತಿಗಳಿಗೂ ಹಾಜರಾಗುತ್ತಿದ್ದೆ, ಯೂನಿಟ್ ಟೆಸ್ಟ್’ಗಳನ್ನು ಮಿಸ್ ಮಾಡಿಕೊಳ್ಳುತ್ತಲೂ ಇರಲಿಲ್ಲ. ಏಕಾಗ್ರತೆಯಿಂದ ಓದಿಕೊಳ್ಳುತ್ತಿದ್ದೆ. ಐಐಟಿಗಾಗಿ ಪಡೆದ ಕೋಚಿಂಗ್ ಸ್ವಲ್ಪ ನೆರವಾಯಿತು. ಎಂದು ತಮ್ಮ ಓದಿನ ಕ್ರಮವನ್ನು ವಿವರಿಸಿದರು.

“ಹೀಗೆ ಓದಬೇಕು. ಇಷ್ಟೇ ಓದಬೇಕು ಎಂಬ ನಿಯಮವನ್ನೇನು ಹಾಕಿಕೊಂಡಿರಲಿಲ್ಲ. ಆಸಕ್ತಿಯಿಂದ ಓದುತ್ತಿದ್ದೆ’’ ಎಂದ ಅವರು, ಮುಂದೆ ಪರೀಕ್ಷೆ ಬರೆಯುವ ವಿದ್ಯಾರ್ಥಿಗಳಿಗೆ ಟಿಪ್ಸ್ ಕೊಡಿ ಎಂದಾಗ ಹೇಳಿದ್ದು, “ಅಂಕಗಳಿಗಾಗಿ ಓದಬೇಡಿ, ಪರೀಕ್ಷೆ ಬರೆಯಬೇಡಿ. ವಿಷಯದ ಬಗ್ಗೆ ಆಸಕ್ತಿ ಮುಖ್ಯ. ಅದನ್ನು ತಿಳಿಯುವುದಕ್ಕಾಗಿ ಓದಿದರೆ, ಅಂಕ ತಾನಾಗಿ ಬರುತ್ತವೆ’ಎಂದು ಹೇಳಿದರು.

ರಕ್ಷಿತಾ ಪೋಷಕರು ಮತ್ತು ಕಾಲೇಜಿನ ಸಿಬ್ಬಂದಿಗೆ ಕೃತಜ್ಞತೆಗಳನ್ನು ಅರ್ಪಿಸಿದರು.

ವಿಜ್ಞಾನಿಯಾಗುವ ಹಂಬಲವಿರುವ ರಕ್ಷಿತಾ ಐಐಟಿ, ಜೆಇಇ, ಐಸಾರ್ ಪ್ರವೇಶ ಪರೀಕ್ಷೆ ಬರೆದು ಮುಂದೆ ವಿಜ್ಞಾನ, ಸಂಶೋಧನೆಯಲ್ಲಿ ತೊಡಗಿಕೊಳ್ಳುವವರಿದ್ದಾರೆ.

ಮಗಳ ಸಾಧನೆಗೆ ಹರ್ಷ

“ನಾವು ರಾಜ್ಯಕ್ಕೆ ಪ್ರಥಮ ಬರುತ್ತಾಳೆ ಎಂಬ ನಿರೀಕ್ಷೆ ಇಟ್ಟುಕೊಂಡಿರಲಿಲ್ಲ. ಓದಿನ ಬಗ್ಗೆ ಹೆಚ್ಚು ಆಸ್ಥೆ ವಹಿಸುತ್ತಿದ್ದಳು. ಅನಗತ್ಯವಾದ ಯಾವುದೇ ಕೆಲಸಗಳಲ್ಲಿ ತೊಡಗಿಕೊಳ್ಳುತ್ತಿರಲಿಲ್ಲ. ಅವಳ ಈ ಡೆಡಿಕೇಷನ್ ಫಲ ಕೊಟ್ಟಿದೆ. ತುಂಬಾ ಸಂತೋಷವಾಗಿದೆ ಎಂದು ರಕ್ಷಿತಾ ಅವರ ತಾಯಿ ಪಂಕಜಾ ತಮನ್ ಹರ್ಷ ವ್ಯಕ್ತಪಡಿಸಿದ್ದಾರೆ.

“ಮೂಲ ವಿಜ್ಞಾನವನ್ನೇ ಓದಬೇಕೆಂಬ ಆಸೆ ಅವಳಿಗೆ. ಪ್ರವೇಶ ಪರೀಕ್ಷೆ ಬರೆಯುತ್ತಾಳೆ. ಅವಳಿಗೆ ನಾವು ಸದಾ ಪ್ರೋತ್ಸಾಹಿಸುತ್ತೇವೆ. ಅವಳ ಸಾಧನೆ ನಮಗೆ ಹೆಮ್ಮೆ ತಂದಿದೆ’ಎಂದು ರಕ್ಷಿತಾ ತಂದೆ ತಮನ್ ಸಂತೋಷ್ ವ್ಯಕ್ತಪಡಿಸಿದರು.

ವಿದ್ಯಾವರ್ಧಕ ಸಂಘ ಪಿಯು ಕಾಲೇಜ್ ನ ಪ್ರಾಂಶುಪಾಲರಾದ ವಿದ್ಯಾಶ್ರೀ ಅವರು, “ತುಂಬಾ ಶ್ರಮ ಹಾಕಿದ್ದಾಳೆ. ಶ್ರದ್ಧೆಯಿಂದ ಓದಿದ್ದಾಳೆ. ಅವಳ ಸಾಧನೆಗೆ ಅಭಿನಂದನೆಗಳು. ನಮಗೆ ಸಂತೋಷ ತಂದಿದೆ’’ ಎಂದು ಹೇಳಿದರು.

ವಿಜಯವಾಣೆ ವರದಿ:
ಪಿಯು ಸೆಕೆಂಡ್​ಕ್ಲಾಸ್
ಪ್ರಶ್ನೆಪತ್ರಿಕೆ ಸೋರಿಕೆಯಿಂದ ತೀವ್ರ ಕುತೂಹಲಕ್ಕೆ ಕಾರಣವಾಗಿದ್ದ 2016ನೇ ಸಾಲಿನ ದ್ವಿತೀಯ ಪಿಯು ರಿಸಲ್ಟ್ ಬುಧವಾರ ಪ್ರಕಟವಾಗಿದ್ದು, ಕಳೆದ ಎರಡು ವರ್ಷಗಳಲ್ಲಿ ಇದೇ ಮೊದಲ ಬಾರಿ ದ್ವಿತೀಯ ದರ್ಜೆ ಫಲಿತಾಂಶ ಬಂದಿದೆ. ಒಟ್ಟಾರೆ ಶೇ.57.20 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು, ಕಳೆದ ವರ್ಷಕ್ಕೆ ಹೋಲಿಸಿದಲ್ಲಿ ಫಲಿತಾಂಶದ ಪ್ರಮಾಣ ಶೇ.3.34 ಇಳಿಕೆಯಾಗಿದೆ. ಗುಣಮಟ್ಟದ ಫಲಿತಾಂಶ ನೀಡುವ ಉದ್ದೇಶದಿಂದ ಈ ಬಾರಿ ಕೃಪಾಂಕ ನೀಡದಿರುವುದು ಫಲಿತಾಂಶ ಕುಸಿತಕ್ಕೆ ಕಾರಣವಾಗಿದೆ ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಕಿಮ್ಮನೆ ರತ್ನಾಕರ ಹೇಳಿದ್ದಾರೆ. ಇದರ ಹೊರತಾಗಿಯೂ ಕಳೆದ 9 ವರ್ಷಗಳಲ್ಲಿ ನಿರಂತರ ಏರಿಕೆ ಕಂಡಿದ್ದ ಫಲಿತಾಂಶ ಈ ವರ್ಷ ಇಳಿಕೆಯಾಗಿರುವುದು ಶಿಕ್ಷಣದ ಗುಣಮಟ್ಟದ ಬಗ್ಗೆಯೇ ಗುಮಾನಿ ಮೂಡಿಸಿದೆ.

ಸೆಕೆಂಡ್ ಕ್ಲಾಸ್​ನಲ್ಲಿ ಪಿಯು ಪಾಸ್!

ಬೆಂಗಳೂರು: ಪ್ರಶ್ನೆಪತ್ರಿಕೆ ಸೋರಿಕೆ, ಉಪನ್ಯಾಸಕರ ಮುಷ್ಕರ ಮತ್ತಿತರ ಕಾರಣಗಳಿಂದ ಭಾರಿ ಕುತೂಹಲ ಕೆರಳಿಸಿದ್ದ ಈ ಬಾರಿಯ ದ್ವಿತೀಯ ಪಿಯು ಫಲಿತಾಂಶ ದ್ವಿತೀಯ ದರ್ಜೆಯಲ್ಲಿ ಉತ್ತೀರ್ಣಗೊಂಡಿದೆ!

ಬುಧವಾರ ಫಲಿತಾಂಶ ಪ್ರಕಟಗೊಂಡಿದ್ದು, ಶೇ.57.20 ವಿದ್ಯಾರ್ಥಿಗಳು ಪಾಸಾಗಿದ್ದಾರೆ. ಕಳೆದ 9 ವರ್ಷದಿಂದ ಏರುಗತಿಯಲ್ಲಿದ್ದ ಫಲಿತಾಂಶ ಈ ವರ್ಷ ಇಳಿಕೆ ಕಂಡಿದ್ದು, ಕಳೆದ ವರ್ಷಕ್ಕೆ ಹೋಲಿಸಿದರೆ ಈ ಸಾಲಿನ ಫಲಿತಾಂಶದಲ್ಲಿ ಶೇ.3.34 ಕುಸಿತ ಕಂಡಿದೆ. ಎಂದಿನಂತೆ ಈ ವರ್ಷ ಕೂಡ ಬಾಲಕಿಯರೇ ಮೇಲುಗೈ ಸಾಧಿಸಿದ್ದಾರೆ. ಫಲಿತಾಂಶ ಬಿಡುಗಡೆ ಮಾಡಿದ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಕಿಮ್ಮನೆ ರತ್ನಾಕರ ಮಾತನಾಡಿ, ಗುಣಮಟ್ಟದ ಫಲಿತಾಂಶ ನೀಡುವ ಉದ್ದೇಶದಿಂದ ಈ ಬಾರಿ ಕೃಪಾಂಕ ನೀಡಿಲ್ಲ. ಕಲಾ ವಿಭಾಗದಲ್ಲಿ ಉತ್ತೀರ್ಣರಾದವರ ಸಂಖ್ಯೆ ಕಡಿಮೆ ಇರುವುದು ಫಲಿತಾಂಶ ಕುಸಿತಕ್ಕೆ ಕಾರಣವಾಗಿದೆ. ಗಣಿತ ಹಾಗೂ ಪ್ರಶ್ನೆಪತ್ರಿಕೆ ಸೋರಿಕೆಯಾಗಿದ್ದ ರಸಾಯನ ಶಾಸ್ತ್ರಕ್ಕೆ ಯಾವುದೇ ಕೃಪಾಂಕ ನೀಡದಿದ್ದರೂ ಕ್ರಮವಾಗಿ ಶೇ.80.89 ಹಾಗೂ ಶೇ.83.31 ಫಲಿತಾಂಶ ಬಂದಿದೆ. ಪಠ್ಯೇತರ ವಿಷಯದಿಂದ ಪ್ರಶ್ನೆ ಆಯ್ಕೆ ಮಾಡಿ ನೀಡಲಾಗಿತ್ತು. ಗಣಿತ ಪ್ರಶ್ನೆಪತ್ರಿಕೆಗೆ ಸಂಬಂಧಿಸಿದಂತೆ ಇಲಾಖೆ, ಪ್ರತ್ಯೇಕ ಸಮಿತಿ ರಚನೆ ಮಾಡಿ ವರದಿ ಪಡೆದು ಕೃಪಾಂಕ ನೀಡಲು ಯಾವುದೇ ಆಸ್ಪದವಿಲ್ಲ ಎಂದು ತಿಳಿಸಿದ ನಂತರವೇ ಫಲಿತಾಂಶ ಪ್ರಕಟಿಸಿದ್ದೇವೆ ಎಂದರು. ಈ ವರ್ಷ 6,36,368 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು. ಈ ಪೈಕಿ 3,33,278 ಹೊಸ, 7,273 ಖಾಸಗಿ ಮತ್ತು ಪುನರಾವರ್ತಿತ 23,462 ಸೇರಿ 3,64,013 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಶೇ.65.02 ಹೊಸ ವಿದ್ಯಾರ್ಥಿಗಳು, ಶೇ.23.27 ಖಾಸಗಿ, ಶೇ.25.35 ಪುನರಾವರ್ತಿತ ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದಾರೆ.

ದಕ್ಷಿಣಕನ್ನಡ ಫಸ್ಟ್, ಯಾದಗಿರಿ ಲಾಸ್ಟ್

ಕಳೆದ ವರ್ಷದಂತೆ ಈ ವರ್ಷವೂ ದಕ್ಷಿಣಕನ್ನಡ ಜಿಲ್ಲೆ ಶೇ.90.48 ಫಲಿತಾಂಶದ ಗಳಿಸಿ ಮೊದಲ ಸ್ಥಾನದಲ್ಲಿದ್ದರೆ, ಉಡುಪಿ(ಶೇ.90.35) ಹಾಗೂ ಕೊಡುಗು (ಶೇ.79.35) ದ್ವಿತೀಯ ಹಾಗೂ ತೃತೀಯ ಸ್ಥಾನ ಗಳಿಸಿವೆ. ಈ ಬಾರಿಯೂ ಹೈಕ ಜಿಲ್ಲೆಗಳು ಕಳಪೆ ಫಲಿತಾಂಶ ಪಡೆದಿದ್ದು, ಚಿತ್ರದುರ್ಗ ಮತ್ತು ಯಾದಗಿರಿ ಕೊನೇ ಸ್ಥಾನದಲ್ಲಿದೆ.

ಸಮಯ ಸಿಕ್ಕಾಗಲೆಲ್ಲ ಆಸಕ್ತಿ ಇಟ್ಟು ಓದುತ್ತಿದ್ದೆ. ಪಠ್ಯದ ಜತೆಗೆ ಕಾದಂಬರಿ ಓದುವುದು, ಟಿ.ವಿ. ವೀಕ್ಷಣೆ ಅಭ್ಯಾಸವೂ ಇತ್ತು. ನನಗೆ ಭೌತಶಾಸ್ತ್ರದಲ್ಲಿ ಆಸಕ್ತಿಯಿದ್ದು, ಮುಂದೆ ಬಿಎಸ್ಸಿ ಅಭ್ಯಾಸ ಮಾಡುತ್ತೇನೆ, ಐಐಎಸ್​ಸಿ ಸೇರುವ ಆಸೆಯಿದೆ.

| ರಕ್ಷಿತಾ ವಿಜ್ಞಾನ ವಿಭಾಗದ ಟಾಪರ್

ಜಿಲ್ಲಾವಾರು ಫಲಿತಾಂಶದಲ್ಲಿ ಇಳಿಕೆ

ಕಳೆದ ವರ್ಷಕ್ಕಿಂತ ಈ ವರ್ಷ ಯಾವ ಜಿಲ್ಲೆಯೂ ಹೆಚ್ಚಿನ ಫಲಿತಾಂಶ ದಾಖಲಿಸಿಲ್ಲ. ದಕ್ಷಿಣಕನ್ನಡ ಹಾಗೂ ಉಡುಪಿ ಮಾತ್ರ ಉನ್ನತ ಶ್ರೇಣಿ ಹೊಂದಿದ್ದರೆ, 17 ಜಿಲ್ಲೆಗಳು ಶೇ.60ಕ್ಕಿಂತ ಹೆಚ್ಚಿನ ಫಲಿತಾಂಶ ಹೊಂದಿವೆ. 8 ಜಿಲ್ಲೆಗಳು ದ್ವಿತೀಯ ಶ್ರೇಣಿಯಲ್ಲಿದ್ದರೆ, ಉತ್ತರ ಕರ್ನಾಟಕದ 4 ಜಿಲ್ಲೆಗಳು ಶೇ.50ಕ್ಕಿಂತಲೂ ಕಡಿಮೆ ಫಲಿತಾಂಶ ಗಳಿಸಿವೆ. ಅದಲ್ಲದೇ ಶೂನ್ಯ ಫಲಿತಾಂಶ ಗಳಿಸಿರುವ 91 ಕಾಲೇಜುಗಳಲ್ಲಿ 72 ಕಾಲೇಜುಗಳು ಉತ್ತರ ಕರ್ನಾಟಕದ ಭಾಗಕ್ಕೆ ಸೇರಿರುವುದನ್ನು ಇಲಾಖೆ ಗಂಭೀರವಾಗಿ ಪರಿಗಣಿಸಬೇಕಿದೆ.

ಹೆಚ್ಚಿದ ಶೂನ್ಯ ರಿಸಲ್ಟ್ ಕಾಲೇಜುಗಳು

ಈ ವರ್ಷ ಶೇ.100 ಫಲಿತಾಂಶ ಪಡೆದಿರುವ ಕಾಲೇಜುಗಳ ಸಂಖ್ಯೆಯೂ ಕ್ಷೀಣಿಸಿದೆ. ಕಳೆದ ವರ್ಷ 55 ಇದ್ದ ಕಾಲೇಜುಗಳ ಸಂಖ್ಯೆ ಈ ವರ್ಷ 41ಕ್ಕೆ ಇಳಿಕೆಯಾಗಿದೆ. ಶೂನ್ಯ ಪಡೆದ ಕಾಲೇಜುಗಳ ಸಂಖ್ಯೆ 47 ರಿಂದ 91ಕ್ಕೆ ಏರಿಕೆಯಾಗಿದೆ.

ಕನ್ನಡ ಮಾಧ್ಯಮ ಹಿಂದುಳಿಯಿತು

ಫಲಿತಾಂಶದಲ್ಲಿ ಕನ್ನಡ ಮಾಧ್ಯಮ ವಿದ್ಯಾರ್ಥಿಗಳು ಈ ಬಾರಿಯೂ ಹಿಂದುಳಿದಿದ್ದಾರೆ. ಕಳೆದ ವರ್ಷ ಶೇ.66.87 ಆಂಗ್ಲ ಮಾಧ್ಯಮ ಹಾಗೂ ಶೇ.53.41 ಕನ್ನಡ ಮಾಧ್ಯಮ ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದರು. ಈ ವರ್ಷ ಕನ್ನಡ ಮಾಧ್ಯಮದಲ್ಲಿ ಓದಿದ ಶೇ.46.89 ಹಾಗೂ ಆಂಗ್ಲ ಮಾಧ್ಯಮದಲ್ಲಿ ಶೇ.65.71 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ.

26 ವಿದ್ಯಾರ್ಥಿಗಳ ಫಲಿತಾಂಶಕ್ಕೆ ತಡೆ

ದ್ವಿತೀಯ ಪಿಯು ಪ್ರಶ್ನೆಪತ್ರಿಕೆ ಸೋರಿಕೆಯಲ್ಲಿ ಪ್ರಮುಖ ಪಾತ್ರವಹಿಸಿದ್ದ ಆರೋಪಿಗಳ ಮಕ್ಕಳ ಫಲಿತಾಂಶ ತಡೆಯಲಾಗಿದೆಯೇ ಎಂಬ ಪ್ರಶ್ನೆಗೆ ಸಚಿವ ಕಿಮ್ಮನೆ ರತ್ನಾಕರ ಉತ್ತರಿಸಿ, ಒಎಂಆರ್ ತಿದ್ದಿರುವುದು ಸೇರಿ ಅನೇಕ ಕಾರಣಗಳಿಂದ ಪ್ರತಿ ವರ್ಷ ಕೆಲವು ವಿದ್ಯಾರ್ಥಿಗಳ ಫಲಿತಾಂಶ ತಡೆ ಹಿಡಿಯಲಾಗುತ್ತದೆ. 2013ರಲ್ಲಿ 3600, 2014ರಲ್ಲಿ 800 ಹಾಗೂ 2015ರಲ್ಲಿ 148 ವಿದ್ಯಾರ್ಥಿಗಳ ಫಲಿತಾಂಶ ತಡೆ ಹಿಡಿಯಲಾಗಿತ್ತು. ಇದೇ ರೀತಿ ಈ ವರ್ಷ 26 ವಿದ್ಯಾರ್ಥಿಗಳ ಫಲಿತಾಂಶ ತಡೆ ಹಿಡಿಯಲಾಗಿದೆ. ಪ್ರಶ್ನೆಪತ್ರಿಕೆ ಸೋರಿಕೆ ಆರೋಪ ಹೊಂದಿರುವ ಮಕ್ಕಳ ಅಥವಾ ಹೆಚ್ಚು ಫಲಿತಾಂಶ ಪಡೆದಿರುವ 11 ಕಾಲೇಜುಗಳ ವಿದ್ಯಾರ್ಥಿಗಳ ಫಲಿತಾಂಶ ತಡೆ ಹಿಡಿಯುವಂತೆ ತನಿಖಾಧಿಕಾರಿಗಳಿಂದ ಯಾವುದೇ ಪತ್ರದ ಅಥವಾ ಮೌಖಿಕವಾಗಿ ಆದೇಶ ಬಂದಿಲ್ಲ. ಹಾಗಾಗಿ ಈ ರೀತಿಯ ಪ್ರಕರಣದಲ್ಲಿ ಯಾವುದೇ ವಿದ್ಯಾರ್ಥಿಗಳ ಫಲಿತಾಂಶ ತಡೆ ಹಿಡಿದಿಲ್ಲ ಎಂದು ಸ್ಪಷ್ಟಪಡಿಸಿದರು.

ಬರದ ಜಿಲ್ಲೆಯಲ್ಲಿ ಸಹನಾಳ ಶೈಕ್ಷಣಿಕ ಕೃಷಿ
ವಿಜಯಪುರ: ಬರದ ನಾ
ಡೆಂಬ ಹಣೆಪಟ್ಟಿ ಹೊತ್ತಿರುವ ಜಿಲ್ಲೆಯಲ್ಲಿ ಶೈಕ್ಷಣಿಕ ಕೃಷಿ ಮಾಡಿರುವ ಸಹನಾ ಕುಲಕರ್ಣಿ, ವಾಣಿಜ್ಯ ವಿಭಾಗದಲ್ಲಿ 594(ಶೇ.99) ಅಂಕ ಗಳಿಸುವ ಮೂಲಕ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದಿದ್ದಾರೆ. ದರಬಾರ್ ಪಪೂ ಕಾಲೇಜಿನ ವಿದ್ಯಾರ್ಥಿನಿಯಾದ ಸಹನಾ, ವ್ಯವಹಾರ ಅಧ್ಯಯನ, ಸಂಖ್ಯಾ ಶಾಸ್ತ್ರ, ಗಣಕ ವಿಜ್ಞಾನ ಹಾಗೂ ಸಂಸ್ಕೃತದಲ್ಲಿ 100ಕ್ಕೆ 100, ಅರ್ಥಶಾಸ್ತ್ರದಲ್ಲಿ 99 ಮತ್ತು ಇಂಗ್ಲಿಷ್​ನಲ್ಲಿ 95 ಅಂಕ ಗಳಿಸಿದ್ದಾರೆ. ಮಧ್ಯಮ ಕುಟುಂಬದ ಈಕೆಯ ತಂದೆ ಗುರುರಾಜ ಅವರು ಖಾಸಗಿ ಸಂಸ್ಥೆಯಲ್ಲಿ ಉದ್ಯೋಗ ಮಾಡುತ್ತಿದ್ದು, ತಾಯಿ ಗೃಹಿಣಿ. ಮಗಳ ಓದಿಗಾಗಿ ಕುಟುಂಬ ಸದಸ್ಯರು ಟಿವಿ ನೋಡುವುದನ್ನೇ ಬಿಟ್ಟಿದ್ದು, ಯಾವುದೇ ಮನೆಗೆಲಸ ವಹಿಸದೆ ಆಕೆಯ ಏಳಿಗೆಗಾಗಿ ನಿರಂತರ ಶ್ರಮಿಸುತ್ತಿದ್ದಾರೆ. ಕ್ರೀಡೆ, ಸಾಹಿತ್ಯ, ರಸಪ್ರಶ್ನೆ ಸೇರಿ ವಿವಿಧ ಹವ್ಯಾಸಗಳನ್ನು ರೂಢಿಸಿಕೊಂಡಿರುವ ಸಹನಾ ಬಾಲ್ಯದಿಂದಲೇ ಸಿಎ ಆಗುವ ಕನಸು ಕಟ್ಟಿಕೊಂಡಿದ್ದಾರೆ. ‘ಫಲಿತಾಂಶಕ್ಕಾಗಿ ಹೆಚ್ಚಿನ ಪರಿಶ್ರಮವೇನೂ ವಹಿಸಿಲ್ಲ. ಬದಲಾಗಿ ಇಷ್ಟ ಪಟ್ಟು ಓದಿದೆ. ಓದಿದ್ದನ್ನು ಮನನ ಮಾಡಿಕೊಂಡೇ. ಪ್ರತೀ ಆಂತರಿಕ ಪರೀಕ್ಷೆಯಲ್ಲಿ ಅಂಕಗಳನ್ನು ಓರೆಗಲ್ಲಿಗೆ ಹಚ್ಚಿ ನೋಡಿದೆ. ಎಲ್ಲಿ ಹಾಗೂ ಯಾವ ಉತ್ತರಕ್ಕೆ ಏಕೆ ಅಂಕ ಕಡಿತಗೊಳಸಿದ್ದಾರೆ ಎಂಬುದನ್ನು ಉಪನ್ಯಾಸಕರನ್ನೇ ಕೇಳಿ ತಿಳಿದುಕೊಂಡೆ. ಬೆಳಗಿನ ಜಾವದ ಓದು ಸಾಕಷ್ಟು ಸಹಾಯಕ್ಕೆ ಬಂತು’ ಎಂದು ಸಹನಾ ವಿಜಯವಾಣಿಯೊಂದಿಗೆ ಸಂತಸ ಹಂಚಿಕೊಂಡರು.

ವಾಣಿಜ್ಯ ವಿಭಾಗದ ಬಗ್ಗೆ ಕೀಳರಿಮೆ ಬೇಡ. ಇದರಲ್ಲೂ ಶ್ರೇಷ್ಠ ಸಾಧನೆ ಮಾಡಬಹುದು. ಸಾಕಷ್ಟು ಉದ್ಯೋಗಾವಕಾಶವಿದೆ. ಸತತ ಪರಿಶ್ರಮದಿಂದ ಅಭ್ಯಾಸ ಮಾಡಿದರೆ ಯಾವುದೇ ಕ್ಷೇತ್ರವಿದ್ದರೂ ಯಶಸ್ಸು ಸಾಧ್ಯ.

| ಸಹನಾ ಕುಲಕರ್ಣಿ

ಕಾಡಿನ ಕುಸುಮಗಳ ಸಾಧನೆ
ಮೈಸೂರು: ಇಂಗ್ಲಿಷ್ ಗಂಧ ಗಾಳಿಯೇ ಗೊತ್ತಿಲ್ಲದೆ ಕಾಡಿನಿಂದ ನಾಡಿಗೆ ಬಂದ ‘ವನವಾಸಿ ಬಾಲೆಯರಿಬ್ಬರು’ ಪಿಯುನಲ್ಲಿ ಉತ್ತಮ ಅಂಕದೊಂದಿಗೆ ಉತ್ತೀರ್ಣರಾಗುವ ಮೂಲಕ ಸಾಧನೆ ಮಾಡಿದ್ದಾರೆ. ನಗರದ ವಿಜಯವಿಠಲ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿನಿ ಉತ್ತರ ಕನ್ನಡ ಜಿಲ್ಲೆ ಕುಮಟಾ ತಾಲೂಕಿನ ಕಾಡಂಚಿನ ಪ್ರದೇಶವಾದ ‘ಬಂಗನೆ’ ಕುಗ್ರಾಮದ ಪೂರ್ಣಿಮಾ ದಾಮೋದರ್ ಮರಾಠಿ ವಿಜ್ಞಾನದಲ್ಲಿ ಶೇ.72.83 ಅಂಕ ಪಡೆದಿದ್ದಾರೆ. ಲಕ್ಷ್ಮೀಪುರಂನ ಸರ್ಕಾರಿ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿನಿ ಹರಿಹರ ಬಳಿಯ ಮನಗಾಳದ ಮನಿತಾ ಲಕ್ಕು ಬಾಜಾರಿ ವಾಣಿಜ್ಯ ವಿಭಾಗದಲ್ಲಿ ಶೇ.82 ಅಂಕ ಪಡೆದು, ಅವಕಾಶ ಕೊಟ್ಟರೆ ಕಾಡಿನ ಮಕ್ಕಳೂ ಸಾಧನೆಯಲ್ಲಿ ಕಮ್ಮಿ ಇಲ್ಲ ಎನ್ನುವುದನ್ನು ತೋರಿಸಿದ್ದಾರೆ. ಡಿ.ಎಂ. ದಾಮೋದರ, ಡಿ.ಎಂ.ಸಾವಿತ್ರಿ ದಂಪತಿ ಪುತ್ರಿಯಾದ ಪೂರ್ಣಿಮಾ, ಪ್ರಾಥಮಿಕ ಶಿಕ್ಷಣವನ್ನು ಹುಟ್ಟೂರಿನಲ್ಲಿಯೇ ಪಡೆದಿದ್ದಾಳೆ. ಕೂಲಿ ಕೆಲಸ ಮಾಡುವ ತಂದೆ, ತಾಯಿ ಮುಂದೆ ಓದಿಸಲು ಸಾಧ್ಯವಿಲ್ಲ ಎನ್ನುವ ಹಂತದಲ್ಲಿದ್ದಾಗ ಆದಿವಾಸಿಗಳ ಶ್ರೇಯೋಭಿವೃದ್ಧಿಗೆ ಶ್ರಮಿಸುತ್ತಿರುವ ‘ವನವಾಸಿ ಕಲ್ಯಾಣ ಆಶ್ರಮ’ದ ಶಕ್ತಿಕೀರ್ತಿ ಹಾಗೂ ವಿಜಯವಿಠಲ ವಿದ್ಯಾಸಂಸ್ಥೆ ನೆರವು ನೀಡಿತು. ಮೈಸೂರಿನಲ್ಲಿ ವಿದ್ಯಾಭ್ಯಾಸ ಮುಂದುವರಿಸಿ ಈ ಸಾಧನೆ ಮಾಡಿದ್ದಾರೆ.

ಆರೋಪಿಗಳ ಮಕ್ಕಳು ಅತ್ಯುನ್ನತ ಶ್ರೇಣಿಯಲ್ಲಿ ಪಾಸ್
ಬೆಂಗಳೂರು: ದ್ವಿತೀಯ ಪಿಯು ಪ್ರಶ್ನೆಪತ್ರಿಕೆ ಸೋರಿಕೆ ಆರೋಪಿಗಳ ಮಕ್ಕಳು ಅತ್ಯುನ್ನತ ಶ್ರೇಣಿಯಲ್ಲಿ ಉತ್ತೀರ್ಣ ರಾಗಿದ್ದಾರೆ. ವೈದ್ಯಕೀಯ ಶಿಕ್ಷಣ ಸಚಿವ ಶರಣ ಪ್ರಕಾಶ ಪಾಟೀಲರ ಆಪ್ತ ಕಾರ್ಯದರ್ಶಿಯಾಗಿದ್ದ ಓಬಳರಾಜು ಅವರ ಮಗ ಬಿ.ಒ.ಗೌರವ್ ವಿಜ್ಞಾನ ವಿಭಾಗದಲ್ಲಿ ಶೇ.92 ಅಂಕ ಗಳಿಸಿದರೆ, ಪಿಡಬ್ಲ್ಯುಡಿ ಇಲಾಖೆ ಕಚೇರಿ ವ್ಯವಸ್ಥಾಪಕ ರುದ್ರಪ್ಪ ಅವರ ಪುತ್ರಿ ಉಷಾ ಶೇ.89 ಅಂಕ ಗಳಿಸುವ ಮೂಲಕ ಅತ್ಯುನ್ನತ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ.

28ಕ್ಕೆ ಸಿಇಟಿ ಫಲಿತಾಂಶ

ಬೆಂಗಳೂರು: ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಹಾಗೂ ಕಾಮೆಡ್-ಕೆ ನಡೆಸುವ ಸಾಮಾನ್ಯ ಪ್ರವೇಶ ಪರೀಕ್ಷೆಯ ಫಲಿತಾಂಶ ಮೇ 28ರಂದು ಪ್ರಕಟವಾಗಲಿದೆ. ಸಿಇಟಿ ಫಲಿತಾಂಶವನ್ನು ಬೆಳಗ್ಗೆ 10 ಗಂಟೆಗೆ ಉನ್ನತ ಶಿಕ್ಷಣ ಸಚಿವರು ಪ್ರಕಟಿಸಲಿದ್ದಾರೆ. ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ವೆಬ್​ಸೈಟ್(ಡಿಡಿಡಿ.kಛಿಚ.kಚ್ಟ.ಜ್ಚಿ.ಜ್ಞಿ)ನಲ್ಲಿ ಫಲಿತಾಂಶ ದೊರೆಯಲಿದೆ. ಸಂಜೆ 6 ಗಂಟೆ ಬಳಿಕ ಕಾಮೆಡ್-ಕೆ ವೆಬ್​ಸೈಟ್(ಡಿಡಿಡಿ.ಟಞಛಿಛk.ಟ್ಟಜ)ನಲ್ಲಿ ಫಲಿತಾಂಶ ಸಿಗುತ್ತದೆ.

ರಮ್ಯಾಗೆ ಉಪನ್ಯಾಸಕಿ ಆಗುವಾಸೆ
ಮಂಗಳೂರು: ನನ್ನ ನಿರೀಕ್ಷೆಯಂತೆಯೇ ಅಂಕಗಳು ಬಂದಿವೆ. ಇದರಿಂದ ಖುಷಿಯಾಗಿದೆ. ಮುಂದಕ್ಕೆ ತಂದೆಯಂತೆ ಉಪನ್ಯಾಸ ವೃತ್ತಿ ಕೈಗೊಳ್ಳುವುದು ನನ್ನ ಗುರಿ. ‘ವಿಜಯವಾಣಿ’ ವಿದ್ಯಾರ್ಥಿಮಿತ್ರವನ್ನೂ ನಾನು ಓದುತ್ತಿದ್ದುದು ಹೆಚ್ಚು ಅಂಕ ಗಳಿಸಲು ಸಹಕಾರಿಯಾಯಿತು. ಇದು ಪಿಯು ವಿಜ್ಞಾನ ವಿಭಾಗದಲ್ಲಿ 590ದೊಂದಿಗೆ ರಾಜ್ಯದಲ್ಲೇ 7ನೇ ಸ್ಥಾನ ಪಡೆದ ಸುರತ್ಕಲ್ ಗೋವಿಂದದಾಸ ಪದವಿಪೂರ್ವ ಕಾಲೇಜಿನ ರಮ್ಯಾ ಅವರ ಪ್ರತಿಕ್ರಿಯೆ. ಓದಲು ನಿರ್ದಿಷ್ಟ ಸಮಯ ಮೀಸಲಿಟ್ಟು ನಾನು ಅಧ್ಯಯನ ನಡೆಸಲಿಲ್ಲ. ಮನಸ್ಸಿಗೆ ಬಂದಾಗ ಓದುತ್ತಿದ್ದೆ. ಫಲಿತಾಂಶ ಬಂದ ಬಳಿಕ ನನ್ನ ಶ್ರಮ ಸಾರ್ಥವಾಯಿತು ಎಂಬ ಭಾವನೆ ಮೂಡಿದೆ. ನನ್ನ ಯಶಸ್ಸಿಗೆ ತಂದೆ ತಾಯಿ, ಅಕ್ಕ, ಉಪನ್ಯಾಸಕರು ಕಾರಣ ಎಂದು ರಮ್ಯಾ ಸಂತಸ ಹಂಚಿಕೊಂಡರು.

ಛಲಗಾರ್ತಿಗೆ 541 ಅಂಕ

ರಾಣೆಬೆನ್ನೂರ: ತಮ್ಮನ್ನು ಬಿಟ್ಟು ಹೋದ ತಂದೆಗೆ ಜಿಗುಪ್ಸೆಯಾಗಬೇಕು ಎನ್ನುವ ಛಲದಿಂದ ಓದುತ್ತಿರುವ ಮಾರುತಿ ನಗರದ ಸರ್ಕಾರಿ ಪದವಿಪೂರ್ವ ಕಾಲೇಜ್​ನ ವಿದ್ಯಾರ್ಥಿನಿ ಸುಷ್ಮಾ 541 ಅಂಕಗಳಿಸುವ ಮೂಲಕ ಯಶಸ್ಸು ಕಂಡಿದ್ದಾರೆ. ಮೂಲತಃ ಸುಣಕಲ್ಲಬಿದರಿ ಗ್ರಾಮದ ಸುಷ್ಮಾ 1ನೇ ತರಗತಿ ಇದ್ದಾಗಲೇ ತಂದೆ ಮತ್ತೊಂದು ಮದುವೆಯಾಗಿ ಬೇರೆಡೆ ವಾಸವಾಗಿದ್ದಾರೆ. ತಾಯಿ ಚನ್ನಮ್ಮ ಕಡುಬಡತನದ ನಡುವೆಯೇ ಉನ್ನತ ಶಿಕ್ಷಣ ಕೊಡಿಸಿದ್ದಾರೆ.

ನಿತ್ಯವೂ ವಿಜಯವಾಣಿ ವಿದ್ಯಾರ್ಥಿಮಿತ್ರ ಓದುತ್ತಿದ್ದೆ. ಇದರಿಂದ ಪರೀಕ್ಷೆ ಸಮಯದಲ್ಲಿ ಉತ್ತರಿಸಲು ಅನುಕೂಲ ಆಯಿತು. ನಮ್ಮ ಮಾವ ಪತ್ರಿಕೆ ತಂದು ಕೊಡುತ್ತಿದ್ದರು. ಅವರಿಗೂ ಹಾಗೂ ವಿಜಯವಾಣಿಗೂ ಕೃತಜ್ಞತೆಗಳು. ಮುಂದೆ ಸಿಎ ಮಾಡಬೇಕೆಂಬ ಗುರಿ ಇದೆ.

| ಸುಷ್ಮಾ ವಿದ್ಯಾರ್ಥಿನಿ

ಮರು ಎಣಿಕೆ ಉಚಿತ

ಇದೇ ಮೊದಲ ಬಾರಿಗೆ ಉಚಿತವಾಗಿ ಅಂಕಗಳ ಮರು ಎಣಿಕೆ ಮಾಡಲಾಗುತ್ತಿದೆ. ಆದರೆ ಸ್ಕ್ಯಾ
ನಿಂಗ್ ಪ್ರತಿಗೆ 400 ರೂ. ಹಾಗೂ ಮರು ಮೌಲ್ಯಮಾಪನದ ಪ್ರತಿ ವಿಷಯಕ್ಕೆ 1260 ರೂ. ನಿಗದಿಪಡಿಸಲಾಗಿದೆ. ಮರುಮೌಲ್ಯಮಾಪನ ಹಾಗೂ ಮರು ಎಣಿಕೆಗೆ ಅರ್ಜಿ ಸಲ್ಲಿಸಲು ಜೂ.7 ಕೊನೆಯ ದಿನವಾಗಿದೆ. ಸ್ಕ್ಯಾನಿಂಗ್ ಪ್ರತಿ ಪಡೆಯಲು ಮೇ 30ರೊಳಗೆ ಆನ್​ಲೈನ್ ಅರ್ಜಿ ಸಲ್ಲಿಸಬೇಕು. ಮರು ಎಣಿಕೆ ಹಾಗೂ ಮರು ಮೌಲ್ಯಮಾಪನದ ಫಲಿತಾಂಶವನ್ನು ಆಯಾ ದಿನವೇ ವೆಬ್​ಸೈಟ್​ನಲ್ಲಿ ಪ್ರಕಟಿಸಲಾಗುತ್ತದೆ.

ಸ್ಕ್ಯಾನ್ ಕಾಪಿ ಪಡೆಯುವುದು ಹೇಗೆ?: ವಿದ್ಯಾರ್ಥಿಗಳು ಪಿಯು ವೆಬ್​ಸೈಟ್ http://www.pue.kar.nic.in ಗೆ ಭೇಟಿ ನೀಡಿ ಅಲ್ಲಿ ಸ್ಕ್ಯಾನ್ ಪ್ರತಿಗೆ ಎಂದು ಬರುವ ಲಿಂಕ್ ಮೇಲೆ ಕ್ಲಿಕ್ ಮಾಡಬೇಕು. ಸ್ಟೂಡೆಂಟ್ ಮೆನು, ಅಲ್ಲಿ ಆನ್​ಲೈನ್ ಅಪ್ಲಿಕೇಷನ್ ಫಾರ್ ಸ್ಕ್ಯಾನ್ ಕಾಪಿ, ಮರು ಮೌಲ್ಯಮಾಪನ, ಮರು ಏಣಿಕೆ ಎಂಬ ಲಿಂಕ್ ಮೇಲೆ ಕ್ಲಿಕ್ ಮಾಡಿದಾಗ ಪ್ರತ್ಯೇಕ ಅರ್ಜಿ ತೆರೆದುಕೊಳ್ಳಲಿದ್ದು, ಅಲ್ಲಿ ಕೇಳಿರುವ ಮಾಹಿತಿಯನ್ನು ಭರ್ತಿ ಮಾಡಬೇಕು. ಯಾವ ವಿಷಯದ ಛಾಯಾಪ್ರತಿ ಬೇಕು ಎಂಬುದನ್ನು ನಮೂದಿಸಿ ಮೊಬೈಲ್ ಸಂಖ್ಯೆ ಹಾಗೂ ಇ-ಮೇಲ್ ವಿಳಾಸ ಭರ್ತಿ ಮಾಡಿ ‘ಸಲ್ಲಿಸು’ ಎಂಬ ಬಟನ್ ಕ್ಲಿಕ್ ಮಾಡಬೇಕು. ಅರ್ಜಿ ಸಲ್ಲಿಸಿದ ನಂತರ ಹಣ ಪಾವತಿಸಲು ಲಭ್ಯವಿರುವ ಬ್ಯಾಂಕ್​ಗಳ ಪೈಕಿ ಒಂದನ್ನು ನೀವು ಆಯ್ಕೆ ಮಾಡಬೇಕು. ನಂತರ ಚಲನ್ ಜನರೆಟ್ ಬಟನ್ ಕ್ಲಿಕ್ ಮಾಡಿದಲ್ಲಿ ಪ್ರತ್ಯೇಕ ಚಲನ್ ತೆರೆದುಕೊಳ್ಳುತ್ತದೆ. ಇದನ್ನು ಮುದ್ರಿಸಿಕೊಂಡು ಹಣ ಪಾವತಿಸಬೇಕು. ಹಣ ಪಾವತಿಯಾಗಿರುವ ಬಗ್ಗೆ ನೀವು ನೀಡಿರುವ ಮೊಬೈಲ್ ಸಂಖ್ಯೆಗೆ ಸಂದೇಶ ರವಾನೆಯಾಗಲಿದೆ. ಆನಂತರ ಮತ್ತೆ ಪಿಯು ವೆಬ್​ಸೈಟ್​ಗೆ ಭೇಟಿ ನೀಡಿ ಅಗತ್ಯ ಮಾಹಿತಿಯನ್ನು ನೀಡಿ ನಿಮ್ಮ ಮೊಬೈಲ್ ಬರುವ ಒಟಿಪಿ ಸಂಖ್ಯೆಯನ್ನು ನಮೂದಿಸಿ ಸಲ್ಲಿಸುವ ಬಟನ್ ಕ್ಲಿಕ್ ಮಾಡಬೇಕು. ಆನಂತರ ಸ್ಕ್ಯಾನಿಂಗ್ ಪ್ರತಿ ಡೌನ್​ಲೋಡ್ ಆಗಲಿದೆ. ಇದೇ ರೀತಿಯಲ್ಲೇ ಮರು ಮೌಲ್ಯಮಾಪನ, ಮರು ಎಣಿಕೆಗೂ ಅರ್ಜಿ ಸಲ್ಲಿಸಬೇಕು.

ಜು.1ರಿಂದ ಪೂರಕ ಪರೀಕ್ಷೆ

ಹೆಚ್ಚಿನ ಅಂಕ ಬಯಸಿರುವ ಅಥವಾ ಅನುತ್ತೀರ್ಣ ವಿದ್ಯಾರ್ಥಿಗಳಿಗೆ ಜು.1ರಿಂದ ಪೂರಕ ಪರೀಕ್ಷೆ ನಡೆಯಲಿದೆ. ಒಂದು ವಿಷಯಕ್ಕೆ 101 ರೂ., 2 ವಿಷಯಕ್ಕೆ 201 ರೂ., 3 ಅಥವಾ ಹೆಚ್ಚಿನ ವಿಷಯಕ್ಕೆ 302 ರೂ., ಅಂಕಪಟ್ಟಿ ಶುಲ್ಕ 36 ರೂ. ಪಾವತಿಸಬೇಕು. ಅರ್ಜಿ ಸಲ್ಲಿಸಲು ಜೂ.6 ಕೊನೇ ದಿನವಾಗಿದೆ. ಫಲಿತಾಂಶದಲ್ಲಿ ಯಾವುದೇ ಸಮಸ್ಯೆಯಿದ್ದರೆ ಪೂರಕ ದಾಖಲೆಗಳೊಂದಿಗೆ ಆಯಾ ಕಾಲೇಜು ಪ್ರಾಚಾರ್ಯರು ಇಲಾಖೆಗೆ ದೂರು ಸಲ್ಲಿಸಬೇಕು.

ಅನಿತಾಗೆ ನೆರವಾಯ್ತು ವಿಜಯವಾಣಿ
ಬಳ್ಳಾರಿ: ಪಾಲಕರ ಬಡತನ ಶೈಕ್ಷಣಿಕ ಶ್ರೀಮಂತಿಕೆಗೆ ಅಡ್ಡಿಯಾಗಲಿಲ್ಲ. ಅಪ್ಪ ರಸ್ತೆಬದಿ ಬಾಳೆಹಣ್ಣು ಮಾರಾಟ ಮಾಡಿದರೆ, ಅಮ್ಮ ಕೂಲಿ ಕೆಲಸಕ್ಕೆ ಹೋಗುತ್ತಿದ್ದರು. ಇದನ್ನು ನೋಡಿಯೇ ಜೀವನದಲ್ಲಿ ಏನಾದರೂ ಸಾಧಿಸಬೇಕೆಂದುಕೊಂಡ ಕೂಡ್ಲಿಗಿ ತಾಲೂಕು ಕೊಟ್ಟೂರಿನ ಇಂದು ಪಿಯು ಕಾಲೇಜಿನ ವಿದ್ಯಾರ್ಥಿನಿ ಪಿ.ಅನಿತಾ, ಪಿಯು ಕಲಾ ವಿಭಾಗದಲ್ಲಿ ರಾಜ್ಯಕ್ಕೆ ಮೊದಲ ರ್ಯಾಂಕ್ ಪಡೆದಿದ್ದಾರೆ. ಒಟ್ಟು 585 ಅಂಕ ಪಡೆದಿರುವ ಅನಿತಾ(ಕನ್ನಡ 97, ಸಂಸ್ಕೃತ 97, ಐಚ್ಛಿಕ ಕನ್ನಡ 99, ರಾಜ್ಯಶಾಸ್ತ್ರ 96, ಇತಿಹಾಸ 97, ಶಿಕ್ಷಣ 99), ‘ವಿಜಯವಾಣಿ’ ವಿದ್ಯಾರ್ಥಿಮಿತ್ರನ ನಿರಂತರ ಅಧ್ಯಯನ ಕೂಡ ನನ್ನ ಈ ಸಾಧನೆಗೆ ನೆರವಾಯಿತು ಎನ್ನುತ್ತಾರೆ. ರಾಜ್ಯಕ್ಕೆ ಮೊದಲ ರ್ಯಾಂಕ್ ಬರುವ ನಿರೀಕ್ಷೆ ಇರಲಿಲ್ಲ. 2 ಅಥವಾ 3ನೇ ರ್ಯಾಂಕ್ ಬರಬಹುದು ಎಂದುಕೊಂಡಿದ್ದೆ. ನಿತ್ಯ 6-8 ತಾಸು ವಿದ್ಯಾಭ್ಯಾಸ ಮಾಡುತ್ತಿದ್ದೆ. ಕಳೆದ ವರ್ಷ ಇದೇ ಕಾಲೇಜಿನಲ್ಲಿ ಓದಿ ಮೊದಲ ರ್ಯಾಂಕ್ ಪಡೆದಿದ್ದ ನೇತ್ರಾವತಿ ನಮ್ಮ ಅತ್ತೆ ಮಗಳು. ಆಕೆ ನೀಡಿದ ಸಲಹೆಗಳು ಹೆಚ್ಚು ಅಂಕ ಗಳಿಸಲು ಸಹಕಾರಿಯಾದವು. ಪಾಲಕರ ಬಡತನವೇ ನನ್ನ ಈ ಸಾಧನೆಗೆ ಪ್ರೇರಣೆಯಾಗಿದೆ. ಪಾಲಕರ ಪೋ›ತ್ಸಾಹ ಹಾಗೂ ಸಹೋದರರ ಶೈಕ್ಷಣಿಕ ಏಳ್ಗೆ ನಾನು ರ್ಯಾಂಕ್ ಪಡೆಯಲು ಕಾರಣವಾಗಿದೆ ಎಂದು ಅನಿತಾ ಸಂತಸ ಹಂಚಿಕೊಂಡರು.

ದತ್ತು ಪಡೆಯಲು ನಿರ್ಧಾರ

8ನೇ ತರಗತಿಯಿಂದಲೇ ಪಿ.ಅನಿತಾ ಇಂದು ಶಿಕ್ಷಣ ಸಂಸ್ಥೆಯಲ್ಲಿ ವಿದ್ಯಾಭ್ಯಾಸ ಮಾಡಿದ್ದಾರೆ. ಸಾಮಾನ್ಯ ವಿದ್ಯಾರ್ಥಿನಿಯಾಗಿದ್ದ ಈಕೆ, ಎಸ್ಸೆಸ್ಸೆಲ್ಸಿಯಲ್ಲಿ ಪ್ರಥಮ ದರ್ಜೆಯಲ್ಲಿ ಪಾಸಾಗಿದ್ದರು. ಪಿಯುನಲ್ಲಿ ಕಠಿಣ ಪರಿಶ್ರಮದಿಂದ ಮೊದಲ ರ್ಯಾಂಕ್ ಬಂದಿದ್ದಾಳೆ. ಬಡತನದ ಕುಟುಂಬ ಎಂಬ ಕಾರಣಕ್ಕೆ ಅನಿತಾರ ಶೈಕ್ಷಣಿಕ ಶುಲ್ಕದಲ್ಲಿ ಮೊದಲಿನಿಂದ ರಿಯಾಯತಿ ಕೊಡುತ್ತ ಬರಲಾಗಿದೆ. ಇದೀಗ ರ್ಯಾಂಕ್ ಬಂದಿರುವ ಆಕೆಗೆ ಮುಂದಿನ ಶಿಕ್ಷಣ ಕೊಡಿಸುತ್ತೇವೆ. ಕಾಲೇಜಿನ ಆಡಳಿತ ಮಂಡಳಿ ಇದಕ್ಕೆ ಒಪ್ಪಿಗೆ ನೀಡಿದೆ ಎಂದು ಕಾಲೇಜಿನ ಪ್ರಾಚಾರ್ಯ ಎಚ್.ಎನ್.ವೀರಭದ್ರಪ್ಪ ತಿಳಿಸಿದರು.

ನಾನು ಸಮಾಜದಲ್ಲಿ ಉನ್ನತ ಸ್ಥಾನಕ್ಕೇರಿ ಅಪ್ಪ-ಅಮ್ಮನನ್ನು ಚೆನ್ನಾಗಿ ನೋಡಿಕೊಳ್ಳಬೇಕೆಂಬ ಆಸೆ ಇದೆ. ಕೊಟ್ಟೂರಿನಲ್ಲೇ ಬಿಎ ಮಾಡಬೇಕು ಎಂದುಕೊಂಡಿದ್ದೇನೆ. ಕೆಎಎಸ್ ಅಧಿಕಾರಿಯಾಗಿ ರೈತರಿಗೆ ನೆರವಾಗಬೇಕೆಂಬ ಅಭಿಲಾಷೆ ಇದೆ. ವಿಜಯವಾಣಿ ವಿದ್ಯಾರ್ಥಿಮಿತ್ರ ಕೂಡ ನನ್ನ ಈ ಸಾಧನೆಗೆ ನೆರವಾಗಿದ್ದು, ‘ಮಿತ್ರ’ನಿಗೆ ಅಭಿನಂದನೆ ಸಲ್ಲಿಸುತ್ತೇನೆ.

| ಪಿ.ಅನಿತಾ

ಗದ್ಗದಿತರಾದ ತಂದೆ

ಕೊಟ್ಟೂರಿನಲ್ಲಿ ಬುಧವಾರ ಎಂದಿನಂತೆ ತಳ್ಳುಬಂಡಿಯಲ್ಲಿ ಬಾಳೆಹಣ್ಣು ಮಾರಾಟ ಮಾಡಲು ಹೋಗಿದ್ದ ತಂದೆ ಬಸ್ಸಪ್ಪಗೆ ಮಗಳು ಮೊದಲ ರ್ಯಾಂಕ್ ಬಂದಿದ್ದಾಳೆ ಎಂಬ ಸುದ್ದಿ ತಿಳಿದ ಕೂಡಲೇ ಮನೆಗೆ ವಾಪಸಾದರು. ಪತ್ನಿ ಹಾಗೂ ಇನ್ನಿಬ್ಬರು ಮಕ್ಕಳೊಂದಿಗೆ ಸೇರಿ ಮಗಳಿಗೆ ಸಿಹಿ ತಿನ್ನಿಸಿ ಸಂತಸ ವ್ಯಕ್ತಪಡಿಸಿದರು. ಬಡತನದಲ್ಲಿ ಮಕ್ಕಳು ಉತ್ತಮ ವಿದ್ಯಾಭ್ಯಾಸ ಮಾಡುತ್ತಿದ್ದಾಳೆ. ಆದರೆ, ಮುಂದೆ ಉತ್ತಮ ಶಿಕ್ಷಣ ಕೊಡಿಸುವ ಆರ್ಥಿಕ ಶಕ್ತಿ ನಮಗಿಲ್ಲ ಎಂದು ಒಂದು ಕ್ಷಣ ಗದ್ಗದಿತರಾದರು. ಮುಂದೆ ಓದಿಸುವುದಿಲ್ಲ ಎಂದು ಹೇಳಿ ಬಳಿಕ ಸಾವರಿಸಿಕೊಂಡು, ಕೊಟ್ಟೂರಿನಲ್ಲೇ ವಿದ್ಯಾಭ್ಯಾಸ ಮಾಡಿಸುವುದಾಗಿ ಹೇಳಿದರು.

