Monthly Archives: August 2017

ಕಾನೂನು ಮಿತ್ರ (ನೌಕರರಿಗೆ ಉಪಯುಕ್ತ ಮಾಹಿತಿ )

ಕಾರ್ಯನಿರ್ವಹಣಾ ವರದಿಯ ಕಾರ್ಯ ವಿಧಾನ
30.05.2018.
| ಲ.ರಾಘವೇಂದ್ರ, ಸೇವಾ ಕಾನೂನು ತಜ್ಞರು

ಕರ್ನಾಟಕ ಸರ್ಕಾರಿ ಸೇವಾ (ಕಾರ್ಯನಿರ್ವಹಣಾ ವರದಿ) ನಿಯಮಗಳು 2000ರಂತೆ ರಾಜ್ಯ ಸರ್ಕಾರದ ಅಧಿಕಾರಿ/ನೌಕರರಿಗೆ (ಎ, ಬಿ ಮತ್ತು ಸಿ ನೌಕರರಿಗೆ) ಪ್ರತಿ ವರ್ಷದ ಆರ್ಥಿಕ ವರ್ಷ ಮುಕ್ತಾಯದ ನಂತರ ಕಾರ್ಯನಿರ್ವಹಣಾ ವರದಿ ಬರೆಯಬೇಕಾಗುತ್ತದೆ. ಈ ವರದಿಯು ಸರ್ಕಾರಿ ನೌಕರನ ಪರೀಕ್ಷಾರ್ಥ ಅವಧಿ ಘೊಷಣೆ ಮತ್ತು ಪದೋನ್ನತಿಗೆ ಅವಶ್ಯಕ. ಇದು ಸರ್ಕಾರಿ ನೌಕರನ ಕಾರ್ಯ ಕ್ಷಮತೆಯನ್ನು ಪ್ರತಿಬಿಂಬಿಸುತ್ತದೆ. ಸರ್ಕಾರವು ಈ ವರದಿ ಬರೆಯುವಿಕೆ ಬಗ್ಗೆ ಈ ನಿಯಮಾವಳಿಯಲ್ಲದೆ, ದಿನಾಂಕ: 29.08.2002ರ ಸರ್ಕಾರದ ಅಧಿಕೃತ ಜ್ಞಾಪನ ಸಂಖ್ಯೆ: ಸಿಆಸುಇ 4 ಕೆರವ 2002 ರಲ್ಲಿ ಸ್ಪಷ್ಟೀಕರಿಸಲಾಗಿದೆ. ಇದಕ್ಕಾಗಿ ನಿಯಮ 4(2)ರಲ್ಲಿ ವಿವರಿಸಿದ್ದು, ನಿಗದಿಪಡಿಸಿದ ನಮೂನೆಯಲ್ಲಿ ಬರೆಯಬೇಕಾಗುತ್ತದೆ. ಕಾರ್ಯನಿರ್ವಹಣಾ ವರದಿಯ ನಮೂನೆಯು ಒಟ್ಟು 5 ಭಾಗಗಳನ್ನು ಹೊಂದಿರುತ್ತದೆ. ಭಾಗ-1ರಲ್ಲಿ ನೌಕರರು ತನ್ನ ವೈಯಕ್ತಿಕ ಮಾಹಿತಿಯನ್ನು ತುಂಬಿ ಸಹಿ ಮಾಡಬೇಕಾಗುತ್ತದೆ. ಭಾಗ-2ರಲ್ಲಿ ನೌಕರರು ತನ್ನ ಕಾರ್ಯನಿರ್ವಹಣೆ ಬಗ್ಗೆ ಸ್ವಯಂ ಮೌಲ್ಯಮಾಪನ ಮಾಡಬೇಕಾಗುತ್ತದೆ. ಭಾಗ-3ರಲ್ಲಿ ನೌಕರರ ತಕ್ಷಣದ ಮೇಲಾಧಿಕಾರಿಯು ವರದಿ ಪ್ರಾಧಿಕಾರಿಯಾಗಿ ಕಾರ್ಯ ನಿರ್ವಹಣೆ ಬರೆಯಬೇಕು. ಭಾಗ-4ರಲ್ಲಿ ಪರಿಶೀಲನಾ ಪ್ರಾಧಿಕಾರ ಅಂದರೆ ವರದಿ ಮಾಡುವ ಅಧಿಕಾರಿಯ ಮೇಲಿನ ಅಧಿಕಾರಿಯು ಬರೆಯಬೇಕಾಗುತ್ತದೆ. ಭಾಗ-5ರಲ್ಲಿ ಅಂಗೀಕಾರ ಪ್ರಾಧಿಕಾರ ಅಂದರೆ ಸಾಮಾನ್ಯವಾಗಿ ನೇಮಕಾತಿ ಮತ್ತು ಶಿಸ್ತು ಪ್ರಾಧಿಕಾರಿಯೇ ಅಂಗೀಕಾರ ಪ್ರಾಧಿಕಾರಿಯಾಗಿದ್ದು, ಅವರು ಅಂತಿಮವಾಗಿ ಅಂಗೀಕಾರ ಅಥವಾ ತಿರಸ್ಕಾರ ಮಾಡುವ ಪ್ರಾಧಿಕಾರಿಯಾಗಿರುತ್ತಾರೆ.

ನೌಕರನು ತನ್ನ ಕಾರ್ಯನಿರ್ವಹಣಾ ವರದಿಯ ಭಾಗ-1 ಮತ್ತು ಭಾಗ-2 ಭರ್ತಿಮಾಡಿ ಆರ್ಥಿಕ ವರ್ಷ ಮುಕ್ತಾಯವಾಗಿ ಒಂದು ತಿಂಗಳ ಒಳಗೆ ಅಂದರೆ ಏಪ್ರಿಲ್ ತಿಂಗಳಿನಲ್ಲಿ ವರದಿ ಪ್ರಾಧಿಕಾರಕ್ಕೆ ನಿಯಮ 4(2)ರಂತೆ (ಖಜಠಿಠಡಿಣಟಿರ ಂಣಣkಠಡಿಣಥಿ) ಸಲ್ಲಿಸತಕ್ಕದ್ದು. ವರದಿ ಮಾಡುವ ಪ್ರಾಧಿಕಾರವು ನಮೂನೆಯ ಭಾಗ-3ರಲ್ಲಿ ಆ ನೌಕರನ ಕಾರ್ಯನಿರ್ವಹಣೆಯನ್ನು ಮೌಲ್ಯಮಾಪನ ಮಾಡಿ ಮುಂದಿನ 3 ತಿಂಗಳ ಒಳಗಾಗಿ ಅಂದರೆ ಜೂನ್ ಅಂತ್ಯದೊಳಗಾಗಿ ಪರಿಶೀಲನಾ ಪ್ರಾಧಿಕಾರಕ್ಕೆ ಕಳುಹಿಸಬೇಕು (ನಿಯಮ-5). ಪರಿಶೀಲನಾ ಪ್ರಾಧಿಕಾರವು (ಖಜತಜತಿ ಂಣಣkಠಡಿಣಥಿ) ಸಾಮಾನ್ಯವಾಗಿ ವರದಿ ಪ್ರಾಧಿಕಾರದಿಂದ ಸ್ವೀಕೃತಗೊಂಡ ಮೂರು ತಿಂಗಳೊಳಗಾಗಿ ಅಂದರೆ ಸೆಪ್ಟೆಂಬರ್ ತಿಂಗಳಿನ ಕೊನೆಯೊಳಗೆ ಭಾಗ-4ರಲ್ಲಿ ಷರಾ ದಾಖಲಿಸಿ ಅಂಗೀಕಾರ ಪ್ರಾಧಿಕಾರಕ್ಕೆ ಕಳುಹಿಸುವುದು. ಅಂಗೀಕಾರ ಪ್ರಾಧಿಕಾರವು ತಮ್ಮ ಕಚೇರಿಗೆ ಸ್ವೀಕೃತಗೊಂಡ 3 ತಿಂಗಳೊಳಗಾಗಿ ಅಂದರೆ ಸಾಮಾನ್ಯವಾಗಿ ಡಿಸೆಂಬರ್ ಅಂತ್ಯದ ಒಳಗಾಗಿ ಅಂತಿಮ ಟಿಪ್ಪಣಿಯನ್ನು ಬರೆದು ಯಾವ ಪ್ರಾಧಿಕಾರಿಗೆ ಕಾರ್ಯನಿರ್ವಹಣಾ ವರದಿ ರಕ್ಷಿಸಲು ಸುತ್ತೋಲೆಗಳಿರುತ್ತವೆಯೋ ಅಲ್ಲಿ ಸಂರಕ್ಷಿಸಬೇಕು ನಿಯಮ-5(5).

ಸರ್ಕಾರಿ ನೌಕರನು ನಿಗದಿತ ಅವಧಿಯೊಳಗೆ ತನ್ನ ವೈಯಕ್ತಿಕ ಮಾಹಿತಿ ಮತ್ತು ಸ್ವಯಂ ಮೌಲ್ಯಮಾಪನದೊಂದಿಗೆ ಕಾರ್ಯನಿರ್ವಹಣಾ ವರದಿಯನ್ನು ಸಂಬಂಧಪಟ್ಟ ವರದಿ ಪ್ರಾಧಿಕಾರಕ್ಕೆ ಸಲ್ಲಿಸದಿದ್ದಲ್ಲಿ, ಅಂದರೆ ಏಪ್ರಿಲ್ ಅಂತ್ಯದೊಳಗೆ ವರದಿ ಪ್ರಾಧಿಕಾರಕ್ಕೆ ಸಲ್ಲಿಸದಿದ್ದಲ್ಲಿ ಆಗ ಅವರು ಲಭ್ಯವಿರುವ ವೈಯಕ್ತಿಕ ಮಾಹಿತಿಯೊಂದಿಗೆ ಸ್ವಯಂ ಕಾರ್ಯನಿರ್ವಹಣಾ ವರದಿ ಬರೆಯಬೇಕಾಗುತ್ತದೆ ನಿಯಮ-5(3)(ಸಿ).

ಕಾರ್ಯನಿರ್ವಹಣಾ ವರದಿಯನ್ನು, ವರದಿ ಮಾಡುವ ಪ್ರಾಧಿಕಾರ ಅಥವಾ ಆ ಪ್ರಾಧಿಕಾರ ವರ್ಗಾವಣೆಯಾದಲ್ಲಿ ಅಧಿಕಾರ ಹಸ್ತಾಂತರಿಸಿದ ದಿನಾಂಕಕ್ಕೆ ಅನ್ವಯಿಸಿ ಕಾರ್ಯನಿರ್ವಹಣಾ ವರದಿಯನ್ನು ಕೂಡಲೇ ಬರೆಯತಕ್ಕದ್ದು ಮತ್ತು ಅದನ್ನು ಪರಿಶೀಲನಾ ಪ್ರಾಧಿಕಾರಕ್ಕೆ ಕಳುಹಿಸಿಕೊಡಬೇಕು. ಈ ವರದಿಯಲ್ಲಿ ಯಾವ ಅವಧಿಗೆ ವರದಿಯನ್ನು ಬರೆಯಲಾಗಿದೆ ಎಂಬುದನ್ನು ನಮೂದಿಸತಕ್ಕದ್ದು.

ಎಲ್ಲ ವರದಿ ಪ್ರಾಧಿಕಾರಗಳೂ ವರದಿ ವರ್ಷದಲ್ಲಿ ಯಾರಿಗೆ ವರದಿ ಪ್ರಾಧಿಕಾರವಾಗಿರುತ್ತಾರೋ ಅಂತಹ ಎಲ್ಲ ಸರ್ಕಾರಿ ನೌಕರರ ಕಾರ್ಯನಿರ್ವಹಣಾ ವರದಿಗಳನ್ನು ಬರೆದಿರುವುದಾಗಿ ದೃಢೀಕರಣವನ್ನು ಅವರವರ ಕಾರ್ಯನಿರ್ವಹಣಾ ವರದಿಗಳಲ್ಲಿ ನೀಡಬೇಕು. ಆದಾಗ್ಯೂ ಅಂತಹ ಪ್ರಾಧಿಕಾರ, ವರದಿ ಪ್ರಾಧಿಕಾರವಾಗಿ ಕರ್ತವ್ಯ ನಿರ್ವಹಿಸುವಲ್ಲಿ ವಿಫಲರಾಗಿರುತ್ತಾರೆ ಎಂಬ ಪ್ರತಿಕೂಲ ಷರಾವನ್ನು ಅಂತಹ ವರದಿ ಪ್ರಾಧಿಕಾರದ ಕಾರ್ಯನಿರ್ವಹಣಾ ವರದಿಯಲ್ಲಿ ಪರಿಶೀಲನಾ ಪ್ರಾಧಿಕಾರ ದಾಖಲಿಸಬೇಕಾಗಿರುತ್ತದೆ.

ವರದಿ ಮಾಡಲ್ಪಡುವ ಸರ್ಕಾರಿ ನೌಕರನ ಕಾರ್ಯನಿರ್ವಹಣೆ ವರದಿ ಮಾಡಲ್ಪಡುವ ಅವಧಿಯಲ್ಲಿ ಕನಿಷ್ಟ 3 ತಿಂಗಳವರೆಗೆ ಸಂಬಂಧಪಟ್ಟ ವರದಿ ಪ್ರಾಧಿಕಾರ ನೋಡದೇ ಇದ್ದಲ್ಲಿ, ಆದರೆ ಪರಿಶೀಲನಾ ಪ್ರಾಧಿಕಾರವು ಕನಿಷ್ಠ 3 ತಿಂಗಳವರೆಗೆ ನೋಡಿದ್ದಲ್ಲಿ, ಪರಿಶೀಲನಾ ಪ್ರಾಧಿಕಾರವೇ ವರದಿ ಬರೆದು ಅಂಗೀಕರಿಸುವ ಪ್ರಾಧಿಕಾರಕ್ಕೆ ಕಳುಹಿಸಿಕೊಡಬೇಕು. (ನಿಯಮ-6).

ಒಂದು ವೇಳೆ ವರದಿ ಪ್ರಾಧಿಕಾರ ಮತ್ತು ಪರಿಶೀಲನಾ ಪ್ರಾಧಿಕಾರಗಳೆರಡೂ ಸಂಬಂಧಪಟ್ಟ ಸರ್ಕಾರಿ ನೌಕರನ ಕಾರ್ಯನಿರ್ವಹಣೆಯನ್ನು ಕನಿಷ್ಠ 3 ತಿಂಗಳವರೆಗೆ ನೋಡದೇ ಇದ್ದಲ್ಲಿ, ಆದರೆ ಸಂಬಂಧಪಟ್ಟ ಅಂಗೀಕಾರ ಪ್ರಾಧಿಕಾರವು ನೋಡಿದ್ದಲ್ಲಿ, ಅಂಗೀಕಾರ ಪ್ರಾಧಿಕಾರವೇ ಕಾರ್ಯನಿರ್ವಹಣಾ ವರದಿ ಬರೆಯಬೇಕು(ನಿಯಮ-7).

ಯಾವುದೇ ಒಬ್ಬ ಸರ್ಕಾರಿ ನೌಕರನ ಕಾರ್ಯನಿರ್ವಹಣೆಯನ್ನು ವರದಿ ವರ್ಷದಲ್ಲಿ ಕನಿಷ್ಠ 3 ತಿಂಗಳವರೆಗೆ ವರದಿ ಪ್ರಾಧಿಕಾರ, ಪರಿಶೀಲನಾ ಪ್ರಾಧಿಕಾರ ಮತ್ತು ಅಂಗೀಕಾರ ಪ್ರಾಧಿಕಾರಗಳು ನೋಡದೆ ಇದ್ದಲ್ಲಿ ಸಂಬಂಧಪಟ್ಟ ಪ್ರಾಧಿಕಾರ ಆ ಬಗ್ಗೆ ವರದಿಯಲ್ಲಿ ಸೂಕ್ತ ಟಿಪ್ಪಣಿ ನಮೂದು ಮಾಡಬೇಕು.

ಯಾವುದೇ ಒಬ್ಬ ಸರ್ಕಾರಿ ನೌಕರನು ವರದಿ ವರ್ಷದಲ್ಲಿ 3 ತಿಂಗಳಿಗಿಂತ ಕಡಿಮೆಯಾಗದಂತೆ ನಿರಂತರವಾಗಿ ಯಾವುದೇ ಬಗೆಯ ರಜೆಯಲ್ಲಿದ್ದಲ್ಲಿ, ಅಂತಹ ಅವಧಿಗೆ ಕಾರ್ಯನಿರ್ವಹಣೆಯ ಬಗ್ಗೆ ವರದಿ ಬರೆಯಬೇಕಿಲ್ಲ (ನಿಯಮ-7, ಟಿಪ್ಪಣಿ-1).

ವರದಿ ಮಾಡಲ್ಪಡುವ ಸರ್ಕಾರಿ ನೌಕರನು ಅಮಾನತಿನಲ್ಲಿದ್ದರೆ ಅಂತಹ ಅಮಾನತಿನ ಅವಧಿಗಾಗಿ ವರದಿ ಬರೆಯಬೇಕಿಲ್ಲ.(ನಿಯಮ-7, ಟಿಪ್ಪಣಿ-2).

ವರದಿ/ಪರಿಶೀಲನಾ/ಅಂಗೀಕಾರ ಪ್ರಾಧಿಕಾರವಾದಂತಹ ಯಾವುದೇ ಅಧಿಕಾರಿ ಕಾರ್ಯನಿರ್ವಹಣಾ ವರದಿ ಬರೆಯುವಂತಹ ಸಮಯದಲ್ಲಿ ನಿವೃತ್ತನಾದರೆ, ಅಂತಹ ವರದಿಗಳನ್ನು ನಿವೃತ್ತಿಯಾದ 3 ತಿಂಗಳೊಳಗೆ ವರದಿ ಬರೆಯಬಹುದು(ನಿಯಮ-8(2).

ಸರ್ಕಾರಿ ನೌಕರನ ಪದೋನ್ನತಿ ವೇಳೆ ಕಳೆದ 1 ಅಥವಾ ಅದಕ್ಕಿಂತ ಹೆಚ್ಚು ವರ್ಷದ ಈ ಕಾರ್ಯ ನಿರ್ವಹಣಾ ವರದಿ ಲಭ್ಯವಾಗದಿದ್ದರೆ, ನೇಮಕಾತಿ ಪ್ರಾಧಿಕಾರಿಯು ವಿಶೇಷ ಕಾರ್ಯ ನಿರ್ವಹಣಾ ವರದಿ ಸಿದ್ಧಪಡಿಸಬೇಕಾಗುತ್ತದೆ.(ನಿಯಮ-7-ಎ).

ಸರ್ಕಾರಿ ನೌಕರನ ಪರೀಕ್ಷಾರ್ಥ ಅವಧಿಯ (Probationary Period) ಘೊಷಣೆಗೆ ಎರಡು ವರ್ಷಗಳ ತೃಪ್ತಿದಾಯಕವಾದ ಈ ವರದಿ ಅವಶ್ಯಕ.

****

ಸರ್ಕಾರಿ ನೌಕರರ ನಡತೆ ಸಂಹಿತೆ
Wednesday, 18.04.2018, ವಿಜಯವಾಣಿ.
| ಲ.ರಾಘವೇಂದ್ರ

ಕರ್ನಾಟಕ ಸರ್ಕಾರವು ತನ್ನ ನೌಕರರಿಗೆ ಯಾವ ರೀತಿ ಇರಬೇಕು, ಹೇಗೆ ತಮ್ಮ ಕರ್ತವ್ಯ ನಿಷ್ಠೆ ತೋರಬೇಕು ಎಂಬ ಬಗ್ಗೆ 1966ರ ಕರ್ನಾಟಕ ಸರ್ಕಾರಿ(ನಡತೆ) ನಿಯಮಗಳು ಜಾರಿಗೆ ತಂದಿದೆ. ಈ ಹಿನ್ನೆಲೆಯಲ್ಲಿ ಸರ್ಕಾರಿ ನೌಕರರ ನಡತೆ ಸಂಹಿತೆಯನ್ನು ಕೆಳಗೆ ನೀಡಲಾಗಿದೆ.

1) ಪ್ರತಿಯೊಬ್ಬ ಸರ್ಕಾರಿ ನೌಕರನು ಪ್ರಥಮವಾಗಿ ರಾಜ್ಯ/ರಾಷ್ಟ್ರಕ್ಕೆ ನಿಷ್ಠೆಯುಳ್ಳವನಾಗಿರಬೇಕು. 2) ತಾನು ನಿರ್ವಹಿಸುವ ಕೆಲಸದ ಬಗ್ಗೆ ಪೂರ್ತಿ ತಿಳಿದಿರಬೇಕಲ್ಲದೇ ನಿಯಮಾವಳಿ/ಸರ್ಕಾರಿ ಆದೇಶಗಳ ಬಗ್ಗೆ ತಿಳಿವಳಿಕೆ ಇರಬೇಕು ಹಾಗೂ ಇರಡು ತಯಾರಿಕೆ/ವಿಷಯ ಮಂಡನೆಯಲ್ಲಿ ಪರಿಣಿತರಿದ್ದು, ಕರ್ತವ್ಯ ನಿಷ್ಠೆಯುಳ್ಳವನಾಗಿರಬೇಕು. 3) ಕಾರ್ಯಾಲಯಕ್ಕೆ ನಿಯಮಿತವಾಗಿ ಹಾಜರಾಗಬೇಕಲ್ಲದೇ ಅನಧಿಕೃತವಾಗಿ ಗೈರಾಗಬಾರದು. 4) ವಹಿಸಿಕೊಟ್ಟ ಕೆಲಸವನ್ನು ನಿಷ್ಠೆಯಿಂದ ನಿರ್ವಹಿಸಬೇಕು.

5) ಅಧೀನ ಸಿಬ್ಬಂದಿಗೆ ಕಾರ್ಯನಿರ್ವಹಿಸುವಲ್ಲಿ ಮಾರ್ಗದರ್ಶನ ಮಾಡಬೇಕಲ್ಲದೇ, ಅಧೀನ ಸಿಬ್ಬಂದಿ ಕಾರ್ಯನಿರ್ವಹಿಸುವಂತೆ ಪ್ರೋತ್ಸಾಹಿಸಬೇಕು. ಉತ್ಸಾಹ ತುಂಬಬೇಕು, ಸಮರ್ಪಕ ಮೇಲ್ವಿಚಾರಣೆ ಮಾಡಬೇಕು. 6) ತಾನು ನಿರ್ವಹಿಸುತ್ತಿರುವ ಕಾರ್ಯ ಸಮರ್ಪಕವಾಗಿ ನಿರ್ವಹಿಸಬೇಕಲ್ಲದೇ, ಕೈಗೊಂಡ ನಿರ್ಣಯ ಸಾರ್ವಜನಿ ಹಿತಾಸಕ್ತಿಗೆ ಅನುಗುಣವಾಗಿರುವಂತೆ ನೋಡಿಕೊಳ್ಳಬೇಕು. 7) ಕಾರ್ಯ ನಿರ್ವಹಿಸಲು ಅವಧಿ ನಿಗಧಿಪಡಿಸದೇ ಇದ್ದಾಗ ತಾವೇ ಅವಧಿ ನಿಗದಿಪಡಿಸಿಕೊಂಡು ತ್ವರಿತವಾಗಿ ಕೆಲಸ ಮುಗಿಸಬೇಕು. 8) ನಿಯಮಾವಳಿ/ಸರ್ಕಾರಿ ಆದೇಶ/ಸುತ್ತೋಲೆಗಳನ್ನು ಸರಿಯಾಗಿ ಅರ್ಥೈಸಿಕೊಂಡು ಸಾರ್ವಜನಿಕ ಹಿತಾಸಕ್ತಿಗೆ ಕುಂದು ಬಾರದಂತೆ ಕಾರ್ಯ ನಿರ್ವಹಿಸಬೇಕು.9) ಸಾರ್ವಜನಿಕರು/ಸಹೋದ್ಯೋಗಿಗಳೊಡನೆ ಒಳ್ಳೆಯ ಸಂಬಂಧಗಳಿರುವಂತೆ ನೋಡಿಕೊಳ್ಳಬೇಕು. 10) ಮಾಡುವ ಕೆಲಸ ಒಳ್ಳೆಯ ಗುಣಮಟ್ಟದ್ದಾಗಿರಬೇಕು. ತಪ್ಪು ನಿರ್ಣಯ/ಸಾರ್ವಜನಿಕರಿಗೆ ತೊಂದರೆಯುಂಟಾಗುವ ನಿರ್ಣಯಗಳನ್ನು ತೆಗೆದುಕೊಳ್ಳಬಾರದು.

11) ನಿರ್ಣಯವನ್ನು ಅವಸರದಲ್ಲಿ ತೆಗೆದುಕೊಳ್ಳದೇ ರ್ಚಚಿಸಿ, ನಿಯಮಾನುಸಾರ ಪರಿಶೀಲಿಸಿ ಸಮರ್ಪಕ ನಿರ್ಣಯ ತೆಗೆದುಕೊಳ್ಳಬೇಕು. 12) ಒಂಟಿಯಾಗಿ ಕಾರ್ಯನಿರ್ವಹಿಸದೇ, ಸಹೋದ್ಯೋಗಿ/ಅಧೀನ ಸಿಬ್ಬಂದಿಯನ್ನು ಹುರಿದುಂಬಿಸಿ, ಕರ್ತವ್ಯ ಪಾರಾಯಣರಾಗುವಂತೆ ಕಾರ್ಯ ನಿರ್ವಹಿಸಬೇಕು. 13) ಯಾವುದೇ ಯೋಜನೆ ರೂಪಿಸುವಾಗ ಸಾಧಕ/ಬಾಧಕ ಹಾಗೂ ಅದರಿಂದಾಗುವ ಪ್ರಯೋಜನಗಳನ್ನು ಮನದಟ್ಟು ಮಾಡಿಕೊಂಡು ಮೇಲಾಧಿಕಾರಿಗಳು ಒಪ್ಪಿಗೆ ನೀಡುವಂತೆ ಯೋಜನೆಗಳನ್ನು ರೂಪಿಸಿಕೊಳ್ಳಬೇಕು. 14) ನಿಯಮಾವಳಿ/ಸರ್ಕಾರಿ ಆದೇಶಗಳನ್ನು ಅರ್ಥೈಸುವಾಗ ಕೇವಲ ತರ್ಜುಮೆಗೆ ಅವಕಾಶ ನೀಡದೇ ವಿವೇಚನಾಶಕ್ತಿ ಬಳಸಿ, ನಿಯಮಾವಳಿ/ಸರ್ಕಾರಿ ಆದೇಶಗಳನ್ನು ಸಾರ್ವಜನಿಕರ/ ಅರ್ಜಿದಾರರ ಹಿತಾಸಕ್ತಿಗೆ ಭಂಗವಾಗದಂತೆ ಉಪಯೋಗಿಸುವ ಕಲೆಯನ್ನು ರೂಪಿಸಿಕೊಳ್ಳಬೇಕಲ್ಲದೇ ಅಧೀನ ಸಿಬ್ಬಂದಿಗೆ ಕೂಡ ಮಾರ್ಗದರ್ಶನ ಮಾಡಬೇಕು. 15) ಸಹೋದ್ಯೋಗಿ/ಅಧೀನ ಸಿಬ್ಬಂದಿಗೆ ಮಾರ್ಗದರ್ಶನ ಮಾಡುವುದು, ಅವರ ಕರ್ತವ್ಯ ನಿಷ್ಠೆ, ಸಮಯ ಪಾಲನೆ, ಸರಿಯಾಗಿ ನಿರ್ಣಯ ತೆಗೆದುಕೊಳ್ಳುವಲ್ಲಿ ಸಹಕಾರ ನೀಡಬೇಕು. 16) ಸರ್ಕಾರ ಹಮ್ಮಿಕೊಳ್ಳುವ ಯೋಜನೆಗಳ ಅನುಷ್ಠಾನದ ಬಗ್ಗೆ ಪರಿಪೂರ್ಣ ಮಾಹಿತಿ ಇರಬೇಕಲ್ಲದೇ ಯೋಜನೆಗಳ ಅನುಷ್ಠಾನಕ್ಕಾಗಿ ಒಳ್ಳೆಯ ಕ್ರಿಯಾಶೀಲನೆ, ಕರ್ತವ್ಯ ನಿಷ್ಠೆ, ಉತ್ಸಾಹ/ಪ್ರೋತ್ಸಾಹ, ಸಾಮಾಜಿಕ ಕಳಕಳಿ, ಬಡಜನರ ಅಭ್ಯುದಯದ ಬಗ್ಗೆ ಒಳ್ಳೆಯ ಯೋಜನೆ ಮುಂತಾದವುಗಳನ್ನು ರೂಪಿಸಿಕೊಳ್ಳಬೇಕು. 17) ಅಲ್ಲದೇ ಸರ್ಕಾರದ ವಿವಿಧ ಯೋಜನೆ ಅದರಲ್ಲಿ ಮುಖ್ಯವಾಗಿ ಬಡತನ ರೇಖೆಗಿಂತ ಕೆಳಗಿನವರನ್ನು ಮೇಲೆತ್ತಲು ರೂಪಿಸಿಕೊಳ್ಳುವ ಯೋಜನೆಗಳ ಫಲ ಸಂಬಂಧಿಸಿದವರಿಗೆ ತಲುಪುವಂತೆ ಕಾರ್ಯ ನಿರ್ವಹಿಸಬೇಕಲ್ಲದೇ ಅಧೀನ ಸಿಬ್ಬಂದಿಗೆ ಕೂಡ ಮಾರ್ಗದರ್ಶನ ಮಾಡಿ ಅವರನ್ನು ಕೂಡ ಯೋಜನೆ ಸಫಲವಾಗುವಂತೆ ಕಾರ್ಯ ನಿರ್ವಹಿಸಲು ಪರಿವರ್ತನೆ ಮಾಡಬೇಕು. 18) ಸರ್ಕಾರಿ ಹಣ ವಿನಿಯೋಗಿಸುವಾಗ ತನ್ನ ಸ್ವಂತ ಹಣವನ್ನು ವೆಚ್ಚ ಮಾಡುವಾಗ ತೆಗೆದುಕೊಳ್ಳುವ ವೀಚಕ್ಷಣೆಯನ್ನು (ಜಾಗರೂಕತೆ) ಬಳಸಿ ವಿನಿಯೋಗಿಸಬೇಕು. 19) ಸರ್ಕಾರಿ ಹಣದ ದುರುಪಯೋಗ ಮಾಡಬಾರದು. ಅಲ್ಲದೆ ಅಧೀನ ಸಿಬ್ಬಂದಿಯಿಂದ ಹಣ ದುರುಪಯೋಗವಾಗದಂತೆ ಕಾರ್ಯ ನಿರ್ವಹಿಸಬೇಕು. 20) ತಾವಾಗಿಯೇ ಜವಾಬ್ದಾರಿ ಹೊರುವ ಪ್ರವೃತ್ತಿ ಹೊಂದಿರಬೇಕು ಅಥವಾ ಜವಾಬ್ದಾರಿ ಹೊರಿಸಿದಲ್ಲಿ ಅದನ್ನು ವಹಿಸಿಕೊಳ್ಳುವ ಶಕ್ತಿ ಇರಬೇಕು.

21 ) ಸಾರ್ವಜನಿಕರೊಂದಿಗೆ ಒಳ್ಳೆಯ ಸಂಬಂಧ/ ಬಾಂಧವ್ಯ ಹೊಂದಿರಬೇಕಲ್ಲದೇ ಸಾರ್ವಜನಿಕರ ಬಗ್ಗೆ ಕಳಕಳಿಯುಳ್ಳವರಾಗಿಬೇಕು.22) ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡದವರಿಗಾಗಿರುವ ವಿವಿಧ ಯೋಜನೆಗಳ ಫಲ ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡ ವರ್ಗದವರಿಗೆ ತಲುಪಿಸುವಂತೆ ಕ್ರಮ ಜರುಗಿಸಬೇಕು. 23)ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಗಳ ಯಶಸ್ವಿ ಅನುಷ್ಠಾನಕ್ಕೆ ಕ್ರಮ ಜರುಗಿಸಬೇಕು. 24) ಸಾಮಾಜಿಕ ನ್ಯಾಯದಾನದ ಅನುಷ್ಠಾನದ ಬಗ್ಗೆ ಕಳಕಳಿ ಇರಬೇಕು ಹಾಗೂ ನ್ಯಾಯ ನಿರ್ಣಯಿಸುವಾಗ ಕಾನೂನುಗಳನ್ನು ಪಾಲಿಸಬೇಕಲ್ಲದೇ ವಿವೇಚನಾ ಶಕ್ತಿ ಬಳಸಿ ಸಮರ್ಪಕ ನ್ಯಾಯ ಒದಗಿಸಬೇಕು. 25) ಸಮಾಜಘಾತುಕ ಶಕ್ತಿಗಳನ್ನು ಗುರುತಿಸುವುದು ಹಾಗೂ ಸದೆಬಡಿಯುವುದು. ಸಮಾಜ ವಿಚ್ಛಿದ್ರಕಾರಕ ಶಕ್ತಿಗಳನ್ನು ಹದ್ದುಬಸ್ತಿನಲ್ಲಿಡುವುದು/ತಡೆಗಟ್ಟಲು ಕ್ರಮ ಜರುಗಿಸಬೇಕು. 26) ಈಗ ತಾಂತ್ರಿಕ ಯುಗದಲ್ಲಿರುವುದರಿಂದ ಗಣಕಯಂತ್ರಗಳ ಉಪಯೋಗದ ಮಾಹಿತಿ ಪಡೆಯುವುದು ಅವಶ್ಯಕ ಹಾಗೂ ಅಧೀನ ಸಿಬ್ಬಂದಿಗೆ ಸೂಕ್ತ ತರಬೇತಿ ನೀಡಲು ಕ್ರಮ ಜರುಗಿಸಬೇಕು. 27) ಅಧೀನ ಸಿಬ್ಬಂದಿಗೆ ಪ್ರೋತ್ಸಾಹ ನೀಡಬೇಕಲ್ಲದೇ ಸಮರ್ಪಕವಾಗಿ ಕಾರ್ಯ ನಿರ್ವಹಿಸುವ ಸಿಬ್ಬಂದಿಗೆ ಮಾರ್ಗದರ್ಶನ, ಸಹಕಾರ, ಪ್ರೋತ್ಸಾಹ ನೀಡಬೇಕು. 28) ಸರ್ಕಾರಿ ನೌಕರರು ಒಳ್ಳೆಯ ಗುರಿ, ಆದರ್ಶ ಹೊಂದಿರಬೇಕು.

ಎನ್ಪಿಎಸ್ ಯೋಜನೆಯಲ್ಲಿ ನೌಕರರ ಪಾತ್ರ:

04.04.2018..
| ಲ.ರಾಘವೇಂದ್ರ ಸೇವಾ ಕಾನೂನು ತಜ್ಞರು

ಅ) ಪ್ರಾನ್(ಪಿಎಆರ್ಎಎನ್) ಸಂಖ್ಯೆಯನ್ನು ಪಡೆಯುವುದಕ್ಕೆ ಸಿಆರ್ಎಯೊಂದಿಗೆ ನೋಂದಾಯಿಸಿಕೊಳ್ಳಲು ಎಸ್1 ಅರ್ಜಿ ಭರ್ತಿ ಮಾಡುವುದು.

ಆ) ಮೇಲಿನ ಕಂಡಿಕೆ 2(ಆ)ಯ ಪ್ರಕಾರ ಬಾಕಿ ಇರುವ ತಿಂಗಳಿನಿಂದ, ನೌಕರರ ಬ್ಯಾಕ್ಲಾಗ್ ವಂತಿಗೆ ಸಂದಾಯ ಮಾಡಲು ಸಂದಾಯದ ವಿಧಾನಕ್ಕೆ ಆಯ್ಕೆ ಮಾಡಿಕೊಳ್ಳುವುದು ಮತ್ತು ಸಂಬಂಧಪಟ್ಟ ಡಿಡಿಒಗೆ ಲಿಖಿತದಲ್ಲಿ ತಿಳಿಸುವುದು.

ಇ) ಕಂಡಿಕೆ 4(ಆ)ಯಲ್ಲಿ ಪಟ್ಟಿ ಮಾಡಲಾದ ಮೂರು ಆಯ್ಕಗಳ ಪೈಕಿ ಆಯ್ಕೆ (1)ನ್ನು ಆಯ್ದುಕೊಂಡ ಸಂದಂರ್ಭದಲ್ಲಿ ಬ್ಯಾಕ್ಲಾಗ್ ವಂತಿಗೆಯನ್ನು ಡಿಮ್ಯಾಂಡ್ ಡ್ರಾಫ್ಟ್ ಮೂಲಕ ಸಂದಾಯ ಮಾಡುವುದು.

ಈ) ಪಿಂಚಣಿ ಖಾತೆಯನ್ನು ಸಿಆರ್ಎನ ವೆಬ್ಸೈಟ್ನಲ್ಲಿ ನಿಯತವಾಗಿ ಪರಿಶೀಲಿಸುವುದು ಮತ್ತು ತಪ್ಪಿಹೋಗಿರುವ ವಂತಿಗೆ ಇದ್ದಲ್ಲಿ ಡಿಡಿಒ ಮುಖಾಂತರ ಸಂಬಂಧಪಟ್ಟ ಖಜಾನೆ ಅಧಿಕಾರಿಗೆ ಮಾಹಿತಿ ನೀಡುವುದು.

4. ನೂತನ ಪಿಂಚಣಿ ಯೋಜನೆ ಅನುಷ್ಠಾನ ಘಟಕ

ಅ) ನೂತನ ಪಿಂಚಣಿ ಯೋಜನಾ ಘಟಕ (ಎನ್ಪಿಎಸ್ಘಟಕ)ವನ್ನು ಯೋಜನೆಯ ಅನುಷ್ಠಾನಕ್ಕಾಗಿ ಖಜಾನೆ ಇಲಾಖೆಯ ಅಡಿಯಲ್ಲಿ ಸೃಜಿಸಲಾಗಿದೆ ಮತ್ತು ಇದು ಖಜಾನೆ ನಿರ್ದೇಶಕರ ಸಂಪೂರ್ಣ ನಿಯಂತ್ರಣ ಹಾಗೂ ಮೇಲ್ವಿಚಾರಣೆ ಅಡಿಯಲ್ಲಿರುತ್ತದೆ.

ಆ) ನೂತನ ಪಿಂಚಣಿ ಪದ್ಧತಿ ಯೋಜನೆಯಲ್ಲಿ ಒಳಗೊಳ್ಳುವ ಎಲ್ಲಾ ನೌಕರರ ಸರ್ಕಾರಿ ಬ್ಯಾಕ್ಲಾಗ್ ವಂತಿಗೆಯನ್ನು ಏಕಕಾಲಿಕ ಚಟುವಟಿಕೆಯಾಗಿ, ಸರ್ಕಾರದಿಂದ ಯುಕ್ತ ಅನುಮೋದನೆಗಳನ್ನು ಪಡೆದ ನಂತರ ನೂತನ ಪಿಂಚಣಿ ಯೋಜನಾ ಘಟಕವು ಕೇಂದ್ರೀಯವಾಗಿ ಸಂದಾಯ ಮಾಡತಕ್ಕದ್ದು.

ಇ) ನೂತನ ಪಿಂಚಣಿ ಯೋಜನಾ ಘಟಕವು ವಂತಿಗೆಗಳು ಸರಿಯಾದ ಸಮಯದೊಳಗೆ ಸಂದಾಯವಾಗುವ ಬಗ್ಗೆ ಮೇಲ್ವಿಚಾರಣೆ ಮಾಡತಕ್ಕದ್ದು ಮತ್ತು ತಪ್ಪಿಹೋಗಿರುವ ವಂತಿಗೆಗೆ ಸಂಬಂಧಿಸಿದ ಸಮಸ್ಯೆಗಳನ್ನು ಬಗೆಹರಿಸತಕ್ಕದ್ದು.

ಈ) ನೂತನ ಪಿಂಚಣಿ ಯೋಜನಾ ಘಟಕವು ಈ ಕೆಳಗಿನ ದಾಖಲೆಗಳ ಪ್ರತಿಗಳನ್ನು ನಿರ್ವಹಿಸತಕ್ಕದ್ದು.

1) ನೂತನ ಪಿಂಚಣಿ ಯೋಜನೆಗಾಗಿ ಸಿಆರ್ಎಯಲ್ಲಿ ನೋಂದಾಯಿತವಾದ ಎಲ್ಲರ ವಿವರಗಳು

2) ವಂತಿಗೆದಾರರ ವ್ಯವಹಾರಗಳ ವಿವರಣ ಪಟ್ಟಿ

3) ವಂತಿಗೆದಾರರ ನಿವೃತ್ತಿಯ ವಿವರಗಳು

4) ಸರ್ಕಾರಿ ಬ್ಯಾಕ್ಲಾಗ್ ವಂತಿಗೆಯ ವಿವರಗಳು.

5) ಖಜಾನೆ ನಿರ್ದೇಶಕರು.

ಖಜಾನೆ ನಿರ್ದೇಶಕರು ನೂತನ ಪಿಂಚಣಿ ಯೋಜನೆಯ ಸಮಗ್ರ ಅನುಷ್ಠಾನಕ್ಕೆ ಜವಾಬ್ದಾರರಾದ ರಾಜ್ಯ ನೋಡಲ್ ಅಧಿಕಾರಿಯಾಗಿರುತ್ತಾರೆ. ಈ ಮುಂದಿನವುಗಳು ನಿರ್ದೇಶಕರ ನಿರ್ದಿಷ್ಟ ಜವಾಬ್ದಾರಿಯಾಗಿರುತ್ತದೆ.

ಅ) ಇತರ ನೋಡಲ್ ಅಧಿಕಾರಿಗಳ ಕಾರ್ಯನಿರ್ವಹಣೆಯ ಮೇಲ್ವಿಚಾರಣೆ ಅಂದರೆ, ಜಿಲ್ಲಾ/ಉಪ ಖಜಾನೆ ಅಧಿಕಾರಿಗಳು ಮತ್ತು ಡಿಡಿಒಗಳು ಅರ್ಹ ನೌಕರರ ಬಗ್ಗೆ ತಮ್ಮ ಹೊಣೆಗಾರಿಕೆಗಳನ್ನು ನಿರ್ವಹಿಸುವುದಕ್ಕೆ ಹಾಗೂ ನಿರ್ವಹಣಾ ಕಾರ್ಯವಿಧಾನಗಳನ್ನು ಪಾಲಿಸುವುದಕ್ಕೆ ಸಂಬಂಧಪಟ್ಟಂತೆ ಮೇಲ್ವಿಚಾರಣೆ

ಆ) ಸಿಆರ್ಎ ಅಥವಾ ಖಜಾನೆ ಅಧಿಕಾರಿಗಳ ವಿರುದ್ಧದ ದೂರಗಳ ಪರಿಹಾರದ ಮೇಲ್ವಿಚಾರಣೆ

ಸಿ) ಯೋಜನೆಯ ಉದ್ದೇಶಕ್ಕಾಗಿ ಸಿಆರ್ಎ, ಪಿಎಫ್ಆರ್ಡಿಎ ಮತ್ತು ಪಿಎನ್ಪಿಎಸ್ ಟ್ರಸ್ಟ್ಗಳೊಂದಿಗೆ ಎಲ್ಲಾ ಅಗತ್ಯ ಪತ್ರವ್ಯವಹಾರ ನಡೆಸುವುದು.

ಡಿ) ಮಾಡಲಾದ ಸಂದಾಯಗಳ ನಿಯತ ಲೆಕ್ಕ ಪರಿಶೋಧನೆ ಆಗುವಂತೆ ನೋಡಿಕೊಳ್ಳುವುದು.

6. ಬಳಕೆದಾರ ಕೈಪಿಡಿಗಳು ಮತ್ತು ಎಸ್1, ಎನ್2 ಹಾಗೂ ಎನ್3 ಗಳಂತಹ ನಿಗದಿತ ನೋಂದಣಿ ಅರ್ಜಿ ನಮೂನೆಗಳು ಎಚ್ಆರ್ಎಂಎಸ್ ವ್ಯವಸ್ಥೆ, ಖಜಾನೆ ನೆಟ್ನಲ್ಲಿ ಲಭ್ಯವಿದ್ದು ಅವುಗಳನ್ನು ಇಳಿನಕಲು(ಡೌನ್ಲೋಡ್) ಮಾಡಿಕೊಳ್ಳಬಹುದು.

7. ನೂತನ ಪಿಂಚಣಿ ಯೋಜನೆಯನ್ನು ಅನುಷ್ಠಾನಕ್ಕೆ ತರುವ ಬಗ್ಗೆ ಯಾವುದಾದರೂ ಸ್ಪಷ್ಟೀಕರಣ ಅಥವಾ ಸಂಶಯಗಳಿದ್ದಲ್ಲಿ ಬೆಂಗಳೂರಿನ ಖಜಾನೆ ನಿರ್ದೇಶನಾಲಯದಲ್ಲಿರುವ ನೂತನ ಪಿಂಚಣಿ ಯೋಜನೆ ಅನುಷ್ಠಾನದ ಘಟಕ ಸಂರ್ಪಸಬಹುದು.

***

ಎನ್ಪಿಎಸ್ ಯೋಜನೆ ಅನುಷ್ಠಾನಕ್ಕೆ ಮಾರ್ಗದರ್ಶನ.

14.03.2018,
| ಲ.ರಾಘವೇಂದ್ರ, ಸೇವಾ ಕಾನೂನು ತಜ್ಞರು

ಸರ್ಕಾರವು 1-4-2006ರಂದು ಅಥವಾ ನಂತರ ಸರ್ಕಾರಿ ಸೇವೆಗೆ ಸೇರುವ ನೌಕರರಿಗೆ ನೂತನ ಪಿಂಚಣಿ ಪದ್ಧತಿ(ಎನ್ಪಿಎಸ್) ಜಾರಿಗೆ ತಂದಿದ್ದು ಈ ಯೋಜನೆಯು ದಿನಾಂಕ 1-4-2010ರಿಂದ ಕಾರ್ಯಾರಂಭ ಮಾಡಿದೆ. ಈ ಯೋಜನೆಯ ಅನುಷ್ಠಾನಕ್ಕಾಗಿ ದಿನಾಂಕ 29-3-2010ರಂದು ಸರ್ಕಾರಿ ಆದೇಶ ಸಂಖ್ಯೆ ಎಫ್ಡಿ(ಎಸ್ಪಿಎಲ್) 28 ಪಿಇಎನ್ 2009ರ ಮೇರೆಗೆ ಮಾರ್ಗದರ್ಶನವನ್ನು ಈ ಕೆಳಗೆ ನೀಡಲಾಗಿದೆ.

1. ನೋಂದಣಿ

ಅ) ಕೇಂದ್ರೀಯ ದಾಖಲೆ ನಿರ್ವಹಣಾ ಏಜೆನ್ಸಿ(ಸಿಆರ್ಎ) ಎಂದು ಸಹಾ ಕರೆಯುವ ರಾಷ್ಟ್ರೀಯ ಭದ್ರತೆಗಳ ಠೇವಣಿ ಸಂಸ್ಥೆ ಲಿಮಿಟೆಡ್(ಎನ್ಎಸ್ಡಿಎಲ್)ನಲ್ಲಿ ಖಜಾನೆ ನಿರ್ದೇಶಕರು ನೋಂದಾಯಿಸಿಕೊಳ್ಳಬೇಕು. ಜಿಲ್ಲಾ ಖಜಾನಾಧಿಕಾರಿ ಮತ್ತು ಸಹಾಯಕ ಖಜಾನಾಧಿಕಾರಿಗಳೂ ಸಿಆರ್ಎಯವರು ನಿಗದಿಪಡಿಸಿರುವ ನೋಂದಣಿ ನಮೂನೆ ಎನ್ 2ನ್ನು ಕ್ರಮಬದ್ಧವಾಗಿ ತುಂಬಿ ಎನ್ಎಸ್ಡಿಎಲ್ನಲ್ಲಿನ ನೋಂದಾಯಿಸಬೇಕು.

ಆ)ಎಚ್ರ್ಎಂಎಸ್ನಲ್ಲಿ ದೊರೆಯುವ ಮಾಹಿತಿಯನ್ನು ಆಧರಿಸಿ ಹೊಸ ಪಿಂಚಣಿ ಯೋಜನೆಯ (ಎನ್ಪಿಎಸ್) ಘಟಕದವರು ಏಕಕಾಲದ, ಕ್ರಮವಾಗಿ 31-3-2010ರಂತೆ ಇರುವ ಎಲ್ಲಾ ವೇತನ ಸಂದಾಯ ಮಾಡುವ, ಹಣ ಸೆಳೆಯುವ ಮತ್ತು ಬಟವಾಡೆ ಅಧಿಕಾರಿಗಳನ್ನು (ಡಿ.ಡಿ.ಒ) ಮತ್ತು ಅರ್ಹ ನೌಕರರನ್ನು ತಾತ್ಕಾಲಿಕವಾಗಿ ಕೇಂದ್ರೀಯ ದಾಖಲೆ ನಿರ್ವಹಣಾ ಏಜೆನ್ಸಿಯಲ್ಲಿ ನೋಂದಾಯಿಸಬೇಕು.

ಇ)ತಾತ್ಕಾಲಿಕ ನೋಂದಣಿಯ ತರುವಾಯ ಕ್ರಮಬದ್ಧ ನೋಂದಣಿ ಮಾಡಲಾಗುವುದು. ಇದಕ್ಕಾಗಿ ನೌಕರರು ತಮ್ಮ ವಿವರಗಳನ್ನು ನಮೂನೆ ಎಸ್1ರಲ್ಲಿ ಸಲ್ಲಿಸಬೇಕು. ಈ ನಮೂನೆಗಳನ್ನು ಸಂಬಂಧಪಟ್ಟ ಜಿಲ್ಲಾ ಖಜಾನಾಧಿಕಾರಿ/ಸಹಾಯಕ ಖಜಾನಾಧಿಕಾರಿ ಮೂಲಕ ಕೇಂದ್ರೀಯ ದಾಖಲೆ ನಿರ್ವಹಣಾ ಏಜೆನ್ಸಿಗೆ ಕಳುಹಿಸಬೇಕು. ಹೊಸ ಡಿ.ಡಿ.ಒಗಳು ಹಾಗೂ ನೌಕರರ ಸಂದರ್ಭದಲ್ಲಿ ಆಯಾ ಖಜಾನೆ ಅಧಿಕಾರಿಗಳಿಗೆ ನಮೂನೆ ಎನ್3 ಅಥವಾ ಎನ್1ನ್ನು ಸಲ್ಲಿಸಿ ಕೇಂದ್ರೀಯ ದಾಖಲೆ ನಿರ್ವಹಣಾ ಏಜೆನ್ಸಿಯಲ್ಲಿ ನೋಂದಾಯಿಸಿಕೊಳ್ಳಬೇಕು.

ಈ)ಎನ್ಎಸ್ಡಿಎಲ್ನವರು ಡಿಡಿಒಗಳಿಗೆ ವಿಶಿಷ್ಟ ಎನ್ಪಿಎಸ್ ನೋಂದಣಿ ಸಂಖ್ಯೆಯನ್ನು ಮತ್ತು ನೌಕರರಿಗೆ (ಹೊಸ ಪಿಂಚಣಿ ಯೋಜನೆಯ ವಂತಿಗೆದಾರರಿಗೆ) ಕಾಯಂ ನಿವೃತ್ತಿ ಖಾತೆ ಸಂಖ್ಯೆ(ಪಿಆರ್ಎಎನ್)ಯನ್ನು ಹಂಚಿಕೆ ಮಾಡುತ್ತದೆ. ಈ ವಿಶಿಷ್ಟ ಎನ್ಪಿಎಸ್ ನೋಂದಣಿ ಸಂಖ್ಯೆಗಳನ್ನು ಪಿಆರ್ಎಎನ್ ಸಂಖ್ಯೆಗಳನ್ನು ಡಿಡಿಒ ಎಚ್ಆರ್ಎಂಎಸ್ನಲ್ಲಿ ಅಪ್ಡೇಟ್ ಮಾಡುತ್ತಾರೆ. ಸಾಧಾರಣವಾಗಿ ತಾತ್ಕಾಲಿಕ ಮತ್ತು ಅಂತಿಮ ನೋಂದಣಿಗಳ ನಡುವೆ ಈ ಸಂಖ್ಯೆಗಳಲ್ಲಿ ಯಾವುದೇ ಬದಲಾವಣೆ ಇರಕೂಡದು. ಒಂದು ವೇಳೆ ಯಾವುದೇ ಬದಲಾವಣೆಯಾದಲ್ಲಿ ಎನ್ಪಿಎಸ್ ಘಟಕದಿಂದ ಮಾರ್ಗದರ್ಶನ ಪಡೆದುಕೊಳ್ಳಬೇಕು. ಈ ವಿಶಿಷ್ಟ ಎನ್ಪಿಎಸ್ ನೋಂದಣಿಗೆ ಸಂಖ್ಯೆಗಳನ್ನು ಮತ್ತು ಪಿಆರ್ಎಎನ್ ಸಂಖ್ಯೆಗಳನ್ನು ಖಜಾನೆಗೆ ಅಥವಾ ಎನ್ಪಿಎಸ್ ಘಟಕಕ್ಕೆ ಸಲ್ಲಿಸುವ ಪ್ರತಿ ಎನ್ಪಿಎಸ್ ಶೆಡ್ಯೂಲ್ನಲ್ಲಿ ನಮೂದಿಸಬೇಕು.

2. ಎನ್ಪಿಎಸ್ಗೆ ನೀಡತಕ್ಕ ಕೊಡುಗೆಗಳು

ಅ) ಹೊಸ ಪಿಂಚಣಿ ಯೋಜನೆಯ ಸ್ತರ1ಕ್ಕೆ ನೌಕರನು ತನ್ನ ಮೂಲವೇತನ ಮತ್ತು ತುಟ್ಟಿಭತ್ಯೆಯ ಶೇ.10ರಷ್ಟನ್ನು ಪ್ರತಿ ತಿಂಗಳು ಕೊಡುಗೆಯಾಗಿ ನೀಡಬೇಕು. ಇದಕ್ಕೆ ಸರಿಸಮನಾದ ಕೊಡುಗೆಯನ್ನು ಸರ್ಕಾರ ಕೊಡುತ್ತದೆ.

ಆ) ಸರ್ಕಾರಿ ನೌಕರನು ತಿಂಗಳ ಒಂದನೇ ದಿನಾಂಕದಂದು ಸೇವೆಗೆ ಸೇರಿದ ಸಂದರ್ಭ ಹೊರತುಪಡಿಸಿ ಉಳಿದಂತೆ ವೇತನ ಕಟಾವಣೆಯ ಮೂಲಕ ಈ ಕೊಡುಗೆ ನೀಡುವ ಪ್ರಕ್ರಿಯೆ ಸರ್ಕಾರಿ ನೌಕರನು ಸೇವೆಗೆ ಸೇರಿದ ತಿಂಗಳಿನ ಮುಂದಿನ ತಿಂಗಳಿನ ವೇತನದಿಂದ ಪ್ರಾರಂಭವಾಗತಕ್ಕದ್ದು. ಒಂದು ವೇಳೆ ಸರ್ಕಾರಿ ನೌಕರನು ತಿಂಗಳ ಮೊದಲನೇ ದಿನದಂದು ಸೇವೆಗೆ ಸೇರಿದ್ದ ಸಂದರ್ಭದಲ್ಲಿ ಆತನ ವೇತನ ಕಟಾವಣೆಯು ಅದೇ ತಿಂಗಳಿನಿಂದ ಪ್ರಾರಂಭವಾಗಬೇಕು.

ಇ) ಟ್ರಸ್ಟಿ ಬ್ಯಾಂಕ್ಗೆ (ಬ್ಯಾಂಕ್ ಆಫ್ ಇಂಡಿಯಾ) ಈ ಕೊಡುಗೆಗಳನ್ನು ಜಮೆ ಮಾಡುವ ವಿಧಾ ನಹಾಗೂ ಸಿಆರ್ಎಗೆ ಮಾಹಿತಿಯನ್ನು ಏರು ನಕಲು ಮಾಡುವ ವಿಧಾನ ವಿಕೇಂದ್ರೀಕೃತ ವ್ಯವಸ್ಥೆಯಲ್ಲಿರತಕ್ಕದ್ದು ಮತ್ತು ಇದರಲ್ಲಿ ರಾಜ್ಯದ ಎಲ್ಲ ಖಜಾನೆಗಳು ನೋಡಲ್ ಕಚೇರಿಗಳಾಗಿರತಕ್ಕದ್ದು. ಈ ಕಚೇರಿಗಳು ವಿವರಗಳನ್ನು ಸಿಆರ್ಎಗೆ ಏರು ನಕಲು(ಅಪ್ಲೋಡ್) ಮಾಡತಕ್ಕದ್ದು ಮತ್ತು ನೌಕರರ ಹಾಗೂ ಸರ್ಕಾರದ ಕೊಡುಗೆಗಳನ್ನು ಟ್ರಸ್ಟಿ ಬ್ಯಾಂಕ್ಗೆ ರವಾನಿಸಬೇಕು.

3. ಪ್ರಸಕ್ತ ಕೊಡುಗೆಯ ಸಂದಾಯ

ಅ) ಹೊಸ ಪಿಂಚಣಿ ಯೋಜನೆಗೆ ಪ್ರಸಕ್ತಕೊಡುಗೆಗಳನ್ನು ಸಂದಾಯ ಮಾಡುವ ಕಾರ್ಯ ಸಿಆರ್ಎಗೆ ಅರ್ಹ ನೌಕರರನ್ನು ನೋಂದಾಯಿಸಿದ ತರುವಾಯ 2010ರ ವೇತನದಿಂದ ಪ್ರಾರಂಭವಾಗಬೇಕು. ಒಂದು ವೇಳೆ ಸಂದಾಯವಾಗತಕ್ಕ ಮಾರ್ಚ್ 2010ರ ವೇತನದಿಂದ ಪ್ರಾರಂಭವಾಗಬೇಕು. ಒಂದು ವೇಳೆ ಮಾರ್ಚ್ 2010ರ ಒಳಗೆ ನೋಂದಣಿಯಾಗದೆ ನೋಂದಣಿಯಲ್ಲಿ ವಿಳಂಬವಾದಲ್ಲಿ, ಸಿಆರ್ಎನಲ್ಲಿ ನೌಕರರ ನೋಂದಣಿ ಕಾರ್ಯವು ಪೂರ್ಣವಾದ ತಿಂಗಳಿನಿಂದ ಪ್ರಾರಂಭವಾಗಬೇಕು.

ಆ)ಎಚ್ಆರ್ಎಂಎಸ್ನಲ್ಲಿ ಉತ್ಪಾದಿತವಾದ ಎನ್ಪಿಎಸ್ ಷೆಡ್ಯೂಲ್ನಲ್ಲಿ ನೌಕರರ ಪ್ರಸಕ್ತ ಕೊಡುಗೆಗಳು ಮತ್ತು ಸರ್ಕಾರದಿಂದ ಕೊಡಬೇಕಾದ ಸರಿಸಮಾನ ಕೊಡುಗೆಯ ವಿವರಗಳನ್ನು ನೀಡಲಾಗುವುದು ಮತ್ತು ಇದನ್ನು ವೇತನ ಬಿಲ್ಲಿನ ಜತೆಗೆ ಲಗತ್ತಿಸಬೇಕು.

4. ನೌಕರರ ಬ್ಯಾಕ್ಲಾಗ್ ವಂತಿಗೆಯ ಪಾವತಿ

ಅ)ದಿನಾಂಕ 1-4-2006ರಂದು ಅಥವಾ ಅನಂತರ ಸೇವೆಗೆ ಸೇರಿರುವ ಎಲ್ಲ ನೌಕರರಿಗೂ ನೂತನ ಪಿಂಚಣಿ ಯೋಜನೆಯ ಅನ್ವಯವಾಗುವುದರಿಂದ ಮತ್ತು ಪ್ರಸಕ್ತ ವಂತಿಗೆಗಳು ಏಪ್ರಿಲ್ 2010ರಿಂದ ಪ್ರಾರಂಭವಾಗುವುದರಿಂದ ಮೇಲ್ಕಂಡ ಪ್ಯಾರಾ 2(ಬಿ) ಅನುಸಾರ ಮೊದಲನೆಯ ತಿಂಗಳಿನಿಂದ ಆರಂಭವಾಗಿ ಪ್ರಸಕ್ತ ವಂತಿಗೆಗಳು ಪ್ರಾರಂಭವಾಗುವುದಕ್ಕಿಂತ ಹಿಂದಿನ ತಿಂಗಳಿನವರೆಗೆ ವಂತಿಗೆಗಳು ಬ್ಯಾಕ್ಲಾಗ್ ಇರುತ್ತದೆ.

ಆ) ನೌಕರನು, ಆತನ/ಆಕೆಯ ಬ್ಯಾಕ್ಲಾಗ್ ವಂತಿಗೆಯನ್ನು ಈ ಮುಂದಿನ ಯಾವುದೇ ಒಂದು ಆಯ್ಕೆ ಆಯ್ದುಕೊಳ್ಳುವ ಮೂಲಕ ಒಂದೇ ಇಡುಗಂಟಿನಲ್ಲಿ ಅಥವಾ ಮಾಸಿಕ ಆಧಾರದಲ್ಲಿ ಸಂದಾಯ ಮಾಡಬಹುದು.

ಜಿ)ಬ್ಯಾಕ್ಲಾಗ್ ವಂತಿಗೆಯನ್ನು ಒಂದು ಇಡುಗಂಟಿನಲ್ಲಿ ಪಾವತಿಸುವುದು

ಜಿಜಿ)ಎಷ್ಟು ತಿಂಗಳಿಗೆ ಬಾಕಿ ಆಗಿದೆಯೋ ಅಷ್ಟು ತಿಂಗಳನ್ನು ಮೀರದಂತೆ ಸಂಬಳದಿಂದ ಸಮಾನ ಮಾಸಿಕ ಕಂತುಗಳು

ಜಿಜಿಜಿ) ಹಲವಾರು ಕಂತುಗಳಲ್ಲಿ (ಅಂದರೆ (ಜಿಜಿ)ರ ಗುಣಕಗಳು) ಇಡುಗಂಟಾಗಿ ಸಂಬಳದಿಂದ ಕಟ್ಟುವುದು.

ಇ)ನೌಕರನು ಮೇಲಿನ ಮೂರು ಆಯ್ಕೆಗಳಲ್ಲಿ (ಜಿ)ನೇ ಆಯ್ಕೆಯನ್ನು ಆಯ್ದುಕೊಂಡರೆ ವಂತಿಗೆಯ ವಿವರಗಳನ್ನು ವಿಶಿಷ್ಟ ಸಂಖ್ಯೆಯ ಸಹಿತವಾಗಿ ಎಚ್ಆರ್ಎಂಎಸ್ ನಮೂನೆಯಲ್ಲಿ ಕಲ್ಪಿಸಿರುವ ಅನುಸೂಚಿ ಐಐಐರಲ್ಲಿ ತಿಳಿಸಬೇಕು. ಡಿಡಿಒರವರು ಯುಕ್ತವಾಗಿ ಪ್ರಮಾಣೀಕರಿಸಿರುವ ಅನುಸೂಚಿ ಐಐಐ ಮತ್ತು ಇಡೀ ಬ್ಯಾಕ್ಲಾಗ್ ವಂತಿಗೆಗಾಗಿ ಟ್ರಸ್ಟಿ ಬ್ಯಾಂಕ್ ಹೆಸರಿಗೆ ನಡೆದಿರುವ ಡಿಮ್ಯಾಂಡ್ ಡ್ರಾಫ್ಟ್ ಅನ್ನು ಸಂಬಂಧಪಟ್ಟ ಖಜಾನೆ ಅಧಿಕಾರಿಗೆ ಕಳುಹಿಸಿಕೊಡಬೇಕು.

ಈ)ನೌಕರನು(ಜಿಜಿ) ಅಥವಾ (ಜಿಜಿಜಿ)ನೇ ಆಯ್ಕೆ ಆಯ್ದುಕೊಂಡರೆ ವಂತಿಗೆಯ ವಿವರಗಳನ್ನು ಪ್ರತಿ ತಿಂಗಳು ಸಂಬಳದ ಬಿಲ್ನೊಂದಿಗೆ ಎಚ್ಆರ್ಎಂಎಸ್ ನಮೂನೆಯಲ್ಲಿ ಕಲ್ಪಿಸಿರುವ ಅನುಸೂಚಿ ಐಐರಲ್ಲಿ ತಿಳಿಸಬೇಕು. ಬ್ಯಾಕ್ಲಾಗ್ ವಂತಿಗೆಗಳ ಕಟಾವನ್ನು ಸಂಬಳದ ಬಿಲ್ನಲ್ಲಿ ಮಾಡಬೇಕು.

ಉ) ವಿಶಿಷ್ಟ ಸಂಖ್ಯೆಯ ಸಹಿತವಾಗಿ ಅನುಸೂಚಿ ಐಐ ಅಥವಾ ಐಐಐ ರಲ್ಲಿರುವ ವಿವರಗಳನ್ನು ಆಧರಿಸಿ ಖಜಾನೆ ಅಧಿಕಾರಿಯು ವಿವರಗಳನ್ನು ಎನ್ಪಿಎಸ್ ವಂತಿಗೆ ಲೆಕ್ಕ ನಿರ್ವಹಣಾ ಜಾಲಕ್ಕೆ (ಎಪಿಎಸ್ಸಿಎಎನ್) ಏರು ನಕಲು(ಅಪ್ಲೋಡ್) ಮಾಡಬೇಕು. ಇದು ಅಂಗೀಕಾರವಾಟದ ನಂತರ, ವಂತಿಗೆದಾರರ ವಂತಿಗೆ ಕಡತದ(ಎಸ್ಪಿಎಫ್) ವಿವರಗಳನ್ನು ಒಳಗೊಂಡಿರುವ ವಂತಿಗೆ ಸಲ್ಲಿಕೆ ನಮೂನೆ(ಸಿಎಸ್ಎಫ್) ಯೊಂದಿಗೆ ವ್ಯವಹರಣೆ ಐಡಿ(ಎನ್ಪಿಸ್ಕಾನ್ನಿಂದ) ನೀಡಲ್ಪಡುವುದು ಖಜಾನೆ ಅಧಿಕಾರಿ, ಸಿಎಸ್ಎಫ್ ಮುದ್ರಿಸಿ ಅದನ್ನು ಚೆಕ್/ಡಿಡಿಯೊಂದಿಗೆ ಟ್ರಸ್ಟಿ ಬ್ಯಾಂಕ್ಗೆ ಸಲ್ಲಿಸುವರು.

5. ಸರ್ಕಾರದ ಬ್ಯಾಕ್ಲಾಗ್ ವಂತಿಗೆಯ ಪಾವತಿ

ಅ) ಎಲ್ಲ ನೌಕರರಿಗೆ ಸಂಬಂಧಿಸಿದ ಸರ್ಕಾರದ ಬ್ಯಾಕ್ಲಾಗ್ ವಂತಿಗೆಯನ್ನು ಶೇ.8ರಷ್ಟು ಚಕ್ರಬಡ್ಡಿ ಸಹಿತ ಒಂದೇ ಇಡುಗಂಟಿನಲ್ಲಿ ಪಾವತಿಸತಕ್ಕದ್ದು ಬಡ್ಡಿಯನ್ನು, ಪ್ರತಿಯೊಂದು ಬ್ಯಾಕ್ಲಾಗ್ ಮಾಸಿಕ ವಂತಿಗೆಗೆ, ಬಾಕಿಯಿರುವ ತಿಂಗಳಿನಿಂದ ಆರಂಭಿಸಿ ವಾಸ್ತವಿಕವಾದ ಪಾವತಿ ತಿಂಗಳಿನ ಹಿಂದಿನ ತಿಂಗಳವರೆಗಿನ ಅವಧಿಗೆ ಪಾವತಿಸಬೇಕು.

ಆ)ಬಡ್ಡಿಸಹಿತವಾಗಿ ಸರ್ಕಾರದ ಬಾಕಿ ವಂತಿಗೆಯ ವಿವರಗಳನ್ನು, ಪ್ರತಿಯೊಬ್ಬ ನೌಕರನ ಸಂಬಂಧದಲ್ಲಿ ಅನುಸೂಚಿ ಲಭ್ಯವಿರುತ್ತದೆ. ಡಿಡಿಒ ಅನುಸೂಚಿ 1ನ್ನು ಪರಿಶೀಲಿಸಬೇಕು. ಅಗತ್ಯವೆನಿಸಿದರೆ ತಿದ್ದುಪಡಿಗಳನ್ನು ಮಾಡಬೇಕು. ಡಿಡಿಒ ಅಧೀನದಲ್ಲಿ ಕಾರ್ಯನಿರ್ವಹಿಸುತ್ತಿರುವ ಅರ್ಹ ನೌಕರರ, ಅಂಥಹ ಎಲ್ಲಾ ಅನುಸೂಚಿಗಳನ್ನು *ಅನುಸೂಚಿ1ರಲ್ಲಿ ಕ್ರೋಢೀಕರಿಸತಕ್ಕದ್ದು. ಸಂಬಂಧಪಟ್ಟ ಅನುಸೂಚಿ 1ರ ಸಹಿತವಾಗಿರುವ ಕ್ರೋಢೀಕೃತ ಅನುಸೂಚಿ ಎಚ್ಆರ್ಎಂಎಸ್ ಮೂಲಕ ಸಲ್ಲಿಸತಕ್ಕದ್ದು ಮತ್ತು ಯುಕ್ತವಾಗಿ ಪ್ರಮಾಣೀಕರಿಸಿದ ಮುದ್ರಿತ ಪ್ರತಿಯನ್ನು ಎನ್ಪಿಎಸ್ ಘಟಕ, ಬೆಂಗಳೂರು ಇಲ್ಲಿಗೆ ಕಳುಹಿಸಿಕೊಡಬೇಕು.

ಇ)ಅನುಸೂಚಿ ಮತ್ತು ಐರ ಅನುಸೂಚಿಗಳ ಮುದ್ರಿತ ಪ್ರತಿ ಸ್ವೀಕರಿಸಿದ ಮೇಲೆ ಅವುಗಳನ್ನು ಪರಿಶೀಲಿಸುವುದು ಮತ್ತು ಬಡ್ಡಿಯನ್ನು ತಹಲ್ವರೆಗೆ ಪ್ಯಾರಾ 5(ಎ) ಅನುಸಾರ ನಿಗದಿಗೊಳಿಸುವುದು ಹಾಗೂ ಪೂರ್ತಿ ಬಾಕಿ ಮೊತ್ತ ಪಾವತಿಸುವುದು ಎಪಿಎಸ್ ಘಟಕದ ಜವಾಬ್ದಾರಿಯಾಗಿರುತ್ತದೆ.

ಇ.ಮೇಲ್ : raghavendral3532@gmail.com

ಎನ್ಪಿಎಸ್ ಯೋಜನೆಯ ಅಧಿಕಾರಿಗಳ ಪಾತ್ರ

ಎನ್ಪಿಎಸ್ ಯೋಜನೆಯ ಅಧಿಕಾರಿಗಳ ಪಾತ್ರ
Wednesday, 21.03.2018,
|ಲ.ರಾಘವೇಂದ್ರ, ಸೇವಾ ಕಾನೂನು ತಜ್ಞರು

ಸರ್ಕಾರವು 1-4-2006 ರಂದು ಅಥವಾ ನಂತರ ಸರ್ಕಾರಿ ಸೇವೆಗೆ ಸೇರುವ ನೌಕರರಿಗೆ ನೂತನ ಪಿಂಚಣಿ ಪದ್ಧತಿ(ಎನ್ಪಿಎಸ್) ಜಾರಿಗೆ ತಂದಿದ್ದು ಈ ಯೋಜನೆಯು ದಿನಾಂಕ 1-4-2010ರಿಂದ ಕಾರ್ಯಾರಂಭ ಮಾಡಿದೆ. ಈ ಯೋಜನೆ ಅನುಷ್ಠಾನಕ್ಕಾಗಿ ದಿನಾಂಕ 29-3-2010ರಂದು ಸರ್ಕಾರಿ ಆದೇಶ ಸಂಖ್ಯೆ ಎಫ್ಡಿ(ಎಸ್ಪಿಎಲ್) 28 ಪಿಇಎನ್ 2009ರ ಮೇರೆಗೆ

ಎನ್ಪಿಎಸ್ ಯೋಜನೆಯಡಿಯಲ್ಲಿ ಬರುವ ವಿವಿಧ ಅಧಿಕಾರಿಗಳ ಮತ್ತು ಚಂದಾದಾರರ ಪಾತ್ರಗಳು ಮತ್ತು ಕರ್ತವ್ಯಗಳನ್ನು ಕೆಳಕಂಡಂತೆ ನೀಡಲಾಗಿದೆ.

1. ಖಜಾನೆ ಅಧಿಕಾರಿಗಳು

ಅ) ಖಜಾನೆ ಅಧಿಕಾರಿಯನ್ನು, ಯೋಜನೆಯ ನೋಡಲ್ ಅಧಿಕಾರಿಯಾಗಿ ಗೊತ್ತುಪಡಿಸಲಾಗಿದ್ದು, ಅವರು ಸಿಆರ್ಎ ಮತ್ತು ಡಿಡಿಒಗಳ ಮಧ್ಯವರ್ತಿಯಾಗಿ ಕಾರ್ಯನಿರ್ವಹಿಸುವರು. ತಮ್ಮಸ್ವಂತ ಕಚೇರಿಯ ಅರ್ಹ ನೌಕರರ ಡಿಡಿಒ ಆಗಿರುವುದರೊಂದಿಗೆ ಸರ್ಕಾರದ ವಂತಿಗೆ ಸಂಬಂಧದಲ್ಲೂ ಸಹ ಡಿಡಿಒ ಆಗಿರಬೇಕು.

ಆ)ಮುಂದಿನವು ಖಜಾನೆ ಅಧಿಕಾರಿಗಳ ನಿರ್ದಿಷ್ಟ ಕರ್ತವ್ಯಗಳಾಗಿರುತ್ತವೆ.

1)ಚಂದಾದಾರರ ಅರ್ಜಿಗಳನ್ನು ಎಸ್1 ಮತ್ತು ಡಿಡಿಒ ನೋಂದಣಿ ಅರ್ಜಿಗಳನ್ನು ಎನ್ 3ನಲ್ಲಿ ಸ್ವೀಕರಿಸುವುದು ಮತ್ತು ಪರಿಶೀಲನೆ ತರುವಾಯ ಸಿಆರ್ಎಗೆ ಕಳುಹಿಸಬೇಕು.

2)ಸಂಬಳದ ಬಿಲ್ಲು ಅನುಮೋದಿತವಾದ ನಂತರ ನೌಕರರ ವಂತಿಗೆಯು ಸಂಬಳದ ಲೆಕ್ಕ ಶೀರ್ಷಿಕೆಯಿಂದ ಲೆಕ್ಕ ಶೀರ್ಷಿಕೆ ‘8342-00-120-2-01’ಕ್ಕೆ ವರ್ಗಾವಣೆಯಾಗುವಂತೆ ನೋಡಿಕೊಳ್ಳಬೇಕು.

3)ಸರ್ಕಾರದ ಸಮಪ್ರಮಾಣ ವಂತಿಗೆಯು ಲೆಕ್ಕ ಶೀರ್ಷಿಕೆ ‘2071-01-101-3-01 ರಾಜ್ಯ ಸರ್ಕಾರ, ಪಿಂಚಣಿ, ಯೋಜನೇತರ ಪುರಸ್ಕೃತ 251’ರಿಂದ ‘8,342-00-120-2-02ಕ್ಕೆ ವರ್ಗಾವಣೆಯಾಗುವಂತೆ ನೋಡಿಕೊಳ್ಳಬೇಕು.

4)ಖಜಾನೆ ವ್ಯವಸ್ಥೆಯಲ್ಲಿ ನಿಯಂತ್ರಣ ಕಡತವನ್ನು ಸೃಜಿಸುವುದು ಮತ್ತು ಅದನ್ನು ಎಚ್ಆರ್ಎಂಎಸ್ನಲ್ಲಿ ಏರು ನಕಲು(ಅಪ್ಲೋಡ್) ಮಾಡುವುದು ಅನಂತರ ಅದು ಚಂದಾದಾರರ ವಂತಿಗೆ ಕಡತ (ಎಸ್ಸಿಎಫ್) ಎನ್ನುವ ಔಟ್ಪುಟ್ ನೀಡುತ್ತದೆ. 5)ಎಸ್ಸಿಎಫ್ಅನ್ನು ಸಿಆರ್ಎನ ಕಡತ ಸಿಂಧುಗೊಳಿಸುವಿಕೆ ಕ್ರಮದ ಊಖಿ ಮೂಲಕ ಹಾಯಿಸಿ ಅದನ್ನು ಸಿಂಧುಗೊಳಿಸಬೇಕು.

6)ಸಿಂಧುಗೊಳಿಸಿದ ಎಸ್ಸಿಎಫ್ ಅನ್ನು ಸಿಆರ್ಎನ ಎನ್ಪಿಎಸ್ಸಿಎಎನ್ ವ್ಯವಸ್ಥೆಗೆ ಏರು ನಕಲು ಮಾಡುವುದು ಮತ್ತು ವಂತಿಗೆ ಸಲ್ಲಿಕೆ ನಮೂನೆ(ಸಿಎಸ್ಎಫ್) ತಯಾರಿಸಬೇಕು.

7)ವಂತಿಕೆ ಸಲ್ಲಿಕೆ ನಮೂನೆಯನ್ನು ಟ್ರಸ್ಟಿ ಬ್ಯಾಂಕ್ಗೆ ಪಾವತಿಸುವುದಕ್ಕೆ ಬಳಸಬೇಕು.