2ನೇ ಬಾರಿಗೆ ಫಸ್ಟ್

ಕೊಟ್ಟೂರಿನ ಇಂದು ಪಿಯು ಕಾಲೇಜು ಸತತ 2ನೇ ಬಾರಿಗೆ ಮೊದಲ ರ್ಯಾಂಕ್ ಗಳಿಸಿದ ಹೆಗ್ಗಳಿಕೆಗೆ ಪಾತ್ರವಾಗಿದೆ. ಕಳೆದ ವರ್ಷ ಇದೇ ಕಾಲೇಜಿನ ಎಂ.ಬಿ.ನೇತ್ರಾವತಿ ಪಿಯು ಕಲಾ ವಿಭಾಗದಲ್ಲಿ ಮೊದಲ ರ್ಯಾಂಕ್ ಹಾಗೂ ಜೆ.ಮಾಲಿನಿ 2ನೇ ರ್ಯಾಂಕ್ ಪಡೆದಿದ್ದರು.

ವಿಜ್ಞಾನದಲ್ಲಿ ಕೆಮಿಸ್ಟ್ರಿಯೇ ಬೆಸ್ಟ್
ಬೆಂಗಳೂರು: ಎರಡು ಬಾರಿ ಪ್ರಶ್ನೆ
ಪತ್ರಿಕೆ ಸೋರಿಕೆಯಾಗಿ ಮರುಪರೀಕ್ಷೆಗೆ ಕಾರಣವಾದ ರಸಾಯನ ಶಾಸ್ತ್ರದಲ್ಲೇ ವಿದ್ಯಾರ್ಥಿಗಳು ಹೆಚ್ಚು ಪ್ರಮಾಣದಲ್ಲಿ ಉತ್ತೀರ್ಣರಾಗಿದ್ದಾರೆ. ಪರೀಕ್ಷೆಗೆ ಹಾಜರಾಗಿದ್ದ 1,70,525 ವಿದ್ಯಾರ್ಥಿಗಳಲ್ಲಿ 1,42,066 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು, ರಸಾಯನಶಾಸ್ತ್ರದಲ್ಲಿ ಶೇ.83.31 ಫಲಿತಾಂಶ ದಾಖಲಾಗಿದೆ. ಭೌತಶಾಸ್ತ್ರದಲ್ಲಿ ಶೇ.80.72, ಗಣಿತದಲ್ಲಿ ಶೇ.80.69 ಹಾಗೂ ಜೀವಶಾಸ್ತ್ರದಲ್ಲಿ ಶೇ.77.58 ವಿದ್ಯಾರ್ಥಿಗಳು ತೇರ್ಗಡೆಹೊಂದಿದ್ದಾರೆ. ಮತ್ತೊಂದು ಆಸಕ್ತಿಕರ ಅಂಶವೆಂದರೆ ಗಣಿತ ಪರೀಕ್ಷೆಗೆ 1,76,581 ವಿದ್ಯಾರ್ಥಿಗಳು ಹಾಜರಾಗಿದ್ದರೆ, ರಸಾಯನಶಾಸ್ತ್ರ ಪರೀಕ್ಷೆಗೆ 6056 ಕಡಿಮೆ ವಿದ್ಯಾರ್ಥಿಗಳು ಹಾಜರಾಗಿದ್ದಾರೆ. ಮರುಪರೀಕ್ಷೆಯ ಗೊಂದಲವೇ ಇದಕ್ಕೆ ಕಾರಣವಾಯಿತೇ ಎನ್ನುವುದು ಇಲಾಖೆ ವಿಚಾರಣೆಯಿಂದ ಹೊರಬರಬೇಕಿದೆ. ಶೇಕಡಾವಾರು ಬದಲು ಅಂಕಿಯನ್ನು ಮಾತ್ರ ಪರಿಗಣಿಸಿದರೆ ರಸಾಯನ ಶಾಸ್ತ್ರಕ್ಕಿಂತ 764 ಹೆಚ್ಚು ವಿದ್ಯಾರ್ಥಿಗಳು ಗಣಿತದಲ್ಲಿ ಉತ್ತೀರ್ಣರಾಗಿದ್ದಾರೆ.

ಬಾಲ್ಯವಿವಾಹ ಧಿಕ್ಕರಿಸಿ ಬಂದವಳಿಗೆ ಫಸ್ಟ್ ಕ್ಲಾಸ್!
ಬೆಳಗಾವಿ: ನಾಲ್ಕರ ಪ್ರಾಯದಲ್ಲೇ ಬಾಲ್ಯವಿವಾಹ. ಪ್ರಾಯಕ್ಕೆ ಬರುತ್ತಲೇ ಶಿಕ್ಷಣ ಮೊಟಕುಗೊಳಿಸುವಂತೆ ಪಾಲಕರ ಒತ್ತಡ. ಮನೆಯಿಂದ ಹೊರಹಾಕುವ ಬೆದರಿಕೆ. ಆದರೆ, ಇದ್ಯಾವ ಹೆದರಿಕೆಗಳಿಗೂ ಬಗ್ಗದೇ ಮನೆಯಿಂದ ಹೊರಬಂದು ಮಹಿಳಾ ಪುನರ್ವಸತಿ ಕೇಂದ್ರದಲ್ಲಿ ಆಸರೆ ಪಡೆದ ವಿದ್ಯಾರ್ಥಿನಿಯೊಬ್ಬಳು ಈ ಬಾರಿ ಕಲಾ ವಿಭಾಗದಲ್ಲಿ ಪ್ರಥಮ ಶ್ರೇಣಿಯಲ್ಲಿ ಉತ್ತೀರ್ಣಳಾಗಿದ್ದಾಳೆ. ಅಥಣಿ ಮೂಲದ ನಂದಾ ಈಶ್ವರ ಕೋಕಳೆ ಎಂಬುವಳೇ ಈ ಸಾಧಕಿ. ಸದ್ಯ ಬೆಳಗಾವಿಯ ಶಾಹೂ ನಗರದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಿಂದ ನಡೆಯುತ್ತಿರುವ ಸ್ವಾಧಾರ್ ಮಹಿಳಾ ಪುನರ್ವಸತಿ ಕೇಂದ್ರದಲ್ಲಿ ಆಶ್ರಯ ಪಡೆದಿರುವ ವಿದ್ಯಾರ್ಥಿನಿ, ದೂರಶಿಕ್ಷಣದ ಮೂಲಕ ಅಥಣಿ ತಾಲೂಕಿನ ಅಡಹಳ್ಳಿಯ ಸರ್ಕಾರಿ ಕಾಲೇಜಿನಲ್ಲಿ ಓದಿ 364 (ಶೇ. 60.66) ಅಂಕ ಗಳಿಸಿದ್ದಾಳೆ. ಮುಂದೆ ವೈದ್ಯಕೀಯ ಕ್ಷೇತ್ರದಲ್ಲಿ ಕೆಲಸ ಮಾಡಬೇಕೆಂಬ ಆಸೆ ಹೊಂದಿದ್ದಾಳೆ.

ಹಿನ್ನೆಲೆ: 4ನೇ ವಯಸ್ಸಿನಲ್ಲಿರುವಾಗಲೇ ನಂದಾಳನ್ನು ಸಂಬಂಧಿಕರಲ್ಲೇ ಮೂಕ ವ್ಯಕ್ತಿಯೊಬ್ಬರಿಗೆ ವಿವಾಹ ಮಾಡಿಕೊಡಲಾಗಿತ್ತು. ಅದು ಬಾಲಕಿಗೆ ತಿಳಿವಳಿಕೆ ಇಲ್ಲದ ವಯಸ್ಸು. ಆದರೆ, ಎಸ್ಸೆಸ್ಸೆಲ್ಸಿ ಮುಗಿಸುವ ಹೊತ್ತಿಗೆ ಪಾಲಕರು ಶಿಕ್ಷಣ ಮೊಟಕುಗೊಳಿಸಿ ವಿವಾಹವಾದ ವ್ಯಕ್ತಿಯೊಂದಿಗೆ ಸಂಸಾರ ನಡೆಸುವಂತೆ ಒತ್ತಡ ಹೇರಿದರು. ನಂದಾ ಅದಕ್ಕೆ ಒಪ್ಪಲಿಲ್ಲ. ತಾನು ಶಿಕ್ಷಣ ಮುಂದುವರಿಸುತ್ತೇನೆ ಎಂದು ಪಟ್ಟು ಹಿಡಿದಳು. ಪಾಲಕರು ಈಕೆಯ ಬೇಡಿಕೆಗೆ ಸ್ಪಂದಿಸದಿದ್ದಾಗ ಅಥಣಿಯ ಮಹಿಳಾ ಸಾಂತ್ವನ ಕೇಂದ್ರದ ನೆರವಿನೊಂದಿಗೆ ಬೆಳಗಾವಿಯ ಕೇಂದ್ರಕ್ಕೆ ಬಂದು ಆಸರೆ ಪಡೆದಿದ್ದಾಳೆ.

ಫಲಿತಾಂಶ ನೋಡಿ ಖುಷಿಯಾಗುತ್ತಿದೆ. ಪರೀಕ್ಷೆ ಹತ್ತಿರ ಬರುತ್ತಿದ್ದಂತೆ ಐದಾರು ಗಂಟೆ ಸತತ ಅಭ್ಯಾಸ ಮಾಡುತ್ತಿದ್ದೆ. ಕಾಲೇಜಿನಲ್ಲಿ ಉತ್ತಮವಾಗಿ ಪಾಠ ಮಾಡಿದ್ದರು. ನವೆಂಬರ್ ಒಳಗೆ ಸಿಲಬಸ್ ಮುಗಿಸಿಕೊಟ್ಟಿದ್ದರಿಂದ ಓದಿಕೊಳ್ಳಲು ಸಾಧ್ಯವಾಯಿತು. ಹೆಚ್ಚು ರಿವಿಷನ್ ಮಾಡಿದೆ.

| ದೀಕ್ಷಾ ನಾಯಕ್ 594 ಅಂಕ, ವಾಣಿಜ್ಯ ವಿಭಾಗ

ನಾನು ರಾಜ್ಯಕ್ಕೆ 2ನೇ ಸ್ಥಾನ ಗಳಿಸುತ್ತೇನೆಂದು ನಿರೀಕ್ಷಿಸಿರಲಿಲ್ಲ. ಹೆಚ್ಚು ಅಂಕ ಗಳಿಸಲು ಉಪನ್ಯಾಸಕರು ಹಾಗೂ ನನ್ನ ಪಾಲಕರು ತುಂಬಾ ಸಹಕಾರ ನೀಡಿದ್ದಾರೆ. ಅವರೆಲ್ಲರಿಗೂ ಈ ಸಾಧನೆಯ ಶ್ರೇಯ ಸಲ್ಲಬೇಕು. ನಾನು ಸಮಯವನ್ನು ಹಾಳು ಮಾಡುತ್ತಿರಲಿಲ್ಲ. ನಿಯಮಿತವಾಗಿ ಓದಿದರೆ ಎಲ್ಲರೂ ಹೆಚ್ಚು ಅಂಕ ಗಳಿಸಬಹುದು.

| ತಾನಿಯಾ ಮಾರ್ಥಾ ಥಾಮಸ್ 580 ಅಂಕ, ಕಲಾ ವಿಭಾಗ

ವಿಜ್ಞಾನ ವಿಭಾಗ ಮೊದಲು

ವಾಣಿಜ್ಯ ಹಾಗೂ ಕಲಾ ವಿಭಾಗದ ಹೋಲಿಕೆಯಲ್ಲಿ ಶೇ.66.25 ಉತ್ತೀರ್ಣವಾಗಿರುವ ವಿಜ್ಞಾನ ವಿಭಾಗ ಮೊದಲ ಸ್ಥಾನದಲ್ಲಿದೆ. ಶೇ.64.16ವಿದ್ಯಾರ್ಥಿಗಳು ತೇರ್ಗಡೆಯಾಗಿರುವ ವಾಣಿಜ್ಯ ಹಾಗೂ ಶೇ.42.12 ವಿದ್ಯಾರ್ಥಿಗಳು ತೇರ್ಗಡೆಯಾಗಿರುವ ಕಲಾ ವಿಭಾಗ ಕ್ರಮವಾಗಿ 2 ಮತ್ತು 3ನೇ ಸ್ಥಾನದಲ್ಲಿವೆ.

ಅನುತ್ತೀರ್ಣಗೊಂಡ ಐವರು ವಿದ್ಯಾರ್ಥಿಗಳು ಆತ್ಮಹತ್ಯೆ
ಬೆಂಗಳೂರು: ಪಿಯು ಪರೀಕ್ಷೆಯಲ್ಲಿ ಅನುತ್ತೀರ್ಣಗೊಂಡ ಐವರು ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮೂವರು ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ಕೊಡಿಯಾಲ ಗ್ರಾಮದ ವಂದನಾ(17) ಜೀವಶಾಸ್ತ್ರ ವಿಷಯದಲ್ಲಿ ಅನುತ್ತೀರ್ಣಳಾದ್ದರಿಂದ ಮನನೊಂದು ಮನೆಯಲ್ಲೇ ನೇಣಿಗೆ ಶರಣಾಗಿದ್ದಾಳೆ. ಜೆಎಸ್​ಎಸ್ ಕಾಲೇಜಿನ ಕಲಾ ವಿಭಾಗದಲ್ಲಿ ವ್ಯಾಸಂಗ ಮಾಡುತ್ತಿದ್ದ ಚಾಮರಾಜನಗರ ರಾಮಸಮುದ್ರ ಬಡಾವಣೆಯ ಪವಿತ್ರಾ(17), ಕೊಡಗಿನ ಕಾವೇರಿ ಕಾಲೇಜಿನ ಕಡೇಮಾಡ ರಾಜಪ್ಪ (17) ಅರ್ಥಶಾಸ್ತ್ರ ವಿಷಯದಲ್ಲಿ ಫೇಲಾದ್ದರಿಂದ ಹತಾಶೆಗೊಂಡು ನೇಣಿಗೆ ಶರಣಾಗಿದ್ದಾನೆ. ಕೊಪ್ಪಳ ಜಿಲ್ಲೆ ಗಂಗಾವತಿ ತಾಲೂಕಿನ ತಾಲೂಕಿನ ಆರ್ಹಾಳ ಗ್ರಾಮದ ಮಹಾಲಕ್ಷ್ಮಿ ಶಿವನಾಗಯ್ಯಸ್ವಾಮಿ ದಾಸನಾಳ ಮಠ (17), ಮೈಸೂರಿನ ಹೆಬ್ಬಾಳದ ಸಿಂಧು(17) ಸೀಮೆಎಣ್ಣೆ ಸುರಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಬೆಳಗಾವಿಯ ಟಿಳಕವಾಡಿಯ ಗಜಾನನ ನಗರದ ಮೇಘಾ ಶಾಂತಪ್ಪ ನರಗೋದಿ, ಬೈಲಹೊಂಗಲದ ಗಜಿಮನಾಳದ ಲಕ್ಷ್ಮಣ್ ದಂಡಾಪುರ, ಹಾಲಗಿಮರಡಿಯ ಲಕ್ಷ್ಮಿ ನಂದಿಹಳ್ಳಿ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾಳೆ. ಬೀದರ್ ಜಿಲ್ಲೆ ಅಕ್ಕಮಹಾದೇವಿ ಕಾಲೇಜಿನ ಶೈಲಜಾ, ಯಳಂದೂರು ತಾಲೂಕಿನ ಮಲ್ಲಿಗೆಹಳ್ಳಿಯ ಚಿತ್ರಾ ಆತ್ಮಹತ್ಯೆಗೆ ಯತ್ನಿಸಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ವಿಧಿ ಪರೀಕ್ಷೆ ಗೆಲ್ಲದ ಫಯಾಜ್

ವಿರಾಜಪೇಟೆ: ಪ್ರವಾಸಕ್ಕೆಂದು ಕುಶಾಲನಗರಕ್ಕೆ ತೆರಳಿ ಮಂಗಳವಾರವಷ್ಟೇ ಕಾವೇರಿ ಹೊಳೆಯಲ್ಲಿ ಕಾಲು ಜಾರಿ ಬಿದ್ದು ಮೃತಪಟ್ಟಿದ್ದ ಮಹಮ್ಮದ್ ಫಯಾಝå್ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಪ್ರಥಮ ದರ್ಜೆಯಲ್ಲಿ ತೇರ್ಗಡೆ ಹೊಂದಿದ್ದಾನೆ. ಪಟ್ಟಣದ ನಿಯಾಜ್ ಅಹಮದ್ ಎಂಬುವರ ಪುತ್ರ ಫಯಾಜ್ ವಿರಾಜಪೇಟೆಯ ಸಂತ ಅನ್ನಮ್ಮ ಕಾಲೇಜಿನಲ್ಲಿ ಓದುತ್ತಿದ್ದ. ಈತ ಪರೀಕ್ಷೆಯಲ್ಲಿ 364 ಅಂಕ ಪಡೆದು ಪ್ರಥಮ ದರ್ಜೆಯಲ್ಲಿ ಉತ್ತೀರ್ಣನಾಗಿದ್ದಾನೆ. ಮಂಗಳವಾರ ಸಂಜೆ ಕುಶಾಲನಗರದ ಅಯ್ಯಪ್ಪಸ್ವಾಮಿ ದೇವಸ್ಥಾನ ಸಮೀಪವಿರುವ ನದಿ ಬಳಿ ತೆರಳಿದ್ದಾಗ ಫಯಾಜ್ ಕಾಲುಜಾರಿ ಸಾವಿಗೀಡಾಗಿದ್ದ.

ರಿಜಲ್ಟ್ ಫಸ್ಟ್ ಕ್ಲಾ
ಸ್ ಆದ್ರೂ ಆತ್ಮಹತ್ಯೆ

ಶಿವಮೊಗ್ಗ: ದ್ವಿತೀಯ ಪಿಯು ಪರೀಕ್ಷೆಯಲ್ಲಿ ಪ್ರಥಮ ಶ್ರೇಣಿಯಲ್ಲಿ ತೇರ್ಗಡೆಯಾಗಿದ್ದರೂ ನಿರೀಕ್ಷಿತ ಅಂಕಗಳು ಬಂದಿಲ್ಲ ಎಂಬ ಕಾರಣಕ್ಕೆ ಭದ್ರಾವತಿ ತಾಲೂಕಿನ ಶಂಕರಘಟ್ಟದ ವಿದ್ಯಾರ್ಥಿನಿಯೊಬ್ಬರು ಭದ್ರಾ ಎಡದಂಡೆ ನಾಲೆಗೆ ಬಿದ್ದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಶಂಕರಘಟ್ಟದ ತೋಟಪ್ಪ ಎಂಬುವರ ಪುತ್ರಿ, ಶಿವಮೊಗ್ಗದ ಡಿವಿಎಸ್ ಸಂಯುಕ್ತ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿನಿ ತನುಜಾ(18) ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿನಿ. ತನುಜಾ ದ್ವಿತೀಯ ಪಿಯುಸಿ ವಿಜ್ಞಾನ ವಿಭಾಗದಲ್ಲಿ ಶೇ.68 ಅಂಕ ಗಳಿಸಿ ಪ್ರಥಮ ಶ್ರೇಣಿಯಲ್ಲಿ ತೇರ್ಗಡೆಯಾಗಿದ್ದರು. ಆದರೆ ನಿರೀಕ್ಷಿತ ಅಂಕಗಳು ಬಂದಿಲ್ಲ ಎಂದು ನೊಂದುಕೊಂಡಿದ್ದಳೆನ್ನಲಾಗಿದೆ.

ಖುಷಿಪಡಲು ನೀನೇ ಇಲ್ಲವಲ್ಲ ಮಗಳೆ….

ಶಹಾಪುರ(ಯಾದಗಿರಿ): ಆಕೆ ಪಿಯುಸಿಯಲ್ಲಿ ಉತ್ತೀರ್ಣಳಾಗಿದ್ದಾಳೆ. ಆದರೆ ಅದರ ಖುಷಿ ಪಡಲು ಆಕೆಯೇ ಇಲ್ಲ. ಶಹಾಪುರದ ಚಿಂತಮ್ಮ ಗೌಡತಿ ಪದವಿಪೂರ್ವ ಕಾಲೇಜಿನಲ್ಲಿ ಓದುತ್ತಿದ್ದ ಗೀತಾ ಸ್ವಾಮಿ ಪಿಯುಸಿ ಪರೀಕ್ಷೆ ಉತ್ಸುಕತೆಯಿಂದಲೇ ಬರೆದಳು. ಪರೀಕ್ಷೆ ಮುಗಿಸಿದ ನಂತರ ಗೀತಾ ಅನಾರೋಗ್ಯದಿಂದ ಕೆಲ ದಿನಗಳ ಹಿಂದೆ ಸಾವನ್ನಪ್ಪಿ

ದ್ದಳು. ಮಂಗಳವಾರ ಫಲಿತಾಂಶ ಪ್ರಕಟವಾದಾಗ ಗೀತಾ ಶೇ.70 ಅಂಕ ಗಳಿಸಿ ಮೊದಲ ದರ್ಜೆಯಲ್ಲಿ ಉತ್ತೀರ್ಣಳಾಗಿದ್ದಳು. ಮಗಳು ಪಡೆದ ಅಂಕಗಳನ್ನು ತಿಳಿದುಕೊಂಡ ತಂದೆ ಈರಯ್ಯ ಸ್ವಾಮಿ ಮತ್ತು ತಾಯಿ ಇಬ್ಬರೂ ದುಃಖತಪ್ತರಾಗಿದ್ದಾರೆ. ಫಲಿತಾಂಶ ಬಂದಿದೆ. ಆದರೆ ಖುಷಿ ಪಡಲು ತಮ್ಮ ಮಗಳೇ ಇಲ್ಲವಲ್ಲ ಎಂದು ಈರಯ್ಯ ಸ್ವಾಮಿ ದು:ಖಿಸುತ್ತಲೇ ಹೇಳಿದರು.

ಪಿಯು ಸಾಧನೆಗೆ ಅಡ್ಡಿಯಾಗದ ಅಂಧತ್ವ
ಮಂಗಳೂರು: ಇಲ್ಲಿನ ಸಂತ ಆಗ್ನೆಸ್ ಕಾಲೇಜಿನ ಅಂಧ ವಿದ್ಯಾರ್ಥಿನಿ ಮೇಘನಾ ದ್ವಿತೀಯ ಪಿಯುಸಿ ಕಲಾ ವಿಭಾಗದಲ್ಲಿ 530 ಅಂಕ ಗಳಿಸಿದ್ದು, ಮನಃಶಾಸ್ತ್ರಜ್ಞೆ ಆಗುವ ಕನಸು ಹೊತ್ತಿದ್ದಾರೆ.

ಬ್ರೖೆಲ್ ಲಿಪಿಯಲ್ಲಿ ಕಲಿತ ಮೇಘನಾ, ಪರೀಕ್ಷೆಯಲ್ಲಿ ತನ್ನ ಕೆಳಗಿನ ತರಗತಿಯ ವಿದ್ಯಾರ್ಥಿನಿ ಕೇಳಿದ ಪ್ರಶ್ನೆಗೆ ಮೌಖಿಕವಾಗಿ ಉತ್ತರಿಸಿ ಉತ್ತಮ ಸಾಧನೆ ತೋರಿದ್ದಾರೆ.

ಕಾಸರಗೋಡು ಮಂಜೇಶ್ವರದ ಹೊಸಬೆಟ್ಟುವಿನ ಪ್ರಮೋದ್ ನಾಯಕ್- ಮಹಾನಂದ ದಂಪತಿ ಪುತ್ರಿ ಮೇಘನಾ ಹುಟ್ಟಿನಿಂದಲೇ ಅಂಧಳಲ್ಲ. 7ನೇ ತರಗತಿಯಲ್ಲಿದ್ದಾಗ ತನ್ನೆರಡೂ ಕಣ್ಣುಗಳ ದೃಷ್ಟಿ ಕಳೆದುಕೊಂಡರು. ಎಸ್​ಎಸ್​ಎಲ್​ಸಿಯಲ್ಲೂ 529 ಅಂಕ ಗಳಿಸಿದ್ದರು. ನಮಗೆ ಬ್ರೖೆಲ್ ಲಿಪಿಯ ಪಠ್ಯಪುಸ್ತಕವಿದೆ. ಸಹಪಾಠಿಗಳು ಮತ್ತು ಉಪನ್ಯಾಸಕರ ಸಹಕಾರದಿಂದ ಹೆಚ್ಚು ಅಂಕ ಗಳಿಸಲು ಸಾಧ್ಯವಾಯಿತು ಎಂದು ಮೇಘನಾ ವಿಜಯವಾಣಿಗೆ ಪ್ರತಿಕ್ರಿಯಿಸಿದರು. ಬಿಎನಲ್ಲಿ ಇತಿಹಾಸ, ಇಂಗ್ಲಿಷ್ ಮೇಜರ್, ಮನಃಶಾಸ್ತ್ರ ವಿಷಯ ಓದಿ, ಮುಂದಕ್ಕೆ ಮನಃಶಾಸ್ತ್ರಜ್ಞೆಯಾಗಿ ಆಪ್ತ ಸಮಾಲೋಚಕಿಯಾಗಿ ಕೆಲಸ ಮಾಡಬೇಕು ಎಂದು ತನ್ನ ಗುರಿ ಬಿಚ್ಚಿಟ್ಟರು.

ತಪಸ್ ವಿದ್ಯಾರ್ಥಿಗಳ ಸಾಧನೆ

ಬೆಂಗಳೂರು: ರಾಷ್ಟ್ರೋತ್ಥಾನ ಪರಿಷತ್​ನ ತಪಸ್ ಯೋಜನೆಯಡಿ ಶಿಕ್ಷಣ ಪಡೆದ ಕೊಪ್ಪಳದ ರೈತನ ಮಗ ಪ್ರವೀಣಗೌಡ ಎನ್. ಪಾಟೀಲ್ ಹಾಗೂ ಶಿವಮೊಗ್ಗದ ಟೈಲರ್ ಮಗ ಸಿ. ಯಶವಂತ ಶೇ.97 ಅಂಕ ಗಳಿಸಿದ್ದಾರೆ. ಸಾಮಾನ್ಯ ಕೌಟುಂಬಿಕ ಹಿನ್ನೆಲೆಯಿಂದ ಬಂದು ತಪಸ್ ಯೋಜನೆಯಡಿ ಕಲಿತ 30 ವಿದ್ಯಾರ್ಥಿಗಳು ಉತ್ತಮ ಅಂಕ ಗಳಿಸಿ ಉತ್ತೀರ್ಣರಾಗಿದ್ದಾರೆ.

ಯಶವಂತನ ತಂದೆ ಚಂದ್ರಶೇಖರ್ ಶಿವಮೊಗ್ಗ ಸಮೀಪದ ಕಂಚಿನಕಟ್ಟೆಯಲ್ಲಿ ಟೈಲರ್ ಆಗಿದ್ದಾರೆ. ಇಂಥ ಸಾಮಾನ್ಯ ಕುಟುಂಬದಿಂದ ಬಂದು ಪರಿಶ್ರಮದಿಂದ ಓದಿದ ಯಶವಂತ 583 ಅಂಕ (ಶೇ.97.17) ಗಳಿಸಿದ್ದಾನೆ. ಶೇ. 97 (582) ಅಂಕ ಗಳಿಸಿರುವ ಪ್ರವೀಣಗೌಡನ ತಂದೆ ಗಂಗಾವತಿ ತಾಲೂಕಿನಲ್ಲಿ ಕೃಷಿಕರಾಗಿದ್ದಾರೆ.

ಏನಿದು ತಪಸ್?:

ಆರ್ಥಿಕವಾಗಿ ಹಿಂದುಳಿದಿರುವ ವಿದ್ಯಾರ್ಥಿಗಳಿಗೆ ಉತ್ತಮ ಶಿಕ್ಷಣ ನೀಡಲು ರಾಷ್ಟ್ರೋತ್ಥಾನ ಪರಿಷತ್ ಆರಂಭಿಸಿರುವ ಯೋಜನೆ ಇದಾಗಿದೆ. ತಪಸ್ ಯೋಜನೆಯಡಿ ಆಯ್ಕೆಯಾದ ವಿದ್ಯಾರ್ಥಿಗಳಿಗೆ ಊಟ, ವಸತಿಯೊಂದಿಗೆ ಉಚಿತವಾಗಿ 2 ವರ್ಷದ ಪಿಯು ಶಿಕ್ಷಣ ನೀಡಲಾಗುತ್ತದೆ. ಜತೆಗೆ ಪ್ರತಿಷ್ಠಿತ ಜೆಇಇ-ಐಐಟಿ ಪ್ರವೇಶ ಪರೀಕ್ಷೆಗೆ ಉಚಿತ ತರಬೇತಿ ನೀಡಲಾಗುತ್ತಿದೆ. ಬೇಸ್ ಸಂಸ್ಥೆಯು ಈ ಮಕ್ಕಳಿಗೆ ಉಚಿತ ತರಬೇತಿ ನೀಡುತ್ತಿದೆ. ರಾಷ್ಟ್ರೋತ್ಥಾನದ ತಪಸ್ ಪ್ರಕಲ್ಪದಿಂದ ಈ ಬಾರಿ 34 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದರು.

ಚಹಾ ಮಾರುವ ಹುಡುಗಿ ಕಾಲೇಜಿಗೆ ಫಸ್ಟ್

ಹೊಸಪೇಟೆ(ಬಳ್ಳಾರಿ): ಕೂಲಿ ಕಾರ್ವಿುಕರ ಪುತ್ರಿ ವಾಣಿಜ್ಯ ವಿಭಾಗದಲ್ಲಿ ಕಾಲೇಜಿಗೆ ಟಾಪರ್ ಆಗುವ ಮೂಲಕ ಇತರರಿಗೆ ಮಾದರಿಯಾಗಿದ್ದಾಳೆ.

ಹಿಟ್ಟಿನ ಗಿರಣಿ ಕಾರ್ವಿುಕ ಜಫರುಲ್ಲಾ ಖಾನ್ ಮಗಳು ಆಫ್ರಿನ್ ಕಾಲೇಜು ಅವಧಿ ನಂತರ ತಾಯಿ ನಡೆಸುವ ಚಹಾ ಅಂಗಡಿಯಲ್ಲಿ ಕೆಲಸ ಮಾಡಿಕೊಂಡೇ 530(ಶೇ.88.33) ಅಂಕ ಪಡೆದಿದ್ದಾಳೆ

ಆಳ್ವಾಸ್​ಗೆ ಸತತ 8 ವರ್ಷಗಳಿಂದ ಶೇ.99 ಫಲಿತಾಂಶ

ಮೂಡುಬಿದಿರೆ: ರಾಜ್ಯದಲ್ಲೇ ಅತಿ ಹೆಚ್ಚು ಪಿಯುಸಿ ವಿದ್ಯಾರ್ಥಿ ಗಳನ್ನು ಹೊಂದಿರುವ ಆಳ್ವಾಸ್ ಪದವಿಪೂರ್ವ ಕಾಲೇಜು ಪ್ರಸಕ್ತ ಸಾಲಿನ ಪಿಯುಸಿ ಪರೀಕ್ಷೆಯಲ್ಲಿ ಶೇ.99.20 ಫಲಿತಾಂಶ ಪಡೆದಿದ್ದು, ಕಳೆದ 8 ವರ್ಷಗಳಿಂದ ಶೇ.99 ಫಲಿತಾಂಶ ಪಡೆದ ಕಾಲೇಜು ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ ಎಂದು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ ಮೋಹನ ಆಳ್ವ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ. ಕಾಲೇಜಿನಿಂದ ಒಟ್ಟು 4,285 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು, ಅದರಲ್ಲಿ 4,251 ವಿದ್ಯಾರ್ಥಿಗಳು ಉತ್ತೀರ್ಣ ರಾಗಿದ್ದಾರೆ. ವಿಜ್ಞಾನ ವಿಭಾಗದಲ್ಲಿ 3,409 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು, ಅದರಲ್ಲಿ 3,386 ವಿದ್ಯಾರ್ಥಿಗಳು ಉತ್ತೀರ್ಣರಾಗುವ ಮೂಲಕ ಶೇ.99.33 ಫಲಿತಾಂಶ ದಾಖಲಾಗಿದೆ. ವಾಣಿಜ್ಯ ವಿಭಾಗದಲ್ಲಿ 815 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು, 806 ವಿದ್ಯಾರ್ಥಿಗಳು ಉರ್ತಿ¤ಣರಾಗಿ ಶೇ.98.90 ಫಲಿತಾಂಶ ಲಭಿಸಿದೆ. 61 ವಿದ್ಯಾರ್ಥಿಗಳು ಕಲಾ ವಿಭಾಗದಲ್ಲಿ ಹಾಜರಾಗಿದ್ದು, 59 ವಿದ್ಯಾರ್ಥಿಗಳು ಉತ್ತೀರ್ಣರಾಗಿ, ಶೇ 96.72 ಫಲಿತಾಂಶ ಗಳಿಸಿದೆ ಎಂದು ತಿಳಿಸಿದರು.

ತಂದೆ ಸಾವಿನಲ್ಲೂ ಫಸ್ಟ್ ಕ್ಲಾಸ್ ಪಾಸ್

ಬೀದರ್: ಕಿತ್ತು ತಿನ್ನುವ ಬಡತನದ ಬೇಗೆ, ತಂದೆ ಸಾವಿನ ಶೋಕ. ಇಂಥ ಸಂದಿಗ್ಧತೆ ನಡುವೆ ಪಿಯುಸಿ ವಿಜ್ಞಾನ ಪರೀಕ್ಷೆ ಬರೆದ ಬೀದರ್ ಸಾಯಿಜ್ಞಾನ ಕಾಲೇಜಿನ
ವಿದ್ಯಾರ್ಥಿ ಗಿರಿಧರ ರಮೇಶ ಜೋಶಿ 522 (ಶೇ.87) ಅಂಕ ಗಳಿಸಿದ್ದಾನೆ. ಕೆಮಿಸ್ಟ್ರಿ ಮರು ಪರೀಕ್ಷೆ ಮುನ್ನ ದಿನವೇ ಗಿರಿಧರ ತಂದೆ ರಮೇಶ ರಸ್ತೆ ಅಪಘಾತದಲ್ಲಿ ಸಾವಿಗೀಡಾಗಿದ್ದಾರೆ. ಇಂಥ ಸ್ಥಿತಿಯಲ್ಲೂ ಹಿರಿಯರ, ಕಾಲೇಜಿನವರ ಸಲಹೆ ಮೇರೆಗೆ ಗಿರಿಧರ ರಸಾಯನಶಾಸ್ತ್ರ ಪರೀಕ್ಷೆ ಬರೆದಿದ್ದು, 92 ಅಂಕ ಪಡೆದಿದ್ದಾನೆ. ಉಳಿದಂತೆ ಕನ್ನಡ 92, ಭೌತಶಾಸ್ತ್ರ 95, ಗಣಿತ 72, ಇಂಗ್ಲಿಷ್ 80, ಜೀವಶಾಸ್ತ್ರದಲ್ಲಿ 80 ಅಂಕ ಗಳಿಸಿದ್ದಾನೆ. ಗಿರಿಧರ ಮೂಲತಃ ತೆಲಂಗಾಣದವನು.

ಎಕ್ಸ್​ಪರ್ಟ್​ಗೆ ಶೇ.99.53

ಮಂಗಳೂರು: ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ನಗರದ ಕೊಡಿಯಾಲ್​ಬೈಲ್ ಮತ್ತು ವಳಚ್ಚಿಲ್​ನ ಎಕ್ಸ್​ಪರ್ಟ್ ಪದವಿಪೂರ್ವ ಕಾಲೇಜು ಶೇ.99.53 ಫಲಿತಾಂಶ ಪಡೆದಿದೆ. ಸಂಸ್ಥೆಯ ಶೇ.76.02 ವಿದ್ಯಾರ್ಥಿಗಳು ಅತ್ಯುನ್ನತ ಶ್ರೇಣಿಯಲ್ಲಿ ತೇರ್ಗಡೆಯಾಗಿದ್ದಾರೆ. ಪರೀಕ್ಷೆಗೆ ಹಾಜರಾದ 1059 ವಿದ್ಯಾರ್ಥಿಗಳ ಪೈಕಿ 141 ವಿದ್ಯಾರ್ಥಿಗಳು 570ಕ್ಕಿಂತ ಅಧಿಕ ಅಂಕ ಪಡೆದಿದ್ದಾರೆ. ಶೇ.99.24 ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ ಪಾಸಾಗಿದ್ದಾರೆ. ಕಾಲೇಜಿನ ಪ್ರಥಮ ಸ್ಥಾನಿ ವೈಷ್ಣವಿ ಬಳ್ಳಾಲ್ 590 ಅಂಕ ಗಳಿಸಿದ್ದು, ರಾಜ್ಯದಲ್ಲೇ 7ನೇ ಸ್ಥಾನಿಯಾಗಿ ಹೊರ ಹೊಮ್ಮಿದ್ದಾರೆ.

ಐಸ್ಕೀಮ್ ಮಾರಿ ಡಿಸ್ಟಿಂಗ್ಷನ್.

ಕೊಡೇಕಲ್(ಯಾದಗಿರಿ): ಈ ಹುಡುಗನಿಗೆ ಹೃದಯ ಸಂಬಂಧಿ ಕಾಯಿಲೆ ಇದೆ. ತನಗಿರುವ ಕಾಯಿಲೆ ಮರೆತು ನಿತ್ಯ ಜೀವನಕ್ಕೆ ಐಸ್ಕ್ರೀಮ್ ಮಾರುತ್ತಲೇ ವಿದ್ಯೆಯ ಬೆನ್ನು ಹತ್ತಿದ ಈತ ದ್ವಿತೀಯ ಪಿಯು ಕಲಾ ವಿಭಾಗದಲ್ಲಿ ಡಿಸ್ಟಿಂಕ್ಷನ್ ಗಳಿಸಿದ್ದಾನೆ. ಯಾದಗಿರಿ ಜಿಲ್ಲೆ ಸುರಪುರ ತಾಲೂಕಿನ ಹುಲಗಪ್ಪ ಸಾವಣ್ಣ ಗಡ್ಡಿ ಸರ್ಕಾರಿ ಪದವಿಪೂರ್ವ ಕಾಲೇಜು ವಿದ್ಯಾರ್ಥಿ. ಒಟ್ಟು 522 (ಶೇ.87) ಅಂಕ ಗಳಿಸುವ ಮೂಲಕ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದ್ದಾನೆ.

ಕಾಲಿನಿಂದ ಪರೀಕ್ಷೆ ಬರೆದು ಫಸ್ಟ್ ಕ್ಲಾಸ್

ಬಳ್ಳಾರಿ: ಇಲ್ಲಿನ ವೀರಶೈವ ಕಾಲೇಜಿನ ಕಲಾ ವಿಭಾಗದ ಅಂಗವಿಕಲ ವಿದ್ಯಾರ್ಥಿ ಮುಸ್ತಫಾ, ದ್ವಿತೀಯ ಪಿಯು ಪರೀಕ್ಷೆಯಲ್ಲಿ ಪ್ರಥಮ ದರ್ಜೆಯಲ್ಲಿ ಪಾಸಾಗಿದ್ದಾನೆ. ಎರಡೂ ಕೈಗಳಿಲ್ಲದ ಮುಸ್ತಫಾ ಕಾಲಿನಿಂದ ಪರೀಕ್ಷೆ ಬರೆದು ಈ ಸಾಧನೆ ಮಾಡಿದ್ದಾನೆ. ಪರೀಕ್ಷೆ ಬರೆಯಲು ಪರ್ಯಾಯ ಆಯ್ಕೆಗಳಿದ್ದರೂ ಈ ವಿದ್ಯಾರ್ಥಿ ಎಲ್ಲ 6 ವಿಷಯಗಳ ಪರೀಕ್ಷೆಯನ್ನು ಕಾಲಿನಿಂದ ಬರೆದಿದ್ದಾನೆ. ಕನ್ನಡದಲ್ಲಿ 93, ಇಂಗ್ಲೀಷ್ 70, ಇತಿಹಾಸ 82, ಅರ್ಥಶಾಸ್ತ್ರ 60, ಸಮಾಜಶಾಸ್ತ್ರ 86 ಹಾಗೂ ರಾಜ್ಯಶಾಸ್ತ್ರದಲ್ಲಿ 83 ಒಟ್ಟು 474 ಅಂಕಗಳನ್ನು ಪಡೆದಿದ್ದಾನೆ.
***

ಮಣ್ಣಿನ ಮಗಳ ಸಾಧನೆ
ಮೈಸೂರು: ಟ್ಯೂಷನ್‌ಗಳಿಗೆ ಹೋದರೆ ಮಾತ್ರ ಯಶಸ್ಸು ಸಾಧಿಸಲು ಸಾಧ್ಯ ಎಂಬ ಮನೋಭಾವಿದೆ. ಆದರೆ, ಅದು ಸತ್ಯಕ್ಕೆೆ ದೂರವಾದದ್ದು, ಟ್ಯೂಷನ್‌ಗೂ ಹೋಗದೆಯೇ ಯಶಸ್ಸು ಸಾಧಿಸಬಹುದು ಎಂಬುದನ್ನು ಕೃಷಿಕನ ಮಗಳೊಬ್ಬಳು ನಿರೂಪಿಸಿದ್ದಾರೆ.

image

ತರಗತಿಯಲ್ಲಿ ಕಾಲೇಜಿನ ಅಧ್ಯಾಪಕರು ಹೇಳಿಕೊಟ್ಟ ಪಾಠವನ್ನಷ್ಟೇ ನಂಬಿ, ಅದನ್ನೇ ಮೆಲುಕು ಹಾಕುತ್ತ, ದಿನಪ್ರತಿ ಐದಾರು ಗಂಟೆಗಳು ಮಾತ್ರ ಸ್ವತಃ ಅಧ್ಯಯನ ನಡೆಸಿ ಯಶಸ್ಸು ಸಾಧಿಸಬಹುದು ಎಂಬುದನ್ನು ಕೆ.ಆರ್.ನಗರ ತಾಲೂಕಿನ ಗಂಧನಹಳ್ಳಿಯ ಸೋಮಣ್ಣ ಮತ್ತು ಲತಾಮಣಿಯ ದಂಪತಿಯ ಪುತ್ರಿ ಜಿ.ಎಸ್.ರಾಧಿಕಾ ಸಾಧಿಸಿ ತೋರಿಸಿದ್ದಾರೆ.

ಪಿಯುಸಿ ಪರೀಕ್ಷೆಯಲ್ಲಿ ಶೇ.98ರಷ್ಟು ಅಂಕಗಳಿಸಿ ಸಾಧನೆ ಮಾಡಿದ್ದಾಳೆ. ಪಿಸಿಎಂಬಿ ವಿಷಯದಲ್ಲಿ 400 ಅಂಕಗಳಿಗೆ 398 ಅಂಕಗಳಿಸುವ ಮೂಲಕ ರಾಜ್ಯ ಹಾಗೂ ಜಿಲ್ಲಾ ಮಟ್ಟದಲ್ಲಿ ದ್ವಿತೀಯ ಸ್ಥಾನವನ್ನು ತನ್ನ ಮುಡಿಗೇರಿಸಿಕೊಂಡಿರುವುದು ರೈತನ ಮಗಳ ಸಾಧನೆಯಾಗಿದೆ.

ಈಕೆ ಮೂಲತಃ ಕೃಷಿ ಕುಟುಂಬದವರು. ಕೆ.ಆರ್.ನಗರ ತಾಲೂಕಿನ ಗಂಧನಹಳ್ಳಿಯ ಸೋಮಣ್ಣ ಮತ್ತು ಲತಾಮಣಿಯ ದಂಪತಿಯ ಸುಪುತ್ರಿ. ಪಿಯುಸಿಯಲ್ಲಿ ಯಾವುದೇ ವಿಷಯಗಳಿಗೆ ಟ್ಯೂಷನ್‌ಗೆ ಹೋಗದೇ ಎಲ್ಲಾ ವಿಷಯಗಳಲ್ಲೂ (ಭೌತಶಾಸ್ತ್ರ 99, ರಾಸಾಯನಶಾಸ್ತ್ರ 100, ಗಣಿತ 100, ಜೀವಶಾಸ್ತ್ರ 99) 99ಕ್ಕಿಂತ ಹೆಚ್ಚು ಅಂಕಗಳಿಸಿ ಇತರರಿಗೆ ಮಾದರಿಯಾಗಿದ್ದಾಳೆ.

ಇವರ ತಂದೆ ಈಗಲು ಸಹ ಕೃಷಿ ಮಾಡುತ್ತಿದ್ದಾರೆ. ಮಗಳಿಗೆ ಒಳ್ಳೆಯ ವಿದ್ಯಾಾಭ್ಯಾಾಸ ನೀಡಬೇಕು ಎನ್ನುವ ಉದ್ದೇಶದಿಂದ ಮೈಸೂರಿನಲ್ಲಿ ಮನೆ ಮಾಡಿ ಮಕ್ಕಳನ್ನು ಓದಿಸುತ್ತಿದ್ದಾರೆ. ಇವರು ನಿತ್ಯ ಕೆ.ಆರ್.ನಗರ ತಾಲೂಕಿನ ತಮ್ಮ ಸ್ವಗ್ರಾಮಕ್ಕೆೆ ತೆರಳಿ ಕೃಷಿ ಮಾಡುತ್ತಿರುವುದು ಮತ್ತೊಂದು ವಿಶೇಷ.

ಫೋಟೋಗಳು:

image

image

image

image

image

ಸಿಇಟಿ ಸಾಧಕರು:

ಬೆಂಗಳೂರು ಮಂಗಳೂರಿಗೆ ಸಿಂಹಪಾಲು

MAY 29, 2016.

ಆರ್ಕಿಟೆಕ್ಚರ್ ನೋಟಾ ಫಲಿತಾಂಶ ಸಲ್ಲಿಸಿದವರು – 1541 ಅರ್ಹ ವಿದ್ಯಾರ್ಥಿಗಳು – 1395

ಬೆಂಗಳೂರು: ವೃತ್ತಿಪರ ಕೋರ್ಸ್​ಗಳ ಪ್ರವೇಶಕ್ಕೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ನಡೆಸಿದ್ದ ಸಾಮಾನ್ಯ ಪ್ರವೇಶ ಪರೀಕ್ಷೆ(ಸಿಇಟಿ) ಫಲಿತಾಂಶ ಶನಿವಾರ ಪ್ರಕಟವಾಗಿದ್ದು, ಬೆಂಗಳೂರು ಹಾಗೂ ಮಂಗಳೂರು ವಿದ್ಯಾರ್ಥಿಗಳು ಟಾಪರ್ಸ್​ಗಳಾಗಿ ಹೊರಹೊಮ್ಮಿದ್ದಾರೆ.

ಮೇ ಮೊದಲವಾರದಲ್ಲಿ ನಡೆದ ಸಿಇಟಿಗೆ 1,71,868 ವಿದ್ಯಾರ್ಥಿಗಳು ಹಾಜರಾಗಿದ್ದರು. ಇವರಲ್ಲಿ 1,27,576 ವಿದ್ಯಾರ್ಥಿಗಳಿಗೆ ಇಂಜಿನಿಯರಿಂಗ್ ಹಾಗೂ 41,530 ವಿದ್ಯಾರ್ಥಿಗಳಿಗೆ ವೈದ್ಯಕೀಯ ಕೋರ್ಸ್​ಗೆ ಪ್ರವೇಶ ಪಡೆಯಲು ಅರ್ಹರೆಂದು ಪರೀಕ್ಷಾ ಪ್ರಾಧಿಕಾರ ಪರಿಗಣಿಸಿ ರ್ಯಾಂಕ್ ನೀಡಿದೆ. ಉನ್ನತ ಶಿಕ್ಷಣ ಸಚಿವ ಟಿ.ಬಿ.ಜಯಚಂದ್ರ ಹಾಗೂ ವೈದ್ಯ ಶಿಕ್ಷಣ ಸಚಿವ ಶರಣ ಪ್ರಕಾಶ ಪಾಟೀಲ್ ಜಂಟಿ ಸುದ್ದಿಗೋಷ್ಠಿ ನಡೆಸಿ ಫಲಿತಾಂಶ ಪ್ರಕಟಿಸಿದರು.

ಇಂಜಿನಿಯರಿಂಗ್ ಹಾಗೂ ವೈದ್ಯ ರ್ಯಾಂಕಿಂಗ್​ನ ಮೊದಲ ಹತ್ತು ರ್ಯಾಂಕ್​ಗಳಲ್ಲಿ ಒಂಭತ್ತನ್ನು ಬೆಂಗಳೂರು, ಮಂಗಳೂರಿನ ವಿದ್ಯಾರ್ಥಿಗಳು ಪಡೆದುಕೊಂಡಿದ್ದಾರೆ. ವಿಶೇಷವೆಂದರೆ ಇದೇ ಮೊದಲ ಬಾರಿಗೆ ಬೀದರ್​ನ ಇಬ್ಬರು ವಿದ್ಯಾರ್ಥಿಗಳು ಇಂಜಿನಿಯರಿಂಗ್ ಹಾಗೂ ಮೆಡಿಕಲ್ ರ್ಯಾಂಕಿಂಗ್​ನಲ್ಲಿ ಮೊದಲ 10 ಸ್ಥಾನದ ಪಟ್ಟಿಯಲ್ಲಿ ಸೇರಿದ್ದಾರೆ. ವೈದ್ಯ, ದಂತವೈದ್ಯ, ಬಿಎಸ್​ಸಿ ಕೃಷಿ, ಬಿವಿಎಸ್​ಸಿ ರ್ಯಾಂಕಿಂಗ್​ನಲ್ಲಿ ಮೂಡಬಿದಿರೆಯ ಆಳ್ವಾಸ್ ಕಾಲೇಜಿನ ಅನಂತ್ ಜಿ. ಮೊದಲ ರ್ಯಾಂಕ್ ಗಳಿಸಿದ್ದಾರೆ. ಇಂಜಿನಿಯರಿಂಗ್ ಹಾಗೂ ಬಿ-ಫಾರ್ವದಲ್ಲಿ ಬೆಂಗಳೂರಿನ ವಿವಿಎಸ್ ಸರ್ದಾರ್​ಪಟೇಲ್ ಕಾಲೇಜಿನ ಮಿಲಿಂದ್​ಕುಮಾರ್ ವಡ್ಡಿರಾಜು ಮೊದಲ ರ್ಯಾಂಕ್ ಪಡೆದಿದ್ದರೆ, ಆರ್ಕಿಟೆಕ್ಚರ್​ನಲ್ಲಿ ಬೆಂಗಳೂರಿನ ಸಿಎಂಆರ್ ನ್ಯಾಷನ್ ಪಬ್ಲಿಕ್ ಶಾಲೆಯ ಮೃದುಲಾ ಸಿ.ಆರ್. ಮೊದಲ ಸ್ಥಾನ ಗಳಿಸಿದ್ದಾರೆ.

ಟಾಪರ್ಸ್​ಗಳಿಗೆ ಉಚಿತ ಶಿಕ್ಷಣ

7ವಿಭಾಗದಲ್ಲಿನ ಐವರು ಟಾಪರ್ಸ್​ಗಳಿಗೆ ರಾಜ್ಯ ಸರ್ಕಾರ ಉಚಿತ ಶಿಕ್ಷಣ ನೀಡಲು ನಿರ್ಧರಿಸಿದೆ. ಆ ವಿದ್ಯಾರ್ಥಿಗಳು ಸಿಇಟಿಯಿಂದಲೇ ಸೀಟು ಪಡೆದು ರಾಜ್ಯದಲ್ಲಿನ ಶಿಕ್ಷಣ ಸಂಸ್ಥೆಗಳಲ್ಲಿ ಅಧ್ಯಯನ ನಡೆಸಬೇಕು. ಈವರೆಗೂ ಮೊದಲ ವರ್ಷದ ಶುಲ್ಕ ಮಾತ್ರ ತುಂಬಲಾಗುತ್ತಿತ್ತು. ಆದರೆ ಈ ಬಾರಿಯಿಂದ ಕೋರ್ಸ್ ಮುಗಿಯುವವರೆಗೆ ಪರೀಕ್ಷಾ ಪ್ರಾಧಿಕಾರದಿಂದಲೇ ಶುಲ್ಕ ಭರಿಸಲಾಗುತ್ತದೆ ಎಂದು ಸಚಿವ ಜಯಚಂದ್ರ ತಿಳಿಸಿದರು.

ಸಚಿವರ ಹಾರಿಕೆ ಉತ್ತರ!

ಉನ್ನತ ಶಿಕ್ಷಣ ಇಲಾಖೆ ಕುರಿತು ಯಾವುದೇ ಪ್ರಶ್ನೆ ಕೇಳಿದರೂ ಸಚಿವ ಟಿ.ಬಿಜಯಚಂದ್ರ ನಿರುತ್ತರರಾದರು. ಸೀಟು ಹಂಚಿಕೆ, ಹೆಚ್ಚುವರಿ ಶುಲ್ಕ ವಸೂಲಿ, ಇಂಜಿನಿಯರಿಂಗ್ ಕಾಲೇಜುಗಳ ಅವ್ಯವಸ್ಥೆ, ಸೀಟು ಹಂಚಿಕೆ ಹಗರಣ, ಪದವಿ ಕಾಲೇಜುಗಳ ಪ್ರವೇಶ ಪ್ರಕ್ರಿಯೆ ಕುರಿತ ಪ್ರಶ್ನೆಗಳಿಗೆ ಅವರ ಮುಗುಳ್ನಗುವೇ ಉತ್ತರವಾಯಿತು. ಕಳೆದ ಮೂರು ವರ್ಷಗಳಿಂದ ಏನು ಮಾಡಿದ್ದೀರಿ ಎಂಬುದಕ್ಕೆ ಉತ್ತರಿಸದೇ, ಇನ್ನು ಪರಿಶೀಲಿಸುತ್ತೇವೆ ಎಂಬ ಹಾರಿಕೆ ಉತ್ತರ ನೀಡಿದರು.

ಜೂ.3ರಿಂದ ದಾಖಲೆ ಪರಿಶೀಲನೆ

ರಾಜ್ಯದ 15 ಕೇಂದ್ರಗಳಲ್ಲಿ ಜೂ.3ರಿಂದ ದಾಖಲೆ ಪರಿಶೀಲನೆ ನಡೆಯಲಿದೆ. ರ್ಯಾಂಕ್ ಪ್ರಕಾರ ದಾಖಲೆ ಪರಿಶೀಲನೆ ನಡೆಸಲಾಗುತ್ತದೆ. ಈ ಬಾರಿ ದಾಖಲೆ ಪರಿಶೀಲನೆಗೆ ತುಮಕೂರು ಹಾಗೂ ಬೀದರ್ ಅನ್ನು ಹೊಸದಾಗಿ ಸೇರಿಸಲಾಗಿದೆ.

10 ರ್ಯಾಂಕ್​ನಲ್ಲಿಲ್ಲ ಪಿಯು ಟಾಪರ್ಸ್

ದ್ವಿತೀಯ ಪಿಯುನಲ್ಲಿ ಟಾಪ್ ರ್ಯಾಂಕ್ ಗಳಿಸಿದವರು ಸಿಇಟಿಯಲ್ಲಿ ಟಾಪ್ 10 ರ್ಯಾಂಕ್ ಒಳಗೆ ಸ್ಥಾನ ಗಿಟ್ಟಿಸುವಲ್ಲಿ ವಿಫಲರಾಗಿದ್ದಾರೆ. 2014ರಲ್ಲಿ ದ್ವಿತೀಯ ಪಿಯು ರ್ಯಾಂಕ್​ಗಳಿಸಿದ್ದ ಬಹುತೇಕರು ಸಿಇಟಿ ಟಾಪ್ 5 ರ್ಯಾಂಕ್ ಪಟ್ಟಿಯಲ್ಲಿದ್ದರು. 2015ನೇ ಫಲಿತಾಂಶದಲ್ಲೂ ಯಾವೊಬ್ಬ ವಿದ್ಯಾರ್ಥಿಗಳು ಟಾಪ್ 10ನಲ್ಲಿ ಇರಲಿಲ್ಲ. 2016ನೇ ಪಿಯು ಫಲಿತಾಂಶದಲ್ಲಿ ರಾಜ್ಯಕ್ಕೆ ಮೊದಲ ಸ್ಥಾನ ಗಳಿಸಿದ್ದ ಟಿ.ರಕ್ಷಿತಾಗೆ ಈ ಬಾರಿಯ ಸಿಇಟಿ ವೈದ್ಯಕೀಯದಲ್ಲಿ 38ನೇ ರ್ಯಾಂಕ್ ಬಂದಿದೆ.

ಲೀಕ್ ಆರೋಪಿ ಮಗ 22,352ನೇ ರ್ಯಾಂಕ್

ಪಿಯು ಪ್ರಶ್ನೆಪತ್ರಿಕೆ ಸೋರಿಕೆ ಆರೋಪಿ ಓಬಳರಾಜು ಮಗ ಬಿ.ಒ.ಗೌರವ್ ಇಂಜಿನಿಯರಿಂಗ್​ನಲ್ಲಿ 22,352ನೇ ಹಾಗೂ ಬಿಎಸ್ಸಿ ಅಗ್ರಿಯಲ್ಲಿ 16228 ರ್ಯಾಂಕ್ ಗಳಿಸಿದ್ದಾನೆ. ವೈದ್ಯಕೀಯ, ವಾಸ್ತುಶಿಲ್ಪದ ರ್ಯಾಂಕ್ ಪಡೆಯಲು ಅರ್ಹತೆ ಇಲ್ಲ ಎಂದು ನಮೂದಿಸಲಾಗಿದೆ.

6 ಕೃಪಾಂಕ

2016ನೇ ಸಾಲಿನ ಸಿಇಟಿಯಲ್ಲಿ ಭೌತಶಾಸ್ತ್ರ-1, ರಸಾಯನಶಾಸ್ತ್ರ-2, ಜೀವಶಾಸ್ತ್ರ-3 ಸೇರಿ ಒಟ್ಟಾರೆ 6 ಕೃಪಾಂಕ ನೀಡಲಾಗಿದೆ.

ಟಾಪ್ 5 ರ್ಯಾಂಕ್ ಗಳಿಸಿದವರು

ವೈದ್ಯ ಮತ್ತು ದಂತವೈದ್ಯ(ಪಿಸಿಬಿ)

1. ಅನಂತ್ ಜಿ.- ಆಳ್ವಾಸ್ ಪಿಯು ಕಾಲೇಜು, ಮೂಡುಬಿದಿರೆ

2. ಸಂಜಯ್ ಎಂ. ಗೌಡರ್ – ಶೇಷಾದ್ರಿಪುರ ಪಿಯು ಕಾಲೇಜು, ಬೆಂ. 3. ವಚನಶ್ರೀ ಪಾಟೀಲ್ – ಶಾಹೀನ್ ಪಿಯು ಕಾಲೇಜು, ಬೀದರ್

4. ಇಶಾನ್ ವಜೀರ್ (ಕಾಶ್ಮೀರಿ ವಲಸಿಗ)-ಮಾಡರ್ನ್ ವಿದ್ಯಾನಿಲಯ ದೆಹಲಿ

5. ಸೌರಭ್ ಎಸ್.- ಎಸ್​ಪಿಎಸ್​ಎಂ ಪಿಯು ಸೈನ್ಸ್ ಕಾಲೇಜು, ದಾವಣಗೆರೆ

ಇಂಜಿನಿಯರಿಂಗ್ (ಪಿಸಿಎಂ)

1. ಮಿಲಿಂದ್ ಕುಮಾರ್- ವಿವಿಎಸ್ ಸರ್ದಾರ್ ಪಟೇಲ್ ಪಿಯು ಕಾಲೇಜು, ಬೆಂ.

2. ನಿರಂಜನ್ ಕಾಮತ್ – ಎಕ್ಸ್​ಪರ್ಟ್ ಪಿಯು ಕಾಲೇಜು, ಮಂಗಳೂರು

3. ದಿವ್ಯಾ ಎ. ಜಮಖಂಡಿ – ಕೆಎಲ್​ಇ ಪಿಯು ಕಾಲೇಜು, ಬೆಂಗಳೂರು

4. ಆರ್.ರಾಹುಲ್- ಆರ್.ವಿ.ಪಿಯು ಕಾಲೇಜು, ಬೆಂಗಳೂರು

5. ಎಸ್.ವಿಘ್ನೇಶ್ – ವಿವಿಎಸ್ ಸರ್ದಾರ್ ಪಟೇಲ್ ಪಿಯು ಕಾಲೇಜು, ಬೆಂ.

ವಾಸ್ತುಶಿಲ್ಪ

1. ಮೃದುಲಾ ಸಿ.ಆರ್. – ಸಿಎಂಆರ್ ನ್ಯಾಷನಲ್ ಪಬ್ಲಿಕ್ ಸ್ಕೂಲ್, ಬೆಂಗಳೂರು

2. ಐಶ್ವರ್ಯಾ ಮಹದೇವನ್-ದಿ ಅಮೃತಾ ಅಕಾಡೆಮಿ ಆಫ್ ಸರ್ಜಾಪುರ ರೋಡ್, ಬೆಂಗಳೂರು

3. ನೇಹಾ ಸಾರಾಹ್ ಅಬ್ರಹಾಂ – ಸೋಫಿಯಾ ಹೈಸ್ಕೂಲ್, ಬೆಂಗಳೂರು

4. ದೈವಯಾನಿ ರಾಮಮೂರ್ತಿ- ಮಲ್ಲಯ್ಯ ಅದಿತಿ ಇಂಟರ್​ನ್ಯಾಷನಲ್ ಸ್ಕೂಲ್, ಬೆಂಗಳೂರು

5. ರಿಶಿ ಕುಮಾರನ್ ಮೂದಲಿಯಾರ್- ಪ್ರೆಸಿಡೆನ್ಸಿ ಸ್ಕೂಲ್, ಬೆಂಗಳೂರು

ಐಎಸ್​ಎಂ, ಹೋಮಿಯೋಪಥಿ(ಪಿಸಿಬಿ)

1. ಸಂಜಯ್ ಎಂ. ಗೌಡರ್ – ಶೇಷಾದ್ರಿಪುರ ಕಾಲೇಜು, ಬೆಂ.

2. ವಚನಶ್ರೀ ಪಾಟೀಲ್ – ಶಾಹೀನ್ ಪಿಯು ಕಾಲೇಜು, ಬೀದರ್

3. ಅನಂತ್ ಜಿ. – ಆಳ್ವಾಸ್ ಪಿಯು ಕಾಲೇಜು, ಮೂಡುಬಿದಿರೆ

4.
ಸಾಯಿಪ್ರಸಾದ್- ಎಂ.ವಿ. ಪಿಯು ಕಾಲೇಜು, ದಾವಣಗೆರೆ

5. ಪ್ರತಿಕ್ಷಾ ಪೈ- ಮಹೇಶ್ ಪಿಯು ಕಾಲೇಜು, ಹುಬ್ಬಳ್ಳಿ

ಬಿಎಸ್ಸಿ ಕೃಷಿ

1. ಅನಂತ್ ಜಿ.-ಆಳ್ವಾಸ್ ಪಿಯು ಕಾಲೇಜು, ಮೂಡುಬಿದಿರೆ

2. ಎಚ್.ಎಲ್. ಪ್ರವೀಣ್​ರಾಜ್-ಮಾಸ್ಟರ್ ಪಿಯು ಕಾಲೇಜು, ಹಾಸನ

3. ಸಂಪತ್ ಕೋಟಿ- ವಿದ್ಯಾಮಂದಿರ ಪಿಯು ಕಾಲೇಜು, ಬೆಂಗಳೂರು

4. ಅಭಿಲಾಷ್ – ಅಳ್ವಾಸ್ ಪಿಯು ಕಾಲೇಜು, ಮೂಡುಬಿದಿರೆ

5. ವೈಷ್ಣವಿ ಬಲ್ಲಾಳ್- ಎಕ್ಸ್​ಫರ್ಟ್ ಪಿಯು ಕಾಲೇಜು, ಮಂಗಳೂರು

ಬಿವಿಎಸ್ಸಿ

1. ಅನಂತ್ ಜಿ.-ಆಳ್ವಾಸ್ ಪಿಯು ಕಾಲೇಜು, ಮೂಡುಬಿದಿರೆ

2. ಸಂಜಯ್ ಎಂ ಗೌಡರ್-ಶೇಷಾದ್ರಿಪುರ ಪಿಯು ಕಾಲೇಜು, ಬೆಂ.

3. ವಚನಶ್ರೀ ಪಾಟೀಲ್- ಶಾಹೀನ್ ಪಿಯು ಕಾಲೇಜು, ಬೀದರ್

4. ಇಶಾನ್ ವಜೀರ್ (ಕಾಶ್ಮೀರಿ ವಲಸಿಗ)- ಮಾಡರ್ನ್ ವಿದ್ಯಾನಿಲಯ ಫರಿದಾಬಾದ್, ದೆಹಲಿ

5. ಸೌರಭ್ ಎಸ್.- ಎಸ್​ಪಿಎಸ್​ಎಂ ಪಿಯು ಸೈನ್ಸ್ ಕಾಲೇಜು, ದಾವಣಗೆರೆ

ಬಿ-ಫಾರ್ಮ, ಫಾರ್ಮಡಿ

1. ಮಿಲಿಂದ್ ಕುಮಾರ್-ವಿವಿಎಸ್ ಸರ್ದಾರ್ ಪಟೇಲ್ ಪಿಯು ಕಾಲೇಜು, ಬೆಂಗಳೂರು

2. ನಿರಂಜನ್ ಕಾಮತ್- ಎಕ್ಸ್ ಫರ್ಟ್ ಪಿಯು ಕಾಲೇಜು, ಮಂಗಳೂರು

3. ಆರ್.ರಾಹುಲ್- ಆರ್.ವಿ. ಪಿಯು ಕಾಲೇಜು, ಬೆಂಗಳೂರು

4. ದಿವ್ಯಾ ಎ. ಜಮಖಂಡಿ-ಕೆಎಲ್​ಇಎಸ್ ಇಂಡ್. ಪಿಯು ಕಾಲೇಜು, ಬೆಂಗಳೂರು

5. ಸಂಜಯ್ ಎಂ. ಗೌಡರ್-ಶೇಷಾದ್ರಿಪುರಂ ಪಿಯು ಕಾಲೇಜು, ಬೆಂ.

ಡಾಕ್ಟರ್ ಆಗಿ ಜನಸೇವೆ ಮಾಡ್ತೇನೆ

ದಕ್ಷಿಣ ಕನ್ನಡ ಜಿಲ್ಲೆ ಮೂಡುಬಿದಿರೆ ಆಳ್ವಾಸ್ ಪದವಿಪೂರ್ವ ಕಾಲೇಜಿನ ವಿಜ್ಞಾನ ವಿಭಾಗದ ವಿದ್ಯಾರ್ಥಿ ಅನಂತ್ ಜಿ. ಮೆಡಿಕಲ್, ಅಗ್ರಿಕಲ್ಚರಲ್ ಬಿಎಸ್​ಸಿ, ವೆಟೆರಿನರಿ ಸೈನ್ಸ್​ನಲ್ಲಿ ಪ್ರಥಮ ರ್ಯಾಂಕ್ ಪಡೆದಿದ್ದು, ಉನ್ನತ ವೈದ್ಯಕೀಯ ವ್ಯಾಸಂಗ ನಡೆಸಿ ಜನಸೇವೆಯ ಗುರಿ ಹೊಂದಿದ್ದಾರೆ. ಮೂಲತಃ ಹೊನ್ನಾವರ ಇಡಗುಂಜಿಯವರಾಗಿದ್ದು, ಬೆಂಗಳೂರು ಕೆ.ಆರ್.ಪುರದ ಸರ್ಕಾರಿ ಪಿಯು ಕಾಲೇಜಿನ ಕೆಮಿಸ್ಟ್ರಿ ಉಪನ್ಯಾಸಕ ಗಜಾನನ ಭಟ್ ಹಾಗೂ ಹೈಕೋರ್ಟ್ ಪ್ರಥಮ ದರ್ಜೆ ಸಹಾಯಕಿ ಜಯಶೀಲ ದಂಪತಿ ಪುತ್ರ ಅನಂತ್, ಹೋಮಿಯೋಪಥಿ ವಿಭಾಗದಲ್ಲಿ ಮೂರನೇ ರ್ಯಾಂಕ್ ಗಳಿಸಿದ್ದಾರೆ. ಬಿ ಫಾರ್ಮ ಹಾಗೂ ಡಿ-ಫಾರ್ಮದಲ್ಲಿ 6ನೇ ರ್ಯಾಂಕ್, ಇಂಜಿನಿಯರಿಂಗ್​ನಲ್ಲಿ 18ನೇ ರ್ಯಾಂಕ್ ಸಹ ಪಡೆದಿದ್ದಾರೆ. ಜೀವಶಾಸ್ತ್ರದಲ್ಲಿ 60ರಲ್ಲಿ 60, ಭೌತಶಾಸ್ತ್ರದಲ್ಲಿ 55, ಕೆಮಿಸ್ಟ್ರಿ 59 ಹಾಗೂ ಗಣಿತದಲ್ಲಿ 55 ಅಂಕ ಪಡೆದು ಈ ಸಾಧನೆ ಮಾಡಿದ್ದಾರೆ.

ಆಳ್ವಾಸ್ ಶಿಕ್ಷಣ ಸಂಸ್ಥೆಯ ಗುಣಮಟ್ಟದ ಸಿಇಟಿ ಕೋಚಿಂಗ್, ಪರಿಶ್ರಮ, ತಂದೆ-ತಾಯಿಯ ಪ್ರೋತ್ಸಾಹದಿಂದ ಈ ಸಾಧನೆ ಮಾಡಿದ್ದೇನೆ. ದೈನಂದಿನ ತರಗತಿ, ಕೋಚಿಂಗ್ ಹೊರತುಪಡಿಸಿ ಪ್ರತಿದಿನ ಸುಮಾರು 5 ಗಂಟೆ ವ್ಯಾಸಂಗ ಮಾಡಿದ್ದೇನೆ. ಮೆಡಿಕಲ್ ನನ್ನ ನೆಚ್ಚಿನ ಕ್ಷೇತ್ರವಾಗಿದ್ದು, ಅದರಲ್ಲೇ ಮುಂದಿನ ವ್ಯಾಸಂಗ ಮಾಡಿ, ಜನಸೇವೆ ಮಾಡುವ ಇರಾದೆಯಿದೆ.

| ಅನಂತ್ ಜಿ. ಮೆಡಿಕಲ್ 1ನೇ ರ್ಯಾಂಕ್

ಆಳ್ವಾಸ್​ನಿಂದ ಅನಂತ್​ಗೆ 5 ಲಕ್ಷ ರೂ.

ಮೂಡುಬಿದಿರೆ: ವೈದ್ಯಕೀಯ ವಿಭಾಗದಲ್ಲಿ ಮೊದಲ ರ್ಯಾಂಕ್ ಪಡೆದ ಆಳ್ವಾಸ್ ವಿದ್ಯಾಸಂಸ್ಥೆಯ ವಿದ್ಯಾರ್ಥಿ ಅನಂತ್ ಜಿ. ಅವರಿಗೆ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದಿಂದ 5 ಲಕ್ಷ ರೂ. ಪ್ರೋತ್ಸಾಹ ಧನ ನೀಡುವುದಾಗಿ ಡಾ.ಎಂ.ಮೋಹನ್ ಆಳ್ವ ತಿಳಿಸಿದ್ದಾರೆ. ಪಿಯು ಕಾಮರ್ಸ್​ನಲ್ಲಿ 2ನೇ ರ್ಯಾಂಕ್ ಪಡೆದಿದ್ದ ದಕ್ಷಾ ಜೈನ್ ಮತ್ತು ಆಶಿಕ್ ನಾರಾಯಣ್ ಅವರಿಗೆ ತಲಾ 1 ಲಕ್ಷ ರೂ. ನಗದು ಬಹುಮಾನ ಹಾಗೂ ಅವರಿಗೆ ಮುಂದಿನ ವಿದ್ಯಾಭ್ಯಾಸಕ್ಕೂ ಉಚಿತ ಶಿಕ್ಷಣ ಕೊಡುಗೆ ನೀಡಲಾಗುವುದು ಎಂದು ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.

ಸಂಶೋಧನೆ ನಿರಂಜನ್ ಗುರಿ

ಇಂಜಿನಿಯರಿಂಗ್​ನಲ್ಲಿ ರಾಜ್ಯಕ್ಕೆ ಎರಡನೇ ಸ್ಥಾನಿಯಾಗಿರುವ ಮಂಗಳೂರಿನ ಎಕ್ಸ್​ಪರ್ಟ್ ಪದವಿಪೂರ್ವ ಕಾಲೇಜಿನ ನಿರಂಜನ್ ಕಾಮತ್​ಗೆ ವಿಜ್ಞಾನದತ್ತಲೇ ಹೆಚ್ಚು ಆಸಕ್ತಿ. ಹಾಗಾಗಿ ಇಂಜಿನಿಯರಿಂಗ್​ನಲ್ಲಿ ಎರಡನೇ ರ್ಯಾಂಕ್ ಬಂದಿದ್ದರೂ ಜೆಇಇ ಮೈನ್ಸ್ ಬರೆದು ಎನ್​ಐಟಿಗೆ ಸೇರಿ ಭೌತ ಶಾಸ್ತ್ರದಲ್ಲಿ ಎಂಎಸ್ಸಿ ಮಾಡುವುದು ನಿರಂಜನ್ ಗುರಿ. ಅಲ್ಲದೆ ಅಬ್ದುಲ್ ಕಲಾಂರಿಂದ ಸ್ಪೂರ್ತಿ ಪಡೆದಿರುವ ಇವರು, ಪಿಎಚ್​ಡಿ ಮಾಡಿ ಸಂಶೋಧಕನಾಗುವ ಆಸೆ ಇದೆ ಎನ್ನುತ್ತಾರೆ. ಗುಜರಾತ್​ನ ಟಾಟಾ ಕೆಮಿಕಲ್ಸ್ ಉದ್ಯೋಗಿಯಾಗಿರುವ ನರಸಿಂಹ ಕಾಮತ್ ಹಾಗೂ ರಂಜನಿ ಕಾಮತ್ ಅವರ ಪುತ್ರನಾಗಿರುವ ನಿರಂಜನ್, ಹುಟ್ಟಿದ್ದು ಮಂಗಳೂರು ಆದರೂ ಬೆಳೆದದ್ದು ಗುಜರಾತ್​ನಲ್ಲಿ. ಮಗನ ವಿದ್ಯಾಭ್ಯಾಸಕ್ಕಾಗಿ ಪಾಲಕರು 2 ವರ್ಷದಿಂದ ಮಂಗಳೂರಿನಲ್ಲೇ ಮನೆ ಮಾಡಿಕೊಂಡಿದ್ದಾರೆ.

ಬೀದರ್​ಗೆ ಕೀರ್ತಿ ತಂದ ವಚನಶ್ರೀ

ಪಿಯುನಲ್ಲಿ 600ಕ್ಕೆ 590 ಅಂಕ ಗಳಿಸಿ ಭೇಷ್ ಎನಿಸಿಕೊಂಡ ಬೀದರ್​ನ ಶಾಹೀನ್ ಕಾಲೇಜಿನ ವಿದ್ಯಾರ್ಥಿನಿ ವಚನಶ್ರೀ ಬಸವಕುಮಾರ ಪಾಟೀಲ್, ವೈದ್ಯಕೀಯ ವಿಭಾಗದಲ್ಲಿ ರಾಜ್ಯಕ್ಕೆ 3ನೇ ರ್ಯಾಂಕ್ ಪಡೆದಿದ್ದಾರೆ. ವಚನಶ್ರೀ ತಾಯಿ ಡಾ.ಹೇಮಲತಾ ಪಾಟೀಲ್ ಸರ್ಕಾರಿ ಆಸ್ಪತ್ರೆಯಲ್ಲಿ ಸ್ತ್ರೀ ರೋಗ ತಜ್ಞೆ. ತಂದೆ ಬಸವಕುಮಾರ ಪಾಟೀಲ್ ವಕೀಲರು. ತಾಯಿಯಂತೆ ವೈದ್ಯೆಯಾಗಿ ಜನಸೇವೆ ಮಾಡುವ ಹಂಬಲ ಈಕೆಗಿದೆ. ಬೀದರ್ ಸರ್ಕಾರಿ ವೈದ್ಯ ಕಾಲೇಜಿನಲ್ಲೇ ಎಂಬಿಬಿಎಸ್ ಮಾಡಿ, ನಮ್ಮ ಭಾಗದಲ್ಲೂ ಉತ್ತಮ ಗುಣಮಟ್ಟದ ಶಿಕ್ಷಣ ಸಿಗುತ್ತದೆ ಎಂಬ ಸಂದೇಶ ರವಾನಿಸಬೇಕೆಂಬ ಚಿಂತನೆ ನಡೆದಿದೆ. ಪಾಲಕರ ಜತೆಗೆ ಸಮಾಲೋಚಿಸಿ ನಿರ್ಧಾರ ಕೈಗೊಳ್ಳುವೆ ಎಂದು ವಚನಶ್ರೀ ವಿಜಯವಾಣಿಗೆ ತಿಳಿಸಿದ್ದಾರೆ.

ಸುಮುಖ್​ಗೆ ಸ್ವಂತ ಕಂಪನಿ ಸ್ಥಾಪನೆ ಆಸೆ

ಆರ್ಕಿಟೆಕ್ ವಿಭಾಗದಲ್ಲಿ 6ನೇ ರ್ಯಾಂಕ್ ಪಡೆದಿರುವ ದಕ್ಷಿಣ ಕನ್ನಡ ಜಿಲ್ಲೆ ವಿಟ್ಲದ ಅಳಿಕೆ ಶ್ರೀ ಸತ್ಯಸಾಯಿ ಲೋಕಸೇವಾ ಪದವಿಪೂರ್ವ ಕಾಲೇಜು ವಿದ್ಯಾರ್ಥಿ ಸುಮುಖ್​ಗೆ ಸ್ವಂತ ಕಂಪನಿ ಸ್ಥಾಪನೆ ಮಾಡುವ ಬಯಕೆ. ಮೂಲತಃ ಮಂಡ್ಯದವರಾದ ಸುಮುಖ್ ತಂದೆ -ತಾಯಿ ವೈದ್ಯರು. ಇವರಿಗೆ ಚಿಕ್ಕಂದಿನಿಂದಲೂ ಚಿತ್ರಕಲೆಯಲ್ಲಿ ಹೆಚ್ಚು ಆಸಕ್ತಿ. ಹಾಗಾಗಿಯೇ ಬೆಂಗಳೂರು ಆರ್​ವಿ ಕಾಲೇಜಿನಲ್ಲಿ ಆರ್ಕಿಟೆಕ್ ಕಲಿಯಬೇಕೆಂಬ ಆಸೆ ಹೊಂದಿದ್ದಾರೆ.

ಶ್ರೀನಿಧಿಗೆ ವೈದ್ಯನಾಗುವ ಬಯಕೆ

ದಕ್ಷಿಣ ಕನ್ನಡ ಜಿಲ್ಲೆ ವಿಟ್ಲದ ಅಳಿಕೆ ಶ್ರೀ ಸತ್ಯಸಾಯಿ ಲೋಕಸೇವಾ ಪದವಿಪೂರ್ವ ಕಾಲೇಜು ವಿದ್ಯಾರ್ಥಿ, ಗದಗ ಮೂಲದ ಶ್ರೀನಿಧಿ ಅಂಬೋರೆ, ವೈದ್ಯಕೀಯ ವಿಭಾಗದಲ್ಲಿ 9ನೇ ರ್ಯಾಂಕ್ ಪಡೆದಿದ್ದು, ಉನ್ನತ ವ್ಯಾಸಂಗ ಮಾ
ಡುವ ಸಾಧನೆಯ ಗುರಿ ಇಟ್ಟುಕೊಂಡಿದ್ದಾರೆ. ತಂದೆ ಸುರೇಶ್ ವಿ. ಅಂಬೋರೆ, ತಾಯಿ ಗೀತಾ ಸುರೇಶ್ ಅಂಬೋರೆ ಗದಗದಲ್ಲಿ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕ ವೃತ್ತಿ ನಡೆಸುತ್ತಿದ್ದಾರೆ. ಬೆಂಗಳೂರು ಬಿಎಂಎಸ್ ಕಾಲೇಜಿನಲ್ಲಿ ಎಂಬಿಬಿಎಸ್ ಮಾಡಿ ಬಳಿಕ ಮಾಸ್ಟರ್ ಡಿಗ್ರಿ ಪಡೆಯಬೇಕೆಂಬ ಆಸೆ ಶ್ರೀನಿಧಿಯದ್ದು.

ತುಂಬಾ ಖುಷಿ ಆಗಿದೆ. ಐಐಎಸ್​ಸಿಯಲ್ಲಿ ಪ್ಯೂರ್ ಸೈನ್ಸ್ ಮಾಡಬೇಕೆಂದಿದ್ದೇನೆ. ತಲೆ ಕೆಡಿಸಿಕೊಂಡು ಎಂದೂ ಓದುತ್ತಿರಲಿಲ್ಲ. ಕಾಲೇಜು ಪಾಠವನ್ನೇ ಸರಿಯಾಗಿ ಕೇಳುತ್ತಿದ್ದೆ.

| ಎಸ್. ಸೌರಭ್ ಮೆಡಿಕಲ್ 5 ನೇ ರ್ಯಾಂಕ್, ಪುಷ್ಪಾ ಮಹಾಲಿಂಗಪ್ಪ ಕಾಲೇಜು, ದಾವಣಗೆರೆ

ನನಗೆ ಕಂಪ್ಯೂಟರ್ ಗೇಮ್ಳು ಆಸಕ್ತಿದಾಯಕ. ಗೇಮ್ ಡಿಸೈನಿಂಗ್ ಅರಿಯುವ ಬಗ್ಗೆ ಕುತೂಹಲ ಬೆಳೆಸಿಕೊಂಡಿದ್ದೆ. ಈಗ ಅದೇ ಕುತೂಹಲ ಕೃತಕ ಮೆದುಳು ಸೃಷ್ಟಿಸುವ ಬಗ್ಗೆ ಆಲೋಚಿ ಸುವಂತೆ ಮಾಡಿದೆ. ಅವಕಾಶ ಸಿಕ್ಕರೆ ವಿದೇಶದಲ್ಲಿ ಹೆಚ್ಚಿನ ವ್ಯಾಸಂಗ ಮಾಡುವೆ.

| ಎಚ್.ಎಲ್.ಪ್ರವೀಣ್​ರಾಜ್ ಇಂಜಿನಿಯರಿಂಗ್ 6ನೇ ರ್ಯಾಂಕ್, ಮಾಸ್ಟರ್ಸ್ ಪಿಯು ಕಾಲೇಜು, ಹಾಸನ

ತುಂಬಾ ಖಷಿಯಾಗಿದೆ. 5-6 ಗಂಟೆ ಅಭ್ಯಾಸ ಮಾಡಿದ್ದು ಈ ಸಾಧನೆಗೆ ನೆರವಾಗಿದೆ. ಪ್ರತಿನಿತ್ಯದ ಪರಿಶ್ರಮ ಹಾಕಿದರೆ ಎಲ್ಲರು ಈ ಸಾಧನೆ ಮಾಡಬಹುದು.

| ನೇಹಾ ಸಾರಾಹ್ ಅಬ್ರಾಹಂ

ಆರ್ಕಿಟೆಕ್ಚರ್ 3ನೇ ರ್ಯಾಂಕ್ ನೇಹಾಗೆ ವೈದ್ಯೆಯಾಗುವಾಸೆ

ಮಂಗಳೂರಿನ ಎಕ್ಸ್​ಪರ್ಟ್ ಪಿಯು ಕಾಲೇಜಿನ ನೇಹಾ ಎಸ್.ಸಿ. ಮೆಡಿಕಲ್​ನಲ್ಲಿ 10ನೇ ರ್ಯಾಂಕ್ ಗಳಿಸಿದ್ದು, ತಂದೆ-ತಾಯಿಯಂತೆ ವೈದ್ಯೆಯಾಗುತ್ತೇನೆ ಎಂಬ ಆಶಯ ವ್ಯಕ್ತಪಡಿಸಿದ್ದಾರೆ. ನನ್ನ ಈ ಸಾಧನೆಗೆ ಕಾಲೇಜಿನ ಪಠ್ಯದೊಂದಿಗೆ ತಾನು ಪಡೆದುಕೊಂಡ ಎಕ್ಸ್​ಪರ್ಟ್ ಪೋಸ್ಟಲ್ ಕೋಚಿಂಗ್​ನ ಮೆಟೀರಿಯಲ್ ಪೂರಕವಾಯಿತು. ಕಾಲೇಜು ಉಪನ್ಯಾಸಕರು, ಸಹಪಾಠಿಗಳು ಅಧ್ಯಯನ ಸಮಯದಲ್ಲಿ ಸಹಕಾರ ನೀಡಿದ್ದಾರೆ. ಬೆಂಗಳೂರು ಮೆಡಿಕಲ್ ಕಾಲೇಜು ಅಥವಾ ಮೈಸೂರು ಮೆಡಿಕಲ್ ಕಾಲೇಜಿನಲ್ಲಿ ಎಂಬಿಬಿಎಸ್ ಮಾಡುವ ಇಚ್ಛೆಯಿದೆ ಎನ್ನುತ್ತಾರೆ ನೇಹಾ. ಈಕೆಗೆ ಐಎಸ್​ಎಂಎಚ್ 9, ಇಂಜಿನಿಯ ರಿಂಗ್​ನಲ್ಲಿ 382ನೇ ರ್ಯಾಂಕ್ ಬಂದಿದೆ.

ನ್ಯೂರೋಲಜಿಸ್ಟ್ ಆಗುವತ್ತ ವೈಷ್ಣವಿ ಹೆಜ್ಜೆ

ನಾನು ನ್ಯೂರೋ ತಜ್ಞೆ ಆಗಬೇಕು. ಅದಕ್ಕಾಗಿ ನನ್ನ ನಿರಂತರ ಪ್ರಯತ್ನ ಸಾಗಿದೆ ಎನ್ನುತ್ತಾರೆ ಐಎಸ್​ಎಂಎಚ್​ನಲ್ಲಿ 7, ಮೆಡಿಕಲ್ 22, ಇಂಜಿನಿಯರಿಂಗ್​ನಲ್ಲಿ 19ನೇ ರ್ಯಾಂಕ್ ಪಡೆದ ಮಂಗಳೂರಿನ ಎಕ್ಸ್​ಪರ್ಟ್ ಪಿಯು ಕಾಲೇಜಿನ ವೈಷ್ಣವಿ ಬಲ್ಲಾಳ್. ಇದೀಗ ನೀಟ್ 2 ಪರೀಕ್ಷೆಗಾಗಿ ಸಿದ್ಧತೆ ನಡೆಸುತ್ತಿದ್ದೇನೆ. ದೇಶದ ಅತ್ಯುತ್ತಮ ವೈದ್ಯಕೀಯ ಕಾಲೇಜಿನಲ್ಲಿ ಎಂಬಿಬಿಎಸ್ ಅಧ್ಯಯನ ನಡೆಸುವ ಗುರಿ ಹೊಂದಿದ್ದೇನೆ ಎನ್ನುತ್ತಾರೆ ನೇಹಾ.

ನಾನು ನಿರೀಕ್ಷಿಸಿದ್ದಕ್ಕಿಂತ ಹೆಚ್ಚಿನ ರ್ಯಾಂಕ್ ಸಿಕ್ಕಿದೆ. ಖುಷಿ ಆಗಿದೆ. ಮೆಡಿಕಲ್ ಓದಬೇಕೆಂದಿದ್ದೇನೆ. ನನಗೆ ಬಯಾಲಜಿಯಲ್ಲಿ ಕಡಿಮೆ ಅಂಕ ಬಂದಿರುವ ಕಾರಣ ರ್ಯಾಂಕ್ ಕಡಿಮೆ ಆಗಿದೆ.

| ಸಾಯಿಪ್ರಸಾದ್ ಮೆಡಿಕಲ್ 7ನೇ ರ್ಯಾಂಕ್, ಸರ್ ಎಂವಿ ಕಾಲೇಜು, ದಾವಣಗೆರೆ

ಐಐಟಿ ಅಥವಾ ಎನ್​ಐಟಿಗೆ ಆದ್ಯತೆಯಿದೆ. ಅಲ್ಲಿ ಸೂಕ್ತ ವಿಭಾಗದಲ್ಲಿ ಅವಕಾಶ ದೊರೆಯದಿದ್ದರೆ ಆರ್.ವಿ. ಇಂಜಿನಿಯರಿಂಗ್ ಕಾಲೇಜಿನಲ್ಲಿ ಇ ಆಂಡ್ ಸಿ ವಿಷಯ ಆಯ್ಕೆ ಮಾಡಿಕೊಳ್ಳುವ ಯೋಚನೆ ಇದೆ. ಮುಂಚಿನಿಂದಲೂ ಎಲೆಕ್ಟ್ರಾನಿಕ್ಸ್ ವಿಷಯದಲ್ಲಿ ಒಲವಿದೆ.

| ದಿವ್ಯಾ ಎ. ಜಮಖಂಡಿ ಇಂಜಿನಿಯರಿಂಗ್ 3ನೇ ರ್ಯಾಂಕ್

ಸಿಇಟಿಯಲ್ಲಿ ಉತ್ತಮ ರ್ಯಾಂಕ್ ಪಡೆಯುವೆ ಎಂಬ ವಿಶ್ವಾಸವಿತ್ತು. ಆದರೆ ಮೊದಲ ಹತ್ತು ಸ್ಥಾನಗಳಲ್ಲಿ ಸ್ಥಾನ ಪಡೆಯುತ್ತೇನೆ ಎಂಬ ನಿರೀಕ್ಷೆ ಇರಲಿಲ್ಲ. ಟ್ಯೂಷನ್​ಗೆ ಹೋಗದೆ ಮನೆಯಲ್ಲೇ ಓದುತ್ತಿದ್ದೆ. ಮುಂದೆ ಉತ್ತಮ ನ್ಯೂರೋಲಜಿಸ್ಟ್ ಆಗಬೇಕು ಎಂಬ ಗುರಿ ಇಟ್ಟುಕೊಂಡಿದ್ದೇನೆ.

| ಪ್ರತೀಕ್ಷಾ ಪೈ ಮೆಡಿಕಲ್ 8ನೇ ರ್ಯಾಂಕ್,

ಮಹೇಶ ಪ.ಪೂ. ಕಾಲೇಜು, ಹುಬ್ಬಳ್ಳಿ

ನಾರಾಯಣ ಕಾಲೇಜ್​ಗೆ ಉತ್ತಮ ಫಲಿತಾಂಶ

ಬೆಂಗಳೂರು: ಪಿಯುನಲ್ಲಿ ಉತ್ತಮ ಅಂಕ ಗಳಿಸಿದ್ದ ನಾರಾಯಣ ಪಿಯು ಕಾಲೇಜಿನ ವಿದ್ಯಾರ್ಥಿಗಳು ಪ್ರಸಕ್ತ ವರ್ಷ ಕಾಮೆಡ್-ಕೆ ಹಾಗೂ ಸಿಇಟಿಯಲ್ಲೂ ಹೆಚ್ಚಿನ ಅಂಕ ಗಳಿಸುವ ಮೂಲಕ ಕಾಲೇಜಿನ ಕೀರ್ತಿ ಬೆಳಗಿಸಿದ್ದಾರೆ. ಇಂಜಿನಿಯರಿಂಗ್ ಟಾಪ್ 100 ರ್ಯಾಂಕ್​ಗಳ ಪೈಕಿ 7 ವಿದ್ಯಾರ್ಥಿಗಳು ಹಾಗೂ ವೈದ್ಯಕೀಯದಲ್ಲಿ 6 ವಿದ್ಯಾರ್ಥಿಗಳು ನಾರಾಯಣ ಕಾಲೇಜಿನವರಾಗಿದ್ದಾರೆ.

ಸಿಇಟಿ ವೈದ್ಯಕೀಯ ವಿಭಾಗದಲ್ಲಿ ಲತೀಫಾ ಸುಲ್ತಾನ ಸೈಯಿದಾ 6ನೇ ರ್ಯಾಂಕ್ ಗಳಿಸಿದ್ದಾರೆ. ಯು.ಪಿ. ಸುಶ್ಮಿತಾ (16), ಆರ್. ಶ್ರೇಯಾ (28), ವಿ. ವರ್ಷಿಣಿ (65), ಪಿ.ವಿ. ರಂಜಿತ್ (83) ಹಾಗೂ ಶರಣ್ಯ ಯು. ಕೌಶಿಕ್ 92ನೇ ರ್ಯಾಂಕ್ ಪಡೆದಿದ್ದಾರೆ. ಇಂಜಿನಿಯರಿಂಗ್​ನಲ್ಲಿ ರಂಜಿತ್ ಜಿ. ಹೆಗ್ಡೆ (12ನೇ ರ್ಯಾಂಕ್), ಜಿ.ಎಸ್. ನಿಖಿಲ್ (25), ಎಸ್.ಎಲ್. ಸ್ಪೂರ್ತಿ (29), ಕೆ.ವಿ. ವಿವೇಕ್ (49), ಸೂರಜ್ (97), ಅನಂತ (98) ಮತ್ತು ಎಂ.ಪಿ. ರಾಮ್್ರಶಾಂತ್ 100ನೇ ರ್ಯಾಂಕ್ ಗಳಿಸಿದ್ದಾರೆ.

ಗುಣಮಟ್ಟದ ಶಿಕ್ಷಣ ಕಾರಣ:ಉತ್ತಮ ಸಾಧನೆ ಮಾಡಿದ ವಿದ್ಯಾರ್ಥಿಗಳನ್ನು ನಾರಾಯಣ ಸಮೂಹ ಸಂಸ್ಥೆಗಳ ವ್ಯವಸ್ಥಾಪಕ ನಿರ್ದೇಶಕಿ ಡಾ.ಪಿ. ಸಿಂಧೂರ ನಾರಾಯಣ ಸನ್ಮಾನಿಸಿದರು. ನಂತರ ಮಾತನಾಡಿದ ಅವರು, ಆಂಧ್ರಪ್ರದೇಶ, ತೆಲಂಗಾಣಗಳಲ್ಲಿ ನಾರಾಯಣ ಕಾಲೇಜು ಪ್ರಾರಂಭಿಸಿದ್ದೆವು. ಕಳೆದ 4 ವರ್ಷಗಳಿಂದ ಕರ್ನಾಟಕದಲ್ಲೂ ಶಾಲೆ- ಕಾಲೇಜು ಪ್ರಾರಂಭಿಸಿ ಶಿಕ್ಷಣ ನೀಡುತ್ತಿದ್ದೇವೆ. ಕಾಮೆಡ್-ಕೆ ಹಾಗೂ ಸಿಇಟಿಯಲ್ಲಿ ನಮ್ಮ ವಿದ್ಯಾರ್ಥಿಗಳು ಉತ್ತಮ ಅಂಕ ಗಳಿಸುತ್ತಿರುವುದಕ್ಕೆ ನಾವು ನೀಡುತ್ತಿರುವ ಗುಣಮಟ್ಟದ ಶಿಕ್ಷಣವೇ ಕಾರಣ ಎಂದರು.

ನಮ್ಮ ವಿದ್ಯಾರ್ಥಿಗಳು ಉತ್ತಮ ಅಂಕ ಗಳಿಸುವ ಮೂಲಕ ಐಐಟಿಯಂಥ ಕಾಲೇಜ್​ಗಳಲ್ಲೂ ಪ್ರವೇಶ ಪಡೆಯುತ್ತಿದ್ದಾರೆ. ವಿದ್ಯಾರ್ಥಿ ವೇತನವನ್ನು ಸಹ ಪಡೆಯುತ್ತಿದ್ದಾರೆ. ಸಾಕಷ್ಟು ಸಂಶೋಧನೆ ಕೈಗೊಂಡು ಶಿಕ್ಷಣ ಕ್ಷೇತ್ರಕ್ಕೆ ಕಾಲಿಟ್ಟಿದ್ದಕ್ಕೆ ನಮಗೆ ಈ ಬಗೆಯ ಯಶಸ್ಸು ಸಾಧ್ಯವಾಗಿದೆ. ಈ ಯಶಸ್ಸಿಗೆ ಕಾರಣರಾದ ಪಾಲಕರು ಮತ್ತು ಸಿಬ್ಬಂದಿ ವರ್ಗಕ್ಕೆ ಅಭಿನಂದನೆಗಳು.

| ಡಾ. ಪಿ. ಸಿಂಧೂರ ನಾರಾಯಣ ನಾರಾಯಣ ಸಮೂಹ ಸಂಸ್ಥೆಗಳ ವ್ಯವಸ್ಥಾಪಕ ನಿರ್ದೇಶಕಿ

ಶ್ರೀಚೈತನ್ಯ ವಿದ್ಯಾಸಂಸ್ಥೆ ಉತ್ತಮ ಸಾಧನೆ

ಬೆಂಗಳೂರು: ಶ್ರೀಚೈತನ್ಯ ವಿದ್ಯಾಸಂಸ್ಥೆಯ ವಿದ್ಯಾರ್ಥಿಗಳು ಕಾಮೆಡ್-ಕೆ ಯುಜಿ
ಇಟಿ ಮತ್ತು ಸಿಇಟಿಯಲ್ಲಿ ಅತ್ಯುನ್ನತ ಅಂಕಗಳಿಸಿದ್ದಾರೆ.

ಕಾಮೆಡ್-ಕೆಯಲ್ಲಿ ರಾಜ್ಯಕ್ಕೆ ಮೊದಲ ರ್ಯಾಂಕ್ ಬಂದಿರುವ ಅಧೋಕ್ಷಜ ಮಧ್ವರಾಜ್ ಶ್ರೀಚೈತನ್ಯ ಶಾಲೆಯ ವಿದ್ಯಾರ್ಥಿಯಾಗಿದ್ದಾನೆ. ಒಟ್ಟಾರೆ ಮೊದಲ 100 ರ್ಯಾಂಕ್​ಗಳಲ್ಲಿ 25 ವಿದ್ಯಾರ್ಥಿಗಳು ಚೈತನ್ಯ ಶಾಲೆಯವರಾಗಿದ್ದಾರೆ. ಶ್ರೀಚೈತನ್ಯ ವಿದ್ಯಾಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷ ಡಾ.ಬಿ.ಎಸ್.ರಾವ್ ಹಾಗೂ ನಿರ್ದೇಶಕಿ ಸುಷ್ಮಾ ವಿದ್ಯಾರ್ಥಿಗಳನ್ನು ಸನ್ಮಾನಿಸಿದರು.

ನಂತರ ಮಾತನಾಡಿದ ಬಿ.ಎಸ್.ರಾವ್, ಅಧೋಕ್ಷಜ ಮಧ್ವರಾಜ್ ಹಾಗೂ ಬಿ.ಫಾರ್ವದಲ್ಲಿ ರಾಜ್ಯದ ಟಾಪ್​ಟೆನ್ ರ್ಯಾಂಕ್ ಪಟ್ಟಿಯಲ್ಲಿ 10ನೇ ಸ್ಥಾನಗಳಿಸಿರುವ ಎಸ್. ಹರ್ಷಿತ್ ನಮ್ಮ ಕಾಲೇಜಿನ ವಿದ್ಯಾರ್ಥಿ. ರಾಜ್ಯದಲ್ಲಿ 100ನೇ ರ್ಯಾಂಕ್​ಗಳ ಪೈಕಿ ಇಂಜಿನಿಯರಿಂಗ್​ನಲ್ಲಿ 4, ವೈದ್ಯಕೀಯ-6, ಬಿ-ಫಾರ್ವ 7 ಮತ್ತು ಐಎಸ್​ಎಂಎಚ್ 4 ರ್ಯಾಂಕ್ ನಮ್ಮ ವಿದ್ಯಾರ್ಥಿಗಳ ಪಾಲಾಗಿದೆ. ಪ್ರತಿ ವರ್ಷ ಐಐಟಿ, ಎನ್​ಐಟಿಗೆ ನಮ್ಮ ಕಾಲೇಜಿನ ವಿದ್ಯಾರ್ಥಿಗಳು ಆಯ್ಕೆಯಾಗುತ್ತಿದ್ದಾರೆ.

ನೀಟ್ ಪರೀಕ್ಷೆಯಲ್ಲೂ ನಮ್ಮ ವಿದ್ಯಾರ್ಥಿಗಳೇ ಮೇಲುಗೈ ಸಾಧಿಸುತ್ತಾರೆ ಎಂಬ ನಂಬಿಕೆ ಇದೆ. ವಿದ್ಯಾರ್ಥಿಗಳಲ್ಲಿ ಒಂದಲ್ಲ ಒಂದು ಪ್ರತಿಭೆ ಇದೆ. ಇದನ್ನು ಸದುಪಯೋಗ ಪಡಿಸಿಕೊಳ್ಳುವುದು ವಿದ್ಯಾರ್ಥಿಗಳ ಕೈಯಲ್ಲಿಯೇ ಇದೆ. ಮುಂದೆ ಸಮಾಜದಲ್ಲಿ ಉತ್ತಮ ವ್ಯಕ್ತಿಗಳಾಗಿ ಬದುಕುವಂತೆ ಸಲಹೆ ನೀಡಿದರು. ನಿರ್ದೇಶಕಿ ಸುಷ್ಮಾ ಮಾತನಾಡಿ, ಸಿಇಟಿ, ಕಾಮೆಡ್-ಕೆ, ಜೆಇಇ ಪರೀಕ್ಷೆಯಲ್ಲಿ ಕಾಲೇಜಿನ ವಿದ್ಯಾರ್ಥಿಗಳ ಸಾಧನೆ ಗಮನಿಸಿದರೆ ಮುಂದೆ ಜೆಇಇ- ಅಡ್ವಾನ್ಸ್, ನೀಟ್, ಎಐಐಎಂಎಸ್, ಜೆಐಪಿಎಂಇಆರ್ ಪರೀಕ್ಷೆಯಲ್ಲೂ ಉತ್ತಮ ರ್ಯಾಂಕ್​ಗಳಿಸುತ್ತಾರೆ ಎಂಬ ಭರವಸೆ ಹೊಂದಿದ್ದೇವೆ ಎಂದರು.

ಕಾಲೇಜಿನಲ್ಲಿ ನೀಡಿರುವ ಮಾರ್ಗದರ್ಶನ, ಪಾಲಕರ ಸಹಕಾರದಿಂದ ಹೆಚ್ಚಿನ ಅಂಕಗಳಿಸಲು ಸಾಧ್ಯವಾಯಿತು. ನಾನು ಜೆಇಇ ಪರೀಕ್ಷೆಗೆ ಸಿದ್ಧನಾಗುತ್ತಿದ್ದರಿಂದ ಕಾಮೆಡ್-ಕೆಯಲ್ಲಿ ಹೆಚ್ಚಿನ ಅಂಕಗಳಿಸಲು ಸಾಧ್ಯವಾಗಿದೆ. ನಾನು ಪ್ರತಿನಿತ್ಯ 4-5ಗಂಟೆ ವ್ಯಾಸಂಗ ಮಾಡುತ್ತಿದ್ದೆ. ಈ ಒತ್ತಡ ನಿವಾರಿಸಿ ಕೊಳ್ಳಲು ಸಂಗೀತ, ಚಿತ್ರಕಲೆಯಲ್ಲಿ ಹೆಚ್ಚು ತೊಡಗಿಕೊಳ್ಳುತ್ತಿದ್ದೆ. ಐಐಟಿ ಫಲಿತಾಂಶಕ್ಕಾಗಿ ಕಾಯುತ್ತಿದ್ದೇನೆ.

| ಅಧೋಕ್ಷಜ ವಿ.ಮಧ್ವರಾಜ್ 1ನೇ ರ್ಯಾಂಕ್, ಕಾಮೆಡ್-ಕೆ, ಚೈತನ್ಯ ಟೆಕ್ನೋ ಶಾಲೆ,
ಟಾಪ್‌ 5 ರಾಂಕ್ ವಿಜೇತರಿಗೆ ಶುಲ್ಕ ಇಲ್ಲದೇ ಪ್ರವೇಶಾತಿ

ಉದಯವಾಣಿ, May 29,
ಬೆಂಗಳೂರು: ಸಿಇಟಿಯಲ್ಲಿ ಎಂಜಿನಿಯರಿಂಗ್‌, ವೈದ್ಯಕೀಯ ಸೇರಿದಂತೆ ಎÇÉಾ ಏಳು ವಿಭಾಗಗಳಲ್ಲೂ ಟಾಪ್‌ ಐದು ರಾಂಕ್ ಗಳಿಸಿದ ವಿದ್ಯಾರ್ಥಿಗಳಿಗೆ ಸರ್ಕಾರದಿಂದಲೇ ಶುಲ್ಕ ಭರಿಸುವ ಸೌಲಭ್ಯ ಈ ವರ್ಷವೂ ಮುಂದುವರಿಯಲಿದೆ. ಈ
ಅಭ್ಯರ್ಥಿಗಳು ಕರ್ನಾಟಕದ ಯಾವುದೇ ಕಾಲೇಜಿಗೆ ಸಿಇಟಿ ಸೀಟು ಮೂಲಕ ಪ್ರವೇಶ ಪಡೆದರೆ ಆ ವಿದ್ಯಾರ್ಥಿಗಳು ಪಾವತಿಸಬೇಕಾದ ಶುಲ್ಕವನ್ನು ಸರ್ಕಾರವೇ ತುಂಬಲಿದೆ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಶರಣ್‌ಪ್ರಕಾಶ್‌ ಪಾಟೀಲ್‌ ಹೇಳಿದ್ದಾರೆ.

2013ರಲ್ಲಿ ಟಾಪ್‌ ಐದು ವಿದ್ಯಾರ್ಥಿಗಳಿಗೆ ಸರ್ಕಾರದಿಂದಲೇ ಶುಲ್ಕ ಮರುಪಾವತಿ ಮಾಡುವ ಸೌಲಭ್ಯ ಆರಂಭಿಸಲಾಯಿತು. ಆರಂಭದಲ್ಲಿ ಎಂಜಿನಿಯರಿಂಗ್‌ ಮತ್ತು ವೈದ್ಯಕೀಯ/ದಂತ ವೈದ್ಯಕೀಯಕ್ಕೆ ಮಾತ್ರ ಇದ್ದ ಈ ಸೌಲಭ್ಯವನ್ನು 2014ರಲ್ಲಿ ಎÇÉಾ ಕೋರ್ಸುಗಳಿಗೂ ವಿಸ್ತರಿಸಲಾಯಿತು.

ಉತ್ತರಪತ್ರಿಕೆ ಪ್ರತಿ ಲಭ್ಯ
ಸಿಇಟಿ ಅಭ್ಯರ್ಥಿಗಳ ಅನುಕೂಲಕ್ಕಾಗಿ ಈ ವರ್ಷವೂ ಎÇÉಾ ಓಎಂಆರ್‌ ಉತ್ತರ ಪತ್ರಿಕೆಗಳ ಸ್ಕಾÂನ್‌ ಪ್ರತಿಗಳನ್ನು ಪ್ರಾಧಿಕಾರದ ವೆಬ್‌ಸೈಟ್‌ನಲ್ಲಿ ವಿದ್ಯಾರ್ಥಿಗಳ ಪರಿಶೀಲನೆಗಾಗಿ ಪ್ರಕಟಿಸಲಾಗಿದ್ದು, ಅಭ್ಯರ್ಥಿಗಳು ತಮ್ಮ ಓಎಂಆರ್‌ ಪ್ರತಿಗಳನ್ನು ಡೌನ್‌ಲೋಡ್‌ ಮಾಡಿಕೊಳ್ಳಬಹುದು ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ತಿಳಿಸಿದೆ.

ಫ‌ಲಿತಾಂಶ ಅಥವಾ ಅಂಕದಲ್ಲಿ ಯಾವುದೇ ವ್ಯತ್ಯಾಸಗಳಿದ್ದಲ್ಲಿ ಅದನ್ನು ಪ್ರಾಧಿಕಾರದ ಗಮನಕ್ಕೆ ತರಬಹುದು. ರ್‍ಯಾಂಕ್‌ ತಡೆಹಿಡಿಯಲ್ಪಟ್ಟಿರುವ ಅಭ್ಯರ್ಥಿಗಳು ತಮ್ಮ ಅರ್ಹತಾ ಪರೀಕ್ಷೆಯ ಅಂಕಪಟ್ಟಿಯ ಯಥಾ ಪ್ರತಿಯನ್ನು
ಕೆಇಎ ಕಚೇರಿಗೆ ಇ-ಮೇಲ್‌ keauthority&kanic.in ಮೂಲಕ ಅಥವಾ ಖು¨ªಾಗಿ ಸಲ್ಲಿಸಿ ತಮ್ಮ ರ್‍ಯಾಂಕ್‌ ಪಡೆದುಕೊಳ್ಳಬಹುದು ಎಂದು ಕೆಇಎ ಅಧಿಕಾರಿಗಳು ತಿಳಿಸಿ¨ªಾರೆ.