8)ಎನ್ಪಿಸ್ಕ್ಯಾನ್ನಲ್ಲಿ ಏರುನಕಲು (ಅಪ್ಲೋಡ್) ಮಾಡಿರುವ ವಂತಿಗೆ ಸಲ್ಲಿಕೆ ನಮೂನೆಗನುಸಾರವಾಗಿ ಸರ್ಕಾರದ ಮತ್ತು ನೌಕರರ ವಂತಿಗೆ ಮೊತ್ತವನ್ನು ಟ್ರಸ್ಟಿ ಬ್ಯಾಂಕ್ನ ಪಿಂಚಣಿ ನಿಧಿ ಖಾತೆಗೆ ಸಂದಾಯ ಮಾಡಬೇಕು.

9)ನೌಕರನು ಬಾಕಿ ಮೊತ್ತವನ್ನು ಒಂದೇ ಇಡುಗಂಟಿನಲ್ಲಿ ಪಾವತಿಸಲು ಆಯ್ಕೆ ಮಾಡಿಕೊಂಡರೆ ನೌಕರರ ಬ್ಯಾಕ್ಲಾಗ್ವಂತಿಕೆ ವಿವರ ಪಟ್ಟಿಯನ್ನು ಸಿಆರ್ಎಗೆ ಕಳುಹಿಸಿಕೊಡುವುದು ಮತ್ತು ಟ್ರಸ್ಟಿ ಬ್ಯಾಂಕ್ಗೆ ಚೆಕ್ಕಗಳು/ಡಿಡಿಗಳು/ನಿಧಿಗಳನ್ನು ವರ್ಗಾಯಿಸಬೇಕು.

10) ನೌಕರರಿಂದ ಸ್ವೀಕರಿಸಿದ ವಂತಿಗೆ ವಿವರಗಳು ಮತ್ತು ಹೂಡಿಕೆ ಆಯ್ಕೆಗಳ ಬದಲಾವಣೆಗಳಿಗೆ ಸಂಬಂಧಿಸಿದಂತೆ ಕೋರಿಕೆಗಳನ್ನು ಎನ್ಪಿಎಸ್ಸಿಎಎಎನ್ ಮೂಲಕ ನಿರ್ವಹಿಸುವುದು ಮತ್ತು ನೌಕರರು ಮತ್ತು ಡಿಡಿಒಗಳಿಂದ ಸ್ವೀಕರಿಸಿದ ಅಹವಾಲುಗಳನ್ನು ಸಿಆರ್ಎಗೆ ಕಳುಹಿಸಿಕೊಡಬೇಕು.

11) ಮುಂದಿನ ದಾಖಲೆಗಳ ನಿರ್ವಹಣೆ:

ಬಾಕಿ ಇರುವ ವಂತಿಕೆ ಕಡಿತ
ವಂತಿಕೆ ಸಲ್ಲಿಕೆ ನಮೂನೆ, ಸಿಎಸ್ಎಫ್ ಮತ್ತು ಅದಕ್ಕೆ ಸಂಬಂಧಿಸಿದ ಅನುಸೂಚಿಗಳು ಐ, ಐಐ ಮತ್ತು ಐಐಐ
ಟ್ರಸ್ಟಿ ಬ್ಯಾಂಕ್ ಪಾವತಿ ದಾಖಲೆಗಳು
ಲೆಕ್ಕ ಶೀರ್ಷಿಕೆ 8342ಕ್ಕೆ ಮಾಡಿದ ಮತ್ತು ಲೆಕ್ಕ ಶೀರ್ಷಿಕೆ 8342ರಿಂದ ಮಾಡಿದ ವರ್ಗಾವಣೆಯ ದೈನಿಕ/ಸಾಪ್ತಾಹಿಕ/ಮಾಸಿಕ ವಿವರ ಪಟ್ಟಿಗಳು ಮತ್ತು ಶಿಲ್ಕುಗಳು
12) ಕರ್ನಾಟಕ ಖಜಾನೆ ಸಂಹಿತೆಯ ಉಪಬಂಧಗಳು ಮತ್ತು ಕಾಲಕಾಲಕ್ಕೆ ಹೊರಡಿಸಲಾದ ಯಾವುದೇ ಇತರ ಸರ್ಕಾರಿ ಆದೇಶಗಳಿಗನುಸಾರ ಲೆಕ್ಕಪತ್ರಗಳನ್ನು ಸಲ್ಲಿಸಬೇಕು.
2. ಬಟವಾಡೆ ಅಧಿಕಾರಿಗಳ (ಡಿಡಿಒ) ಪಾತ್ರ ಮತ್ತು ಕರ್ತವ್ಯಗಳು

ಅ)ಡಿಡಿಒಗಳು ಎನ್ಪಿಎಸ್ನಲ್ಲಿ ನಿರ್ವಹಿಸುವ ಪಾತ್ರ ಪ್ರಾಥಮಿಕವಾದ ಪಾತ್ರ. ಅವರು ನಿರ್ದಿಷ್ಟಪಡಿಸಿರುವ ರೀತಿಯಲ್ಲಿ ಅಂದರೆ ಮೂಲ ವೇತನ ಮತ್ತು ತುಟ್ಟಿಭತ್ಯೆಯ ಶೇ.10ರಷ್ಟನ್ನು ಯೋಜನೆಯ ಸ್ತರ 1ಕ್ಕೆ ಮಾಸಿಕ ವಂತಿಗೆಯನ್ನು ಮತ್ತು ನೌಕರ ಆಯ್ಕೆ ಮಾಡಿಕೊಂಡಿರುವ ಪಾವತಿ ವಿಧಾನಕ್ಕನುಸಾರವಾಗಿ ಬ್ಯಾಕ್ಲಾಗ್ ವಂತಿಗೆಯನ್ನು ಕಟಾವಣೆ ಮಾಡಿ ಅನುಸೂಚಿಮತ್ತು ಬಿಲ್ಗಳನ್ನು ಮುಂದಿನ ಕ್ರಮಕ್ಕಾಗಿ ಖಜಾನೆಗೆ ಸಲ್ಲಿಸಬೇಕು.

ಆ)ಡಿಡಿಒಗಳು ನಿರ್ವಹಿಸಬೇಕಾದ ಕಾರ್ಯಚಟುವಟಿಕೆಗಳು

1)ಎನ್ಎಸ್ಡಿಎಲ್ ನಿರ್ದಿಷ್ಟಪಡಿಸಿರುವ ಅರ್ಜಿ ನಮೂನೆ ಎನ್3ರಲ್ಲಿ ವಿವರಗಳನ್ನು ಸಂಬಂಧಪಟ್ಟ ಖಜಾನೆ ಅಧಿಕಾರಿ ಮೂಲಕ ಸಲ್ಲಿಸಿ ಸಿಆರ್ಎನಲ್ಲಿ ನೋಂದಣಿ ಮಾಡಬೇಕು.

2)ನೌಕರರು ಕ್ರಮಬದ್ಧವಾಗಿ ಭರ್ತಿ ಮಾಡಿದ ನೋಂದಣಿ ನಮೂನೆ ಎಸ್1ನ್ನು ದ್ವಿಪ್ರತಿಯಲ್ಲಿ ಪಡೆದುಕೊಳ್ಳುವುದು, ವಿಭಾಗ ‘ಬಿ’ನಲ್ಲಿ ನೌಕರರ ಔದ್ಯೋಗಿಕ ವಿವರಗಳನ್ನು ಡಿಡಿಒಗಳು ಭರ್ತಿಮಾಡಿ ಪ್ರಮಾಣೀಕರಿಸುವುದು, ನಮೂನೆಯಲ್ಲಿ ಇತರ ವಿವರಗಳನ್ನು ದೃಢೀಕರಿಸುವುದು ಮತ್ತು ಅದನ್ನು ಸಂಬಂಧಪಟ್ಟ ಖಜಾನೆ ಅಧಿಕಾರಿಗೆ ಕಳುಹಿಸಬೇಕು.

3) ಸಿಆರ್ಎಯಿಂದ ಪಡೆದ ಪಿಆರ್ಎಎನ್(ಪ್ರಾನ್) ಕಿಟ್ಗಳನ್ನು ಸಂಬಂಧಪಟ್ಟ ನೌಕರರಿಗೆ ವಿತರಿಸಬೇಕು.

4) ನೌಕರರ ಬಾಕಿ ಪಿಂಚಣಿ ವಂತಿಗೆ ಸಂದಾಯದ ಆಯ್ಕೆಯ ಮಾಹಿತಿಯನ್ನು ಖಜಾನಾಧಿಕಾರಿಗೆ ನೀಡುವುದು. ನಿಯತ ಮಾಸಿಕ ವಂತಿಗೆಯೊಂದಿಗೆ ನೌಕರರು ಆಯ್ಕೆ ಮಾಡಿಕೊಂಡಿರುವ ಆಯ್ಕೆ ವಿಧಾನಕ್ಕನುಸಾರವಾಗಿ ಬ್ಯಾಕ್ಲಾಗ್ ವಂತಿಗೆ ಕಟಾವಣೆ ಮಾಡಬೇಕು.

5) ಪ್ರಸಕ್ತ ವಂತಿಕೆಗಾಗಿಎನ್ಪಿಎಸ್ ಅನುಸೂಚಿ-ಐ ಬ್ಯಾಕ್ಲಾಗ್ ವಂತಿಗೆಗಾಗಿ ಎನ್ಪಿಎಸ್ ಅನುಸೂಚಿ ಐಐ ಮತ್ತು ನೌಕರನು ಸಂಬಳದ ಹೊರಗಡೆ ನೇರವಾಗಿ ಪಾವತಿಸುವ ಇಡುಗಂಟು ಬಾಕಿ ವಂತಿಗೆಗಾಗಿ ಎನ್ಪಿಎಸ್ ಅನುಸೂಚಿ ಐಐಐ ತಯಾರಿಸಬೇಕು.

6) ಬ್ಯಾಕ್ಲಾಗ್ನ್ನು ಒಂದೇ ಇಡುಗಂಟಿನಲ್ಲಿ ಪಾವತಿಸುವುದಕ್ಕೆ ಆಯ್ಕೆ ಮಾಡಿಕೊಂಡಿರುವ ನೌಕರನ ಸಂಬಂಧದಲ್ಲಿ ಖಜಾನೆ ಅಧಿಕಾರಿಗೆ ಅನುಸೂಚಿ ಐಐಐರೊಂದಿಗೆ ಡಿಮ್ಯಾಂಡ್ ಡ್ರಾಫ್ಟ್/ ಚೆಕ್ ಕಳುಹಿಸಿ ಕೊಡಬೇಕು.

7) ಪ್ರತಿಯೊಬ್ಬ ಅರ್ಹ ನೌಕರರ ಸಂಬಂಧದಲ್ಲಿ ಎಚ್ಆರ್ಎಂಎಸ್ನಲ್ಲಿ ಸರ್ಕಾರದ ಬ್ಯಾಕ್ಲಾಗ್ ವಂತಿಗೆ ಅನುಸೂಚಿ ಐನ್ನು ತಯಾರಿಸುವ ಬಗೆ ಪರಿಶೀಲಿಸುವುದು ಮತ್ತು ಅಗತ್ಯಾನುಸಾರ ತಿದ್ದುಪಡಿಗಳನ್ನು ಮಾಡುವುದು ಎಲ್ಲಾ ಅರ್ಹ ನೌಕರರನ್ನು ಒಳಗೊಳ್ಳುವಂತೆ ಎಲ್ಲ ಅನುಸೂಚಿ ಐನ್ನು ಅನುಸೂಚಿ Vರಲ್ಲಿ ಕ್ರೋಢಿಕರಿಸುವುದು.

8) ಅನುಸೂಚಿ ಗಳನ್ನು (IV ಮತ್ತು v) ಪ್ರಮಾಣೀಕರಿಸುವುದು ಮತ್ತು ಅವುಗಳನ್ನು ಎಚ್ಆರ್ಎಂಎಸ್ ವ್ಯವಸ್ಥೆಯಲ್ಲಿ ಸಲ್ಲಿಸುವುದು

9) ಈ ಅನುಸೂಚಿಗಳ ಸಹಿ ಮಾಡಿರುವ ಮತ್ತು ಪ್ರಮಾಣೀಕರಿಸಿರುವ ಮುದ್ರಿತ ಪ್ರತಿಗಳನ್ನು ಎನ್ಪಿಎಸ್ ಕೋಶ ಖಜಾನೆ ಇಲಾಖೆ, ವಿ.ವಿ. ಕೇಂದ್ರ ಬೆಂಗಳೂರು ಇಲ್ಲಿಗೆ ಪಾವತಿಗಾಗಿ ಕಳುಹಿಸುವುದು.

10) ಉದ್ಯೋಗ ವಿವರಗಳಲ್ಲಿ ವೇತನ ಶ್ರೇಣಿ, ಮೂಲವೇತನ, ವರ್ಗಾವಣೆ ಮೊದಲಾದ ಬದಲಾವಣೆಗಳಿಂದಾಗಿ ಅವುಗಳನ್ನು ಸಂಬಂಧಪಟ್ಟ ಖಜಾನೆ ಅಧಿಕಾರಿಗೆ ತಿಳಿಸುವುದು.

11) ಚಂದಾದಾರರಿಂದ ಸ್ವೀಕರಿಸಲಾದ ಹಣಹೂಡಿಕೆ ಮಾದರಿಯಲ್ಲಿ ಬದಲಾವಣೆ ಮತ್ತು ಚಂದಾದಾರರ ವಿವರ ಬದಲಾವಣೆ ಕೋರಿಕೆ

12) ದೂರುಗಳನ್ನು ಸಿಆರ್ಎಗೆ ಕಳುಹಿಸುವುದಕ್ಕಾಗಿ ಸಂಬಂಧಪಟ್ಟ ಖಜಾನೆ ಅಧಿಕಾರಿಗೆ ಕಳುಹಿಸಿ ಕೊಡುವುದು.

13)ಈ ಕೆಳಗಿನ ದಾಖಲೆಗಳನ್ನು ನಿರ್ವಹಿಸುವುದು.

ನೌಕರರ /ಚಂದಾದಾರರ ವ್ಯವಹಾರಗಳ ವಿವರಣಪಟ್ಟಿ
ನೌಕರರ /ಚಂದಾದಾರರ ನಿವೃತ್ತಿಯ ವಿವರಗಳು.

****

ಸರಕಾರಿ ನೌಕರರ ವಿದ್ಯಾರ್ಹತೆ:

07.03.2018,

| ಲ.ರಾಘವೇಂದ್ರ, ಸೇವಾ ಕಾನೂನು ತಜ್ಞರು.

ನಮ್ಮ ರಾಷ್ಟ್ರದಲ್ಲಿ ಸರ್ಕಾರದ ನಿಯಮಾವಳಿಗಳು ಕಾಲಕಾಲಕ್ಕೆ ಬದಲಾಗಿ ಆಯಾ ಹುದ್ದೆಗಳಿಗೆ ಸಂಬಂಧಿಸಿದಂತೆ ವಿದ್ಯಾರ್ಹತೆ ಮತ್ತು ಇನ್ನಿತರ ಷರತ್ತುಗಳನ್ನು ಒಳಗೊಂಡು ನಿಯಮಾವಳಿಗಳು ರೂಪುಗೊಂಡವು. ಅದರಂತೆ 1977ರ ಕರ್ನಾಟಕ ಸರ್ಕಾರಿ ಸೇವಾ ನಿಯಮಗಳು ರಚನೆಯಾಗಿ ದಿನಾಂಕ 7-7-1977ರಿಂದ ಜಾರಿಗೆ ಬಂದಿದೆ. ಈ ನಿಯಮಾವಳಿಯಲ್ಲಿ ಸರ್ಕಾರಿ ಸೇವೆಗೆ ಅರ್ಹತೆ ಮೀಸಲಾತಿ ಹಾಗೂ ಇನ್ನಿತರ ಕಾರ್ಯವಿಧಾನವನ್ನು ಅಳವಡಿಸಲಾಗಿದೆ.

ಈ ನಿಯಮಾವಳಿಯಲ್ಲಿ ಸರ್ಕಾರಿ ನೌಕರಿಗೆ ಸೇರುವ ಕನಿಷ್ಠ ಮತ್ತು ಗರಿಷ್ಠ ವಯೋಮಿತಿ ಪದೋನ್ನತಿ ದೇಹದಾರ್ಢ್ಯತೆ ಒಂದು ಹುದ್ದೆಯಿಂದ ಇನ್ನೊಂದು ಹುದ್ದೆಗೆ ವರ್ಗಾವಣೆ ಸೇರಿಕೆ ಕಾಲ ಇತ್ಯಾದಿ ಅಂಶಗಳೆಲ್ಲವನ್ನೂ ಒಳಗೊಂಡಿರುತ್ತದೆ. ಇದಕ್ಕೆ ಪೂರಕವಾಗಿ ರಾಜ್ಯ ಸರ್ಕಾರದ ಕಚೇರಿಗಳಲ್ಲಿರುವ ಲಿಪಿಕ ಹುದ್ದೆಗಳಿಗೆ ನೇಮಕಾತಿ ಮಾಡಿಕೊಳ್ಳಲು 1978ರ ಕರ್ನಾಟಕ ಸರ್ಕಾರಿ ಸೇವಾ ನಿಯಮಗಳನ್ನು ಜಾರಿಗೆ ತರಲಾಗಿದೆ. ಈ ನಿಯಮಾವಳಿಯಂತೆ ದ್ವಿತೀಯ ದರ್ಜೆ ಸಹಾಯಕರ ಹುದ್ದೆಗೆ ಪಿಯುಸಿ ಅಥವಾ ತತ್ಸಮಾನ ವಿದ್ಯಾರ್ಹತೆ ಹೊಂದಿರಬೇಕೆಂದು ದಿನಾಂಕ 13-12-2013ರಿಂದ ತಿದ್ದುಪಡಿ ಮಾಡಿ ಅಧಿಸೂಚನೆ ಹೊರಡಿಸಲಾಗಿದೆ. (ಅಧಿಸೂಚನೆ ಸಂಖ್ಯೆ ಡಿಪಿಎಆರ್ 18 ಎಸ್ಸಿಎಆರ್ 2013) ಆದರೆ ಈಗಾಗಲೇ ಸೇವೆಯಲ್ಲಿರುವ ಸರ್ಕಾರಿ ನೌಕರರು ಈ ದಿನಾಂಕಕ್ಕೆ ಪೂರ್ವದಲ್ಲಿ ಎಸ್ಎಸ್ಎಲ್ಸಿ ವಿದ್ಯಾರ್ಹತೆ ಹೊಂದಿ ಬಡ್ತಿಗೆ ಅಥವಾ ವರ್ಗಾವಣೆಗೆ ಪಿಯುಸಿ ಶಿಕ್ಷಣ ಹೊಂದಿರಬೇಕೆಂದು ಅನ್ವಯಿಸತಕ್ಕದ್ದಲ್ಲವೆಂದು ಸೂಚಿಸಿದೆ.(ಅಧಿಸೂಚನೆ ಸಂಖ್ಯೆ ಡಿಪಿಆರ್ 20 ಎಸ್ಸಿಆರ್ 2014) ಹೀಗಾಗಿದ್ದರೂ 1977ರ ಕರ್ನಾಟಕ ಸರ್ಕಾರಿ ಸೇವಾ ನಿಯಮಾವಳಿಯ ನಿಯಮ 5ರಲ್ಲಿ ಗ್ರೂಪ್ ‘ಡಿ’ ಹುದ್ದೆಗೆ ಎಸ್ಎಸ್ಎಲ್ಸಿ ವಿದ್ಯಾರ್ಹತೆ ನಿಗದಿಪಡಿಸಲಾಗಿದೆ. ಹೀಗೆ ಬದಲಾದ ವಿದ್ಯಾರ್ಹತೆಗೆ ತತ್ಸಮಾನ ಯಾವುದು ಎಂಬುದನ್ನು ಪರಿಗಣಿಸಲು ದಿನಾಂಕ 27-7-2018ರ ಸರ್ಕಾರಿ ಸುತ್ತೋಲೆ ಸಂಖ್ಯೆ ಸಿಆಸುಇ81ಸೇವನೆ2017ರಲ್ಲಿ ಈ ಕೆಳಕಂಡಂತೆ ನೀಡಲಾಗಿದೆ.

ಎಸ್ಎಸ್ಎಲ್ಸಿ ವಿದ್ಯಾರ್ಹತೆಯ ತತ್ಸಮಾನ ವಿದ್ಯಾರ್ಹತೆಗಳು:

# ಸಿ.ಬಿ.ಎಸ್.ಇ. ಮತ್ತು ಐ.ಸಿ.ಎಸ್.ಇ., ಮಂಡಳಿಯು ನಡೆಸುವ ಕ್ಲಾಸ್ 10 ಪರೀಕ್ಷೆ

# ಇತರೆ ರಾಜ್ಯ ಸರ್ಕಾರದ ಪರೀಕ್ಷಾ ಮಂಡಳಿಗಳಿಂದ ನಡೆಸುವ ಕ್ಲಾಸ್ 10 ಪರೀಕ್ಷೆ

# ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಓಪನ್ ಸ್ಕೂಲಿಂಗ್ (ಎನ್ಐಒಎಸ್) ವತಿಯಿಂದ ನಡೆಸುವ ಪ್ರೌಢ ಶಿಕ್ಷಣಮಟ್ಟದ ಕೋರ್ಸ್

# ಕರ್ನಾಟಕ ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿಯು ನಡೆಸುವ ಪ್ರೌಢ ಶಿಕ್ಷಣಮಟ್ಟದ ಕೋರ್ಸ್

ಪಿ.ಯು.ಸಿ. ವಿದ್ಯಾರ್ಹತೆಯ ತತ್ಸಮಾನ ವಿದ್ಯಾರ್ಹತೆಗಳು:

#ಸಿ.ಬಿ.ಎಸ್.ಇ. ಮತ್ತು ಐ.ಸಿ.ಎಸ್.ಇ., ಮಂಡಳಿಯು ನಡೆಸುವ ಕ್ಲಾಸ್ 12 ಪರೀಕ್ಷೆ

# ಇತರೆ ರಾಜ್ಯ ಸರ್ಕಾರದ ಪರೀಕ್ಷಾ ಮಂಡಳಿಗಳಿಂದ ನಡೆಸುವ ಕ್ಲಾಸ್ 12 ಪರೀಕ್ಷೆ

# ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಓಪನ್ ಸ್ಕೂಲಿಂಗ್ (ಎನ್.ಐ.ಒ.ಎಸ್.) ವತಿಯಿಂದ ನಡೆಸುವ ಉನ್ನತ ಪ್ರೌಢ ಶಿಕ್ಷಣ ಕೋರ್ಸ್/ಎಚ್.ಎಸ್.ಸಿ.

# ತಾಂತ್ರಿಕ ಶಿಕ್ಷಣ ಇಲಾಖೆಯ ಮೂರು ವರ್ಷಗಳ ಡಿಪ್ಲೊಮಾ ಅಥವಾ ಕೈಗಾರಿಕಾ ತರಬೇತಿ ಮತ್ತು ಉದ್ಯೋಗ ಆಯುಕ್ತಾಲಯದ ಎರಡು ವರ್ಷಗಳ ಐ.ಟಿ.ಐ. ಕೋರ್ಸ್ ಅಥವಾ ಎರಡು ವರ್ಷಗಳ ವೃತ್ತಿ ಶಿಕ್ಷಣ ಡಿಪ್ಲೊಮಾ (ಜೆ.ಒ.ಸಿ./ಜೆ.ಒ.ಡಿ.ಸಿ./ಜೆ.ಎಲ್.ಡಿ.ಸಿ.) ಅಭ್ಯರ್ಥಿಗಳು ಎನ್.ಐ.ಒ.ಎಸ್.ನ ವತಿಯಿಂದ ನಡೆಸುವ ಒಂದು ಭಾಷಾ ಕೋರ್ಸ್ ಮತ್ತು ಒಂದು ಶೈಕ್ಷಣಿಕ ವಿಷಯದಲ್ಲಿ (ದೂರಕಲಿಕೆ ಮಾದರಿಯಲ್ಲಿ) ಅಥವಾ ಪದವಿ ಪೂರ್ವ ಮಂಡಳಿಯು ನಡೆಸುವ ಪರೀಕ್ಷೆಯಲ್ಲಿ ಒಂದು ಭಾಷೆ ಮತ್ತು ಒಂದು ವಿಷಯದಲ್ಲಿ ಉತ್ತೀರ್ಣರಾದಲ್ಲಿ ಮಾತ್ರ ಪಿ.ಯು.ಸಿ.ಗೆ ತತ್ಸಮಾನವೆಂದು ಪರಿಗಣಿಸಬಹುದು.

ಪದವಿ ವಿದ್ಯಾರ್ಹತೆಯ ತತ್ಸಮಾನ ವಿದ್ಯಾರ್ಹತೆಗಳು:

# ಯುಜಿಸಿಯಿಂದ ಮಾನ್ಯತೆ ಹೊಂದಿರುವ ಪರಿಗಣಿತ ವಿಶ್ವವಿದ್ಯಾಲಯಗಳು, ಖಾಸಗಿ/ಡೀಮ್್ಡ ಹಾಗೂ ಹೊರ ರಾಜ್ಯದ ವಿವಿಗಳಿಂದ ಪಡೆದ ಪದವಿಗಳು. ಆದರೆ, ವಿವಿಗಳ ಪದವಿಯ ತತ್ಸಮಾನದ ಬಗ್ಗೆ ಶಿಕ್ಷಣಕ್ಕೆ ಸಂಬಂಧಿಸಿದಂತೆ ಆಯಾ ವಿಶ್ವವಿದ್ಯಾಲಯ ಮತ್ತು ಉದ್ಯೋಗಕ್ಕೆ ಸಂಬಂಧಿಸಿದಂತೆ ಉದ್ಯೋಗ ನೀಡುವ ಪ್ರಾಧಿಕಾರ ತೀರ್ಮಾನ ಕೈಗೊಳ್ಳಬೇಕಾಗುತ್ತದೆ. ್ಝ ಅಂಚೆ ಮತ್ತು ದೂರ ಶಿಕ್ಷಣದ ಮೂಲಕ ಪಡೆದಿರುವ ಪದವಿಗಳು. ಆದರೆ, ನಿಯಮಬಾಹಿರವಾಗಿ ಕೆಲವು ವಿಶ್ವವಿದ್ಯಾಲಯಗಳು ಯು.ಜಿ.ಸಿ.ಯ ಅನುಮೋದನೆ ಇಲ್ಲದೆ ನಡೆಸುತ್ತಿರುವ ಅಂಚೆ ಮತ್ತು ದೂರ ಶಿಕ್ಷಣದ ಕೋರ್ಸಗಳನ್ನು ಹಾಗೂ ಅಂಚೆ ಮತ್ತು ದೂರ ಶಿಕ್ಷಣದ ಮುಖಾಂತರ ಪಡೆದ ತಾಂತ್ರಿಕ ಪದವಿಗಳನ್ನು ನೇಮಕಾತಿಗೆ ಪರಿಗಣಿಸುವಂತಿಲ್ಲ.

ದಿನಾಂಕ 27-7-2018ರ ಈ ಸುತ್ತೋಲೆಯು ಮತ್ತಷ್ಟು ಗೊಂದಲಗಳನ್ನು ಸೃಷ್ಟಿಸಿದೆ. ಪಿಯುಸಿಗೆ ತತ್ಸಮಾನವಾದ 3 ವರ್ಷದ ಡಿಪ್ಲೊಮಾ ಅಥವಾ ಎರಡು ವರ್ಷಗಳ ಐ.ಟಿ.ಐ. ಅಥವಾ ಎರಡು ವರ್ಷಗಳ ವೃತ್ತಿ ಶಿಕ್ಷಣ ಡಿಪ್ಲೊಮಾದಾರರು ಪದವಿ ಪೂರ್ವ ಪರೀಕ್ಷಾ ಮಂಡಳಿಯು ನಡೆಸುವ ಪರೀಕ್ಷೆಯಲ್ಲಿ ಒಂದು ಭಾಷೆ ಮತ್ತು ಒಂದು ವಿಷಯದಲ್ಲಿ ತೇರ್ಗಡೆಯಾದರೆ ಮಾತ್ರ ಪಿಯುಸಿಗೆ ತತ್ಸಮಾನವೆಂದು ಪರಿಗಣಿಸಬಹುದೆಂದು ಸೂಚಿಸಿರುವುದು ಮತ್ತಷ್ಟು ಗೊಂದಲವಾಗಿದೆ.

ಇ.ಮೇಲ್: raghavendral3532@gmail.com

***

ಎನ್ಪಿಎಸ್ ಸಾಧಕ ಬಾಧಕಗಳು

( ಮುುಂದುವರೆದದ್ದದು)

28.02.2018,
| ಲ.ರಾಘವೇಂದ್ರ

ಸರ್ಕಾರಿ ನೌಕರರು ಸುದೀರ್ಘ ಅವಧಿಯ ಕರ್ತವ್ಯದ ಬಳಿಕ ನಿವೃತ್ತಿಯಾದಾಗ ಪಿಂಚಣಿ ಎನ್ನುವುದೇ ಅವರಿಗೆ ಸಂಜೀವಿನಿ. ಆದರೆ ದಿನಾಂಕ 1-4-2006ರಿಂದ ಜಾರಿಗೆ ತಂದಿರುವ ನೂತನ ಪಿಂಚಣಿ ಯೋಜನೆ ಬಗ್ಗೆ ಸರ್ಕಾರಿ ನೌಕರರು ಗೊಂದಲಕ್ಕೀಡಾಗಿದ್ದಾರೆ. ತಮ್ಮ ಹಣ ಎಲ್ಲಿ ಜಮೆಯಾಗುತ್ತಿದೆ, ಎಲ್ಲಿ ಹೂಡಿಕೆಯಾಗುತ್ತಿದೆ ಎನ್ನುವ ಸ್ಪಷ್ಟ ಮಾಹಿತಿಯಿಲ್ಲದೆ ಕಂಗೆಟ್ಟಿದ್ದಾರೆ. ದಿನಾಂಕ 1-1-2004ರಿಂದ ರಾಷ್ಟ್ರದ ಒಂದೆರಡು ರಾಜ್ಯಗಳನ್ನು ಹೊರತುಪಡಿಸಿ ಬೇರೆ ಎಲ್ಲ ರಾಜ್ಯಗಳಲ್ಲೂ ಈ ನೂತನ ಪಿಂಚಣಿ ಯೋಜನೆಯನ್ನು ಸರ್ಕಾರಿ ನೌಕರರಿಗೆ ಅನುಷ್ಠಾನಗೊಳಿಸಲಾಗಿದೆ. ಪಶ್ಚಿಮ ಬಂಗಾಳ, ತ್ರಿಪುರ ರಾಜ್ಯಗಳಲ್ಲಿ ಹಳೆಯ ನಿಶ್ಚಿತ ಪಿಂಚಣಿ ಯೋಜನೆಯನ್ನೇ ಮುಂದುವರಿಸಲಾಗಿದೆ.

ಕೇಂದ್ರ ಸರ್ಕಾರವು ಆರ್ಥಿಕತೆಯ ಸಂಸದೀಯ ಸ್ಥಾಯಿ ಸಮಿತಿಯನ್ನು ಯಶವಂತ ಸಿಂಹ ಅವರ ನೇತೃತ್ವದಲ್ಲಿ ರಚಿಸಿದ್ದು, ಅದು ಈ ಕೆಳಗಿನಂತೆ ಸಲಹೆಗಳನ್ನು ನೀಡಿದೆ.

ಎನ್.ಪಿ.ಎಸ್.ನಲ್ಲಿ ನೌಕರ ತೊಡಗಿಸಿದ ಹಣಕ್ಕೆ ನಿಶ್ಚಿತ ಮೊಬಲಗು ಹಾಗೂ ಪಿಂಚಣಿ ಬಗ್ಗೆ ಖಚಿತ ಪಡಿಸಿರುವುದಿಲ್ಲ. ಎನ್.ಪಿ.ಎಸ್.ನಲ್ಲಿ ಎಫ್.ಡಿ.ಐ. ಕೇವಲ ಶೇ.26ರಷ್ಟು ನಿಗದಿಪಡಿಸಲು ಸೂಚಿಸಲಾಗಿದೆ. ಆದರೆ ಪ್ರಸ್ತುತ ಶೇ.100ರಷ್ಟು ಇದನ್ನು ಹೆಚ್ಚಿಸಲು ಉದ್ದೇಶಿಸಲಾಗಿದೆ.
ಎನ್.ಪಿ.ಎಸ್.ನಲ್ಲಿ ನೌಕರನು ಇತರ ನಿವೃತ್ತ ನೌಕರರು ಪಡೆಯುವಂತೆ ಪಿಂಚಣಿ ಮೊಬಲಗನ್ನು ಪಡೆಯುವಂತಿರಬೇಕು.
ಪಿಂಚಣಿ ನಿಧಿಯ ಹಣಕ್ಕೆ ನೌಕರರ ಭವಿಷ್ಯ ನಿಧಿ ಯೋಜನೆ ಅಡಿಯಲ್ಲಿ ನೀಡುವ ಬಡ್ಡಿ ದರಕ್ಕೆ ಉಪದಾನ ನೀಡಬೇಕು.
ಕೇಂದ್ರ ಸರ್ಕಾರದ 5ನೇ ವೇತನ ಆಯೋಗವು ಸವೋಚ್ಛ ನ್ಯಾಯಾಲಯದ ತೀರ್ಪನ್ನು ಉಲ್ಲೇಖಿಸಿ ಪಿಂಚಣಿ ಎಂಬುದು ನೌಕರರಿಗೆ ನ್ಯಾಯಬದ್ದವಾಗಿ ಬರಬೇಕಾದ, ಹಿಂದಕ್ಕೆ ಪಡೆಯಲಾರದ, ಕಾನೂನು ರೀತ್ಯಾ ಹಕ್ಕಾಗಿದೆ ಎಂದು ತಿಳಿಸಿದೆ. ಇಂತಹ ಪಿಂಚಣಿಯನ್ನು ಸೇವೆಯಲ್ಲಿರುವ ನೌಕರರ ವೇತನ ಪರಿಷ್ಕರಿಸಿದಂತೆ ಅಗಾಗ ಪರಿಷ್ಕರಿಸಿ ನಿಗದಿ ಮಾಡಬೇಕೆಂದು ಶಿಫಾರಸ್ಸು ಮಾಡಿತ್ತು. ಇವೆಲ್ಲವುಗಳನ್ನು ತಿರಸ್ಕರಿಸಿ ಪಿ.ಎಫ್.ಆರ್.ಡಿ.ಎ. ಅಧಿನಿಯಮ 2013ರನ್ನು ರಚಿಸಲಾಗಿದೆ. ಇದರಲ್ಲಿ ನೌಕರರ ಹಣಕ್ಕೆ 30-35 ವರ್ಷಗಳ ಸೇವೆಯ ನಂತರ ಸಿಗಬೇಕಾದ ಪಿಂಚಣಿ ಸೌಲಭ್ಯಕ್ಕೆ ಯಾವುದೇ ಭದ್ರತೆ ಹಾಗು ನಿಶ್ಚಿತ ಪಿಂಚಣಿ ಇಲ್ಲವಾಗಿದೆ.

ಎನ್.ಪಿ.ಎಸ್.ನಿಂದ ಉದ್ಭವಿಸುವ ಸಮಸ್ಯೆಗಳು:

ಸರ್ಕಾರಿ ನೌಕರರನ್ನು ಎರಡು ಗುಂಪುಗಳನ್ನಾಗಿ ಬೇರ್ಪಡಿಸುತ್ತದೆ.
ಎನ್.ಪಿ.ಎಸ್. ನೌಕರರು ಸದರಿ ಯೋಜನೆಯು ಮಾರುಕಟ್ಟೆ ಆಧಾರಿತವಾಗಿರುವುದರಿಂದ ಭವಿಷ್ಯದಲ್ಲಿ ಪಿಂಚಣಿ ಪಡೆಯುವುದು ಬಹಳ ಅನಿಶ್ಚಿತವಾಗಿರುತ್ತದೆ.
ಎನ್.ಪಿ.ಎಸ್.ಗೆ ನೌಕರರು ವೇತನದ ಶೇ.10ರಷ್ಟು ಚಂದಾ ನೀಡಬೇಕಾಗಿರುವುದರಿಂದ ಒಟ್ಟು ಪಡೆಯಬೇಕಾದ ವೇತನ ಕಡಿಮೆಯಾಗುತ್ತದೆ. ಇದರಿಂದ ನೌಕರರಲ್ಲಿ ಅಸಮಧಾನ ಸೃಷ್ಟಿಯಾಗುತ್ತದೆ.
ಯೋಜನೆಯಲ್ಲಿ ನೌಕರರಿಗೆ ನಿವೃತ್ತಿ ಸಮಯದಲ್ಲಿ ನಿವೃತ್ತಿ ಉಪದಾನ ಹಾಗೂ ನಿಶ್ಚಿತ ಕುಟುಂಬ ನಿವೃತ್ತಿ ವೇತನಕ್ಕೆ ಅವಕಾಶವಿಲ.
ಯೋಜನೆಯ ನೌಕರರು ಸಾಮಾನ್ಯ ಭವಿಷ್ಯ ನಿಧಿಯಲ್ಲಿ (ಜಿಪಿಎಫ್) ಉಳಿತಾಯ ಮಾಡಲು ಅವಕಾಶವಿರುವುದಿಲ್ಲ.
ಯೋಜನೆಯಲ್ಲಿ ಜಿಪಿಎಫ್ನಲ್ಲಿ ಇದ್ದಂತೆ ನೌಕರರು ತಮ್ಮ ಸಾಮಾಜಿಕ ಅಗತ್ಯ ಗಳಿಗೆ ಅನುಸಾರವಾಗಿ ಹಣವನ್ನು ಹಿಂಪಡೆಯಲು ಸಾಧ್ಯವಿಲ್ಲ. ಇದರಿಂದಾಗಿ ನೌಕರ ಇನ್ನಷ್ಟು ಸಾಲಗಾರನಾಗುವ ಪರಿಸ್ಥಿತಿ ಉಂಟಾಗುತ್ತದೆ.
ಹಣ ಹಿಂಪಡೆದಾಗ ಒಟ್ಟು ಆದಾಯಕ್ಕೆ ಪಿಂಚಣಿ ಸೇರಿ ತೆರಿಗೆ ಕಟ್ಟಬೇಕಾಗುತ್ತದೆ. ಇದಲ್ಲದೆ ಸೇವಾ ತೆರಿಗೆಯನ್ನು ನೀಡಬೇಕಾಗುತ್ತದೆ.
ಹಳೆ ಪದ್ಧತಿಯಲ್ಲಿ ಸರ್ಕಾರ ನೀಡುವ ಪಿಂಚಣಿಗೆ ಬೆಲೆ ಏರಿಕೆಯಿಂದಾಗಿ ನೀಡುವ ತುಟ್ಟಿ ಭತ್ಯೆ ಈ ನೂತನ ಪಿಂಚಣಿ ಯೋಜನೆಗೆ ಒಳಪಡುವ ನೌಕರರಿಗೆ ಅನ್ವಯವಾಗುವುದಿಲ್ಲ. ಇದು ನೌಕರರಲ್ಲಿ ತಾರತಮ್ಯ ಉಂಟುಮಾಡುತ್ತದೆ.
ವೇತನ ಆಯೋಗಗಳು ಪಿಂಚಣಿ ಪರಿಷ್ಕರಿಸುವಂತೆ ಈ ಯೋಜನೆಯಡಿ ಪಿಂಚಣಿ ಪರಿಷ್ಕರಿಸುವ ಬಗ್ಗೆ ಕಾಯಿದೆಯಲ್ಲಿ ಯಾವುದೇ ಭರವಸೆ ಇಲ್ಲ.
ನೌಕರರು ಹಾಗೂ ಸರ್ಕಾರ ತಲಾ ಶೇ.10ರಷ್ಟು ವಂತಿಗೆ ನೀಡಿದರೂ ನೌಕರ 30-35 ವರ್ಷಗಳ ಸೇವೆಯ ನಂತರ ನಿವೃತ್ತಿ ಸಮಯದಲ್ಲಿ ಪಡೆದ ವೇತನದ ಶೇ.50ರಷ್ಟು ಪಿಂಚಣಿ ಪಡೆಯುವ ಬಗ್ಗೆ ಕಾಯಿದೆಯಲ್ಲಿ ಯಾವುದೇ ಭರವಸೆ ಇಲ್ಲ.
ಯೋಜನೆಯ ನೌಕರ ಮರಣ ಹೊಂದಿದರೆ ಅವರ ಅವಲಂಬಿತ ಕುಟುಂಬಗಳಿಗೆ ಆರ್ಥಿಕ ಭದ್ರತೆ ನೀಡುವ ಯಾವುದೇ ಅಂಶ ಈ ಕಾಯಿದೆಯಲ್ಲಿ ಇಲ್ಲ.
ಈ ಎಲ್ಲ ಸಮಸ್ಯೆಗಳಿಗೆ ಸಮರ್ಪಕ ಉತ್ತರ ಇಲ್ಲದೆ ಇರುವುದು ಎನ್.ಪಿ.ಎಸ್.ನ ಪೊಳ್ಳುತನವನ್ನು ತೋರಿಸುತ್ತದೆ. ಇದರಲ್ಲಿ ಕೇವಲ ನೌಕರರ ವೇತನದ ಶೇ.10ರಷ್ಟು ಮಾತ್ರವಲ್ಲ ಸರ್ಕಾರದ ಶೇ.10ರಷ್ಟು ಹಣದ ಭದ್ರತೆಯೂ ಅನಿಶ್ಚಿತವಾಗಿದೆ. ನೌಕರರ ಹೂಡಿಕೆ ಮಾತ್ರವಲ್ಲ ಸರ್ಕಾರದ ಅಂದರೆ ಸಾರ್ವಜನಿಕರ ಹೂಡಿಕೆಯೂ ಮುಳುಗಿ ಹೋಗುವುದು ನಿಶ್ಚಿತವಾಗಿದೆ.

ಈ ಯೋಜನೆಯ ಹಿಂದೆ ಆರ್ಥಿಕ ಹಾಗೂ ಆಡಳಿತ ಸುಧಾರಣೆಯ ನೆಪದಲ್ಲಿ ಈ ದೇಶಕ್ಕೆ ಬಂದೊದಗಿರುವ ಜಾಗತೀಕರಣ ಉದಾರೀಕರಣ ಹಾಗೂ ಖಾಸಗೀಕರಣದ ರೂವಾರಿಗಳಾದ ವಿಶ್ವ ಬ್ಯಾಂಕ್, ವಿಶ್ವ ಹಣಕಾಸು ನಿಧಿ, (ಐ.ಎಂ.ಎಫ್.) ವಿಶ್ವ ವ್ಯಾಪಾರಿ ಸಂಸ್ಥೆ (ಡಬ್ಲ್ಯೂ.ಟಿ.ಒ) ಹಾಗೂ ಖಾಸಗಿ ವಿಮಾ ಸಂಸ್ಥೆಗಳ, ಕಾರ್ಪೆರೇಟ್ ಸಂಸ್ಥೆಗಳ ಹಾಗೂ ಎಲ್ಲ್ಲೆಡೆ ನುಸುಳುತ್ತಿರುವ ವಿದೇಶಿ ಬಂಡವಾಳ (ಎಫ್.ಡಿ.ಐ.) ಪ್ರಭಾವ ಹಾಗೂ ಒತ್ತಡ ಇರುವುದು ಕಂಡುಬರುತ್ತದೆ. ಈಗಾಗಲೇ ಫ್ರಾನ್ಸ್, ಸ್ಪೇನ್, ಗ್ರೀಸ್, ಡೆನ್ಮಾರ್ಕ್, ಅಮೆರಿಕ ಮತ್ತು ಬ್ರಿಟನ್ನಲ್ಲಿ ಇದೇ ರೀತಿಯ ಷೇರು ಮಾರುಕಟ್ಟೆಯಲ್ಲಿ ನೌಕರರ ಹಾಗೂ ಜನಸಾಮಾನ್ಯರ ಹಣವನ್ನು ಹೂಡಿದ ಕಂಪನಿಗಳು ಜಗತ್ತಿನ ಆರ್ಥಿಕ ಕುಸಿತದಿಂದಾಗಿ ನಷ್ಟ ಅನುಭವಿಸಿ ದಿವಾಳಿ ಎದ್ದಿವೆ. ಇದರಿಂದಾಗಿ ಅಲ್ಲಿನ ನೌಕರರು ಪಿಂಚಣಿ ಹಣ, ವಿಮೆ ಹಣ ಹಾಗೂ ಉಳಿತಾಯದ ಎಲ್ಲಾ ಹಣವನ್ನು ಸಂಪೂರ್ಣವಾಗಿ ಕಳೆದುಕೊಂಡು ನಿರ್ಗತಿಕರಾಗಿದ್ದಾರೆ. ಇದೆಲ್ಲವನ್ನು ಅರಿತಿದ್ದರೂ ನೌಕರರನ್ನು ಅನಿಶ್ಚಿತ ಸ್ಥಿತಿಗೆ ಸರ್ಕಾರವೇ ನೂಕುತ್ತಿರುವುದು ವಿಪರ್ಯಾಸ. ನೌಕರನ ವಯೋನಿವೃತ್ತಿ ಸಮಯದಲ್ಲಿ ಅವರ ಖಾತೆಯ ಸಂಪೂರ್ಣ ಲೆಕ್ಕವನ್ನು ಚುಕ್ತಾ ಮಾಡಿ ಬರಬಹುದಾದ ಒಟ್ಟು ಮೊತ್ತದಲ್ಲಿ ಶೇಕಡ 60ರಷ್ಟು ಮೊಬಲಗನ್ನು ಕೈಗೆ ನೀಡಿ ಉಳಿದ ಶೇ. 40ರಷ್ಟು ಮೊಬಲಗನ್ನು ಮಾಸಿಕ ಪಿಂಚಣಿಯಾಗಿ ನೀಡುವುದು ಈ ಯೋಜನೆಯ ಉದ್ದೇಶ. ಒಂದು ವೇಳೆ ಹೂಡಿಕೆ ವ್ಯವಹಾರದಲ್ಲಿ ನಷ್ಟವಾಗಿ ಖಾತೆಯಲ್ಲಿನ ಮೊಬಲಗು ಶೂನ್ಯಕ್ಕೆ ಇಳಿದರೆ ಪಿಂಚಣಿ ಎಂಬುದು ಕನ್ನಡಿಯೊಳಗಿನ ಗಂಟಾಗುತ್ತದೆ. ಈ ಹಿನ್ನೆಲೆಯಲ್ಲಿ ಪರಿಶೀಲಿಸಿದರೆ ಸರ್ಕಾರವೇ ನೌಕರರ ಹಣವನ್ನು ಷೇರು ಮಾರುಕಟ್ಟೆಯಲ್ಲಿ ಮೂರನೇ ವ್ಯಕ್ತಿಯ ಲಾಭಕ್ಕಾಗಿ ಬಳಸಲು ಮುಂದಾಗಿದೆ ಎಂಬುದು ಸ್ಪಷ್ಟವಾಗುತ್ತದೆ. ಅಂದರೆ ಲಾಭ ಖಾಸಗಿಯವರಿಗೆ ನಷ್ಟ ನೌಕರರಿಗೆ ಎಂಬ ವ್ಯಾಪಾರ ನೀತಿ ಈ ಯೋಜನೆಯ ಉದ್ದೇಶವಾಗಿದೆ. ಇಂದು ಕರ್ನಾಟಕ ಸರ್ಕಾರದಲ್ಲಿ 01-04-2006ರಿಂದ ಇಲ್ಲಿಯವರೆಗೂ 1.97 ಲಕ್ಷದಷ್ಟು ನೌಕರರಿದ್ದಾರೆ.

ನೂತನ ಪಿಂಚಣಿ ಯೋಜನೆ:

21-02-2018.

| ಲ. ರಾಘವೇಂದ್ರ

ಸರ್ಕಾರಿ ಸೇವೆಗೆ ಸೇರಿದ ಪ್ರತಿಯೊಬ್ಬ ಸರ್ಕಾರಿ ನೌಕರನು ಸೇವಾ ಕಾನೂನಿನ ಚೌಕಟ್ಟಿಗೆ ಒಳಗಾಗಿ ಕೆಲಸ ಮಾಡಬೇಕಾಗುತ್ತದೆ. ಈ ರೀತಿಯಾಗಿ 25-35 ವರ್ಷ ಸರ್ಕಾರಿ ಸೇವೆ ಸಲ್ಲಿಸಿ ನಿವೃತ್ತನಾಗುವ ನೌಕರನಿಗೆ ಸರ್ಕಾರವು ಈ ಹಿಂದೆ ನಿಶ್ಚಿತ ಪಿಂಚಣಿ ಸೌಲಭ್ಯ ನೀಡುತ್ತಿತ್ತು. ಈ ರೀತಿ ಪಿಂಚಣಿ ಸೌಲಭ್ಯ ಪಡೆಯುತ್ತಿರುವ ಸರ್ಕಾರಿ ನೌಕರರಲ್ಲಿ ಒಂದು ಜೀವನದ ಭದ್ರತೆ ಉಂಟಾಗುತ್ತಿತ್ತು. ಈ ರೀತಿಯ ಜೀವನ ಭದ್ರತೆಗೆ ಒಳಗಾಗಿರುವ 5.8 ಲಕ್ಷ ಪಿಂಚಣಿದಾರರು ಇಂದು ನಮ್ಮ ರಾಜ್ಯದಲ್ಲಿದ್ದಾರೆ.

ಸರ್ವೇಚ್ಛ ನ್ಯಾಯಾಲಯವು ‘ಪಿಂಚಣಿ ಎಂಬುದು ನೌಕರರಿಗೆ ನೀಡುವ ಭಿಕ್ಷೆಯಲ್ಲ ನೌಕರರು ದೀರ್ಘಾವಧಿ ಮಾಡಿದ ಸೇವೆ ಹಾಗೂ ಸೇವಾವಧಿಯಲ್ಲಿ ನೌಕರನು ಪಡೆದ ಜೀವನಾವಶ್ಯಕ ವೇತನಕ್ಕಿಂತ ಕಡಿಮೆ ವೇತನ ಪಿಂಚಣಿಯ ರೂಪದಲ್ಲಿ ಇಳಿವಯಸ್ಸಿನಲ್ಲಿ ಸಾಮಾಜಿಕ ಆರ್ಥಿಕ ಭದ್ರತೆಗಾಗಿ ನೀಡುವಂತದ್ದು. ಇದನ್ನು ಮುಂದೂಡಿದ ವೇತನವೆಂದು ಅರ್ಥೈಸಿದೆ. ಇದು ಮೂಲಭೂತ ಹಕ್ಕೆಂದು ಪರಿಗಣಿಸುವಂತೆ ಹೇಳಿದೆ. (ಎಐಆರ್-1983-ಎಸ್ಸಿ-130) ಈ ರೀತಿ ನಿಶ್ಚಿತ ಪಿಂಚಣಿ ವ್ಯವಸ್ಥೆ ಬದಲಿಸಿದ ಕೀರ್ತಿ ಹಿಂದಿನ ಎನ್ಡಿಎ ಸರ್ಕಾರಕ್ಕೆ ಸಲ್ಲುತ್ತದೆ. ಈ ನಿಶ್ಚಿತ ಪಿಂಚಣಿಯನ್ನು ಅಂಶದಾಯಿಕ ಪಿಂಚಣಿ ಯೋಜನೆಯಾಗಿ ಅಳವಡಿಸಿಕೊಳ್ಳಲು ಹಾಗೂ ವಿಶ್ವಬ್ಯಾಂಕಿನಿಂದ ಸಾಲ ದೊರಕಿಸಿಕೊಳ್ಳಲು ಅಧಿಕಾರದ ಚುಕ್ಕಾಣಿ ಹಿಡಿದ ಸರ್ಕಾರಗಳು ಮಾಡಿದ ಷಡ್ಯಂತ್ರವಾಗಿದೆ. ಈ ಯೋಜನೆಯು ಸಾಫಲ್ಯಕ್ಕಿಂತ ಇಂದು ವಿಫಲತೆಯೇ ಜಾಸ್ತಿಯಾಗಿದೆ.
ಸ್ವಾತಂತ್ರ್ಯೊತ್ತರ ಭಾರತದಲ್ಲಿ ಸರ್ಕಾರಿ ನೌಕರರು ಹಲವು ಬದಲಾವಣೆಗಳನ್ನು ಕಂಡಿದ್ದಾರೆ. ವೇತನದಲ್ಲಿ 6ಕ್ಕೆ ಏರದ 3ಕ್ಕೆ ಇಳಿಯದ ಸ್ಥಿತಿಯಲ್ಲಿದ್ದರೂ ಸರ್ಕಾರ ನೀಡುವ ನಿಶ್ಚಿತ ಪಿಂಚಣಿ ಸೌಲಭ್ಯದಿಂದಾಗಿ ಇಳಿವಯಸ್ಸಿನಲ್ಲಿ ಗೌರವಯುತ ಬಾಳ್ವೆ ನಡೆಸಬಹುದೆಂಬ ಆಶಾಭಾವನೆಯು ಯುವ ಜನಾಂಗವನ್ನು ಸರ್ಕಾರಿ ನೌಕರಿಯ ಕಡೆ ಆಕರ್ಷಿಸುತ್ತಿತ್ತು. ಆದರೆ ಇಂದು ಸರ್ಕಾರಿ ನೌಕರಿಗೆ ಸೇರುವವರಿಗೆ ಪಿಂಚಣಿ ಇಲ್ಲ ಎಂಬ ಕಹಿ ಸತ್ಯ ನಮ್ಮ ಮುಂದಿದೆ. ದಿನಾಂಕ 1-4-2004ರಿಂದ ಕೇಂದ್ರ ಸರ್ಕಾರವು ತನ್ನ ನೌಕರರಿಗೆ ನೂತನ ಅಂಶದಾಯಿ ಪಿಂಚಣಿಯೋಜನೆ ಜಾರಿಗೆ ತಂದಿತು. ಈ ಯೋಜನೆಯನ್ನೇ ಅಂದು ಅಧಿಕಾರದಲ್ಲಿದ್ದ ಸರ್ಕಾರವು ದಿನಾಂಕ 1-4-2006ರಿಂದ ಕೇಂದ್ರ ಸರ್ಕಾರದ ಯೋಜನೆಯನ್ನೇ ಅಲ್ಪ ಸ್ವಲ್ಪ ಬದಲಾವಣೆಗಳೊಂದಿಗೆ ದಿನಾಂಕ 31-3-2006ರ ಸರ್ಕಾರದ ಆದೇಶ ಸಂಖ್ಯೆ ಎಫ್ಡಿ (ವಿಶೇಷ) 4 ಪಿಇಟಿ 2005ರ ಮೇರೆಗೆ ಅನುಷ್ಠಾನಗೊಳಿಸಿತು. ದಿನಾಂಕ 1-4-2000ದ ನಂತರ ಹೊಸದಾಗಿ ಸರ್ಕಾರಿ ಸೇವೆಗೆ ಸೇರುವ ನೌಕರರಿಗೆ ಹೊಸದಾಗಿ ವ್ಯಾಖ್ಯಾನಿಸಿದ ಅಂಶದಾಯಿ ಕೊಡುಗೆ ನಿವೃತ್ತಿವೇತನ ಯೋಜನೆಯನ್ನು ಕಡ್ಡಾಯವಾಗಿ ಜಾರಿಗೆ ತಂದಿದೆ. ಆದರೆ ಈ ಹಿಂದೆ ಸರ್ಕಾರಿ ಸೇವೆಯಲ್ಲಿದ್ದು ತದನಂತರ ತತ್ಸಮಾನ ಅಥವಾ ಮೇಲಿನ ಹುದ್ದೆಗೆ ಆಯ್ಕೆ ಪ್ರಾಧಿಕಾರಗಳ ಮೂಲಕ ಬೇರೊಂದು ಹುದ್ದೆಗೆ ಆಯ್ಕೆಯಾಗಿ ನಿಯೋಜಿತರಾದರೆ ಅಂತಹವರಿಗೆ ಹಿಂದಿನ ನಿಶ್ಚಿತ ಪಿಂಚಣಿ ಯೋಜನೆ ಅಳವಡಿಸಿಕೊಳ್ಳಲು ಕರ್ನಾಟಕ ಸರ್ಕಾರಿ ಸೇವಾ ನಿಯಮಾವಳಿಯ ನಿಯಮ 224ಬಿ ರೀತ್ಯಾ 3 ವರ್ಷದೊಳಗೆ ತಮ್ಮ ಐಚ್ಛಿಕತೆ ನೀಡಲು ಅವಕಾಶ ಕಲ್ಪಿಸಲಾಗಿದೆ. 2-2-2013ರವರೆಗೆ ದಿನಾಂಕ ವಿಸ್ತರಿಸಲಾಗಿದೆ. ಅನಂತರ ನೇಮಕವಾದರೆ ನೇಮಕ ಪ್ರಾಧಿಕಾರಗಳು ಸೂಕ್ತ ಆದೇಶ ಹೊರಡಿಸುವ ಮುನ್ನ ಕ್ಲೇಮ್ ಸಮರ್ಥಿಸುವ ಸೂಕ್ತ ದಾಖಲೆಗಳನ್ನೇ ಸರ್ಕಾರದ ಅನುಮೋದನೆ ಪಡೆಯಬೇಕೆಂದು ದಿನಾಂಕ 30-10-2012ರ ಸರ್ಕಾರದ ಅಧಿಸೂಚನೆ ಸಂಖ್ಯೆ ಎಫ್ಡಿ06ಎಸ್ಆರ್ಎ2012ರಲ್ಲಿ ತಿಳಿಸಿದೆ. ಅಲ್ಲದೆ ಈ ಯೋಜನೆಯನ್ನು ದಿನಾಂಕ 30-1-2014ರ ಸರ್ಕಾರಿ ಆದೇಶ ಸಂಖ್ಯೆ ಎಫ್ಡಿ(ವಿಶೇಷ) 219 ಪಿಇಎನ್ 2012ರ ಮೇರೆಗೆ ಸರ್ಕಾರದ ಸ್ವಾಯತ್ತ ಸಂಸ್ಥೆಗಳಾದ ಮಂಡಳಿ ನಿಗಮಗಳು, ವಿವಿಗಳು, ರಾಜ್ಯದಿಂದ ಅನುದಾನಿತ ಪಡೆದ ಸಂಸ್ಥೆಗಳು ಹಾಗೂ ಸ್ವಾಯತ್ತ ಸಂಸ್ಥೆಗಳಲ್ಲಿ ಅಳವಡಿಸಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ. ಅಲ್ಲದೆ ದಿನಾಂಕ 26-12 ಸರ್ಕಾರಿ ಆದೇಶ ಸಂಖ್ಯೆ ಸಕಇ 352, ಮೋದೇಶಾ 2016 ಮೇರೆಗೆ ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘದ ಕಾಯಂ ಸಿಬ್ಬಂದಿಗಳಿಗೆ ಈ ಹೊಸ ಪಿಂಚಣಿ ಯೋಜನೆ ಅನುಷ್ಠಾನಗೊಳಿಸಲು ಅನುಮೋದನೆ ನೀಡಿದೆ. ಹೀಗೆ ರಾಜ್ಯ ಸರ್ಕಾರದ ಮತ್ತು ಸ್ವಾಯತ್ತ ಸಂಸ್ಥೆಗಳಲ್ಲಿ ಈ ಹೊಸ ಪಿಂಚಣಿ ಯೋಜನೆಗೆ ಸುಮಾರು 1.80 ಲಕ್ಷದಷ್ಟು ನೌಕರರು ಸೇರ್ಪಡೆಯಾಗಿದ್ದಾರೆ.

ನೂತನ ಪಿಂಚಣಿ ಯೋಜನೆ ಏನು?

ದಿನಾಂಕ 16-6-2007ರ ಸರ್ಕಾರಿ ಆದೇಶ ಸಂಖ್ಯೆ 79 ಟಿಎಆರ್ 2006ರ ಮೇರೆಗೆ ಸರ್ಕಾರಿ ನೌಕರನ ಮೂಲವೇತನದ ಮತ್ತು ಅದರ ಮೇಲೆ ದೊರೆಯುವ ತುಟ್ಟಿಭತ್ಯೆಯು ಸೇರಿ ಈ ನೂತನ ಅಂಶದಾಯಿ ಪಿಂಚಣಿ ಯೋಜನೆಯಡಿಯಲ್ಲಿ ಪಿಂಚಣಿ ನೀಡುವ ಉದ್ದೇಶಕ್ಕಾಗಿ ನೌಕರರ ವೇತನದಿಂದ ಶೇ.10ರಷ್ಟು ಕಠಾವು ಮಾಡಬೇಕೆಂದು ಸೂಚಿಸಲಾಗಿದೆ. ಹೀಗೆ ಶೇಖರಣೆಗೊಳ್ಳುವ ಮೊತ್ತವನ್ನು ವಿವಿಧ ಖಾಸಗಿ ಹಣಕಾಸಿನ ಮೂಲಕ ಷೇರು ಮಾರುಕಟ್ಟೆಯಲ್ಲಿ ತೊಡಗಿಸಲಾಗುತ್ತದೆ. 30-35 ವರ್ಷಗಳ ನಂತರ ಈ ಹಣ ಬಳಸಿದ ಕಂಪನಿಗಳು ಷೇರುಮಾರುಕಟ್ಟೆಯ ಏರಿಳಿತ ಆಧರಿಸಿ ಸದರಿ ಮೊತ್ತಕ್ಕೆ ಬಂದ ಲಾಭಾಂಶದಲ್ಲಿ ಪಿಂಚಣಿಯನ್ನು ನೌಕರರಿಗೆ ನೀಡುತ್ತದೆಂದು ಪಿಂಚಣಿ ನಿಧಿ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರ ಕಾಯ್ದೆ ಹೇಳುತ್ತದೆ ಎಂದರೆ ಸರ್ಕಾರಿ ನೌಕರನು ಪಡೆಯುವ ಪಿಂಚಣಿ ಮೊತ್ತವು ಸದರಿ ಕಂಪನಿಗಳ ಲಾಭಾ ನಷ್ಟಗಳ ಮೇಲೆ ನಿರ್ಧಾರಿತವಾಗಿರುತ್ತದೆ. ಇದಕ್ಕಾಗಿ ಕಾನೂನುಗಳನ್ನು ರಚಿಸದೆ ನೌಕರರು ಹಾಗೂ ಸರ್ಕಾರ ತೊಡಗಿಸುವ ಹಣಕ್ಕೆ ಯಾವುದೇ ಭದ್ರತೆ ನೀಡದೆ ಈ ಹೊಸ ಪಿಂಚಣಿ ಯೋಜನೆಯನ್ನು ಕೇಂದ್ರ ಸರ್ಕಾರವು 2004ರಲ್ಲಿ ಘೊಷಿಸಿದೆ. ಕೇಂದ್ರ ಸರ್ಕಾರವು 2003ರ ಆಗಸ್ಟ್ನಲ್ಲಿ ಪಿಂಚಣಿ ನಿಧಿ ನಿಯಂತ್ರಣ ಮತ್ತು ಅಭಿವೃದ್ಧಿ ಏಜೆನ್ಸಿ ಸಂಸ್ಥೆಯನ್ನು ಕೇವಲ ಒಂದು ಕಾರ್ಯಾದೇಶದ ಮೂಲಕ ರಚಿಸಿದರೂ ಕೆಲವು ಸಂವೇದನಾಶೀಲ ಜನಪ್ರತಿನಿಧಿಗಳ ಹಾಗೂ ನೌಕರರ ಸಂಘಟನೆಗಳು ಇದರ ಜಾರಿ ವಿರೋಧಿಸುತ್ತಿದ್ದುದರಿಂದ 10 ವರ್ಷಗಳ ಕಾಲ ಇದಕ್ಕೆ ಸಂಸತ್ತಿನ ಅಂಗೀಕಾರ ಪಡೆಯಲು ಸಾಧ್ಯವಾಗಿರಲಿಲ್ಲ. ಅಂತಿಮವಾಗಿ 2013ರ ಸೆಪ್ಟೆಂಬರ್ ತಿಂಗಳಿನಲ್ಲಿ ಈ ಕಾಯ್ದೆಯನ್ನು ಸಂಸತ್ ಅನುಮೋದಿಸಿದೆ. ಈವರೆಗೂ ಈ ಹೊಸ ಪಿಂಚಣಿಯೋಜನೆಗೆ ಯಾವುದೇ ಅಧಿನಿಯಮ ಇಲ್ಲದೆ ಕೇವಲ ಕಾರ್ಯಾದೇಶಗಳ ಮೂಲಕ ಜಾರಿಗೆ ತರಲಾಗಿದೆ. ಇಂತಹ ಒಂದು ಕಾರ್ಯಾದೇಶವನ್ನು ಬಾಧಿತ ಸರ್ಕಾರಿ ನೌಕರರು ನ್ಯಾಯಾಲಯದಲ್ಲಿ ಪ್ರಶ್ನಿಸಿದರೆ ಇಂತಹ ಹೊಸ ಪಿಂಚಣಿ ಯೋಜನೆ ಊರ್ಜಿತವಾಗುವುದು ಕಷ್ಟ. 2006ರ ನಂತರ ರಾಜ್ಯ ಸರ್ಕಾರಿ ಕೆಲಸಕ್ಕೆ ಸೇರಿದ ನೌಕರರು ತಮ್ಮ ಹಿರಿಯ ಸಹೋದ್ಯೋಗಿಗಳಿಗಿಂತ ಶೇ.10ರಷ್ಟು ಕಡಿಮೆ ವೇತನವನ್ನು ಈ ಕಠಾವಿನಿಂದಾಗಿ ಪಡೆಯುವ ಅವಕಾಶವಾಗಿದೆ.

(ಮುಂದುವರೆಯುವುದು…..)

***

ನಿವೃತ್ತಿ ವೇತನಗಳ ವೈವಿಧ್ಯ

27.12.2017,

ವಿಜಯವಾಣಿ.
| ಲ. ರಾಘವೇಂದ್ರ

ಸರ್ಕಾರಿ ನೌಕರ ಸೇವೆಯಿಂದ ನಿವೃತ್ತನಾಗಲು ಇರುವ ಸಂದರ್ಭಗಳು ಅನೇಕ. ನಿವೃತ್ತಿ ವೇತನ ಸೌಲಭ್ಯಗಳು ದಿನಾಂಕ 31.3.2006ಕ್ಕೆ ಮೊದಲು ಸೇವೆಗೆ ಸೇರಿದ ನೌಕರರಿಗೆ ಮಾತ್ರ ಅನ್ವಯವಾಗುತ್ತದೆ. ದಿನಾಂಕ 1-4-2006ರಿಂದ ಸರ್ಕಾರಿ ಸೇವೆಗೆ ಸೇರಿದವರಿಗೆ ನೂತನ ಪಿಂಚಣಿ ಯೋಜನೆ ಅನ್ವಯವಾಗುತ್ತವೆ.

ಪರಿಹಾರ ನಿವೃತ್ತಿ ವೇತನ: ಕಾಯಂ ನೌಕರಿಯಲ್ಲಿರುವ ಸರ್ಕಾರಿ ನೌಕರನು, ಹುದ್ದೆಯು ರದ್ದಾಗಿ ಸೇವೆಯಿಂದ ಬಿಡುಗಡೆಯಾದಾಗ ಮತ್ತು ಸರಿಸಮನಾದ ಹುದ್ದೆ ಕೊಡಲಾಗದಿದ್ದಾಗ ಪರಿಹಾರ ನಿವೃತ್ತಿ ವೇತನ ಕೊಡಲಾಗುತ್ತದೆ. (ನಿಯಮ 259 ರಿಂದ 272)

ಅಶಕ್ತತಾ ನಿವೃತ್ತಿ ವೇತನ: ಸರ್ಕಾರಿ ನೌಕರನು ದೈಹಿಕವಾಗಿ ಅಥವಾ ಮಾನಸಿಕವಾಗಿ ಕಾಯಂ ಆಗಿ ಸೇವೆಗೆ ಅಶಕ್ತನೆಂದು ವೈದ್ಯಕೀಯ ಪ್ರಾಧಿಕಾರ ಘೊಷಿಸಿದರೆ ಅಂಥಹವರಿಗೆ ನಿವೃತ್ತಿ ವೇತನ ಕೊಡಲಾಗುತ್ತದೆ.(ನಿಯಮ 273 ರಿಂದ 283ಎ)

ವಯೋನಿವೃತ್ತಿ ವೇತನ: ನಿಯಮ 95ರ ಮೇರೆಗೆ ನಿರ್ದಿಷ್ಟ ವಯಸ್ಸು 60 ವರ್ಷ ತಲುಪಿದ ಕೊನೆಯ ದಿನ ನಿವೃತ್ತಿ ಹೊಂದುತ್ತಾರೆ.(ನಿಯಮ 283) ಆದರೆ ಸರ್ಕಾರಿ ನೌಕರನ ಜನ್ಮದಿನ 1ನೇ ತಾರೀಖು ಆಗಿದ್ದರೆ, ಹಿಂದಿನ ತಿಂಗಳ ಕಡೆಯ ಕೆಲಸದ ದಿನದಂದು ನಿವೃತ್ತಿ ಹೊಂದುತ್ತಾರೆ.

ವಿಶ್ರಾಂತಿ ನಿವೃತ್ತಿ ವೇತನ: ಸ್ವಇಚ್ಛಾ ನಿವೃತ್ತಿ ವೇತನ: (ನಿಯಮ 285(1)(ಎ), 285(2)15 ವರ್ಷಗಳಿಗೆ ಕಡಿಮೆ ಇಲ್ಲದ ಅರ್ಹತಾದಾಯಕ ಸೇವೆ ಪೂರ್ಣಗೊಳಿಸಿದ ನಂತರದ ಅವಧಿಯಲ್ಲಿ ಸ್ವಇಚ್ಛೆಯಿಂದ ನಿವೃತ್ತಿಯ ಅವಕಾಶ. ಕನಿಷ್ಠ 3 ತಿಂಗಳ ಮೊದಲು ನೋಟಿಸ್ ಅನ್ನು ನೇಮಕಾತಿ ಪ್ರಾಧಿಕಾರಕ್ಕೆ ಬರಹದಲ್ಲಿ ಕೊಡಬೇಕು. ನಿವೃತ್ತಿ ಹೊಂದುವ ನೌಕರನಿಗೆ ನಿವೃತ್ತಿ ವೇತನ, ಉಪದಾನ ನೀಡುವಾಗ ಅವನು ವಾಸ್ತವವಾಗಿ ಸಲ್ಲಿಸಿದ ಸೇವೆಯ ಜತೆಗೆ 5 ವರ್ಷಗಳವರೆಗೆ ಅಧಿಕ್ಯ ನೀಡತಕ್ಕದ್ದು. ಆದಾಗ್ಯೂ ಹಾಗೆ ನೀಡಿದ ಅಧಿಕ್ಯವೂ ಸೇರಿದ ನಂತರ ಒಟ್ಟು ಅರ್ಹತಾದಾಯಕ ಸೇವೆಯು ಅವನು ನಿವೃತ್ತಿ ವಯಸ್ಸನ್ನು ಹೊಂದಿ ನಿವೃತ್ತನಾದರೆ ಅವನಿಗೆ ಸಿಗುತ್ತಿದ್ದ ಅರ್ಹತಾದಾಯಕ ಸೇವೆಗಿಂತ ಹೆಚ್ಚಾಗತಕ್ಕದ್ದಲ್ಲ.(ಗರಿಷ್ಠ ಅರ್ಹತಾದಾಯಕ ಸೇವೆ 33 ವರ್ಷ) ಈ ಅಧಿಕ್ಯವು ಅರ್ಹತಾದಾಯಕ ಸೇವೆಗೆ ಸೇರಿಸುವ ಹೆಚ್ಚಳ ಮಾತ್ರ ಆಗಿದೆಯೇ ಹೊರತು, ಯಾವುದೇ ಕಾಲ್ಪನಿಕ ವೇತನದ ನಿಗದಿಗೆ ಹಕ್ಕು ಕೊಡತಕ್ಕದ್ದಲ್ಲ. ನೇಮಕಾತಿ ಪ್ರಾಧಿಕಾರವು, ಯಥೋಚಿತವಾಗಿ ಅಂಗೀಕರಿಸಿದ ಹೊರತು ಸರ್ಕಾರಿ ನೌಕರನು ನೋಟಿಸ್ ನೀಡಿದಾಕ್ಷಣ ಜಾರಿಗೆ ಬರುವುದಿಲ್ಲ. ಸ್ವಇಚ್ಛಾ ನಿವೃತ್ತಿ ನೋಟೀಸನ್ನು ನೇಮಕಾತಿ ಪ್ರಾಧಿಕಾರ ಅಂಗೀಕರಿಸುವ ಮೊದಲು, ಸರ್ಕಾರಿ ನೌಕರನು ನೇಮಕಾತಿ ಪ್ರಾಧಿಕಾರದ ಅನುಮೋದನೆ ಪಡೆದು ಹಿಂತೆಗೆದುಕೊಳ್ಳಬಹುದು. ಸರ್ಕಾರಿ ನೌಕರನ ವಿರುದ್ಧ ಸಿ.ಸಿ.ಎ. ನಿಯಮಗಳಡಿ ಕಠಿಣ ದಂಡನೆಗಳು ವಿಧಿಸಬಹುದಾದಂತಹ ಇಲಾಖಾ ವಿಚಾರಣೆಗಳು ಮತ್ತು ನ್ಯಾಯಾಂಗ ವಿಚಾರಣೆಗಳು ಯಾವುದಾದರೂ ಬಾಕಿ ಇರುವಾಗ, ಅಂತಹ ಸರ್ಕಾರಿ ನೌಕರನಿಗೆ ಸ್ವಇಚ್ಛಾ ನಿವೃತ್ತಿಗೆ ಮಂಜೂರಾತಿ ನೀಡಲು ಅವಕಾಶವಿಲ್ಲ. 15 ವರ್ಷ ಅರ್ಹತಾದಾಯಕಸೇವೆ ನಿರ್ವಹಿಸಿದ್ದಾನೆ ಎಂಬ ವಾಸ್ತವಾಂಶವನ್ನು ಮಹಾಲೇಖಪಾಲರೊಂದಿಗೆ ಸಮಾಲೋಚಿಸಿ ಪರಿಶೀಲಿಸಿದ ನಂತರ ನೇಮಕ ಪ್ರಾಧಿಕಾರ ಮಂಜೂರಾತಿ ನೀಡತಕ್ಕದ್ದು.

(ಬಿ) ಸ್ವಇಚ್ಛಾ ನಿವೃತ್ತಿ ವೇತನ: (ನಿಯಮ 285(1) (ಬಿ) ಮತ್ತು 285(3):

50 ವರ್ಷ ವಯಸ್ಸನ್ನು ಹೊಂದಿದ ತರುವಾಯದ ಯಾವುದೇ ಅವಧಿಯಲ್ಲಿ ವಿಶ್ರಾಂತಿ ಪಡೆಯಲು ಅನುಮತಿ ಪಡೆದವರು

ಕನಿಷ್ಠ ಪಕ್ಷ 3ತಿಂಗಳ ಮೊದಲು ನೋಟಿಸನ್ನು ಲಿಖಿತದಲ್ಲಿ ನೇಮಕಾತಿ ಕೊಡಬೇಕು.

ಯಾವುದೇ ಅರ್ಹತಾದಾಯಕ ಸೇವೆಗೆ ಅಧಿಕ್ಯ ನೀಡಲು ಅವಕಾಶವಿಲ್ಲ.

ನೇಮಕಾತಿ ಪ್ರಾಧಿಕಾರದ ಅಂಗೀಕಾರದೊಂದಿಗೆ ಮಾತ್ರ ಜಾರಿಗೆ ಬರುತ್ತದೆ.

ನ್ಯಾಯಾಂಗ ವಿಚಾರಣೆ ಬಾಕಿ ಇರುವಾಗ ಅನುಮತಿಗೆ ಅವಕಾಶವಿಲ್ಲ

ಕನಿಷ್ಠ ಅರ್ಹತಾದಾಯಕ ಸೇವೆಯ ಪರಿಗಣನೆ ಅವಶ್ಯಕವಿಲ್ಲ. ಆದರೆ ಪಿಂಚಣಿ ಲಭ್ಯವಾಗಲು ಹತ್ತು ವರ್ಷ ಅಗತ್ಯ.