ಸಿಇಟಿ ಪರೀಕ್ಷೆಯಲ್ಲಿ ಆಳ್ವಾಸ್ ಗೆ ನಂ.1 . ; ಅನಂತ್‍ಗೆ ‘ ಐದು ಲಕ್ಷ’ ಪ್ರೋತ್ಸಾಹ ಧನ

ಮೂಡುಬಿದಿರೆ: ಈ ಸಾಲಿನ ಸಿಇಟಿ ಫಲಿತಾಂಶದಲ್ಲಿ ಆಳ್ವಾಸ್ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿ ಅನಂತ್ ಜಿ. ಮೆಡಿಕಲ್ ಸಹಿತ ಬಿಎಸ್ಸಿ ಕೃಷಿ, ವೆಟರ್ನರಿ ಸೈನ್ಸ್‍ನಲ್ಲಿ ಮೊದಲ ರ್ಯಾಂಕ್ ಪಡೆಯುವುದರೊಂದಿಗೆ ಗಮನಾರ್ಹ ಸಾಧನೆ ದಾಖಲಿಸಿದ್ದಾರೆ.
ಉತ್ತರ ಕನ್ನಡ ಮೂಲದವರಾಗಿದ್ದು ಪ್ರಸ್ತುತ ಬೆಂಗಳೂರಿನಲ್ಲಿರುವ ಅನಂತ್ ಭೌತಶಾಸ್ತ್ರದಲ್ಲಿ 55, ಕೆಮಿಸ್ಟ್ರಿಯಲ್ಲಿ 59, ಗಣಿತದಲ್ಲಿ 55, ಬಯಾಲಜಿ 60, ಅಂಕಗಳನ್ನು ಪಡೆದಿದ್ದು ಪಿಸಿಎಂನಲ್ಲಿ 169 ಹಾಗೂ ಪಿಸಿಬಿಯಲ್ಲಿ 174 ಅಂಕಗಳಿಸಿದ್ದಾರೆ. ಈ ರೀತಿ ಪಿಸಿಬಿಯಲ್ಲಿ ವಿದ್ಯಾರ್ಥಿಯೋರ್ವ 180ರಲ್ಲಿ 174 ಅಂಕಗಳನ್ನು ಪಡೆದಿರುವುದೂ ಅಪರೂಪದ ಸಾಧನೆ. ಈ ದಾಖಲೆಯೂ ಅನಂತ್ ಪಾಲಾಗಿದೆ.

ಎಸ್ಸೆಸ್ಸೆಲ್ಸಿಯಲ್ಲಿ ಶೇ 98 ಅಂಕಗಳು, ಪಿಯುಸಿಯಲ್ಲಿ ಶೇ 97.7 ಅಂಕಗಳನ್ನು ಪಡೆದಿದ್ದ ಅನಂತ್ ಶೈಕ್ಷಣಿಕ ಪ್ರತಿಭಾವಂತರಾಗಿ ಉಚಿತ ದತ್ತು ಶಿಕ್ಷಣ ಯೋಜನೆಯಡಿ ಆಳ್ವಾಸ್‍ನಲ್ಲಿ ಪದವಿ ಪೂರ್ವ ಶಿಕ್ಷಣ ಪಡೆದಿದ್ದಾರೆ. ಸಿಇಟಿಯಲ್ಲಿ ಮೊದಲ ರ್ಯಾಂಕ್ ಪಡೆದ ವಿದ್ಯಾರ್ಥಿಯನ್ನು ನೀಡುವ ಮೂಲಕ ಈ ಬಾರಿ ಆಳ್ವಾಸ್ ಗಮನಾರ್ಹ ಸಾಧನೆ ದಾಖಲಿಸಿದೆ. ಈ ಹಿನ್ನೆಲೆಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಸಂತಸವನ್ನು ಮಾಧ್ಯಮದವರೊಂದಿಗೆ ಹಂಚಿಕೊಂಡ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಎಂ. ಮೋಹನ ಆಳ್ವ ಈವರೆಗೆ ಸುಮಾರು 353 ಮಂದಿ ಮೆಡಿಕಲ್‍ಗೆ ಹೋಗಿದ್ದು 8 ನೇ ರ್ಯಾಂಕ್ ನಮ್ಮಲ್ಲಿ ಬಂದಿತ್ತು. ಈಗ ಅನಂತ್ ಮೊದಲ ರ್ಯಾಂಕ್ ಸಾಧನೆ ಮಾಡಿದ್ದಾರೆ. 180ರಲ್ಲಿ 174 ಅಂಕಗಳಿಸಿರುವುದೂ ಅಪರೂಪದ ದಾಖಲೆಯೊಂದಿಗೆ ಆಳ್ವಾಸ್ ಶಿಕ್ಷಣ ಸಂಸ್ಥೆಗೆ ಕೀರ್ತಿ ಗಳಿಸಿದ್ದಾನೆ.

ಸಿಇಟಿ ಸಾಧಕರು: ಸಿಇಟಿ ಸಾಧಕರ ಟಾಪ್ ಟೆನ್ ಪಟ್ಟಿಯಲ್ಲಿ ಆಳ್ವಾಸ್‍ನ ಅನಂತ್ ಹಾಗೂ ಅಭಿಲಾಶ್ ಅವಳಿ ಸಾಧಕರಾಗಿದ್ದಾರೆ. ಅನಂತ್ ಬಿಎಸ್ಸಿ ಕೃಷಿ, ವೆಟರ್ನರಿ ಸೈನ್ಸ್‍ನಲ್ಲಿ ಪ್ರಥಮ, ಬಿಫಾರ್ಮಾ, ಡಿ ಫಾರ್ಮಾದಲ್ಲಿ 6ನೇ ರ್ಯಾಂಕ್, ಐಎಸ್‍ಎಂಎಚ್. ನಲ್ಲಿ 03ನೇ ರ್ಯಾಂಕ್ ಹೀಗೆ 5 ಸ್ಥಾನಗಳಲ್ಲಿ ಕಾಣಿಸಿಕೊಂಡಿದ್ದು ಮತ್ತೋರ್ವ ವಿದ್ಯಾರ್ಥಿ ಅಭಿಲಾಷ್ ಬಿಎಸ್ಸಿ ಕೃಷಿಯಲ್ಲಿ 4ನೇ ರ್ಯಾಂಕ್ ಪಡೆದಿದ್ದಾರೆ.
ಆಳ್ವಾಸ್ ವಿದ್ಯಾರ್ಥಿಗಳ ಪೈಕಿ ಸಿ.ಇ.ಟಿಯಲ್ಲಿನ ಮೊದಲ ನೂರು ರ್ಯಾಂಕ್‍ಗಳೊಳಗೆ 56 ವಿದ್ಯಾರ್ಥಿಗಳು, 200 ರ್ಯಾಂಕಿನೊಳಗೆ 109, 300 ರ್ಯಾಂಕಿನೊಳಗೆ 160, 400 ರ್ಯಾಂಕಿನೊಳಗೆ 223, 500 ರ್ಯಾಂಕಿನೊಳಗೆ 271, 1000 ರ್ಯಾಂಕಿನೊಳಗೆ 532, 2000 ರ್ಯಾಂಕಿನೊಳಗೆ 1038, 3000 ರ್ಯಾಂಕಿನೊಳಗೆ 1479, 5000 ರ್ಯಾಂಕಿನೊಳಗೆ 2189, 1000 ರ್ಯಾಂಕಿನೊಳಗೆ 3873 ಮಂದಿ ವಿದ್ಯಾರ್ಥಿಗಳು ಸ್ಥಾನ ಪಡೆದುಕೊಂಡಿದ್ದರೆ.

ಅನಂತ್‍ನಿಗೆ ‘ ಐದು ಲಕ್ಷ’ ಪ್ರೋತ್ಸಾಹ ಧನ

ಸಿಇಟಿಯಲ್ಲಿ ಮೆಡಿಕಲ್ ಸಹಿತ ಬಿಎಸ್ಸಿ ಕೃಷಿ, ವೆಟರ್ನರಿ ಸೈನ್ಸ್‍ನಲ್ಲಿ ಮೊದಲ ರ್ಯಾಂಕ್ ಪಡೆದಿರುವ ಸಾಧಕ ಆಳ್ವಾಸ್ ವಿದ್ಯಾರ್ಥಿ ಅನಂತ್ ಜಿ.ಯವರಿಗೆ ಈ ಅಪರೂಪದ ಸಾಧನೆಗಾಗಿ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ವತಿಯಿಂದ 5 ಲಕ್ಷ ರು. ನಗದು ಪ್ರೋತ್ಸಾಹ ಧನ ನೀಡುವುದಾಗಿ ಡಾ.ಎಂ. ಮೋಹನ್ ಆಳ್ವ ತಿಳಿಸಿದರು. ಇತ್ತಿಚಿಗೆ ಪಿ.ಯು.ಸಿ ಫಲಿತಾಂಶದಲ್ಲಿ ಕಾಮರ್ಸ್‍ನಲ್ಲಿ ರಾಜ್ಯದಲ್ಲಿ 2 ನೇ ರ್ಯಾಂಕ್ ಪಡೆದಿದ್ದ ದಕ್ಷಾ ಜೈನ್ ಮತ್ತು ಆಶಿಕ್ ನಾರಾಯಣ್ ಅವರಿಗೆ ತಲಾ 1 ಲಕ್ಷ ರು. ನಗದು ಬಹುಮಾನ ನೀಡಿ, ಹಾಗೂ ಅವರಿಗೆ ಮುಂದಿನ ವಿದ್ಯಾಭ್ಯಾಸಕ್ಕೂ ಉಚಿತ ಶಿಕ್ಷಣ ನೀಡಲಾಗುವುದು ಎಂದು ಡಾ.ಆಳ್ವ ತಿಳಿಸಿದ್ದಾರೆ.

ಮೆಡಿಕಲ್‍ನಲ್ಲಿ 7 ವಿದ್ಯಾರ್ಥಿಗಳು 100 ರ್ಯಾಂಕಿನೊಳಗಿನ ಸಾಧನೆ ಮಾಡಿದ್ದಾರೆ. ಅನಂತ್ ಜಿ (1) ಅಭಿಲಾಷ್ (37) ವಿನಯಕುಮಾರ್ ತುರುಮುರಿ (50) ಸೃಷ್ಟಿ (58) ಮಧು ಬಿ,ಕೆ. (66) ನಿಹಾಲ್ ಹೆಚ್.ಜಿ (77) ಮತ್ತು ಪವನ್ ಕುಮಾರ್ (90) ಈ ಸಾಧಕರಾಗಿದ್ದಾರೆ. ಇದೇ ವೇಳೆ ಮೆಡಿಕಲ್‍ನಲ್ಲಿಯೂ 7 ಮಂದಿ ವಿದ್ಯಾರ್ಥಿಗಳು ಪವನ್ (15) ಅಭಿಲಾಷ್ (16) ಅನಂತ್ (18) ಸಿದ್ಧೇಶ್ ( 32) ಚೆನ್ನವೀರೇಶ (46) ವಿನಯ ಕುಮಾರ್ ತುರುಮುರಿ (72) ಭರತ್ (80) ಈ ಸಾಧಕರಾಗಿದ್ದಾರೆ.

ಸಿಇಟಿ ಸಾಧಕರು..
* ಅನಂತ್ ಜಿ. ಮೆಡಿಕಲ್, ಬಿಎಸ್ಸಿ ಕೃಷಿ, ವೆಟರ್ನರಿ ಸೈನ್ಸ್‍ನಲ್ಲಿ ಮೊದಲ ರ್ಯಾಂಕ್
* ಪಿಸಿಬಿಯಲ್ಲಿ 180ರಲ್ಲಿ 174 ಅಂಕಗಳನ್ನು ಪಡೆದಿರುವುದೂ ಅನಂತ್‍ಗೆ ಅಪರೂಪದ ಸಾಧನೆ.
* ಬಯೋಲಜಿಯಲ್ಲಿ ಅನಂತ್, ಗಣಿತದಲ್ಲಿ ಪವನ್ ಕುಮಾರ್ಮ ಸಿದ್ಧೇಶ್,ಸಚಿನ್ 60ರಲ್ಲಿ 60 ಅಂಕ
* ಮೊದಲ ನೂರು ರ್ಯಾಂಕ್‍ಗಳೊಳಗೆ 56 ವಿದ್ಯಾರ್ಥಿಗಳು,
* ಮೆಡಿಕಲ್, ಎಂಜಿನಿಯರಿಂಗ್‍ನಲ್ಲಿ 100 ರ್ಯಾಂಕೊಳಗೆ ತಲಾ 7 ವಿದ್ಯಾರ್ಥಿಗಳು.

ಎಸ್ಎಸ್ಎಲ್ಸಿ ಫಲಿತಾಂಶ 2016 ರ ಪೂರ್ಣಮಾಹಿತಿ.

ರಂಜನ್ ಬಿ ಎಸ್ ‘625’ ಐತಿಹಾಸಿಕ ಪೂರ್ಣಾಂಕ

image

image

image

image

ರಾಜ್ಯದ ಪರೀಕ್ಷಾ ಇತಿಹಾಸದಲ್ಲಿಯೇ ಮೊದಲ ಬಾರಿಗೆ ವಿದ್ಯಾರ್ಥಿಯೊಬ್ಬನ ಶೇ.100 ಅಂಕ ಗಳಿಕೆಯ ಸಾಧನೆಗೆ ಸೋಮವಾರ ಪ್ರಕಟಗೊಂಡ ಎಸ್​ಎಸ್​ಎಲ್​ಸಿ ಫಲಿತಾಂಶ ಸಾಕ್ಷಿಯಾಗಿದೆ. ತಲಾ 624 ಅಂಕ ಗಳಿಸಿರುವ 7 ಮಂದಿ ಎರಡನೇ ಸ್ಥಾನದಲ್ಲಿದ್ದರೆ 623 ಅಂಕ ಪಡೆದ 11 ಅಭ್ಯರ್ಥಿಗಳು ಮೂರನೇ ಸ್ಥಾನದಲ್ಲಿದ್ದಾರೆ. ಒಟ್ಟಾರೆ ಟಾಪ್-4 ಸ್ಥಾನಗಳಿಗೆ ಬರೋಬ್ಬರಿ 62 ವಿದ್ಯಾರ್ಥಿಗಳು ಪೈಪೋಟಿ ನಡೆಸುವ ಮೂಲಕ ಅಂಕ ಗಳಿಕೆಯ ಹಸಿವನ್ನು ಪ್ರದರ್ಶಿಸಿದ್ದಾರೆ. ಈ ಐತಿಹಾಸಿಕ ಫಲಿತಾಂಶ ರಾಜ್ಯದ ಶೈಕ್ಷಣಿಕ ಗುಣಮಟ್ಟ ಸುಧಾರಣೆಯ ಪರಿಣಾಮವೋ ಅಥವಾ ವಿದ್ಯಾರ್ಥಿಗಳ ಪ್ರತಿಭೆಯ ಫಲವೋ ಎಂಬ ಪ್ರಶ್ನೆಯನ್ನೂ ಹುಟ್ಟುಹಾಕಿದೆ. ಈ ಸಾಧನೆ ನಡುವೆಯೂ ಕಳೆದ ವರ್ಷಕ್ಕೆ ಹೋಲಿಸಿದಲ್ಲಿ ಒಟ್ಟಾರೆ ಫಲಿತಾಂಶ ಶೇ.81.82ರಿಂದ ಶೇ.79.16ಕ್ಕೆ ಕುಸಿದಿದೆ ಎಂಬುದು ತುಸು ನೋವಿನ ಸಂಗತಿ.

ಬೆಂಗಳೂರು: 625ಕ್ಕೆ 625… ಸೋಮವಾರ ಪ್ರಕಟವಾಗಿರುವ ಎಸ್​ಎಸ್​ಎಲ್​ಸಿ ಫಲಿತಾಂಶದಲ್ಲಿ ಭದ್ರಾವತಿಯ ವಿದ್ಯಾರ್ಥಿ ಗಳಿಸಿರುವ ಪೂರ್ಣಾಂಕ ಐತಿಹಾಸಿಕ ಸಾಧನೆಗೆ ಸಾಕ್ಷಿಯಾಗಿದೆ. ಶಿವಮೊಗ್ಗ ಜಿಲ್ಲೆಯ ಭದ್ರಾವತಿಯ ಪೂರ್ಣಪ್ರಜ್ಞಾ ವಿದ್ಯಾ ಸಮಿತಿ ಶಾಲೆಯ ರಂಜನ್ ಬಿ.ಎಸ್ ಈ ಅಪರೂಪದ ಸಾಧನೆ ಮಾಡಿದ ವಿದ್ಯಾರ್ಥಿ. ಇಂಗ್ಲಿಷ್ ಮಾಧ್ಯಮದಲ್ಲಿ ಓದಿ ಎಲ್ಲ ಆರೂ ವಿಷಯಗಳಲ್ಲಿ ಪೂರ್ಣಾಂಕ ಪಡೆದಿರುವ ರಂಜನ್ ಸಾಧನೆಗೆ ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣ ಸಚಿವ ಕಿಮ್ಮನೆ ರತ್ನಾಕರ ಅವರು ಅಭಿನಂದನೆ ಸಲ್ಲಿಸುವ ಜತೆಯಲ್ಲೇ ಆಶ್ಚರ್ಯ ವ್ಯಕ್ತಪಡಿಸಿದ್ದಾರೆ. ಸಾಮಾನ್ಯವಾಗಿ ಟಾಪರ್ಸ್​ಗಳ ಮಾಹಿತಿಯನ್ನು ಶಿಕ್ಷಣ ಸಚಿವರು ಬಹಿರಂಗಪಡಿಸುವುದಿಲ್ಲ. ಆದರೆ ಇದೇ ಮೊದಲ ಬಾರಿಗೆ ವಿದ್ಯಾರ್ಥಿಯೋರ್ವ ಎಲ್ಲ 625 ಅಂಕಗಳನ್ನು ಪಡೆದಿರುವುದರಿಂದ ವಿಶೇಷ ಪ್ರಕರಣ ಎಂದು ಪರಿಗಣಿಸಿ, ಪತ್ರಿಕಾಗೋಷ್ಠಿಯಲ್ಲಿಯೇ ಸಚಿವ ಕಿಮ್ಮನೆ ರತ್ನಾಕರ ಅವರು ಹೆಸರು ಘೊಷಿಸಿ ಅಭಿನಂದಿಸಿದರು.

ವಿದ್ಯಾರ್ಥಿ ಮಿತ್ರನಿಗೆ ಥ್ಯಾಂಕ್ಸ್

624 ಅಂಕ ಪಡೆದಿರುವ ಶಿರಸಿಯ ಮಹಿಮಾ, 623 ಅಂಕ ಪಡೆದಿರುವ ವಿಜಯಪುರದ ಕ್ಷಮಾ ಶಿವಾನಂದ ಕೆಲೂರ, 620 ಅಂಕ ಪಡೆದಿರುವ ಚಿತ್ರದುರ್ಗದ ಸಿ.ಎಸ್.ಶುಭಾಂಗ್ ಹಾಗೂ ವಿಜಯಪುರದ ಶ್ರೀಪಾದ ಬಾಲಚಂದ್ರರಾವ ತಿಟೆ ‘ವರ್ಷದಿಂದ ದಿನವೂ ತಪ್ಪದೆ ವಿಜಯವಾಣಿ ವಿದ್ಯಾರ್ಥಿ ಮಿತ್ರ ಓದಿದ್ದೇ ನಮ್ಮ ಸಾಧನೆಗೆ ಕಾರಣ ಎಂದು ‘ಮಿತ್ರ’ನನ್ನು ನೆನೆದಿದ್ದಾರೆ.

ಕನ್ನಡ ಮಾಧ್ಯಮ ಕಡಿಮೆ ಏನಲ್ಲ

ಕನ್ನಡ ಮಾಧ್ಯಮದಲ್ಲಿ ಓದಿದ ಶಿರಸಿಯ ಮಹಿಮಾ ಭಟ್(624), ಬೀದರ್​ನ ಪ್ರಮೋದ್(622), ಬೀರಪ್ಪ ತೊರ್ಣೆ(622) ಹಾಗೂ ವೈಷ್ಣೋದೇವಿ ಬಿರಾದಾರ್(622) ಉತ್ತಮ ಸಾಧನೆ ಮಾಡಿದ್ದಾರೆ. ಹಾಗೆಯೇ ಸರ್ಕಾರಿ ಆಂಗ್ಲ ಮಾಧ್ಯಮ ಪ್ರೌಢಶಾಲೆಯಲ್ಲಿ ಓದಿದ ಕುಂದಾಪುರದ ಬಸ್ರೂರು ವಿದ್ಯಾರ್ಥಿ ವೆಂಕಟೇಶ್ ಪುರಾಣಿಕ 622 ಅಂಕ ಗಳಿಸಿದ್ದಾನೆ. ಕಳೆದ ಶೈಕ್ಷಣಿಕ ವರ್ಷದಲ್ಲಿ ಶಿರಸಿಯ ವಿಶ್ವಜಿತ್ ಹೆಗಡೆ ಎಂಬುವವರು 623 ಅಂಕ ಪಡೆದು ರಾಜ್ಯಕ್ಕೆ ಮೊದಲಿಗರಾಗಿದ್ದರು.

ಟ್ಯೂಷನ್​ಗೆ ಹೋಗದೇ ಫಸ್ಟ್

ಟ್ಯೂಷನ್ಗೆ ಹೋಗಲೇಬಾರದು. ಅದು ಸಮಯ ವ್ಯರ್ಥಕ್ಕೆ ದಾರಿ. ಆದಷ್ಟೂ ಒತ್ತಡರಹಿತವಾಗಿ ಓದಲು ಯತ್ನಿಸಬೇಕು. ಪರೀಕ್ಷೆ ಸಮಯದಲ್ಲಿ ಓದುವುದಕ್ಕಿಂತಲೂ ಶೈಕ್ಷಣಿಕ ವರ್ಷದ ಆರಂಭದಿಂದ ನಿರಂತರ ಓದಿನಲ್ಲಿ ತೊಡಗಿಕೊಳ್ಳುವುದು ಉತ್ತಮ. ಫಲಿತಾಂಶ ತೃಪ್ತಿ ತಂದಿದೆ. ಭವಿಷ್ಯದಲ್ಲಿ ವೈದ್ಯನಾಗಬೇಕೆಂಬ ಆಸೆಯಿದೆ.
– ರಂಜನ್ ಫಸ್ಟ್ ರ್ಯಾಂಕ್ ವಿದ್ಯಾರ್ಥಿ

ಈ ಫಲಿತಾಂಶವೇ ಭವಿಷ್ಯದ ನಿರ್ಣಾಯಕ ಘಟ್ಟವಲ್ಲ. ಯಾವುದೋ ಅಚಾತುರ್ಯದಿಂದ ಅನುತ್ತೀರ್ಣ ಅಥವಾ ಕಡಿಮೆ ಅಂಕಗಳಿಸಿದ್ದರೂ ಪೂರಕ ಪರೀಕ್ಷೆಯಲ್ಲಿ ಇದನ್ನು ಸರಿಪಡಿಸಿಕೊಳ್ಳುವ ಅವಕಾಶವಿದೆ. ಇನ್ನೊಂದು ವರ್ಷವನ್ನು ಹಾಳು ಮಾಡದೇ ನೀವು ಕೂಡ ನಿಮ್ಮ ಸ್ನೇಹಿತರೊಂದಿಗೆ ಕಾಲೇಜು ಸೇರಲು ಅವಕಾಶವಿದೆ. ಅದ್ಯಾವುದೂ ಆಗದಿದ್ದರೂ ಪರೀಕ್ಷೆ ಎಂಬುದು ಮಾತ್ರ ಯಶಸ್ವಿ ಜೀವನದ ಗುಟ್ಟಲ್ಲ. ನಿಮ್ಮಲ್ಲಿನ ಇತರೆ ಪ್ರತಿಭೆಗಳ ಶೋಧಕ್ಕೆ ಈ ಫಲಿತಾಂಶವನ್ನು ಸವಾಲಾಗಿ ತೆಗೆದುಕೊಳ್ಳಿ.

ಸಾಧಕರಿಗೆ ಸಲಾಂ
ಭದ್ರಾವತಿಯ ರಂಜನ್ ರಾಜ್ಯಕ್ಕೆ ಪ್ರಥಮ
ಶಿವಮೊಗ್ಗ: ಮಲೆನಾಡ ವಿದ್ಯಾರ್ಥಿಗೆ ಈ ಬಾರಿಯ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ರಾಜ್ಯಕ್ಕೇ ಮೊದಲಿಗನಾದ ಸಂಭ್ರಮ. 625 ಅಂಕಗಳಿಗೆ ನಡೆದ ಪರೀಕ್ಷೆಯಲ್ಲಿ ಅಷ್ಟೂ ಅಂಕಗಳನ್ನು ಬಾಚಿಕೊಳ್ಳುವ ಮೂಲಕ ಭದ್ರಾವತಿ ಪೂರ್ಣಪ್ರಜ್ಞಾ ಪ್ರೌಢಶಾಲೆ ವಿದ್ಯಾರ್ಥಿ ಎಸ್.ರಂಜನ್ ರಾಜ್ಯವೇ ಕಣ್ಣರಳಿಸುವಂತೆ ಮಾಡಿದ್ದಾನೆ. ಮಧ್ಯಮ ವರ್ಗದಿಂದ ಬಂದ ಈತ ಟ್ಯೂಷನ್ ಹಂಗಿಲ್ಲದೆಯೇ ಈ ಸಾಧನೆ ತೋರಿದ್ದಾನೆ. ಸಂಸ್ಕೃತ, ಇಂಗ್ಲಿಷ್, ಕನ್ನಡ, ಗಣಿತ, ವಿಜ್ಞಾನ ಹಾಗೂ ಸಮಾಜ ವಿಜ್ಞಾನದಲ್ಲಿ ಪೂರ್ಣ ಅಂಕ ಗಳಿಸಿದ್ದಾನೆ. ಭದ್ರಾವತಿಯಲ್ಲಿ ವಾಸವಿರುವ ರಂಜನ್ ತಂದೆ ಬಿ.ಎಸ್.ಶಂಕರನಾರಾಯಣ ಮಂಗಳೂರು ಟೈಲ್ಸ್ ವಿತರಕರು. ತಾಯಿ ತ್ರಿವೇಣಿ ಗೃಹಿಣಿ. ಆತನ ಅಕ್ಕ ರಚನಾ ಬಿಇ ಪದವೀಧರೆ. ಅಕ್ಕನ ಶೈಕ್ಷಣಿಕ ಸಾಧನೆಯೇ ರಂಜನ್​ಗೆ ಸ್ಪೂರ್ತಿಯಾಗಿದೆ ಎನ್ನುತ್ತಾರೆ ತಂದೆ ಶಂಕರನಾರಾಯಣ. ಮಗನ ಸಾಧನೆ ತೃಪ್ತಿ ತಂದಿದೆ. ಆತನ ದೈನಂದಿನ ಚಟುವಟಿಕೆ ಗಮನಿಸಿದಾಗ ಇದನ್ನೆಲ್ಲ ನಿರೀಕ್ಷಿಸಲು ಸಾಧ್ಯವೇ ಇರಲಿಲ್ಲ. ಫಲಿತಾಂಶ ಬಂದ ಬಳಿಕ ಒಂದು ಕ್ಷಣ ಸಂತಸದಿಂದ ಕುಣಿದಾಡಿಬಿಟ್ಟೆ ಎಂದು ಖುಷಿ ಹಂಚಿಕೊಂಡಿದ್ದು ರಂಜನ್ ತಾಯಿ ತ್ರಿವೇಣಿ.

ಟ್ಯೂಷನ್ ಬೇಡ್ವೇ ಬೇಡ

‘ಯಾವುದೇ ಕಾರಣಕ್ಕೂ ಟ್ಯೂಷನ್​ಗೆ ಹೋಗಲೇಬಾರದು. ಅದು ಸಮಯ ವ್ಯರ್ಥಕ್ಕೆ ದಾರಿ. ಅದೇ ಸಮಯವನ್ನು ಮನೆಯಲ್ಲೇ ಓದಿದರೆ ಪ್ರಯೋಜನ ಹೆಚ್ಚು’ ಇದು ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ರಾಜ್ಯಕ್ಕೇ ಮೊದಲಿಗನಾಗಿ ಹೊರಹೊಮ್ಮಿದ ರಂಜನ್​ನ ಅನುಭವದ ಮಾತು. ಇಷ್ಟೇ ಅಲ್ಲ. ಒಂದೇ ದಿನ ಎಲ್ಲ ವಿಷಯಗಳನ್ನೂ ಓದಬಾರದು. ಇದರಿಂದ ಗೊಂದಲ ಸೃಷ್ಟಿಯಾಗುವ ಅಪಾಯವೇ ಹೆಚ್ಚು. ದಿನಕ್ಕೊಂದು ವಿಷಯ ಓದಿದರೆ ಹೆಚ್ಚು ಪ್ರಯೋಜನ ಎಂಬುದು ಸ್ವತಃ ರಂಜನ್ ಕಂಡುಕೊಂಡ ಸತ್ಯ. ಎಲ್​ಕೆಜಿಯಿಂದಲೇ ಪೂರ್ಣಪ್ರಜ್ಞ ಶಾಲೆಯಲ್ಲಿ ಆಂಗ್ಲ ಮಾಧ್ಯಮದಲ್ಲಿ ವ್ಯಾಸಂಗ ಮಾಡಿರುವ ರಂಜನ್ ಟ್ಯೂಷನ್​ಗೆ ಹೋಗದಿದ್ದರೂ ಪ್ರತಿವರ್ಷ ಶಾಲೆಯಲ್ಲಿ ಮೊದಲು ಬರುತ್ತಿದ್ದ. ಈತನಿಗೆ ಮೊದಲಿನಿಂದಲೂ ಥ್ರೋಬಾಲ್​ನಲ್ಲಿ ಇನ್ನಿಲ್ಲದ ಆಸಕ್ತಿ
. ಶಾಲಾ ತಂಡದಿಂದ ಜಿಲ್ಲಾ ಮಟ್ಟವನ್ನೂ ಪ್ರತಿನಿಧಿಸಿದ್ದ. ಕ್ರಿಕೆಟ್ ಮ್ಯಾಚ್ ವೀಕ್ಷಣೆಯೂ ಅಚ್ಚುಮೆಚ್ಚು ಎನ್ನುತ್ತಾರೆ ತಂದೆ ಶಂಕರನಾರಾಯಣ.

ಡಾಕ್ಟರ್ ಆಗ್ತೇನೆ…

ಎಸ್ಸೆಸ್ಸೆಲ್ಸಿಯಲ್ಲಿ ರಾಜ್ಯಕ್ಕೇ ಮೊದಲಿಗನಾಗಿ ಹೊರಹೊಮ್ಮಿರುವ ಎಸ್.ರಂಜನ್​ಗೆ ಭವಿಷ್ಯದಲ್ಲಿ ವೈದ್ಯನಾಗಬೇಕೆಂಬ ಆಸೆ. ಅದಕ್ಕಾಗಿ ಇನ್ನೂ ಕೆಲವು ವರ್ಷ ತನ್ನ ಸಾಧನೆ ಹಾದಿಯಲ್ಲಿ ಮುಂದುವರಿಯುವ ತವಕ. ಮೊದಲ ರ್ಯಾಂಕ್ ಪಡೆದ ಬಳಿಕ ವಿಜಯವಾಣಿ ಯೊಂದಿಗೆ ಮಾತನಾಡಿದ ಆತ, ಶಿವಮೊಗ್ಗ ಜಾವಳ್ಳಿಯ ಜ್ಞಾನದೀಪ ಶಿಕ್ಷಣ ಸಂಸ್ಥೆಯಲ್ಲಿ ಪಿಯು ವ್ಯಾಸಂಗ ಮಾಡಬೇಕೆಂದಿದ್ದೇನೆ. ಮುಂದೆ ವೈದ್ಯಕೀಯ ಕೋರ್ಸ್ ತೆಗೆದುಕೊಳ್ಳುತ್ತೇನೆ ಎಂದು ತಿಳಿಸಿದ್ದಾನೆ.

ಎಸ್​ಎಸ್​ಎಲ್​ಸಿಯಲ್ಲಿ ಉತ್ತಮ ಸಾಧನೆ ಮಾಡುತ್ತಾನೆಂಬ ಭರವಸೆಯೂ ಇತ್ತು. ಜನವರಿ ಯಿಂದ ಎಸ್​ಎಸ್​ಎಲ್​ಸಿ ವಿದ್ಯಾರ್ಥಿಗಳಿಗೆ ವಿಶೇಷ ಕೋಚಿಂಗ್ ನೀಡಲಾಗಿತ್ತು.
– ಅಮರೇಗೌಡ, ಪೂರ್ಣಪ್ರಜ್ಞಾ ಪ್ರೌಢಶಾಲೆ ಪ್ರಾಚಾರ್ಯ

ನಾನು ಮುಂದೆ ಐಎಎಸ್ ಅಧಿಕಾರಿಯಾಗ ಬೇಕೆಂದುಕೊಂಡಿದ್ದೇನೆ. ಪಿಯುನಲ್ಲಿ ವಿಜ್ಞಾನ ವಿಷಯ ತೆಗೆದುಕೊಂಡು ವ್ಯಾಸಂಗ ಮಾಡುತ್ತೇನೆ. ಆನಂತರ ನಾಗರೀಕ ಸೇವೆಗಳಿಗೆ ತರಬೇತಿ ಪಡೆಯುತ್ತೇನೆ. ಕನಿಷ್ಠ 6-8 ಗಂಟೆ ವ್ಯಾಸಂಗ ಮಾಡುತ್ತಿದ್ದೆ. ನನಗೆ ಡ್ಯಾನ್ಸ್ ಅಂದರೆ ತುಂಬಾ ಇಷ್ಟ.
– ಎಸ್. ಶ್ವೇತಾ, 624 ಅಂಕ, ಬೆಂಗಳೂರು

ನಿತ್ಯ ಆರು ತಾಸು ಅಭ್ಯಾಸ ಮಾಡುತ್ತಿದ್ದೆ. ಅವತ್ತಿನ ಪಾಠವನ್ನು ಅವತ್ತೇ ಓದಿ ಮುಗಿಸುತ್ತಿದ್ದೆ. ಇದರಿಂದ ಕಲಿಕೆ ಬಹಳ ಸರಳವಾಯಿತು. ಮುಂದೆ ಇಂಜಿನಿಯರ್ ಆಗಬೇಕು ಎನ್ನುವ ಇರಾದೆ ಇದೆ. ಅದಕ್ಕಾಗಿ ಬಿಇ ಬಳಿಕ ಎಂಟೆಕ್ ಮಾಡಬೇಕು ಎಂಬ ಆಸೆಯಿದೆ. ಆದರೆ, ಇದನ್ನೇ ಸಾಧಿಸಬೇಕು ಎನ್ನುವ ನಿರ್ದಿಷ್ಟ ಗುರಿ ಹೊಂದಿಲ್ಲ.
– ಎನ್.ಐಶ್ವರ್ಯ, 623 ಅಂಕ, ಮೈಸೂರು

ರಾಜ್ಯಕ್ಕೆ 2ನೇ ಸ್ಥಾನಗಳಿಸಿದ್ದೇನೆ ಎಂದು ತಿಳಿದಾಗ ಅತೀವ ಸಂತೋಷವಾಯಿತು. ನಾನು ಯಾವುದೇ ಮನೆಪಾಠಕ್ಕೆ ಹೋಗಲಿಲ್ಲ. ಮುಂದೆ ಇಂಜಿನಿಯರ್ ಆಗಬೇಕೆಂದು ಕೊಂಡಿದ್ದೇನೆ.
-ಸುಪ್ರೀತಾ, 624 ಅಂಕ, ಬೆಂಗಳೂರು

ವಿದ್ಯಾರ್ಥಿ ಮಿತ್ರಕ್ಕೆ ಹ್ಯಾಟ್ಸಾಫ್
ಪರೀಕ್ಷೆಯಲ್ಲಿ ಹೆಚ್ಚಿನ ಅಂಕ ಪಡೆಯುವಲ್ಲಿ ವಿಜಯವಾಣಿ’ ವಿದ್ಯಾರ್ಥಿಮಿತ್ರದ ಸಹಾಯ ಮರೆಯಲಾಗದು. ಪ್ರಶ್ನೋತ್ತರ, ಮಾದರಿ ಪ್ರಶ್ನೆಪತ್ರಿಕೆ, ಇಂಗ್ಲಿಷ್ ಗ್ರಾಮರ್ ತಪ್ಪದೇ ಅಧ್ಯಯನ ಮಾಡಿದೆ. ಇದರಿಂದ ಪರೀಕ್ಷೆಯಲ್ಲಿ 620 ಅಂಕ ಪಡೆಯಲು ಸಾಧ್ಯವಾಯಿತು.
– ಶ್ರೀಪಾದ ಬಾಲಚಂದ್ರರಾವ ತಿಟೆ, ವಿಜಯಪುರದ ಸತ್ಯಸಾಯಿ ಶಾಲೆ ವಿದ್ಯಾರ್ಥಿ

ವಿಜಯವಾಣಿ ವಿದ್ಯಾರ್ಥಿ ಮಿತ್ರದ ಚಂದಾದಾರಳಾಗಿದ್ದಕ್ಕೆ ಹೆಮ್ಮೆ ಎನಿಸುತ್ತಿದೆ. ಬಿಡುವಿನ ವೇಳೆ ಪ್ರಶ್ನೋತ್ತರ ಅಭ್ಯಾಸ ಮಾಡಿದ್ದರಿಂದ 623 ಅಂಕ ಪಡೆಯಲು ಸಾಧ್ಯವಾಯಿತು. ಇನ್ನು ಮುಂದೆ ವಿದ್ಯಾರ್ಥಿ ಮಿತ್ರ ಟಾಪರ್ಸ್ ಮಿತ್ರ ಆಗಲಿ.
– ಕ್ಷಮಾ ಶಿವಾನಂದ ಕೆಲೂರ, ವಿಜಯಪುರದ ಎಕ್ಸ್​ಲೆಂಟ್ ಶಾಲೆ ವಿದ್ಯಾರ್ಥಿನಿ

ಶಾಲೆ, ಮನೆ ಪಾಠ, ಶಿಕ್ಷಕರ ಹಾಗೂ ಪಾಲಕರ ಪ್ರೋತ್ಸಾಹ ಈ ಸಾಧನೆಗೆ ಕಾರಣ. ಒಂದು ವರ್ಷದಿಂದ ನಿರಂತರವಾಗಿ ‘ವಿಜಯವಾಣಿ’ ವಿದ್ಯಾರ್ಥಿಮಿತ್ರ ಓದಿದ್ದು ಇಷ್ಟು ಅಂಕ ಗಳಿಕೆಗೆ ಸಹಾಯಕವಾಗಿದೆ. ವಿದ್ಯಾರ್ಥಿಮಿತ್ರ ನನ್ನಲ್ಲಿ ಆತ್ಮವಿಶ್ವಾಸ ತುಂಬಿದೆ.
– ಸಿ.ಎಸ್. ಶುಭಾಂಗ್, 620 ಅಂಕ, ಚಿತ್ರದುರ್ಗ

ವಿಜಯವಾಣಿ ವಿದ್ಯಾರ್ಥಿಮಿತ್ರ ಪತ್ರಿಕೆಯ ಸಮರ್ಪಕ ಮಾಹಿತಿ, ಹೆತ್ತವರ ಪ್ರೋತ್ಸಾಹ, ಮಾರ್ಗದರ್ಶನ, ಶಾಲೆಯಲ್ಲಿ ನಡೆದ ಪೂರ್ವ ಸಿದ್ಧತಾ ಪರೀಕ್ಷೆ ಇವುಗಳೆಲ್ಲವೂ ಹೆಚ್ಚಿನ ಅಂಕಗಳಿಸಲು ಪ್ರೇರಣೆಯಾಗಿದೆ. ಮುಂದೆ ವಿಜ್ಞಾನ ವಿಭಾಗ ಆಯ್ಕೆ ಮಾಡಿಕೊಂಡು ಇಂಜಿನಿಯರಿಂಗ್ ಮಾಡಬೇಕೆಂಬ ಆಸೆ ಹೊಂದಿದ್ದೇನೆ.
– ಶ್ರೀಲಕ್ಷ್ಮೀ ಹೆಬ್ಬಾರ್, 619 ಅಂಕ, ಅಮೃತಭಾರತಿ ವಿದ್ಯಾಲಯ, ಹೆಬ್ರಿ

ನಾನು ಪ್ರತಿ ನಿತ್ಯ 4-5ಗಂಟೆಗೆ ವ್ಯಾಸಂಗ ಮಾಡುತ್ತಿದ್ದೆ. ಹೆಚ್ಚಿನ ಅಂಕ ಗಳಿಸಲು ಶಿಕ್ಷಕರ ಮಾರ್ಗದರ್ಶನ ಹಾಗೂ ಪಾಲಕರ ಸಹಕಾರ ಮುಖ್ಯವಾಗಿತ್ತು. ಇಷ್ಟು ಅಂಕ ಬರುತ್ತದೆ ಎಂದು ಊಹಿಸಿರಲಿಲ್ಲ. ಫಲಿತಾಂಶ ಖುಷಿ ತಂದಿದೆ. ಪಿಯುಸಿಯಲ್ಲಿ ವಿಜ್ಞಾನ ವಿಷಯ ಆಯ್ಕೆ ಮಾಡಿ ಕೊಳ್ಳುತ್ತೇನೆ. ವಾಸ್ತುಶಿಲ್ಪಿಯಾಗಬೇಕೆಂಬ ಆಸೆ ಇದೆ.
-ಕೆ.ಬಿ.ಶರ್ವಾಣಿ 619 ಅಂಕ, ಕಾರ್ವೆಲ್ ಶಾಲೆ, ಜಯನಗರ, ಬೆಂಗಳೂರು

ಸರಕಾರಿ ಶಾಲೆಯಲ್ಲಿ ಓದಿದ ವೆಂಕಟೇಶ್ ಗೆ ಸಿಎ ಮಾಡುವ ಆಸೆ.
ಕುಂದಾಪುರ: ಬಸ್ರೂರು ಸರ್ಕಾರಿ ಪ್ರೌಢಶಾಲೆ ವಿದ್ಯಾರ್ಥಿ ವೆಂಕಟೇಶ್ ಪುರಾಣಿಕ್​ಗೆ ಎಸೆಸ್ಸೆಲ್ಸಿಯಲ್ಲಿ 622 ಅಂಕ ಲಭಿಸಿದ್ದು, ಮುಂದೆ ಸಿಎ ಮಾಡುವ ಆಸೆ ವ್ಯಕ್ತಪಡಿಸಿದ್ದಾನೆ. ವೆಂಕಟೇಶ್ ತಂದೆ ಸುಬ್ರಹ್ಮಣ್ಯ ಪುರಾಣಿಕ್, ತಾಯಿ ಅನ್ನಪೂರ್ಣಾ. ನನ್ನ ನಿರೀಕ್ಷೆ 620 ಅಂಕದ ಕಡೆಗಿತ್ತು. ಆದರೆ ನಿರೀಕ್ಷೆ ಮೀರಿ 2ಅಂಕ ಹೆಚ್ಚು ಸಿಕ್ಕಿರುವುದು ಮತ್ತಷ್ಟು ಖುಷಿ ಕೊಟ್ಟಿದೆ ಎಂದಿದ್ದಾನೆ. ಓದಿಗೆ ಆಸಕ್ತಿ ಮುಖ್ಯ. ಸರ್ಕಾರಿ ಶಾಲೆಯಲ್ಲಿ ಕಲಿತವರೂ ಹೆಚ್ಚು ಅಂಕ ಗಳಿಸಲು ಸಾಧ್ಯ ಎನ್ನುತ್ತಾನೆ ವೆಂಕಟೇಶ್.

ಗಣೇಶಪ್ರಸಾದ್ ಎನ್. ಭಟ್ 616 ಅಂಕ, ಶ್ರೀ ಶಾರದಾಂಬ ಆಂಗ್ಲ ಮಾಧ್ಯಮ ಪ್ರೌಢಶಾಲೆ, ಭೈರುಂಬೆ, ಶಿರಸಿ

ಗಣೇಶಪ್ರಸಾದ್ ತಂದೆ ನಾಗರಾಜ ವೆಂಕಟ್ರಮಣ ಭಟ್ಟ, ಸ್ವರ್ಣವಲ್ಲಿ ಸಂಸ್ಕೃತ ಕಾಲೇಜಿನಲ್ಲಿ ಯಜುರ್ವೆದ ಅಧ್ಯಾಪಕರು, ತಾಯಿ ನಾಗರತ್ನ ಗೃಹಿಣಿ. ಮುಂದೆ ಕಂಪ್ಯೂಟರ್ ಸೈನ್ಸ್ ವಿಭಾಗದಲ್ಲಿ ಅಧ್ಯಯನ ಮಾಡುವ ಆಸೆ ವ್ಯಕ್ತಪಡಿಸಿದ್ದಾನೆ. ವಿಜಯವಾಣಿ ವಿದ್ಯಾರ್ಥಿಮಿತ್ರದ ಓದು ಹೆಚ್ಚು ಅಂಕ ಗಳಿಸಲು ನೆರವಾಯಿತು ಎನ್ನುತ್ತಾನೆ ಗಣೇಶಪ್ರಸಾದ್.

ಕನ್ನಡ ಮಾಧ್ಯಮ ಮಹಿಮಾ ಪ್ರಥಮ
ಶಿರಸಿ: ತಾಲೂಕಿನ ಹುಲೇಕಲ್ ಶ್ರೀದೇವಿ ಶಿಕ್ಷಣ ಸಂಸ್ಥೆ ವಿದ್ಯಾರ್ಥಿನಿ ಮಹಿಮಾ ಮಂಜುನಾಥ ಭಟ್ 624 ಅಂಕ ಪಡೆದು ರಾಜ್ಯಕ್ಕೆ ಆರನೇ ಸ್ಥಾನ ಮತ್ತು ಕನ್ನಡ ಮಾಧ್ಯಮದಲ್ಲಿ ಮೊದಲ ಸ್ಥಾನ ಪಡೆದಿದ್ದಾಳೆ.
image

ಬೆಣಗಾಂವ್​ನ ಮಂಜುನಾಥ ಭಟ್ ಮತ್ತು ಮಧುರಾ ಭಟ್ ಅವರ ಪುತ್ರಿಯಾದ ಮಹಿಮಾ, ಬಾಲ್ಯದಿಂದಲೇ ತನ್ನ ಅಜ್ಜ ಮಂಜುನಾಥ ಹೆಗಡೆ ಅವರ ಮನೆ(ಹುಲೇಕಲ್ ಸಮೀಪದ ಸೋಣಗೆಜಡ್ಡಿ)ಯಲ್ಲಿ ವಾಸವಾಗಿದ್ದಾಳೆ. ಸಂಸ್ಕೃತದಲ್ಲಿ 125, ಕನ್ನಡದಲ್ಲಿ 100, ಇಂಗ್ಲಿಷ್​ನಲ್ಲಿ 99, ಗಣಿತ 100, ವಿಜ್ಞಾನ 100 ಮತ್ತು ಸಮಾಜ ವಿಜ್ಞಾನದಲ್ಲಿ 100 ಅಂಕಗಳನ್ನು ಈಕೆ ಪಡೆದಿದ್ದಾಳೆ.

ಉತ್ತಮ ಕ್ರೀಡಾಪಟು: ಬಾಲ್ಯದಿಂದಲೇ ಮ
ಹಿಮಾಳಿಗೆ ಕ್ರೀಡೆಯ ಬಗೆಗೆ ಆಸಕ್ತಿ ಇತ್ತು. ಎತ್ತರ ಜಿಗಿತದಲ್ಲಿ ಕಳೆದ ವರ್ಷ ರಾಜ್ಯಮಟ್ಟದ ಸ್ಪರ್ಧೆಗಳಲ್ಲಿ ಪಾಲ್ಗೊಂಡಿದ್ದಳು. ವಿಜಯವಾಣಿ ವಿದ್ಯಾರ್ಥಿಮಿತ್ರ ಪತ್ರಿಕೆಯನ್ನು ಪ್ರತಿ ದಿನ ತಪ್ಪದೇ ಓದುವುದು ಮತ್ತು ಸತತ ಪರಿಶ್ರಮ ಈಕೆಯ ಯಶಸ್ಸಿನ ಗುಟ್ಟಾಗಿದೆ.

ಪ್ರತಿದಿನ ಬೆಳಗ್ಗೆ 5 ಗಂಟೆಯಿಂದ 7ರವರೆಗೆ ಓದುತ್ತಿದ್ದೆ. ಅಂದು ಕಲಿಸಿದ ವಿಷಯಗಳನ್ನು ಅಂದೇ ಮನನ ಮಾಡುತ್ತಿದ್ದೆ. ನಾನು ಯಾವುದೇ ಟ್ಯೂಷನ್ ಪಡೆದಿಲ್ಲ. ವಿಜಯವಾಣಿ ವಿದ್ಯಾರ್ಥಿಮಿತ್ರ ಓದುತ್ತಿದ್ದು ದರಿಂದ ಪ್ರಮುಖ ಸಂಗತಿಗಳು, ವಿಷಯಗಳು ನನಗೆ ಸಿಗುತ್ತಿದ್ದವು. ಕಲಿತ ಸಂಗತಿಗಳ ಮನನ ಮತ್ತು ವಾರ್ಷಿಕ ಪರೀಕ್ಷೆಯನ್ನು ಹೇಗೆ ಎದುರಿಸಬೇಕು ಎಂಬುದನ್ನು ವಿದ್ಯಾರ್ಥಿಮಿತ್ರ ನನಗೆ ಕಲಿಸಿಕೊಟ್ಟಿದೆ.
– ಮಹಿಮಾ ಭಟ್, ವಿದ್ಯಾರ್ಥಿನಿ

ಟೇಬಲ್ ಟೆನಿಸ್ ತಾರೆ ಸಾಧನೆ
ಬೆಂಗಳೂರು: ಅಂತಾರಾಷ್ಟ್ರೀಯ ಟೇಬಲ್ ಟೆನಿಸ್ ಆಟಗಾರ್ತಿ ಅರ್ಚನಾ ಕಾಮತ್ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಶೇ.98.7 ಅಂಕ (617ಅಂಕ) ಗಳಿಸಿದ್ದಾರೆ. ಸದಾಶಿವನಗರದ ಪೂರ್ಣಪ್ರಜ್ಞಾ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿನಿಯಾದ ಅರ್ಚನಾ, ಸಂಸ್ಕೃತ(125) ಮತ್ತು ಕನ್ನಡದಲ್ಲಿ (100) ಪೂರ್ಣ ಅಂಕ ಗಳಿಸಿದ್ದಾರೆ. ಡಾ. ಗಿರೀಶ್ ಕಾಮತ್ ಹಾಗೂ ಅನುರಾಧಾ ಕಾಮತ್ ಅವರ ಪುತ್ರಿಯಾಗಿರುವ ಅರ್ಚನಾ ಬಿಡುವಿಲ್ಲದೆ ಅಂತಾರಾಷ್ಟ್ರೀಯ ಟೇಬಲ್ ಟೆನಿಸ್ ಟೂರ್ನಿಗಳಲ್ಲಿ ಸ್ಪರ್ಧಿಸುತ್ತಿದ್ದರೂ ಪರೀಕ್ಷೆಯಲ್ಲಿ ಗರಿಷ್ಠ ಅಂಕ ಸಂಪಾದಿಸಿರುವುದು ಗಮನಾರ್ಹ. ಅಂತಾರಾಷ್ಟ್ರೀಯ ಟೂರ್ನಿಗಳಲ್ಲಿ ಸ್ಪರ್ಧಿಸಿ ಪ್ರಶಸ್ತಿ ಗೆದ್ದಿರುವ ಅರ್ಚನಾ ಇತ್ತೀಚೆಗೆ 2014-15ನೇ ಸಾಲಿನ ರಾಜ್ಯದ ಪ್ರತಿಷ್ಠಿತ ಏಕಲವ್ಯ ಪ್ರಶಸ್ತಿಗೂ ಭಾಜನರಾಗಿದ್ದರು. ಕಳೆದ ಸ್ಪ್ಯಾನಿಷ್ ಜೂನಿಯರ್ ಓಪನ್ ಟಿಟಿ ಟೂರ್ನಿಯಲ್ಲಿ ಕಂಚಿನ ಪದಕ ಜಯಿಸಿದ್ದ ಅರ್ಚನಾ, ಒಲಿಂಪಿಕ್ಸ್ ಗೋಲ್ಡ್ ಕ್ವೆಸ್ಟ್(ಒಜಿಕ್ಯೂ) ಯೋಜನೆಯಿಂದಲೂ ಬೆಂಬಲ ಪಡೆಯುತ್ತಿದ್ದಾರೆ.

5ನೇ ಸ್ಥಾನದಿಂದ ನಂ.1 ಪಟ್ಟಕ್ಕೇರಿದ ಗುಟ್ಟು
ಬೆಂಗಳೂರು: ಶಿಕ್ಷಕರಿಗೆ ಕಾರ್ಯಾಗಾರ, ಪ್ರತಿ ತಿಂಗಳು 60 ಅಂಕದ ಪ್ರಶ್ನೋತ್ತರ ಮಾಲಿಕೆ ಒದಗಿಸಿ ಪರೀಕ್ಷೆ, ಕಲಿಕೆಯಲ್ಲಿ ಹಿಂದುಳಿದವರಿಗೆ ವಿಶೇಷ ತರಬೇತಿ…. ಇವೆಲ್ಲ ಪ್ರಯತ್ನಗಳಿಂದ ಬೆಂಗಳೂರು ಗ್ರಾಮಾಂತರ ಜಿಲ್ಲೆ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಪ್ರಥಮ ಸ್ಥಾನ ಪಡೆಯುವುದು ಸಾಧ್ಯವಾಯಿತು ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಜಿಲ್ಲಾ ಉಪ ನಿರ್ದೇಶಕ ಅಬ್ದುಲ್ ವಾಜಿದ್ ವಿಜಯವಾಣಿಗೆ ತಿಳಿಸಿದ್ದಾರೆ. ಸರ್ಕಾರಿ ಶಾಲೆಯ ಎಲ್ಲ ವಿದ್ಯಾರ್ಥಿಗಳಿಗೆ ಪ್ರತಿ ವಿಷಯಕ್ಕೆ ಸಂಬಂಧಿಸಿದಂತೆ 60 ಅಂಕದ ಪ್ರಶ್ನೆಗಳನ್ನು ಸಿದ್ಧಪಡಿಸಿ ಅವುಗಳಿಗೆ ಸರಳ ವಿಧಾನದಲ್ಲಿ ಉತ್ತರ ತಯಾರಿಸಿ ವಿತರಣೆ ಮಾಡಲಾಗಿತ್ತು. ಪ್ರತಿ ತಿಂಗಳು ನಡೆಸುವ ಪರೀಕ್ಷೆಯಲ್ಲಿ ಕಡಿಮೆ ಅಂಕಗಳಿಸಿದ ವಿದ್ಯಾರ್ಥಿಗಳ ಮೇಲೆ ವಿಶೇಷ ಗಮನ ನೀಡಿ ಹೆಚ್ಚು ಅಂಕಗಳಿಸುವಂತೆ ತರಬೇತಿ ಮಾಡುವಂತೆ ಸೂಚಿಸಲಾಗಿತ್ತು. ಇದರಿಂದಾಗಿ ಉತ್ತಮ ಸಾಧನೆ ಮಾಡಲು ಸಾಧ್ಯವಾಯಿತು ಎಂದು ಹೇಳಿದರು. ಕಳೆದ ಬಾರಿ 5ನೇ ಸ್ಥಾನ ಪಡೆದಿದ್ದ ಬೆಂ.ಗ್ರಾಮಾಂತರ ಜಿಲ್ಲೆ ಈ ಬಾರಿ ಶೇ.89.63 ಫಲಿತಾಂಶ ಪಡೆದಿದೆ.

ಜೂ.20ರಿಂದ ಪೂರಕ ಪರೀಕ್ಷೆ

ಎಸ್ಸೆಸ್ಸೆಲ್ಸಿ ವಾರ್ಷಿಕ ಪರೀಕ್ಷೆಯಲ್ಲಿ ಅನುತ್ತೀರ್ಣರಾದ ವಿದ್ಯಾರ್ಥಿಗಳಿಗೆ ನಡೆಸುವ ಪೂರಕ ಪರೀಕ್ಷೆಯ ವೇಳಾಪಟ್ಟಿ ಫಲಿತಾಂಶ ಪ್ರಕಟಗೊಳ್ಳುವ ಮೊದಲೇ ಸೋರಿಕೆಯಾದ ಕಾರಣ ಕರ್ನಾಟಕ ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿ ಪರಿಷ್ಕೃತ ವೇಳಾಪಟ್ಟಿ ಸಿದ್ಧಪಡಿಸಿದೆ. ಆ ಪ್ರಕಾರವಾಗಿ ಜೂ.20ರಿಂದ ಜೂ.27ರವರೆಗೆ ತನಕ ಪೂರಕ ಪರೀಕ್ಷೆ ನಡೆಯಲಿದೆ. ಪೂರಕ ಪರೀಕ್ಷೆಗೆ ನೋಂದಾಯಿಸಿಕೊಳ್ಳಲು ಮೇ 25 ಕೊನೆಯ ದಿನವಾಗಿದ್ದು, ಸ್ವೀಕರಿಸಿದ ಅರ್ಜಿ ಹಾಗೂ ಶುಲ್ಕ ಸಮೇತವಾಗಿ ಎಲ್ಲ ದಾಖಲೆಯನ್ನು ಮೇ 28ರೊಳಗೆ ಮಂಡಳಿಗೆ ಸಲ್ಲಿಸಲು ಮುಖ್ಯಶಿಕ್ಷಕರಿಗೆ ಸೂಚಿಸಲಾಗಿದೆ. ಅನುತ್ತೀರ್ಣರಾದ ವಿದ್ಯಾರ್ಥಿಗಳು ಪೂರಕ ಪರೀಕ್ಷೆಗೆ ಒಂದು ವಿಷಯಕ್ಕೆ 240 ರೂ., ಎರಡು ವಿಷಯಕ್ಕೆ 290 ರೂ., ಹಾಗೂ ಮೂರು ಅಥವಾ ಅದಕ್ಕಿಂತ ಹೆಚ್ಚು ವಿಷಯಕ್ಕೆ 390 ರೂ.ಗಳನ್ನು ಪಾವತಿಸಬೇಕು.

ಮರು ಎಣಿಕೆಗೆ ಮೇ 22ರೊಳಗೆ ಅರ್ಜಿ

ಎಸ್ಸೆಸ್ಸೆಲ್ಸಿಯಲ್ಲಿ ಉತ್ತೀರ್ಣರಾದ ಹಾಗೂ ಅನುತ್ತೀರ್ಣರಾದ ವಿದ್ಯಾರ್ಥಿಗಳು ಎಲ್ಲ ವಿಷಯದ ಉತ್ತರ ಪತ್ರಿಕೆಯ ಮರು ಎಣಿಕೆ ಹಾಗೂ ಛಾಯಾ ಪ್ರತಿಗಾಗಿ ಮೇ 22ರೊಳಗೆ ಅರ್ಜಿ ಸಲ್ಲಿಸಬೇಕು. ಛಾಯಾ ಪ್ರತಿ ಪಡೆದ ವಿದ್ಯಾರ್ಥಿಗಳು ಉತ್ತರ ಪತ್ರಿಕೆಗಳ ಮರು ಮೌಲ್ಯಮಾಪನಕ್ಕೆ ನಿಗದಿತ ಶುಲ್ಕದೊಂದಿಗೆ ಛಾಯಾ ಪ್ರತಿ ಪಡೆದ ಏಳು ದಿನದೊಳಗಾಗಿ ಮಂಡಳಿಗೆ ಅರ್ಜಿ ಸಲ್ಲಿಸಬೇಕು. ಒಂದು ವಿಷಯದ ಮರು ಎಣಿಕೆಗೆ 150 ರೂ., ಒಂದು ವಿಷಯದ ಛಾಯ ಪ್ರತಿಗೆ 300 ರೂ. ಹಾಗೂ ಒಂದು ವಿಷಯದ ಮರು ಮೌಲ್ಯಮಾಪನಕ್ಕೆ 700 ರೂ. ಶುಲ್ಕ ನಿಗದಿ ಪಡಿಸಲಾಗಿದೆ. ಶುಲ್ಕವನ್ನು ಬೆಂಗಳೂರು-1 ಹಾಗೂ ಕರ್ನಾಟಕ -1 ಕೇಂದ್ರದಲ್ಲಿ ಪಾವತಿಸಲು ಅವಕಾಶ ಕಲ್ಪಸಲಾಗಿದೆ.

ದಿನಕ್ಕೆ 7ರಿಂದ 8 ತಾಸು ಅಧ್ಯಯನ ಮಾಡುತ್ತಿದ್ದೆ. ಇದಕ್ಕೆ ಅಮ್ಮನ ಪ್ರೋತ್ಸಾಹವಿತ್ತು. ಶಿಕ್ಷಕ ವೃಂದದ ಮಾರ್ಗದರ್ಶನದಿಂದ ಅಭ್ಯಾಸ ನಡೆಸುತ್ತಿದ್ದೆ. ಮುಂದೆ ವೈದ್ಯಕೀಯ ಕ್ಷೇತ್ರದಲ್ಲಿ ಉನ್ನತ ಸಾಧನೆ ಮಾಡಿ ವೈದ್ಯಕೀಯ ನಿರ್ದೇಶಕನಾಗಬೇಕು ಅಥವಾ ಐಎಎಸ್ ಅಧಿಕಾರಿ ಆಗಬೇಕು ಎಂಬ ಆಸೆಯಿದೆ. ಅದಕ್ಕಾಗಿ ಪಿಯುನಲ್ಲಿ ಪಿಸಿಎಂಬಿ ಆಯ್ಕೆ ಮಾಡಲಿದ್ದೇನೆ.
– ಸುಶ್ರುತ್ ವಿ.ಕೆ., 624 ಅಂಕ, ಲಾೖಲ ಕಕ್ಕೇನ, ಬೆಳ್ತಂಗಡಿ ತಾಲೂಕು

ಗಣಿತ ಮತ್ತು ವಿಜ್ಞಾನ ವಿಷಯಗಳಿಗೆ ಟ್ಯೂಷನ್​ಗೆ ಹೋಗುತ್ತಿದ್ದೆ. ಇನ್ನುಳಿದ ವಿಷಯಗಳಲ್ಲಿ ಉತ್ತಮ ಅಂಕ ಗಳಿಸಲು ಶಾಲೆಯ ಪಾಠ ಹಾಗೂ ವಿಶೇಷ ತರಗತಿಗಳು ನೆರವಾದವು. ಪಾಲಕರು ಓದಿನ ಬಗ್ಗೆ ಒತ್ತಡ ಹಾಕಿರಲಿಲ್ಲ. ಅಂದಿನ ಪಾಠವನ್ನು ಅಂದೇ ಓದುತ್ತಿದ್ದೆ. ಈ ಸಾಧನೆಗೆ ನನ್ನ ಅಕ್ಕ ಎಸ್.ಐಶ್ವರ್ಯ ಸ್ಪೂರ್ತಿ. ಪಿಯುನಲ್ಲಿ ಪಿಸಿಎಂಬಿ ಓದಿ ಡಾಕ್ಟರ್ ಆಗಬೇಕೆಂದಿದ್ದೇನೆ.
– ಎನ್.ಎಸ್.ಈಶೂ, 624 ಅಂಕ, ಮೈಸೂರು

ಎಲ್ಲ ವಿಷಯಗಳಲ್ಲೂ ನೂರಕ್ಕೆ ನೂರು ಅಂಕ ಪಡೆಯಬೇಕೆಂದು ಶ್ರಮವಹಿಸಿ ಓದಿದ್ದೆ. ಅದಕ್ಕೆ ತಕ್ಕಂತೆ ಪರೀಕ್ಷೆಯನ್ನೂ ಬರೆದೆ. ಆದರೆ ಕನ್ನಡ ಪರೀಕ್ಷೆಯ ‘ಪತ್ರ ಬರವಣಿಗೆ’ಯಲ್ಲಿ ದಿನಾಂಕ ಉಲ್ಲೇಖಿಸಿರಲಿಲ್ಲ. ಆದ್ದರಿಂದಾಗಿ ಒಂದು ಅಂಕ
ಕಡಿಮೆಯಾಗುತ್ತದೆ ಎಂದು ಪ್ರಾಂಶುಪಾಲರು ಹಾಗೂ ಪಾಲಕರಿಗೆ ತಿಳಿಸಿದ್ದೆ. ನಾನು ಅಂದುಕೊಂಡಂತೆಯೇ ಆಗಿದೆ. ಆದರೂ ರಾಜ್ಯದಲ್ಲೇ ದ್ವಿತೀಯ ಸ್ಥಾನ ಗಳಿಸಿರುವುದು ಸಂತಸ ನೀಡಿದೆ. ಮುಂದೆ ವಿಜ್ಞಾನ ಓದಿ ನರವಿಜ್ಞಾನ ವೈದ್ಯನಾಗಬೇಕೆಂದುಕೊಂಡಿದ್ದೇನೆ.
– ಅಕ್ಷಯ್ ರಾವ್ 624 ಅಂಕ, ಮೈಸೂರು

ನಿತ್ಯವೂ ಸಂಜೆ 6 ರಿಂದ 10 ಗಂಟೆವರೆಗೂ ಓದಿ ಕೊಳ್ಳುತ್ತಿದ್ದೆ. ನನ್ನ ತಂದೆ, ತಾಯಿ ನಾನು ಓದುವ ಸಮಯದಲ್ಲಿ ಸ್ವಲ್ಪವೂ ಡಿಸ್ಟರ್ಬ್ ಆಗದಂತೆ ನೋಡಿಕೊಳ್ಳುತ್ತಿದ್ದರು. ನಾನು ಕನ್ನಡದಲ್ಲಿಯೂ 100 ಅಂಕ ಬರುವ ನಿರೀಕ್ಷೆಯಿಟ್ಟು ಕೊಂಡಿದ್ದೆ. ಆದರೆ 1 ಅಂಕ ಕಡಿಮೆಯಾಗಿದೆ. ಮುಂದೆ ಪಿಸಿಎಂಬಿ ವ್ಯಾಸಂಗ ಮಾಡಿ ಭವಿಷ್ಯದಲ್ಲಿ ಉತ್ತಮ ಇಂಜಿನಿಯರ್ ಆಗಬೇಕು ಎನ್ನುವ ಆಸೆಯಿಟ್ಟುಕೊಂಡಿದ್ದೇನೆ.
-ಜೆ.ಎಸ್.ಸ್ವಾತಿ 624 ಅಂಕ, ಹಾಸನ

ಪರೀಕ್ಷಾ ಶುಲ್ಕ ಹೆಚ್ಚಳ ಶಾಕ್

image

ಬೆಂಗಳೂರು: ಎಸ್ಸೆಸ್ಸೆಲ್ಸಿ ಪರೀಕ್ಷಾ ಮತ್ತು ಪ್ರವೇಶ ಶುಲ್ಕವನ್ನು ಶೇ.30 ಏರಿಕೆ ಮಾಡಿರುವ ರಾಜ್ಯ ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿ ವಿದ್ಯಾರ್ಥಿಗಳಿಗೆ ಶಾಕ್ ನೀಡಿದೆ! ಎಸ್ಸೆಸ್ಸೆಲ್ಸಿ ಪರೀಕ್ಷಾ ಕಾರ್ಯದಲ್ಲಿ ತೊಡಗುವ ಸಿಬ್ಬಂದಿ ಸಂಭಾವನೆಯನ್ನು ಶೇ.30 ಏರಿಕೆ ಮಾಡಿರುವ ಇಲಾಖೆ, ವಿದ್ಯಾರ್ಥಿಗಳಿಗೆ ಹೆಚ್ಚುವರಿ ಶುಲ್ಕ ವಿಧಿಸುವ ಮೂಲಕ ಬರೆ ಎಳೆದಿದ್ದು, ವಿದ್ಯಾರ್ಥಿಗಳು ಈ ವರ್ಷದಿಂದಲೇ ಹೆಚ್ಚುವರಿ ಶುಲ್ಕದ ಹೊರೆ ಹೊರಬೇಕಿದೆ. ಪ್ರತಿ ಮೂರು ವರ್ಷಕ್ಕೊಮ್ಮೆ ಶುಲ್ಕ ಹೆಚ್ಚಳ ಮಾಡುವ ಪರಿಪಾಠವಿದ್ದು, ಕಳೆದ ಬಾರಿ ಸೂಕ್ತ ರೀತಿಯಲ್ಲಿ ಹೆಚ್ಚಳ ಮಾಡಿರಲಿಲ್ಲ. ಈ ಕಾರಣದಿಂದ ಶುಲ್ಕ ಹೆಚ್ಚಳಕ್ಕೆ ಸರ್ಕಾರ ಅಧೀನ ಕಾರ್ಯದರ್ಶಿ ಆದೇಶ ಹೊರಡಿಸಿದ್ದಾರೆ. ರಾಜ್ಯ ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿಯ 178ನೇ ಸರ್ವ ಸದಸ್ಯರ ಸಭೆಯಲ್ಲಿ ಶುಲ್ಕ ಹೆಚ್ಚಳ ತಿರ್ವನ ತೆಗೆದುಕೊಳ್ಳಲಾಗಿದ್ದು, ಸರ್ಕಾರದಿಂದ ಅನುಮತಿಯನ್ನೂ ಪಡೆಯಲಾಗಿದೆ. ಸಂಭಾವನೆ ಹೆಚ್ಚಿಸುವಂತೆ 2015ರ ಆಗಸ್ಟ್​ನಲ್ಲೇ ಮಂಡಳಿ ಪ್ರಸ್ತಾವನೆ ಸಲ್ಲಿಸಿತ್ತು. ಆದರೆ, ಶಿಕ್ಷಣ ಇಲಾಖೆ ಈ ವಿಚಾರದ ಬಗ್ಗೆ ಮತ್ತೊಮ್ಮೆ ಚರ್ಚೆ ಮಾಡಿ ಇದೀಗ ಅನುಮತಿ ನೀಡಿದೆ. ಈ ನೂತನ ಪರಿಷ್ಕೃತ ಸಂಭಾವನೆ ಏಪ್ರಿಲ್​ನಿಂದಲೇ ಜಾರಿಗೆ ಬರಲಿದೆ.

ತಾಯಿ ಸಾವಿನ ಶೋಕದಲ್ಲೂ ಸಾಧನೆ

ಕೆ.ಎಂ.ದೊಡ್ಡಿ(ಮಂಡ್ಯ): ತಾಯಿ ಮೃತಪಟ್ಟ ನೋವನ್ನು ನುಂಗಿಕೊಂಡು ಪರೀಕ್ಷೆಗೆ ಹಾಜರಾಗಿದ್ದ ಬೊಪ್ಪಸಮುದ್ರದ ಬಿ.ಪಿ.ರಾಧಿಕಾ 466 ಅಂಕ ಗಳಿಸಿ ಶೋಕದ ನಡುವೆಯೂ ಸಾಧನೆ ಮಾಡಿದ್ದಾಳೆ. ರಾಧಿಕಾ ತಾಯಿ ವಸಂತಮ್ಮ ಅನಾರೋಗ್ಯದಿಂದ ಬೇಸತ್ತು ಏ.10 ರಾತ್ರಿ ಬಾವಿಗೆ ಬಿದ್ದು ಆತ್ಮಹತ್ಯೆಗೆ ಶರಣಾಗಿದ್ದರು. 11ರ ಬೆಳಗ್ಗೆ ಅವರ ಸಾವಿನ ಸುದ್ದಿ ಗೊತ್ತಾಯಿತು. ತಾಯಿಯ ಶವದ ಮುಂದೆ ರೋದಿಸುತ್ತ ಕುಳಿತಿದ್ದ ಆಕೆಯನ್ನು ಫೋಷಕರು ಮನವೊಲಿಸಿ ಪರೀಕ್ಷೆ ಬರೆಸಿದ್ದರು. ಬೇರೆಲ್ಲ ಪತ್ರಿಕೆಗಳಿಗಿಂತ ಶೋಕದ ನಡುವೆ ಬರೆದ ಸಮಾಜ ವಿಜ್ಞಾನ ಪರೀಕ್ಷೆಯಲ್ಲೇ ಅಧಿಕ ಅಂದರೆ 94 ಅಂಕ ಪಡೆದಿರುವ ರಾಧಿಕಾ, ಕನ್ನಡದಲ್ಲಿ 93, ಇಂಗ್ಲಿಷ್​ನಲ್ಲಿ 90, ಹಿಂದಿ 91, ಗಣಿತ 46, ವಿಜ್ಞಾನದಲ್ಲಿ 52 ಅಂಕ ಗಳಿಸಿದ್ದಾಳೆ. ಸದ್ಯ ಅಜ್ಜಿ ಮನೆಯಲ್ಲಿರುವ ಆಕೆ ಉನ್ನತ ವಿದ್ಯಾಭ್ಯಾಸ ಮಾಡುವ ತವಕದಲ್ಲಿದ್ದು, ಸರ್ಕಾರದ ನೆರವಿನ ನಿರೀಕ್ಷೆಯಲ್ಲಿದ್ದಾಳೆ.

ಪಿಯು ಪ್ರವೇಶ ವೇಳಾಪಟ್ಟಿ ಪ್ರಕಟ

ಎಸ್ಸೆಸ್ಸೆಲ್ಸಿ ಫಲಿತಾಂಶ ಹೊರಬೀಳುತ್ತಿದ್ದಂತೆಯೇ ಪ್ರಥಮ ಪಿಯು ಪ್ರವೇಶಕ್ಕೆ ಪಿಯು ಇಲಾಖೆ ವೇಳಾಪಟ್ಟಿ ಹೊರಡಿಸಿದೆ. ಮಂಗಳವಾರದಿಂದಲೇ ಕಾಲೇಜು ಗಳಲ್ಲಿ ಅರ್ಜಿಗಳ ವಿತರಣೆ ಪ್ರಕ್ರಿಯೆ ಪ್ರಾರಂಭವಾಗಲಿದ್ದು, ವಿದ್ಯಾರ್ಥಿಗಳು ಅರ್ಜಿಗಳು ಆನ್​ಲೈನ್ ಮೂಲಕ ಡೌನ್​ಲೋಡ್ ಮಾಡಿಕೊಂಡು ಕಾಲೇಜುಗಳಿಗೆ ಸಲ್ಲಿಸಬಹುದು ಅಥವಾ ಕಾಲೇಜಿನಲ್ಲೇ ಅರ್ಜಿ ಪಡೆದು ಭರ್ತಿ ಮಾಡಿ ನೀಡಬಹುದು.

ನಿಗದಿಯಾಗದ ಪಿಯು ಫಲಿತಾಂಶ ದಿನಾಂಕ

ದ್ವಿತೀಯ ಪಿಯು ಫಲಿತಾಂಶವನ್ನು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಕಿಮ್ಮನೆ ರತ್ನಾಕರ ಮೇ 25ರೊಳಗೆ ಬಿಡುಗಡೆ ಮಾಡುವುದಾಗಿ ಹೇಳಿದ್ದು, ನಿಗದಿತ ದಿನಾಂಕ ಇನ್ನೂ ಫಿಕ್ಸ್ ಆಗಿಲ್ಲ. ಪಿಯು ಇಲಾಖೆ ಮೂಲಗಳ ಪ್ರಕಾರ ಮೇ 22ರೊಳಗೆ ಬಿಡುಗಡೆಯಾಗುವ ಸಾಧ್ಯತೆ ಇದೆ.

2016-17ನೇ ಸಾಲಿನ ಶೈಕ್ಷಣಿಕ ವೇಳಾಪಟ್ಟಿ

ದಂಡ ಶುಲ್ಕವಿಲ್ಲದೆ ದಾಖಲಾತಿಗೆ ಕೊನೇ ದಿನ ಜೂ.17
ದಂಡ ಶುಲ್ಕದೊಂದಿಗೆ (504 ರೂ.) ಕಡೇ ದಿನ ಜೂ.18ರಿಂದ 27
ವಿಶೇಷ ವಿಳಂಬ(504+1680ರೂ.) ದೊಂದಿಗೆ ಕೊನೇ ದಿನ ಜೂ.28ರಿಂದ ಜು.7
ಎಸ್ಸೆಸ್ಸೆಲ್ಸಿ ಪೂರಕ ಪರೀಕ್ಷೆ ವಿದ್ಯಾರ್ಥಿಗಳಿಗೆ ಪ್ರವೇಶ- ಫಲಿತಾಂಶ ಪ್ರಕಟವಾದ ದಿನದಿಂದ ಏಳು ದಿನಗಳು
ಪ್ರಥಮ ಪಿಯು ತರಗತಿಗಳ ಪ್ರಾರಂಭ ಜೂ.15
ಕುಬೇರ ಫಸ್ಟ್​ಕ್ಲಾಸ್.

ಚಿತ್ರದುರ್ಗ:
ಪರೀಕ್ಷೆಯ ದಿನವೇ ತಾಯಿ ಮೃತಪಟ್ಟಿದ್ದರು. ಮಡುಗಟ್ಟಿದ ದುಃಖದಲ್ಲಿ ಪರೀಕ್ಷೆ ಬರೆದಿದ್ದ ಹೊಳಲ್ಕೆರೆ ಎಸ್​ಜೆಎಂ ಪ್ರೌಢಶಾಲೆಯ ಎಸ್.ಪಿ. ಕುಬೇರ 428 ಅಂಕ ಪಡೆದು ಪ್ರಥಮ ದರ್ಜೆಯಲ್ಲಿ ತೇರ್ಗಡೆ ಹೊಂದಿದ್ದಾನೆ.ಗಿಲಿಕೇನಹಳ್ಳಿಯ ಸುಜಾತಾ ಮಗನ ಪರೀಕ್ಷೆಯ ಹಿಂದಿನ ದಿನ ಹಾವು ಕಚ್ಚಿ ಮೃತಪಟ್ಟಿದ್ದರು. ಅಮ್ಮನನ್ನು ಕಳೆದುಕೊಂಡ ಕುಬೇರ ಪರೀಕ್ಷೆಗೆ ಹೋಗುವುದಿಲ್ಲ ಎಂದು ಹಠ ಹಿಡಿದಿದ್ದ. ಶಿಕ್ಷಕರು ಮನವೊಲಿಸಿ ಪರೀಕ್ಷೆಗೆ ಕರೆದೊಯ್ದಿದ್ದರು.

image

image

* ಫಲಿತಾಂಶದ ಒಂದು ಸಮಗ್ರ ನೋಟ

image

2015-16 ನೇ ಸಾಲಿನ ಎಸ್ಎಸ್ಎಲ್ ಸಿ ಪರೀಕ್ಷಾ ಫಲಿತಾಂಶ ಇಂದು ಪ್ರಕಟವಾಗಿದ್ದು, ರಾಜ್ಯದಲ್ಲಿ ಶೇ. 79.16 ರಷ್ಟು ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದಾರೆ. ಈ ಬಾರಿ ರಾಜ್ಯದ ಎಸ್ಎಸ್ಎಲ್’ಸಿ ಶೇಕಡವಾರು ಫಲಿತಾಂಶ ಶೇ.80ಕ್ಕಿಂತ ಕೆಳಗಿಳಿದಿದ್ದು. ಕಳೆದ ಐದು ವರ್ಷಗಳಲ್ಲಿ ಇದು ಎರಡನೇ ಬಾರಿಯಾಗಿದೆ. 2011-12 ರಲ್ಲಿ ಶೇ. 82.026, 2012-13ರಲ್ಲಿ ಶೇ. 77.47, 2013-14ರಲ್ಲಿ ಶೇ. 81.19, 2014-15ರಲ್ಲಿ ಶೇ. 81.82 ಹಾಗೂ ಈ ಬಾರಿ ಶೇ. 79.16 ಫಲಿತಾಂಶ ಬಂದಿದೆ.

ಈ ಬಾರಿ ಖಾಸಗಿ ಶಾಲೆಗಳ ತೇರ್ಗಡೆ ಪ್ರಮಾಣ ಶೇ. 85.15 ಆಗಿದ್ದರೆ, ಸರ್ಕಾರಿ ಶಾಲೆಗಳ ಫಲಿತಾಂಶ ಶೇ. 76.84 ಆಗಿದೆ. ಅನುದಾನಿತ ಶಾಲೆಗಳು ಶೇ.75.99 ಫಲಿತಾಂಶ ಪಡೆದಿವೆ.

ನೂರು ಶೇಕಡ:

image

ನೂರು ಶೇಕಡ ಫಲಿತಾಂಶ ಪಡೆದ ಶಾಲೆಗಳ ಸಂಖ್ಯೆಯಲ್ಲಿ ಈ ಬಾರಿ ಹೆಚ್ಚಳವಾಗಿದೆ. ಕಳೆದ ಬಾರಿ 1485 ಶಾಲೆಗಳು ನೂರು ಶೇಕಡ ಫಲಿತಾಂಶ ಪಡೆದಿದ್ದರೆ, ಈ ಬಾರಿ 1569 ಶಾಲೆಗಳು ನೂರು ಶೇಕಡ ಫಲಿತಾಂಶ ಪಡೆದಿವೆ. ಅವುಗಳಲ್ಲಿ 480 ಸರ್ಕಾರಿ ಶಾಲೆಗಳು, 969 ಖಾಸಗಿ ಶಾಲೆಗಳು ಹಾಗೂ 120 ಅನುದಾನಿತ ಶಾಲೆಗಳಿವೆ.

ಶೂನ್ಯ ಫಲಿತಾಂಶ:

image

ಆದರೆ ಈ ಬಾರಿ 52 ಶಾಲೆಗಳು ಶೂನ್ಯ ಫಲಿತಾಂಶ ಪಡೆದಿದೆ. ಕಳೆದ ವರ್ಷ 36 ಶಾಲೆಗಳು ಶೂನ್ಯ ಫಲಿತಾಂಶ ಪಡೆದಿತ್ತು. ಕಳೆದ ಬಾರಿಗೆ ಹೋಲಿಸಿದರೆ ಈ ಬಾರಿ ಶೂನ್ಯ ಫಲಿತಾಂಶ ಜಾಸ್ತಿಯಾಗಿದೆ. ಇದರಲ್ಲಿ 3 ಸರ್ಕಾರಿ ಶಾಲೆಗಳು, 6 ಅನುದಾನಿತ ಶಾಲೆಗಳು ಹಾಗೂ 43 ಅನುದಾನ ರಹಿತ ಶಾಲೆಗಳು ಒಳಗೊಂಡಿವೆ.

ಗ್ರಾಮೀಣ ವಿದ್ಯಾರ್ಥಿಯರ ಮೇಲುಗೈ:

image

ಈ ಬಾರಿಯೂ ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳು ಮೇಲುಗೈ ಸಾಧಿಸಿದ್ದಾರೆ. ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳು ಶೇ. 80.36 ಫಲಿತಾಂಶ ಪಡೆದಿದ್ದರೆ ನಗರ ಪ್ರದೇಶದ ವಿದ್ಯಾರ್ಥಿಗಳ ಉತ್ತೀರ್ಣ ಪ್ರಮಾಣ ಶೇ. 77.63 ರಷ್ಟಿದೆ

ಈ ಬಾರಿಯೂ ಬಾಲಕಿಯರು ಮುಂದು:

image

ಶೇ.82.64 ತೇರ್ಗಡೆ ಪ್ರಮಾಣದೊಂದಿಗೆ ಬಾಲಕಿಯರು ಈ ಬಾರಿಯೂ ಮೇಲುಗೈ ಸಾಧಿಸಿದ್ದಾರೆ. ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ಬಾಲಕಿಯರ ಫಲಿತಾಂಶ ತುಸು ಕಡಿಮೆಯಾಗಿದೆ. ಕಳೆದ ವರ್ಷ ಶೇ. 86.23 ಫಲಿತಾಂಶ ಬಂದಿತ್ತು. ಈ ಶೇ. 75.84 ಬಾಲಕರು ಉತ್ತೀರ್ಣರಾಗಿದ್ದಾರೆ, ಕಳೆದ ಬಾರಿ ಶೇ. 77.85 ರಷ್ಟು ಬಾಲಕರು ಉತ್ತೀರ್ಣರಾಗಿದ್ದರು.

ಜಿಲ್ಲಾವಾರು ಫಲಿತಾಂಶ:

image

image

ಫಲಿತಾಂಶದ ಪಟ್ಟಿಯಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲೆ ಮೊದಲ ಸ್ಥಾನ ಪಡೆದಿದ್ದರೆ, ಉಡುಪಿ ಎರಡನೇ ಸ್ಥಾನ ಪಡೆದಿದೆ.ಹಾಗೂ ಮಂಗಳೂರು ಮೂರನೇ ಸ್ಥಾನ ಪಡೆದಿದೆ. ಈ ಬಾರಿಯ ಎಸ್ಸೆಸ್ಸೆಲ್ಸಿಯ ಜಿಲ್ಲಾವಾರು ಫಲಿತಾಂಶ ಹೀಗಿದೆ

ಉಡುಪಿ – 89.52(ದ್ವಿತೀಯ ಸ್ಥಾನ)
ಚಿಕ್ಕೋಡಿ – 86.00
ಉತ್ತರ ಕನ್ನಡ – 87.83
ಶಿರಸಿ – 85.24
ಬೆಂಗಳೂರು ಗ್ರಾಮಾಂತರ – 89.63(ಮೊದಲ ಸ್ಥಾನ)
ಮಂಡ್ಯ – 77.98
ರಾಮನಗರ – 81.74
ಮಂಗಳೂರು – 88.01(ತೃತೀಯ)
ಕೋಲಾರ – 78.19
ಮೈಸೂರು – 85.56
ಚಾಮರಾಜನಗರ – 75.59
ತುಮಕೂರು – 76.10
ಮಧುಗಿರಿ – 80.25
ಬೆಳಗಾವಿ – 81.09
ಹಾಸನ – 75.94
ದಾವಣಗೆರೆ – 78.43
ರಾಯಚೂರು – 82.29
ಕೊಡಗು – 78.93
ಚಿತ್ರದುರ್ಗ – 73.19
ಶಿವಮೊಗ್ಗ – 77.57
ಹಾವೇರಿ – 74.55
ಯಾದಗಿರಿ – 68.57
ಬೆಂಗಳೂರು ಉತ್ತರ – 80.52
ಬಳ್ಳಾರಿ – 56.68 (ಕೊನೆಯ ಸ್ಥಾನ)
ಧಾರವಾಡ – 85.17
ಚಿಕ್ಕಮಗಳೂರು – 86.29
ಚಿಕ್ಕಬಳ್ಳಾಪುರ – 80.92
ಬೀದರ್ – 75.93
ಬೆಂಗಳೂರು ದಕ್ಷಿಣ – 72.80
ಬಾಗಲಕೋಟೆ – 85.21
ವಿಜಯಪುರ – 70.57
ಕಲಬುರಗಿ – 79.02
ಕೊಪ್ಪಳ – 75.92
ಗದಗ – 64.09

ರಾಜ್ಯದ ಟಾಪರ್’ಗಳು:

image

ಈ ಸಾಲಿನ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಭದ್ರಾವತಿಯ ರಂಜನ್ ಎಸ್. 625 ಅಂಕ ಗಳಿಸಿ ಅಗ್ರಸ್ಥಾನ ಗಳಿಸಿದ್ದಾರೆ. 7 ಮಂದಿ 624 ಅಂಕ ಗಳಿಸಿದ್ದಾರೆ… ಅತೀ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳ ಟಾಪ್-10 ಪಟ್ಟಿ ಇಲ್ಲಿದೆ.

1) ರಂಜನ್ ಎಸ್., ಪೂರ್ಣಪ್ರಜ್ಞಾ ಶಾಲೆ, ಭದ್ರಾವತಿ – 625 ಅಂಕ

2) ಈಶು ಎನ್.ಎಸ್., ಮರಿಮಲ್ಲಪ್ಪ ಶಾಲೆ, ಮೈಸೂರು – 624 ಅಂಕ

3) ಸುಪ್ರೀತಾ ಎಂಎ, ಹೋಲಿಚೈಲ್ಡ್ ಶಾಲೆ, ಬನಶಂಕರಿ, ಬೆಂಗಳೂರು – 624 ಅಂಕ

4) ಶುಶೃತ್ ಯುಕೆ, ಸೇಂಟ್ ಮೇರೀಸ್ ಶಾಲೆ, ಬೆಳ್ತಂಗಡಿ, ದ.ಕ. – 624 ಅಂಕ

5) ಶ್ವೇತಾ ಎಎಸ್, ಸೇಂಟ್ ಸೋಫೀಯಾ ಹೈಸ್ಕೂಲ್, ನಾಗರಬಾವಿ, ಬೆಂಗಳೂರು – 624 ಅಂಕ

6) ಮಹಿಮಾ ಭಟ್, ಶ್ರೀದೇವಿ ಹೈಸ್ಕೂಲ್, ಹುಲಿಕಲ್, ಶಿರಸಿ – 624 ಅಂಕ

7) ಸ್ವಾತಿ ಎಸ್., ಶ್ರೀ ಸಿಕೆಎಸ್ ಬಾಲಕಿಯರ ಶಾಲೆ, ಹಾಸನ – 624 ಅಂಕ

8) ಅಕ್ಷಯ್ ರಾವ್, ವಿಜಯ್ ವಿಠಲ ಹೈಸ್ಕೂಲ್, ಮೈಸೂರು – 624 ಅಂಕ

9) ಶ್ರೀನಿಧಿ ಟಿಎಸ್., ವಿಜಯ್ ವಿಠಲ ಹೈಸ್ಕೂಲ್, ಮೈಸೂರು – 623 ಅಂಕ

10) ವಿಜಯಲಕ್ಷ್ಮೀ, ವಿಜಯ ಹೈಸ್ಕೂಲ್, ಹಾಸನ – 623 ಅಂಕ.

image

image

image

#
The following is the list of state toppers in SSLC examinations.

Name /School /District / Medium Parents /Total Marks

1) Ranjan B S (Boy) Poornapragna Vidya Samsthe, Bhadravathi Shivamogga Eng
BS Shankaranarayana
S N Triveni
625 (100%)

2) Supreetha M A (Girl) Holy Child English High School, Bengaluru South-1 Bengaluru South Eng
Arun Kumar M N
Bhanushri C S
624 (99.8%)

3) Sushruth UK (Boy) St. Mary’s English Medium High School,Belthangadi Dakshina Kannada Eng Kishor Kumar U V
Surekha 624 (99.8%)

4) Shwetha S (Girl) St. Sophia Convent High School, Bengaluru South-1 Bengaluru South Eng Shivanna N
Premakala S N 624 (99.8%)

5) Eeshu N S (Girl)
Marimallappa’s High School, Mysuru South Mysuru
Eng
Shivanna N S
Sharmila M S 624 (99.8%)

6) Mahima Manjunath Bhat (Girl) Sri Devi High School, Sirsi Sirsi Kan Manjunath
Madhura 624 (99.8%)

7) Swathi J S (Girl) Sri C K S Girls High School, Hassan Hassan Eng Siddegowda J D
Latha H D 624 (99.8%)

8) Akshay Rao K (Boy) Vijayavittal English Medium High School, Mysuru South Mysuru Eng Radhakrishna K
Asha Rao K 624 (99.8%)

9) Shrinidhi T S (Boy) Vijayavittal English Medium High School, Mysuru South Mysuru Eng Sridhara T N
Uma M V
623 (99.7%)

10) Bhargavi H S (Girl) Vijaya High School, Hassan Hassan Eng Sathyan H K
Vijayalakshmi 623 (99.7%)

11) Aishwarya N (Girl) Sadvidya High School, Mysuru South Mysuru Eng Nagaraj D
Jyothi M S 623 (99.7%)

12) Sinchana S Gowda (Girl) Vijaya High School, Hassan Hassan Eng Shivananje Gowda K N
Sukanya K 623 (99.7%)

13) Rashmi K R (Girl) St. Mary’s High School, Chikkamagaluru Chikkamagaluru Eng Raghavenra Ullura K
Ambika K S 623 (99.7%)

14) Pramatha P Dixit (Girl) Poornapragnya High School, Bengaluru North-4 Bengaluru North Eng Dr. M S Prabhakara
K G Premalatha 623 (99.7%)

15) Meghana B Patil (Girl) M E S Kishore Kendra High School, Bengaluru North-2 Bengaluru North Eng E Basavaraj S Patil
Shridevi B Patil 623 (99.7%)

16) Aishwarya K Aithal (Girl) Mother Theresa English Medium High School, Bengaluru North-2 Bengaluru North Eng Sooryanarayana K Aithal
Parvathi S Aithal 623 (99.7%)

ಶಿಕ್ಷಕರ ವೈದ್ಯಕೀಯ ಚಿಕಿತ್ಸೆಯ ಧನಸಹಾಯಕ್ಕಾಗಿ ಸಲ್ಲಿಸುವ ಅರ್ಜಿ ನಮೂನೆಗಳು.

  ರಾಷ್ಟ್ರೀಯ ಶಿಕ್ಷಕರ ಕಲ್ಯಾಣ ನಿಧಿಯಿಂದ ದೊರೆಯುವ ಶಿಕ್ಷಕರ ವೈದ್ಯಕೀಯ ಚಿಕಿತ್ಸೆಯ ಧನಸಹಾಯಕ್ಕಾಗಿ ಸಲ್ಲಿಸುವ ಅರ್ಜಿ ನಮೂನೆಗಳು.
      .

image

image

image

image

Posted from WordPress for Android

ಶಿಕ್ಷಕರ ಉಪನ್ಯಾಸಕರ ಹೋರಾಟಗಳು ಸೋಲುವುದೇಕೆ?

image

#  ಶಿಕ್ಷಕರು, ಉಪನ್ಯಾಸಕರ ಹೋರಾಟ ಯಾವಾಗಲೂ ಸೋಲುವುದೇಕೆ?

ಕೇಂದ್ರ ನೌಕರರ ವೇತನಕ್ಕೋ ನೆರೆರಾಜ್ಯಗಳ ಶಿಕ್ಷಕರ ವೇತನಕ್ಕೋ ಹೋಲಿಸಿದರೆ ಇಲ್ಲಿಯ ಶಿಕ್ಷಕರ ವೇತನ ತೀರಾ ಕಡಿಮೆ. ಈ ತಾರತಮ್ಯ ನೀಗಲು ಅವರು ಹೋರಾಡುವುದರಲ್ಲಿ ತಪ್ಪಿಲ್ಲ. ಅದು ಅವರ ನ್ಯಾಯೋಚಿತ ಹೋರಾಟ. ಅಂದಮೇಲೆ ಅವರಿಗೆ ನ್ಯಾಯ ಸಿಗಬೇಕಲ್ಲ!

ಪ್ರತಿಭಟನೆ, ಹೋರಾಟಗಳು ಪ್ರಜಾಪ್ರಭುತ್ವ ವ್ಯವಸ್ಥೆಯ ಅವಿಭಾಜ್ಯ ಅಂಗವೇನೋ. ಇಲ್ಲಿ ಅವು ನಿತ್ಯ ನಡೆಯುತ್ತಲೇ ಇರುತ್ತವೆ. ಕೆಲವು ಒಂದೆರಡು ದಿನಗಳಲ್ಲೇ ಅಂತ್ಯ ಕಂಡರೆ ಕೆಲವು ತಿಂಗಳುಗಟ್ಟಲೆ ನಡೆಯುತ್ತಲೇ ಇರುತ್ತವೆ. ಇತ್ತೀಚೆಗೆ ಕೇಂದ್ರ ಸರಕಾರ ಶೇ.3.67ರಷ್ಟು ಭವಿಷ್ಯನಿಧಿಯನ್ನು ಮೊದಲೇ ಹಿಂಪಡೆಯುವುದರ ಮೇಲೆ ನಿಯಂತ್ರಣ ಹೇರುವ ಅಧಿಸೂಚನೆ ಹೊರಡಿಸಿತು. ಕಾರ್ಮಿಕ ವರ್ಗ ಪ್ರತಿಭಟಿಸಿತು. ಉಗ್ರ ಹೋರಾಟ ನಡೆಸಿತು. ಕೇಂದ್ರ ಸರಕಾರ ಹೋರಾಟಕ್ಕೆ ಮಣಿದು ಅಧಿಸೂಚನೆ ಹಿಂಪಡೆದುಕೊಂಡಿತು. ಈ ಹಿಂದಿನ ಕ್ರಮವನ್ನೇ ಅನುಸರಿಸುವುದಾಗಿ ಒಪ್ಪಿಕೊಂಡಿತು. ಕಾರ್ಮಿಕರ ಹೋರಾಟ ಕೊನೆಗಂಡಿತು. ಆದರೆ ಅದೇ ವೇಳೆಗೆ ರಾಜ್ಯ ಪದವಿ ಪೂರ್ವ ಉಪನ್ಯಾಸಕ ವರ್ಗವೂ ವಿವಿಧ ಬೇಡಿಕೆಗಳನ್ನು ಮುಂದಿಟ್ಟುಕೊಂಡು ಹೋರಾಟ ಪ್ರಾರಂಭಿಸಿತ್ತು. ಅದು ಯಶಸ್ವಿಯಾಗಲಿಲ್ಲ. ಕೇವಲ ಒಂದು ಬಡ್ತಿಯ ಭರವಸೆಗೆ ಒಪ್ಪಿ 18 ದಿನಗಳಿಂದ ನಡೆಸಿಕೊಂಡು ಬಂದ ಹೋರಾಟವನ್ನು ಕೊನೆಗಾಣಿಸಲಾಯಿತು. ಹಾಗೆ ನೋಡಿದರೆ ಇತರರ ಹೋರಾಟಗಳಿಗೆ ಹೋಲಿಸಿದಲ್ಲಿ ಶಿಕ್ಷಕರ ಹೋರಾಟ ನಿರೀಕ್ಷಿತ ಗುರಿ ಮುಟ್ಟದೆ ಸೋಲು ಕಾಣುವುದೇ ಹೆಚ್ಚು. ಯಾಕೆ ಹೀಗೆ? ಶಿಕ್ಷಕರ ಹೋರಾಟ ಯಶಸ್ವಿಯಾಗದಿರಲು ಕಾರಣವೇನು ಎಂಬುದು ಒಂದಿಷ್ಟು ಯೋಚಿಸಬಹುದಾದ ವಿಷಯ.

ಸಂಘಟಿತ ಹೋರಾಟದ ಕೊರತೆ
ಪ್ರಾಥಮಿಕ ಶಾಲಾ ಶಿಕ್ಷಕರಿಂದ ಹಿಡಿದು ಕಾಲೇಜು ಉಪನ್ಯಾಸಕರ ತನಕ ಎಲ್ಲರೂ ಶಿಕ್ಷಕರಷ್ಟೆ? ಒಬ್ಬರಿಗೆ ಆದ ಅನ್ಯಾಯ ಎಲ್ಲರಿಗೂ ಆದಂತೆ. ಎಲ್ಲರೂ ಅನ್ಯಾಯದ ವಿರುದ್ಧ ಸಂಘಟಿತರಾಗಿ ಹೋರಾಡಬೇಕು. ಆದರೆ ನಮ್ಮಲ್ಲಿ ಪ್ರಾಥಮಿಕ ಶಿಕ್ಷಕರ ಸಂಘ, ಪ್ರೌಢ ಶಿಕ್ಷಕರ ಸಂಘ, ಕಾಲೇಜು ಉಪನ್ಯಾಸಕರ ಸಂಘ ಎಂದೆಲ್ಲ ಬೇರೆ ಬೇರೆ ಇವೆ. ಅವುಗಳ ನಡುವೆ ಸ್ಥಾನ ಭೇದ ನಿಮಿತ್ತ ಅಂತರವಿದೆ. ಒಂದಕ್ಕೊಂದು ನೆರವಾಗಲು, ಸಂಘಟಿತವಾಗಿ ಹೋರಾಡಲು ಸ್ವಾಭಿಮಾನ ಅಡ್ಡ ಬರುವಂತಿದೆ. ಪ್ರಾಥಮಿಕ ಶಾಲಾ ಸಂಘದವರು ಹೋರಾಟಕ್ಕಿಳಿದಾಗ ಪ್ರೌಢ ಶಾಲಾ ಸಂಘದವರು ಇದು ನಮಗೆ ಸಂಬಂಧಿಸಿದ್ದಲ್ಲವೆಂದು ಕೈಕಟ್ಟಿ ಕೂರುತ್ತಾರೆ. ಪ್ರೌಢ ಶಾಲಾ ಸಂಘದವರು ಹೋರಾಟಕ್ಕಿಳಿದಾಗ ಕಾಲೇಜು ಉಪನ್ಯಾಸಕ ಸಂಘದವರೂ ಹೀಗೆಯೇ ಮಾಡುತ್ತಾರೆ. ಸಮಸ್ಯೆ ತಲೆದೋರಿದಾಗ ಅದು ಸಮಗ್ರ ಶಿಕ್ಷಣ ಕ್ಷೇತ್ರಕ್ಕೆ ಸಂಬಂಧಿಸಿದ್ದು ಎಂದು ತಿಳಿದು ಸಂಘಟಿತರಾಗಿ ಹೋರಾಡುವ ಸೌಜನ್ಯ ತೋರದಿರುವುದು ಅವರ ಹೋರಾಟದ ಸೋಲಿಗೆ ಕಾರಣವೆನ್ನಬಹುದೇನೋ. ಈ ನಡುವೆ ಸಂಘದೊಳಗಣ ಗುಂಪುಗಾರಿಕೆಯೂ ಸೋಲಿಗೆ ಕಾರಣವಾಗಬಹುದು.

ಗುರಿಯಲ್ಲಿ ನಿರ್ದಿಷ್ಟತೆಯ ಕೊರತೆ
ಹೋರಾಟಕ್ಕಿಳಿಯುವ ಮುನ್ನ ಗುರಿಯ ಬಗ್ಗೆ ನಿರ್ದಿಷ್ಟತೆಯಿರಬೇಕು. ಗುರಿ ಮುಟ್ಟುವ ಹಾದಿಯ ಬಗ್ಗೆ ಸ್ಪಷ್ಟತೆಯಿರಬೇಕು. ಹೋರಾಟದ ರೂಪರೇಷೆಯಲ್ಲಿ ಯೋಜನಾ ಬದ್ಧತೆಯಿರಬೇಕು. ಸಂಘಟನೆಯ ವಿವಿಧ ಘಟಕಗಳೊಳಗೆ ಸಾಮರಸ್ಯವಿರಬೇಕು. ಒಂದು ಘಟಕ ಹೋರಾಟಕ್ಕಿಳಿದಾಗ ಇನ್ನೊಂದು ಸಂಪೂರ್ಣ ಸಹಕಾರ ನೀಡಬೇಕು. ಅದಿಲ್ಲದಿದ್ದಲ್ಲಿ ಒಂದೆರಡು ದಿನಗಳಲ್ಲೇ ಹೋರಾಟ ನಿಂತು ಬಿಡುತ್ತದೆ. ಅದೊಂದು ಪ್ರಹಸನವಾಗಿಬಿಡುತ್ತದೆ. ಒಗ್ಗಟ್ಟಿನ ಕೊರತೆ ಸ್ಪಷ್ಟ ಗೋಚರವಾಗುತ್ತದೆ.

ಶಿಕ್ಷಕರ ಮೃದು ಧೋರಣೆ
ಯಾವುದೇ ಹೋರಾಟವಾದರೂ ಕ್ರಮೇಣ ಕಾವೇರುತ್ತದೆ. ಕಲ್ಲು ತೂರಾಟವೋ ಟೈರ್‌ ಸುಡುವಿಕೆಯೋ ನಡೆಯುತ್ತದೆ. ಒಂದೆರಡು ಬಸ್ಸುಗಳೂ ಬೆಂಕಿಗಾಹುತಿಯಾಗುತ್ತವೆ. ಹೋರಾಟ ಉಗ್ರಸ್ವರೂಪ ತಳೆದಾಗ ಸರಕಾರ ಎಚ್ಚೆತ್ತುಕೊಳ್ಳುತ್ತದೆ. ಬೇಡಿಕೆ ಈಡೇರಿಸುವ ಸಾಧ್ಯತೆ ಇದೆ. ಆದರೆ ಶಿಕ್ಷಕರ ಹೋರಾಟ ಹಾಗಾಗುವುದು ಕಡಿಮೆ. ಅವರು ಆ ಮಟ್ಟಕ್ಕಿಳಿಯುವುದು ವಿರಳ. ಅದಾವುದೋ ಮೌಲ್ಯ ಅವರ ಕೈ ಕಟ್ಟಿಬಿಡುತ್ತದೆ. ಅವರ ಮೃದು ಧೋರಣೆಯಿಂದಾಗಿ ಹೋರಾಟ ಕಾವೇರುವುದಿಲ್ಲ. ಸರಕಾರಕ್ಕೆ ಬಿಸಿಮುಟ್ಟುವುದಿಲ್ಲ. ಹೋರಾಟ ಗುರಿಮುಟ್ಟುವುದಿಲ್ಲ.

ಶಿಕ್ಷಕರು ಅಲ್ಪ ತೃಪ್ತರು
ಬಹುತೇಕ ಶಿಕ್ಷಕರು ತಿಂಗಳ ಸಂಬಳ ನೆಚ್ಚಿಕೊಂಡವರು. ಮುಷ್ಕರದಲ್ಲಿ ಭಾಗಿಯಾದುದಕ್ಕೆ ಸರಕಾರ ಅವರ ವೇತನಕ್ಕೆ ಕತ್ತರಿ ಹಾಕಿದರೆ ದೇವರೇ ಗತಿ. ಹಾಗಾಗಿ ಎಲ್ಲ ಬೇಡಿಕೆಗಳು ಈಡೇರದಿದ್ದರೂ ಪರ್ವಾಗಿಲ್ಲ. ಸರಕಾರ ಸಣ್ಣದೊಂದು ಬಡ್ತಿಯ ಆಮಿಷವೊಡ್ಡಿದರೂ ಸಾಕು. ಮುಷ್ಕರ ಕೈಬಿಟ್ಟು ಕರ್ತವ್ಯಕ್ಕೆ ಹಾಜರಾಗುವ ಮನಸ್ಥಿತಿಯಲ್ಲಿರುತ್ತಾರೆ. ಹತ್ತಾರು ಬೇಡಿಕೆಗಳನ್ನು ಈಡೇರಿಸಿಕೊಳ್ಳುವ ಸಂಕಲ್ಪದೊಂದಿಗೆ ಹೋರಾಟಕ್ಕಿಳಿದರೂ ಒಂದೇ ಒಂದು ಬಡ್ತಿಯ ಭರವಸೆಗೆ ಒಪ್ಪಿ ಹೋರಾಟ ನಿಲ್ಲಿಸಿ ಕರ್ತವ್ಯಕ್ಕೆ ಹಾಜರಾಗುವುದೇ ಹೆಚ್ಚು.

ಸಮರ್ಥ ನಾಯಕತ್ವದ ಕೊರತೆ
ಹೋರಾಟದ ಯಶಸ್ಸು ಸಮರ್ಥ ನಾಯಕತ್ವವನ್ನು ಅವಲಂಬಿಸಿರುತ್ತದೆ. ಆದರೆ ಶಿಕ್ಷಕರಲ್ಲೇಕೋ ಅಂತಹ ನಾಯಕರ ಕೊರತೆಯಿರುವ ಹಾಗಿದೆ. ಶಿಕ್ಷಕ ಸಂಘದ ನೇತಾರರು ಹುಮ್ಮಸ್ಸಿನಿಂದ ಹೋರಾಟದ ಕಣಕ್ಕಿಳಿದರೂ ಒಂದೆರಡು ದಿನಗಳಲ್ಲೇ ಶಸ್ತ್ರ ಸನ್ಯಾಸಕ್ಕೆ ಮುಂದಾಗಿಬಿಡುತ್ತಾರೆ. ಶಿಕ್ಷಣ ಸಚಿವರೋ ಮುಖ್ಯಮಂತ್ರಿಗಳ್ಳೋ ಮಾತುಕತೆಗೆ ಕರೆದರೆ ಸಾಕು, ಬೇಡಿಕೆ ಈಡೇರಿತು ಎಂದೇ ಭಾವಿಸಿ ಹೋರಾಟ ನಿಲ್ಲಿಸುತ್ತಾರೆ. ಆಗ ಅವರೊಳಗೆ ಅದೇನೋ ಸೂಟ್‌ಕೇಸು ವ್ಯವಹಾರ ನಡೆದಿರಬೇಕೆಂಬ ವದಂತಿ ಹರಡುತ್ತದೆ. ಅಂಥದ್ದೇನೂ ನಡೆದಿಲ್ಲವೆಂದು ಅವರು ಸಮಜಾಯಿಸಿ ನೀಡಿದರೂ ಆ ಬಗ್ಗೆ ಗುಸುಗುಸು ಇದ್ದೇ ಇರುತ್ತದೆ. 

ಹೋರಾಟಕ್ಕೆ ಸಕಾಲ ಅಂದುಕೊಂಡದ್ದು ಸಕಾಲವಲ್ಲ
ಪರೀಕ್ಷೆ ಮುಗಿದು ಮೌಲ್ಯಮಾಪನಕ್ಕೆ ಮುನ್ನ ಹೋರಾಟ ಆರಂಭಿಸಿದರೆ ಸರಕಾರ ತತ್‌ಕ್ಷಣ ಎಚ್ಚೆತ್ತುಕೊಳ್ಳುತ್ತದೆ, ತಮ್ಮ ಬೇಡಿಕೆಗಳಿಗೆ ಸ್ಪಂದಿಸುತ್ತದೆ ಎಂಬುದು ಶಿಕ್ಷಕರ ಲೆಕ್ಕಾಚಾರ. ಆದರೆ ಅವರಂದುಕೊಂಡಂತೆ ಅದು ಸಕಾಲವೆನಿಸುವುದಿಲ್ಲ. ಸರಕಾರ ಅವರ ಹೋರಾಟವನ್ನು ಗಣನೆಗೆ ತೆಗೆದುಕೊಳ್ಳುವುದಿಲ್ಲ. ಹೋರಾಟ ಇನ್ನೆರಡು ದಿವಸ ಮುಂದುವರಿದಲ್ಲಿ ಮಕ್ಕಳ ಭವಿಷ್ಯ ರೂಪಿಸಬೇಕಾದ ಶಿಕ್ಷಕರು ಅವರ ಭವಿಷ್ಯದೊಂದಿಗೆ ಚೆಲ್ಲಾಟವಾಡುತ್ತಾರೆ ಎನ್ನುತ್ತಾ ಸರಕಾರವು ಶಿಕ್ಷಕರ ವಿರುದ್ಧ ಎಸ್ಮಾ ಜಾರಿಗೊಳಿಸುವುದಾಗಿ ಹೆದರಿಸುತ್ತದೆ. ಮಕ್ಕಳ ಪೋಷಕರೂ ಮಾಧ್ಯಮದವರೂ ಮಕ್ಕಳ ಪರ ನಿಲ್ಲುತ್ತಾರೆ. ಶಿಕ್ಷಕರು ಇನ್ನು ಹೋರಾಟ ಕೈಬಿಟ್ಟು ಮೌಲ್ಯಮಾಪನಕ್ಕೆ ಮನಸ್ಸು ಮಾಡದೆ ವಿಧಿಯಿಲ್ಲ. ಮೊನ್ನೆ ಪಿ.ಯು. ಉಪನ್ಯಾಸಕರ ಹೋರಾಟ ಕೊನೆಗಂಡದ್ದೂ ಹೀಗೆಯೇ. 