***

ಸರ್ಕಾರಿ ನೌಕರರ ಮರಣ ಉಪದಾನದ ನಿಯಮಗಳು

Wednesday, 20.12.2017.
| ಲ. ರಾಘವೇಂದ್ರ

ಸರ್ಕಾರಿ ನೌಕರ ಸೇವೆಯಲ್ಲಿರುವಾಗಲೇ ನಿಧನ ಹೊಂದಿದರೆ ಮಾತ್ರ ಈ ಮರಣ ಉಪದಾನ ಸಂದಾಯ ಮಾಡಲಾಗುತ್ತದೆ. ಸರ್ಕಾರಿ ನೌಕರ ಸೇವೆಯಲ್ಲಿರುವಾಗಲೇ ಮೃತನಾದಾಗ ಒಂದು ವರ್ಷಕ್ಕಿಂತ ಕಡಿಮೆ ಸೇವಾವಧಿ ಸಲ್ಲಿಸಿದ್ದರೆ ಅವನ ಉಪಲಬ್ಧಿಗಳ 2ರಷ್ಟು ಉಪದಾನ ಲಭ್ಯವಾಗುತ್ತದೆ. ಒಂದು ವರ್ಷಕ್ಕಿಂತ ಹೆಚ್ಚು ಆದರೆ 5 ವರ್ಷಕ್ಕಿಂತ ಕಡಿಮೆ ಅವಧಿ ಸೇವೆ ಸಲ್ಲಿಸಿದ್ದರೆ ಉಪಲಬ್ಧಿಗಳ 6ರಷ್ಟು ಲಭ್ಯವಾಗುತ್ತದೆ. 5 ವರ್ಷಕ್ಕಿಂತ ಹೆಚ್ಚು ಆದರೆ 20 ವರ್ಷಕ್ಕಿಂತ ಕಡಿಮೆ ಸೇವೆ ಸಲ್ಲಿಸಿದ್ದರೆ 12ರಷ್ಟು ಉಪಲಬ್ಧಿಗಳ ಉಪದಾನ ಲಭ್ಯವಾಗುತ್ತದೆ. 20 ವರ್ಷಕ್ಕಿಂತ ಹೆಚ್ಚು ಅರ್ಹತಾದಾಯಕ ಸೇವೆ ಸಲ್ಲಿಸಿದ್ದರೆ ಪ್ರತಿವರ್ಷದ ಉಪಲಬ್ಧಿಯ ಅರ್ಧದಷ್ಟು ಅಥವಾ ಗರಿಷ್ಠ 10 ಲಕ್ಷದಷ್ಟು ಉಪದಾನ ಲಭ್ಯವಾಗುತ್ತದೆ.(ನಿಯಮ 292ಎಎ)

ಈ ಮರಣ ಉಪದಾನಕ್ಕೆ ಸಂಬಂಧಿಸಿದಂತೆ ಕುಟುಂಬ ಎನ್ನುವುದರಲ್ಲಿ ಪತಿ, ಸಂದರ್ಭಾನುಸಾರ ಪತ್ನಿ, ಗಂಡು ಮಕ್ಕಳು, ಅವಿವಾಹಿತ, ವಿಧವೆಯರಾದ ಹೆಣ್ಣುಮಕ್ಕಳು, 18 ವರ್ಷದೊಳಗಿನ ಸಹೋದರರು, ತಂದೆ, ತಾಯಿ ಮೃತನಾದ ಸರ್ಕಾರಿ ನೌಕರನ ಮಗನ ಮಕ್ಕಳು ಒಳಗೊಳ್ಳುತ್ತಾರೆ. (ನಿಯಮ 302) ಸರ್ಕಾರಿ ನೌಕರನು ಸರ್ಕಾರಿ ಸೇವೆಗೆ ಸೇರಿದ ಕೂಡಲೇ ಮಂಜೂರು ಮಾಡಬಹುದಾದ ಯಾವುದೇ ಉಪದಾನ ಸ್ವೀಕರಿಸುವ ಅಧಿಕಾರವನ್ನು ಒಬ್ಬನಿಗೆ ಅಥವಾ ಹೆಚ್ಚು ಜನರಿಗೆ ಪ್ರದಾನ ಮಾಡುವ ನಾಮನಿರ್ದೇಶನ ಮಾಡಬಹುದು(ನಿಯಮ 302 ಟಿಪ್ಪಣಿ ಜಿಜಿ)

ಪ್ರತಿಯೊಬ್ಬ ಸರ್ಕಾರಿ ನೌಕರನು ನಾಮನಿರ್ದೇಶನ ಮಾಡಲು ನಮೂನೆ 2ರಿಂದ 5ರವರೆಗಿನ ಪೈಕಿ ಒಂದು ನಮೂನೆ ಬಳಸಬೇಕು. ಸರ್ಕಾರಿ ನೌಕರನು ಯಾವುದೇ ಕಾಲದಲ್ಲಾಗಲಿ ತಾನು ಹಿಂದೆ ಮಾಡಿದ ನಾಮ ನಿರ್ದೇಶನ ರದ್ದು ಮಾಡಿ ಹೊಸ ನಾಮನಿರ್ದೇಶನ ಮಾಡಬಹುದು(ನಿಯಮ 302, ಟಿಪ್ಪಣಿ 6)

ಸರ್ಕಾರಿ ನೌಕರನು ತಾನು ಮದುವೆಯ ಮುಂಚಿತವಾಗಿ ಮಾಡಿದ ನಾಮ ನಿರ್ದೇಶನವು ಆತನ ಮದುವೆ ನಂತರ ತಾನೇ ತಾನಾಗಿ ಅನೂರ್ಜಿತಗೊಳ್ಳುವುದು ಮತ್ತು ನಾಮನಿರ್ದೇಶನವು ಪತ್ನಿ ಅಥವಾ ಪತಿಯ ಹೆಸರಿನಲ್ಲಿ ಆಗಿದೆಯೆಂದು ಭಾವಿಸಲಾಗುತ್ತದೆ.(ನಿಯಮ 302, ಟಿಪ್ಪಣಿ 5)

ಸರ್ಕಾರಿ ನೌಕರನು ತನ್ನ ನಿವೃತ್ತಿಗೆ ಮೊದಲೇ ನಾಮ ನಿರ್ದೇಶನ ಮಾಡಲು ತಪ್ಪಿದ್ದಲ್ಲಿ ಉಪದಾನ ಸ್ವೀಕರಿಸುವುದಕ್ಕಿಂತ ಮುಂಚೆ ಅವನು ನಿಧನ ಹೊಂದಿದರೆ ಅವನ ಕುಟುಂಬದ ಉತ್ತರ ಜೀವಿತ ಅಧಿಕಾರಿ ಪ್ರಮಾಣಪತ್ರ ಪಡೆದು ಜೀವಂತ ಸದಸ್ಯರಿಗೆ ಸಂದಾಯ ಮಾಡಲಾಗುತ್ತದೆ.(ನಿಯಮ 302, ಟಿಪ್ಪಣಿ 10)

***

ವೇತನ ನಿಗದೀಕರಣದ ನಿಯಮಗಳು

Wednesday, 06.12.2017.
| ಲ. ರಾಘವೇಂದ್ರ.

ಸರ್ಕಾರಿ ನೌಕರನು ಒಂದು ಹುದ್ದೆಯಿಂದ ನೇಮಕಾತಿ ಹೊಂದಿದಾಗ ನಿಯಮಗಳಿಗನುಸಾರವಾಗಿ ಮತ್ತೊಂದು ಸರ್ಕಾರಿ ಹುದ್ದೆಗೆ ನೇಮಕ ಹೊಂದಿದಾಗ ವೇತನ ನಿಗದಿ (ಕರ್ನಾಟಕ ಸರ್ಕಾರಿ ಸೇವಾ ನಿಯಮ 41-ಎ) ಮಾಡಲಾಗುತ್ತದೆ. ಅದರ ವಿವರ ಇಲ್ಲಿದೆ.

1. ಸದೃಶ ವೇತನ ಶ್ರೇಣಿಯ ಹುದ್ದೆಗೆ ನೇಮಕಾತಿ: ಸರ್ಕಾರಿ ನೌಕರನು ನೇಮಕ ಹೊಂದಿದ ಹುದ್ದೆಯ ವೇತನ ಶ್ರೇಣಿಯು ಈ ಮೊದಲು ಅವನು ಹೊಂದಿದ್ದ ಹುದ್ದೆಯ ವೇತನ ಶ್ರೇಣಿಯಂಥದೇ ಆಗಿರುವಲ್ಲಿ, ಹಾಗೆ ನೇಮಕವಾದಾಗ ಆತನ ವೇತನವನ್ನು ಅವನು ಈ ಮೊದಲು ಹೊಂದಿದ್ದ ಹುದ್ದೆಯಲ್ಲಿ ಪಡೆದ ವೇತನಕ್ಕೆ ಸಮನಾದ ಹಂತದಲ್ಲಿ ನಿಗದಿಪಡಿಸಬೇಕು.

2. ಹೊಸ ಹುದ್ದೆಯಲ್ಲಿ ಮುಂದಿನ ವಾರ್ಷಿಕ ಬಡ್ತಿಯು ಹಿಂದಿನ ಹುದ್ದೆಯಲ್ಲಿ ಮುಂದುವರಿದಿದ್ದರೆ ಆ ಹುದ್ದೆಯಲ್ಲಿ ಯಾವ ದಿನಾಂಕದಂದು ಪ್ರಾಪ್ತವಾಗುತ್ತಿತ್ತೋ ಆ ದಿನಾಂಕದಂದೇ ಕೊಡತಕ್ಕದ್ದು.

3. ಉನ್ನತ ವೇತನ ಶ್ರೇಣಿಯ ಹುದ್ದೆಯಿಂದ ಕೆಳಗಿನ ವೇತನ ಶ್ರೇಣಿಗೆ ನೇಮಕಾತಿ: ಸರ್ಕಾರಿ ನೌಕರನು ನೇಮಕ ಹೊಂದಿದ ಹುದ್ದೆಯು ವೇತನ ಶ್ರೇಣಿಯು ಅವನು ಹಿಂದೆ ಹೊಂದಿದ್ದ ಹುದ್ದೆಯು ವೇತನ ಶ್ರೇಣಿಗಿಂತ ಕಡಿಮೆಯಾಗಿರುವಲ್ಲಿ, ಹಿಂದಿನ ಹುದ್ದೆಗೆ ನೇಮಕವಾದ ದಿನಾಂಕದಿಂದ, ಅವನು ನೇಮಕವಾದ ಹೊಸ ಹುದ್ದೆಯ ವೇತನ ಶ್ರೇಣಿಯಲ್ಲಿ ಅವನು ತಲುಪಬಹುದಾಗಿದ್ದ ವೇತನ ಹಂತಕ್ಕೆ ಸಮನಾದ ಹಂತವನ್ನು ಕಾಲ್ಪನಿಕವಾಗಿ ನಿಗದಿಪಡಿಸಿ, ಆ ವೇತನ ನೀಡಬೇಕು.

4. ಹೊಸ ಹುದ್ದೆಯಲ್ಲಿ ಮುಂದಿನ ವಾರ್ಷಿಕ ಬಡ್ತಿಯು, ಹಿಂದಿನ ಹುದ್ದೆಯಲ್ಲಿ ಮುಂದುವರಿದಿದ್ದರೆ ಆ ಹುದ್ದೆಯಲ್ಲಿ ಯಾವ ದಿನಾಂಕದಂದು ಪ್ರಾಪ್ತವಾಗುತ್ತಿತ್ತೋ ಆ ದಿನಾಂಕದಂದೇ ನೀಡಬೇಕು.

5. ಹೆಚ್ಚಿನ ವೇತನ ಶ್ರೇಣಿಯ ಹುದ್ದೆಗೆ ನೇಮಕಾತಿ: ಹೊಸ ಹುದ್ದೆಯ ವೇತನ ಶ್ರೇಣಿಯ ಕನಿಷ್ಠ ವೇತನವು ಹಿಂದಿನ ಹುದ್ದೆಯ ವೇತನ ಶ್ರೇಣಿಯಲ್ಲಿ ಪಡೆಯುತ್ತಿದ್ದ ವೇತನಕ್ಕಿಂತ ಹೆಚ್ಚಾಗಿದ್ದರೆ, ಹೊಸ ಹುದ್ದೆಯ ಕನಿಷ್ಠ ಹಂತದಲ್ಲಿ ವೇತನ ನಿಗದಿಪಡಿಸುವುದು.

6. ಹೊಸ ಹುದ್ದೆಯಲ್ಲಿ ನೇಮಕಾತಿ ಆದ ದಿನಾಂಕದಿಂದ ಮಾತ್ರ ಮುಂದಿನ ವಾರ್ಷಿಕ ಬಡ್ತಿಯ ದಿನಾಂಕ ಪರಿಗಣಿಸಲಾಗುವುದು.

1. ಪದೋನ್ನತಿಯ ಸಂದರ್ಭದಲ್ಲಿ ವೇತನ ನಿಗದಿ (ಕರ್ನಾಟಕ ಸರ್ಕಾರಿ ಸೇವಾ ನಿಯಮ 42ಬಿ):

ಈ ಕೆಳಕಂಡ ಸಂದರ್ಭಗಳಲ್ಲಿ ಪದೋನ್ನತಿಯ ವೇತನ ನಿಗದಿಪಡಿಸಬೇಕಾಗುತ್ತದೆ.

ಉನ್ನತ ಹುದ್ದೆಗೆ ನೇಮಕಾತಿ
ಕಾಲಮಿತಿ ವೇತನ ಮುಂಬಡ್ತಿ
ಹಿರಿಯ ವೇತನ ಶ್ರೇಣಿಗೆ ಸ್ವಯಂಚಾಲಿತ ಮುಂಬಡ್ತಿ
2. ಜಿ) ಸರ್ಕಾರಿ ನೌಕರನು ಒಂದು ಹುದ್ದೆಗೆ ಪದೋನ್ನತಿ ಪಡೆದು, ಆತನು ಆ ಹುದ್ದೆಯ ಕರ್ತವ್ಯಗಳನ್ನು ವಹಿಸಿಕೊಂಡ ದಿನಾಂಕದಿಂದ, ಈ ಕೆಳಗಿನ ಹುದ್ದೆಯ ಕಾಲಿಕ ವೇತನ ಶ್ರೇಣಿಯಲ್ಲಿನ ವೇತನದ ಆ ಮುಂದಿನ ಹಂತಕ್ಕೆ ವೇತನ ನಿಗದಿಪಡಿಸಬೇಕು.

ಜಿಜಿ) ಪದೋನ್ನತಿ ಹೊಂದಿದ ಹುದ್ದೆಯ ವೇತನ ಶ್ರೇಣಿಯ ಕನಿಷ್ಠ ಹಂತವು, ಈ ರೀತಿ ನಿಗದಿಪಡಿಸಬೇಕಾದ ವೇತನದ ಹಂತಕ್ಕಿಂತ ಹೆಚ್ಚಾಗಿದ್ದರೆ, ಪದೋನ್ನತಿ ಹುದ್ದೆಯ ವೇತನ ಶ್ರೇಣಿಯ ಕನಿಷ್ಠ ಹಂತದಲ್ಲಿ ವೇತನ ನಿಗದಿಪಡಿಸಬೇಕು.

ಜಿಜಿಜಿ) ಪದೋನ್ನತಿ ಹೊಂದಿದ ಹುದ್ದೆಯ ವೇತನ ಶ್ರೇಣಿಯ ಗರಿಷ್ಠ ಹಂತವು, ಈ ರೀತಿ ನಿಗದಿಪಡಿಸಬೇಕಾದ ವೇತನಕ್ಕಿಂತ ಕಡಿಮೆ ಇದ್ದಲ್ಲಿ, ಪದೋನ್ನತಿ ಹುದ್ದೆಯ ವೇತನ ಶ್ರೇಣಿಯ ಗರಿಷ್ಠ ಹಂತಕ್ಕೆ ನಿಗದಿಪಡಿಸಬೇಕು.

3. ವೇತನ ಪುನರ್ನಿಗದಿ (ಕರ್ನಾಟಕ ಸರ್ಕಾರಿ ಸೇವಾ ನಿಯಮ 42ಬಿ (2)

ಜಿ) ಪದೋನ್ನತಿ ಪಡೆದ ವೇತನ, ಆತನ ಹಿಂದಿನ ಹುದ್ದೆಯಲ್ಲಿನ ವಾರ್ಷಿಕ ವೇತನ ಬಡ್ತಿಯ ದಿನದಂದು, ವೇತನ ಪುನರ್ನಿಗದಿ ಮಾಡಬೇಕಾಗುತ್ತದೆ.

ಜಿಜಿ) ಆತನು ಪದೋನ್ನತಿ ಪಡೆಯದೆ ಹಳೆ ಹುದ್ದೆಯಲ್ಲಿಯೇ ಮುಂದುವರಿದಿದ್ದರೆ ಕೆಳಗಿನ ಹುದ್ದೆಯಲ್ಲಿ ವಾರ್ಷಿಕ ಬಡ್ತಿ ದಿನಾಂಕದಂದು ಪಡೆಯಬಹುದಾಗಿದ್ದ ವೇತನ ನಿಗದಿಪಡಿಸಿ, ವಾರ್ಷಿಕ ಬಡ್ತಿ ದಿನಾಂಕದಂದು ಪದೋನ್ನತಿ ಹೊಂದಿದ್ದರೆ ಹೊಸ ಹುದ್ದೆಯಲ್ಲಿ ನಿಗದಿಪಡಿಸಬಹುದಾದ ವೇತನ ಹಂತದಲ್ಲಿ ಪುನರ್ನಿಗದಿ ಮಾಡುವುದು.

ಜಿಜಿಜಿ) ಪುನರ್ನಿಗದಿಯಿಂದ, ಆತನಿಗೆ ಆರ್ಥಿಕ ಸೌಲಭ್ಯವಾಗುವಂತಿದ್ದರೆ, ಹಳೆಯ ಹುದ್ದೆಯಲ್ಲಿನ ವಾರ್ಷಿಕ ವೇತನ ಬಡ್ತಿ ದಿನಾಂಕವೇ ಅವನ ಮುಂದಿನ ವಾರ್ಷಿಕ ಬಡ್ತಿಗೆ ಪರಿಗಣಿಸತಕ್ಕದ್ದು. ಅಂದರೆ ವಾರ್ಷಿಕ ಬಡ್ತಿಯ ದಿನಾಂಕದ ಬದಲಾವಣೆ ಇರುವುದಿಲ್ಲ.

ಪುನರ್ ನಿಗದಿಯಿಂದ, ಆತನಿಗೆ, ಆರ್ಥಿಕ ಸೌಲಭ್ಯವಾಗಿಲ್ಲವಾದರೆ – ಆತನು ಪದೋನ್ನತಿ ಪಡೆದ ದಿನಾಂಕದಿಂದ ಒಂದು ವರ್ಷದ ನಂತರ ವಾರ್ಷಿಕ ವೇತನ ಬಡ್ತಿ ಮಂಜೂರು ಮಾಡತಕ್ಕದ್ದು ಹಾಗೂ ಅನಂತರ ವಾರ್ಷಿಕ ಬಡ್ತಿಯ ದಿನಾಂಕ ಆ ದಿನಕ್ಕೆ ಬದಲಾವಣೆ ಆಗಿರುತ್ತದೆ.

4. ಬಡ್ತಿ ವೇಳೆ ವೇತನ ನಿಗದಿ ಬಗ್ಗೆ ಇಚ್ಛೆ ವ್ಯಕ್ತಪಡಿಸುವ ಸಂದರ್ಭಗಳು:

ಉನ್ನತ ಹುದ್ದೆಗೆ ಪದೋನ್ನತಿ ಹೊಂದಿದಾಗ ಪದೋನ್ನತಿ ಹುದ್ದೆಯಲ್ಲಿ ವೇತನ ನಿಗದಿ ಸಲುವಾಗಿ, ತನ್ನ ಸ್ವಇಚ್ಛೆಯಿಂದ ಮುಂದಿನ ವೇತನ ಬಡ್ತಿ ದಿನಾಂಕದವರೆಗೆ ಕೆಳಗಿನ ಹುದ್ದೆಯ ವೇತನ ಶ್ರೇಣಿಯಲ್ಲಿ ಮುಂದುವರಿದು, ನಂತರ ಪದೋನ್ನತಿ ಹುದ್ದೆಯಲ್ಲಿ ವೇತನ ನಿಗದಿಪಡಿಸಿಕೊಳ್ಳಲು ಸಾಮಾನ್ಯ ಸಂದರ್ಭದಲ್ಲಿ ಅವಕಾಶವಿರುವುದಿಲ್ಲ. ಈ ರೀತಿ ಮುಂದುವರಿಯುವುದರಿಂದ ಯಾವುದೇ ವೇತನ ಹೆಚ್ಚುವರಿಯ ಸೌಲಭ್ಯ ಉಂಟಾಗುವ ಸಂಭವವಿರುವುದಿಲ್ಲ. ಆದರೆ ಕೆಳಗಿನ ಪ್ರಕರಣಗಳಲ್ಲಿ ಸರ್ಕಾರಿ ನೌಕರನು ಪದೋನ್ನತಿ ಪಡೆದಾಗ್ಯೂ ವೇತನ ಬಡ್ತಿ ಗಳಿಸುವವರೆಗೂ ಕೆಳದರ್ಜೆಯ ವೇತನ ಶ್ರೇಣಿಯಲ್ಲಿಯೇ ಮುಂದುವರಿದು, ನಂತರ ಉನ್ನತ ಹುದ್ದೆಯ ವೇತನ ಶ್ರೇಣಿಯಲ್ಲಿ ವೇತನ ನಿಗದಿಪಡಿಸಿಕೊಳ್ಳಲು ನಿಗದಿತ ಅವಧಿಯೊಳಗೆ ಇಚ್ಛೆ ವ್ಯಕ್ತಪಡಿಸಬಹುದು.

(1) ಸ್ಥಗಿತ ವೇತನ ಬಡ್ತಿಯ ನಿರೀಕ್ಷೆ

(2) ಕಾಲಮಿತಿ ಮುಂಬಡ್ತಿ ಯೋಜನೆಯ ಸೌಲಭ್ಯದ ನಿರೀಕ್ಷೆ

(3) ಸ್ವಯಂಚಾಲಿತ ಮುಂಬಡ್ತಿ ಯೋಜನೆಯ ಸೌಲಭ್ಯದ ನಿರೀಕ್ಷೆ.

ಅಂಥಹ ಸಂದರ್ಭಗಳಲ್ಲಿ ಇಚ್ಛೆ ವ್ಯಕ್ತಪಡಿಸಿದ ದಿನಾಂಕದವರೆಗೆ ಹಳೆಯ ಕೆಳದರ್ಜೆಯ ಹುದ್ದೆಯ ವೇತನ ಶ್ರೇಣಿಯಲ್ಲಿ ಪಡೆಯುತ್ತಿದ್ದ ವೇತನ ಹಂತದಲ್ಲಿಯೇ ಮುಂದುವರಿದು, ಇಚ್ಛೆ ವ್ಯಕ್ತಪಡಿಸಿದ ದಿನಾಂಕದಂದು ಪಡೆಯುವ ಅರ್ಹವಾದ ವೇತನದ ನಿಗದಿಯನಂತರ ನಿಯಮ 42(ಬಿ)(1)ರನ್ವಯ ಪದೋನ್ನತಿಯ ವೇತನ ನಿಗದಿ ಸೌಲಭ್ಯ ಪಡೆಯಬಹುದು.

(ಮುಂದುವರಿಯುವುದು…..)

ಸರ್ಕಾರಿ ನೌಕರರ ಕುಟುಂಬ ನಿವೃತ್ತಿ ವೇತನ ನಿಯಮಗಳು

13.12.2017.
| ಲ ರಾಘವೇಂದ್ರ

ಕರ್ನಾಟಕ ಸರ್ಕಾರಿ ಸೇವಾ ನಿಯಮಾವಳಿಯ ಪರಿಶಿಷ್ಟ V1 ರಲ್ಲಿ ಕರ್ನಾಟಕ ಸರ್ಕಾರಿ ನೌಕರರ (ಕುಟುಂಬ ನಿವೃತ್ತಿ ವೇತನ )ನಿಯಮಗಳು 2002ನ್ನು ನೀಡಲಾಗಿದೆ. ಈ ನಿಯಮವು 1.4.1998ರಿಂದ 31.3.2006ರವರೆಗೆ ಸರ್ಕಾರಿ ಸೇವೆಗೆ ಸೇರಿದ ಸರ್ಕಾರಿ ನೌಕರರಿಗೆ ಅನ್ವಯವಾಗುತ್ತದೆ. ಈ ನಿಯಮದ ಸಂಕ್ಷಿಪ್ತ ವಿವರವನ್ನು ಕೆಳಗೆ ವಿವೇಚಿಸಲಾಗಿದೆ.

=ಕುಟುಂಬ ನಿವೃತ್ತಿ ವೇತನ ಮಂಜೂರಾತಿಯು ಸರ್ಕಾರಿ ನೌಕರನು ಸೇವೆಯಲ್ಲಿದ್ದಾಗ ಮೃತನಾದರೆ ಅವನ ಕುಟುಂಬಕ್ಕೆ ಅಥವಾ ಅವಲಂಬಿತರಿಗೆ ಮರಣ ಉಪದಾನ ಮತ್ತು ಈ ಕುಟುಂಬ ವೇತನವನ್ನು ಸಂದಾಯ ಮಾಡಲಾಗುವುದು. ಈ ಕುಟುಂಬ ನಿವೃತ್ತಿ ವೇತನ ಪಡೆಯಲು ಸರ್ಕಾರಿ ನೌಕರನು ಒಂದು ವರ್ಷಗಳ ಕಾಲ ಸೇವೆ ಸಲ್ಲಿಸಿರಬೇಕು. ಈ ಒಂದು ವರ್ಷದ ಸೇವೆಯಲ್ಲಿ ಅಮಾನತ್ತಿನ ಅವಧಿ, ಕರ್ತವ್ಯವಲ್ಲದ ಅವಧಿ ಹಾಗೂ ವೇತನ ರಹಿತ ರಜೆಯು ಒಳಗೊಳ್ಳುವುದಿಲ್ಲ.

ಕುಟುಂಬ ನಿವೃತ್ತಿ ವೇತನವನ್ನು ಒಬ್ಬ ಸರ್ಕಾರಿ ನೌಕರನು ಸೇವೆಯಲ್ಲಿದ್ದಾಗ ಮೃತನಾದಾಗ ಅಥವಾ ನಿವೃತ್ತಿ ನಂತರ ಮರಣ ಹೊಂದಿದಲ್ಲಿ ಮರಣದ ಅಥವಾ ನಿವೃತ್ತಿಯ ನಿಕಟ ಪೂರ್ವದಲ್ಲಿ ಪಡೆಯುತ್ತಿದ್ದ ಅಂತಿಮ ವೇತನದ ಶೇ. 30ರಷ್ಟು ಕುಟುಂಬ ನಿವೃತ್ತಿ ವೇತನವನ್ನು ಮಂಜೂರು ಮಾಡಲಾಗುತ್ತದೆ. (ನಿಯಮ 4)

ಏಳು ವರ್ಷಕ್ಕೆ ಕಡಿಮೆಯಿಲ್ಲದ ಅರ್ಹತಾದಾಯಕ ಸೇವೆ ಸಲ್ಲಿಸಿ ಸೇವೆಯಲ್ಲಿರುವಾಗಲೆ ಮರಣ ಹೊಂದಿದ ಸರ್ಕಾರಿ ನೌಕರನ ಕುಟುಂಬ ವೇತನವನ್ನು ಆತನು ಅಂತಿಮವಾಗಿ ಪಡೆಯುತ್ತಿದ್ದ ಉಪಲಬ್ಧಿಗಳ ಶೇ.50ರಷ್ಟು ಅಥವಾ ಸಾಮಾನ್ಯವಾಗಿ ದೊರೆಯುವ ಕುಟುಂಬ ವೇತನದ 2ರಷ್ಟಕ್ಕೆ ಸಮನಾದ ಹೆಚ್ಚಿಸಿದ ದರದಲ್ಲಿ ಯಾವುದು ಕಡಿಮೆಯೋ ಅಷ್ಟನ್ನು ಏಳು ವರ್ಷಗಳ ಅವಧಿಗಾಗಿ ಸಂದಾಯ ಮಾಡಲಾಗುವುದು. (ನಿಯಮ 5)

ತಂದೆ ತಾಯಿ ಇಬ್ಬರೂ ಸರ್ಕಾರಿ ನೌಕರರಾಗಿದ್ದು ಮೃತರಾದ ಸಂದರ್ಭದಲ್ಲಿ ಅಪ್ರಾಪ್ತ ಮಕ್ಕಳಿಗೆ 2 ಕುಟುಂಬ ವೇತನವನ್ನು ಪಾವತಿ ಮಾಡಬಹುದಾಗಿದ್ದು ಇದು ಗರಿಷ್ಠ ಮೊತ್ತ 23,990ಕ್ಕಿಂತ ಮೀರಬಾರದು (ನಿಯಮ 6) ಈ ನಿಯಮಗಳಲ್ಲಿ ಕುಟುಂಬ ಎಂಬ ಪದ ಅರ್ಥದಲ್ಲಿ ಸರ್ಕಾರಿ ನೌಕರನ ಪತ್ನಿ ಅಥವಾ ಸಂದರ್ಭಾನುಸಾರ ಪತಿ, 18 ವರ್ಷ ವಯಸ್ಸಿನವರೆಗಿನ ಅಪ್ರಾಪ್ತ ಗಂಡು ಮಕ್ಕಳು, 21 ವರ್ಷ ವಯಸ್ಸಿಗಿಂತ ಕಡಿಮೆಯ ಅವಿವಾಹಿತ ಅಪ್ರಾಪ್ತವಯಸ್ಸಿನ ಹೆಣ್ಣುಮಕ್ಕಳು ಒಳಗೊಳ್ಳುತ್ತಾರೆ. (ನಿಯಮ 8) ಆದರೆ ಸರ್ಕಾರಿ ನೌಕರನ ಮಗ ಅಥವಾ ಮಗಳು ಮಾನಸಿಕ ಅಸ್ವಸ್ಥತೆ ಅಥವಾ ದೈಹಿಕ ಅಂಗಹೀನತೆ ಹೊಂದಿದ್ದು ಜೀವನೋಪಾಯ ಮಾಡಲು ಅಸಮರ್ಥರಾಗಿದ್ದರೆ ಅಂತಹ ಮಗ/ ಮಗಳಿಗೆ ಅವರ ಜೀವಮಾನ ಪರ್ಯಂತ ಕುಟುಂಬ ನಿವೃತ್ತಿ ವೇತನವನ್ನು ಸಂದಾಯ ಮಾಡಲಾಗುತ್ತದೆ. (ನಿಯಮ 9(ಡಿ)) =ಸರ್ಕಾರಿ ನೌಕರನು ಸರ್ಕಾರದ ಅನುಮತಿಯನ್ನು ಪಡೆದು ಒಬ್ಬರಿಗಿಂತ ಹೆಚ್ಚು ಪತ್ನಿಯರನ್ನು ಹೊಂದಿದ್ದರೆ ಅವರಿಬ್ಬರಿಗೆ ಸಮಾನವಾಗಿ ಈ ಕುಟುಂಬ ನಿವೃತ್ತಿ ವೇತನವನ್ನು ಹಂಚಬೇಕು. (ನಿಯಮ 9 (ಇ)) =ಮಾನಸಿಕವಾಗಿ ಅಥವಾ ದೈಹಿಕವಾಗಿ ಅಂಗವಿಕಲತೆಯಿಂದ ಕೂಡಿದ ಹಾಗೂ ಜೀವನೋಪಾಯ ಮಾಡಲು ಅಸಮರ್ಥರಾದ ಗಂಡು ಮಕ್ಕಳಿಗೆ ಒಬ್ಬರಾದ ಮೇಲೆ ಒಬ್ಬರಂತೆ ಜೀವಮಾನ ಪರ್ಯಂತ ಸಂದಾಯ ಮಾಡಲಾಗುತ್ತದೆ (ನಿಯಮ 9) =ಸರ್ಕಾರಿ ನೌಕರನು ಅಥವಾ ನಿವೃತ್ತಿದಾರನು ಮರಣ ಹೊಂದಿದ ಸಂದರ್ಭದಲ್ಲಿ ಕರ್ನಾಟಕ ಸರ್ಕಾರಿ ಸೇವಾ ನಿಯಮಾವಳಿ ಮೇರೆಗೆ ಕುಟುಂಬ ನಿವೃತ್ತಿ ವೇತನ, ಉಪದಾನ ಪಡೆಯಲು ಅರ್ಹನಾಗಿದ್ದು ಅವರು ಕೊಲೆಯ ಅಪರಾಧ ಮಾಡಿದ ಅಥವಾ ಅಪರಾಧಕ್ಕೆ ದುಷ್ಪ್ರೇರಣೆ ನೀಡಿದ ದೋಷಾರೋಪಣೆ ಸಾಬೀತಾದಲ್ಲಿ ಅವನ ಕುಟುಂಬ ಈ ಉಪದಾನ ಪಡೆಯಲು ಅನರ್ಹರಾಗುತ್ತಾರೆ. (ನಿಯಮ 9(ಎಫ್ ) ಮತ್ತು ನಿಯಮ 292 ಸಿ)

***

ಬಡ್ತಿಗೆ ಅರ್ಹವಾಗುವ ಅವಧಿ:

29.11.2017.| ಲ. ರಾಘವೇಂದ್ರ

1.) ಒಂದು ಹುದ್ದೆಯಲ್ಲಿ ನಿರ್ವಹಿಸಿದ ಎಲ್ಲ ಕರ್ತವ್ಯವೂ ಕಾಲಿಕ ವೇತನ ಶ್ರೇಣಿಯಲ್ಲಿ ವೇತನ ಬಡ್ತಿ ಪಡೆಯಲು ಪರಿಗಣಿತವಾಗುವುದು.

2.) ವೇತನ ಬಡ್ತಿಗೆ ಪರಿಗಣಿತವಾಗುವ ಕರ್ತವ್ಯದ ಅವಧಿಯಲ್ಲಿ ಈ ಕೆಳಕಂಡವು ಒಳಗೊಳ್ಳುತ್ತದೆ. (ನಿಯಮ 53)

3.) ಒಂದು ಹುದ್ದೆಯಲ್ಲಿ ನಿರ್ವಹಿಸಿದ ಎಲ್ಲ ಕರ್ತವ್ಯದ ಅವಧಿ

4.) ವೇತನ ಸಹಿತ ಎಲ್ಲ ರೀತಿಯ ರಜೆಯ ಅವಧಿ

5.) ವೈದ್ಯಕೀಯ ಪ್ರಮಾಣ ಪತ್ರದ ಆಧಾರದ ಮೇಲೆ ಪಡೆದ ಅಸಾಧಾರಣ ರಜೆ (EOL)

6.) ಎಲ್ಲ ರೀತಿಯ ಸೇರಿಕೆ ಕಾಲದ ಅವಧಿ

7.) ತರಬೇತಿ ಅವಧಿಗಳು

8.) ಅನ್ಯ ಸೇವೆಯ ನಿಯೋಜನೆಯಲ್ಲಿ ಕಳೆದ ಅವಧಿ.

9.) ಸ್ಥಳ ನಿಯುಕ್ತಿ ಆದೇಶದ ಕಡ್ಡಾಯ (ನಿ8 (15-ಎಫ್)ನಿರೀಕ್ಷಣೆಯಲ್ಲಿ ಕಳೆದ ಅವಧಿ.

ವೇತನ ಬಡ್ತಿಗೆ ಕರ್ತವ್ಯವೆಂದು ಪರಿಗಣಿಸಲಾಗದ ಅವಧಿ

ಎ) ವಾರ್ಷಿಕ ವೇತನ ಬಡ್ತಿಯು ಒಂದು ವರ್ಷ ಸೇವೆ ಪೂರೈಸಿದ ಮರುದಿನ ಪ್ರಾಪ್ತವಾಗುವುದಾದರೂ ಈ ಒಂದು ವರ್ಷದ ಸೇವೆಯಲ್ಲಿ , ಈ ಕೆಳಕಂಡ ಅವಧಿಗಳು ವಾರ್ಷಿಕ ವೇತನ ಬಡ್ತಿಗೆ ಕರ್ತವ್ಯವೆಂದು ಪರಿಗಣಿಸಲಾಗುವುದಿಲ್ಲ.

1.) ವೈದ್ಯಕೀಯ ಉದ್ದೇಶಕ್ಕಾಗಿ ಹೊರತುಪಡಿಸಿ, ಇತರೆ ಉದ್ದೇಶಗಳಿಗಾಗಿ ಪಡೆದ ಅಸಾಧಾರಣ ರಜೆಯ ಅವಧಿ (ನಿಯಮ 53(ಬಿ)

2.) ಕರ್ತವ್ಯವಲ್ಲವೆಂದು ಪರಿಗಣಿಸಿ ಅಮಾನತ್ತು ಅವಧಿ (ನಿಯಮ 55)

3.) ಲೆಕ್ಕಕ್ಕಿಲ್ಲದ ಅವಧಿ (ಈಜಿಛಿಠಟ್ಞ) (ನಿಯಮ 8(14ಎ) ಮತ್ತು ನಿಯಮ 55ಎ)

(ಬಿ) ಸರ್ಕಾರಿ ನೌಕರನು ತನ್ನ ಹತೋಟಿಗೆ ಮೀರಿದ ಕಾರಣಗಳಿಂದ ವೈದ್ಯಕೀಯೇತರ ಅಸಾಧಾರಣ ರಜೆ ಪಡೆಯಬೇಕಾಯಿತೆಂದು, ಸರ್ಕಾರಕ್ಕೆ ಮನದಟ್ಟಾದರೆ ಸರ್ಕಾರದ ಪೂರ್ವಾನುಮತಿಯಿಂದ ರಜೆ ಪಡೆದಿದ್ದರೆ, ಆ ಅವಧಿಯನ್ನು ಸರ್ಕಾರವು ವೇತನ ಬಡ್ತಿಗೆ ಪರಿಗಣಿಸಲು ಆದೇಶ ಮಾಡಬಹುದು. (ನಿಯಮ 53(ಬಿ) (ಜಿಜಿ) ಪರಂತುಕ).

ಸಿ) ಹೆಚ್ಚಿನ ವ್ಯಾಸಂಗಕ್ಕಾಗಿ ಪಡೆದ ಅಸಾಧಾರಣ ರಜೆಯನ್ನು ಪದವಿ, ಸ್ನಾತಕೋತ್ತರ ಪದವಿ ಪಡೆಯಲು 2 ವರ್ಷದ ಅವಧಿ ಮತ್ತು ಪಿಎಚ್ಡಿ ಪಡೆಯಲು 3 ವರ್ಷಗಳ ಅವಧಿಯನ್ನು ಸರ್ಕಾರವು ವೇತನ ಬಡ್ತಿಯ ಗಣನೆಗೆ ಪರಿಗಣಿಸಿ ಆದೇಶ ಮಾಡಬಹುದು. (ನಿಯಮ 53 (ಬಿ) (ಜಿಜಿ) ಪರಂತುಕ ಮತ್ತು ಟಿಪ್ಪಣಿ -3.

ಡಿ) ವಾರ್ಷಿಕ ವೇತನ ಬಡ್ತಿಗೆ ಪರಿಗಣಿಸುವ ಆ ವರ್ಷದಲ್ಲಿ, ಮೇಲ್ಕಂಡಂತೆ ವೇತನ ಬಡ್ತಿಗೆ ಪರಿಗಣಿಸಲಾಗದ ಅವಧಿಗಳಿದ್ದಲ್ಲಿ, ಆ ಅವಧಿಯನ್ನು, ಯಥಾ ಪ್ರಕಾರ ಬರುವ ವೇತನ ಬಡ್ತಿ ದಿನಾಂಕಕ್ಕೆ ಕೂಡಿಸಿದ ನಂತರ ಬರುವ ಮುಂದಿನ ದಿನಾಂಕಕ್ಕೆ ಮುಂದೂಡಲಾಗುವುದು. (ನಿಯಮ 53(ಎ))

ಆದರೆ ಆ ಮುಂದೂಡಿದ ದಿನವು ತಿಂಗಳ ಮೊದಲ ದಿನಾಂಕವಲ್ಲದೆ, ಇತರ ದಿನವಾದಲ್ಲಿ, ಅದನ್ನು ಆ ತಿಂಗಳ ಮೊದಲ ದಿನಾಂಕವೇ ಮಂಜೂರು ಮಾಡಬೇಕು ಮತ್ತು ಈ ರೀತಿ ಹಿಂದೂಡಿದ ಬಗ್ಗೆ ಸೇವಾಪುಸ್ತಕ ಮತ್ತು ವೇತನ ಬಡ್ತಿ ಮಂಜೂರಿ ಫಾರಂ – 28ರಲ್ಲಿ ಟಿಪ್ಪಣಿ ಇಡಬೇಕು. (ಸರ್ಕಾರಿ ಆದೇಶ ಸಂಖ್ಯೆ : ಎಫ್ಡಿ 119 ಎಸ್ಆರ್ಎಸ್ : 74 : ದಿನಾಂಕ 23-10-1974)

8) ನಿಯಮ 106ಎ ಅನ್ವಯ ಅನಧಿಕೃತ ಗೈರು ಹಾಜರಿ ಅವಧಿ, ನಿಯಮ 162ರನ್ವಯ ರಜೆಯ ಅನಧಿಕೃತ ಮುಂದುವರಿದ ಅವಧಿ, ನಿಯಮ 88ರನ್ವಯ ಹೆಚ್ಚುವರಿಯಾಗಿ ಉಪಯೋಗಿಸಿ ಸೇರುವ ಕಾಲದ ಅವಧಿ – ಈ ಅವಧಿಗಳಿಗೆ ಅರ್ಧವೇತನ ರಜೆ ಖರ್ಚು ಹಾಕಿದ ನಂತರ (ಯಾವುದೇ ವೇತನ ಪ್ರಾಪ್ತಿ ಮಾಡದೇ) – ಈ ಅವಧಿಗಳನ್ನು ವಾರ್ಷಿಕ ವೇತನ ಬಡ್ತಿಗೆ ಸೇವೆಯೆಂದು ಪರಿಗಣಿಸಲಾಗುವುದು. (ನಿಯಮ 106-ಎ, ನಿಯಮ 53(ಬಿ) (ಟಿಪ್ಪಣಿ -4)

****

ವೇತನ ನಿಗದೀಕರಣದ ನಿಯಮಗಳು

22.11.2017.
| ಲ. ರಾಘವೇಂದ್ರ

ಒಂದು ಹುದ್ದೆಯ ವೃಂದದಲ್ಲಿ ಕಾರ್ಯನಿರ್ವಹಿಸುವ ಎಲ್ಲ ಸರ್ಕಾರಿ ನೌಕರಿಗೂ ಏಕರೀತಿಯ ವೇತನ ಲಭ್ಯವಾಗಲು ಅನುಕೂಲವಾಗುವಂತೆ ಪ್ರತಿ ಹುದ್ದೆಗೂ ಒಂದು ನಿಶ್ಚಿತ ವೇತನ ಶ್ರೇಣಿಯನ್ನು ರೂಪಿಸಲಾಗಿದೆ. ಒಂದು ಹುದ್ದೆಗೆ ಮೂಲತಃ ನೇಮಕವಾಗಿರುವ ಸರ್ಕಾರಿ ನೌಕರನು, ಈ ವೇತನ ಶ್ರೇಣಿಯಂತೆ ವೇತನ ಪಡೆಯಲು ಹಕ್ಕುಳ್ಳವನಾಗಿರುತ್ತಾನೆ. ಇದರ ಜತೆ ವಿವಿಧ ಭತ್ಯೆಗಳಾದ – ತುಟ್ಟಿ ಭತ್ಯೆ, ಮನೆ ಬಾಡಿಗೆ ಭತ್ಯೆ, ವೈದ್ಯಕೀಯ ಭತ್ಯೆ, ವಿಶೇಷ ಭತ್ಯೆ ಮುಂತಾದವು – ಪರಿಹಾರ ಭತ್ಯೆಗಳ ರೂಪದಲ್ಲಿ ಸರ್ಕಾರ ಮಂಜೂರು ಮಾಡಬಹುದಾದರೂ, ವೇತನ ಶ್ರೇಣಿಯನ್ವಯ ಪಡೆಯುವ ವೇತನ ಮಾತ್ರ ನಿಶ್ಚಿತ ಹಕ್ಕಿನದಾಗಿದ್ದು ಇದನ್ನು ಮೂಲವೇತನವೆಂದು ಕರೆಯಲಾಗುತ್ತದೆ. (ನಿಯಮ 8 (44).

ವೇತನ ಶ್ರೇಣಿಯು ಒಂದು ಕನಿಷ್ಠ ಮಟ್ಟದಿಂದ ಪ್ರಾರಂಭವಾಗಿ – ನಿಯತಕಾಲಿಕ (ವಾರ್ಷಿಕ) ವೇತನ ಬಡ್ತಿಗಳ ಮೂಲಕ ಹೆಚ್ಚಾಗುತ್ತಾ ಹೋಗಿ ಒಂದು ಗರಿಷ್ಠ ಹಂತದವರೆಗೆ ತಲುಪುವುದರಿಂದ ಇದಕ್ಕೆ ಕಾಲಿಕ ವೇತನ ಶ್ರೇಣಿ ಎಂದು ಕರೆಯಲಾಗುತ್ತದೆ. (ನಿಯಮ 8(48).

ಸರ್ಕಾರಿ ಹುದ್ದೆಗೆ ನೇಮಕಾತಿ ಆದಾಗ ಮತ್ತು ಆ ನಂತರ ಪದೋನ್ನತಿ (ಬಡ್ತಿ) ಪಡೆದಾಗ ವಿವಿಧ ಸಂದರ್ಭಗಳಲ್ಲಿ ವೇತನ ಶ್ರೇಣಿಯಲ್ಲಿ ವೇತನ ನಿಗದಿಗೊಳಿಸಬೇಕಾಗುವ ಸಂದರ್ಭಗಳು ಇರುತ್ತದೆ.

ಹೊಸ ನೇಮಕಾತಿಯಾದಾಗ

ಪ್ರಥಮ ನೇಮಕಾತಿಯೆಂದು ಹುದ್ದೆಗೆ ನಿಗದಿಪಡಿಸಿದ ವೇತನ ಶ್ರೇಣಿ ಕನಿಷ್ಠ ಹಂತದಲ್ಲಿ ನಿಗದಿ ಮಾಡಬೇಕಾಗುತ್ತದೆ. ಆದರೆ ವಿಶೇಷ ಸಂದರ್ಭಗಳಲ್ಲಿ ಅಭ್ಯರ್ಥಿಯ ಅರ್ಹತೆ, ಅನುಭವ ಪರಿಗಣಿಸಿ ನಿಯಮ 57ರಡಿಯಲ್ಲಿ ಮುಂಗಡ ವೇತನ ಬಡ್ತಿ ನೀಡಿ ವೇತನ ನಿಗದಿಪಡಿಸಲು, ಸರ್ಕಾರಕ್ಕೆ ಅಧಿಕಾರವಿರುತ್ತದೆ.

ವಾರ್ಷಿಕ ವೇತನ ಬಡ್ತಿ ((Increments): ಎ) ಸರ್ಕಾರಿ ನೌಕರನು ತಾನು ಹೊಂದಿದ ಹುದ್ದೆಗೆ ನಿಗದಿಪಡಿಸಿದ ವೇತನ ಶ್ರೇಣಿಯ ಕನಿಷ್ಠ ವೇತನ ಹಂತದಿಂದ ಗರಿಷ್ಠ ವೇತನ ಮಟ್ಟಕ್ಕೆ ಹಂತಹಂತವಾಗಿ ಏರುತ್ತಾ ಹೋಗಲು ಅವಕಾಶವಿದೆ. ಈ ವೇತನ ಏರಿಕೆಯನ್ನು ವಾರ್ಷಿಕ ವೇತನ ಬಡ್ತಿ ಎಂದು ಕರೆಯಲಾಗುತ್ತದೆ. ಉದ್ಯೋಗಿಯು ಒಂದು ವರ್ಷ ತೃಪ್ತಿಕರ ಸೇವೆಯನ್ನು ಪೂರ್ಣಗೊಳಿಸಿದ ಮುಂದಿನ ದಿನಾಂಕದಂದು ವಾರ್ಷಿಕ ವೇತನ ಬಡ್ತಿಯನ್ನು ಪಡೆಯಲು ಅರ್ಹನಿರುತ್ತಾನೆ. ಈ ವಾರ್ಷಿಕ ಬಡ್ತಿಯನ್ನು, ತಡೆಯಲು ಯಾವುದೇ ಆದೇಶವಿದ್ದ ಹೊರತು, ತಂತಾನೆ ಬಿಡುಗಡೆ ಮಾಡತಕ್ಕದ್ದು.

ಸಕ್ಷಮ ಅಧಿಕಾರಿಯು, ಉದ್ಯೋಗಿಯ ನಡತೆ ಸರಿಯಾಗಿಲ್ಲವೆಂದು ಅಥವಾ ಆತನ ಸೇವೆಯು ತೃಪ್ತಿಕರವಲ್ಲವೆಂದು ಭಾವಿಸಿ, ಸಿ ಸಿ ಎ ನಿಯಮಾವಳಿಗಳ ಪ್ರಕಾರ ಶಿಸ್ತು ಕ್ರಮ ಜರುಗಿಸಿ ದಂಡನೆಯ ರೂಪದಲ್ಲಿ ಆತನು ಮುಂದೆ ಗಳಿಸಬಹುದಾದ ವಾರ್ಷಿಕ ವೇತನ ಬಡ್ತಿಗಳನ್ನು ತಡೆ ಹಿಡಿಯಬಹುದು. (ನಿಯಮ 51(ಜಿ))

ಬಿ) ಆಯಾ ತಿಂಗಳ ಮೊದಲನೆಯ ದಿನಾಂಕವಲ್ಲದೆ, ಇತರ ದಿನದಂದು, ವೇತನ ಬಡ್ತಿ ಪ್ರಾಪ್ತವಾಗುವುದಾದರೆ, ಅದನ್ನು ಆಯಾ ತಿಂಗಳ ಮೊದಲ ದಿನಾಂಕವೇ ಪ್ರಾಪ್ತವಾಗುವುದೆಂದು ಭಾವಿಸಿ ಬಿಡುಗಡೆಗೊಳಿಸಬೇಕು.

ಮೊದಲ ವರ್ಷದಲ್ಲಿ ಮಾತ್ರವೇ ಇಂತಹ ಸಂದರ್ಭ ಬರುವುದಿದ್ದು , ಈ ರೀತಿ ಹಿಂದೂಡಿದ ಬಗ್ಗೆ ಸೇವಾ ಪುಸ್ತಕ ಮತ್ತು ವೇತನ ಬಡ್ತಿ ಫಾರಂ-28ರಲ್ಲಿ ನಮೂದಿಸಬೇಕು. (ಸರ್ಕಾರಿ ಆದೇಶ ಎಫ್ಡಿ : 119 : ಎಸ್ ಆರ್ ಎಸ್ : 74 ದಿನಾಂಕ : 23-1-1974)

ಸಿ) ಕರ್ನಾಟಕ ಆರ್ಥಿಕ ಸಂಹಿತೆ ಅನುಚ್ಛೇದ 12ರಲ್ಲಿ ನಿಗದಿಪಡಿಸಿರುವ ಫಾರಂ – 28ರಲ್ಲಿ ವೇತನ ಬಡ್ತಿಯ ವಿವರಗಳನ್ನು ನಮೂದಿಸಿ, ಮಂಜೂರು ಮಾಡಿ ವೇತನ ಬಿಲ್ಲಿನೊಂದಿಗೆ ಲಗತ್ತಿಸಬೇಕು.

ಡಿ) ವೇತನ ಬಡ್ತಿಯ ದಿನಾಂಕದಂದು ಸರ್ಕಾರಿ ನೌಕರನು ಯಾವುದೇ ರೀತಿ ರಜೆಯ ಮೇಲಿದ್ದರೆ (ಸಾಂರ್ದಭಿಕ ರಜೆ ಹೊರತುಪಡಿಸಿ), ಅರ್ಹ ದಿನಾಂಕದಂದು ವೇತನ ಬಡ್ತಿ ಮಂಜೂರು ಮಾಡಬಹುದು. ಆದರೆ ನಿಯಮ 118ರ ಮೇರೆಗೆ ರಜೆಯ ಮೇಲೆ ತೆರಳುವ ಹಿಂದಿನ ದಿನದಂದು ಪಡೆ ಯುತ್ತಿದ್ದ ವೇತನಕ್ಕೆ ಸಮನಾದ ರಜಾ ಸಂಬಳವನ್ನು ಮಾತ್ರ ರಜೆಯ ಅವಧಿಯಲ್ಲಿ ಪಡೆಯಲು ಹಕ್ಕುಳ್ಳವ ನಾಗಿದ್ದರಿಂದ, ಆತನು ರಜೆಯಿಂದ ಕರ್ತವ್ಯಕ್ಕೆ ಹಿಂತಿರುಗಿದ ದಿನಾಂಕದಿಂದ ಮಾತ್ರ ಆರ್ಥಿಕ ಸೌಲಭ್ಯ ಕೊಡತಕ್ಕದ್ದು. (ಸರ್ಕಾರಿ ಆದೇಶ ಸಂಖ್ಯೆ : ಎಫ್ಡಿ : 119 : ಎನ್ಆರ್ಎನ್ : 74 : ದಿನಾಂಕ : 23-10-1974)

*****

ಸರ್ಕಾರಿ ನೌಕರರ ಹುದ್ದೆಯ ಹಕ್ಕಿನ ವಿಶ್ಲೇಷಣೆ:

15.11.2017.
| ಲ. ರಾಘವೇಂದ್ರ

ಕರ್ನಾಟಕ ಸರ್ಕಾರಿ ಸೇವಾ ನಿಮಯಾವಳಿಯ ನಿಯಮ 17ರಿಂದ 20 ರವರೆಗಿನ ನಿಯಮಗಳು ಸರ್ಕಾರಿ ನೌಕರನ ಹುದ್ದೆಯ ಹಕ್ಕಿನ ಬಗೆಗೆ ವಿವೇಚಿಸುತ್ತದೆ. ಅದರ ವಿಶ್ಲೇಷಣೆ ಇಲ್ಲಿದೆ.

ಒಬ್ಬ ವ್ಯಕ್ತಿಯನ್ನು ಸರ್ಕಾರದ ವ್ಯವಹಾರಗಳ ನಿರ್ವಹಣೆಗಾಗಿ ಒಂದು ಸ್ಥಿರ (ಮೂಲ) ಹುದ್ದೆಗೆ ನೇಮಕಾತಿ ನಿಯಮಗಳು ಪ್ರಕಾರ ನೇಮಿಸಿ ವಿಧಿಸಲಾದ ಷರತ್ತುಗಳನ್ನು ತೃಪ್ತಿಕರವಾಗಿ ಪೂರೈಸಿದ ಮೇರೆಗೆ ಆತನ ನೇಮಕಾತಿಯನ್ನು ಆ ಸ್ಥಿರ ಹುದ್ದೆಯಲ್ಲಿ ಸ್ಥಿರೀಕರಣಗೊಳಿಸಲಾಗುವುದು. ನೇಮಕಾತಿ ಸ್ಥಿರೀಕೃತಗೊಳಿಸಿದ ದಿನದಿಂದ ಆ ಮೂಲ (ಸ್ಥಿರ) ಹುದ್ದೆಯ ಮೇಲೆ ಸರ್ಕಾರಿ ನೌಕರನ ಹಕ್ಕು ಸ್ಥಾಪಿತವಾಗುತ್ತದೆ.(ನಿಯಮ 17-20)

ಆದ್ದರಿಂದ ಒಂದು ಸ್ಥಿರ (ಮೂಲ) ಹುದ್ದೆಗೆ ಒಬ್ಬ ವ್ಯಕ್ತಿಯನ್ನು ಮಾತ್ರ ಕಾಯಂ ಆಗಿ ನೇಮಿಸಬಹುದು. ಹಾಗೆಯೇ ಒಬ್ಬ ವ್ಯಕ್ತಿಯನ್ನು ಕಾಯಂ ಆಗಿ ಒಂದೇ ಸ್ಥಿರ ಹುದ್ದೆಗೆ ನೇಮಕ ಮಾಡಲು ಮಾತ್ರ ಅವಕಾಶವಿರುತ್ತದೆ. ಆದರೆ ಸರ್ಕಾರ ವಿಶೇಷ ಸಂದರ್ಭಗಳಲ್ಲಿ ತಾತ್ಕಾಲಿಕವಾಗಿ ಒಬ್ಬ ಸರ್ಕಾರಿ ನೌಕರನನ್ನು ಏಕಕಾಲದಲ್ಲಿ ಒಂದಕ್ಕಿಂತ ಹೆಚ್ಚು ಹುದ್ದೆಗಳಿಗೆ ನೇಮಿಸಲೂಬಹುದು. (ನಿಯಮ – 66)

ಒಬ್ಬ ನೌಕರನು ಹುದ್ದೆ ಹಕ್ಕು ಪಡೆದಿರುವ ಹುದ್ದೆಗೆ ಕಾಯಂ ಆಗಿ ಬೇರೊಬ್ಬ ನೌಕರನನ್ನು ನೇಮಿಸಲು ಅವಕಾಶವಿಲ್ಲ. ಸರ್ಕಾರಿ ನೌಕರನು ಬೇರೊಂದು ಕಾಯಂ ಹುದ್ದೆ ಮೇಲೆ ಹಕ್ಕುಗಳಿಸಿದ ದಿನದಿಂದ ತನ್ನ ಹಿಂದಿನ ಸ್ಥಿರ ಹುದ್ದೆ ಮೇಲಿನ ಹಕ್ಕನ್ನು ಕಳೆದುಕೊಳ್ಳುತ್ತಾನೆ. ಅಂತಹ ಹುದ್ದೆಗೆ ಬೇರೊಬ್ಬ ವ್ಯಕ್ತಿಯನ್ನು ಕಾಯಂ ಆಗಿ ನೇಮಿಸಬಹುದು ಅಥವಾ ಪದೋನ್ನತಿ ನೀಡಿ ಸದರಿ ಸ್ಥಿರ ಹುದ್ದೆಯನ್ನು ಕಾಯಂ ಆಗಿ ತುಂಬಬಹುದು. (ನಿಯಮ 18 ಮತ್ತು 19) ಸರ್ಕಾರಿ ನೌಕರನ ಹುದ್ದೆಯ ಹಕ್ಕನ್ನು ತನ್ನಲ್ಲಿ ಉಳಿಸಿಕೊಳ್ಳುವ ಸಂದರ್ಭಗಳು:

ಸರ್ಕಾರಿ ನೌಕರನು ಹುದ್ದೆಯ ಹಕ್ಕನ್ನು ತಾತ್ಕಾಲಿಕವಾಗಿ ವರ್ಗಾಯಿಸದಿದ್ದಲ್ಲಿ ಅಥವಾ ಅಮಾನತ್ತಿನಲ್ಲಿಡದಿದ್ದಲ್ಲಿ ಕೆಳಗಿನ ಸಂದರ್ಭಗಳಲ್ಲಿ ಸ್ಥಿರ ಹುದ್ದೆಯಲ್ಲಿ ಹಕ್ಕನ್ನು ಉಳಿಸಿಕೊಂಡಿರುತ್ತಾನೆ.

# ಸ್ಥಿರ ಹುದ್ದೆಯ ಕಾರ್ಯನಿರ್ವಹಣಾ ಅವಧಿ

# ರಜೆ ಅವಧಿ (ಉನ್ನತ ವ್ಯಾಸಂಗದ ರಜೆ ಅವಧಿಯೂ ಸೇರಿ)

# ತಾತ್ಕಾಲಿಕ ಹುದ್ದೆಯ ಕಾರ್ಯನಿರ್ವಹಣಾ ಅವಧಿ

# ಸ್ಥಾನಾಪನ್ನ ಆಧಾರದ ಮೇಲೆ ಮತ್ತೊಂದು ಹುದ್ದೆಯ ಕಾರ್ಯನಿರ್ವಹಣಾ ಅವಧಿ

# ಅನ್ಯ ಸೇವೆಗೆ ನಿಯೋಜನಾ ಅವಧಿ

# ತರಬೇತಿ ಮತ್ತು ಉನ್ನತ ವ್ಯಾಸಂಗದ ನಿಯೋಜನಾ ಅವಧಿ

# ವೃಂದೇತರ ಹುದ್ದೆಯಲ್ಲಿನ ಸೇವಾ ಅವಧಿ

# ಸೇರಿಕೆ ಕಾಲದ ಬಳಕೆಯ ಅವಧಿ

# ವಿಚಾರಣಾ ಪ್ರಯುಕ್ತ ಅಮಾನತುಗೊಳಿಸಿದ ಅವಧಿ

# ದಂಡನೆಯಾಗಿ ಕೆಳದರ್ಜೆ ಹುದ್ದೆಗೆ ತಾತ್ಕಾಲಿಕ ವರ್ಗಾವಣೆ ಅವಧಿ

# ಒಂದು ಸ್ಥಿರ ಹುದ್ದೆಯಲ್ಲಿ ‘ಹುದ್ದೆಯ ಹಕ್ಕು’ ಹೊಂದಿರುವ ಸರ್ಕಾರಿ ನೌಕರ ಅದೇ ಇಲಾಖೆಯ ಇನ್ನೊಂದು ಹುದ್ದೆಗೆ ಅಥವಾ ಸರ್ಕಾರದ ಬೇರೆ ಇಲಾಖೆಯ ಇನ್ನೊಂದು ಹುದ್ದೆಗೆ ನೇಮಕಗೊಂಡಾಗ ತನ್ನ ಮೊದಲನೇ ಹುದ್ದೆಯಿಂದ ಬಿಡುಗಡೆ ಹೊಂದಿದ ದಿನಾಂಕದಿಂದ ಹೊಸ ಹುದ್ದೆಯಲ್ಲಿ ಸೇವೆಯನ್ನು ಸ್ಥಿರೀಕೃತಗೊಳಿಸುವ ದಿನಾಂಕದವರೆಗಿನ ಅವಧಿ.

# ಸರ್ಕಾರವು ಸರ್ಕಾರಿ ನೌಕರನನ್ನು ಬೇರೆ ರಾಜ್ಯಗಳ ಅಥವಾ ಕೇಂದ್ರ ಸರ್ಕಾರದ ಸೇವೆಗೆ ನಿಯೋಜಿಸಿದ ಅವಧಿ.

ಸ್ಥಿರ ಹುದ್ದೆಯ ಹಕ್ಕು ಹೊಂದಿರುವ ಉದ್ಯೋಗಿಯ ಅರ್ಜಿಯನ್ನು ಇಲಾಖೆ ಮುಖಾಂತರ ಸಲ್ಲಿಸಿ, ರಾಜ್ಯದ ಹೊರಗಿನ ಸೇವೆಗೆ ನೇಮಕಗೊಂಡಾಗ ಆತನ ಸೇವೆಯು ಹೊಸ ಹುದ್ದೆಯಲ್ಲಿ ಸ್ಥಿರೀಕರಣಗೊಳ್ಳುವವರೆಗೆ ಮೊದಲಿನ ಹುದ್ದೆಯಲ್ಲಿಯೇ ಹಕ್ಕು ಅಂತರ್ಗತವಾಗಿರುತ್ತದೆ.

ಹುದ್ದೆಯ ಹಕ್ಕನ್ನು ಅಮಾನತುಗೊಳಿಸಬಹುದಾದ ಸಂದರ್ಭಗಳು:

ಸರ್ಕಾರವು ಕೆಳಗಿನ ಸಂದರ್ಭಗಳಲ್ಲಿ ಸರ್ಕಾರಿ ನೌಕರನ ಹುದ್ದೆಯ ಹಕ್ಕನ್ನು ತಾತ್ಕಾಲಿಕವಾಗಿ ಅಮಾನತುಗೊಳಿಸಬಹುದು.

# ನಿರ್ದಿಷ್ಟಾವಧಿ ಹುದ್ದೆ (ಟೆನ್ಯೂರ್ ಪೋಸ್ಟ್)ಗೆ ನೇಮಕ

# ಒಬ್ಬ ಸರ್ಕಾರಿ ನೌಕರ ಹಕ್ಕು ಪಡೆದಿರುವ ಹುದ್ದೆಗೆ ತಾತ್ಕಾಲಿಕವಾಗಿ ಬೇರೊಬ್ಬನ ನೇಮಕಾತಿ.

# ಸರ್ಕಾರಿ ನೌಕರನನ್ನು ಹೊರಗಿನ ಸೇವೆಗೆ ಅನ್ಯ ಸೇವೆಗೆ ಅಥವಾ ಬೇರೊಂದು ಹುದ್ದೆಯಲ್ಲಿ ಸ್ಥಾನಪನ್ನ ಆಧಾರದ ಮೇಲೆ ನಿಯೋಜಿಸಿದಾಗ ಆತನು ಕನಿಷ್ಠ ಪಕ್ಷ ಮೂರು ವರ್ಷ ಕಡಿಮೆ ಇಲ್ಲದಂತೆ ಹುದ್ದೆಯ ಹೊರಗುಳಿಯುವ ಪ್ರಸಂಗಗಳಲ್ಲಿ.

ಮೇಲಿನ ಸಂದರ್ಭಗಳಲ್ಲಿ ಮತ್ತೊಬ್ಬ ಸರ್ಕಾರಿ ನೌಕರನನ್ನು ತಾತ್ಕಾಲಿಕವಾಗಿ ಕಾಯಂಆಗಿ ನೇಮಿಸಬಹುದು ಹಾಗೂ ಅಂತಹ ಸರ್ಕಾರಿ ನೌಕರನು ತಾತ್ಕಾಲಿಕವಾಗಿ ಹುದ್ದೆಯ ಹಕ್ಕು ಗಳಿಸುತ್ತಾನೆ.

ಮೇಲಿನ ಮೂರು ಪ್ರಸಂಗಗಳಲ್ಲಿ ಸರ್ಕಾರಿ ನೌಕರ ತನ್ನ ಮೂಲ ಹುದ್ದೆಗೆ ಹಿಂದಿರುಗಿದ ಕೂಡಲೇ ಹುದ್ದೆಯ ಮೇಲಿನ ಅವನ ಮೂಲ ಹಕ್ಕು ಪುನರುಜ್ಜೀವನಗೊಳಿಸಲ್ಪಡುತ್ತದೆ. ಯಾವುದೇ ಕಾರಣಕ್ಕೂ ನಿರ್ದಿಷ್ಟಾವಧಿ ಹುದ್ದೆಯಲ್ಲಿನ ಹಕ್ಕನ್ನು ಅಮಾನತುಗೊಳಿಸಲಾಗುವುದು.

ಸರ್ಕಾರಿ ನೌಕರ ಇಚ್ಛೆಪಡಿಸಿದ್ದಾಗ್ಯೂ ಆತನ ಹುದ್ದೆಯ ಹಕ್ಕನ್ನು ತೆಗೆದುಹಾಕಲಾಗುವುದಿಲ್ಲ.

****

ನಿವೃತ್ತಿವೇತನದ ಅರ್ಥ ವಿವರಣೆWednesday, 01.11.2017.
| ಲ. ರಾಘವೇಂದ್ರ

ನಿವೃತ್ತ ನೌಕರರಿಗೆ ಜೀವಿತ ಅವಧಿವರೆಗೂ ಅವರ್ಥಕವಾಗಿ ವೇತನ ಬಟವಡೆಯಾಗಿರುತ್ತದೆ. ಉಪದಾನವು ನಿವೃತ್ತ ನೌಕರರಿಗೆ ಹಾಗೂ ಮೃತ ನೌಕರ/ಳ ಕುಟುಂಬವರ್ಗದವರಿಗೆ ನೀಡುವಂತಹ ಹಣ. ಕ.ಸ.ಸೇ.ನಿ. ನಿಯಮ 208ರ ರೀತ್ಯ ನಿವೃತ್ತಿವೇತನ ಉಪದಾನದಲ್ಲಿ ಸೇರುತ್ತದೆ. ಆದ್ದರಿಂದ ನಿವೃತ್ತಿವೇತನ ಮತ್ತು ಉಪದಾನವನ್ನು ಜತೆಗೆ ನೌಕರರು ಸಲ್ಲಿಸಿರುವ ಅರ್ಹಸೇವೆ ಹಾಗೂ ಉಪಲಬ್ಧಗಳ ಆಧಾರದ ಮೇಲೆ ಲೆಕ್ಕಾಚಾರ ಮಾಡಬಹುದು.

ನಿವೃತ್ತಿವೇತನ ವಿಧಗಳು: ನಿವೃತ್ತಿ ವೇತನಗಳನ್ನು ನಾಲ್ಕು ವರ್ಗಗಳಾಗಿ ವಿಂಗಡಿಸಲಾಗಿದೆ.

ಪರಿಹಾರ(ನಿಯಮ 259),

ಅಶಕ್ತತಾ (ನಿಯಮ 273),

ವಯೋ ನಿವೃತ್ತಿ ವೇತನ(ನಿಯಮ 283),

ವಿಶ್ರಾಂತಿ(ನಿಯಮ 285)

ನಿವೃತ್ತಿ ವೇತನ ಮತ್ತು ಉಪದಾನ ಪಡೆಯಲು ಅರ್ಹ ವ್ಯಕ್ತಿಗಳು: ಕ.ಸ.ಸೇ.ನಿ. ನಿಯಮ 302ರ ರೀತ್ಯ ಹಾಗೂ ಕೆ.ಜಿ.ಎಸ್.(ಎಸ್.ಪಿ.) ನಿಯಮ 2002ರ ನಿಯಮ 7 ಪರಿಶಿಷ್ಟರ ರೀತ್ಯ ಪಿಂಚಣಿ ಮತ್ತು ಉಪದಾನ ಸೌಲಭ್ಯ ಪಡೆಯಲು ಈ ಕೆಳಕಂಡ ವ್ಯಕ್ತಿಗಳು ಅರ್ಹರು.

ಕುಟುಂಬ ನಿವೃತ್ತಿಗಾಗಿ ಹೆಂಡತಿ, ಗಂಡ, ಅಪ್ರಾಪ್ತ ಮಕ್ಕಳು, ಅಪ್ರಾಪ್ತ ಅವಿವಾಹಿತ ಮಗಳು. ಉಪದಾನಕ್ಕಾಗಿ ಹೆಂಡತಿ, ಗಂಡ, ಮಕ್ಕಳು(ದತ್ತು ಮಕ್ಕಳು ಸೇರುತ್ತಾರೆ), ಅವಿವಾಹಿತ/ವಿಧವಾ/ವಿಚ್ಛೇದಿತ ಮಗಳು, ತಮ್ಮಂದಿರು 18 ವರ್ಷ ಒಳಗಿರುವವರು ಅವಿವಾಹಿತ/ವಿಧವಾ/ವಿಚ್ಛೇದಿತ ತಂಗಿಯರು, ತಂದೆ, ತಾಯಿ, ವಿವಾಹಿತ ಮಗಳು, ಮೃತ ಮಗನ ಮಕ್ಕಳು.

ನಿವೃತ್ತಿ ವೇತನ ಪತ್ರಗಳನ್ನು ಯಾರಿಗೆ ಸಲ್ಲಿಸಬೇಕು?: ನಿವೃತ್ತ ಸರ್ಕಾರಿ ನೌಕರರಿಗೆ ಮತ್ತು ಸ್ಥಳೀಯ ಸಂಸ್ಥೆಯ ನೌಕರರಿಗೆ ನಿವೃತ್ತಿ ವೇತನ ಸೌಲಭ್ಯಗಳನ್ನು ಪ್ರಾಧೀಕರಿಸುವ ಸಲುವಾಗಿ ಭರ್ತಿ ಮಾಡಿದ ನಿವೃತ್ತಿ ವೇತನ ಪತ್ರಗಳನ್ನು ಬಟವಾಡೆ ಅಧಿಕಾರಿಗಳು/ಮಂಜೂರಾತಿ ಅಧಿಕಾರಿಗಳು ದೃಢೀಕರಿಸಿ ಸರ್ಕಾರಿ ಸುತ್ತೋಲೆ ಸಂಖ್ಯೆ ಎಫ್ಡಿ (ವಿಶೇಷ)2 ಸಿಪಿಸಿ 2002 ಬೆಂಗಳೂರು ದಿನಾಂಕ 19-1-2002ರ ರೀತ್ಯ ಆರು ತಿಂಗಳು ಮುಂಚಿತವಾಗಿ ಸಂಬಂಧಪಟ್ಟ ಪ್ರಾಧೀಕರಣ ಪ್ರಾಧಿಕಾರಕ್ಕೆ ಕಳುಹಿಸಬೇಕು. ಅಂತೆಯೇ ಪೂರ್ಣಪ್ರಮಾಣದ ನಿವೃತ್ತಿ ಕಡತಗಳನ್ನು ಪರಿಶೀಲಿಸಿ ನಿವೃತ್ತಿ ಪ್ರಾಧೀಕರಣ ಪ್ರಾಧೀಕಾರವು ನಿವೃತ್ತ/ನಿಧನರಾದ ನೌಕರರ ಸಂಬಂಧ ನಿವೃತ್ತಿ ಪಾವತಿ ಆದೇಶ ಪತ್ರವನ್ನು 15 ದಿನ ಮುಂಚಿತವಾಗಿ ನೀಡಬೇಕು.

ಒಂದು ವೇಳೆ ನಿವೃತ್ತಿ ವೇತನ ಪತ್ರಗಳನ್ನು ತಡವಾಗಿ ಸಲ್ಲಿಸಿದಲ್ಲಿ ಸರ್ಕಾರಿ ಆದೇಶ ಸಂಖ್ಯೆ ಎಫ್ಡಿ(ವಿಶೇಷ) 199 ಪಿಇಎಸ್ 93 ಬೆಂಗಳೂರು ದಿನಾಂಕ 13-9-94ರ ರೀತ್ಯ ತಡವಾಗಿ ಪಾವತಿಸಬಹುದಾದ ನಿವೃತ್ತಿ ವೇತನ, ಉಪದಾನ ಹಾಗೂ ಗಳಿಕೆ ರಜೆ ಮೊತ್ತಕ್ಕೆ ಶೇ.8ರಷ್ಟು ಬಡ್ಡಿ ನೀಡಬೇಕಾಗುತ್ತದೆ.

ಸರಳ ನಿಯಮ:

# ಮೂರು ತಿಂಗಳು ಅವಧಿ ಸೇವೆಯ ಕಡಿಮೆ ಬೀಳುವ ಭಿನ್ನಾಂಕವನ್ನು ಕಡೆಗಣಿಸಬೇಕು.

# 3 ತಿಂಗಳು ಮೇಲ್ಪಟ್ಟು 9 ತಿಂಗಳು ಅವಧಿಯ ಸೇವೆಯನ್ನು ಒಂದು ಅರ್ಧವರ್ಷ ಎಂದು ಪರಿಗಣಿಸಬೇಕು.

# 9 ತಿಂಗಳು ಮತ್ತು ಅದಕ್ಕೂ ಮೇಲ್ಪಟ್ಟ ಅವಧಿಯ ಸೇವೆಯನ್ನು 2 ಅರ್ಧ ವರ್ಷ ಎಂದು ಪರಿಗಣಿಸಬೇಕು.

ಉದಾಹರಣೆಗಳು:

# ಒಟ್ಟು ಅರ್ಹ ಸೇವೆಯು 31 ವರ್ಷ 1ತಿಂಗಳು 25 ದಿನಗಳಾಗಿದ್ದಲ್ಲಿ ಇದನ್ನು 31 ವರ್ಷ ಅಥವಾ 62 ಅರ್ಧ ವರ್ಷಗಳೆಂದು ಲೆಕ್ಕ ಹಾಕಬೇಕು.

# ಒಟ್ಟು ಅರ್ಹ ಸೇವೆಯು 31 ವರ್ಷ 7 ತಿಂಗಳು 20 ದಿನಗಳಾಗಿದ್ದಲ್ಲಿ ಇದನ್ನು 31 1/2 ವರ್ಷ ಅಥವಾ 63 ಅರ್ಧ ವರ್ಷ ಎಂದು ಲೆಕ್ಕ ಹಾಕಬೇಕು.

# ಒಟ್ಟು ಸೇವೆಯು 30 ವರ್ಷ 9 ತಿಂಗಳು 12 ದಿನಗಳಾಗಿದ್ದಲ್ಲಿ ಇದನ್ನು 31 ವರ್ಷ ಅಥವಾ 62 ಅರ್ಧ ವರ್ಷಗಳೆಂದು ಲೆಕ್ಕ ಹಾಕಬೇಕು.

# ಅರ್ಹ ಸೇವೆಯು 35 ವರ್ಷ 6 ತಿಂಗಳು 18 ದಿನಗಳಾಗಿದ್ದಲ್ಲಿ ಇದನ್ನು ಗರಿಷ್ಠ 33 ವರ್ಷ ಅಥವಾ 66 ಅರ್ಧ ವರ್ಷಗಳಿಗೆ ಸೀಮಿತಗೊಳಿಸಿ ಲೆಕ್ಕ ಹಾಕಬೇಕು.

# ಮೊತ್ತವನ್ನು ರೂಪಾಯಿಗೆ ಲೆಕ್ಕಹಾಕುವುದು

# ನಿವೃತ್ತಿ ವೇಳೆ ನಿವೃತ್ತಿವೇತನವನ್ನು ಸೌಲಭ್ಯ ಮಂಜೂರಿಗೆ ನಿವೃತ್ತಿ ವೇತನ/ಕುಟುಂಬ ನಿವೃತ್ತಿ ವೇತನ ಮೊತ್ತ ರೂಪಾಯಿಗಿಂತ ಬಿನ್ನಾಂಕವಾಗಿದ್ದರೂ ಅಧಿಕೃತ ಜ್ಞಾಪನ ಸಂಖ್ಯೆ ಎಫ್ಡಿ ವಿಶೇಷ: ಪಿಇಟಿ 84 ಬೆಂಗಳೂರು, ದಿನಾಂಕ 7-1-84ರ ರೀತ್ಯ ಹತ್ತಿರದ ರೂಪಾಯಿಗೆ ಲೆಕ್ಕಹಾಕಬೇಕು.

ಅರ್ಹದಾಯಕ ಸೇವೆಯ ಲೆಕ್ಕಾಚಾರ

ದಿನಾಂಕ 30-9-2003ರ ಕರ್ನಾಟಕ ಸರ್ಕಾರದ ಆದೇಶ ಸಂಖ್ಯೆ ಎಫ್ಡಿ 6 ಸನಿತಿ 2003ರಲ್ಲಿ ನಿವೃತ್ತಿ ವೇತನ ಪಡೆಯಲು ನಿಯಮ 222ರ ಉಪಬಂಧಗಳನ್ನು ಮಾರ್ಪಡಿಸಿ ಕನಿಷ್ಠ 10 ವರ್ಷ ಅರ್ಹತೆ ಸೇವೆ ಸಲ್ಲಿಸಬೇಕೆಂದು ಆದೇಶಿಸಿದೆ. ಈ ಆದೇಶವು ದಿನಾಂಕ 1-9-2003 ರಿಂದ ಜಾರಿಗೆ ಬಂದಿದೆ.