ಶಿಕ್ಷಕರ ಬಗ್ಗೆ ಸರಕಾರಕ್ಕೆ ಅನಾದರ
ಶಿಕ್ಷಕರ ಹೋರಾಟದ ಸೋಲಿಗೆ ಮೇಲೆ ಪ್ರಸ್ತಾಪಿಸಲಾದ ಅಂಶಗಳೆಲ್ಲವೂ ಕಾರಣವಾದರೂ ಶಿಕ್ಷಕರ ಬಗ್ಗೆ ಸರಕಾರಕ್ಕಿರುವ ಅನಾದರವೇ ಮುಖ್ಯ ಕಾರಣ ಎಂಬುದು ಅನೇಕರ ಅಭಿಪ್ರಾಯ. ಭವಿಷ್ಯನಿಧಿ ಅಧಿಸೂಚನೆ ವಿರುದ್ಧ ನಡೆದ ಕಾರ್ಮಿಕರ ಹೋರಾಟಕ್ಕೆ ಕೇಂದ್ರ ಸರಕಾರ ಮಣಿದುದಕ್ಕೆ ಮುಂಬರುವ ವಿಧಾನಸಭಾ ಚುನಾವಣೆಯನ್ನು ತಳುಕು ಹಾಕಲಾಗುತ್ತದೆ. ರಾಜಕೀಯ ಲಾಭ ನಷ್ಟದ ಲೆಕ್ಕಾಚಾರ ನಡೆದಿದೆ ಎನ್ನಲಾಗುತ್ತದೆ. ಆದರೆ ರಾಜ್ಯದಲ್ಲಿ ನಡೆದ ಉಪನ್ಯಾಸಕರ ವಿಷಯಕ್ಕೆ ಬಂದಾಗ ಇಲ್ಲಿ ಅಂತಹ ರಾಜಕೀಯ ಲಾಭ ನಷ್ಟದ ಲೆಕ್ಕಾಚಾರ ಕೆಲಸಕ್ಕೆ ಬರುವ ಸಾಧ್ಯತೆ ಕಡಿಮೆ ಅನಿಸುತ್ತದೆ. ಶಿಕ್ಷಕರೆಲ್ಲರೂ ವಿದ್ಯಾವಂತರಾಗಿದ್ದು ಯಾವುದೋ ಒಂದು ಪಕ್ಷಕ್ಕೆ ಅವರು ಈಗಾಗಲೇ ನಿಷ್ಠರಾಗಿರುವುದರಿಂದ ಏನೂ ಪ್ರಯೋಜನವಾಗದು. ಅದೂ ಅಲ್ಲದೆ ಶಿಕ್ಷಣ ಕ್ಷೇತ್ರವೆಂದರೆ ಸರಕಾರಕ್ಕೆ ಅಷ್ಟಕ್ಕಷ್ಟೆ. ಸರ್ಕಾರದ ಮಟ್ಟಿಗೆ ಅದೊಂದು ಅನುತ್ಪಾದಕ ವಲಯ. ಹಾಗಾಗಿ ಗಣತಿ ಕಾರ್ಯದಂತಹ ಊಳಿಗಗಳಿಗೆ ಶಿಕ್ಷಕರನ್ನು ಬಳಸಿಕೊಳ್ಳುವ ಸರಕಾರ ಉಳಿದಂತೆ ಅವರ ಬಗ್ಗೆ ನಿರ್ಲಿಪ್ತವಾಗಿರುವುದೇ ಹೆಚ್ಚು. ಶಿಕ್ಷಕರು ಒಂದಷ್ಟು ದಿನ ಕೂಗಾಡಿ ತೆಪ್ಪಗಾಗುತ್ತಾರೆ ಎಂಬುದು ಸರಕಾರಕ್ಕೆ ಗೊತ್ತು. ಅದು ಆ ಬಗ್ಗೆ ತಲೆಕೆಡಿಸಿಕೊಳ್ಳುವುದಿಲ್ಲ. ಹೋರಾಟ ತನ್ನ ಪಾಡಿಗೆ ನಡೆದು ಕೊನೆಗೊಳ್ಳುತ್ತದೆ!

ಕೊನೆ ಮಾತು:
ಕೇಂದ್ರ ನೌಕರರ ವೇತನಕ್ಕೋ ನೆರೆರಾಜ್ಯಗಳ ಶಿಕ್ಷಕರ ವೇತನಕ್ಕೋ ಹೋಲಿಸಿದರೆ ಇಲ್ಲಿಯ ಶಿಕ್ಷಕರ ವೇತನ ತೀರಾ ಕಡಿಮೆ. ಈ ತಾರತಮ್ಯ ನೀಗಲು ಅವರು ಹೋರಾಡುವುದರಲ್ಲಿ ತಪ್ಪಿಲ್ಲ. ಅದು ಅವರ ನ್ಯಾಯೋಚಿತ ಹೋರಾಟ. ಅಂದಮೇಲೆ ಅವರಿಗೆ ನ್ಯಾಯ ಸಿಗಬೇಕಲ್ಲ! ಅದುಬಿಟ್ಟು ಅವರ ಹೋರಾಟ ಸೋತರೆ ಅದು ಅವರ ಸೋಲು ಮಾತ್ರವಲ್ಲ. ಸಮಸ್ತ ಸಮಾಜದ ಸೋಲು ಅನ್ನಬೇಕಾಗುತ್ತದೆ. ಯಾಕೆಂದರೆ ಸ್ವಸ್ಥ ಸಮಾಜವು ಸಂತೃಪ್ತ ಶಿಕ್ಷಕರನ್ನು ಅವಲಂಬಿಸಿದೆ.

Posted from WordPress for Android

“ಇ-ಜ್ಞಾನ” ಮಾಹಿತಿ ತಂತ್ರಜ್ಞಾನ.-ಏಪ್ರೀಲ್/ ಮೇ 2016 ರ ಅಂಕಣಗಳು.

image

ಟಿ.ಜಿ. ಶ್ರೀನಿಧಿ, ಕನ್ನಡದಲ್ಲಿ ಮಾಹಿತಿ ತಂತ್ರಜ್ಞಾನದ ಕುರಿತು ಬರೆಯುತ್ತಿರುವ ಕೆಲವೇ ಕೆಲವು ಲೇಖಕರಲ್ಲೊಬ್ಬರು. ವಿಜ್ಞಾನ ಮತ್ತು ತಂತ್ರಜ್ಞಾನ ಸಂವಹನಕ್ಕೆ ಮೀಸಲಾದ ಕನ್ನಡ ಜಾಲತಾಣ ‘ಇಜ್ಞಾನ ಡಾಟ್ ಕಾಮ್ (www.ejnana.com)ನ ರೂವಾರಿ ಕೂಡ ಹೌದು. ಮೈಸೂರಿನ ಶ್ರೀ ಜಯಚಾಮರಾಜೇಂದ್ರ ಕಾಲೇಜ್ ಆಫ್ ಇಂಜಿನಿಯರಿಂಗ್​ನಿಂದ ಬಿಇ ಪದವಿ, ಬಿಟ್ಸ್ ಪಿಲಾನಿಯಿಂದ ಎಂಎಸ್ ಸ್ನಾತಕೋತ್ತರ ಪದವಿ ಪಡೆದಿದ್ದು ಪ್ರಸ್ತುತ ಬೆಂಗಳೂರಿನ ಬಹುರಾಷ್ಟ್ರೀಯ ಸಂಸ್ಥೆಯೊಂದರಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. 600ಕ್ಕೂ ಹೆಚ್ಚು ಪ್ರಕಟಿತ ಲೇಖನ, ಅಂಕಣಗಳನ್ನು ಬರೆದಿರುವ ಶ್ರೀನಿಧಿ, 10ಕ್ಕೂ ಹೆಚ್ಚು ಪುಸ್ತಕಗಳನ್ನು ಬರೆದಿದ್ದಾರೆ. 2011ರಲ್ಲಿ ಪ್ರಕಟವಾದ ‘ತಿನ್ನಲಾಗದ ಬಿಸ್ಕತ್ತು, ನುಂಗಲಾಗದ ಟ್ಯಾಬ್ಲೆಟ್ಟು’ ಕೃತಿಗೆ ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿಯ ‘ಶ್ರೇಷ್ಠ ಲೇಖಕ’ ಪ್ರಶಸ್ತಿ ದೊರೆತಿದೆ. ಈ ಹಿಂದೆ ವಿಜಯವಾಣಿಯಲ್ಲಿನ ‘ಯಾವುದನ್ ಕೊಳ್ಳಲಿ?’, ‘ಈ ಹೊತ್ತು ಛಿಲೋಕ’ ಅಂಕಣಗಳ ಮೂಲಕ ಪರಿಚಿತರಾಗಿದ್ದ ಟಿ.ಜಿ. ಶ್ರೀನಿಧಿ, ‘ಇ-ಜ್ಞಾನ’ ಅಂಕಣದ ಮೂಲಕ ಓದುಗರಿಗೆ ಮತ್ತೊಮ್ಮೆ ಹತ್ತಿರವಾಗುತ್ತಿದ್ದಾರೆ. ಕಂಪ್ಯೂಟರ್ ತಂತ್ರಜ್ಞಾನಕ್ಕೆ ಸಂಬಂಧಿಸಿದಂತೆ ನಾವು ದಿನನಿತ್ಯ ಇಂಟರ್​ನೆಟ್, ಕ್ಲೌಡ್ ಕಂಪ್ಯೂಟಿಂಗ್, ಸಾಫ್ಟ್​ವೇರ್, ಆನ್​ಲೈನ್ ಶಾಪಿಂಗ್… ಇಂತಹ ಎಷ್ಟೋ ಪದಗಳನ್ನು ಕೇಳುತ್ತಲೇ ಇರುತ್ತೇವೆ. ಆದರೆ ಅವುಗಳ ಅರ್ಥ, ಕಾರ್ಯವಿಧಾನಗಳು ಮಾತ್ರ ಗೊತ್ತಿರುವುದಿಲ್ಲ. ಕಂಪ್ಯೂಟರ್ ಸಂಬಂಧಿ ವಿಷಯಗಳನ್ನು ಸರಳವಾಗಿ ವಿವರಿಸುತ್ತ, ಗ್ರಾಮೀಣ ಭಾಗದ ಜನಸಾಮಾನ್ಯರವರೆಗೂ ಮಾಹಿತಿ ತಂತ್ರಜ್ಞಾನವನ್ನು ಸವಿಸ್ತರಿಸುವುದು ‘ಇ-ಜ್ಞಾನ’ ಅಂಕಣದ ಉದ್ದೇಶ.
***

1-5-16.
ಓದಿಗೂ ನೆರವು:
ಪ್ರತಿಷ್ಠಿತ ಅಂತಾರಾಷ್ಟ್ರೀಯ ವಿಶ್ವವಿದ್ಯಾಲಯಗಳ ಪಠ್ಯಸಾಮಗ್ರಿಯನ್ನು ಉಚಿತವಾಗಿ ಪಡೆದುಕೊಳ್ಳುವುದು ಮತ್ತು ಓದುವುದು ಜಾಲಲೋಕದ ಅಸಂಖ್ಯ ಸಾಧ್ಯತೆಗಳಲ್ಲೊಂದು. ಯಾವುದೇ ಶುಲ್ಕದ ಗೊಡವೆಯಿಲ್ಲದೆ ಹೀಗೆ ಅಂತರ್ಜಾಲದ ಮೂಲಕ ಮುಕ್ತವಾಗಿ ದೊರಕುವ ಪಠ್ಯಸಾಮಗ್ರಿಯನ್ನು ಓಪನ್ ಕೋರ್ಸ್​ವೇರ್ ಎಂದು ಕರೆಯುತ್ತಾರೆ.

ತಂತ್ರಾಂಶಗಳು ಮತ್ತು ಅವುಗಳ ಆಕರ ಸಂಕೇತಗಳನ್ನು (ಸೋರ್ಸ್ ಕೋಡ್) ಬಳಕೆದಾರರಿಗೆ ಮುಕ್ತವಾಗಿ ನೀಡುವ ಓಪನ್​ಸೋರ್ಸ್ ಪರಿಕಲ್ಪನೆ ಸಾಫ್ಟ್​ವೇರ್ ರಂಗದಲ್ಲಿ ಚಾಲ್ತಿಯಲ್ಲಿದೆಯಲ್ಲ, ಇದೂ ಹಾಗೆಯೇ. ಶೈಕ್ಷಣಿಕ ಸಂಪನ್ಮೂಲಗಳನ್ನು ಉಚಿತವಾಗಿ ಒದಗಿಸುವ ಓಪನ್ ಎಜುಕೇಶನ್ ರಿಸೋರ್ಸಸ್ ಉದ್ದೇಶವೂ ಇಂತಹುದೇ. ಪ್ರಪಂಚದ ಅನೇಕ ಪ್ರಮುಖ ವಿಶ್ವವಿದ್ಯಾನಿಲಯಗಳು ತಮ್ಮ ಪಠ್ಯಸಾಮಗ್ರಿಯನ್ನು ಆಸಕ್ತರಿಗಾಗಿ ಹೀಗೆ ಉಚಿತವಾಗಿ ಒದಗಿಸುತ್ತಿವೆ. ಗೂಗಲ್​ನಲ್ಲಿ ‘Open CourseWare’ ಎಂದು ಹುಡುಕಿದ ತಕ್ಷಣ ಕಾಣಿಸಿಕೊಳ್ಳುವ ಲಕ್ಷಗಟ್ಟಲೆ ಫಲಿತಾಂಶಗಳ ಪೈಕಿ ಹಲವಾರು ಪ್ರಮುಖ ವಿಶ್ವವಿದ್ಯಾನಿಲಯಗಳ ತಾಣಗಳು ಅಗ್ರಗಣ್ಯವಾಗಿರುವುದನ್ನು ನಾವೇ ನೋಡಬಹುದು.

ಹಲವಾರು ಜಾಲತಾಣಗಳೂ ಶೈಕ್ಷಣಿಕ ಸಂಪನ್ಮೂಲಗಳನ್ನು ಉಚಿತವಾಗಿ ಒದಗಿಸುವ ಪ್ರಯತ್ನಗಳಲ್ಲಿ ತೊಡಗಿಸಿಕೊಂಡಿವೆ. coursera.org ಹಾಗೂ khanacademy.org ಇಲ್ಲಿ ಹೆಸರಿಸಬಹುದಾದ ಎರಡು ತಾಣಗಳು.
***

2-5-16.
ವಿಕಿಪೀಡಿಯ
ಯಾವುದೋ ವಿಷಯದ ಕುರಿತು ಗೂಗಲ್ ಸರ್ಚ್ ಮಾಡುವಾಗ ಬಹಳಷ್ಟು ಸಾರಿ ಅಲ್ಲಿ ಕಾಣುವ ಫಲಿತಾಂಶಗಳಲ್ಲಿ ವಿಕಿಪೀಡಿಯ ತಾಣಕ್ಕೆ ಅಗ್ರಸ್ಥಾನ ಇರುತ್ತದೆ.

ಈ ವಿಕಿಪೀಡಿಯ ಎನ್ನುವುದೊಂದು ವಿಶ್ವಕೋಶ. ಹಿಂದೆ ಗ್ರಂಥಾಲಯದ ಕಪಾಟಿನಲ್ಲಿರುತ್ತಿದ್ದ ದೊಡ್ಡದೊಡ್ಡ ಪುಸ್ತಕಗಳ ರೂಪದ ವಿಶ್ವಕೋಶಕ್ಕೂ ವಿಕಿಪೀಡಿಯಕ್ಕೂ ಬಹಳ ವ್ಯತ್ಯಾಸವಿದೆ. ಇದು ಮುದ್ರಿತ ರೂಪದಲ್ಲಿಲ್ಲ ಮತ್ತು ಇದನ್ನು ಬಳಸಲು ಹಣ ಕೊಡಬೇಕಿಲ್ಲ ಎನ್ನುವುದು ಒಂದು ವ್ಯತ್ಯಾಸವಾದರೆ ಇದಕ್ಕೆ ಯಾರು ಬೇಕಾದರೂ ಮಾಹಿತಿ ಸೇರಿಸಬಹುದು, ಅಲ್ಲಿರುವ ಮಾಹಿತಿಯನ್ನು ಉತ್ತಮಪಡಿಸಬಹುದು ಎನ್ನುವುದು ಇನ್ನೊಂದು ಮುಖ್ಯವಾದ ವ್ಯತ್ಯಾಸ. ವಿಕಿಮೀಡಿಯ ಫೌಂಡೇಶನ್ ಆಶ್ರಯದಲ್ಲಿ ನಡೆಯುವ ಈ ತಾಣವನ್ನು ರೂಪಿಸಿದ ಕೀರ್ತಿ ಜಿಮ್ಮಿ ವೇಲ್ಸ್ ಹಾಗೂ ಲ್ಯಾರಿ ಸ್ಯಾಂಗರ್ ಅವರದ್ದು. ಕನ್ನಡವೂ ಸೇರಿದಂತೆ ಪ್ರಪಂಚದ 250ಕ್ಕೂ ಹೆಚ್ಚು ಭಾಷೆಗಳಲ್ಲಿ ವಿಕಿಪೀಡಿಯ ಲಭ್ಯವಿದೆ. ಕನ್ನಡ ವಿಕಿಪೀಡಿಯ ತಾಣದ ವಿಳಾಸ kn.wikipedia.org.

ಅಂದಹಾಗೆ ವಿಕಿ ಎಂಬ ಶಬ್ದ ಹವಾಯಿ ಭಾಷೆಯದ್ದು. ಆ ಭಾಷೆಯಲ್ಲಿ ವಿಕಿ ಎಂದರೆ ಚುರುಕಾದ ಅಥವಾ ಚಟುವಟಿಕೆಯ ಎಂದು ಅರ್ಥವಂತೆ.
***

3-5-16
ಮಾಹಿತಿ ಸಂಗ್ರಹಣೆ.
ಪತ್ರಿಕೆಗಳಲ್ಲಿ ಪ್ರಕಟವಾದ ಉಪಯುಕ್ತ ಮಾಹಿತಿಯನ್ನು ಕತ್ತರಿಸಿ ಜೋಡಿಸಿಟ್ಟುಕೊಂಡು ಅಗತ್ಯಬಿದ್ದಾಗ ಬಳಸುವ ಅಭ್ಯಾಸ ನಮ್ಮಲ್ಲಿ ಅನೇಕರಿಗೆ ಇತ್ತು. ಈಗ ಕಾಲ ಬದಲಾಗಿದೆಯಲ್ಲ, ನಮ್ಮ ಬಹುಪಾಲು ಓದು ಇದೀಗ ಜಾಲತಾಣಗಳಲ್ಲಿ ಸಾಗುತ್ತದೆ. ಆದರೆ ಹೀಗೆ ಓದಿದ, ನಮಗೆ ಇಷ್ಟವಾದ ಅಂಶಗಳು ಮತ್ತೊಮ್ಮೆ ಬೇಕೆನಿಸಿದಾಗ ಹುಡುಕಿಕೊಳ್ಳುವುದು ಕಷ್ಟ ಎನ್ನುವುದು ಹಲವರ ಸಮಸ್ಯೆ.

ಈ ಸಮಸ್ಯೆಯಿಂದ ಪಾರಾಗಲು ಇರುವ ಅನೇಕ ಸೌಲಭ್ಯಗಳಲ್ಲಿ ‘ಪಾಕೆಟ್’ ಕೂಡ ಒಂದು. getpocket.com ತಾಣದಲ್ಲೊಂದು ಖಾತೆ ತೆರೆದರೆ ಆಯಿತು, ನಮಗಿಷ್ಟವಾದ ವೆಬ್​ಪುಟಗಳನ್ನು ಇಲ್ಲಿ ಸುಲಭವಾಗಿ ಉಳಿಸಿಟ್ಟುಕೊಳ್ಳಬಹುದು. ಅಷ್ಟೇ ಅಲ್ಲ, ಆ ಮಾಹಿತಿಯಷ್ಟನ್ನೂ ಮೊಬೈಲ್ ಆಪ್​ಗೆ ವರ್ಗಾಯಿಸಿಕೊಂಡು ಬಿಡುವಾದಾಗ ಓದಿಕೊಳ್ಳಬಹುದು.

ಮುದ್ರಿತ ಪುಸ್ತಕ-ಪತ್ರಿಕೆಗಳಲ್ಲಿನ ಮಾಹಿತಿಯನ್ನು ಸಂಗ್ರಹಿಸಿಟ್ಟುಕೊಳ್ಳಲೂ ಸುಲಭ ವಿಧಾನಗಳಿವೆ. ’camscaner ಎನ್ನುವ ಆಪ್ ಬಳಸಿದರೆ ನಮಗೆ ಬೇಕಾದ ಮಾಹಿತಿಯನ್ನು ಮೊಬೈಲ್ ಕ್ಯಾಮರಾ ಸಹಾಯದಿಂದ ತಕ್ಷಣವೇ ಸ್ಕ್ಯಾನ್ ಮಾಡಿಟ್ಟುಕೊಳ್ಳುವುದು, ಹುಡುಕಲು ಸುಲಭವಾಗುವಂತೆ ಜೋಡಿಸಿಟ್ಟುಕೊಳ್ಳುವುದು ಸಾಧ್ಯ. ಹಾಗೆ ಸಂಗ್ರಹಿಸಿಕೊಂಡದ್ದನ್ನು ಇತರರೊಡನೆ ಹಂಚಿಕೊಳ್ಳುವುದೂ ಸುಲಭ.
***
4-5-16

image

***

5-5-16.
ಇ-ಬುಕ್
ಪ್ರಕಟವಾದ ಒಳ್ಳೆಯ ಪುಸ್ತಕಗಳೆಲ್ಲ ನಮಗೆ ಸಿಗುವುದಿಲ್ಲ, ಸಿಕ್ಕರೂ ಎಲ್ಲವನ್ನೂ ಕೊಂಡಿಟ್ಟುಕೊಳ್ಳಲು ಮನೆಯಲ್ಲಿ ಜಾಗ ಇರುವುದಿಲ್ಲ. ಈ ಸಮಸ್ಯೆ ತಪ್ಪಿಸಲು ಹುಟ್ಟಿಕೊಂಡದ್ದೇ ವಿದ್ಯುನ್ಮಾನ ಪುಸ್ತಕ, ಅಂದರೆ ಇ-ಬುಕ್​ಗಳ ಪರಿಕಲ್ಪನೆ.

ಪುಸ್ತಕದ ಸ್ವರೂಪವನ್ನು ಹಾಗೆಯೇ ಉಳಿಸಿಕೊಂಡು ಅದರ ಭೌತಿಕ ರೂಪವನ್ನು ಡಿಜಿಟಲ್ ರೂಪಕ್ಕೆ ಪರಿವರ್ತಿಸುವುದು ಇ-ಪುಸ್ತಕಗಳ ವೈಶಿಷ್ಟ್ಯ ಇವನ್ನು ಓದಲೆಂದೇ ಕಿಂಡಲ್​ನಂತಹ ಪ್ರತ್ಯೇಕ ಸಾಧನಗಳು (ಇ-ಬುಕ್ ರೀಡರ್) ರೂಪುಗೊಂಡಿವೆ. ಅಂತಹುದೊಂದು ಸಾಧನವಿದ್ದರೆ ಸಾಕು, ಆ ಪುಸ್ತಕಗಳಂತೆ ಇ-ಪುಸ್ತಕದಲ್ಲೂ ಪುಟ ತಿರುಗಿಸಬಹುದು, ಬುಕ್​ವಾರ್ಕ್ ಇಡಬಹುದು!

ಪ್ರತ್ಯೇಕವಾಗಿ ಇ-ಬುಕ್ ರೀಡರನ್ನೇಕೆ ಕೊಳ್ಳಬೇಕು ಎನ್ನುವವರೂ ಚಿಂತಿಸಬೇಕಿಲ್ಲ. ಅಪಾರ ಸಂಖ್ಯೆಯ ವಿದ್ಯುನ್ಮಾನ ಪುಸ್ತಕಗಳನ್ನು ನಮ್ಮ ಮೊಬೈಲ್ ಹಾಗೂ ಟ್ಯಾಬ್ಲೆಟ್ಟುಗಳಲ್ಲೇ ದೊರಕಿಸುವ ಹಲವು ಆಪ್​ಗಳು ಆಪ್ ಅಂಗಡಿಗಳಲ್ಲಿ ಸಿಗುತ್ತವೆ. ಅಮೆಜಾನ್ ಕಿಂಡಲ್ (Amazon Kindle) ಹಾಗೂ

ಗೂಗಲ್ ಪ್ಲೇ ಬುಕ್ಸ್ (Google Play Books) ಇಂತಹ ಆಪ್​ಗಳಿಗೆ ಉದಾಹರಣೆಗಳು. ಇಲ್ಲಿ ದೊರಕುವ ಪುಸ್ತಕಗಳಲ್ಲಿ ಕೆಲವು ಉಚಿತವಾದರೆ ಇನ್ನು ಕೆಲವನ್ನು ದುಡ್ಡು ಕೊಟ್ಟು ಕೊಳ್ಳಬೇಕು. ಡೈಲಿಹಂಟ್(Daily Hunt)ನಂತಹ ಆಪ್​ಗಳಲ್ಲಿ ಕನ್ನಡ ಪುಸ್ತಕಗಳೂ ಸಿಗುತ್ತವೆ.
***

6-5-16.
ಐಎಂಪಿಎಸ್: ಹಣ, ತಕ್ಷಣ!
ಯಾರಿಗಾದರೂ ಹಣ ಪಾವತಿಸಬೇಕಾದಾಗ ಚೆಕ್ ಅಥವಾ ಡಿಮಾಂಡ್ ಡ್ರಾಫ್ಟ್ ನೀಡುವ ಅಭ್ಯಾಸ ಬಹಳ ಹಳೆಯದು. ಈ ವಿಧಾನದಲ್ಲಿ ಹಣ ಅವರ ಕೈಸೇರಲು ಬೇಕಾದ ಸಮಯವೂ ಹೆಚ್ಚು. ಇದರ ಬದಲು ಹಣವನ್ನೇ ಕೊಂಡೊಯ್ಯುತ್ತೇವೆಂದರೆ ಸುರಕ್ಷತೆಯ ತಲೆನೋವು ನಮ್ಮನ್ನು ಕಾಡುತ್ತದೆ.

ಈ ಸಮಸ್ಯೆಗೆ ಮೊದಲ ಪರಿಹಾರ ‘ಎನ್​ಇಎಫ್​ಟಿ’ (ನ್ಯಾಷನಲ್ ಇಲೆಕ್ಟ್ರಾನಿಕ್ ಫಂಡ್ಸ್ ಟ್ರಾನ್ಸ್​ಫರ್) ವ್ಯವಸ್ಥೆ. ಈ ವ್ಯವಸ್ಥೆ ಮೂಲಕ ದೇಶದ ಯಾವುದೇ ಬ್ಯಾಂಕ್ ಗ್ರಾಹಕ ಯಾವುದೇ ಬ್ಯಾಂಕಿನ ಮತ್ತೊಬ್ಬ ಗ್ರಾಹಕನ ಖಾತೆಗೆ ಹಣ ವರ್ಗಾಯಿಸುವುದು ಸಾಧ್ಯ. ಆದರೆ ಎನ್​ಇಎಫ್​ಟಿ ಮೂಲಕ ಹಣ ವರ್ಗಾವಣೆಯಾಗುವುದು ಬ್ಯಾಂಕ್ ಕೆಲಸದ ದಿನಗಳಲ್ಲಿ, ಅದೂ ನಿರ್ದಿಷ್ಟ ಸಮಯದಲ್ಲಿ ಮಾತ್ರ.

ಇಂತಹ ಯಾವುದೇ ನಿರ್ಬಂಧವಿಲ್ಲದೆ ಯಾವಾಗ ಬೇಕಾದರೂ ಥಟ್ಟನೆ ಹಣ ವರ್ಗಾಯಿಸಲು ಇರುವ ವ್ಯವಸ್ಥೆಯೇ ಐಎಂಪಿಎಸ್ (ಇಮ್ಮಿಡಿಯೇಟ್ ಪೇಮೆಂಟ್ ಸರ್ವೀಸ್). ನ್ಯಾಷನಲ್ ಪೇಮೆಂಟ್ಸ್ ಕಾರ್ಪೆರೇಷನ್ ಆಫ್ ಇಂಡಿಯಾ (ಎನ್​ಪಿಸಿಐ) ಸಂಸ್ಥೆ ರೂಪಿಸಿರುವ ಈ ವ್ಯವಸ್ಥೆ ಬಳಸಿ ನೆಟ್​ಬ್ಯಾಂಕಿಂಗ್ ಮೂಲಕವಷ್ಟೇ ಅಲ್ಲ, ಮೊಬೈಲ್ ಮೂಲಕವೂ ಹಣವನ್ನು ವರ್ಗಾಯಿಸುವುದು ಸಾಧ್ಯ. ಈ ಕುರಿತ ಹೆಚ್ಚಿನ ವಿವರಗಳಿಗೆ ನಿಮ್ಮ ಬ್ಯಾಂಕನ್ನು ಸಂರ್ಪಸಬಹುದು.
***

7-5-16.
ಜಾಲತಾಣದ ವಿಳಾಸ, ನಮ್ಮದೇ ಭಾಷೆಯಲ್ಲಿ

ಅಂತರ್ಜಾಲ ಬಳಸುವವರಿಗೆಲ್ಲ ಜಾಲತಾಣಗಳು (ವೆಬ್ಸೈಟ್) ಗೊತ್ತು. ನಿರ್ದಿಷ್ಟ ಜಾಲತಾಣಗಳನ್ನು ಗುರುತಿಸಲು ಬಳಸುವ ವಿಳಾಸವಿದೆಯಲ್ಲ – ವಿಜಯವಾಣಿ ಡಾಟ್ ನೆಟ್, ಇಜ್ಞಾನ ಡಾಟ್ ಕಾಮ್ ಇತ್ಯಾದಿ – ಅದನ್ನು ಡೊಮೈನ್ ನೇಮ್ ಎಂದು ಕರೆಯುತ್ತಾರೆ (http://vijayavani.net/?p=1771121) ಎನ್ನುವಂತಹ ರೂಪದ ಪೂರ್ಣವಿಳಾಸಕ್ಕೆ ಯೂನಿಫಾಮ್ರ್ ರಿಸೋರ್ಸ್ ಲೊಕೇಟರ್ ಅಥವಾ ಯುಆರ್​ಎಲ್ ಎಂದು ಹೆಸರು; ಡೊಮೈನ್ ನೇಮ್ ಎನ್ನುವುದು ಯುಆರ್​ಎಲ್​ನ ಒಂದು ಭಾಗ).

ಜಾಲತಾಣದಲ್ಲಿರುವ ಮಾಹಿತಿ ಯಾವ ಭಾಷೆಯದೇ ಆದರೂ ಅದರ ವಿಳಾಸ ಮಾತ್ರ ಇಂಗ್ಲಿಷಿನಲ್ಲೇ ಇರುವುದನ್ನು ನಾವು ನೋಡುತ್ತೇವಲ್ಲ, ಈ ಪರಿಸ್ಥಿತಿ ಇದೀಗ ಬದಲಾಗುತ್ತಿದೆ. ಜಾಲತಾಣದಲ್ಲಿರುವ ಮಾಹಿತಿಯಂತೆ ಅದರ ವಿಳಾಸದಲ್ಲೂ ನಮ್ಮ ಆಯ್ಕೆಯ ಭಾಷೆಯನ್ನು ಬಳಸಲು ಅನುವುಮಾಡಿಕೊಡುವ ‘ಇಂಟರ್​ನ್ಯಾಷನಲೈಸ್ಡ್ ಡೊಮೈನ್ ನೇಮ್​ಗಳು (ಐಡಿಎನ್) ಇದೀಗ ಬಳಕೆಗೆ ಬರುತ್ತಿವೆ.

ದೇವನಾಗರಿ, ಬಂಗಾಳಿ, ಪಂಜಾಬಿ, ತಮಿಳು, ತೆಲುಗು ಸೇರಿದಂತೆ ಹಲವು ಭಾರತೀಯ ಲಿಪಿಗಳಲ್ಲಿ ಡೊಮೈನ್ ನೇಮ್ಳನ್ನು ರೂಪಿಸಿಕೊಳ್ಳುವುದು ಈಗಾಗಲೇ ಸಾಧ್ಯವಾಗಿದೆ. ಜಾಲತಾಣದ ಹೆಸರು ಸ್ಥಳೀಯ ಲಿಪಿಯಲ್ಲಿರುವುದಷ್ಟೇ ಅಲ್ಲ; ಡಾಟ್ ಕಾಮ್ ಡಾಟ್ ನೆಟ್​ಗಳ ಜಾಗದಲ್ಲಿ ಜಾಲತಾಣದ ವಿಶೇಷಣವನ್ನು (ಟಾಪ್​ಲೆವೆಲ್ ಡೊಮೈನ್ ಅಥವಾ ಟಿಎಲ್​ಡಿ) ಕೂಡ ಅದೇ ಲಿಪಿಯಲ್ಲಿ ‘ಡಾಟ್ ಭಾರತ’ ಎಂದು ಬರೆಯಬಹುದು. ಈ ಸೌಲಭ್ಯವಿರುವ ಭಾರತೀಯ ಭಾಷೆಗಳ ಸಾಲಿಗೆ ಕನ್ನಡವೂ ಇಷ್ಟರಲ್ಲೇ ಸೇರಲಿದೆ ಎನ್ನುವುದು ವಿಶೇಷ.
***

8-5-16
ಜಿಪಿಎಸ್ ಬದಲಿಗೆ ನಮ್ಮದೇ ವ್ಯವಸ್ಥೆ.

ಎಲ್ಲಿಗಾದರೂ ಹೊರಟಾಗ ಆಟೋ ಅಥವಾ ಟ್ಯಾಕ್ಸಿ ಕರೆಸಲು ಮೊಬೈಲ್ ಆಪ್ ಬಳಸುವುದು ನಗರವಾಸಿಗಳಿಗೆ ಈಗಾಗಲೇ ಚೆನ್ನಾಗಿ ಅಭ್ಯಾಸವಾಗಿರುವ ಸಂಗತಿ. ಹೀಗೆ ಟ್ಯಾಕ್ಸಿ ಬುಕ್ ಮಾಡಿದಾಗ ನಾವೆಲ್ಲಿದ್ದೇವೆ ಎಂದು ಟ್ಯಾಕ್ಸಿ ಚಾಲಕರಿಗೆ, ಅವರೆಲ್ಲಿದ್ದಾರೆ ಎಂದು ನಮಗೆ ಆಪ್​ನಲ್ಲಿರುವ ಮ್ಯಾಪ್ ಮೂಲಕ ತಿಳಿಯುತ್ತದೆ; ಇದಕ್ಕಾಗಿ ಬಳಕೆಯಾಗುವ ವ್ಯವಸ್ಥೆಯೇ ಗ್ಲೋಬಲ್ ಪೊಸಿಷನಿಂಗ್ ಸಿಸ್ಟಂ (ಜಿಪಿಎಸ್).

ಈ ವ್ಯವಸ್ಥೆಯ ಹಿಂದೆ ಉಪಗ್ರಹಗಳ ಒಂದು ಜಾಲವೇ ಇದೆ. ಮೊಬೈಲ್ ಫೋನಿನಲ್ಲೋ ಪ್ರತ್ಯೇಕ ಉಪಕರಣದಲ್ಲೋ ಜಿಪಿಎಸ್ ರಿಸೀವರ್ ಇರುವ ಯಾರು ಬೇಕಿದ್ದರೂ ಈ ಉಪಗ್ರಹಗಳಿಂದ ಸಂಕೇತ ಪಡೆದುಕೊಂಡು ತಮ್ಮ ಸ್ಥಾನವನ್ನು ತಿಳಿದುಕೊಳ್ಳುವುದು ಸಾಧ್ಯವಾಗುತ್ತದೆ.

ಆದರೆ ಜಿಪಿಎಸ್ ಸೌಲಭ್ಯ ಒದಗಿಸಲು ಕೆಲಸಮಾಡುತ್ತಿರುವ ಉಪಗ್ರಹಗಳೆಲ್ಲ ಅಮೆರಿಕ ಸರ್ಕಾರದ ನಿಯಂತ್ರಣದಲ್ಲಿವೆ. ಹೀಗಾಗಿ ಜಿಪಿಎಸ್ ಬಳಕೆದಾರರೆಲ್ಲ ಒಂದಲ್ಲ ಒಂದು ರೀತಿಯಲ್ಲಿ ಅಮೆರಿಕದ ಮೇಲೆಯೇ ಅವಲಂಬಿಸಬೇಕಾದ್ದು ಅನಿವಾರ್ಯ. ದೇಶದ ಹಿತಾಸಕ್ತಿಯ ದೃಷ್ಟಿಯಿಂದ ನೋಡಿದರೆ ಇಂತಹ ಅವಲಂಬನೆ ಒಳ್ಳೆಯದಲ್ಲವಲ್ಲ, ಹಾಗಾಗಿ ನಮ್ಮ ದೇಶವು ಜಿಪಿಎಸ್​ಗೊಂದು ಪರ್ಯಾಯವನ್ನು ರೂಪಿಸುತ್ತಿದೆ. ಇಂಡಿಯನ್ ರೀಜನಲ್ ನ್ಯಾವಿಗೇಷನ್ ಸ್ಯಾಟಲೈಟ್ ಸಿಸ್ಟಂ (IRNSS) ಎಂಬ ಹೆಸರಿನ ಈ ವ್ಯವಸ್ಥೆಯಲ್ಲಿ ಏಳು ಉಪಗ್ರಹಗಳು ಬಳಕೆಯಾಗಲಿದ್ದು ಆ ಪೈಕಿ ಎಲ್ಲವೂ ಈಗಾಗಲೇ ಯಶಸ್ವಿಯಾಗಿ ತಮ್ಮ ಕಕ್ಷೆಯನ್ನು ತಲುಪಿವೆ ಎನ್ನುವುದು ಹೆಮ್ಮೆಯ ಸಂಗತಿ.
***

9-5-16
ನಮ್ಮದೂ ಒಂದು ಮೊಬೈಲ್ ಆಪ್
ಸ್ಮಾರ್ಟ್ಫೋನುಗಳು ಸರ್ವಾಂತರ್ಯಾಮಿ ಗಳಾಗಿರುವ ಈ ಕಾಲದಲ್ಲಿ ಎಲ್ಲ ಕೆಲಸಕ್ಕೂ ಒಂದೊಂದು ಆಪ್ ಬಳಸುವುದು ನಮಗೆ ಅಭ್ಯಾಸವಾಗಿಹೋಗಿದೆ. ಬೇರೆಯವರು ರೂಪಿಸಿದ ಇಷ್ಟೆಲ್ಲ ವೈವಿಧ್ಯಮಯ ಆಪ್​ಗಳನ್ನು ಬಳಸುವಾಗ ನಾವೂ ಒಂದು ಆಪ್ ರೂಪಿಸುವಂತಿದ್ದರೆ ಎನ್ನುವ ಯೋಚನೆ ಕೆಲವರಿಗಾದರೂ ಬಾರದಿರದು.

ನಮಗೆ ಪ್ರೋಗ್ರಾಮಿಂಗ್ ಗೊತ್ತಿಲ್ಲ, ಹಾಗಾಗಿ ಈ ಯೋಚನೆ ಕಾರ್ಯಗತವಾಗುವುದಿಲ್ಲ ಎಂದು ನಿರಾಶರಾಗುವ ಅಗತ್ಯವೇನೂ ಇಲ್ಲ. ಏಕೆಂದರೆ ಪ್ರೋಗ್ರಾಮಿಂಗ್ ಬಾರದವರೂ ಆಪ್ ರೂಪಿಸಿಕೊಳ್ಳಲು ನೆರವಾಗುವ ಸೌಲಭ್ಯಗಳು ಜಾಲಲೋಕದಲ್ಲಿವೆ.

ಈಗ ನೀವೊಂದು ಬ್ಲಾಗ್ ನಡೆಸುತ್ತಿದ್ದೀರಿ ಎಂದುಕೊಳ್ಳೋಣ. ಪ್ರತಿಬಾರಿಯೂ ಪೂರ್ಣ ವಿಳಾಸ ಟೈಪಿಸಿ ಆ ತಾಣಕ್ಕೆ ಬರುವ ಬದಲು ಆಪ್ ತೆರೆದ ತಕ್ಷಣ ಆ ತಾಣದಲ್ಲಿರುವ ಮಾಹಿತಿ ಪ್ರತ್ಯಕ್ಷವಾಗುವಂತಿದ್ದರೆ ಓದುಗರನ್ನು ಸೆಳೆಯುವುದು ಸುಲಭವಾಗುತ್ತದೆ ಎನ್ನುವುದು ನಿಮ್ಮ ಯೋಚನೆ.

ವಿಶ್ವವ್ಯಾಪಿ ಜಾಲದಲ್ಲಿ ಲಭ್ಯವಿರುವ ‘ಆಪ್ಸ್ ಗೀಸರ್’ನಂತಹ (www.appsgeyser.com) ಉಚಿತ ಸೇವೆಗಳನ್ನು ಬಳಸಿ ನೀವು ನಿಮ್ಮ ಬ್ಲಾಗಿನ ಆಪ್ ರೂಪಿಸಿಕೊಳ್ಳಬಹುದು.

ಇಂತಹುದೇ ಸೇವೆ ಒದಗಿಸುವ ಇನ್ನೂ ಹಲವಾರು ತಾಣಗಳು ಜಾಲಲೋಕದಲ್ಲಿವೆ. ಅವನ್ನು ಗುರುತಿಸಲು ಗೂಗಲ್ ಮೊರೆಹೋಗುವುದು ಸುಲಭ ವಿಧಾನ. ಗೂಗಲ್ ತಾಣದಲ್ಲಿ “create apps without coding’ ಎಂದು ಟೈಪಿಸಿದರೆ ಸಾಕು, ಸಾವಿರಾರು ಕೊಂಡಿಗಳು ನಮ್ಮ ಕಣ್ಣೆದುರು ಬಂದುನಿಲ್ಲುತ್ತವೆ!
***

10-5-16
ಪಾಸ್ ವರ್ಡ್ ಬಗ್ಗೆ ಇರಲಿ ಎಚ್ಚರ!
ಕಂಪ್ಯೂಟರ್ ಪ್ರಪಂಚದಲ್ಲಿನ ನಮ್ಮ ಚಟುವಟಿಕೆಗಳನ್ನೆಲ್ಲ ಸುರಕ್ಷಿತವಾಗಿಡುವ ಒಂದು ಬೀಗ ಇದೆ ಎಂದು ಭಾವಿಸಿಕೊಂಡರೆ ಪಾಸ್​ವರ್ಡಗಳನ್ನು ಆ ಬೀಗದ ಕೀಲಿಕೈ ಎಂದೇ ಕರೆಯಬಹುದು. ಮನೆಯ ಕೀಲಿಕೈ ಕುರಿತು ಎಚ್ಚರವಹಿಸುವಂತೆ ಕಂಪ್ಯೂಟರಿನ ವರ್ಚುಯಲ್ ಲೋಕದಲ್ಲೂ ಪಾಸ್​ವರ್ಡ್ ರೂಪದ ಕೀಲಿಕೈಗಳನ್ನು ಜೋಪಾನವಾಗಿ ಕಾಪಾಡಿಕೊಳ್ಳಬೇಕಾದ್ದು ಅನಿವಾರ್ಯ.

ನಮ್ಮ ಪಾಸ್ವರ್ಡನ್ನು ಇತರರೊಡನೆ ಹಂಚಿಕೊಳ್ಳದಿರುವುದು, ಯಾವ ಕಾರಣಕ್ಕೂ ಪಾಸ್​ವರ್ಡ್ಗಳ ಮರುಬಳಕೆ ಮಾಡದಿರುವುದು ಈ ನಿಟ್ಟಿನಲ್ಲಿ ನಾವು ಪಾಲಿಸಬೇಕಾದ ಮೊದಲ ನಿಯಮ. ಬೇರೆ ಬೇರೆ ಬೀಗಗಳಿಗೆ ಬೇರೆ ಬೇರೆ ಕೀಲಿಕೈಗಳಿರುವಂತೆಯೇ ಬೇರೆ ಬೇರೆ ಅಕೌಂಟುಗಳಿಗೆ ಬೇರೆ ಬೇರೆ ಪಾಸ್ವರ್ಡಗಳೇ ಇರಬೇಕು. ಒಂದೊಮ್ಮೆ ನಮ್ಮ ಯಾವುದೋ ಒಂದು ಖಾತೆಯ ಪಾಸ್​ವರ್ಡ್ ಕಳುವಾದರೂ ಇತರ ಖಾತೆಗಳು ಸುರಕ್ಷಿತವಾಗಿರುವಂತೆ ನೋಡಿಕೊಳ್ಳಲು ಈ ಕ್ರಮ ಅನಿವಾರ್ಯ.

ಹಾಗೆಯೇ ತೀರಾ ಸರಳ ಪದಗಳನ್ನು (ಉದಾ: ನಿಮ್ಮ ಹೆಸರು, ಊರಿನ ಹೆಸರು, ಪಾಸ್​ವರ್ಡ್ ಇತ್ಯಾದಿ) ಪಾಸ್ವರ್ಡ್ ಆಗಿ ಆರಿಸಿಕೊಳ್ಳುವುದು ಒಳ್ಳೆಯ ಅಭ್ಯಾಸವಲ್ಲ. ತೀರಾ ಕಡಿಮೆ ಅಕ್ಷರಗಳ ಪಾಸ್ವರ್ಡ್ ಬಳಸುವುದೂ ತಪ್ಪು – ಕುತಂತ್ರಾಂಶಗಳು ಇಂತಹ ಪಾಸ್ವರ್ಡ್ಗಳನ್ನು ಸುಲಭವಾಗಿ ಊಹಿಸಬಲ್ಲವು. ಆದ್ದರಿಂದ ಅಕ್ಷರ, ಅಂಕಿ ಹಾಗೂ ವಿಶೇಷ ಚಿಹ್ನೆಗಳ ಅರ್ಥರಹಿತ ಜೋಡಣೆಯನ್ನು ಪಾಸ್ವರ್ಡ್ ಆಗಿ ಬಳಸುವುದು ಆದಷ್ಟೂ ಒಳ್ಳೆಯದು. ನಿರ್ದಿಷ್ಟ ಅವಧಿಗೊಮ್ಮೆ ಪಾಸ್ವರ್ಡ್ ಬದಲಿಸುತ್ತಿರುವುದು ಕೂಡ ಉತ್ತಮ ಅಭ್ಯಾಸ.
***

11-5-16
ಮೊಬೈಲ್ ತಲೆಮಾರು:
ಮೊಬೈಲ್ ವಿಷಯ ಬಂದಾಗಲೆಲ್ಲ 2ಜಿ, 3ಜಿ, 4ಜಿ ಎನ್ನುವ ಹೆಸರುಗಳ ಪ್ರಸ್ತಾಪ ಬರುವುದು ಸಾಮಾನ್ಯ. ಈ ಹೆಸರುಗಳಲ್ಲಿ ಜಿ ಎನ್ನುವುದು ಜನರೇಶನ್, ಅಂದರೆ ತಲೆಮಾರನ್ನು ಪ್ರತಿನಿಧಿಸುತ್ತದೆ. ಸರಳವಾಗಿ ಹೇಳುವುದಾದರೆ 2ಜಿ ಎನ್ನುವುದು ಅಪ್ಪನ ಕಾಲದ ತಂತ್ರಜ್ಞಾನ, 3ಜಿ ಮಕ್ಕಳ ಕಾಲದ್ದು ಮತ್ತು 4ಜಿ ಮೊಮ್ಮಕ್ಕಳ ಕಾಲದ್ದು!

ಮೊದಮೊದಲು ರೂಪುಗೊಂಡ ಮೊಬೈಲ್ ಫೋನುಗಳು ಅನಲಾಗ್ ತಂತ್ರಜ್ಞಾನವನ್ನು ಬಳಸುತ್ತಿದ್ದವು. ದೂರವಾಣಿ ಕರೆಗಳನ್ನು ಮಾಡಲಷ್ಟೆ ನೆರವಾಗುತ್ತಿದ್ದ ಆ ತಂತ್ರಜ್ಞಾನವೇ ಮೊಬೈಲ್ ದೂರವಾಣಿಯ ಮೊದಲ ತಲೆಮಾರು (1ಜಿ). ಎರಡನೇ ತಲೆಮಾರು 2ಜಿ. ದೂರವಾಣಿ ಕರೆ ಮಾಡುವುದರ (ವಾಯ್್ಸ ಜತೆಗೆ ದತ್ತಾಂಶದ ವರ್ಗಾವಣೆಯನ್ನೂ (ಡೇಟಾ) ಸಾಧ್ಯವಾಗಿಸಿ ಮೊಬೈಲ್ ದೂರವಾಣಿ ವ್ಯವಸ್ಥೆಗೆ ಡಿಜಿಟಲ್ ಸ್ಪರ್ಶ ನೀಡಿದ ತಂತ್ರಜ್ಞಾನ ಇದು. 2ಜಿ ನಂತರ ಬಂದ ಮೂರನೇ ತಲೆಮಾರಿನ ತಂತ್ರಜ್ಞಾನದಿಂದಾಗಿ (3ಜಿ) ಮೊಬೈಲ್ ಇಂಟರ್​ನೆಟ್ ಕ್ಷೇತ್ರ ಇನ್ನಷ್ಟು ಮುಂದುವರಿಯಿತು, ಮೊಬೈಲ್ ಫೋನ್ ಪುಟಾಣಿ ಕಂಪ್ಯೂಟರ್ ಆಗಿ ಬದಲಾಯಿತು.

ಸದ್ಯ ಮಾರುಕಟ್ಟೆಯಲ್ಲಿರುವ 4ಜಿ, ನಾಲ್ಕನೇ ತಲೆಮಾರಿನ ಮೊಬೈಲ್ ತಂತ್ರಜ್ಞಾನ. 3ಜಿ ಹೋಲಿಕೆಯಲ್ಲಿ ನಾಲ್ಕಾರು ಪಟ್ಟು ವೇಗದ ಅಂತರ್ಜಾಲ ಸಂಪರ್ಕವನ್ನು ಸಾಧ್ಯವಾಗಿಸುವುದು ಇದರ ಹೆಚ್ಚುಗಾರಿಕೆ. ಇನ್ನೂ ಹೆಚ್ಚು ವೇಗದ, ಹೆಚ್ಚು ಸಮರ್ಥವಾದ ಮುಂದಿನ ತಲೆಮಾರು 5ಜಿಯ ತಯಾರಿಯಲ್ಲಿ ತಜ್ಞರು ಈಗಾಗಲೇ ತೊಡಗಿಕೊಂಡಿದ್ದಾರೆ.
***

12-5-16
ಬ್ರೌಸರ್:
ವಿಶ್ವವ್ಯಾಪಿ ಜಾಲದಲ್ಲಿರುವ ಜಾಲತಾಣಗಳನ್ನು ಕಂಪ್ಯೂಟರಿನಲ್ಲಿ ವೀಕ್ಷಿಸಲು ಬಳಕೆಯಾಗುವ ತಂತ್ರಾಂಶವೇ ಬ್ರೌಸರ್. ಜಾಲಲೋಕದಲ್ಲಿರುವ ಮಾಹಿತಿಯನ್ನು ನಮ್ಮ ಕಂಪ್ಯೂಟರಿಗೆ ಬರಮಾಡಿಕೊಳ್ಳಲು ಈ ತಂತ್ರಾಂಶ ಅತ್ಯಗತ್ಯ. ಲ್ಯಾಪ್​ಟಾಪ್-ಡೆಸ್ಕ್​ಟಾಪ್​ಗಳಿಗಷ್ಟೆ ಅಲ್ಲ, ಟ್ಯಾಬ್ಲೆಟ್ಟು-ಮೊಬೈಲುಗಳಲ್ಲೂ ಬ್ರೌಸರ್ ತಂತ್ರಾಂಶ ಬೇಕು.

1993ರಲ್ಲಿ ವಿಶ್ವದ ಮೊತ್ತಮೊದಲ ಬ್ರೌಸರ್ ‘ಮೊಸಾಯಿಕ್’ ಸಿದ್ಧವಾದ ನಂತರ ಅನೇಕ ಬ್ರೌಸರ್ ತಂತ್ರಾಂಶಗಳು ಬಂದುಹೋಗಿವೆ. ಗೂಗಲ್ ಕ್ರೋಮ್ ಮೊಜಿಲ್ಲಾ ಫೈರ್​ಫಾಕ್ಸ್, ಇಂಟರ್​ನೆಟ್ ಎಕ್ಸ್​ಪ್ಲೋರರ್, ಒಪೆರಾ ಮೊದಲಾದವು ಬ್ರೌಸರ್​ಗೆ ಉದಾಹರಣೆಗಳು. ಈ ಪೈಕಿ ಹಲವು ಬ್ರೌಸರುಗಳ ಕನ್ನಡ ಆವೃತ್ತಿ ಕೂಡ ಇದೆ.

ವಿಶ್ವದ ಮೂಲೆಮೂಲೆಗಳಲ್ಲಿರುವ ಕಂಪ್ಯೂಟರುಗಳಲ್ಲಿ ಶೇಖರವಾಗಿರುವ ಮಾಹಿತಿಯನ್ನು ನಮ್ಮ ಕಂಪ್ಯೂಟರ್ ಅಥವಾ ಮೊಬೈಲಿನಲ್ಲಿ ವೀಕ್ಷಿಸಲು ಈ ತಂತ್ರಾಂಶಗಳು ಅನುವು ಮಾಡಿಕೊಡುತ್ತವೆ. ನಾವು ನೋಡುತ್ತಿರುವ ಜಾಲತಾಣ ಕನ್ನಡದ್ದಾಗಿರಲಿ, ಇಂಗ್ಲಿಷಿನದ್ದಾಗಿರಲಿ ಅಥವಾ ರಷ್ಯನ್ ಭಾಷೆಯದೇ ಇರಲಿ – ತಾಂತ್ರಿಕ ಹೊಂದಾಣಿಕೆಗಳೆಲ್ಲ ಸರಿಯಾಗಿದ್ದ ಪಕ್ಷದಲ್ಲಿ ಅಲ್ಲಿರುವ ಮಾಹಿತಿಯನ್ನು ನಮ್ಮೆದುರು ಪ್ರದರ್ಶಿಸುವುದು ಬ್ರೌಸರ್​ನ ಕೆಲಸ.