ನಿವೃತ್ತಿ ವೇತನ ಮತ್ತು ಉಪದಾನ ಪಡೆಯಲು ಅರ್ಹವಲ್ಲದ ಸೇವೆಗಳು

# ನಿಗದಿತ ಅವಧಿಗಾಗಿ/ನಿರ್ದಿಷ್ಟ ಕರ್ತವ್ಯಕ್ಕಾಗಿ ನೇಮಕಗೊಂಡ ನೌಕರನ ಸೇವೆ ನಿಯಮ 216(ಎ) ರೀತ್ಯ.

# ವ್ಯಕ್ತಿಯನ್ನು ತಾತ್ಕಾಲಿಕವಾಗಿ ಮಾಹೆಯಾನ ಸಂಬಳಕ್ಕಾಗಿ ಯಾವುದೇ ನಿರ್ದಿಷ್ಚ ಕಾಲಾವಧಿ/ಕರ್ತವ್ಯಕ್ಕಾಗಿ ನೇಮಿಸಿದ ಸೇವೆ ನಿಯಮ 216(ಬಿ) ರೀತ್ಯ.

# 18ವರ್ಷ ಒಳಪಟ್ಟ ಬಾಲ್ಯ ಸೇವೆ/ಅಪ್ರಾಪ್ತ ಸೇವೆ, (ನಿಯಮ 220ರ ರೀತ್ಯ)

# ಲೆಕ್ಕಕ್ಕಿಲ್ಲದ ರಜೆ

# ಅಭ್ಯಾಸಾವಧಿ

# ನೌಕರನ ಸೇವೆಯ ಒಪ್ಪಂದದ ಮೇರೆಗೆ ನಿವೃತ್ತಿವೇತನ ರಹಿತ ಸೇವೆಯೆಂದು ಷರತ್ತು ಹಾಕಿರುವ ಹುದ್ದೆ.

ಉಪಲಬ್ಧಗಳು

ಉಪಲಬ್ಧಗಳು ನಿವೃತ್ತಿ ವೇತನ, ಉಪದಾನ, ಕುಟುಂಬ ನಿವೃತ್ತಿ ವೇತನ, ಅಸಾಧಾರಣ ನಿವೃತ್ತಿವೇತನ ಸೌಲಭ್ಯಗಳ ಲೆಕ್ಕಾಚಾರ ಮಾಡಲು ಒಳಗೊಂಡಿರುತ್ತದೆ.

# ನಿವೃತ್ತಿ/ನಿಧನ ದಿನಾಂಕದಂದು ಪಡೆಯುತ್ತಿರುವ ಮೂಲ ವೇತನ 10 ತಿಂಗಳ ಸರಾಸರಿ ವೇತನ

# ಸ್ಥಗಿತ ವೇತನ ಬಡ್ತಿ: ಗರಿಷ್ಠ ವೇತನ ಶ್ರೇಣಿಗೂ ಮೀರಿದ ವೇತನ

# ವೈಯುಕ್ತಿಕ ವೇತನ: ಕ.ಸ.ಸೇ.ನಿ.ಪರಿಷ್ಕೃತ ವೇತನ ನಿಯಮಾವಳಿ 1999ರ ನಿಯಮ 7ರ ಉಪನಿಯಮ (3)ರ ಅಡಿಯಲ್ಲಿ

# ವಿಶೇಷ ಭತ್ಯೆ: ಶೀಘ್ರಲಿಪಿಗಾರರು, ಬೆರಳಚ್ಚುಗಾರರು, ವಾಹನ ಚಾಲಕರು ಹಾಗೂ ಲಿಫ್ಟ್ ಆಪರೇಟರ್ ಇವರ ಹುದ್ದೆಗೆ ಹೊಂದಿರುವ ವಿಶೇಷ ವೇತನ.

# ಹೆಚ್ಚುವರಿ ವೇತನ: ಹೆಚ್ಚುವರಿ ವಾರ್ಷಿಕ ವೇತನ ಬಡ್ತಿಯು ಗರಿಷ್ಠ ವೇತನ ಶ್ರೇಣಿ ತಲುಪಿದ ನಂತರ ನೀಡಿರುವಂತಹದ್ದು, ಇದು 1974ರ ಕನ್ನಡ ಭಾಷಾ ಪರೀಕ್ಷೆ ನಿಯಮ 6 ರೀತ್ಯಾ ನೀಡಿರುವಂತದ್ದಾಗಿರಬೇಕು. ್ಝ ನಿವೃತ್ತಿ ವೇತನ, ಉಪದಾನ, ಕುಟುಂಬ ನಿವೃತ್ತಿ ವೇತನ ಲೆಕ್ಕಾಚಾರಕ್ಕಾಗಿ ಉಪಲಬ್ಧಿಯನ್ನು ಸೀಮಿತಗೊಳಿಸಿರುವುದಿಲ್ಲ.

***

ನಿವೃತ್ತಿವೇತನದ ನಿಯಮಗಳು
Wednesday, 18.10.2017
| ಲ. ರಾಘವೇಂದ್ರ

ನಿವೃತ್ತ ನೌಕರರಿಗೆ ಜೀವಿತ ಅವಧಿವರೆಗೂ ಆವರ್ಥಕವಾಗಿ ವೇತನ ಬಟವಾಡೆಯಾಗಿರುತ್ತದೆ. ಉಪದಾನವು ನಿವೃತ್ತ ನೌಕರರಿಗೆ ಹಾಗೂ ಮೃತ ನೌಕರ/ಳ ಕುಟುಂಬವರ್ಗದವರಿಗೆ ನೀಡುವಂತಹ ಹಣ. ಕ.ಸ.ಸೇ.ನಿ. ನಿಯಮ 208ರ ರೀತ್ಯ ನಿವೃತ್ತಿವೇತನ ಉಪದಾನದಲ್ಲಿ ಸೇರುತ್ತದೆ. ಆದ್ದರಿಂದ ನಿವೃತ್ತಿವೇತನ ಮತ್ತು ಉಪದಾನವನ್ನು ಜತೆಗೆ ನೌಕರರು ಸಲ್ಲಿಸಿರುವ ಅರ್ಹಸೇವೆ ಹಾಗೂ ಉಪಲಬ್ಧಗಳ ಆಧಾರದ ಮೇಲೆ ಲೆಕ್ಕಾಚಾರ ಮಾಡಬಹುದು.

ನಿವೃತ್ತಿವೇತನ ವಿಧಗಳು: ನಿವೃತ್ತಿ ವೇತನಗಳನ್ನು ನಾಲ್ಕು ವರ್ಗಗಳಾಗಿ ವಿಂಗಡಿಸಲಾಗಿದೆ. ಪರಿಹಾರ(ನಿಯಮ 259), ಅಶಕ್ತತಾ (ನಿಯಮ 273), ವಯೋ ನಿವೃತ್ತಿ ವೇತನ(ನಿಯಮ 283), ವಿಶ್ರಾಂತಿ(ನಿಯಮ 285)

ನಿವೃತ್ತಿ ವೇತನ ಮತ್ತು ಉಪದಾನ ಪಡೆಯಲು ಅರ್ಹ ವ್ಯಕ್ತಿಗಳು: ಕ.ಸ.ಸೇ.ನಿ. ನಿಯಮ 302ರ ರೀತ್ಯ ಹಾಗೂ ಕೆ.ಜಿ.ಎಸ್.(ಎಸ್.ಪಿ.)ನಿಯಮ 2002ರ ನಿಯಮ 7 ಪರಿಶಿಷ್ಟರ ರೀತ್ಯ ಪಿಂಚಣಿ ಮತ್ತು ಉಪದಾನ ಸೌಲಭ್ಯ ಪಡೆಯಲು ಈ ಕೆಳಕಂಡ ವ್ಯಕ್ತಿಗಳು ಅರ್ಹರು. ಕುಟುಂಬ ನಿವೃತ್ತಿಗಾಗಿ ಹೆಂಡತಿ, ಗಂಡ, ಅಪ್ರಾಪ್ತ ಮಕ್ಕಳು, ಅಪ್ರಾಪ್ತ ಅವಿವಾಹಿತ ಮಗಳು. ಉಪದಾನಕ್ಕಾಗಿ ಹೆಂಡತಿ, ಗಂಡ, ಮಕ್ಕಳು(ದತ್ತು ಮಕ್ಕಳು ಸೇರುತ್ತಾರೆ), ಅವಿವಾಹಿತ/ವಿಧವಾ/ವಿಚ್ಛೇದನ ಹೊಂದಿದ ಮಗಳು, ತಮ್ಮಂದಿರು 18 ವರ್ಷ ಒಳಗಿರುವವರು ಅವಿವಾಹಿತ/ವಿಧವಾ/ವಿಚ್ಛೇದಿತ ತಂಗಿಯರು, ತಂದೆ, ತಾಯಿ, ವಿವಾಹಿತ ಮಗಳು, ಮೃತನ ಮಗನ ಮಕ್ಕಳು.

ನಿವೃತ್ತಿ ವೇತನ ಪತ್ರಗಳನ್ನು ಯಾರಿಗೆ ಸಲ್ಲಿಸಬೇಕು?

ನಿವೃತ್ತ ಸರ್ಕಾರಿ ನೌಕರರಿಗೆ ಮತ್ತು ಸ್ಥಳೀಯ ಸಂಸ್ಥೆಯ ನೌಕರರಿಗೆ ನಿವೃತ್ತಿ ವೇತನ ಸೌಲಭ್ಯಗಳನ್ನು ಪ್ರಾಧೀಕರಿಸುವ ಸಲುವಾಗಿ ಭರ್ತಿ ಮಾಡಿದ ನಿವೃತ್ತಿ ವೇತನ ಪತ್ರಗಳನ್ನು ಬಟವಾಡೆ ಅಧಿಕಾರಿಗಳು/ಮಂಜೂರಾತಿ ಅಧಿಕಾರಿಗಳು ದೃಢೀಕರಿಸಿ ಸರ್ಕಾರಿ ಸುತ್ತೋಲೆ ಸಂಖ್ಯೆ ಎಫ್ಡಿ(ವಿಶೇಷ)2 ಸಿಪಿಸಿ 2002 ಬೆಂಗಳೂರು ದಿನಾಂಕ 19-1-2002ರ ರೀತ್ಯ ಆರು ತಿಂಗಳು ಮುಂಚಿತವಾಗಿ ಸಂಬಂಧಪಟ್ಟ ಪ್ರಾಧಿಕಾರಕ್ಕೆ ಕಳುಹಿಸಬೇಕು. ಅಂತೆಯೇ ಪೂರ್ಣಪ್ರಮಾಣದ ನಿವೃತ್ತಿ ಕಡತಗಳನ್ನು ಪರಿಶೀಲಿಸಿ ನಿವೃತ್ತಿ ಪ್ರಾಧಿಕಾರವು ನಿವೃತ್ತ/ನಿಧನರಾದ ನೌಕರರ ಸಂಬಂಧ ನಿವೃತ್ತಿ ಪಾವತಿ ಆದೇಶ ಪತ್ರವನ್ನು 15 ದಿನ ಮುಂಚಿತವಾಗಿ ನೀಡಬೇಕು.

ಒಂದು ವೇಳೆ ನಿವೃತ್ತಿ ವೇತನ ಪತ್ರಗಳನ್ನು ತಡವಾಗಿ ಸಲ್ಲಿಸಿದಲ್ಲಿ ಸರ್ಕಾರಿ ಆದೇಶ ಸಂಖ್ಯೆ ಎಫ್ಡಿ(ವಿಶೇಷ) 199 ಪಿಇಎಸ್ 93ಬೆಂಗಳೂರು ದಿನಾಂಕ 13-9-94ರ ರೀತ್ಯ ತಡವಾಗಿ ಪಾವತಿಸಬಹುದಾದ ನಿವೃತ್ತಿ ವೇತನ, ಉಪದಾನ ಹಾಗೂ ಗಳಿಕೆ ರಜೆ ಮೊತ್ತಕ್ಕೆ ಶೇ.8ರಷ್ಟು ಬಡ್ಡಿ ನೀಡಬೇಕಾಗುತ್ತದೆ.

ಅರ್ಹದಾಯಕ ಸೇವೆಯ ಲೆಕ್ಕಾಚಾರಗಳು

ದಿನಾಂಕ 30-9-2003ರ ಕರ್ನಾಟಕ ಸರ್ಕಾರದ ಆದೇಶ ಸಂಖ್ಯೆ ಎಫ್ಡಿ 6 ಸನಿತಿ 2003ರಲ್ಲಿ ನಿವೃತ್ತಿ ವೇತನ ಪಡೆಯಲು ನಿಯಮ 222ರ ಉಪಬಂಧಗಳನ್ನು ಮಾರ್ಪಡಿಸಿ ಕನಿಷ್ಠ 10 ವರ್ಷ ಅರ್ಹತೆ ಸೇವೆ ಸಲ್ಲಿಸಬೇಕೆಂದು ಆದೇಶಿಸಿದೆ. ಈ ಆದೇಶವು ದಿನಾಂಕ 1-9-2003 ರಿಂದ ಜಾರಿಗೆ ಬಂದಿದೆ.

ಸರಳ ನಿಯಮ

# ಮೂರು ತಿಂಗಳು ಅವಧಿ ಸೇವೆಯ ಕಡಿಮೆ ಬೀಳುವ ಭಿನ್ನಾಂಕವನ್ನು ಕಡೆಗಣಿಸಬೇಕು.

# ಮೂರು ತಿಂಗಳು ಮೇಲ್ಪಟ್ಟು 9 ತಿಂಗಳು ಅವಧಿಯ ಸೇವೆಯನ್ನು ಒಂದು ಅರ್ಧವರ್ಷ ಎಂದು ಪರಿಗಣಿಸಬೇಕು.

# 9 ತಿಂಗಳು ಮತ್ತು ಅದಕ್ಕೂ ಮೇಲ್ಪಟ್ಟ ಅವಧಿಯ ಸೇವೆಯನ್ನು ಎರಡು ಅರ್ಧ ವರ್ಷ ಎಂದು ಪರಿಗಣಿಸಬೇಕು.

ಉದಾಹರಣೆಗಳು: # ಒಟ್ಟು ಅರ್ಹ ಸೇವೆಯು 31 ವರ್ಷ 1ತಿಂಗಳು 25 ದಿನಗಳಾಗಿದ್ದಲ್ಲಿ ಇದನ್ನು 31 ವರ್ಷ ಅಥವಾ 62 ಅರ್ಧ ವರ್ಷಗಳೆಂದು ಲೆಕ್ಕ ಹಾಕಬೇಕು.

# ಒಟ್ಟು ಅರ್ಹ ಸೇವೆಯು 31 ವರ್ಷ 7 ತಿಂಗಳು 20 ದಿನಗಳಾಗಿದ್ದಲ್ಲಿ ಇದನ್ನು 31 1/2 ವರ್ಷ ಅಥವಾ 63 ಅರ್ಧ ವರ್ಷ ಎಂದು ಲೆಕ್ಕ ಹಾಕಬೇಕು.

# ಒಟ್ಟು ಸೇವೆಯು 30 ವರ್ಷ 9 ತಿಂಗಳು 12 ದಿನಗಳಾಗಿದ್ದಲ್ಲಿ ಇದನ್ನು 31 ವರ್ಷ ಅಥವಾ 62 ಅರ್ಧ ವರ್ಷಗಳೆಂದು ಲೆಕ್ಕ ಹಾಕಬೇಕು.

# ಅರ್ಹ ಸೇವೆಯು 35 ವರ್ಷ 6 ತಿಂಗಳು 18 ದಿನಗಳಾಗಿದ್ದಲ್ಲಿ ಇದನ್ನು ಗರಿಷ್ಠ 33 ವರ್ಷ ಅಥವಾ 66 ಅರ್ಧ ವರ್ಷಗಳಿಗೆ ಸೀಮಿತಗೊಳಿಸಿ ಲೆಕ್ಕ ಹಾಕಬೇಕು.

ಉಪಲಬ್ಧಗಳು (ನಿಯಮ 296 ಬಿ. ರೀತ್ಯಾ)

ಉಪಲಬ್ಧಗಳು ನಿವೃತ್ತಿ ವೇತನ, ಉಪದಾನ, ಕುಟುಂಬ ನಿವೃತ್ತಿ ವೇತನ, ಅಸಾಧಾರಣ ನಿವೃತ್ತಿವೇತನ ಸೌಲಭ್ಯಗಳ ಲೆಕ್ಕಾಚಾರ ಮಾಡಲು ಒಳಗೊಂಡಿರುತ್ತದೆ.

# ನಿವೃತ್ತಿ/ನಿಧನ ದಿನಾಂಕದಂದು ಪಡೆಯುತ್ತಿರುವ ಮೂಲ ವೇತನ 10 ತಿಂಗಳ ಸರಾಸರಿ ವೇತನ

# ಸ್ಥಗಿತ ವೇತನ ಬಡ್ತಿ: ಗರಿಷ್ಠ ವೇತನ ಶ್ರೇಣಿಗೂ ಮೀರಿದ ವೇತನ

# ವೈಯುಕ್ತಿಕ ವೇತನ: ಕ.ಸ.ಸೇ.ನಿ.ಪರಿಷ್ಕೃತ ವೇತನ ನಿಯಮಾವಳಿ 1999ರ ನಿಯಮ 7ರ ಉಪನಿಯಮ (3)ರ ಅಡಿಯಲ್ಲಿ

# ವಿಶೇಷ ಭತ್ಯೆ: ಶೀಘ್ರಲಿಪಿಗಾರರು, ಬೆರಳಚ್ಚುಗಾರರು, ವಾಹನ ಚಾಲಕರು ಹಾಗೂ ಲಿಫ್ಟ್ ಆಪರೇಟರ್ ಇವರ ಹುದ್ದೆಗೆ ಹೊಂದಿರುವ ವಿಶೇಷ ವೇತನ.

# ಹೆಚ್ಚುವರಿ ವೇತನ: ಹೆಚ್ಚುವರಿ ವಾರ್ಷಿಕ ವೇತನ ಬಡ್ತಿಯು ಗರಿಷ್ಠ ವೇತನ ಶ್ರೇಣಿ ತಲುಪಿದ ನಂತರ ನೀಡಿರುವಂತಹದ್ದು, ಇದು 1974ರ ಕನ್ನಡ ಭಾಷಾ ಪರೀಕ್ಷೆ ನಿಯಮ 6 ರೀತ್ಯಾ ನೀಡಿರುವಂತದ್ದಾಗಿರಬೇಕು.

#ನಿವೃತ್ತಿ ವೇತನ, ಉಪದಾನ, ಕುಟುಂಬ

# ನಿವೃತ್ತಿ ವೇತನ ಲೆಕ್ಕಾಚಾರಕ್ಕಾಗಿ ಉಪಲಬ್ಧಿಯನ್ನು ಸೀಮಿತಗೊಳಿಸಿರುವುದಿಲ್ಲ.

ನಿವೃತ್ತಿ ವೇತನ ಮೊತ್ತವನ್ನು ಹತ್ತಿರದ ರೂಪಾಯಿಗೆ ಲೆಕ್ಕಹಾಕುವುದು

ನಿವೃತ್ತಿ ವೇಳೆ ನಿವೃತ್ತಿವೇತನವನ್ನು ಸೌಲಭ್ಯ ಮಂಜೂರಿಗೆ ನಿವೃತ್ತಿ ವೇತನ/ಕುಟುಂಬ ನಿವೃತ್ತಿ ವೇತನ ಮೊತ್ತ ರೂಪಾಯಿಗಿಂತ ಭಿನ್ನಾಂಕವಾಗಿದ್ದರೂ ಅಧಿಕೃತ ಜ್ಞಾಪನ ಸಂಖ್ಯೆ ಎಫ್ಡಿ ವಿಶೇಷ: ಪಿಇಟಿ 84 ಬೆಂಗಳೂರು, ದಿನಾಂಕ 7-1-84ರ ರೀತ್ಯ ಹತ್ತಿರದ ರೂಪಾಯಿಗೆ ಲೆಕ್ಕಹಾಕಬೇಕು.

ನಿವೃತ್ತಿ ವೇತನ ಮತ್ತು ಉಪದಾನ ಪಡೆಯಲು ಅರ್ಹವಲ್ಲದ ಸೇವೆಗಳು:

# ನಿಗದಿತ ಅವಧಿಗಾಗಿ/ನಿರ್ದಿಷ್ಟ ಕರ್ತವ್ಯಕ್ಕಾಗಿ ನೇಮಕಗೊಂಡ ನೌಕರನ ಸೇವೆ ನಿಯಮ 216(ಎ) ರೀತ್ಯ.

# ವ್ಯಕ್ತಿಯನ್ನು ತಾತ್ಕಾಲಿಕವಾಗಿ ಮಾಹೆಯಾನ ಸಂಬಳಕ್ಕಾಗಿ ಯಾವುದೇ ನಿರ್ದಿಷ್ಚ ಕಾಲಾವಧಿ/ಕರ್ತವ್ಯಕ್ಕಾಗಿ ನೇಮಿಸಿದ ಸೇವೆ ನಿಯಮ 216(ಬಿ) ರೀತ್ಯ.

# 18ವರ್ಷ ಒಳಪಟ್ಟ ಬಾಲ್ಯ ಸೇವೆ/ಅಪ್ರಾಪ್ತ ಸೇವೆ,(ನಿಯಮ 220ರ ರೀತ್ಯ)

#ಲೆಕ್ಕಕ್ಕಿಲ್ಲದ ರಜೆ

# ಅಭ್ಯಾಸಾವಧಿ

# ನೌಕರನ ಸೇವೆಯ ಒಪ್ಪಂದದ ಮೇರೆಗೆ ನಿವೃತ್ತಿವೇತನ ರಹಿತ ಸೇವೆಯೆಂದು ಷರತ್ತು ಹಾಕಿರುವ ಹುದ್ದೆ.

****

ನೌಕರರ ನಿವೃತ್ತಿ ವೇತನದ ನಿಯಮಗಳುWednesday, 27.09.2017,
ಸರ್ಕಾರಿ ನೌಕರರು 1958ರ ಏಪ್ರಿಲ್ 1ರಿಂದ 2006ರ ಮಾರ್ಚ್ 31ರವರೆಗೆ ಸರ್ಕಾರಿ ಸೇವೆಗೆ ಸೇರಿದ್ದರೆ ಅಂತಹವರಿಗೆ ಹಳೆಯ ಪಿಂಚಣಿ ಸೌಲಭ್ಯ ನೀಡಲಾಗುತ್ತದೆ. ಆದರೆ 2006ರ ಏಪ್ರಿಲ್ 1ರಿಂದ ಸರ್ಕಾರಿ ಸೇವೆಗೆ ಸೇರಿದ ಸರ್ಕಾರಿ ನೌಕರನಿಗೆ ನೂತನ ಪಿಂಚಣಿ ಸೌಲಭ್ಯಗಳನ್ನು ನೀಡಲಾಗುವುದು. ಈ ಕೆಳಗೆ ಸರ್ಕಾರಿ ನೌಕರರಿಗೆ ಹಳೆಯ ಪಿಂಚಣಿ ಸೌಲಭ್ಯಗಳ ಬಗ್ಗೆ ವಿವರ ನೀಡಲಾಗಿದೆ.

ನಿವೃತ್ತಿ ವೇತನದ ಬಗ್ಗೆ ಗಮನಿಸ ಬೇಕಾದ ಅಂಶಗಳು:

ನಿವೃತ್ತಿ ವೇತನ ಸೌಲಭ್ಯಗಳುಳ್ಳ ಸಿಬ್ಬಂದಿ ವರ್ಗದ ಸೇವೆಯನ್ನು ಮಾತ್ರ ನಿವೃತ್ತಿ ವೇತನ ಸೌಲಭ್ಯಗಳಿಗೆ ಪರಿಗಣಿಸಲಾಗುವುದು.

ಪೂರ್ಣ ಪ್ರಮಾಣದ ಪಿಂಚಣಿ ಸೌಲಭ್ಯಗಳನ್ನು ಪಡೆಯಲು ಉದ್ಯೋಗಿಯ ಸೇವೆ ಸಂಪೂರ್ಣವಾಗಿ ತೃಪ್ತಿಕರವಾಗಿರಬೇಕು.

ನಿವೃತ್ತಿಯ ನಂತರವೂ ಉದ್ಯೋಗಿ ಸನ್ನಡತೆಯವನಾಗಿ ಇರಬೇಕೆಂಬುದು ನಿವೃತ್ತಿ ವೇತನ ನಿಯಮಗಳ ಸೂಚ್ಯ ಷರತ್ತು.

ದುರ್ನಡತೆ, ಅಧಕ್ಷತೆ ಹಾಗೂ ದಿವಾಳಿತನದ ಕಾರಣಕ್ಕಾಗಿ ಸೇವೆಯಿಂದ ವಜಾ ಮಾಡಿದ ಉದ್ಯೋಗಿಗೂ, ವಿಶೇಷ ಸಂದರ್ಭಗಳಲ್ಲಿ ‘ಅನುಕಂಪಭತ್ಯೆ’ಯನ್ನು ಸರ್ಕಾರ ಮಂಜೂರು ಮಾಡಬಹುದು.

ನಿವೃತ್ತಿ ವೇತನ ತಡೆಹಿಡಿಯುವುದು, ಹಿಂಪಡೆಯುವುದು ಹಾಗೂ ಕಡಿತಗೊಳಿಸುವುದು ಸರ್ಕಾರದ ಅಧಿಕಾರಕ್ಕೆ ಒಳಪಟ್ಟಿದೆ.

ಇಲಾಖಾ/ನ್ಯಾಯಾಂಗ ವಿಚಾರಣೆಗೆ ಒಳಪಟ್ಟ ಉದ್ಯೋಗಿ 60 ವರ್ಷ ತಲುಪಿ ನಿವೃತ್ತಿ ಹೊಂದಿದ ಪ್ರಕರಣದಲ್ಲಿ ‘ತಾತ್ಕಾಲಿಕ ಪಿಂಚಣಿ’ ಮಂಜೂರು ಮಾಡಲಾಗುವುದು.

ನಿವೃತ್ತಿ ವೇತನ ಸೌಲಭ್ಯಗಳ ಇತ್ಯರ್ಥ ವಿಳಂಬವಾಗುವುದು ಕಂಡುಬಂದಲ್ಲಿ ನಿರೀಕ್ಷಣಾ ನಿವೃತ್ತಿ ಮತ್ತು ನಿರೀಕ್ಷಣಾ ಉಪದಾನವನ್ನು ಸಂದಾಯ ಮಾಡಬಹುದು.

ಉದ್ಯೋಗಿ ನಿವೃತ್ತನಾದ ನಂತರವೂ ನಾಲ್ಕು ವರ್ಷಗಳೊಳಗೆ ಸಂಭವಿಸಿದ ಘಟನೆಗಳ ಬಗ್ಗೆ ಸರ್ಕಾರದ ಪೂರ್ವಾನುಮತಿ ಪಡೆದು ಇಲಾಖಾ ವಿಚಾರಣೆಗೆ ಹೂಡಬಹುದು.

ಸರ್ಕಾರಕ್ಕೆ ಅಥವಾ ಸರ್ಕಾರೇತರ ಸಂಸ್ಥೆಗಳಿಗೆ ಬರಬೇಕಾದ ಬಾಕಿಗಳನ್ನು ನಿವೃತ್ತಿ ವೇತನ ಪರಿವರ್ತಿತ ನಿವೃತ್ತಿ ವೇತನದ ಮೊಬಲಗುಗಳಿಂದ ಹಾಗೂ ಕುಟುಂಬ ನಿವೃತ್ತಿಯಿಂದ ವಸೂಲಿಗೆ ಅವಕಾಶವಿಲ್ಲ.

ನಿವೃತ್ತಿ/ಮರಣ ಉಪದಾನ ಮತ್ತು ಗಳಿಕೆ ರಜೆ ನಗದೀಕರಣದ ವೇತನದಿಂದ, ಸರ್ಕಾರಕ್ಕೆ ಬರಬೇಕಾದ ಬಾಕಿಗಳನ್ನು ಉದ್ಯೋಗಿಯ/ಕುಟುಂಬದ ಒಪ್ಪಿಗೆಯಿಲ್ಲದೆಯೂ ವಸೂಲಿ ಮಾಡಬಹುದು.

ಸಾಲದ ವಸೂಲಾತಿಗಾಗಿ ನಿವೃತ್ತಿ ವೇತನ, ಪರಿವರ್ತಿತ ನಿವೃತ್ತಿ ವೇತನದ ಮೊಬಲಗು, ಉಪದಾನಗಳನ್ನು ಜಪ್ತಿ ಮಾಡಲು ಅವಕಾಶವಿಲ್ಲ.

ನಿವೃತ್ತಿ/ಮರಣ ಉಪದಾನ, ನಿವೃತ್ತಿ ವೇತನದ ಪರಿವರ್ತಿತಾ ಮೊಬಲಗು ನಿವೃತ್ತಿ ಅಥವಾ ಮರಣದ ವೇಳೆಯಲ್ಲಿ ಗಳಿಕೆ ರಜೆ ನಗದೀಕರಿಸಿದ ರಜಾ ವೇತನ – ಇವುಗಳು ಆದಾಯ ತೆರಿಗೆ ವ್ಯಾಪ್ತಿಗೆ ಒಳಪಡುವುದಿಲ್ಲ.

ಮಾನಸಿಕ ಅಸ್ವಸ್ಥತೆ ಅಥವಾ ದೈಹಿಕ ಅಸಮರ್ಥತೆಯ ಮಕ್ಕಳಿಗೆ ಜೀವನ ಪರ್ಯಂತ ಕುಟುಂಬ ಪಿಂಚಣಿ ಸಂದಾಯ ಮಾಡಲಾಗುವುದು.

ವಿಚ್ಛೇದನ ಪಡೆದ ಪತಿ/ಪತ್ನಿ ಹಾಗೂ ಮರು ಮದುವೆಯಾದ ವಿಧುರ/ವಿಧವೆಯರು ಕುಟುಂಬ ಪಿಂಚಣಿಗೆ ಅರ್ಹರಲ್ಲ.

ಕಾನೂನಿನ್ವಯ ಬೇರೊಬ್ಬ ಪತ್ನಿ ಹೊಂದಿರುವ ಪುರುಷ ಕುಟುಂಬ ಪಿಂಚಣಿಗೆ ಅರ್ಹನಲ್ಲ.

ನಿವೃತ್ತಿಯ ನಂತರ ಮದುವೆಯಾದ ಪಿಂಚಣಿದಾರನ ಪತ್ನಿ ಕುಟುಂಬ ಪಿಂಚಣಿಗೆ ಅರ್ಹಳು.

ಉದ್ಯೋಗಿಯ ಕೊಲೆಗೆ ಕಾರಣರಾದ ಅಥವಾ ದುಷ್ಪೇರಣೆ ನೀಡಿದ ಕುಟುಂಬದ ಸದಸ್ಯರಿಗೆ ಕುಟುಂಬ ಪಿಂಚಣಿ ಮತ್ತು ಉಪದಾನದ ಸಂದಾಯಕ್ಕೆ ಅವಕಾಶವಿಲ್ಲ.

ಕಾಣೆಯಾದ ಸರ್ಕಾರಿ ಉದ್ಯೋಗಿಯ ಕುಟುಂಬಕ್ಕೆ ಕುಟುಂಬ ಪಿಂಚಣಿ ಮತ್ತಿತರ ಸೌಲಭ್ಯಗಳನ್ನು ಮಂಜೂರು ಮಾಡಬಹುದು.

ನಿವೃತ್ತಿಯನ್ನು 1/3ನೇ ಭಾಗದವರೆಗೆ ಪರಿವರ್ತಿಸಿ ಇಡುಗಂಟಿನಲ್ಲಿ ಪಡೆಯಬಹುದು. 15 ವರ್ಷ ಪೂರ್ಣಗೊಂಡ ನಂತರ ಮೂಲ ನಿವೃತ್ತಿ ಸಂದಾಯ ಮಾಡಲಾಗುವುದು.

ನಿವೃತ್ತಿ ವೇತನ ಸೌಲಭ್ಯಗಳ ಇತ್ಯರ್ಥದ ವಿಳಂಬಕ್ಕೆ ಶೇ.12 ಬಡ್ಡಿ ಪಾವತಿಸಬೇಕು.

ಉದ್ಯೋಗಿಯಿಂದ ಸರ್ಕಾರಕ್ಕೆ ಬರಬೇಕಾದ ಬಾಕಿಯನ್ನು ಕಾಲ ಮಿತಿಯಲ್ಲಿ ನಿರ್ಧರಿಸದೆ ಸರ್ಕಾರಕ್ಕೆ ಉಂಟಾಗುವ ಆರ್ಥಿಕ ನಷ್ಟಕ್ಕೆ ಸಂಬಂಧಪಟ್ಟ ಅಧಿಕಾರಿಗಳು ಜವಾಬ್ದಾರರು.

ಕಚೇರಿ ಮುಖ್ಯಸ್ಥರು ಪತ್ರಾಂಕಿತರಲ್ಲದ ಅಧಿಕಾರಿಗಳ ಪಿಂಚಣಿ ದಾಖಲೆಗಳನ್ನು ಮಹಾಲೇಖಪಾಲರಿಗೆ ರವಾನಿಸಬೇಕು. ಪತ್ರಾಂಕಿತ ಅಧಿಕಾರಿಗಳು ನೇರವಾಗಿ ಮಹಾಲೇಖಪಾಲರಿಗೆ ರವಾನಿಸಬಹುದು. ಅನ್ಯಸೇವೆಯಲ್ಲಿನ ಎಲ್ಲ ಸರ್ಕಾರಿ ಅಧಿಕಾರಿಗಳ ಪಿಂಚಣಿ ದಾಖಲೆಗಳನ್ನು ಇಲಾಖಾ ಮುಖ್ಯಸ್ಥರ ಮೂಲಕ ರವಾನಿಸಬೇಕು.

ಪತ್ರಾಂಕಿತರಲ್ಲದ ಉದ್ಯೋಗಿಗಳ ಪಿಂಚಣಿ ದಾಖಲೆಗಳನ್ನು ಮುಷ್ಕರದ ಅವಧಿಯನ್ನು ಸರ್ಕಾರ ರಜೆಯೆಂದು ಪರಿಗಣಿಸದಿದ್ದಲ್ಲಿ ಉದ್ಯೋಗಿಯ ಹಿಂದಿನ ಸೇವೆಯನ್ನು ನಿವೃತ್ತಿ ವೇತನ ಸೌಲಭ್ಯಗಳಿಗೆ ಅರ್ಹ ಸೇವೆಗಾಗಿ ಪರಿಗಣಿಸುವಂತಿಲ್ಲ.

***

ಸೇವಾ ದಾಖಲೆ ನಿರ್ವಹಣೆ ನಿಯಮಗಳು

13.09.2017.
| ಲ. ರಾಘವೇಂದ್ರ

ಗೆಜೆಟೆಡ್ ಮತ್ತು ನಾನ್ ಗೆಜೆಟೆಡ್ ನೌಕರರ ಸೇವಾ ದಾಖಲು ಮಾಡುವುದರಿಂದ ನಿವೃತ್ತಿ ವೇತನದ ದಾಖಲೆ ತಯಾರಿಸಲು ಮತ್ತು ನಿವೃತ್ತಿ ವೇತನ ಲೆಕ್ಕ ಮಾಡಲು ಸಹಾಯವಾಗುತ್ತದೆ. ಗೆಜೆಟೆಡ್ ಅಧಿಕಾರಿಯ ಸೇವಾ ಪುಸ್ತಕವನ್ನು ಮಹಾಲೇಖಪಾಲರೂ, ನಾನ್ ಗೆಜೆಟೆಡ್ ನೌಕರರ ಸೇವಾ ಪುಸ್ತಕವನ್ನು ಕಚೇರಿ ಮುಖ್ಯಸ್ಥರು ತಯಾರಿಸಬೇಕು.

ಪ್ರತಿ ಸರ್ಕಾರಿ ನೌಕರನು ಕೆಲಸಕ್ಕೆ ಸೇರುವ ಮೊದಲು ಸರ್ಕಾರಿ ಖರ್ಚಿನಲ್ಲಿ ನಮೂನೆ 1ರಿಂದ ಸೇವಾ ಪುಸ್ತಕದಲ್ಲಿ ಕೆಳಕಂಡ ಅಂಶಗಳನ್ನು ಎಚ್ಚರಿಕೆಯಿಂದ ಬರೆಯಬೇಕಿದೆ.

1. ಸರ್ಕಾರಿ ನೌಕರನು ಮೊದಲು ಕೆಲಸಕ್ಕೆ ಹಾಜರಾದ ದಿನಾಂಕವನ್ನು ಬೆಳಗ್ಗೆ, ಮಧ್ಯಾಹ್ನವೇ ಸಮಸಹಿತ ಸೇವಾ ಪುಸ್ತಕದಲ್ಲಿ ಬರೆಯಬೇಕು.

2. ಸೇವಾ ಪುಸ್ತಕ ಕಚೇರಿ ಮುಖ್ಯಸ್ಥನ ಸುಪರ್ದಿನಲ್ಲಿರತಕ್ಕದ್ದು ಮತ್ತು ವರ್ಗವಾದಾಗ ಒಂದು ಕಚೇರಿಯಿಂದ ಇನ್ನೊಂದು ಕಚೇರಿಗೆ ಪೂರ್ತಿ ವಿವರಗಳೊಡನೆ ಕಳುಹಿಸುವುದು.

3. ಎಲ್ಲಾ ತರಹದ ಕಾರ್ಯನಿರ್ವಹಣೆ, ಬಡ್ತಿ ಮತ್ತು ಹಂಗಾಮಿ ಬಡ್ತಿಗಳನ್ನು ನಮೂದಿಸಬೇಕು.

4. ಪರೀಕ್ಷಾರ್ಥವಾಗಿ ನಿಗದಿಪಡಿಸಿದ ಸಮಯವನ್ನು ತೃಪ್ತಿಕರವಾಗಿ ಮಾಡಿದ್ದಾನೆಂಬುದನ್ನು ನಮೂದಿಸಬೇಕು.

5. ಸಂಬಳ ಬಡ್ತಿ ವರ್ಗಾವಣೆ ಮತ್ತು ರಜೆ ಬರೆಯಬೇಕು.

6. ಸೇವಾ ಪುಸ್ತಕದಲ್ಲಿ ದಾಖಲಿಸಿದ ಬರಹವನ್ನು ಕಚೇರಿ ಮುಖ್ಯಸ್ಥ ತನ್ನ ಸಹಿಯ ಮೂಲಕ ದೃಢಪಡಿಸಬೇಕು. ಸರ್ಕಾರಿ ನೌಕರನೇ ಮುಖ್ಯಸ್ಥನಾದಲ್ಲಿ ಆತನ ಮೇಲಧಿಕಾರಿಯು ದೃಢೀಕರಿಸಬೇಕು.

7. ಪ್ರತಿಯೊಂದು ದಾಖಲೆಯನ್ನು ಇಲಾಖಾ ಆದೇಶ ಪೇ ಬಿಲ್ ಮತ್ತು ರಜೆ ಪಟ್ಟಿಗಳಿಂದ ಪರೀಕ್ಷಿಸತಕ್ಕದ್ದು.

8. ಕಚೇರಿಯ ಗೆಜೆಟೆಡ್ ಸಹಾಯಕರಿಗೆ ಈ ದೃಡೀಕರಿಸುವುದನ್ನು ವಹಿಸಬಹುದು.

9. ತಿದ್ದುಪಡಿ ಮತ್ತು ಮೇಲ್ಬರವಣಿಗೆಗಳನ್ನು ಬರೆದುದನ್ನು ಸಹಿ ಮೂಲಕ ದೃಢೀಕರಿಸತಕ್ಕದ್ದು.

10. ಇಲಾಖಾ ಪರೀಕ್ಷೆಗಳಲ್ಲಿ ಸರ್ಕಾರಿ ನೌಕರನು ತೇರ್ಗಡೆಯಾಗಿದ್ದರೆ ಸೇವಾ ಪುಸ್ತಕದಲ್ಲೂ ನಮೂದಿಸಬೇಕು. ತೇರ್ಗಡೆಯಾದವರ ರಿ.ನಂಬರ್ ಪ್ರಕಟಿಸಿದ ಗೆಜೆಟ್ನ ದಿನಾಂಕ ಬರೆಯಬೇಕು.

11. ತಾತ್ಕಾಲಿಕ, ಕಾಯಂ ಸೇವೆಗಳನ್ನು ನಿವೃತ್ತಿ ಸೇವೆಗೆ ತೆಗೆದá-ಕೊಳ್ಳಲು ನಿರ್ಧರಿಸಲು ಆಡಿಟ್ ಕಚೇರಿಯವರಿಗೆ ಸಹಾಯವಾಗá-ವಂಥ ವಿವರಗಳನ್ನು ಕಚೇರಿ ಮುಖ್ಯಸ್ಥ ಒದಗಿಸಬೇಕು.

12. ಸರ್ಕಾರಿ ನೌಕರನನ್ನು ಕೆಳದರ್ಜೆಗೆ ಇಳಿಸಿದಾಗ, ವಜಾ ಮಾಡಿದಾಗ ಇನ್ನಿತರ ಶಿಕ್ಷೆ ವಿಧಿಸಿದಾಗ ಸೂಕ್ಷ್ಮವಿವರ ನಮೂದಿಸಬೇಕು. ಇವುಗಳ ಆದೇಶಗಳನ್ನು ಸೇವಾ ಪುಸ್ತಕದಲ್ಲಿ ಲಗತ್ತಿಸಲಾಗá-ವುದು.

13. ಕಡ್ಡಾಯ ನಿವೃತ್ತಿ ತೆಗೆದು ಹಾಕá-ವುದು ಅಥವಾ ವಜಾ ಮಾಡá-ವಂತೆ ನಿವೃತ್ತಿಯ ಗಣನೆಗೆ ಬರುವ ವಿಷಯಗಳು ಹಿಂದಿನ ಸೇವಾ ಅವಧಿಯಲ್ಲಿದ್ದವೇ ಅಥವಾ ಇಲ್ಲವೆ ಎಂಬá-ದನ್ನು ಸ್ಪಷ್ಟವಾಗಿ ಸೇವಾ ಪುಸ್ತಕದಲ್ಲಿ ತಿಳಿಸತಕ್ಕದ್ದು.

14. ರಜೆಯ ಲೆಕ್ಕಗಳನ್ನು ಕಚೇರಿಯ ಮುಖ್ಯಸ್ಥ ಸಹಿಯೊಂದಿಗೆ ದೃಢೀಕರಿಸಬೇಕು.

15. ಹೊಸ ಪೇಸ್ಕೇಲ್, ರಜೆ ನಿಯಮ, ನಿವೃತ್ತಿ ನಿಯಮ ಅಥವಾ ಇನ್ನಿತರೆ ಷರತ್ತುಗಳ ಒಪ್ಪಿಗೆಗಳನ್ನು ಲಗತ್ತಿಸತಕ್ಕದ್ದು.

16. ಹುಟ್ಟಿದ ದಿನಾಂಕಕ್ಕೆ ಸಂಬಂಧಿಸಿದ ಪತ್ರಗಳಿಂದ ಪರಿಶೀಲಿಸಿದ ದೃಢೀಕರಣ ಪತ್ರ ಪಡೆಯಬೇಕು.

17. ಗುರುತಿಗೋಸ್ಕರ ಬೆರಳಚ್ಚು ಮತ್ತು ವ್ಯಕ್ತಿಯ ಚಿಹ್ನೆ – ವಿವರ ನಮೂದಿಸಬೇಕು.

18. ವರ್ಷಕ್ಕೆ ಒಂದು ಸಲ ಕಚೇರಿ ಮುಖ್ಯಸ್ಥ ನೌಕರನಿಗೆ ಸೇವಾ ಪುಸ್ತಕ, ವಿವರಗಳನ್ನು ಪರಿಶೀಲಿಸಲು ನೀಡಬೇಕು.

19. ಸರ್ಕಾರಿ ನೌಕರನ ನಿವೃತ್ತಿ, ರಾಜೀನಾಮೆ ಅಥವಾ ಸೇವೆಯಿಂದ ಕೊನೆಗೊಳಿಸಿದಾಗ ಸೇವಾ ಪುಸ್ತಕವನ್ನು ವಾಪಸ್ಸು ಕೊಡಲಾಗದು.

20. ಸರ್ಕಾರಿ ನೌಕರರನ್ನು ಸೇವೆಯಿಂದ ತೆಗೆದಾಗ ಅಥವಾ ವಜಾ ಮಾಡಿದಾಗ 5 ವರ್ಷದವರೆಗೆ ಸೇವಾ ಪುಸ್ತಕ ಇಟ್ಟಿರಬೇಕು.

21. ಸೇವಾ ಪುಸ್ತಕವನ್ನು ಕಚೇರಿ ಮುಖ್ಯಸ್ಥ ಅಥವಾ ಇತರೆ ಅಧಿಕೃತ ಅಧಿಕಾರಿಯು ವರ್ಷದ ಪರಿಶೀಲಿಸಬೇಕು.

22. ಸರ್ಕಾರಿ ನೌಕರನ 25ವರ್ಷ ಪೂರ್ಣ ಸೇವೆಗೊಳಿಸಿದ ನಂತರ ಮಹಾಲೇಖಪಾಲ (ಎ.ಜಿ.)ರಿಂದ ಪುಸ್ತಕ ಪರಿಶೀಲಿಸಬೇಕು.

23. ಕಚೇರಿ ಮುಖ್ಯಸ್ಥನು ಸೇವಾ ಪುಸ್ತಕದ ಎರಡನೇ ಪ್ರತಿ ತಯಾರಿಸಿ ಎಲ್ಲಾ ವಿವರ ದೃಢೀಕರಿಸಿ ನೌಕರನೇ ಎರಡನೇ ಪ್ರತಿ ತಯಾರಿಸಲು ಬರುವ ತೊಂದರೆ ತಪ್ಪಿಸಬಹುದು.

24. ಸರ್ಕಾರಿ ನೌಕರನು ಸೇವೆಗೆ ಸೇರಿ ಒಂದು ತಿಂಗಳಿಗೆ ಕಚೇರಿ ಮುಖ್ಯಸ್ಥನಿಗೆ ತನ್ನ ಕುಟುಂಬ ಸದಸ್ಯರ ವಿವರಗಳನ್ನು ಕ.ಸ.ಸೇ. (ಕು.ನಿ.) ನಿಯಮ 7ರಲ್ಲಿ ಸೂಚಿಸಿರುವಂತೆ ಒದಗಿಸಬೇಕು.

***

ಪರೀಕ್ಷಾ ರಜೆ ಪ್ರಸೂತಿ ರಜೆ

30.08.2017.
| ಲ. ರಾಘವೇಂದ್ರ

ಪರೀಕ್ಷಾ ರಜೆ (Examination Leave): ನಿಗದಿಪಡಿಸಿದ ಇಲಾಖಾ ಪರೀಕ್ಷೆಯ ಸಂಬಂಧದಲ್ಲಿ ಪರೀಕ್ಷೆಗೆ ಹಾಜರಾಗಲು ಆತನ ಸೇವಾವಧಿಯಲ್ಲಿ 2 ಬಾರಿ ಮಾತ್ರ ಅನುಮತಿ ನೀಡಲಾಗುವುದು ಆದರೆ ರಾಜ್ಯ ಲೆಕ್ಕಪತ್ರ ಇಲಾಖೆಯ ಎಸ್ಎಎಸ್ ಹಾಗೂ ಖಜಾನೆ ಇಲಾಖೆಯ ಟ್ರೆಝುರಿ ಹೆಡ್ ಅಕೌಂಟಂಟ್ ಪರೀಕ್ಷೆಗೆ ಹಾಜರಾಗಲು 3 ಬಾರಿ ಅನುಮತಿ ನೀಡಲಾಗುವುದು. ಈ ಸಂದರ್ಭಗಳಲ್ಲಿ ಪರೀಕ್ಷೆ ದಿನ ಮತ್ತು ಪ್ರಯಾಣದ ದಿನಗಳಿಗೆ ರಜೆ ನೀಡಲಾಗುವುದು.

ಪ್ರಸೂತಿ ರಜೆ (Maternity Leave): ಎರಡು ಅಥವಾ ಹೆಚ್ಚು ಜೀವಂತ ಮಕ್ಕಳನ್ನು ಹೊಂದಿರದ ವಿವಾಹಿತ ಸರ್ಕಾರಿ ನೌಕರಳಿಗೆ ಪ್ರಸೂತಿ ರಜೆಯನ್ನು ಅದರ ಆರಂಭದ ದಿನಾಂಕದಿಂದ 180 ದಿನಗಳು ನೀಡಬಹುದು. ಈ ಅವಧಿಯಲ್ಲಿ ಅವಳು ರಜೆಯ ಮೇಲೆ ಹೋಗುವ ನಿಕಟಪೂರ್ವದಲ್ಲಿ ಆಕೆ ಪಡೆಯುತ್ತಿದ್ದ ವೇತನಕ್ಕೆ ಸಮನಾದ ರಜಾವೇತನವನ್ನು ನೀಡಲಾಗುವುಗು. (ಕ.ಸ.ಸೇ.ನಿ. 135(1).

ಇದನ್ನು ವೊಕೆಷನ್ ರಜೆ ಅಥವಾ ಇನ್ನಾವುದೇ ರೀತಿಯ ರಜೆಯೊಂದಿಗೆ ಸೇರಿಸಬಹುದು. ವೈದ್ಯಕೀಯ ಪ್ರಮಾಣಪತ್ರವನ್ನು ಹಾಜರುಪಡಿಸದೆ ಇದ್ದರೂ 60 ದಿನಗಳಿಗೆ ಮೀರದಂತೆ ರಜೆಯನ್ನು ಮಂಜೂರು ಮಾಡಬಹುದು (ಕ.ಸ.ಸೇ.ವಿ. 135 (4ಎ) ಪ್ರಸೂತಿ ರಜೆಯನ್ನು ಯಾವುದೇ ರಜೆಯ ಲೆಕ್ಕದಿಂದ ಕಳೆಯತಕ್ಕದ್ದಲ್ಲ. (ಕ.ಸ.ಸೇ.ವಿ. 135 (4ಬಿ).

ಗರ್ಭಸ್ರಾವ ಅಥವಾ ಗರ್ಭಪಾತ ರಜೆ (Medical Termination Leave): ವೈದ್ಯಕೀಯ ಪರ್ಯವಸಾನ ಅಧಿನಿಯಮ 71ರ ಮೇರೆಗೆ ಪ್ರೇರಣೆಯಿಂದ ಮಾಡಿಸಿಕೊಂಡ ಗರ್ಭಪಾತವು ಸೇರಿದಂತೆ ಗರ್ಭಸ್ರಾವ ಅಥವಾ ಗರ್ಭಪಾತವಾದಾಗ ವೈದ್ಯಕೀಯ ಪ್ರಮಾಣ ಪತ್ರದ ಆಧಾರದಿಂದ 2 ಅಥವಾ ಹೆಚ್ಚು ಜೀವಂತ ಮಕ್ಕಳನ್ನು ಹೊಂದಿರದ ವಿವಾಹಿತ ಸರ್ಕಾರಿ ನೌಕರಳಿಗೆ 6 ವಾರಗಳಿಗೆ ಮೀರದಂತೆ ಮಂಜೂರು ಮಾಡಬಹುದು. (ಕ.ಸ.ಸೇ.ವಿ. 135 (2ಎ, ಬಿ, 3)

ಮಗುವನ್ನು ದತ್ತು ತೆಗೆದುಕೊಂಡಾಗ ಮಹಿಳಾ ಸರ್ಕಾರಿ ನೌಕರಳಿಗೆ ರಜೆ Leave to female Govt. Servant on adoption of child): ಎರಡು ಜೀವಂತ ಮಕ್ಕಳನ್ನು ಹೊಂದಿರದ ಮಹಿಳಾ ಸರ್ಕಾರಿ ನೌಕರಳು ಮಗುವೊಂದನ್ನು ದತ್ತು ತೆಗೆದುಕೊಂಡಾಗ ಒಂದು ವರ್ಷದ ಅಥವಾ ದತ್ತಕ ಮಗುವಿಗೆ ಒಂದು ವರ್ಷ ವಯಸ್ಸಾಗುವವರೆಗೆ ಇವುಗಳಲ್ಲಿ ಯಾವುದು ಕಡಿಮೆಯೊ ಆವರೆಗೆ ದೊರೆಯಬಹುದಾದ ಮತ್ತು ಅನುಮತಿಸಬಹುದಾದ ರಜೆಯನ್ನು (60 ದಿನಗಳನ್ನು ಮೀರದಂತೆ, ವೈದ್ಯಕೀಯ ಪ್ರಮಾಣಪತ್ರವನ್ನು ಹಾಜರುಪಡಿಸದೆ ಪರಿವರ್ತಿತ ರಜೆ ಮತ್ತು ಗಳಿಸದ ರಜೆ ಸೇರಿದಂತೆ) ಮಂಜೂರು ಮಾಡಬಹುದು. (ಕ.ಸ.ಸೇ.ವಿ. 135ಎ).

ಪಿತೃತ್ವ ರಜೆ (Paternity Leave): ಎರಡು ಅಥವಾ ಹೆಚ್ಚಿಗೆ ಜೀವಂತ ಮಕ್ಕಳಿಲ್ಲದ ಸರ್ಕಾರಿ ನೌಕರನ ಪತ್ನಿಯ ಹೆರಿಗೆ ಸಂದರ್ಭದಲ್ಲಿ ಹೆರಿಗೆ ದಿನಾಂಕದಿಂದ ಪ್ರಾರಂಭವಾಗುವಂತೆ 15 ದಿನಗಳ ಮೆಟರ್ನಿಟಿ ರಜೆಯನ್ನು ಮಂಜೂರು ಮಾಡಬಹುದು. ಇದನ್ನು ಯಾವುದೇ ರಜಾ ಲೆಕ್ಕದಿಂದ ಕಳೆಯತಕ್ಕದ್ದಲ್ಲ ಹಾಗೂ ಸಾಂರ್ದಭಿಕ ರಜೆ ಹೊರತು ಉಳಿದ ಯಾವುದೇ ರಜೆಯೊಂದಿಗೆ ಸಂಯೋಜಿಸಿಕೊಳ್ಳಬಹುದು. ಈ ರಜೆ ಅವಧಿಯಲ್ಲಿ ರಜೆಗೆ ಹೋಗುವ ನಿಕಟ ಪೂರ್ವದಲ್ಲಿದ್ದಂತೆ ವೇತನವು ಪ್ರಾಪ್ತವಾಗುತ್ತದೆ. ಈ ರಜೆಯನ್ನು ನಗದೀಕರಿಸಿಕೊಳ್ಳಲು ಅಥವಾ ಗಳಿಕೆ ರಜೆಯೊಂದಿಗೆ ಸೇರಿಸಿಕೊಳ್ಳಲು ಆಗುವುದಿಲ್ಲ. ಸಾಮಾನ್ಯವಾಗಿ ಈ ರಜೆಯನ್ನು ನಿರಾಕರಿಸುವಂತಿಲ್ಲ (ಕ.ಸ.ಸೇ.ವಿ. 135 (ಬಿ)

ಮುಂದುವರಿಯುವುದು…

06.09.2017.

ಸರ್ಕಾರಿ ನೌಕರ ತನ್ನ ಕಚೇರಿ ಕೆಲಸದ ನಿರ್ವಹಣೆ ವೇಳೆ ಅಂಗವಿಕಲನಾದರೆ(ಕಾಯಂ ಅಥವಾ ತಾತ್ಕಾಲಿಕ ನೌಕರ)ಅಂಗವೈಕಲ್ಯ ವಿಶೇಷ ರಜೆ ಮಂಜೂರು ಮಾಡಬಹುದು. ವೈಕಲ್ಯ ಸಂಭವಿಸಲು ಕಾರಣವಾದ ಘಟನೆ ನಡೆದ ಮೂರು ತಿಂಗಳ ತರುವಾಯ ವೈಕಲ್ಯ ಕಾಣಿಸಿಕೊಂಡಾಗ ಇದರ ಕಾರಣವು ಸರ್ಕಾರಕ್ಕೆ ಮನದಟ್ಟಾದರೆ ರಜೆಗೆ ಅನುಮತಿ ನೀಡಬಹುದು. ಅಧಿಕೃತ ಮೆಡಿಕಲ್ ಅಟೆಂಡರ್ಗಳು ಅಗತ್ಯವೆಂದು ಪ್ರಮಾಣೀಕರಿಸಿದ ಅವಧಿಗೆ ರಜೆ ಮಂಜೂರು ಮಾಡಬಹುದು. ಆದರೆ ಇದು 24 ತಿಂಗಳನ್ನು ಮೀರತಕ್ಕದ್ದಲ್ಲ. ಇದನ್ನು ಯಾವುದೇ ಇತರ ರಜೆಯೊಂದಿಗೆ ಸೇರಿಸಬಹುದು. ಈ ರಜೆಯನ್ನು ನಿವೃತ್ತಿಗೆ ಸಂಬಂಧಪಟ್ಟಂತೆ ಕರ್ತವ್ಯದ ದಿನಗಳೆಂದು ಪರಿಗಣಿಸಲಾಗುವುದು. ಈ ರಜೆಯ ಯಾವುದೇ ಅವಧಿಯ ಮೊದಲ 120 ದಿನಗಳಿಗೆ ಗಳಿಕೆ ರಜೆಯಲ್ಲಿದ್ದಾಗ ಪಡೆಯುವ ರಜಾವೇತನಕ್ಕೆ ಸಮನಾದ ವೇತನ ದೊರೆಯುವುದು.

ವಿಶೇಷ ರಜೆ: ಪಶು ವೈದ್ಯಕೀಯ ಇಲಾಖೆಯ ಲೈವ್ಸ್ಟಾಕ್ ಫಾರ್ಮ್ಗಳ ತಾತ್ಕಾಲಿಕ ನೌಕರರು ಕರ್ತವ್ಯ ನಿರ್ವಹಿಸುವಾಗ ಗಾಯಗಳಾಗಿ ಕೆಲಸ ಮಾಡಲು ಅಸಮರ್ಥರಾದರೆ (ನಿರ್ಲಕ್ಷತೆಯಿಂದಲ್ಲದೆ) ಕರ್ನಾಟಕ ಪಶು ಸಂಗೋಪನ ನಿರ್ದೇಶಕರು, ಜಿಲ್ಲಾ ವೈದ್ಯಾಧಿಕಾರಿ ಪ್ರಮಾಣಪತ್ರದ ಆಧಾರದ ಮೇಲೆ ಭತ್ಯೆ ಸಹಿತ ರಜೆಯನ್ನು 30 ದಿನಗಳವರೆಗೆ ವಿಶೇಷ ರಜೆ ನೀಡಬಹುದು. ಸ.ಸೇ.ವಿ. 138.

ವೈದ್ಯ ಇಲಾಖೆಯಲ್ಲಿ ರೇಡಿಯಂ ಸಂಪರ್ಕವಿರುವ ಸರ್ಕಾರಿ ನೌಕರನಿಗೆ ಪ್ರತಿ 6 ತಿಂಗಳಿಗೊಮ್ಮೆ 15 ದಿನಗಳಿಗೆ ಮೀರದಂತ ರಜೆ ಮಂಜೂರು ಮಾಡಬಹುದು. ಈ ಅವಧಿಯು ಅರ್ಧ ವೇತನದ ರಜೆಗೆ ಗಣನೆಗೆ ಬರುವುದು. ಆದರೆ ಗಳಿಕೆ ರಜೆಗೆ ಗಣನೆಗೆ ಬರುವುದಿಲ್ಲ. ಈ ರಜೆಯ ಅವಧಿಯಲ್ಲಿ ಗಳಿಕೆ ರಜೆಯ ಕಾಲದಲ್ಲಿ ದೊರೆಯುವಂತೆ ರಜಾ ಭತ್ಯೆಗಳು ದೊರೆಯುವುದು. (ಕ.ಸ.ಸೇ.ವಿ. 139).

ಅರಣ್ಯ ಇಲಾಖೆಯ ಕೆಲವು ಆಯ್ದ ರೇಂಜುಗಳಲ್ಲಿ ಕೆಲಸ ಮಾಡುತ್ತಿರುವ ರೇಂಜರ್, ಫಾರೆಸ್ಟರ್, ಅರಣ್ಯ ರಕ್ಷಕ ಮತ್ತು ಗುಮಾಸ್ತರಿಗೆ ಗಳಿಕೆ ರಜೆ ಜತೆಗೆ ಆರೋಗ್ಯ ಸುಧಾರಣೆಗೆ ಸ್ಥಳ ಬದಲಾಯಿಸಲು ಪ್ರತಿ ವರ್ಷವು ಒಂದು ತಿಂಗಳು ಪೂರ್ಣ ವೇತನ ಸಹಿತ ವಿಶೇಷ ಸ್ಥಳದ ರಜೆ ನೀಡಬಹುದು.

ಅನಧಿಕೃತ ಗೈರು ಹಾಜರಿ: ಸರ್ಕಾರಿ ನೌಕರನು ಸಕ್ಷಮ ಪ್ರಾಧಿಕಾರಿಯ ಮಂಜೂರಾತಿಯಿಲ್ಲದೆ ಕರ್ತವ್ಯಕ್ಕೆ ಗೈರಾಗುವಂತಿಲ್ಲ, ಆದರೆ ನೌಕರನು ತನ್ನ ನಿಯಂತ್ರಣಕ್ಕೆ ಮೀರಿದ ಕಾರಣದಿಂದ ಸಕ್ಷಮ ಪ್ರಾಧಿಕಾರದ ಮಂಜೂರಾತಿಯಿಲ್ಲದೆ ಗೈರಾದ ಬಗ್ಗೆ ತಿಳಿಸಿದಾಗ ಅದನ್ನು ಪರಿಶೀಲಿಸಿ ತೃಪ್ತಿಕರವಾಗಿದೆ ಎಂದು ಪರಿಗಣಿಸಿ ಗೈರು ಅವಧಿಯನ್ನು ನೌಕರನ ಹಕ್ಕಿನಲ್ಲಿರುವ ಯಾವುದಾದರೂ ರಜೆಯನ್ನಾಗಿ ಪರಿವರ್ತಿಸಬಹುದು. ಸಕ್ಷಮ ಪ್ರಾಧಿಕಾರಿಯು ನೌಕರನ ಗೈರಿನ ಕಾರಣ ಒಪ್ಪಿಕೊಳ್ಳದಿದ್ದಲ್ಲಿ ಗೈರು ಅವಧಿಯನ್ನು ಅನಧಿಕೃತ ಗೈರು ಹಾಜರಿ ಎಂದು ಆದೇಶಿಸಬಹುದು. ಇಂತಹ ಅವಧಿಯಲ್ಲಿ ನೌಕರನಿಗೆ ಯಾವುದೇ ವೇತನ ಭತ್ಯೆಗಳು ಲಭ್ಯವಾಗುವುದಿಲ್ಲ.

ಸರ್ಕಾರಿ ನೌಕರನು ಸಕ್ಷಮ ಪ್ರಾಧಿಕಾರದ ಅನುಮತಿ ಪಡೆದು ರಜೆ ಬಳಸಿಕೊಂಡು, ರಜಾ ಅವಧಿ ಮುಗಿದ ನಂತರ ಕೂಡಲೆ ಕರ್ತವ್ಯಕ್ಕೆ ಹಾಜರಾಗಿದ್ದಾಗಲೂ ಅವಧಿ ಮೀರಿದ ಗೈರು ಹಾಜರಿ ಪ್ರಕರಣ ಉಂಟಾಗುತ್ತದೆ. ಇಂತಹ ಸಂದರ್ಭದಲ್ಲೂ ಈ ಮೇಲಿನಂತೆಯೇ ಕ್ರಮ ತೆಗೆದುಕೊಳ್ಳಬಹುದು.

ಕಚೇರಿ ವೇಳೆಯನ್ನು ಎರಡು ಬಾಗಗಳಾಗಿ ವಿಂಗಡಿಸಿರುವಾಗ ಯಾವುದೇ ಒಂದು ಭಾಗದ ಅನಧಿಕೃತ ಗೈರಿಗೆ ಅರ್ಧ ದಿನದ ವೇತನ ಭತ್ಯೆಗಳನ್ನು ಮುಟ್ಟುಗೋಲು ಹಾಕಿಕೊಳ್ಳಲಾಗುತ್ತದೆ. ಕಚೇರಿ ಪ್ರಾರಂಭದ ವೇಳೆಯೊಳಗೆ ಹಾಜರಾಗಬೇಕು, ಹತ್ತು ನಿಮಿಷ ತಡವಾದರೆ ಮಾತ್ರ ಸಾಂರ್ದಭಿಕ ವಿನಾಯಿತಿ ಇರುತ್ತದೆ. ಹತ್ತು ನಿಮಿಷಗಳ ನಂತರ ಮಧ್ಯಾಹ್ನ 2 ಗಂಟೆ ಒಳಗೆ ಕಚೇರಿಗೆ ಹಾಜರಾದಾಗ ನೌಕರನು 1/2 ದಿನದ ಸಾಂರ್ದಭಿಕ ರಜೆ ಕಳೆದುಕೊಳ್ಳುತ್ತಾನೆ. ನೌಕರನ ಹಕ್ಕಿನಲ್ಲಿ ಸಾಂರ್ದಭಿಕ ರಜೆ ಇಲ್ಲದಿದ್ದರೆ ಹಕ್ಕಿನಲ್ಲಿರುವ ಒಂದು ದಿನದ ಗಳಿಕೆ ರಜೆ ಅಥವಾ ಇತರೆ ರಜೆ ಕಳೆದುಕೊಳ್ಳಬೇಕಾಗುತ್ತದೆ. (ಕ.ಸ.ಸೇ.ನಿ. 106ಎ)

ಮುಷ್ಕರದ ಕಾರಣದಿಂದ ಕರ್ತವ್ಯಕ್ಕೆ ಗೈರಾದ ಸರ್ಕಾರಿ ನೌಕರನು ಯಾವುದೇ ರಜೆಗೆ ಹಕ್ಕು ಹೊಂದಿರುವುದಿಲ್ಲ, ಹಾಗೂ ತನ್ನ ಲೆಕ್ಕದಲ್ಲಿರುವ ಎಲ್ಲಾ ಬಗೆಯ ರಜೆ ಕಳೆದುಕೊಳ್ಳುತ್ತಾನೆ.(ಕ.ಸ.ಸೇ.ನಿ. 106 ಬಿ).

(ಪ್ರತಿಕ್ರಿಯಿಸಿ:raghuprakash57@gmail.com, feedback@vijayavani.in)

***

ಅರ್ಧವೇತನ ರಜೆಯ ನಿಯಮಗಳು

16.08.2017.
| ಲ.ರಾಘವೇಂದ್ರ

ಬಿಡುವಿರುವ ಇಲಾಖೆಯ ಸರ್ಕಾರಿ ನೌಕರನು ಯಾವುದೇ ವರ್ಷದಲ್ಲಿ ಬಿಡುವನ್ನು ಭಾಗಶಃ ಬಳಸಿಕೊಂಡ ಪಕ್ಷದಲ್ಲಿ ಆ ವರ್ಷದ ಬಿಡುವಿನಲ್ಲಿ ಆತ ಬಳಸಿಕೊಳ್ಳದಿರುವ ಬಿಡುವಿನ ದಿವಸಗಳಷ್ಟಕ್ಕೆ 30 ದಿವಸಗಳ ಅಂತಹ ಅನುಪಾತದಲ್ಲಿ ಗಳಿಕೆ ರಜೆಯನ್ನು ಪಡೆಯಲು ಹಕ್ಕುಳ್ಳವನಾಗಿರುತ್ತಾನೆ. ಆದರೆ ಕಾಯಂ ಸೇವೆ ಅಥವಾ ಅರೆ ಕಾಯಂ ಸೇವೆಯಲ್ಲಿಲ್ಲದ ಸರ್ಕಾರಿ ನೌಕರನಿಗೆ ಸೇವೆಯ ಮೊದಲನೆ ವರ್ಷಕ್ಕೆ ಸಂಬಂಧಿಸಿದಂತೆ ಇದು ಅನ್ವಯಿಸುವುದಿಲ್ಲ

ಉದಾ: ಒಂದು ವರ್ಷದಲ್ಲಿ 120 ದಿನಗಳ ಬಿಡುವಿರುವ ಇಲಾಖೆಯ ಒಬ್ಬ ಸರ್ಕಾರಿ ನೌಕರನನ್ನು ಬಿಡುವಿನ ದಿನಗಳಾದ 8.5.2005 ರಿಂದ 27.5.2005 ರವರೆಗೆ 20 ದಿನಗಳು ದಾಸ್ತಾನು ಪರಿಶೀಲನಾ ಕಾರ್ಯಕ್ಕಾಗಿ ನಿಯೋಜಿಸಿದೆ. ಈ ಅವಧಿಯಲ್ಲಿ ಅವರಿಗೆ ಲಭ್ಯವಾಗುವ ಹೆಚ್ಚುವರಿ ಗಳಿಕೆ ರಜೆಯನ್ನು ಲೆಕ್ಕಾಚಾರ ಮಾಡಿ.

ಹೆಚ್ಚುವರಿ ಗಳಿಕೆ ರಜೆ = (30(ಉಪಯೋಗಿಸದ ಬಿಡುವು) / (ವರ್ಷದ ಒಟ್ಟು ಬಿಡುವಿನ ಅವಧಿ)

= (3020) /120 = 5 ದಿನಗಳು (ಕ.ಸ.ಸೇ.ನಿ. 113(3-ಎ) ಬಿಡುವಿರುವ ಇಲಾಖೆಯ ಸರ್ಕಾರಿ ನೌಕರನು ಯಾವುದೇ ವರ್ಷದಲ್ಲಿ ಯಾವುದೇ ಬಿಡುವನ್ನು ಉಪಯೋಗಿಸಿಕೊಳ್ಳದೇ ಇದ್ದರೆ ಆ ವರ್ಷಕ್ಕೆ ಸಂಬಂಧಪಟ್ಟಂತೆ ಕ.ಸ.ಸೇ.ನಿ. 112 ರಂತೆ ಗಳಿಕೆ ರಜೆಯನ್ನು ಅನುಮತಿಸಲಾಗುತ್ತದೆ.

(ಕ.ಸ.ಸೇ.ನಿ. 113(3ಬಿ)) ಬಿಡುವಿರುವ ಇಲಾಖೆಯಿಂದ ಬಿಡುವಿರದ ಇಲಾಖೆಗೆ ವರ್ಗಾವಣೆಯಾದಾಗ ಸರ್ಕಾರಿ ನೌಕರನು ಅಂತಹ ವರ್ಗಾವಣೆಯ ಹಿಂದಿನ ಅರ್ಧ ಕ್ಯಾಲೆಂಡರ್ ವರ್ಷದಿಂದ ವರ್ಗಾವಣೆಯ ದಿನಾಂಕದವರೆಗೆ ಪೂರ್ಣಗೊಂಡ ಪ್ರತಿಯೊಂದು ತಿಂಗಳಿಗೆ 5/6 ದಿನದ ದರದಲ್ಲಿ ಗಳಿಕೆ ರಜೆ ಲೆಕ್ಕ ಹಾಕಲಾಗುವುದು. ವರ್ಗಾವಣೆಯಾದ ದಿನಾಂಕದಿಂದ ಅವನು ಬಿಡುವಿಲ್ಲದ ಇಲಾಖಾ ನೌಕರನಿಗೆ ಅನ್ವಯವಾಗುವ ಗಳಿಕೆ ರಜೆಯನ್ನು ಪಡೆಯಲು ಹಕ್ಕುಳ್ಳವನಾಗಿರುತ್ತಾನೆ.

(ಕ.ಸ.ಸೇ.ನಿ. 113(6ಎ)) ವರ್ಗಾವಣೆಯಾದ ದಿನಾಂಕದಿಂದ ಅರ್ಧ ಕ್ಯಾಲೆಂಡರ್ ವರ್ಷದ ಕೊನೆಯವರೆಗೆ ಅವನ ಸೇವೆಯು ಪೂರ್ತಿಗೊಂಡ ಪ್ರತಿಯೊಂದು ತಿಂಗಳಿಗೆ 5/6 ದಿನದ ದರದಲ್ಲಿ ಗಳಿಕೆ ರಜೆಯನ್ನು ಲೆಕ್ಕಹಾಕಲಾಗುವುದು.

(ಕ.ಸ.ಸೇ.ನಿ. 113(7ಎ)) 6. ಅರ್ಧ ವೇತನ ರಜೆ (ಏಚ್ಝ್ಛ ಕಚಢ ಔಛಿಚಡಛಿ): ಪ್ರತಿಯೊಂದು ಕ್ಯಾಲೆಂಡರ್ ವರ್ಷದ ಜನವರಿ ಮತ್ತು ಜುಲೈ ತಿಂಗಳ ಮೊದಲ ದಿನಾಂಕದಂದು ಪ್ರತಿ ಅರ್ಧವರ್ಷಕ್ಕೆ 10 ದಿನಗಳಂತೆ 2 ಕಂತುಗಳಲ್ಲಿ ಮುಂಚಿತವಾಗಿ ಜಮೆ ಮಾಡಬೇಕು. ಇದು 1.7.95 ರಿಂದ ಜಾರಿಗೆ ಬಂದಿದೆ. ಅರ್ಧ ವೇತನ ರಜೆಯು ಬಿಡುವಿರುವ ಇಲಾಖೆಯ ಸರ್ಕಾರಿ ನೌಕರರಿಗೆ ಅನ್ವಯಿಸುವುದಿಲ್ಲ.

ಸರ್ಕಾರಿ ನೌಕರನು ಯಾವುದೇ ಅರ್ಧ ವರ್ಷದಲ್ಲಿ ಯಾವುದೇ ಅಸಾಧಾರಣ ರಜೆ, ಗೈರುಹಾಜರಿ ಅವಧಿ, ಅಮಾನತ್ತಿನ ಅವಧಿ, ಲೆಕ್ಕಕ್ಕಿಲ್ಲದ ಅವಧಿ ಅಥವಾ ಕರ್ತವ್ಯವಲ್ಲದ ಅವಧಿಯೆಂದು ತೀರ್ವನಿಸಿದಾಗ ಈ ಅವಧಿಯ 1/18 ಭಾಗವನ್ನು, 10 ದಿನಗಳ ಗರಿಷ್ಠ ಮಿತಿಗೊಳಪಟ್ಟು ಕಡಿಮೆ ಮಾಡಬೇಕು.

ಸರ್ಕಾರಿ ನೌಕರನು ನೇಮಕಗೊಂಡ ಪ್ರತಿಪೂರ್ಣ ಕ್ಯಾಲೆಂಡರ್ ತಿಂಗಳಿಗೆ 5/3 ದಿನಗಳ ದರದಲ್ಲಿ ಅರ್ಧ ವೇತನ ರಜೆಯನ್ನು ಜಮೆ ಮಾಡಬೇಕು(ಕ.ಸ.ಸೇ.ನಿ. 112 (2ಎ)

ಸರ್ಕಾರಿ ನೌಕರನು ನಿವೃತ್ತಿ ಅಥವಾ ರಾಜೀನಾಮೆ ನೀಡಿದಾಗ ಸೇವೆಯು ಪೂರ್ಣಗೊಂಡ ಪ್ರತಿ ಕ್ಯಾಲೆಂಡರ್ ತಿಂಗಳಿಗೆ 5/3 ದಿನಗಳ ದರದಲ್ಲಿ ಅರ್ಧವೇತನ ರಜೆಯನ್ನು ಜಮೆ ಮಾಡಬೇಕು(ಕ.ಸ.ಸೇ.ನಿ. 114(2ಬಿ).

ಸರ್ಕಾರಿ ನೌಕರನನ್ನು ಸೇವೆಯಿಂದ ವಜಾ ಮಾಡಿದಾಗ ಅಥವಾ ತೆಗೆದು ಹಾಕಿದಾಗ ಅಥವಾ ಸೇವೆಯಲ್ಲಿರುವಾಗಲೇ ಮೃತನಾದಾಗ ಆ ಕ್ಯಾಲೆಂಡರ್ ತಿಂಗಳಿನ ಹಿಂದಿನ ಕೊನೆಯವರೆಗೆ ಪೂರ್ಣಗೊಂಡ ಪ್ರತಿ ತಿಂಗಳಿಗೆ 5/3 ದಿನಗಳ ದರದಲ್ಲಿ ಅರ್ಧ ವೇತನ ರಜೆಯನ್ನು ಜಮೆ ಮಾಡಬೇಕು.

***

ಗಳಿಕೆ ರಜೆ

Wednesday, 09.08.2017.
4. ಬಿಡುವಿಲ್ಲದ ಇಲಾಖಾ ನೌಕರರಿಗೆ ಗಳಿಕೆ ರಜೆ (Earned Leave)

ಒಂದು ಕ್ಯಾಲೆಂಡರ್ ವರ್ಷದಲ್ಲಿ 30 ದಿನಗಳ ಗಳಿಕೆ ರಜೆ ಲಭ್ಯ. ಇದನ್ನು ಎರಡು ಕಂತುಗಳಲ್ಲಿ ಅಂದರೆ ಪ್ರತಿವರ್ಷ ಜನವರಿ 1 ರಂತೆ 15 ದಿನಗಳು ಮತ್ತು ಜುಲೈ 1 ರಂದು 15 ದಿನಗಳು ಮುಂಗಡವಾಗಿ ಸರ್ಕಾರಿ ನೌಕರನ ರಜೆ ಲೆಕ್ಕಕ್ಕೆ ಜಮೆ ಮಾಡಲಾಗುತ್ತದೆ. ಹೀಗೆ ಜಮೆ ಮಾಡಿದ ಗಳಿಕೆ ರಜೆಯು ಒಟ್ಟು 300 ದಿನಗಳಿಗೆ ಮೀರಕೂಡದು. ಸರ್ಕಾರಿ ನೌಕರನ ಹಕ್ಕಿನಲ್ಲಿ ಡಿಸೆಂಬರ್ ಅಥವಾ ಜೂನ್ ತಿಂಗಳ ಕೊನೆಯ ದಿನದಂದು ಗಳಿಕೆ ರಜೆಯು 300 ದಿನಗಳಿಗಿಂತ ಹೆಚ್ಚು, 15 ದಿನಗಳ ಗಳಿಕೆ ರಜೆಯನ್ನು ಪ್ರತ್ಯೇಕವಾಗಿಡಬೇಕು. ಮತ್ತು ಮೊದಲಿಗೆ ಆ ಅರ್ಧ ವರ್ಷದಲ್ಲಿ ಸರ್ಕಾರಿ ನೌಕರನು ಬಳಸಿಕೊಳ್ಳುವ ಗಳಿಕೆ ರಜೆಗೆ ಸರಿ ಹೊಂದಿಸಬೇಕು. ನಂತರ ಯಾವುದೇ ಗಳಿಕೆ ರಜೆ ಉಳಿದಿದ್ದರೆ ಅದನ್ನು ಉಳಿದಿರುವ ಸದರಿ ಗಳಿಕೆ ರಜೆ ಹಾಗೂ ಈಗಾಗಲೆ ಹಕ್ಕಿನಲ್ಲಿರುವ ಗಳಿಕೆ ರಜೆ. ಇವೆರಡು ಸೇರಿ ಗರಿಷ್ಠ 300 ದಿನಗಳಿಗೆ ಮೀರದಂತೆ ಅರ್ಧ ವರ್ಷದ ಅಂತ್ಯದಲ್ಲಿ ಗಳಿಕೆ ರಜೆಯ ಲೆಕ್ಕಕ್ಕೆ ಜಮೆ ಮಾಡಬೇಕು. ಸರ್ಕಾರಿ ನೌಕರನು ನೇಮಕಗೊಂಡ ಪ್ರತಿ ಪೂರ್ಣ ಕ್ಯಾಲೆಂಡರ್ ತಿಂಗಳಿಗೆ ಎರಡೂವರೆ ದಿನಗಳ ದರದಲ್ಲಿ ಗಳಿಕೆ ರಜೆಯನ್ನು ಜಮೆ ಮಾಡಬೇಕು. ಸರ್ಕಾರಿ ನೌಕರನು ನಿವೃತ್ತಿ ಅಥವಾ ರಾಜೀನಾಮೆ ನೀಡಿದಾಗ ಸೇವೆಯು ಪೂರ್ಣಗೊಂಡ ಪ್ರತಿ ಕ್ಯಾಲೆಂಡರ್ ತಿಂಗಳಿಗೆ ಎರಡೂವರೆ ದಿನಗಳಂತೆ ಲೆಕ್ಕಹಾಕಬೇಕು. ಸರ್ಕಾರಿ ನೌಕರನನ್ನು ಸೇವೆಯಿಂದ ವಜಾ ಮಾಡಿದಾಗ ಅಥವಾ ತೆಗೆದು ಹಾಕಿದಾಗ ಅಥವಾ ಸೇವೆಯಲ್ಲಿರುವಾಗಲೇ ಮೃತನಾದಾಗ ಆ ಕ್ಯಾಲೆಂಡರ್ ತಿಂಗಳಿನ ಹಿಂದಿನ ತಿಂಗಳಿನ ಕೊನೆಯವರೆಗೆ ಪೂರ್ಣಗೊಂಡ ಪ್ರತಿ ಕ್ಯಾಲೆಂಡರ್ ತಿಂಗಳಿಗೆ ಎರಡೂವರೆ ದಿನಗಳಂತೆ ಲೆಕ್ಕಹಾಕಲಾಗುತ್ತದೆ. ಅರ್ಧವರ್ಷ ಮುಗಿಯುವ ಕೊನೆಯ ದಿನ ಸರ್ಕಾರಿ ನೌಕರನು ರಜೆಯ ಮೇಲಿದ್ದರೆ ಅವನು ಕರ್ತವ್ಯಕ್ಕೆ ಹಿಂತಿರುಗುವುದನ್ನು ಖಾತ್ರಿ ಮಾಡಿಕೊಂಡ ನಂತರ ಮುಂದಿನ ಅರ್ಧವರ್ಷದ ಮೊದಲ ದಿನ 15 ದಿನಗಳ ಮುಂಗಡ ಗಳಿಕೆ ರಜೆಯನ್ನು ಜಮೆ ಮಾಡಬೇಕು.

5. ಬಿಡುವಿರುವ ಇಲಾಖಾ ನೌಕರರಿಗೆ ಗಳಿಕೆ ರಜೆ (EL for vacation)

ಬಿಡುವಿರುವ ಇಲಾಖೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಸರ್ಕಾರಿ ನೌಕರರಿಗೆ ಪ್ರತಿ ವರ್ಷ ಜನವರಿ ಮತ್ತು ಜುಲೈ ತಿಂಗಳ ಮೊದಲನೆ ದಿನದಂದು 5 ದಿನಗಳಂತೆ ಎರಡು ಕಂತುಗಳಲ್ಲಿ ಗಳಿಕೆ ರಜೆಗೆ ಮುಂಚಿತವಾಗಿ ಜಮೆ ಮಾಡಲಾಗುತ್ತದೆ. ಬಿಡುವಿರುವ ಇಲಾಖೆಯ ಸರ್ಕಾರಿ ನೌಕರನು ಯಾವುದೇ ಅರ್ಧ ವರ್ಷದಲ್ಲಿ ಯಾವುದೇ ಅಸಾಧಾರಣ ರಜೆ ಗೈರುಹಾಜರಿ ಅವಧಿ, ಅಮಾನತ್ತಿನ ಅವಧಿ, ಲೆಕ್ಕಕ್ಕಿಲ್ಲದ ಅವಧಿ ಅಥವಾ ಕರ್ತವ್ಯವಲ್ಲದ ಅವಧಿಯೆಂದು ತೀರ್ವನಿಸಿದಾಗ ಈ ಅವಧಿಯ ಮೂವತ್ತನೆಯ ಒಂದು ಭಾಗವನ್ನು, 5 ದಿನಗಳ ಗರಿಷ್ಠ ಮಿತಿಗೊಳಪಟ್ಟು ಕಡಿಮೆ ಮಾಡಬೇಕು. ಬಿಡುವಿರುವ ಇಲಾಖೆಯ ಸರ್ಕಾರಿ ನೌಕರನು ಯಾವುದೇ ಅರ್ಧ ವರ್ಷದಲ್ಲಿ ನೇಮಕವಾದರೆ ಅಥವಾ ಸೇವೆಯಲ್ಲಿಲ್ಲವಾದರೆ ಆ ಅರ್ಧವರ್ಷದಲ್ಲಿ ಅವನು ಸಲ್ಲಿಸಿದ ಅಥವಾ ಸಲ್ಲಿಸಬಹುದಾದ ಪ್ರತಿ ಪೂರ್ಣಗೊಂಡ ಕ್ಯಾಲೆಂಡರ್ ತಿಂಗಳಿಗೆ 5/6 ದಿನದ ದರದಲ್ಲಿ ವೇತನ ರಜೆಯನ್ನು ನೀಡಬೇಕು. ಬಿಡುವಿರುವ ಇಲಾಖೆಯ ಸರ್ಕಾರಿ ನೌಕರನು ಯಾವುದೇ ವರ್ಷದಲ್ಲಿ ಬಿಡುವನ್ನು ಭಾಗಶಃ ಬಳಸಿಕೊಂಡ ಪಕ್ಷದಲ್ಲಿ ಆ ವರ್ಷದ ಬಿಡುವಿನಲ್ಲಿ ಆತ ಬಳಸಿಕೊಳ್ಳದೇ ಇರುವ ಬಿಡುವಿನ ದಿವಸಗಳಷ್ಟಕ್ಕೆ ಅಂತಹ ಅನುಪಾತದಲ್ಲಿ 30 ದಿವಸಗಳ ಗಳಿಕೆ ರಜೆಯನ್ನು ಪಡೆಯಲು ಹಕ್ಕುಳ್ಳವನಾಗಿರುತ್ತಾನೆ. ಆದರೆ ಖಾಯಂ ಸೇವೆ ಅಥವಾ ಅರೆ ಖಾಯಂ ಸೇವೆಯಲ್ಲಿಲ್ಲದ ಸರ್ಕಾರಿ ನೌಕರನಿಗೆ ಸೇವೆಯ ಮೊದಲನೆ ವರ್ಷಕ್ಕೆ ಸಂಬಂಧಿಸಿದಂತೆ ಇದು ಅನ್ವಯಿಸುವುದಿಲ್ಲ.

(ಪ್ರತಿಕ್ರಿಯಿಸಿ:raghuprakash57@gmail.com,
feedback@vijayavani.in)

***

ವೈವಿಧ್ಯಪೂರ್ಣ ರಜೆ ಸೌಲಭ್ಯಗಳು

Wednesday, 26.07.2017.
| ಲ. ರಾಘವೇಂದ್ರ

ಕರ್ನಾಟಕ ಸರ್ಕಾರಿ ಸೇವಾ ನಿಯಮಾವಳಿಯ ಅನುಬಂಧ ‘ಬಿ’ಯಲ್ಲಿ ಸಾಂರ್ದಭಿಕ ಮತ್ತು ವಿಶೇಷ ಸಾಂರ್ದಭಿಕ ರಜೆಗಳು ಈ ಕೆಳಗಿನಂತೆ ಸರ್ಕಾರಿ ನೌಕರರಿಗೆ ಲಭ್ಯವಾಗುತ್ತದೆ.

1. ಸಾಂರ್ದಭಿಕ ರಜೆ

ಕಾಯಂ ಅಥವಾ ಹಂಗಾಮಿ ಸರ್ಕಾರಿ ನೌಕರರಿಗೆ ಜನವರಿ ಮೊದಲ ದಿನಾಂಕದಿಂದ ಡಿಸೆಂಬರ್ 31ನೇ ದಿನಾಂಕದವರೆಗೆ 15 ದಿನಗಳ ಸಾಂರ್ದಭಿಕ ರಜೆ ದೊರೆಯುತ್ತದೆ. ಬಿಡುವಿನ ವೇಳೆ ಇಲಾಖೆಯಲ್ಲಿ ಕೆಲಸ ಮಾಡುವ ನೌಕರರಿಗೂ ಸಾಂರ್ದಭಿಕ ರಜೆ ಲಭ್ಯ. ಒಂದು ಸಲಕ್ಕೆ 7 ದಿನಗಳಿಗಿಂತ ಇದನ್ನು ಮಂಜೂರು ಮಾಡಲಾಗುವುದಿಲ್ಲ.

ಮೊದಲನೇ ವರ್ಷದ ಸೇವಾ ಅವಧಿಯಲ್ಲಿ ಸರ್ಕಾರಿ ನೌಕರರಿಗೆ ಒಂದು ತಿಂಗಳಿನ ಸೇವೆಗಾಗಿ ಒಂದು ದಿನದಂತೆ ಸಾಂರ್ದಭಿಕ ರಜೆ ಕೊಡಬೇಕು. ಅರ್ಧ ದಿನದ ಸಾಂರ್ದಭಿಕ ರಜೆಯನ್ನೂ ಕೊಡಬಹುದು. ಮಧ್ಯಾಹ್ನ 2 ಗಂಟೆವರೆಗೆ ಮತ್ತು ನಂತರದ ಅವಧಿಯನ್ನು, ಅರ್ಧ ದಿನಕ್ಕಾಗಿ ಲೆಕ್ಕ ಹಾಕಬೇಕು.

ಸಾಂರ್ದಭಿಕ ರಜೆಯನ್ನು ಹಕ್ಕೆಂದು ಕೇಳಲು ಬರುವುದಿಲ್ಲ. ಅಧಿಕಾರಿಗಳಿಗೆ ಮಂಜೂರು ಮಾಡಿದ ರಜೆಯನ್ನು ರದ್ದು ಪಡಿಸುವುದಕ್ಕೂ ಹಕ್ಕಿದೆ. ರಜೆಯನ್ನು ಮೊದಲು ಮಂಜೂರು ಮಾಡಿಸಿಕೊಂಡು ನಂತರ ಅದನ್ನು ಬಳಸಬೇಕು. ಆದರೆ ಕಾಯಿಲೆಯಾಗಿ ಅಥವಾ ಇನ್ನಾವುದೇ ಆಕಸ್ಮಿಕಗಳಿಂದಾಗಿ ಕಚೇರಿಗೆ ಬಂದು ರಜೆಯನ್ನು ಮುಂಗಡವಾಗಿ ಮಂಜೂರು ಮಾಡಿಸಲು ಸಾಧ್ಯವಾಗದಿರುವ ಸಂದರ್ಭಗಳಲ್ಲಿ ಅಧಿಕಾರಿಗಳಿಗೆ ಮನವರಿಕೆ ಮಾಡಿಸಿ ಮರುದಿನ ರಜೆ ಮಂಜೂರು ಮಾಡಿಸಿಕೊಳ್ಳಬಹುದು.

ಸಾಂರ್ದಭಿಕ ರಜೆಯನ್ನು ಪರಿವರ್ತಿತ ರಜೆಗಳೊಡನೆ ಸೇರಿಸಬಹುದು. ಆದರೆ ಒಟ್ಟು ಅನುಪಸ್ಥಿತಿ 10 ದಿನಗಳಿಗೆ ಮೀರಕೂಡದು. ಆಕಸ್ಮಿಕ ರಜೆಯನ್ನು ಸೇವಾ ಅವಧಿಯೆಂದೇ ಭಾವಿಸಲಾಗುವುದು.

2. ವಿಶೇಷ ಸಾಂರ್ದಭಿಕ ರಜೆ

ವಿಶೇಷ ಸಂದರ್ಭಗಳಲ್ಲಿ ಈ ರಜೆ ಪಡೆಯಬಹುದು

1. ನಾಯಿ ಅಥವಾ ಇನ್ನಾವುದೇ ವಿಷಪೂರಿತ ಪ್ರಾಣಿ/ಹುಳು ಕಡಿದರೆ ಅಂತಹವರಿಗೆ ಚಿಕಿತ್ಸೆಗಾಗಿ – 14ದಿನಗಳ ವಿಶೇಷ ಸಾಂರ್ದಭಿಕರಜೆ ಹಾಗೂ ಹೋಗಿಬರುವ ಪ್ರಯಾಣದ ದಿನಗಳು

2. ಸ್ವಯಂ ಸೇವಕರಾಗಿರುವ ಸರ್ಕಾರಿ ನೌಕರರು ಬಂದೂಕು ತರಬೇತಿಗೆ ಹಾಜರಾದಾಗ – ಅಗತ್ಯವಿರುವಷ್ಟು ಅವಧಿಗೆ ನೀಡಬಹುದು.

3. ಸರ್ಕಾರಿ ನೌಕರರ ಕೇಂದ್ರ ಮತ್ತು ಜಿಲ್ಲಾ ಮಟ್ಟದ ಸಂಘದ ಪದಾಧಿಕಾರಿಗಳಿಗೆ – ಪ್ರತಿ ವರ್ಷಕ್ಕೆ 15 ದಿನಗಳು ಮೀರದಂತೆ

4. ರಾಜ್ಯ ಸರ್ಕಾರಿ ‘ಡಿ’ ವರ್ಗದ ನೌಕರರ ಸಂಘದ ಪದಾಧಿಕಾರಿಗಳಿಗೆ – ಪ್ರತಿ ವರ್ಷಕ್ಕೆ 15 ದಿನಗಳು ಮೀರದಂತೆ.

5. ದೆಹಲಿಯ ಭಾರತೀಯ ಸಾರ್ವಜನಿಕ ಆಡಳಿತ ಸಂಸ್ಥೆಯ ಕಾರ್ಯಕ್ರಮಗಳಲ್ಲಿ ಭಾಗವಹಿಸುವ ಸರ್ಕಾರಿ ಉದ್ಯೋಗಿಗಳಿಗೆ ಪ್ರತಿ ವರ್ಷಕ್ಕೆ 6 ದಿನಗಳು ಮೀರದಂತೆ ವಿಶೇಷ ಸಾಂರ್ದಭಿಕ ರಜೆ ಲಭ್ಯ .

6. ಶೈಕ್ಷಣಿಕವಾಗಿ ವಾಣಿಜ್ಯ ಪರೀಕ್ಷಾ ಮಂಡಳಿಯು ನಡೆಸುವ ಪರೀಕ್ಷೆಗಾಗಿ ಪರೀಕ್ಷಾ ಅವಧಿ ಮತ್ತು ವಾಸ್ತವ ಪ್ರಯಾಣದ ಅವಧಿಯ ದಿನಗಳ ಮಟ್ಟಿಗೆ ವಿಶೇಷ ಸಾಂರ್ದಭಿಕ ರಜೆ ಲಭ್ಯ .

7. ಅಖಿಲ ಭಾರತ ಮಾಧ್ಯಮಿಕ ಶಿಕ್ಷಕರ ಫೆಡರೇಷನ್ನಿನ ಪದಾಧಿಕಾರಿಗಳು ವಿವಿಧ ಸಭೆ ವಿಚಾರ ಸಂಕಿರಣ ಗೋಷ್ಠಿಗಳು ನಡೆಯುವ ದಿನಗಳ ಮಟ್ಟಿಗೆ ಈ ವಿಶೇಷ ಸಾಂರ್ದಭಿಕ ರಜೆ ಲಭ್ಯ.

8. ವಿಶ್ವವಿದ್ಯಾಲಯಗಳ ಪರೀಕ್ಷೆಗಳಲ್ಲಿ ಪರೀಕ್ಷಕರಾಗಿ ಆಯ್ಕೆಗೊಂಡ ಸರ್ಕಾರಿ ನೌಕರರಿಗೆ 30 ದಿನಗಳಿಗೆ ಮೀರದಂತೆ ವಿಶೇಷ ಸಾಂರ್ದಭಿಕ ರಜೆ ಲಭ್ಯ.

9. ವೈದ್ಯಕೀಯ ಮತ್ತು ಸಾರ್ವಜನಿಕ ಆರೋಗ್ಯ ಇಲಾಖೆಯವರು ನಡೆಸುವ ಸಮ್ಮೇಳನಗಳಲ್ಲಿ 15 ದಿನ ವಿಶೇಷ ಸಾಂರ್ದಭಿಕ ರಜೆ ಕೊಡಬಹುದು. (ಪ್ರಯಾಣ ಭತ್ಯೆ ರಹಿತ)

10. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ವತಿಯಿಂದ ಏರ್ಪಾಟಾಗುವ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸುವ ಸರ್ಕಾರಿ ನೌಕರರಿಗೆ ವರ್ಷಕ್ಕೆ 15 ದಿನ ವಿಶೇಷ ಸಾಂರ್ದಭಿಕ ರಜೆ ಕೊಡಬಹುದು

11. ಯುವ ಜನ ಇಲಾಖೆಯವರು ಏರ್ಪಡಿಸುವ ಕ್ರೀಡಾ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸುವ ಸರ್ಕಾರಿ ನೌಕರರಿಗೆ ವರ್ಷಕ್ಕೆ 15 ದಿನ ವಿಶೇಷ ಸಾಂರ್ದಭಿಕ ರಜೆ ಕೊಡಬಹುದು.

12. ಸಂತಾನ ಹರಣ ಶಸ್ತ್ರ ಚಿಕಿತ್ಸೆಯ ಸಂದರ್ಭಗಳಲ್ಲಿ 7 ದಿನಗಳಿಗೆ ಮೀರದಂತೆ ವಿಶೇಷ ಸಾಂರ್ದಭಿಕ ರಜೆ ಕೊಡಬಹುದು.

13. ಸಂತಾನ ಹರಣ ಶಸ್ತ್ರ ಚಿಕಿತ್ಸೆ ಯಶಸ್ವಿಯಾಗಲಿಲ್ಲವೆಂದು ವೈದ್ಯಾಧಿಕಾರಿಗಳು ಪ್ರಮಾಣ ಪತ್ರ ಕೊಟ್ಟರೆ 6 ದಿನಗಳ ವಿಶೇಷ ಸಾಂರ್ದಭಿಕ ರಜೆ ಕೊಡಬಹುದು.

14. ಶೀಘ್ರಲಿಪಿ ಪರೀಕ್ಷೆಗಳ ಮೇಲ್ವಿಚಾರಕರಾಗಿ ಹೋಗುವ ಶೀಘ್ರಲಿಪಿಗಾರರಿಗೆ ಪರೀಕ್ಷೆಯ ಅವಧಿಗಾಗಿ ಮತ್ತು ಪ್ರಯಾಣದ ಅವಧಿಗಾಗಿ ವಿಶೇಷ ಸಾಂರ್ದಭಿಕ ರಜೆ ಲಭ್ಯ.

15. ಬಾಣಂತಿತನವಿಲ್ಲದ ಸಂತಾನ ಹರಣ ಶಸ್ತ್ರ ಚಿಕಿತ್ಸೆಗಾಗಿ ಮಹಿಳಾ ಉದ್ಯೋಗಿಗಳಿಗೆ ಇಲಾಖಾ ಮುಖ್ಯಸ್ಥರು 14 ದಿನಗಳ ವಿಶೇಷ ಸಾಂರ್ದಭಿಕ ರಜೆ ಮಂಜೂರು ಮಾಡಬಹುದು.

16. ಐ.ಯು.ಸಿ.ಡಿ.ಯನ್ನು ಅಳವಡಿಸಿಕೊಳ್ಳುವ ಸಲುವಾಗಿ 1 ದಿನ ರಜೆ ಕೊಡಬಹುದು.

17. ರಾಷ್ಟ್ರೀಯ ಅಥವಾ ಅಂತಾರಾಷ್ಟ್ರೀಯ ಕ್ರೀಡೋತ್ಸವಗಳಲ್ಲಿ ಭಾಗವಹಿಸಿದಾಗ 1 ವರ್ಷಕ್ಕೆ 30 ದಿನಗಳ ವಿಶೇಷ ರಜೆ ಲಭ್ಯ.

18. ಅಖಿಲ ಭಾರತ ಫುಟ್ಬಾಲ್, ಹಾಕಿ, ಕ್ರಿಕೆಟ್, ಟೆನ್ನಿಸ್ ಮೊದಲಾದ ಕ್ರೀಡಾ ಸಂಸ್ಥೆಗಳು ಸರ್ಕಾರಿ ನೌಕರರನ್ನು ಕ್ರೀಡೆಗಳಲ್ಲಿ ಭಾಗವಹಿಸಲು ಚುನಾಯಿಸಿದಾಗ ಕೊಡಬಹುದು. ಇದಕ್ಕೂ ಹೆಚ್ಚಿಗೆ ಬೇಕಾದಲ್ಲಿ, ಗಳಿಕೆ ರಜೆ, ಅಥವಾ ಅರ್ಧ ವೇತನ ರಜೆಯನ್ನು ತೆಗೆದುಕೊಳ್ಳಬೇಕು. ಈ ವಿಶೇಷ ಸಾಂರ್ದಭಿಕ ರಜೆಯನ್ನು ಸಾಮಾನ್ಯ ಸಾಂರ್ದಭಿಕ ರಜೆ ಎನ್ನುವರು.

19. ಕ್ರೀಡಾ ಸಂಸ್ಥೆಗಳಲ್ಲಿ ತರಬೇತಿದಾರರೆಂದು ನೇಮಕ ಮಾಡಿದಾಗ ರಜೆಯೊಡನೆ ಸೇರಿಸಕೂಡದು.

20. ರಕ್ತದಾನ ಮಾಡಿದ ಸಂದರ್ಭದಲ್ಲಿ (ಬ್ಲಡ್ ಬ್ಯಾಂಕ್ / ಆಸ್ಪತ್ರೆ / ರೆಡ್ ಕ್ರಾಸ್ ಸಂಸ್ಥೆಗಳಿಂದ ಪೂರಕ ದಾಖಲೆಗಳನ್ನು ಒದಗಿಸಬೇಕು.) ಕೆಸಿಎಸ್ಆರ್ ನಿಯಮಾವಳಿ ಪ್ಯಾರಾ 11ಜಿ ಅನುಬಂಧ-ಬಿ, ಪ್ರಕಾರ ಒಂದು ದಿನ ವಿಶೇಷ ಸಾಂರ್ದಭಿಕ ರಜೆ ಮಂಜೂರು ಮಾಡಬಹುದು.

3. ನಿರ್ಬಂಧಿತ ರಜೆ (ಛಿಠಠ್ಟಿಜ್ಚಿಠಿಛಿಛ ಜಟ್ಝಜಿಛಚಢ):

ಪ್ರತಿವರ್ಷ ಘೊಷಿತ ದಿನಾಂಕಗಳ ಅಧಿಕೃತ ಹಬ್ಬಗಳ ಆಚರಣೆಯ ಸಂಬಂಧ 2 ದಿನ ನಿರ್ಬಂಂಧಿತ ರಜೆ ಪ್ರತಿಯೊಬ್ಬ ಸರ್ಕಾರಿ ನೌಕರನಿಗೆ ದೊರೆಯುತ್ತದೆ. ಈ ರಜೆಯನ್ನು ಸಾಂರ್ದಭಿಕ ರಜೆ ಅಥವಾ ಇತರ ರಜೆಯ ಮೊದಲು ಅಥವಾ ಅನಂತರ ಸಂಯೋಜಿಸಿ ಮಂಜೂರು ಮಾಡಬಹುದು. ಈ ನಿರ್ಬಂಧಿತ ರಜೆಗಳ ಪಟ್ಟಿಯನ್ನು ರಾಜ್ಯ ಸರ್ಕಾರವು ಮುಂದಿನ ಕ್ಯಾಲೆಂಡರ್ ವರ್ಷಕ್ಕೆ ಅನ್ವಯವಾಗುವಂತೆ ಅಧಿಸೂಚನೆಯನ್ನು ಹೊರಡಿಸುತ್ತದೆ. ಈ ರಜೆಯನ್ನು ಆಯಾ ಧರ್ವಿುಯರು ಮಾತ್ರ ಬಳಸಬಹುದು. (ಸರ್ಕಾರಿ ಆದೇಶದ ಸಂಖ್ಯೆ: ಊಈ 7 ಖ್ಕಖ 87 ಛಚಠಿಛಿ : 20.3.1987)

***

14.06.2017.

ಸ್ಥಗಿತ ವೇತನ ಬಡ್ತಿ ನಿಯಮಗಳು

(Stagnation Increment)

| ಲ. ರಾಘವೇಂದ್ರ

ಸರ್ಕಾರಿ ನೌಕರನು ತನ್ನ ಹುದ್ದೆಗೆ ಸಂಬಂಧಿಸಿದ ವೇತನ ಶ್ರೇಣಿಯಲ್ಲಿ ಗರಿಷ್ಠ ಮಿತಿಯನ್ನು ದಾಟಿದಾಗ ಆ ನೌಕರನು ಈ ಮಿತಿಯ ಪೂರ್ವದಲ್ಲಿ ಪಡೆಯುತ್ತಿದ್ದ ವೇತನ ಬಡ್ತಿಯ ಪ್ರಮಾಣದಲ್ಲೇ ನಿರ್ದಿಷ್ಟಾವಧಿ ನಂತರ ಮಂಜೂರು ಮಾಡುವ ವೇತನ ಬಡ್ತಿಯನ್ನೇ ಸ್ಥಗಿತ ವೇತನ ಬಡ್ತಿ ಎನ್ನಬಹುದು.

ದಿನಾಂಕ 31-10-79ರ ಸರ್ಕಾರಿ ಆದೇಶ ಸಂಖ್ಯೆ ಎಫ್ಡಿ 52 ಎಸ್.ಆರ್.ಪಿ. 79ರ ಮೇರೆಗೆ ಸರ್ಕಾರಿ ನೌಕರನು ವೇತನ ಶ್ರೇಣಿಯ ಗರಿಷ್ಠ ಮಿತಿ ದಾಟಿ ವೇತನ ಬಡ್ತಿಯನ್ನು ಎರಡು ವರ್ಷಗಳವರೆಗೆ ಪಡೆಯದಿದ್ದರೆ, ಅವನಿಗೆ ಮೊದಲ ಸ್ಥಗಿತ ವೇತನ ಬಡ್ತಿಯನ್ನು ಮಂಜೂರು ಮಾಡಬಹುದೆಂದು ತಿಳಿಸಲಾಗಿದೆ. ಅಲ್ಲದೆ, ಎರಡನೇ ಸ್ಥಗಿತ ವೇತನಬಡ್ತಿಯನ್ನು ಮತ್ತೊಂದು ವರ್ಷದ ನಂತರ ನೀಡಬೇಕೆಂದು ಸೂಚಿಸಲಾಗಿತ್ತು. ಈ ನಿಯಮಾವಳಿ ಪ್ರಕಾರ ಸರ್ಕಾರಿ ನೌಕರನು ವಾರ್ಷಿಕ ವೇತನ ಬಡ್ತಿ ಹೊಂದಿದ ಕಾಲಿಕ ವೇತನ ಶ್ರೇಣಿಯಲ್ಲಿ ಗರಿಷ್ಠ ಹಂತವನ್ನು ದಾಟಿದ್ದರೆ ಅಂತಹ ನೌಕರನಿಗೆ ಅವನು ಪಡೆದಿದ್ದ ವಾರ್ಷಿಕ ವೇತನ ಬಡ್ತಿಯ ದರದ ಪ್ರಮಾಣದಲ್ಲಿ ದಿನಾಂಕ 1-4-2012ನೇ ಸಾಲಿನ ಎಂಟು ವಾರ್ಷಿಕ ಸ್ಥಗಿತ ವೇತನ ಬಡ್ತಿಗಳನ್ನು ಮಂಜೂರು ಮಾಡಬೇಕು. ಇದನ್ನು ಎಲ್ಲ ಉದ್ದೇಶಗಳಿಗಾಗಿ ‘ವೇತನ’ ಎಂದು ಪರಿಗಣಿಸಲು ತಿಳಿಸಲಾಗಿದೆ.

ಸ್ಥಗಿತ ವೇತನ ಬಡ್ತಿ ಮಂಜೂರಾತಿಗೆ ನಿಬಂಧನೆಗಳು

ಅ) ಸರ್ಕಾರಿ ನೌಕರನು ತೃಪ್ತಿದಾಯಕ ಸೇವಾ ದಾಖಲೆ ಹೊಂದಿರಬೇಕು. ಅಲ್ಲದೆ ವೇತನ ಶ್ರೇಣಿಯ ಗರಿಷ್ಠ ಹಂತವನ್ನು ತಲುಪದಿದ್ದರೆ, ಅವನಿಗೆ ಅನ್ವಯವಾಗುವ ಕಾಲಿಕ ವೇತನ ಶ್ರೇಣಿಯಲ್ಲಿ ಸಾಮಾನ್ಯ ವೇತನ ಬಡ್ತಿಯನ್ನು ಪಡೆಯಲು ಅರ್ಹನಿರಬೇಕು.

ಆ) ಸ್ಥಗಿತ ವೇತನ ಬಡ್ತಿಯನ್ನು ಮಂಜೂರು ಮಾಡುವ ಉದ್ದೇಶಕ್ಕೆ ತೃಪ್ತಿಕರ ಸೇವೆಯ ಸ್ವರೂಪವನ್ನು ಪದೋನ್ನತಿಗೆ ಅರ್ಹತೆಯನ್ನು ಪರಿಗಣಿಸುವ ರೀತಿಯಲ್ಲೇ ನಿರ್ಧರಿಸಬೇಕು.

ಇ) ತೃಪ್ತಿಕರ ಸೇವೆ ಪರಿಗಣಿಸುವಾಗ ಸರ್ಕಾರಿ ನೌಕರನು ಪದೋನ್ನತಿಗೆ ಯಾವುದೇ ಇಲಾಖಾ ಪರೀಕ್ಷೆಗಳನ್ನು ನಿಗದಿಪಡಿಸಿದಲ್ಲಿ, ಅವುಗಳಲ್ಲಿ ತೇರ್ಗಡೆಯಾಗಿದ್ದಾನೆಯೇ ಅಥವಾ ಇಲ್ಲವೇ ಎಂಬಂಶವನ್ನು ಗಣನೆಗೆ ತೆಗೆದುಕೊಳ್ಳುವ ಅಗತ್ಯ ಇರುವುದಿಲ್ಲ.

ಈ) ಸ್ವಇಚ್ಛೆಯಿಂದ ಪದೋನ್ನತಿ ಬಿಟ್ಟುಕೊಡುವ ಅಥವಾ ಪದೋನ್ನತಿ ನಂತರ ಸ್ವಂತ ಇಚ್ಛೆ ಮೇರೆಗೆ ಹಿಂಬಡ್ತಿಯನ್ನು ಬಯಸುವ ಸರ್ಕಾರಿ ನೌಕರನಿಗೆ ಈ ಸ್ಥಗಿತ ವೇತನ ಬಡ್ತಿಯನ್ನು ನೀಡಬಾರದು.

***

ರೆವಿನ್ಯೂ ಹೈಯರ್ ಪರೀಕ್ಷಾ ವಿಧಾನ

Wednesday, 15.03.2017,
ಕರ್ನಾಟಕ ಸರ್ಕಾರಿ ಸೇವಾ (ಸೇವಾ ಮತ್ತು ಕನ್ನಡ ಭಾಷಾ) ಪರೀಕ್ಷೆಗೆ ನಿಯಮಗಳು 1974ರ ಮೇರೆಗೆ ರೆವಿನ್ಯೂ ಹೈಯರ್ ಭಾಗ 1ರ ಪತ್ರಿಕೆ 1ಕ್ಕೆ ಕರ್ನಾಟಕ ಭೂ ಕಂದಾಯ ಅಧಿನಿಯಮ 1961, ಕರ್ನಾಟಕ ಭೂಕಂದಾಯ ಅಧಿನಿಯಮಗಳು 1966, ಕರ್ನಾಟಕ ಭೂ ಮಂಜೂರಾತಿ ನಿಯಮಗಳು 1969ನ್ನು ನಿಗದಿಪಡಿಸಲಾಗಿದ್ದು, ಈ ಪತ್ರಿಕೆಗೆ 200 ಅಂಕಗಳಿಗೆ 50 ವಸ್ತುನಿಷ್ಠ ಪ್ರಶ್ನೆಗಳಿಗೆ 2 ಗಂಟೆ ಕಾಲಾವಧಿಯಲ್ಲಿ ಉತ್ತರಿಸಬೇಕಿರುತ್ತದೆ. ಪತ್ರಿಕೆ 2ರಲ್ಲಿ ಭೂಸ್ವಾಧೀನ ಪ್ರಕ್ರಿಯೆಯಲ್ಲಿ, ಪಾರದರ್ಶಕತೆ ಮತ್ತು ನ್ಯಾಯೋಚಿತ ಪರಿಹಾರಕ್ಕೆ ಹಕ್ಕು, ಪುನರ್ವಸತಿ ಮತ್ತು ಪುನರ್ ವ್ಯವಸ್ಥೆ ಅಧಿನಿಯಮ 2013 (2013ರ ಕೇಂದ್ರ ಅಧಿನಿಯಮ 30) ಮತ್ತು (ಕರ್ನಾಟಕ) ನಿಯಮಗಳು 2014, ಕರ್ನಾಟಕ ನೀರಾವರಿ (ಶುಲ್ಕ ಸುಧಾರಣೆ ವಂತಿಕೆ ಮತ್ತು ನೀರು ದರ) ಅಧಿನಿಯಮ 1957, ಕರ್ನಾಟಕ ಭೂಸುಧಾರಣಾ ಅಧಿನಿಯಮ 1961 ಮತ್ತು ನಿಯಮಗಳು 1965, ಭಾರತದ ನೋಂದಣಿ ಅಧಿನಿಯಮ, ಭಾರತದ ಸ್ಟಾಂಪ್ ಅಧಿನಿಯಮ, ಕರ್ನಾಟಕ ಸ್ಟಾಂಪ್ ಅಧಿನಿಯಮ ಹಾಗೂ ಕರ್ನಾಟಕ ಗ್ರಾಮ ಲೆಕ್ಕಾಧಿಕಾರಿಗಳ ರದ್ದಿಯಾತಿ ಅಧಿನಿಯಮ, 1965 ನಿಗದಿಪಡಿಸಲಾಗಿದೆ.

ರೆವಿನ್ಯೂ ಹೈಯರ್ ಭಾಗ – 2ರ ಪತ್ರಿಕೆ 1ರಲ್ಲಿ ಕರ್ನಾಟಕ ಸಹಕಾರ ಸಂಘಗಳ ಅಧಿನಿಯಮ 1959, ಕೃಷಿ ಆದಾಯ ತೆರಿಗೆ ಅಧಿನಿಯಮ, ಕರ್ನಾಟಕ ಲೇವಾದೇವಿಗಾರರ ಅಧಿನಿಯಮ 1961 ಮತ್ತು ನಿಯಮಗಳು 1965, ಕರ್ನಾಟಕ ಗಿರವಿದಾರರ ಅಧಿನಿಯಮ 1961 ಮತ್ತು ನಿಯಮಗಳು 1966 ಎಂದು ನಿಗದಿಪಡಿಸಲಾಗಿದ್ದು 100 ಅಂಕಗಳಿಗೆ 50 ಪ್ರಶ್ನೆಗಳಿಗೆ 2 ಗಂಟೆ ಕಾಲಾವಧಿಯಲ್ಲಿ ಉತ್ತರಿಸಬೇಕಾಗಿರುತ್ತದೆ.

ಪತ್ರಿಕೆ 2ರಲ್ಲಿ ಕರ್ನಾಟಕ ಧಾರ್ವಿುಕ ದತ್ತಿ ಮತ್ತು ಧರ್ವದಾಯಗಳ ಅಧಿನಿಯಮ 1969 ಮತ್ತು ನಿಯಮಗಳು 2002 ಹಾಗೂ ವಕ್ಪ್ ಅಧಿನಿಯಮ 1995 ಮತ್ತು ಕರ್ನಾಟಕ ವಕ್ಪ್ ನಿಯಮಗಳು 1997 ಎಂದು ನಿಗದಿಪಡಿಸಲಾಗಿದ್ದು 100 ಅಂಕಗಳಿಗೆ 50 ಪ್ರಶ್ನೆಗಳನ್ನು 2 ಗಂಟೆ ಕಾಲಾವಧಿಯಲ್ಲಿ ಉತ್ತರಿಸಬೇಕಾಗುತ್ತದೆ.

ರೆವಿನ್ಯೂ ಲೋಯರ್ ಪರೀಕ್ಷೆಯಲ್ಲಿ 3 ಪತ್ರಿಕೆಗಳಿದ್ದು ಪತ್ರಿಕೆ 1 ಕರ್ನಾಟಕ ಭೂಕಂದಾಯ ಅಧಿನಿಯಮ 1964 ಮತ್ತು ನಿಯಮಗಳು 1966, ಕರ್ನಾಟಕ ಭೂಮಂಜೂರಾತಿ ನಿಯಮಗಳು 1969 ಪತ್ರಿಕೆ 2ರಲ್ಲಿ ಭಾರತದ ನೋಂದಣಿ ಅಧಿನಿಯಮ, ಕರ್ನಾಟಕ ಸ್ಟಾಂಪ್ ಅಧಿನಿಯಮ 1957, ಭೂಸ್ವಾದೀನ ಪ್ರಕ್ರಿಯೆಯಲ್ಲಿ, ಪಾರದರ್ಶಕತೆ ಮತ್ತು ನ್ಯಾಯೋಚಿತ ಪರಿಹಾರಕ್ಕೆ ಹಕ್ಕು, ಪುನರ್ವಸತಿ ಮತ್ತು ಪುನರ್ ವ್ಯವಸ್ಥೆ ಅಧಿನಿಯಮ 2013 (2013ರ ಕೇಂದ್ರ ಅಧಿನಿಯಮ 30) ಮತ್ತು (ಕರ್ನಾಟಕ) ನಿಯಮಗಳು 2014, ಭೂಸುಧಾರಣಾ ಅಧಿನಿಯಮ 1961, ಕರ್ನಾಟಕ ನೀರಾವರಿ (ಶುಲ್ಕವಂತಿಕೆ ಮತ್ತು ನೀರು ದರ) ಅಧಿನಿಯಮ 1952, ಗ್ರಾಮಾಧಿಕಾರಿಗಳ ರದ್ದಿಯಾತಿ (ಚಚಿಟ್ಝಜಿಠಿಜಿಟ್ಞ ) ಅಧಿನಿಯಮವನ್ನು ನಿಗದಿಪಡಿಸಲಾಗಿದೆ. ಪತ್ರಿಕೆ 3ರಲ್ಲಿ ಕರ್ನಾಟಕ ಸಹಕಾರ ಸಂಘಗಳ ಅಧಿನಿಯಮ, ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಅಧಿನಿಯಮ, ಕರ್ನಾಟಕ ಲೇವಾದೇವಿಗಾರರ ಅಧಿನಿಯಮ, 1961 ಮತ್ತು ನಿಯಮಗಳು 1965, ಕರ್ನಾಟಕ ಗಿರವಿದಾರರ ಅಧಿನಿಯಮ 1961, ನಿಯಮಗಳು 1966ನ್ನು ನಿಗದಿಪಡಿಸಲಾಗಿದ್ದು ಅಭ್ಯರ್ಥಿಯು 50 ಪ್ರಶ್ನೆಗಳಿಗೆ 2 ಗಂಟೆ ಕಾಲಾವಧಿಯಲ್ಲಿ ಉತ್ತರಿಸಬೇಕಾಗುತ್ತದೆ. ರೆವಿನ್ಯೂ ಹೈಯರ್ ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದರೆ ರೆವಿನ್ಯೂ ಲೋಯರ್ ಪರೀಕ್ಷೆಗೆ ವಿನಾಯಿತಿ ದೊರಕುತ್ತದೆ.

***

2017 ರ ಸರ್ಕಾರಿ ಕಾರ್ನರ್ ಪ್ರಶ್ನೆಗಳು.(ಜುಲೈ to ಸಪ್ಟಂಬರ್ ವರೆಗೆ)

***

ಸರ್ಕಾರಿ ಕಾರ್ನರ್​:

 ಪ್ರಶ್ನೆ ಕೇಳಿ ಪರಿಹಾರ ಪಡೆಯಿರಿ


ನಿಮ್ಮ ಪ್ರಶ್ನೆಗಳನ್ನು ನಮಗೆ ಕಳುಹಿಸಿ. ನಮ್ಮ ವಿಳಾಸ: ವಿಜಯವಾಣಿ, ನಂ.24, ಶ್ರೀ ಸಾಯಿರಾಂ ಟವರ್ಸ್, ಮೊದಲ ಮಹಡಿ, 5ನೇ ಮುಖ್ಯರಸ್ತೆ, ಚಾಮರಾಜಪೇಟೆ, ಬೆಂಗಳೂರು 560018.


ಇ-ಮೇಲ್: sarakaricorner@gmail.com


ದೂರವಾಣಿ: 8884431909, ಫ್ಯಾಕ್ಸ್: 080-26257464.


29.09.2017.

ನಾನು ಪೊಲೀಸ್​ಇಲಾಖೆಯಲ್ಲಿ 2011ರ ನವೆಂಬರ್ ನಿಂದ 2016ರ ಮೇ ವರೆಗೆ ಕಾನ್​ಸ್ಟೇಬಲ್ ಆಗಿ ಕರ್ತವ್ಯ ನಿರ್ವಹಿಸಿದ್ದು, ಇಲಾಖಾ ಅನುಮತಿಯೊಂದಿಗೆ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಗಣಕಯಂತ್ರ ಶಿಕ್ಷಕರ ಹುದ್ದೆಗೆ ಆಯ್ಕೆಯಾಗಿ ಕರ್ತವ್ಯಕ್ಕೆ ಹಾಜರಾಗಿರುತ್ತೇನೆ. ನಾನು ಪೊಲೀಸ್ ಇಲಾಖೆಯಲ್ಲಿ ಪ್ರೊಬೆಷನರಿ ಅವಧಿ ಮುಗಿಸಿದ್ದು, ಇದೀಗ ಮತ್ತೆ ಹೊಸ ಹುದ್ದೆಯಲ್ಲೂ ಪ್ರೊಬೆಶನರಿ ಮುಗಿಸುವುದು ಅವಶ್ಯಕವಾಗಿದೆಯೇ? ಪೊಲೀಸ್ ಹುದ್ದೆಯು ನಾನ್ ವೆಕೇಷನಲ್ ಹುದ್ದೆಯಾಗಿದ್ದು ಪ್ರಸ್ತುತ ಶಿಕ್ಷಕ ಹುದ್ದೆಯು ವೆಕೇಶನಲ್ ಹುದ್ದೆಯಾಗಿರುವುದರಿಂದ ಇಲ್ಲಿಯ ರಜಾ ನಿಯಮಗಳು ಬೇರೆಯಾಗಿರುತ್ತವೆಯೇ? ನಾನು ಪೊಲೀಸ್ ಇಲಾಖೆಗೆ ಈಗ ಹಿಂತಿರುಗಿ ಹೋಗಲು ಸಾಧ್ಯವಿದೆಯೇ ?

| ಲೋಕೇಶ ತುಮಕೂರು.

ಕರ್ನಾಟಕ ಸರ್ಕಾರಿ ಸೇವಾ (ಪ್ರೊಬೆಷನ್) ನಿಯಮಗಳು 1977ರ 4ರ ಪ್ರಕಾರ ಪ್ರತಿಯೊಬ್ಬ ಸರ್ಕಾರಿ ನೌಕರನು ತನ್ನ ಹುದ್ದೆಗೆ ಸಂಬಂಧಿಸಿದಂತೆ 2 ವರ್ಷಗಳ ಕಾಲ ಪ್ರೊಬೆಷನರಿ ಅವಧಿ ಮುಗಿಸಬೇಕಾಗಿರುತ್ತದೆ. ನೀವು ಪೊಲೀಸ್ ಇಲಾಖೆಯಲ್ಲಿ ಕಾನ್​ಸ್ಟೇಬಲ್ ಹುದ್ದೆಯು ಹಾಗೂ ಅಲ್ಪಸಂಖ್ಯಾತರ ಇಲಾಖೆಯ ಗಣಕ ಯಂತ್ರ ಶಿಕ್ಷಕ ಹುದ್ದೆಯು ಬೇರೆ ಬೇರೆ ವೃಂದವಾಗಿರುವುದರಿಂದ ಮತ್ತೆ ಪ್ರೊಬೆಷನರಿ ಅವಧಿ ಮುಗಿಸುವುದು ಅವಶ್ಯಕ. ಪ್ರಸ್ತುತ ಶಿಕ್ಷಕ ಹುದ್ದೆಯು ವೆಕೆಶನಲ್ ಹುದ್ದೆಯಾಗಿರುವುದರಿಂದ ನಿಮಗೆ ವಾರ್ಷಿಕವಾಗಿ 10 ದಿವಸಗಳ ಗಳಿಕೆ ರಜೆ ಇದ್ದು ನೀವು ನಿಯಮ 114ನ್ನು ನೋಡಬಹುದು. ನಿಮಗೆ ಈ ಶಿಕ್ಷಕ ಹುದ್ದೆ ಇಷ್ಟವಿಲ್ಲದಿದ್ದರೆ ಕರ್ನಾಟಕ ಸರ್ಕಾರಿ ಸೇವಾ ನಿಯಮಾವಳಿಯ ನಿಯಮ 20ರಂತೆ ಪೊಲೀಸ್ ಇಲಾಖೆಗೆ 2 ವರ್ಷ ಅವಧಿಯೊಳಗೆ ವಾಪಸಾಗಲು ಮನವಿ ಸಲ್ಲಿಸಬಹುದು.

***

 28.09.2017.

ಪ್ರಾಥಮಿಕ ಶಾಲಾ ಶಿಕ್ಷಕಿಯಾಗಿ 2015ರ ನವೆಂಬರ್​ನಿಂದ ಕೆಲಸ ಮಾಡುತ್ತಿದ್ದೇನೆ. ಶಿಕ್ಷಕಿಯಾಗುವ ಮೊದಲೇ ಕಾಲೇಜು ಶಿಕ್ಷಣ ಇಲಾಖೆಯ ಕನ್ನಡ ಸಹಾಯಕ ಪ್ರಾಧ್ಯಾಪಕ ಹುದ್ದೆಗೆ ಅರ್ಜಿ ಸಲ್ಲಿಸಿದ್ದೆ. ಪ್ರಸ್ತುತ ಆಯ್ಕೆಯಾಗಿದ್ದು, ನೇಮಕಾತಿ ಆದೇಶ ಬಂದಿದೆ. ಅನುಮತಿ ಪಡೆಯದೆ ಅರ್ಜಿ ಸಲ್ಲಿಸಿರುವುದರಿಂದ ಕರ್ತವ್ಯದಿಂದ ಬಿಡುಗಡೆ ಸಾಧ್ಯವಿಲ್ಲ ಎಂದು ಶಿಕ್ಷಣಾಧಿಕಾರಿ ಹೇಳುತ್ತಿದ್ದಾರೆ. ಒಂದು ತಿಂಗಳ ಮೊದಲೇ ರಾಜೀನಾಮೆ ಸಲ್ಲಿಸಬೇಕು ಅಥವಾ ಒಂದು ತಿಂಗಳ ವೇತನವನ್ನು ಸರ್ಕಾರಕ್ಕೆ ಜಮಾಯಿಸಿ, ರಾಜೀನಾಮೆ ನೀಡಿದರೆ ಬಿಡುಗಡೆ ಮಾಡುವುದಾಗಿ ಹೇಳುತ್ತಿದ್ದಾರೆ. ಸಹಾಯಕ ಪ್ರಾಧ್ಯಾಪಕಿ ಹುದ್ದೆಗೆ ಹಾಜರಾದರೆ ನನ್ನ ಎನ್​ಪಿಎಸ್ ಹಾಗೂ ಕೆಜೆಐಡಿ ಮುಂದುವರಿಯುತ್ತದೆಯೆ? ರಜಾ ಸೌಲಭ್ಯಗಳು ಇದೇ ರೀತಿ ಮುಂದುವರಿಯಲಿವೆಯೆ?


✍ ಎಂ.ಪಿ. ಚಾಂದಿನಿ ತುಮಕೂರ.


ಕರ್ನಾಟಕ ಸರ್ಕಾರಿ ಸೇವಾ (ಸಾಮಾನ್ಯ ನೇಮಕಾತಿ) ನಿಯಮಗಳು 1977ರ ನಿಯಮ 11ರಂತೆ ಸರ್ಕಾರಿ ನೌಕರರು ಬೇರೆ ಹುದ್ದೆಗೆ ಅರ್ಜಿ ಸಲ್ಲಿಸಬೇಕಾದರೆ ಪೂರ್ವಾನುಮತಿ ಪಡೆಯುವುದು ಅವಶ್ಯ. ಆದರೆ ನೀವು ಶಿಕ್ಷಕಿಯಾಗಿ ಆಯ್ಕೆಯಾಗುವ ಮೊದಲೇ ಸಹಾಯಕ ಪ್ರಾಧ್ಯಾಪಕಿ ಹುದ್ದೆಗೆ ಅರ್ಜಿ ಸಲ್ಲಿಸಿರುವುದರಿಂದ ನಿರಾಕ್ಷೇಪಣಾ ಪತ್ರ ಪಡೆಯುವುದು ಅಸಾಧ್ಯ. ಆದುದರಿಂದ ಶಿಕ್ಷಣಾಧಿಕಾರಿ ವಾದ ಸರಿಯಲ್ಲ. ಕರ್ನಾಟಕ ಸರ್ಕಾರಿ ಸೇವಾ ನಿಯಮಾವಳಿಯ 250(ಬಿ) ಅಡಿಯಲ್ಲಿ ನಿಮ್ಮನ್ನು ಕರ್ತವ್ಯದಿಂದ ವಿಮುಕ್ತಿಗೊಳಿಸಬೇಕಾಗುತ್ತದೆ. ಈ ನಿಯಮದಂತೆ ನೀವು ಶಿಕ್ಷಕಿ ಹುದ್ದೆಗೆ ಸಲ್ಲಿಸುವ ರಾಜೀನಾಮೆ ಸರ್ಕಾರಿ ಸೇವೆಗೆ ಸಲ್ಲಿಸಿದ ರಾಜೀನಾಮೆ ಆಗುವುದಿಲ್ಲ. ಎನ್​ಪಿಎಸ್ ಕೆಜಿಐಡಿ ಹಾಗೂ ರಜಾ ಸೌಲಭ್ಯಗಳು ಸಹಾಯಕ ಪ್ರಾಧ್ಯಾಪಕರ ಹುದ್ದೆಯನ್ನು ನಿಯಮಾವಳಿಯಂತೆ ಮುಂದುವರಿಯುತ್ತವೆ. ನಿಮ್ಮ ಸೇವಾ ಪುಸ್ತಕವನ್ನು ಕಾಲೇಜು ಶಿಕ್ಷಣ ಇಲಾಖೆಗೆ ನಿಮ್ಮ ಶಿಕ್ಷಣಾಧಿಕಾರಿ ಕಳುಹಿಸಿಕೊಡಬೇಕಾಗುತ್ತದೆ. ಈ ರೀತಿ ಸಹಾಯಕ ಪ್ರಾಧ್ಯಾಪಕರ ಹುದ್ದೆಗೆ ಹಾಜರಾದ ಮೇಲೆ ಕರ್ನಾಟಕ ಸರ್ಕಾರಿ ಸೇವಾ ನಿಯಮಾವಳಿಯ ನಿಯಮ 224(ಬಿ) ಅಡಿ ನಿಮ್ಮ ಹಿಂದಿನ ಸೇವೆಯನ್ನು ಪರಿಗಣಿಸಲು ಮನವಿ ಸಲ್ಲಿಸಬೇಕು. ನಿಮ್ಮ ಮನವಿಯ ಹಿನ್ನೆಲೆಯಲ್ಲಿ ನೇಮಕಾತಿ ಪ್ರಾಧಿಕಾರಿ ಸೂಕ್ತ ಆದೇಶ ಹೊರಡಿಸುವ ಮುನ್ನ ಕ್ಲೇಮನ್ನು ಸಮರ್ಥಿಸುವ ಸೂಕ್ತ ದಾಖಲೆಗಳೊಂದಿಗೆ ಸರ್ಕಾರದ ಅನುಮೋದನೆ ಪಡೆಯತಕ್ಕದ್ದು ಎಂದು ನಿಯಮ 224ಬಿ (2)ರಲ್ಲಿ ಸೂಚಿಸಲಾಗಿದೆ.

***

27.09.2017.

ನಾನು 1982ರಲ್ಲಿ ಪ್ರಾಥಮಿಕ ಶಾಲಾ ಶಿಕ್ಷಕನಾಗಿ ಕೆಲಸಕ್ಕೆ ಸೇರಿದ್ದು 2000ರ ನವೆಂಬರ್ 11ರಲ್ಲಿ ಪ್ರೌಢಶಾಲಾ ಸಹ ಶಿಕ್ಷಕನಾಗಿ ಬಡ್ತಿ ಹೊಂದಿರುತ್ತೇನೆ. ಪ್ರಾಥಮಿಕ ಶಾಲೆಯಲ್ಲಿ 18, ಪ್ರೌಢಶಾಲೆಯಲ್ಲಿ ಸಹ ಶಿಕ್ಷಕನಾಗಿ 16 ವರ್ಷ ಸೇವೆ ಸಲ್ಲಿಸಿರುತ್ತೇನೆ. ನನ್ನ ವಯಸ್ಸು 53. ಪ್ರೌಢಶಾಲಾ ಮುಖ್ಯ ಶಿಕ್ಷಕರ ಹುದ್ದೆಗೆ ಬಡ್ತಿ ಹೊಂದಲು, ಪಿಯು ಲಕ್ಚರರ್​ಗೆ ಬಡ್ತಿ ಹೊಂದಲು ಅಕೌಂಟ್ಸ್ ಹೈಯರ್ ಪರೀಕ್ಷೆ (ಇಲಾಖಾ ಪರೀಕ್ಷೆ) ಉತ್ತೀರ್ಣನಾಗುವುದು ಕಡ್ಡಾಯವೇ?

|ಬಿ.ಎಸ್. ತಮ್ಮಣ್ಣಗೌಡ ಮಂಡ್ಯ.

ಕರ್ನಾಟಕ ಸರ್ಕಾರಿ ಸೇವಾ (ಸೇವಾ ಮತ್ತು ಕನ್ನಡ ಭಾಷಾ ಪರೀಕ್ಷೆಗಳು) ನಿಯಮಗಳು 1974ರ ನಿಯಮ 4ರಂತೆ ಪದೋನ್ನತಿಗಾಗಿ ಅಕೌಂಟ್ಸ್ ಹೈಯರ್ ಇಲಾಖಾ ಪರೀಕ್ಷೆಯನ್ನು ನಿಗದಿಪಡಿಸಿದರೆ ಅದನ್ನು ಉತ್ತೀರ್ಣರಾಗು ವುದು ಕಡ್ಡಾಯವಾಗಿರುತ್ತದೆ. ನೀವು ಪ್ರೌಢಶಾಲಾ ಶಿಕ್ಷಕರ ಹುದ್ದೆಗೆ ಬಡ್ತಿ ಹೊಂದಲು ಅಕೌಂಟ್ಸ್ ಹೈಯರ್ ಪರೀಕ್ಷೆ ತೇರ್ಗಡೆಯಾಗುವುದು ಅನಿವಾರ್ಯ ವಾಗಿರುತ್ತದೆ. ಈ ಪರೀಕ್ಷೆಯನ್ನು ಕರ್ನಾಟಕ ಲೋಕಸೇವಾ ಆಯೋಗವು ವರ್ಷಕ್ಕೆರಡು ಬಾರಿ ವಸ್ತುನಿಷ್ಠ ಮಾದರಿಯಲ್ಲಿ ನಡೆಸುತ್ತದೆ. ಆಡಳಿತಾತ್ಮಕ ದೃಷ್ಟಿಯಿಂದ ಈ ಪರೀಕ್ಷೆ ಉತ್ತೀರ್ಣವಾಗುವುದು ಕಡ್ಡಾಯವಾಗಿರುತ್ತದೆ.

***

26.09.2017.

ಪ್ರಾಥಮಿಕ ಶಾಲಾ ಶಿಕ್ಷಕಿ. ಯಾದಗಿರಿ ಜಿಲ್ಲೆಯ ಸುರಪುರ ತಾಲ್ಲೂಕಿನಲ್ಲಿ ಕೆಲಸ ಮಾಡುತ್ತಿದ್ದೇನೆ. ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಪ್ರಾಧ್ಯಾಪಕರಾಗಿದ್ದ ನನ್ನ ಪತಿ 2005ರ ಆಗಸ್ಟ್ 10ರಂದು ಮರಣ ಹೊಂದಿದ್ದಾರೆ. ಸ್ವಂತ ಮಕ್ಕಳಿರದ ನಾವು ತಂಗಿಯ ಮಗನನ್ನು ಸಾಕುತ್ತಿದ್ದೆವು. ಆದರೆ ದತ್ತು ತೆಗೆದುಕೊಂಡ ಬಗ್ಗೆ ಯಾವುದೇ ಕೋರ್ಟ್ ಡಿಕ್ರಿ ಮಾಡಿಸಿರುವುದಿಲ್ಲ. ಪತಿಯ ಸೇವಾ ಪುಸ್ತಕದಲ್ಲಿಯೂ ಅವಲಂಬಿತರ ಹೆಸರಿನಲ್ಲಿಯೂ ತಂಗಿಯ ಮಗನ ಹೆಸರು ಸೇರಿಸಿರುವುದಿಲ್ಲ. ದತ್ತು ಮಗ ಆಗ 9ನೇ ತರಗತಿಯಲ್ಲಿ ಓದುತ್ತಿದ್ದ. ಆ ಸಮಯದಲ್ಲಿ ನನಗೆ ಆರೋಗ್ಯ ಸರಿ ಇರಲಿಲ್ಲ. ಈ ವಿಷಯದ ಬಗ್ಗೆ ನನಗೆ ಅನುಭವ ಇರದ ಕಾರಣ ಈ ಸಮಸ್ಯೆಯಾಗಿದೆ. ಈಗ ನಾನು ನನ್ನ ತಂಗಿಯ ಮಗನನ್ನು ಕೋರ್ಟಿ ಡಿಕ್ರಿಯ ಮೂಲಕ ದತ್ತು ತೆಗೆದುಕೊಂಡರೆ ಅನುಕಂಪದ ಆಧಾರದ ಮೇಲೆ ನೌಕರಿ ಸಿಗುತ್ತದೆಯೆ?

| ದೇವಾನಂದ ಎಸ್. ಪಾಟೀಲ್ ಕೊಪ್ಪಳ.

ಕರ್ನಾಟಕ ಸರ್ಕಾರಿ ಸೇವಾ (ಅನುಕಂಪದ ಮೇರೆಗೆ) ನೇಮಕಾತಿ ನಿಯಮಗಳು (1996)ರ ನಿಯಮ 3ರಲ್ಲಿ ಮೃತ ಸರ್ಕಾರಿ ನೌಕರನ ದತ್ತುಮಗ ಅಥವಾ ದತ್ತುಮಗಳು ನೇಮಕಾತಿ ಹೊಂದಲು ಅರ್ಹರಾಗಿರತಕ್ಕದ್ದಲ್ಲ ಎಂದು ತಿಳಿಸಲಾಗಿದೆ. ಹೀಗಿರುವಲ್ಲಿ ನೀವು ನಿಮ್ಮ ತಂಗಿಯ ಮಗನನ್ನು ಕೋರ್ಟಿಯ ಡಿಕ್ರಿ ಮೂಲಕ ದತ್ತು ತೆಗೆದುಕೊಂಡರೆ ನಿಮ್ಮ ನಿಧನದ ನಂತರ ಅನುಕಂಪದ ಮೇರೆಗೆ ನೌಕರಿ ಸಿಗುವುದಿಲ್ಲ. ಆದರೆ ನೀವು ಕರ್ನಾಟಕ ಸರ್ಕಾರಿ ಸೇವಾ ನಿಯಮಾವಳಿಯ ನಿಯಮ 302ರ ಮೇರೆಗೆ ಕುಟುಂಬ ಪಿಂಚಣಿ, ಮರಣ ಉಪದಾನ ಪಡೆಯಲು ಅವನಿಗೆ ನಾಮ ನಿರ್ದೇಶನ ಮಾಡಬಹುದು.

***

25.09.2017.

ಉನ್ನತ ಶಿಕ್ಷಣ ಇಲಾಖೆ ಅಡಿ ಬರುವ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಪೂರ್ಣಕಾಲಿಕ ಸಹಾಯಕ ಪ್ರಾಧ್ಯಾಪಕರಾಗಿದ್ದ ಪತಿ 12-10-2016ರಂದು ಮರಣ ಹೊಂದಿರುತ್ತಾರೆ. ಇಬ್ಬರು ಚಿಕ್ಕ ಮಕ್ಕಳು ಇರುವುದರಿಂದ ಅನುಕಂಪದ ಆಧಾರದಲ್ಲಿ ಬಿಎಸ್ಸಿ ಪದವೀಧರೆಯಾದ ನನಗೆ ಎಫ್.ಡಿ.ಎ. ಅಥವಾ ಎಸ್.ಡಿ.ಎ.ದಲ್ಲಿ ಯಾವ ಹುದ್ದೆ ಸಿಗಬಹುದು?

| ಸೌಮ್ಯಾ ಚಿಕ್ಕಮಗಳೂರು.

ಕರ್ನಾಟಕ ಸರ್ಕಾರಿ ಸೇವಾ (ಅನುಕಂಪದ ಮೇರೆಗೆ ನೇಮಕಾತಿ) ನಿಯಮಗಳು 1996ರ ನಿಯಮ 3ರಂತೆ ಮೃತ ನೌಕರನ ಅವಲಂಬಿತರಾದ ಪತ್ನಿ ಅನುಕಂಪದ ಮೇರೆಗೆ ನೇಮಕಾತಿ ಹೊಂದಲು ಅರ್ಹರಾಗಿರುತ್ತಾರೆ. ದಿನಾಂಕ 11-2-2000ರ ಸರ್ಕಾರಿ ಅಧಿಸೂಚನೆ ಸಂಖ್ಯೆ ಡಿಪಿಆರ್ 20 ಎಸ್​ಸಿಎ 99ರಂತೆ ಪ್ರಥಮ ದರ್ಜೆ ಸಹಾಯಕರ ಹುದ್ದೆಗೆ ನೀವು ಅರ್ಹರಾಗಿರುತ್ತೀರಿ. ಪದವೀಧರೆಯಾಗಿರುವುದರಿಂದ ನೇಮಕಾತಿ ಪ್ರಾಧಿಕಾರಕ್ಕೆ ಅವರ ಇಲಾಖೆಯಲ್ಲಿ ನೇರ ನೇಮಕಾತಿಗೆ ಖಾಲಿ ಇರುವ ಪ್ರಥಮ ದರ್ಜೆ ಸಹಾಯಕರ ಹುದ್ದೆಯೇ ಬೇಕೆಂದು ನಿಗದಿತ ನಮೂನೆಯಲ್ಲಿ ಅರ್ಜಿ ಸಲ್ಲಿಸಬೇಕು. ಸರ್ವರೀತಿಯಲ್ಲೂ ನೀವು ಪ್ರಥಮ ದರ್ಜೆ ಸಹಾಯಕರ ಹುದ್ದೆಗೆ ಅರ್ಹ.

***

 23.09.2017.

ನಾನು 9 ವರ್ಷಗಳಿಂದ ಪ್ರಾಥಮಿಕ ಶಾಲಾ ಶಿಕ್ಷಕನಾಗಿದ್ದು, ಇದುವರೆಗೂ ಯಾವುದೇ ಆಸ್ತಿಯನ್ನು ಖರೀದಿಸಿಲ್ಲ. ಆದರೆ ಈಗ ಒಂದು ಖಾಲಿ ನಿವೇಶನವನ್ನು ಖರೀದಿಸಬೇಕೆಂದಿದ್ದೇನೆ. ಇದಕ್ಕೆ ನಮ್ಮ ಮೇಲಾಧಿಕಾರಿಗಳ ಅನುಮತಿ ಪಡೆಯಬೇಕೆ? ಎಷ್ಟು ಮೊತ್ತದವರೆಗೆ ಖರೀದಿಸಬಹುದು ಎಂಬುದನ್ನು ದಯವಿಟ್ಟು ತಿಳಿಸಿಕೊಡಿ.


| ಶ್ರೀಹರ್ಷ ಸೊರಬ


ಕರ್ನಾಟಕ ಸರ್ಕಾರಿ ಸೇವಾ (ನಡತೆ) ನಿಯಮಗಳು 1966ರ ನಿಯಮ 23ರ ಮೇರೆಗೆ ಯಾವುದೇ ಚರಾಸ್ಥಿ ಅಥವಾ ಸ್ಥಿರಾಸ್ಥಿ ಖರೀದಿಸುವ ಮುನ್ನ ಪೂರ್ವಾನುಮತಿ ಪಡೆಯಬೇಕಾದುದು ಅವಶ್ಯಕ ನೀವು ಖರೀದಿಸಲು ಉದ್ದೇಶಿಸುವ ಖಾಲಿ ನಿವೇಶನದ ಖರೀದಿಗೆ ಯಾವುದೇ ರೀತಿಯ ಆರ್ಥಿಕ ಸಂಪನ್ಮೂಲಗಳನ್ನು ಕ್ರೋಢೀಕರಿಸಿದ್ದೀರಿ ಮತ್ತು ಈ ಸಂಪನ್ಮೂಲಗಳನ್ನು ನಿಮ್ಮ ವಾರ್ಷಿಕ ಆಸ್ತಿ ಮತ್ತು ಋಣಪಟ್ಟಿಕೆಯಲ್ಲಿ ಸೇರಿಸಿರಬೇಕು. ಈ ಹಿನ್ನೆಲೆಯಲ್ಲಿ ನೀವು ನಿಮ್ಮ ಮೂಲವೇತನದ ಆಧಾರದ ಮೇಲೆ ನಿವೇಶನವನ್ನು ಖರೀದಿಸಬಹುದು.

***


22.09.2017.

ನಾನು ಸರ್ಕಾರದ ಅನುಮತಿ ಪಡೆಯದೆ ದೂರದರ್ಶನವೊಂದರ ಸಂದರ್ಶನ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದೆ. ಇದರ ಬಗ್ಗೆ ನಮ್ಮ ಇಲಾಖಾ ಮುಖ್ಯಸ್ಥರು ಶಿಸ್ತು ಕ್ರಮ ಕೈಗೊಂಡು ನನ್ನನ್ನು ಸೇವೆಯಿಂದ ವಜಾ ಮಾಡಿದ್ದಾರೆ. ಇದು ಸರಿಯಾದ ಕ್ರಮವೇ?


| ಆರ್.ಎಂ. ಪಾಟೀಲ್ ಬೆಳಗಾವಿ


ಕರ್ನಾಟಕ ಸರ್ಕಾರಿ ಸೇವಾ (ನಡತೆ ) ನಿಯಮಗಳು 1946ರ ನಿಯಮ 9ರ ಮೇರೆಗೆ ಯಾರೇ ಸರ್ಕಾರಿ ನೌಕರನು ಸರ್ಕಾರದಿಂದ ಪೂರ್ವಾನುಮತಿ ಪಡೆಯದೆ ಯಾವುದೇ ಆಕಾಶವಾಣಿ, ದೂರದರ್ಶನ, ಪತ್ರಿಕೆ ಮುಂತಾದ ಕಡೆ ಕಾರ್ಯಕ್ರಮದಲ್ಲಿ ಭಾಗವಹಿಸುವಂತಿಲ್ಲ ಅಥವಾ ಲೇಖನವನ್ನು ಬರೆಯುವಂತಿಲ್ಲ. ಆದರೆ ಅಂತಹ ಕಾರ್ಯಕ್ರಮವು ಸಾಹಿತ್ಯಿಕ, ಕಲಾತ್ಮಕ, ವೈಜ್ಞಾನಿಕ ಸ್ವರೂಪವಾಗಿದ್ದರೆ ಅನುಮತಿ ಅವಶ್ಯಕವಾಗಿರುವುದಿಲ್ಲ. ಹೀಗಿರುವುದರಿಂದ ನೀವು ದೂರದರ್ಶನದ ಕಾರ್ಯಕ್ರಮದಲ್ಲಿ ಭಾಗವಹಿಸುವುದಕ್ಕೆ ದಂಡನೆ ಒದಗಿಸುವುದು ಸ್ವಾಭಾವಿಕ ನ್ಯಾಯಕ್ಕೆ ವ್ಯತಿರಿಕ್ತವಾಗಿರುತ್ತದೆ. ದಿನಾಂಕ 14-4-2001ರ ಸರ್ಕಾರಿ ಸುತ್ತೋಲೆ ಸಂಖ್ಯೆ ಸಿ.ಆಸು.ಇ. 18 ಸೇ ಇ ವಿ 2001ರ ಮೇರೆಗೆ ಕನಿಷ್ಠ ಪಕ್ಷ ಎರಡು ವಾರ್ಷಿಕ ವೇತನ ಬಡ್ತಿಗಳನ್ನು ತಡೆಹಿಡಿಯುವ ನೊಂದಣಿಯನ್ನು ವಿಧಿಸಲು ಸೂಚಿಸಲಾಗಿದೆ. ಆದುದರಿಂದ ನೀವು ಮೇಲ್ಮನವಿ ಪ್ರಾಧಿಕಾರಕ್ಕೆ ಈ ಬಗ್ಗೆ ಮನವಿಯನ್ನು ಸಲ್ಲಿಸಿ ಪುನರ್ ನಿಯೋಜನೆಗೊಳ್ಳಬಹುದು.

***

 20.09.2017.

ಅನುದಾನಿತ ಖಾಸಗಿ ಶಿಕ್ಷಣ ಸಂಸ್ಥೆಯಲ್ಲಿ ಪ್ರೌಢಶಾಲಾ ಶಿಕ್ಷಕನಾಗಿ ಕೆಲಸ ಮಾಡುತ್ತಿದ್ದು, ಸಂಸ್ಥೆಯ ಕಾರ್ಯದರ್ಶಿ ದಿನಾಂಕ 15-3-2017ರಿಂದ ವಿನಾಕಾರಣ ಅಮಾನತ್ತಿನಲ್ಲಿರಿಸಿರುತ್ತಾರೆ. ಅನುದಾನಿತ ಶಿಕ್ಷಣ ಸಂಸ್ಥೆಗಳಲ್ಲಿ ಕ್ರಮ ಜರುಗಿಸುವ ಅಧಿಕಾರ ಕಾರ್ಯದರ್ಶಿ ಅಥವಾ ಆಡಳಿತ ಮಂಡಳಿಗೆ ಇರುತ್ತದೆಯೇ?


| ಶಿವಶಂಕರ್ ಮೂರ್ತಿ ಮೈಸೂರು


ಕರ್ನಾಟಕ ಶಿಕ್ಷಣ ಸಂಸ್ಥೆಗಳು ಅನುದಾನಿತ ಖಾಸಗಿ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಂಸ್ಥೆಗಳ ನೌಕರರ ನೇಮಕಾತಿ ಮತ್ತು ಸೇವಾ ಷರತ್ತುಗಳಡಿಯಲ್ಲಿ (ನಿಯಮಗಳು 1999ರ ನಿಯಮ 2(1)(ಡಿ)) ಕಾರ್ಯನಿರ್ವಾಹಕ ಸಮಿತಿ ಅಥವಾ ಗೌರ್ನಿಂಗ್ ಕೌನ್ಸಿಲ್ ಶಿಸ್ತಿನ ಪ್ರಾಧಿಕಾರವಾಗಿರುತ್ತದೆ. ಈ ನಿಯಮದಂತೆ ಆಡಳಿತ ಮಂಡಳಿಯೇ ಶಿಸ್ತಿನ ಕ್ರಮವನ್ನು ಸದರಿ ನಿಯಮದ ಪ್ರಕಾರ ನಡೆಸಿ ನೌಕರರ ಮೇಲೆ ದಂಡನೆ ವಿಧಿಸಲು ಸಂಪೂರ್ಣ ಅಧಿಕಾರ ಹೊಂದಿರುತ್ತದೆ. ಈ ರೀತಿ ದಂಡನೆ ವಿಧಿಸಲು ಶಿಕ್ಷಣ ಇಲಾಖೆಯ ಅಥವಾ ಸರ್ಕಾರದ ಅನುಮತಿ ಅಗತ್ಯವಿರುವುದಿಲ್ಲ.

***

19.09.2017.

ನಾನು ಕರ್ನಾಟಕ ದಿನಗೂಲಿ ನೌಕರರ ಕ್ಷೇಮಾಭಿವೃದ್ಧಿ ನಿಗಮ 2012ರಡಿಯಲ್ಲಿ ದಿನಗೂಲಿ ನೌಕರನಾಗಿ ಕಳೆದ 5 ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದೇನೆ. ನಮಗೆ ಸರ್ಕಾರಿ ಆದೇಶದಂತೆ ಪ್ರತಿವರ್ಷವು 30 ದಿನಗಳ ಕಾಲ ಗಳಿಕೆ ರಜೆಯನ್ನು ನೀಡುತ್ತಿದ್ದಾರೆ. ಈ ಗಳಿಕೆ ರಜೆಯನ್ನು ಕರ್ನಾಟಕ ಸರ್ಕಾರಿ ಸೇವಾ ನಿಯಮಾವಳಿಯಂತೆ ನಗದೀಕರಣ ಮಾಡಿಸಿಕೊಳ್ಳಬಹುದೇ?

| ಟಿ. ನರಸಿಂಹ ಮೂರ್ತಿ ಶಿವಮೊಗ್ಗ.

ದಿನಾಂಕ 12-7-2017ರ ಸರ್ಕಾರಿ ಸುತ್ತೋಲೆ ಸಂಖ್ಯೆ ಸಿಆಸುಇ 22-ಸೇಸ್ಥಾಆ 2017ರ ಮೇರೆಗೆ ಕರ್ನಾಟಕ ದಿನಗೂಲಿ ನೌಕರರ ಕ್ಷೇಮಾಭಿವೃದ್ಧಿ ನಿಗಮ 2012ರಡಿಯಲ್ಲಿ ರಚಿಸಲಾಗಿರುವ ನಿಯಮಗಳಡಿ ದಿನಗೂಲಿ ನೌಕರರಿಗೂ ಕೆಲವು ನಿರ್ದಿಷ್ಟ ಸೌಲಭ್ಯಗಳನ್ನು ನೀಡಿ ಸೇವೆಯಲ್ಲಿ ಮುಂದುವರಿಸಲಾಗಿದೆ. ಆದರೆ ಅವರು ಕಾಯಂ ನೌಕರರಲ್ಲದಿರುವುದರಿಂದ ಕರ್ನಾಟಕ ಸರ್ಕಾರಿ ಸೇವಾ ನಿಯಮಾವಳಿಯ ನಿಯಮ 118ರಂತೆ ಗಳಿಕೆ ರಜೆ ನಗದೀಕರಣ ಮಾಡಲು ಅವಕಾಶವಿರುವುದಿಲ್ಲ. ಆದುದರಿದ ನೀವು ಪ್ರತಿ ಕಾಾಯಂ ನೌಕರರಿಗೆ ಲಭ್ಯವಾಗುವ ಈ ಗಳಿಕೆ ರಜೆ ನಗದೀಕರಣವನ್ನು ಪಡೆಯಲು ಅರ್ಹರಾಗುವುದಿಲ್ಲ.