ಹೀಗೆ ವಿಶ್ವವ್ಯಾಪಿ ಜಾಲದಲ್ಲಿರುವ ಮಾಹಿತಿಯನ್ನು ನೋಡುವುದು ಮಾತ್ರವಲ್ಲ; ಆ ಮಾಹಿತಿಯನ್ನು ಉಳಿಸಿಕೊಳ್ಳುವುದು, ಮುದ್ರಿಸಿಕೊಳ್ಳುವುದು, ವಿವಿಧ ಪುಟಗಳ ನಡುವೆ ಹಿಂದೆಮುಂದೆ ಓಡಾಡುವುದು, ಅಚ್ಚುಮೆಚ್ಚಿನ ಪುಟಗಳ ವಿಳಾಸ ಸಂಗ್ರಹಿಸಿಟ್ಟುಕೊಳ್ಳುವುದು ಮುಂತಾದ ಇನ್ನಿತರ ಸೌಲಭ್ಯಗಳೂ ಬ್ರೌಸರ್ ತಂತ್ರಾಂಶದಲ್ಲಿರುತ್ತವೆ.
***

13-5-16
ಗೂಗಲ್ ಗೆಳೆಯ
ವಿಶ್ವವ್ಯಾಪಿ ಜಾಲದಲ್ಲಿ ಯಾವ ಮಾಹಿತಿ ಬೇಕಿದ್ದರೂ ಅದನ್ನು ಗೂಗಲ್​ನಲ್ಲಿ ಹುಡುಕಿಕೊಳ್ಳುವುದು ನಮ್ಮೆಲ್ಲರ ಅಭ್ಯಾಸ. ಹೀಗೆ ಹುಡುಕಲು ಹೊರಟಾಗ ನಾವು ಟೈಪ್ ಮಾಡುತ್ತೇವಲ್ಲ ಪದಗಳು, ಅವನ್ನು ಕೀವರ್ಡ್​ಗಳೆಂದು ಕರೆಯುತ್ತಾರೆ. ನಾವು ಹುಡುಕುತ್ತಿರುವ ವಿಷಯವನ್ನು ಆದಷ್ಟೂ ನಿಖರವಾಗಿ ಪ್ರತಿನಿಧಿಸುವ ಕೀವರ್ಡ್​ಗಳನ್ನು ಆರಿಸಿಕೊಂಡರೆ ನಮಗೆ ಸರಿಯಾದ ಮಾಹಿತಿ ಸಿಗುವ ಸಾಧ್ಯತೆ ಜಾಸ್ತಿ. ಅಷ್ಟೇ ಅಲ್ಲ, ಪಠ್ಯ-ಚಿತ್ರ-ವಿಡಿಯೋ ಮುಂತಾದ ಹಲವು ರೂಪಗಳ ಪೈಕಿ ನಾವು ಯಾವ ಬಗೆಯ ಮಾಹಿತಿಯನ್ನು ಹುಡುಕುತ್ತಿದ್ದೇವೆ ಎನ್ನುವುದನ್ನೂ ನಾವು ಗೂಗಲ್​ಗೆ ಹೇಳಬಹುದು.

ಗೂಗಲ್ ತಾಣದಲ್ಲಿ ನಾವು ಕೀವರ್ಡ್​ಗಳನ್ನು ಟೈಪಿಸುವ ಸರ್ಚ್ ಪಟ್ಟಿ ಇದೆಯಲ್ಲ, ಅದು ಇನ್ನೂ ಕೆಲ ಪ್ರಶ್ನೆಗಳಿಗೆ ಉತ್ತರ ಒದಗಿಸಬಲ್ಲದು. ಗಣಿತದ ಸಮಸ್ಯೆ, ವಿದೇಶಿ ವಿನಿಮಯ ಲೆಕ್ಕಾಚಾರ, ಏಕಮಾನಗಳ ಬದಲಾವಣೆ, ಬೇರೆ ದೇಶದಲ್ಲಿ ಸದ್ಯದ ಸಮಯ – ಇಂತಹ ಹಲವು ಪ್ರಶ್ನೆಗಳನ್ನು ಸರ್ಚ್ ಪಟ್ಟಿಯಲ್ಲಿ ದಾಖಲಿಸಿ ಉತ್ತರ ಪಡೆದುಕೊಳ್ಳುವುದು ಸಾಧ್ಯ. ಹತ್ತು ಗುಣಿಲೆ ಹನ್ನೆರಡು ಎನ್ನುವ ಸರಳ ಲೆಕ್ಕ ಇರಬಹುದು, 20 ಡಾಲರು ಎಷ್ಟು ರೂಪಾಯಿಗೆ ಸಮ ಎನ್ನುವ ಕುತೂಹಲವಿರಬಹುದು, ಇಲ್ಲವೇ ಹ್ಯಾರಿಸ್​ಬರ್ಗ್​ನಲ್ಲಿ ಈಗ ಸಮಯವೆಷ್ಟು ಎನ್ನುವ ಪ್ರಶ್ನೆಯಿರಬಹುದು – ಇದಕ್ಕೆಲ್ಲ ಗೂಗಲ್ ಗುರು ಉತ್ತರ ನೀಡಬಲ್ಲ.
***

14-5-16
ಯುನಿಕೋಡ್.

ಹಿಂದೆ ಕನ್ನಡ ಪದಸಂಸ್ಕಾರಕಗಳನ್ನು ಬಳಸುವಾಗ ನಾವು ನಿರ್ದಿಷ್ಟ ಫಾಂಟುಗಳನ್ನು ಅವಲಂಬಿಸಬೇಕಾದ್ದು ಅನಿವಾರ್ಯವಾಗಿತ್ತು. ಟೈಪಿಸುವುದು ಹಾಗಿರಲಿ, ಫಾಂಟ್ ಇನ್​ಸ್ಟಾಲ್ ಮಾಡಿಕೊಳ್ಳದೆ ಕನ್ನಡದ ಪಠ್ಯ ಓದುವುದೂ ಆಗ ಸಾಧ್ಯವಾಗುತ್ತಿರಲಿಲ್ಲ.

ಈ ಪರಿಸ್ಥಿತಿ ಬದಲಾದದ್ದು ಯೂನಿಕೋಡ್ ಸಂಕೇತ ವಿಧಾನ ಬಳಕೆಗೆ ಬಂದಾಗ (ನೆನಪಿಡಿ, ಯೂನಿಕೋಡ್ ಒಂದು ಸಂಕೇತ ವಿಧಾನ – ತಂತ್ರಾಂಶ ಅಲ್ಲ). ಈ ಸೌಲಭ್ಯವಿರುವ ತಂತ್ರಾಂಶಗಳಲ್ಲಿ ಬೆರಳಚ್ಚು ಮಾಡಿದ ಮಾಹಿತಿಯನ್ನು ನೇರವಾಗಿ ಯೂನಿಕೋಡ್​ನಲ್ಲೇ ಸಂಗ್ರಹಿಸಿಡಲಾಗುತ್ತದೆ, ಹಳೆಯ ತಂತ್ರಾಂಶಗಳಂತೆ ಅಕ್ಷರಶೈಲಿಯ (ಫಾಂಟ್) ಸಂಕೇತಗಳಲ್ಲಿ ಅಲ್ಲ. ಹಾಗಾಗಿ ಯೂನಿಕೋಡ್​ನಲ್ಲಿರುವ ಮಾಹಿತಿಯನ್ನು ಬೇರೊಬ್ಬರು ಓದಲು ಕನ್ನಡದ ಯಾವುದೇ ಯೂನಿಕೋಡ್ ಅಕ್ಷರಶೈಲಿ (ಓಪನ್​ಟೈಪ್ ಫಾಂಟ್) ಇದ್ದರೆ ಸಾಕು. ಹಾಗಾಗಿ ಇ-ಮೇಲ್ ಕಳುಹಿಸುವುದು, ಜಾಲತಾಣಗಳಿಗೆ-ಬ್ಲಾಗುಗಳಿಗೆ ಮಾಹಿತಿ ಸೇರಿಸುವುದು, ಅವನ್ನು ಓದುವುದು, ಕನ್ನಡದ ಮಾಹಿತಿಯನ್ನು ಸರ್ಚ್ ಇಂಜಿನ್​ಗಳಲ್ಲಿ ಕನ್ನಡದಲ್ಲೇ ಹುಡುಕುವುದು – ಇದೆಲ್ಲವನ್ನೂ ನಿರ್ದಿಷ್ಟ ತಂತ್ರಾಂಶದ ಮೇಲೆ ಅವಲಂಬಿತರಾಗದೆ ಮಾಡುವುದು ಸಾಧ್ಯವಾಗುತ್ತದೆ.

‘ಬರಹ’, ‘ನುಡಿ’, ‘ಪದ’ ಸೇರಿದಂತೆ ಇತ್ತೀಚಿನ ಬಹುತೇಕ ತಂತ್ರಾಂಶಗಳನ್ನು ಬಳಸಿ ಯೂನಿಕೋಡ್​ನಲ್ಲಿ ಟೈಪಿಸುವುದು ಸಾಧ್ಯ. ಅಂದಹಾಗೆ ಯೂನಿಕೋಡ್ ಅಕ್ಷರಶೈಲಿಯೆಂದರೆ ವಿಂಡೋಸ್​ನಲ್ಲಿ ದೊರಕುವ ‘ತುಂಗಾ’ ಒಂದೇ ಅಲ್ಲ. ಬರಹ, ನುಡಿ ಸೇರಿದಂತೆ ಹಲವು ತಂತ್ರಾಂಶಗಳಲ್ಲಿ ಯೂನಿಕೋಡ್​ಗೆಂದೇ ಪ್ರತ್ಯೇಕ ಫಾಂಟುಗಳಿವೆ.
***

15-5-16
ಫಿಶಿಂಗ್
ಬ್ಯಾಂಕಿನ ಹೆಸರಿನಲ್ಲಿ ಇ-ಮೇಲ್ ಕಳುಹಿಸಿ ಬ್ಯಾಂಕ್ ಖಾತೆ, ಕ್ರೆಡಿಟ್ ಕಾರ್ಡ್ ವಿವರಗಳನ್ನು ಕೇಳುವುದು, ಅರ್ಜಿಯನ್ನೇ ಹಾಕದಿದ್ದಾಗಲೂ ಕೆಲಸಕೊಡುವುದಾಗಿ ಸಂದೇಶ ಕಳಿಸುವುದು, ಲಕ್ಷಾಂತರ ರೂಪಾಯಿ ಬಹುಮಾನದ ಆಸೆ ತೋರಿಸಿ ಅದನ್ನು ತಲುಪಿಸಲು ಹಣ ಕೇಳುವುದು… ವಿಶ್ವವ್ಯಾಪಿ ಜಾಲದ ಬಹುತೇಕ ಬಳಕೆದಾರರಿಗೆ ಇಂತಹ ಘಟನೆಗಳ ಅನುಭವ ಆಗಿರುತ್ತದೆ. ಇಂತಹ ಸಂದೇಶಗಳು ಇ-ಮೇಲ್ ಮಾತ್ರವಲ್ಲದೆ ಎಸ್​ಎಂಎಸ್ ಮೂಲಕವೂ ನಮ್ಮತ್ತ ಬರುವುದು ಸಾಮಾನ್ಯವೇ ಆಗಿಹೋಗಿದೆ.

ನಕಲಿ ಇ-ಮೇಲ್ ಹಾಗೂ ಜಾಲತಾಣಗಳ ಸಹಾಯದಿಂದ ಅಂತರ್ಜಾಲ ಬಳಕೆದಾರರ ಖಾಸಗಿ ಮಾಹಿತಿಯನ್ನು ಕದಿಯುವ ಈ ಹಗರಣಕ್ಕೆ ಫಿಶಿಂಗ್ ಎಂದು ಹೆಸರು. ಫಿಶಿಂಗ್​ಗೆ ಬಲಿಯಾಗುವ ಮಾಹಿತಿಯಲ್ಲಿ ಹಣಕಾಸು ವ್ಯವಹಾರಗಳಿಗೆ ಸಂಬಂಧಪಟ್ಟ ಮಾಹಿತಿಯದೇ ಹೆಚ್ಚಿನ ಪಾಲು; ಆದರೆ ಈ ಮಾಹಿತಿಯ ಜತೆಗೆ ಸಮುದಾಯ ತಾಣಗಳು ಹಾಗೂ ಇ-ಮೇಲ್ ಖಾತೆಯ ಪಾಸ್​ವರ್ಡ್​ಗಳಂತಹ ಅನೇಕ ಬಗೆಯ ಮಾಹಿತಿಗಳೂ ಫಿಶಿಂಗ್ ಬಲೆಗೆ ಬೀಳುತ್ತವೆ.

ಫಿಶಿಂಗ್ ಪ್ರಯತ್ನದಲ್ಲಿ ಎಸ್​ಎಂಎಸ್, ಇ-ಮೇಲ್ ಸಂದೇಶ, ನಕಲಿ ಜಾಲತಾಣಗಳನ್ನು ಬಳಸುವ ಬದಲು ದೂರವಾಣಿ ಕರೆಗಳ ಮೊರೆಹೋಗುವ ಕುತಂತ್ರಿಗಳೂ ಇದ್ದಾರೆ. ಇದು ಧ್ವನಿ ಅಥವಾ ‘ವಾಯ್್ಸ ಆಧರಿತ ಫಿಶಿಂಗ್ ಆದ್ದರಿಂದ ಈ ವಂಚನೆಯನ್ನು ವಿಶಿಂಗ್ ಎಂದು ಗುರುತಿಸಲಾಗುತ್ತದೆ.
***

16-5-16
ಎತ್ತಣ ಸಾಫ್ಟ್​ವೇರ್? ಎತ್ತಣ ಬರ್ಗರ್?

ಸ್ಮಾರ್ಟ್ ಫೋನುಗಳು ಸರ್ವಾಂತರ್ಯಾಮಿ ಯಾಗಿರುವ ಈ ಕಾಲದಲ್ಲಿ ಆಪ್​ಗಳ (ಮೊಬೈಲ್ ತಂತ್ರಾಂಶ) ವಿಷಯ ನಮಗೆಲ್ಲ ಗೊತ್ತು. ಬನ್​ನ ಎರಡು ತುಣುಕುಗಳ ನಡುವೆ ಕರಿದ/ಬೇಯಿಸಿದ ತಿನಿಸನ್ನೂ, ತರಕಾರಿ-ಬೆಣ್ಣೆ-ಚೀಸ್ ಇತ್ಯಾದಿಗಳನ್ನೂ ಇಟ್ಟು ತಯಾರಿಸುವ ಬರ್ಗರ್ ಪರಿಚಯವೂ ಇದೆ. ಆದರೆ ಆಪ್​ಗೂ ಬರ್ಗರ್​ಗೂ ಎತ್ತಣಿಂದೆತ್ತ ಸಂಬಂಧ?

ಮೊಬೈಲ್ ಆಪ್ ಹಾಗೂ ಕೆಲವು ವೆಬ್​ಸೈಟುಗಳಲ್ಲಿ ಪರದೆಯ ಒಂದು ಮೂಲೆಯಲ್ಲಿ ಮೂರು ಅಡ್ಡಗೆರೆಗಳ ಒಂದು ಚಿತ್ರ (ಐಕನ್) ಇರುವುದನ್ನು ನೀವು ನೋಡಿರಬಹುದು. ಸಾಫ್ಟ್​ವೇರ್​ಗೂ ಬರ್ಗರ್​ಗೂ ಸಂಬಂಧ ಕಲ್ಪಿಸುವುದು ಈ ಚಿತ್ರ; ಇದರ ಹೆಸರೇ ‘ಹ್ಯಾಮ್​ಗರ್ರ್ ಐಕನ್.’

ಮೊಬೈಲಿನ ಪರದೆಯ ಮೇಲೆ ಲಭ್ಯವಿರುವ ಜಾಗ ಕಡಿಮೆಯಲ್ಲ, ಕಂಪ್ಯೂಟರ್ ಪರದೆಯಲ್ಲಿ ಮಾಡಿದಂತೆ ತಂತ್ರಾಂಶದ ನೂರೆಂಟು ಆಯ್ಕೆಗಳನ್ನೆಲ್ಲ (ಮೆನು) ಅಲ್ಲಿ ವಿವರವಾಗಿ ಪ್ರದರ್ಶಿಸುವುದು ಕಷ್ಟ. ಅಂತಹ ಆಯ್ಕೆಗಳನ್ನು ಹಿನ್ನೆಲೆಯಲ್ಲಿಟ್ಟು ಬಳಕೆದಾರ ಬೇಕೆಂದಾಗ ಮಾತ್ರ ಕಾಣಿಸುವಂತೆ ಮಾಡಲು ಈ ಐಕನ್ ಬಳಕೆಯಾಗುತ್ತದೆ. ಇದರಲ್ಲಿರುವ ಮೂರು ಅಡ್ಡಗೆರೆಗಳು ಬರ್ಗರ್ ರಚನೆಯನ್ನು ನೆನಪಿಸುವುದರಿಂದ ಅದಕ್ಕೆ ಹಾಗೆ ಹೆಸರು ಬಂದಿದೆ. ಮೊಬೈಲುಗಳ ಮೂಲಕವೇ ಜನಪ್ರಿಯವಾದ ಈ ಐಕನ್ ಈಗ ಹಲವು ಜಾಲತಾಣಗಳ ಡೆಸ್ಕ್​ಟಾಪ್ ಆವೃತ್ತಿಯಲ್ಲೂ ಕಾಣಿಸಿಕೊಳ್ಳುತ್ತಿದೆ, ಮೆನು ಬೇಕಿದ್ದರೆ ಈ ಚಿತ್ರವನ್ನು ಕ್ಲಿಕ್ ಮಾಡಬೇಕೆನ್ನುವುದು ಬಳಕೆದಾರರಿಗೂ ಟರಿಚಯವಾಗುತ್ತಿದೆ.
***

17-5-16
ಪಿಕ್ಸೆಲ್
ಡಿಜಿಟಲ್ ಕ್ಯಾಮರಾ ಬಳಸಿ ಕ್ಲಿಕ್ಕಿಸುತ್ತೇವಲ್ಲ, ಅಂತಹ ಪ್ರತಿಯೊಂದು ಚಿತ್ರದಲ್ಲೂ ಅಪಾರ ಸಂಖ್ಯೆಯ ಪುಟ್ಟಪುಟ್ಟ ಚೌಕಗಳಿರುತ್ತವೆ. ಬೇರೆಬೇರೆ ಬಣ್ಣಗಳ ಇಷ್ಟೆಲ್ಲ ಚೌಕಗಳು ಒಟ್ಟಾಗಿ ನಮ್ಮ ಕಣ್ಣಮುಂದೆ ಚಿತ್ರವನ್ನು ಕಟ್ಟಿಕೊಡುತ್ತವೆ. ಇಂತಹ ಚೌಕಗಳನ್ನು ಪಿಕ್ಸೆಲ್​ಗಳೆಂದು ಕರೆಯುತ್ತಾರೆ. ಪಿಕ್ಸೆಲ್ ಎಂಬ ಹೆಸರು ‘ಪಿಕ್ಚರ್ ಎಲಿಮೆಂಟ್’ ಎನ್ನುವುದರ ಹ್ರಸ್ವರೂಪ. ಚಿತ್ರದಲ್ಲಿ ಇರುವ ಪಿಕ್ಸೆಲ್​ಗಳ ಸಂಖ್ಯೆ ಜಾಸ್ತಿಯಾದಷ್ಟೂ ಅದರ ಸ್ಪಷ್ಟತೆ ಹೆಚ್ಚು. ಅಂದರೆ, ಚಿತ್ರದಲ್ಲಿ ಹೆಚ್ಚು ಸಂಖ್ಯೆಯ ಪಿಕ್ಸೆಲ್​ಗಳಿದ್ದಷ್ಟೂ ಅದನ್ನು ಹೆಚ್ಚು ಹೆಚ್ಚು ದೊಡ್ಡದಾಗಿ ಮುದ್ರಿಸಿಕೊಳ್ಳಬಹುದು.

ಹೆಚ್ಚು ಎಂದರೆ ಎಷ್ಟು ಎಂದು ಹೇಳಬೇಕಲ್ಲ, ಅದಕ್ಕೆ ಬಳಕೆಯಾಗುವುದೇ ಮೆಗಾಪಿಕ್ಸೆಲ್. ಒಂದು ಮೆಗಾಪಿಕ್ಸೆಲ್ ಎನ್ನುವುದು ಹತ್ತು ಲಕ್ಷ ಪಿಕ್ಸೆಲ್​ಗಳಿಗೆ ಸಮಾನ. ಕ್ಯಾಮರಾಗಳ ಬಗ್ಗೆ ಹೇಳುವಾಗಲೆಲ್ಲ ಪ್ರಸ್ತಾಪವಾಗುತ್ತದಲ್ಲ, ಅದು ಇದೇ ಮೆಗಾಪಿಕ್ಸೆಲ್. ಕ್ಯಾಮರಾ ಕೊಳ್ಳುವಾಗ ಹೆಚ್ಚಿನ ಮೆಗಾಪಿಕ್ಸೆಲ್ ಬಗೆಗಷ್ಟೇ ಗಮನಹರಿಸಿದರೆ ಸಾಲದು. ಏಕೆಂದರೆ ಕ್ಯಾಮರಾಗಳಲ್ಲಿ ನಮ್ಮ ಬಳಕೆಯ ಅಗತ್ಯಕ್ಕೆ ಎಷ್ಟು ಬೇಕೋ ಅಷ್ಟು ಮೆಗಾಪಿಕ್ಸೆಲ್ ಇದ್ದರೆ ಸಾಕಾಗುತ್ತದೆ. ಮೆಗಾಪಿಕ್ಸೆಲ್ ಜತೆಗೆ ಕ್ಯಾಮರಾದ ಸೆನ್ಸರ್, ಲೆನ್ಸಿನ ಗುಣಮಟ್ಟ ಮುಂತಾದ ಅಂಶಗಳೂ ಚಿತ್ರ ಹೇಗೆ ಮೂಡಿಬರುತ್ತದೆ ಎನ್ನುವುದನ್ನು ನಿರ್ಧರಿಸುತ್ತವೆ.
***

18-5-16

ಶ್ರಮವಿಲ್ಲದ ಓದಿಗೆ ‘ಇ-ಇಂಕ್ ’ ಪರದೆ

ಪುಸ್ತಕಗಳ ವಿದ್ಯುನ್ಮಾನ ರೂಪವಾದ ಇ-ಪುಸ್ತಕಗಳು ಈಚೆಗೆ ಜನಪ್ರಿಯವಾಗುತ್ತಿವೆ. ಕಂಪ್ಯೂಟರಿನಲ್ಲಿ, ಮೊಬೈಲ್ ಫೋನಿನಲ್ಲಿ, ಟ್ಯಾಬ್ಲೆಟ್ಟಿನಲ್ಲಿ ಪುಸ್ತಕಗಳನ್ನು ಓದುವವರ ಸಂಖ್ಯೆಯೂ ಹೆಚ್ಚುತ್ತಿದೆ. ಆದರೆ ಟ್ಯಾಬ್ಲೆಟ್ ಹಾಗೂ ಮೊಬೈಲ್ ಫೋನಿನ ಪರದೆಗಳು ಬೆಳಕನ್ನು ಹೊರಸೂಸುವುದರಿಂದ ಅವುಗಳಲ್ಲಿ ದೀರ್ಘಕಾಲ ಓದುವುದು ಕಣ್ಣಿಗೆ ಕಿರಿಕಿರಿಯಾಗುತ್ತದೆ. ಕಂಪ್ಯೂಟರ್ ಪರದೆಯ ಕತೆಯೂ ಹೀಗೆಯೇ.

ಈ ಸಮಸ್ಯೆಯನ್ನು ದೂರಮಾಡಲು ರೂಪುಗೊಂಡಿರುವ ಸಾಧನವೇ ಇ-ಬುಕ್ ರೀಡರ್. ಅಮೆಜಾನ್ ಕಿಂಡಲ್, ಕೋಬೋ ಮುಂತಾದ ನಿರ್ವತೃಗಳು ಹಲವು ಮಾದರಿಯ ಇ-ಬುಕ್ ರೀಡರುಗಳನ್ನು ಮಾರುಕಟ್ಟೆಗೆ ಪರಿಚಯಿಸಿದ್ದಾರೆ. ಈ ಸಾಧನಗಳು ‘ಇ-ಇಂಕ್’ ಎನ್ನುವ ತಂತ್ರಜ್ಞಾನ ಬಳಸುತ್ತವೆ. ಈ ತಂತ್ರಜ್ಞಾನ ಬಳಸುವ ಪರದೆಗಳು ಬೆಳಕನ್ನು ಹೊರಸೂಸುವುದಿಲ್ಲವಾದ್ದರಿಂದ ಓದುವಿಕೆ ಕಣ್ಣಿಗೆ ಶ್ರಮವೆನಿಸುವುದಿಲ್ಲ. ಕಡಿಮೆ ವಿದ್ಯುತ್ ಬಳಸುವುದರಿಂದ ಬ್ಯಾಟರಿ ಹೆಚ್ಚು ಕಾಲ ಬಾಳಿಕೆ ಬರುತ್ತದೆ; ಪದೇಪದೆ ಚಾರ್ಜ್ ಮಾಡುವ ತಾಪತ್ರಯವೂ ಇರುವುದಿಲ್ಲ. ಅಷ್ಟೇ ಅಲ್ಲ, ಪರದೆಯ ಮೇಲೆ ಮೂಡಿರುವ ಪಠ್ಯವನ್ನು ಬಿಸಿಲಿನಲ್ಲೂ ಶ್ರಮವಿಲ್ಲದೆ ಓದುವುದು ಸಾಧ್ಯ.

ಪಠ್ಯ-ಚಿತ್ರಗಳನ್ನು ಬಹುವರ್ಣದಲ್ಲಿ ಪ್ರದರ್ಶಿಸುವ ಇ-ಇಂಕ್ ತಂತ್ರಜ್ಞಾನವೂ ಇದೆ; ಆದರೆ ಸದ್ಯ ಮಾರುಕಟ್ಟೆಯಲ್ಲಿರುವ ಬಹುತೇಕ ಇ-ಬುಕ್ ರೀಡರುಗಳು ಕಪ್ಪು ಬಿಳುಪಿನ ಪರದೆಯನ್ನೇ ಬಳಸುತ್ತಿವೆ. ಹಲವು ಸ್ಮಾರ್ಟ್​ವಾಚ್​ಗಳಲ್ಲೂ ಇ-ಇಂಕ್ ಪರದೆಯನ್ನು ಬಳಸಲಾಗಿದೆ.
***

19-5-16
ಸಾಫ್ಟ್​ವೇರ್
‘ಕಂಪ್ಯೂಟರ್’ಗೆ ತನ್ನದೇ ಆದ ಸ್ವಂತ ಬುದ್ಧಿ ಇರುವುದಿಲ್ಲ. ಅದು ಯಾವ ಕೆಲಸ ಮಾಡಬೇಕಾದರೂ ಕೆಲಸದ ಎಲ್ಲ ಹೆಜ್ಜೆಗಳ ವಿವರವನ್ನೂ ಅದಕ್ಕೆ ಹೇಳಿಕೊಡಬೇಕು. ಹೀಗೆ ಕಂಪ್ಯೂಟರಿಗೆ ಪಾಠ ಹೇಳುವುದು ಸಾಫ್ಟ್​ವೇರ್ ಅಥವಾ ತಂತ್ರಾಂಶದ ಕೆಲಸ. ನಾವು ಕೊಟ್ಟ ವಿವರಗಳನ್ನು (ಇನ್​ಪುಟ್) ಬಳಸಿ ಏನೇನು ಲೆಕ್ಕಾಚಾರ ಮಾಡಬೇಕು, ಯಾವ ರೀತಿಯ ಉತ್ತರ (ಔಟ್​ಪುಟ್) ಕೊಡಬೇಕು ಎನ್ನುವುದನ್ನೆಲ್ಲ ಅದು ಕಂಪ್ಯೂಟರ್​ಗೆ ವಿವರಿಸುತ್ತದೆ.

ವಿವಿಧ ಉದ್ದೇಶ ಹಾಗೂ ಉಪಯೋಗಗಳಿಗಾಗಿ ಅನೇಕ ಬಗೆಯ ತಂತ್ರಾಂಶಗಳು ಬಳಕೆಯಾಗುತ್ತವೆ. ಕಂಪ್ಯೂಟರ್ ತನ್ನ ಕೆಲಸ ಪ್ರಾರಂಭಿಸಲು ನೆರವಾಗುವ ಬಯಾಸ್​ನಿಂದ ಪ್ರಾರಂಭಿಸಿ ಅದರ ಕೆಲಸಕಾರ್ಯಗಳನ್ನೆಲ್ಲ ನಿಯಂತ್ರಿಸುವ ಆಪರೇಟಿಂಗ್ ಸಿಸ್ಟಂವರೆಗೆ ಎಲ್ಲವೂ ತಂತ್ರಾಂಶಗಳೇ. ಕಂಪ್ಯೂಟರ್ ಬಳಸಿ ಕಡತಗಳನ್ನು ರೂಪಿಸಲು, ಚಿತ್ರ ಬರೆಯಲು, ಆಟವಾಡಲು, ಹಾಡು ಕೇಳಲು, ಸಿನಿಮಾ ನೋಡಲು ನಾವು ವಿವಿಧ ತಂತ್ರಾಂಶಗಳನ್ನು ಬಳಸುತ್ತೇವೆ.

ಕಂಪ್ಯೂಟರ್ ಅಷ್ಟೇ ಅಲ್ಲ; ಮೊಬೈಲ್ ಫೋನ್, ಟ್ಯಾಬ್ಲೆಟ್, ಸೆಟ್​ಟಾಪ್ ಬಾಕ್ಸ್ ಮುಂತಾದ ಹಲವಾರು ವಿದ್ಯುನ್ಮಾನ ಸಾಧನಗಳಲ್ಲೂ ತಂತ್ರಾಂಶಗಳು ಬಳಕೆಯಾಗುತ್ತವೆ. ನಮಗೆಲ್ಲ ಚಿರಪರಿಚಿತವಾದ ಮೊಬೈಲ್ ಆಪ್​ಗಳೂ ತಂತ್ರಾಂಶಗಳೇ. ಆಧುನಿಕ ಕಾರುಗಳಲ್ಲಿ,

ಟಿವಿ, ಫ್ರಿಜ್, ವಾಷಿಂಗ್ ಮಷಿನ್​ಗಳ ಕಾರ್ಯಾಚರಣೆಯಲ್ಲೂ ತಂತ್ರಾಂಶಗಳ ಕೈವಾಡ ಇರುತ್ತದೆ.
***

20-5-16
ಹಾರ್ಡ್​ವೇರ್
ಕಂಪ್ಯೂಟರ್ ಅಥವಾ ಇನ್ನಾವುದೇ ವಿದ್ಯುನ್ಮಾನ ಸಾಧನಕ್ಕೆ ಸಂಬಂಧಪಟ್ಟ ಎಲ್ಲ ಭೌತಿಕ ಭಾಗಗಳನ್ನೂ ಹಾರ್ಡ್​ವೇರ್ (ಯಂತ್ರಾಂಶ) ಎಂದು ಕರೆಯುತ್ತಾರೆ. ಕಂಪ್ಯೂಟರ್, ಟ್ಯಾಬ್ಲೆಟ್, ಮೊಬೈಲ್ ಫೋನ್ ಭಾಗಗಳೆಲ್ಲ ಯಂತ್ರಾಂಶಗಳೇ. ಇಂತಹ ಯಾವುದೇ ಸಾಧನಕ್ಕೆ ಮಾಹಿತಿ ನೀಡಲು ಬಳಕೆಯಾಗುವ ಮೌಸ್, ಕೀಬೋರ್ಡ್, ಟಚ್ ಸ್ಕ್ರೀನ್, ಸ್ಕ್ಯಾನರ್, ಮೈಕ್ರೋಫೋನ್, ಕ್ಯಾಮರಾ ಮುಂತಾದ ಸಾಧನಗಳನ್ನು ಇನ್​ಪುಟ್ ಡಿವೈಸಸ್ ಎಂದು ಕರೆಯುತ್ತಾರೆ. ಈ ಸಾಧನಗಳನ್ನು ಬಳಸಿ ನಾವು ಕಂಪ್ಯೂಟರಿಗೆ – ಮೊಬೈಲ್ ಫೋನ್​ಗೆ ಆದೇಶ ನೀಡುವುದು, ದತ್ತಾಂಶವನ್ನು (ಡೇಟಾ) ಪೂರೈಸುವುದು ಸಾಧ್ಯ.

ಇದೇ ರೀತಿ ಇಂತಹ ಸಾಧನಗಳು ಸಂಸ್ಕರಿಸಿದ ಮಾಹಿತಿಯನ್ನು ಮರಳಿ ಪಡೆದುಕೊಳ್ಳಲು (ಔಟ್​ಪುಟ್) ಬಳಕೆಯಾಗುವ ಮಾನಿಟರ್, ಸ್ಪೀಕರ್, ಪ್ರಿಂಟರ್ ಮುಂತಾದ ಸಾಧನಗಳಿಗೆ ಔಟ್​ಪುಟ್ ಡಿವೈಸಸ್ ಎಂದು ಹೆಸರು. ಮೊಬೈಲ್ ವಿಷಯಕ್ಕೆ ಬಂದರೆ ಅದರ ಪರದೆ ಇನ್​ಪುಟ್ ಹಾಗೂ ಔಟ್​ಪುಟ್ ಎರಡನ್ನೂ ನಿಭಾಯಿಸಬಲ್ಲ ಯಂತ್ರಾಂಶ.

ಈಗ ನಮ್ಮ ಮೊಬೈಲಿಗೆ ವಾಟ್ಸ್​ಆಪ್ ಮೂಲಕ ಯಾರೋ ಒಂದು ವೀಡಿಯೋ ಕಳುಹಿಸಿದ್ದಾರೆ ಎಂದುಕೊಳ್ಳೋಣ. ನಾವು ಮೊಬೈಲ್ ಪರದೆಯ ಮೇಲಿರುವ ‘ಪ್ಲೇ’ ಗುರುತನ್ನು ಒಮ್ಮೆ ಮುಟ್ಟುವ ಮೂಲಕ ಇನ್​ಪುಟ್ ನೀಡುತ್ತೇವೆ. ಅದನ್ನು ಗುರುತಿಸುವ ಮೊಬೈಲಿನ ತಂತ್ರಾಂಶ ವೀಡಿಯೋ ಪ್ರದರ್ಶಿಸುತ್ತದೆ – ಪರದೆಯ ಮೇಲೆ ಚಿತ್ರ ಹಾಗೂ ಸ್ಪೀಕರ್ ಮೂಲಕ ಧ್ವನಿಯ ಔಟ್​ಪುಟ್ ನಮ್ಮನ್ನು ತಲುಪುತ್ತದೆ.
***

22-5-16
ಕ್ಯಾಪ್ಚಾ
ಹಲವು ಜಾಲತಾಣಗಳಲ್ಲಿ ಮಾಹಿತಿ ತುಂಬುವಾಗ ಅಕ್ಷರ-ಅಂಕಿಗಳ ಕಲಸುಮೇಲೋಗರದಂತೆ ಕಾಣುವ ಚಿತ್ರವೊಂದು ಕಾಣಿಸಿಕೊಳ್ಳುವುದು ನಮ್ಮೆಲ್ಲರ ಅನುಭವಕ್ಕೂ ಬಂದಿರುವ ಸಂಗತಿ. ಆ ಅಕ್ಷರ-ಅಂಕಿಗಳನ್ನೆಲ್ಲ ಸರಿಯಾಗಿ ಗುರುತಿಸಿ ಟೈಪಿಸಿದಾಗಷ್ಟೇ ನಾವು ಮಾಡುತ್ತಿರುವ ಕೆಲಸದಲ್ಲಿ ಮುಂದುವರಿಯುವುದು ಸಾಧ್ಯ.

ದುರುದ್ದೇಶಪೂರಿತ ತಂತ್ರಾಂಶಗಳ ಅನಗತ್ಯ ಹಸ್ತಕ್ಷೇಪ ತಪ್ಪಿಸಿ ಸೌಲಭ್ಯಗಳ ದುರುಪ ಯೋಗವನ್ನು ತಡೆಯುವ ಈ ವಿಧಾನಕ್ಕೆ ‘ಕ್ಯಾಪ್ಚಾ’ ಎಂದು ಹೆಸರು. ಇದು ‘ಕಂಪ್ಲೀಟ್​ಲಿ ಆಟೋಮೇಟೆಡ್ ಪಬ್ಲಿಕ್ ಟ್ಯೂರಿಂಗ್ ಟೆಸ್ಟ್ ಟು ಟೆಲ್ ಕಂಪ್ಯೂಟರ್ಸ್ ಆಂಡ್ ಹ್ಯೂಮನ್ಸ್ ಅಪಾರ್ಟ್’ ಎಂಬುದರ ಹ್ರಸ್ವರೂಪ. ಯಾವುದೇ ಪ್ರಶ್ನೆಗೆ ಉತ್ತರಿಸುತ್ತಿರುವುದು ಸ್ವಯಂಚಾಲಿತ ತಂತ್ರಾಂಶವಲ್ಲ, ಮಾನವ ಬಳಕೆದಾರರೇ ಎಂದು ಖಾತರಿಪಡಿಸಿಕೊಳ್ಳುವ ಉದ್ದೇಶದಿಂದ ಬಳಕೆಯಾಗುವ ಪರೀಕ್ಷೆ ಇದು.

ಪರದೆಯ ಮೇಲೆ ತೋರಿಸುವ ಚಿತ್ರದಲ್ಲಿನ ಅಕ್ಷರ ಅಥವಾ ಅಂಕಿಗಳನ್ನು ಗುರುತಿಸುವಂತೆ, ಅಥವಾ ಸರಳ ಪ್ರಶ್ನೆಗಳಿಗೆ ಉತ್ತರಿಸುವಂತೆ ಬಳಕೆದಾರರನ್ನು ಕೇಳುವುದು ಕ್ಯಾಪ್ಚಾಗಳ ಲಕ್ಷಣ. ಹತ್ತಕ್ಕೆ ಮೂರು ಸೇರಿಸಿದರೆ ಎಷ್ಟು, ಅಥವಾ ಆಕಾಶದ ಬಣ್ಣ ಯಾವುದು ಎನ್ನುವಂತಹ ಸರಳ ಪ್ರಶ್ನೆಗಳಿಂದ ಪ್ರಾರಂಭಿಸಿ ತಿರುಚಾದ ಅಕ್ಷರ ಅಥವಾ ಅಂಕಿಗಳನ್ನು ಗುರುತಿಸಿ ಎಂದು ಕೇಳುವವರೆಗೆ ಕ್ಯಾಪ್ಚಾಗಳು ಅನೇಕ ಬಗೆಯವಾಗಿರಬಹುದು. ಒದಗಿಸಲಾಗುವ ಶ್ರವ್ಯ ಸಂದೇಶವನ್ನು ಕೇಳಿ ಅದನ್ನು ದಾಖಲಿಸಿ ಎಂದು ಕೇಳುವ ಕ್ಯಾಪ್ಚಾಗಳೂ ಇವೆ.
***

23-5-16
ಎಂಬಿಪಿಎಸ್ ಎಂದರೇನು?
ಒಂದಲ್ಲ ಒಂದು ಸಾಧನದ ಮೂಲಕ ನಾವು ಸದಾಕಾಲ ಅಂತರ್ಜಾಲ ಸಂಪರ್ಕವನ್ನು ಬಳಸುತ್ತಲೇ ಇರುತ್ತೇವಲ್ಲ, ಹಾಗೆ ಬಳಸುವಾಗ ಸಂಪರ್ಕದ ವೇಗದ ಬಗೆಗೂ ಕೇಳಿರುತ್ತೇವೆ: 8 ಎಂಬಿಪಿಎಸ್, 16 ಎಂಬಿಪಿಎಸ್, 50 ಎಂಬಿಪಿಎಸ್… ಹೀಗೆ. ಎಂಬಿ ಅಂದರೆ ಮೆಗಾಬೈಟ್ ಸರಿ (ಛಿಜ್ಞಾನ 21 ಏಪ್ರಿಲ್), ಆದರೆ ಇದೇನಿದು ಎಂಬಿಪಿಎಸ್?

ಯಾವುದೇ ದೂರಸಂಪರ್ಕ ವ್ಯವಸ್ಥೆಯ ಮೂಲಕ ಒಂದು ನಿರ್ದಿಷ್ಟ ಅವಧಿಯಲ್ಲಿ ಹಾದುಹೋಗುವ ದತ್ತಾಂಶದ (ಡೇಟಾ) ಸರಾಸರಿ ಪ್ರಮಾಣವನ್ನು ಡೇಟಾ ರೇಟ್ ಎಂದು ಕರೆಯುತ್ತಾರೆ. ಒಂದಷ್ಟು ದತ್ತಾಂಶವನ್ನು ತೆಗೆದುಕೊಂಡರೆ ಅದು ಒಂದು ಸ್ಥಳದಿಂದ ಮತ್ತೊಂದಕ್ಕೆ ಎಷ್ಟು ವೇಗವಾಗಿ ತಲುಪಬಲ್ಲದು ಎನ್ನುವುದನ್ನು ಈ ಡೇಟಾ ರೇಟ್ ಸೂಚಿಸುತ್ತದೆ. ದತ್ತಾಂಶದ ರವಾನೆಗೆ ನಾವು ಯಾವುದೇ ಮಾರ್ಗ ಆಯ್ದುಕೊಂಡಾಗ ಅದರ ಮೂಲಕ ಒಂದು ನಿರ್ದಿಷ್ಟ ಅವಧಿಯಲ್ಲಿ ನಿಗದಿತ ಪ್ರಮಾಣದ ದತ್ತಾಂಶವಷ್ಟೆ ಹಾದುಹೋಗುವುದು ಸಾಧ್ಯ. ಇದನ್ನು ಆ ಮಾರ್ಗದ ಬ್ಯಾಂಡ್​ವಿಡ್ತ್ ಎಂದು ಕರೆಯುತ್ತಾರೆ. ಬ್ಯಾಂಡ್​ವಿಡ್ತ್ ಹೆಚ್ಚಿದ್ದಷ್ಟೂ ಡೇಟಾ ರೇಟ್ ಕೂಡ ಹೆಚ್ಚಾಗಿರುವುದು ಸಾಧ್ಯ.

ಡೇಟಾ ರೇಟ್ ಅನ್ನು ಅಳೆಯುವ ಏಕಮಾನವೇ ಡೇಟಾ ರೇಟ್ ಯುನಿಟ್. ಎಂಬಿಪಿಎಸ್ ಎನ್ನುವುದು ಇಂತಹುದೇ ಒಂದು ಡೇಟಾ ರೇಟ್ ಯುನಿಟ್. ಯಾವುದೋ ಅಂತರ್ಜಾಲ ಸಂಪರ್ಕದಲ್ಲಿ ಪ್ರತಿ ಸೆಕೆಂಡಿಗೆ ಹತ್ತು ಲಕ್ಷ ಬಿಟ್​ನಷ್ಟು ದತ್ತಾಂಶದ ಹರಿವು ಸಾಧ್ಯವಾದರೆ ಅದನ್ನು 1 ಮೆಗಾಬಿಟ್ ಪರ್ ಸೆಕೆಂಡ್ (ಎಂಬಿಪಿಎಸ್) ಸಂಪರ್ಕವೆಂದು ಗುರುತಿಸಲಾಗುತ್ತದೆ.
***

24-5-16
ಆಂಟಿವೈರಸ್ ಕೆಲಸ ಹೇಗೆ…?
ನಮ್ಮ ಕಂಪ್ಯೂಟರ್ ಹಾಗೂ ಮೊಬೈಲ್ ಫೋನುಗಳನ್ನೆಲ್ಲ ಕಾಡುವ ಕುತಂತ್ರಾಂಶಗಳಿಂದ (ಮಾಲ್​ವೇರ್) ಪಾರಾಗಲು ಆಂಟಿವೈರಸ್ ಬಳಸಬೇಕು ಎನ್ನುವುದು ನಮಗೆ ಗೊತ್ತು (ಛಿಜ್ಞಾನ 26 ಏಪ್ರಿಲ್). ಕುತಂತ್ರಾಂಶಗಳನ್ನು ಗುರುತಿಸಿ ಅವು ನಮ್ಮ ಕಂಪ್ಯೂಟರ್ ಅಥವಾ ಮೊಬೈಲಿಗೆ ಏನೂ ತೊಂದರೆಮಾಡದಂತೆ ತಡೆಯುವುದು ಈ ತಂತ್ರಾಂಶದ ಕೆಲಸ.

ಆಂಟಿವೈರಸ್ ಕಾರ್ಯಾಚರಣೆಯ ರೀತಿಯೇ ವಿಶೇಷವಾದದ್ದು. ಅವುಗಳ ಕೆಲಸ ನಡೆಯುವುದು ಕುತಂತ್ರಾಂಶಗಳ ಬಗ್ಗೆ ಸಮಗ್ರ ಮಾಹಿತಿ ಹೊಂದಿರುವ ದತ್ತಸಂಚಯವನ್ನು (ಡೇಟಾಬೇಸ್) ಆಧರಿಸಿಕೊಂಡು. ವೈರಸ್ ವಿರೋಧಿ ತಂತ್ರಾಂಶ ರೂಪಿಸುವ ಸಂಸ್ಥೆಗಳು ಯಾವೆಲ್ಲ ಕುತಂತ್ರಾಂಶಗಳನ್ನು ಪತ್ತೆಮಾಡಿರುತ್ತವೆಯೋ ಅವೆಲ್ಲವುಗಳ ‘ಸಿಗ್ನೇಚರ್’, ಅರ್ಥಾತ್ ಗುಣಲಕ್ಷಣಗಳನ್ನು ಇಂತಹ ದತ್ತಸಂಚಯಗಳಲ್ಲಿ ಸಂಗ್ರಹಿಸಲಾಗಿರುತ್ತದೆ. ಹೊಸಹೊಸ ಕುತಂತ್ರಾಂಶಗಳು ಪತ್ತೆಯಾದಂತೆಲ್ಲ ಅವುಗಳ ಬಗೆಗಿನ ಮಾಹಿತಿ ಈ ದತ್ತಸಂಚಯವನ್ನು ಸೇರಿಕೊಳ್ಳುತ್ತದೆ (ನಿರ್ದಿಷ್ಟ ಪರೀಕ್ಷೆಗಳ ಮೂಲಕ ಹೊಸ ಕುತಂತ್ರಾಂಶಗಳನ್ನು ತಡೆಯುವ ಚಾಕಚಕ್ಯತೆಯೂ ಹಲವು ಆಂಟಿವೈರಸ್​ಗಳಲ್ಲಿರುತ್ತದೆ). ಆಂಟಿವೈರಸ್ ತಂತ್ರಾಂಶಗಳನ್ನು ಆಗಿಂದಾಗ್ಗೆ ಅಪ್​ಡೇಟ್ ಮಾಡಿಕೊಳ್ಳುತ್ತಿರಬೇಕು ಎನ್ನುವುದು ಇದೇ ಕಾರಣಕ್ಕಾಗಿ. ಹೀಗೆ ಮಾಡುವುದರಿಂದ ಹೊಸ ಕುತಂತ್ರಾಂಶಗಳ ಬಗೆಗಿನ ಮಾಹಿತಿ ನಮ್ಮ ಕಂಪ್ಯೂಟರ್​ನಲ್ಲಿರುವ ವೈರಸ್ ವಿರೋಧಿ ತಂತ್ರಾಂಶಕ್ಕೂ ಸಿಗುವಂತೆ ಮಾಡಬಹುದು. ಇದರಿಂದಾಗಿ ನಮ್ಮ ಕಂಪ್ಯೂಟರನ್ನು ಸುರಕ್ಷಿತವಾಗಿಟ್ಟುಕೊಳ್ಳುವುದು ಸಾಧ್ಯ. ಅಷ್ಟೇ ಅಲ್ಲ, ನಮ್ಮ ಕಂಪ್ಯೂಟರ್​ನಿಂದ ಕುತಂತ್ರಾಂಶಗಳು ಇತರೆಡೆಗೂ ಹರಡಿ ಬೇರೆಯವರಿಗೆ ತೊಂದರೆಯಾಗುವುದನ್ನು ಕೂಡ ತಪ್ಪಿಸಬಹುದು.
***

25-5-16

ಆಪರೇಟಿಂಗ್ ಸಿಸ್ಟಂ.
ಲ್ಯಾಪ್​ಟಾಪ್, ಡೆಸ್ಕ್​ಟಾಪ್, ಟ್ಯಾಬ್ಲೆಟ್, ಮೊಬೈಲ್ ಫೋನ್ ಮುಂತಾದ ಯಾವುದೇ ಕಂಪ್ಯೂಟರಿನ ಪ್ರಾಥಮಿಕ ಚಟುವಟಿಕೆಗಳನ್ನು ನಿಯಂತ್ರಿಸುವ, ಅದರ ವಿವಿಧ ಸೌಲಭ್ಯಗಳನ್ನು ಬಳಸಿಕೊಳ್ಳಲು ನಮಗೆ ಸಹಾಯಮಾಡುವ ವ್ಯವಸ್ಥೆಯನ್ನು ಆಪರೇಟಿಂಗ್ ಸಿಸ್ಟಂ (ಕಾರ್ಯಾಚರಣ ವ್ಯವಸ್ಥೆ) ಎಂದು ಕರೆಯುತ್ತಾರೆ. ಕಂಪ್ಯೂಟರಿನ ವಿಂಡೋಸ್, ಲಿನಕ್ಸ್; ಮೊಬೈಲಿನ ಆಂಡ್ರಾಯ್್ಡ ಐಓಎಸ್​ಗಳೆಲ್ಲ ಕಾರ್ಯಾಚರಣ ವ್ಯವಸ್ಥೆಗಳೇ.

ಕಂಪ್ಯೂಟರಿನಲ್ಲಿ, ಮೊಬೈಲಿನಲ್ಲಿ ಯಾವುದೇ ಯಂತ್ರಾಂಶ ಅಥವಾ ತಂತ್ರಾಂಶ ಬಳಸಬೇಕಾದರೂ ಕಾರ್ಯಾಚರಣ ವ್ಯವಸ್ಥೆ ಇರಲೇಬೇಕು. ಅಷ್ಟೇ ಅಲ್ಲ, ಅವನ್ನೆಲ್ಲ ಬಳಸಿ ಯಾವ ಕೆಲಸ ಮಾಡಬೇಕೆಂದರೂ ಮೊದಲಿಗೆ ಕಾರ್ಯಾಚರಣ ವ್ಯವಸ್ಥೆ ಪ್ರಾರಂಭವಾಗಿರಬೇಕು.

ಕಂಪ್ಯೂಟರಿನ ಉದಾಹರಣೆ ತೆಗೆದುಕೊಂಡರೆ ನಾವು ಸ್ವಿಚ್ ಒತ್ತಿದಾಗ ಅದು ಮೊದಲಿಗೆ ಪ್ರಾರಂಭಿಸುವುದು ಈ ಕಾರ್ಯಾಚರಣ ವ್ಯವಸ್ಥೆಯನ್ನೇ (‘ಬೂಟ್’ ಮಾಡುವುದು ಎನ್ನುವುದು ಇದಕ್ಕೇ). ಒಮ್ಮೆ ಕಂಪ್ಯೂಟರ್ ಬೂಟ್ ಆದಮೇಲೆ ನಾವು ಮಾಡುವ ಪ್ರತಿಯೊಂದು ಕೆಲಸಕ್ಕೂ ಕಾರ್ಯಾಚರಣ ವ್ಯವಸ್ಥೆಯ ಸಹಾಯ ಬೇಕು. ಬೇರೆ ತಂತ್ರಾಂಶಗಳನ್ನು ತೆರೆಯಲು, ಅವುಗಳನ್ನು ಬಳಸಿ ಕೆಲಸಮಾಡಲು, ಮಾಡಿದ ಕೆಲಸವನ್ನು ಉಳಿಸಿಡಲು, ಕಡೆಗೆ ಹೊಸ ತಂತ್ರಾಂಶಗಳನ್ನು ರೂಪಿಸಲಿಕ್ಕೂ ಈ ವ್ಯವಸ್ಥೆ ಸಹಾಯ ಮಾಡುತ್ತದೆ.
***

26-5-16
ಎಂಎಎಚ್ ಎಂದರೇನು?
ಮೊಬೈಲ್, ಟ್ಯಾಬ್ಲೆಟ್, ಲ್ಯಾಪ್​ಟಾಪ್ ಮುಂತಾದ ಸಾಧನಗಳಲ್ಲಿರುವ ಬ್ಯಾಟರಿ ಸಾಮರ್ಥ್ಯವನ್ನು ಎಂಎಎಚ್​ಗಳಲ್ಲಿ (ಞಅಜ) ಅಳೆಯುವುದನ್ನು ನೋಡಿರುತ್ತೇವೆ. ಎಂಎಎಚ್ ಅಂದರೆ ಮಿಲಿ ಆಂಪಿಯರ್ ಅವರ್ (ಆಂಪಿಯರ್ ಎನ್ನುವುದು ವಿದ್ಯುತ್ ಪ್ರವಾಹದ ಏಕಮಾನ). ಯಾವುದೇ ಬ್ಯಾಟರಿ – ಪೂರ್ತಿ ಚಾರ್ಜ್ ಆಗಿದ್ದಾಗ – ಎಷ್ಟು ಪ್ರಮಾಣದ ವಿದ್ಯುತ್ತನ್ನು ಎಷ್ಟು ಹೊತ್ತಿನವರೆಗೆ ಪೂರೈಸಬಲ್ಲದು ಎಂಬುದನ್ನು ಇದು ಸೂಚಿಸುತ್ತದೆ.

ವಾಹನಗಳಲ್ಲಿ ಇಂಧನ ಟ್ಯಾಂಕ್​ನ ಸಾಮರ್ಥ್ಯ ಇರುತ್ತದಲ್ಲ, ಇದೂ ಹಾಗೆಯೇ. ಎರಡು ಲೀಟರ್ ಸಾಮರ್ಥ್ಯದ ಟ್ಯಾಂಕು ಬೈಕಿನಲ್ಲಿದ್ದರೆ ಅಷ್ಟು ಪೆಟ್ರೋಲ್ ತುಂಬಿಸಿ ನಾವು 100 ಕಿ.ಮೀ. ಕ್ರಮಿಸಬಹುದು; ಕಾರಿನಲ್ಲಾದರೆ 20-30 ಕಿ.ಮೀ. ಹೋಗುವಷ್ಟರಲ್ಲಿ ಇನ್ನೊಂದು ಪೆಟ್ರೋಲ್ ಬಂಕ್ ಹುಡುಕಬೇಕಾಗುತ್ತದೆ.