***

18.09.2017,

ನಾನೀಗ ಬೆರಳಚ್ಚುಗಾರಳಾಗಿದ್ದು, ಕನ್ನಡ ಶೀಘ್ರಲಿಪಿ ಪರೀಕ್ಷೆ ಪಾಸು ಮಾಡಲು ಇಚ್ಛಿಸಿದ್ದೇನೆ. ಈ ಶೀಘ್ರಲಿಪಿ ಪರೀಕ್ಷೆಯಲ್ಲಿ ತೇರ್ಗಡೆಯಾದರೆ ಪದೋನ್ನತಿ ಲಭ್ಯವಾಗುತ್ತದೆಯೇ ಹಾಗೂ ಈ ಪರೀಕ್ಷೆ ಪಾಸು ಮಾಡಲು ನಮ್ಮ ಮೇಲಧಿಕಾರಿಯ ಪೂರ್ವಾನುಮತಿ ಅವಶ್ಯಕವೆ?

| ವಿಜಯಲಕ್ಷ್ಮೀ ಚಿಕ್ಕಮಗಳೂರು.

ಕರ್ನಾಟಕ ಸರ್ಕಾರಿ ಸೇವಾ (ಶೀಘ್ರಲಿಪಿಗಾರರ-ಬೆರಳಚ್ಚುಗಾರರ ನೇಮಕಾತಿ) ನಿಯಮಗಳು 1983ರ ನಿಯಮ 4ರಂತೆ ಬೆರಳಚ್ಚುಗಾರರಿಂದ ಶೀಘ್ರಲಿಪಿಗಾರರ ಹುದ್ದೆಗೆ ಪದೋನ್ನತಿ ಹೊಂದಲು ಕರ್ನಾಟಕ ಪ್ರೌಢಶಿಕ್ಷಣಾ ಪರೀಕ್ಷಾ ಮಂಡಲಿಯು ನಡೆಸುವ ಪ್ರೌಢದರ್ಜೆ ಕನ್ನಡ ಶೀಘ್ರಲಿಪಿಯಲ್ಲಿ ತೇರ್ಗಡೆಯಾಗಬೇಕು. ನಿಗದಿತ ಇಲಾಖಾ ಪರೀಕ್ಷೆಗಳಲ್ಲಿ ತೇರ್ಗಡೆ ಹೊಂದಿರಬೇಕು. ಈ ಶೀಘ್ರಲಿಪಿ ಪರೀಕ್ಷೆಗೆ ಹಾಜರಾಗಲು ಇಲಾಖಾ ಪರಿಮಿತಿ ಅವಶ್ಯಕವಿಲ್ಲ.

***

17-9-17

ನಾನು 2013ರಿಂದ ಪೊಲೀಸ್ ಪೇದೆಯಾಗಿದ್ದೇನೆ. ಪ್ರಸ್ತುತ ಕೆಪಿಎಸ್​ಸಿಯಿಂದ ಕರೆದಿರುವ ಎಫ್​ಡಿಎ ಹುದ್ದೆಗೆ ಅರ್ಜಿ ಸಲ್ಲಿಸಲು ಬಯಸಿದ್ದು, ನನ್ನ ವಯಸ್ಸು 41 ವರ್ಷ. ನನಗೆ ವಯೋಮಿತಿ ಸಡಿಲಿಕೆ ದೊರಕುತ್ತದೆಯೇ? ನಾನು ಎಫ್​ಡಿಎ ಪರೀಕ್ಷೆಗೆ ಯಾವ ಪುಸ್ತಕಗಳನ್ನು ಓದಬೇಕು. ದಯವಿಟ್ಟು ವಿವರ ನೀಡಿ.

| ಎಂ.ಎಲ್. ಹರೀಶ್ ಬೆಂಗಳೂರು.

ಕರ್ನಾಟಕ ಸರ್ಕಾರಿ ಸೇವಾ (ಸಾಮಾನ್ಯ ನೇಮಕಾತಿ ಭರ್ತಿ) ನಿಯಮಗಳು 1977ರ ನಿಯಮ 6ರಡಿಯಲ್ಲಿ ಸರ್ಕಾರಿ ಸೇವೆಯಲ್ಲಿರುವ ನೌಕರರಿಗೆ ಅವರು ಸಲ್ಲಿಸಿದ ಸೇವೆ ಅವಧಿ ಅಥವಾ ಗರಿಷ್ಠ ಹತ್ತು ವರ್ಷಗಳ ವಯೋಮಿತಿಯಲ್ಲಿ ಸಡಿಲಿಕೆ ನೀಡಲಾಗುತ್ತದೆ. ಆದುದರಿಂದ ನೀವು ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದು. ಎಫ್​ಡಿಎ ಪರೀಕ್ಷೆಗಳಿಗಾಗಿ ವಿಜಯವಾಣಿ ಪತ್ರಿಕೆ ಪ್ರಕಟಿಸುತ್ತಿರುವ ಉದ್ಯೋಗ-ವಿದ್ಯಾರ್ಥಿ ಮಿತ್ರ ದೈನಿಕವನ್ನು ತಪ್ಪದೆ ನಿರಂತರವಾಗಿ ಅಧ್ಯಯನ ಮಾಡಬೇಕು. ಲ. ರಾಘವೇಂದ್ರ ಅವರು ಬರೆದಿರುವ ಎಫ್​ಡಿಎ ಸ್ಪರ್ಧಾತ್ಮಕ ಪರೀಕ್ಷಾ ಮಾರ್ಗದರ್ಶಿ, ಪ್ರಶ್ನೆಕೋಶ, ಸಾಮಾನ್ಯ ಅಧ್ಯಯನ ಕೈಪಿಡಿ ನೋಡಬಹುದು.

  *** 

16.09.2017

ನನ್ನ ಸ್ನೇಹಿತ ಕಂದಾಯ ಇಲಾಖೆಯಲ್ಲಿ ದ್ವಿತೀಯ ದರ್ಜೆ ಸಹಾಯಕನೆಂದು 2005ರ ಮೇ 19ರಂದು ಕೆಲಸಕ್ಕೆ ಸೇರಿದ್ದು, 2006ರಲ್ಲಿ ಸುಮಾರು 14 ತಿಂಗಳು ಆರೋಗ್ಯ ಸರಿಯಿಲ್ಲದ ಕಾರಣ ಕಚೇರಿಗೆ ಗೈರು ಹಾಜರಾಗಿದ್ದಾನೆ. ಅವನನ್ನು 2011ರ ಆಗಸ್ಟ್ 4ರಂದು ಸೇವೆಯಿಂದ ಅಮಾನತು ಮಾಡಲಾದ್ದು, 2012ರ ಏಪ್ರಿಲ್ 30ರಂದು ಇಲಾಖಾ ವಿಚಾರಣೆ ಕಾಯ್ದಿರಿಸಿ ಅಮಾನತಿಯನಿಂದ ಮುಕ್ತಗೊಳಿಸಿರುತ್ತಾರೆ. ನನ್ನ ಪ್ರಶ್ನೆ ಏನೆಂದರೆ ನನ್ನ ಸ್ನೇಹಿತ ಹಲವು ಬಾರಿ ಇಲಾಖಾ ವಿಚಾರಣೆ ಅಂತ್ಯಗೊಳಿಸಲು ಮನವಿ ಸಲ್ಲಿಸಿದ್ದರೂ ಈವರೆಗೆ ವಿಚಾರಣೆ ಪೂರ್ಣಗೊಳಿಸಿಲ್ಲ. ವೇತನ ಬಡ್ತಿ, ಪದೋನ್ನತಿಯನ್ನೂ ನೀಡಿರುವುದಿಲ್ಲ. ಇಲಾಖಾ ವಿಚಾರಣೆ ಆಂತ್ಯಗೊಳಿಸಲು ಅವಕಾಶವಿದೆಯೇ?


ಜಗನ್ನಾಥ್ ಕೋಲಾರ


ಕರ್ನಾಟಕ ಸರ್ಕಾರದ ಆದೇಶ ಸಂಖ್ಯೆ ಸಿಆಸುಇ14ಸೇಇವಿ96 ದಿನಾಂಕ 31-5-1997 ಹಾಗೂ ಇತ್ತೀಚಿನ ಸರ್ಕಾರದ ಅಧಿಕೃತ ಜ್ಞಾಪನ ಸಂಖ್ಯೆ: ಸಿಆಸುಇ 12ಸೇಇವಿ 2013ರಂತೆ ಇಲಾಖಾ ವಿಚಾರಣೆಯನ್ನು ನಡೆಸಲು ಮತ್ತು ವರದಿಯನ್ನು ಸಲ್ಲಿಸಲು 4 ತಿಂಗಳು ಕಾಲಾವಕಾಶ ನಿಗದಿಪಡಿಸಲಾಗಿದೆ. ಒಟ್ಟು ಪ್ರಕರಣವನ್ನು 9 ತಿಂಗಳ ಅವಧಿಯಲ್ಲೇ ಪೂರ್ಣಗೊಳಿಸತಕ್ಕದ್ದೆಂದು ಸೂಚಿಸಲಾಗಿದೆ. ಈಗಾಗಲೇ ತಿಳಿಸಿದಂತೆ ಈ ಕಾಲಮಿತಿ ಸೂಚನೆಗಳನ್ನು ಉಲ್ಲಂಘಿಸುವ ಅಧಿಕಾರಿಗಳನ್ನು ಕರ್ತವ್ಯ ಲೋಪದ ಆರೋಪದ ಮೇಲೆ ಶಿಸ್ತಿನ ಕ್ರಮಕ್ಕೆ ಒಳಪಡಿಸಬೇಕಾಗುತ್ತದೆಂದು ತಿಳಿಸಲಾಗಿದೆ. ಹೀಗಾಗಿರುವುದರಿಂದ ನಿಮ್ಮ ಸ್ನೇಹಿತನ ಇಲಾಖಾ ವಿಚಾರಣೆಯನ್ನು 4 ವರ್ಷವಾದರೂ ಮಾಡದೆ ಇರುವುದು ಸ್ವಾಭಾವಿಕ ನ್ಯಾಯಕ್ಕೆ ಅಪಚಾರವೆಸಗಿದಂತಾಗುತ್ತದೆ. ಅಮಾನತಿನ ಅವಧಿಯ ವೇತನ ಬಡ್ತಿಯನ್ನು ಹೊರತುಪಡಿಸಿ ಉಳಿದ ವೇತನ ಬಡ್ತಿಯನ್ನು ನಿಯಮ 53ರ ಮೇರೆಗೆ ಕಾಲಕಾಲಕ್ಕೆ ಮಂಜೂರು ಮಾಡಬೇಕಾಗುತ್ತದೆ.

***

 15.09.2017,   ವಿಜಯವಾಣಿ 

ನಾನು ಪ್ರೌಢಶಾಲೆ ಶಿಕ್ಷಕನಾಗಿದ್ದು, ವಿದ್ಯಾರ್ಥಿನಿಯೊಬ್ಬಳಿಗೆ ಲೈಂಗಿಕ ಕಿರುಕುಳ ನೀಡಿರುವೆನೆಂಬ ಆರೋಪದ ಮೇಲೆ ನನ್ನನ್ನು ವಿಚಾರಣೆ ಯಿಲ್ಲದೆ ಸೇವೆಯಿಂದ ವಜಾ ಮಾಡಿದ್ದಾರೆ. ಇದು ಕಾನೂನು ರೀತ್ಯ ಸರಿಯೇ? ನ್ಯಾಯಾಲಯಕ್ಕೆ ಮೊರೆ ಹೋದರೆ ನನಗೆ ಪುನಃ ಕೆಲಸಕ್ಕೆ ಹೋಗಬಹುದೇ?

|ಚಂದ್ರಶೇಖರ ಎಂ.ದಾವಣಗೆರೆ.

ವಿದ್ಯಾರ್ಥಿನಿಯರನ್ನು ಲೈಂಗಿಕ ಕಿರುಕುಳಕ್ಕೆ ಒಳಪಡಿಸಿದ ಶಿಕ್ಷಕರನ್ನು ಸೇವೆಯಿಂದ ವಜಾ ಮಾಡುವ ಮೊದಲು ನಿಯಮ 11ರಡಿ ವಿವರವಾದ ವಿಚಾರಣೆ ನಡೆಸಿದರೆ ಮುಖ್ಯ ಪರೀಕ್ಷೆ, ಪಾಟೀ ಸವಾಲು ಮರು ಪರೀಕ್ಷೆಗೆ ಒಳಗಾಗುವಾಗ, ಕಿರುಕುಳಕ್ಕೆ ಒಳಪಟ್ಟ ವಿದ್ಯಾರ್ಥಿನಿ; ಆಕೆಯ ಸ್ನೇಹಿತೆಯರು; ಆಕೆಯ ಪೋಷಕರು ಶಾಲೆಯ ಇತರ ಸಿಬ್ಬಂದಿ ತೀವ್ರ ಮುಜುಗರಕ್ಕೆ ಒಳಗಾಗುತ್ತಾರೆ. ಆದ್ದರಿಂದ ಅಂತಹ ಶಿಕ್ಷಕರನ್ನು ನಿಯಮ 14(2)ರಡಿ, ವಿಚಾರಣೆಯಿಲ್ಲದೆ ಸೇವೆಯಿಂದ ವಜಾ ಮಾಡಬಹುದು. ಈ ಅಭಿಪ್ರಾಯವನ್ನು ಭಾರತದ ಸರ್ವೇಚ್ಛ ನ್ಯಾಯಾಲಯ ಅದರ ಹಲವಾರು ತೀರ್ಪಗಳಲ್ಲಿ ಪುಷ್ಠೀಕರಿಸಿದೆ.

***

14.09.2017.

ನಾನು ಸರ್ಕಾರಿ ನೌಕರನಾಗಿದ್ದು ನನಗೆ ಲಕ್ವ ಹೊಡೆದಿರುವ ಕಾರಣ ದೈಹಿಕ ಮತ್ತು ಮಾನಸಿಕವಾಗಿ ಸರ್ಕಾರಿ ಸೇವೆ ಸಲ್ಲಿಸಲು ಅಶಕ್ತನಾಗಿದ್ದೇನೆ. ನಾನು 1995ರಲ್ಲಿ ಸರ್ಕಾರಿ ಸೇವೆಗೆ ಸೇರಿದ್ದು ನನಗೀಗ 52 ವರ್ಷ ವಯಸ್ಸಾಗಿದೆ. ನಾನು ಅಶಕ್ತತಾ ನಿವೃತ್ತಿ ವೇತನ ಪಡೆಯಲು ಅರ್ಹನೆ?

|ಕೃಷ್ಣಮೂರ್ತಿ ಮಂಗಳೂರು.

ಕರ್ನಾಟಕ ಸರ್ಕಾರಿ ಸೇವಾ ನಿಯಮಾವಳಿಯ ನಿಮಯ 273 ರಿಂದ 282ರವರೆಗಿನ ಅವಕಾಶಗಳಂತೆ ಸರ್ಕಾರಿ ನೌಕರ ಅವನ ದೈಹಿಕ ಅಥವಾ ಮಾನಸಿಕ ಕಾರಣಗಳಿಂದಾಗಿ ಯಾವುದೇ ಸರ್ಕಾರಿ ಹುದ್ದೆಯಲ್ಲಿ ಕೆಲಸ ಮಾಡಲು ಅಶಕ್ತನಾದರೆ, ಸೂಕ್ತ ವೈದ್ಯಕೀಯ ಪ್ರಾಧಿಕಾರದಿಂದ ಪ್ರಮಾಣಪತ್ರವನ್ನು ಹಾಜರುಪಡಿಸಿದರೆ ಮತ್ತು ಕನಿಷ್ಠ 10 ವರ್ಷಗಳ ಅರ್ಹತಾ ಸೇವೆಯನ್ನು ಸಲ್ಲಿಸಿದರೆ ಅಶಕ್ತತಾ ನಿವೃತ್ತಿ ವೇತನದ ಮೇಲೆ ಸೇವೆಯಿಂದ ನಿವೃತ್ತಿ ಹೊಂದಬಹುದು. ನಿವೃತ್ತಿ ವೇತನ ಮಂಜೂರು ಮಾಡಲು ಸಕ್ಷಮನಾದ ಪ್ರಾಧಿಕಾರಿ, ಅಶಕ್ತತಾ ನಿವೃತ್ತಿ ವೇತನ ಮಂಜೂರು ಮಾಡಬಹುದು. ಅಶಕ್ತತಾ ನಿವೃತ್ತಿ ವೇತನ ಮತ್ತು ನಿವೃತ್ತಿ ಉಪದಾನ ಅರ್ಹತಾದಾಯಕ ಸೇವಾವಧಿ ಮತ್ತು ಅಂತಿಮ ಉಪಲಬ್ಧಿಗಳನ್ನು ಅನುಸರಿಸಿ, ವಯೋನಿವೃತ್ತಿ ವೇತನಕ್ಕೆ ಸಮನಾಗಿರುತ್ತದೆ.

***

 ಜೂನ್-2016 ರ ಸರ್ಕಾರಿ ಕಾರ್ನರ್ ಪ್ರಶ್ನೆಗಳು

***

 13.09.2017.

ಪೊಲೀಸ್ ಇಲಾಖೆಯಲ್ಲಿ ಪೇದೆಯಾಗಿದ್ದ ನಾನು, ತಂದೆಯವರ ಅನಾರೋಗ್ಯ ನಿಮಿತ್ತ 8 ತಿಂಗಳು ಕರ್ತವ್ಯಕ್ಕೆ ಗೈರು ಹಾಜರಾಗಿದ್ದೇನೆ. ಏತನ್ಮಧ್ಯೆ ನಮ್ಮ ಇಲಾಖೆಯವರು ನನ್ನನ್ನು ಕರ್ತವ್ಯದಿಂದ ಬಿಡುಗಡೆ ಮಾಡಿರುತ್ತಾರೆ. (ಈಜಿಠ್ಚಜಚ್ಟಜಛಿ) ಈ ಮಧ್ಯೆ ಅನಾರೋಗ್ಯ ಪೀಡಿತರಾಗಿದ್ದ ನಮ್ಮ ತಂದೆ ನಿಧನ ಹೊಂದಿದ್ದು ಅವರು ಆರೋಗ್ಯ ಇಲಾಖೆಯಲ್ಲಿ ನೌಕರರಾಗಿದ್ದರು. ನಾನು ಅನುಕಂಪದ ಮೇರೆಗೆ ನೌಕರಿಯನ್ನು ಪಡೆಯಲು ನಿಯಮಾವಳಿಯಲ್ಲಿ ಅವಕಾಶವಿದೆಯೇ ?


| ವಿಜಯಾನಂದ ಜಯಪುರ


ಕರ್ನಾಟಕ ಸಿವಿಲ್ ಸೇವೆ (ಪ್ರೊಬೆಷನ್ ನಿಯಮಾವಳಿಯ ನಿಯಮ


2(1)ರ ಪ್ರಕಾರ ಪ್ರೊಬೆಷನ್ ಮೇರೆಗೆ ನೇಮಿಸಲಾದ ಎಂದರೆ ಪರೀಕ್ಷಾರ್ಥವಾಗಿ ನೇಮಿಸಿದ್ದು ಎಂದರ್ಥ. ಅವನ್ನು ನೇಮಕವಾದ ಹುದ್ದೆಗೆ ಸೂಕ್ತವೋ ಅಥವಾ ಅಲ್ಲವೋ ಎಂಬುದನ್ನು ಪರೀಕ್ಷಿಸುವುದಕ್ಕಾಗಿ ನೇಮಕವಾಗಿರುವ ವ್ಯಕ್ತಿಗೆ (ಪ್ರೊಬೇಷನರ್) ಸದರಿ ನಿಯಮ 3ರ ಪ್ರಕಾರ ವಿಶೇಷ ನಿಯಮದ ಹೊರತು ಕರ್ನಾ ಟಕ ಸರ್ಕಾರಿ ಸೇವೆಗೆ ನೇಮಕವಾಗುವ ಪ್ರತಿಯೊಬ್ಬ ನೌಕರ 2 ವರ್ಷಗಳ ಪ್ರೊಬೆಷನ್ ಅವಧಿಯಲ್ಲಿರುತ್ತಾನೆ. ಪ್ರೊಬೆಷನ್ ಅವಧಿಯಲ್ಲಿ ನೌಕರ ಅನಧಿಕೃತವಾಗಿ ಗೈರು ಹಾಜರಾದರೆ


ಅಥವಾ ನಿಗದಿತ ಇಲಾಖಾ ಪರೀಕ್ಷೆಗಳಲ್ಲಿ ತೇರ್ಗಡೆ ಹೊಂದದಿದ್ದರೆ ತನ್ನ ಹುದ್ದೆಯನ್ನು ಹೊಂದುವುದಕ್ಕೆ ಸೂಕ್ತವಲ್ಲವೆಂದು ನಿರ್ಧಾರಕ್ಕೆ ನೇಮಕಾತಿ ಪ್ರಾಧಿಕಾರ ಬಂದಲ್ಲಿ ಅವನನ್ನು ಸಿಸಿಎ ನಿಯಮಾವಳಿಯಲ್ಲಿ ಕ್ರಮ ಕೈಗೊಳ್ಳದೆ ಪ್ರೊಬೆಷನ್ ಅವಧಿಯ ಯಾವುದೇ ಹಂತದಲ್ಲಿ ಸೇವೆಯಿಂದ ಬಿಡುಗಡೆ ಮಾಡಬಹುದು ಆದರೆ ಈ ರೀತಿಯ ಸೇವೆಯಿಂದ ತೆಗೆದುಹಾಕಲ್ಪಟ್ಟ ಸರ್ಕಾರಿ ನೌಕರನು ಕರ್ನಾಟಕ ಸಿವಿಲ್ ಸೇವೆ (ಅನುಕಂಪದ ಮೇರೆಗೆ) ನೇಮಕ ನಿಯಮಗಳು 1996ರ ಮೇರೆಗೆ ನೌಕರಿ ಪಡೆಯಲು ಅರ್ಹನಾಗಿರುತ್ತಾನೆ. ಆದಕಾರಣ ನಿಮ್ಮ ತಂದೆಯವರ ನೌಕರಿಯನ್ನು ಈ ನಿಯಮಾವಳಿ ರೀತ್ಯ ಪಡೆಯಬಹುದು.

***

11.09.2017.

ನನ್ನ ಪತಿ 2005ರಲ್ಲಿ ಸರ್ಕಾರಿ ನೌಕರಿಗೆ ಸೇರಿದ್ದು, 2008ರಲ್ಲಿ ಅವರನ್ನು ವಿವಾಹವಾಗಿದ್ದೆ. ನಮಗೆ ಇಬ್ಬರು ಮಕ್ಕಳಿದ್ದಾರೆ. ಕ್ಷುಲ್ಲಕ ಕಾರಣಕ್ಕೆ ವಿಚ್ಛೇದನ ಕೋರಿ ಪತಿ 2016ರಲ್ಲಿ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದರು. ಪ್ರಕರಣ ವಿಚಾರಣಾ ಹಂತದಲ್ಲಿರುವಾಗಲೇ 10-8-2017ರಂದು ಹೃದಯಾಘಾತದಿಂದ ನಿಧನರಾದರು. ಈಗ ನನಗೆ ಅನುಕಂಪದ ಆಧಾರದಲ್ಲಿ ಸರ್ಕಾರಿ ನೌಕರಿ ಸಿಗಲಿದೆಯೆ?

| ಅನುಪಮಾ ಕುಲಕರ್ಣಿ ಧಾರವಾಡ.

ವಿವಾಹ ವಿಚ್ಛೇದನ ಆಗದಿರುವುದರಿಂದ ಕರ್ನಾಟಕ ಸರ್ಕಾರಿ ಸೇವಾ ನಿಯಮಾವಳಿಯ ನಿಯಮ 292ಬಿ ಯಂತೆ ನಿಮಗೆ ಮರಣ ಉಪದಾನ ಹಾಗೂ ಕರ್ನಾಟಕ ಸರ್ಕಾರಿ ಸೇವಾ (ಕುಟುಂಬ ಪಿಂಚಣಿ) ನಿಯಮವಳಿಗಳು 2002ರಂತೆ ಕುಟುಂಬ ನಿವೃತ್ತಿ ವೇತನ ಲಭ್ಯವಾಗುತ್ತದೆ. ಅಲ್ಲದೆ ಕರ್ನಾಟಕ ಸಿವಿಲ್ ಸೇವಾ (ಅನುಕಂಪದ ಮೇರೆಗೆ ನೇಮಕ) ನಿಯಮಗಳು 1996 ನಿಯಮ 3ರಂತೆ ನಿಮಗೆ ಅನುಕಂಪದ ಮೇರೆಗೆ ಉದ್ಯೋಗಾವಕಾಶ ಲಭ್ಯವಾಗುತ್ತದೆ. ಈ ದೃಷ್ಟಿಯಿಂದ ಒಂದು ವರ್ಷದೊಳಗೆ ಸಕ್ಷಮ ಪ್ರಾಧಿಕಾರಕ್ಕೆ ಅರ್ಜಿ ಸಲ್ಲಿಸಬಹುದು.

.***

10.09.2017.

ನಾನು 31 ವರ್ಷದ ವಿವಾಹಿತ ಪುರುಷ. ನನ್ನ ತಾಯಿ 1 ವರ್ಷ ಸೇವಾವಧಿ ಇರುವಾಗಲೇ ನಿಧನ ಹೊಂದಿದರು. ಅವರು ಅನುದಾನಿತ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕರಾಗಿದ್ದರು. ನನಗೆ ಅನುಕಂಪದ ಆಧಾರದ ಮೇಲೆ ಉದ್ಯೋಗ ಲಭಿಸುವುದೇ ?

|ಎಂ. ಎಸ್. ಶಬರೀಶ ಚಿತ್ರದುರ್ಗ

ಕರ್ನಾಟಕ ಸರ್ಕಾರಿ ಸೇವಾ (ಅನುಕಂಪದ ಮೇರೆಗೆ ನೇಮಕಾತಿ) ನಿಯಮಗಳು 1996ರ ನಿಯಮ 3ರ ಮೇರೆಗೆ ಅನುಕಂಪದ ಆಧಾರದ ಮೇಲೆ ಮೃತ ಸರ್ಕಾರಿ ನೌಕರನ ಮಗ, ಪತಿ, ಮಗಳು , ಸಹೋದರ, ಸಹೋದರಿಯರು ನೇಮಕಾತಿ ಹೊಂದಲು ಅರ್ಹರು. ಆದರೆ ಈ ರೀತಿ ನೇಮಕಾತಿ ಹೊಂದಲು ಬಯಸುವ ಅಭ್ಯರ್ಥಿಯು ಅವಿವಾಹಿತನಾಗಿದ್ದು ಸರ್ಕಾರಿ ನೌಕರಿಯ ಸಾಮಾನ್ಯ ನೇಮಕಾತಿಯ ಗರಿಷ್ಠ ವಯೋಮಿತಿಯೊಳಗೆ ಇರಬೇಕು. ಆದರೆ ವಿವಾಹಿತರಾಗಿರುವುದರಿಂದ ನಿಮಗೆ ಅನುಕಂಪದ ಉದ್ಯೋಗ ಲಭ್ಯವಾಗುವುದಿಲ್ಲ.

***

09.09.2017.

ನಾನು ಸರ್ಕಾರಿ ಪ್ರೌಢಶಾಲಾ ಶಿಕ್ಷಕನಾಗಿದ್ದೇನೆ. ಮನವಿಯ ಮೇರೆಗೆ ಬೇರೆ ಇಲಾಖೆಯಲ್ಲಿ ಕಾರ್ಯನಿರ್ವಹಿಸಲು ಸರ್ಕಾರದ ಸೇವಾನಿಯಮಾವಳಿಯಲ್ಲಿ ಅವಕಾಶವಿದೆಯೇ ?

ಎಚ್.ಕೆ. ನಾಗೇಶಗೌಡ ತುಮಕೂರು ಜಿಲ್ಲೆ.

ಕರ್ನಾಟಕ ಸರ್ಕಾರಿ ಸೇವಾ (ಸಾಮಾನ್ಯ ನೌಕರಿ ಬಡ್ತಿ ) ನಿಯಮಗಳು 1977ರ ನಿಯಮ 16ರ ಮೇರೆಗೆ ನಿಮ್ಮ ವೇತನ ಶ್ರೇಣಿಯ ಸಾದೃಶ್ಯವಿರುವ ಹುದ್ದೆಗೆ ನಿಯೋಜನೆ ಮೇರೆಗೆ ಹೋಗಬಹುದು ನಿಮ್ಮ ಹಾಗೂ ನಿಯೋಜನೆ ಹೊಂದುವ ನೇಮಕಾತಿ ಪ್ರಾಧಿಕಾರಗಳು ಪರಸ್ಪರ ಒಪ್ಪಿ ಅನುಮತಿ ನೀಡಿದರೆ ಮಾತ್ರ ಇದು ಸಾಧ್ಯ.

***

 08.09.2017.

ನಾನು ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಸ್ಟಾಫ್ ನರ್ಸ್ ಆಗಿ 2013 ರಿಂದ ಕೆಲಸ ಮಾಡುತ್ತಿದ್ದೇನೆ. ಪ್ರಸ್ತುತ ನನಗೀಗ ರಾಯಚೂರಿನಲ್ಲಿ ಉದ್ಯೋಗ ದೊರಕಿದ್ದು ನಾನು ಉನ್ನತ ಅಧ್ಯಯನ ಮಾಡಲು ಬಯಸಿದ್ದೇನೆ. ಸೇವಾ ನಿರತ ನೌಕರನು ಉನ್ನತ ವ್ಯಾಸಂಗ ಮಾಡಲು ನಿಯಮಾವಳಿಯಲ್ಲಿ ಅವಕಾಶವಿದೆಯೇ?

| ರಘು ಕೆ.ಎಲ್. ಗೌಡ ಬೆಂಗಳೂರು

ಕರ್ನಾಟಕ ಸರ್ಕಾರಿ ಸೇವಾ ನಿಯಮಾವಳಿಯ ನಿಯಮ 61ರ ಮೇರೆಗೆ ಬಾಹ್ಯವಾಗಿ ಉನ್ನತ ವ್ಯಾಸಂಗ ಮಾಡಲು ಹಾಗೂ 1973 ಹಾಗೂ 1983ರ ಸರ್ಕಾರಿ ಆದೇಶದ ಹಿನ್ನೆಲೆಯಲ್ಲಿ ಉನ್ನತ ವ್ಯಾಸಂಗ ಮಾಡಲು ಅನುಮತಿ ಬೇಕಿಲ್ಲ. ಆದರೆ ಕರ್ನಾಟಕ ಸರ್ಕಾರಿ ಸೇವಾ ನಿಯಮಾವಳಿಯ ಪರಿಶಿಷ್ಟ 2ಎ ಪ್ರಕಾರ ಉನ್ನತ ವ್ಯಾಸಂಗ ಮಾಡಲು ಸರ್ಕಾರಿ ನೌಕರನ ವಯಸ್ಸು 48 ವರ್ಷದೊಳಗಿರಬೇಕು. ಸರ್ಕಾರಿ ನೌಕರರನ್ನು ಪ್ರತಿನಿಯೋಜಿಸಬಹುದಾದ ಉನ್ನತ ಶಿಕ್ಷಣ ಅಗತ್ಯವಾಗಿರಬೇಕು. ಸರ್ಕಾರದ ಅನುಮತಿಯೊಂದಿಗೆ ಇಂತಹ ಉನ್ನತ ಶಿಕ್ಷಣವನ್ನು ನಿಯೋಜನೆ ಮೇರೆಗೆ ಮಾಡಬಹುದಾಗಿದೆ.

***

07.09.2017.

ನಾನು ಒಂದು ವರ್ಷದಿಂದ ನ್ಯಾಯಾಂಗ ಇಲಾಖೆಯಲ್ಲಿ ದ್ವಿತೀಯ ದರ್ಜೆ ಸಹಾಯಕನಾಗಿದ್ದೇನೆ. ಬೇರೆ ಹುದ್ದೆಗೆ ಅರ್ಜಿ ಸಲ್ಲಿಸಲು ನನ್ನ ಮೂಲ ಪ್ರಮಾಣ ಪತ್ರ ಹಾಗೂ ನಿರಾಕ್ಷೇಪಣಾ ಪತ್ರ ನೀಡಲು ನಮ್ಮ ಇಲಾಖೆಯವರು ನಿರಾಕರಿಸುತ್ತಿದ್ದಾರೆ. ಅದಕ್ಕೆ ನಾನು ಸರ್ಕಾರಿ ಹುದ್ದೆಗೆ ರಾಜೀನಾಮೆ ನೀಡುವುದೇ ಪರಿಹಾರವೇ ಅಥವಾ ಬೇರೆ ದಾರಿ ಇದೆಯೇ ?

| ಮಹಮ್ಮದ್ ರಫಿ ಪಿಳ್ಳೇದಾರ್ ಬೀದರ್

ಕರ್ನಾಟಕ ಸರ್ಕಾರಿ ಸೇವಾ (ನೇರ ನೇಮಕಾತಿ) ನಿಯಮಗಳು 1977ರ ನಿಯಮ 11ರ ಮೇರೆಗೆ ಸರ್ಕಾರಿ ನೌಕರನು ಬೇರೊಂದು ಇಲಾಖೆಗೆ ಆಗಲಿ ಅಥವಾ ಹುದ್ದೆಗಾಗಲಿ ಅರ್ಜಿ ಸಲ್ಲಿಸಬೇಕಾದರೆ ತನ್ನ ನೇಮಕಾತಿ ಪ್ರಾಧಿಕಾರದ ಮೂಲಕ ಸಲ್ಲಿಸಬೇಕು ಅಥವಾ ನಿರಾಕ್ಷೇಪಣಾ ಪತ್ರವನ್ನು ಸಲ್ಲಿಸಬೇಕು. ಇಲ್ಲದೆ ಹೋದರೆ ಅದು ದುರ್ನಡತೆ ಆಗುತ್ತದೆ ಮತ್ತು ಶಿಸ್ತಿನ ಕ್ರಮಕ್ಕೂ ಒಳಗಾಗಬೇಕಾಗುತ್ತದೆ. ಆದುದರಿಂದ ನೀವು ನಿಮ್ಮ ಮೇಲಧಿಕಾರಿಗಳ ಗಮನಕ್ಕೆ ತಂದು ಬೇರೆ ಹುದ್ದೆಗೆ ಅರ್ಜಿ ಸಲ್ಲಿಸುವುದು.

***

06.09.2017.

ನಾನು 2016ರ ಏಪ್ರಿಲ್​ನಲ್ಲಿ ಅಂಗವಿಕಲ ಮೀಸಲಾತಿಯಲ್ಲಿ ಪ್ರಾಥಮಿಕ ಶಾಲಾ ಶಿಕ್ಷಕನಾಗಿದ್ದು ಮೊದಲು ಅಂಗವಿಕಲ ನೈಜತೆ ಪ್ರಮಾಣಪತ್ರ ನೀಡಿದ್ದೇನೆ. ನನ್ನ ಮೂಲ ವೇತನಕ್ಕೆ ಶೇ. 6 ಬಡ್ತಿಯನ್ನು ನೀಡುತ್ತಿಲ್ಲ ಅದರ ಬಗ್ಗೆ ಕೇಳಿದಾಗ ಮತ್ತೊಮ್ಮೆ ನೈಜತೆ ಪರೀಕ್ಷೆಗೆ ಒಳಗಾಗಿ ಪ್ರಮಾಣ ಪತ್ರನೀಡಬೇಕೆಂದು ಹೇಳುತ್ತಿದ್ದಾರೆ. ನಾನು ಇನ್ನೊಮ್ಮೆ ನೈಜತೆ ಪ್ರಮಾಣ ಪತ್ರ ತರಬೇಕೆ?

| ಬಸವರಾಜ ಹಾವೇರಿ.

ಸರ್ಕಾರಿ ಸೇವೆಯಲ್ಲಿ ಒಮ್ಮೆ ಸೇವೆಗೆ ಸೇರಿದ ಮೇಲೆ ಅಂಗವಿಕಲತಾ ನೈಜತಾ ಪ್ರಮಾಣ ಪತ್ರವನ್ನು ಸಂಬಂಧಿತ ಸಕ್ಷಮ ಪ್ರಾಧಿಕಾರದಿಂದ ನೈಜತೆ ಪರಿಶೀಲನೆ ಮಾಡಿಸಿ ನೀಡಿದರೆ ಸಾಕು ಅದರ ಹಿನ್ನೆಲೆಯಲ್ಲಿ ಸರ್ಕಾರಿ ಆದೇಶದಂತೆ ಶೇ. 6 ಅಂಗವಿಕಲತಾ ಭತ್ಯೆಯನ್ನು ನೀಡಬೇಕಾಗುತ್ತದೆ. ಆದುದರಿಂದ ಮತ್ತೊಮ್ಮೆ ಅಂಗವಿಕಲತಾ ಪ್ರಮಾಣ ಪತ್ರ ನೀಡುವುದು ಅಗತ್ಯವಾಗಿರುವುದಿಲ್ಲ.

****

 05.09.2017

ನಾನು ಖಾಸಗಿ ಸಂಸ್ಥೆ ಉದ್ಯೋಗಿಯಾಗಿದ್ದು, ಸರ್ಕಾರಿ ಪ್ರೌಢಶಾಲೆ ಶಿಕ್ಷಕಿಯಾಗಿದ್ದ ಪತ್ನಿ ಆಕಸ್ಮಿಕವಾಗಿ ನಿಧನ ಹೊಂದಿದ್ದಾರೆ. ನನಗೆ ಈಗ 40 ವರ್ಷ ವಯಸ್ಸಾಗಿದ್ದು, ಅನುಕಂಪದ ಆಧಾರದಲ್ಲಿ ಸರ್ಕಾರಿ ಉದ್ಯೋಗ ಪಡೆಯಲು ಅರ್ಜಿ ಸಲ್ಲಿಸಬಹುದೇ?

| ವೆಂಕಟೇಶ್ ಕೋಲಾರ.

ಕರ್ನಾಟಕ ಸಿವಿಲ್ ಸೇವಾ (ಅನುಕಂಪದ ಮೇರೆಗೆ ನೇಮಕಾತಿ ನಿಯಮಗಳು) 1996ರ ನಿಯಮ 3ರ ಮೇರೆಗೆ ಅನುಕಂಪದ ಆಧಾರದ ಮೇಲೆ ಪತಿ ತನ್ನ ಪತ್ನಿಯ ನಿಧನದಿಂದ ಅನುಕಂಪದ ಮೇರೆಗೆ ಸರ್ಕಾರಿ ನೌಕರಿ ಪಡೆಯಲು ಅರ್ಹ. ಆದರೆ ಅವರು 1977ರ ಸರ್ಕಾರಿ ಸಿವಿಲ್ ಸೇವೆಗಳ (ಸಾಮಾನ್ಯ ನೇಮಕಾತಿ) ನಿಯಮಾವಳಿಯ ರೀತ್ಯ ನಿಗದಿಪಡಿಸಿದ ಗರಿಷ್ಠ ವಯೋಮಿತಿ ಯಲ್ಲಿ ಇರಬೇಕು. ಆದರೆ ಈ ನಿಯಮಾವಳಿಯಲ್ಲಿ ವಿಧುರರಿಗೆ ಗರಿಷ್ಠ ವಯೋಮಿತಿಯಲ್ಲಿ ಸಡಿಲಿಕೆ ಇಲ್ಲದಿರುವುದರಿಂದ 35 ವರ್ಷಗಳ ಒಳಗಿದ್ದರೆ ಈ ಅನುಕಂಪದ ಆಧಾರದ ಮೇಲೆ ಸರ್ಕಾರಿ ಉದ್ಯೋಗ ಪಡೆಯಬಹುದು. ಆದರೆ ವಯೋಮಿತಿ ದಾಟಿರುವುದರಿಂದ ನಿಮಗೆ ಸರ್ಕಾರಿ ನೌಕರಿ ಸಿಗುವುದಿಲ್ಲ.

***

 04.09.2017.

34 ವರ್ಷಗಳಿಂದ ಶಿಕ್ಷಕಿಯಾಗಿದ್ದೇನೆ. ಈಗ ಸ್ವಯಂ ನಿವೃತ್ತಿ ಕೋರಿ ಅರ್ಜಿ ಸಲ್ಲಿಸಿದ್ದೆ. ತಹಸೀಲ್ದಾರರಿಂದ ಸಹಿ ಹಾಕಿರುವ ಕುಟುಂಬ ಜೀವಂತ ಸದಸ್ಯರ ದೃಢೀಕರಣ ಪತ್ರ ಸಲ್ಲಿಸಬೇಕೆಂದು ಹಿಂಬರಹ ಹಾಕಿ ಅರ್ಜಿ ವಾಪಸ್ ಕಳುಹಿಸಿದ್ದಾರೆ. ತಹಸೀಲ್ದಾರ್ ಕಚೇರಿಯಲ್ಲಿ ಸ್ವ ಇಚ್ಛಾ ನಿವೃತ್ತಿಗಾಗಿ ಈ ಪ್ರಮಾಣಪತ್ರ ಕೊಡಲಾಗುವುದಿಲ್ಲ. ಕುಟುಂಬದ ಸದಸ್ಯರಲ್ಲಿ ಯಾರಾದರೂ ಮೃತರಾದರೆ ಮಾತ್ರ ಕೊಡುವುದೆಂದು ಹೇಳುತ್ತಾರೆ. ಈ ದೃಢೀಕರಣ ಪತ್ರ ಅತೀ ಅವಶ್ಯಕವೇ? 


|ಮನೋನ್ಮನಿ ಚಿಕ್ಕಮಗಳೂರು


ಕರ್ನಾಟಕ ಸರ್ಕಾರಿ ಸೇವಾ ನಿಯಮಾವಳಿಯ ನಿಯಮ 285 (2) ರಂತೆ 15 ವರ್ಷಗಳ ಕಾಲ ನಿರಂತರವಾಗಿ ಸೇವೆ ಸಲ್ಲಿಸಿದ ಸರ್ಕಾರಿ ನೌಕರರು ಸ್ವಇಚ್ಛಾ ನಿವೃತ್ತಿ ಪಡೆಯಬಹುದು. ಆದರೆ ಈ ನಿಯಮದಂತೆ ಕುಟುಂಬ ಜೀವಿತ ಪ್ರಮಾಣ ಪತ್ರ ಹಾಗೂ ಕುಟುಂಬದವರ ಅನುಮತಿ ಪಡೆಯಬೇಕೆಂದು ಎಲ್ಲೂ ಸೂಚಿಸಿರುವುದಿಲ್ಲ. ಆದುದರಿಂದ ನಿಮ್ಮ ನೇಮಕಾತಿ ಪ್ರಾಧಿಕಾರಕ್ಕೆ ಈ ನಿಯಮದಂತೆ ಸ್ವಇಚ್ಛಾ ನಿವೃತ್ತಿ ಪಡೆಯಲು ಅನುಮತಿಸಬೇಕೆಂದು ಮತ್ತೊಮ್ಮೆ ವಿನಂತಿಸಬಹುದು.

***

 03.09.2017.

ನಾನು 2002 ರಲ್ಲಿ ಮೈಸೂರು ಜಿಲ್ಲೆಯಲ್ಲಿ ನೇಮಕಾತಿ ಹೊಂದಿದ್ದು, 2016 ರಲ್ಲಿ ಸ್ವ ಇಚ್ಛೆಯಿಂದ ಬೆಂಗಳೂರು ಉತ್ತರ ಜಿಲ್ಲೆ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಅಂಬೇಡ್ಕರ್ ಕಾಲನಿ ಇಲ್ಲಿಗೆ ವರ್ಗಾವಣೆಗೊಂಡಿರುತ್ತೇನೆ. ಪ್ರಸ್ತುತ ಶಾಲೆಯಲ್ಲಿ 2008ರಲ್ಲಿಯೇ ನೇಮಕಾತಿ ಹೊಂದಿದ ಶಿಕ್ಷಕರಿದ್ದಾರೆ. ಸೇವಾ ಹಿರಿತನದಲ್ಲಿ ನಾನು ಹಿರಿಯಳು. ಜಿಲ್ಲಾ ಜ್ಯೇಷ್ಠತೆಯಲ್ಲಿ 2008ರಲ್ಲಿ ನೇಮಕಾತಿ ಹೊಂದಿದ ಶಿಕ್ಷಕರು ಈ ಶಾಲೆಯಲ್ಲಿ ಹಿರಿಯರು. ಈಗ ಪ್ರಭಾರಿ ಮುಖ್ಯಶಿಕ್ಷಕರ ಜವಾಬ್ದಾರಿ ಯಾರು ವಹಿಸಿಕೊಳ್ಳಬೇಕು?

|ಮಂಜುಳ ಎನ್, ಬೆಂಗಳೂರು.

ಕರ್ನಾಟಕ ಸರ್ಕಾರಿ ಆದೇಶದ ಮೇರೆಗೆ ನೀವು ಬೇರೆ ಜಿಲ್ಲೆಯಿಂದ ಬೆಂಗಳೂರು ಉತ್ತರ ಜಿಲ್ಲೆಗೆ ಸ್ವ ಇಚ್ಛೆಯಿಂದ ವರ್ಗಾವಣೆಗೊಂಡಿದ್ದೀರಿ. ಆದರೆ ನಿಮ್ಮ ಸೇವಾ ಜ್ಯೇಷ್ಠತೆಯನ್ನು ಕಳೆದುಕೊಂಡಿರುವುದರಿಂದ ನಿಮ್ಮ ಶಾಲೆಯಲ್ಲಿ ಹಿರಿಯ ಶಿಕ್ಷಕರಾಗಿರುವ ಪ್ರಭಾರವನ್ನು ವಹಿಸಿಕೊಳ್ಳಬೇಕು.

***

02.09.2017, 

ನಾನು ದಿ.1988.04.25ರಲ್ಲಿ ವಾಣಿಜ್ಯ ತೆರಿಗೆ ಇಲಾಖೆಯಲ್ಲಿ ಡಿ ದರ್ಜೆ ನೌಕರನಾಗಿ ಸೇವೆಗೆ ಸೇರಿದ್ದೆ. ದಿನಾಂಕ 24.01.1996ರಲ್ಲಿ ನಿಯಮ 32 ರಂತೆ ದ್ವಿತೀಯ ದರ್ಜೆ ಸಹಾಯಕನಾಗಿ ಬಡ್ತಿ ಪಡೆದೆ. ದಿ.31.05.2006ಕ್ಕೆ ಪದೋನ್ನತಿ ರಹಿತ ಸೇವೆಗಾಗಿ 10 ವರ್ಷಗಳ ಕಾಲಬದ್ಧ ವೇತನ ಬಡ್ತಿಯನ್ನು ದಿ.31.08.2006 ರಂದು ಕೊಟ್ಟಿದ್ದಾರೆ. ಬಳಿಕ ದಿ.31.05.2011 ರಿಂದ ಅನ್ವಯಿಸುವಂತೆ ದಿ.01.07.2013 ರಂದು ದ್ವಿ.ದ.ಸ.ಹುದ್ದೆಯಲ್ಲಿ 15 ವರ್ಷಗಳ ಪದೋನ್ನತಿ ರಹಿತ ಸೇವೆಗಾಗಿ ಸ್ವಯಂಚಾಲಿತ ವಿಶೇಷ ಬಡ್ತಿ ಕೊಟ್ಟಿದ್ದಾರೆ. ಆಮೇಲೆ ನನಗೆ ದಿ.21.05.2016 ರಂದು ನಿಯಮ 32 ರಲ್ಲಿ ಪ್ರಥಮ ದರ್ಜೆ ಸಹಾಯಕನಾಗಿ ಬಡ್ತಿ ದೊರೆಯಿತು. ದ್ವಿ.ದ.ಸ.ಹುದ್ದೆಯಲ್ಲಿ ನಾನು 20 ವರ್ಷ 5 ತಿಂಗಳ ಕಾಲ ಪದೋನ್ನತಿ ರಹಿತ ಸೇವೆ ಸಲ್ಲಿಸಿರುವುದರಿಂದ ಟೈಮ್ ಬಾಂಡ್ ಇನ್ಕಿ›ಮೆಂಟ್ ಪಡೆಯಲು ಸೂಕ್ತ ಮಾರ್ಗದರ್ಶನ ನೀಡಿ.

| ಚನ್ನೇಶ, ಕಲ್ಮಾಡಿ.

ಒಮ್ಮೆ ಪದೋನ್ನತಿಯು ಲಭ್ಯವಾದರೆ 20 ವರ್ಷದ ಹೆಚ್ಚುವರಿ ವೇತನ ಬಡ್ತಿಯನ್ನು ನೀಡಲಾಗುವುದಿಲ್ಲ. ಈಗಾಗಲೇ ನೀವು ಡಿ ದರ್ಜೆಯಿಂದ ದ್ವಿತೀಯ ದರ್ಜೆ ಸಹಾಯಕರ ಹುದ್ದೆಗೆ ಪದೋನ್ನತಿ ಹೊಂದಿರುವುದರಿಂದ ನಿಮಗೆ ಈ ಹೆಚ್ಚುವರಿ ವೇತನ ಬಡ್ತಿಯನ್ನು ನೀಡಲಾಗುವುದಿಲ್ಲ.

***

01-09-2017.

ನನ್ನ ಪತ್ನಿ ಶಿಕ್ಷಕಿ. ಬ್ರಾಂಕೈಟಿಸ್​ನಿಂದ ಬಳಲುತ್ತಿದ್ದ ಕಾರಣ ವೈದ್ಯಕೀಯ ದಾಖಲೆಗಳೊಂದಿಗೆ ಹೆರಿಗೆಗೆ ಮುನ್ನ 21 ದಿನಗಳ ಪ್ರಸವ ಪೂರ್ವ ರಜೆ ತೆಗೆದುಕೊಂಡಿರುತ್ತಾರೆ. ಪ್ರಸವದ ರಜೆ ನಂತರ ಕರ್ತವ್ಯಕ್ಕೆ ಹಾಜರಾದ ಮೇಲೆ ತಾಲೂಕು ಶಿಕ್ಷಣ ಇಲಾಖೆಯವರು ಪ್ರಸವ ಪೂರ್ವ ರಜೆಯನ್ನು ಏಅಖಖ ಪ್ರಕಾರ ಹೆರಿಗೆ ರಜೆಯೆಂದು ಪರಿಗಣಿಸಲು ಬರುವುದಿಲ್ಲ, ಊಖಒಖ ಸೇರ್ಪಡೆಯಾಗುವುದಿಲ್ಲ ಎಂದು ತಿಳಿಸಿದ್ದಾರೆ. ಪ್ರಸವ ಪೂರ್ವ ರಜೆಯನ್ನು ವೈದ್ಯಕೀಯ ನೆಲೆಯಲ್ಲಿ ಪಡೆಯಲು ಸಾಧ್ಯವಿಲ್ಲವೇ?

| ಜಗದೀಶ. ಬಿ ದಾವಣಗೆರೆ.

ಕರ್ನಾಟಕ ಸರ್ಕಾರಿ ಸೇವಾ ನಿಯಮಾವಳಿಯ ನಿಯಮ 135 (1) ರಂತೆ ಒಂದು ತಿಂಗಳ ಮೊದಲೇ ಹೆರಿಗೆ ರಜೆಯನ್ನು ಆರಂಭಿಸಿದರೆ ಅಲ್ಲಿನಿಂದಲೇ 180 ದಿನಗಳ ಕಾಲ ರಜೆ ನೀಡಲಾಗುವುದು. ಆದುದರಿಂದ ಮಹಿಳಾ ಸರ್ಕಾರಿ ನೌಕರರು ಈ ಪ್ರಸವಪೂರ್ವ ರಜೆಯನ್ನು ವೈದ್ಯಕೀಯ ಪ್ರಮಾಣ ಪತ್ರದ ಆಧಾರದ ಮೇಲೆ ಪಡೆಯಬಹುದಾಗಿದೆ. ಆದುದರಿಂದ ನೀವು ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಈ ಬಗ್ಗೆ ಮನವರಿಕೆ ಮಾಡಿಸಿ ಈ 21 ದಿನಗಳ ವೇತನ ಕಡಿತವನ್ನು ರದ್ದುಗೊಳಿಸಲು ವಿನಂತಿಸಬಹುದು. 

****

 31.08.2017

ಉತ್ತರ ಕನ್ನಡದ ಬಂದರು ಮತ್ತು ಒಳನಾಡು ಜಲಸಾರಿಗೆ ಇಲಾಖೆಯಲ್ಲಿ ದಿನಗೂಲಿಯಾಗಿ 01.07.1981 ರಿಂದ 01.07.1991ರವರೆಗೆ 10 ವರ್ಷ ಕೆಲಸ ಮಾಡಿದ್ದು, 01.07.1991ರಂದು ಡಿ ಗ್ರೂಪ್ ಹುದ್ದೆಯಲ್ಲಿ ಕಾಯಂ ಆಗಿರುತ್ತೇನೆ. 29.10.1957ರಂದು ಜನಿಸಿರುವ ನನಗೆ ಉದ್ಯೋಗ ಕಾಯಮಾತಿ ನೀಡುವಾಗ 34 ವರ್ಷ. 31.10.2017 ರಂದು ನಿವೃತ್ತಿ ಹೊಂದಲಿದ್ದು, ನಿವೃತ್ತಿ ವೇತನಕ್ಕಾಗಿ ಹೆಚ್ಚುವರಿ ಎಷ್ಟು ಅಧಿಕ ವರ್ಷ ಅರ್ಹದಾಯಕ ಸೇವೆಯನ್ನು ಪಿಂಚಣಿ ಉದ್ದೇಶಕ್ಕಾಗಿ ಪರಿಗಣಿಸಬಹುದು?

| ವಿದ್ಯಾಧರ ನಾಯ್ಕ ಉತ್ತರ ಕನ್ನಡ.

ಕರ್ನಾಟಕ ಸರ್ಕಾರಿ ಸೇವಾ ನಿಯಮಾವಳಿಯ ನಿಯಮ 247ಎ ರಂತೆ ಹಾಗೂ ಕರ್ನಾಟಕ ಸರ್ಕಾರದ ಅದೇಶ ಸಂಖ್ಯೆ ಎಫ್​ಡಿ 3 ಎಸ್​ಆರ್​ಎ 2016ರ 07.03.2012 ಮೇರೆಗೆ 30 ವರ್ಷ ದಾಟಿ ದಿನಗೂಲಿ ನೌಕರರಾಗಿ ಸೇವೆ ಸಲ್ಲಿಸಿ ಸರ್ಕಾರಿ ಸೇವೆಯಲ್ಲಿ ಕಾಯಂಗೊಂಡರೆ ಅಂತಹ ನೌಕರರ ಅರ್ಹತಾದಾಯಕ ಸೇವೆಗೆ ಗರಿಷ್ಠ ಎರಡು ವರ್ಷಗಳಷ್ಟು ಹೆಚ್ಚುವರಿ ಸೇವೆಯನ್ನು ನೀಡಿ ನಿವೃತ್ತಿ ವೇತನ ಸೌಲಭ್ಯ ನೀಡಲಾಗುವುದು. ಅದರಂತೆ ನೀವು ನಿಮ್ಮ ನೇಮಕಾತಿ ಪ್ರಾಧಿಕಾರಕ್ಕೆ ಈ ಹೆಚ್ಚುವರಿ ಅರ್ಹತಾದಾಯಕ ಸೇವೆ ಸೇರಿಸಿ ಪಿಂಚಣಿ ಸೌಲಭ್ಯ ನಿಗದಿಪಡಿಸಲು ವಿನಂತಿಸಬಹುದು.

***

30.08.2017.

ಕಂಪ್ಯೂಟರ್ ಸಾಕ್ಷರತಾ ಪರೀಕ್ಷೆ ವಿಷಯಕ್ಕೆ ಸಂಬಂಧಿಸಿದಂತೆ 2016 ಜುಲೈ 21ರಿಂದ ದ್ವಿತೀಯ ದರ್ಜೆ ಸಹಾಯಕರಾಗಿ (ಗ್ರಾಮ ಲೆಕ್ಕಿಗರು) ಕಾರ್ಯ ನಿರ್ವಹಿಸುತ್ತಿದ್ದು, ಕಂಪ್ಯೂಟರ್ ಸಾಕ್ಷರತಾ ಪರೀಕ್ಷೆಯಲ್ಲಿ ತೇರ್ಗಡೆ ಆಗಬೇಕಾದರೆ ಎಷ್ಟು ಅಂಕಗಳನ್ನು ಪಡೆಯಬೇಕು. ಪರೀಕ್ಷೆಯು ಯಾವ ವಿಧಾನದಲ್ಲಿ ಇರುತ್ತದೆ ಮತ್ತು ಯಾವ ಪುಸ್ತಕವನ್ನು ಓದಬೇಕು, ಎಷ್ಟು ಬಾರಿ ಅವಕಾಶ ನೀಡಲಾಗುತ್ತದೆ?

|ಕಾವ್ಯ, ಹೊಸನಗರ.

ಕರ್ನಾಟಕ ಸರ್ಕಾರಿ ಸೇವಾ (ಕಂಪ್ಯೂಟರ್ ಸಾಕ್ಷರತಾ ಪರೀಕ್ಷೆ) ನಿಯಮಗಳು 2012ರ ಮೇರೆಗೆ ಇತ್ತೀಚಿನ ತಿದ್ದುಪಡಿಯಂತೆ ಶೇ. 50 ಅಂಕಗಳನ್ನು ಪಡೆಯಬೇಕಾಗುತ್ತದೆ. ಈ ಪರೀಕ್ಷೆಯನ್ನು ಏಜಠಟಿಛಿ (ಕಿಯೋನಿಕ್ಸ್) ಸಂಸ್ಥೆಯು ಆನ್​ಲೈನ್ ಮೂಲಕ ಬಹು ಆಯ್ಕೆಯ ವಸ್ತುನಿಷ್ಠ ಮಾದರಿಯಲ್ಲಿ ನಡೆಸುತ್ತದೆ. ಪಠ್ಯಕ್ರಮಕ್ಕನುಸಾರವಾಗಿ ರಚಿತವಾಗಿರುವ ಲ. ರಾಘವೇಂದ್ರ ಅವರ ಕಂಪ್ಯೂಟರ್ ಸಾಕ್ಷರತಾ ಕೈಪಿಡಿ ಅಧ್ಯಯನ ಮಾಡಬಹುದು.

ಕಂಪ್ಯೂಟರ್ ಸಾಕ್ಷರತಾ ಪರೀಕ್ಷೆ ವಿಷಯಕ್ಕೆ ಸಂಬಂಧಿಸಿದಂತೆ 2016 ಜುಲೈ 21ರಿಂದ ದ್ವಿತೀಯ ದರ್ಜೆ ಸಹಾಯಕರಾಗಿ (ಗ್ರಾಮ ಲೆಕ್ಕಿಗರು) ಕಾರ್ಯ ನಿರ್ವಹಿಸುತ್ತಿದ್ದು, ಕಂಪ್ಯೂಟರ್ ಸಾಕ್ಷರತಾ ಪರೀಕ್ಷೆಯಲ್ಲಿ ತೇರ್ಗಡೆ ಆಗಬೇಕಾದರೆ ಎಷ್ಟು ಅಂಕಗಳನ್ನು ಪಡೆಯಬೇಕು. ಪರೀಕ್ಷೆಯು ಯಾವ ವಿಧಾನದಲ್ಲಿ ಇರುತ್ತದೆ ಮತ್ತು ಯಾವ ಪುಸ್ತಕವನ್ನು ಓದಬೇಕು, ಎಷ್ಟು ಬಾರಿ ಅವಕಾಶ ನೀಡಲಾಗುತ್ತದೆ?

|ಕಾವ್ಯ, ಹೊಸನಗರ.

ಕರ್ನಾಟಕ ಸರ್ಕಾರಿ ಸೇವಾ (ಕಂಪ್ಯೂಟರ್ ಸಾಕ್ಷರತಾ ಪರೀಕ್ಷೆ) ನಿಯಮಗಳು 2012ರ ಮೇರೆಗೆ ಇತ್ತೀಚಿನ ತಿದ್ದುಪಡಿಯಂತೆ ಶೇ. 50 ಅಂಕಗಳನ್ನು ಪಡೆಯಬೇಕಾಗುತ್ತದೆ. ಈ ಪರೀಕ್ಷೆಯನ್ನು ಏಜಠಟಿಛಿ (ಕಿಯೋನಿಕ್ಸ್) ಸಂಸ್ಥೆಯು ಆನ್​ಲೈನ್ ಮೂಲಕ ಬಹು ಆಯ್ಕೆಯ ವಸ್ತುನಿಷ್ಠ ಮಾದರಿಯಲ್ಲಿ ನಡೆಸುತ್ತದೆ. ಪಠ್ಯಕ್ರಮಕ್ಕನುಸಾರವಾಗಿ ರಚಿತವಾಗಿರುವ ಲ. ರಾಘವೇಂದ್ರ ಅವರ ಕಂಪ್ಯೂಟರ್ ಸಾಕ್ಷರತಾ ಕೈಪಿಡಿ ಅಧ್ಯಯನ ಮಾಡಬಹುದು.

***

 29.08.2017.

ನಾನು 2016ರ ಸೆಪ್ಟೆಂಬರ್​ನಲ್ಲಿ ದ್ವಿತೀಯ ದರ್ಜೆ ಸಹಾಯಕ ನಾಗಿ ನೇಮಕಗೊಂಡಿದ್ದೇನೆ. ಪ್ರಸ್ತುತ 2 ವರ್ಷ ಪರೀಕ್ಷಾರ್ಥಿ ಅವಧಿಯಲ್ಲಿ ಇದ್ದು, 2017-18ನೇ ಸಾಲಿನ ಗಳಿಕೆ ರಜೆ ನಗದೀಕರಣ ಮಾಡಿ ಕೊಳ್ಳಲು ಬರುವುದಿಲ್ಲವೇ?

|ಉಮೇಶ್ ಎಂ. ಬಳ್ಳಾರಿ.

ಕರ್ನಾಟಕ ಸರ್ಕಾರಿ ಸೇವಾ ನಿಯಮಾವಳಿ ನಿಯಮ 145ರಂತೆ ಪರೀಕ್ಷಾರ್ಥ ಅವಧಿಯ ಸರ್ಕಾರಿ ನೌಕರನು ಹಂಗಾಮಿ ನೌಕರನಾಗಿರುವುದರಿಂದ ಅವನು ಎಲ್ಲಾ ರಜಾ ಸೌಲಭ್ಯಗಳಿಗೆ ಅರ್ಹನಾಗಿರುತ್ತಾನೆ. ಆದರೆ ನಿಮ್ಮ ಮೇಲಾಧಿಕಾರಿಯವರು ಪರೀಕ್ಷಾರ್ಥ ಅವಧಿಯಲ್ಲಿ ಗಳಿಕೆ ರಜೆ ನಗದೀಕರಣ ನೀಡಲಾಗುವುದಿಲ್ಲ ಎನ್ನುವುದು ನಿಯಮಬದ್ಧವಾಗಿರುವುದಿಲ್ಲ. ಆದುದರಿಂದ ನಿಯಮ 118ರ ಮೇರೆಗೆ ರಜೆ ನಗದೀಕರಣ ಸೌಲಭ್ಯವನ್ನು ಪೊ›ಬೇಷನ್ ಅವಧಿಯಲ್ಲಿ ಪಡೆಯಲು ಅರ್ಹರಾಗಿರುತ್ತೀರಿ.

***

 28.08.2017.

1990ರ ಸೆಪ್ಟೆಂಬರ್ 6ರಿಂದ ಜಲಸಂಪನ್ಮೂಲ ಇಲಾಖೆಯಲ್ಲಿ ಸಹಾಯಕ ಅಭಿಯಂತರನಾಗಿ ಕಾರ್ಯ ನಿರ್ವಹಿಸುತ್ತಿದ್ದೇನೆ. ಸಹಾಯಕ ಅಭಿಯಂತರ ಹುದ್ದೆಯಲ್ಲಿ 10-15 ಹಾಗೂ 20 ವರ್ಷಗಳ ಸತತ ಸೇವೆಗಾಗಿ ಕಾಲಬದ್ಧ ಮುಂಬಡ್ತಿ/ಸ್ವಯಂಚಾಲಿತ ವೇತನ ಬಡ್ತಿ ಹಾಗೂ ಒಂದು ಹೆಚ್ಚುವರಿ ವೇತನ ಬಡ್ತಿಯೂ ಸಿಕ್ಕಿದೆ. 2015ರ ಜನವರಿ 31ರಿಂದ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರನಾಗಿ ಪದೋನ್ನತಿ ಹೊಂದಿ ಕರ್ನಾಟಕ ನಾಗರಿಕ ಸೇವೆ ನಿಯಮಾವಳಿ 1958ರ ನಿಯಮ 32ರಡಿ ಸ್ವತಂತ್ರ ಪ್ರಭಾರದಡಿಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದೇನೆ. 2015ರ ಸೆಪ್ಟೆಂಬರ್ 6ರಿಂದ 25 ವರ್ಷಗಳ ಸತತ ಸೇವೆಗಾಗಿ 2ನೇ ಹೆಚ್ಚುವರಿ ವೇತನ ಬಡ್ತಿ ಪಡೆಯಲು ಅರ್ಹನೆ?

| ರಾಜಕುಮಾರ ಅಗ್ನಿಹೋತ್ರಿ ಚಿಂಚೋಳಿ.

2012ರ ಜೂನ್ 14ರ ಸರ್ಕಾರಿ ಆದೇಶ ಸಂಖ್ಯೆ ಎಫ್​ಡಿ 12 ಎಸ್​ಆರ್​ಪಿ 2012 (8)ರ ಪ್ರಕಾರ ಸರ್ಕಾರಿ ನೌಕರನು ಸೇವಾವಧಿಯಲ್ಲಿ ಒಂದು ಪದೋನ್ನತಿ ಪಡೆದಿದ್ದರೆ ಈ ಇಪ್ಪತೈದು ವರ್ಷದ ಒಂದು ಹೆಚ್ಚುವರಿ ವೇತನ ಬಡ್ತಿ ನೀಡಲಾಗುವುದಿಲ್ಲ. ಅಲ್ಲದೆ ನಿಮಗೆ ಈಗಾಗಲೇ ನಿಯಮ 32ರ ಮೇರೆಗೆ ಪದೋನ್ನತಿ ನೀಡಿದ್ದು ಅದನ್ನು ಪೂರ್ವಾನ್ವಯವಾಗಿ ಕ್ರಮಬದ್ಧಗೊಳಿಸುವುದರಿಂದ ಈ ಹೆಚ್ಚುವರಿ ವೇತನ ಬಡ್ತಿ ನೀಡಲಾಗುವುದಿಲ್ಲ.

***

 27.08.2017.

ನಾನು 2016ರ ಡಿಸೆಂಬರ್ 2ರಂದು ಪ್ರೌಢಶಾಲಾ ಶಿಕ್ಷಕಿಯಾಗಿ ನೇಮಕವಾಗಿದ್ದು, ಸದ್ಯ ಇಲಾಖೆ ಅನುಮತಿ ಪಡೆದು ಸಹ ಪ್ರಾಧ್ಯಾಪಕರ ಹುದ್ದೆಗೆ ಅರ್ಜಿ ಸಲ್ಲಿಸಿ ಆಯ್ಕೆಯಾಗಿರುತ್ತೇನೆ. 2017ರ ಜೂ.6ರಂದು ನನಗೆ ಹೆರಿಗೆಯಾಗಿದ್ದು, ನಾನು ಸದ್ಯ ಆರು ತಿಂಗಳು ಹೆರಿಗೆ ರಜೆ ಮೇಲೆ ಇರುತ್ತೇನೆ. ಸಹ ಪ್ರಾಧ್ಯಾಪಕರ ಹುದ್ದೆಗೆ ಕೌನ್ಸಿಲಿಂಗ್ ನಡೆದು ನಾನು ಕಾಲೇಜು ಶಿಕ್ಷಣ ಇಲಾಖೆಗೆ ಸೇರಿದರೆ ನನ್ನ ಚಾಲ್ತಿ ಇರುವ ಹೆರಿಗೆ ರಜೆ ಮೊಟಕುಗೊಳ್ಳುತ್ತದೆಯೇ? | ಮ ಮಡಿವಾಳರ, ಕೊಪ್ಪಕರ್ನಾಟಕ ಸರ್ಕಾರಿ ಸೇವಾ ನಿಯಮಾವಳಿಯ ನಿಯಮ 135 ರಂತೆ ಮಹಿಳಾ ಸರ್ಕಾರಿ ನೌಕರರಿಗೆ 180 ದಿನಗಳ ಕಾಲ ಹೆರಿಗೆ ರಜೆ ನೀಡಲಾಗುತ್ತದೆ. ನೀವು ಈ ರಜೆಯನ್ನು ಬಳಸಿಕೊಂಡು ದಿನಾಂಕ 06.11.2017 ರಂದು ಕರ್ತವ್ಯಕ್ಕೆ ಪೌಢಶಾಲೆಯಲ್ಲೇ ಹಾಜರಾಗಿ ಅಂದೇ ಮಧ್ಯಾಹ್ನ ಬಿಡುಗಡೆಗೊಂಡು ಕರ್ನಾಟಕ ಸರ್ಕಾರಿ ಸೇವಾ ನಿಯಮಾವಳಿಯ ನಿಯಮ 76(7) ರಂತೆ ಸೇರಿಕೆ ಕಾಲವನ್ನು ಬಳಸಿಕೊಂಡು ಸಹಾಯಕ ಪ್ರಾಧ್ಯಾಪಕರ ಹುದ್ದೆಗೆ ಹಾಜರಾಗಬೇಕು. ಏತನ್ಮಧ್ಯೆ ನೀವು ಕಾಲೇಜು ಶಿಕ್ಷಣ ಇಲಾಖೆಯ ಆಯುಕ್ತರಿಗೆ ಸೇರಿಕೆ ಕಾಲವನ್ನು ಈ ಹೆರಿಗೆ ರಜೆ ಮುಗಿದ ನಂತರ ಕರ್ತವ್ಯಕ್ಕೆ ಹಾಜರಾಗುತ್ತೇನೆಂದು ವಿಸ್ತರಣೆಯನ್ನು ಕೋರಿ ಮನವಿ ಸಲ್ಲಿಸಬೇಕು. ಆದರೆ ನೀವು ಈ ಪ್ರಸೂತಿ ರಜಾ ಅವಧಿಯಲ್ಲಿ ಕರ್ತವ್ಯಕ್ಕೆ ಹಾಜರಾದರೆ ನಿಮ್ಮ ಈ ಹೆರಿಗೆ ರಜೆಯು ಮೊಟಕುಗೊಳ್ಳುತ್ತದೆ.

***

25.08.2017.

ನಾನು 2013ರ ಜುಲೈ 2ರಿಂದ ಪದವಿಪೂರ್ವ ಕಾಲೇಜಿನಲ್ಲಿ ಉಪನ್ಯಾಸಕನಾಗಿದ್ದು, 2017ರ ಜುಲೈ 2ರಂದು ನನ್ನ ಪರಿವೀಕ್ಷಣಾ ಅವಧಿ ಮುಗಿದಿರುತ್ತದೆ. ಈ ನಡುವೆ ನನಗೆ ಶ್ವಾಸಕೋಶದ ಕ್ಯಾನ್ಸರ್ ಆಗಿದ್ದರಿಂದ ಸುಮಾರು 10 ತಿಂಗಳವರೆಗೆ ವೇತನರಹಿತ ವೈದ್ಯಕೀಯ ರಜೆ ಪಡೆದಿದ್ದು, ಈ ಅವಧಿಯನ್ನು ಪರಿವೀಕ್ಷಣಾ ಅವಧಿ ಎಂದು ಘೋಷಿಸಲು ಸಾಧ್ಯವೇ?

-ಮಲ್ಲಿಕಾರ್ಜುನ ಕಂಪಲಿ.

ಕರ್ನಾಟಕ ಸರ್ಕಾರಿ ಸೇವಾ ನಿಯಮಾವಳಿ ನಿಯಮ 117(ಬಿ)(ಜಿಜಿಜಿ)ರ ರೀತ್ಯ ಒಂದು ವರ್ಷ ನಿರಂತರವಾಗಿ ಸೇವೆ ಸಲ್ಲಿಸಿದ್ದರೆ 18 ತಿಂಗಳು ಕ್ಯಾನ್ಸರ್/ ಮಾನಸಿಕ ಅಸ್ವಸ್ಥತೆಗೆ ಅಸಾಧಾರಣ ರಜೆ ಪಡೆಯಬಹುದು. ಈ ರೀತಿ ಪಡೆದ ರಜೆ ಕರ್ತವ್ಯವೆಂದು ಪರಿಗಣಿತವಾಗುವುದರಿಂದ 1977ರ ಕರ್ನಾಟಕ ಸರ್ಕಾರಿ ಸೇವಾ (ಪ್ರೊಬೇಷನ್) ನಿಯಮಾವಳಿಯ ನಿಯಮ 5ರಂತೆ ಪ್ರೋಬೆಷನ್ ಅವಧಿ ಘೋಷಣೆ ಮಾಸಬೇಕಾಗುವುದು. ಆದ್ದರಿಂದ ಇಲಾಖೆಯು 4 ವರ್ಷ ಸೇವಾವಧಿ ಪೂರ್ಣಗೊಂಡ ನಂತರ ಈ ಪರೀಕ್ಷಾರ್ಥ ಅವಧಿ ಘೋಷಣೆ ಮಾಡುವುದು ಕ್ರಮಬದ್ಧವಾಗಿರುತ್ತದೆ.

***

24.08.2017.

ಪ್ರೌಢಶಾಲಾ ಶಿಕ್ಷಕರ ಹುದ್ದೆಯಲ್ಲಿ ನನಗೆ 10 ಮತ್ತು 15 ವರ್ಷಗಳ ಮುಂಬಡ್ತಿ ದೊರಕಿದ್ದು ವೇತನ ನಿಗದಿ ಆಗಿರುತ್ತದೆ. ಆ ನಂತರ ನಿಯಮ 32 ರೀತ್ಯಾ ಕೆಲಸ ನಿರ್ವಹಿಸಿದ ದಿನಾಂಕದಿಂದಲೇ ಪೂರ್ವಾನ್ವಯವಾಗಿ ಅಂದರೆ 7-9-1994ರಿಂದ ಪದೋನ್ನತಿ ನೀಡಿ, ಉಪನ್ಯಾಸಕರ ವೇತನ ಶ್ರೇಣಿಯ ಕನಿಷ್ಠ ವೇತನಕ್ಕೆ ನಿಗದಿಯಾಗಿರುತ್ತದೆ. ಇದರಿಂದಾಗಿ ಪ್ರೌಢಶಾಲಾ ಶಿಕ್ಷಕರ ಹುದ್ದೆಯಲ್ಲಿ ಪಡೆದ 10 ಮತ್ತು 15 ವರ್ಷ ಮುಂಬಡ್ತಿಯಿಂದ ವೇತನದಲ್ಲಿ ಯಾವುದೇ ವ್ಯತ್ಯಾಸವಾಗದೇ ವಿಲೀನವಾಗಿರುತ್ತದೆ. ಪ್ರಯುಕ್ತ 10 ಮತ್ತು 15 ವರ್ಷಗಳ ಮುಂಬಡ್ತಿಯ ವೇತನ ನಿಗದಿಯಿಂದ ಪಡೆದ ಮೊತ್ತವನ್ನು ಸರ್ಕಾರಕ್ಕೆ ಜಮಾ ಮಾಡಿ, ಉಪನ್ಯಾಸಕರ ಹುದ್ದೆಯಲ್ಲಿ ಕಾಲಮಿತಿ/ಸ್ವಯಂ ಚಾಲಿತ ಮುಂಬಡ್ತಿ ಪಡೆಯಲು ಅವಕಾಶವಿದೆಯೇ?

| ಸಂಧ್ಯಾಬಾಯಿ ವಿ. ಭದ್ರಾವತಿ

ಕರ್ನಾಟಕ ಸರ್ಕಾರಿ ಸೇವಾ (ಕಾಲಮಿತಿ ಬಡ್ತಿ ನಿಯಮಗಳು 1983 ಮತ್ತು ಕರ್ನಾಟಕ ಸರ್ಕಾರಿ ಸೇವಾ ನಿಯಮಾವಳಿಯ ನಿಯಮ ಸ್ವಯಂ ಚಾಲಿತ ಹಿರಿಯ ವೇತನ ಶ್ರೇಣಿಗೆ ಬಡ್ತಿ ) ನಿಯಮಗಳು 1991ರ ಮೇರೆಗೆ ಮಂಜೂರಾಗಿರುವ 10 ವರ್ಷದ ಕಾಲಮಿತಿ ಬಡ್ತಿಯನ್ನು ಹಾಗೂ 15 ವರ್ಷದ ಮುಂಬಡ್ತಿಯನ್ನು ಹಿಂದಕ್ಕೆ ಪಡೆದು ಮುಂದಿನ ಉನ್ನತ ಹುದ್ದೆಯಲ್ಲಿ ಈ ಸೌಲಭ್ಯವನ್ನು ಪಡೆಯಲು ನಿಯಮಾವಳಿಗಳಲ್ಲಿ ಅವಕಾಶವಿರುವುದಿಲ್ಲ. ನಿಮಗೆ ಈಗಾಗಲೇ ಕರ್ನಾಟಕ ಸರ್ಕಾರಿ ಸೇವಾ ನಿಯಮಾವಳಿಯ ನಿಯಮ 42ಬಿ ಪ್ರಕಾರ ವೇತನ ನಿಗದಿಪಡಿಸಿರುವುದರಿಂದ ಯಾವುದೇ ಬದಲಾವಣೆ ಮಾಡಲು ಅವಕಾಶವಿರುವುದಿಲ್ಲ.

***

  23.08.2017.

ನಾನು ದಿನಾಂಕ 3.12.11 ರಂದು ಹೈಸ್ಕೂಲ್ ಸಹ ಶಿಕ್ಷಕ ಹುದ್ದೆಯಿಂದ ನಿವೃತ್ತನಾಗಿದ್ದೇನೆ. ನನ್ನ ಜನ್ಮ ದಿನಾಂಕ 3-12-1951. ನಾನು 4-1-1979 ಸ್ಟೈಫಂಡರಿ ಪದವಿ ಪಡೆದಿದ್ದು, ಪದವೀಧರರ ಕೋಟಾದಿಂದ ದಿನಾಂಕ 12-8-1989 ರಂದು ನೇರ ನೇಮಕಾತಿ ಹೊಂದಿ ಹೈಸ್ಕೂಲ್ ಸಹ ಶಿಕ್ಷಕನಾಗಿ ಸೇವೆ ಸಲ್ಲಿಸಿದ್ದೇನೆ. ಈ ಸಮಯದಲ್ಲಿ ನನಗೆ ಸುಮಾರು 38 ವರ್ಷಗಳು ತುಂಬಿರುತ್ತದೆ. ಇತ್ತೀಚಿನ ಸರ್ಕಾರಿ ನಡಾವಳಿಗಳು ಮತ್ತು ಕೆಸಿಎಸ್​ಆರ್ ನಿಯಮ 247(ಎ) ಪ್ರಕಾರ ನನಗೆ ಸೇವಾ ಅಧಿಕ್ಯ ಸರ್ಕಾರಿ ಸೌಲಭ್ಯ ಪಡೆಯಬಹುದೋ ಅಥವಾ ಇಲ್ಲವೋ ಎಂಬುದಕ್ಕೆ ದಯಮಾಡಿ ಮಾರ್ಗದರ್ಶನ ನೀಡಿ.

|ಕೆ. ಮಹೇಶ್ವರಪ್ಪ ದಾವಣಗೆರೆ.

ದಿನಾಂಕ 10-4-2017ರ ಸರ್ಕಾರಿ ಆದೇಶ ಸಂಖ್ಯೆ ಆಇ4ಎಸ್​ಆರ್​ಎ2016ರಲ್ಲಿ ಕರ್ನಾಟಕ ಸರ್ಕಾರಿ ಸೇವಾ ನಿಯಮಾವಳಿಯ ನಿಯಮ 247ಎ ರೀತ್ಯ ದಿನಗೂಲಿ / ಮಿತವೇತನ ಪದವೀಧರರಾಗಿ ನಂತರ ಸರ್ಕಾರಿ ಸೇವೆಯಲ್ಲಿ ಸಕ್ರಮಗೊಂಡ ಸರ್ಕಾರಿ ನೌಕರರಿಗೆ ಅನ್ವಯವಾಗುವುದಿಲ್ಲವೆಂಬ ನಿಬಂಧನೆ ಇದ್ದರೂ ನ್ಯಾಯಾಲಯಗಳ ತೀರ್ಪಗಳ ಹಿನ್ನೆಲೆಯಲ್ಲಿ 2 ವರ್ಷಗಳ ಹೆಚ್ಚುವರಿ ಸೇವೆಯ ಸೇರ್ಪಡೆಯನ್ನು ಅರ್ಹದಾಯಕ ಸೇವೆಗೆ ಪಿಂಚಣಿ ಉದ್ದೇಶಕ್ಕಾಗಿ ಪರಿಗಣಿಸಲು ಅನುಮತಿಸಲಾಗಿದೆ ಎಂದು ತಿಳಿಸಲಾಗಿದೆ. ಈ ಹಿನ್ನೆಲೆಯಲ್ಲಿ ನೀವು ನಿಮ್ಮ ನೇಮಕಾತಿ ಪ್ರಾಧಿಕಾರಿಗೆ ನಿಮ್ಮ ಅರ್ಹತಾದಾಯಕ ಸೇವೆಗೆ ಹೆಚ್ಚುವರಿ ಸೇರ್ಪಡೆ ಮಾಡಿ ಪುನರ್​ಪಿಂಚಣಿ ನಿಗದಿಪಡಿಸಲು ವಿನಂತಿಸಿಕೊಳ್ಳಬಹುದು.

***

 22.08.2017, 

ನಾನು 2002ರ ಜುಲೈ 31ರಿಂದ ಪ್ರಾಥಮಿಕ ಶಾಲಾ ಸಹಶಿಕ್ಷಕಿ ಯಾಗಿ ಕೆಲಸಕ್ಕೆ ಸೇರಿದ್ದು, 2005ರ ಆಗಸ್ಟ್ 1 ರಿಂದ 31ರವರೆಗೆ ಎಲ್​ಡಬ್ಲು್ಯಎ ರಜಾ ಮಂಜೂರು ಮಾಡಿಸಿಕೊಂಡಿದ್ದು ನನ್ನ ವಾರ್ಷಿಕ ವೇತನ ಬಡ್ತಿ ದಿನಾಂಕವನ್ನು ಸೆಪ್ಟೆಂಬರ್ 1ಕ್ಕೆ ಮುಂದೂಡಿರುತ್ತಾರೆ. ಇದು ಸರಿಯೇ?

|ಶಬನ ಅಂಜುಮ್ ಎಚ್.ಜೆ. ಭೀಮಸಮುದ್ರ.

ಕರ್ನಾಟಕ ಸರ್ಕಾರಿ ಸೇವಾ ನಿಯಮಾವಳಿಯ ನಿಯಮ 51 ರಂತೆ ವಾರ್ಷಿಕ ವೇತನ ಬಡ್ತಿಯನ್ನು ಯಾವುದೇ ನಿರ್ದಿಷ್ಟವಾದ ಆದೇಶವಿಲ್ಲದೆ ಮುಂದೂಡುವಂತಿಲ್ಲ . ನಿಮ್ಮ ಪ್ರಕರಣದಲ್ಲಿ ಒಂದು ವರ್ಷ ಮಾತ್ರ ಈ ವೇತನ ಮುಂದೂಡಬೇಕಾಗಿದ್ದು, ತದನಂತರದ ವರ್ಷಗಳಲ್ಲಿ ಆಗಸ್ಟ್ 1 ರಂದೇ ಮಂಜೂರು ಮಾಡಬೇಕಾಗುತ್ತದೆ. (ಸರ್ಕಾರಿ ಅಧಿಕೃತ ಜ್ಞಾಪನ ಸಂಖ್ಯೆ: ಎಫ್​ಡಿ11ಎಸ್​ಆರ್​ಎಸ್78 ದಿನಾಂಕ 9.2.1978) ಈ ಅಂಶದ ಹಿನ್ನೆಲೆಯಲ್ಲಿ ನಿಮ್ಮ 15 ವರ್ಷದ ಕಾಲಮಿತಿ ಬಡ್ತಿಯನ್ನು ಆಗಸ್ಟ್ ತಿಂಗಳಿನಲ್ಲೇ ನೀಡಬೇಕಾಗುತ್ತದೆ. ಹೆಚ್ಚಿನ ವಿವರಗಳಿಗೆ ಲ. ರಾಘವೇಂದ್ರ ಅವರ ಕರ್ನಾಟಕ ಸರ್ಕಾರಿ ಸೇವಾ ನಿಯಮಗಳ ಕೃತಿಯನ್ನು ನೋಡಬಹುದು.

***

  20.08.2017

19 ವರ್ಷಗಳಿಂದ ಸರ್ಕಾರಿ ಪ್ರಾಥಮಿಕ ಶಾಲಾ ಶಿಕ್ಷಕನಾಗಿದ್ದು, ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸಲು ಬಯಸಿದ್ದೇನೆ. ಸ್ವಯಂ ನಿವೃತ್ತಿ ತೆಗೆದುಕೊಂಡೆ ಸ್ಪರ್ಧಿಸಬೇಕೆ?

| ಎಸ್. ಎಸ್. ಮೌಳಿ ಮುಧೋಳ

ಕರ್ನಾಟಕ ಸರ್ಕಾರಿ ಸೇವಾ (ನಡತೆ) ನಿಯಮಗಳು 1966ರ ನಿಯಮ 5ರಂತೆ ಸರ್ಕಾರಿ ನೌಕರರು ಯಾವುದೇ ರಾಜಕೀಯ ಪಕ್ಷ, ರಾಜಕೀಯ ಚಟುವಟಿಕೆ ಅಥವಾ ಯಾವುದೇ ಸಂಘ-ಸಂಸ್ಥೆಯ ಸದಸ್ಯನಾಗಿರಬಾರದು. ತನ್ನ ಹುದ್ದೆಗೆ ರಾಜೀನಾಮೆ ನೀಡಿ ಅಥವಾ ಕರ್ನಾಟಕ ಸರ್ಕಾರಿ ಸೇವಾ ನಿಯಮಾವಳಿಯ ನಿಯಮ 285ರಂತೆ ಸ್ವಯಂ ನಿವೃತ್ತಿ ಪಡೆದು ಚುನಾವಣೆಯಲ್ಲಿ ಸ್ಪರ್ಧಿಸಬಹುದು.

***

19.08.2017.
ನಾನು 2015ರಲ್ಲಿ ಗ್ರಾಮ ಲೆಕ್ಕಾಧಿಕಾರಿ ಹುದ್ದೆಗೆ ಅರ್ಜಿ ಸಲ್ಲಿಸಿ ಅಂಗವಿಕಲಶ್ರವಣ ದೋಷ ಮೀಸಲಾತಿಯಲ್ಲಿ ಆಯ್ಕೆಯಾಗಿದ್ದೇನೆ. ಈಗ ನನಗೆ ವೈದ್ಯಕೀಯ ನೆರವಿನಿಂದ ಕಿವಿಯು ಸ್ವಲ್ಪ ಕೇಳಿಸುತ್ತಿದೆ. ಈಗ ನಮ್ಮ ಇಲಾಖೆಯಿಂದ ವೈದ್ಯಕೀಯ ಪರೀಕ್ಷೆ ನಡೆಸಿ ನನ್ನ ಶ್ರವಣಗಳು ಸರಿಯಾಗಿವೆಯೆಂದು ದೃಢಪಡಿಸಿದರೆ ನನ್ನ ಕೆಲಸಕ್ಕೆ ತೊಂದರೆಯಾಗುವುದೇ?

|ಕೆ. ಪ್ರವೀಣ್ ದಾವಣಗೆರೆ

ಕರ್ನಾಟಕ ಸರ್ಕಾರಿ ಸೇವಾ (ಸಾಮಾನ್ಯ ನೇಮಕಾತಿ) ನಿಯಮಗಳು 1977ರ ನಿಯಮ 9 ರಂತೆ ದೈಹಿಕವಾಗಿ ಅಂಗವಿಕಲನಾಗಿರುವ ಅಭ್ಯರ್ಥಿಗಳಿಗೆ ಮೀಸಲಾತಿಯನ್ನು ಕಲ್ಪಿಸಲಾಗಿದೆ. ಈ ನಿಯಮದಂತೆ ಸರ್ಕಾರವು ಕಾಲ ಕಾಲಕ್ಕೆ ಅಧಿಸೂಚನೆ ಮೂಲಕ ನಿರ್ದಿಷ್ಟಪಡಿಸಬಹುದಾದಂತ ಸ್ವರೂಪದ ದೈಹಿಕ ಅಂಗವಿಕಲತೆಯಿಂದ ಬಳಲುತ್ತಿದ್ದರೆ ವ್ಯಕ್ತಿಗಳ ನೇರ ನೌಕರಿ ಬಡ್ತಿಗೆ ಮತ್ತು ಅಂತಹ ಹುದ್ದೆಗಳಿಗೆ ಸಂಬಂಧಿಸಿದಂತೆ ಸಹ ಅನ್ವಯಿಸತಕ್ಕದ್ದಲ್ಲ. ಆದರೆ ನಿಮಗೆ ಶ್ರವಣ ದೋಷವು ಸರ್ಕಾರಿ ಸೇವೆಗೆ ಸೇರುವ ಮೊದಲೇ ಇದ್ದಿದ್ದರಿಂದ ಹಾಗೂ ತದನಂತರ ವೈದ್ಯಕೀಯ ಚಿಕಿತ್ಸೆಯಿಂದ ಶ್ರವಣಗಳು ಕೆಲಸ ಮಾಡುತ್ತಿದ್ದರು ನಿಮ್ಮ ನೌಕರಿಗೆ ಯಾವುದೇ ತೊಂದರೆಯಾಗುವುದಿಲ್ಲ. ಇಂತಹ ಅಂಗವಿಕಲತೆಯು ವೈದ್ಯವಿಜ್ಞಾನ ಮುಂದುವರೆದಂತೆ ಚಿಕಿತ್ಸಾ ಕ್ರಮಗಳೂ ಸಹ ಬೆಳೆದಿರುತ್ತದೆ. ಈ ಹಿನ್ನೆಲೆಯಲ್ಲಿ ನಿಮಗೆ ಅಲ್ಪ ಸ್ವಲ್ಪ ಕಿವಿ ಕೇಳಿದರೂ ಮೂಲ ಅಂಗವಿಕಲತೆ ಹಾಗೆಯೇ ಇರುತ್ತದೆ.

***

18.08.2017, 

ನಾನೊಬ್ಬ ಕಂಪ್ಯೂಟರ್ ಶಿಕ್ಷಕನಾಗಿದ್ದು, ಬಿ.ಇಡಿ ಪದವಿ ಪಡೆದಿರುವುದಿಲ್ಲ. ಹೀಗಾಗಿ ನಾನು ಪ್ರಭಾರಿ ಅಥವಾ ಬಡ್ತಿ ಪಡೆದು ಮುಖ್ಯೋಪಾಧ್ಯಾಯ ಅಥವಾ ಪ್ರಾಂಶುಪಾಲರ ಹುದ್ದೆಯನ್ನು ನಿರ್ವಹಿಸಲು ಸೇವಾ ನಿಯಮಗಳನ್ವಯ ಅನುಮತಿ ಇದೆಯೇ?

|ಮಂಜುನಾಥ್ ಪಾಟೀಲ್ ಧಾರವಾಡ

ಸಾರ್ವಜನಿಕ ಶಿಕ್ಷಣ ಇಲಾಖೆಯ ಪ್ರೌಢಶಾಲಾ ಶಿಕ್ಷಕರ ಹುದ್ದೆಗೆ ಪದವಿಯೊಂದಿಗೆ ಬಿ.ಇಡಿ., ಕಡ್ಡಾಯವಾಗಿರುತ್ತದೆ. ಇಂತಹ ಶಿಕ್ಷಕರು ಮಾತ್ರ ಇಲಾಖಾ ವೃಂದ ಮತ್ತು ನೇಮಕಾತಿ ನಿಯಮಾವಳಿ ರೀತ್ಯ ಪ್ರಭಾರಿ ಅಥವಾ ಪದೋನ್ನತಿ ಮುಖ್ಯ ಉಪಾಧ್ಯಾಯರು ಆಗಬಹುದು. ಆದರೆ ನೀವು ಕಂಪ್ಯೂಟರ್ ಶಿಕ್ಷಕರಾಗಿರುವುದರಿಂದ ನಿಮಗೆ ಈ ಪ್ರಭಾರಿ ಅಥವಾ ಪದೋನ್ನತಿಯ ಅವಕಾಶವಿರುವುದಿಲ್ಲ .

***

17.08.2017

ನಾನು ಗ್ರಾಮ ಲೆಕ್ಕ ಸಹಾಯಕಿಯಾಗಿದ್ದು, ಎರಡು ಬಾರಿ ಪ್ರಸೂತಿ ರಜೆ ತೆಗೆದುಕೊಂಡಿದ್ದೇನೆ. ನನ್ನ ಮೊದಲನೇ ಮಗು ನಿಧನ ಹೊಂದಿದ್ದು, ಮತ್ತೆ ಇನ್ನೊಂದು ಮಗು ಪಡೆಯಲು ಹೆರಿಗೆ ರಜೆ ಸಿಗುತ್ತದೆಯೇ?

| ಗೀತಾ ಪವಾರ್ ಹುಬ್ಬಳ್ಳಿ.

ಕರ್ನಾಟಕ ಸರ್ಕಾರಿ ಸೇವಾ ನಿಯಮಾವಳಿಯ ನಿಯಮ 135ರಂತೆ ಮಹಿಳಾ ಸರ್ಕಾರಿ ನೌಕರರಿಗೆ 2 ಜೀವಂತ ಮಗು ಇರುವವರೆಗೂ 180 ದಿನಗಳವರೆಗೆ ಪ್ರಸೂತಿ ರಜೆ ಲಭ್ಯವಾಗುತ್ತದೆ. ಆದುದರಿಂದ ನಿಮ್ಮ ವೊದಲನೇ ಮಗು ನಿಧನ ಹೊಂದಿರುವುದರಿಂದ 3ನೇ ಮತ್ತು ನಂತರದ ಹೆರಿಗೆಗೆ ಎರಡು ಜೀವಂತ ಮಗು ಹೊಂದುವವರೆಗೆ ಈ ಹೆರಿಗೆ ರಜೆ ಸೌಲಭ್ಯವನ್ನು ಪಡೆಯಬಹುದಾಗಿದೆ. ಹೆಚ್ಚಿನ ವಿವರಗಳಿಗೆ ಲ. ರಾಘವೇಂದ್ರ ಅವರ ಕರ್ನಾಟಕ ಸರ್ಕಾರಿ ಸೇವಾ ನಿಯಮಗಳು ಪುಸ್ತಕವನ್ನು ನೋಡಿ.

***

  15.08.2017.

2016ರ ಜನವರಿಯಲ್ಲಿ ದ್ವಿತೀಯ ದರ್ಜೆ ಸಹಾಯಕನಾಗಿ ನೇಮಕವಾಗಿದ್ದು, ಪರೀಕ್ಷಾರ್ಥ ಅವಧಿ ಮುಗಿಯುವವರೆಗೂ ಗಳಿಕೆ ರಜೆ ನಗದೀಕರಣ ಸೌಲಭ್ಯ ನೀಡಲಾಗುವುದಿಲ್ಲ ಎಂದು ನಮ್ಮ ಇಲಾಖೆಯಲ್ಲಿ ಹೇಳುತ್ತಿದ್ದಾರೆ. ಇದು ಸರಿಯೇ?

| ಶಿವಶಂಕರ್ ಚಿತ್ರದುರ್ಗ.

ಕರ್ನಾಟಕ ಸರ್ಕಾರಿ ಸೇವಾ ನಿಯಮಾವಳಿಯ ನಿಯಮ 145ರ ರೀತಿ ಪರೀಕ್ಷಾರ್ಥಿಯಾಗಿ ನೇಮಕ ಹೊಂದಿರುವ ನೌಕರನು ತಾತ್ಕಾಲಿಕ ನೌಕರನಿಗಿಂತ ರಜೆ ಪಡೆಯುವ ಹಕ್ಕುಳ್ಳವನಾಗಿರುತ್ತಾನೆ. ಹೀಗಿರುವಲ್ಲಿ ನಿಯಮ 118ರ ಮೇರೆಗೆ ಪರೀಕ್ಷಾರ್ಥಿ ಅವಧಿಯಲ್ಲಿರುವ ನೌಕರನು ವರ್ಷಕ್ಕೆ 15 ದಿನಗಳ ಕಾಲ ಗಳಿಕೆ ರಜೆಯನ್ನು ಆಧ್ಯಾರ್ಪಣೆಗೊಳಿಸಿ ನಗದೀಕರಣ ಪಡೆಯಲು ಅರ್ಹನಾಗಿರುತ್ತಾನೆ. ಈ ಸಂಬಂಧ ಮತ್ತೊಮ್ಮೆ ನಿಮ್ಮ ಮೇಲಧಿಕಾರಿಗೆ ನಿಯಮಾವಳಿ ಅಡಿಯಲ್ಲಿ ಗಳಿಕೆ ರಜೆ ಮಂಜೂರು ಮಾಡಲು ವಿನಂತಿಸಬಹುದು.

***

14.08.2017,

1989ರಿಂದ 8 ವರ್ಷ ಪ್ರಾಥಮಿಕ ಶಾಲಾ ಶಿಕ್ಷಕನಾಗಿ ಸೇವೆ ಸಲ್ಲಿಸಿ, 1997ರಲ್ಲಿ ಪ್ರೌಢಶಾಲಾ ಶಿಕ್ಷಕನಾಗಿ ನೇರವಾಗಿ ಆಯ್ಕೆಯಾಗಿರುತ್ತೇನೆ. 1.10.2005ರಿಂದ ಪದವಿಪೂರ್ವ ಉಪನ್ಯಾಸಕನಾಗಿ (ಇಂಗ್ಲಿಷ್) ನಿಯಮ 32ರಂತೆ ಬಡ್ತಿ ಪಡೆದಿದ್ದೇನೆ. ದಿನಾಂಕ 20.7.2007ರಲ್ಲಿ 2005ರಿಂದಲೆ ಪೂರ್ವಾನ್ವಯವಾಗಿ ಬಡ್ತಿ ನೀಡಿರುವುದರಿಂದ 1.10.2005ರಿಂದ 30.9.2015ರ ಪಿ.ಯು. ಕಾಲೇಜಿನಲ್ಲಿ ಒಂದೇ ಹುದ್ದೆಯಲ್ಲಿ 10 ವರ್ಷ ಸಲ್ಲಿಸಿದ ಕರ್ತವ್ಯವು ಕಾಲಮಿತಿ ಬಡ್ತಿಗೆ ಅರ್ಹವೆ? ಪ್ರೌಢಶಾಲಾ ಶಿಕ್ಷಕ ಹುದ್ದೆಯಲ್ಲಿ ಅವಧಿಪೂರ್ವದಲ್ಲಿ ಕಾಲಮಿತಿ ಬಡ್ತಿ ರದ್ದಾಗುತ್ತದೆಯೆ?

| ಶ್ರೀರಾಮಪ್ಪ ಶಿವಪ್ಪ ದಾಸ್ತಿಕೊಪ್ಪ ಕಲಘಟಗಿ, ಧಾರವಾಡ.

1983ರ ಕರ್ನಾಟಕ ಸರ್ಕಾರಿ ಸೇವಾ (ಕಾಲಬದ್ಧ) ನಿಯಾಮಳಿಯ ನಿಯಮ 3ರ ರೀತಿ ಸರ್ಕಾರಿ ನೌಕರ ಒಂದೇ ಹುದ್ದೆಯಲ್ಲಿ ಸತತ 10 ವರ್ಷ ಕರ್ತವ್ಯ ನಿರ್ವಹಿಸಿದರೆ ಸೇವಾವಧಿಯಲ್ಲಿ ಒಂದು ಬಾರಿ ಮಾತ್ರ ಕಾಲಮಿತಿ ಬಡ್ತಿಗೆ ಅರ್ಹ. ನಿಮಗೆ ನಿಯಮ 32ರಂತೆ ಪದವಿಪೂರ್ವ ಉಪನ್ಯಾಸಕ ಹುದ್ದೆಗೆ ಪೂರ್ವಾನ್ವಯವಾಗಿ ಪದೋನ್ನತಿ ನೀಡಿರುವುದರಿಂದ ಅವಧಿಪೂರ್ವ ಕಾಲಮಿತಿ ಬಡ್ತಿಯು ಸ್ವಯಂಚಾಲಿತವಾಗಿ ರದ್ದಾಗುತ್ತದೆ. ಈ ಕಾಲಮಿತಿ ಬಡ್ತಿ ಪಡೆಯಲು ಸರ್ಕಾರಿ ನೌಕರನ ಸೇವಾ ದಾಖಲೆ ತೃಪ್ತಿಕರವಾಗಿರಬೇಕು. ವೃಂದ ಮತ್ತು ನೇಮಕಾತಿ ನಿಯಮಾವಳಿ ರೀತಿ ಪದೋನ್ನತಿಗೆ ಅರ್ಹನಾಗಿರಬೇಕು. ಆದ್ದರಿಂದ ನೀವು ಪದವಿಪೂರ್ವ ಕಾಲೇಜಿನ ಉಪನ್ಯಾಸಕರ ಹುದ್ದೆಯಲ್ಲಿ 2005ರಿಂದ 5015ರ ವರೆಗೆ ಸಲ್ಲಿಸಿದ ಕರ್ತವ್ಯವನ್ನು ಪರಿಗಣಿಸಿ ಇಲಾಖಾ ಮುಖ್ಯಸ್ಥರಿಗೆ ಮನವಿ ಸಲ್ಲಿಸಿ, ಆರ್ಥಿಕ ಸೌಲಭ್ಯ ಪಡೆಯಬಹುದು.

***

13.08.2017.

ನಾನು ಮತ್ತು ಪತ್ನಿ ಇಬ್ಬರೂ ಪ್ರಾಥಮಿಕ ಶಾಲಾ ಶಿಕ್ಷಕರಾಗಿದ್ದೇವೆ. ಹಿಂದುಳಿದ ವರ್ಗಕ್ಕೆ ಸೇರಿದ (3ಬಿ) ನಾನು ಆದಾಯ ಮತ್ತು ಜಾತಿ ಪ್ರಮಾಣ ಪತ್ರಕ್ಕಾಗಿ ಅರ್ಜಿ ಸಲ್ಲಿಸುವಾಗ ನನ್ನ ಹಾಗೂ ತಂದೆ-ತಾಯಿಯ ಆದಾಯ ನಮೂದಿಸಿದ್ದೆ. ಸದ್ಯ ನನ್ನ ಪತ್ನಿಯ ಆದಾಯವನ್ನೂ ಸೇರಿಸಬೇಕು ಎಂದು ಗ್ರಾಮ ಲೆಕ್ಕಾಧಿಕಾರಿ ಸೂಚಿಸಿದ್ದಾರೆ. ಇದು ಸರಿಯೇ?

| ಉಮೇಶ ಸಿದ್ನಾಳ ಗದಗ.

1990ರ ಕರ್ನಾಟಕ ಅನುಸೂಚಿತ ಜಾತಿ/ಪಂಗಡಗಳು ಹಾಗೂ ಹಿಂದುಳಿದ ವರ್ಗಗಳ (ನೇಮಕಾತಿ ಮುಂತಾದ ಮೀಸಲಾತಿ) ಅಧಿನಿಯಮದ 4 ಮತ್ತು 4ಎ ಅಡಿ ಕುಟುಂಬದಲ್ಲಿ ಪತ್ನಿಯೂ ಸೇರಿರುವುದರಿಂದ ಅವರ ಆದಾಯ ಸೇರಿಸುವುದು ಕಾನೂನು ರೀತಿಯಲ್ಲಿ ಅಗತ್ಯವಾಗಿದೆ. 2015ರಲ್ಲಿ ಸರ್ಕಾರ ಆದೇಶ ಹೊರಡಿಸಿರು ವಂತೆ ಹಿಂದುಳಿದ ವರ್ಗಗಳ ವಾರ್ಷಿಕ ಆದಾಯವು ಗರಿಷ್ಠ -ಠಿ;6 ಲಕ್ಷ ಮೀರಬಾರದು.

***

12.08.2017.

ನಾನು ಪ್ರಥಮ ದರ್ಜೆ ಸಹಾಯಕನಾಗಿದ್ದು, ಪ್ರಸ್ತುತ ಕೆಪಿಎಸ್​ಸಿ ಕರೆದಿರುವ ಕೆಎಎಸ್ (ಪೂರ್ವಭಾವಿ) ಪರೀಕ್ಷೆಗೆ ಮೇಲಧಿಕಾರಿಗಳಿಂದ ನಿರಾಕ್ಷೇಪಣಾ ಪತ್ರವನ್ನು ಪಡೆದು ಅರ್ಜಿ ಸಲ್ಲಿಸಿದ್ದೇನೆ. ನನಗೆ ಈ ಸ್ಪರ್ಧಾತ್ಮಕ ಪರೀಕ್ಷೆಗೆ ಹಾಜರಾಗಲು ವಿಶೇಷ ಪರೀಕ್ಷಾ ರಜೆ ಲಭ್ಯವಾಗುವುದೇ?

|ಕೆ.ಎಸ್. ಮಂಜುನಾಥ್ ಬೆಂಗಳೂರು.

ಕರ್ನಾಟಕ ಸರ್ಕಾರಿ ಸೇವಾ (ಸಾಮಾನ್ಯ ನೇಮಕಾತಿ) ನಿಯಮಗಳು 1977ರ ನಿಯಮ 11 ರಂತೆ ಸರ್ಕಾರಿ ನೌಕರನು ಬೇರೆ ಹುದ್ದೆಗೆ ಅರ್ಜಿ ಸಲ್ಲಿಸಿರಬೇಕಾದರೆ ಪೂರ್ವಾನುಮತಿಯನ್ನು ಪಡೆಯುವುದು ಕಡ್ಡಾಯವಾಗಿರುತ್ತದೆ. ಈ ರೀತಿ ಅನುಮತಿ ಪಡೆದು ಇಂತಹ ಸ್ಪರ್ಧಾತ್ಮಕ ಪರೀಕ್ಷೆಗೆ ಹಾಜರಾಗಲು ವಿಶೇಷ ಪರೀಕ್ಷಾ ರಜೆ ಮಂಜೂರು ಮಾಡಲು ನಿಯಮಾವಳಿಯಲ್ಲಿ ಅವಕಾಶವಿರುವುದಿಲ್ಲ. ಈ ಪರೀಕ್ಷೆಗೆ ನೀವು ವಿಜಯವಾಣಿಯ ವಿದ್ಯಾರ್ಥಿ ಉದ್ಯೋಗ ಮಿತ್ರ, ಲ. ರಾಘವೇಂದ್ರ ಅವರು ಬರೆದಿರುವ ಸಾಮಾನ್ಯ ಅಧ್ಯಯನ ಕೈಪಿಡಿ , ಕೆಎಎಸ್ ಪರೀಕ್ಷಾ ಮಾರ್ಗದರ್ಶಿ, ಸಾಮಾನ್ಯ ಅಧ್ಯಯನ ಪ್ರಶ್ನೆಕೋಶ, ಸಾಮಾನ್ಯಜ್ಞಾನ ಪ್ರಶ್ನೆಕೋಶ ಕೃತಿಗಳನ್ನು ಅಧ್ಯಯನ ಮಾಡಬಹುದು.

***

 11.08.2017,

ನನ್ನನ್ನು ಸಾರ್ವಜನಿಕ ಹಿತದೃಷ್ಟಿಯಿಂದ ಬೇರೆ ಸ್ಥಳಕ್ಕೆ ವರ್ಗಾವಣೆ ಮಾಡಲಾಯಿತು. ಆದರೆ ಕರ್ತವ್ಯಕ್ಕೆ ಹಾಜರಾಗಲು ಹೋದಾಗ ಅಲ್ಲಿ ಹುದ್ದೆ ಖಾಲಿ ಇಲ್ಲವೆಂದು ತಿಳಿದು ಅದನ್ನು ಸಕ್ಷಮ ಪ್ರಾಧಿಕಾರಕ್ಕೆ ತಿಳಿಸಿದೆ. ಸುಮಾರು ಎರಡು ತಿಂಗಳ ನಂತರ ಬೇರೊಂದು ಸ್ಥಳಕ್ಕೆ ವರ್ಗಾವಣೆ ಆದೇಶ ನೀಡಿದರು. ಆದರೆ ಈ ಎರಡೂ ತಿಂಗಳ ಅವಧಿಗೆ ನನಗೆ ವೇತನ ನೀಡಲಾಗಿಲ್ಲ. ಗಳಿಕೆ ರಜೆ ಅರ್ಜಿ ಸಲ್ಲಿಸಿದರೆ ವೇತನ ನೀಡಲಾಗುವುದೆಂದು ಪ್ರಸ್ತುತ ನೇಮಕ ಪ್ರಾಧಿಕಾರಿ ತಿಳಿಸುತ್ತಿದ್ದಾರೆ. ಇದಕ್ಕೆ ಪರಿಹಾರವೇನು ?

|ಎಚ್.ಎನ್. ನಾಡಗೌಡ ಕೊಪ್ಪಳ.

ಕರ್ನಾಟಕ ಸರ್ಕಾರಿ ಸೇವಾ ನಿಯಮಾವಳಿಯ ನಿಯಮ 8 (15) (ಎಫ್) ರಂತೆ ಸರ್ಕಾರಿ ನೌಕರನನ್ನು ಸರ್ಕಾರದ ಅಧೀನದಲ್ಲಿರುವ ಯಾವುದೇ ಹುದ್ದೆಯಿಂದ ಬಿಡುಗಡೆ ಹೊಂದಿದ ಬಳಿಕ ಅಥವಾ ಪ್ರತಿನಿಯೋಜನೆಯಿಂದ ಕರ್ತವ್ಯಕ್ಕೆ ಹಾಜರಾತಿ ವರದಿ ನಿರೀಕ್ಷೆಯಲ್ಲಿ ಕಳೆದ ಅವಧಿಯನ್ನು ಕಡ್ಡಾಯ ನಿರೀಕ್ಷಣಾ ಅವಧಿ (ಇಟಞಟ್ಠ್ಝಟ್ಟಢ ಡಿಚಜಿಠಿಜ್ಞಿಜ ಟಛ್ಟಿಜಿಟಛ) (ನಿಯುಕ್ತಿ ) ಎಂದು ಪರಿಗಣಿಸಲು ಸೂಚಿಸಲಾಗಿದೆ. ಅಲ್ಲದೆ ರಾಜ್ಯ ಶ್ರೇಷ್ಠ ನ್ಯಾಯಾಲಯವು (ಎ.ಕೆ. ಭಟ್ ವರ್ಸಸ್ ಸ್ಟೇಟ್ ಆಫ್ ಕರ್ನಾಟಕ 1984) (ಎಲ್.ಎ.ಬಿ.ಐ.ಸಿ.) (ಎನ್​ಓಸಿ 59) ಕಂಪಲ್ಸರಿ ಕಡ್ಡಾಯ ಅವಧಿಯೆಂದು ತೀರ್ವನಿಸಿ ವೇತನ ನೀಡಬೇಕೆಂದು ಸೂಚಿಸಿದೆ. ಆದುದರಿಂದ ನೀವು ಎರಡು ತಿಂಗಳ ಕಾಲ ಯಾವುದೇ ಸ್ಥಳ ನೀಡದಿರುವುದರಿಂದ ಆ ಅವಧಿಯನ್ನು ಕಡ್ಡಾಯ ನಿರೀಕ್ಷಣಾ ಅವಧಿಯೆಂದು ಪರಿಗಣಿಸಲು ವಿನಂತಿಸಬಹುದಾಗಿದೆ.

***
10.08.2017.

ನಾನೊಬ್ಬ ಸರ್ಕಾರಿ ಬಿ ಗುಂಪಿನ ಅಧಿಕಾರಿ. ಇಲಾಖಾ ಮುಖ್ಯಸ್ಥರು ನನ್ನನ್ನು ಇಲಾಖಾ ವಿಚಾರಣೆಗೆ ಮಂಡನಾಧಿಕಾರಿಯಾಗಿ ನೇಮಿಸಿರುತ್ತಾರೆ ವಿಚಾರಣಾಧಿಕಾರಿಗಳು ಅವರ ಎಲ್ಲ ಜವಾಬ್ದಾರಿಯನ್ನು ನನಗೆ ನೀಡುತ್ತಿದ್ದು ವಿಚಾರಣಾ ನೋಟೀಸನ್ನು ನಾನೇ ಎಲ್ಲಾ ಸಾಕ್ಷಿಗಳಿಗೆ ಮತ್ತು ಆರೋಪಿತರಿಗೆ ಕಳುಹಿಸಲು ಆದೇಶಿಸುತ್ತಾರೆ. ಇದನ್ನು ನಾನು ಮಾಡಬಹುದೇ?

|ಎಂ. ಎನ್. ವಿಜಯಕುಮಾರ್ ಮೈಸೂರು.

ಕರ್ನಾಟಕ ಸರ್ಕಾರಿ ಸೇವಾ (ಸಿಸಿಎ) ನಿಯಮಗಳು ನಿಯಮ 11(2)ರಂತೆ ಶಿಸ್ತು ಪ್ರಾಧಿಕಾರಿಯವರು ಇಲಾಖಾ ವಿಚಾರಣಾಧಿಕಾರಿ ವಿಚಾರಣೆ ನಡೆಸಲು ನೇಮಕ ಮಾಡಬಹುದು. ಈ ಇಲಾಖಾ ವಿಚಾರಣೆ ಸುಗಮವಾಗಿ ನಡೆಯಲು ಹಾಗೂ ತನ್ನ ಪರವಾಗಿ ಪ್ರಕರಣ ಮಂಡಿಸಲು ಈ ಸಿಸಿಎ ನಿಯಮಾವಳಿಯ ನಿಯಮ 11 (5) (ಸಿ) ರೀತ್ಯ ಮಂಡನಾಧಿಕಾರಿಯನ್ನು ನೇಮಿಸಬಹುದು. ಇಲಾಖಾ ವಿಚಾರಣೆಯಲ್ಲಿ ಆಪಾದಿತನು ಒಂದು ಪಕ್ಷವಾದರೆ ಮತ್ತೊಂದು ಪಕ್ಷ ಮಂಡನಾಧಿಕಾರಿ. ವಿಚಾರಣಾಧಿಕಾರಿಗಳೇ ನ್ಯಾಯಾಧಿಪತಿಗಳಂತೆ ನೋಟೀಸನ್ನು ಆರೋಪಿತ ನೌಕರರಿಗೆ ಮತ್ತು ಸಾಕ್ಷಿಗಳಿಗೆ ಈ ನಿಯಮಾವಳಿ ರೀತ್ಯ ನೀಡಬೇಕು. ಇಲಾಖಾ ವಿಚಾರಣಾಧಿಕಾರಿಗಳು ವಹಿಸಿದ ಕಾರ್ಯವನ್ನು ನೀವು ನಿರ್ವಹಿಸಿದಲ್ಲಿ ಅವರು ತಮ್ಮ ಅಧಿಕಾರವನ್ನು ವಿಕೇಂದ್ರೀಕರಿಸಿದಂತಾಗುತ್ತದೆ. ಇದು ಸಮಂಜಸವೂ ಅಲ್ಲ. ಭಾರತದ ಸರ್ವೇಚ್ಛ ನ್ಯಾಯಾಲಯವು ನೀಲಕಂಠ ವರ್ಸಸ್ ಕಾಶಿನಾಥ (ಎಐಆರ್) 1962 (ಎಸ್​ಸಿ) 666 ಎನ್ನುವ ಪ್ರಕರಣದಲ್ಲಿ ಆಪಾದಿತ/ಸಾಕ್ಷಿದಾರರಿಗೆ ವಿಚಾರಣಾಧಿಕಾರಿಗಳೇ ನೋಟಿಸು ನೀಡಬೇಕೆಂದು ಸೂಚಿಸಿದೆ. ಆದುದರಿಂದ ನೀವು ವಿಚಾರಣಾಧಿಕಾರಿಗಳು ನಿಮ್ಮ ಮೇಲಿನ ಅಧಿಕಾರಿಯಾಗಿದ್ದರೂ ಅವರಿಗೆ ಈ ಕಾರ್ಯ ನಿರ್ವಹಿಸಲು ವಿನಂತಿಸಬಹುದು.

***

09.08.2017.

ಕರ್ನಾಟಕ ಸರ್ಕಾರಿ ಸೇವಾ ನಿಯಮಾವಳಿ ನಿಯಮ 106ಎ ರೀತ್ಯ ದಂಡನೆ ವಿಧಿಸಿ ಮತ್ತೆ ಸಿಸಿಎ ನಿಯಮಾವಳಿಯಲ್ಲಿ ಇಲಾಖಾ ವಿಚಾರಣೆಯನ್ನು ನಡೆಸಬಹುದೇ?

|ಭೈರೇಗೌಡ ಕೋಲಾರ.

ಕರ್ನಾಟಕ ಸರ್ಕಾರಿ ಸೇವಾ ನಿಯಮಾವಳಿಯ ನಿಯಮ 106ರಡಿಯಲ್ಲಿ ನಿಮಗೆ ಈಗಾಗಲೇ ದಂಡನೆ ವಿಧಿಸಿರುವುದರಿಂದ ಅದರ ವ್ಯಾಪ್ತಿಯನ್ನು ಹೊರತುಪಡಿಸಿ ಮತ್ತೆ ಇಲಾಖಾ ವಿಚಾರಣೆಯನ್ನು ನಡೆಸುವುದು ಸ್ವಾಭಾವಿಕ ನ್ಯಾಯಕ್ಕೆ ಅಪಚಾರವೆಸಗಿದಂತಾಗುತ್ತದೆ. ಭಾರತದ ಸರ್ವೇಚ್ಛ ನ್ಯಾಯಾಲಯವು ಭಕ್ಷಿಸ್​ಸಿಂಗ್ ವರ್ಸಸ್ ಪಂಜಾಬ್ (1998) (8 ಎಸ್. ಸಿ.ಸಿ. 222) ಪ್ರಕರಣದಲ್ಲಿ ಒಂದು ಸಲ ವೇತನ ರಹಿತ ರಜೆ ಎಂದು ದಂಡನೆ ವಿಧಿಸಿದಾಗ ಮತ್ತೊಮ್ಮೆ ಶಿಸ್ತು ಪ್ರಕರಣ ಜರುಗಿಸಲು ಸಾಧ್ಯವಿಲ್ಲವೆಂದು ಆದೇಶ ನೀಡಿದೆ. ಆದುದರಿಂದ ನೀವು ಶಿಸ್ತು ಪ್ರಾಧಿಕಾರಕ್ಕೆ ಈ ತೀರ್ಪಿನ ಹಿನ್ನೆಲೆಯಲ್ಲಿ ಇಲಾಖಾ ವಿಚಾರಣೆಯನ್ನು ಕೈಬಿಡಲು ವಿನಂತಿಸಬಹುದು. ಹೆಚ್ಚಿನ ವಿವರಗಳಿಗೆ ಎಂ. ಉಮೇಶ್ ಅವರ ಸಿಸಿಎ ನಿಯಮಾವಳಿ ಸಮಗ್ರ ಕೈಪಿಡಿ ಕೃತಿಯನ್ನು ನೋಡಬಹುದು.

***

 08.08.2017.

ಮೀನುಗಾರಿಕೆ ಇಲಾಖೆಯಲ್ಲಿದ್ದ ನನ್ನ ತಂದೆ 2006ರಲ್ಲಿ ಕಾಣೆಯಾದರು. ಆನಂತರ 7 ವರ್ಷ ಕಳೆಯುವವರೆಗೆ ಮತ್ತು ಕೋರ್ಟಿನಿಂದ ಡಿಕ್ರಿ ಪಡೆಯುವವರೆಗೆ ಸರ್ಕಾರದಿಂದ ಯಾವುದೇ ಸಹಾಯ ದೊರೆಯುವುದಿಲ್ಲ ಎಂದು ಹೇಳಿದ್ದರು. ಆಗ ನಾನು ಅವಿವಾಹಿತೆಯಾಗಿದ್ದೆ. ನನ್ನ ತಾಯಿ ಕೋರ್ಟಿ ನಿಂದ ಈಗ ಡಿಕ್ರಿಯನ್ನು ಪಡೆದಿರುತ್ತಾರೆ. ನಮ್ಮ ತಂದೆಗೆ ಗಂಡು ಮಕ್ಕಳಿಲ್ಲದ ಕಾರಣ ಈಗ ನನಗೆ ಅನುಕಂಪದ ಆಧಾರದ ಮೇಲೆ ನೌಕರಿ ದೊರೆಯುವುದೇ? ನಾನೀಗ ವಿವಾಹಿತೆಯಾಗಿದ್ದು ನೌಕರಿಯನ್ನು ಹೇಗೆ ಪಡೆಯಬಹುದು?

|ಪೂರ್ಣಿಮಾ ಎನ್. ಮೈಸೂರು.

ಕರ್ನಾಟಕ ಸರ್ಕಾರಿ ಸೇವಾ (ಅನುಕಂಪದ ಮೇರೆಗೆ ನೇಮಕ) ನಿಯಮಗಳು 1996ರ ನಿಯಮ 3ರಂತೆ ಅನುಕಂಪದ ಆಧಾರದ ಮೇಲೆ ಮೃತ ಸರ್ಕಾರಿ ನೌಕರನ ಪತ್ನಿ, ಮಗ ಹಾಗೂ ಅವಿವಾಹಿತ ಮಗಳು ಅರ್ಹರಾಗುತ್ತಾರೆ. ಈಗಾಗಲೇ ನಿಮ್ಮ ತಾಯಿಯವರು 10 ವರ್ಷದ ನಂತರ ನಿಮ್ಮ ತಂದೆಯ ನಿಧನದ ಬಗ್ಗೆ ಡಿಕ್ರಿ ಪಡೆದಿರುವುದರಿಂದ ನೀವು ಈಗ ವಿವಾಹವಾಗಿರುವುದರಿಂದ ಅನುಕಂಪದ ಆಧಾರದ ಮೇಲೆ ಸರ್ಕಾರಿ ಉದ್ಯೋಗವನ್ನು ಪಡೆಯಲು ಸಾಧ್ಯವಾಗುವುದಿಲ್ಲ. ಆದುದರಿಂದ ನೀವು ಪ್ರಸ್ತುತ ನಿಮ್ಮ ತಾಯಿಯವರಿಗೆ ಕುಟುಂಬ ಪಿಂಚಣಿ ಲಭ್ಯವಾಗುವಂತೆ ಕ್ರಮ ಕೈಗೊಳ್ಳಬಹುದು. ಹೆಚ್ಚಿನ ವಿವರಗಳಿಗೆ ಲ. ರಾಘವೇಂದ್ರ ಅವರ ಕರ್ನಾಟಕ ಸರ್ಕಾರಿ ಸೇವಾ ಕಾನೂನು ಕೈಪಿಡಿ ಪುಸ್ತಕವನ್ನು ನೋಡಿ.

***

07.08.2017.

ಪಿಎಸ್​ಐ ಹುದ್ದೆಗೆ ಅರ್ಜಿ ಸಲ್ಲಿಸಿರುತ್ತೇನೆ. ನನಗೆ ಭಾಷಾಂತರ ಮತ್ತು ಸಾರಾಂಶದ ಬಗ್ಗೆ ಹಾಗೂ ಸಾಮಾನ್ಯ ಅಧ್ಯಯನದ ಪ್ರಶ್ನೆಗಳ ಬಗ್ಗೆ ಸಾಕಷ್ಟು ಸಂಶಯಗಳಿದ್ದು, ಪ್ರಬಂಧ ಬರೆಯುವ ಕೌಶಲ್ಯದ ಜತೆಗೆ ಅಧ್ಯಯನ ಮಾಡಬೇಕಾದ ಪುಸ್ತಕಗಳನ್ನು ತಿಳಿಸಿ.

|ರಾಘವ್ ನಾಯಕ್ ಬಾಗಲಕೋಟೆ.

ನೀವು ಪ್ರಬಂಧ ಬರೆಯಲು ದಿನನಿತ್ಯ ಪತ್ರಿಕೆಗಳಲ್ಲಿ ಬರುವ ಘಟನಾವಳಿ, ಲೇಖನಗಳು, ಅಧ್ಯಯನ ಮಾಡುವುದಲ್ಲದೆ ಲ. ರಾಘವೇಂದ್ರ ಅವರು ಬರೆದಿರುವ ಪ್ರಚಲಿತ ಪ್ರಬಂಧ ಲೇಖನ ದರ್ಪಣ ಕೃತಿಯನ್ನು ತಪ್ಪದೇ ಓದಬೇಕು. ಅಲ್ಲದೆ ಇವರೇ ಬರೆದಿರುವ ಪಿಎಸ್​ಐ ಸ್ಪರ್ಧಾತ್ಮಕ ಪರೀಕ್ಷಾ ಮಾರ್ಗದರ್ಶಿ ಕೃತಿಯನ್ನು ಅಧ್ಯಯನ ಮಾಡಬಹುದು. ಇದರೊಂದಿಗೆ ನೀವು ಸ್ಪರ್ಧಾತ್ಮಕ ಪರೀಕ್ಷೆಗೆಂದೇ ಪ್ರಕಟವಾಗುವ ಮಾಸಿಕಗಳನ್ನು ಹಾಗೂ ವಿಜಯವಾಣಿ ಪ್ರಕಟಿಸುವ ಉದ್ಯೋಗ ವಿದ್ಯಾರ್ಥಿ ಮಿತ್ರ ಪತ್ರಿಕೆಯಲ್ಲಿ ಪ್ರಕಟವಾಗುವ ಪ್ರಶ್ನೋತ್ತರಗಳನ್ನು ಅಧ್ಯಯನ ಮಾಡಬೇಕು.

***

06.08.2017.

ನಾನೊಬ್ಬ ಆರೋಪಿತ ನೌಕರ. 2014ರಲ್ಲಿ ನನ್ನ ಮೇಲೆ ಇಲಾಖಾ ವಿಚಾರಣೆ ಪ್ರಾರಂಭಿಸಲಾಗಿದೆ. ಆದರೆ ಇಲ್ಲಿಯವರೆಗೂ ವಿಚಾರಣೆ ಮುಗಿದಿಲ್ಲ. ನನ್ನ ಎಲ್ಲ ವೇತನ ಬಡ್ತಿ ತಡೆಹಿಡಿಯಲಾಗಿದೆ. ಆದರೆ ಇದುವರೆಗೂ ವಿಚಾರಣಾಧಿಕಾರಿಗಳು ಇಲಾಖಾ ವಿಚಾರಣಾ ವರದಿ ಸಲ್ಲಿಸಿರುವುದಿಲ್ಲ. ಏನು ಮಾಡುವುದು?

| ಮಹೇಶ್ ಚಂದ್ರ ಚಿಕ್ಕಮಗಳೂರು.

ನ್ಯಾಯಾಲಯ ಮತ್ತು ಸರ್ಕಾರ ಅನೇಕ ಬಾರಿ ಇಲಾಖಾ ವಿಚಾರಣೆಗಳನ್ನು ಶೀಘ್ರವಾಗಿ ನಡೆಸಿ ಪ್ರಕರಣಕ್ಕೆ ಮುಕ್ತಾಯ ನೀಡಲು ಸೂಚಿಸಿವೆ. ಯಾವುದೇ ಕಾರಣವಿಲ್ಲದೆ 2014ರಿಂದ ಪ್ರಕರಣವನ್ನು ಬಾಕಿ ಉಳಿಸಿಕೊಳ್ಳಲಾಗಿದೆ. ನೋಟಿಸ್​ಗೆ ನಿಮ್ಮ ಉತ್ತರ ಪಡೆದ ನಂತರ ಪ್ರಕರಣವನ್ನು ಕೈಬಿಡಬಹುದಾಗಿತ್ತು. ನೀವು ಸೇವೆಯಲ್ಲಿ ಅಮಾನತ್ತಿಗೆ ಒಳಗಾಗದೆ ಇರುವುದರಿಂದ ನಿಮ್ಮ ವೇತನ ಬಡ್ತಿಗಳನ್ನು ತಡೆಹಿಡಿಯಲು ಕರ್ನಾಟಕ ಸರ್ಕಾರಿ ಸೇವಾ ನಿಯಮಾವಳಿಯ ನಿಯಮ 51ರಲ್ಲಿ ಅವಕಾಶವಿಲ್ಲ. ವಿನಾ ಕಾರಣ ಪ್ರಕರಣ ಬಾಕಿ ಇಟ್ಟುಕೊಳ್ಳಲಾಗಿದೆ ಎಂದು ನ್ಯಾಯಾಲಯದ ಮೊರೆ ಹೋದರೆ ತ್ವರಿತವಾಗಿ ಪ್ರಕರಣ ಇತ್ಯರ್ಥ ಮಾಡುವಂತೆ ಕೋರ್ಟ್ ಆದೇಶಿಸಬಹುದು. ಅದಕ್ಕೂ ಮೊದಲು ನಿಮ್ಮ ಶಿಸ್ತು ಪ್ರಾಧಿಕಾರಿಗೆ ಲಿಖಿತ ಪ್ರಾರ್ಥನೆ ಮಾಡಿಕೊಳ್ಳಬಹುದು.

***

05.08.2017.

2016ರ ಮಾರ್ಚ್​ನಿಂದ ಪ್ರಾಥಮಿಕ ಶಾಲಾ ಶಿಕ್ಷಕನಾಗಿದ್ದ ನಾನು, ಪ್ರಸ್ತುತ ಪ್ರೌಢಶಾಲಾ ಸಹಶಿಕ್ಷಕನಾಗಿ ಆಯ್ಕೆಯಾಗಿದ್ದು ಜೂನ್​ನಲ್ಲಿ ಕೆಲಸಕ್ಕೆ ಹಾಜರಾಗಿದ್ದೇನೆ. ಆದರೆ ನಾನು ಪ್ರಾಥಮಿಕ ಹಾಗೂ ಪ್ರೌಢಶಾಲೆ ಶಿಕ್ಷಕ ಹುದ್ದೆಗೆ ಅರ್ಜಿ ಸಲ್ಲಿಸಿರುವ ಸಮಯದಲ್ಲಿ ಕೆಲಸದಲ್ಲಿಲ್ಲದ ಕಾರಣ ಏಕಕಾಲದಲ್ಲಿ ಎರಡೂ ಹುದ್ದೆಗೆ ಅರ್ಜಿ ಸಲ್ಲಿಸಿದ್ದೇನೆ. ಪ್ರಾಥಮಿಕ ಶಾಲಾ ಶಿಕ್ಷಕನಾಗಿ ಸಲ್ಲಿಸಿದ ಒಂದು ವರ್ಷದ ಸೇವೆ ಕೆಜಿಐಡಿ, ಎನ್​ಪಿಎಸ್ ನಾನು ಪ್ರೌಢಶಾಲಾ ಶಿಕ್ಷಕನಾಗಿ ಹೋದಮೇಲೆ ಮುಂದುವರೆಯುತ್ತದೆಯೇ?

|ಕೆ. ವಿ. ರಾಮಚಂದ್ರಯ್ಯ ದೊಡ್ಡಬಳ್ಳಾಪುರ.

ಕರ್ನಾಟಕ ಸರ್ಕಾರಿ ಸೇವಾ ನಿಯಮಾವಳಿಯ ನಿಯಮ 252ಬಿ ಪ್ರಕಾರ ನೀವು ಪ್ರಾಥಮಿಕ ಶಾಲಾ ಶಿಕ್ಷಕರ ಹುದ್ದೆಗೆ ರಾಜೀನಾಮೆ ಸಲ್ಲಿಸಿ, ಕರ್ತವ್ಯದಿಂದ ಬಿಡುಗಡೆ ಹೊಂದಿ ಮಾರನೇ ದಿವಸವೇ ಪ್ರೌಢಶಾಲಾ ಶಿಕ್ಷಕರ ಕರ್ತವ್ಯಕ್ಕೆ ಹಾಜರಾದರೆ ನಿಮ್ಮ 1 ವರ್ಷದ ಸೇವಾ ಅವಧಿ ಹಾಗೂ ದಿನಾಂಕ 7-5-2014ರ ಸರ್ಕಾರಿ ಆದೇಶ ಸಂಖ್ಯೆ ಎಫ್​ಡಿ (ಸ್ಪೆಷಲ್) 118 ಪಿಇಎನ್ 2013ರ ರೀತ್ಯ ಸರ್ಕಾರಿ ನೌಕರನ ಸೇವಾವಧಿಯಲ್ಲಿ ಏಕ ಮಾತ್ರ ಕ್ಕಅಘ ಎಂಬ ಸಂಖ್ಯೆಯು ಮುಂದುವರೆಯುತ್ತದೆ. ಆದುದರಿಂದ ನೀವು ಹೊಸದಾಗಿ ಎನ್​ಪಿಎಸ್, ಕೆಜೆಐಡಿ ಮಾಡಿಸುವುದು ಅವಶ್ಯಕವೆಂದು ಹಿಂದಿನ ಸೇವಾ ಪುಸ್ತಕವನ್ನೇ ಬಳಸಿಕೊಂಡು ಪ್ರೌಢಶಾಲೆಗೆ ಸೇರಿದ ನಂತರ ನಿಮ್ಮ ಸೇವಾವಧಿಯನ್ನು ಹಾಗೂ ಇನ್ನಿತರ ಸೌಲಭ್ಯಗಳನ್ನು ಮುಂದುವರೆಸಲು ಸಂಬಂಧಿಸಿದ ನೇಮಕಾತಿ ಪ್ರಾಧಿಕಾರಕ್ಕೆ ಮನವಿಯನ್ನು ಸಲ್ಲಿಸಬೇಕು.

***

 03.08.2017.

ನನ್ನ ಸಹೋದರಿ 2 ವರ್ಷದ ಜೆ.ಒ.ಸಿ. (ಟೈಲರಿಂಗ್) ಶಿಕ್ಷಣ ಪೂರೈಸಿದ್ದು, ಅವಳು ಆರೋಗ್ಯ ಇಲಾಖೆಯಲ್ಲಿ ಅನುಕಂಪದ ನೇಮಕಾತಿ ಮೇರೆಗೆ ದ್ವಿತೀಯ ದರ್ಜೆ ಸಹಾಯಕರ ಹುದ್ದೆಗೆ ಅರ್ಹಳೆ?

| ಇಮ್ರಾನ್ ಮುಲ್ಲ ರಾಯಚೂರು.

1996ರ ಕರ್ನಾಟಕ ಸಿವಿಲ್ ಸೇವಾ (ಅನುಕಂಪದ ಆಧಾರದ ಮೇಲೆ ನೇಮಕ) ನಿಯಮಾವಳಿಯ ನಿಯಮ 3ರ ಮೇರೆಗೆ ಮೃತ ಸರ್ಕಾರಿ ನೌಕರನ ಅವಿವಾಹಿತ ಸಹೋದರಿ, ಪತ್ನಿ, ಮಕ್ಕಳು ಅನುಕಂಪದ ಆಧಾರದ ಮೇಲೆ ನೇಮಕಾತಿ ಹೊಂದಲು ಅರ್ಹರಾಗುತ್ತಾರೆ. ದ್ವಿತೀಯ ದರ್ಜೆ ಸಹಾಯಕರ ಹುದ್ದೆಗೆ ದಿನಾಂಕ 27-1-2015ರ ಸರ್ಕಾರಿ ಸುತ್ತೋಲೆ ಸಂಖ್ಯೆ ಸಿಆಸುಇ 147 ಸೇಆನೇ 2014ರ ಮೇರೆಗೆ ಎಸ್​ಎಸ್​ಎಲ್​ಸಿ ನಂತರ ಪದವಿಪೂರ್ವ ಶಿಕ್ಷಣಕ್ಕೆ (ಪಿಯುಸಿ) ಬದಲಾಗಿ ಐಟಿಐ ಮತ್ತು ಇತರ ಮೂರು ವರ್ಷದ ಡಿಪ್ಲೊಮೊ ಕೋರ್ಸನ್ನು ತತ್ಸಮಾನವೆಂದು ನೇಮಕಾತಿಯಲ್ಲಿ ಪರಿಗಣಿಸಬಹುದಾಗಿದೆ ಆದರೆ ಮುಕ್ತ ವಿಶ್ವವಿದ್ಯಾನಿಲಯಗಳು ನಡೆಸುವ 10+2 ಪರೀಕ್ಷೆಯನ್ನು ಹಾಗೂ ಜೆಒಸಿಯನ್ನು ಪರಿಗಣಿಸಬಾರದೆಂದು ಸ್ಪಷ್ಟಪಡಿಸಿದೆ ಆದುದರಿಂದ ನಿಮ್ಮ ಸಹೋದರಿಯು ಎಸ್​ಡಿಎ ಹುದ್ದೆಗೆ ಅರ್ಹಳಾಗುವುದಿಲ್ಲ.

***

02.08.2017.

ನಾನು ಆಯುಷ್ ಇಲಾಖೆಯಲ್ಲಿ ಅನುಕಂಪದ ಆಧಾರದ ಮೇಲೆ 2016 ರಿಂದ ದ್ವಿತೀಯ ದರ್ಜೆ ಸಹಾಯಕನಾಗಿದ್ದು, ಈಗ ನಾನು ಬೇರೆ ಇಲಾಖೆಗೆ ಹೋಗಬಯಸಿದ್ದೇನೆ. ನನಗೆ ಬೇರೆ ಇಲಾಖೆಗೆ ಶಾಶ್ವತವಾಗಿ ಹೋಗಲು ಅವಕಾಶವಿದೆಯೇ?

|ಆನಂದ ಬೈಲಹೊಂಗಲ.

ಕರ್ನಾಟಕ ಸರ್ಕಾರಿ ಸೇವಾ (ಸಾಮಾನ್ಯ ನೇಮಕಾತಿ) ನಿಯಮಾವಳಿ 1977ರ ನಿಯಮ 16ಎ ಪ್ರಕಾರ ಸಾರ್ವಜನಿಕ ಹಿತದೃಷ್ಟಿಯಿಂದ ಮತ್ತು ಸಕಾರಣಗಳನ್ನು ದಾಖಲಿಸಿ ಸರ್ಕಾರವು ಹೊರಡಿಸುವ ಸಾಮಾನ್ಯ ಯಾವುದೇ ಸೂಚನೆಗಳನ್ನು ಒಳಪಟ್ಟು ಸಿ ಅಥವಾ ಡಿ ಗುಂಪಿನ ನೌಕರರನ್ನು ಒಂದು ಘಟಕದಲ್ಲಿನ ಹುದ್ದೆಯಿಂದ ಇನ್ನೊಂದು ಘಟಕದಲ್ಲಿನ ಅದೇ ಕೇಡರ್​ನ ಹುದ್ದೆಗೆ ವರ್ಗಾವಣೆ ಮೂಲಕ ನೇಮಕ ಮಾಡಬಹುದು. ಇಂತಹ ವರ್ಗಾವಣೆಯು ಸರ್ಕಾರಿ ನೌಕರನು ಸೇವೆಯಲ್ಲಿ ಇರುವಾಗ ಒಂದಕ್ಕಿಂತ ಹೆಚ್ಚು ಸಲ ಮಾಡತಕ್ಕದ್ದಲ್ಲ ಎಂದು ತಿಳಿಸಲಾಗಿದೆ. ನೀವು ಈಗ ಪರಿವೀಕ್ಷಣಾ ಅವಧಿಯಲ್ಲಿ ಇರುವುದರಿಂದ ಈ ಅವಧಿ ಪೂರೈಸಿದ ನಂತರ ನೀವು ಹೋಗಬಯಸುವ ಬೇರೆ ಇಲಾಖೆಯನ್ನು ಸಂರ್ಪಸಿ ವರ್ಗಾವಣೆಯನ್ನು ತತ್ಸಮಾನ ವೇತನ ಶ್ರೇಣಿ ಮತ್ತು ಹುದ್ದೆಗೆ ನಿಯೋಜನೆ ಮೇರೆಗೆ ಅಥವಾ ಶಾಶ್ವತವಾಗಿ ವರ್ಗಾವಣೆಗೊಳ್ಳಬಹುದು.

***

01.08.2017.

ಪ್ರಸ್ತುತ ನಾನು ಬೆಂಗಳೂರು ಜಿಲ್ಲೆಯಲ್ಲಿ 2016 ರಿಂದ ಹಿರಿಯ ಪ್ರಾಥಮಿಕ ಶಾಲಾ ಶಿಕ್ಷಕನಾಗಿದ್ದು, ನನ್ನ ತವರು ಜಿಲ್ಲೆಯಾದ ಚಿತ್ರದುರ್ಗದಲ್ಲಿ ಪ್ರಾಥಮಿಕ ಶಾಲಾ ಶಿಕ್ಷಕರ ಹುದ್ದೆಗೆ ಅರ್ಜಿ ಸಲ್ಲಿಸಬಹುದೇ? ಮೂಲ ವೇತನ ಒಂದೇ ಇದ್ದಂತಹ ಹುದ್ದೆಗೆ ನಿರಾಕ್ಷೇಪಣಾ ಪತ್ರ ನೀಡುತ್ತಾರೆಯೇ?

| ಪ್ರಕಾಶ್ ಬೆಂಗಳೂರು.

ಕರ್ನಾಟಕ ಸರ್ಕಾರಿ ಸೇವಾ (ಸಾಮಾನ್ಯ ನೇಮಕಾತಿ) ನಿಯಮಗಳು 1977ರ ನಿಯಮ 11ರ ರೀತ್ಯ ಸರ್ಕಾರಿ ನೌಕರರು ಬೇರೆ ಹುದ್ದೆಗೆ ಅರ್ಜಿ ಸಲ್ಲಿಸಬೇಕಾದರೆ ನಿರಾಕ್ಷೇಪಣಾ ಪತ್ರ ಪಡೆಯುವುದು ಕಡ್ಡಾಯ. ನೀವು ತತ್ಸಮಾನ ಹುದ್ದೆಯಲ್ಲಿಯೇ ಇರುವುದರಿಂದ ಕರ್ನಾಟಕ ಸರ್ಕಾರಿ ಸೇವಾ (ಶಿಕ್ಷಕರ ವರ್ಗಾವಣೆ) ಅಧಿನಿಯಮ 2007 ಮತ್ತು ನಿಯಮಾವಳಿ 2007ರ ರೀತ್ಯಾ ಸ್ವಂತ ಜಿಲ್ಲೆಗೆ ವರ್ಗಾವಣೆ ಬಯಸಿ ಅರ್ಜಿ ಸಲ್ಲಿಸಬಹುದೇ ವಿನಃ ಅದೇ ಹುದ್ದೆಗೆ ಮತ್ತೆ ಅರ್ಜಿ ಸಲ್ಲಿಸುವುದು ಸೂಕ್ತವಲ್ಲ.

***

31.07.2017.

ನಾನು ಸರ್ಕಾರಿ ನೌಕರ. ಪರಿಶಿಷ್ಟ ಜಾತಿಗೆ ಸೇರಿದ್ದು ಇತ್ತೀಚೆಗೆ ಕೆಪಿಎಸ್​ಸಿಯಿಂದ ಕರೆ ಮಾಡಿರುವ ಕೆಎಎಸ್ ನೇಮಕಾತಿ ಹುದ್ದೆಗೆ ಅರ್ಜಿ ಸಲ್ಲಿಸಿದ್ದೇನೆ. ನನ್ನ ವಯಸ್ಸು ಈಗ 41. ಈ ಹುದ್ದೆಗೆ ವಯೋಮಿತಿ ಆಧಾರದಲ್ಲಿ ಅರ್ಹನಾಗುತ್ತೇನೆಯೇ ಅಥವಾ ಇಲ್ಲವೇ?

| ಮಾರುತಿ ಕಾಂಬ್ಳೆ ಧಾರವಾಡ.

ಸರ್ಕಾರಿ ಆದೇಶ ಸಂಖ್ಯೆ ಡಿಪಿಎಆರ್201 ಸೇಲೋಸೇ.2014 ದಿನಾಂಕ 5-11-2014ರನ್ವಯ ಅರ್ಹರಿರುವ ಎಲ್ಲ ಅಭ್ಯರ್ಥಿಗಳಿಗೆ ಗರಿಷ್ಠ ವಯೋಮಿತಿಯಲ್ಲಿ 2 ವರ್ಷಗಳ ಸಡಿಲಿಕೆ ನೀಡಲಾಗಿದೆ. ಹೀಗಾಗಿರುವುದರಿಂದ ನೀವು ಈ ಕೆಎಎಸ್ ಪರೀಕ್ಷೆ ಬರೆಯಲು ಎಲ್ಲಾ ರೀತಿಯಲ್ಲೂ ಅರ್ಹರಾಗಿರುತ್ತೀರಿ.

***

30.07.2017.

1999ರಿಂದ ಪ್ರೌಢಶಾಲಾ ಶಿಕ್ಷಕನಾಗಿ ಕರ್ತವ್ಯ ನಿರ್ವಹಿಸುತ್ತಿದ್ದೇನೆ. ಪ್ರಸ್ತುತ ಕರ್ನಾಟಕ ವಸತಿ ಶಾಲೆಗಳ ಸಂಘದ ಪ್ರಾಂಶುಪಾಲರ ಹುದ್ದೆಗೆ ಅರ್ಜಿ ಸಲ್ಲಿಸಿದ್ದೇನೆ. ಹಳೆಯ ಪಿಂಚಣಿ ಯೋಜನೆಯಲ್ಲಿದ್ದು, ಪ್ರಾಂಶುಪಾಲರ ಹುದ್ದೆಗೆ ಆಯ್ಕೆಯಾದರೆ ಹಳೆಯ ಪಿಂಚಣಿ ಯೋಜನೆ ಮುಂದುವರಿಯುತ್ತದೆಯೇ?

| ಅಹಮದ್ ಸಾಬಿ ಕಲಬುರ್ಗಿ.

ಕರ್ನಾಟಕ ವಸತಿ ಶಾಲೆಗಳ ಸಂಘದ ಎಲ್ಲ ಹುದ್ದೆಗಳನ್ನೂ ನೂತನ ಪಿಂಚಣಿ ಯೋಜನೆಯ ಹುದ್ದೆಗಳು ಎಂದು ಪರಿಗಣಿಸಲಾಗಿದೆ. ಆದ್ದರಿಂದ ನೀವು ಹೊಸ ಪಿಂಚಣಿ ಯೋಜನೆಗೆ ಸೇರುವುದರಿಂದ ಪ್ರಾಂಶುಪಾಲರಾಗಿ ಆಯ್ಕೆಯಾದರೂ ಹೊಸ ನಿವೃತ್ತಿ ವೇತನ ಯೋಜನೆಗೆ ಸೇರಲಿದ್ದೀರಿ. ಇದರಿಂದ ವೇತನ ಹೆಚ್ಚಾಗುತ್ತದೆ. ಆದರೆ ಹಳೆಯ ಪಿಂಚಣಿ ಸೌಲಭ್ಯ ಲಭ್ಯವಾಗುವುದಿಲ್ಲ.

***

29.07.2017.

ನಾನು 2014-15ನೇ ಸಾಲಿನಲ್ಲಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಶಿಕ್ಷಕನಾಗಿ ನೇಮಕವಾಗಿದ್ದು ಅಂಗೀಕೃತ ವಿಶ್ವವಿದ್ಯಾನಿಲಯಗಳಲ್ಲಿ ದೂರ ಶಿಕ್ಷಣ/ ಅಂಚೆ ತೆರಪಿನ ಪದವಿ ವ್ಯಾಸಂಗ ಮಾಡಲು ಪರೀವಿಕ್ಷಣಾವಧಿ ಮುಗಿದಿರಬೇಕೆಂಬ ನಿಯಮವಿದೆಯೇ? ಮೇಲಾಧಿಕಾರಿಗಳ ಅನುಮತಿ ಅಗತ್ಯವೇ? ಪದವಿ ಪಡೆದ ನಂತರ ಸೇವಾ ಪುಸ್ತಕದಲ್ಲಿ ದಾಖಲಿಸಲು ನಿಯಮವೇನು?

| ಬಿ.ಪರಶುರಾಮ ನಾಯಕ ಬಳ್ಳಾರಿ.

ದಿನಾಂಕ 2.4.2012ರ ಸಾರ್ವಜನಿಕ ಶಿಕ್ಷಣ ಇಲಾಖೆಯ ನಿರ್ದೇಶಕರ (ಪ್ರಾಥಮಿಕ) ಸುತ್ತೋಲೆ ಸಂಖ್ಯೆ ಸಿ 3(4) ಪ್ರಾ.ಶಿ.ಬಾ/ ಅಂಚೆ/11-12ರಂತೆ ಶಾಲಾ ಶಿಕ್ಷಕರು ಬಾಹ್ಯವಾಗಿ, ಅಂಚೆ ತೆರಪಿನ ಮೂಲಕ ಉನ್ನತ ವ್ಯಾಸಂಗ ಮಾಡಲು ಅನುಮತಿ ಅಗತ್ಯವಿಲ್ಲ. ಪರಿವೀಕ್ಷಣಾವಧಿ ಮುಗಿದಿರಬೇಕೆಂಬ ನಿಬಂಧವಿಲ್ಲ. ಅಲ್ಲದೆ ಪದವಿಯ ನೈಜತೆ ಖಾತರರಿಪಡಿಸಿಕೊಂಡ ನಂತರ ಸೇವಾ ಪುಸ್ತಕದಲ್ಲಿ ವಿವರ ದಾಖಲಿಸಬಹುದು. ಪರೀಕ್ಷಾರ್ಥ ಅವಧಿ ಮುಗಿದ ಮೇಲೆ ಜ್ಯೇಷ್ಠತೆಗೆ, ಪದೋನ್ನತಿಗೆ ಪರಿಗಣಿಸಬಹುದು.

***

28.07.2017.

ನಾನು ಈ ಹಿಂದೆ ನ್ಯಾಯಾಂಗ ಇಲಾಖೆಯಲ್ಲಿದ್ದಾಗ ಅಕೌಂಟ್ಸ್ ಹೈಯರ್, ಜನರಲ್ ಲಾ ಇಲಾಖಾ ಪರೀಕ್ಷೆಗಳನ್ನು ಪಾಸುಮಾಡಿಕೊಂಡಿದ್ದು, ಪ್ರಸ್ತುತ ತಾಂತ್ರಿಕ ಶಿಕ್ಷಣ ಇಲಾಖೆಗೆ ಪ್ರಥಮ ದರ್ಜೆಸಹಾಯಕನಾಗಿದ್ದೇನೆ. ಮತ್ತೆ ನಾನು ಇಲಾಖಾ ಪರೀಕ್ಷೆಯಲ್ಲಿ ತೇರ್ಗಡೆಯಾಗಬೇಕೆ?

|ಶಿವಕುಮಾರ ಬೀದರ.

ಕರ್ನಾಟಕ ಸರ್ಕಾರಿ ಸೇವಾ (ಸೇವಾ ಮತ್ತು ಕನ್ನಡ ಭಾಷಾ ಪರೀಕ್ಷೆಗಳು) ನಿಯಮಗಳು 1974ರ ನಿಯಮ 3 ರಂತೆ ಪ್ರತಿಯೊಬ್ಬ ಸರ್ಕಾರಿ ನೌಕರನು ಇಲಾಖಾ ಪರೀಕ್ಷೆಗಳನ್ನು ತೇರ್ಗಡೆಯಾಗಬೇಕಾಗುವುದು ಕಡ್ಡಾಯವಾಗಿದ್ದು, ನೀವು ಈ ಹಿಂದೆ ನ್ಯಾಯಾಂಗ ಇಲಾಖೆಯಲ್ಲಿ ಇಲಾಖಾ ಪರೀಕ್ಷೆಗಳಲ್ಲಿ ತೇರ್ಗಡೆಯಾಗಿರುವುದರಿಂದ ಮತ್ತೆ ಪರೀಕ್ಷೆ ಬರೆಯಬೇಕಾದ ಅವಶ್ಯಕತೆ ಇಲ್ಲ. ಆದರೆ ಹೊಸ ಹುದ್ದೆಗೆ ಲಗತ್ತಾದ ಬೇರೆ ಯಾವುದೇ ಇಲಾಖಾ ಪರ ಪರೀಕ್ಷೆಯನ್ನು ನಿಗದಿಪಡಿಸಿದ್ದರೆ ತೇರ್ಗಡೆಯಾಗುವುದು ಕಡ್ಡಾಯವಾಗುತ್ತದೆ.

***

27.07.2017.

ಪ್ರಸ್ತುತ ನಾನು ಗ್ರೇಡ್-2 ತಹಸೀಲ್ದಾರ್ ಆಗಿದ್ದು, ಪ್ರಥಮ ದರ್ಜೆ ಸಹಾಯಕನಾಗಿದ್ದಾಗ ಹತ್ತು ವರ್ಷಗಳ ಕಾಲಮಿತಿ ಬಡ್ತಿ ಪಡೆದಿದ್ದೇನೆ. ಶಿರಸ್ತೇದಾರ್ ಹುದ್ದೆಯಲ್ಲಿ ಹತ್ತು ವರ್ಷ, ತಹಸೀಲ್ದಾರ್ ಗ್ರೇಡ್ 2 ಹುದ್ದೆಯಲ್ಲಿ ಹತ್ತು ವರ್ಷ ಸೇವೆ ಸಲ್ಲಿಸಿದ್ದು, ಮತ್ತೊಮ್ಮೆ ಕಾಲಮಿತಿ ವೇತನ ಬಡ್ತಿ ಪಡೆಯಲು ಅರ್ಹನೆ?

| ಟಿ. ದಿವಾಕರ ರೆಡ್ಡಿ ದಾವಣಗೆರೆ.

ಕರ್ನಾಟಕ ಸರ್ಕಾರಿ ಸೇವಾ (ಕಾಲಬದ್ಧ ಮುಂಬಡ್ತಿ ನಿಯಮಗಳು) 1983ರ ನಿಯಮ 3 ರಂತೆ 10 ವರ್ಷ ಒಂದೇ ಹುದ್ದೆಯಲ್ಲಿದ್ದರೆ ಕಾಲಬದ್ಧ ಬಡ್ತಿಯನ್ನು ಪಡೆಯಬಹುದು. ಆದರೆ ನೀವು ಈಗಾಗಲೇ ತಹಸೀಲ್ದಾರ್ ಗ್ರೇಡ್ ಹುದ್ದೆಯಲ್ಲಿ ಹತ್ತು ವರ್ಷ ಸೇವೆ ಸಲ್ಲಿಸಿರುವುದರಿಂದ ಹಾಗೂ ಪ್ರಥಮದರ್ಜೆ ಸಹಾಯಕರ ಹುದ್ದೆಯಲ್ಲಿ ಈ ಕಾಲಮಿತಿ ಬಡ್ತಿಯನ್ನು ಪಡೆಯದಿರುವುದರಿಂದ ಮತ್ತೊಮ್ಮೆ ಪಡೆಯಲು ಸಾಧ್ಯವಿಲ್ಲ. ಹೆಚ್ಚಿನ ವಿವರಗಳಿಗೆ ಲ. ರಾಘವೇಂದ್ರ ಅವರು ಕರ್ನಾಟಕ ಸರ್ಕಾರಿ ಸೇವಾ ನಿಯಮಗಳು ಪುಸ್ತಕವನ್ನು ನೋಡಿ.

***

26.07.2017.