ಬ್ಯಾಟರಿ ಸಾಮರ್ಥ್ಯವೂ ಅಷ್ಟೆ. 3000 ಎಂಎಎಚ್ ಸಾಮರ್ಥ್ಯದ ಒಂದು ಬ್ಯಾಟರಿಯನ್ನು ತೆಗೆದುಕೊಂಡರೆ ಅದರ ವರ್ತನೆ ಬೇರೆಬೇರೆ ಗ್ಯಾಜೆಟ್​ಗಳಲ್ಲಿ ಬೇರೆಬೇರೆ ರೀತಿಯಲ್ಲಿರುತ್ತದೆ. ಘಂಟೆಗೆ 100 ಮಿಲಿಆಂಪಿಯರ್ ವಿದ್ಯುತ್ ಬೇಡುವ ಗ್ಯಾಜೆಟ್​ಗೆ ಈ ಬ್ಯಾಟರಿ 30 ಘಂಟೆಗಳ ಕಾಲ ಜೀವ ತುಂಬಬಲ್ಲದು; ಅದೇ ರೀತಿ ಘಂಟೆಗೆ 200 ಮಿಲಿಆಂಪಿಯರ್ ಬೇಕಾದಾಗ 15 ಘಂಟೆಗಳಲ್ಲೇ ಬ್ಯಾಟರಿ ಖಾಲಿಯಾಗಿಬಿಡುತ್ತದೆ. ಅಂದರೆ, ಒಮ್ಮೆ ಚಾರ್ಜ್ ಮಾಡಿದ ಬ್ಯಾಟರಿ ಎಷ್ಟು ಹೊತ್ತು ಬಾಳುತ್ತದೆ ಎಂಬುದು ಬ್ಯಾಟರಿ ಸಾಮರ್ಥ್ಯದ ಜತೆಗೆ ನಮ್ಮ ಮೊಬೈಲ್, ಲ್ಯಾಪ್​ಟಾಪ್, ಕಂಪ್ಯೂಟರು ಎಷ್ಟು ಪ್ರಮಾಣದ ವಿದ್ಯುತ್ ಬಳಸುತ್ತದೆ ಎಂಬುದರ ಮೇಲೂ ಅವಲಂಬಿತವಾಗಿರುತ್ತದೆ.
***

27-5-16
ಸೂಪರ್ ​ಕಂಪ್ಯೂಟರ್
ಪ್ರಪಂಚದಲ್ಲಿ ಅನೇಕ ಬಗೆಯ ಕಂಪ್ಯೂಟರುಗಳಿರುವುದು ನಮಗೆಲ್ಲ ಗೊತ್ತು. ಅವುಗಳ ಪೈಕಿ ಅತಿ ಹೆಚ್ಚು ಸಂಸ್ಕರಣಾ ಸಾಮರ್ಥ್ಯ ಹೊಂದಿರುವವುಗಳನ್ನು ಸೂಪರ್​ಕಂಪ್ಯೂಟರ್​ಗಳೆಂದು ಕರೆಯುತ್ತಾರೆ. ಕ್ಲಿಷ್ಟ ಲೆಕ್ಕಾಚಾರಗಳ ಅಗತ್ಯವಿರುವ ವೈಜ್ಞಾನಿಕ ಸಂಶೋಧನೆಯಂತಹ ಕ್ಷೇತ್ರಗಳಲ್ಲಿ ಇವು ಬಳಕೆಯಾಗುತ್ತವೆ.

ಇವುಗಳ ಸಂಸ್ಕರಣಾ ಸಾಮರ್ಥ್ಯನ್ನು ಅಳೆಯಲು ‘ಫ್ಲೋಟಿಂಗ್ ಪಾಯಿಂಟ್ ಇನ್ಸ್​ಟ್ರಕ್ಷನ್ಸ್ ಪರ್ ಸೆಕೆಂಡ್’ (ಫ್ಲಾಪ್ಸ್) ಎಂಬ ಏಕಮಾನವನ್ನು ಬಳಸಲಾಗುತ್ತದೆ. ದಶಾಂಶವಿರುವ ದೊಡ್ಡದೊಡ್ಡ ಸಂಖ್ಯೆಗಳ ಮೇಲೆ ಯಾವುದೇ ಕಂಪ್ಯೂಟರ್ ಒಂದು ಸೆಕೆಂಡಿನಲ್ಲಿ ಎಷ್ಟು ಲೆಕ್ಕಾಚಾರಗಳನ್ನು ಮಾಡಬಲ್ಲದು ಎನ್ನುವುದನ್ನು ಈ ಮಾಪನ ಸೂಚಿಸುತ್ತದೆ. ನಮ್ಮ-ನಿಮ್ಮ ಮನೆಗಳಲ್ಲಿರುವ ಇಂದಿನ ಸಾಮಾನ್ಯ ಕಂಪ್ಯೂಟರುಗಳು ಪ್ರತಿ ಸೆಕೆಂಡಿಗೆ ಇಂತಹ ನೂರಾರು ಕೋಟಿ ಲೆಕ್ಕಾಚಾರಗಳನ್ನು ಮಾಡಬಲ್ಲವು.

ಯಾವುದೋ ಕಂಪ್ಯೂಟರ್ ಪ್ರತಿ ಸೆಕೆಂಡಿಗೆ ನೂರು ಕೋಟಿ ಲೆಕ್ಕಾಚಾರಗಳನ್ನು ಮಾಡಬಲ್ಲದು ಎಂದರೆ ಅದರ ಸಾಮರ್ಥ್ಯ ಒಂದು ಗಿಗಾಫ್ಲಾಪ್ಸ್ ಆಗುತ್ತದೆ. ಮೇಲ್ನೋಟಕ್ಕೆ ಇದು ಬಹಳ ದೊಡ್ಡ ಸಾಮರ್ಥ್ಯೆಂದು ತೋರಿದರೂ ಸೂಪರ್​ಕಂಪ್ಯೂಟರುಗಳ ಸಾಮರ್ಥ್ಯ ಮುಂದೆ ಇದು ತೃಣಸಮಾನ. ಏಕೆಂದರೆ ಸದ್ಯದ ಸೂಪರ್​ಕಂಪ್ಯೂಟರುಗಳ ಸಾಮರ್ಥ್ಯ ಹತ್ತಾರು ಪೆಟಾಫ್ಲಾಪ್ಸ್​ಗಳಲ್ಲಿರುತ್ತದೆ. ಪೆಟಾ ಎಂದರೆ ಒಂದರ ಮುಂದೆ ಹದಿನೈದು ಸೊನ್ನೆ ಜೋಡಿಸಿದಷ್ಟು ದೊಡ್ಡ ಸಂಖ್ಯೆ!
***

28-5-16
ಟಾಪ್ ಲೆವೆಲ್ ಡೊಮೈನ್

ಜಾಲತಾಣಗಳನ್ನೆಲ್ಲ ಡಾಟ್ ಕಾಮ್ಳೆಂದು ಗುರುತಿಸುವುದು ಸಾಮಾನ್ಯ ಅಭ್ಯಾಸ. ಆದರೆ ವಾಸ್ತವದಲ್ಲಿ ಈ ಡಾಟ್ ಕಾಮ್ ಎನ್ನುವುದು ಜಾಲತಾಣಗಳ ವಿಳಾಸದ ಒಂದು ಭಾಗ ಮಾತ್ರ.

ಡಾಟ್ ಕಾಮ್ ಡಾಟ್ ನೆಟ್ ಮುಂತಾದ ಈ ಬಾಲಂಗೋಚಿಗಳನ್ನು ಟಾಪ್ ಲೆವೆಲ್ ಡೊಮೈನ್ ಅಥವಾ ಟಿಎಲ್​ಡಿಗಳೆಂದು ಗುರುತಿಸುತ್ತಾರೆ. ಜಾಲತಾಣ ಯಾವ ವಿಷಯಕ್ಕೆ ಸಂಬಂಧಪಟ್ಟದ್ದು ಎಂದು ಸೂಚಿಸಲು ಇವನ್ನು ಬಳಸಲಾಗುತ್ತದೆ: ಶೈಕ್ಷಣಿಕ ಸಂಸ್ಥೆಗಳ ತಾಣಕ್ಕೆ .edu, ಸರ್ಕಾರಿ ತಾಣಗಳಿಗೆ ..gov, ವಾಣಿಜ್ಯೇತರ ಸಂಸ್ಥೆಗಳಿಗೆ org – ಹೀಗೆ. ಅಂತಾರಾಷ್ಟ್ರೀಯ ಸಂಸ್ಥೆಗಳ .int,

ಮಿಲಿಟರಿ ಕ್ಷೇತ್ರದ .mil, ವಿಮಾನಯಾನಕ್ಕೆ ಸಂಬಂಧಪಟ್ಟ aero, ಸುದ್ದಿತಾಣಗಳ .news ಮುಂತಾದವನ್ನೂ ಇಲ್ಲಿ ಹೆಸರಿಸಬಹುದು. ಹಾಗೆ ನೋಡಿದರೆ com ಎಂಬ ಬಾಲಂಗೋಚಿ ಮೊದಲಿಗೆ ಕಮರ್ಷಿಯಲ್ ತಾಣಗಳಿಗೆ ಹಾಗೂ net ಎನ್ನುವುದು ನೆಟ್​ವರ್ಕ್​ಗಳಿಗೆ ಮಾತ್ರವೇ ಸೀಮಿತವಾಗಿತ್ತು – ಈಗ ಎಲ್ಲರೂ ಅವನ್ನು ಬಳಸುತ್ತಾರೆ ಅಷ್ಟೆ!

ತಾಣ ಯಾವ ದೇಶದ್ದು ಎನ್ನುವುದನ್ನು ಸೂಚಿಸುವ ಬಾಲಂಗೋಚಿಗಳಿಗೆ ಕಂಟ್ರಿ ಕೋಡ್ ಟಿಎಲ್​ಡಿಗಳೆಂದು (ಸಿಸಿಟಿಎಲ್​ಡಿ) ಹೆಸರು. ಭಾರತದ .in,, ಜರ್ಮನಿಯ .deಗಳೆಲ್ಲ ಇದಕ್ಕೆ ಉದಾಹರಣೆ. ಡೊಮೈನ್ ನೇಮ್ಳು ಆಂಗ್ಲೇತರ ಭಾಷೆಗಳಲ್ಲೂ ಬರುತ್ತಿವೆಯಲ್ಲ (e ಜ್ಞಾನ 7 ಮೇ), ಕನ್ನಡ ಲಿಪಿಯ ‘.ಭಾರತ’ ಎನ್ನುವ ಟಿಎಲ್​ಡಿ ಬಳಕೆಯೂ ಸದ್ಯದಲ್ಲೇ ಸಾಧ್ಯವಾಗಲಿದೆ!
***

29-5-16
ಆಪ್ಟಿಕಲ್ ಫೈಬರ್…

ನಾವು ರಸ್ತೆಬದಿಗಳಲ್ಲಿ ನೋಡುತ್ತೇವಲ್ಲ, ದೂರವಾಣಿ ಸಂಸ್ಥೆಗಳು ಅಳವಡಿಸುವ ಬಣ್ಣಬಣ್ಣದ ದಪ್ಪನೆಯ ಕೊಳವೆಗಳು, ಆ ಕೊಳವೆಗಳ ಒಳಗೆ ಆಪ್ಟಿಕಲ್ ಫೈಬರ್​ಗಳಿರುತ್ತವೆ. ಅತ್ಯಂತ ಶುದ್ಧ ಗಾಜಿನಿಂದ ಪಾರದರ್ಶಕ ಸಲಾಕೆಗಳನ್ನು ತಯಾರಿಸಿ ಅವು ಬಳುಕುವಷ್ಟು ತೆಳ್ಳಗೆ, ಉದ್ದಕ್ಕೆ ಆಗುವ ತನಕ ಜಗ್ಗಿಸಿ ಎಳೆಯುವುದರಿಂದ ರೂಪುಗೊಳ್ಳುವ ಎಳೆಗಳು ಅವು. ಈ ಆಪ್ಟಿಕಲ್ ಫೈಬರ್​ಗಳ ಮೂಲಕ ಬೆಳಕಿನ ಕಿರಣಗಳ ರೂಪದಲ್ಲಿ ಅಪಾರ ಪ್ರಮಾಣದ ಮಾಹಿತಿಯನ್ನು ರವಾನಿಸುವುದು ಸಾಧ್ಯ. ಹೀಗೆ ರವಾನಿಸಲಾದ ಮಾಹಿತಿ ಸುಲಭವಾಗಿ ಅನೇಕ ಕಿಲೋಮೀಟರುಗಳಷ್ಟು ದೂರ ಕ್ರಮಿಸಬಲ್ಲದು.

ಆಪ್ಟಿಕಲ್ ಫೈಬರ್ ಎಳೆಗಳನ್ನು ಅತ್ಯಂತ ಶುದ್ಧವಾದ ಗಾಜಿನಿಂದ ತಯಾರಿಸಲಾಗುವುದರಿಂದ ಅದರ ಮೂಲಕ ಸಾಗುವ ಬೆಳಕಿನ ಕಿರಣಗಳು ಸಂಪೂರ್ಣ ಆಂತರಿಕ ಪ್ರತಿಫಲನಕ್ಕೆ (ಟೋಟಲ್ ಇಂಟರ್ನಲ್ ರಿಫ್ಲೆಕ್ಷನ್) ಒಳಗಾಗುತ್ತವೆ – ಅಂದರೆ, ಬೆಳಕಿನ ಕಿರಣಗಳು ಈ ಎಳೆಯೊಳಗೇ ಸಂಪೂರ್ಣವಾಗಿ ಪ್ರತಿಫಲಿತವಾಗುತ್ತವೆ. ಹೀಗಾಗಿ ಆಪ್ಟಿಕಲ್ ಫೈಬರ್​ಗಳಲ್ಲಿ ಮಾಹಿತಿ ಸೋರಿಕೆ ತೀರಾ ಕಡಿಮೆ ಹಾಗೂ ಮಾಹಿತಿ ಸಂವಹನದ ನಿಖರತೆ ಹೆಚ್ಚಾಗಿರುತ್ತದೆ. ಆಪ್ಟಿಕಲ್ ಫೈಬರ್​ಗಳ ಈ ವಿಶಿಷ್ಟ ಗುಣದಿಂದಾಗಿಯೇ ಅವು ಈಗ ಅಂತರ್ಜಾಲ, ಸ್ಥಿರ ದೂರವಾಣಿ, ಮೊಬೈಲ್ ಸೇವೆಗಳು ಮುಂತಾದ ಎಲ್ಲ ಮಾಹಿತಿ ಮೂಲಗಳಿಗೂ ಬೆನ್ನೆಲುಬಿನಂತೆ ಆಗಿಬಿಟ್ಟಿವೆ.
***

 image 

ಟಿ.ಜಿ. ಶ್ರೀನಿಧಿ, ಕನ್ನಡದಲ್ಲಿ ಮಾಹಿತಿ ತಂತ್ರಜ್ಞಾನದ ಕುರಿತು ಬರೆಯುತ್ತಿರುವ ಕೆಲವೇ ಕೆಲವು ಲೇಖಕರಲ್ಲೊಬ್ಬರು. ವಿಜ್ಞಾನ ಮತ್ತು ತಂತ್ರಜ್ಞಾನ ಸಂವಹನಕ್ಕೆ ಮೀಸಲಾದ ಕನ್ನಡ ಜಾಲತಾಣ ‘ಇಜ್ಞಾನ ಡಾಟ್ ಕಾಮ್ (www.ejnana.com)ನ ರೂವಾರಿ ಕೂಡ ಹೌದು. ಮೈಸೂರಿನ ಶ್ರೀ ಜಯಚಾಮರಾಜೇಂದ್ರ ಕಾಲೇಜ್ ಆಫ್ ಇಂಜಿನಿಯರಿಂಗ್​ನಿಂದ ಬಿಇ ಪದವಿ, ಬಿಟ್ಸ್ ಪಿಲಾನಿಯಿಂದ ಎಂಎಸ್ ಸ್ನಾತಕೋತ್ತರ ಪದವಿ ಪಡೆದಿದ್ದು ಪ್ರಸ್ತುತ ಬೆಂಗಳೂರಿನ ಬಹುರಾಷ್ಟ್ರೀಯ ಸಂಸ್ಥೆಯೊಂದರಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. 600ಕ್ಕೂ ಹೆಚ್ಚು ಪ್ರಕಟಿತ ಲೇಖನ, ಅಂಕಣಗಳನ್ನು ಬರೆದಿರುವ ಶ್ರೀನಿಧಿ, 10ಕ್ಕೂ ಹೆಚ್ಚು ಪುಸ್ತಕಗಳನ್ನು ಬರೆದಿದ್ದಾರೆ. 2011ರಲ್ಲಿ ಪ್ರಕಟವಾದ ‘ತಿನ್ನಲಾಗದ ಬಿಸ್ಕತ್ತು, ನುಂಗಲಾಗದ ಟ್ಯಾಬ್ಲೆಟ್ಟು’ ಕೃತಿಗೆ ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿಯ ‘ಶ್ರೇಷ್ಠ ಲೇಖಕ’ ಪ್ರಶಸ್ತಿ ದೊರೆತಿದೆ. ಈ ಹಿಂದೆ ವಿಜಯವಾಣಿಯಲ್ಲಿನ ‘ಯಾವುದನ್ ಕೊಳ್ಳಲಿ?’, ‘ಈ ಹೊತ್ತು ಛಿಲೋಕ’ ಅಂಕಣಗಳ ಮೂಲಕ ಪರಿಚಿತರಾಗಿದ್ದ ಟಿ.ಜಿ. ಶ್ರೀನಿಧಿ, ‘ಇ-ಜ್ಞಾನ’ ಅಂಕಣದ ಮೂಲಕ ಓದುಗರಿಗೆ ಮತ್ತೊಮ್ಮೆ ಹತ್ತಿರವಾಗುತ್ತಿದ್ದಾರೆ. ಕಂಪ್ಯೂಟರ್ ತಂತ್ರಜ್ಞಾನಕ್ಕೆ ಸಂಬಂಧಿಸಿದಂತೆ ನಾವು ದಿನನಿತ್ಯ ಇಂಟರ್​ನೆಟ್, ಕ್ಲೌಡ್ ಕಂಪ್ಯೂಟಿಂಗ್, ಸಾಫ್ಟ್​ವೇರ್, ಆನ್​ಲೈನ್ ಶಾಪಿಂಗ್… ಇಂತಹ ಎಷ್ಟೋ ಪದಗಳನ್ನು ಕೇಳುತ್ತಲೇ ಇರುತ್ತೇವೆ. ಆದರೆ ಅವುಗಳ ಅರ್ಥ, ಕಾರ್ಯವಿಧಾನಗಳು ಮಾತ್ರ ಗೊತ್ತಿರುವುದಿಲ್ಲ. ಕಂಪ್ಯೂಟರ್ ಸಂಬಂಧಿ ವಿಷಯಗಳನ್ನು ಸರಳವಾಗಿ ವಿವರಿಸುತ್ತ, ಗ್ರಾಮೀಣ ಭಾಗದ ಜನಸಾಮಾನ್ಯರವರೆಗೂ ಮಾಹಿತಿ ತಂತ್ರಜ್ಞಾನವನ್ನು ವಿಸ್ತರಿಸುವುದು ‘ಇ-ಜ್ಞಾನ’ ಅಂಕಣದ ಉದ್ದೇಶ. ‘ಇ-ಜ್ಞಾನ’ ಇಂದಿನಿಂದ(21-4-16) ಪ್ರತಿದಿನ.
**

21-4-16.
ಬಿಟ್ ಮಾಹಿತಿ ಪ್ರಮಾಣ:
ನಾವು ಟೈಪ್ ಮಾಡಿದ ಮಾಹಿತಿ – ಡೌನ್​ಲೋಡ್ ಮಾಡಿ ತಂದ ಕಡತಗಳೆಲ್ಲ ಕಂಪ್ಯೂಟರಿನ ಮೆಮೊರಿಯಲ್ಲಿರುತ್ತವಲ್ಲ, ಅದೆಲ್ಲ ಕಂಪ್ಯೂಟರಿಗೆ ಅರ್ಥವಾಗಬೇಕಾದರೆ ಮೊದಲಿಗೆ ದ್ವಿಮಾನ ಪದ್ಧತಿಯ ಅಂಕಿಗಳಾಗಿ (1 ಅಥವಾ 0) ಬದಲಾದಾಗಬೇಕಾದ್ದು ಅನಿವಾರ್ಯ.

ದ್ವಿಮಾನ ಸಂಖ್ಯೆಯ ಆಂಗ್ಲ ಹೆಸರು ಬೈನರಿ ಡಿಜಿಟ್; ಈ ಹೆಸರಿನ ಮೊದಲ ಎರಡು ಹಾಗೂ ಕೊನೆಯದೊಂದು ಅಕ್ಷರಗಳನ್ನು ಸೇರಿಸಿ ಬಿಟ್ ಎಂಬ ಹೆಸರು ರೂಪಗೊಂಡಿದೆ. ಇದು ಮಾಹಿತಿಯ ಪ್ರಮಾಣ ಅಳೆಯಲು ಬಳಕೆಯಾಗುವ ಅತ್ಯಂತ ಸಣ್ಣ ಏಕಮಾನ.

ಎಂಟು ಬಿಟ್​ಗಳು ಸೇರಿದಾಗ ಒಂದು ಬೈಟ್ ಆಗುತ್ತದೆ. ಇಂಗ್ಲಿಷಿನ ಅಕ್ಷರವನ್ನೋ ಅಂಕಿ-ಲೇಖನಚಿಹ್ನೆಯನ್ನೋ ಕಂಪ್ಯೂಟರಿನ ಮೆಮೊರಿಯಲ್ಲಿ ಉಳಿಸಿಡಲು ಒಂದು ಬೈಟ್ ಸ್ಥಳಾವಕಾಶ ಬೇಕು. ಮೆಗಾಬೈಟ್, ಗಿಗಾಬೈಟ್, ಟೆರಾಬೈಟುಗಳೆಲ್ಲ ಇದೇ ಬೈಟ್​ನ ಗುಣಕಗಳು.

1024 ಬೈಟ್​ಗಳು ಒಂದು ಕಿಲೋಬೈಟ್​ಗೆ (ಕೆಬಿ),

1024 ಕೆಬಿ ಒಂದು ಮೆಗಾಬೈಟ್​ಗೆ (ಎಂಬಿ),

1024 ಎಂಬಿ ಒಂದು ಗಿಗಾಬೈಟ್​ಗೆ (ಜಿಬಿ) ಹಾಗೂ
1024 ಜಿಬಿ ಒಂದು ಟೆರಾಬೈಟ್​ಗೆ (ಟಿಬಿ) ಸಮಾನ.

Understanding file sizes (Bytes, KB, MB, GB, TB)

A byte is a sequence of 8 bits (enough to represent one alphanumeric character) processed as a single unit of information. A single letter or character would use one byte of memory (8 bits), two characters would use two bytes (16 bits).
Put another way, a bit is either an ‘on’ or an ‘off’ which is processed by a computer processor, we represent ‘on’ as ‘1’ and ‘off’ as ‘0’. 8 bits are known as a byte, and it is bytes which are used to pass our information in it’s basic form – characters.
An alphanumeric character (e.g. a letter or number such as ‘A’, ‘B’ or ‘7’) is stored as 1 byte. For example, to store the letter ‘R’ uses 1 byte, which is stored by the computer as 8 bits, ‘01010010’.
A document containing 100 characters would use 100 bytes (800 bits) – assuming the file didn’t have any overhead (additional data about the file which forms part of the file). Note, many non-alphanumeric characters such as symbols and foreign language characters use multiple bytes.

1024 bytes = 1 KB

1024 KB = 1 MB

1024 MB = 1 GB

1024 GB = 1 TB

1024 TB = 1 PB
*
KB = Kilobyte

MB = Megabyte

GB = Gigabyte

TB = Terabyte

PB = Petabyte

A kilobyte (KB) is 1024 bytes, a megabyte (MB) is 1024 kilobytes and so on as these tables demonstrate.
myRepono use bytes to calculate the size of the files we are storing and transferring. We then calculate the costs of the data storage and transfer based on the amount of bytes.
myRepono’s charges are based on gigabytes of usage, so for example you might pay $0.20 for 1 GB of data transfer, this means you are paying $0.20 to transfer over 1 billion bytes of data (over 8 billion bits).
***

22-4-16
ಇಂಟರ್​ನೆಟ್:
ಒಂದಕ್ಕಿಂತ ಹೆಚ್ಚು ಸಂಖ್ಯೆಯ ಕಂಪ್ಯೂಟರುಗಳ ನಡುವೆ ಸಂಪರ್ಕ ಏರ್ಪಡಿಸಿ ಆ ಮೂಲಕ ಮಾಹಿತಿ ಹಾಗೂ ಸಂಪನ್ಮೂಲಗಳನ್ನು ಹಂಚಿಕೊಳ್ಳಲು ಅನುವುಮಾಡಿಕೊಡುವ ವ್ಯವಸ್ಥೆಯನ್ನು ಕಂಪ್ಯೂಟರ್ ನೆಟ್​ವರ್ಕ್ (ಜಾಲ) ಎಂದು ಕರೆಯುತ್ತಾರೆ. ಯಾವುದೇ ಜಾಲದಲ್ಲಿರುವ ಕಂಪ್ಯೂಟರುಗಳು ಒಂದೇ ಕೋಣೆಯಲ್ಲಿರಬಹುದು, ಪ್ರಪಂಚದ ವಿವಿಧ ಮೂಲೆಗಳಲ್ಲೂ ಇರಬಹುದು. ಭೌಗೋಳಿಕ ವ್ಯಾಪ್ತಿಗೆ ಅನುಗುಣವಾಗಿ ಅವುಗಳ ಹೆಸರುಗಳು ಬದಲಾಗುತ್ತವೆ: ನಿರ್ದಿಷ್ಟ ಮಿತಿಯಲ್ಲಿ – ಒಂದು ಕಟ್ಟಡ ಅಥವಾ ಆವರಣದ ಒಳಗೆ – ಅಸ್ತಿತ್ವದಲ್ಲಿರುವ ಜಾಲಗಳಿಗೆ ಲೋಕಲ್ ಏರಿಯಾ ನೆಟ್​ವರ್ಕ್ (ಲ್ಯಾನ್) ಎಂದು ಹೆಸರು; ಇನ್ನೂ ಹೆಚ್ಚಿನ ಭೌಗೋಳಿಕ ವ್ಯಾಪ್ತಿಯಿರುವ ಜಾಲ ವೈಡ್ ಏರಿಯಾ ನೆಟ್​ವರ್ಕ್ (ವ್ಯಾನ್).

ಇಂತಹ ಅಸಂಖ್ಯ ಜಾಲಗಳು ಹಾಗೂ ವೈಯಕ್ತಿಕ ಕಂಪ್ಯೂಟರುಗಳ ಜೋಡಣೆಯಿಂದ ‘ಇಂಟರ್​ನೆಟ್’ (ಅಂತರ್ಜಾಲ) ರೂಪುಗೊಳ್ಳುತ್ತದೆ. ಪ್ರಪಂಚದ ಯಾವುದೇ ಮೂಲೆಯಲ್ಲಿರುವವರಾದರೂ ಈ ಜಾಲದ ಸಂಪರ್ಕ ಪಡೆದುಕೊಳ್ಳುವುದು ಸಾಧ್ಯ.

ನಿರ್ದಿಷ್ಟ ಗುಂಪುಗಳ (ಉದಾ: ಒಂದು ಸಂಸ್ಥೆಯ ಉದ್ಯೋಗಿಗಳು, ನಿರ್ದಿಷ್ಟ ಸೇವೆಯ ಗ್ರಾಹಕರು, ಯಾವುದೋ ಸಂಘಟನೆಯ ಸದಸ್ಯರು ಇತ್ಯಾದಿ) ಬಳಕೆಗಾಗಿ ಮಾತ್ರವೇ ಮೀಸಲಿರುವ ಜಾಲಗಳೂ ಇವೆ. ಅವನ್ನು ‘ಇಂಟ್ರಾನೆಟ್’ಗಳೆಂದು ಕರೆಯುತ್ತಾರೆ.
***

23-4-16

***
24-4-16.
ಕ್ಲೌಡ್ ಕಂಪ್ಯೂಟಿಂಗ್…
ಕ್ಲೌಡ್ ಕಂಪ್ಯೂಟಿಂಗ್ ಎಂಬ ಹೆಸರು ಕೇಳಿದ ತಕ್ಷಣ ನಮ್ಮ ಮನದಲ್ಲಿ ಕೊಂಚ ಗೊಂದಲವಾಗುವುದು ಸಹಜ. ಕ್ಲೌಡ್ ಅಂದರೆ ಮೋಡ, ಮೋಡಕ್ಕೂ ಕಂಪ್ಯೂಟರಿಗೂ ಎಲ್ಲಿಯ ಸಂಬಂಧ?

ಇಲ್ಲಿ ಕ್ಲೌಡ್ ಎಂದರೆ ಆಕಾಶದ ಮೋಡ ಅಲ್ಲ. ತಂತ್ರಾಂಶ, ಸಂಸ್ಕರಣಾ ಸಾಮರ್ಥ್ಯ, ಮಾಹಿತಿ ಸಂಗ್ರಹಣೆಗೆ ಸ್ಥಳಾವಕಾಶ ಮುಂತಾದ ಮೂಲಸೌಕರ್ಯಗಳನ್ನು ಅಂತರ್ಜಾಲದ ಮೂಲಕ ನಮಗೆ ಬೇಕಾದಾಗ ಬೇಕಾದಂತೆ ಒದಗಿಸುವ ವ್ಯವಸ್ಥೆಯ ಹೆಸರೇ ಕ್ಲೌಡ್ ಕಂಪ್ಯೂಟಿಂಗ್. ಇದನ್ನು ಬಳಸುವವರು ತಮಗೆ ಬೇಕಾದ ಕಂಪ್ಯೂಟರ್ ವ್ಯವಸ್ಥೆಯನ್ನು ಸ್ವತಃ ಹೊಂದಿಸಿಕೊಳ್ಳುವ ಬದಲು ಕ್ಲೌಡ್ ಕಂಪ್ಯೂಟಿಂಗ್ ಸೇವೆ ಒದಗಿಸುವವರಿಂದ ಪಡೆದುಕೊಂಡು ತಮ್ಮ ಬಳಕೆಗೆ ಅನುಗುಣವಾದ ಶುಲ್ಕ ಪಾವತಿಸುತ್ತಾರೆ – ಇಷ್ಟು ಯೂನಿಟ್ಟಿಗೆ ಇಷ್ಟು ರೂಪಾಯಿಯ ಲೆಕ್ಕದಂತೆ ಕರೆಂಟ್ ಬಿಲ್ ಕಟ್ಟುತ್ತೇವಲ್ಲ, ಹಾಗೆ! ಜಾಲತಾಣಕ್ಕೆ ಬೇಕಾದ ಸರ್ವರ್ ಸ್ಥಳಾವಕಾಶ, ಇಮೇಲ್ ನಿರ್ವಹಣೆಗೆ ಬೇಕಾದ ವ್ಯವಸ್ಥೆ, ಕಡತಗಳನ್ನು ಶೇಖರಿಸಿಡಲು ಜಾಗ ಮುಂತಾದ್ದನ್ನೆಲ್ಲ ನಾವೇ ಕೊಂಡು, ಕಾರ್ಯಗತಗೊಳಿಸಿ, ನಿರ್ವಹಿಸುವ ಬದಲಿಗೆ ಬಾಡಿಗೆಗೆ ಪಡೆದುಕೊಳ್ಳುವುದು ಇದರಿಂದ ಸಾಧ್ಯವಾಗುತ್ತದೆ. ಹಣ ಉಳಿತಾಯವಾಗುವುದರ ಜತೆಗೆ ನಿರ್ವಹಣೆಯ ತಲೆನೋವೂ ಕಡಿಮೆಯಾಗುತ್ತದೆ.
***

25-4-16.
ಕ್ಲೌಡ್ ಕಂಪ್ಯೂಟಿಂಗ್…
ಕ್ಲೌಡ್ ಕಂಪ್ಯೂಟಿಂಗ್ ಎಂಬ ಹೆಸರು ಕೇಳಿದ ತಕ್ಷಣ ನಮ್ಮ ಮನದಲ್ಲಿ ಕೊಂಚ ಗೊಂದಲವಾಗುವುದು ಸಹಜ. ಕ್ಲೌಡ್ ಅಂದರೆ ಮೋಡ, ಮೋಡಕ್ಕೂ ಕಂಪ್ಯೂಟರಿಗೂ ಎಲ್ಲಿಯ ಸಂಬಂಧ?

ಇಲ್ಲಿ ಕ್ಲೌಡ್ ಎಂದರೆ ಆಕಾಶದ ಮೋಡ ಅಲ್ಲ. ತಂತ್ರಾಂಶ, ಸಂಸ್ಕರಣಾ ಸಾಮರ್ಥ್ಯ, ಮಾಹಿತಿ ಸಂಗ್ರಹಣೆಗೆ ಸ್ಥಳಾವಕಾಶ ಮುಂತಾದ ಮೂಲಸೌಕರ್ಯಗಳನ್ನು ಅಂತರ್ಜಾಲದ ಮೂಲಕ ನಮಗೆ ಬೇಕಾದಾಗ ಬೇಕಾದಂತೆ ಒದಗಿಸುವ ವ್ಯವಸ್ಥೆಯ ಹೆಸರೇ ಕ್ಲೌಡ್ ಕಂಪ್ಯೂಟಿಂಗ್. ಇದನ್ನು ಬಳಸುವವರು ತಮಗೆ ಬೇಕಾದ ಕಂಪ್ಯೂಟರ್ ವ್ಯವಸ್ಥೆಯನ್ನು ಸ್ವತಃ ಹೊಂದಿಸಿಕೊಳ್ಳುವ ಬದಲು ಕ್ಲೌಡ್ ಕಂಪ್ಯೂಟಿಂಗ್ ಸೇವೆ ಒದಗಿಸುವವರಿಂದ ಪಡೆದುಕೊಂಡು ತಮ್ಮ ಬಳಕೆಗೆ ಅನುಗುಣವಾದ ಶುಲ್ಕ ಪಾವತಿಸುತ್ತಾರೆ – ಇಷ್ಟು ಯೂನಿಟ್ಟಿಗೆ ಇಷ್ಟು ರೂಪಾಯಿಯ ಲೆಕ್ಕದಂತೆ ಕರೆಂಟ್ ಬಿಲ್ ಕಟ್ಟುತ್ತೇವಲ್ಲ, ಹಾಗೆ! ಜಾಲತಾಣಕ್ಕೆ ಬೇಕಾದ ಸರ್ವರ್ ಸ್ಥಳಾವಕಾಶ, ಇಮೇಲ್ ನಿರ್ವಹಣೆಗೆ ಬೇಕಾದ ವ್ಯವಸ್ಥೆ, ಕಡತಗಳನ್ನು ಶೇಖರಿಸಿಡಲು ಜಾಗ ಮುಂತಾದ್ದನ್ನೆಲ್ಲ ನಾವೇ ಕೊಂಡು, ಕಾರ್ಯಗತಗೊಳಿಸಿ, ನಿರ್ವಹಿಸುವ ಬದಲಿಗೆ ಬಾಡಿಗೆಗೆ ಪಡೆದುಕೊಳ್ಳುವುದು ಇದರಿಂದ ಸಾಧ್ಯವಾಗುತ್ತದೆ. ಹಣ ಉಳಿತಾಯವಾಗುವುದರ ಜತೆಗೆ ನಿರ್ವಹಣೆಯ ತಲೆನೋವೂ ಕಡಿಮೆಯಾಗುತ್ತದೆ.
***

26-4-16.
ಆಂಟಿವೈರಸ್…
ಕಂಪ್ಯೂಟರಿನ ಸಾಫ್ಟ್​ವೇರ್​ನಿಂದ (ತಂತ್ರಾಂಶ) ಎಷ್ಟು ಉಪಯೋಗವಿದೆಯೋ ಅಷ್ಟೇ ಪ್ರಮಾಣದ ತೊಂದರೆಯೂ ಆಗಬಲ್ಲದು. ಒಳ್ಳೆಯ ಉದ್ದೇಶಕ್ಕೆ ತಂತ್ರಾಂಶಗಳಿರುವಂತೆ ಕೆಟ್ಟ ಕೆಲಸಗಳಿಗಾಗಿಯೂ ತಂತ್ರಾಂಶಗಳು (ಮಾಲ್​ವೇರ್ – ಕುತಂತ್ರಾಂಶ) ರೂಪುಗೊಂಡಿರುವುದು ಇದಕ್ಕೆ ಕಾರಣ. ಕಂಪ್ಯೂಟರ್ ಕಾರ್ಯಾಚರಣೆಗೆ ತೊಂದರೆಮಾಡುವುದು, ಶೇಖರಿಸಿಟ್ಟ ಮಾಹಿತಿಯನ್ನು ಹಾಳುಮಾಡುವುದು, ಖಾಸಗಿ ಮಾಹಿತಿಯನ್ನು ಕದ್ದು ದುರ್ಬಳಕೆ ಮಾಡಿಕೊಳ್ಳುವುದು – ಹೀಗೆ ಕುತಂತ್ರಾಂಶಗಳು ಬೇಕಾದಷ್ಟು ಬಗೆಯಲ್ಲಿ ತೊಂದರೆ ಕೊಡುತ್ತವೆ. ವೈರಸ್, ಟ್ರೋಜನ್, ಸ್ಪೈವೇರ್, ಆಡ್​ವೇರ್ ಇವೆಲ್ಲ ಕುತಂತ್ರಾಂಶಗಳಿಗೆ ಉದಾಹರಣೆಗಳು.

ರೋಗ ಬಾರದಂತಿರಲು, ಹಾಗೂ ಬಂದಾಗ ಅದನ್ನು ವಾಸಿಮಾಡಿಕೊಳ್ಳಲು ನಾವು ಔಷಧ ತೆಗೆದುಕೊಳ್ಳುತ್ತೇವಲ್ಲ, ಕಂಪ್ಯೂಟರುಗಳ ಪಾಲಿಗೆ ಅಂತಹ ಔಷಧವೆಂದರೆ ಆಂಟಿವೈರಸ್ ತಂತ್ರಾಂಶ. ಆಂಟಿವೈರಸ್ ಬಳಸುವ ಮೂಲಕ ನಾವು ನಮ್ಮ ಕಂಪ್ಯೂಟರನ್ನು ಸುರಕ್ಷಿತವಾಗಿ ಕಾಪಾಡಿಕೊಳ್ಳಬಹುದು. ನಾರ್ಟನ್, ಮೆಕ್​ಆಫೀ, ಅವಾಸ್ತ್ ಮುಂತಾದ ಹಲವು ಆಂಟಿವೈರಸ್​ಗಳು ಮಾರುಕಟ್ಟೆಯಲ್ಲಿವೆ. ಈ ಪೈಕಿ ಕೆಲವನ್ನು ಬಳಸಲು ಹಣ ಕೊಡಬೇಕಾಗುತ್ತದೆಯಾದರೆ ಇನ್ನು ಕೆಲವು ಉಚಿತವಾಗಿಯೇ ಸಿಗುತ್ತವೆ. ಆಂಟಿವೈರಸ್ ತಂತ್ರಾಂಶ ಇನ್​ಸ್ಟಾಲ್ ಮಾಡಿಕೊಂಡ ನಂತರವೂ ಕುತಂತ್ರಾಂಶಗಳಿಂದ ಸುರಕ್ಷಿತವಾಗಿರಲು ಅದನ್ನು ಆಗಿಂದಾಗ್ಗೆ ಅಪ್​ಡೇಟ್ ಮಾಡಿಕೊಳ್ಳುತ್ತಿರಬೇಕು.
***

27-4-16.
ಎಚ್ಚರವಿರಲಿ!
ಅಂತರ್ಜಾಲ – ವಿಶ್ವವ್ಯಾಪಿ ಜಾಲಗಳ ವರ್ಚುಯಲ್ ಜಗತ್ತು ಹೊರಗಿನ ನಮ್ಮ ಪ್ರಪಂಚದಂತೆಯೇ. ಅಲ್ಲಿ ಒಳ್ಳೆಯ ಸಂಗತಿಗಳು ಎಷ್ಟಿವೆಯೋ ಕೆಟ್ಟವೂ ಅಷ್ಟೇ ಇವೆ. ಹಾಗಾಗಿ ಜಾಲಲೋಕದಲ್ಲಿರುವಾಗ ಯಾವಾಗಲೂ ನಮ್ಮ ಎಚ್ಚರಿಕೆಯಲ್ಲೇ ಇರಬೇಕು.

ಮೊದಲಿಗೆ ನಾವು ಎಚ್ಚರವಹಿಸಬೇಕಾದ್ದು ನಮ್ಮ ಖಾಸಗಿ ಮಾಹಿತಿಯ ಸುರಕ್ಷತೆಯ ಬಗ್ಗೆ. ವೈಯಕ್ತಿಕ ವಿವರಗಳಾಗಲಿ ವಿವಿಧ ತಾಣಗಳ ಪಾಸ್​ವರ್ಡಗಳಾಗಲಿ ನಮ್ಮನ್ನು ಬಿಟ್ಟು ಬೇರೆಯವರಿಗೆ ತಿಳಿಯುವುದು ಎಂದಿದ್ದರೂ ಅಪಾಯ. ಫೇಸ್​ಬುಕ್​ನಂತಹ ಸಾಮಾಜಿಕ ಜಾಲತಾಣಗಳಲ್ಲಂತೂ ಅಪರಿಚಿತರ ಜತೆಗೆ ಹೆಚ್ಚಿನ ಒಡನಾಟ ಖಂಡಿತ ಬೇಡ. ತೀರಾ ಖಾಸಗಿ ಎನ್ನಬಹುದಾದ ಚಿತ್ರ ಹಾಗೂ ಮಾಹಿತಿಯನ್ನು ಮುಕ್ತವಾಗಿ ಹಂಚಿಕೊಳ್ಳುವುದೂ ತಪ್ಪು.

ಹಾಗೆಯೇ ಹಣಕಾಸು ವ್ಯವಹಾರಗಳಿಗೆ ಸಂಬಂಧಿಸಿದ ವಿವರಗಳನ್ನು ಕೂಡ ಆದಷ್ಟೂ ಗೌಪ್ಯವಾಗಿಟ್ಟುಕೊಳ್ಳಬೇಕು. ಬ್ಯಾಂಕಿನ ಆನ್​ಲೈನ್ ಖಾತೆಯ ಪಾಸ್​ವರ್ಡ್ ಆಗಲಿ, ಡೆಬಿಟ್ ಕಾರ್ಡ್ – ಕ್ರೆಡಿಟ್ ಕಾರ್ಡ್ ವಿವರಗಳಾಗಲಿ ಯಾವ ಕಾರಣಕ್ಕೂ ಬೇರೆಯವರ ಕೈಸೇರದಂತೆ ನೋಡಿಕೊಳ್ಳಬೇಕಾಗುತ್ತದೆ. ಯಾವುದೋ ಆಮಿಷ ಒಡ್ಡುವ ನಕಲಿ ಸಂದೇಶಗಳಿಗೆ, ಫೋನ್ ಕರೆಗಳಿಗೆ ಮರುಳಾಗಿ ನಮ್ಮ ಖಾತೆಯ ವಿವರಗಳನ್ನು ಹಂಚಿಕೊಂಡೆವೆಂದರೆ ತಲೆನೋವನ್ನು ಸ್ವತಃ ನಾವೇ ಆಹ್ವಾನಿಸಿಕೊಂಡಂತೆ!
***

28-4-16.
ಆನ್​ಲೈನ್ ಶಾಪಿಂಗ್
ಆನ್ ಲೈನ್ ಶಾಪಿಂಗ್ ಅಭ್ಯಾಸ ಬೆಳೆದಂತೆ ವಿವಿಧ ವಸ್ತುಗಳನ್ನು ಮಾರುವ ಜಾಲತಾಣಗಳೂ ಜಾಸ್ತಿಯಾಗುತ್ತಿವೆ. ಇತರ ಅಂಗಡಿಗಳ ಹೋಲಿಕೆಯಲ್ಲಿ ನಿರ್ವಹಣಾ ವೆಚ್ಚ ಕಡಿಮೆಯಿರುವುದರಿಂದ ಆನ್​ಲೈನ್ ಮಳಿಗೆಗಳು ಕೊಂಚಮಟ್ಟದ ರಿಯಾಯಿತಿ ನೀಡುವುದು ಸಾಧ್ಯ. ಸದ್ಯದಲ್ಲಂತೂ ಅನೇಕ ತಾಣಗಳು ಮಾರುಕಟ್ಟೆಯಲ್ಲಿ ತಮ್ಮ ಸ್ಥಾನ ಭದ್ರಪಡಿಸಿಕೊಳ್ಳುವ ಉದ್ದೇಶದಿಂದಲೇ ಹೆಚ್ಚುವರಿ ರಿಯಾಯಿತಿ ಕೊಡುತ್ತಿವೆ. ಇಂತಹ ತಾಣಗಳು ನೀಡುವ ಆಫರ್​ಗಳನ್ನು ಸರಿಯಾಗಿ ಬಳಸಿಕೊಂಡರೆ ಬೇಕಾದ ವಸ್ತುಗಳನ್ನೆಲ್ಲ ಮನೆಗೆ ತರಿಸಿಕೊಳ್ಳುವುದಷ್ಟೇ ಅಲ್ಲ, ನಮ್ಮ ತಿಂಗಳ ಖರ್ಚಿನಲ್ಲಿ ಸ್ವಲ್ಪ ಉಳಿಸುವುದು ಕೂಡ ಸಾಧ್ಯವಾಗುತ್ತದೆ. ಆದರೆ ಯಾವುದೇ ತಾಣದಲ್ಲಿ ಶಾಪಿಂಗ್ ಮಾಡುವ ಮುನ್ನ ಅದರ ಸೇವೆಯ ಗುಣಮಟ್ಟ ಹಾಗೂ ಅಲ್ಲಿ ಬೇರೆಯವರಿಗೆ ಆಗಿರುವ ಅನುಭವಗಳನ್ನು ಗೂಗಲ್, ಫೇಸ್​ಬುಕ್ ಇತ್ಯಾದಿಗಳ ಮೂಲಕ ತಿಳಿದುಕೊಳ್ಳುವುದು ಒಳಿತು. ಈಗಂತೂ ಬಹುತೇಕ ತಾಣಗಳಲ್ಲಿ ಬೇರೆಬೇರೆ ಮಾರಾಟಗಾರರಿರುತ್ತಾರಲ್ಲ, ನಿರ್ದಿಷ್ಟ ಮಾರಾಟಗಾರನ ವಿಶ್ವಾಸಾರ್ಹತೆಯ ಬಗ್ಗೆ ಅರಿತುಕೊಳ್ಳಲು ಅವರ ರೇಟಿಂಗ್ ಕೂಡ ನೆರವಾಗುತ್ತದೆ. ನಾವು ಕೊಳ್ಳಲು ಹೊರಟಿರುವ ವಸ್ತುವಿನ ಬೆಲೆಯನ್ನು (ಅಂಚೆವೆಚ್ಚವನ್ನೂ ಸೇರಿಸಿ) ಒಂದೆರಡು ಕಡೆ ಹೋಲಿಸಿ ನೋಡುವುದು ಕೂಡ ಒಳ್ಳೆಯದೇ.
***

29-4-16.
ಆನ್​ಲೈನ್ ಶಾಪಿಂಗ್.
ಆನ್ ಲೈನ್ ಶಾಪಿಂಗ್ ಅಭ್ಯಾಸ ಬೆಳೆದಂತೆ ವಿವಿಧ ವಸ್ತುಗಳನ್ನು ಮಾರುವ ಜಾಲತಾಣಗಳೂ ಜಾಸ್ತಿಯಾಗುತ್ತಿವೆ. ಇತರ ಅಂಗಡಿಗಳ ಹೋಲಿಕೆಯಲ್ಲಿ ನಿರ್ವಹಣಾ ವೆಚ್ಚ ಕಡಿಮೆಯಿರುವುದರಿಂದ ಆನ್​ಲೈನ್ ಮಳಿಗೆಗಳು ಕೊಂಚಮಟ್ಟದ ರಿಯಾಯಿತಿ ನೀಡುವುದು ಸಾಧ್ಯ. ಸದ್ಯದಲ್ಲಂತೂ ಅನೇಕ ತಾಣಗಳು ಮಾರುಕಟ್ಟೆಯಲ್ಲಿ ತಮ್ಮ ಸ್ಥಾನ ಭದ್ರಪಡಿಸಿಕೊಳ್ಳುವ ಉದ್ದೇಶದಿಂದಲೇ ಹೆಚ್ಚುವರಿ ರಿಯಾಯಿತಿ ಕೊಡುತ್ತಿವೆ. ಇಂತಹ ತಾಣಗಳು ನೀಡುವ ಆಫರ್​ಗಳನ್ನು ಸರಿಯಾಗಿ ಬಳಸಿಕೊಂಡರೆ ಬೇಕಾದ ವಸ್ತುಗಳನ್ನೆಲ್ಲ ಮನೆಗೆ ತರಿಸಿಕೊಳ್ಳುವುದಷ್ಟೇ ಅಲ್ಲ, ನಮ್ಮ ತಿಂಗಳ ಖರ್ಚಿನಲ್ಲಿ ಸ್ವಲ್ಪ ಉಳಿಸುವುದು ಕೂಡ ಸಾಧ್ಯವಾಗುತ್ತದೆ. ಆದರೆ ಯಾವುದೇ ತಾಣದಲ್ಲಿ ಶಾಪಿಂಗ್ ಮಾಡುವ ಮುನ್ನ ಅದರ ಸೇವೆಯ ಗುಣಮಟ್ಟ ಹಾಗೂ ಅಲ್ಲಿ ಬೇರೆಯವರಿಗೆ ಆಗಿರುವ ಅನುಭವಗಳನ್ನು ಗೂಗಲ್, ಫೇಸ್​ಬುಕ್ ಇತ್ಯಾದಿಗಳ ಮೂಲಕ ತಿಳಿದುಕೊಳ್ಳುವುದು ಒಳಿತು. ಈಗಂತೂ ಬಹುತೇಕ ತಾಣಗಳಲ್ಲಿ ಬೇರೆಬೇರೆ ಮಾರಾಟಗಾರರಿರುತ್ತಾರಲ್ಲ, ನಿರ್ದಿಷ್ಟ ಮಾರಾಟಗಾರನ ವಿಶ್ವಾಸಾರ್ಹತೆಯ ಬಗ್ಗೆ ಅರಿತುಕೊಳ್ಳಲು ಅವರ ರೇಟಿಂಗ್ ಕೂಡ ನೆರವಾಗುತ್ತದೆ. ನಾವು ಕೊಳ್ಳಲು ಹೊರಟಿರುವ ವಸ್ತುವಿನ ಬೆಲೆಯನ್ನು (ಅಂಚೆವೆಚ್ಚವನ್ನೂ ಸೇರಿಸಿ) ಒಂದೆರಡು ಕಡೆ ಹೋಲಿಸಿ ನೋಡುವುದು ಕೂಡ ಒಳ್ಳೆಯದೇ.
***

30-4-16.
ಪ್ರೋಗ್ರಾಮಿಂಗ್.
ಕಂಪ್ಯೂಟರ್ ಹೇಗೆ ಕೆಲಸಮಾಡಬೇಕು ಎಂದು ನಿರ್ದೇಶಿಸುವುದು ಪ್ರೋಗ್ರಾಮ್ಳ ಕೆಲಸ. ಇಂತಹ ಪ್ರೋಗ್ರಾಮುಗಳನ್ನು ರಚಿಸುವ ಕೆಲಸವೇ ಪ್ರೋಗ್ರಾಮಿಂಗ್.

ಪ್ರೋಗ್ರಾಮಿಂಗ್ ಕಲಿಯುವ ಮೂಲಕ ನಾವು ಕಂಪ್ಯೂಟರ್ ಕೆಲಸಮಾಡುವ ರೀತಿಯನ್ನು ಹೆಚ್ಚು ಸಮರ್ಥವಾಗಿ ಅರ್ಥಮಾಡಿಕೊಳ್ಳುವುದು ಹಾಗೂ ಅದು ನಮ್ಮ ಅಗತ್ಯಕ್ಕೆ ತಕ್ಕಂತೆ ಕೆಲಸಮಾಡುವಂತೆ ಮಾಡಿಕೊಳ್ಳುವುದು ಸಾಧ್ಯವಾಗುತ್ತದೆ. ಅಷ್ಟೇ ಅಲ್ಲ, ಇತರರಿಗೂ ಉಪಯುಕ್ತವಾದ ಪ್ರೋಗ್ರಾಮುಗಳನ್ನು ರೂಪಿಸಿಕೊಡುವುದು ಹಣ ಸಂಪಾದನೆಯ ಮಾರ್ಗವೂ ಆಗಬಹುದು.

codecademy.com, w3schools.com, code.org ಮುಂತಾದ ಅನೇಕ ಜಾಲತಾಣಗಳ ಮೂಲಕ ಪ್ರೋಗ್ರಾಮಿಂಗ್ ಕಲಿಕೆ ಪ್ರಾರಂಭಿಸಬಹುದು. ಇಂತಹ ಬಹುತೇಕ ತಾಣಗಳನ್ನು ಯಾವುದೇ ಶುಲ್ಕವಿಲ್ಲದೆ ಬಳಸಬಹುದು.

ನಮ್ಮ ಪ್ರೋಗ್ರಾಮಿಂಗ್ ಕೌಶಲ ಬಳಸಿಕೊಳ್ಳಬೇಕು ಎನ್ನುವವರಿಗೆ ನೆರವಾಗುವ ಜಾಲತಾಣಗಳೂ ಇವೆ (ಉದಾ:freelancer.in). ಪ್ರಪಂಚದ ವಿವಿಧೆಡೆಗಳಲ್ಲಿರುವ ಬಳಕೆದಾರರ ಅಗತ್ಯಕ್ಕೆ ತಕ್ಕಂತೆ ಪ್ರೋಗ್ರಾಮಿಂಗ್ ಮಾಡಿಕೊಡುವ ಹಾಗೂ ಆ ಮೂಲಕ ಹಣಸಂಪಾದಿಸುವ ಅವಕಾಶವನ್ನು ಇಂತಹ ಜಾಲತಾಣಗಳು ಒದಗಿಸುತ್ತವೆ. ಇಂತಹ ಯಾವುದೇ ತಾಣದ ಮೂಲಕ ಕೆಲಸ ಒಪ್ಪಿಕೊಳ್ಳುವಾಗ ಸಂಭಾವ್ಯ ವಂಚನೆಗಳ ಬಗ್ಗೆ ಎಚ್ಚರ ವಹಿಸುವುದೂ ಅಗತ್ಯ.