ಉದ್ಯೋಗ ಮತ್ತು ತರಬೇತಿ ಇಲಾಖೆಯಲ್ಲಿ ಕಿರಿಯ ತರಬೇತಿ ಅಧಿಕಾರಿಯಾಗಿ 2003ರಿಂದ ಕರ್ತವ್ಯ ನಿರ್ವಹಿಸುತ್ತಿದ್ದೇನೆ. ಮುಕ್ತ ವಿಶ್ವವಿದ್ಯಾನಿಲಯದಿಂದ ಬಿ.ಕಾಂ., ಪದವಿ ಪಡೆದಿದ್ದೇನೆ. ಸದ್ಯ ಹುದ್ದೆಯಲ್ಲಿ ಬದಲಾವಣೆ ಮಾಡಿಕೊಳ್ಳಲು ಇಚ್ಛಿಸಿದ್ದು, ಹೇಗೆ ಮುಂದುವರಿಯಬೇಕು?

| ರಾಜಶೇಖರ್ ದಗ್ಗಿ ಬೆಳಗಾವಿ.

ಕರ್ನಾಟಕ ಸರ್ಕಾರಿ ಸೇವಾ (ಸಾಮಾನ್ಯ ನೇಮಕಾತಿ) ನಿಯಮಗಳು 1977ರ ನಿಯಮ 16 ರಂತೆ ನಿಮ್ಮ ಸಮಾನ ವೇತನ ಶ್ರೇಣಿಯ ಹುದ್ದೆಗೆ ಸಕ್ಷಮ ಪ್ರಾಧಿಕಾರದ ಅನುಮತಿ ಮೇರೆಗೆ ಬದಲಾವಣೆ ಮಾಡಿಕೊಳ್ಳಬಹುದಾಗಿದೆ. ಈ ಬಗ್ಗೆ ನೀವು ಈ ನಿಯಮಾವಳಿ ರೀತ್ಯ ಮಾನ್ಯತೆ ಪಡೆದಿರುವುದರಿಂದ ಪದವಿ ಪತ್ರದೊಂದಿಗೆ ಅರ್ಜಿ ಸಲ್ಲಿಸಬಹುದು.

***

25.07.2017.

ನಾನು ನೇರ ನೇಮಕಾತಿಯಲ್ಲಿ ಶುಶ್ರೂಷಕಿಯಾಗಿ ಆಯ್ಕೆಯಾದಾಗ 9 ತಿಂಗಳ ಗರ್ಭಿಣಿಯಾಗಿದ್ದೆ. ಆದೇಶ ಪತ್ರದಲ್ಲಿ ತಿಳಿಸಿದಂತೆ ಹೆರಿಗೆಯಾದ ಆರು ವಾರಗಳ ನಂತರ ಕರ್ತವ್ಯಕ್ಕೆ ವರದಿ ಮಾಡಿಕೊಂಡೆ. ಆದರೆ ಮಗು 4 ತಿಂಗಳ ಹಸುಗೂಸಾಗಿರುವುದರಿಂದ ಮಗುವಿನ ಆರೈಕೆಗಾಗಿ ಪ್ರತಿದಿನ ನನ್ನ ಕಚೇರಿಗೆ ಕರೆದುಕೊಂಡು ಹೋಗಬೇಕಾಗಿದೆ. ನನಗೆ ಹೆರಿಗೆ ರಜೆ ಪಡೆಯಲು ಹಕ್ಕಿದೆಯೆ?

| ಆಶಾ ಎಸ್. ಅವಧಾನಿ ಕೊಪ್ಪಳ.

ಕರ್ನಾಟಕ ಸರ್ಕಾರಿ ಸೇವಾ ನಿಯಮಾವಳಿಯ ನಿಯಮ 135ರಂತೆ ಮಹಿಳಾ ಸರ್ಕಾರಿ ನೌಕರಳಿಗೆ ಎರಡು ಜೀವ ಮಗು ಇರುವವರೆಗೆ ಎರಡು ಬಾರಿ ತಲಾ 180 ದಿನಗಳ ಹೆರಿಗೆ ರಜೆಯನ್ನು ಮಂಜೂರು ಮಾಡಲು ಅವಕಾಶವಿರುತ್ತದೆ. ಆದರೆ ನೀವು ಸರ್ಕಾರಿ ಸೇವೆಗೆ ಸೇರುವ ಮೊದಲೇ ಮಗುವಿನ ಹೆರಿಗೆ ಆಗಿರುವುದರಿಂದ ನಿಮಗೆ ಈ ಸೌಲಭ್ಯ ಲಭ್ಯವಾಗುವುದಿಲ್ಲ. ಆದುದರಿಂದ ನೀವು ನಿಮ್ಮ ಮಗುವಿನ ಆರೈಕೆಗೆ ನಿಮ್ಮ ಖಾತೆಯಲ್ಲಿನ ರಜೆಯನ್ನು ಬಳಸಿಕೊಳ್ಳಬಹುದು ಅಥವಾ ಅಸಾಧಾರಣ ರಜೆಯನ್ನು ಇದಕ್ಕಾಗಿ ಪಡೆಯಬಹುದು.

***

[8 24.07.2017.

ನಾನು 1990ರಿಂದ ಪ್ರಾಥಮಿಕ ಶಾಲಾ ಶಿಕ್ಷಕನಾಗಿದ್ದು, ನನಗೀಗ ಮುಖ್ಯೋಪಾಧ್ಯಾಯರ ಪದೋನ್ನತಿ ಲಭ್ಯವಾಗಿದೆ. ನನ್ನ ಮೂಲ ವೇತನ 24,600. ಆದರೆ ನನ್ನ ಜತೆ ಸೇರಿದವರು, ಅಂತರ್ ಜಿಲ್ಲೆಯಿಂದ ವರ್ಗವಾಗಿ ಬಂದವರು 25,300 ಮೂಲವೇತನ ಪಡೆಯುತ್ತಿದ್ದಾರೆ. ಅಲ್ಲದೆ 2014ರಲ್ಲಿ ಬಡ್ತಿ ಪಡೆದವರೂ ಸಹ 26,000 ಮೂಲ ವೇತನ ಪಡೆಯುತ್ತಿದ್ದಾರೆ. ನನಗಿಂತ ಕಿರಿಯರಾದ ಇವರು ಸರಿಸಮಾನವಾದ ವೇತನ ಪಡೆಯಲು ಅವಕಾಶವಿದೆಯೇ.

|ಕೆ. ಸುಂಕದ ಹಿರೇಕೆರೂರು ಧಾರವಾಡ.

ದಿನಾಂಕ 28-5-2005ರ ಸರ್ಕಾರಿ ಆದೇಶ ಸಂಖ್ಯೆ ಎಫ್​ಡಿ 27 ಎಸ್​ಆರ್​ಪಿ 2005(2) ರಂತೆ ಸರ್ಕಾರಿ ನೌಕರನ ವೇತನ ತಾರತಮ್ಯದ ಬಗ್ಗೆ ತಿಳಿಸಿದ್ದು ಅವರು ಅವನಿಗಿಂತ ಕಿರಿಯ ನೌಕರರಿಗಿಂತ ಕಡಿಮೆ ವೇತನ ಪಡೆಯುತ್ತಿದ್ದರೆ ಈ ತಾರತಮ್ಯವನ್ನು ಹೋಗಲಾಡಿಸಲು ಆದೇಶಿಸಲಾಗಿರುತ್ತದೆ. ಆದುದರಿಂದ ನೀವು ಈ ಆದೇಶದ ಚೌಕಟ್ಟಿನಲ್ಲಿ ನಿಮ್ಮ ಕಿರಿಯ ಸಹೋದ್ಯೋಗಿಯು ಪಡೆಯುತ್ತಿರುವ ವೇತನಕ್ಕೆ ತತ್ಸಮಾನಗೊಳಿಸಲು ಕೋರಿ ಸಕ್ಷಮ ಪ್ರಾಧಿಕಾರಕ್ಕೆ ಅರ್ಜಿಸಲ್ಲಿಸಬಹುದು.

***

23.07.2017.

ನನ್ನ ಸಹೋದರಿ ಸರ್ಕಾರಿ ಪ್ರೌಢಶಾಲಾ ಶಿಕ್ಷಕಿಯಾಗಿದ್ದು, ಈ ಹುದ್ದೆಗೆ ಸೇರುವ ಮೊದಲೇ ಕೆಪಿಎಸ್ಸಿ ಕರೆ ಮಾಡಿದ್ದ ಪ್ರಥಮ ದರ್ಜೆ ಸಹಾಯಕರ ಹುದ್ದೆಗೂ ಸಹ ಅರ್ಜಿ ಸಲ್ಲಿಸಿದ್ದಳು. ಈಗ ಆಕೆ ಪ್ರಥಮ ದರ್ಜೆ ಸಹಾಯಕಕಳಾಗಿ ಆಯ್ಕೆಯಾಗಿದ್ದು ಪ್ರೌಢಶಾಲಾ ಶಿಕ್ಷಕರ ಹುದ್ದೆಗೆ ರಾಜಿನಾಮ ಸಲ್ಲಿಸಿ ಹೋಗಬೇಕೆಂದು ಮೇಲಧಿಕಾರಿಗಳು ಸೂಚಿಸುತ್ತಿದ್ದಾರೆ. ಇವಳ ಹಿಂದಿನ ಸೇವೆಯು ಪ್ರಥಮದರ್ಜೆ ಸಹಾಯಕರ ಹುದ್ದೆಯಲ್ಲಿ ಮುಂದುವರೆಯುತ್ತದೆಯೇ ಅಥವಾ ಶಿಕ್ಷಕಿ ಹುದ್ದೆಗೆ ರಾಜೀನಾಮೆ ನೀಡಬೇಕೇ?

|ಬಸವರಾಜ್ ಕೋಡಿ ಧಾರವಾಡ.

ಕರ್ನಾಟಕ ಸರ್ಕಾರಿ ಸೇವಾ (ಸಾಮಾನ್ಯ ನೇಮಕಾತಿ) ನಿಯಮಗಳು 1977ರ ನಿಯಮ 11ರಂತೆ ಸರ್ಕಾರಿ ಸೇವೆಯಲ್ಲಿರುವ ನೌಕರರು ಬೇರೆ ಹುದ್ದೆಗೆ ಅರ್ಜಿ ಸಲ್ಲಿಸಬೇಕಾದರೆ ಪೂರ್ವಾನುಮತಿ ಪಡೆಯಬೇಕಾಗುತ್ತದೆ. ಆದರೆ ಸಹೋದರಿಯು ಸರ್ಕಾರಿ ಸೇವೆಯಲ್ಲಿ ಇಲ್ಲದೆ ಇದ್ದುದರಿಂದ ನೀವು ಕರ್ನಾಟಕ ಸರ್ಕಾರಿ ಸೇವಾ ನಿಯಮಾವಳಿಯ 252 (ಬಿ) ರಂತೆ ರಾಜೀನಾಮೆ ಸಲ್ಲಿಸಿ ಇದೇ ನಿಯಮದಂತೆ ಬಿಡುಗಡೆಗೊಂಡು ಮಾರನೆ ದಿವಸ ಹೊಸ ಹುದ್ದೆಗೆ ಹಾಜರಾದರೆ ಇಂದಿನ ಸೇವೆಯೂ ಪರಿಗಣಿತವಾಗುತ್ತದೆ. ನೇಮಕಾತಿ ಪ್ರಾಧಿಕಾರಗಳಿಗೆ ಸರ್ಕಾರವು ನೌಕರರ ಹಿಂದಿನ ಸೇವೆಯನ್ನು ಪರಿಗಣಿಸಲು ಆಡಳಿತಾತ್ಮಕವಾದ ಅಧಿಕಾರಗಳನ್ನು ನೀಡಿದೆ. ಆದುದರಿಂದ ಹೊಸ ಹುದ್ದೆಗೆ ಸೇರಿದ ಮೇಲೆ ಕರ್ನಾಟಕ ಸರ್ಕಾರಿ ಸೇವಾ ನಿಯಮಾವಳಿಯ ನಿಯಮ 224(ಬಿ) ಪ್ರಕಾರ ಹಿಂದಿನ ಸೇವೆಯನ್ನು ಪರಿಗಣಿಸಲು ವಿನಂತಿಸಬಹುದು.

***

22.07.2017.

ನಾನು ಎಸ್​ಎಸ್​ಎಲ್​ಸಿವರೆಗೆ ಕನ್ನಡ ಮಾಧ್ಯಮದಲ್ಲೇ ವ್ಯಾಸಂಗ ಮಾಡಿದ್ದು, 2015ರ ಏಪ್ರಿಲ್​ನಲ್ಲಿ ದ್ವಿತೀಯ ದರ್ಜೆ ಸಹಾಯಕನಾಗಿ ಸರ್ಕಾರಿ ಸೇವೆಗೆ ಸೇರಿರುತ್ತೇನೆ. ನಾನು ಪ್ರೌಢಶಾಲೆಯಲ್ಲಿ ಪ್ರಥಮಭಾಷೆಯಾಗಿ ಸಂಸ್ಕೃತ, ದ್ವಿತೀಯ ಭಾಷೆಯಾಗಿ ಇಂಗ್ಲೀಷ್, ತೃತೀಯ ಭಾಷೆಯಾಗಿ ಕನ್ನಡವನ್ನು ಓದಿರುತ್ತೇನೆ ನಮ್ಮ ಕಚೇರಿಯಲ್ಲಿ ಇಲಾಖಾ ಪರೀಕ್ಷೆಗೆ ಹಾಜರಾಗಬೇಕೆಂದು ಸೂಚಿಸುತ್ತಿದ್ದಾರೆ. ಅಲ್ಲದೆ ನಾನು ಕನ್ನಡ ಭಾಷಾ ಪರೀಕ್ಷೆಯಲ್ಲಿ ತೇರ್ಗಡೆಯಾದ ಮೇಲೆ ಎರಡನೇ ವಾರ್ಷಿಕ ವೇತನ ಬಡ್ತಿ ಹಾಗೂ ಪ್ರೊಬೆಶನರಿ ಅವಧಿಯನ್ನು ಘೊಷಿಸಲಾಗುವುದೆಂದು ತಿಳಿಸುತ್ತಿದ್ದಾರೆ. ನನಗೆ ಇಲಾಖಾ ಕನ್ನಡ ಭಾಷಾ ಪರೀಕ್ಷೆಯಲ್ಲಿ ವಿನಾಯಿತಿ ಇದೆಯೆ?

| ಶ್ರೀಕಾಂತ್ ಎಸ್. ಕುಲಕರ್ಣಿ ಹುಬ್ಬಳ್ಳಿ.

ಕರ್ನಾಟಕ ಸರ್ಕಾರಿ ಸೇವಾ (ಸೇವಾ ಮತ್ತು ಕನ್ನಡ ಭಾಷಾ ಪರೀಕ್ಷೆಗಳು) (ನಿಯಮಗಳು 1974ರ ನಿಯಮ 5ರಲ್ಲಿ ಸರ್ಕಾರಿ ನೌಕರನು ಕನ್ನಡವನ್ನು ಮುಖ್ಯ ಭಾಷೆಯಾಗಿ ಅಥವಾ ದ್ವಿತೀಯ ಭಾಷೆಯಾಗಿ ಓದದಿದ್ದರೂ ಕನ್ನಡ ಮಾಧ್ಯಮದಲ್ಲಿ ಓದಿದ್ದರೆ ಅಂತಹವರಿಗೆ ನೇಮಕ ಪ್ರಾಧಿಕಾರವು ವಿನಾಯಿತಿ ನೀಡಬಹುದೆಂದು ಸೂಚಿಸಲಾಗಿದೆ. ಆದುದರಿಂದ ನೀವು ಕನ್ನಡ ಮಾಧ್ಯಮದಲ್ಲಿ ಓದಿರುವುದರಿಂದ ನಿಮಗೆ ಕನ್ನಡ ಭಾಷಾ ಪರೀಕ್ಷೆಯಲ್ಲಿ ವಿನಾಯಿತಿ ದೊರಕುತ್ತದೆ. ಹೆಚ್ಚಿನ ಲ. ರಾಘವೇಂದ್ರ ಕರ್ನಾಟಕ ಸರ್ಕಾರಿ ಸೇವಾ ಕಾನೂನು ಕೈಪಿಡಿ ಕೃತಿಯನ್ನು ನೋಡಬಹುದು.

***

21.07.2017.

ನಾನು ಸರ್ಕಾರಿ ಪ್ರೌಢಶಾಲಾ ಶಿಕ್ಷಕನಾಗಿದ್ದು, 2 ಮಕ್ಕಳಾದ ನಂತರ ಸಂತಾನ ಶಕ್ತಿಹರಣ ಶಸ್ತ್ರಚಿಕಿತ್ಸೆ ಮಾಡಿಸಿಕೊಂಡಿರುತ್ತೇನೆ. ಸರ್ಕಾರವು ನೀಡುವ ಉತ್ತೇಜನದಾಯಕ ವೇತನ ಬಡ್ತಿಯನ್ನು ನಮ್ಮ ಮುಖ್ಯೋಪಾಧ್ಯಾಯರನ್ನು ನೇರವಾಗಿ ಮಂಜೂರು ಮಾಡಬಹುದೇ ಅಥವಾ ಬೇರೆ ವಿಧಾನ ಇದೆಯೇ?

| ಎಸ್.ಆರ್. ಕಂಬಾರ ಗೋಕಾಕ.

ದಿನಾಂಕ 1-10-1985ರ ಸರ್ಕಾರಿ ಆದೇಶ ಸಂಖ್ಯೆ ಎಫ್​ಡಿ 27 ಎಸ್​ಆರ್​ಎಸ್ 85ರಂತೆ ಸಂತಾನ ಶಕ್ತಿಹರಣ ಶಸ್ತ್ರಚಿಕಿತ್ಸೆಯನ್ನು ಸರ್ಕಾರಿ ಆಸ್ಪತ್ರೆ ಅಥವಾ ನಗರಪಾಲಿಕೆ ನಡೆಸುವ ಆಸ್ಪತ್ರೆಯಿಂದ ಮಾಡಿಸಿರಬೇಕು. ಅಂತಹ ಶಸ್ತ್ರಚಿಕಿತ್ಸೆಯನ್ನು ನಮೂನೆ 1ರಲ್ಲಿ ನಮೂದಿಸಿದಂತೆ ಪ್ರಮಾಣ ಪತ್ರವನ್ನು ಪಡೆದು ಸಲ್ಲಿಸಬೇಕು. ನಮೂನೆ 2ರಲ್ಲಿ ಮುಚ್ಚೋಲೆಯನ್ನು ನೀಡಬೇಕು. ಸಂತಾನ ಶಕ್ತಿಹರಣ ಚಿಕಿತ್ಸೆ ಮಾಡಿಸಿಕೊಂಡ 2 ವರ್ಷದೊಳಗೆ ನಿಮಗೆ ವಾರ್ಷಿಕ ವೇತನ ಬಡ್ತಿಯನ್ನು ಮಂಜೂರು ಮಾಡುವ ಸಕ್ಷಮ ಅಧಿಕಾರಿಗೆ ಅಥವಾ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕರಿಗೆ ಸಲ್ಲಿಸಬೇಕು. ಶಸ್ತ್ರಚಿಕಿತ್ಸೆಯ ದಿನಾಂಕದಂದು ಸರ್ಕಾರಿ ನೌಕರನು ಅವನ ವೇತನ ಶ್ರೇಣಿಯಲ್ಲಿ ಪಡೆಯುತ್ತಿದ್ದ ವಾರ್ಷಿಕ ವೇತನಬಡ್ತಿಯ ಪ್ರಮಾಣದಷ್ಟು ವೈಯುಕ್ತಿಕ ವೇತನವಾಗಿ ಈ ಕುಟುಂಬ ಯೋಜನೆ ಅನುಸರಣಕ್ಕೆ ನಿವೃತ್ತಿ ವರೆವಿಗೂ ನೀಡಲಾಗುವುದು.

***

 20.07.2017.

ನಾನು ದಿನಾಂಕ 2004 ಮಾರ್ಚ್ 31ರಿಂದ ಪ್ರಾಥಮಿಕ ಶಾಲಾ ಶಿಕ್ಷಕನಾಗಿದ್ದು, ಆ ಹುದ್ದೆಯಲ್ಲಿ ಹತ್ತು ವರ್ಷದ ಕಾಲಮಿತಿ ಬಡ್ತಿಯನ್ನು ಪಡೆದಿರುತ್ತೇನೆ. ಇಲಾಖಾ ಅನುಮತಿ ಪಡೆದು ಹಿರಿಯ ಪ್ರಾಥಮಿಕ ಶಾಲಾ ಶಿಕ್ಷಕನಾಗಿ (6-8) 2016ರ ಏಪ್ರಿಲ್​ನಲ್ಲಿ ನೇಮಕಾತಿ ಹೊಂದಿರುತ್ತೇನೆ. ಈ ಹುದ್ದೆಯಲ್ಲಿ ನನಗೆ 15 ವರ್ಷದ ಕಾಲಮಿತಿ ಬಡ್ತಿ ದೊರೆಯುವುದೇ?
|ಪರಶುರಾಮ್ ಮೇಲೆಸರ್ ಜಿ, ವಿಜಯಪುರ
ಕರ್ನಾಟಕ ಸರ್ಕಾರಿ ಸೇವಾ (ಹಿರಿಯ ವೇತನ ಶ್ರೇಣಿಗೆ) ಸ್ವಯಂಚಾಲಿತ ಬಡ್ತಿ (ನಿಯಮಗಳು) 1991ರ ನಿಯಮ 3ರ ಮೇರೆಗೆ ಒಂದೇ ಹುದ್ದೆಯಲ್ಲಿ ನಿರಂತರವಾಗಿ ಒಂದೂ ಪದೋನ್ನತಿ ಪಡೆಯದೆ 15 ವರ್ಷ ಸೇವೆ ಸಲ್ಲಿಸಿದರೆ ಸೇವಾವಧಿಯಲ್ಲಿ 15 ವರ್ಷಗಳ ಸ್ವಯಂಚಾಲಿತ ಹಿರಿಯ ವೇತನ ಶ್ರೇಣಿಗೆ ವೇತನಬಡ್ತಿಯನ್ನು ನೀಡಬೇಕೆಂದು ಸೂಚಿಸಲಾಗಿದೆ. ಆದುದರಿಂದ ನಿಮಗೆ ಈ ಹುದ್ದೆಯಲ್ಲಿ 15 ವರ್ಷ ಸಲ್ಲಿಸಿದ ಮೇಲೆ ನೀವು ಒಂದೂ ಪದೋನ್ನತಿಯನ್ನು ಪಡೆಯದಿದ್ದರೆ ಸ್ವಯಂಚಾಲಿತ ವೇತನ ಬಡ್ತಿ ಸೌಲಭ್ಯವನ್ನು ಪಡೆಯಬಹುದು.

***

19.07.2017.

ನಾನು ಆರೋಗ್ಯ ಇಲಾಖೆಯಲ್ಲಿ ಕಳೆದ 9 ವರ್ಷಗಳಿಂದ ವೈದ್ಯಕೀಯ ಪ್ರಯೋಗಶಾಲಾ ತಂತ್ರಜ್ಞನಾಗಿ ಕೆಲಸ ಮಾಡುತ್ತಿದ್ದು, ತಮಿಳುನಾಡಿನ ವಿನಾಯಕ ಮಿಷನ್ ವಿಶ್ವವಿದ್ಯಾನಿಲಯದ ಮೂಲಕ ಬಿ.ಎಸ್ಸಿ., (ವೈದ್ಯಕೀಯ) ಪ್ರಯೋಗಾಲಯ ತಂತ್ರಜ್ಞಾನದ ಪದವಿಯನ್ನು ಪಡೆದಿರುತ್ತಾರೆ. ಈ ಪದವಿಯಿಂದ ಕೆಎಎಸ್ ಪರೀಕ್ಷೆಗೆ ಅರ್ಜಿ ಸಲ್ಲಿಸಬಹುದೇ?
|ಸತೀಶ್ ಕುಮಾರ್ ಎನ್.ಆರ್. ಬೆಳಗಾಂವಿ
ಕರ್ನಾಟಕ ಗೆಜೆಟೆಡ್ ಪ್ರೊಬೆಷನರಿ (ಸ್ಪರ್ಧಾತ್ಮಕ ) ಪರೀಕ್ಷೆ ಮೂಲಕ ನೇರನೇಮಕಾತಿ ನಿಯಮಗಳು ನಿಯಮ 1997 ಅಂಗೀಕೃತ ವಿಶ್ವವಿದ್ಯಾನಿಲಯದ ಸ್ನಾತಕ ಪದವಿಯನ್ನು ಅಥವಾ ಸ್ನಾತಕೋತ್ತರ ಪದವಿಯನ್ನು ಪಡೆದವರು ಮಾತ್ರ ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ. ನೀವು ತೇರ್ಗಡೆಯಾಗಿರುವ ವಿಶ್ವವಿದ್ಯಾನಿಲಯದ ಪದವಿಯು ಯುಜಿಸಿಯಿಂದ ಮಾನ್ಯತೆ ಪಡೆದಿದ್ದರೆ ನೀವು ಅರ್ಜಿ ಸಲ್ಲಿಸಬಹುದು. ಇಲ್ಲದೆ ಹೋದರೆ ನೀವು ಸಾಮಾನ್ಯ ಪದವಿಯನ್ನು ಪಡೆದು ಕೆಎಎಸ್ ಸ್ಪರ್ಧಾತ್ಮಕ ಪರೀಕ್ಷೆಗೆ ಅರ್ಜಿಯನ್ನು ಸಲ್ಲಿಸಿ ಪರೀಕ್ಷೆ ಬರೆಯಬಹುದು.

***

18.07.2017.

ಎಂಟು ವರ್ಷ ಪ್ರಾಥಮಿಕ ಶಾಲಾ ಶಿಕ್ಷಕನಾಗಿದ್ದ ನಾನು, ಇಲಾಖೆಯ ನಿಯೋಜನೆ ಮೇರೆಗೆ ಮೂರು ವರ್ಷದ ಬಿ.ಎಸ್ಸಿ ಪದವಿ ಪೂರೈಸಿ ಕ್ಷೇತ್ರಾಭಿವೃದ್ಧಿ ಅಧಿಕಾರಿಗಳ ಕಚೇರಿಗೆ 2017ರ ಮೇ 1ರಂದು ಕರ್ತವ್ಯಕ್ಕೆ ವರದಿ ಮಾಡಿಕೊಂಡೆ. ಮೇ 16ರಂದು ಸ್ಥಳ ನಿಯುಕ್ತಿಗೊಳಿಸಿದ ಪ್ರಾಥಮಿಕ ಶಾಲೆಗೆ ಕೆಲಸಕ್ಕೆ ಹಾಜರಾದೆ. ಕ್ಷೇತ್ರಾಭಿವೃದ್ಧಿ ಅಧಿಕಾರಿಗಳು ಮೇ 1ರಿಂದ 31ರವರೆಗೆ ಗಳಿಕೆ ರಜೆ ಅರ್ಜಿ ನೀಡಲು ಸೂಚಿಸಿದ್ದಾರೆ. ಇದು ನನ್ನ ಕರ್ತವ್ಯದ ಅವಧಿಯಲ್ಲವೇ? ರಜೆ ಅರ್ಜಿ ನೀಡಬೇಕೆ?
| ಬಿ. ಶಿವಮೂರ್ತಿ ಚಿತ್ರದುರ್ಗ
ಕರ್ನಾಟಕ ಸರ್ಕಾರಿ ಸೇವಾ ನಿಯಮಾವಳಿಯ ನಿಯಮ 8(15) (ಎಫ್) ರೀತ್ಯಾ ಸರ್ಕಾರದ ಅಧೀನದಲ್ಲಿರುವ ಯಾವುದೇ ಹುದ್ದೆಯಿಂದ ಬಿಡುಗಡೆಯಾದ ಬಳಿಕ ಅಥವಾ ತರಬೇತಿಯಿಂದ ಬಿಡುಗಡೆಯಾದ ಬಳಿಕ ಅಥವಾ ತರಬೇತಿಯಿಂದ ಅಥವಾ ಪ್ರತಿನಿಯೋಜನೆಯಿಂದ ಹಿಂದಿರುಗಿದ ಮೇಲೆ ಸ್ಥಳ ನಿಯುಕ್ತಿ ನೀಡುವವರೆಗಿನ ಅವಧಿಯನ್ನು ಕಡ್ಡಾಯ ನಿರೀಕ್ಷಣಾ ಅವಧಿ (ಇಟಞಟ್ಠ್ಝಟ್ಟಢ ಡಿಚಜಿಠಿಜ್ಞಿಜ ಟಛ್ಟಿಜಿಟಛ) ಎಂದು ಪರಿಗಣಿಸಲು ಸೂಚಿಸಿದೆ. ಆದ್ದರಿಂದ ರಜೆ ಅರ್ಜಿ ಸಲ್ಲಿಸದೇ ಕ್ಷೇತ್ರಾಭಿವೃದ್ಧಿ ಅಧಿಕಾರಿಗಳಿಗೆ ಈ ನಿಯಮದಂತೆ ಕಡ್ಡಾಯ ನಿರೀಕ್ಷಣಾ ಅವಧಿ ಎಂದು ಪರಿಗಣಿಸಲು ವಿನಂತಿಸಬಹುದು. ಇದು ಕರ್ತವ್ಯದ ಅವಧಿಯಾಗಿದೆ.

***

 17.07.2017.

ದ್ವಿತೀಯ ದರ್ಜೆ ಸಹಾಯಕನಾಗಿ ಈಚೆಗೆ ನೇಮಕಗೊಂಡಿದ್ದೇನೆ. ನೇಮಕಾತಿ ಪತ್ರದಲ್ಲಿ ಇಲಾಖಾ ಪರೀಕ್ಷೆಗಳೊಂದಿಗೆ ಕಂಪ್ಯೂಟರ್ ಸಾಕ್ಷರತಾ ಪರೀಕ್ಷೆಯನ್ನೂ ಪಾಸು ಮಾಡಬೇಕೆಂದು ಸೂಚಿಸಲಾಗಿದೆ. ಈ ಪರೀಕ್ಷೆಯನ್ನು ಯಾರು ನಡೆಸುತ್ತಾರೆ ಮತ್ತು ಎಷ್ಟು ಅಂಕಗಳಿಸಬೇಕು?
| ಹೇಮಂತ್ ಕುಮಾರ್ ಮೈಸೂರು
ಕರ್ನಾಟಕ ಸಿವಿಲ್ ಸೇವಾ (ಕಂಪ್ಯೂಟರ್ ಸಾಕ್ಷರತಾ ಪರೀಕ್ಷೆ ) ನಿಯಮಗಳು 2012ರ ನಿಯಮ 2 ರಂತೆ ದಿನಾಂಕ 22-3-2012 ರಿಂದ ಜಾರಿಗೆ ಬರುವಂತೆ ಕಡ್ಡಾಯವಾಗಿ ಕಂಪ್ಯೂಟರ್ ಸಾಕ್ಷರತಾ ಪರೀಕ್ಷೆಯಲ್ಲಿ ಶೇ.50 ಅಂಕಗಳೊಂದಿಗೆ ತೇರ್ಗಡೆಯಾಗಬೇಕು. ಸರ್ಕಾರವು ಪರೀಕ್ಷೆ ಜವಾಬ್ದಾರಿಯನ್ನು ಕಿಯೋನಿಕ್ಸ್ ಸಂಸ್ಥೆಗೆ ವಹಿಸಿದೆ.

***

15.07.2017.

ನಾನು ಈ ಹಿಂದೆ ಪೊಲೀಸ್ ಪೇದೆಯಾಗಿದ್ದು 2017ರ ಮೇನಲ್ಲಿ ಆಸ್ತಿ ಮತ್ತು ಹೊಣೆಗಾರಿಕೆ ವಿವರ ಪಟ್ಟಿಕೆ ನೀಡಿದ್ದೇನೆ. ಪ್ರಸ್ತುತ ನನಗೆ ಪ್ರಥಮ ದರ್ಜೆ ಸಹಾಯಕ ಹುದ್ದೆ ಸಿಕ್ಕಿದ್ದು, ಜೂನ್​ನಲ್ಲಿ ಕರ್ತವ್ಯಕ್ಕೆ ಹಾಜರಾಗಿದ್ದೇನೆ. ನಾನೀಗ ಮತ್ತೆ ಆಸ್ತಿ ಮತ್ತು ಋಣ ಪಟ್ಟಿಕೆಯನ್ನು ಹೊಸ ಹುದ್ದೆಗೂ ನೀಡಬೇಕೆ?
| ಪ್ರಶಾಂತ್, ಬಿ.ಎಸ್., ಚಿಕ್ಕಮಗಳೂರು.
ಕರ್ನಾಟಕ ಸರ್ಕಾರಿ ಸೇವಾ (ನಡತೆ) ನಿಯಮಗಳು 1966ರ ಅಡಿಯಲ್ಲಿ ಪ್ರತಿಯೊಬ್ಬ ಸರಕಾರಿ ನೌಕರನು ಆಯಾ ಆರ್ಥಿಕ ವರ್ಷದ ಅಂತ್ಯದಲ್ಲಿ ಆಸ್ತಿ ಮೊತ್ತಗಳ ಪಟ್ಟಿಕೆಯನ್ನು ಸಲ್ಲಿಸುವುದು ಅವನ ಕರ್ತವ್ಯವಾಗಿರುತ್ತದೆ. ಆದರೆ ನೀವು ಈಗಾಗಲೇ ಹಿಂದಿನ ಹುದ್ದೆಯಲ್ಲಿ ಈ ಆಸ್ತಿ ಮತ್ತು ಋಣ ಪಟ್ಟಿಕೆಯನ್ನು ನೀಡಿರುವುದರಿಂದ ನಿಯಮ 23(1)ರ ಪ್ರಕಾರ ಹೊಸ ಹುದ್ದೆಗೆ ಸಲ್ಲಿಸುವುದು ಅವಶ್ಯಕವಾಗುವುದಿಲ್ಲ. ಎರಡನೇ ಬಾರಿ ನೇಮಕವಾದಾಗ ಹಿಂದಿನ ಸೇವೆಯಲ್ಲಿ ಅಥವಾ ಹುದ್ದೆಯಲ್ಲಿ ಅವನು ಸಲ್ಲಿಸಿದ ವಾರ್ಷಿಕ ಆಸ್ತಿ ಮತ್ತು ಹೊಣೆಗಾರಿಕೆಯ ಪಟ್ಟಿಯೇ ಮುಂದುವರೆಯುತ್ತದೆ.

***

 14.07.2017.

ನಾನು ಬಿ.ಇಡಿ ಪದವೀಧರೆಯಾಗಿದ್ದು ಸರ್ಕಾರಿ ನೌಕರರೊಬ್ಬರನ್ನು ಎರಡನೇ ಮದುವೆಯಾಗಿದ್ದೇನೆ. ನಾನು ಈಗ ಕರೆದಿರುವ ಕರ್ನಾಟಕ ವಸತಿ ಶಾಲೆಗಳ ಸಂಘದ ಶಿಕ್ಷಕರ ಹುದ್ದೆಗೆ ಅರ್ಜಿ ಸಲ್ಲಿಸಲು ಬಯಸಿದ್ದೇನೆ. ನಾನು ಅರ್ಜಿ ಸಲ್ಲಿಸಬಹುದೇ ಈ ಅರ್ಜಿ ಸಲ್ಲಿಸಲು ಸರ್ಕಾರದ ಅನುಮತಿ ಅವಶ್ಯಕವೇ?
| ಮಂಜುಳಾ ಹಾಸನ.
ಕರ್ನಾಟಕ ಸರ್ಕಾರಿ ಸೇವಾ (ಸಾಮಾನ್ಯ ನೇಮಕಾತಿ) ನಿಯಮಗಳು 1977ರ ನಿಯಮ 5(2)ರಂತೆ ಒಬ್ಬರಿಗಿಂತ ಹೆಚ್ಚು ಜೀವಂತ ಪತ್ನಿಯರನ್ನು ಹೊಂದಿರುವ ಯಾವುದೇ ವ್ಯಕ್ತಿ ಮತ್ತು ಈಗಾಗಲೇ ಪತ್ನಿಯನ್ನು ಹೊಂದಿರುವ ವ್ಯಕ್ತಿಯನ್ನು ಮದುವೆಯಾಗಿರುವ ಯಾವುದೇ ಮಹಿಳೆ ರಾಜ್ಯ ಸರ್ಕಾರಿ ಸೇವೆಯ ನೇಮಕಕ್ಕೆ ಅರ್ಹರಾಗಿರತಕ್ಕದ್ದಲ್ಲ. ಈ ನಿಯಮದಲ್ಲಿ ದ್ವಿಪತ್ನಿತ್ವವನ್ನು ಪ್ರತಿಬಂಧಿಸುತ್ತದೆಯೇ ಹೊರತು ದ್ವಿಪತಿತ್ವವನ್ನಲ್ಲ ಆದುದರಿಂದ ನೀವು ಅರ್ಜಿ ಸಲ್ಲಿಸಲು ಅರ್ಹರಾಗುವುದಿಲ್ಲ. ಆದರೆ ನೀವು ಸರ್ಕಾರದ ಅನುಮತಿಯನ್ನು ಪಡೆದು ಅರ್ಜಿಯನ್ನು ಸಲ್ಲಿಸಬಹುದು. ಹೆಚ್ಚಿನ ವಿವರಗಳಿಗೆ ಎಂ. ಉಮೇಶ್ ಅವರ ನಡತೆ ನಿಯಮಗಳು-ಸಮಗ್ರ ಕೈಪಿಡಿ ನೋಡಬಹುದು.

***

13.07.2017.

ನಾನು 1989 ರ ಏಪ್ರಿಲ್ 1 ರಂದು ಮಂಡಲ ಪಂಚಾಯಿತಿ ಕಾರ್ಯದರ್ಶಿ ಹುದ್ದೆಯಿಂದ ಸ್ವಯಂ ನಿವೃತ್ತಿ ಹೊಂದಿರುತ್ತೇನೆ. ನನಗೆ 2017 ರ ಆಗಸ್ಟ್ 8ಕ್ಕೆ 80 ವರ್ಷ ತುಂಬುತ್ತದೆ. ನನಗೆ 80 ವರ್ಷದ ನಂತರ ಸರ್ಕಾರದ ಯಾವ ಆದೇಶದ ಮೇರೆಗೆ ಹೆಚ್ಚಿನ ನಿವೃತ್ತಿವೇತನ ದೊರೆಯುತ್ತದೆ. ಈ ಬಗ್ಗೆ ನಾನು ನಿವೃತ್ತಿ ವೇತನ ಪಡೆಯುತ್ತಿರುವ ಬ್ಯಾಂಕಿಗೆ ಅಥವಾ ತಾಲೂಕು ಖಜಾನೆಗೆ ಮನವಿ ಮಾಡಬೇಕೆ.?
| ಎಸ್. ಆರ್. ಕಟಗೇರಿ ರೋಣ
ದಿನಾಂಕ 13-10-2010ರ ಸರ್ಕಾರಿ ಆದೇಶ ಸಂಖ್ಯೆ ಆಇ (ವಿಶೇಷ) 27 ಪಿಇಎನ್ 2007ರ ಪ್ರಕಾರ ದಿನಾಂಕ 1-7-1993ಕ್ಕಿಂತ ಮುಂಚಿತವಾಗಿ ನಿವೃತ್ತರಾಗಿರುವ ಸರ್ಕಾರಿ ನೌಕರರಿಗೆ 1-4-2006 ರಿಂದ ಜಾರಿಗೆ ಬರುವಂತೆ 80 ವರ್ಷ ದಿಂದ 85 ವರ್ಷದ ಒಳಗಿನವರೆಗೆ ಅವರ ಮೂಲ ನಿವೃತ್ತಿ ವೇತನದ ಶೇ. 20 ಹೆಚ್ಚಿಸಲು ಸೂಚಿಸಲಾಗಿದೆ. ಆದುದರಿಂದ ನೀವು ನಿಮ್ಮ ಪಿಂಚಣಿಯನ್ನು ಜಾಸ್ತಿ ಮಾಡಲು ನಿಮ್ಮ ಜಿಲ್ಲಾ ಖಜಾನಾಧಿಕಾರಿಗಳಿಗೆ ಮನವಿಯನ್ನು ಸಲ್ಲಿಸಿ ಪಡೆಯಬಹುದು.

***

12.07.2017.

ಧಾರವಾಡದ ಕೃಷಿ ವಿಶ್ವವಿದ್ಯಾನಿಲಯದಲ್ಲಿ ನೌಕರರಾಗಿದ್ದ ನನ್ನ ಪತಿ 2010ರ ಮೇ 31ರಂದು ಕಾಣೆಯಾಗಿದ್ದಾರೆ. ಅವರು ಕಾಣೆಯಾದಾಗ ನಿವೃತ್ತಿ ಹೊಂದುವುದಕ್ಕೆ ಐದು ವರ್ಷ ಬಾಕಿ ಇತ್ತು. 2017 ರ ಮೇ 31ಕ್ಕೆ ಅವರು ಕಾಣೆಯಾಗಿ ಏಳು ವರ್ಷಗಳು ಮುಕ್ತಾಯಗೊಂಡಿರುವುದು ನನ್ನ ಮಗನಿಗೆ ಅನುಕಂಪದ ಆಧಾರದ ಮೇಲೆ ನೌಕರಿ ಲಭ್ಯವಾಗುವುದೇ?
| ಮಂಗಲಾ ಕುಶಪ್ಪ ಕುರಬೆಟ್ಟ ಧಾರವಾಡ
ನಿಮ್ಮ ಪತಿ 2010ರಲ್ಲಿ ಕಾಣೆಯಾದಾಗ ನೀವು ಪೊಲೀಸರಿಗೆ ದೂರನ್ನು ನೀಡಿ ಪ್ರಥಮ ಮಾಹಿತಿ ವರದಿಯನ್ನು (ಎಫ್​ಐಆರ್) ದಾಖಲಿಸಬೇಕು. ನಿಮ್ಮ ಪತಿ ಕಾಣೆಯಾದ 7 ವರ್ಷಗಳ ನಂತರ ಪೊಲೀಸ್ ಇಲಾಖೆಯಿಂದ ಈ ಬಗ್ಗೆ ವರದಿಯನ್ನು ಪಡೆದು ತದನಂತರ ಜಿಲ್ಲಾ ನ್ಯಾಯಾಲಯಕ್ಕೆ ಅವರು ಸತ್ತರೆಂದು ಘೊಷಣೆಯನ್ನು ಮಾಡಿಸಬೇಕು. ಆಗ ನ್ಯಾಯಾಲಯದ ಆದೇಶದ ಹಿನ್ನೆಲೆಯಲ್ಲಿ ನಿಮ್ಮ ಮಗನಿಗೆ ಅನುಕಂಪದ ಆಧಾರದ ಮೇಲೆ ನೌಕರಿ ಲಭ್ಯವಾಗುತ್ತದೆ. ಆದುದರಿಂದ ನೀವು ಈ ರೀತಿ ಕ್ರಮ ಕೈಗೊಂಡು ನಿಮ್ಮ ಪತಿ ಕೆಲಸ ಮಾಡುತ್ತಿದ್ದ ಕೃಷಿ ವಿಶ್ವವಿದ್ಯಾನಿಲಯಕ್ಕೆ ನಿಮ್ಮ ಮಗನಿಗೆ ಅನುಕಂಪದ ಆಧಾರದ ಮೇಲೆ ನೌಕರಿ ಕೊಡಲು ವಿನಂತಿಸಬಹುದು.

***

1.07.2017.

2014ರ ಮೇ 3ರಂದು ಸರ್ಕಾರಿ ಉದ್ಯೋಗಕ್ಕೆ (ದ್ವಿದಸ ಹುದ್ದೆಗೆ) ಸೇರಿರುತ್ತೇನೆ. ವೈದ್ಯಕೀಯ ಕಾರಣದಿಂದ 2-1-2017 ರಿಂದ 4-2-2017 ರವರೆಗೆ ಗಳಿಕೆ ರಜೆ ಬಳಸಿಕೊಂಡಿರುತ್ತೇನೆ. ಇದಕ್ಕಾಗಿ ದಿನಾಂಕ 1-5-2017 ರಂದು ಲಭಿಸುವ ವಾರ್ಷಿಕ ವೇತನ ಬಡ್ತಿಯನ್ನು ಮುಂದೂಡಿ 35 ದಿವಸಗಳ ನಂತರ ಅಂದರೆ 1-6-2017 ರಿಂದ ಮಂಜೂರು ಮಾಡಲಾಗುವುದು ಎಂದು ಹೇಳುತ್ತಿದ್ದಾರೆ. ಇದು ಸರಿಯೇ?
|ನಾಗರತ್ನ ಕಲಬುರಗಿ.
ಕರ್ನಾಟಕ ಸರ್ಕಾರಿ ಸೇವಾ ನಿಯಮಾವಳಿಯ ನಿಯಮ 51ರ ಪ್ರಕಾರ ನಿಮಗೆ ಯಾವ ತಿಂಗಳು ವೇತನ ಬಡ್ತಿ ಲಭ್ಯವಾಗುತ್ತದೋ ಅದೇ ತಿಂಗಳು ಲಭ್ಯವಾಗಬೇಕು. ನೀವು ಗಳಿಕೆ ರಜೆ ಬಳಸಿಕೊಂಡಿದ್ದರೂ ವೇತನ ಬಡ್ತಿ ಮುಂದೂಡುವಂತಿಲ್ಲ. ವೈದ್ಯಕೀಯ ಕಾರಣಗಳ ಮೇಲೆ ಬಳಸಿಕೊಂಡ ಗಳಿಕೆ ರಜೆಯನ್ನು ಕರ್ತವ್ಯ ಎಂದು ಪರಿಗಣಿಸಲಾಗುವುದರಿಂದ ಯಾವುದೇ ಕಾರಣಕ್ಕೂ ಬಡ್ತಿ ಮುಂದೂಡುವಂತಿಲ್ಲ.

***

10.07.2017.

1988ರ ನವೆಂಬರ್ 2ರಂದು ಚಿತ್ರಕಲಾ ಶಿಕ್ಷಕನಾಗಿ ಕೆಲಸಕ್ಕೆ ಸೇರಿದ್ದು, ನನ್ನ ಜನ್ಮ ದಿನಾಂಕ 1-6-1957. ಕೆಲಸಕ್ಕೆ ಸೇರಿದಾಗ ನನಗೆ 31 ವರ್ಷ, 5 ತಿಂಗಳು ವಯಸ್ಸಾಗಿತ್ತು. ನನ್ನ ಮೂಲ ವೇತನ 26,700/- ರೂ. ಇರುತ್ತದೆ. ನಿವೃತ್ತಿಯ ನಂತರ ಎಷ್ಟು ಮೂಲ ಪಿಂಚಣಿ ವೇಟೇಜ್ ಬರುತ್ತದೆ?
| ತುಕಾರಾಮ ಲೆಂಡ್ವೆ ಗೋಕಾಕ, ಬೆಳಗಾವಿ
ಕರ್ನಾಟಕ ಸರ್ಕಾರಿ ಸೇವಾ ನಿಯಮಾವಳಿಯ ನಿಯಮ 247ಬಿ ಪ್ರಕಾರ ಸರ್ಕಾರಿ ನೌಕರರು 30 ವರ್ಷಗಳು ದಾಟಿದ ನಂತರ ಸರ್ಕಾರಿ ಸೇವೆಗೆ ಸೇರಿದರೆ ಹಾಗೂ ದಿನಾಂಕ 15-2-2012ಕ್ಕೆ ಮೊದಲು ನಿವೃತ್ತರಾದರೆ ಅವರಿಗೆ ಗರಿಷ್ಠ 4 ವರ್ಷಗಳಿಗೆ ಒಳಪಟ್ಟು ಹೆಚ್ಚಿನ ಸೇರ್ಪಡೆ ಲಭ್ಯವಾಗುತ್ತದೆ. ನೀವು ನಿವೃತ್ತರಾದ ಸಂದರ್ಭದಲ್ಲಿ ಸೇವಾವಧಿ 33 ವರ್ಷಗಳಾದರೆ ನಿಮ್ಮ ಮೂಲವೇತನದ ಅರ್ಧದಷ್ಟು ಮೂಲ ಪಿಂಚಣಿಯಾಗಿ ನಿಯಮಾವಳಿ ರೀತ್ಯ ನೀಡಲಾಗುತ್ತದೆ.
ಪ್ರಶ್ನೆ ಕೇಳಿ ಪರಿಹಾರ ಪಡೆಯಿರಿ
ನಿಮ್ಮ ಪ್ರಶ್ನೆಗಳನ್ನು ನಮಗೆ ಕಳುಹಿಸಿ. ನಮ್ಮ ವಿಳಾಸ: ವಿಜಯವಾಣಿ, ನಂ.24, ಶ್ರೀ ಸಾಯಿರಾಂ ಟವರ್ಸ್, ಮೊದಲ ಮಹಡಿ, 5ನೇ ಮುಖ್ಯರಸ್ತೆ, ಚಾಮರಾಜಪೇಟೆ, ಬೆಂಗಳೂರು- 560 018. ಇ-ಮೇಲ್: sarakaricorner@gmail.com, ದೂರವಾಣಿ: 8884432666, ಫ್ಯಾಕ್ಸ್: 080-26257464.
***

08.07.2017.

ನಾನು 2016ರ ಡಿಸೆಂಬರ್ 30ರಂದು ಆರೋಗ್ಯ ಇಲಾಖೆಯಲ್ಲಿ ಕಿ.ಆ.ಸ. ಆಗಿ ನೇಮಕ ಹೊಂದಿ ಪ್ರಸ್ತುತ ಸದರಿ ಹುದ್ದೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದೇನೆ. ಪುನಃ ಆ.ತು.ಕೆ. ಇಲಾಖೆಯಲ್ಲಿ ಸದರಿ ಹುದ್ದೆಗೆ ನೇಮಕಾತಿಗೆ ಅಧಿಸೂಚನೆ ಹೊರಡಿಸಿರುವುದರ ಪ್ರಯುಕ್ತ ವೈಯಕ್ತಿಕ ಕಾರಣಗಳಿಂದಾಗಿ ಪುನಃ ಅದೇ ಹುದ್ದೆಗೆ ಹೊಸದಾಗಿ ಅರ್ಜಿ ಸಲ್ಲಿಸಲು ಬಯಸಿರುತ್ತೇನೆ. ಆದರೆ ನನ್ನ ಮೇಲಾಧಿಕಾರಿಗಳು ಅದೇ ಹುದ್ದೆಗೆ ಪುನಃ ನೇಮಕಾತಿಯಾಗಲು ಅರ್ಹರಿರುವುದಿಲ್ಲವೆಂಬ ಕಾರಣ ನೀಡಿ ನಿರಾಕ್ಷೇಪಣಾ ಪ್ರಮಾಣ ಪತ್ರ ನೀಡಲು ನಿರಾಕರಿಸಿರುತ್ತಾರೆ. ಇದು ಸರಿಯೇ?
| ವಿದ್ಯಾಶ್ರೀ ಬಳ್ಳಾರಿ.
ಕರ್ನಾಟಕ ಸರ್ಕಾರಿ ಸೇವಾ (ಸಾಮಾನ್ಯ ನೇಮಕಾತಿ) ನಿಯಮಗಳು 1977ರ ನಿಯಮ 11ರ ಮೇರೆಗೆ ಯಾವುದೇ ಸೇವೆ ಅಥವಾ ಹುದ್ದೆಗೆ ನೇಮಕಾತಿಗಾಗಿ ಅರ್ಜಿ ಸಲ್ಲಿಸುವ ಸರ್ಕಾರಿ ನೌಕರನು ತನ್ನ ಅರ್ಜಿಯನ್ನು ಆತ ಅರ್ಜಿ ಸಲ್ಲಿಸುತ್ತಿರುವಾಗ ಹೊಂದಿರುವ ಹುದ್ದೆಗೆ ಆತನನ್ನು ನೇಮಕ ಮಾಡಿರುವ ಸಕ್ಷಮ ಅಧಿಕಾರಿಯ ಮೂಲಕ ಸಲ್ಲಿಸತಕ್ಕದ್ದು. ಸರ್ಕಾರಿ ನೌಕರನಿಗೆ ಅರ್ಜಿ ಸಲ್ಲಿಸಲು ಅನುಮತಿಸಬೇಕೆ? ಬೇಡವೆ? ಎಂಬುದನ್ನು ಅಂತಹ ಪ್ರಾಧಿಕಾರಿಯೇ ನಿರ್ಧರಿಸತಕ್ಕದ್ದು ಎಂದು ತಿಳಿಸಲಾಗಿದೆ. ಹೀಗಿರುವಲ್ಲಿ ನೀವು ಅದೇ ಇಲಾಖೆಯ ಅದೇ ನೇಮಕಾತಿ ಪ್ರಾಧಿಕಾರಕ್ಕೆ ಅದೇ ಹುದ್ದೆಗೆ ಅರ್ಜಿ ಸಲ್ಲಿಸಲು ಬಯಸಿರುತ್ತೀರಿ. ನಿಮ್ಮ ಈ ಮನವಿಯು ನಿಯಮಾವಳಿ ರೀತ್ಯ ತಿರಸ್ಕಾರಗೊಳ್ಳಲು ಕಾರಣವಾಗುತ್ತದೆ. ಇದಕ್ಕೆ ಕಾರಣ ನೀವು ಪ್ರಸ್ತುತ ಸೇವೆ ಸಲ್ಲಿಸುತ್ತಿರುವ ಕಿರಿಯ ಆರೋಗ್ಯ ಸಹಾಯಕರ ಹುದ್ದೆಗೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಆಯುಕ್ತರೇ ನೇಮಕಾತಿ ಪ್ರಾಧಿಕಾರಿಯಾಗಿರುವುದರಿಂದ ನಿಮಗೆ ನಿರಾಕ್ಷೇಪಣಾ ಪತ್ರವನ್ನು ನೀಡಲು ನಿರಾಕರಿಸಿರುವುದು ಕ್ರಮಬದ್ಧವಾಗಿರುತ್ತದೆ.

***

06.07.2017.

ನಾನು ಪದವಿ ಪೂರ್ವ ಶಿಕ್ಷಣ ಇಲಾಖೆಯಲ್ಲಿ 32 ವರ್ಷದಿಂದ ಉಪನ್ಯಾಸಕನಾಗಿದ್ದೆ. ಒಂದು ಪದೋನ್ನತಿಯನ್ನೂ ಪಡೆದಿಲ್ಲ. ವೇತನ ಶ್ರೇಣಿ ಗರಿಷ್ಠ ಮಿತಿ ದಾಟಿದ್ದು, ನನಗೆ 2009ರಲ್ಲಿ ಒಂದು ಸ್ಥಗಿತ ವೇತನ ಬಡ್ತಿ ನೀಡ ಲಾಗಿದೆ. ತದನಂತರ ಸ್ಥಗಿತ ವೇತನ ಬಡ್ತಿ ನೀಡದೇ ಇರುವುದರಿಂದ ಹಾಗೂ ನಾನು 2016ರ ಏಪ್ರಿಲ್​ನಲ್ಲಿ ನಿವೃತ್ತಿಯಾಗಿರುವುದರಿಂದ ನನಗೆ ಬರಬೇಕಾದ 6 ಸ್ಥಗಿತ ವೇತನ ಬಡ್ತಿ ಮಂಜೂರು ಮಾಡಿಸಿಕೊಳ್ಳುವ ಬಗೆ ಹೇಗೆ?
|ವಿದ್ಯಾ ಎಸ್ ಗೋಖಲೆ ಬೆಂಗಳೂರು.
ದಿನಾಂಕ 18-3-1996ರ ಸರ್ಕಾರಿ ಆದೇಶ ಸಂಖ್ಯೆ ಎಫ್​ಡಿ 3 ಎಸ್​ಆರ್​ಪಿ 96 ರ ಮೇರೆಗೆ ಸರ್ಕಾರಿ ನೌಕರನಿಗೆ ಅವನು ಗರಿಷ್ಠ ಮಿತಿಯನ್ನು ದಾಟಿದಾಗ ಈ ಹಿಂದೆ ಪಡೆಯುತ್ತಿದ್ದ ವೇತನ ಬಡ್ತಿಗನುಸಾರವಾಗಿ 5 ಸ್ಥಗಿತ ವೇತನ ಬಡ್ತಿಯನ್ನು ಮಂಜೂರು ಮಾಡಬೇಕೆಂದು ಸರ್ಕಾರವು ಸೂಚಿಸಿದೆ. ಇದೇ ಆದೇಶದಲ್ಲಿ ಎ ಮತ್ತು ಬಿ ಗುಂಪಿನ ಹುದ್ದೆಗಳಿಗೆ ಸಂಬಂಧಿಸಿದ ಆಡಳಿತ ಇಲಾಖೆಯ ಮುಖ್ಯಸ್ಥರು ಮಂಜೂರು ಮಾಡಬೇಕೆಂದು ಸೂಚಿಸಲಾಗಿದೆ. ದಿನಾಂಕ 14-6-2012ರ ಸರ್ಕಾರಿ ಆದೇಶ ಸಂಖ್ಯೆ ಎಫ್​ಡಿ 12 ಎಸ್​ಆರ್​ಪಿ(7) ರಂತೆ ಎಂಟು ಸ್ಥಗಿತ ವೇತನಗಳಿಗೆ ದಿನಾಂಕ 1-4-2012 ರಿಂದ ಜಾರಿಗೆ ಬರುವಂತೆ ಹೆಚ್ಚಿಸಲಾಗಿದೆ. ಆದುದರಿಂದ ನೀವು ನಿಮ್ಮ ಇಲಾಖೆಯ ಮುಖ್ಯಸ್ಥರಿಗೆ ನಿಮಗೆ ಬರಬೇಕಾದ ಸ್ಥಗಿತ ವೇತನ ಬಡ್ತಿಗಳನ್ನು ನಿವೃತ್ತಿ ನಂತರವೂ ಸಹ ಮಂಜೂರು ಮಾಡಬೇಕೆಂದು ಕೋರಿಕೆಯನ್ನು ಸಲ್ಲಿಸಬಹುದು.

***

04.07.2017.

ನಾನು ಲೋಕೋಪಯೋಗಿ ಇಲಾಖೆಯಲ್ಲಿ 1979ರಲ್ಲಿ ದಿನಗೂಲಿ ನೌಕರನಾಗಿ ಸೇವೆಗೆ ಸೇರಿ 1990ರಲ್ಲಿ ಕಾಯಂಗೊಂಡಿದ್ದೇನೆ. ಆಹಾರ ಇಲಾಖೆಯಲ್ಲಿ 96 ರಿಂದ 2010ರವರೆಗೆ ಕಾರ್ಯನಿರ್ವಹಿಸಿ ಸ್ವಯಂ ನಿವೃತ್ತಿ ಹೊಂದಿರುತ್ತೇನೆ. ನನ್ನ ಉಳಿದ ಸೇವಾವಧಿ 5 ವರ್ಷ 9 ತಿಂಗಳು ಇದ್ದು 2016ರ ಮೇ ತಿಂಗಳಿನಲ್ಲಿ ನಿವೃತ್ತಿಯಾಗಿದ್ದೇನೆ. ನನಗೆ ಕೆಸಿಎಸ್​ಆರ್ 247ಎ ರೀತ್ಯ 2 ವರ್ಷಗಳ ಅರ್ಹತಾದಾಯಕ ಸೇವೆ ಪರಿಗಣಿಸಲು ಸಾಧ್ಯವೇ?
ಎಸ್.ಸಿ. ಪ್ರಹ್ಲಾದರಾವ್ ತುಮಕೂರು
ನೀವು ಕರ್ನಾಟಕ ಸರ್ಕಾರಿ ಸೇವಾ ನಿಯಮಾವಳಿಯ ನಿಯಮ 285 (2) (ಬಿ) ರೀತ್ಯ ಸ್ವಯಂ ನಿವೃತ್ತಿಯನ್ನು ಹೊಂದಿದ್ದು ಖಂಡ (ಜಿಡ)ರಡಿಯಲ್ಲಿ ನಿಮಗೆ 5 ವರ್ಷಗಳ ಸೇವಾ ಅಧಿಕ್ಯವನ್ನು ನೀಡಬೇಕಾಗಿದೆ. ಕರ್ನಾಟಕ ಸರ್ಕಾರಿ ಸೇವಾ ನಿಯಮಾವಳಿಯ ನಿಯಮ 247 ಎ ಸೌಲಭ್ಯವು ಸರ್ಕಾರಿ ನೌಕರರಿಗೆ ಸಂಪೂರ್ಣ ಪಿಂಚಣಿ ಸೌಲಭ್ಯ ಪಡೆಯಲು ಈ ಹೆಚ್ಚುವರಿ ಸೇರ್ಪಡೆಯನ್ನು ಮಾಡಲಾಗಿರುತ್ತದೆ. ಆದರೆ ನೀವು ಸ್ವಯಂ ನಿವೃತ್ತಿಯನ್ನು ತೆಗೆದುಕೊಂಡಿರುವುದರಿಂದ ದಿನಾಂಕ 10-4-2017ರ ಆದೇಶ ಸಂಖ್ಯೆ : ಆಇ 4 ಎಸ್​ಆರ್​ಎ 2016 ರೀತ್ಯಾ ಹೆಚ್ಚುವರಿ ಸೇರ್ಪಡೆ ನೀಡಲು ಅವಕಾಶವಿರುವುದಿಲ್ಲ.

***

03.07.2017.

ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಒಂದು ವರ್ಷದಿಂದ ಶಿಕ್ಷಕಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದೇನೆ. ಕೆಎಎಸ್ ಪರೀಕ್ಷೆಗೆ ಅರ್ಜಿ ಸಲ್ಲಿಸಲು ನಿಯಮಾವಳಿ ಅಡಿ ನಿರಾಕ್ಷೇಪಣಾ ಪತ್ರ ನೀಡಲು ಕ್ಷೇತ್ರ ಶಿಕ್ಷಣಾಧಿಕಾರಿಯನ್ನು ಕೋರಿದಾಗ ಪರೀಕ್ಷಾರ್ಥ ಅವಧಿಯಲ್ಲಿ ಇದನ್ನು ನೀಡಲಾಗುವುದಿಲ್ಲ ಎಂದು ತಿರಸ್ಕರಿಸಿದ್ದಾರೆ. ಇದಕ್ಕೆ ನಾನು ಏನು ಮಾಡಬೇಕು?
| ಸುಷ್ಮಾ ಎನ್. ಪಾಟೀಲ್ ರಾಯಚೂರು
ಕರ್ನಾಟಕ ಸರ್ಕಾರಿ ಸೇವಾ (ಸಾಮಾನ್ಯ ನೇಮಕಾತಿ) ನಿಯಮಾವಳಿ 1977ರ ನಿಯಮ 11ರ ಮೇರೆಗೆ ಸರ್ಕಾರಿ ಸೇವೆಗೆ ಸೇರಿದವರು ಬೇರೊಂದು ಹುದ್ದೆಗೆ ತನ್ನ ನೇಮಕಾತಿ ಪ್ರಾಧಿಕಾರದ ಮೂಲಕ ಅರ್ಜಿ ಸಲ್ಲಿಸಬೇಕು. ಈ ನಿಯಮದಲ್ಲಿ ಎಲ್ಲಿಯೂ ಪರೀಕ್ಷಾರ್ಥ ಅವಧಿಯಲ್ಲಿ (ಪ್ರೊಬೆಷನರಿ) ಸೇವೆ ಸಲ್ಲಿಸುತ್ತಿರುವವರಿಗೆ ನಿರಾಕ್ಷೇಪಣಾ ಪತ್ರ ನೀಡಬಾರದು ಎಂದು ತಿಳಿಸಿಲ್ಲ. ಪರೀಕ್ಷಾರ್ಥ ಅವಧಿ ನೌಕರನ ಕಾರ್ಯಕ್ಷಮತೆ ಪರೀಕ್ಷೆಗೆ ನಿಗದಿಪಡಿಸಲಾಗುತ್ತದೆಯೇ ವಿನಾ ಅವನು ಸರ್ಕಾರಿ ಸೇವೆಗೆ ಸೇರಿದ ದಿನದಿಂದಲೇ ಎಲ್ಲ ಹಕ್ಕು ಬಾಧ್ಯತೆ ಹೊಂದಿರುತ್ತಾನೆ. ಆದ್ದರಿಂದ ನಿಮ್ಮ ಕ್ಷೇತ್ರ ಶಿಕ್ಷಣಾಧಿಕಾರಿಗೆ ಈ ಬಗ್ಗೆ ಮನವರಿಕೆ ಮಾಡಿಕೊಟ್ಟು ನಿರಾಕ್ಷೇಪಣಾ ಪತ್ರ ಪಡೆದು ಅರ್ಜಿ ಸಲ್ಲಿಸಬಹುದು.

*** 

02.07.2017.

45 ವರ್ಷದ ನಾನು ಖಾಸಗಿ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದೇನೆ. ಸರ್ಕಾರಿ ಪ್ರೌಢಶಾಲೆ ಶಿಕ್ಷಕಿಯಾಗಿದ್ದ ಪತ್ನಿ 6-5-2017ರಂದು ಆಕಸ್ಮಿಕವಾಗಿ ನಿಧನ ಹೊಂದಿದ್ದಾರೆ. ಅನುಕಂಪದ ಆಧಾರದಲ್ಲಿ ನನಗೆ ಸರ್ಕಾರಿ ಉದ್ಯೋಗ ಸಿಗಲಿದೆಯೇ?
| ಮಂಜುನಾಥ, ಚಿತ್ರದುರ್ಗ.
ಕರ್ನಾಟಕ ಸಿವಿಲ್ ಸೇವಾ (ಅನುಕಂಪದ ಮೇರೆಗೆ ನೇಮಕಾತಿ ನಿಯಮಗಳು) 1996ರ ನಿಯಮ 3ರ ಮೇರೆಗೆ ಅನುಕಂಪದ ಆಧಾರದ ಮೇಲೆ ಪತಿ ತನ್ನ ಪತ್ನಿಯ ನಿಧನದಿಂದ ಅನುಕಂಪದ ಮೇರೆಗೆ ಸರ್ಕಾರಿ ನೌಕರಿ ಪಡೆಯಲು ಅರ್ಹ. ಆದರೆ ಅವರು 1977ರ ಸರ್ಕಾರಿ ಸಿವಿಲ್ ಸೇವೆಗಳ (ಸಾಮಾನ್ಯ ನೇಮಕಾತಿ) ನಿಯಮಾವಳಿಯ ರೀತ್ಯ ನಿಗದಿಪಡಿಸಿದ ಗರಿಷ್ಠ ವಯೋಮಿತಿಯಲ್ಲಿ ಇರಬೇಕು. ಆದರೆ ಈ ನಿಯಮಾವಳಿಯಲ್ಲಿ ವಿಧುರರಿಗೆ ಗರಿಷ್ಠ ವಯೋಮಿತಿಯಲ್ಲಿ ಸಡಿಲಿಕೆ ಇಲ್ಲದಿರುವುದರಿಂದ 35 ವರ್ಷಗಳ ಒಳಗಿದ್ದರೆ ಈ ಅನುಕಂಪದ ಆಧಾರದ ಮೇಲೆ ಸರ್ಕಾರಿ ಉದ್ಯೋಗ ಪಡೆಯಬಹುದು. ಆದರೆ ವಯೋಮಿತಿ ದಾಟಿರುವುದರಿಂದ ನಿಮಗೆ ಸರ್ಕಾರಿ ನೌಕರಿ ಸಿಗುವುದಿಲ್ಲ.

*** 

01.07.2017.

ನನ್ನ ಮೇಲೆ ಯಾವುದೇ ಇಲಾಖಾ ವಿಚಾರಣೆಯಿಲ್ಲ. ಆದರೂ ಒಂದು ದಿನ ಕಚೇರಿಗೆ ವಿಳಂಬವಾಗಿ ಬಂದದ್ದಕ್ಕೆ ನೋಟಿಸ್ ಜಾರಿ ಮಾಡಿದ್ದಾರೆ. ಯಾವ ದಂಡನೆಯನ್ನೂ ವಿಧಿಸಿಲ್ಲ. ನನಗೆ 2017ರ ಏಪ್ರಿಲ್ ತಿಂಗಳಿನಲ್ಲಿ ವಾರ್ಷಿಕ ವೇತನ ಬಡ್ತಿ ಇತ್ತು. ಅದನ್ನು ನಮ್ಮ ಮೇಲಧಿಕಾರಿ ತಡೆ ಹಿಡಿದಿದ್ದಾರೆ. ಇದಕ್ಕೆ ಸೂಕ್ತ ಪರಿಹಾರ ಸೂಚಿಸಿ.
| ಆರತಿ.ಎಚ್ ಉಡುಪಿಜಿಲ್ಲೆ
ಕರ್ನಾಟಕ ಸರ್ಕಾರಿ ಸೇವಾ ನಿಯಮಾವಳಿಯ ನಿಯಮ 51, ಕರ್ನಾಟಕ ಸಿವಿಲ್ ಸೇವಾ ನಿಯಮಾವಳಿಯ ನಿಯಮ 8ರಲ್ಲಿ ದಂಡನೆಯಾಗಿ ವಾರ್ಷಿಕ ವೇತನ ಬಡ್ತಿಗಳನ್ನು ತಡೆಹಿಡಿಯಬಹುದೇ ಹೊರತು ಅನ್ಯ ಕಾರಣಗಳಿಂದ ಅಲ್ಲ. ಕೇವಲ ನೋಟಿಸ್ ಜಾರಿ ಮಾಡಿದ ಮಾತ್ರದಿಂದಲೇ ನಿಮ್ಮ ವಾರ್ಷಿಕ ವೇತನ ಬಡ್ತಿಯನ್ನು ತಡೆಹಿಡಿದಿರುವುದು ಕ್ರಮಬದ್ಧವಲ್ಲ. ಆದುದರಿಂದ ನೀವು ಮತ್ತೆ ನಿಮ್ಮ ಮೇಲಾಧಿಕಾರಿಗಳಿಗೆ ವಾರ್ಷಿಕ ವೇತನ ಬಡ್ತಿಯನ್ನು ಮಂಜೂರು ಮಾಡಲು ವಿನಂತಿಸಬಹುದು. ಹೆಚ್ಚಿನ ವಿವರಗಳಿಗೆ ಎಂ. ಉಮೇಶ್ ಅವರ ಸಿಸಿಎ ನಿಯಮಾವಳಿ ಸಮಗ್ರ ಕೈಪಿಡಿ ಕೃತಿಯನ್ನು ನೋಡಿ.

Dr A P J Abdul Kalam IGNITE Awards 2017.

Dr A P J Abdul Kalam IGNITE Awards 2017.

Announcement / Dr A P J Abdul Kalam IGNITE Awards 2017

National Innovation Foundation (NIF), India, an autonomous body of the Department of Science and Technology, Govt. of India, announces the tenth national competition for students’ ideas and innovations, in association withthe Honey Bee Network, SRISTI, CBSE and other partners.

NIFinvites submissions of creative technological ideas/innovations from the students up to Standard XII for the tenth national competition for children’s ideas and innovations -Dr A P J Abdul Kalam IGNITE Awards 2017.NIF dedicates the IGNITE Awards in the loving memory of Dr Kalam.

In order to promote creativity and originality in children, NIF has been organising IGNITE – a national competition of original technological ideas and innovations by children, up to Standard XII or the age of 17 years, in or out of school.

Starting in 2008, in the past nine years, 201 awards have been given to 277 children. The total number of submissions from school children received during the various IGNITE campaigns is 1,54,500. NIF decided to commemorate the IGNITE Awards in his memory and rechristened the awards as Dr APJ Abdul Kalam IGNITE Awards, so that creative children continue to draw inspiration from his spirit. NIF will continue to announce the awards every year on October 15, Dr Kalam’s birthday, which is also celebrated as the Children’s Creativity and Innovation Day by NIF.

What is the contest?

Dr APJ Abdul Kalam IGNITE competition is an annual national competition to harness the creative and innovative spirit of children (up to Standard XII in school or those up to the age of 17 years out of school). Students are invited to send their original and creative technological ideas and innovations for the same.

Why the contest?

Creativity among children is almost innate. Every child is creative, the degree may vary though but, not its basic manifestation. Then what happens during growth and maturation? Why should children stop asking basic questions? Why do they agree to do repetitive science projects instead of being original? Why do they learn to live with unsolved social and professional problems? We should not allow our children to live with such problems. Rather, we must urge them to come up with solutions to these. We want to promote originality, creativity and innovative spirit among our children so that when they become leaders of our society, they ensure an imaginative, inclusive and innovative future for the country. We want our children to be more sensitive to the problems faced by not just them and their families or neighbours but also other socially-disadvantaged sections of the society.

What is invited for the contest?

Original and creative technological ideas and innovations of the students OR/AND any technological idea/innovation that solves any daily-life problem, be it household or of porters, labourers, or the likes. In addition, during their vacations or otherwise, the students are encouraged to look for other people who come out with innovative machines/devices or solve day-to-day problems using their creativity. Similarly, they are also encouraged to document and learn traditional knowledge (TK) practices from elders in their families and neighbourhood. The purpose is to expose them to the rich traditional heritage that we have, facilitating its transfer from generation to generation. The students submitting the maximum number of properly-documented entries (innovations/TK) to the schools (which would forward them to NIF) or directly to NIF, would be given appreciation certificates. For each innovation/TK practice spotted and documented by the student, he/she will be credited as being the ‘scout’ of that innovation/TK in records.

What is the contest period?

The entries will be received till August 31, 2017. All entries received after this date will be considered for Dr APJ Abdul Kalam IGNITE 2018 competition.

Can students of other educational boards (national and state), other than CBSE, also participate in the competition?

Yes, students from any educational board can participate in Dr APJ Abdul Kalam IGNITE competition. The children, who are out of school, up to the age of 17 years can also participate.

How can the submissions be sent?

The submissions for the contest can be made through any of the following means:
Email the details at ignite@nifindia.org
or
1. Submit online at http://nif.org.in/submitidea.php

or

Mail them to the following address

 (directly/through the Principal)
Dr A P J Abdul Kalam IGNITE Awards 2017
National Innovation Foundation – India
Grambharti,Amrapur,
Gandhinagar-Mahudi Road
Gandhinagar, Gujarat
Ahmedabad 382650, Gujarat

Is there any limit to the number of entries submitted during the competition period?

No. The students are encouraged to submit as many entries as they wish.

Can there be groups or only individual submissions?

Students can submit entries in groups, provided each member of the group contributes significantly to the development of the idea/innovation/project. Groups, where teachers/parents are included, will not be considered.

Are there any separate awards for individual or groups?

No.

Is there any age limit for students?

As the competition is for students up to Standard XII, the maximum age is expected to be around17-18 years. Those out of school (children), up to the age of 17 years, can also participate.

Can students with background other than science apply for the competition?

Students from any background viz. arts, commerce, etc. can participate in the competition.

Is there any particular format for submission of entries?

There is no particular format for submission. However, the following should be clearly mentioned – name, age, class, school name and address, home address and contact number, title of the project/idea/innovation, detailed description, diagrams/sketches/photos if any and a simple declaration that the project has been done by the student himself/herself without any guidance from teachers/parents. If required, we may later request a declaration from school and/or parents that the project of the student has been unsupervised.

Is a working model required along with the submission?

Not at this stage. If required, we would ourselves let the student know and may even facilitate the development of the prototype/model later.

Are any photos/videos/sketches of the idea/innovation/project required?

Yes, if available. These would help our experts to properly understand and evaluate the submission.

When will the awards be announced and given?

The names of the winners will be announced on October 15, 2017 and award function date will be announced later.

How many prizes will be given in the competition?

There is no fixed number of awards. It will depend upon the number of quality entries that we receive and which can be recognise in the function.

Is there going to be an exhibition?

Yes, there will be an exhibition of ONLY the awarded projects/ideas/innovations. Working or illustrative models and/or posters would be required for the same.

Will NIF support for travel to the exhibition?

NIF will provide to and fro train travel supports to the student(s) and only one person accompanying the student(s) from the student’s home location to Ahmedabad. Local hospitality will be provided by NIF in Ahmedabad. Any other person(s) accompanying the award winner or any other person interested to visit the exhibition would have to bear all their costs (travel/stay/food) themselves.

What type of submissions will NOT be considered?

Simple essays, write-ups on problems like population, corruption, global warming, unemployment, etc. will not be accepted as well as common projects/concepts (from textbooks/other make-it-yourself books) like hydel power projects, rain water harvesting, water level indicators, vermi compost/vermi wash, letterbox alarm and other alarms, using turbines to generate energy, electricity generation through waste batteries/dung/transport/waves or earthquake alarm, etc. and the projects guided by teachers/parents.
The teachers and parents are requested not to be suggestive to the children. They should allow children to come up with creative ideas of their own. If teachers and parents have an interesting idea(s), they may send it to us separately.

Who cannot participate in contest?

Any student enrolled in graduation course and above; any other innovator over the age of 17 years, irrespective of educational or occupational background; children of staff in NIF, GIANor Honey Bee Network and their relatives cannot participate. The teachers and parents of students are also requested not to send their own ideas and innovations in their children/ student’s name. A declaration from parents and teachers, mentioning that the idea/innovation is an original thought of the child/student, would be required.

What kind of support will NIF provide to good ideas/innovations?

All practical and useful ideas/innovations may be given financial and mentoring support. In case of deserving cases, patents will be filed in their name at no cost to them. It is also possible that some of the ideas might attract entrepreneurs and these may get licensed for monetary consideration.

What happens to submissions which are not awarded? 

NIF will review all submissions and send feedback to students. However, since the number of submissions is very high, it might take some time to respond to each one.

Whom to contact in case of any doubt?

Any query may be addressed to NIF at
Email: ignite@nifindia.org or
Telephone:02764261131/ 32/ 38/ 39
Fax: +91-79-26731903.
Order copy.